Tag: ಜಿಮ್

  • ನಮಗೆ ನಷ್ಟ ಮಾಡಿಕೊಂಡು, ಇನ್ನೊಬ್ಬರ ಮೇಲೆ ಪ್ರತಿಭಟನೆ ಮಾಡಬಾರದು: ಯಶ್

    ನಮಗೆ ನಷ್ಟ ಮಾಡಿಕೊಂಡು, ಇನ್ನೊಬ್ಬರ ಮೇಲೆ ಪ್ರತಿಭಟನೆ ಮಾಡಬಾರದು: ಯಶ್

    – ಪಾನಿಪುರಿ ಕಿಟ್ಟಿ ಹೊಸ ಪ್ರಯತ್ನಕ್ಕೆ ಶುಭ ಹಾರೈಸಿದ ರಾಕಿಂಗ್ ಸ್ಟಾರ್
    – ‘ರಾಕಿ’ ಸಿನಿಮಾ ಆದಾಗಿನಿಂದ ಜೊತೆಲಿದ್ದಾರೆ

    ಬೆಂಗಳೂರು: ನಮಗೆ ನಷ್ಟ ಮಾಡಿಕೊಂಡು, ಇನ್ನೊಬ್ಬರ ಮೇಲೆ ಪ್ರತಿಭಟನೆ ಮಾಡಬಾರದು ಎಂಬುದು ನನ್ನ ಅಭಿಪ್ರಾಯ ಎಂದು ರಾಕಿಂಗ್ ಸ್ಟಾರ್ ಯಶ್ ಹೇಳಿದರು.

    ಯಶ್ ಸಿನಿಜರ್ನಿಯ ಆರಂಭದಿಂದ ಜೊತೆ ಇರೋ ಸ್ನೇಹಿತ ಮತ್ತು ಜಿಮ್‍ಟ್ರೈನರ್ ಪಾನಿಪುರಿ ಅವರು ಇಂದು ಮಹಾಲಕ್ಷ್ಮಿ ಲೇಔಟ್ ನಲ್ಲಿ ‘ರಿಚ್ಚಿ ಗ್ರಿಲ್ಸ್ ರೆಸ್ಟೋರೆಂಟ್’ ಪ್ರಾರಂಭಿಸಿದ್ದು, ಈ ಪ್ರಯತ್ನಕ್ಕೆ ಯಶ್ ಆಗಮಿಸಿ ಶುಭ ಹಾರೈಸಿದ್ದಾರೆ. ಈ ವೇಳೆ ಮಾಧ್ಯಮಗಳೊಂದಿಗೆ ಡಿ.31 ಬಂದ್ ಕುರಿತು ಮಾತನಾಡಿದರು. ಇದನ್ನೂ ಓದಿ: ನಮ್ಮ ಭೂಮಿ ಹೋದರೂ ಪರವಾಗಿಲ್ಲ, ಮೇಕೆದಾಟು ಯೋಜನೆ ಬೇಗ ಆರಂಭವಾಗಬೇಕು: ಡಿಕೆಶಿ

    ಎಂಇಎಸ್ ಪುಂಡಾಟ ವಿಚಾರ ಕುರಿತು ಮಾತನಾಡಿದ ಅವರು, ಕನ್ನಡಿಗರಾಗಿ ಎಲ್ಲರ ಅಭಿಪ್ರಾಯ ಒಂದೇ ರೀತಿ ಇರುತ್ತೆ. ನೋವಾಗುತ್ತೆ, ಕೋಪ ಬರುತ್ತೆ. ಇನ್ನೊಂದು ಸಾಂಸ್ಕøತಿಗೆ ನೋವು ಮಾಡಬಾರದು. ಇಂತಹ ಘಟನೆ ನಡೆಯಬಾರದು. ತಪ್ಪು, ಇದು ಖಂಡನೀಯ. ನಮ್ಮ ವೃತ್ತಿಯಲ್ಲಿ ನಾಡು, ನುಡಿ ರಕ್ಷಣೆ ಮಾಡುತ್ತೇವೆ. ಬಂದ್ ವಿಚಾರವಾಗಿ ದೊಡ್ಡವರು ಏನ್ ನಿರ್ಧಾರ ಮಾಡ್ತಾರೆ ಮಾಡಲಿ. ನಮಗೆ ನಷ್ಟ ಮಾಡಿಕೊಂಡು, ಇನ್ನೊಬ್ಬರ ಮೇಲೆ ಪ್ರತಿಭಟನೆ ಮಾಡಬಾರದು ಅನ್ನೋದು ನನ್ನ ಅಭಿಪ್ರಾಯ ಎಂದರು.

    ಗೆಳೆಯನ ಬಗ್ಗೆ ಮಾತನಾಡಿದ ಅವರು, ನಮ್ಮ ಈ ಲುಕ್‍ಗೆಲ್ಲಾ ಪಾನಿಪುರಿ ಕಿಟ್ಟಿನೇ ಕಾರಣ. ಪಾನಿಪುರಿ ಬ್ಯುಸಿನೆಸ್ ನಿಂದ ಕಿಟ್ಟಿ ಅವರ ಕೆರಿಯರ್ ಶುರುವಾಗಿತ್ತು. ಇವತ್ತು ಸಾಧನೆ ಮಾಡಿ ಒಂದು ರೆಸ್ಟೋರೆಂಟ್ ಮಾಡಿದ್ದಾರೆ. ಕಿಟ್ಟಿ ‘ರಾಕಿ’ ಸಿನಿಮಾ ಆದಾಗಿನಿಂದ ಜೊತೆಯಲ್ಲಿದ್ದಾರೆ ಎಂದು ಹಿಂದಿನ ದಿನಗಳನ್ನು ಮೆಲುಕು ಹಾಕಿದರು.

    ಈ ವರ್ಷನೂ ಕೊರೊನಾದಿಂದ ಗ್ರ್ಯಾಂಡ್ ಬರ್ತ್ ಡೇ ಬೇಡ ಎಂದ ಯಶ್, ಕೆಜಿಎಫ್ 2 ಟ್ರೇಲರ್ ನನ್ನ ಹುಟ್ಟುಹಬ್ಬಕ್ಕೆ ಬರಲ್ಲ. ಇನ್ನೂ ತಡವಾಗಿ ಬರುತ್ತೆ ಎಂದು ತಿಳಿಸಿದರು. ಇದನ್ನೂ ಓದಿ: ನಾಮಫಲಕದಲ್ಲಿ ಪುನೀತ್ ರಾಜ್‍ಕುಮಾರ್ ಹೆಸರು ಅಳಿಸಿ ವಿಕೃತಿ ಮೆರೆದ ಕಿಡಿಗೇಡಿಗಳು

    ಕಿಟ್ಟಿ ಅವರು ಸ್ಯಾಂಡಲ್‍ವುಡ್ ಹಲವು ಸೆಲೆಬ್ರೆಟಿಗಳಿಗೆ ಜಿಮ್ ಟ್ರೈನರ್ ಆಗಿದ್ದು, ಈ ಕಾರ್ಯಕ್ರಮಕ್ಕೆ ಅಜಯ್ ರಾವ್ ಹಾಗು ನೆನಪಿರಲಿ ಪ್ರೇಮ್ ಸಹ ಭಾಗವಹಿಸಿದ್ದರು.

  • ಜಿಮ್‍ನಲ್ಲಿ ಕ್ರಂಚಸ್, ಸಿಟ್ ಅಪ್ – ಬೆಕ್ಕಿನ ವರ್ಕೌಟ್ ವೀಡಿಯೋ ವೈರಲ್

    ಜಿಮ್‍ನಲ್ಲಿ ಕ್ರಂಚಸ್, ಸಿಟ್ ಅಪ್ – ಬೆಕ್ಕಿನ ವರ್ಕೌಟ್ ವೀಡಿಯೋ ವೈರಲ್

    ನವದೆಹಲಿ: ಜಿಮ್‍ನಲ್ಲಿ ಬೆಕ್ಕು ವರ್ಕೌಟ್ ಮಾಡುತ್ತಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಟ್ರೆಂಡ್ ಕ್ರಿಯೇಟ್ ಮಾಡಿದೆ.

    ಇತ್ತೀಚಿನ ದಿನಗಳಲ್ಲಿ ಜನರಿಗೆ ಆರೋಗ್ಯದ ಮೇಲೆ ಕಾಳಜಿ ಹೆಚ್ಚಾಗಿದ್ದು ಜಿಮ್ ಗೆ ಹೋಗಿ ಬೆವರಿಳಿಸುತ್ತಿದ್ದಾರೆ. ಆದರೆ ಇಲ್ಲೊಂದು ಬೆಕ್ಕು ಜಿಮ್ ಗೆ ಹೋಗಿ ಸಖತ್ ಆಗಿ ವರ್ಕೌಟ್ ಮಾಡಿದೆ. ಈ ವೀಡಿಯೋ ನೋಡಿ ಎಷ್ಟೋ ಜನರು ಸ್ಫೂರ್ತಿಯನ್ನು ತೆಗೆದುಕೊಳ್ಳುತ್ತಿದ್ದೇವೆ ಎಂದು ಕಮೆಂಟ್ ಮಾಡುತ್ತಿದ್ದಾರೆ.

    ಈ ವೀಡಿಯೋದಲ್ಲಿ, ಬೆಕ್ಕು ಹೊಟ್ಟೆಯನ್ನು ಕಡಿಮೆ ಮಾಡಲು ಜಿಮ್‍ನಲ್ಲಿ ಕ್ರಂಚಸ್ ಮತ್ತು ಸಿಟ್-ಅಪ್‍ಗಳನ್ನು ಮಾಡಿದೆ. ಮನುಷ್ಯರಂತೆ ಈ ಬೆಕ್ಕು ಜಿಮ್‍ನಲ್ಲಿ ವರ್ಕ್‍ಬೆಂಚ್‍ನ ಪಕ್ಕದಲ್ಲಿ ಕ್ರಂಚ್‍ಗಳನ್ನು ಮಾಡುತ್ತಿದ್ದು, ಮ್ಯೂಸಿಕ್ ಜೊತೆಗೆ ವರ್ಕೌಟ್ ಮಾಡಿದೆ. ಈ ವೀಡಿಯೋ ಚೀನಾದ ಜಿನಿಂಗ್ ನಗರದಲ್ಲಿ ಈ ಕ್ರೇಜಿ ಘಟನೆ ನಡೆದಿದೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: ವೆಡ್ಡಿಂಗ್ ಕೇಕ್ ಬೀಳಿಸಿ ದಂಪತಿಗೆ ಶಾಕ್ ಕೊಟ್ಟ ಸಪ್ಲೈಯರ್

    ಈ ವೀಡಿಯೋವನ್ನು ಟ್ವಟ್ಟರ್ ನಲ್ಲಿ ‘ಅನು2181’ ಹೆಸರಿನವರು ಟ್ವೀಟ್ ಮಾಡಿದ್ದು, ನಾನು ನನ್ನ ಕನಸಿನಲ್ಲಿ ಹೀಗೆ ಮಾಡುತ್ತೇನೆ ಎಂಬ ರೀತಿ ಬರೆದು ಟ್ವೀಟ್ ಮಾಡಲಾಗಿದೆ. ಪ್ರಸ್ತುತ ಈ ವೀಡಿಯೋ ಸೋಶಿಯಲ್ ವೀಡಿಯೋದಲ್ಲಿ ವೈರಲ್ ಆಗಿದ್ದು, ಜನರಲ್ಲಿ ಕ್ರೇಜ್ ಮೂಡಿಸಿದೆ. ಈ ವೀಡಿಯೋ ನೋಡಿದವರು ನಗುವಿನ ಎಮೋಜಿಗಳು ಮತ್ತು ಕಮೆಂಟ್‍ಗಳನ್ನು ಮಾಡುತ್ತಿದ್ದಾರೆ. ಇದನ್ನು ನೋಡಿದ ನೆಟ್ಟಿಗರು, ಕಿಟ್ಟಿ ಕ್ಯಾಟ್ ಮಸ್ಸೆಲ್ಸ್ ಬಿಲ್ಡ್ ಮಾಡಲು ಬಯಸುತ್ತಿದೆ. ಇದು ತುಂಬಾ ತಮಾಷೆಯಾಗಿದೆ ಎಂದು ಕಮೆಂಟ್ ಮಾಡುತ್ತಿದ್ದಾರೆ.

  • ಮದುವೆಗೂ ಮುನ್ನ ಜಿಮ್‍ನಲ್ಲಿ ವರ್ಕೌಟ್ ಮಾಡಿದ ವಧು – ವೀಡಿಯೋ ವೈರಲ್

    ಮದುವೆಗೂ ಮುನ್ನ ಜಿಮ್‍ನಲ್ಲಿ ವರ್ಕೌಟ್ ಮಾಡಿದ ವಧು – ವೀಡಿಯೋ ವೈರಲ್

    ದುವೆಗೂ ಮುನ್ನ ಜಿಮ್‍ನಲ್ಲಿ ವರ್ಕೌಟ್ ಮಾಡಿ ಬೆವರಿಳಿಸಿರುವ ವಧುವಿನ ವೀಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

    ಪ್ರಸ್ತುತ ಮದುವೆ ಸೀಸನ್ ಆಗಿದ್ದು, ನವೆಂಬರ್, ಡಿಸೆಂಬರ್‍ನಲ್ಲಿ ಹೆಚ್ಚಾಗಿ ಮದುವೆ ಸಮಾರಂಭಗಳು ನಡೆಯುವುದನ್ನು ಕಾಣಬಹುದಾಗಿದೆ. ದೇಶದಲ್ಲಿ ಕೊರೊನಾ ಪ್ರಕರಣಗಳು ಸಹ ಇಳಿಮುಖಗೊಂಡಿದ್ದು, ಜನ ಕೂಡ ಮದುವೆ ಸಮಾರಂಭಗಳಲ್ಲಿ ಪಾಲ್ಗೊಳ್ಳಲು ಶುರು ಮಾಡಿದ್ದಾರೆ. ಇನ್ನೂ ಮದುವೆ ಸಂದರ್ಭದಲ್ಲಿ ನಡೆಯುವ ಕೆಲವು ಘಟನೆಗಳು ಸೋಶಿಯಲ್ ಮೀಡಿಯಾದಲ್ಲಿ ಆಗಾಗ ವೈರಲ್ ಆಗುತ್ತಲೇ ಇರುತ್ತದೆ.

    ಸದ್ಯ ಮದುವೆಗೂ ಮುನ್ನ ವಧು ಜಿಮ್‍ಗೆ ತೆರಳಿ ವರ್ಕೌಟ್ ಮಾಡುತ್ತಾ ಫೋಟೋ ಶೂಟ್ ಮಾಡಿಸಿಕೊಂಡಿರುವ ವೀಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ವೀಡಿಯೋದಲ್ಲಿ ವಧು ಆರೆಂಜ್ ಹಾಗೂ ಕೆಂಪು ಬಣ್ಣದ ಸೀರೆಯುಟ್ಟು, ಮುಖಕ್ಕೆ ಮೇಕಪ್ ಮಾಡಿಕೊಂಡು, ನೆತ್ತಿ ಮೇಲೆ ಬೈ ತಲೆ ಬೊಟ್ಟು ಮತ್ತು ಕೂದಲಿಗೆ ಹೂ ಮುಡಿದುಕೊಂಡು ಡಂಬಲ್ಸ್ ಎತ್ತಿ ವರ್ಕೌಟ್ ಮಾಡುತ್ತಾ ಪೋಸ್ ನೀಡುತ್ತಿದ್ದರೆ, ಕ್ಯಾಮೆರಾ ಮ್ಯಾನ್ ಫೋಟೋ ಕ್ಲಿಕ್ಕಿಸುತ್ತಿರುವುದನ್ನು ಕಾಣಬಹುದಾಗಿದೆ. ಇದನ್ನೂ ಓದಿ: ನಾನು ಅಧಿಕಾರ ಬಯಸಿಲ್ಲ, ಜನ ಸೇವೆಯೇ ಗುರಿ: ಮೋದಿ

     

    View this post on Instagram

     

    A post shared by LBB Delhi NCR (@lbbdelhincr)

    ಈ ವೀಡಿಯೋ ವೈರಲ್ ಆಗುತ್ತಿದ್ದಂತೆ ಇಲ್ಲಿಯವರೆಗೂ 2,300ಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದು, ಅನೇಕ ಕಾಮೆಂಟ್‍ಗಳೂ ಹರಿದುಬಂದಿದೆ. ಇದನ್ನೂ ಓದಿ: ಪಿಎಂ, ಸಿಎಂ ಸ್ಥಾನ ಇರೋದೇ ಜನ ಸೇವೆಗೆ, ಮೋದಿಗೆ ಈಗ ಅದು ಜ್ಞಾನೋದಯವಾಗಿದೆ: ಸಿದ್ದು ವ್ಯಂಗ್ಯ

  • ಜಿಮ್‍ನಲ್ಲಿ ಬೆವರು ಹರಿಸುತ್ತಿರುವ ಮೇಘನಾ ರಾಜ್

    ಜಿಮ್‍ನಲ್ಲಿ ಬೆವರು ಹರಿಸುತ್ತಿರುವ ಮೇಘನಾ ರಾಜ್

    ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ಮೇಘನಾ ರಾಜ್ ಅವರು ಒಂದಲ್ಲಾ ಒಂದು ವಿಚಾರವಾಗಿ ಸೋಶಿಯಲ್ ಮೀಡಿಯಾದಲ್ಲಿ ಸುದ್ದಿಯಾಗುತ್ತಿರುತ್ತಾರೆ. ಆದರೆ ಇದೀಗ ಅವರು ಜಿಮ್‍ಗೆ ಸೇರಿದ್ದು ಬೆವರು ಹರಿಸುತ್ತಿರುವ ಫೋಟೋ ವೈರಲ್ ಅಗುತ್ತಿದೆ.

    ಮೇಘನಾ ರಾಜ್ ಅವರು ತಾಯಿಯಾದ ಬಳಿಕ ಮಗುವಿನ ಆರೈಕೆಯಲ್ಲಿ ತೊಡಗಿಕೊಂಡಿದ್ದರು. ಇದೀಗ ಅವರು ಸಿನಿಮಾವೊಂದರಲ್ಲಿ ನಟಿಸುತ್ತಿದ್ದಾರೆ. ಭಾನುವಾರ ಹೇಗೆ ಆದರ್ಶಪ್ರಾಯವಾಗಿ ಪ್ರಾರಂಭವಾಗುತ್ತದೆ. ಜಿಮ್‍ಗೆ ಪರಿಸರ ಸ್ನೇಹಿಯಾದ ಮ್ಯಾಟ್ ಮತ್ತು ಪಾದದ ರಕ್ಷೆ ಮತ್ತು ಕಲವು ವಸ್ತುಗಳನ್ನು ಸೇರಿಸುವುದು ಎಂದು ಬರೆದುಕೊಂಡು ಜಿಮ್‍ನಲ್ಲಿ ಕುಳಿತು ನೀರು ಕುಡಿಯುತ್ತಿದ್ದ ಫೋಟೋವನ್ನು ಇನ್‍ಸ್ಟಾಗ್ರಾಮ್‍ನಲ್ಲು ಹಂಚಿಕೊಂಡಿದ್ದಾರೆ. ಮೇಘನಾ ರಾಜ್ ಅವರನ್ನು ಜಿಮ್‍ನಲ್ಲಿ ನೋಡಿದ ಅಭಿಮಾನಿಗಳು ಕಾಮೆಂಟ್ ಮಾಡುವ ಮೂಲಕವಾಗಿ ಸಂತೋಷವನ್ನು ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಚಿರು, ಮೇಘನಾ ಪುತ್ರ ಈಗ ‘ರಾಯನ್ ರಾಜ್ ಸರ್ಜಾ’

     

    View this post on Instagram

     

    A post shared by Meghana Raj Sarja (@megsraj)

    ರಾಯನ್ ರಾಜ್ ಸರ್ಜಾನ ಕ್ಯೂಟ್ ಫೋಟೋಗಳನ್ನು ಹಂಚಿಕೊಳ್ಳುತ್ತಾ, ತಾಯ್ತನದ ಕೆಲವು ಸಂತೋಷದ ಕ್ಷಣಗಳನ್ನು ಅಭಿಮಾನಿಗಳ ಜೊತೆಗೆ ಹಂಚಿಕೊಳ್ಳುತ್ತಿದ್ದರು. ಇದೀಗ ಜಿಮ್‍ನಲ್ಲಿ ಬೆವರು ಸುರಿಸುತ್ತಿದ್ದಾರೆ. ಇಷ್ಟು ದಿನ ಮುದ್ದು ಮಗನ ಲಾಲನೆ ಪಾಲನೆಯಲ್ಲಿ ತೊಡಗಿದ್ದ ಮೇಘನಾ ರಾಜ್ ಇದೀಗ ಮತ್ತೆ ಬಣ್ಣ ಹಚ್ಚಲು ಮುಂದಾಗಿದ್ದಾರೆ. ಪಾತ್ರಕ್ಕೆ ತಕ್ಕಂತೆ ಹೊಂದಿಕೊಳ್ಳಲು ಬೆವರು ಹರಿಸುತ್ತಿದ್ದಾರೆ. ಪನ್ನಗಾಭರಣ, ಹೊಸ ಪ್ರತಿಭೆ ನಿರ್ದೇಶಕ ವಿಶಾಲ್, ಸಂಗೀತ ನಿರ್ದೇಶಕ ವಾಸುಕಿ ವೈಭವ್ ಮುಂತಾದವರು ಸೇರಿ ಈ ಚಿತ್ರವನ್ನು ತಯಾರಿಸುತ್ತಿದ್ದಾರೆ. ಮೇಘನಾ ರಾಜ್ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರಕ್ಕಿನ್ನೂ ಶೀರ್ಷಿಕೆ ಫೈನಲ್ ಆಗಿಲ್ಲ. ಮೇಘನಾ ರಾಜ್ ಅವರನ್ನು ತೆರೆ ಮೇಲೆ ನೋಡಲು ಅಭಿಮಾನಿಗಳು ಕಾತುರರಾಗಿ ಕಾದುಕೊಂಡಿದ್ದಾರೆ. ಇದನ್ನೂ ಓದಿ:ಜೂನಿಯರ್ ಚಿರುಗೆ 10 ತಿಂಗಳು ತುಂಬಿರುವ ಸಂಭ್ರಮ- ಮನಸಾರೆ ನಕ್ಕ ಮೇಘನಾ ರಾಜ್

  • ಜಿಮ್ ಮಾಡೋವ್ರಿಗೆ ಅಪ್ಪು ಸಾವು ಬಿಗ್ ಶಾಕ್ – ಜಿಮ್‍ಗೆ ಹೋಗದಂತೆ ಮಕ್ಕಳಿಗೆ ಪೋಷಕರ ಆಕ್ಷೇಪ

    ಜಿಮ್ ಮಾಡೋವ್ರಿಗೆ ಅಪ್ಪು ಸಾವು ಬಿಗ್ ಶಾಕ್ – ಜಿಮ್‍ಗೆ ಹೋಗದಂತೆ ಮಕ್ಕಳಿಗೆ ಪೋಷಕರ ಆಕ್ಷೇಪ

    ಬೆಂಗಳೂರು: ಜಿಮ್ ಮಾಡುವವರಿಗೆ ಅಪ್ಪು ಸಾವು ಬಿಗ್ ಶಾಕ್ ನೀಡಿದ್ದು, ಮಕ್ಕಳಿಗೆ ಜಿಮ್ ಹೋಗದಂತೆ ಪೋಷಕರು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ ಎಂದು ಜಿಮ್ ಮಾಲೀಕರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

    ಕಳೆದ 9 ದಿನಗಳಿಂದ ಜಿಮ್ ಕಡೆಗೆ ಯುವಕರು ಹೆಚ್ಚಾಗಿ ಬರುತ್ತಿಲ್ಲ. ಮೊದಲೆರಡು ದಿನ ಜಿಮ್ ಬಂದ್ ಮಾಡಲಾಗಿತ್ತು. ಈಗ ಜಿಮ್‍ಗೆ ಬರಲು ಜನರು ಹಿಂದೇಟು ಹಾಕುತ್ತಿದ್ದಾರೆ. ಪ್ರತಿ ನಿತ್ಯ 350 ಮಂದಿ ಜಿಮ್ ಮಾಡುತ್ತಿದ್ದರು. ಆದರೀಗ 40 ರಿಂದ 50 ಮಂದಿ ಯುವಕ, ಯುವತಿಯರು ಬಂದು ವ್ಯಾಯಾಮ ಮಾಡುತ್ತಿದ್ದಾರೆ.

    puneeth

    ಈ ಕುರಿತಂತೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಜಿಮ್ ಮಾಲೀಕರೊಬ್ಬರು, ಕಳೆದ 2 ವರ್ಷಗಳ ಹಿಂದೆ ಕೊರೊನಾದಿಂದ ಜನ ಜಿಮ್‍ಗೆ ಬರುತ್ತಿರಲಿಲ್ಲ. ಇದೀಗ ಕೊರೊನಾ ಕಡಿಮೆ ಆಗಿ ಜನ ಜಿಮ್‍ನತ್ತ ಮುಖ ಮಾಡಿದ್ದರು. ಆದರೆ ಅಪ್ಪು ಅವರ ಸಾವಿನ ನಂತರ ತುಂಬಾ ಜನ ಜಿಮ್‍ಗೆ ಬರುವುದನ್ನು ಬಿಟ್ಟಿದ್ದಾರೆ ಎಂದರು. ಇದನ್ನೂ ಓದಿ: ‘ಅಪ್ಪು ಜೊತೆ ರಾಜ್ ಸಮಾಧಿ ನೋಡಲು ಬರ್ತಿದ್ದ ನಾವು ಈಗ ಅವರದ್ದೇ ಸಮಾಧಿ ನೋಡೋಕೆ ಬರುವಂಗಾಯ್ತು’

    puneeth

     ಭಾರ ಎತ್ತುವುದರಿಂದ ಕಾರ್ಡಿಯಾಕ್ ಅಟ್ಯಾಕ್ ಆಗುತ್ತದೆ ಎಂದು ಸುಳ್ಳು ವದಂತಿ ಹಬ್ಬಿಸುತ್ತಿದ್ದಾರೆ. ಆದರೆ ಇದು ಸತ್ಯವಲ್ಲ ಎಂಬುವುದು ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದೆ. ಹಾಗಾಗಿ ಈ ಬಗ್ಗೆ ಸೂಕ್ತ ತನಿಖೆಯಾಗಬೇಕು ಎಂದು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ನಾಳೆ ಪುನೀತ್ 11ನೇ ದಿನದ ಪುಣ್ಯಾರಾಧನೆ – ಅಪ್ಪು ಕುಟುಂಬಸ್ಥರಿಂದ ಭಾರೀ ಸಿದ್ಧತೆ

  • ಪುನೀತ್ ನಿಧನ- ಶೀಘ್ರವೇ ಜಿಮ್, ಫಿಟ್‌ನೆಸ್‌ ಸೆಂಟರ್‌ಗಳಿಗೆ ಗೈಡ್ ಲೈನ್ಸ್

    ಪುನೀತ್ ನಿಧನ- ಶೀಘ್ರವೇ ಜಿಮ್, ಫಿಟ್‌ನೆಸ್‌ ಸೆಂಟರ್‌ಗಳಿಗೆ ಗೈಡ್ ಲೈನ್ಸ್

    ಚಿಕ್ಕಬಳ್ಳಾಪುರ: ನಟ ಪುನೀತ್ ರಾಜ್ ಕುಮಾರ್ ಹೃದಯಾಘಾತದಿಂದ ಅಕಾಲಿಕ ಸಾವನ್ನಪ್ಪಿದ ಹಿನ್ನೆಲೆ ರಾಜ್ಯದಲ್ಲಿ ಜಿಮ್ ಹಾಗೂ ಫಿಟ್‌ನೆಸ್‌ ಸೆಂಟರ್‌ಗಳಿಗೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವ ಮಾರ್ಗಸೂಚಿಗಳ ರಚನೆ ಮಾಡುವ ಚಿಂತನೆ ನಡೆಸಿದ್ದೇವೆ ಎಂದು ಚಿಕ್ಕಬಳ್ಳಾಪುರದಲ್ಲಿ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಹೇಳಿದ್ದಾರೆ.

    ನಟ ಪುನೀತ್ ಸಾವಿನ ನಂತರ ಜಿಮ್ ಮಾಡಬೇಕಾ ಮಾಡಬಾರದ ಎಂಬ ಗೊಂದಲದ ಪ್ರಶ್ನೆ ಉದ್ಭವವಾಗಿದೆ. ಬಹಳ ಜನ ಜಿಮ್ ಮಾಡಬೇಕಾ ಬೇಡ್ವಾ ಎಂಬ ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಒಂದೆರೆಡು ಈ ರೀತಿಯ ಪ್ರಕರಣಗಳಿಂದ ಜಿಮ್ ಮಾಡುವುದೇ ತಪ್ಪು ಎಂಬ ನಿರ್ಧಾರ ಸರಿ ಅಲ್ಲ. ಹೀಗಾಗಿ ಈ ಬಗ್ಗೆ ಸಂಪೂರ್ಣ ಮಾಹಿತಿಯ ಹೆಸರಾಂತ ಹೃದಯ ತಜ್ಞರ ವರದಿ ತಯಾರಿ ಮಾಡಲಿದ್ದೇವೆ. ಜಿಮ್‌ ಹಾಗೂ ಫಿಟ್‌ನೆಸ್‌ ಸೆಂಟರ್‌ಗಳಿಗೆ ಮಾರ್ಗಸೂಚಿಗಳ ರಚನೆ ಮಾಡುತ್ತೇವೆ ಎಂದಿದ್ದಾರೆ. ಇದನ್ನೂ ಓದಿ: ಸಂಪತ್ತು ಭಾರೀ ಏರಿಕೆ – ಪಾಕಿಸ್ತಾನದ GDP ಮೀರಿಸಿದ ಎಲೋನ್ ಮಸ್ಕ್

    PUNEET

    ಜಿಮ್ ಫಿಟ್‍ನೆಸ್ ಸೆಂಟರ್‌ಗಳಲ್ಲಿ ಯಾವ ಸಾಮಾಗ್ರಿಗಳಿರಬೇಕು? ಸಮಸ್ಯೆ ಬಂದಾಗ ಯಾವ ರೀತಿ ನಿಭಾಯಿಸಬೇಕು ಎಂಬ ಪ್ರಥಮ ಚಿಕಿತ್ಸೆಯಿಂದ ಹಿಡಿದು ಆಸ್ಪತ್ರೆ ದಾಖಲಾಗುವವರೆಗೆ ಮುಂಜಾಗ್ರತ ಕ್ರಮಗಳನ್ನು ತೆಗೆದುಕೊಳ್ಳುವ ಬಗ್ಗೆ ಜಿಮ್ ಟ್ರೈನರ್ಸ್‍ಗೆ ಈ ಪರಿಣಿತಿ ಕೊಡುವ ತರಬೇತಿ ನೀಡಲಾಗುವುದು. ನಾನು ಸಹ ಹೆಸರಾಂತ ಹೃದಯ ತಜ್ಞರ ಜೊತೆ ವಿಚಾರ ಮಾಡಿದ್ದೇನೆ. ರಾಜ್ಯದ ಹಲವು ಪ್ರಖ್ಯಾತ ಹೃದಯ ತಜ್ಞರು ಹಾಗೂ ಅಮೇರಿಕಾದ ಖ್ಯಾತ ಹೃದಯ ತಜ್ಞರ ಜೊತೆ ಸಹ ಚರ್ಚೆ ಮಾಡಿದ್ದೇನೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಇಂದಿರಾ ಗಾಂಧಿಗೆ ಶ್ರದ್ಧಾಂಜಲಿ ಸಲ್ಲಿಸಿದ ಮೋದಿ

    ಇದೇ ವೇಳೆ, ಪುನೀತ್ ರಾಜ್‍ಕುಮಾರ್ ನನಗೆ ಬಹಳ ಆತ್ಮೀಯರು. ಇತ್ತೀಚೆಗೆ ಅವರ ಪತ್ನಿ ಅಶ್ವಿನಿ ಹಾಗೂ ಕುಟುಂಬಸ್ಥರು ನಮ್ಮ ಮನೆಗೆ ಬಂದು ಜೊತೆಯಲ್ಲಿ ಊಟ ಮಾಡಿದ್ದೀವಿ. ಆ ನೆನಪು ಹಾಗೆ ಇದೆ. ಅವರ ನೆನಪು ಮರೆಯಾಗಲ್ಲ. ಈ ಘಟನೆ ಇದು ದುರದೃಷ್ಟಕರ ವಿಧಿ ಬರಹ. 16 ವರ್ಷದ ಹಿಂದೆ ನಾನು ಅವರು ಒಂದೇ ಸಲ ಜಿಮ್ ಸ್ಟಾರ್ಟ್ ಮಾಡಿದ್ವಿ. ನಾನು ಅವರು ರಾಘವೇಂದ್ರ ರಾಜ್ ಕುಮಾರ್ ಜಿಮ್ ಮಾಡುತ್ತಿದ್ರು. ಪುನೀತ್ ದೇಹ ದಂಡನೆ ನೋಡಲು ಬಹಳ ಸಂತೋಷ ಆಗುತ್ತಿತ್ತು. ಅವರು ಆರೋಗ್ಯಕ್ಕೆ ಹೆಚ್ಚು ಲಕ್ಷ್ಯ ಕೊಡುತ್ತಿದ್ದರು. ಅವರ ಬಳಿ ಯಾವುದೇ ದುರ್ಗುಣಗಳಿರಲಿಲ್ಲ. ಆದರೂ ಕೂಡ ವಿಧಿ ಬರಹ, ದೇವ್ರು ಒಳ್ಳೆಯವರನ್ನು ಇಷ್ಟಪಡುತ್ತಾರೆ ಎನ್ನುವಂತೆ ಈ ಪ್ರಕರಣ ಪೂರಕವಾಗಿದೆ. ಬಹಳ ಬೇಗ ತಂದೆ ತಾಯಿ ದೇವರ ಬಳಿ ಹೋಗಿದ್ದಾರೆ ಅಂತ ನಾನು ತಿಳಿಕೊಂಡಿದ್ದೀನಿ. ಇಡೀ ರಾಜ್ಯ 2 ದಿನದಿಂದ ಶೋಕಾಚರಣೆಯಲ್ಲಿ ಮುಳುಗಿದೆ. ನನಗೆ ಬಹಳ ನೋವಾಗಿದೆ. ಭಗವಂತ ಅವರ ಕುಟುಂಬಕ್ಕೆ ಆಸರೆಯಾಗಿ ಶಕ್ತಿ ತುಂಬಲಿ. ಮೂವರು ಹೆಣ್ಣು ಮಕ್ಕಳಿಗೆ ಎಲ್ಲಾ ಧೈರ್ಯ ಕೊಟ್ಟು ಒಳ್ಳೆಯದನ್ನು ಮಾಡಲಿ ಅಂತ ಹಾರೈಸುತ್ತೇನೆ ಎಂದು ಹೇಳಿದರು. ಇದನ್ನೂ ಓದಿ: ಸಕ್ಕರೆ ನಾಡಿಗೆ ನೂತನ ಎಸ್‍ಪಿ ಆಗಮನ

  • ಅಪ್ಪು ಸಾವಿನ ಬೆನ್ನಲ್ಲೇ ಎಚ್ಚೆತ್ತ ಕೇರಳ ಸರ್ಕಾರ

    ಅಪ್ಪು ಸಾವಿನ ಬೆನ್ನಲ್ಲೇ ಎಚ್ಚೆತ್ತ ಕೇರಳ ಸರ್ಕಾರ

    ತಿರುವನಂತಪುರಂ: ಸ್ಯಾಂಡಲ್‍ವುಡ್‍ನ ಯುವರತ್ನ, ನಟ ಪುನೀತ್ ರಾಜ್‍ಕುಮಾರ್ ಅವರ ನಿಧನದ ಬೆನ್ನಲ್ಲೇ ಕೇರಳ ಸರ್ಕಾರ ಜಿಮ್‍ಗಳಲ್ಲಿ ಎಇಡಿ ಕಡ್ಡಾಯ ಮಾಡುವಂತೆ ನಿರ್ಧಾರ ತೆಗೆದುಕೊಂಡಿದೆ.

    ಕೇರಳ ಸರ್ಕಾರ ರಾಜ್ಯಾದ್ಯಂತ ಇರುವ ಎಲ್ಲ ಜಿಮ್ನಾಷಿಯಂಗಳು, ಕ್ರೀಡಾಂಗಣಗಳು, ಒಳಾಂಗಣಗಳಲ್ಲಿ ಮೂಲಭೂತ ಪ್ರಥಮ ಚಿಕಿತ್ಸಾ ಕಿಟ್‍ಗಳು ಸೇರಿದಂತೆ ಸ್ವಯಂಚಾಲಿತ ಬಾಹ್ಯ ಡಿಫಿಬ್ರಿಲೇಟರ್(ಎಇಡಿ-ಆಟೋಮೇಟೆಡ್ ಎಕ್ಸ್ಟರ್ನಲ್ ಟಿಫಿಬ್ರಿಲೇಟರ್)ಗಳನ್ನು ಬಳಕೆಗೆ ಸಿದ್ಧವಾಗಿಟ್ಟುಕೊಳ್ಳುವ ಅವಶ್ಯಕತೆಯನ್ನು ಎತ್ತಿಹಿಡಿದಿದೆ. ಇದನ್ನೂ ಓದಿ: ನನ್ನ ಮಗುವನ್ನು ಕಳೆದುಕೊಂಡಿದ್ದೇನೆ – ಬಿಕ್ಕಿ ಬಿಕ್ಕಿ ಅತ್ತ ಶಿವಣ್ಣ

    ನಗರದ ರಾಯಲ್ ಬ್ಯಾಡ್ಮಿಂಟನ್ ಕೋರ್ಟ್‍ನಲ್ಲಿ ಶನಿವಾರ ಪ್ರಥಮ ಚಿಕಿತ್ಸಾ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಾರಿಗೆ ಸಚಿವ ಅಂಟೋನಿ ರಾಜು, ಕೇರಳದ ಕ್ರೀಡಾ ಸಚಿವ ವಿ. ಆಬ್ದುರೆಹಮಾನ್ ಅವರೊಂದಿಗೆ ಚರ್ಚಿಸಿ ರಾಜ್ಯದಲ್ಲಿ ಇದನ್ನು ತುರ್ತಾಗಿ ಜಾರಿಗೆ ತರುವ ಭರವಸೆಯನ್ನು ನೀಡಿದರು. ನಟ ಪುನೀತ್ ಅಕಾಲ ನಿಧನದ ಬಗ್ಗೆ ಬೇಸರ ಹೊರಹಾಕಿದ್ದಾರೆ. ಇದನ್ನೂ ಓದಿ: ಪುನೀತ್ ಸಾವು ದೊಡ್ಡ ಅನ್ಯಾಯ: ಸೃಜನ್ ಲೋಕೇಶ್ 

    ಹೃದಯ ಸ್ತಂಭನದಿಂದ ಮೃತಪಟ್ಟ ನಟ ಪುನೀತ್ ರಾಜ್‍ಕುಮಾರ್ ಅವರ ಅಂತ್ಯಕ್ರಿಯೆ ಈಡಿಗ ಸಂಪ್ರದಾಯದಂತೆ ನೆರವೇರಿದೆ. ಅಭಿಮಾನಿಗಳು ಪ್ರೀತಿಯ ಅಪ್ಪುನನ್ನು ಕಳೆದುಕೊಂಡಿರುವ ದುಃಖದಲ್ಲಿದ್ದಾರೆ.

  • ಜಿಮ್‍ನತ್ತ ಮುಖ ಮಾಡಿದ ಗೀತಾ ಭಾರತಿ ಭಟ್

    ಜಿಮ್‍ನತ್ತ ಮುಖ ಮಾಡಿದ ಗೀತಾ ಭಾರತಿ ಭಟ್

    ಬೆಂಗಳೂರು: ಬಿಗ್‍ಬಾಸ್ ಖ್ಯಾತಿಯ ನಟಿ ಗೀತಾ ಭಾರತಿ ಭಟ್ ಅವರು ಸಾಮಾಜಿಕ ಜಾಲತಾಣದಲ್ಲಿ ಆ್ಯಕ್ಟಿವ್ ಇರುವ ನಟಿ ಮಣಿಯರ ಸಾಲಿನಲ್ಲಿ ಇದ್ದಾರೆ. ಹಾಡಿನ ವೀಡಿಯೋಗಳು ಮೂಲಕ ಸದ್ದು ಮಾಡುತ್ತಿರುತ್ತಾರೆ. ಈಗ ಈ ನಟಿ ದೇಹದ ತೂಕ ಇಳಿಸಿಕೊಳ್ಳಲು ಮುಂದಾಗಿದ್ದಾರೆ.

    ಅತಿಯಾದ ದೇಹದ ತೂಕದಿಂದಲೇ ಸಾಕಷ್ಟು ಅವಕಾಶಗಳನ್ನು ಕಳೆದುಕೊಂಡಿರುವ ಈ ನಟಿ ಈಗ ದೇಹದ ತೂಕ ಇಳಿಸಿಕೊಳ್ಳುವತ್ತ ಗಮನ ಹರಿಸಿದ್ದಾರೆ. ಈ ಕುರಿತಾಗಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ತಾವು ವರ್ಕೌಟ್ ಮಾಡುತ್ತಿರುವ ವೀಡಿಯೋವನ್ನು ಹಂಚಿಕೊಂಡಿದ್ದಾರೆ.  ಒಂದೊಂದು ದಿನವೂ ನಿಮ್ಮದೇ ದಾಖಲೆಯನ್ನು ಒಡೆದು ಹಾಕುತ್ತಿರಿ, ಚೆನ್ನಾಗಿದೆ ಎಂದು ಬಿಗ್‍ಬಾಸ್ ಖ್ಯಾತಿಯ ಕೆ ಪಿ ಅರವಿಂದ್ ಕಾಮೆಂಟ್ ಮಾಡಿದ್ದಾರೆ.

    ಕಳೆದ ಕೆಲವು ದಿನಗಳಿಂದ ಜಿಮ್‍ನತ್ತ ಮುಖ ಮಾಡಿದ್ದಾರೆ. ತಮ್ಮ ವರ್ಕೌಟ್ ವೀಡಿಯೋ ಹಂಚಿಕೊಳ್ಳುತ್ತಿರುವ ನಟಿ ಜಿಮ್‍ನಲ್ಲಿನ ಅನುಭವಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಕಿರಣ್ ಸಾಗರ್ ಎಂಬ ಫಿಟ್ನೆಸ್ ಕೋಚ್ ಬಳಿ ತರಬೇತಿ ಪಡೆಯುತ್ತಿದ್ದಾರೆ. ತಮ್ಮ ದೇಹದ ತೂಕ ಇಳಿಸಿಕೊಳ್ಳಲು ತುಂಬಾ ಶ್ರಮ ಪಟ್ಟು ಬೆವರು ಸುರಿಸುತ್ತಿದ್ದಾರೆ. ಇದನ್ನೂ ಓದಿ:  ಕುಚ್ಚಲಕ್ಕಿ ರೊಟ್ಟಿ ಮಾಡಿದ ರಾಬರ್ಟ್ ನಟಿ ಆಶಾ ಭಟ್

     

    ಕಿರುತೆರೆಯಲ್ಲಿ ನಟಿಸುವ ಮೂಲಕ ಮುನ್ನಲೆಗೆ ಬಂದ ಗೀತಾ ಭಾರತಿ ಭಟ್ ಅವರು ತಮ್ಮದೇ ಆಗಿರುವ ಅಭಿಮಾನಿಗಳ ಬಳಗವನ್ನು ಹೊಂದಿದ್ದಾರೆ. ಬಿಗ್‍ಬಾಸ್ ಮನೆಯಿಂದ ಹೊರ ಬಂದ ನಂತರ ಸಾಕಷ್ಟು ಫೋಟೋಶೂಟ್‍ಗಳಿಗೆ ಪೋಸ್ ಕೊಟ್ಟಿದ್ದಾರೆ. ನಟಿ ತಮನ್ನಾ ಭಾಟಿಯಾ ಜೊತೆಗೆ ತೆರೆ ಹಂಚಿಕೊಳ್ಳಲಿದ್ದಾರೆ. ಗುತುರ್ಂದಾ ಸೀತಾಕಾಲಂ ಸಿನಿಮಾದಲ್ಲಿ ಗೀತಾ ಭಾರತಿ ನಟಿಸುತ್ತಿದ್ದಾರೆ.

  • ಹಲವು ತಿಂಗಳ ಬಳಿಕ ಜಿಮ್‍ನತ್ತ ಕಿಚ್ಚ – ಸುದೀಪ್ ವಕೌರ್ಟ್ ಫೋಟೋ ವೈರಲ್

    ಹಲವು ತಿಂಗಳ ಬಳಿಕ ಜಿಮ್‍ನತ್ತ ಕಿಚ್ಚ – ಸುದೀಪ್ ವಕೌರ್ಟ್ ಫೋಟೋ ವೈರಲ್

    ಬೆಂಗಳೂರು: ಸ್ಯಾಂಡಲ್‍ವುಡ್ ನಟ ಅಭಿನಯ ಕಿಚ್ಚ ಸುದೀಪ್ ಜೀಮ್‍ನಲ್ಲಿ ವರ್ಕೌಟ್ ಮಾಡುತ್ತಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ಹಲವು ದಿನಗಳ ಬಳಿಕ ಮತ್ತೆ ವರ್ಕೌಟ್ ಶುರು ಮಾಡುತ್ತಿರುವ ಕಿಚ್ಚ ಫೋಟೋದಲ್ಲಿ ಸಖತ್ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದಾರೆ.

    ಪೈಲ್ವಾನ್ ಚಿತ್ರದ ಮೂಲಕ ಮೊದಲ ಬಾರಿಗೆ ಪ್ರೇಕ್ಷಕರ ಮುಂದೆ ಸಿಕ್ಸ್ ಪ್ಯಾಕ್‍ನಲ್ಲಿ ಮಿಂಚಿದ್ದ ಸುದೀಪ್, ಅಂದಿನಿಂದ ತಮ್ಮ ಫಿಟ್‍ನೆಸ್‍ನನ್ನು ಕಾಪಾಡಿಕೊಂಡು ಬರುತ್ತಿದ್ದಾರೆ. ಸಮಯ ಸಿಕ್ಕಗಲೆಲ್ಲಾ ಜಿಮ್‍ನಲ್ಲಿ ವರ್ಕೌಟ್ ಮಾಡುತ್ತಿದ್ದ ಸುದೀಪ್ ಕೆಲವು ತಿಂಗಳ ಹಿಂದೆ ಅನಾರೋಗ್ಯ ಕಾರಣ ಜೀಮ್‍ನಿಂದ ದೂರ ಸರಿದಿದ್ದರು. ಇದೀಗ ಸುದೀಪ್ ಮತ್ತೆ ವರ್ಕೌಟ್‍ನತ್ತ ಮುಖ ಮಾಡಿದ್ದಾರೆ. ಇದನ್ನೂ ಓದಿ: ಮಂಡ್ಯದಲ್ಲಿ ಭಾರತಾಂಬೆಯ ದೇಗುಲ- ಮಕ್ಕಳಲ್ಲಿ ದೇಶಾಭಿಮಾನ ತುಂಬುವ ಕೆಲಸ

    sudeep

    ಸುದೀಪ್ ಜೀಮ್‍ನಲ್ಲಿ ವರ್ಕೌಟ್ ಮಾಡುತ್ತಿರುವ ಫೋಟೋವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಫೋಟೋದಲ್ಲಿ ತಮ್ಮ ಬೈಸೆಪ್ಸ್‌ನನ್ನು ತೋರಿಸುತ್ತಾ, ಖಡಕ್ ಲುಕ್ ನೀಡಿದ್ದಾರೆ. ಅಲ್ಲದೇ ಕೊರೊನಾದಿಂದ ಚೇತರಿಸಿಕೊಂಡ ಬಳಿಕ ಕೂಡ ಖಂಡಿತ ಅದು ಹೆಚ್ಚು ತಿಂಗಳ ಕಾಲ ಪರಿಣಾಮ ಬೀರುತ್ತದೆ. ವರ್ಕೌಟ್‍ನಿಂದ ನಾನು ಪಡೆದ ಸಂತೋಷವನ್ನು ಮರಳಿ ಪಡೆಯಲು ಪ್ರಯತ್ನಿಸುತ್ತಿದ್ದೇನೆ. ನನ್ನ ದಿನಚರಿಯನ್ನು ಪುನಾರಂಭಿಸುತ್ತಿರುವುದಕ್ಕೆ ಖುಷಿಯಾಗುತ್ತಿದೆ. ನನ್ನ ಅಗತ್ಯದ ಸಮಯದಲ್ಲಿ ಸಹಾಯ ಮಾಡಿದ ವೈದ್ಯರು, ತರಬೇತುದಾರರಿಗೆ, ಕುಟುಂಬವರಿಗೆ ಮತ್ತು ನನ್ನ ಸ್ನೇಹಿತರಿಗೆ ಧನ್ಯವಾದಗಳು ಎಂದು ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ. ಇದೀಗ ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇದನ್ನೂ ಓದಿ: ಮುಳ್ಳಯ್ಯನಗಿರಿಯಲ್ಲಿ ಜನಜಾತ್ರೆ- ಫುಲ್ ಟ್ರಾಫಿಕ್, ಪೊಲೀಸರ ಜೊತೆ ಪ್ರವಾಸಿಗರ ವಾಗ್ವಾದ

    ಇತ್ತೀಚೆಗಷ್ಟೇ ಸುದೀಪ್ ಅಭಿನಯದ ಬಹುನಿರೀಕ್ಷಿತ ವಿಕ್ರಾಂತ್ ರೋಣ ಸಿನಿಮಾದ ಟೀಸರ್‍ನನ್ನು ಚಿತ್ರತಂಡ ರಿಲೀಸ್ ಮಾಡಿದ್ದು, ಟೀಸರ್‌ನಲ್ಲಿ ಸುದೀಪ್ ಬ್ಲಾಕ್ ಕಲರ್ ಲಾಂಗ್ ಜಾಕೆಟ್ ಹಾಗೂ ಕ್ಯಾಪ್ ತೊಟ್ಟು ಮಳೆಯಲ್ಲಿ ಸಖತ್ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದರು. ಸದ್ಯ ಈ ಟೀಸರ್ ಕಿಚ್ಚ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದು, ಅಭಿಮಾನಿಗಳು ಬಿಗ್ ಸ್ಕ್ರೀನ್‍ನಲ್ಲಿ ಸುದೀಪ್‍ರನ್ನು ನೋಡಲು ಕಾತುರದಿಂದ ಕಾಯುತ್ತಿದ್ದಾರೆ.

  • ಜಿಮ್‍ನಲ್ಲಿ ಮತ್ತೆ ವಿಜಯ್ ಜೊತೆ ಕಾಣಿಸಿಕೊಂಡ ರಶ್ಮಿಕಾ

    ಜಿಮ್‍ನಲ್ಲಿ ಮತ್ತೆ ವಿಜಯ್ ಜೊತೆ ಕಾಣಿಸಿಕೊಂಡ ರಶ್ಮಿಕಾ

    ಹೈದರಾಬಾದ್: ಕೊಡಗಿನ ಕುವರಿ ನಟಿ ರಶ್ಮಿಕಾ ಮಂದಣ್ಣ ಹಾಗೂ ಟಾಲಿವುಡ್ ನಟ ವಿಜಯ್ ದೇವರಕೊಂಡ ಜಿಮ್‍ವೊಂದರಲ್ಲಿ ಒಟ್ಟಿಗೆ ಕಾಣಿಸಿಕೊಂಡಿರುವ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

    ಕಿರಿಕ್ ಪಾರ್ಟಿ ಸಿನಿಮಾದ ಮೂಲಕ ಸ್ಯಾಂಡಲ್‍ವುಡ್‍ಗೆ ಎಂಟ್ರಿ ಕೊಟ್ಟ ನಟಿ ರಶ್ಮಿಕಾ ಮಂದಣ್ಣ ನಂತರ ಮುಟ್ಟಿದ್ದೆಲ್ಲಾ ಚಿನ್ನ ಎಂಬಂತೆ ಅವರು ನಟಿಸಿದ ಸಿನಿಮಾಗಳೆಲ್ಲವೂ ಸಕ್ಸಸ್ ಕಂಡಿತು. ಸದ್ಯ ಟಾಲಿವುಡ್ ಹಾಗೂ ಬಾಲಿವುಡ್‍ನ ಬ್ಯಾಕ್ ಟೂ ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ರಶ್ಮಿಕಾ ಮಂದಣ್ಣ ಇದೀಗ ಸಿನಿಮಾಗಳಿಗಾಗಿ ಹೈದರಾಬಾದ್‍ನಲ್ಲಿದ್ದಾರೆ. ಇದನ್ನೂ ಓದಿ: ವಿಜಯ್ ದೇವರಕೊಂಡ ಬರ್ತ್‍ಡೇಗೆ ರಶ್ಮಿಕಾ ವಿಶ್ – ಫೋಟೋ ವೈರಲ್

    ಮತ್ತೊಂದೆಡೆ ವಿಜಯ್ ದೇವರಕೊಂಡ ಕೂಡ ಲೈಗರ್ ಸಿನಿಮಾದಲ್ಲಿ ನಿರತರಾಗಿದ್ದು, ಈ ಚಿತ್ರದ ಚಿತ್ರೀಕರಣಕ್ಕಾಗಿ ಕೆಲವು ದಿನಗಳ ಹಿಂದೆ ಮುಂಬೈಗೆ ಹಾರಿದ್ದರು. ಅಲ್ಲದೇ ರಶ್ಮಿಕಾ ಕೂಡ ಮುಂಬೈನಲ್ಲಿ ಬಾಲಿವುಡ್‍ನ ಗುಡ್ ಬೈ ಸಿನಿಮಾದ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು. ಹೀಗೆ ಇಬ್ಬರು ಮುಂಬೈನಲ್ಲಿದ್ದಾಗ ಆಗಾಗ ಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ದರು. ಆದರೆ ಇದೀಗ ರಶ್ಮಿಕಾ ಹಾಗೂ ವಿಜಯ್ ಹೈದರಾಬಾದ್‍ನ ಜಿಮ್‍ವೊಂದರಲ್ಲಿ ಕಾಣಿಸಿಕೊಂಡಿದ್ದು, ಒಟ್ಟಿಗೆ ವರ್ಕೌಟ್ ಮಾಡುತ್ತಿದ್ದಾರೆ. ಸದ್ಯ ಜಿಮ್‍ನಲ್ಲಿ ಇವರಿಬ್ಬರು ಕ್ಲಿಕ್ಕಿಸಿಕೊಂಡಿರುವ ಫೋಟೋವನ್ನು ಕುಲದೀಪ್ಸೆತಿ ಎಂಬವರು ಇನ್‍ಸ್ಟಾಗ್ರಾಮ್‍ನಲ್ಲಿ ಶೇರ್ ಮಾಡಿಕೊಂಡಿದ್ದು, ಫೋಟೋ ಫುಲ್ ವೈರಲ್ ಆಗುತ್ತಿದೆ. ಇದನ್ನೂ ಓದಿ:ದೇವರಕೊಂಡ ಜೊತೆಗಿರುವ ಫೇವರಿಟ್ ಫೋಟೋ ಶೇರ್ ಮಾಡಿದ ರಶ್ಮಿಕಾ

     

    View this post on Instagram

     

    A post shared by Kuldep Sethi (@kuldepsethi)

    ಈ ಹಿಂದೆ ಗೀತಾ ಗೋವಿಂದಂ ಸಿನಿಮಾದ ಮೂಲಕ ಫೇಮಸ್ ಆಗಿದ್ದ ಈ ಜೋಡಿ ಮಧ್ಯೆ ಲವ್ವಿ-ಡವ್ವಿ ಶುರುವಾಗಿದೆ ಎಂಬ ಸುದ್ದಿ ಭಾರೀ ಸದ್ದು ಮಾಡಿತ್ತು. ಆದರೆ ನಾವಿಬ್ಬರು ಗುಡ್ ಫ್ರೆಂಡ್ಸ್ ಎಂದು ಹೇಳುವ ಮೂಲಕ ಇಬ್ಬರು ಗಾಸಿಪ್‍ಗಳಿಗೆ ತೆರೆ ಎಳೆದಿದ್ದರು. ಆದರೆ ಇದೀಗ ಇವರಿಬ್ಬರು ಒಟ್ಟಾಗಿ ಕಾಣಿಸಿಕೊಳ್ಳುವ ಮೂಲಕ ಮತ್ತೆ ಇವರಿಬ್ಬರ ಮಧ್ಯೆ ಏನಾದರೂ ನಡೆಯುತ್ತಿದ್ಯಾ ಎಂದು ಅಭಿಮಾನಿಗಳಲ್ಲಿ ಗೊಂದಲ ಶುರುವಾಗಿದೆ.