Tag: ಜಿಯೋ

  • ಶೀಘ್ರದಲ್ಲಿ ಕಡಿತವಾಗಲಿದೆ ಕರೆ ದರ: ಏನಿದು ಐಯುಸಿ?

    ಶೀಘ್ರದಲ್ಲಿ ಕಡಿತವಾಗಲಿದೆ ಕರೆ ದರ: ಏನಿದು ಐಯುಸಿ?

    ನವದೆಹಲಿ: ಶೀಘ್ರದಲ್ಲಿ ಟೆಲಿಕಾಂ ಕಂಪೆನಿಗಳು ಕರೆ ದರವನ್ನು ಕಡಿತಗೊಳಿಸುವ ಸಾಧ್ಯತೆಯಿದೆ. ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ(ಟ್ರಾಯ್) ಇಂಟರ್‍ಕನೆಕ್ಟ್ ಯೂಸೇಜ್ ಚಾರ್ಜ್(ಐಯುಸಿ) ಬೆಲೆಯನ್ನು ಕಡಿತಗೊಳಿಸಲು ಮುಂದಾಗಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

    ಪ್ರಸ್ತುತ ಈಗ ಪ್ರತಿ ನಿಮಿಷಕ್ಕೆ 14 ಪೈಸೆ ಐಯುಸಿ ಇದ್ದು ಇದನ್ನು 10 ಪೈಸೆಗೆ ಇಳಿಸಲು ಟ್ರಾಯ್ ಮುಂದಾಗಿದೆ ಎಂದು ವರದಿಯಾಗಿದೆ.

    ಐಯುಸಿ ನಿಗದಿ ಪಡಿಸಿದ್ದಕ್ಕೆ ಜಿಯೋ ವಿರೋಧ ವ್ಯಕ್ತಪಡಿಸಿದ್ದು, ನಾವು ಕರೆಗೆಂದೇ ಪ್ರತ್ಯೇಕವಾಗಿ ಗ್ರಾಹಕರಿಗೆ ಯಾವುದೇ ಶುಲ್ಕ ವಿಧಿಸುವುದಿಲ್ಲ. ಆದರೆ ಐಯುಸಿಯಿಂದ ನಮಗೆ ಹೊರೆಯಾಗುತ್ತಿದೆ. ಇತರೇ ಟೆಲಿಕಾಂ ಕಂಪೆನಿಗಳು ತಮ್ಮ ಆದಾಯವನ್ನು ಹೆಚ್ಚಿಸಲು ಮಾಡಿಕೊಂಡ ತಂತ್ರ ಎಂದು ಜಿಯೋ ವಾದಿಸಿದೆ.

    ಏನಿದು ಐಯುಸಿ?
    2003ರಲ್ಲಿ ಒಳಬರುವ ಕರೆಯನ್ನು ಉಚಿತವಾಗಿ ನೀಡುವ ಸಲುವಾಗಿ ಟ್ರಾಯ್ ಐಯುಸಿಯನ್ನು ತಂದಿತ್ತು. 2004ರ ಫೆಬ್ರವರಿಯಲ್ಲಿ ಟ್ರಾಯ್ ಪ್ರತಿ ನಿಮಿಷಕ್ಕೆ 30 ಪೈಸೆ, 2009ರ ಏಪ್ರಿಲ್ ನಲ್ಲಿ 20 ಪೈಸೆ, 2015ರ ಮಾರ್ಚ್ ನಲ್ಲಿ 14 ಪೈಸೆ ಐಯುಸಿ ಬೆಲೆಯನ್ನು ಟ್ರಾಯ್ ನಿಗದಿಪಡಿಸಿತ್ತು.

    ಇಂಟರ್‍ಕನೆಕ್ಟ್ ಯೂಸೇಜ್ ಚಾರ್ಜ್(ಐಯುಸಿ) ಟ್ರಾಯ್ ನಿಗದಿ ಪಡಿಸುತ್ತದೆ. ಉದಾಹರಣೆಗೆ ಜಿಯೋ ಗ್ರಾಹಕರೊಬ್ಬರು ಏರ್‍ಟೆಲ್ ಗ್ರಾಹಕರಿಗೆ ಕರೆ ಮಾಡಿದರೆ ಜಿಯೋ ಟ್ರಾಯ್ ನಿಗದಿ ಪಡಿಸಿದ ಐಯುಸಿಯನ್ನು ಏರ್‍ಟೆಲ್ ಗೆ ಪಾವತಿಸಬೇಕಾಗುತ್ತದೆ.

    ಐಯುಸಿಯಿಂದಾಗಿ ಏರ್‍ಟೆಲ್, ವೊಡಾಫೋನ್, ಐಡಿಯಾ ಕಂಪನಿಗಳು ಸಾವಿರಾರು ಕೋಟಿ ರೂ. ಆದಾಯಗಳಿಸುತ್ತಿದೆ. ಕಳೆದ ವರ್ಷ ದೇಶದ ಅತಿ ದೊಡ್ಡ ಟೆಲಿಕಾಂ ಕಂಪೆನಿ ಏರ್‍ಟೆಲ್ 10,279 ಕೋಟಿ ರೂ. ಆದಾಯವನ್ನು ಗಳಿಸಿದ್ದು, ಈಗ 14 ಪೈಸೆಯಿಂದ 30 ಪೈಸೆಗೆ ಏರಿಸಬೇಕೆಂಬ ಪ್ರಸ್ತಾಪವನ್ನು ಟ್ರಾಯ್ ಮುಂದಿಟ್ಟಿದೆ.

    ಭಾರತಿ ಎಂಟರ್‍ಪ್ರೈಸಸ್ ಮುಖ್ಯಸ್ಥ ಸುನೀಲ್ ಮಿತ್ತಲ್ ಟ್ರಾಯ್ ಮುಖ್ಯಸ್ಥ ಆರ್‍ಎಸ್ ಶರ್ಮಾ ಅವರಿಗೆ ಪತ್ರ ಬರೆದಿದ್ದು, ಪ್ರಸ್ತುತ ಐಯುಸಿ ಕಡಿಮೆ ಇದ್ದು, ಪಾರದರ್ಶಕವಾಗಿ ಹೊಸ ಬೆಲೆಯನ್ನು ನಿಗದಿಪಡಿಸಬೇಕೆಂದು ಮನವಿ ಮಾಡಿದ್ದಾರೆ.

    ಜಿಯೋ ವಿರೋಧ ಯಾಕೆ?
    ಇಲ್ಲಿಯವರೆಗೆ ಟೆಲಿಕಾಂ ಕಂಪೆನಿಗಳು ಕರೆ ಮತ್ತು ಡೇಟಾ ಸೇವೆಗಳನ್ನು ಪ್ರತ್ಯೇಕವಾಗಿ ನಿಭಾಯಿಸುತಿತ್ತು. ಆದರೆ ಜಿಯೋ ಈ ಎರಡನ್ನೂ ಒಟ್ಟಿಗೆ ನಿಭಾಯಿಸುತ್ತದೆ. ಇದರಿಂದಾಗಿ ಖರ್ಚು ಕಡಿಮೆ ಆಗುತ್ತದೆ. ಡೇಟಾವನ್ನು ಬಳಸಿಕೊಂಡು ಕರೆ ಮಾಡುವ ತಂತ್ರಜ್ಞಾನವೇ ವಾಯ್ಸ್ ಓವರ್ ಲಾಂಗ್ ಟರ್ಮ್ ಎವಲ್ಯೂಶನ್(ಎಲ್‍ಟಿಇ). ಇದರಲ್ಲಿ ಕರೆಗೆ ಬೇರೆ, ಡೇಟಾಗೆ ಬೇರೆ ಎಂದು ಹಣ ನೀಡಬೇಕಿಲ್ಲ. ಡೇಟಾಗೆ ನೀಡಿದ ಹಣದಲ್ಲೇ ಕರೆಯನ್ನೂ ಉಚಿತವಾಗಿ ಮಾಡಬಹುದು. ಈ ಕಾರಣಕ್ಕಾಗಿ ಜಿಯೋ ಸಂಪೂರ್ಣವಾಗಿ ಐಯುಸಿಯನ್ನು ತೆಗೆದು ಹಾಕಬೇಕೆಂದು ವಾದ ಮಂಡಿಸುತ್ತಿದೆ.

    ಏರ್‍ಟೆಲ್ ಮತ್ತು ವೊಡಾಫೋನ್‍ಗಳು ಪ್ರಯೋಗಿಕ ಪರೀಕ್ಷೆ ನಡೆಸುತ್ತಿದ್ದು ಕೆಲ ತಿಂಗಳಿನಲ್ಲಿ ಈ ವೋಲ್ಟ್ ಸೇವೆ ಗ್ರಾಹಕರಿಗೆ ಲಭ್ಯವಾಗಲಿದೆ. ಜಿಯೋ ಸೇವೆ ಆರಂಭವಾದ ಬಳಿಕ ಭಾರತದಲ್ಲಿ ಬಿಡುಗಡೆಯಾಗುತ್ತಿರುವ ಬಹುತೇಕ ಕಂಪೆನಿಗಳ ಫೋನ್ ಗಳು ಎಲ್‍ಟಿಇ ಟೆಕ್ನಾಲಜಿಯನ್ನು ಬೆಂಬಲಿಸುತ್ತಿದೆ.

  • 38 ಸಾವಿರ ಕಾಲೇಜುಗಳ ವಿದ್ಯಾರ್ಥಿಗಳಿಗೆ ಜಿಯೋದಿಂದ ಗುಡ್‍ನ್ಯೂಸ್!

    38 ಸಾವಿರ ಕಾಲೇಜುಗಳ ವಿದ್ಯಾರ್ಥಿಗಳಿಗೆ ಜಿಯೋದಿಂದ ಗುಡ್‍ನ್ಯೂಸ್!

    ಮುಂಬೈ: ಎಲ್‍ಟಿಇ ಫೀಚರ್ ಫೋನ್ ಬಿಡುಗಡೆ ಮಾಡಿದ ಬಳಿಕ ಜಿಯೋ ಮತ್ತೊಂದು ಸಾಹಸಕ್ಕೆ ಕೈ ಹಾಕಿದ್ದು, ಈಗ ದೇಶದ ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಇಂಟರ್ ನೆಟ್ ನೀಡಲು ಮುಂದಾಗಿದೆ.

    ಹೌದು. ಉಚಿತ ವೈಫೈ ನೀಡುವ ಸಲುವಾಗಿ ಮಾನವ ಸಂಪನ್ಮೂಲ ಸಚಿವಾಲಯಕ್ಕೆ ಜಿಯೋ ಪ್ರಸ್ತಾವನೆಯನ್ನು ಸಲ್ಲಿಸಿದೆ ಎಂದು ಮೂಲಗಳು ತಿಳಿಸಿವೆ.

    ಮೂಲಗಳ ಪ್ರಕಾರ ಸಚಿವಾಲಯ ಅಂತಿಮ ನಿರ್ಧಾರವನ್ನು ತೆಗೆದುಕೊಂಡಿಲ್ಲ. ಆದರೂ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿದ್ದು, ಈ ರೀತಿಯ ಪ್ರಸ್ತಾವನೆಗಳನ್ನು ಪಾರದರ್ಶಕವಾಗಿ ಟೆಂಡರ್ ಕರೆದು ಅನುಮತಿ ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ.

    ದೇಶದ 38 ಸಾವಿರ ಕಾಲೇಜುಗಳಿಗೆ (ಟೆಕ್ನಿಕಲ್ ಮತ್ತು ಟೆಕ್ನಿಕಲ್ ಹೊರತಾದ) ವೈಫೈ ನೀಡುವ ಪ್ರಸ್ತಾವನೆಯನ್ನು ಜಿಯೋ ಕಳೆದ ತಿಂಗಳು ನೀಡಿದೆ. ಆನ್‍ಲೈನ್ ಮೂಲಕ ಮಾಹಿತಿಗಳನ್ನು ಹಂಚಲು ಕೇಂದ್ರ ಸರ್ಕಾರ ಎಲ್ಲ ಕಾಲೇಜುಗಳಿಗೆ ವೈಫೈ ನೀಡಲು ಮುಂದಾಗುತ್ತಿದೆ. ಆದರೆ ಈ ರೀತಿಯ ಪ್ರಸ್ತಾವನೆ ಇದೆ ಮೊದಲ ಬಾರಿಗೆ ಬಂದಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

    ಈ ಯೋಜನೆಗೆ ಸಂಬಂಧಿಸಿದಂತೆ ಜಿಯೋ ಯಾವುದೇ ಹಣವನ್ನು ಪಡೆದುಕೊಳ್ಳುವುದಿಲ್ಲ. ಆದರೆ ಬೇರೆ ಕಂಪೆನಿಗಳಿಗೆ ಅವಕಾಶ ನೀಡದೇ ಅನುಮತಿ ನೀಡಲು ಸಾಧ್ಯವಿಲ್ಲ. ಹೀಗಾಗಿ ಪಾರದರ್ಶಕವಾಗಿ ಟೆಂಡರ್ ಕರೆಯಲಾಗುವುದು ಎಂದು ಅಧಿಕಾರಿ ಮಾಹಿತಿ ನೀಡಿದರು.

    ಜಿಯೋ ಉಚಿತ ವೈಫೈ ನೀಡುವ ಸಂಬಂಧವಾಗಿ ಕಳೆದ ತಿಂಗಳು ಪವರ್ ಪಾಯಿಂಟ್ ಮೂಲಕ ವಿವರಣೆ ನೀಡಿದೆ. ಈ ವಿಚಾರದ ಬಗ್ಗೆ ಮಾಧ್ಯಮಗಳು ಜಿಯೋ ಪ್ರತಿನಿಧಿಗಳನ್ನು ಸಂಪರ್ಕಿಸಿದ್ದು, ಅವರಿಂದ ಯಾವುದೇ ಪ್ರತಿಕ್ರಿಯೆ ಲಭ್ಯವಾಗಿಲ್ಲ.

    ಮಾನವ ಸಂಪನ್ಮೂಲ ಸಚಿವಾಲಯ ಕೇಂದ್ರಿಯ ವಿವಿಗಳಿಗೆ ಉಚಿತ ವೈಫೈ ನೀಡಲು ಪ್ರಸ್ತಾವನೆ ಸಲ್ಲಿಸಿದ್ದು ಈ ಯೋಜನೆ ಈ ವರ್ಷವೇ ಪೂರ್ಣವಾಗುವ ಸಾಧ್ಯತೆಯಿದೆ. ಸಚಿವ ಪ್ರಕಾಶ್ ಜಾವ್ಡೇಕರ್ ಕೆಲ ದಿನಗಳ ಹಿಂದೆ ಆಗಸ್ಟ್ 31ರ ಒಳಗಡೆ ದೇಶದ 38 ವಿವಿಗಳಿಗೆ ವೈಫೈ ಸೌಲಭ್ಯವನ್ನು ಕಲ್ಪಿಸಲಾಗುವುದು ಎಂದು ತಿಳಿಸಿದ್ದರು.

    ಆರಂಭದಲ್ಲಿ  ವೈಫೈ ಸಿಗೋ ವಿವಿಗಳು
    ದೆಹಲಿ, ವಿಶ್ವವಿದ್ಯಾಲಯ
    ಬನರಾಸ್, ಹಿಂದೂ ವಿಶ್ವವಿದ್ಯಾಲಯ
    ಆಲಿಗಢ, ಮುಸ್ಲಿಂ ವಿಶ್ವವಿದ್ಯಾಲಯ
    ಜಮಿಯಾ ಮಿಲಿಯಾ ಇಸ್ಲಾಮಿಯಾ , ವಿಶ್ವವಿದ್ಯಾಲಯ
    ಕೇಂದ್ರಿಯ ವಿಶ್ವವಿದ್ಯಾಲಯ, ಹಿಮಾಚಲಪ್ರದೇಶ
    ಕೇಂದ್ರಿಯ ವಿಶ್ವವಿದ್ಯಾಲಯ, ದಕ್ಷಿಣ ಬಿಹಾರ
    ಕೇಂದ್ರಿಯ ವಿಶ್ವವಿದ್ಯಾಲಯ, ಜಮ್ಮು

     

  • ಮೂರು ಡಿಜಿಟಲ್ ಕ್ಷೇತ್ರಗಳಿಗೆ ಭಾರೀ ಹೊಡೆತ ನೀಡಲಿದೆ ಜಿಯೋ ಫೋನ್!

    ಮೂರು ಡಿಜಿಟಲ್ ಕ್ಷೇತ್ರಗಳಿಗೆ ಭಾರೀ ಹೊಡೆತ ನೀಡಲಿದೆ ಜಿಯೋ ಫೋನ್!

    ಮುಂಬೈ: ಜಿಯೋದ ಕಡಿಮೆ ಬೆಲೆಯ ಫೀಚರ್ ಫೋನ್ ದೇಶದ ಮೂರು ಕ್ಷೇತ್ರಗಳ ಮಾರುಕಟ್ಟೆಯನ್ನು ಬುಡಮೇಲು ಮಾಡಲಿದೆ ಎನ್ನುವ ವಿಶ್ಲೇಷಣೆ ಈಗ ಆರಂಭವಾಗಿದೆ.

    ಟೆಲಿಕಾಂ ಕಂಪೆನಿ, ಕೇಬಲ್ ಮತ್ತು ಸ್ಮಾರ್ಟ್ ಫೋನ್ ತಯಾರಕ ಕಂಪೆನಿಗಳಿಗೆ ಜಿಯೋ ಹೊಡೆತ ನೀಡಬಹುದು ಎನ್ನುವ ಮಾತುಗಳು ಕೇಳಿ ಬರುತ್ತಿದ್ದು, ಇದಕ್ಕೆ ಪೂರಕ ಎಂಬಂತೆ ರಿಲಯನ್ಸ್ ಇಂಡಸ್ಟ್ರೀಸ್ ವಾರ್ಷಿಕ ಸಭೆಯಲ್ಲಿ ಜಿಯೋ ಫೋನ್ ಬಿಡುಗಡೆಯಾಗುತ್ತಿದ್ದಂತೆ ಟೆಲಿಕಾಂ ಮತ್ತು ಡಿಟಿಎಚ್ ಕಂಪೆನಿಗಳ ಶೇರುಗಳು ಭಾರೀ ಕುಸಿತಗೊಂಡಿದೆ.

    ಸ್ಮಾರ್ಟ್ ಫೋನ್ ಕಂಪೆನಿಗಳಿಗೆ ಹೊಡೆತ ಹೇಗೆ?
    ದೇಶದಲ್ಲಿ ಪ್ರಸ್ತುತ ಕಡಿಮೆ ಬೆಲೆಯ ವೋಲ್ಟ್ ಫೋನ್ ಗಳಿಗೆ ಕನಿಷ್ಠ 3-4 ಸಾವಿರ ರೂ. ಬೆಲೆ ಇದೆ. ಆದರೆ ಜಿಯೋ 1500 ರೂ. ಬೆಲೆಯಲ್ಲಿ ಬಿಡುಗಡೆ ಮಾಡಿದೆ. ಅಷ್ಟೇ ಅಲ್ಲದೇ 3 ವರ್ಷದ ಬಳಿಕ ಈ ಹಣವನ್ನು ಹಿಂದಿರುಗಿಸಲಾಗುವುದು ಎಂದು ಹೇಳಿದೆ. ಹೀಗಾಗಿ ಉಚಿತವಾಗಿ ಸಿಗುವ ಕಾರಣ ಜನ ಜಿಯೋ ಫೋನ್ ಖರೀದಿಸಿಲು ಆರಂಭಿಸಿದರೆ ಸ್ಮಾರ್ಟ್ ಫೋನ್ ಕಂಪೆನಿಗಳಿಗೆ ಭಾರೀ ಹೊಡೆತ ಬೀಳುವ ಸಾಧ್ಯತೆಯಿದೆ.

    2016- 17ರ ಹಣಕಾಸು ವರ್ಷದಲ್ಲಿ ಭಾರತೀಯ ಸ್ಮಾರ್ಟ್ ಫೋನ್ ಕಂಪೆನಿಗಳು ಹೆಚ್ಚು ಫೋನ್ ಮಾರಾಟ ಆಗದೇ ಇರಲು ಜಿಯೋ ಕಾರಣ ಎನ್ನುವ ಮಾತುಗಳು ಕೇಳಿ ಬಂದಿತ್ತು. ಭಾರತೀಯ ಕಂಪೆನಿಗಳು ಈ ಹಿಂದೆ ಫೋನ್ ಗಳನ್ನು ಬಿಡುಗಡೆ ಮಾಡಿದ್ದರೂ ಆ ಫೋನ್ ಗಳ ಪೈಕಿ ಬಹುತೇಕ ಫೋನ್ ಗಳು ಎಲ್‍ಟಿಇ ಟೆಕ್ನಾಲಜಿಗೆ ಸಪೋರ್ಟ್ ಮಾಡುತ್ತಿರಲಿಲ್ಲ. ಹೀಗಾಗಿ ಜನರು ಜಿಯೋಗೆ ಸಪೋರ್ಟ್ ಮಾಡುವ ಎಲ್‍ಟಿಇ ಫೋನ್ ಗಳನ್ನು ಹೆಚ್ಚಾಗಿ ಖರೀದಿಸುತ್ತಿದ್ದರು. ಪರಿಣಾಮ ಚೀನಾ ಕಂಪೆನಿಗಳ ಮಾರುಕಟ್ಟೆ ಪಾಲು ಭಾರತದಲ್ಲಿ ಹೆಚ್ಚಾಗಿತ್ತು. ಈಗ 1500 ರೂ. ಬೆಲೆಯಲ್ಲಿ ಫೋನ್ ಬಿಡುಗಡೆ ಮಾಡಿದ್ದು ಎಲ್‍ಟಿಇ ಫೋನ್ ತಯಾರಿಸುತ್ತಿದ್ದ ಚೀನಾ ಕಂಪೆನಿಗಳಿಗೂ ಜಿಯೋದಿಂದಾಗಿ ಪೆಟ್ಟು ಬೀಳುವ ಸಾಧ್ಯತೆಯಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

    ಡಿಟಿಎಚ್, ಕೇಬಲ್ ಟಿವಿ:
    ಇಲ್ಲಿಯವರೆಗೆ ಜನ ಟಿವಿ ವೀಕ್ಷಿಸಲು ಡಿಟಿಎಚ್, ಕೇಬಲ್ ಗಳನ್ನು ಅವಲಂಭಿಸಿದ್ದರು. ಆದರೆ ಜಿಯೋ ಈಗಾಲೇ ಟಿವಿ ಆಪ್ ಬಿಡುಗಡೆ ಮಾಡಿದ್ದು, ಇದರಲ್ಲಿ ಕನ್ನಡ ಸೇರಿದಂತೆ ದೇಶದ 10 ಭಾಷೆಯಲ್ಲಿರುವ ವಾಹಿನಿಗಳು, ಕ್ರೀಡಾ ವಾಹಿನಿಗಳು ಲಭ್ಯವಿದೆ. ಈ ಆಪ್‍ನಲ್ಲಿ ಯಾವ ಸಮಯದಲ್ಲಿ ಯಾವ ಕಾರ್ಯಕ್ರಮ ಪ್ರಸಾರವಾಗಿದೆಯೋ ಆ ಕಾರ್ಯಕ್ರಮವನ್ನು ಮತ್ತೆ ವೀಕ್ಷಿಸಲು ಸಾಧ್ಯವಿದೆ.

    ಈಗ ಹೊಸದಾಗಿ ಮೊಬೈಲ್ ನಿಂದ ಟಿವಿ ವೀಕ್ಷಿಸಲು ‘ಜಿಯೋ ಫೋನ್ ಟಿವಿ ಕೇಬಲ್’ ತಂದಿದ್ದು, ಇದು ಕೇವಲ ಸ್ಮಾರ್ಟ್ ಟಿವಿ ಮಾತ್ರ ಅಲ್ಲ ಈಗ ಇರುವ ಟಿವಿಗಳಿಗೆ ಕನೆಕ್ಟ್ ಮಾಡಬಹುದಾಗಿದೆ. ಅಷ್ಟೇ ಅಲ್ಲದೇ 309 ರೂ. ಜಿಯೋ ಧನ್ ಧನಾ ಧನ್ ಆಫರ್ ಹಾಕಿದ್ರೆ ಪ್ರತಿ ದಿನ 3-4 ಗಂಟೆ ವಿಡಿಯೋಗಳನ್ನು ಸಹ ವೀಕ್ಷಿಸಬಹುದಾಗಿದೆ. ಇದರಿಂದಾಗಿ ಮುಂದಿನ ದಿನಗಳಲ್ಲಿ ಡಿಟಿಎಚ್, ಕೇಬಲ್ ಟಿವಿ ಉದ್ಯಮಕ್ಕೆ ಹೊಡೆತ ಬೀಳಬಹುದು ಎನ್ನುವ ವಿಶ್ಲೇಷಣೆ ಆರಂಭವಾಗಿದೆ.

    ಟೆಲಿಕಾಂ ಕ್ಷೇತ್ರ:
    ಜಿಯೋ ಸೆಪ್ಟೆಂಬರ್ ತಿಂಗಳಿನಲ್ಲಿ ಬಿಡುಗಡೆಯಾದ ಬಳಿಕ ಭಾರತ ಟೆಲಿಕಾಂ ರಂಗದಲ್ಲಿ ಹೊಸ ಕ್ರಾಂತಿ ಆರಂಭವಾಗಿತ್ತು. ಅಲ್ಲಿಯವರೆಗೆ 1 ಜಿಬಿ ಡೇಟಾಗೆ 250 ರೂ. ದರ ನಿಗದಿ ಮಾಡಿದ್ದ ಕಂಪೆನಿಗಳು ಜಿಯೋದಿಂದಾಗಿ ಅವುಗಳು ಹೊಸ ಹೊಸ ಆಫರ್ ಬಿಡುಗಡೆ ಮಾಡುವ ಮೂಲಕ ಡೇಟಾ ಸಮರ ಆರಂಭಗೊಂಡಿತ್ತು. ಈ ನಡುವೆ ಗ್ರಾಹಕರ ಸಂಖ್ಯೆಯನ್ನು ಹೆಚ್ಚಿಸುವ ಸಲುವಾಗಿ ಟೆಲಿಕಾಂ ಕಂಪೆನಿಗಳ ವಿಲೀನ ಪ್ರಕ್ರಿಯೆ ಸಹ ನಡೆದಿತ್ತು. ಆರಂಭದಲ್ಲಿ ಜಿಯೋದ 4ಜಿ ಇಂಟರ್ ನೆಟ್ ವೇಗ ಕಡಿಮೆ ಇದ್ದರೆ ನಂತರದ ದಿನಗಳಲ್ಲಿ ದೇಶದಲ್ಲಿ ವೇಗದ ಇಂಟರ್ ನೆಟ್ ಸೇವೆಯನ್ನು ಜಿಯೋ ನೀಡುತ್ತಾ ಬಂದಿದೆ.

    ಶುಕ್ರವಾರದ ವಾರ್ಷಿಕ ಸಭೆಯಲ್ಲಿ ಮುಕೇಶ್ ಅಂಬಾನಿ ತಮ್ಮ ಭಾಷಣದಲ್ಲಿ, ದೇಶದಲ್ಲಿ 50 ಕೋಟಿ ಜನರು ಡಿಜಿಟಲ್ ಜಗತ್ತಿಗೆ ಸೇರ್ಪಡೆಯಾಗಿಲ್ಲ. ಹೀಗಾಗಿ ಅವರನ್ನು ಈ ಜಗತ್ತಿಗೆ ಸೇರಿಸಲು ಈ ಎಲ್‍ಟಿಟಿ ಫೋನ್ ಬಿಡುಗಡೆ ಮಾಡಿದ್ದೇವೆ ಎಂದು ಹೇಳಿದ್ದಾರೆ. ಹೀಗಾಗಿ ಕಡಿಮೆ ಬೆಲೆ ಜೊತೆಗೆ ಕರೆ, ಸಂದೇಶಗಳು ಉಚಿತವಾಗಿ ಸಿಗುವ ಕಾರಣ ಜಿಯೋಗೆ ಮತ್ತಷ್ಟು ಗ್ರಾಹಕರು ಹೊಸದಾಗಿ ಸೇರ್ಪಡೆಯಾಗುವುದರಲ್ಲಿ ಯಾವುದೇ ಸಂದೇಹವಿಲ್ಲ.

    ಜಿಯೋ ಎಫೆಕ್ಟ್: 7 ವರ್ಷದಲ್ಲಿ ಮೊದಲ ಬಾರಿಗೆ ಟೆಲಿಕಾಂ ಕಂಪೆನಿಗಳ ಆದಾಯ ಭಾರೀ ಇಳಿಕೆ

    ಕಡಿಮೆ ಬೆಲೆಯಲ್ಲಿ ಯಾಕೆ?
    ಜಿಯೋ ಈಗ ಹೊಸ ಗ್ರಾಹಕರನ್ನು ಸೆಳೆಯುಲು ಮಂದಾಗುತ್ತಿದೆ. ಸೆಪ್ಟೆಂಬರ್ ನಲ್ಲಿ ಆರಂಭವಾದ ಬಳಿಕ ನಂತರದ ತಿಂಗಳಿನಲ್ಲಿ ಭಾರೀ ಸಂಖ್ಯೆಯಲ್ಲಿ ಗ್ರಾಹಕರು ಜಿಯೋಗೆ ಸೇರ್ಪಡೆಯಾಗಿದ್ದರು. ಆದರೆ ಮಾರ್ಚ್ ತಿಂಗಳಿನಲ್ಲಿ ಕಡಿಮೆ ಸಂಖ್ಯೆಯಲ್ಲಿ ಗ್ರಾಹಕರು ಸೇರ್ಪಡೆಯಾಗಿದ್ದರು. ಈ ಹಿನ್ನೆಲೆಯಲ್ಲಿ ಜಿಯೋ ಈಗ 2ಜಿ ಸೇವೆಯನ್ನು ಬಳಸುತ್ತಿರುವ ಗ್ರಾಹಕರ ಆಕರ್ಷಿಸಲು ಫೀಚರ್ ಫೋನ್ ತಯಾರಿಸಿದೆ. ಅಷ್ಟೇ ಅಲ್ಲದೇ ಪ್ರಸ್ತುತ ಮಾರುಕಟ್ಟೆಯಲ್ಲಿ 4ಜಿ ಎಲ್‍ಟಿಇ ಬೆಂಬಲಿಸುವ ಫೋನ್ ಗಳಿದ್ದರೂ ಇವುಗಳ ಬೆಲೆ ಜಾಸ್ತಿ ಇರುವ ಕಾರಣ ಜಿಯೋ ಈಗ ಫೋನ್ ತಯಾರಿಸಿದೆ.

    ಜಿಯೋ 999 ರೂ.ನಿಂದ ಆರಂಭವಾಗಿ 1500 ರೂ ಒಳಗಡೆ ಕೀ ಪ್ಯಾಡ್ ಹೊಂದಿರುವ ಎಲ್‍ಟಿಇ ತಂತ್ರಜ್ಞಾನಕ್ಕೆ ಸಪೋರ್ಟ್ ಮಾಡುವ ಫೀಚರ್ ಫೋನ್‍ಗಳನ್ನು ಬಿಡುಗಡೆ ಮಾಡಲಿದೆ ಎನ್ನುವ ವರದಿ ಈ ಹಿಂದೆ ಮಾಧ್ಯಮಗಳಲ್ಲಿ ಪ್ರಕಟಗೊಂಡಿತ್ತು. ಪ್ರಸ್ತುತ ಜಿಯೋ ಎಲ್‍ವೈಎಫ್ ಹೆಸರಿನಲ್ಲಿ ಆಂಡ್ರಯ್ಡ್ ಫೋನ್‍ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿತ್ತು.

    ಏನಿದು ವಾಯ್ಸ್ ಓವರ್ ಎಲ್‍ಟಿಇ? ಉಚಿತ ಕರೆ ಯಾಕೆ?
    ಇಲ್ಲಿಯವರೆಗೆ ಟೆಲಿಕಾಂ ಕಂಪೆನಿಗಳು ಕರೆ ಮತ್ತು ಡೇಟಾ ಸೇವೆಗಳನ್ನು ಪ್ರತ್ಯೇಕವಾಗಿ ನಿಭಾಯಿಸುತಿತ್ತು. ಆದರೆ ಜಿಯೋ ಈ ಎರಡನ್ನೂ ಒಟ್ಟಿಗೆ ನಿಭಾಯಿಸುತ್ತದೆ. ಇದರಿಂದಾಗಿ ಖರ್ಚು ಕಡಿಮೆ ಆಗುತ್ತದೆ. ಡೇಟಾವನ್ನು ಬಳಸಿಕೊಂಡು ಕರೆ ಮಾಡುವ ತಂತ್ರಜ್ಞಾನವೇ ವಾಯ್ಸ್ ಓವರ್ ಲಾಂಗ್ ಟರ್ಮ್ ಎವಲ್ಯೂಶನ್(ಎಲ್‍ಟಿಇ). ಇದರಲ್ಲಿ ಕರೆಗೆ ಬೇರೆ, ಡೇಟಾಗೆ ಬೇರೆ ಎಂದು ಹಣ ನೀಡಬೇಕಿಲ್ಲ. ಡೇಟಾಗೆ ನೀಡಿದ ಹಣದಲ್ಲೇ ಕರೆಯನ್ನೂ ಉಚಿತವಾಗಿ ಮಾಡಬಹುದು. ವೇಗದ ಇಂಟರ್ನೆಟ್ ಇದ್ದರೆ ಮಾತ್ರ ಈ ಸೇವೆಯನ್ನು ಗ್ರಾಹಕರು ಯಶಸ್ವಿಯಾಗಿ ಬಳಸಿಕೊಳ್ಳಬಹುದು. ಹಲವು ಫೋನ್ ಗಳು ಎಲ್‍ಟಿಇ ಬೆಂಬಲಿಸದ ಕಾರಣ ಜಿಯೋ ಸಿಮ್ ಹಾಕಲು ಸಾಧ್ಯವಾಗುತ್ತಿರಲಿಲ್ಲ. ಏರ್ಟೆಲ್ ಮತ್ತು ವೊಡಾಫೋನ್‍ಗಳು ಪ್ರಯೋಗಿಕ ಪರೀಕ್ಷೆ ನಡೆಸುತ್ತಿದ್ದು ಕೆಲ ತಿಂಗಳಿನಲ್ಲಿ ಈ ವೋಲ್ಟ್ ಸೇವೆ ಗ್ರಾಹಕರಿಗೆ ಲಭ್ಯವಾಗಲಿದೆ. ಜಿಯೋ ಸೇವೆ ಆರಂಭವಾದ ಬಳಿಕ ಭಾರತದಲ್ಲಿ ಬಿಡುಗಡೆಯಾಗುತ್ತಿರುವ ಬಹುತೇಕ ಕಂಪೆನಿಗಳ ಫೋನ್ ಗಳು ಎಲ್‍ಟಿಇ ಟೆಕ್ನಾಲಜಿಯನ್ನು ಬೆಂಬಲಿಸುತ್ತಿದೆ.

     

  • ಡೇಟಾ ಆಯ್ತು ಈಗ ಉಚಿತ ಜಿಯೋ ಫೋನ್: 153 ರೂಪಾಯಿಗೆ ಅನ್‍ಲಿಮಿಟೆಡ್ ಡೇಟಾ

    ಡೇಟಾ ಆಯ್ತು ಈಗ ಉಚಿತ ಜಿಯೋ ಫೋನ್: 153 ರೂಪಾಯಿಗೆ ಅನ್‍ಲಿಮಿಟೆಡ್ ಡೇಟಾ

    ಮುಂಬೈ: ಜಿಯೋದ ಕಡಿಮೆ ಬೆಲೆಯ 4ಜಿ ಫೀಚರ್ ಫೋನ್ ಬಿಡುಗಡೆಯಾಗಿದೆ. ರಿಲಯನ್ಸ್ ಇಂಡಸ್ಟ್ರೀಸ್ 40ನೇ ವಾರ್ಷಿಕ ಸಭೆಯಲ್ಲಿ ಈ ಫೋನ್ ಬಿಡುಗಡೆಯಾಗಿದೆ.

    ಈ ಫೋನಿಗೆ 1500 ರೂ. ನಿಗದಿ ಮಾಡಲಾಗಿದೆ. ಆದರೆ ಮೂರು ವರ್ಷದ ಬಳಿಕ ಈ ಫೋನ್ ನೀಡಿದ ಹಣವನ್ನು ಮರುಪಾವತಿ ಮಾಡಲಾಗುವುದು ಎಂದು ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ ತಿಳಿಸಿದ್ದಾರೆ.

    ಈ ಫೋನನ್ನು ಮುಕೇಶ್ ಅಂಬಾನಿ ‘ಭಾರತದ ಇಂಟಲಿಜೆಂಟ್ ಸ್ಮಾರ್ಟ್ ಫೋನ್’ ಎಂದು ಬಣ್ಣಿಸಿದ್ದಾರೆ. ಈ ಫೋನ್ ಬೀಟಾ ಟೆಸ್ಟಿಂಗ್ ಆಗಸ್ಟ್ 15 ರಿಂದ ಆರಂಭವಾಗಲಿದ್ದು, ಆಗಸ್ಟ್ 24ರಿಂದ ಮುಂಗಡ ಬುಕ್ಕಿಂಗ್ ಆರಂಭವಾಗಲಿದೆ. ಈ ವರ್ಷದ ಸೆಪ್ಟೆಂಬರ್ ನಲ್ಲಿ ಈ ಫೋನ್ ಗ್ರಾಹಕರ ಕೈಗೆ ಸಿಗಲಿದೆ.

    ಈ ಫೋನಿನಲ್ಲಿ ಜಿಯೋ ಸಿನಿಮಾ, ಸಿನಿಮಾ ಮ್ಯೂಸಿಕ್ ಸೇರಿದಂತೆ ಜಿಯೋ ಆಪ್ಲಿಕೇಶನ್ ಪ್ರಿ ಲೋಡೆಡ್ ಆಗಿ ಇರಲಿದೆ.

    ಗುಣವೈಶಿಷ್ಟ್ಯ ಏನು?
    ಆಲ್ಫಾ ನ್ಯುಮರಿಕ್ ಕೀಪ್ಯಾಡ್, 2.4 ಇಂಚಿನ ಕ್ಯೂವಿಜಿಎ ಡಿಸ್ಪ್ಲೇ 240*320 ಪಿಕ್ಸೆಲ್, ಎಫ್ ಎಂ ರೇಡಿಯೋ, ಟಾರ್ಚ್ ಲೈಟ್, ಹೆಡ್ ಫೋನ್ ಜ್ಯಾಕ್, ಎಸ್‍ಡಿ ಕಾರ್ಡ್ ಸ್ಲಾಟ್, ಫೋನ್ ಕಾಂಟಾಕ್ಟ್, ಕಾಲ್ ಹಿಸ್ಟರಿ

    ಈ ಫೀಚರ್ ಫೋನ್ ಖರೀದಿಸಿದ ಗ್ರಾಹಕರಿಗೆ ತಿಂಗಳಿಗೆ 153 ರೂ. ರಿಚಾರ್ಚ್ ಆಫರ್ ಅನ್ನು ಜಿಯೋ ಬಿಡುಗಡೆ ಮಾಡಿದೆ. ಈ ಆಫರ್ ನಲ್ಲಿ ಗ್ರಾಹಕರಿಗೆ ಆನ್ ಲಿಮಿಟೆಡ್ ಡೇಟಾ ಪ್ಯಾಕ್ ಸಿಗಲಿದೆ. ಅಷ್ಟೇ ಅಲ್ಲದೇ ಎಂದಿನಂತೆ ಹೊರ ಹೋಗುವ ಕರೆಗಳು ಮತ್ತು ಮೆಸೇಜ್ ಗಳು ಉಚಿತವಾಗಿ ಸಿಗಲಿದೆ.

    ಕಡಿಮೆ ಬೆಲೆಯಲ್ಲಿ ಯಾಕೆ?
    ಜಿಯೋ ಈಗ ಹೊಸ ಗ್ರಾಹಕರನ್ನು ಸೆಳೆಯುಲು ಮಂದಾಗುತ್ತಿದೆ. ಸೆಪ್ಟೆಂಬರ್ ನಲ್ಲಿ ಆರಂಭವಾದ ಬಳಿಕ ನಂತರದ ತಿಂಗಳಿನಲ್ಲಿ ಭಾರೀ ಸಂಖ್ಯೆಯಲ್ಲಿ ಗ್ರಾಹಕರು ಜಿಯೋಗೆ ಸೇರ್ಪಡೆಯಾಗಿದ್ದರು. ಆದರೆ ಮಾರ್ಚ್ ತಿಂಗಳಿನಲ್ಲಿ ಕಡಿಮೆ ಸಂಖ್ಯೆಯಲ್ಲಿ ಗ್ರಾಹಕರು ಸೇರ್ಪಡೆಯಾಗಿದ್ದರು. ಈ ಹಿನ್ನೆಲೆಯಲ್ಲಿ ಜಿಯೋ ಈಗ 2ಜಿ ಸೇವೆಯನ್ನು ಬಳಸುತ್ತಿರುವ ಗ್ರಾಹಕರ ಆಕರ್ಷಿಸಲು ಫೀಚರ್ ಫೋನ್ ತಯಾರಿಸಿದೆ. ಅಷ್ಟೇ ಅಲ್ಲದೇ ಪ್ರಸ್ತುತ ಮಾರುಕಟ್ಟೆಯಲ್ಲಿ 4ಜಿ ಎಲ್‍ಟಿಇ ಬೆಂಬಲಿಸುವ ಫೋನ್ ಗಳಿದ್ದರೂ ಇವುಗಳ ಬೆಲೆ ಜಾಸ್ತಿ ಇರುವ ಕಾರಣ ಜಿಯೋ ಈಗ ಫೋನ್ ತಯಾರಿಸಿದೆ.

    ಜಿಯೋ 999 ರೂ.ನಿಂದ ಆರಂಭವಾಗಿ 1500 ರೂ ಒಳಗಡೆ ಕೀ ಪ್ಯಾಡ್ ಹೊಂದಿರುವ ಎಲ್‍ಟಿಇ ತಂತ್ರಜ್ಞಾನಕ್ಕೆ ಸಪೋರ್ಟ್ ಮಾಡುವ ಫೀಚರ್ ಫೋನ್‍ಗಳನ್ನು ಬಿಡುಗಡೆ ಮಾಡಲಿದೆ ಎನ್ನುವ ವರದಿ ಈ ಹಿಂದೆ ಮಾಧ್ಯಮಗಳಲ್ಲಿ ಪ್ರಕಟಗೊಂಡಿತ್ತು. ಪ್ರಸ್ತುತ ಜಿಯೋ ಎಲ್‍ವೈಎಫ್ ಹೆಸರಿನಲ್ಲಿ ಆಂಡ್ರಯ್ಡ್ ಫೋನ್‍ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿತ್ತು.

    ಏನಿದು ವಾಯ್ಸ್ ಓವರ್ ಎಲ್‍ಟಿಇ? ಉಚಿತ ಕರೆ ಯಾಕೆ?
    ಇಲ್ಲಿಯವರೆಗೆ ಟೆಲಿಕಾಂ ಕಂಪೆನಿಗಳು ಕರೆ ಮತ್ತು ಡೇಟಾ ಸೇವೆಗಳನ್ನು ಪ್ರತ್ಯೇಕವಾಗಿ ನಿಭಾಯಿಸುತಿತ್ತು. ಆದರೆ ಜಿಯೋ ಈ ಎರಡನ್ನೂ ಒಟ್ಟಿಗೆ ನಿಭಾಯಿಸುತ್ತದೆ. ಇದರಿಂದಾಗಿ ಖರ್ಚು ಕಡಿಮೆ ಆಗುತ್ತದೆ. ಡೇಟಾವನ್ನು ಬಳಸಿಕೊಂಡು ಕರೆ ಮಾಡುವ ತಂತ್ರಜ್ಞಾನವೇ ವಾಯ್ಸ್ ಓವರ್ ಲಾಂಗ್ ಟರ್ಮ್ ಎವಲ್ಯೂಶನ್(ಎಲ್‍ಟಿಇ). ಇದರಲ್ಲಿ ಕರೆಗೆ ಬೇರೆ, ಡೇಟಾಗೆ ಬೇರೆ ಎಂದು ಹಣ ನೀಡಬೇಕಿಲ್ಲ. ಡೇಟಾಗೆ ನೀಡಿದ ಹಣದಲ್ಲೇ ಕರೆಯನ್ನೂ ಉಚಿತವಾಗಿ ಮಾಡಬಹುದು. ವೇಗದ ಇಂಟರ್ನೆಟ್ ಇದ್ದರೆ ಮಾತ್ರ ಈ ಸೇವೆಯನ್ನು ಗ್ರಾಹಕರು ಯಶಸ್ವಿಯಾಗಿ ಬಳಸಿಕೊಳ್ಳಬಹುದು. ಹಲವು ಫೋನ್ ಗಳು ಎಲ್‍ಟಿಇ ಬೆಂಬಲಿಸದ ಕಾರಣ ಜಿಯೋ ಸಿಮ್ ಹಾಕಲು ಸಾಧ್ಯವಾಗುತ್ತಿರಲಿಲ್ಲ. ಏರ್ಟೆಲ್ ಮತ್ತು ವೊಡಾಫೋನ್‍ಗಳು ಪ್ರಯೋಗಿಕ ಪರೀಕ್ಷೆ ನಡೆಸುತ್ತಿದ್ದು ಕೆಲ ತಿಂಗಳಿನಲ್ಲಿ ಈ ವೋಲ್ಟ್ ಸೇವೆ ಗ್ರಾಹಕರಿಗೆ ಲಭ್ಯವಾಗಲಿದೆ. ಜಿಯೋ ಸೇವೆ ಆರಂಭವಾದ ಬಳಿಕ ಭಾರತದಲ್ಲಿ ಬಿಡುಗಡೆಯಾಗುತ್ತಿರುವ ಬಹುತೇಕ ಕಂಪೆನಿಗಳ ಫೋನ್ ಗಳು ಎಲ್‍ಟಿಇ ಟೆಕ್ನಾಲಜಿಯನ್ನು ಬೆಂಬಲಿಸುತ್ತಿದೆ.

     

     

     

     

  • 84 ದಿನಗಳ ಕಾಲ 84 ಜಿಬಿ ಡೇಟಾ: ಜಿಯೋದ ಹೊಸ ಆಫರ್‍ಗಳ ಸಂಪೂರ್ಣ ಮಾಹಿತಿ ಇಲ್ಲಿದೆ

    84 ದಿನಗಳ ಕಾಲ 84 ಜಿಬಿ ಡೇಟಾ: ಜಿಯೋದ ಹೊಸ ಆಫರ್‍ಗಳ ಸಂಪೂರ್ಣ ಮಾಹಿತಿ ಇಲ್ಲಿದೆ

    ಮುಂಬೈ: ಮೂರು ತಿಂಗಳ ಧನ್ ಧನಾ ಧನ್ ಆಫರ್ ಅವಧಿ ಮುಗಿಯುತ್ತಿದ್ದಂತೆ ತನ್ನ ಪ್ರಿಪೇಯ್ಡ್ ಪ್ರೈಮ್ ಗ್ರಾಹಕರಿಗೆ 399 ರೂ. ಹೊಸ ಆಫರನ್ನು ಜಿಯೋ ಬಿಡುಗಡೆ ಮಾಡಿದೆ.

    399 ರೂ. ಆಫರ್ ವ್ಯಾಲಿಡಿಟಿ ಅವಧಿ 84 ದಿನಗಳು ಆಗಿದ್ದು, ಗ್ರಾಹಕರು ಪ್ರತಿದಿನ ಗರಿಷ್ಟ 1 ಜಿಬಿ ಡೇಟಾವನ್ನು ಪಡೆಯಬಹುದಾಗಿದೆ. ಗರಿಷ್ಟ 1 ಜಿಬಿ ಡೇಟಾ ಮುಗಿದ ಬಳಿಕ ಇಂಟರ್‍ನೆಟ್ ವೇಗ 128 ಕೆಬಿಪಿಎಸ್ ವೇಗ(ಕಿಲೋ ಬೈಟ್ಸ್ ಪರ್ ಸೆಕೆಂಡಿಗೆ) ಇಳಿಯಲಿದೆ.

    ಎಷ್ಟು ರೂ.ಗೆ ಎಷ್ಟು ಡೇಟಾ?
    149 ರೂ. ರಿಚಾರ್ಜ್ ಮಾಡಿದ್ರೆ 2 ಜಿಬಿ ಡೇಟಾ ಸಿಗುತ್ತದೆ. ಈ ಆಫರ್ ವ್ಯಾಲಿಡಿಟಿ 28 ದಿನಗಳು ಮಾತ್ರ. 309 ರೂ. ರಿಚಾರ್ಜ್ ಮಾಡಿದ್ರೆ ಪ್ರತಿ ದಿನ 1 ಜಿಬಿ ಡೇಟಾ ಬಳಕೆ ಮಾಡಬಹುದು. 56 ದಿನಗಳ ಕಾಲ ಈ ಆಫರ್ ವ್ಯಾಲಿಡಿಟಿ ಹೊಂದಿದೆ.

    56 ದಿನಗಳ ವ್ಯಾಲಿಡಿಟಿ ಹೊಂದಿರುವ 349 ರೂ. ರಿಚಾರ್ಜ್ ಮಾಡಿದ್ರೆ 20 ಜಿಬಿ ಡೇಟಾ ಸಿಗುತ್ತದೆ. ಈ ಆಫರ್ ವಿಶೇಷ ಏನೆಂದರೆ ದಿನದಲ್ಲಿ ಗರಿಷ್ಟ ಇಂತಿಷ್ಟೇ ಡೇಟಾ ಖರ್ಚು ಮಾಡಬೇಕು ಎನ್ನುವ ಷರತ್ತು ಇಲ್ಲ.

    56 ದಿನಗಳ ವ್ಯಾಲಿಡಿಟಿ ಹೊಂದಿರುವ 509 ರೂ. ರಿಚಾರ್ಜ್ ಮಾಡಿದ್ರೆ ಪ್ರತಿ ದಿನ ಗರಿಷ್ಟ 2ಜಿಬಿ ಡೇಟಾವನ್ನು ಬಳಕೆ ಮಾಡಬಹುದಾಗಿದೆ. 9999 ರೂ. ರಿಚಾರ್ಜ್ ಮಾಡಿದ್ರೆ 390 ದಿನಗಳ ಕಾಲ 780 ಜಿಬಿ ಡೇಟಾವನ್ನು ಬಳಸಬಹುದು. ಈ ಆಫರ್ ನಲ್ಲಿ ದಿನದಲ್ಲಿ ಗರಿಷ್ಟ ಇಂತಿಷ್ಟೇ ಡೇಟಾ ಖರ್ಚು ಮಾಡಬೇಕು ಎನ್ನುವ ಷರತ್ತು ಇಲ್ಲ.

    ಈ ಮೇಲೆ ತಿಳಿಸಿದ ಎಲ್ಲ ಆಫರ್ ಗಳಲ್ಲಿ ಕರೆಗಳಿಗೆ ಮತ್ತು ಮೆಸೇಜ್ ಗಳಿಗೆ ಯಾವುದೇ ಶುಲ್ಕ ವಿಧಿಸುವುದಿಲ್ಲ ಎಂದು ಜಿಯೋ ತಿಳಿಸಿದೆ.

    ಈ ಹಿಂದೆ ಸಮ್ಮರ್ ಸರ್ಪ್ರೈಸ್ ಆಫರನ್ನು ಹಿಂದಕ್ಕೆ ಪಡೆದಿದ್ದ ಜಿಯೋ ಏಪ್ರಿಲ್ ನಲ್ಲಿ ಧನ್ ಧನಾ ಧನ್ ಹೆಸರಿನಲ್ಲಿ ಪ್ರೈಮ್ ಗ್ರಾಹಕರಿಗೆ 3 ತಿಂಗಳು ವ್ಯಾಲಿಟಿಡಿ ಹೊಂದಿರುವ 309 ರೂ. ಮತ್ತು 509 ರೂ. ಎರಡು ಹೊಸ ಆಫರ್ ರಿಲೀಸ್ ಮಾಡಿತ್ತು. ಈ ಆಫರ್ ಜುಲೈಗೆ ಮುಕ್ತಾಯವಾಗುವ ಹಿನ್ನೆಲೆಯಲ್ಲಿ ಜಿಯೋ ಈಗ ಹೊಸ ಆಫರ್ ರಿಲೀಸ್ ಮಾಡಿದೆ.

    ಜಿಯೋ ಪ್ರೈಮ್ ಸದಸ್ಯರಾಗಬೇಕಿದ್ದಲ್ಲಿ 99 ರೂ. ನೀಡಿ ರಿಚಾರ್ಜ್ ಮಾಡಬೇಕು. 99 ರೂ. ರಿಚಾರ್ಜ್ ಮಾಡಿದ್ರೆ ಸದಸ್ಯರಾಗಬಹುದೇ ವಿನಾಃ ಇದರಲ್ಲಿ ಯಾವುದೇ ಆಫರ್ ಸಿಗಲ್ಲ.

    ಇದನ್ನೂ ಓದಿ: ಜಿಯೋದಿಂದ ಕಡಿಮೆ ಬೆಲೆಯಲ್ಲಿ ಎಲ್‍ಟಿಇ ಫೀಚರ್ ಫೋನ್: ಬೆಲೆ ಎಷ್ಟು ಗೊತ್ತೆ?

  • ಜಿಯೋ ಗ್ರಾಹಕರ ಮಾಹಿತಿ ಸೋರಿಕೆ ಆಗಿದ್ಯಾ? ನಿಮ್ಮ ಅನುಮಾನಗಳಿಗೆ ಇಲ್ಲಿದೆ ಉತ್ತರ

    ಜಿಯೋ ಗ್ರಾಹಕರ ಮಾಹಿತಿ ಸೋರಿಕೆ ಆಗಿದ್ಯಾ? ನಿಮ್ಮ ಅನುಮಾನಗಳಿಗೆ ಇಲ್ಲಿದೆ ಉತ್ತರ

    ನವದೆಹಲಿ: ರಿಲಯನ್ಸ್ ಜಿಯೋ ಗ್ರಾಹಕರ ಡೇಟಾ ಲೀಕ್ ಆಗಿದೆ ಎನ್ನುವ ಸುದ್ದಿ ಮಾಧ್ಯಮಗಳಲ್ಲಿ ಪ್ರಕಟವಾಗಿದೆ.

    magicapk.com ತಾಣ ಜಿಯೋ ಬಳಕೆದಾರರ ಮಾಹಿತಿಯನ್ನು ಪ್ರಕಟಿಸಿದೆ. ಆದರೆ ಜಿಯೋ ಈ ಸುದ್ದಿಯನ್ನು ತಿರಸ್ಕರಿಸಿದ್ದು, ಬಳಕೆದಾರರ ಮಾಹಿತಿ ಸೋರಿಕೆಯಾಗಿಲ್ಲ ಎಂದು ಸ್ಪಷ್ಟ ಪಡಿಸಿದೆ.

    ಆಗಿದ್ದು ಏನು?
    ಭಾನುವಾರ ಸಂಜೆ ಕೆಲ ಜಿಯೋ ಬಳಕೆದಾರರು ನಮ್ಮ ಮಾಹಿತಿ ಸೋರಿಕೆಯಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳನ್ನು ಪ್ರಕಟಿಸಿದ್ದರು. ಈ ಪೋಸ್ಟ್, ಟ್ವೀಟ್ ಗಳು ಸಂಚಲನ ಮೂಡಿಸಿದ ಬಳಿಕ ಸುದ್ದಿ ಮಾಧ್ಯಮಗಳಲ್ಲಿ ಪ್ರಕಟವಾಯಿತು.

    ಈ ವೆಬ್‍ಸೈಟ್ ನಲ್ಲಿರುವ ಮಾಹಿತಿಗಳು ನಿಜವಾಗಿಯೂ ಸೋರಿಕೆಯಾಗಿದ್ಯಾ ಎಂದು ಪರಿಶೀಲನೆ ನಡೆಸಿದ್ದು, ಈ ವೇಳೆ ನಮೂದಿಸಿದ ಮೊಬೈಲ್ ನಂಬರ್ ಮತ್ತು ಅದಕ್ಕೆ ಸಂಬಂಧಿಸಿದ ಗ್ರಾಹಕರ ಸಂಖ್ಯೆ ತಾಳೆ ಆಗುತ್ತಿರಲಿಲ್ಲ ಎಂದು ಮಾಧ್ಯಮವೊಂದು ವರದಿ ಮಾಡಿದೆ.

    ಹಾಗಾದ್ರೆ ಸೋರಿಕೆಯಾಗಿದ್ದು ಹೇಗೆ?
    ಥರ್ಡ್ ಪಾರ್ಟಿ ವೆಬ್‍ಸೈಟ್ ಮೂಲಕ ರಿಚಾರ್ಜ್ ಮಾಡಲು ಸಾಧ್ಯವಿದೆ. ಹೀಗಾಗಿ ಈ ವೆಬ್‍ಸೈಟ್ ಗಳಲ್ಲಿ ರಿಚಾರ್ಜ್ ಮಾಡಿದ ಗ್ರಾಹಕರ ಮೊಬೈಲ್ ಸಂಖ್ಯೆಗಳು ಲೀಕ್ ಆಗಿರಬಹುದು ಎಂದು ಕೆಲ ಮಾಧ್ಯಮಗಳು ವರದಿ ಪ್ರಕಟಿಸಿದೆ.

    ಸಸ್ಪೆಂಡ್ ಆಗಿದೆ ವೆಬ್‍ಸೈಟ್:
    ಜಿಯೋ ಗ್ರಾಹಕರ ಮಾಹಿತಿ ಸೋರಿಕೆ ಮಾಡಿದ್ದೇವೆ ಎಂದು ಪ್ರಕಟಿಸಿದ ಬಳಿಕ ಈಗ ಈ ವೆಬ್‍ಸೈಟ್ ಅಮಾನತು ಆಗಿದ್ದು, ಯಾವುದೇ ಪುಟ ಓಪನ್ ಆಗುತ್ತಿಲ್ಲ. ಐಪಿ ವಿಳಾಸ ಚೆಕ್ ಮಾಡಿದಾಗ ಮುಂಬೈ ಮೂಲದ ವೆಬ್‍ಸೈಟ್ ಇದಾಗಿದ್ದು, ಈ ವರ್ಷ ಮೇ ತಿಂಗಳಿನಲ್ಲಿ ಡೊಮೈನ್ ರಿಜಿಸ್ಟ್ರರ್ ಆಗಿದೆ. ವೆಬ್‍ಸೈಟ್ ಸಸ್ಪೆಂಡ್ ಆಗಿದ್ಯಾ ಅಥವಾ ಬಹಳಷ್ಟು ಜನ ಭೇಟಿ ನೀಡಿದ್ದರಿಂದ ಹೆವಿ ಟ್ರಾಫಿಕ್ ಆಗಿ ಪೇಜ್ ಓಪನ್ ಆಗುತ್ತಿಲ್ಲವೇ ಎನ್ನುವುದು ದೃಢಪಟ್ಟಿಲ್ಲ

    ಸೋರಿಕೆಯಾಗಿಲ್ಲ:
    ಗ್ರಾಹಕರ ಯಾವುದೇ ಮಾಹಿತಿ ಸೋರಿಕೆಯಾಗಿಲ್ಲ. ಗ್ರಾಹಕರ ಮಾಹಿತಿ ನಾವು ಸುರಕ್ಷಿತವಾಗಿ ಇಟ್ಟಕೊಂಡಿದ್ದೇವೆ. ಈಗಾಗಲೇ ನಾವು ಈ ಸಂಬಂಧ ವೆಬ್‍ಸೈಟ್ ವಿರುದ್ಧ ಕಾನೂನು ಸಂಸ್ಥೆಗಳಿಗೆ ಮಾಹಿತಿ ನೀಡಿದ್ದೇವೆ ಎಂದು ಜಿಯೋದ ವಕ್ತಾರರು ತಿಳಿಸಿದ್ದಾರೆ.

  • ಜಿಯೋದಿಂದ ಕಡಿಮೆ ಬೆಲೆಯಲ್ಲಿ ಎಲ್‍ಟಿಇ ಫೀಚರ್ ಫೋನ್: ಬೆಲೆ ಎಷ್ಟು ಗೊತ್ತೆ?

    ಜಿಯೋದಿಂದ ಕಡಿಮೆ ಬೆಲೆಯಲ್ಲಿ ಎಲ್‍ಟಿಇ ಫೀಚರ್ ಫೋನ್: ಬೆಲೆ ಎಷ್ಟು ಗೊತ್ತೆ?

    ಮುಂಬೈ: ರಿಲಯನ್ಸ್ ಜಿಯೋ ಎಲ್‍ಟಿಇ ಟೆಕ್ನಾಲಜಿ ಸಪೋರ್ಟ್ ಮಾಡುವ ಫೀಚರ್ ಫೋನ್ ತಯಾರಿಸುತ್ತಿರುವ ವಿಚಾರ ನಿಮಗೆ ಗೊತ್ತೆ ಇದೆ. ಈಗ ಈ ಫೋನ್ ಶೀಘ್ರದಲ್ಲೇ ಬಿಡುಗಡೆಯಾಗುವ ಸಾಧ್ಯತೆಯಿದೆ.

    ಹೌದು. ಜಿಯೋ 500 ರೂ. ಬೆಲೆಯ ಫೀಚರ್ ಫೋನ್ ತಯಾರಿಸಿದೆ ಎಂದು ಮಾಧ್ಯಮವೊಂದು ಸುದ್ದಿಯನ್ನು ಪ್ರಕಟಿಸಿದೆ. ಜುಲೈ 21ರಂದು ರಿಲಯನ್ಸ್ ಇಂಡಸ್ಟ್ರೀನ್ ವಾರ್ಷಿಕ ಸಭೆಯ ವೇಳೆ ಈ ಫೋನ್ ಬಿಡುಗಡೆಯಾಗುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.

    ಜಿಯೋ ಫೀಚರ್ ಫೋನಿನ ಬೆಲೆ ಅಂದಾಜು 500 ರೂ. ಇರಲಿದೆ. 2ಜಿ ಫೋನ್ ಹೊಂದಿರುವ ಗ್ರಾಹಕರು ನೇರವಾಗಿ 4ಜಿ ಫೋನ್ ಗಳನ್ನು ಸುಲಭವಾಗಿ ಪಡೆಯಲು ಕಡಿಮೆ ಬೆಲೆಯಲ್ಲಿ ಈ ಫೋನ್ ಬಿಡುಗಡೆ ಮಾಡಲು ಜಿಯೋ ಮುಂದಾಗಿದೆ ಎಂದು ಟೆಲಿಕಾಂ ವಲಯದ ವಿಶ್ಲೇಷಕರೊಬ್ಬರು ತಿಳಿಸಿದ್ದಾರೆ.

    ಈ ವಿಚಾರದ ಬಗ್ಗೆ ಮಾಧ್ಯಮಗಳು ಜಿಯೋ ಕಂಪೆನಿಯನ್ನು ಸಂಪರ್ಕಿಸಿದ್ದು, ಯಾವುದೇ ಪ್ರತಿಕ್ರಿಯೆ ಬಂದಿಲ್ಲ.

    ಕಡಿಮೆ ಬೆಲೆಯಲ್ಲಿ ಯಾಕೆ?
    ಜಿಯೋ ಈಗ ಹೊಸ ಗ್ರಾಹಕರನ್ನು ಸೆಳೆಯುಲು ಮಂದಾಗುತ್ತಿದೆ. ಸೆಪ್ಟೆಂಬರ್ ನಲ್ಲಿ ಆರಂಭವಾದ ಬಳಿಕ ನಂತರದ ತಿಂಗಳಿನಲ್ಲಿ ಭಾರೀ ಸಂಖ್ಯೆಯಲ್ಲಿ ಗ್ರಾಹಕರು ಜಿಯೋಗೆ ಸೇರ್ಪಡೆಯಾಗಿದ್ದರು. ಆದರೆ ಮಾರ್ಚ್ ತಿಂಗಳಿನಲ್ಲಿ ಕಡಿಮೆ ಸಂಖ್ಯೆಯಲ್ಲಿ ಗ್ರಾಹಕರು ಸೇರ್ಪಡೆಯಾಗಿದ್ದರು. ಈ ಹಿನ್ನೆಲೆಯಲ್ಲಿ ಜಿಯೋ ಈಗ 2ಜಿ ಸೇವೆಯನ್ನು ಬಳಸುತ್ತಿರುವ ಗ್ರಾಹಕರ ಆಕರ್ಷಿಸಲು ಫೀಚರ್ ಫೋನ್ ತಯಾರಿಸಿದೆ. ಅಷ್ಟೇ ಅಲ್ಲದೇ ಪ್ರಸ್ತುತ ಮಾರುಕಟ್ಟೆಯಲ್ಲಿ 4ಜಿ ಎಲ್‍ಟಿಇ ಬೆಂಬಲಿಸುವ ಫೋನ್ ಗಳಿದ್ದರೂ ಇವುಗಳ ಬೆಲೆ ಜಾಸ್ತಿ ಇರುವ ಕಾರಣ ಜಿಯೋ ಈಗ ಫೋನ್ ತಯಾರಿಸಿ ಬಿಡುಗಡೆ ಮಾಡಲು ಮುಂದಾಗಿದೆ.

    ಜಿಯೋ 999 ರೂ.ನಿಂದ ಆರಂಭವಾಗಿ 1500 ರೂ ಒಳಗಡೆ ಕೀ ಪ್ಯಾಡ್ ಹೊಂದಿರುವ ಎಲ್‍ಟಿಇ ತಂತ್ರಜ್ಞಾನಕ್ಕೆ ಸಪೋರ್ಟ್ ಮಾಡುವ ಫೀಚರ್ ಫೋನ್‍ಗಳನ್ನು ಬಿಡುಗಡೆ ಮಾಡಲಿದೆ ಎನ್ನುವ ವರದಿ ಈ ಹಿಂದೆ ಮಾಧ್ಯಮಗಳಲ್ಲಿ ಪ್ರಕಟಗೊಂಡಿತ್ತು. ಪ್ರಸ್ತುತ ಜಿಯೋ ಎಲ್‍ವೈಎಫ್ ಹೆಸರಿನಲ್ಲಿ ಆಂಡ್ರಯ್ಡ್ ಫೋನ್‍ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದೆ.

    ಈ ವರ್ಷದ ಜನವರಿಯಲ್ಲಿ ಗೂಗಲ್ ಸಿಇಒ ಸುಂದರ್ ಪಿಚೈ ಭಾರತಕ್ಕೆ ಬಂದಿದ್ದಾಗ ಕಡಿಮೆ ಬೆಲೆಯಲ್ಲಿ ಆಂಡ್ರಾಯ್ಡ್ ಫೋನ್ ತಯಾರಿಸಲಾಗುವುದು ಎಂದು ತಿಳಿಸಿದ್ದರು. ಭಾರತಕ್ಕೆ 30 ಡಾಲರ್(2 ಸಾವಿರ ರೂ.) ಬೆಲೆಯ ಆಂಡ್ರಾಯ್ಡ್ ಫೋನ್ ಅಗತ್ಯವಿದೆ ಎಂದು ಹೇಳಿದ್ದರು. ಇದಕ್ಕೆ ಪೂರಕ ಎಂಬಂತೆ ಜಿಯೋ ಕಂಪೆನಿ ಮತ್ತು ಗೂಗಲ್ ಜೊತೆಗೂಡಿ ಆಂಡ್ರಾಯ್ಡ್ ಫೋನ್ ತಯಾರಿಸಲಿದೆ ಎಂದು ಟೆಕ್ ಮೂಲಗಳ ಮಾಹಿತಿಯನ್ನು ಆಧರಿಸಿ ಈ ಹಿಂದೆ ಮಾಧ್ಯಮವೊಂದು ವರದಿ ಮಾಡಿತ್ತು.

    ಏನಿದು ವಾಯ್ಸ್ ಓವರ್ ಎಲ್‍ಟಿಇ?
    ಇಲ್ಲಿಯವರೆಗೆ ಟೆಲಿಕಾಂ ಕಂಪೆನಿಗಳು ಕರೆ ಮತ್ತು ಡೇಟಾ ಸೇವೆಗಳನ್ನು ಪ್ರತ್ಯೇಕವಾಗಿ ನಿಭಾಯಿಸುತಿತ್ತು. ಆದರೆ ಜಿಯೋ ಈ ಎರಡನ್ನೂ ಒಟ್ಟಿಗೆ ನಿಭಾಯಿಸುತ್ತದೆ. ಇದರಿಂದಾಗಿ ಖರ್ಚು ಕಡಿಮೆ ಆಗುತ್ತದೆ. ಡೇಟಾವನ್ನು ಬಳಸಿಕೊಂಡು ಕರೆ ಮಾಡುವ ತಂತ್ರಜ್ಞಾನವೇ ವಾಯ್ಸ್ ಓವರ್ ಲಾಂಗ್ ಟರ್ಮ್ ಎವಲ್ಯೂಶನ್(ಎಲ್‍ಟಿಇ). ಇದರಲ್ಲಿ ಕರೆಗೆ ಬೇರೆ, ಡೇಟಾಗೆ ಬೇರೆ ಎಂದು ಹಣ ನೀಡಬೇಕಿಲ್ಲ. ಡೇಟಾಗೆ ನೀಡಿದ ಹಣದಲ್ಲೇ ಕರೆಯನ್ನೂ ಉಚಿತವಾಗಿ ಮಾಡಬಹುದು. ವೇಗದ ಇಂಟರ್‍ನೆಟ್ ಇದ್ದರೆ ಮಾತ್ರ ಈ ಸೇವೆಯನ್ನು ಗ್ರಾಹಕರು ಯಶಸ್ವಿಯಾಗಿ ಬಳಸಿಕೊಳ್ಳಬಹುದು.  ಹಲವು ಫೋನ್ ಗಳು ಎಲ್‍ಟಿಇ  ಬೆಂಬಲಿಸದ ಕಾರಣ ಜಿಯೋ ಸಿಮ್ ಹಾಕಲು ಸಾಧ್ಯವಾಗುತ್ತಿರಲಿಲ್ಲ.  ಏರ್‍ಟೆಲ್ ಮತ್ತು ವೊಡಾಫೋನ್‍ಗಳು ಪ್ರಯೋಗಿಕ ಪರೀಕ್ಷೆ ನಡೆಸುತ್ತಿದ್ದು ಕೆಲ ತಿಂಗಳಿನಲ್ಲಿ ಈ ವೋಲ್ಟ್ ಸೇವೆ ಗ್ರಾಹಕರಿಗೆ ಲಭ್ಯವಾಗಲಿದೆ. ಜಿಯೋ ಸೇವೆ ಆರಂಭವಾದ ಬಳಿಕ ಭಾರತದಲ್ಲಿ ಬಿಡುಗಡೆಯಾಗುತ್ತಿರುವ ಬಹುತೇಕ ಕಂಪೆನಿಗಳ ಫೋನ್ ಗಳು ಎಲ್‍ಟಿಇ  ಟೆಕ್ನಾಲಜಿಯನ್ನು ಬೆಂಬಲಿಸುತ್ತಿದೆ.

    ಇದನ್ನೂ ಓದಿ: ಗ್ರಾಹಕರಿಗೆ ಉಚಿತ ಡೇಟಾ ನೀಡಿದ್ದ ಜಿಯೋಗೆ ಆಗಿರುವ ನಷ್ಟ ಎಷ್ಟು ಗೊತ್ತೆ?

  • ಮೇ ತಿಂಗಳಿನಲ್ಲಿ ಜಿಯೋದ ಡೌನ್‍ಲೋಡ್ ಸ್ಪೀಡ್ ಎಷ್ಟು ಇತ್ತು ಗೊತ್ತಾ?

    ಮೇ ತಿಂಗಳಿನಲ್ಲಿ ಜಿಯೋದ ಡೌನ್‍ಲೋಡ್ ಸ್ಪೀಡ್ ಎಷ್ಟು ಇತ್ತು ಗೊತ್ತಾ?

    ನವದೆಹಲಿ: ಜಿಯೋ 4ಜಿ ಸೇವೆ ಆರಂಭವಾದ ಬಳಿಕ ಮೇ ತಿಂಗಳಿನಲ್ಲಿ ಡೌನ್‍ಲೋಡ್ ಸ್ಪೀಡ್ ಸಾರ್ವಕಾಲಿಕ ಏರಿಕೆ ಕಂಡಿದೆ ಎಂದು ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ(ಟ್ರಾಯ್) ತಿಳಿಸಿದೆ.

    ಮೇ ತಿಂಗಳಿನಲ್ಲಿ 19.123 ಎಂಬಿಪಿಎಸ್(ಮೆಗಾಬೈಟ್ಸ್ ಪರ್ ಸೆಕೆಂಡ್) ವೇಗದ ಡೌನ್‍ಲೋಡ್ ಸ್ಪೀಡ್ ದಾಖಲಾಗಿದೆ ಎಂದು ಟ್ರಾಯ್‍ನ ಮೈಸ್ಪೀಡ್ ಆಪ್ ತಿಳಿಸಿದೆ. 2016ರ ಡಿಸೆಂಬರ್ ನಲ್ಲಿ 18.146 ಎಂಬಿಪಿಎಸ್ ಡೌನ್‍ಲೋಡ್ ಸ್ಪೀಡ್ ದಾಖಲಾಗಿತ್ತು. ಡಿಸೆಂಬರ್ ಬಳಿಕ ನಂತರ ತಿಂಗಳಿನಲ್ಲಿ ಡೌನ್‍ಲೋಡ್ ಸ್ಪೀಡ್ ಕಡಿಮೆಯಾಗಿತ್ತು, ಈಗ ಏರಿಕೆ ಕಂಡಿದೆ.

    ಫೆಬ್ರವರಿಯಲ್ಲಿ 17.427 ಎಂಬಿಪಿಎಸ್, ಮಾರ್ಚ್ ನಲ್ಲಿ 16.487 ಎಂಬಿಪಿಎಸ್, ಏಪ್ರಿಲ್ ನಲ್ಲಿ 18.487 ಎಂಬಿಪಿಎಸ್ ಡೌನ್‍ಲೋಡ್ ಸ್ಪೀಡನ್ನು ಜಿಯೋ ದಾಖಲಿಸಿತ್ತು.

    ಯಾವುದು ಎಷ್ಟು?
    ಮೇ ತಿಂಗಳಿನಲ್ಲಿ ಜಿಯೋ 18.4 ಎಂಬಿಪಿಎಸ್, ಐಡಿಯಾ 11.8 ಎಂಬಿಪಿಎಸ್, ವೊಡಾಫೋನ್ 11.5 ಎಂಬಿಪಿಎಸ್, ಏರ್‍ಟೆಲ್ 9.9 ಎಂಬಿಪಿಎಸ್ ಸರಾಸರಿ ಡೌನ್‍ಲೋಡ್ ಸ್ಪೀಡ್ ದಾಖಲಿಸಿದೆ.

    ಅಪ್ಲೋಡ್ ಸ್ಪೀಡ್:
    ಐಡಿಯಾ 7.2 ಎಂಬಿಪಿಎಸ್,ವೊಡಾಫೋನ್ 6.8 ಎಂಬಿಪಿಎಸ್, ಏರ್‍ಟೆಲ್ 4.4 ಎಂಬಿಪಿಎಸ್, ಜಿಯೋ 4.3 ಎಂಬಿಪಿಎಸ್ ಸರಾಸರಿ ಅಪ್ಲೋಡ್ ಸ್ಪೀಡ್ ದಾಖಲಿಸಿದೆ ಎಂದು ಟ್ರಾಯ್ ಆಪ್ ತಿಳಿಸಿದೆ.

  • ದೀಪಾವಳಿಗೆ ಸಿಗಲಿದೆ ಜಿಯೋಫೈಬರ್ ಬ್ರಾಡ್‍ಬ್ಯಾಂಡ್ ಸರ್ವಿಸ್- ಗ್ರಾಹಕರಿಗಾಗಿ ಬಂಪರ್ ಆಫರ್!

    ದೀಪಾವಳಿಗೆ ಸಿಗಲಿದೆ ಜಿಯೋಫೈಬರ್ ಬ್ರಾಡ್‍ಬ್ಯಾಂಡ್ ಸರ್ವಿಸ್- ಗ್ರಾಹಕರಿಗಾಗಿ ಬಂಪರ್ ಆಫರ್!

    ನವದೆಹಲಿ: ರಿಲಯನ್ಸ್ ಜಿಯೋ ಅವರಿಂದ ಜಿಯೋ ಫೈಬರ್ ಬ್ರಾಡ್‍ಬ್ಯಾಂಡ್ ಸೇವೆ ದೀಪಾವಳಿಯಲ್ಲಿ ಸಿಗಲಿದೆ ಎಂದು ಹೇಳಲಾಗ್ತಿದೆ. ಇನ್ನು ಆರಂಭದಲ್ಲಿ ಜಿಯೋ ತನ್ನ ಬ್ರಾಡ್ ಬಾಂಡ್ ಗ್ರಾಹಕರಿಗಾಗಿ ಕೇವಲ 500 ರೂ.ಗೆ 100ಜಿಬಿ ಡೇಟಾ ನೀಡಲು ನಿರ್ಧರಿಸಿದೆ ಎಂದು ಪತ್ರಿಕೆಯೊಂದು ವರದಿ ಮಾಡಿದೆ.

    ಜಿಯೋ ಬ್ರಾಡ್‍ಬ್ಯಾಂಡ್ ಸೇವೆಯ ಪ್ರಿವ್ಯೂವ್ ಆಫರನ್ನು ಯಾವ ನಗರಗಳಲ್ಲಿ ನೀಡಲಾಗುತ್ತಿದೆ ಎಂಬುದರ ಬಗ್ಗೆ ಜಿಯೋದ ಅಧಿಕೃತ ಟ್ವಟರ್ ಖಾತೆಯಲ್ಲಿ ಮೇನಲ್ಲಿ ಟ್ವೀಟ್ ಮಾಡಲಾಗಿತ್ತು. ಆ ವೇಳೆ ಮುಂಬೈ, ದೆಹಲಿ ಎನ್‍ಸಿಆರ್, ಅಹಮದಾಬಾದ್, ಜಾಮ್‍ನಗರ, ಸೂರತ್ ಮತ್ತು ವಡೋದರಾದಲ್ಲಿ ಪರೀಕ್ಷಾರ್ಥವಾಗಿ ಜಿಯೋ ಪ್ರಿವ್ಯೂವ್ ಆಫರ್ ನೀಡಲಾಗ್ತಿದೆ ಎಂದು ಟ್ವೀಟ್‍ನಲ್ಲಿ ಹೇಳಲಾಗಿತ್ತು.

    2016ರ ಸೆಪ್ಟೆಂಬರ್ ನಲ್ಲಿ ನಡೆದ ರಿಲಯನ್ಸ್ ವಾರ್ಷಿಕ ಸಭೆಯಲ್ಲಿ ಮುಕೇಶ್ ಅಂಬಾನಿ ಮಲ್ಟಿ ಗಿಗಾಬೈಟ್ ಸೇವೆಯನ್ನು ದೇಶದ 100 ನಗರಗಳಲ್ಲಿ ಆರಂಭಿಸಲಾಗುವುದು ಎಂದು ತಿಳಿಸಿದ್ದರು.

    ಈಗಾಗಲೇ ಜಿಯೋ ಫೈಬರ್ ಬ್ರಾಡ್‍ಬ್ಯಾಂಡ್ ಸೇವೆ ಪಡೆಯುವ ಕೆಲ ಗ್ರಾಹಕರು ಈ ಹಿಂದೆ ಟ್ವೀಟ್ ಮಾಡಿದ್ದು, 1 ಜಿಬಿಪಿಎಸ್ ಸಂಪರ್ಕದಲ್ಲಿ 70 ಎಂಬಿಪಿಎಸ್ 100 ಎಂಬಿಪಿಎಸ್ ಡೇಟಾ ಸ್ಪೀಡ್ ಸಿಕ್ಕಿದೆ ಎಂದು ಹೇಳಿದ್ದರು. ಪುಣೆಯಲ್ಲಿ 743.28 ಎಂಬಿಪಿಎಸ್ ಡೇಟಾ ಸ್ಪೀಡ್ ದಾಖಲಾಗಿತ್ತು.

    ಇದನ್ನೂ ಓದಿ: ಈ ನಗರಗಳಲ್ಲಿ ಆಗ್ತಿದೆ ಜಿಯೋ ಫೈಬರ್ ಬ್ರಾಂಡ್‍ಬ್ಯಾಂಡ್ ಟೆಸ್ಟಿಂಗ್: ನಿಮ್ಮ ನಗರ ಇದ್ಯಾ?

    ಇದನ್ನೂ ಓದಿ: ಸಿಮ್ ಆಯ್ತು ಜಿಯೋ ಸೆಟ್‍ಟಾಪ್ ಬಾಕ್ಸ್: ವಿಶೇಷತೆ ಏನು? ಬೆಲೆ ಎಷ್ಟು? ಆರಂಭ ಯಾವಾಗ?

     

  • ಜಿಯೋ ಸ್ಫೂರ್ತಿ- ಗ್ರಾಹಕರಿಗೆ ಅನ್‍ಲಿಮಿಟೆಡ್ ಪಾನಿಪುರಿ ಆಫರ್ ನೀಡಿದ ವ್ಯಾಪಾರಿ

    ಜಿಯೋ ಸ್ಫೂರ್ತಿ- ಗ್ರಾಹಕರಿಗೆ ಅನ್‍ಲಿಮಿಟೆಡ್ ಪಾನಿಪುರಿ ಆಫರ್ ನೀಡಿದ ವ್ಯಾಪಾರಿ

    ಅಹಮದಾಬಾದ್: ರಿಲಯನ್ಸ್ ಜಿಯೋ ಗ್ರಾಹಕರಿಗೆ ಉಚಿತ ವಾಯ್ಸ್ ಕಾಲಿಂಗ್, ದೇಶದೆಲ್ಲೆಡೆ ಉಚಿತ ರೋಮಿಂಗ್, ವಿಶ್ವದಲ್ಲೇ ಅತಿ ಕಡಿಮೆ ವೆಚ್ಚದ ಡಾಟಾ ಯೋಜನೆ ಹೀಗೆ ಅನೇಕ ಆಫರ್‍ಗಳನ್ನು ನೀಡಿ ಗ್ರಾಹಕರನ್ನ ಸೆಳೆದಿದೆ. ಜಿಯೋ ಯೋಜನೆಯಿಂದ ಸ್ಫೂರ್ತಿಗೊಂಡ ಗುಜರಾತ್‍ನ ವ್ಯಾಪಾರಿಯೊಬ್ಬರು ತನ್ನ ಗ್ರಾಹಕರಿಗೂ ಬಂಪರ್ ಆಫರ್ ನೀಡಿದ್ದಾರೆ. ಇಲ್ಲಿನ ಪಾನಿಪುರಿ ವ್ಯಾಪಾರಿಯೊಬ್ಬರು ಅನಿಯಮಿತ ಪಾನಿಪುರಿ ಯೋಜನೆಯನ್ನು ಪರಿಚಯಿಸಿದ್ದಾರೆ.

    ರಿಲಯನ್ಸ್ ಜಿಯೋ 4ಜಿ ಯೋಜನೆಯಿಂದ ಸ್ಫೂರ್ತಿ ಪಡೆದ ಪೋರ್‍ಬಂದರ್ ಮೂಲದ ವ್ಯಾಪಾರಿ ರವಿ ಜಗದಂಬಾ ತನ್ನ ಗ್ರಾಹಕರಿಗೆ ದೈನಿಕ ಹಾಗೂ ಮಾಸಿಕ ಪಾನಿಪುರಿ ಆಫರ್ ನೀಡಿದ್ದಾರೆ. ಅದರಂತೆ ಗ್ರಾಹಕರು ಇವರ ಸ್ಟಾಲ್‍ನಲ್ಲಿ ದಿನಕ್ಕೆ 100 ರೂ. ಹಾಗೂ ತಿಂಗಳಿಗೆ 1000 ರೂ ನೀಡಿ ತಮಗೆ ತೃಪ್ತಿಯಾಗುವಷ್ಟು ಪಾನಿಪುರಿ ಸವಿಯಬಹುದು.

    ಇದನ್ನೂ ಓದಿ: ಜಿಯೋ ಬಳಕೆದಾರರಿಗೆ ಮತ್ತೊಂದು ಗುಡ್‍ನ್ಯೂಸ್

    ರಿಲಯನ್ಸ್ ಜಿಯೋನಂತೆಯೇ ರವಿ ಅವರ ವ್ಯಾಪಾರ ಜೋರಾಗಿದೆ. ಈ ಸ್ಕೀಮ್ ರವಿ ಅವರಿಗೆ ಲಾಭದಾಯಕವಾಗಿದ್ದು, ಜಿಯೋ ಪಾನಿಪುರಿ ಸ್ಕೀಮ್ ಪರಿಚಯಿಸಿದ ನಂತರ ಗ್ರಾಹಕರೂ ಕೂಡ ಹೆಚ್ಚಾಗಿದ್ದಾರಂತೆ.

    ಗ್ರಾಹಕರನ್ನ ಸೆಳೆಯೋಕೆ ರವಿ ಅವರು ಜಿಯೋ ಥೀಮ್‍ನ ಪಾನಿಪುರಿ ಸ್ಟಾಲ್ ಪರಿಚಯಿಸಿದ್ದಾರೆ.

    ಇದನ್ನೂ ಓದಿ: ಗ್ರಾಹಕರಿಗೆ ಉಚಿತ ಡೇಟಾ ನೀಡಿದ್ದ ಜಿಯೋಗೆ ಆಗಿರುವ ನಷ್ಟ ಎಷ್ಟು ಗೊತ್ತೆ?