Tag: ಜಿಮ್

  • ಜಿಮ್ ಮಾಲೀಕನ ಗುಂಡಿಕ್ಕಿ ಹತ್ಯೆ – ಸಿಸಿಟಿವಿ ರೆಕಾರ್ಡ್ ಕಳ್ಳತನ

    ಜಿಮ್ ಮಾಲೀಕನ ಗುಂಡಿಕ್ಕಿ ಹತ್ಯೆ – ಸಿಸಿಟಿವಿ ರೆಕಾರ್ಡ್ ಕಳ್ಳತನ

    ನವದೆಹಲಿ: ಮೂವರು ಅಪರಿಚಿತ ವ್ಯಕ್ತಿಗಳು ಜಿಮ್‌ಗೆ (Gym) ನುಗ್ಗಿ, ಜಿಮ್ ಮಾಲೀಕನನ್ನು (Gym Owner) ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ದೆಹಲಿಯ (Delhi) ಪ್ರೀತ್ ವಿಹಾರ್‌ನಲ್ಲಿ ನಡೆದಿದೆ. ದುಷ್ಕರ್ಮಿಗಳು ಘಟನೆಯ ಸಾಕ್ಷ್ಯ ನಾಶಪಡಿಸಲು ಜಿಮ್‌ನಲ್ಲಿದ್ದ ಸಿಸಿಟಿವಿ (CCTV) ರೆಕಾರ್ಡ್‌ಗಳನ್ನೇ ಕದ್ದುಕೊಂಡು ಹೋಗಿದ್ದಾರೆ.

    ಗುಂಡಿನ ದಾಳಿಗೆ ಬಲಿಯಾದ ಜಿಮ್ ಮಾಲೀಕ ಮಹೇಂದ್ರ ಅಗರ್ವಾಲ್ ಎಂದು ಗುರುತಿಸಲಾಗಿದೆ. ಅವರು ಜಿಮ್ ಜೊತೆಗೆ ಸ್ಪಾಗಳನ್ನೂ ನಡೆಸುತ್ತಿದ್ದು, ಜಿಮ್ ಉಪಕರಣಗಳನ್ನೂ ಮಾರಾಟ ಮಾಡುತ್ತಿದ್ದರು.

    ನಿನ್ನೆ ರಾತ್ರಿ 8 ಗಂಟೆ ವೇಳೆಗೆ ಅಗರ್ವಾಲ್ ಜಿಮ್‌ನಲ್ಲಿದ್ದಾಗ ಮೂವರು ದುಷ್ಕರ್ಮಿಗಳು ಜಿಮ್ ಪ್ರವೇಶಿಸಿದ್ದಾರೆ. ಬಳಿಕ ಗುಂಡಿನ ದಾಳಿ ನಡೆಸಿದ್ದು, ಅಗರ್ವಾಲ್ ಅವರ ತಲೆಗೆ ಗುಂಡು ತಗುಲಿದ್ದರಿಂದ ಅವರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಜೆಡಿಎಸ್ ಮುಖಂಡ ಕಲ್ಲಪ್ಪ ಮಗೆಣ್ಣವರ ಕಾರು ಅಪಘಾತ

    ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾಗುವ ಸಂದರ್ಭ ಜಿಮ್‌ನಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾಗಳ ರೆಕಾರ್ಡಿಂಗ್ ಸಾಧನಗಳನ್ನು ಕದ್ದುಕೊಂಡು ಹೋಗಿದ್ದಾರೆ. ಇದೀಗ ಪೊಲೀಸರಿಗೆ ಆರೋಪಿಗಳನ್ನು ಹಿಡಿಯಲು ಬೇಕಾಗಿದ್ದ ದೊಡ್ಡ ಸಾಕ್ಷ್ಯ ಕೈತಪ್ಪಿ ಹೋಗಿದೆ. ಅವರ ಸುಳಿವನ್ನು ಪಡೆಯಲು ಜಿಮ್ ಸುತ್ತಮುತ್ತಲಿತ ಇತರ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಗಳನ್ನು ಪರಿಶೀಲಿಸುತ್ತಿದ್ದಾರೆ.

    ಫೋರೆನ್ಸಿಕ್ ತಂಡ ಘಟನೆ ನಡೆದ ಸ್ಥಳದಲ್ಲಿ ಪರಿಶೀಲನೆ ನಡೆಸಿದೆ. ಘಟನೆಯಲ್ಲಿ ಶಾಮೀಲಾದವರ ಬಗ್ಗೆ ತಿಳಿದುಕೊಳ್ಳಲು ಜಿಮ್ ಮಾಲೀಕರಿಗೆ ಯಾರೊಂದಿಗಾದರೂ ದ್ವೇಷವಿತ್ತೇ ಎಂದು ಸಂಬಂಧಿಕರಲ್ಲಿ ಕೇಳಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಚಾಲಕನಿಗೆ ಹೃದಯಾಘಾತ – ಬಸ್, ಕಾರು ನಡುವಿನ ಭೀಕರ ಅಪಘಾತದಲ್ಲಿ 9 ಸಾವು, 28 ಮಂದಿಗೆ ಗಾಯ

    Live Tv
    [brid partner=56869869 player=32851 video=960834 autoplay=true]

  • ವ್ಯಾಯಾಮ ಮಾಡುತ್ತಿದ್ದಾಗ ಜಿಮ್‌ನಲ್ಲಿ ಕುಸಿದು ಬಿದ್ದು ನಟ ಸಿದ್ಧಾಂತ್ ನಿಧನ

    ವ್ಯಾಯಾಮ ಮಾಡುತ್ತಿದ್ದಾಗ ಜಿಮ್‌ನಲ್ಲಿ ಕುಸಿದು ಬಿದ್ದು ನಟ ಸಿದ್ಧಾಂತ್ ನಿಧನ

    ಹಿಂದಿ ಕಿರುತೆರೆಯ ನಟ ಸಿದ್ಧಾಂತ್ ವೀರ ಸೂರ್ಯವಂಶಿ ಜಿಮ್ ಮಾಡುವಾಗ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಜಿಮ್ ನಲ್ಲಿ ವರ್ಕೌಟ್ ಮಾಡುವಾಗ ಏಕಾಏಕಿ ಕುಸಿದು ಬಿದ್ದ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೂ, ಯಾವುದೇ ಪ್ರಯೋಜನವಾಗಿಲ್ಲ. ಆಸ್ಪತ್ರೆಗೆ ಬರುವ ದಾರಿಯಲ್ಲೇ ಸಿದ್ಧಾಂತ್ ಪ್ರಾಣ ಹೋಗಿದೆ ಎಂದು ಹೇಳಲಾಗುತ್ತಿದೆ. ಕೇವಲ 46 ವರ್ಷದ ಮಗನನ್ನು ಕಳೆದುಕೊಂಡ ಕುಟುಂಬ ಕಣ್ಣೀರಿಡುತ್ತಿದೆ.

    ಹಿಂದಿ ಕಿರುತೆರೆ ಲೋಕದಲ್ಲಿ ಸಿದ್ಧಾಂತ್ ಸಾಕಷ್ಟು ಹೆಸರು ಮಾಡಿದ್ದಾರೆ. ಹಿಟ್ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಇವ ಪತ್ನಿ ಅಲೇಸಿಯಾ ಕೂಡ ಮಾಡೆಲಿಂಗ್ ಕ್ಷೇತ್ರದಲ್ಲಿ ದೊಡ್ಡ ಹೆಸರು. ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. 2017ರಲ್ಲಿ ಅಲೇಸಿಯಾ ಮತ್ತು ಸಿದ್ದಾಂತ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಕಸೌಟಿ ಜಿಂದಗಿ ಕೇ, ಮಮತಾ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ಸಿದ್ಧಾಂತ್ ನಟಿಸಿದ್ದಾರೆ. ಇದನ್ನೂ ಓದಿ:ಭಾರತಕ್ಕೆ ಬೈ ಹೇಳಿದ ಬೆನ್ನಲ್ಲೇ ಕ್ರಿಸ್‌ಮಸ್‌ಗೆ ಪ್ರಿಯಾಂಕಾ ಚೋಪ್ರಾ ತಯಾರಿ

    ಸಿದ್ಧಾಂತ್ ಸಾವಿನ ವಿಷಯವನ್ನು ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ತಮ್ಮ ಸೋಷಿಯಲ್ ಮೀಡಿಯಾ ಪೇಜ್ ನಲ್ಲಿ ಹಂಚಿಕೊಂಡಿದ್ದು, ಮೃತರಿಗೆ ಶಾಂತಿ ಕೋರಿದ್ದಾರೆ. ಸಿದ್ಧಾಂತನನ್ನು ಕಳೆದುಕೊಂಡ ಕಲಾ ಪ್ರಪಂಚ ಬಡವಾಗಿದೆ ಎಂದು ಬರೆದುಕೊಂಡಿದ್ದಾರೆ. ಜೀಮ್ ನಲ್ಲಿ ಸಾವಿನ ಪ್ರಕರಣಗಳು ಹೆಚ್ಚಾಗುತ್ತಿರುವುದು ಜಿಮ್ ಪ್ರಿಯರಿಗೆ ಕಳವಳವನ್ನುಂಟು ಮಾಡಿದೆ.

    Live Tv
    [brid partner=56869869 player=32851 video=960834 autoplay=true]

  • 23ನೇ ಮಹಡಿಯಿಂದ ಬಿದ್ದು ಮುಂಬೈನ ಖ್ಯಾತ ಬಿಲ್ಡರ್ ಸಾವು

    23ನೇ ಮಹಡಿಯಿಂದ ಬಿದ್ದು ಮುಂಬೈನ ಖ್ಯಾತ ಬಿಲ್ಡರ್ ಸಾವು

    ಮುಂಬೈ: ಖ್ಯಾತ ರಿಯಲ್ ಎಸ್ಟೇಟ್ ಡೆವಲಪರ್ ಪರಸ್ ಪೋರ್ವಾಲ್ (57) ಇಂದು ಮುಂಬೈನ (Mumbai) ಕಟ್ಟಡವೊಂದರ 23ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ.

    ಸಾವಿಗೂ ಮುನ್ನ ಪರಸ್ ಪೋರ್ವಾಲ್ ಅವರು ಬರೆದಿದ್ದ ಡೆತ್ ನೋಟ್ ಜಿಮ್‍ನಲ್ಲಿ ಪತ್ತೆಯಾಗಿದ್ದು, ಅದರಲ್ಲಿ ನನ್ನ ಸಾವಿಗೆ ಯಾರು ಕಾರಣರಲ್ಲ. ಈ ಬಗ್ಗೆ ಯಾರೊಂದಿಗೂ ವಿಚಾರಣೆ ನಡೆಸುವುದು ಬೇಡ ಎಂದು ತಿಳಿಸಿರುವುದಾಗಿ ಪೊಲೀಸರು ಹೇಳಿದ್ದಾರೆ.  ಇದನ್ನೂ ಓದಿ: ದೀಪಾವಳಿಗೆ ಪ್ರಧಾನಿಯಿಂದ ಸಿಕ್ತು ಬಂಪರ್ ಆಫರ್- 75,000 ಯುವಕರಿಗೆ ಉದ್ಯೋಗ

    ಮುಂಬೈನ (Mumbai) ಚಿಂಚ್‍ಪೋಕ್ಲಿ ರೈಲ್ವೆ ನಿಲ್ದಾಣದ (Chinchpokli railway station) ಬಳಿ ಇರುವ ಶಾಂತಿ ಕಮಲ್ ಹೌಸಿಂಗ್ ಸೊಸೈಟಿ (Shanti Kamal housing society) ಕಟ್ಟಡದಲ್ಲಿರುವ ಅವರ ನಿವಾಸದಲ್ಲಿ ಬೆಳಗ್ಗೆ 6 ಗಂಟೆ ಸುಮಾರಿಗೆ ಪರಾಸ್ ಪೋರ್ವಾಲ್ ಜಿಮ್‍ನ ಬಾಲ್ಕನಿಯಿಂದ ಜಿಗಿದು ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ರಾಮ ಮಂದಿರವನ್ನು ಸ್ಫೋಟಿಸಲು PFI ಅಲ್ಲ, ರಾವಣ, ಜಿನ್ನಾ ವಂಶಸ್ಥರಿಂದಲೂ ಸಾಧ್ಯವಿಲ್ಲ: ಈಶ್ವರಪ್ಪ

    ನಂತರ ಈ ಬಗ್ಗೆ ದಾರಿಹೋಕರೊಬ್ಬರು ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳೀಯ ಪೊಲೀಸ್ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ನಾಗರಿಕ ಆಸ್ಪತ್ರೆಗೆ ಕೊಂಡೊಯ್ಯಲಾಗಿದ್ದು, ಈ ಘಟನೆ ಸಂಬಂಧ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಕುರ್ಚಿಯಲ್ಲಿ ಕುಳಿತಿದ್ದ ಜಿಮ್ ಟ್ರೈನರ್ ಕುಸಿದು ಬಿದ್ದು ಸಾವು

    ಕುರ್ಚಿಯಲ್ಲಿ ಕುಳಿತಿದ್ದ ಜಿಮ್ ಟ್ರೈನರ್ ಕುಸಿದು ಬಿದ್ದು ಸಾವು

    ಲಕ್ನೋ: ಜಿಮ್ ಟ್ರೈನರ್‌ಗೆ (Gym Trainer) ಕುರ್ಚಿಯ (Chair) ಮೇಲೆ ಕುಳಿತಿದ್ದಾಗ ಹೃದಯಾಘಾತವಾಗಿ (Heart Attack) ಕುಸಿದು ಬಿದ್ದು ಮೃತಪಟ್ಟ ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್‍ನಲ್ಲಿ ನಡೆದಿದೆ.

    ಆದಿಲ್ (33) ಮೃತ ವ್ಯಕ್ತಿ. ಈತ ಗಾಜಿಯಾಬಾದ್‍ನ ಶಾಲಿಮಾರ್ ಗಾರ್ಡನ್ ಪ್ರದೇಶದಲ್ಲಿ ಜಿಮ್ ಟ್ರೈನರ್ ಆಗಿ ಕೆಲಸ ಮಾಡುತ್ತಿದ್ದ. ಈ ಹಿನ್ನೆಲೆಯಲ್ಲಿ ಪ್ರತಿದಿನ ವ್ಯಾಯಾಮ ಹಾಗೂ ಜಿಮ್‍ನಲ್ಲಿ ಅನೇಕ ಕಸರತ್ತುಗಳನ್ನು ಮಾಡುತ್ತಿದ್ದ. ಆದರೆ ಕಳೆದ ಕೆಲವು ದಿನಗಳಿಂದ ಜ್ವರದಿಂದ ಬಳಲುತ್ತಿದ್ದ. ಆದರೂ ಆದಿಲ್ ಜಿಮ್‍ಗೆ ಹೋಗುವುದನ್ನು ನಿಲ್ಲಿಸಿರಲಿಲ್ಲ. ಇದನ್ನೂ ಓದಿ: ಹಲಾಲ್ ಮುಕ್ತ ದೀಪಾವಳಿ ಅಭಿಯಾನ – ಮೆಕ್ಡೊನಾಲ್ಡ್, ಕೆಎಫ್‌ಸಿ, ಪಿಜ್ಜಾ ಹಟ್‌ಗೆ ಬಾಯ್ಕಾಟ್

    crime

    ಇತ್ತೀಚೆಗಷ್ಟೇ ರಿಯಲ್ ಎಸ್ಟೇಟ್ ವ್ಯವಹಾರಕ್ಕೆ ಮುಂದಾಗಿದ್ದ ಆತ, ಶಾಲಿಮಾರ್ ಗಾರ್ಡನ್‍ನಲ್ಲಿ ಕಚೇರಿ ತೆರೆದಿದ್ದ. ಕಚೇರಿಯಲ್ಲಿ ಕುಳಿತಿದ್ದಾಗಲೇ ಆದಿಲ್‍ಗೆ ಹೃದಯಾಘಾತವಾಗಿತ್ತು. ತಕ್ಷಣ ಆತನ ಸಹಾಯಕರು ಆದಿಲ್‍ನನ್ನು ಸ್ಥಳೀಯ ಆಸ್ಪತ್ರೆಗೆ ಸಾಗಿಸಿದ್ದರೂ, ಮಾರ್ಗಮಧ್ಯೆ ಮೃತಪಟ್ಟಿದ್ದಾನೆ. ಈ ಘಟನೆ ಸಿಸಿಟಿವಿ ದೃಶ್ಯದಲ್ಲಿ ಸೆರೆಯಾಗಿದ್ದು, ಇದೀಗ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಇದನ್ನೂ ಓದಿ:  ದಾಂಡಿಯಾ ನೃತ್ಯ ಮಾಡುವಾಗ ಇದ್ದಕ್ಕಿದ್ದಂತೆ ಕುಸಿದು ಬಿದ್ದು ವ್ಯಕ್ತಿ ಸಾವು

    Live Tv
    [brid partner=56869869 player=32851 video=960834 autoplay=true]

  • ಜಿಮ್‍ಗಳಲ್ಲಿನ ಪ್ರೊಟೀನ್ ಪೌಡರ್‌ನಿಂದ ಸೈಡ್ ಎಫೆಕ್ಟ್- ಸಾಂಪಲ್ಸ್ ಲ್ಯಾಬ್‍ಗೆ ಕೊಟ್ಟ ಆರೋಗ್ಯ ಇಲಾಖೆ

    ಜಿಮ್‍ಗಳಲ್ಲಿನ ಪ್ರೊಟೀನ್ ಪೌಡರ್‌ನಿಂದ ಸೈಡ್ ಎಫೆಕ್ಟ್- ಸಾಂಪಲ್ಸ್ ಲ್ಯಾಬ್‍ಗೆ ಕೊಟ್ಟ ಆರೋಗ್ಯ ಇಲಾಖೆ

    ಬೆಂಗಳೂರು: ಜಿಮ್‍ (Gym) ಗಳಲ್ಲಿ ನೀಡುವ ಪ್ರೋಟಿನ್ ಪೌಡರ್ (Protein Powder) ಬಗ್ಗೆ ದೊಡ್ಡ ಚರ್ಚೆಯಾಗಿತ್ತು. ಪ್ರೊಟೀನ್ ಪೌಡರ್ ಸೈಡ್ ಎಫೆಕ್ಟ್ ನ ಅಸಲಿಯತ್ತಿಗೆ ಆರೋಗ್ಯ ಇಲಾಖೆ ಮುಂದಾಗಿದ್ದು, ಇನ್ನೊಂದು ವಾರದಲ್ಲಿ ಸ್ಯಾಂಪಲ್ ಟೆಸ್ಟಿಂಗ್ ರಿಪೋಟ್ ಔಟ್ ಆಗಲಿದೆ.

    ಜಿಮ್‍ಗಳಲ್ಲಿ ಬಾಡಿ ಬಿಲ್ಡ್ ಗಾಗಿ ನೀಡುವ ಪ್ರೊಟೀನ್ ಪೌಡರ್ ಗಳು ಕಿಡ್ನಿ, ಲಿವರ್ ಸೇರಿದಂತೆ ದೇಹದಲ್ಲಿ ಅಡ್ಡ ಪರಿಣಾಮ ಉಂಟುಮಾಡುವ ಬಗ್ಗೆ ಅಂದು ಸದನದ ಶೂನ್ಯವೇಳೆಯಲ್ಲಿ ಸತೀಶ್ ರೆಡ್ಡಿ (Sathish Reddy) ಪ್ರಸ್ತಾಪಿಸಿದ್ರು. ಇದರ ಬಗ್ಗೆ ಪರಿಶೀಲನೆ ಮಾಡುವ ಭರವಸೆಯನ್ನು ಆರೋಗ್ಯ ಇಲಾಖೆ (Health Department) ನೀಡಿತ್ತು. ಈಗಾಗಲೇ ಆಹಾರ ಸುರಕ್ಷತೆ ಅಧಿಕಾರಿಗಳು ಬೆಂಗಳೂರು ಜಿಮ್‍ಗೆ ತೆರಳಿ ಅಲ್ಲಿ ಬಳಕೆ ಮಾಡುವ ಪ್ರೊಟೀನ್ ಪೌಡರ್ ಸ್ಯಾಂಪಲ್ಸ್ ಸಂಗ್ರಹಿಸಿ ಸೆಂಟ್ರಲ್ ಲ್ಯಾಬ್‍ಗೆ ರವಾನಿಸಲಾಗಿದೆ. ಇನ್ನೊಂದು ವಾರದಲ್ಲಿ ರಿಪೋರ್ಟ್ ಕೂಡ ಬರಬಹುದು ಅಂತಾ ಆರೋಗ್ಯ ಸಚಿವರು ಹೇಳಿದ್ದಾರೆ.

    ಪ್ರೊಟೀನ್ ಪೌಡರ್ ನಲ್ಲಿ ದೇಹಕ್ಕೆ ಮಾರಕವಾಗುವ ಕೆಮಿಕಲ್ (chemical) ಬಳಕೆ ಮಾಡಿದ್ರೆ ಆಹಾರ ಸುರಕ್ಷತೆ ಗುಣಮಟ್ಟ ಕಾಯ್ದುಕೊಳ್ಳದೇ ಇದ್ರೆ ಅಂತಹ ಜಿಮ್‍ಗಳ ವಿರುದ್ಧ ಕ್ರಮ ಕೈಗೊಳ್ಳೋದಾಗಿ ಆರೋಗ್ಯ ಇಲಾಖೆ ಎಚ್ಚರಿಸಿದೆ. ಅನುಮತಿ ರಹಿತ ಕೆಮಿಕಲ್ ಪ್ರೊಟೀನ್ ಪೌಡರ್ ಬಳಕೆ ಮಾಡುವ ಜಿಮ್‍ಗಳನ್ನು ಅನಧಿಕೃತ ಜಿಮ್ ಅಂತಾನೇ ಘೋಷಣೆ ಮಾಡಿ ಕ್ರಮ ಕೈಗೊಳ್ಳುತ್ತೇವೆ ಅಂದಿದ್ದಾರೆ. ಇದನ್ನೂ ಓದಿ: ಚುನಾವಣೆಗೆ ಸ್ಪರ್ಧಿಸುವಂತೆ ಮುತಾಲಿಕ್‍ಗೆ ಮನವಿ: ಉಡುಪಿಯಲ್ಲಿ ಕಾದಿದ್ಯಾ ಗುರು-ಶಿಷ್ಯನ ಹಣಾಹಣಿ?

    ಇತ್ತೀಚೆಗೆ ಯುವಕರಲ್ಲಿ ಹೃದಯಾಘಾತ (Heart Attack) ದ ಬಗ್ಗೆಯೂ ಆರೋಗ್ಯ ಇಲಾಖೆ ಕಳವಳ ವ್ಯಕ್ತಪಡಿಸಿದೆ. ಜಿಮ್‍ಗೆ ಹೋಗೋದು ವ್ಯಾಯಾಮ ಮಾಡೋದು ದೇಹಕ್ಕೆ ಒಳ್ಳೆಯದು. ಆದರೆ ಆಹಾರ ಗುಣಮಟ್ಟ ಕಾಯ್ದುಕೊಳ್ಳದೇ ಪ್ರೊಟೀನ್ ಪೌಡರ್‍ಗಳ ಬಳಕೆ ಮಾತ್ರ ತೀರಾ ಡೇಂಜರ್, ಇದಕ್ಕೆ ಆರೋಗ್ಯ ಇಲಾಖೆ ಮೂಗುದಾರ ಹಾಕುತ್ತಾ ಅಂತಾ ಕಾದು ನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]

  • ಖ್ಯಾತ ಹಾಸ್ಯ ನಟ ರಾಜು ಶ್ರೀವಾಸ್ತವ ನಿಧನ: ಅಭಿಮಾನಿಗಳ ಕಂಬನಿ

    ಖ್ಯಾತ ಹಾಸ್ಯ ನಟ ರಾಜು ಶ್ರೀವಾಸ್ತವ ನಿಧನ: ಅಭಿಮಾನಿಗಳ ಕಂಬನಿ

    ಬಾಲಿವುಡ್ ಖ್ಯಾತ ಹಾಸ್ಯ ನಟ ರಾಜು ಶ್ರೀವಾಸ್ತವ (Raju Srivastav) ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅನಾರೋಗ್ಯದ ಕಾರಣದಿಂದಾಗಿ ದೆಹಲಿಯ (Delhi) ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿತ್ತು. ಕಳೆದ ಒಂದು ತಿಂಗಳಿಂದಲೂ ಅವರು ಕೋಮಾದಲ್ಲಿ ಇದ್ದರು. ಕೊನೆಗೂ ಚಿಕಿತ್ಸೆ ಫಲಕಾರಿಯಾಗದೆ ಅವರು ಇಹಲೋಕ (death) ತ್ಯಜಿಸಿದ್ದಾರೆ. ಆಗಸ್ಟ್ 10ರಂದು ಅವರನ್ನು ದೆಹಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

    ಜಿಮ್ ನಲ್ಲಿ (Gym) ವ್ಯಾಯಾಮ ಮಾಡುತ್ತಿರುವಾಗ ರಾಜು ಕೆಳಗೆ ಬಿದ್ದು ಪ್ರಜ್ಞೆ ತಪ್ಪಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿಂದ ಈವರೆಗೂ ಅವರಿಗೆ ಪ್ರಜ್ಞೆ ಮರಳಿ ಬರಲೇ ಇಲ್ಲ. ವೈದ್ಯರು ತಮ್ಮೆಲ್ಲ ಪ್ರಯತ್ನಗಳನ್ನು ಮಾಡಿದರೂ, ರಾಜು ಅವರನ್ನು ಉಳಿಸಿಕೊಳ್ಳಲು ಆಗಲಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಇದನ್ನೂ ಓದಿ:ಯೂಟ್ಯೂಬ್‌ನಲ್ಲಿ ಹೊಸ ಮೈಲಿಗಲ್ಲು ಸೃಷ್ಟಿಸಿದ ಉಪ್ಪಿ- ಕಿಚ್ಚ ನಟನೆಯ ‘ಕಬ್ಜ’ ಟೀಸರ್

    ರಾಜು ಹಲವಾರು ವರ್ಷಗಳಿಂದ ಬಾಲಿವುಡ್ ನಲ್ಲಿ ನಟರಾಗಿ ಗುರುತಿಸಿಕೊಂಡಿದ್ದಾರೆ. ಅಲ್ಲದೇ, ಗ್ರೇಟ್ ಇಂಡಿಯನ್ ಲಾಫ್ಟರ್ ಚಾಲೇಂಜ್’ ಹಾಸ್ಯ ಕಾರ್ಯಕ್ರಮದ ಮೂಲಕ ಅಪಾರ ಅಭಿಮಾನಿಗಳನ್ನು ಇವರು ಹೊಂದಿದ್ದರು. ಅಲ್ಲದೇ, ಬಾಜಿಗರ್, ಬಾಂಬೆ ಟು ಗೋವಾ, ಮೈನೆ ಪ್ಯಾರ್ ಕಿಯಾ ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ಹಾಸ್ಯ ನಟರಾಗಿಯೂ ಕಾಣಿಸಿಕೊಂಡಿದ್ದಾರೆ. ರಾಜು ನಿಧನಕ್ಕೆ ಬಾಲಿವುಡ್ (Bollywood) ಕಂಬನಿ ಮಿಡಿದಿದೆ.

    Live Tv
    [brid partner=56869869 player=32851 video=960834 autoplay=true]

  • ಜಿಮ್‍ನಲ್ಲಿದ್ದ ಎಎಪಿ ಮುಖಂಡನನ್ನು ಗುಂಡಿಕ್ಕಿ ಕೊಂದ ದುಷ್ಕರ್ಮಿಗಳು

    ಜಿಮ್‍ನಲ್ಲಿದ್ದ ಎಎಪಿ ಮುಖಂಡನನ್ನು ಗುಂಡಿಕ್ಕಿ ಕೊಂದ ದುಷ್ಕರ್ಮಿಗಳು

    ಚಂಡೀಗಢ: ಪಂಜಾಬ್‍ನ ಮಲೇರ್‍ಕೋಟ್ಲಾ ಜಿಲ್ಲೆಯ ಜಿಮ್‍ನಲ್ಲಿ ಆಮ್ ಆದ್ಮಿ ಪಕ್ಷದ ಮುನ್ಸಿಪಲ್ ಕೌನ್ಸಿಲರ್‌ನನ್ನು ದುಷ್ಕರ್ಮಿಗಳು ಗುಂಡಿಕ್ಕಿ ಕೊಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಮೊಹಮ್ಮದ್ ಅಕ್ಬರ್ ಮೃತ ಮುನ್ಸಿಪಲ್ ಕೌನ್ಸಿಲರ್‌. ಇಬ್ಬರು ದುಷ್ಕರ್ಮಿಗಳು ಜಿಮ್‍ಗೆ ಬಂದು ಅಕ್ಬರ್‌ಗೆ ಗುಂಡು ಹಾರಿಸಿ ಅಲ್ಲಿಂದ ಪರಾರಿಯಾಗಿದ್ದಾರೆ. ಒಂದು ಗುಂಡು ಅಕ್ಬರ್‌ಗೆ ತಗುಲಿದ್ದು, ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಎಂದು ಮಲೇರ್‍ಕೋಟ್ಲಾ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಅವನೀತ್ ಕೌರ್ ಸಿಧು ಹೇಳಿದ್ದಾರೆ. ಇದನ್ನೂ ಓದಿ:  ದ.ಕನ್ನಡದಲ್ಲಿ ಪೊಲೀಸ್ ಬಂದೋಬಸ್ತ್ ಕಡಿಮೆ ಇದ್ದು, ಹೆಚ್ಚಿಸಬೇಕು: ಡಿಜಿಪಿ ಪ್ರವೀಣ್ ಸೂದ್ 

    ವೈಯಕ್ತಿಕ ದ್ವೇಷದ ಪರಿಣಾಮ ಈ ಘಟನೆ ಸಂಭವಿಸಿದೆ ಎಂದು ತೋರುತ್ತಿದೆ. ಈ ಕುರಿತು ಹೆಚ್ಚಿನ ತನಿಖೆ ನಡೆಸುತ್ತಿದ್ದೇವೆ. ಈ ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ವೀಡಿಯೋದಲ್ಲಿ, ಅಕ್ಬರ್ ಜಿಮ್‍ನೊಳಗೆ ಅಪರಿಚಿತ ವ್ಯಕ್ತಿಯ ಕಡೆಗೆ ಹೋಗುತ್ತಿರುವುದು ಕಂಡುಬಂದಿದೆ. ಅಕ್ಬರ್ ಹತ್ತಿರ ಬರುತ್ತಿದ್ದಂತೆಯೇ ದುಷ್ಕರ್ಮಿ ಬಂದೂಕು ತೆಗೆದು ಆತನ ಮೇಲೆ ಗುಂಡು ಹಾರಿಸಿದ್ದಾನೆ ಎಂದು ವಿವರಿಸಿದ್ದಾರೆ.

    ಹತ್ಯೆಯಲ್ಲಿ ಭಾಗಿಯಾಗಿದ್ದ ಇಬ್ಬರು ಸ್ಥಳದಿಂದ ಪರಾರಿಯಾಗಿದ್ದು, ಅವರನ್ನು ಪತ್ತೆ ಹಚ್ಚುವ ಪ್ರಯತ್ನ ಮುಂದುವರಿದಿದೆ ಎಂದರು. ಇದನ್ನೂ ಓದಿ: ಜ್ಞಾನವಾಪಿ ಪ್ರಕರಣದಲ್ಲಿ ಮಸೀದಿ ಪರ ವಾದ ಮಂಡಿಸಿದ್ದ ವಕೀಲ ಹೃದಯಾಘಾತದಿಂದ ಸಾವು

    ಪ್ರಸ್ತುತ ಪಂಜಾಬ್‍ನಲ್ಲಿ ಆಮ್ ಆದ್ಮಿ ಪಕ್ಷ(ಎಎಪಿ) ಪಕ್ಷ ಅಧಿಕಾರದಲ್ಲಿದ್ದು, ಕೊಲೆ ಕುರಿತು ಬಾರಿ ಚರ್ಚೆಯಾಗುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ಜಿಮ್‍ನಲ್ಲಿ ಮಹಿಳೆ ಸಾವಿನ ಕಾರಣ ಬಯಲು – ಮೆದುಳಿನ ರಕ್ತನಾಳ ಛಿದ್ರಗೊಂಡು ಸಾವು

    ಜಿಮ್‍ನಲ್ಲಿ ಮಹಿಳೆ ಸಾವಿನ ಕಾರಣ ಬಯಲು – ಮೆದುಳಿನ ರಕ್ತನಾಳ ಛಿದ್ರಗೊಂಡು ಸಾವು

    ಬೆಂಗಳೂರು: ಜಿಮ್ ಮಾಡುತ್ತಲೇ ಕುಸಿದು ಬಿದ್ದು ಸಾವನ್ನಪ್ಪಿದ್ದ ಮಹಿಳೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಮರಣೋತ್ತರ ಪರೀಕ್ಷೆಯಲ್ಲಿ ಆಕೆಯ ಸಾವಿಗೆ ಕಾರಣ ಬಯಲಾಗಿದೆ.

    ಮೃತ ದುರ್ದೈವಿ ವಿನಯಾ ಕುಮಾರಿ(47) ಮೆದುಳಿನ ರಕ್ತನಾಳ ಸಿಡಿದು ಕೋಮಾ ತಲುಪಿ ಸಾವನ್ನಪ್ಪಿದ್ದಾರೆ ಅಂತ ಮರಣೋತ್ತರ ಪರೀಕ್ಷೆಯಲ್ಲಿ ಬೆಳಕಿಗೆ ಬಂದಿದೆ. ಮಲ್ಲೇಶ್ ಪಾಳ್ಯದಲ್ಲಿ ಕಳೆದ ಮಾರ್ಚ್ 27ರಂದು ಜಿಮ್ ಮಾಡುತ್ತಲೇ ಕುಸಿದು ಬಿದ್ದು ವಿನಯಾ ಸಾವನ್ನಪ್ಪಿದ್ರು. ಇದನ್ನೂ ಓದಿ: ಪೋಸ್ಟ್ ವೆಡ್ಡಿಂಗ್ ಫೋಟೋಶೂಟ್ ವೇಳೆ ಅವಘಡ- ವರ ಸಾವು, ವಧು ಗಂಭೀರ

    ವಿನಯಾ ಅವರಿಗೆ ಮದುವೆ ಆಗಿರಲಿಲ್ಲ. ಜಿಮ್, ಡ್ಯಾನ್ಸ್ ಮಾಡ್ಕೊಂಡಿದ್ದರು. ಮಾರ್ಚ್ 27ರಂದು ಬೆಳಗ್ಗೆ 8 ಗಂಟೆ ಸುಮಾರಿಗೆ ಮಲ್ಲೇಶ್ ಪಾಳ್ಯದಲ್ಲಿರುವ ಜಿಮ್‍ನಲ್ಲಿ ವರ್ಕೌಟ್ ಮಾಡುತ್ತಿದ್ದರು. ಈ ವೇಳೆ ಕುಸಿದು ಬಿದ್ದಿದ್ದರು. ತಕ್ಷಣ ಅಲ್ಲಿದ್ದ ಸ್ಥಳೀಯರು ವಿನಯಾ ಅವರನ್ನು ಆಸ್ಪತ್ರೆ ಸಾಗಿಸಿದ್ದಾರೆ. ಆದರೆ ಅವರು ಮಾರ್ಗ ಮಧ್ಯೆಯೇ ಸಾವನ್ನಪ್ಪಿದ್ದರು.

    ಘಟನೆ ಸಂಬಂಧಿಸಿ ಬೈಯ್ಯಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದನ್ನೂ ಓದಿ: ಗಿಫ್ಟ್ ಕೊಟ್ಟಿದ್ದ ಮೊಬೈಲ್ ವಾಪಸ್ ಕೊಡದ ಪ್ರೇಯಸಿಯ ಕತ್ತು ಸೀಳಿ ಕೊಲೆ

  • ಜಿಮ್‍ನಲ್ಲಿ ವರ್ಕೌಟ್ ಮಾಡುತ್ತಲೇ ಕುಸಿದು ಮಹಿಳೆ ಸಾವು

    ಜಿಮ್‍ನಲ್ಲಿ ವರ್ಕೌಟ್ ಮಾಡುತ್ತಲೇ ಕುಸಿದು ಮಹಿಳೆ ಸಾವು

    ಬೆಂಗಳೂರು: ಜಿಮ್‍ನಲ್ಲಿ ವರ್ಕೌಟ್‍ ಮಾಡುತ್ತಿರುವಾಗ ಕುಸಿದು ಬಿದ್ದು ಮಹಿಳೆ ಸಾವನ್ನಪ್ಪಿರುವ ಘಟನೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಶನಿವಾರ ನಡೆದಿದೆ.

    ವಿನಯಾಕುಮಾರಿ(44) ಜಿಮ್‍ನಲ್ಲಿ ಕುಸಿದು ಸಾವನ್ನಪ್ಪಿದ ಮಹಿಳೆ. ವಿನಯಾಕುಮಾರಿಗೆ ಮದುವೆ ಆಗಿರಲಿಲ್ಲ. ಜಿಮ್, ಡ್ಯಾನ್ಸ್ ಮಾಡ್ಕೊಂಡಿದ್ದರು. ಅವರು ಇಂದು ಬೆಳಗ್ಗೆ 8 ಗಂಟೆ ಸುಮಾರಿಗೆ ಮಲ್ಲೇಶ್ ಪಾಳ್ಯದಲ್ಲಿರುವ ಜಿಮ್‍ನಲ್ಲಿ ವರ್ಕೌಟ್ ಮಾಡುತ್ತಿದ್ದರು. ಈ ವೇಳೆ ಕುಸಿದು ಬಿದ್ದಿದ್ದಾರೆ. ಇದನ್ನೂ ಓದಿ: ಜಟ್ಟಿ ನೆಲಕ್ಕೆ ಬಿದ್ದರೂ ಮೀಸೆ ಮಣ್ಣಾಗಿಲ್ಲ, ಸಿದ್ದರಾಮಯ್ಯ ಧೋರಣೆ- ಬಿಜೆಪಿ ತಿರುಗೇಟು

    ತಕ್ಷಣ ಅಲ್ಲಿದ್ದ ಸ್ಥಳೀಯರು ವಿನಯಾಕುಮಾರಿ ಅವರನ್ನು ಆಸ್ಪತ್ರೆ ಸಾಗಿಸಿದ್ದಾರೆ. ಆದರೆ ಅವರು ಮಾರ್ಗ ಮಧ್ಯೆಯೇ ಸಾವನ್ನಪ್ಪಿದ್ದಾರೆ. ಘಟನೆ ಸಂಬಂಧಿಸಿ ಬೈಯ್ಯಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಟಿಪ್ಪು ಹೆಸರಿನಲ್ಲಿ ನಿತ್ಯ ಸಲಾಂ ಮಂಗಳಾರತಿ ಬೇಡ – ಹೆಸರು ಬದಲಾಯಿಸುವಂತೆ ಕೊಲ್ಲೂರು ದೇವಾಲಯಕ್ಕೆ ಮನವಿ

  • ಜಿಮ್ ಮಾಡುವ ವೇಳೆ ನಟ ಶ್ರೀಮುರಳಿಗೆ ಬೆನ್ನುನೋವು : ಫ್ಯಾನ್ಸ್ ಗಾಬರಿ ಪಡಬೇಡಿ ಎಂದ ರೋರಿಂಗ್ ಸ್ಟಾರ್

    ಜಿಮ್ ಮಾಡುವ ವೇಳೆ ನಟ ಶ್ರೀಮುರಳಿಗೆ ಬೆನ್ನುನೋವು : ಫ್ಯಾನ್ಸ್ ಗಾಬರಿ ಪಡಬೇಡಿ ಎಂದ ರೋರಿಂಗ್ ಸ್ಟಾರ್

    ಸ್ಯಾಂಡಲ್ ವುಡ್ ರೋರಿಂಗ್ ಸ್ಟಾರ್ ಶ್ರೀಮುರಳಿ ಅವರಿಗೆ ಜಿಮ್ ಮಾಡುವ ವೇಳೆ ಬೆನ್ನು ನೋವು ಕಾಣಿಸಿಕೊಂಡಿದ್ದು, ಕೆಲವು ದಿನಗಳ ಕಾಲ ವಿಶ್ರಾಂತಿ ಪಡೆಯಲೇಬೇಕು ಎಂದು ವೈದ್ಯರು ಸೂಚಿಸಿದ್ದಾರೆ. ಫ್ಯಾಮಿಲಿ ಡಾಕ್ಟರ್ ಸಲಹೆ ಮೇರೆಗೆ ಶ್ರೀಮುರಳಿ ಈಗ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಇದನ್ನೂ ಓದಿ : ಕೆಜಿಎಫ್ 2 ಟ್ರೈಲರ್ ಬಿಡುಗಡೆಗೆ ಹೋಸ್ಟ್ ಮಾಡಲಿದ್ದಾರೆ ಕರಣ್ ಜೋಹಾರ್

    ಪ್ರತಿನಿತ್ಯ ಜೀಮ್ ಮಾಡುವ ಸ್ಯಾಂಡಲ್ ವುಡ್ ಕಲಾವಿದರಲ್ಲಿ ಶ್ರೀಮುರಳಿ  ಕೂಡ ಒಬ್ಬರು. ನಿತ್ಯವೂ ಅವರು ಜಿಮ್ ನಲ್ಲಿ ಕಸರತ್ತು ಮಾಡುತ್ತಾರೆ. ಅದರಲ್ಲೂ ಹೊಂಬಾಳೆ ಪ್ರೊಡಕ್ಷನ್ ನಲ್ಲಿ ಮೂಡಿ ಬರುತ್ತಿರುವ ‘ಬಘೀರ’ ಚಿತ್ರಕ್ಕಾಗಿ ದೇಹ ದಂಡಿಸಲೇಬೇಕಿದೆ. ಈ ಸಿನಿಮಾದ ತಯಾರಿಗಾಗಿ ಜಿಮ್ ನಲ್ಲಿ ಮತ್ತಷ್ಟು ಹೊತ್ತು ಕಳೆಯುತ್ತಿದ್ದಾರೆ. ಈ ಸಂದರ್ಭದಲ್ಲೇ ಅವರಿಗೆ ಬೆನ್ನು ನೋವು ಕಾಣಿಸಿಕೊಂಡಿದೆ. ಇದನ್ನೂ ಓದಿ : RRR- ಸ್ಟಾರ್ ವಾರ್ ಬೆಂಕಿಗೆ ತಣ್ಣನೆಯ ನೀರು ಸುರಿದ ನಿರ್ದೇಶಕ ರಾಜಮೌಳಿ

    ನೆನ್ನೆಯಷ್ಟೇ ‘ನಟ ಭಯಂಕರ’ ಸಿನಿಮಾದ ಆಡಿಯೋ ಬಿಡುಗಡೆ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಶ್ರೀಮುರಳಿ ಬಂದಿದ್ದರೂ, ನಡೆದಾಡೋಕೆ ಕಷ್ಟ ಪಡುತ್ತಿದ್ದರು. ಆಗಲೇ ಅವರಿಗೆ ಬ್ಯಾಕ್ ಪೇನ್ ಆಗಿರುವ ವಿಚಾರ ಬೆಳಕಿಗೆ ಬಂತು. “ಜಿಮ್ ಮಾಡುವ ವೇಳೆ ಬೆನ್ನು ನೋವು ಕಾಣಿಸಿಕೊಂಡಿತು. ಅದಾದ ಎರಡು ದಿನಗಳ ಬಳಿಕವೂ ಬ್ಯಾಕ್ ಪೇನ್ ಕಡಿಮೆಯಾಗಿಲ್ಲ. ನೋವು ತೀವ್ರಗೊಂಡ ಹಿನ್ನೆಲೆಯಲ್ಲಿ ಕುಟುಂಬದ ವೈದ್ಯರನ್ನು ಸಂಪರ್ಕಿಸಿದೆ. ಓಡಾಡಲು ಸ್ವಲ್ಪ ತೊಂದರೆ ಆಗುತ್ತಿದೆ. ಹಾಗಾಗಿ ವೈದ್ಯರ ಸಲಹೆ ಮೇರೆಗೆ ವಿಶ್ರಾಂತಿ ಪಡೆಯುತ್ತಿದ್ದೇನೆ. ಫ್ಯಾನ್ಸ್ ಗಾಬರಿ ಪಡುವ ಅಗತ್ಯವಿಲ್ಲ” ಎಂದರು ಶ್ರೀಮುರಳಿ. ಇದನ್ನೂ ಓದಿ : RRR ಸಿನೆಮಾ ನೋಡಲು ಬಾಗಿಲು ಮುರಿದು ಚಿತ್ರಮಂದಿರಕ್ಕೆ ನುಗ್ಗಿದ ಪ್ರೇಕ್ಷಕರು

    ಶ್ರೀಮುರಳಿ ಅವರು, ಸದ್ಯ ಬಘೀರ ಸಿನಿಮಾ ತಯಾರಿಯಲ್ಲಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಇಷ್ಟೊತ್ತಿಗೆ ಬಘೀರ ಸಿನಿಮಾಗೆ ಚಾಲನೆ ಸಿಗಬೇಕಿತ್ತು. ಈಗ ನೋಡಿದರೆ ಶ್ರೀಮುರಳಿ ಅವರು ನೋವು ಮಾಡಿಕೊಂಡಿದ್ದಾರೆ. ಅವರು ವಿಶ್ರಾಂತಿ ಪಡೆದು,ಎಲ್ಲವೂ ಓಕೆ ಅಂದ ಬಳಿಕ ಸಿನಿಮಾ ಚಿತ್ರೀಕರಣ ಶುರುವಾಗಲಿದೆ. ಬಘೀರ ತುಂಬಾ ನಿರೀಕ್ಷೆ ಹುಟ್ಟಿಸಿದೆ. ಕಾರಣ,ಹೊಂಬಾಳೆ ಪ್ರೊಡಕ್ಷನ್ಸ್ ನಿರ್ಮಾಣದ ಸಿನಿಮಾ. ಡಾ.ಸೂರಿ ನಿರ್ದೇಶಿಸುತ್ತಿದ್ದಾರೆ.