Tag: ಜಿಮ್ ರವಿ

  • ಬೆಂಗಳೂರಿನಲ್ಲೊಂದು ನೋ ಬಿಲ್ ಹೋಟೆಲ್ – ಹೊಟ್ಟೆತುಂಬಾ ತಿನ್ನಿ, ಇಷ್ಟ ಆದರೆ ಹುಂಡಿಗೆ ಹಣ ಹಾಕಿ

    ಬೆಂಗಳೂರಿನಲ್ಲೊಂದು ನೋ ಬಿಲ್ ಹೋಟೆಲ್ – ಹೊಟ್ಟೆತುಂಬಾ ತಿನ್ನಿ, ಇಷ್ಟ ಆದರೆ ಹುಂಡಿಗೆ ಹಣ ಹಾಕಿ

    ಬೆಂಗಳೂರು: ಇಂದಿನ ದುಬಾರಿ ದುನಿಯಾದಲ್ಲಿ ದುಡ್ಡಿಲ್ಲದೆ ಊಟ ಸಿಗುವುದಿಲ್ಲ. ಅದರಲ್ಲೂ ಹೋಟೆಲ್ (Hotel) ಊಟದ ದರ ದುಬಾರಿಯಾಗಿದೆ. ಇದರ ನಡುವೆ ಬೆಂಗಳೂರಿನಲ್ಲಿ (Bengaluru) ನೋ ಬಿಲ್ (No Bill) ಹೋಟೆಲ್‌ವೊಂದು ಆರಂಭವಾಗಿದೆ.

    ಬೆಂಗಳೂರಿನಲ್ಲಿ ಸಾವಿರಾರು ಮಂದಿ ಒಂದು ಹೊತ್ತಿನ ಊಟಕ್ಕೂ ಪರದಾಡುತ್ತಾರೆ. ಅನ್ನದಾನ ಶ್ರೇಷ್ಠದಾನ ಎನ್ನುವಂತೆ ಅನೇಕ ಜನ ನಾನಾ ರೀತಿಯಲ್ಲಿ ಹೊಟ್ಟೆ ತುಂಬಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಬೆಂಗಳೂರಿನ ನಾಗರಬಾವಿಯಲ್ಲಿ (Nagar Bavi) ವಿಶಿಷ್ಟ ಹೋಟೆಲ್‌ವೊಂದನ್ನು ತೆರೆಯಲಾಗಿದ್ದು, ಇಲ್ಲಿ ಹೊಟ್ಟೆತುಂಬಾ ಊಟ ಮಾಡಿದರೂ ಬಿಲ್ ಪಾವತಿಸುವ ಅಗತ್ಯವಿಲ್ಲ.‌ ಇದನ್ನೂ ಓದಿ: ಹೆಂಡತಿ ಹೆಸರಿನಲ್ಲಿ ಬಿಜೆಪಿ ರಾಜಕಾರಣ ಮಾಡಲ್ಲ: ಕಟೀಲ್

    ನಾಗರಬಾವಿಯ 11ನೇ ಬ್ಲಾಕ್, ಎರಡನೇ ಹಂತದಲ್ಲಿರುವ ‘ನಮ್ಮನೆ ಊಟ’ ಪಕ್ಕದಲ್ಲಿ ‘ಅನ್ನಪೂರ್ಣೇಶ್ವರಿ ಹೋಟೆಲ್’ (Annapoorneshwari Hotel) ತೆರೆಯಲಾಗಿದ್ದು, ನಮಗೆ ಊಟ ತೃಪ್ತಿಯಾಗಿದ್ದರೆ ಅಲ್ಲಿರುವ ಹುಂಡಿಯಲ್ಲಿ ನಮ್ಮ ಕೈಯಲ್ಲಿ ಸಾಧ್ಯವಾದಷ್ಟು ಹಣವನ್ನು ಹಾಕಬಹುದಾಗಿದೆ. ಹಣ ಹಾಕಲೇಬೇಕೆಂಬ ಷರತ್ತಿಲ್ಲ. ಈ ಹೋಟೆಲ್ ಅನ್ನು ಬಿಗ್ ಬಾಸ್ (Bigg Boss) ಖ್ಯಾತಿಯ ಜಿಮ್ ರವಿ (Gym Ravi) ಉದ್ಘಾಟನೆ ಮಾಡಿದ್ದಾರೆ. ಈ ವೇಳೆ ಮಾತನಾಡಿದ ಅವರು, ಎಲ್ಲಾ ಸೆಲೆಬ್ರಿಟಿಗಳನ್ನು ಈ ಹೋಟೆಲ್‌ಗೆ ಕರೆಯುತ್ತೇವೆ ಎಂದರು. ಇದನ್ನೂ ಓದಿ: ‘ಆಸ್ಕರ್’ ಪ್ರಶಸ್ತಿಗಾಗಿ 80 ಕೋಟಿ ಖರ್ಚು ಮಾಡಿದ ರಾಜಮೌಳಿ : ತೆಲುಗು ನಿರ್ದೇಶಕ ಕಿಡಿಕಿಡಿ

    ಡಿ.ಹೆಚ್.ಕಿರಣ್ ಗೌಡ (D.H.Kiran Gowda) ಹಾಗೂ ಸ್ನೇಹಿತರ ತಂಡ ಸೇರಿಕೊಂಡು ಈ ಹೋಟೆಲನ್ನು ಆರಂಭಿಸಿದ್ದಾರೆ. ಎಷ್ಟು ಬೇಕಾದರೂ ಊಟ ಮಾಡಿ, ತೃಪ್ತಿಯಾದರೆ ಹುಂಡಿಗೆ ಹಣ ಹಾಕಬಹುದು ಎಂಬ ಸಿಂಗಾಪುರದ (Singapore) ರೆಸ್ಟೋರೆಂಟ್‌ನಿಂದ ಸ್ಪೂರ್ತಿಯನ್ನು ಪಡೆದು ಈ ಹೋಟೆಲನ್ನು ತೆರೆಯಲಾಗಿದೆ.

    ಇಲ್ಲಿ ಪ್ರತಿನಿತ್ಯ ನಾಟಿ ಸ್ಟೈಲ್ ಮುದ್ದೆ, ವೆಜ್ ಊಟವನ್ನು ಮಧ್ಯಾಹ್ನ 12 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಉಣಬಡಿಸಲಾಗುತ್ತದೆ. ನಾಟಿ ಸ್ಟೈಲ್ ಮುದ್ದೆ, ಚಪಾತಿ, ಪಲ್ಯ, ಸಾರು, ಅನ್ನ, ಸ್ವೀಟ್ ಈ ಹೋಟೆಲಿನ ಮೆನು. ಊಟದ ನಂತರ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಇಲ್ಲಿ ಪ್ರತಿದಿನ ನೂರಾರು ಕೂಲಿ ಕಾರ್ಮಿಕರು, ಬಡವರು ಊಟ ಮಾಡುತ್ತಿದ್ದಾರೆ. ಈ ರೀತಿಯ ಹೋಟೆಲ್‌ಗಳನ್ನು ನಾನಾ ಕಡೆ ತೆರೆಯುವ ಪ್ಲಾನ್ ಇದೆ ಎಂದು ಹೋಟೆಲ್ ಮಾಲಿಕ ಕಿರಣ್ ಗೌಡ ತಿಳಿಸಿದ್ದಾರೆ. ಇವರ ಈ ಉತ್ತಮ ಕಾರ್ಯಕ್ಕೆ ಅನೇಕ ಜನ ಸ್ವಯಂಪ್ರೇರಿತರಾಗಿ ಸಹಾಯ ಹಸ್ತ ಚಾಚುತ್ತಿದ್ದಾರೆ. ಇದನ್ನೂ ಓದಿ: Exclusive- ವೀಕೆಂಡ್ ವಿತ್ ರಮೇಶ್ 5 : ಮೊದಲ ಅತಿಥಿ ರಿಷಬ್ ಶೆಟ್ಟಿ ಅಲ್ಲ, ಖ್ಯಾತ ಡಾನ್ಸರ್

  • ಜಿಮ್ ರವಿ ಸಿನಿಮಾ ರಂಗದಲ್ಲೂ ಗೆದ್ದರು : ಪುರುಷೋತ್ತಮನಿಗೆ 50ರ ಸಂಭ್ರಮ

    ಜಿಮ್ ರವಿ ಸಿನಿಮಾ ರಂಗದಲ್ಲೂ ಗೆದ್ದರು : ಪುರುಷೋತ್ತಮನಿಗೆ 50ರ ಸಂಭ್ರಮ

    ಜಿಮ್ ರವಿ ನಾಯಕನಾಗಿ ನಟಿಸಿರುವ ಪುರುಷೋತ್ತಮ ಸಿನಿಮಾ ಐವತ್ತು ದಿನಗಳನ್ನು ಪೂರೈಸಿದೆ. ಈ ದಿನಗಳಲ್ಲಿ ಸಿನಿಮಾವೊಂದು 50 ದಿನ ಪೂರೈಸುವುದು ಸಾಮಾನ್ಯ ಮಾತೇನಲ್ಲ. ಅದಕ್ಕಾಗಿ ರವಿ ಕಾರ್ಯಕ್ರಮವನ್ನೂ ಆಯೋಜನೆ ಮಾಡಿ, ಚಿತ್ರಕ್ಕೆ ಶ್ರಮಿಸಿದವರನ್ನು ನೆನಪಿಸಿಕೊಂಡರು. ಅಲ್ಲದೇ, ಇತ್ತೀಚೆಗಷ್ಟೇ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಿಂದ ನೂತನವಾಗಿ ಆಯ್ಕೆಯಾದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳಿಗೆ ಸನ್ಮಾನ ಮಾಡಿದರು. ಈ ಸಂದರ್ಭದಲ್ಲಿ ಅಧ್ಯಕ್ಷರಾದ ಬಾ.ಮ.ಹರೀಶ್ ಮಾತನಾಡಿ ಜಿಮ್ ರವಿರವರು ಬಹುಕಾಲದ ಗೆಳಯ. ಪರದೆ ಮೇಲೆ ಹೀರೋ ಅಲ್ಲದೆ ಯಾವಗಲೂ ಬೆಂಗಳೂರಿಗೆ ಹೀರೋ. ರವಿ ಅಂತ ಕರೆಯುವಾಗ ಗೊತ್ತಿಲ್ಲದಯೇ ಜಿಮ್ ಅಂತ ಸೇರಿಸಿಕೊಳ್ಳುತ್ತೇವೆ. ಅಂತಹ ಹೊಗಳಿಕೆಯನ್ನು ಸಂಪಾದಿಸಿದ್ದಾರೆ. ಮುಂದೆ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದರು.

    ಸಂಗೀತ ಸಂಯೋಜಕ ಶ್ರೀಧರ್‌ಸಂಭ್ರಮ್ ಗಾಯಕರುಗಳಿಂದ ಗೀತೆಯ ಸಾಲುಗಳನ್ನು ಹಾಡಿಸಿದರು. ಕತೆ ನನ್ನದಲ್ಲ ಅದಕ್ಕಾಗಿ ಇಲ್ಲಿಯವರೆಗೂ ಹೆಚ್ಚು ಮಾತನಾಡಿಲ್ಲ. ಯುವಕರು ಡ್ರಗ್ಸ್ ತೆಗೆದುಕೊಂಡರೆ ಏನೇನು ಅನಾಹುತಗಳು ಆಗುತ್ತದೆ ಎಂಬುದನ್ನು ಹೇಳಲಾಗಿದೆ ಎಂದು ಕಡಿಮೆ ಸಮಯ ತೆಗೆದುಕೊಂಡುದ್ದು ನಿರ್ದೇಶಕ ಎಸ್.ವಿ.ಅಮರ್‌ನಾಥ್. ನಾಯಕಿ ಅಪೂರ್ವ, ಸಂಕಲನಕಾರ ಅರ್ಜುನ್‌ಕಿಟ್ಟು, ಛಾಯಾಗ್ರಾಹಕ ಕುಮಾರ್ ಸೇರಿದಂತೆ ಸಣ್ಣ ಮಟ್ಟದಿಂದ ಕೆಲಸ ಮಾಡಿದವರೆಲ್ಲನ್ನು ಗುರುತಿಸಿ ಅವರುಗಳನ್ನು ವೇದಿಕೆಗೆ ಆಹ್ವಾನಿಸಿ ಫಲಕಗಳನ್ನು ನೀಡಿದ್ದು ರವಿರವರ ದೊಡ್ಡಗುಣಕ್ಕೆ ಸಾಕ್ಷಿಯಾಗಿತ್ತು.  ಇದನ್ನೂ ಓದಿ:ದಿಗಂತ್ ಗೆ ಮೂರು ಗಂಟೆಗಳ ಶಸ್ತ್ರ ಚಿಕಿತ್ಸೆ : ಅಬ್ಸರ್ವೇಶನ್ ನಲ್ಲಿ ನಟ

    ಗೀತಾ ಎನ್ನುವವರು ಚಿತ್ರವನ್ನು 19 ಬಾರಿ ವೀಕ್ಷಣೆ ಮಾಡಿದ್ದರಿಂದ ಅವರಿಗೆ ’ಅತ್ಯುತ್ತಮ ಪ್ರೇಕ್ಷಕಿ’ ಎಂದು ಸನ್ಮಾನ ಮಾಡಲಾಯಿತು. ಕಾಗಿನೆಲೆ ಮಠದ ಸ್ವಾಮಿಗಳು ಶುಭ ಹಾರೈಕೆಯ ಪತ್ರವನ್ನು ಕಳುಹಿಸಿಕೊಟ್ಟಿದ್ದರು. ಮೂರು ಗಂಟೆಗಳ ಕಾಲ ನಡೆದ ಕಾರ್ಯಕ್ರಮದಲ್ಲಿ ಎಲ್ಲರೂ ಹೊರಗೆ ಹೋಗದಂತೆ ಸಮಾರಂಭಕ್ಕೆ ಕಳೆ ತಂದುಕೊಟ್ಟರು.

    Live Tv

  • ಹೀರೋ ಆದ ಅಂತಾರಾಷ್ಟ್ರೀಯ ಬಾಡಿ ಬಿಲ್ಡರ್

    ಹೀರೋ ಆದ ಅಂತಾರಾಷ್ಟ್ರೀಯ ಬಾಡಿ ಬಿಲ್ಡರ್

    ರಾಜ್ಯ, ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಬಾಡಿ ಬಿಲ್ಡಿಂಗ್‌ನಲ್ಲಿ ಹಲವಾರು ಪ್ರಶಸ್ತಿಗಳನ್ನು ಪಡೆದುಕೊಂಡಿರುವ ಮತ್ತು ರಾಜ್ಯ ಕಂಡಂತ ಉತ್ತಮ ಕ್ರೀಡಾ ಪಟು, ರಾಜ್ಯ ಪ್ರಶಸ್ತಿ ವಿಜೇತ (ಏಕಲವ್ಯ) ಜಿಮ್ ರವಿ ಪ್ರಥಮಬಾರಿ ನಾಯಕನಾಗಿ ಮತ್ತು ರವಿಸ್ ಜಿಮ್ ಬ್ಯಾನರ್‌ನಡಿಯಲ್ಲಿ ನಿರ್ಮಾಣ ಮಾಡಿರುವ ’ಪುರುಷೋತ್ತಮ’ ಸೆನ್ಸಾರ್ ಆಗಿದ್ದು ಯುಎ ಪ್ರಮಾಣ ಪತ್ರ ಪಡೆದುಕೊಂಡಿದೆ. ಇದನ್ನೂ ಓದಿ : ವಿಜಯ್ ರಾಘವೇಂದ್ರ ನಟನೆಯ ಚಿತ್ರಕ್ಕೆ ರಾಘು ಟೈಟಲ್

    ‘ಚಿತ್ರವನ್ನು ಕಂಡಂತ ನಾನಾ ವಲಯದವರು ಸಾಮಾಜಿಕ ಕಳಕಳಿಯ ಚಿತ್ರವೆಂದು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಶೋಷಣೆಗೊಳಗಾದಂಥ ಹೆಣ್ಣನ್ನು ಗಂಡನಾದವನು ಸಾಥ್ ಕೊಟ್ಟು ಯಾವ ರೀತಿ ಕಾಪಾಡುತ್ತಾನೆ. ಗಂಡನ ಜವಾಬ್ದಾರಿ ಎಷ್ಟು ಸೂಕ್ಷ್ಮ ಇರುತ್ತದೆ ಎನ್ನುವುದು ಸಿನಿಮಾದ ಎಳೆಯಾಗಿದೆ’ ಎಂದಿದ್ದಾರೆ ಜಿಮ್ ರವಿ. ಇದನ್ನೂ ಓದಿ: ನಿರ್ದೇಶಕ ರಾಜಮೌಳಿ ಮೇಲೆ ಆಲಿಯಾ ಭಟ್ ಕೋಪ – ಬೇರೆ ರೀತಿಯಲ್ಲೇ ಸಿಟ್ಟು ತೋರಿಸಿ ಆಲಿಯಾ

    ಎಪ್ರಿಲ್ ಎರಡನೇ ವಾರದಲ್ಲಿ ಟ್ರೇಲರ್ ಬಿಡುಗಡೆ ಕಾರ್ಯಕ್ರಮ ನಡೆಯಲಿದೆ. ನಾಯಕ ಲಾಯರ್ ಪಾತ್ರ ಆಗಿರುವುದರಿಂದ ವಕೀಲ ಬಾಂದವರು ಕುತೂಹಲದಿಂದ ಕಾಯುತ್ತಿದ್ದಾರೆ. ’ಸಂಸಾರ ಅಂದ್ಮಲೆ’ ಹಾಡು ಇಲ್ಲಿಯವರೆಗೂ ಮೂರು ಲಕ್ಷಕ್ಕೂ ಅಧಿಕ ಜನರು ವೀಕ್ಷಿಸಿರುವುದು, ಹಾಡಿನಲ್ಲಿ ಯಾರೂ ಊಹಿಸದ ನೃತ್ಯ ಮಾಡಿರುವುದು ಪ್ಲಸ್ ಪಾಯಿಂಟ್ ಆಗಿದೆ. ಇದನ್ನೂ ಓದಿ: ‘Lockup’ ಶೋಗೆ ಬರುವಂತೆ ವಿಲ್ ಸ್ಮಿತ್‍ಗೆ ಆಫರ್ ಕೊಟ್ಟ ಕ್ವಿನ್ ಕಂಗನಾ

    ’ದಿಲ್ದಾರ’ ಮತ್ತು ’ನಾನು ನಮ್ಮುಡ್ಗಿ ಖರ್ಚ್‌ಗೊಂದು ಮಾಫಿಯ’ ಚಿತ್ರಗಳನ್ನು ನಿರ್ದೆಶನ ಮಾಡಿರುವ ಅಮರ್‌ನಾಥ್.ಎಸ್.ವಿ ಚಿತ್ರಕತೆ, ಸಂಭಾಷಣೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ. ಅಪೂರ್ವ ನಾಯಕಿ. ಇವರೊಂದಿಗೆ ಎ.ವಿ.ಹರೀಶ್, ಮೈಸೂರುಪಭು ಸೇರಿದಂತೆ ಹಲವು ಖ್ಯಾತ ಕಲಾವಿದರುಗಳು ಅಭಿನಯಿಸಿದ್ದಾರೆ. ಆನಂದ್ ಪ್ರಿಯಾ, ಪ್ರಮೋದ್‌ಮರವಂತೆ ಹಾಗೂ ನಿರ್ದೇಶಕರು ರಚಿಸಿರುವ ಸಾಹಿತ್ಯಕ್ಕೆ ಶ್ರೀಧರ್‌ಸಂಭ್ರಮ್ ಸಂಗೀತ ಸಂಯೋಜಿಸಿದ್ದಾರೆ.

  • ಸೆನ್ಸಾರ್ ಅಂಗಳದಲ್ಲಿರುವ ‘ಪುರುಷೋತ್ತಮ’ ಚಿತ್ರತಂಡದಿಂದ ಸದ್ಯದಲ್ಲೇ ಟ್ರೇಲರ್ ಉಡುಗೊರೆ

    ಸೆನ್ಸಾರ್ ಅಂಗಳದಲ್ಲಿರುವ ‘ಪುರುಷೋತ್ತಮ’ ಚಿತ್ರತಂಡದಿಂದ ಸದ್ಯದಲ್ಲೇ ಟ್ರೇಲರ್ ಉಡುಗೊರೆ

    ಅಂತರಾಷ್ಟ್ರೀಯ ಬಾಡಿ ಬಿಲ್ಡರ್ ಜಿಮ್ ರವಿ ಯಾರಿಗೆ ಗೊತ್ತಿಲ್ಲ ಹೇಳಿ. ರಾಜ್ಯ, ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಹಲವಾರು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿರುವ ಜಿಮ್ ರವಿ ನೂರಾರು ಸಿನಿಮಾಗಳಲ್ಲಿ, ಬೇರೆ ಭಾಷೆಗಳಲ್ಲಿ ಪೋಷಕ ನಟನಾಗಿ ಅಭಿನಯಿಸಿದ್ದಾರೆ. ಕಿರುತೆರೆಯ ಬಿಗ್ ರಿಯಾಲಿಟಿ ಶೋ ಬಿಗ್ ಬಾಸ್ ಅಂಗಳಕ್ಕೂ ಎಂಟ್ರಿ ಕೊಟ್ಟು ಬಂದಿರುವ ಇವರು ತಮ್ಮದೇ ಆದ ಜಿಮ್ ಕೂಡ ನಿರ್ಮಾಣ ಮಾಡಿ ಹಲವು ಪ್ರತಿಭೆಗಳನ್ನು ಪ್ರೋತ್ಸಾಹಿಸುತ್ತಿದ್ದಾರೆ. ಇಷ್ಟೆಲ್ಲ ಖ್ಯಾತಿಗಳನ್ನು ತಮ್ಮದಾಗಿಸಿಕೊಂಡಿರುವ ರವಿ, ಹೊಸ ಸಾಹಸವೊಂದಕ್ಕೆ ಮುಂದಾಗಿದ್ದು ಈಗಾಗಲೇ ಜಗಜ್ಜಾಹೀರು ಆಗಿದೆ. ಹೌದು, ಪುರುಷೋತ್ತಮ ಸಿನಿಮಾ ಮೂಲಕ ತೆರೆ ಮೇಲೆ ನಾಯಕ ನಟನಾಗಿ ಮಿಂಚಲು ಸಕಲ ಸಜ್ಜಾಗಿದ್ದಾರೆ ರವಿ. ಸದ್ಯದ ಅಪ್ಡೇಟ್ ವಿಷ್ಯ ಏನಪ್ಪಾ ಅಂದ್ರೆ ಪುರುಷೋತ್ತಮ ಸಿನಿಮಾ ಸೆನ್ಸಾರ್ ಅಂಗಳಕ್ಕೆ ಕಾಲಿಟ್ಟಿರೋದು.

    ರವಿಸ್ ಜಿಮ್ ಬ್ಯಾನರ್ ನಿರ್ಮಾಣದಲ್ಲಿ ವಿಜಯ್ ರಾಮೆಗೌಡ ಭೂಕನಕೆರೆ ಪ್ರೆಸೆಂಟ್ ಮಾಡುತ್ತಿರುವ ಚಿತ್ರ ಪುರುಷೋತ್ತಮ. ಚಿತ್ರೀಕರಣ ಕಂಪ್ಲೀಟ್ ಮಾಡಿ ಪೋಸ್ಟ್ ಪ್ರೊಡಕ್ಷನ್ ಕೆಲಸವನ್ನೂ ಕಂಪ್ಲೀಟ್ ಮಾಡಿರುವ ಪುರುಷೋತ್ತಮ ಸಿನಿಮಾ ಸೆನ್ಸಾರ್ ಅಂಗಳದಲ್ಲಿದೆ. ಅಮರನಾಥ್ ಎಸ್ ವಿ ಈ ಚಿತ್ರದ ಸೂತ್ರದಾರ. ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿರುವ ಇವರಿಗೆ ದಿಲ್ದಾರ್, ನಾನು ನಮ್ ಹುಡ್ಗಿ ಖರ್ಚಿಗೊಂದು ಮಾಫಿಯ ನಿರ್ದೇಶನದ ನಂತರ ಮೂರನೇ ಸಿನಿಮಾ. ಇದನ್ನೂ ಓದಿ: ಅದಿತಿ ಪ್ರಭುದೇವ ಮದುವೆ ಆಗಲಿರುವ ಹುಡುಗ ಯಾರು ಗೊತ್ತಾ?

    ಸೆಟ್ಟೇರಿದ ದಿನದಿಂದಲೂ ಸುದ್ದಿಯಲ್ಲಿರುವ ಈ ಚಿತ್ರದ ಹಾಡುಗಳು ಸೂಪರ್ ಹಿಟ್ ಆಗಿವೆ. ಒಟ್ಟು ನಾಲ್ಕು ಹಾಡುಗಳ ಪೈಕಿ ಮೂರು ಹಾಡುಗಳು ಬಿಡುಗಡೆಯಾಗಿ ಎಲ್ಲರ ಮೆಚ್ಚುಗೆ ಗಳಿಸಿವೆ. ಅದರಲ್ಲೂ ಸಂಸಾರ ಅಂದ್ಮೇಲೆ ಹಾಡು ಸಖತ್ ರೆಸ್ಪಾನ್ಸ್ ಗಿಟ್ಟಿಸಿಕೊಂಡಿದೆ. ಸಮಾಜಕ್ಕೆ ಉತ್ತಮ ಸಂದೇಶವಿರುವ ಈ ಸಿನಿಮಾದಲ್ಲಿ ಕುತೂಹಲ ಭರಿತ ಚಿತ್ರಕಥೆ ಹಾಗೂ ಕಥಾಹಂದರವಿದೆ. ಸಿನಿಮಾ ಕ್ವಾಲಿಟಿಯಲ್ಲಿ ಎಲ್ಲೂ ಕಾಂಪ್ರಮೈಸ್ ಆಗದೇ ನಿರ್ಮಾಣ ಮಾಡಲಾಗಿದ್ದು, ಕಟೆಂಟ್ ಕಂಡು ತೆಲುಗು, ತಮಿಳು ಭಾಷೆಗೆ ಡಬ್ ಮಾಡಲು ಬೇಡಿಕೆ ಬಂದಿದೆ ಎನ್ನುತ್ತದೆ ಚಿತ್ರತಂಡ.

    ಚಿತ್ರದಲ್ಲಿ ರವಿಗೆ ಜೋಡಿಯಾಗಿ ಅಪೂರ್ವ ನಟಿಸಿದ್ದಾರೆ. ಎ.ವಿ.ಹರೀಶ್, ಮೈಸೂರು ಪ್ರಭು ಸೇರಿದಂತೆ ಹಲವು ಕಲಾವಿದರು ಚಿತ್ರದ ತಾರಾಬಳಗದಲ್ಲಿದ್ದಾರೆ. ಹಾಡು ಹಾಗೂ ಹಿನ್ನೆಲೆ ಸಂಗೀತ ಶ್ರೀಮಂತಗೊಳಿಸಲು ಶ್ರೀಧರ್ ವಿ ಸಂಭ್ರಮ್ ಸಂಗೀತ ನಿರ್ದೇಶನ ಚಿತ್ರಕ್ಕಿದೆ. ಕುಮಾರ್ ಎಂ ಕ್ಯಾಮೆರಾ ವರ್ಕ್,ಅರ್ಜುನ್ ಕಿಟ್ಟು ಸಂಕಲನ, ಕಲೈ ನೃತ್ಯ ನಿರ್ದೇಶನ ಪುರುಷೋತ್ತಮ ಚಿತ್ರಕ್ಕಿದೆ. ಸದ್ಯ ಸೆನ್ಸಾರ್ ಅಂಗಳದಲ್ಲಿರುವ ಪುರುಷೋತ್ತಮ ಚಿತ್ರ ಇದೇ ತಿಂಗಳಲ್ಲಿ ಟ್ರೇಲರ್ ಬಿಡುಗಡೆ ಮಾಡಲು ಪ್ಲ್ಯಾನ್ ಮಾಡಿಕೊಂಡಿದೆ.

  • ಯಾರೋ ಸತ್ತರೆ ಸರ್ಕಾರ ರಜೆ ಕೊಡುತ್ತಿತ್ತು, ಈಗ ನಾವು ಬದುಕಲಿ ಅಂತ ರಜೆ ಕೊಟ್ಟಿದ್ದಾರೆ: ಜಿಮ್ ರವಿ

    ಯಾರೋ ಸತ್ತರೆ ಸರ್ಕಾರ ರಜೆ ಕೊಡುತ್ತಿತ್ತು, ಈಗ ನಾವು ಬದುಕಲಿ ಅಂತ ರಜೆ ಕೊಟ್ಟಿದ್ದಾರೆ: ಜಿಮ್ ರವಿ

    ಬೆಂಗಳೂರು: ಕೊರೊನ ಸೊಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಸಲೆಬ್ರಿಟಿಗಳು ಜನರಲ್ಲಿ ಜಾಗೃತಿಯನ್ನು ಮೂಡಿಸುತ್ತಿದ್ದಾರೆ. ತಮ್ಮವರನ್ನ ಕಳೆದುಕೊಂಡು ಅನೇಕರು ಕಷ್ಟ ಪಡುತ್ತಿದ್ದಾರೆ. ನಟ ಜಿಮ್ ರವಿ ತನ್ನ ಸ್ನೇಹಿತರೊಬ್ಬರು ನಿಧಿನರಾಗಿದ್ದರು. ಈ ವೇಳೆ ರುದ್ರಭೂಮಿಗೆಯಲ್ಲಿ ರವಿ ತಮ್ಮ ದುಃಖವನ್ನು ತೋಡಿಕೊಂಡಿದ್ದಾರೆ.

    ಮೃತರ ಅಂತ್ಯಕ್ರಿಯೆಗಾಗಿ ಕುಟುಂಬದವರು ಸಾಲುಗಟ್ಟಿ ನಿಂತಿರುವ ದೃಶ್ಯ ನೋಡಿದರೆ ಮನ ಕಲಕುತ್ತದೆ. ವೀಡಿಯೋದಲ್ಲಿ ರವಿ ಅವರು ಸ್ಮಶಾನದ ಚಿತ್ರಣವನ್ನು ಕಟ್ಟಿಕೊಟ್ಟಿದ್ದಾರೆ. ನೂರಾರು ಶವಗಳನ್ನು ಸುಡುತ್ತಿರುವ ದೃಶ್ಯ ಭೀಕರತೆಯನ್ನು ಕಣ್ಣಿಗೆ ಕಟ್ಟುತ್ತದೆ.

    ಸಾವಿರಾರು ಜನರು ಸಾಯುತ್ತಿದ್ದಾರೆ ನೋಡಿ. ಇವತ್ತು ನನ್ನ ಸ್ನೇಹಿತರು ತೀರಿಕೊಂಡರು. ಅವರ ಅಂತ್ಯಕ್ರೀಯೆಗಾಗಿ ನಾನು ಇಲ್ಲಿಗೆ ಬಂದಿದ್ದೇನೆ. ತುಂಬಾ ದುಃಖವಾಗುತ್ತದೆ. ಎಲ್ಲರೂ ಮನೆಯಲ್ಲಿಯೇ ಇರಿ. ಆಗ ನಮಗೆ ಒಳ್ಳೆಯದಾಗುತ್ತದೆ. ತಂದೆ-ತಾಯಿಯನ್ನು ನೀವು ಕಾಪಾಡಿಕೊಳ್ಳಬಹುದು. ಇವತ್ತು ಬೆಂಗಳೂರಿನ ಪರಿಸ್ಥಿತಿ ಹೀಗಾಗಿದೆ. ನಿಮ್ಮಲ್ಲಿ ಮನವಿ ಮಾಡಿಕೊಳ್ಳುತ್ತೇನೆ ಸಾಮಾಜಿ ಅಂತರವನ್ನು ಕಾಪಾಡಿಕೊಳ್ಳಿ ಎಂದಿದ್ದಾರೆ.

    ಇಲ್ಲಿ ಸಾಲು ಸಾಲು ಶವಗಳು ಬರುತ್ತಿವೆ. ಎಲ್ಲರೂ ನಿಮ್ಮ ಕ್ಷೇಮವನ್ನು ಕಾಪಾಡಿಕೊಳ್ಳಿ. ಮಾಸ್ಕ್ ಸ್ಯಾನಿಟೈಸರ್ ಉಪಯೋಗಿಸಿ, ಉಡಾಫೆ ಮಾತುಬೇಡ. ಸರ್ಕಾರ ಯಾರೋ ಸತ್ತರು ಎಂದು ರಜೆ ಕೊಡುತ್ತಿತ್ತು. ಆದರೆ ಈಗ ನಾವು ಬದುಕಲಿ ಅಂತ ರಜೆ ಕೊಟ್ಟಿದ್ದಾರೆ. ಯೋಚನೆ ಮಾಡಿ ನಮ್ಮ ಪ್ರಾಣ ನಮ್ಮ ಕೈಯಲ್ಲಿದೆ ಎಂದು ಜಿಮ್ ರವಿ ಎಚ್ಚರಿಕೆಯನ್ನು ಹೇಳಿದ್ದಾರೆ.

    ಚಿತ್ರರಂಗದ ಅನೇಕರು ಕೊರೊನಾಗೆ ಬಲಿಯಾಗುತ್ತಿದ್ದಾರೆ. ಕೊರೊನಾ ಕುರಿತಾಗಿ ಹಲವರು ಜಾಗೃತಿ ಮೂಡಿಸುವ ಸಂದೇಶವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಾರೆ.