ಮುಂಬೈ: ಈಗಾಗಲೇ 303 ರೂ. ರಿಚಾರ್ಜ್ ಮಾಡಿದ ಗ್ರಾಹಕರಿಗೆ ಮೂರು ತಿಂಗಳು 84 ಜಿಬಿ ಉಚಿತ ಡೇಟಾ ನೀಡಿದ್ದ ಜಿಯೋ ಈಗ 999 ರೂ. ಮತ್ತು ಅದಕ್ಕಿಂತಲೂ ಹೆಚ್ಚಿನ ರಿಚಾರ್ಜ್ ಮಾಡಿದ ಗ್ರಾಹಕರಿಗೆ 100 ಜಿಬಿ ಡೇಟಾ ನೀಡುವುದಾಗಿ ಹೇಳಿದೆ.
ಈ ಸಮ್ಮರ್ ಸರ್‍ಪ್ರೈಸ್ ಆಫರ್‍ನಲ್ಲಿ ಗ್ರಾಹಕರು ಪ್ರತಿದಿನ ಉಚಿತವಾಗಿ ಎಷ್ಟು ಬೇಕಾದರೂ ಡೇಟಾವನ್ನು ಬಳಕೆ ಮಾಡಬಹುದು ಎಂದು ಜಿಯೋ ತಿಳಿಸಿದೆ.
999 ರಿಚಾರ್ಜ್ ಭಿನ್ನ ಹೇಗೆ?
ಈಗ ನೀವು ಜಿಯೋ ಪ್ರೈಮ್ ಗ್ರಾಹಕರಾಗಿದ್ದು 303 ರೂ. ರಿಚಾರ್ಜ್ ಮಾಡಿದ್ರೆ ಪ್ರತಿ ದಿನ ಗರಿಷ್ಟ 1ಜಿಬಿ ಡೇಟಾವನ್ನು ಬಳಕೆ ಮಾಡಬಹುದು. 1 ಜಿಬಿ ಮುಗಿದ ಡೇಟಾ ವೇಗ 128 ಕೆಬಿಪಿಎಸ್‍ಗೆ ಇಳಿಯುತ್ತದೆ. ಆದರೆ 999 ರೂ. ಮತ್ತು ಅಧಿಕ ಮೊತ್ತದ ರಿಚಾರ್ಜ್ ಮಾಡಿದ್ರೆ ಗ್ರಾಹಕರಿಗೆ ದಿನದಲ್ಲಿ ಇಂತಿಷ್ಟೇ ಡೇಟಾವನ್ನು ಬಳಸಬೇಕೆಂಬ ಮಿತಿಯಿಲ್ಲ. ಈ ಸಮ್ಮರ್ ಸರ್‍ಪ್ರೈಸ್ ಆಫರ್ ಜಿಯೋದ ಎಲ್ಲ ಗ್ರಾಹಕರಿಗೆ ಸಿಗಲಿದೆ.
ಜಿಯೋದ ಎರಡನೇ ಸಮ್ಮರ್ ಸರ್‍ಪ್ರೈಸ್ ಆಫರ್ ಇದಾಗಿದೆ. ಈ ಹಿಂದೆ ಪ್ರೈಮ್ ಸದಸ್ಯರಾಗಿದ್ದವರು 303 ರೂ. ರಿಚಾರ್ಜ್ ಮಾಡಿದ್ರೆ ಅವರಿಗೆ ಮೂರು ತಿಂಗಳ ಕಾಲ ಪ್ರತಿ ದಿನ 1 ಜಿಬಿ ಡೇಟಾವನ್ನು ಉಚಿತವಾಗಿ ನೀಡುವುದಾಗಿ ಹೇಳಿತ್ತು.
ಮುಂಬೈ: ಉಚಿತ ಕರೆಗಳನ್ನು ನೀಡಿ ಕಡಿಮೆ ಬೆಲೆಯಲ್ಲಿ ಡೇಟಾ ನೀಡಿ ದೇಶದಲ್ಲಿ ಟೆಲಿಕಾಂ ಕಂಪೆನಿಗಳ ನಡುವೆ ಡೇಟಾ ಸಮರಕ್ಕೆ ಕಾರಣವಾಗಿದ್ದ ಜಿಯೋ ಈಗ ಸೆಟ್‍ಟಾಪ್ ಮಾರುಕಟ್ಟೆಯ ಕ್ಷೇತ್ರದತ್ತ ಗಮನ ಹರಿಸಿದ್ದು ಶೀಘ್ರವೇ ಈ ಸೇವೆ ಗ್ರಾಹಕರಿಗೆ ಸಿಗಲಿದೆ.
ಹೌದು. ಜಿಯೋ ಕಂಪೆನಿಯ ಸೆಟ್‍ಟಾಪ್ ಬಾಕ್ಸ್ ಗಳ ಫೋಟೋಗಳು ಈಗ ಆನ್‍ಲೈನ್ ನಲ್ಲಿ ಲೀಕ್ ಆಗಿದೆ. ಮಾಧ್ಯಮಗಳಲ್ಲಿ ಪ್ರಕಟವಾಗಿರುವ ಮಾಹಿತಿ ಪ್ರಕಾರ ಈ ಸೆಟ್‍ಟಾಪ್ ಮೇಲೆ ‘ನಾಟ್ ಫಾರ್ ರಿಟೇಲ್’ ಎಂಬ ಬರಹ ಇದ್ದು, ಪ್ರಸ್ತುತ ಪರೀಕ್ಷೆ ನಡೆಸುತ್ತಿದೆ.
ಸೆಟ್‍ಟಾಪ್ ಬಾಕ್ಸ್ ನಲ್ಲಿ ಏನಿದೆ?
ಸೆಟ್‍ಟಾಪ್ ಬಾಕ್ಸ್ ಅನ್ನು ಜಿಯೋ ಫೈಬರ್ ಅಥವಾ ಡಿಶ್‍ಗೆ ಕನಕ್ಟ್ ಮಾಡಬಹುದಾಗಿದೆ. ರಿಮೋಟ್ ಕಂಟ್ರೋಲ್ ನಲ್ಲಿ ಮೈಕ್ ಬಟನ್ ಇದ್ದು, ಧ್ವನಿ ಮೂಲಕ ಟಿವಿಯನ್ನು ನಿಯಂತ್ರಿಸುವ ವ್ಯವಸ್ಥೆ ಇರಲಿದೆ ಎಂದು ಹೇಳಲಾಗುತ್ತಿದೆ. ಬಾಕ್ಸ್ ಹಿಂದುಗಡೆ ಎಚ್‍ಡಿಎಂಐ ಪೋರ್ಟ್, ಯುಎಸ್‍ಬಿ ಪೋರ್ಟ್, ಆಡಿಯೋ, ವಿಡಿಯೋ ಔಟ್‍ಪುಟ್ ಪೋರ್ಟ್ ಗಳಿವೆ. ಇದರ ಜೊತೆಗೆ ಎಥರ್‍ನೆಟ್ ಪೋರ್ಟ್ ಇದ್ದು ಗ್ರಾಹಕರು ಬ್ರಾಡ್‍ಬ್ಯಾಂಡ್ ಕೇಬಲ್ ಅನ್ನು ಕನೆಕ್ಟ್ ಮಾಡಬಹುದಾಗಿದೆ. ಮುಂದುಗಡೆ ಯುಎಸ್‍ಬಿ ಪೋರ್ಟ್ ಇದ್ದು, ಗ್ರಾಹಕರು ಯುಎಸ್‍ಬಿ ಡ್ರೈವ್‍ಗಳನ್ನು ಹಾಕಬಹುದಾಗಿದೆ.
ಬೇರೆ ವಿಶೇಷ ಏನಿದೆ?
ನೀವು ಸ್ಮಾರ್ಟ್ ಫೋನ್ ಮೂಲಕಜಿಯೋ ಟಿವಿ ಆ್ಯಪ್ ಬಳಸುತ್ತಿದ್ದರೆ ನೋಡಿರುತ್ತೀರಿ. ಅದರಲ್ಲಿ ಟಿವಿ ವಾಹಿನಿಯ ಕಾರ್ಯಕ್ರಮವನ್ನು ನೀವು ವೀಕ್ಷಿಸದೇ ಇದ್ದರೂ ನಂತರವೂ ಸ್ಟ್ರೀಮ್ ಮಾಡಬಹುದಾಗಿದೆ. ವಾಹಿನಿಗಳಲ್ಲಿ 7 ದಿನಗಳ ಕಾಲ ಯಾವ ಗಂಟೆಯಲ್ಲಿ ಏನು ಪ್ರಸಾರವಾಗಿದೆ ಅವೆಲ್ಲ ಕಾರ್ಯಕ್ರಮಗಳು ಜಿಯೋ ಟಿವಿ ಆ್ಯಪ್‍ನಲ್ಲಿ ಸಿಗುತ್ತದೆ. ಈ ವಿಶೇಷತೆಯೂ ಜಿಯೋ ಸೆಟ್ ಟಾಪ್ ಬಾಕ್ಸ್ ನಲ್ಲಿ ಇರಲಿದೆ ಎನ್ನುವ ವದಂತಿಯು ಇದೆ.
ಆರಂಭದಲ್ಲಿ 300 ಚಾನೆಲ್‍ಗಳು ಮತ್ತು 50ಕ್ಕೂ ಅಧಿಕ ಎಚ್‍ಡಿ ಚಾನೆಲ್‍ಗಳು ಇರಲಿವೆ ಎಂದು ಹೇಳಲಾಗುತ್ತಿದೆ. ಇಷ್ಟೇ ಅಲ್ಲದೇ ನೆಟ್ ಫ್ಲಿಕ್ಸ್, ಅಮೆಜಾನ್ ಪ್ರೈಮ್ ಜೊತೆಯೂ ಒಪ್ಪಂದ ಮಾಡಿಕೊಳ್ಳುವ ಸಾಧ್ಯತೆ ಇದೆ. ಈಗಾಗಲೇ ಜಿಯೋ ಹಾಟ್‍ಸ್ಟಾರ್ ಜೊತೆ ಪಾರ್ಟ್ ನರ್ ಆಗಿದ್ದು, ಗ್ರಾಹಕರಿಗೆ ಹಾಟ್ ಸ್ಟಾರ್ ವಿಡಿಯೋ ನೋಡುವ ಅವಕಾಶ ಸಿಗಲಿದೆ ಎಂದು ಹೇಳಲಾಗುತ್ತಿದೆ. ಅಷ್ಟೇ ಅಲ್ಲದೇ ಅಮೆರಿಕ ಪ್ರಮುಖ ಚಾನೆಲ್‍ಗಳು ಇದರಲ್ಲಿ ಸಿಗಲಿದೆ.
ಬಿಡುಗಡೆ ಯಾವಾಗ?
ಈ ಸೇವೆಯನ್ನು ಜಿಯೋ ಯಾವಾಗ ಬಿಡುಗಡೆ ಮಾಡಲಿದೆ ಎನ್ನುವುದನ್ನು ಅಧಿಕೃತವಾಗಿ ತಿಳಿಸಿಲ್ಲ. ಆದರೆ 2017ರ ಮೇ ವೇಳೆ ಈ ಸೇವೆ ಬಿಡುಗಡೆಯಾಗುವ ಸಾಧ್ಯತೆಯಿದೆ.
ಬೆಲೆ ಎಷ್ಟು? ಪ್ಲಾನ್ ಹೇಗಿದೆ?
ಸೆಟ್ ಟಾಪ್ ಬಾಕ್ಸ್ ಗೆ 1800 ರೂ. ಇದ್ದು, ಕಡಿಮೆ ಬೆಲೆಯ ಪ್ಲಾನ್‍ಗೆ 180 ರೂ. ಇರಲಿದೆ. ಈ ಪ್ಲಾನ್‍ನಲ್ಲೇ 300ಕ್ಕೂ ಅಧಿಕ ಚಾನೆಲ್‍ಗಳನ್ನು ವೀಕ್ಷಿಸಬಹುದಾಗಿದೆ. ಜಿಯೋ ಸೇವೆ ಆರಂಭಗೊಂಡಾಗ ಹೇಗೆ 3 ತಿಂಗಳ ಉಚಿತ ಆಫರ್ ನೀಡಿತ್ತೋ ಅದೇ ರೀತಿಯಾಗಿ ಈ ಸೆಟ್‍ಟಾಪ್ ಖರೀದಿಸಿದ ಗ್ರಾಹಕರಿಗೆ ಮೂರು ತಿಂಗಳು ಉಚಿತವಾಗಿ 300ಕ್ಕೂ ಅಧಿಕ ವಾಹಿನಿಗಳನ್ನು ವೀಕ್ಷಿಸುವ ಸೌಲಭ್ಯವನ್ನು ಜಿಯೋ ನೀಡಲಿದೆ.
ಮುಂಬೈ: ನಿರೀಕ್ಷೆಯಂತೆ ಜಿಯೋದ ಪ್ರೈಮ್ ಮೆಂಬರ್‍ಶಿಪ್ ಡೆಡ್‍ಲೈನ್ ಅವಧಿ ವಿಸ್ತರಣೆಯಾಗಿದೆ. ಇದರ ಜೊತೆ ಹೊಸದಾಗಿರುವ ಸಮ್ಮರ್ ಸರ್‍ಪ್ರೈಸ್ ಆಫರನ್ನು ಜಿಯೋ ಪ್ರಕಟಿಸಿದೆ.
ಈ ಹಿಂದೆ ಏಪ್ರಿಲ್ ಒಂದರಿಂದ ಉಚಿತವಾಗಿ ಡೇಟಾ ನೀಡಲು ಸಾಧ್ಯವಿಲ್ಲ. ಆದರೆ ಕಡಿಮೆ ಬೆಲೆಯಲ್ಲಿ ಡೇಟಾ ಪಡೆಯಬೇಕಾದರೆ ಗ್ರಾಹಕರು 99 ರೂ. ನೀಡಿ ಮಾರ್ಚ್ 31ರ ಒಳಗಡೆ ಪ್ರೈಮ್ ಸದಸ್ಯರಾಗಬೇಕು. ಮಾರ್ಚ್ 31ರ ಒಳಗಡೆ ಸದಸ್ಯರಾದ ಗ್ರಾಹಕರಿಗೆ ಮಾತ್ರ ನಾವು ಕಡಿಮೆ ಬೆಲೆ ಡೇಟಾವನ್ನು ನೀಡುತ್ತೇವೆ ಎಂದು ಜಿಯೋ ತಿಳಿಸಿತ್ತು. ಆದರೆ ಈಗ ಈ ಡೆಡ್‍ಲೈನ್ ಅವಧಿ ಏಪ್ರಿಲ್ 15ರವರೆಗೆ ವಿಸ್ತರಣೆಯಾಗಿದೆ. ಹೀಗಾಗಿ ಯಾರೆಲ್ಲ 99 ರೂ. ನೀಡಿ ಪ್ರೈಮ್ ಸದಸ್ಯರಾಗಿಲ್ಲವೋ ಅವರು ಜಿಯೋ ಆ್ಯಪ್, ಜಿಯೋ ವೆಬ್‍ಸೈಟ್‍ಗೆ ಹೋಗಿ ರಿಚಾರ್ಜ್ ಮಾಡಿ ಸದಸ್ಯರಾಗಬಹುದು.
ಏನಿದು ಸಮ್ಮರ್ ಸರ್‍ಪ್ರೈಸ್ ಆಫರ್?
ಜಿಯೋ ಸಮ್ಮರ್ ಆಫರ್ ನಿಮಗೆ ಬೇಕಾದ್ರೆ ಮೊದಲು ನೀವು ಜಿಯೋದ ಯಾವ ಗ್ರಾಹಕರ ವಿಭಾಗದಲ್ಲಿ ಇದ್ದೀರಿ ಎನ್ನುವುದನ್ನು ತಿಳಿದುಕೊಳ್ಳಬೇಕು. ಜಿಯೋದಲ್ಲಿ ಸದ್ಯಕ್ಕೆ ಎರಡು ವರ್ಗದ ಗ್ರಾಹಕರಿದ್ದಾರೆ. ಒಂದನೇಯ ಗ್ರಾಹಕರು 99 ರೂ. ನೀಡಿ ಪ್ರೈಮ್ ಸದಸ್ಯರಾದವರು. 99 ರೂ. ನೀಡದೇ ಈಗಲೂ ಜಿಯೋ ಸೇವೆಯನ್ನು ಬಳಸುತ್ತಿರುವವರು ಎರಡನೇ ವರ್ಗದ ಗ್ರಾಹಕರು. ಹೀಗಾಗಿ ಜಿಯೋ ಸಮ್ಮರ್ ಆಫರ್ ಲಾಭ ನಿಮಗೆ ಬೇಕಿದ್ದಲ್ಲಿ ಮೊದಲು ನೀವು 99 ರೂ. ನೀಡಿ ಜಿಯೋ ಪ್ರೈಮ್ ಸದಸ್ಯರಾಗಬೇಕಾಗುತ್ತದೆ.
ಸಮ್ಮರ್ ಸರ್‍ಪ್ರೈಸ್ ಆಫರ್ ವಿಶೇಷತೆ ಏನು?
ಈ ಆಫರ್ ಲಾಭ ನಿಮಗೆ ಸಿಗಬೇಕಾದರೆ ನೀವು 303 ರೂ. ಮತ್ತು ಅದಕ್ಕಿಂತ ಹೆಚ್ಚಿನ ರಿಚಾರ್ಜ್ ಮಾಡಬೇಕಾಗುತ್ತದೆ. ನೀವು ಯಾವ ಪ್ಯಾಕ್ ಹಾಕಿದ್ದೀರೋ ಆ ಪ್ಯಾಕ್‍ನ ಆಫರ್ ಮತ್ತೆ ಮೂರು ತಿಂಗಳು ವಿಸ್ತರಣೆಯಾಗುತ್ತದೆ. ಇದರ ಅರ್ಥ ನೀವು ಈಗ 303 ರೂಪಾಯಿ ಪ್ಯಾಕ್ ಹಾಕಿದ್ರೆ ಇದರಲ್ಲಿ ಈಗ ಪ್ರತಿ ದಿನ ನಿಮಗೆ ಗರಿಷ್ಠ ಒಂದು ಜಿಬಿ ಡೇಟಾದ ಜೊತೆ ಹೊರ ಹೋಗುವ ಎಲ್ಲ ಕರೆಗಳು ಮತ್ತು ಮೆಸೇಜ್ ಉಚಿತವಾಗಿ ಸಿಗುತ್ತದೆ. ಆದರೆ ಈ ಆಫರ್ ವ್ಯಾಲಿಡಿಟಿ 28 ದಿನಗಳು ಮಾತ್ರ ಇತ್ತು. ಆದರೆ ಈಗ ಈ ವ್ಯಾಲಿಡಿಟಿ ಅವಧಿ ಜೂನ್ 30ರವರೆಗೆ ವಿಸ್ತರಣೆಯಾಗಿದೆ.
ಇದನ್ನೂ ಓದಿ:ಎಷ್ಟು ರೂ. ರಿಚಾರ್ಜ್ ಮಾಡಿದ್ರೆ ಪ್ರೈಮ್ ಗ್ರಾಹಕರಿಗೆ ಎಷ್ಟು ಡೇಟಾ ಸಿಗುತ್ತೆ? ಉಳಿದ ಗ್ರಾಹಕರಿಗೆ ಎಷ್ಟು ಸಿಗುತ್ತೆ? ಸಮ್ಮರ್ ಸರ್‍ಪ್ರೈಸ್ ಆಫರ್ ಲಾಭವೇ?
19 ರೂ. ನಿಂದ ಆರಂಭವಾಗಿ 149 ರೂ. ವರೆಗಿನ ಡೇಟಾ ರಿಚಾರ್ಜ್ ಮಾಡಿರುವ ಗ್ರಾಹಕರಿಗೆ ಈ ಆಫರ್ ಲಾಭ ಸಿಗುವುದಿಲ್ಲ. ನೀವು 149 ರೂ. ರಿಚಾರ್ಜ್ ಮಾಡಿದ್ರೆ 28 ದಿನಗಳ ವ್ಯಾಲಿಡಿಟಿ ಹೊಂದಿರುವ 2ಜಿಬಿ ಡೇಟಾ ಮಾತ್ರ ಸಿಗುತ್ತದೆ. ಅಷ್ಟೇ ಅಲ್ಲದೇ ಪ್ರತಿ ತಿಂಗಳು ನೀವು ರಿಚಾರ್ಜ್ ಮಾಡಬೇಕಾಗುತ್ತದೆ. ಒಂದು ವೇಳೆ ನೀವು ನೀವು 301 ರೂ. ರಿಚಾರ್ಜ್ ಮಾಡಿದ್ದಲ್ಲಿ ಮೂರು ತಿಂಗಳ ಕಾಲ 101 ರೂ. ಬೆಲೆಯಲ್ಲಿ ಪ್ರತಿ ದಿನ 1 ಜಿಬಿ ಡೇಟಾವನ್ನು ಬಳಸಿದಂತೆ ಆಗುತ್ತದೆ. ಈಗಾಗಲೇ ಪ್ರೈಮ್ ಸದಸ್ಯರಿಗೆ ನೀಡಿದ ಡೇಟಾ ಪ್ಯಾಕ್‍ಗಳು ಜುಲೈ ತಿಂಗಳಿನಿಂದ ಅಧಿಕೃತವಾಗಿ ಜಾರಿಗೆ ಬರಲಿದೆ ಎಂದು ಜಿಯೋ ಹೇಳಿದೆ.
ಮೊದಲ ಸರ್‍ಪ್ರೈಸ್ ಆಫರ್:
ಜಿಯೋ ಮುಂದೆ ಈ ರೀತಿಯ ಸಾಕಷ್ಟು ಸರ್‍ಪ್ರೈಸ್ ಆಫರ್‍ಗಳನ್ನು ನೀಡಲಿದೆ. ಇಂತಹ ಆಫರ್‍ಗಳ ಮೊದಲ ಆಫರ್ ಇದಾಗಿದೆ ಎಂದು ಜಿಯೋ ಹೇಳಿಕೊಂಡಿದೆ.
7.2 ಕೋಟಿ ಗ್ರಾಹಕರು:
ಒಂದು ತಿಂಗಳಿನಲ್ಲಿ 7.2 ಕೋಟಿ ಗ್ರಾಹಕರು ಪ್ರೈಮ್ ಸದಸ್ಯರಾಗಿದ್ದಾರೆ. ಕಡಿಮೆ ಅವಧಿಯಲ್ಲಿ ಅತಿ ಹೆಚ್ಚು ಸಂಖ್ಯೆ ಗ್ರಾಹಕರು ಸೇರ್ಪಡೆಯಾಗಿರುವುದು ಇದೇ ಮೊದಲು. ದೇಶದಲ್ಲಿ ಈಗಾಗಲೇ 1 ಲಕ್ಷ ಮೊಬೈಲ್ ಟವರ್‍ಗಳನ್ನು ಸ್ಥಾಪಿಸಿದ್ದು, ಮುಂದಿನ ದಿನಗಳಲ್ಲಿ ಹೊಸದಾಗಿ 1 ಲಕ್ಷ ಟವರ್‍ಗಳನ್ನು ಸ್ಥಾಪಿಸಲಾಗುವುದು. ವಿಶ್ವದಲ್ಲಿ ಅತಿ ದೊಡ್ಡ 4ಜಿ ಎಲ್‍ಟಿಇ ವೈರ್‍ಲೆಸ್ ಬ್ರಾಡ್‍ಬ್ಯಾಂಡ್ ಸೇವೆಯನ್ನು ನಾವು ನೀಡುತ್ತಿದ್ದೇವೆ. 2 ಲಕ್ಷ ಕೋಟಿ ರೂ. ಹಣವನ್ನು ಹೂಡಿದ್ದೇವೆ. ವಿಶ್ವದಲ್ಲಿ ಎಲ್ಲೂ ಈ ಕ್ಷೇತ್ರದಲ್ಲಿ ಇಷ್ಟೊಂದು ಮೊತ್ತ ಹೂಡಿಕೆಯಾಗಿಲ್ಲ ಎಂದು ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಮಾಧ್ಯಮಗಳಿಗೆ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ಗೂಗಲ್ ಜೊತೆಗೂಡಿ ಕಡಿಮೆ ಬೆಲೆಯಲ್ಲಿ ಜಿಯೋದಿಂದ ಆಂಡ್ರಾಯ್ಡ್ ಫೋನ್! ಹಿಯೋದ ಹಿಂದಿನ ಆಫರ್ ಹೇಗಿತ್ತು?
ಜಿಯೋ ಆರಂಭದಲ್ಲಿ ವೆಲಕಂ ಆಫರ್ ನೀಡಿತ್ತು, ಇದರಲ್ಲಿ ಗ್ರಾಹಕರು ಸೆಪ್ಟೆಂಬರ್‍ನಿಂದ ಡಿಸೆಂಬರ್ ವರೆಗೆ ಒಂದು ದಿನದಲ್ಲಿ ಎಷ್ಟು ಬೇಕಾದರೂ ಡೇಟಾವನ್ನು ಉಚಿತವಾಗಿ ಬಳಸಬಹುದಾಗಿತ್ತು. ಇದಾದ ಬಳಿಕ ಜನವರಿ ಒಂದರಿಂದ ಮಾರ್ಚ್ 31ರ ವರೆಗೆ ಹ್ಯಾಪಿ ನ್ಯೂ ಇಯರ್ ಆಫರ್ ಪ್ರಕಟಿಸಿತ್ತು. ಈ ಆಫರ್‍ನಲ್ಲಿ ಪ್ರತಿ ದಿನ ಗರಿಷ್ಠ 1 ಜಿಬಿ ಉಚಿತ ಡೇಟಾವನ್ನು ಬಳಸಬಹುದಾಗಿತ್ತು. ಈ ಡೇಟಾ ಖಾಲಿಯಾದ ಬಳಿಕ 128 ಕೆಬಿಪಿಎಸ್ ವೇಗಕ್ಕೆ ಇಳಿಯುತಿತ್ತು.
ಮತ್ತೆ ಪೈಪೋಟಿ?
ಜಿಯೋ ಆಫರ್‍ನಿಂದಾಗಿ ಟೆಲಿಕಾಂ ಕಂಪೆನಿಗಳು ಆಫರ್ ಪ್ರಕಟಿಸಿ ಸ್ಪರ್ಧೆಗೆ ಬಿದ್ದಿರುವುದು ಹಳೆ ಸುದ್ದಿ. ಈಗ ಜಿಯೋ 101 ರೂ. ನಲ್ಲಿ ಪ್ರತಿ ದಿನ ಗರಿಷ್ಠ 1ಜಿಬಿ ಡೇಟಾ ವನ್ನು ಮೂರು ತಿಂಗಳು ನೀಡುವುದಾಗಿ ಹೇಳಿದೆ. ಈ ಸರ್‍ಪ್ರೈಸ್ ಆಫರ್‍ಗೆ ಉಳಿದ ಟೆಲಿಕಾಂ ಕಂಪೆನಿಗಳು ಯಾವ ರೀತಿಯ ಆಫರ್ ಬಿಡುಗಡೆ ಮಾಡಲಿದೆ ಎನ್ನುವ ಕುತೂಹಲ ಈಗ ಹೆಚ್ಚಾಗಿದೆ.
ಮುಂಬೈ: ಪ್ರೈಂ ಸದಸ್ಯರಾಗಲು ಮಾರ್ಚ್ 31ರ ಒಳಗಡೆ ಸಬ್ ಸ್ಕ್ರೈಬ್ ಮಾಡಬೇಕೆಂದು ಜಿಯೋ ಹೇಳಿತ್ತು. ಆದರೆ ಈಗ ಬಂದಿರುವ ಹೊಸ ಸುದ್ದಿ ಪ್ರಕಾರ ಇನ್ನು ಒಂದು ತಿಂಗಳು ಈ ಡೆಡ್‍ಲೈನ್ ಅವಧಿ ವಿಸ್ತರಣೆಯಾಗುವ ಸಾಧ್ಯತೆಯಿದೆ.
ಹೌದು. ಜಿಯೋ ಕಂಪೆನಿಯ ಮೂಲಗಳು ನೀಡಿರುವ ಮಾಹಿತಿ ಪ್ರಕಾರ, ಪ್ರೈಂ ಸದಸ್ಯರಾಗಲು ಇದ್ದ ಶೇ.50 ರಷ್ಟು ಗುರಿಯನ್ನು ಜಿಯೋ ಈಗಾಗಲೇ ತಲುಪಿದೆ. ಹೀಗಾಗಿ ಏಪ್ರಿಲ್ 30ರ ವರೆಗೆ ಈ ಡೆಡ್‍ಲೈನ್ ಅವಧಿ ವಿಸ್ತರಣೆಯಾಗುವ ಸಾಧ್ಯತೆಯಿದೆ ಎಂದು ಮಾಧ್ಯಮಗಳು ವರದಿ ಮಾಡಿದೆ.
ಡೆಡ್‍ಲೈನ್ ಅವಧಿ ವಿಸ್ತರಣೆ ಮಾಡಬೇಕೋ ಬೇಡವೋ ಎನ್ನುವುದನ್ನು ಜಿಯೋ ಇನ್ನೂ ನಿರ್ಧರಿಸಿಲ್ಲ. ಈ ಮಾತುಕತೆ ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ.
ಕಳೆದ ತಿಂಗಳು ರಿಲಯನ್ಸ್ ಇಂಡಸ್ಟ್ರಿಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಜಿಯೋ 10 ಕೋಟಿ ಗ್ರಾಹಕರನ್ನು ತಲುಪಿದೆ. ಇನ್ನು ಮುಂದೆ ಉಚಿತ ಡೇಟಾ ಸೇವೆ ನೀಡಲು ಸಾಧ್ಯವಿಲ್ಲ. ಕಡಿಮೆ ಹಣದಲ್ಲಿ ಹೆಚ್ಚು ಡೇಟಾ ಪಡೆಯಬೇಕಾದರೆ ಗ್ರಾಹಕರು ಜಿಯೋ ಪ್ರೈಂ ಸದಸ್ಯರಾಗಬೇಕು. 99 ರೂ. ನೀಡಿ ಮಾರ್ಚ್ 31ರ ಒಳಗಡೆ ಪ್ರೈಂ ಸದಸ್ಯರಾದವರಿಗೆ ಕಡಿಮೆ ಬೆಲೆಯಲ್ಲಿ ಡೇಟಾ ನೀಡಲಾಗುವುದು ಎಂದು ತಿಳಿಸಿದ್ದರು.
ಪ್ರೈಂ ಸದಸ್ಯರಾದವರು 28 ದಿನಗಳ ಕಾಲ 1 ಜಿಬಿ ಡೇಟಾ ಪಡೆಯಬೇಕಾದರೆ 303 ರೂ. ರಿಚಾರ್ಜ್ ಮಾಡಬೇಕಾಗುತ್ತದೆ. ಅಷ್ಟೇ ಅಲ್ಲದೇ ಬೈ ಒನ್ ಗೆಟ್ ಒನ್ ಆಫರ್ ಬಿಡುಗಡೆ ಮಾಡಿದ್ದು, 303 ರೂ. ರಿಚಾರ್ಜ್ ಮಾಡಿದವರಿಗೆ 5 ಜಿಬಿ ಡೇಟಾ ಮತ್ತು 499 ರೂ. ಗಿಂದ ಹೆಚ್ಚಿನ ರಿಚಾರ್ಜ್ ಮಾಡಿದವರಿಗೆ 10 ಜಿಬಿ ಡೇಟಾವನ್ನು ಹೆಚ್ಚುವರಿಯಾಗಿ ನೀಡುವುದಾಗಿ ಜಿಯೋ ಪ್ರಕಟಿಸಿದೆ.
ಜಿಯೋ ಡೆಡ್‍ಲೈನ್ ವಿಸ್ತರಿಸುವುದು ಹೊಸದೆನಲ್ಲ. ಈ ಹಿಂದೆ ಡಿಸೆಂಬರ್ 31ರ ವರೆಗೆ ಉಚಿತ ಡೇಟಾ ನೀಡುವುದಾಗಿ ಹೇಳಿತ್ತು. ಇದಾದ ಬಳಿಕ ಮಾರ್ಚ್ 31ರವರೆಗೆ ಹ್ಯಾಪಿ ನ್ಯೂ ಇಯರ್ ಆಫರ್ ಪ್ರಕಟಿಸಿ 1 ಜಿಬಿ ಉಚಿತ ಡೇಟಾ ನೀಡುವುದಾಗಿ ಪ್ರಕಟಿಸಿತ್ತು. ಹೀಗಾಗಿ ಜಿಯೋ ಪ್ರೈಂ ಸಬ್‍ಸ್ಕ್ರಬ್ ಡೆಡ್‍ಲೈನ್ ಅವಧಿಯನ್ನು ಮಾರ್ಚ್ 31ರ ನಂತರವೂ ವಿಸ್ತರಿಸಬಹುದು ಎನ್ನುವ ಮಾತುಗಳು ಈಗ ಕೇಳಿ ಬರುತ್ತಿವೆ.
ನವದೆಹಲಿ: ರಿಲಯನ್ಸ್ ಜಿಯೋ ಮತ್ತು ಏರ್‍ಟೆಲ್ ಕಂಪೆನಿಗಳು ಡೇಟಾ ವಿಚಾರವಾಗಿ ಸ್ಪರ್ಧೆ ನಡೆಸುತ್ತಿರುವುದು ನಿಮಗೆ ಗೊತ್ತೇ ಇದೆ. ಈಗ ಈ ಸ್ಪರ್ಧೆ ಮತ್ತಷ್ಟು ಜೋರಾಗಿದ್ದು ತನ್ನ ವಿರುದ್ಧ ಏರ್‍ಟೆಲ್ ಜಾಹೀರಾತು ಪ್ರಕಟಿಸಿ ಗ್ರಾಹಕರಿಗೆ ಸುಳ್ಳು ಮಾಹಿತಿ ನೀಡುತ್ತಿದೆ ಎಂದು ಆರೋಪಿಸಿ ಜಿಯೋ ಈಗ ಭಾರತೀಯ ಜಾಹೀರಾತು ಗುಣಮಟ್ಟ ಮಾನದಂಡ ಮಂಡಳಿಗೆ(ಎಎಸ್‍ಸಿಐ) ದೂರು ನೀಡಿದೆ.
ತನ್ನ ದೂರಿನಲ್ಲಿ ಜಿಯೋ, ಏರ್‍ಟೆಲ್ ಓಕ್ಲಾ ಡೇಟಾ ಸ್ಪೀಡ್ ಆಪ್ ಟೆಸ್ಟ್ ನಲ್ಲಿ ಬಂದಿರುವ ಫಲಿತಾಂಶವನ್ನು ಆಧಾರಿಸಿ ದೇಶದಲ್ಲಿ ವೇಗದ ಇಂಟರ್‍ನೆಟ್ ಸಂಪರ್ಕವನ್ನು ನಾವು ನೀಡುತ್ತಿದ್ದೇವೆ ಎಂದು ಜಾಹೀರಾತು ಪ್ರಕಟಿಸಿ ಜನರಿಗೆ ಸುಳ್ಳು ಮಾಹಿತಿ ನೀಡುತ್ತಿದೆ. ಆದರೆ ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರ(ಟ್ರಾಯ್) ಮತ್ತು ಮೈ ಸ್ಪೀಡ್ ಅಪ್ಲಿಕೇಶನ್ ನಲ್ಲಿ ದೇಶದಲ್ಲಿ ವೇಗದ ಇಂಟರ್‍ನೆಟ್ ಸಂಪರ್ಕವನ್ನು ಜಿಯೋ ನೀಡುತ್ತಿದೆ ಎನ್ನುವ ಫಲಿತಾಂಶ ಬಂದಿದೆ. ಹೀಗಾಗಿ ಏರ್‍ಟೆಲ್ ನೀಡುತ್ತಿರುವ ಜಾಹೀರಾತು ಸುಳ್ಳಾಗಿದ್ದು, ಏರ್‍ಟೆಲ್ ವಿರುದ್ಧ ಕ್ರಮಗಳನ್ನು ಕೈಗೊಳ್ಳಬೇಕೆಂದು ಎಎಸ್‍ಸಿಐಯಲ್ಲಿ ಮನವಿ ಮಾಡಿದೆ.
ತಾನು ವೇಗದ ಇಂಟರ್‍ನೆಟ್ ಸೇವೆಯನ್ನು ನೀಡುತ್ತಿದ್ದೇನೆ ಎಂದು ದೃಢಪಡಿಸಲು ಜಿಯೋ ಎಎಸ್‍ಸಿಐಗೆ 12 ಯುಆರ್‍ಎಲ್‍ಗಳನ್ನು ನೀಡಿದೆ. ಅಷ್ಟೇ ಅಲ್ಲದೇ ಸುಳ್ಳು ಫಲಿತಾಂಶ ನೀಡಿದ್ದಕ್ಕೆ ಓಕ್ಲಾ ಕಂಪೆನಿಗೆ ಲೀಗಲ್ ನೋಟಿಸ್ ಕಳುಹಿಸಿದೆ.
ಜಿಯೋ ನೋಟಿಸ್ ಸಂಬಂಧ ಓಕ್ಲಾ ತನ್ನ ಹೇಳಿಕೆಯನ್ನು ಬಿಡುಗಡೆ ಮಾಡಿ ಏರ್‍ಟೆಲ್ ಪರ ನಿಂತುಕೊಂಡಿದೆ. ಭಾರತದಲ್ಲಿ ನಾವು ಡ್ಯುಯಲ್ ಸಿಮ್, ನೆಟ್‍ವರ್ಕ್ ಟೆಕ್ನಾಲಜಿ, ವಿವಿಧ ಮೊಬೈಲ್‍ಗಳನ್ನು ಪರಿಗಣಿಸಿ ಡೇಟಾ ಸ್ಪೀಡ್ ಮಾಹಿತಿಯನ್ನು ನೀಡಿದ್ದೇವೆ ಎಂದು ತಿಳಿಸಿದೆ. ತನಗೆ ನೋಟಿಸ್ ನೀಡಿದ್ದಕ್ಕೆ ಓಕ್ಲಾ ಕಂಪೆನಿ ಈಗ ರಿಲಯನ್ಸ್ ಜಿಯೋಗೆ ನೋಟಿಸ್ ನೀಡಿದೆ.
ಜಿಯೋ ಸ್ಪೀಡ್ ಕಡಿಮೆ ಆಗುತ್ತಾ?
ಸಾಧಾರಣವಾಗಿ ಡ್ಯುಯಲ್ ಸಿಮ್ ಹೊಂದಿರುವ ಗ್ರಾಹಕರು ಜಿಯೋ ಸಿಮ್ ಅನ್ನು ಒಂದನೇ ಸ್ಲಾಟ್ ಮತ್ತು ಇನ್ನೊಂದು ಸಿಮ್ ಅನ್ನು ಎರಡನೇ ಸ್ಲಾಟ್‍ನಲ್ಲಿ ಹಾಕುತ್ತಾರೆ. ಒಂದು ವೇಳೆ ಎರಡನೇ ಸಿಮ್ ಸ್ಲಾಟ್‍ನಲ್ಲಿ ಜಿಯೋ ಸಿಮ್ ಹಾಕಿದ್ರೆ ಇಂಟರ್‍ನೆಟ್ ಸ್ಪೀಡ್ ಕಡಿಮೆ ಇರುತ್ತದೆ. ಹೀಗಾಗಿ ಯಾವುದೇ ಡೇಟಾ ಸ್ಪೀಡ್ ಟೆಸ್ಟ್ ಮಾಡುವ ಆಪ್‍ನಲ್ಲಿ ಚೆಕ್ ಮಾಡಿದ್ರೆ ಅದು ಮೊದಲ ಸ್ಲಾಟ್‍ನಲ್ಲಿರುವ ಕಂಪೆನಿ ನೀಡುವ ಇಂಟರ್‍ನೆಟ್ ಕಡಿಮೆ ಎಂದೇ ತೋರಿಸುತ್ತದೆ. ಈ ಕಾರಣಕ್ಕಾಗಿ ಜಿಯೋ ಸಿಮ್ ಖರೀದಿ ವೇಳೆ ವಿತರಕರು ಡ್ಯುಯಲ್ ಸಿಮ್ ಸೆಟ್ ಇದ್ದಲ್ಲಿ ಒಂದನೇ ಸ್ಲಾಟ್ ನಲ್ಲಿ ಜಿಯೋ ಸಿಮ್ ಹಾಕಿ ಎಂದು ಹೇಳುತ್ತಿದ್ದರು.
ಜಿಯೋ ಸೇವೆಯ ಆರಂಭಗೊಂಡ ದಿನಗಳಲ್ಲಿ ಡೇಟಾ ಸ್ಪೀಡ್ ಕಡಿಮೆ ಇತ್ತು. ಈ ವಿಚಾರವನ್ನು ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ ಒಪ್ಪಿಕೊಂಡಿದ್ದರು. ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಬಹಳಷ್ಟು ಸಂಖ್ಯೆಯ ಗ್ರಾಹಕರು ಜಿಯೋಗೆ ಸೇರ್ಪಡೆಯಾಗುತ್ತಿರುವ ಹಿನ್ನೆಲೆಯಲ್ಲಿ ವೇಗದಲ್ಲಿ ಡೇಟಾ ನೀಡಲು ಸಾಧ್ಯವಾಗುತ್ತಿಲ್ಲ, ಶೀಘ್ರದಲ್ಲೇ ಟವರ್‍ಗಳನ್ನು ಮತ್ತು ವೈಫೈ ಹಾಟ್‍ಸ್ಪಾಟ್‍ಗಳನ್ನು ಸ್ಪಾಪಿಸುವ ಮೂಲಕ ಸಮಸ್ಯೆಯನ್ನು ಪರಿಹಾರ ಮಾಡಲಾಗುವುದು ಎಂದು 2016ರ ಡಿಸೆಂಬರ್ 2 ರಂದು ಹೇಳಿದ್ದರು.
ಆದರೆ ಇತ್ತಿಚಿಗೆ ಟ್ರಾಯ್ ಬಿಡುಗಡೆ ಮಾಡಿರುವ ಡೇಟಾ ಪ್ರಕಾರ ದೇಶದಲ್ಲಿ ವೇಗದ ಇಂಟರ್‍ನೆಟ್ ಸೇವೆ ನೀಡುವ ಕಂಪೆನಿಯಲ್ಲಿ ಜಿಯೋ ಮೊದಲ ಸ್ಥಾನದಲ್ಲಿದೆ. ಜನರು http://www.myspeed.trai.gov.in/ಪೋರ್ಟಲ್ ಹೋಗಿ ಯಾವ ಟೆಲಿಕಾಂ ಕಂಪೆನಿ ಎಷ್ಟು ಎಂಬಿಪಿಎಸ್ ವೇಗದಲ್ಲಿ ಡೇಟಾ ನೀಡುತ್ತದೆ ಎನ್ನುವುದನ್ನು ಚೆಕ್ ಮಾಡಬಹುದು.
ಹೀಗಾಗಿ ಇಲ್ಲಿ ಟ್ರಾಯ್ ವೆಬ್‍ಸೈಟ್‍ನಲ್ಲಿ ಯಾವ ಕಂಪೆನಿಯ ಎಷ್ಟು ವೇಗದಲ್ಲಿ ಡೇಟಾ ನೀಡುತ್ತಿದೆ ಎನ್ನುವ ಮಾಹಿತಿ, ಜಿಯೋ ಎಎಸ್‍ಸಿಐ ನೀಡಿ ದ ಯುಆರ್‍ಎಲ್ ವಿಡಿಯೋ, ಜೊತೆಗೆ ಏರ್‍ಟೆಲ್ ಜಾಹೀರಾತಿನ ಫೋಟೋವನ್ನು ನೀಡಲಾಗಿದೆ.
ಜಿಯೋಗೆ ಸಂಬಂಧಿಸಿದ ಎಲ್ಲ ಸುದ್ದಿಗಳನ್ನು ಓದಲು ಕ್ಲಿಕ್ ಮಾಡಿ: ಜಿಯೋ
ನವದೆಹಲಿ: ಡೇಟಾ ಪ್ಯಾಕ್‍ನಲ್ಲಿ ಜಿಯೋ ದರ ಸಮರ ಆರಂಭಿಸಿದ ಬಳಿಕ ಏರ್‍ಟೆಲ್, ಐಡಿಯಾಗಳು ಡೇಟಾ ಪ್ಯಾಕ್‍ನಲ್ಲಿ ಆಫರ್ ಘೋಷಿಸಿತ್ತು. ಈಗ ಬಿಎಸ್‍ಎನ್‍ಎಲ್ 339 ರೂ. ರಿಚಾರ್ಜ್ ಮಾಡಿದ್ರೆ ಒಂದು ದಿನಕ್ಕೆ 3ಜಿ ವೇಗದ 2 ಜಿಬಿ ಡೇಟಾ ಇರುವ 28 ದಿನಗಳ ವ್ಯಾಲಿಡಿಟಿ ಹೊಂದಿರುವ ಹೊಸ ಆಫರ್ ಪ್ರಕಟಿಸಿದೆ.
ಈ ಆಫರ್‍ನಲ್ಲಿ ಪ್ರತಿದಿನ ಬಿಎಸ್‍ಎನ್‍ಎಲ್‍ನಿಂದ ಬಿಎಸ್‍ಎನ್‍ಎಲ್ ನೆಟ್‍ವರ್ಕಿಗೆ ಹೋಗುವ ಎಲ್ಲ ಕರೆ ಉಚಿತವಾಗಿದ್ದು, 25 ನಿಮಿಷಗಳ ಕಾಲ ಇತರೆ ನೆಟ್‍ವರ್ಕಿಗೆ ಹೋಗುವ ಕರೆ ಉಚಿತವಾಗಿದೆ. 25 ನಿಮಿಷ ಮುಗಿದ ಬಳಿಕ ಪ್ರತಿ ನಿಮಿಷಕ್ಕೆ 25 ಪೈಸೆ ಚಾರ್ಜ್ ಮಾಡುತ್ತದೆ. ಅದರೆ ಈ ಆಫರ್ 90 ದಿನಗಳ ಅವಧಿಗೆ ಮಾತ್ರ ಸೀಮಿತವಾಗಿದೆ.
ಗ್ರಾಹಕರಿಗೆ ಕಡಿಮೆ ಬೆಲೆಯಲ್ಲಿ ಉತ್ತಮ ಸೇವೆ ನೀಡಲು ಈ ಆಫರನ್ನು ಪರಿಚಯಿಸಿದ್ದೇವೆ ಎಂದು ಬಿಎಸ್‍ಎನ್‍ಎಲ್‍ನ ಗ್ರಾಹಕ ಮೊಬಿಲಿಟಿ ವಿಭಾಗದ ನಿರ್ದೇಶಕ ಆರ್.ಕೆ. ಮಿತ್ತಲ್ ಹೇಳಿದ್ದಾರೆ.
ಜಿಯೋ ಪ್ಲಾನ್ ಹೇಗಿದೆ?
ಜಿಯೋದ ಹ್ಯಾಪಿ ನ್ಯೂ ಇಯರ್ ಪ್ಲಾನ್ ಮಾರ್ಚ್ 31ಕ್ಕೆ ಅಂತ್ಯವಾಗಲಿದ್ದು, ಏಪ್ರಿಲ್‍ನಿಂದ ಗ್ರಾಹಕರು ಪ್ರತಿ ದಿನ 1 ಜಿಬಿ ಡೇಟಾ ಪಡೆಯಬೇಕಾದರೆ 99 ರೂ. ನೀಡಿ ಪ್ರೈಮ್ ಸದಸ್ಯರಾಗಬೇಕಾಗುತ್ತದೆ. ಈ ಪ್ರೈಮ್ ಸದಸ್ಯತ್ವದ ಅವಧಿ 12 ತಿಂಗಳು ಆಗಿದ್ದು, ಸದಸ್ಯರಾದವರು 303 ರೂ. ಮತ್ತು ಅದಕ್ಕಿಂತಲೂ ಹೆಚ್ಚಿನ ರೂ. ಆಫರ್ ರಿಚಾರ್ಜ್ ಮಾಡಿದ್ರೆ ಅವರಿಗೆ ಪ್ರತಿ ದಿನ 4ಜಿ ವೇಗದಲ್ಲಿ 1 ಜಿಬಿ ಡೇಟಾ ಸಿಗುತ್ತದೆ. ಅಷ್ಟೇ ಅಲ್ಲದೇ ಜಿಯೋ ನ್ಯೂಸ್, ಜಿಯೋ ಸಿನಿಮಾ, ಜಿಯೋ ಟಿವಿ ಆಗಿರುವ ಜಿಯೋ ಮೀಡಿಯಾ ಸರ್ವಿಸ್ ಉಚಿತವಾಗಿ ದೊರೆಯಲಿದೆ.
ಪ್ರೈಮ್ ಆಫರ್ ನಂತರ ಜಿಯೋ ಬೈ ಒನ್ ಗೆಟ್ ಒನ್ ಆಫರ್ ಬಿಡುಗಡೆ ಮಾಡಿತ್ತು. ಈ ಆಫರ್ ನಲ್ಲಿ 303 ರೂ. ರಿಚಾರ್ಜ್ ಮಾಡಿದರೆ ಹೆಚ್ಚುವರಿಯಾಗಿ 5 ಜಿಬಿ ಡೇಟಾ ನೀಡುವುದಾಗಿ ಪ್ರಕಟಿಸಿದೆ. ಇದರಿಂದಾಗಿ ಗ್ರಾಹಕರು 28 ದಿನಗಳ ಅವಧಿಯಲ್ಲಿ ಒಟ್ಟು 33 ಜಿಬಿ ಡೇಟಾವನ್ನು ಪಡೆದುಕೊಳ್ಳಬಹುದು. ಇನ್ನು 499 ರೂ. ಮತ್ತು ಅದಕ್ಕಿಂತ ಹೆಚ್ಚಿನ ರಿಚಾರ್ಜ್ ಮಾಡಿದ್ರೆ ಹೆಚ್ಚುವರಿಯಾಗಿ 10 ಜಿಬಿ ಡೇಟಾ ಸಿಗಲಿದೆ. ಈ ಹೆಚ್ಚುವರಿ ಡೇಟಾಗಳು ಹೇಗೆ ಸೇರ್ಪಡೆಯಾಗುತ್ತದೆ ಎನ್ನುವ ಪ್ರಶ್ನೆಗೆ ಜಿಯೋ ಆಟೋಮ್ಯಾಟಿಕ್ ಆಗಿ ಗ್ರಾಹಕರ ಖಾತೆಗೆ ಸೇರ್ಪಡೆಯಾಗುತ್ತದೆ ಎಂದು ತಿಳಿಸಿದೆ. 303 ರೂ.ಗಿಂತ ಹೆಚ್ಚಿನ ರಿಚಾರ್ಜ್ ಮಾಡಿದ ಪ್ರೈಮ್ ಗ್ರಾಹಕರಿಗೆ ಮಾತ್ರ ಈ ಆಫರ್ ಸಿಗಲಿದೆ.
ಜಿಯೋಗೆ ಸಂಬಂಧಿಸಿದ ಎಲ್ಲ ಸುದ್ದಿಗಳನ್ನು ಓದಲು ಕ್ಲಿಕ್ ಮಾಡಿ: ಜಿಯೋ
ಮುಂಬೈ: ರಿಲಯನ್ಸ್ ಜಿಯೋ ಎಲ್‍ಟಿಇ ಟೆಕ್ನಾಲಜಿ ಸಪೋರ್ಟ್ ಮಾಡುವ ಫೀಚರ್ ಫೋನ್ ತಯಾರಿಸುತ್ತಿರುವ ವಿಚಾರ ನಿಮಗೆ ಗೊತ್ತೆ ಇದೆ. ಈಗ ಗೂಗಲ್ ಜೊತೆಗೂಡಿ ಆಂಡ್ರಾಯ್ಡ್ ಫೋನ್ ತಯಾರಿಸಲು ಮುಂದಾಗಿದೆ.
ಈ ವರ್ಷದ ಜನವರಿಯಲ್ಲಿ ಗೂಗಲ್ ಸಿಇಒ ಸುಂದರ್ ಪಿಚೈ ಭಾರತಕ್ಕೆ ಬಂದಿದ್ದಾಗ ಕಡಿಮೆ ಬೆಲೆಯಲ್ಲಿ ಆಂಡ್ರಾಯ್ಡ್ ಫೋನ್ ತಯಾರಿಸಲಾಗುವುದು ಎಂದು ತಿಳಿಸಿದ್ದರು. ಭಾರತಕ್ಕೆ 30 ಡಾಲರ್(2 ಸಾವಿರ ರೂ.) ಬೆಲೆಯ ಆಂಡ್ರಾಯ್ಡ್ ಫೋನ್ ಅಗತ್ಯವಿದೆ ಎಂದು ಹೇಳಿದ್ದರು. ಇದಕ್ಕೆ ಪೂರಕ ಎಂಬಂತೆ ಜಿಯೋ ಕಂಪೆನಿ ಮತ್ತು ಗೂಗಲ್ ಜೊತೆಗೂಡಿ ಆಂಡ್ರಾಯ್ಡ್ ಫೋನ್ ತಯಾರಿಸಲಿದೆ ಎಂದು ಟೆಕ್ ಮೂಲಗಳ ಮಾಹಿತಿಯನ್ನು ಆಧರಿಸಿ ಮಾಧ್ಯಮವೊಂದು ವರದಿ ಮಾಡಿದೆ.
ಈ ಫೋನಿನಲ್ಲಿ ಪ್ರಿಲೋಡೆಡ್ ಜಿಯೋ ಅಪ್ಲಿಕೇಶನ್ ಇರಲಿದ್ದು, ಈ ವರ್ಷದ ಅಂತ್ಯಕ್ಕೆ ಈ ಫೋನ್ ಮಾರುಕಟ್ಟೆಗೆ ಬಿಡುಗಡೆಯಾಗುವ ಸಾಧ್ಯತೆಯಿದೆ. ಅಷ್ಟೇ ಅಲ್ಲದೇ ಗೂಗಲ್ ಮತ್ತು ಜಿಯೋ ಸ್ಮಾರ್ಟ್ ಟಿವಿಗಾಗಿ ವಿಶೇಷವಾಗಿ ಅಪ್ಲಿಕೇಶನ್ ತಯಾರು ಮಾಡಲಿದೆ ಎಂದು ವರದಿ ತಿಳಿಸಿದೆ.
ಈ ಸುದ್ದಿಗೆ ಸಂಬಂಧಿಸಿದಂತೆ ಮಾಧ್ಯಮಗಳು ಗೂಗಲ್ ಮತ್ತು ರಿಲಯನ್ಸ್ ಜಿಯೋ ಸಂಪರ್ಕಿಸಿದ್ದು, ಅಲ್ಲಿಂದ ಯಾವುದೇ ಪ್ರತ್ರಿಕಿಯೆ ಬಂದಿಲ್ಲ.
ಗೂಗಲ್ ಈ ಹಿಂದೆ ಏಷ್ಯಾ, ಆಫ್ರಿಕಾ ಖಂಡದಲ್ಲಿ ಮಾರುಕಟ್ಟೆ ವಿಸ್ತರಿಸಲು ಆಂಡ್ರಾಯ್ಡ್ ಓಎಸ್ ಆಧಾರಿತ ಆಂಡ್ರಾಯ್ಡ್ ಒನ್ ಫೋನ್‍ಗಳನ್ನು ಬಿಡುಗಡೆ ಮಾಡಿತ್ತು. ಈ ಫೋನ್‍ಗಳ ಬೆಲೆ ಕಡಿಮೆ ಇದ್ದು, ಗೂಗಲ್ ಮಾನದಂಡಕ್ಕೆ ಅನುಗುಣವಾಗಿ ಹಾರ್ಡ್‍ವೇರ್ ಮತ್ತು ಸಾಫ್ಟ್ ವೇರ್‍ಗಳನ್ನು ಹೊಂದಿದ ಈ ಫೋನ್‍ಗಳನ್ನು ಕಂಪೆನಿಗಳು ತಯಾರಿಸಬೇಕಿತ್ತು. ವಿಶ್ವದಲ್ಲೇ ಮೊದಲ ಬಾರಿಗೆ 2014ರಲ್ಲಿ ಭಾರತದಲ್ಲಿ ಆಂಡ್ರಾಯ್ಡ್ ಓನ್ ಫೋನ್‍ಗಳು ಬಿಡುಗಡೆಯಾಗಿತ್ತು. ಭಾರತದಲ್ಲಿ ಕಾರ್ಬನ್, ಮೈಕ್ರೋಮ್ಯಾಕ್ಸ್, ಸ್ಪೈಸ್ ಕಂಪೆನಿಗಳು ಆಂಡ್ರಾಯ್ಡ್ ಓನ್ ಅಡಿಯಲ್ಲಿ ಫೋನ್ ತಯಾರಿಸಿತ್ತು.
ಜಿಯೋ 999 ರೂ.ನಿಂದ ಆರಂಭವಾಗಿ 1500 ರೂ ಒಳಗಡೆ ಕೀ ಪ್ಯಾಡ್ ಹೊಂದಿರುವ ಎಲ್‍ಟಿಇ ತಂತ್ರಜ್ಞಾನಕ್ಕೆ ಸಪೋರ್ಟ್ ಮಾಡುವ ಫೀಚರ್ ಫೋನ್‍ಗಳನ್ನು ಬಿಡುಗಡೆ ಮಾಡಲಿದೆ ಎನ್ನುವ ವರದಿ ಈ ಹಿಂದೆ ಮಾಧ್ಯಮಗಳಲ್ಲಿ ಪ್ರಕಟಗೊಂಡಿತ್ತು. ಪ್ರಸ್ತುತ ಜಿಯೋ ಎಲ್‍ವೈಎಫ್ ಹೆಸರಿನಲ್ಲಿ ಆಂಡ್ರಯ್ಡ್ ಫೋನ್‍ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದೆ.
ಮುಂಬೈ: ರಿಲಯನ್ಸ್ ಜಿಯೋ ಬೈ ಒನ್ ಗೆಟ್ ಒನ್ ಆಫರ್ ಪ್ರಕಟಿಸಿದ ಕೂಡಲೇ ಏರ್‍ಟೆಲ್ 345 ರೂಪಾಯಿಗೆ 28 ದಿನಗಳ ವ್ಯಾಲಿಡಿಟಿ ಹೊಂದಿರುವ 28 ಜಿಬಿ ಡೇಟಾ ನೀಡುವ ಹೊಸ ಆಫರ್ ಪ್ರಕಟಿಸಿದೆ.
ಜಿಯೋದ 303 ರೂ. ರಿಚಾರ್ಜ್ ಮಾಡಿದರೆ 28 ದಿನಗಳ ಕಾಲ 28 ಜಿಬಿ ನೀಡುವ ಆಫರ್‍ಗೆ ಪ್ರತಿಯಾಗಿ ಏರ್‍ಟೆಲ್ 345 ರೂ.ಗೆ 28 ಜಿಬಿ(ದಿನಕ್ಕೆ ಗರಿಷ್ಟ 1 ಜಿಬಿ) ನೀಡುವ ಆಫರ್ ಪ್ರಕಟಿಸಿದೆ. ಈ ಆಫರ್‍ನಲ್ಲಿ ಸ್ಥಳಿಯ ಕರೆಗಳು ಮತ್ತು ಎಸ್‍ಟಿಡಿ ಕರೆಗಳು ಉಚಿತ ಎಂದು ತಿಳಿಸಿದೆ.
ಜಿಯೋದಲ್ಲಿ ಇದ್ದಂತೆ ಏರ್‍ಟೆಲ್‍ನಲ್ಲಿ ದಿನಕ್ಕೆ ಒಂದು ಜಿಬಿ ಸಂಪೂರ್ಣವಾಗಿ ಒಂದೇ ಬಾರಿಗೆ ಸಿಗುವುದಿಲ್ಲ. ಇದಕ್ಕೆ ನಿರ್ಬಂಧವಿದ್ದು, ಬೆಳಗಿನ ಅವಧಿಯಲ್ಲಿ 500 ಎಂಬಿ ಮತ್ತು ಮಧ್ಯರಾತ್ರಿ 12 ಗಂಟೆಯಿಂದ ಬೆಳಗ್ಗೆ 6 ಗಂಟೆಯವರೆಗೆ ಮಾತ್ರ 500 ಎಂಬಿ ಡೇಟಾ ಬಳಸಬಹುದಾಗಿದೆ.
ಏರ್‍ಟೆಲ್‍ನಲ್ಲಿ ಯಾವುದೇ ನಿರ್ಬಂಧ ಇಲ್ಲದೇ ಒಂದು ದಿನಕ್ಕೆ ಗರಿಷ್ಟ 1ಜಿಬಿ ಡೇಟಾ ಬೇಕಾದರೆ ನೀವು 549 ರೂ. ರಿಚಾರ್ಜ್ ಮಾಡಬೇಕಾಗುತ್ತದೆ.
99 ರೂ. ಸದಸ್ಯತ್ವ ನೊಂದಣಿ ಮಾಡಿ 12 ತಿಂಗಳ ಕಾಲ ಕಡಿಮೆ ಬೆಲೆಯಲ್ಲಿ ಹೆಚ್ಚು ಡೇಟಾ ಸೇವೆ ಪಡೆಯಲು ಜಿಯೋ ಹೇಗೆ ಗ್ರಾಹಕರಿಗೆ ಪ್ರೈಮ್ ಆಫರ್ ನೀಡಿದೆಯೋ ಅದೇ ರೀತಿಯಾಗಿ ಏರ್ ಟೆಲ್ 345 ರೂ. ಮತ್ತು 549 ರೂ. ಆಫರ್ ತಂದಿದೆ. ಈ ಪ್ಯಾಕ್ ಹಾಕಿಸಿಕೊಂಡ ಗ್ರಾಹಕರು 12 ತಿಂಗಳ ಕಾಲ ಕಡಿಮೆ ಹಣದಲ್ಲಿ ಹೆಚ್ಚು ಡೇಟಾವನ್ನು ಪಡೆಯಬಹುದಾಗಿದೆ.
ಮುಂಬೈ: ಬಟ್ಟೆ,ಎಲೆಕ್ಟ್ರಾನಿಕ್ಸ್ ವಸ್ತು ಇತ್ಯಾದಿ ಗಳನ್ನು ಖರೀದಿ ಮಾಡುವಾಗ ಬೈ ಒನ್ ಗೆಟ್ ಒನ್ ಆಫರ್‍ಗಳನ್ನು ನೀವು ಕೇಳಿರಬಹುದು. ಆದರೆ ಈಗ ಮೊಬೈಲ್ ಡೇಟಾದದಲ್ಲೂ ಈ ಆಫರ್ ಬಂದಿದೆ. ಟೆಲಿಕಾಂ ಕ್ಷೇತ್ರದಲ್ಲಿ ಹೊಸ ಹೊಸ ಮೈಲಿಗಲ್ಲನ್ನು ಸೃಷ್ಟಿಸುತ್ತಿರುವ ರಿಲಯನ್ಸ್ ಜಿಯೋ ಡೇಟಾ ರಿಚಾರ್ಜ್ ನಲ್ಲಿ ಸಿಮೀತ ಅವಧಿಯ ಬೈ ಒನ್ ಗೆಟ್ ಒನ್ ಆಫರ್ ಪ್ರಕಟಿಸಿದೆ.
ಹೌದು. ಪ್ರೈಮ್ ಗ್ರಾಹಕರಿಗೆ ಈಗ 5 ಜಿಬಿ ಮತ್ತು 10 ಜಿಬಿ ಡೇಟಾವನ್ನು ಹೆಚ್ಚುವರಿಯಾಗಿ ನೀಡಲು ಜಿಯೋ ಮುಂದಾಗಿದೆ. ಆದರೆ ಈ ಆಫರ್ ಎಲ್ಲ ಜಿಯೋ ಪ್ರೈಮ್ ಸೇರ್ಪಡೆಯಾದ ಗ್ರಾಹಕರಿಗೆ ಸಿಗುವುದಿಲ್ಲ. ಆಯ್ದ ರಿಚಾರ್ಜ್ ಮಾಡಿದವರಿಗೆ ಮಾತ್ರ ಈ ಲಾಭ ಸಿಗಲಿದೆ.
ಜಿಯೋ ಪ್ರೈಮ್ ಗ್ರಾಹಕರು ಮಾರ್ಚ್ 31ರ ನಂತರ 303 ರೂ. ರಿಚಾರ್ಜ್ ಮಾಡಿದ್ರೆ 28 ಜಿಬಿ ಡೇಟಾ(ದಿನಕ್ಕೆ ಗರಿಷ್ಟ 1 ಜಿಬಿ ಡೇಟಾ) ನೀಡಲಾಗುವುದು ಎಂದು ಜಿಯೋ ಈ ಹಿಂದೆ ಹೇಳಿತ್ತು. ಆದರೆ ಈಗ ಈ ಆಫರ್‍ಗೆ ಹೆಚ್ಚುವರಿಯಾಗಿ 5 ಜಿಬಿ ಡೇಟಾ ನೀಡುವುದಾಗಿ ಪ್ರಕಟಿಸಿದೆ. ಇದರಿಂದಾಗಿ ನೀವು 28 ದಿನಗಳ ಅವಧಿಯಲ್ಲಿ ಒಟ್ಟು 33 ಜಿಬಿ ಡೇಟಾವನ್ನು ಪಡೆದುಕೊಳ್ಳುವಿರಿ.
ಇನ್ನು 499 ರೂ. ಮತ್ತು ಅದಕ್ಕಿಂತ ಹೆಚ್ಚಿನ ರಿಚಾರ್ಜ್ ಮಾಡಿದ್ರೆ ನಿಮಗೆ ಹೆಚ್ಚುವರಿಯಾಗಿ 10 ಜಿಬಿ ಡೇಟಾ ಸಿಗಲಿದೆ. ಈ ಹೆಚ್ಚುವರಿ ಡೇಟಾಗಳು ಹೇಗೆ ಸೇರ್ಪಡೆಯಾಗುತ್ತದೆ ಎನ್ನುವ ಪ್ರಶ್ನೆಗೆ ಜಿಯೋ ಆಟೋಮ್ಯಾಟಿಕ್ ಆಗಿ ಗ್ರಾಹಕರ ಖಾತೆಗೆ ಸೇರ್ಪಡೆಯಾಗುತ್ತದೆ ಎಂದು ತಿಳಿಸಿದೆ.
303 ರೂ.ಗಿಂತ ಹೆಚ್ಚಿನ ರಿಚಾರ್ಜ್ ಮಾಡಿದ ಪ್ರೈಮ್ ಗ್ರಾಹಕರಿಗೆ ಮಾತ್ರ ಈ ಆಫರ್ ಸಿಗಲಿದೆ. ಈ ಆಫರ್ ಬೇಕಾದರೆ ಜಿಯೋ ಗ್ರಾಹಕರು ಮಾರ್ಚ್ 31ರ ಒಳಗಡೆ 99 ರೂ. ನೀಡಿ ಪ್ರೈಮ್ ಸದಸ್ಯರಾಗುವುದು ಕಡ್ಡಾಯ.
ಮುಂಬೈ: ರಿಲಯನ್ಸ್ ಜಿಯೋ ಪ್ರೈಮ್ ಆಫರ್ ಬಿಡುಗಡೆಯಾಗಿದೆ. 19 ರೂ. ನಿಂದ ಆರಂಭವಾಗಿ 9999 ರೂ. ವರೆಗಿನ ಡೇಟಾ ಪ್ಯಾಕ್ ಬಿಡುಗಡೆ ಮಾಡಿದೆ. ಈ ಎಲ್ಲ ಪ್ಲಾನ್‍ಗಳಲ್ಲಿ ಎಸ್‍ಎಂಎಸ್ ಮತ್ತು ಕರೆಗೆ ಯಾವುದೇ ಶುಲ್ಕ ವಿಧಿಸುವುದಿಲ್ಲ ಎಂದು ಜಿಯೋ ತಿಳಿಸಿದೆ. ಹೀಗಾಗಿ ಇಲ್ಲಿ ಜಿಯೋ ಪ್ರೈಮ್ ಸದಸ್ಯರಿಗೆ ಮತ್ತು ಜಿಯೋ ಪ್ರೈಮ್‍ಗೆ ಸೇರ್ಪಡೆಯಾಗದ ಸದಸ್ಯರಿಗೆ ಬಿಡುಗಡೆಯಾಗಿರುವ ಟ್ಯಾರಿಫ್ ಪ್ಲಾನ್‍ಗಳ ಪಟ್ಟಿಯನ್ನು ನೀಡಲಾಗಿದೆ.
19 ರೂ. 1ದಿನ ವ್ಯಾಲಿಡಿಟಿ
ಈ ಪ್ಲಾನ್‍ನಲ್ಲಿ ಗ್ರಾಹಕರು ಒಂದು ದಿನ 4ಜಿ ಸ್ಪೀಡ್‍ನಲ್ಲಿ 200 ಎಂಬಿ ಡೇಟಾವನ್ನು ಪಡೆದುಕೊಳ್ಳಬಹುದು. ಜಿಯೋ ಪ್ರೈಮ್ ಸೇರ್ಪಡೆಯಾಗದ ಗ್ರಾಹಕರು 4 ಜಿ ವೇಗದಲ್ಲಿ 100 ಎಂಬಿ ಡೇಟಾವನ್ನು ಪಡೆದುಕೊಳ್ಳಬಹುದು.
49 ರೂ. 3 ದಿನ ವ್ಯಾಲಿಡಿಟಿ:
ಈ ಪ್ಲಾನ್‍ನಲ್ಲಿ ಜಿಯೋ ಪ್ರೈಮ್ ಗ್ರಾಹಕರು ಪ್ರತಿದಿನ ಗರಿಷ್ಠ 600 ಎಂಬಿ ಡೇಟಾವನ್ನು ಪಡೆದುಕೊಳ್ಳಬಹುದು. ಈ ಪ್ಲಾನ್‍ನಲ್ಲಿ ಜಿಯೋ ಪ್ರೈಮ್‍ಗೆ ಸೇರ್ಪಡೆಯಾದ ಗ್ರಾಹಕರಿಗೆ ಪ್ರತಿದಿನ ಗರಿಷ್ಠ 300 ಎಂಬಿ ಡೇಟಾ ಸಿಗುತ್ತದೆ.
96 ರೂ. 7ದಿನ ವ್ಯಾಲಿಡಿಟಿ:
ಈ ಪ್ಲಾನ್‍ನಲ್ಲಿ ಪ್ರೈಮ್ ಗ್ರಾಹಕರು ಪ್ರತಿದಿನ 1 ಜಿಬಿ ಡೇಟಾ ಪಡೆಯಬಹುದು. 1 ಜಿಬಿ ಮಿತಿ ಮುಗಿದ ಬಳಿಕ 128 ಕೆಬಿಪಿಎಎಸ್ ವೇಗದಲ್ಲಿ ಡೇಟಾ ಪಡೆದುಕೊಳ್ಳಬಹುದು. ಪ್ರೈಮ್ ಸದಸ್ಯರಲ್ಲದವರಿಗೆ ಪ್ರತಿದಿನ 0.6ಜಿಬಿ ಡೇಟಾ ಸಿಗುತ್ತದೆ.
149 ರೂ. 28 ದಿನ ವ್ಯಾಲಿಡಿಟಿ
ಪ್ರೈಮ್ ಗ್ರಾಹಕರು 2 ಜಿಬಿ ಡೇಡಾವನ್ನು ಪಡೆದುಕೊಂಡರೆ, ಪ್ರೈಮ್ ಸದಸ್ಯರಲ್ಲದ ಗ್ರಾಹಕರು 1 ಜಿಬಿ ಡೇಟಾವನ್ನು ಪಡೆದುಕೊಳ್ಳಬಹುದು.
303 ರೂ. 28 ದಿನ ವ್ಯಾಲಿಡಿಟಿ
ಪ್ರೈಮ್ ಗ್ರಾಹಕರಿಗೆ 28 ಜಿಬಿ ಡೇಟಾ ಸಿಗುತ್ತದೆ. ದಿನವೊಂದಕ್ಕೆ ಗರಿಷ್ಠ 1 ಜಿಬಿ ಡೇಟಾ 4ಜಿ ವೇಗದಲ್ಲಿ ಸಿಗುತ್ತದೆ. ಈ ಮಿತಿ ದಾಟಿದ ಬಳಿಕ ವೇಗ 128 ಕೆಬಿಪಿಎಸ್‍ಗೆ ಇಳಿಯುತ್ತದೆ. ಪ್ರೈಮ್ ಸದಸ್ಯರಲ್ಲದವರು 2.5 ಜಿಬಿ ಡೇಟಾವನ್ನು ಪಡೆದುಕೊಳ್ಳಬಹುದು.
499 ರೂ. 28 ದಿನಗಳ ವ್ಯಾಲಿಡಿಟಿ:
ಪ್ರೈಮ್ ಗ್ರಾಹಕರಿಗೆ ಒಟ್ಟು 58 ಜಿಬಿ ಡೇಟಾ ಸಿಗುತ್ತದೆ. ಪ್ರತಿದಿನ ಗರಿಷ್ಠ 2ಜಿಬಿ ಡೇಟಾ 4ಜಿ ವೇಗದಲ್ಲಿ ಸಿಗುತ್ತದೆ. ಈ ಮಿತಿ ಮುಗಿದ ಬಳಿಕ ವೇಗ 128 ಕೆಬಿಪಿಎಸ್ ಇಳಿಯುತ್ತದೆ. ಪ್ರೈಮ್ ಸದಸ್ಯರಲ್ಲದವರು 5 ಜಿಬಿ ಡೇಟಾವನ್ನು ಪಡೆದುಕೊಳ್ಳಬಹುದು.
4999 ರೂ.
180 ದಿನಗಳ ವ್ಯಾಲಿಡಿಟಿ ಇರುವ ಈ ಪ್ಲಾನ್‍ನಲ್ಲಿ ಪ್ರೈಮ್ ಗ್ರಾಹಕರು ಒಟ್ಟು 350 ಜಿಬಿ ಡೇಟಾವನ್ನು ಪಡೆದುಕೊಳ್ಳಬಹುದು. ಈ ಪ್ಲಾನ್‍ನಲ್ಲಿ ದಿನದ ಮಿತಿ ಇಲ್ಲ. 30 ದಿನಗಳ ವ್ಯಾಲಿಡಿಟಿ ಇರುವ ಈ ಪ್ಲಾನ್‍ನಲ್ಲಿ ಪ್ರೈಮ್ ಸದಸ್ಯರಲ್ಲದವರು 100 ಜಿಬಿ ಡೇಟಾವನ್ನು ಪಡೆದುಕೊಳ್ಳಬಹುದು.
9999 ರೂ.
360 ದಿನಗಳ ಕಾಲ ಪ್ರೈಮ್ ಗ್ರಾಹಕರು ಒಟ್ಟು 750 ಜಿಬಿ ಡೇಟಾವನ್ನು ಪಡೆದುಕೊಳ್ಳಬಹುದು. ಪೈಮ್ ಸದಸ್ಯರಲ್ಲದವರು 30 ದಿನಗಳ ವ್ಯಾಲಿಡಿಟಿ ಹೊಂದಿರುವ ಈ ಪ್ಲಾನ್‍ನಲ್ಲಿ 200 ಜಿಬಿ ಡೇಟಾವನ್ನು ಪಡೆದುಕೊಳ್ಳಬಹುದು.