Tag: ಜಿಮ್ ಮಾಲೀಕ

  • ಜಿಮ್ ಮಾಲೀಕನ ಗುಂಡಿಕ್ಕಿ ಹತ್ಯೆ – ಸಿಸಿಟಿವಿ ರೆಕಾರ್ಡ್ ಕಳ್ಳತನ

    ಜಿಮ್ ಮಾಲೀಕನ ಗುಂಡಿಕ್ಕಿ ಹತ್ಯೆ – ಸಿಸಿಟಿವಿ ರೆಕಾರ್ಡ್ ಕಳ್ಳತನ

    ನವದೆಹಲಿ: ಮೂವರು ಅಪರಿಚಿತ ವ್ಯಕ್ತಿಗಳು ಜಿಮ್‌ಗೆ (Gym) ನುಗ್ಗಿ, ಜಿಮ್ ಮಾಲೀಕನನ್ನು (Gym Owner) ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ದೆಹಲಿಯ (Delhi) ಪ್ರೀತ್ ವಿಹಾರ್‌ನಲ್ಲಿ ನಡೆದಿದೆ. ದುಷ್ಕರ್ಮಿಗಳು ಘಟನೆಯ ಸಾಕ್ಷ್ಯ ನಾಶಪಡಿಸಲು ಜಿಮ್‌ನಲ್ಲಿದ್ದ ಸಿಸಿಟಿವಿ (CCTV) ರೆಕಾರ್ಡ್‌ಗಳನ್ನೇ ಕದ್ದುಕೊಂಡು ಹೋಗಿದ್ದಾರೆ.

    ಗುಂಡಿನ ದಾಳಿಗೆ ಬಲಿಯಾದ ಜಿಮ್ ಮಾಲೀಕ ಮಹೇಂದ್ರ ಅಗರ್ವಾಲ್ ಎಂದು ಗುರುತಿಸಲಾಗಿದೆ. ಅವರು ಜಿಮ್ ಜೊತೆಗೆ ಸ್ಪಾಗಳನ್ನೂ ನಡೆಸುತ್ತಿದ್ದು, ಜಿಮ್ ಉಪಕರಣಗಳನ್ನೂ ಮಾರಾಟ ಮಾಡುತ್ತಿದ್ದರು.

    ನಿನ್ನೆ ರಾತ್ರಿ 8 ಗಂಟೆ ವೇಳೆಗೆ ಅಗರ್ವಾಲ್ ಜಿಮ್‌ನಲ್ಲಿದ್ದಾಗ ಮೂವರು ದುಷ್ಕರ್ಮಿಗಳು ಜಿಮ್ ಪ್ರವೇಶಿಸಿದ್ದಾರೆ. ಬಳಿಕ ಗುಂಡಿನ ದಾಳಿ ನಡೆಸಿದ್ದು, ಅಗರ್ವಾಲ್ ಅವರ ತಲೆಗೆ ಗುಂಡು ತಗುಲಿದ್ದರಿಂದ ಅವರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಜೆಡಿಎಸ್ ಮುಖಂಡ ಕಲ್ಲಪ್ಪ ಮಗೆಣ್ಣವರ ಕಾರು ಅಪಘಾತ

    ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾಗುವ ಸಂದರ್ಭ ಜಿಮ್‌ನಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾಗಳ ರೆಕಾರ್ಡಿಂಗ್ ಸಾಧನಗಳನ್ನು ಕದ್ದುಕೊಂಡು ಹೋಗಿದ್ದಾರೆ. ಇದೀಗ ಪೊಲೀಸರಿಗೆ ಆರೋಪಿಗಳನ್ನು ಹಿಡಿಯಲು ಬೇಕಾಗಿದ್ದ ದೊಡ್ಡ ಸಾಕ್ಷ್ಯ ಕೈತಪ್ಪಿ ಹೋಗಿದೆ. ಅವರ ಸುಳಿವನ್ನು ಪಡೆಯಲು ಜಿಮ್ ಸುತ್ತಮುತ್ತಲಿತ ಇತರ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಗಳನ್ನು ಪರಿಶೀಲಿಸುತ್ತಿದ್ದಾರೆ.

    ಫೋರೆನ್ಸಿಕ್ ತಂಡ ಘಟನೆ ನಡೆದ ಸ್ಥಳದಲ್ಲಿ ಪರಿಶೀಲನೆ ನಡೆಸಿದೆ. ಘಟನೆಯಲ್ಲಿ ಶಾಮೀಲಾದವರ ಬಗ್ಗೆ ತಿಳಿದುಕೊಳ್ಳಲು ಜಿಮ್ ಮಾಲೀಕರಿಗೆ ಯಾರೊಂದಿಗಾದರೂ ದ್ವೇಷವಿತ್ತೇ ಎಂದು ಸಂಬಂಧಿಕರಲ್ಲಿ ಕೇಳಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಚಾಲಕನಿಗೆ ಹೃದಯಾಘಾತ – ಬಸ್, ಕಾರು ನಡುವಿನ ಭೀಕರ ಅಪಘಾತದಲ್ಲಿ 9 ಸಾವು, 28 ಮಂದಿಗೆ ಗಾಯ

    Live Tv
    [brid partner=56869869 player=32851 video=960834 autoplay=true]