Tag: ಜಿಯೋಮಾರ್ಟ್

  • ಮಹೇಂದ್ರ ಸಿಂಗ್ ಧೋನಿ ಈಗ ಜಿಯೋಮಾರ್ಟ್ ಬ್ರಾಂಡ್ ಅಂಬಾಸಿಡರ್

    ಮಹೇಂದ್ರ ಸಿಂಗ್ ಧೋನಿ ಈಗ ಜಿಯೋಮಾರ್ಟ್ ಬ್ರಾಂಡ್ ಅಂಬಾಸಿಡರ್

    ಮುಂಬೈ: ರಿಲಯನ್ಸ್ ರಿಟೇಲ್‌ನ (Reliance Retail) ಜಿಯೋಮಾರ್ಟ್ (Jio Mart) ದೇಶದ ಪ್ರಮುಖ ಇ-ಮಾರ್ಕೆಟ್‌ ಪ್ಲೇಸ್‌ಗಳಲ್ಲಿ ಒಂದಾಗಿದ್ದು, ಭಾರತೀಯ ಕ್ರಿಕೆಟ್ ಐಕಾನ್ ಮಹೇಂದ್ರ ಸಿಂಗ್ ಧೋನಿ (Mahendra Singh Dhoni) ಅವರನ್ನು ಬ್ರಾಂಡ್ ಅಂಬಾಸಿಡರ್ ಆಗಿ ನೇಮಿಸಿಕೊಂಡಿದೆ. ಇದರ ಜೊತೆಗೆ, ತನ್ನ ಹಬ್ಬದ ಕ್ಯಾಂಪೇನ್ ಅನ್ನು ಜಿಯೋ ಉತ್ಸವ, ಸೆಲೆಬ್ರೇಶನ್‌ ಆಫ್‌ ಇಂಡಿಯಾ ಎಂದು ಮರುನಾಮಕರಣ ಮಾಡಿದ್ದು, 2023 ಅಕ್ಟೋಬರ್ 8 ರಿಂದ ಲೈವ್ ಆಗಲಿದೆ.

    ಜಿಯೋಮಾರ್ಟ್ ಸಿಇಒ ಸಂದೀಪ್ ವರಗಂಟಿ, ನಮ್ಮ ಬ್ರಾಂಡ್ ಅಂಬಾಸಿಡರ್ ಆಗಿ ಎಂಎಸ್ ಧೋನಿ ಅತ್ಯಂತ ಉತ್ತಮವಾಗಿ ಹೊಂದಿಕೆಯಾಗುತ್ತಾರೆ. ಅವರ ವ್ಯಕ್ತಿತ್ವವು ಜಿಯೋಮಾರ್ಟ್‌ನ ಹಾಗೆಯೇ ವಿಶ್ವಾಸ, ನಂಬಿಕೆ ಮತ್ತು ಖಾತರಿಯನ್ನು ಪ್ರತಿಬಿಂಬಿಸುತ್ತದೆ. ನಮ್ಮ ಪ್ರೀತಿ ಪಾತ್ರರ ಜೊತೆಗೆ ವಿಶೇಷ ಕ್ಷಣಗಳನ್ನು ಕಳೆಯುವುದಕ್ಕೆ ನಮ್ಮ ಹೊಸ ಅಭಿಯಾನವು ಅನುವು ಮಾಡುತ್ತದೆ. ಇದರಲ್ಲಿ ಶಾಪಿಂಗ್ ಎಂಬುದು ಒಂದು ಅವಿಭಾಜ್ಯ ಅಂಗ ಎಂಬುದನ್ನು ಇದು ಪ್ರತಿಬಿಂಬಿಸುತ್ತದೆ. ಮೆಟ್ರೋ ಹೊರತಾದ ಪ್ರದೇಶಗಳು ಒಟ್ಟಾರೆ ಸೇಲ್ ನಲ್ಲಿ ಸುಮಾರು 60% ಪಾಲು ಹೊಂದಿದೆ. ಇದು ದೇಶದ ರಿಟೇಲ್ ವಲಯ ವಿಕೇಂದ್ರೀಕರಣಗೊಳ್ಳುತ್ತಿದೆ ಎಂಬುದಕ್ಕೆ ಸಾಕ್ಷಿಯಾಗಿದೆ ಎಂದಿದ್ದಾರೆ.  ಇದನ್ನೂ ಓದಿ: ರಿಲಯನ್ಸ್ ಜಿಯೋ: ಐಫೋನ್ 15 ಖರೀದಿಸಿದರೆ 6 ತಿಂಗಳು ಫ್ರೀ ಪ್ಲಾನ್

    ಪ್ರಾದೇಶಿಕ ಕಲಾಕಾರರನ್ನು ಪ್ರೋತ್ಸಾಹಿಸುವ ಕೆಲಸವನ್ನು ಜಿಯೋಮಾರ್ಟ್ ಎಂದಿಗೂ ಮಾಡುತ್ತಿದೆ. ಪ್ಲಾಟ್‌ಫಾರಂ ಪ್ರಸ್ತುತ 1000 ಕ್ಕೂ ಹೆಚ್ಚು ಕಲಾಕಾರರ ಜೊತೆಗೆ ಕೆಲಸ ಮಾಡುತ್ತಿದ್ದು, 1.5 ಲಕ್ಷ ವಿಶಿಷ್ಟ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದೆ. ಅಷ್ಟಕ್ಕೂ, ಕ್ಯಾಂಪೇನ್ ಶೂಟಿಂಗ್‌ನ ಭಾಗವಾಗಿ, ಬಿಹಾರದ ಪ್ರಶಸ್ತಿ ಪುರಸ್ಕೃತ ಕಲಾವಿದೆ ಅಂಬಿಕಾ ದೇವಿಯವರ ಮಧುಬನಿ ಪೇಂಟಿಂಗ್ ಅನ್ನು ಧೋನಿಯವರಿಗೆ ವರಗಂಟಿ ಪ್ರದಾನ ಮಾಡಿದರು. ಗ್ರಾಹಕರಿಗೆ ಉತ್ತಮ ಉತ್ಪನ್ನಗಳು ಮತ್ತು ಉತ್ತಮ ಅನುಭವವನ್ನು ಒದಗಿಸುವುದಷ್ಟೇ ಅಲ್ಲ, ಸರಾಗವಾಗಿ ಉದ್ಯಮವನ್ನು ನಡೆಸಲು ಲಕ್ಷಾಂತರ ಕಲಾಕಾರರು ಮತ್ತು ಎಸ್‌ಎಂಬಿಗಳಿಗೆ ಅನುವು ಮಾಡಿಕೊಡುತ್ತಿದೆ.

    ಮಹೇಂದ್ರ ಸಿಂಗ್ ಧೋನಿ ಪ್ರತಿಕ್ರಿಯಿಸಿ, ಜಿಯೋಮಾರ್ಟ್‌ನ ಮೌಲ್ಯ ಮತ್ತು ಗುರುತಿಗೂ ನನಗೂ ಹೊಂದಿಕೆಯಾಗುತ್ತದೆ. ದೇಶೀಯ ಇ-ಕಾಮರ್ಸ್ ಬ್ರಾಂಡ್ ಆಗಿರುವ ಇದು ಭಾರತದಲ್ಲಿ ಡಿಜಿಟಲ್ ರಿಟೇಲ್ ಕ್ರಾಂತಿಯನ್ನು ಉಂಟುಮಾಡುವ ಉದ್ದೇಶವನ್ನು ಹೊಂದಿದ್ದಾರೆ. ಭಾರತದು ವೈವಿಧ್ಯಮ ಸಂಸ್ಕೃತಿ ಜನರು ಮತ್ತು ಹಬ್ಬಗಳಿಗೆ ಹೆಸರಾಗಿದೆ. ಭಾರತ ಮತ್ತು ಭಾರತೀಯರ ಸಂಭ್ರಮಕ್ಕೆ ಜಿಯೋಮಾರ್ಟ್‌ನ ಜಿಯೋ ಉತ್ಸವವು ಹೊಸ ಆಯಾಮವನ್ನು ನೀಡಿದೆ. ಜಿಯೋಮಾರ್ಟ್ ಜೊತೆಗೆ ಗುರುತಿಸಿಕೊಳ್ಳಲು ಮತ್ತು ಲಕ್ಷಾಂತರ ಭಾರತೀಯರ ಶಾಪಿಂಗ್ ಪಯಣದ ಭಾಗವಾಗುವುದಕ್ಕೆ ನನಗೆ ಹೆಮ್ಮೆಯಾಗುತ್ತಿದೆ ಎಂದು ಹೇಳಿದರು.

     

    ಜಿಯೋಮಾರ್ಟ್‌ನ ವಿಭಿನ್ನ ವಿಭಾಗೀಯ ಪರಿಣಿತಿ, ಹಬ್ಬದ ಉತ್ಸಾಹ ಮತ್ತು ಅದ್ಭುತ ಶಾಪಿಂಗ್ ಡೀಲ್‌ಗಳು ಮತ್ತು ರಿಯಾಯಿತಿಗಳನ್ನು ಹೈಲೈಟ್ ಮಾಡುವಂತೆ ಫಿಲಂ ಅನ್ನು ರೂಪಿಸಲಾಗಿದೆ.

    ಕಳೆದ ವರ್ಷ ಜಿಯೋಮಾರ್ಟ್ ವಿವಿಧ ವಿಭಾಗಗಳಲ್ಲಿ ಲಭ್ಯವಿರುವ ಉತ್ಪನ್ನಗಳನ್ನು ಪ್ರಚಾರ ಮಾಡುವ ವಿಧಾನವನ್ನು ಅಳವಡಿಸಿಕೊಂಡಿತ್ತು. ಎಲೆಕ್ಟಾನಿಕ್ಸ್, ಫ್ಯಾಷನ್, ಬ್ಯೂಟಿ, ಮನೆ ಅಲಂಕಾರ ಸೇರಿದಂತೆ ವಿವಿಧ ವಿಭಾಗಗಳಲ್ಲಿ ರಿಲಯನ್ಸ್ ಮಾಲೀಕತ್ವದ ಬ್ರಾಂಡ್‌ಗಳನ್ನು ಜಿಯೋಮಾರ್ಟ್ ಸೇರಿಸಿಕೊಂಡಿದೆ. ಇದರಲ್ಲಿ ಅರ್ಬನ್ ಲ್ಯಾಡರ್, ರಿಲಯನ್ಸ್ ಟ್ರೆಂಡ್ಸ್, ರಿಲಯನ್ಸ್ ಜ್ಯೂವೆಲ್ಸ್, ಹ್ಯಾಮ್ಲೇಸ್ ಸೇರಿದಂತೆ ಇತರೆ ಇವೆ. ಭಾರತದ ಅತಿದೊಡ್ಡ ದೇಶೀಯ ಇ-ಮಾರ್ಕೆಟ್‌ಪ್ಲೇಸ್ ಆಗುವ ಜಿಯೋಮಾರ್ಟ್ ಈಗ ತ್ವರಿತವಾಗಿ ವಿಸ್ತರಣೆಯಾಗುತ್ತಿದೆ.

     

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ರಿಲಯನ್ಸ್ ರೀಟೇಲ್‌ನ ಜಿಯೋಮಾರ್ಟ್‌ ಜೊತೆಗೆ ಆನ್‌ಲೈನ್‌ಗೆ ಸ್ಥಳೀಯ ಕುಶಲಕರ್ಮಿಗಳು ಪ್ರವೇಶ

    ರಿಲಯನ್ಸ್ ರೀಟೇಲ್‌ನ ಜಿಯೋಮಾರ್ಟ್‌ ಜೊತೆಗೆ ಆನ್‌ಲೈನ್‌ಗೆ ಸ್ಥಳೀಯ ಕುಶಲಕರ್ಮಿಗಳು ಪ್ರವೇಶ

    ಭಾರತದ ಅತಿದೊಡ್ಡ ಸ್ಥಳೀಯ ಇ-ಮಾರ್ಕೆಟ್ (E-Market) ಪ್ಲೇಸ್‌ಗಳಲ್ಲಿ ಒಂದಾದ ರಿಲಯನ್ಸ್ ರೀಟೇಲ್‌ನ ಜಿಯೋಮಾರ್ಟ್ (Reliance Retail) ಇತ್ತೀಚೆಗೆ ಸಣ್ಣ ಉದ್ಯಮಗಳು, ಎಂಎಸ್‌ಎಂಇಗಳು ಮತ್ತು ಸ್ಥಳೀಯ ಮಳಿಗೆಗಳನ್ನು ಬಲಪಡಿಸುವ ಉದ್ದೇಶದಿಂದ ಥರ್ಡ್‌ ಪಾರ್ಟಿ ಮಾರಾಟಗಾರರನ್ನು ಸೇರಿಸಿಕೊಳ್ಳುವುದಕ್ಕೆ ಪ್ರಾರಂಭಿಸಿದೆ. ಈ ಗುರಿ ಸಾಧಿಸುವ ಪ್ರಯತ್ನದಲ್ಲಿ ಮೊದಲ ಬಾರಿಗೆ ಜಿಯೋಮಾರ್ಟ್ (jioMart) ಸ್ಥಳೀಯ ಕುಶಲಕರ್ಮಿಗಳನ್ನು ತನ್ನ ಇ-ಕಾಮರ್ಸ್‌ನೊಳಗೆ ಸೇರಿಸಿಕೊಳ್ಳುವುದಕ್ಕೆ ಶುರು ಮಾಡಿದೆ. ಈ ಮೂಲಕ ಕುಶಲಕರ್ಮಿಗಳಿಗೆ ಜೀವನೋಪಾಯ ಒದಗಿಸಲು ಮತ್ತು ದೇಶದ ಶ್ರೀಮಂತ ಪರಂಪರೆಯನ್ನು ಸಂರಕ್ಷಿಸಲು ಮುಂದಾಗಿದೆ.

    ಕೊರೊನಾ ಸಮಯದಲ್ಲಿ ಈ ಸ್ಥಳೀಯ ಕುಶಲಕರ್ಮಿಗಳು ಇತರ ಉದ್ಯಮಗಳಂತೆಯೇ ಭಾರೀ ನಷ್ಟಕ್ಕೆ ಗುರಿಯಾದರು. ಆದರೆ ಕೆಲವರು ಇ-ವ್ಯವಹಾರದ ಮೂಲಕ ಸಂದರ್ಭಕ್ಕೆ ಹೊಂದಿಕೊಳ್ಳುವುದಕ್ಕೆ ಸಿದ್ಧರಾಗಿದ್ದರು. ಅದು ಅವರಿಗೆ ಮತ್ತೆ ಹಳಿಗೆ ಮರಳಲು ಸಹಾಯ ಮಾಡಿದೆ. ಈಗ ನಡೆಯುತ್ತಿರುವ ಹಬ್ಬದ ಋತುವಿನಿಂದಾಗಿ ಬೇಡಿಕೆಯು ಮತ್ತೆ ಕೋವಿಡ್ ಪೂರ್ವದ ಮಟ್ಟಕ್ಕೆ ಮರಳಿದೆ. ಇದನ್ನೂ ಓದಿ: ಬೆಳಕಿನ ಹಬ್ಬ ದೀಪಾವಳಿಗೆ ʻಅವಂತ್ರ ಬೈ ಟ್ರೆಂಡ್ಸ್‌ʼ ವಿಶಿಷ್ಟ ಸಂಗ್ರಹ – 399 ರೂ.ರಿಂದ 39,999 ರೂ. ತನಕ ಸಿಗುತ್ತೆ ಸೀರೆಗಳು

    ʻಆಟಿಕೆಗಳ ಮಾರಾಟ ಆರಂಭಿಸಿದ 24 ಗಂಟೆಗಳಲ್ಲಿ ನನ್ನ ಮೊದಲ ಆರ್ಡರ್ ಸಿಕ್ಕಿದ್ದು ಆಶ್ಚರ್ಯವಾಯಿತು. ಅಂದಿನಿಂದ ನಾನು ಪ್ರತಿ ದಿನವೂ ಆರ್ಡರ್‌ಗಳನ್ನು ಪಡೆದಿದ್ದೇನೆʼ ಎಂದು ಸ್ಥಳೀಯ ಕುಶಲಕರ್ಮಿಗಳಲ್ಲಿ ಒಬ್ಬರಾದ ಮೀರ್ ಆರೀಫ್ ಹೇಳಿದ್ದಾರೆ. ಅಂದಹಾಗೆ ಇವರು ಪರಿಸರ ಸ್ನೇಹಿ- ವಿಷಕಾರಿಯಲ್ಲದ ಆಟಿಕೆಗಳನ್ನು ಜಿಯೋಮಾರ್ಟ್‌ನಲ್ಲಿ ಒದಗಿಸುತ್ತಾರೆ. ʼ ಚನ್ನಪಟ್ಟಣ ಮರದ ಆಟಿಕೆಗಳು (Channapatna Toys) ಸ್ವದೇಶಿ ಬ್ರಾಂಡ್‌ಗಳಾಗಿದ್ದು, ಉತ್ತಮ ಬೇಡಿಕೆ ಇದೆ. ಲಾಭದಾಯಕ ವ್ಯವಹಾರಕ್ಕೆ ಆನ್‌ಲೈನ್‌ ವೇದಿಕೆ ತುಂಬಾ ಸಹಕಾರಿ. ನಾನು ಸದ್ಯಕ್ಕೆ 200 ಉತ್ಪನ್ನಗಳನ್ನು ಹೊಂದಿದ್ದೇನೆ. ನಿರೀಕ್ಷೆಗೂ ಮೀರಿ ಆರ್ಡರ್‌ ಬರುತ್ತಿದ್ದು, ಇದಕ್ಕೆ ಇನ್ನೂ 100ಕ್ಕೂ ಹೆಚ್ಚು ಸೇರ್ಪಡೆ ಮಾಡಲು ಬಯಸುತ್ತೇನೆ ಎನ್ನುತ್ತಾರೆ ಆರೀಫ್‌.

    ಜಿಯೋಮಾರ್ಟ್ ಹಬ್ಬದ ಮಾರಾಟದ ಮೊದಲ ವಾರದಲ್ಲಿ ಆರ್ಡರ್‌ಗಳಲ್ಲಿ ಎರಡೂವರೆ ಪಟ್ಟು ಏರಿಕೆ ಕಂಡಿದೆ. ಅಕ್ಟೋಬರ್ 24ರ ವರೆಗೆ ನಡೆಯುತ್ತಿರುವ 10 ದಿನಗಳ ಬೆಸ್ಟಿವಲ್ ಸೇಲ್‌ನಲ್ಲಿ ಇದೇ ರೀತಿಯ ಕಾರ್ಯಕ್ಷಮತೆ ನಿರೀಕ್ಷಿಸಲಾಗಿದೆ. ಚನ್ನಪಟ್ಟಣದ ಆಟಿಕೆಗಳಿಗೆ ಟಿಪ್ಪು ಸುಲ್ತಾನ್ ಕಾಲದಷ್ಟು ಸುದೀರ್ಘ ಇತಿಹಾಸ ಇದೆ. ಆತ ಪರ್ಷಿಯನ್ನರನ್ನು ಭಾರತಕ್ಕೆ ಆಹ್ವಾನಿಸಿ, ಸ್ಥಳೀಯ ಕುಶಲಕರ್ಮಿಗಳಿಗೆ ತಮ್ಮ ಜ್ಞಾನವನ್ನು ಹಂಚುವುದಕ್ಕೆ ಕೇಳಿಕೊಂಡಿದ್ದ. ಇದನ್ನೂ ಓದಿ: ಹುಡುಗಿಯರ ಮೈಕಾಂತಿ ಹೆಚ್ಚಿಸುವ ಸೀರೆಗೊಂದು ಸಿಂಗಾರ ಬೇಡವೇ?

    ʻನನ್ನ ತಂದೆ ಮತ್ತು ಅಜ್ಜ ಇಬ್ಬರೂ ಕುಶಲಕರ್ಮಿಗಳಾಗಿ ಕೆಲಸ ಮಾಡುತ್ತಿದ್ದರು. ನಮ್ಮ ಕುಟುಂಬ ತಲೆತಲಾಂತರವಾಗಿ 100 ವರ್ಷಗಳಿಂದ ಈ ವ್ಯಾಪಾರ ನಡೆಸಿಕೊಂಡು ಬಂದಿದೆ. ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಚನ್ನಪಟ್ಟಣ ತನ್ನ ವಿಶಿಷ್ಟ ಮರದ ಆಟಿಕೆಗಳಿಗೆ ಹೆಸರುವಾಸಿ ಆಗಿದೆ. ಈ ಉದ್ಯಮವು ಅನೇಕ ಕುಶಲಕರ್ಮಿಗಳ ಜೀವನಕ್ಕೆ ಆಧಾರವಾಗಿದೆ. ನಮ್ಮಲ್ಲಿ ಕನಿಷ್ಠ 35 ಕುಶಲಕರ್ಮಿಗಳಿದ್ದು, ಅವರಲ್ಲಿ ಕೆಲವರು 40 ವರ್ಷಗಳಿಗಿಂತ ಹೆಚ್ಚು ಕಾಲದಿಂದ ಕೆಲಸ ಮಾಡುತ್ತಿದ್ದಾರೆ. 60 ವರ್ಷ ವಯಸ್ಸಿನವರು ನನ್ನೊಂದಿಗೆ ಕೆಲಸ ಮಾಡುತ್ತಾರೆ. ಆನ್‌ಲೈನ್ ವೇದಿಕೆಯು ವ್ಯಾಪಾರಿಗಳ ಜೀವನೋಪಾಯದ ಪ್ರಮುಖ ಮೂಲವಾಗಿದೆʼ ಎಂದು ಆರೀಫ್‌ ಹೇಳುತ್ತಾರೆ.

    ಪಶ್ಚಿಮ ಬಂಗಾಳದ ಫುಲಿಯಾದಿಂದ ಬಂದ ಮತ್ತೊಬ್ಬ ಪ್ರಾದೇಶಿಕ ಕೈಮಗ್ಗ ಕುಶಲಕರ್ಮಿ, ಕೈಯಿಂದ ನೇಯ್ದ ಸೊಗಸಾದ ಮಸ್ಲಿನ್ ಜಮದಾನಿ ಸೀರೆಗಳನ್ನು ಮಾರಾಟ ಮಾಡಲು ಜಿಯೋಮಾರ್ಟ್‌ನಲ್ಲಿ ಯಶಸ್ವಿಯಾಗಿ ನೋಂದಾಯಿಸಿಕೊಂಡಿದ್ದಾರೆ. ʼನನ್ನ ಪ್ರಾಥಮಿಕ ವ್ಯವಹಾರವು ಆಫ್‌ಲೈನ್ ಆಗಿದ್ದರೂ ಎರಡು ಕಾರಣಗಳಿಗಾಗಿ ಆನ್‌ಲೈನ್‌ನಲ್ಲಿ ಮಾರಾಟ ಮಾಡುತ್ತೇನೆ. ಗಂಗಾ ನದಿಪಾತ್ರದ ಬಂಗಾಳದ ನೇಕಾರರಿಂದ ಶತಮಾನಗಳಷ್ಟು ಹಳೆಯದಾದ ಶ್ರೀಮಂತ ಕೈಮಗ್ಗ ಜವಳಿ ಎಲ್ಲರಿಗೂ ಲಭ್ಯವಾಗುವಂತೆ ಮಾಡಲು ಮತ್ತು ನೇಕಾರ ಸಮುದಾಯದಿಂದ ನೇರವಾಗಿ ಗ್ರಾಹಕರಿಗೆ ನ್ಯಾಯಯುತ ಬೆಲೆಗೆ ಅಧಿಕೃತ ಸರಕುಗಳನ್ನು ಒದಗಿಸಲು ಬಯಸುತ್ತೇನೆ. ಇದು ಎರಡೂ ಕಡೆಯಿಂದ (ಗ್ರಾಹಕ- ಮಾರಾಟಗಾರರು) ಉತ್ತಮ ವ್ಯವಹಾರ ಬಾಂಧವ್ಯಕ್ಕೆ ಸಹಕಾರಿಯಾಗಲಿದೆ ಎಂದು ಜಿಯೋಮಾರ್ಟ್‌ನ ಉನ್ನತ ಮಾರಾಟಗಾರರಲ್ಲಿ ಒಬ್ಬರಾದ ಮಾಸ್ಟರ್ ಹ್ಯಾಂಡ್‌ಲೂಮ್ ಕುಶಲಕರ್ಮಿ ದೀಪಕ್ ಅಭಿಪ್ರಾಯಪಟ್ಟಿದ್ದಾರೆ. ಇದನ್ನೂ ಓದಿ: ಹಳೆಯ ಆಭರಣಗಳಿಗೆ ಹೊಸ ಹುರುಪು – ಟ್ರೆಂಡಿಯಾಗಿ ಧರಿಸುವ ಬೆಳ್ಳಿ ಒಡವೆಗಳ ಬಗ್ಗೆ ಇಲ್ಲಿದೆ ಸಿಂಪಲ್ ಟಿಪ್ಸ್

    ಸ್ಥಳೀಯ ಕುಶಲಕರ್ಮಿಗಳು ಆನ್‌ಲೈನ್ ಮಾರಾಟದಿಂದ ಅನೇಕ ಪ್ರಯೋಜನ ಪಡೆಯುತ್ತಿದ್ದಾರೆ. ಇದರಲ್ಲಿ ಸರಕು ಸಾಗಣೆ, ತಾಂತ್ರಿಕ, ಆನ್-ಸೈಟ್ ಮಾರಾಟಗಾರರ ಬೆಂಬಲ, ಮಾರುಕಟ್ಟೆ ಮತ್ತು ಪ್ರಚಾರಗಳು ಸೇರಿವೆ. ಜಿಯೋಮಾರ್ಟ್‌ನಂತಹ ಇ-ಮಾರುಕಟ್ಟೆ ಭಾರತದ ಕರಕುಶಲ ಮತ್ತು ಕೈಮಗ್ಗ ಪರಂಪರೆಯನ್ನು ಸಂರಕ್ಷಿಸಿ ಶಾಶ್ವತಗೊಳಿಸಲು ಮತ್ತು ಉದ್ಯಮವನ್ನು ಉತ್ತೇಜಿಸಲು ಮಾರ್ಗಗಳನ್ನು ಒದಗಿಸುವುದನ್ನು ಮುಂದುವರಿಸಲಿದೆ.

    Live Tv
    [brid partner=56869869 player=32851 video=960834 autoplay=true]

  • 6 ತಿಂಗಳ ಒಳಗಡೆ ವಾಟ್ಸಪ್‌ನಲ್ಲಿ ಎಂಬೆಡ್‌ ಆಗಲಿದೆ ಜಿಯೋಮಾರ್ಟ್‌

    6 ತಿಂಗಳ ಒಳಗಡೆ ವಾಟ್ಸಪ್‌ನಲ್ಲಿ ಎಂಬೆಡ್‌ ಆಗಲಿದೆ ಜಿಯೋಮಾರ್ಟ್‌

    ಮುಂಬೈ: 6 ತಿಂಗಳ ಒಳಗಡೆ ಜಿಯೋ ಮಾರ್ಟ್‌ ವಾಟ್ಸಪ್‌ನಲ್ಲಿ ಎಂಬೆಡ್‌ ಆಗಲಿದೆ ಎಂಬುದಾಗಿ ಮಾಧ್ಯಮವೊಂದು ವರದಿ ಮಾಡಿದೆ.

    ಆನ್‌ಲೈನ್‌ ಶಾಪಿಂಗ್‌ ತಾಣಗಳಾದ ಅಮೆಜಾನ್‌ ಮತ್ತು ಫ್ಲಿಪ್‌ಕಾರ್ಟ್‌ ಕಂಪನಿಗಳಿಗೆ ಸ್ಪರ್ಧೆ ನೀಡಲು ದೇಶದ ನಂಬರ್‌ ಒನ್‌ ಶ್ರೀಮಂತ ಉದ್ಯಮಿ ಮುಕೇಶ್‌ ಅಂಬಾನಿ ಜಿಯೋ ಮಾರ್ಟ್‌ ತೆರೆದಿದ್ದಾರೆ. ಈಗಾಗಲೇ ಜಿಯೋ ಮಾರ್ಟ್‌ ತನ್ನ ಸೇವೆ ಆರಂಭಿಸಿದ್ದು ಮತ್ತಷ್ಟು ಗ್ರಾಹಕರನ್ನು ತನ್ನತ್ತ ಸೆಳೆಯಲು ವಾಟ್ಸಪ್‌ನಲ್ಲಿ ಎಂಬೆಡ್‌ ಆಗಲಿದೆ.

    ಈಗಾಗಲೇ ರಿಲಯನ್ಸ್‌ ಫ್ರೆಶ್‌, ರಿಲಯನ್ಸ್‌ ಡಿಜಿಟಲ್‌, ರಿಲಯನ್ಸ್‌ ಫುಟ್‌ ಪ್ರಿಂಟ್‌ ಸೇರಿದಂತೆ ವಿವಿಧ ಕಂಪನಿಗಳು ಕೆಲಸ ಮಾಡುತ್ತಿವೆ. ಇವುಗಳನ್ನು ಒಟ್ಟಿಗೆ ಸೇರಿಸಿ ಉದ್ಯಮವನ್ನು ವಿಸ್ತರಿಸುವ ನಿಟ್ಟಿನಲ್ಲಿ ರಿಲಯನ್ಸ್‌ಗೆ ಜಿಯೋ ಮಾರ್ಟ್‌ ಸಹಕಾರಿಯಾಗಲಿದೆ.

    ಸದ್ಯ ದೇಶದದಲ್ಲಿ ಅತಿ ದೊಡ್ಡ ಆಫ್‌ಲೈನ್‌ ರಿಟೇಲ್‌ ಅಂಗಡಿಯನ್ನು ರಿಲಯನ್ಸ್‌ ಹೊಂದಿದೆ. ಈಗ 2025ರ ಒಳಗಡೆ ಜಿಯೋಮಾರ್ಟ್‌ಅನ್ನು ದೇಶದ ನಂಬರ್‌ ಒನ್‌ ಆನ್‌ಲೈನ್‌ ಶಾಪಿಂಗ್‌ ತಾಣವನ್ನಾಗಿ ಮಾಡಲು ಮುಕೇಶ್‌ ಅಂಬಾನಿ ಮುಂದಾಗಿದ್ದಾರೆ,

    2020ರ ಏಪ್ರಿಲ್‌ 22 ರಂದು ಫೇಸ್‌ಬುಕ್‌ ಜಿಯೋದಲ್ಲಿ 43,354 ಕೋಟಿ ರೂ. ಹಣವನ್ನು ಹೂಡಿಕೆ ಮಾಡಿ ಶೇ.9.9ರಷ್ಟು ಪಾಲನ್ನು ಪಡೆದುಕೊಂಡಿತ್ತು.

    ಡಿಸೆಂಬರ್‌ನಲ್ಲಿ ನಡೆದ ಫೇಸ್‌ಬುಕ್‌ ಫ್ಯುಯಲ್‌ ಫಾರ್‌ ಇಂಡಿಯಾ 2020 ಕಾರ್ಯಕ್ರಮದಲ್ಲಿ ರಿಲಯನ್ಸ್‌ ಇಂಡಸ್ಟ್ರೀಸ್‌ ಮುಖ್ಯಸ್ಥ ಮುಕೇಶ್‌ ಅಂಬಾನಿ ಮತ್ತು ಫೇಸ್‌ಬುಕ್‌ ಸಂಸ್ಥಾಪಕ ಮಾರ್ಕ್‌ ಜುಕರ್‌ಬರ್ಗ್‌ ಅವರು ಫೇಸ್‌ಬುಕ್‌, ಜಿಯೋ ಪಾಲುದಾರಿಕೆಯಿಂದ ದೇಶದ ಮೇಲೆ ಆಗಿರುವ ಮತ್ತು ಆಗಲಿರುವ ಪರಿಣಾಮದ ಬಗ್ಗೆ ಚರ್ಚೆ ನಡೆಸಿದ್ದರು. ಈ ವೇಳೆ ಮಾತನಾಡಿದ ಅಂಬಾನಿ, ಮುಂದಿನ ಎರಡು ಮೂರು ದಶಕದಲ್ಲಿ ಭಾರತ ವಿಶ್ವದ ಟಾಪ್‌ 3 ದೇಶಗಳ ಪಟ್ಟಿಯಲ್ಲಿ ಸ್ಥಾನ ಪಡೆಯಲಿದೆ ಎಂದು ಭವಿಷ್ಯ ನುಡಿದಿದ್ದರು.

    ಈ ಮೊದಲು ಜಿಯೋ ಮತ್ತು ವಾಟ್ಸಪ್‌ ಕೇವಲ ಸಂವಹನಕ್ಕಾಗಿ ಮಾತ್ರ ಬಳಕೆ ಆಗುತ್ತಿತ್ತು. ಆದರೆ ಈಗ ಗ್ರಾಹಕರು ಮತ್ತು ಸಣ್ಣ ವ್ಯವಹಾರಗಳಿಗೆ ಮೌಲ್ಯವನ್ನು ನೀಡುವ ವೇದಿಕೆಯಾಗಿ ಬದಲಾಗಿದೆ. ಪ್ರಧಾನಿ ನರೇಂದ್ರ ಮೋದಿಯವರ ಡಿಜಿಟಲ್‌ ಇಂಡಿಯಾ ಕಲ್ಪನೆಯಿಂದ ಕಂಪನಿಗಳು ಈಗ ಹೆಚ್ಚು ಹೆಚ್ಚು ಇಂಟರ್‌ನೆಟ್‌ ಆಧಾರಿತ ಸೇವೆ ನೀಡುತ್ತಿವೆ ಎಂದು ತಿಳಿಸಿದ್ದರು.

    ವಾಟ್ಸಾಪ್ ಭಾರತದಲ್ಲಿ 100 ದಶಲಕ್ಷ ಚಂದದಾರನ್ನು ಹೊಂದಿದ್ದರೆ ಜಿಯೋ 100 ದಶಲಕ್ಷ ಗ್ರಾಹಕರನ್ನು ಹೊಂದಿದೆ. ಇದರರ್ಥ ಜಿಯೋ ಡಿಜಿಟಲ್‌ ಕನೆಕ್ಟಿವಿಟಿ ತಂದರೆ ವಾಟ್ಸಪ್‌ ಡಿಜಿಟಲ್‌ ಇಂಟರಾಕ್ಟಿವಿಟಿ ತಂದಿದೆ. ಜಿಯೋ ಮಾರ್ಟ್‌ ಸಾಟಿಯಿಲ್ಲದ ಆನ್‌ಲೈನ್ ಮತ್ತು ಆಫ್‌ಲೈನ್ ಚಿಲ್ಲರೆ ಅವಕಾಶವನ್ನು ತರುತ್ತದೆ ಎಂದು ಅಂಬಾನಿ ಹೇಳಿದ್ದರು.

    ಮಾರ್ಕ್‌ ಜುಕರ್‌ಬರ್ಗ್‌ ಮಾತನಾಡಿ, ನಾವು ಸಣ್ಣ ಉದ್ಯಮಗಳಿಗೆ ಸೇವೆ ಸಲ್ಲಿಸುವ ವ್ಯವಹಾರದಲ್ಲಿದ್ದೇವೆ ಎಂದು ಹೇಳಲು ನಾವು ಇಷ್ಟಪಡುತ್ತೇವೆ. ಭಾರತದ ಸಣ್ಣ ವ್ಯವಹಾರಗಳು ಜಾಗತಿಕ ಚೇತರಿಕೆಯ ಪ್ರಮುಖ ಭಾಗವಾಗಿರುತ್ತವೆ. ಹೀಗಾಗಿ ಅವರಿಗೆ ಸಹಾಯವಾಗಲು ಉತ್ತಮವಾದ ಟೂಲ್‌ಗಳನ್ನು ನಿರ್ಮಿಸುತ್ತೇವೆ. ಈ ಕಾರಣಕ್ಕೆ ನಾವು ಜಿಯೋ ಜೊತೆ ಪಾಲುದಾರಿಕೆ ಬಯಸಿದ್ದೇವೆ. ಇಂದು ಭಾರತದ ನೂರಾರು ಮಿಲಿಯನ್‌ ಮಂದಿಗೆ ಇಂಟರ್‌ನೆಟ್‌ ಸಿಗುವಲ್ಲಿ ಜಿಯೋದ ಪಾತ್ರ ದೊಡ್ಡದು ಎಂದು ಹೇಳಿ ಶ್ಲಾಘಿಸಿದ್ದರು.

    ಲಾಕ್‌ಡೌನ್‌ ಮಧ್ಯದಲ್ಲಿ ಜಿಯೋ ಮತ್ತು ಫೇಸ್‌ಬುಕ್‌ ಪಾಲುದಾರಿಕೆ ಹೇಗೆ ನಡೆಯಿತು ಎಂಬುದಕ್ಕೆ ನಮ್ಮದೇ ಒಂದು ಉತ್ತಮ ಉದಾಹರಣೆ. ಈ ಮಾತನ್ನು ಹೇಳಲು ನನಗೆ ಯಾವುದೇ ಹಿಂಜರಿಕೆಯಿಲ್ಲ. ಜಿಯೋ ಮತ್ತು ಫೇಸ್‌ಬುಕ್ ನಡುವಿನ ಸಹಭಾಗಿತ್ವವು ಭಾರತ, ಭಾರತೀಯರು ಮತ್ತು ಸಣ್ಣ ಭಾರತೀಯ ವ್ಯವಹಾರಗಳಿಗೆ ಸಹಾಯವಾಗಲಿದೆ ಎಂದು ಮುಕೇಶ್‌ ಅಂಬಾನಿ ಅಭಿಪ್ರಾಯ ವ್ಯಕ್ತಪಡಿಸಿದ್ದರು.

  • ಜಿಯೋಮಾರ್ಟ್‌ನಿಂದ ವರ್ತಕರಿಗೆ ಲಾಭ – ಅಂಬಾನಿ, ಜುಕರ್‌ಬರ್ಗ್‌ ಸಂವಾದ

    ಜಿಯೋಮಾರ್ಟ್‌ನಿಂದ ವರ್ತಕರಿಗೆ ಲಾಭ – ಅಂಬಾನಿ, ಜುಕರ್‌ಬರ್ಗ್‌ ಸಂವಾದ

    ಮುಂಬೈ: ರಿಲಯನ್ಸ್‌ ಇಂಡಸ್ಟ್ರೀಸ್‌ ಮುಖ್ಯಸ್ಥ ಮುಕೇಶ್‌ ಅಂಬಾನಿ ಮತ್ತು ಫೇಸ್‌ಬುಕ್‌ ಸಂಸ್ಥಾಪಕ ಮಾರ್ಕ್‌ ಜುಕರ್‌ಬರ್ಗ್‌ ಅವರು ಫೇಸ್‌ಬುಕ್‌, ಜಿಯೋ ಪಾಲುದಾರಿಕೆಯಿಂದ ದೇಶದ ಮೇಲೆ ಆಗಿರುವ ಮತ್ತು ಆಗಲಿರುವ ಪರಿಣಾಮದ ಬಗ್ಗೆ ಚರ್ಚೆ ನಡೆಸಿದ್ದಾರೆ.

    ಫೇಸ್‌ಬುಕ್‌ ಫ್ಯುಯಲ್‌ ಫಾರ್‌ ಇಂಡಿಯಾ 2020 ಕಾರ್ಯಕ್ರಮದಲ್ಲಿ ಇಬ್ಬರು ನಾಯಕರು ಸಂವಾದ ನಡೆಸಿದರು. ಈ ವೇಳೆ ಮಾತನಾಡಿದ ಅಂಬಾನಿ, ಮುಂದಿನ ಎರಡು ಮೂರು ದಶಕದಲ್ಲಿ ಭಾರತ ವಿಶ್ವದ ಟಾಪ್‌ 3 ದೇಶಗಳ ಪಟ್ಟಿಯಲ್ಲಿ ಸ್ಥಾನ ಪಡೆಯಲಿದೆ ಎಂದು ಭವಿಷ್ಯ ನುಡಿದರು.

    ಈ ಮೊದಲು ಜಿಯೋ ಮತ್ತು ವಾಟ್ಸಪ್‌ ಕೇವಲ ಸಂವಹನಕ್ಕಾಗಿ ಮಾತ್ರ ಬಳಕೆ ಆಗುತ್ತಿತ್ತು. ಆದರೆ ಈಗ ಗ್ರಾಹಕರು ಮತ್ತು ಸಣ್ಣ ವ್ಯವಹಾರಗಳಿಗೆ ಮೌಲ್ಯವನ್ನು ನೀಡುವ ವೇದಿಕೆಯಾಗಿ ಬದಲಾಗಿದೆ. ಪ್ರಧಾನಿ ನರೇಂದ್ರ ಮೋದಿಯವರ ಡಿಜಿಟಲ್‌ ಇಂಡಿಯಾ ಕಲ್ಪನೆಯಿಂದ ಕಂಪನಿಗಳು ಈಗ ಹೆಚ್ಚು ಹೆಚ್ಚು ಇಂಟರ್‌ನೆಟ್‌ ಆಧಾರಿತ ಸೇವೆ ನೀಡುತ್ತಿವೆ ಎಂದು ತಿಳಿಸಿದರು.

    ವಾಟ್ಸಾಪ್ ಭಾರತದಲ್ಲಿ 100 ದಶಲಕ್ಷ ಚಂದದಾರನ್ನು ಹೊಂದಿದ್ದರೆ ಜಿಯೋ 100 ದಶಲಕ್ಷ ಗ್ರಾಹಕರನ್ನು ಹೊಂದಿದೆ. ಇದರರ್ಥ ಜಿಯೋ ಡಿಜಿಟಲ್‌ ಕನೆಕ್ಟಿವಿಟಿ ತಂದರೆ ವಾಟ್ಸಪ್‌ ಡಿಜಿಟಲ್‌ ಇಂಟರಾಕ್ಟಿವಿಟಿ ತಂದಿದೆ. ಜಿಯೋ ಮಾರ್ಟ್‌ ಸಾಟಿಯಿಲ್ಲದ ಆನ್‌ಲೈನ್ ಮತ್ತು ಆಫ್‌ಲೈನ್ ಚಿಲ್ಲರೆ ಅವಕಾಶವನ್ನು ತರುತ್ತದೆ ಎಂದು ಅಂಬಾನಿ ಹೇಳಿದರು.

    ಮಾರ್ಕ್‌ ಜುಕರ್‌ಬರ್ಗ್‌ ಮಾತನಾಡಿ, ನಾವು ಸಣ್ಣ ಉದ್ಯಮಗಳಿಗೆ ಸೇವೆ ಸಲ್ಲಿಸುವ ವ್ಯವಹಾರದಲ್ಲಿದ್ದೇವೆ ಎಂದು ಹೇಳಲು ನಾವು ಇಷ್ಟಪಡುತ್ತೇವೆ. ಭಾರತದ ಸಣ್ಣ ವ್ಯವಹಾರಗಳು ಜಾಗತಿಕ ಚೇತರಿಕೆಯ ಪ್ರಮುಖ ಭಾಗವಾಗಿರುತ್ತವೆ. ಹೀಗಾಗಿ ಅವರಿಗೆ ಸಹಾಯವಾಗಲು ಉತ್ತಮವಾದ ಟೂಲ್‌ಗಳನ್ನು ನಿರ್ಮಿಸುತ್ತೇವೆ. ಈ ಕಾರಣಕ್ಕೆ ನಾವು ಜಿಯೋ ಜೊತೆ ಪಾಲುದಾರಿಕೆ ಬಯಸಿದ್ದೇವೆ. ಇಂದು ಭಾರತದ ನೂರಾರು ಮಿಲಿಯನ್‌ ಮಂದಿಗೆ ಇಂಟರ್‌ನೆಟ್‌ ಸಿಗುವಲ್ಲಿ ಜಿಯೋದ ಪಾತ್ರ ದೊಡ್ಡದು ಎಂದು ಹೇಳಿ ಶ್ಲಾಘಿಸಿದರು.

    ಲಾಕ್‌ಡೌನ್‌ ಮಧ್ಯದಲ್ಲಿ ಜಿಯೋ ಮತ್ತು ಫೇಸ್‌ಬುಕ್‌ ಪಾಲುದಾರಿಕೆ ಹೇಗೆ ನಡೆಯಿತು ಎಂಬುದಕ್ಕೆ ನಮ್ಮದೇ ಒಂದು ಉತ್ತಮ ಉದಾಹರಣೆ. ಭಾರತೀಯ ಎಫ್‌ಡಿಐ ಇದು ಇತಿಹಾಸದಲ್ಲಿಯೇ ಅತಿದೊಡ್ಡ ವಿದೇಶಿ ಹೂಡಿಕೆ ಜಿಯೋಗೆ ಬಂದಿದೆ. ಈ ಮಾತನ್ನು ಹೇಳಲು ನನಗೆ ಯಾವುದೇ ಹಿಂಜರಿಕೆಯಿಲ್ಲ. ಜಿಯೋ ಮತ್ತು ಫೇಸ್‌ಬುಕ್ ನಡುವಿನ ಸಹಭಾಗಿತ್ವವು ಭಾರತ, ಭಾರತೀಯರು ಮತ್ತು ಸಣ್ಣ ಭಾರತೀಯ ವ್ಯವಹಾರಗಳಿಗೆ ಸಹಾಯವಾಗಲಿದೆ ಎಂದು ಮುಕೇಶ್‌ ಅಂಬಾನಿ ಅಭಿಪ್ರಾಯ ವ್ಯಕ್ತಪಡಿಸಿದರು.

    ಏಪ್ರಿಲ್‌ 22 ರಂದು ಫೇಸ್‌ಬುಕ್‌ ಜಿಯೋದಲ್ಲಿ 43.354 ಕೋಟಿ ರೂ. ಹಣವನ್ನು ಹೂಡಿಕೆ ಮಾಡಿ ಶೇ.9.9ರಷ್ಟು ಪಾಲನ್ನು ಪಡೆದುಕೊಂಡಿತ್ತು.

  • ಜಿಯೋಮಾರ್ಟ್ ಹೆಸರು ಬಳಸಿ ವಂಚನೆಗೆ ಯತ್ನ: ರಿಲಯನ್ಸ್ ರಿಟೇಲ್ ಎಚ್ಚರಿಕೆ

    ಜಿಯೋಮಾರ್ಟ್ ಹೆಸರು ಬಳಸಿ ವಂಚನೆಗೆ ಯತ್ನ: ರಿಲಯನ್ಸ್ ರಿಟೇಲ್ ಎಚ್ಚರಿಕೆ

    ಮುಂಬೈ: ನಕಲಿ ವೆಬ್‍ಸೈಟ್ ಗಳ ಮೂಲಕ ಕೆಲ ದುಷ್ಕರ್ಮಿಗಳು ತಾವು ಜಿಯೋಮಾರ್ಟ್ ಭಾಗವೆಂದು ಬಿಂಬಿಸಿಕೊಳ್ಳುರತ್ತಿರುವರಿಗೆ ರಿಲಯನ್ಸ್ ರಿಟೇಲ್ ಎಚ್ಚರಿಕೆ ನೀಡಿದೆ. ಜಿಯೋ ಮಾರ್ಟ್ ಸೇವೆಯ ಫ್ರಾಂಚೈಸಿ ನೀಡುವುದಾಗಿ ಅಮಾಯಕರನ್ನು ದುಷ್ಕರ್ಮಿಗಳು ವಂಚಿಸುತ್ತಿದ್ದು, ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು ಎಂದು ರಿಲಯನ್ಸ್ ರಿಟೇಲ್ ತಿಳಿಸಿದೆ.

    ರಿಲಯನ್ಸ್ ಪ್ಲಾಟ್‍ಫಾರ್ಮ್ ಗಳಲ್ಲಿ ಎಚ್ಚರಿಕೆಯ ನೋಟಿಸ್: ನಾವು ಸಾರ್ವಜನಿಕರ ಗಮನಕ್ಕೆ ತರಲು ಬಯಸುವ ವಿಷಯ ಏನೆಂದರೆ, ಸದ್ಯಕ್ಕೆ ನಾವು ಯಾವುದೇ ಡೀಲರ್ ಶಿಪ್ ಅಥವಾ ಫ್ರಾಂಚೈಸಿ ಮಾದರಿಯಲ್ಲಿ ಕಾರ್ಯ ನಿರ್ವಹಣೆ ಮಾಡುತ್ತಿಲ್ಲ. ಫ್ರಾಂಚೈಸಿ-ಏಜೆಂಟ್ ನೇಮಕ ಮಾಡಿಕೊಂಡು, ಅವರ ಮೂಲಕ ಹೊಸ ಡೀಲರ್ ಅಥವಾ ಫ್ರಾಂಚೈಸಿಯನ್ನು ಯಾವುದೇ ಬಗೆಯಲ್ಲೂ ನೇಮಿಸಿಕೊಳ್ಳುತ್ತಿಲ್ಲ. ಫ್ರಾಂಚೈಸಿ ಆಗಿ ನೇಮಿಸಿಕೊಳ್ಳುವ ಸಲುವಾಗಿ ಯಾವ ಹಣವನ್ನು ಸಹ ಪಡೆಯುತ್ತಿಲ್ಲ ಎಂದು ರಿಲಯನ್ಸ್ ನೋಟಿಸ್ ನಲ್ಲಿ ಮಾಹಿತಿ ನೀಡಿದೆ.

    ಕೆಲ ದುಷ್ಕರ್ಮಿಗಳು ತಾವುಗಳು ಜಿಯೋ ಮಾರ್ಟ್ ಭಾಗವೆಂದು ಪರಿಚಯಿಸಿಕೊಂಡು ಪ್ರಾಂಚೈಸಿ ನೀಡುವುದಾಗಿ ಜನರನ್ನು ವಂಚಿಸಲಾಗುತ್ತಿದೆ. ರಿಲಯನ್ಸ್ ರಿಟೇಲ್ ಕೆಲ ನಕಲಿ ವೆಬ್‍ಸೈಟ್ ವಿಳಾಸಗಳನ್ನು ನೋಟಿಸ್ ನಲ್ಲಿ ನೀಡಿದ್ದು, ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕೆಂದು ತಿಳಿಸಿದೆ.

    1. jmartfranchise.in
    2. jiodealership.com
    3. jiomartfranchises.com
    4. jiomartshop.info
    5. jiomartreliance.com
    6. jiomartfranchiseonline.com
    7. jiomartsfranchises.online
    8. jiomart-franchise.com
    9. jiomartindia.in.net
    10. jiomartfranchise.co

    ಟ್ರೇಡ್ ಮಾರ್ಕ್ ದುರುಪಯೋಗ ಮಾಡಿಕೊಳ್ಳುವವರ ವಿರುದ್ಧ ಕ್ರಿಮಿನಲ್ ಅಥವಾ ಸಿವಿಲ್ ದಾವೆ ಹೂಡಲು ಕಂಪನಿ ಹಿಂದೇಟು ಹಾಕಲ್ಲ. ಈ ರೀತಿಯ ಕಾನೂನು ಬಾಹಿರ ಚಟುವಟಿಕೆಗಳ ಗಮನಕ್ಕೆ ಬಂದರೆ ಕಂಪನಿಯ ಕಾನೂನು ವಿಭಾಗಕ್ಕೆ ಮಾಹಿತಿ ನೀಡುವಂತೆ ಸಾರ್ವಜನಿಕರಲ್ಲಿ ರಿಲಯನ್ಸ್ ರಿಟೇಲ್ ಮನವಿ ಮಾಡಿಕೊಂಡು, ವಿಳಾಸ ಮತ್ತು ಮೇಲ್ ಐಡಿ ನೀಡಿದೆ.