Tag: ಜಿಮ್ಸ್ ಆಸ್ಪತ್ರೆ

  • ನವಜಾತ ಶಿಶು ಕದ್ದು 50,000 ರೂ.ಗೆ ಮಾರಾಟ – ಮೂವರು ಖತರ್ನಾಕ್‌ ಕಳ್ಳಿಯರು ಅರೆಸ್ಟ್‌

    ನವಜಾತ ಶಿಶು ಕದ್ದು 50,000 ರೂ.ಗೆ ಮಾರಾಟ – ಮೂವರು ಖತರ್ನಾಕ್‌ ಕಳ್ಳಿಯರು ಅರೆಸ್ಟ್‌

    ಕಲಬುರಗಿ: ಇಲ್ಲಿನ ಜಿಲ್ಲಾಸ್ಪತ್ರೆಯಲ್ಲಿ ನವಜಾತ ಶಿಶು (Newborn baby) ಕಳ್ಳತನ ಮಾಡಿ 50,000ಕ್ಕೆ ಮಾರಾಟ ಮಾಡಿದ್ದ ಮೂವರು ಕಳ್ಳಿಯರನ್ನು ಕಲಬುರಗಿ ಪೊಲೀಸರು (Kalaburagi Police) ಬಂಧಿಸಿದ್ದಾರೆ.

    ಕಲಬುರಗಿಯ ಎಂಎಸ್‌ಕೆಮಿಲ್ ಬಡಾವಣೆಯಲ್ಲಿ ಉಮೇರಾ, ನಸರೀನ್ ಹಾಗೂ ಫಾತಿಮಾ ಮಕ್ಕಳ ಕಳ್ಳಿಯರನ್ನು ಬಂಧಿಸಲಾಗಿದೆ. ನಂತರ ಮಗುವನ್ನು ರಕ್ಷಿಸಿ ತಾಯಿ ಕಸ್ತೂರಿ ಅವರಿಗೆ ಒಪ್ಪಿಸಲಾಗಿದೆ. ಇದನ್ನೂ ಓದಿ: ಕೇಂದ್ರ ರಕ್ಷಣಾ ಸಚಿವರನ್ನು ಭೇಟಿಯಾದ ಕೋಲಾರ ಸಂಸದ – ಕಾರ್ಮಿಕರ ಬೇಡಿಕೆ ಈಡೇರಿಸುವಂತೆ ಮನವಿ

    ಮಾರಾಟಕ್ಕಾಗಿ ಮಗು ಕಳ್ಳತನ ಮಾಡಿದ್ದ ಗ್ಯಾಂಗ್:
    ಮೂವರು ಕಳ್ಳಿಯರ ಖತರ್ನಾಕ್‌ ಗ್ಯಾಂಗ್‌ ನವಜಾತಶಿಶುವನ್ನು ಮಾರಾಟಕ್ಕಾಗಿ ಕಿಡ್ನ್ಯಾಪ್‌ ಮಾಡಿತ್ತು. ಕಳ್ಳತನದ ಬಳಿಕ ಖೈರುನ್‌ ಎಂಬ ಮಹಿಳೆಗೆ 50 ಸಾವಿರ ರೂ.ಗೆ ಮಗುವನ್ನು ಮಾರಾಟ ಮಾಡಲಾಗಿತ್ತು. ಮಾಧ್ಯಮಗಳಲ್ಲಿ ವರದಿ ಪ್ರಸಾರವಾದ ಬಳಿಕ ಅಕ್ಕ ಪಕ್ಕದ ನಿವಾಸಿಗಳಿಂದ ಮಗು ಇರುವ ಬಗ್ಗೆ ಪೊಲೀಸರಿಗೆ ಮಾಹಿತಿ ಬಂದಿತು. ಕೂಡಲೇ ಎಚ್ಚೆತ್ತ ಪೊಲೀಸರು ಮಗುವನ್ನು ರಕ್ಷಿಸಿ, ಕಳ್ಳಿಯರನ್ನ ಬಂಧಿಸಿದ್ದಾರೆ. ಸದ್ಯ ಪ್ರಕರಣದ ಬಳಿಕ ಮಗು ಖರೀದಿಸಿದ ಆರೋಪಿ ಖೈರುನ್ ಎಸ್ಕೇಪ್ ಆಗಿದ್ದಾಳೆ, ಆಕೆಯ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

    ನವಜಾತ ಶಿಶು ಪತ್ತೆ ಹಚ್ಚಿದ ಎಸಿಪಿ ಭೂತೇಗೌಡ, ಸಿಪಿಗಳಾದ ಸೋಮಲಿಂಗ್ ಕಿರದಳ್ಳಿ ರಾಘವೇಂದ್ರ ಭಜಂತ್ರಿ ತಂಡವನ್ನು ಪೊಲೀಸ್‌ ಆಯುಕ್ತರು ಪ್ರಸಂಶಿಸಿದ್ದಾರೆ. ಸದ್ಯ ಜಿಮ್ಸ್ ಆಸ್ಪತ್ರೆಯ ಎಸ್‌ಎನ್‌ಸಿಯು ಬ್ಲಾಕ್‌ನಲ್ಲಿ ಮಗುವಿಗೆ ಚಿಕಿತ್ಸೆ ಕೊಡಿಸಲಾಗುತ್ತಿದೆ. ಇದನ್ನೂ ಓದಿ: ಇವಿಎಂ ಬೇಡ, ಬ್ಯಾಲೆಟ್ ಪೇಪರ್ ಬೇಕು – ಮಹಾಸೋಲಿನ ಬೆನ್ನಲ್ಲೇ ಕಾಂಗ್ರೆಸ್ ಬೇಡಿಕೆ

  • ಗದಗ ಜಿಮ್ಸ್ ಆಸ್ಪತ್ರೆಯಲ್ಲಿ ನೀರಿಲ್ಲದೆ ರೋಗಿಗಳು, ಸಿಬ್ಬಂದಿ ಪರದಾಟ!

    ಗದಗ ಜಿಮ್ಸ್ ಆಸ್ಪತ್ರೆಯಲ್ಲಿ ನೀರಿಲ್ಲದೆ ರೋಗಿಗಳು, ಸಿಬ್ಬಂದಿ ಪರದಾಟ!

    ಗದಗ: ಇಲ್ಲಿನ ಜಿಮ್ಸ್ ಆಸ್ಪತ್ರೆಯಲ್ಲಿ (Gims Hospital Gadag) ನೀರಿನ ಬರದ ಬಿಸಿ ರೋಗಿಗಳಿಗೂ ತಟ್ಟಿದೆ. ಅದರಲ್ಲೂ ಗದಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಬೋಧಕ ಆಸ್ಪತ್ರೆನಲ್ಲೂ ನೀರಿಗಾಗಿ ಪರದಾಡುವಂತಾಗಿದೆ.

    ಆಸ್ಪತ್ರೆಯಲ್ಲಿ ನೀರಿಲ್ಲದಕ್ಕೆ ರೋಗಿಗಳು, ಬಾಣಂತಿಯತು, ಶಿಶುಗಳು ಪರಿಪಾಟು ಕೇಳ ತೀರದಾಗಿದೆ. ಬಾಣಂತಿ ಹಾಗೂ ಶಿಶುಗಳಿಗೆ ಬಿಸಿ ನೀರು ಅವಶ್ಯಕ. ಆದ್ರೆ ಅಲ್ಲಿ ಲೀಟರ್ ತನ್ನಿರು ಸಹ ಸಿಗ್ತಿಲ್ಲ. 1 ಲೀಟರ್ ನಿಂದ ಹಿಡಿದು 20 ಲೀಟರ್ ಕ್ಯಾನ್ ನಲ್ಲಿ ನೀರು ಹಣ ಕೊಟ್ಟು ತರುತ್ತಿದ್ದಾರೆ. ಹೊಟೆಲ್ ಗಳಲ್ಲಿ ಹಣ ಕೊಟ್ಟು ನೀರು ತರುವ ಸ್ಥಿತಿ ರೋಗಿಗಳಿಗೆ ಎದುರಾಗಿದೆ.

    ಆಸ್ಪತ್ರೆಯಲ್ಲಿ ಮಿತವ್ಯಯವಾಗಿ ನೀರು ಬಿಡ್ತಿದ್ದಾರೆ. ಇತ್ತ ಕಾಲೇಜ್ ನಲ್ಲೂ ನೀರಿಲ್ಲ. ಜಿಮ್ಸ್ ಗೆ ಸಪ್ಲಾಯ್ ಆಗುವ 24/7 ನೀರು ಪೂರೈಕೆ ಆಗ್ತಿಲ್ಲ. ಜಿಮ್ಸ್ ವ್ಯಾಪ್ತಿಯ 6 ಬೋರವೆಲ್ ಪೈಕಿ 4 ಬೋರವೆಲ್ ಬಂದ್ ಬಂದ್ ಆಗಿವೆ. ಟ್ಯಾಂಕರ್ ಗಳ ಮೂಲಕ ನೀರು ಸರಬರಾಜು ಮಾಡಲಾಗ್ತಿದೆ. ಅದು ಕೂಡಾ ಸರಿಯಾಗಿ ಆಗ್ತಿಲ್ಲ. ಈ ಎಲ್ಲದರಿಂದ ರೋಗಿಗಳು ಪರದಾಡುತ್ತಿದ್ದಾರೆ, ಅಧಿಕಾರಿಗಳು ಮಾತ್ರ ಕೈ ಚೆಲ್ಲಿ ಕೂತಂತಿದೆ.

    ಕುಡಿಯುವ ನೀರಿಗಾಗಿ ಜನಾಕ್ರೋಶ: ಇಷ್ಟು ಮಾತ್ರವಲ್ಲದೇ ಕುಡಿಯುವ ನೀರಿಗಾಗಿ ಜನಾಕ್ರೋಶ ಎದ್ದಿದೆ. ಗದಗ ಜಿಲ್ಲೆಯ ರೋಣ ತಾಲೂಕಿನ ಸವಡಿಯಲ್ಲಿರುವ ಗ್ರಾಮ ಪಂಚಾಯತ್‍ಗೆ ಮುತ್ತಿಗೆ ಹಾಕಿ ಸಾರ್ವಜನಿಕರು ಪ್ರತಿಭಟನೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಹಾಸ್ಟೆಲ್‌ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಎಂಜಿನಿಯರಿಂಗ್‌ ವಿದ್ಯಾರ್ಥಿನಿಯ ಶವ ಪತ್ತೆ

    ಸವಡಿ ಗ್ರಾಮ ಪಂಚಾಯತ್ ಕಳೆದ 20 ದಿನಗಳಿಂದ ನೀರು ಪೂರೈಸಿಲ್ಲ. ಹೀಗಾಗಿ ಪಿಡಿಓ, ಸಿಬ್ಬಂದಿ, ಜನಪ್ರತಿನಿಧಿಗಳನ್ನು ಸ್ಥಳೀಯರು ತರಾಟೆಗೆ ತೆಗೆದುಕೊಂಡಿದ್ದಾರೆ. ಮಹಿಳೆಯರು, ಮಕ್ಕಳು, ಪುರುಷರು ಖಾಲಿ ಕೊಡಗಳೊಂದಿಗೆ ಗ್ರಾ.ಪಂ ಗೆ ಮುತ್ತಿಗೆ ಹಾಕಿದ್ದಾರೆ.

    ಮೊದಲು ಇತರೆ ಬಳಕೆಗೆ ಫ್ಲೋರೈಡ್ ಹಾಗೂ ಗಡಸು ನೀರನ್ನಾದ್ರೂ ಬಿಡುತ್ತಿದ್ದರು. ಈಗ ಯಾವ ಕಲುಷಿತ ನೀರೂ ಸಹ ಪೂರೈಸುತ್ತಿಲ್ಲ ಅಂತ ಜನ ಆರೋಪ ಮಾಡುತ್ತಿದ್ದಾರೆ. ಜೊತೆಗೆ ಸಮರ್ಪಕ ನೀರು ಪೂರೈಸದಕ್ಕೆ ಖಾಲಿ ಕೊಡಗಳು ಹಿಡಿದು ಆಕ್ರೋಶ ಹೊರಹಾಕಿದ್ದಾರೆ. ಸ್ಥಳಕ್ಕೆ ಡಿಸಿ, ಜಿ.ಪಂ ಸಿ.ಇ.ಓ, ತಹಶೀಲ್ದಾರ್ ಬರುವಂತೆ ಸಾರ್ವಜನಿಕರು ಪಟ್ಟು ಹಿಡಿದಿದ್ದಾರೆ.

  • ಜಿಮ್ಸ್ ಆಸ್ಪತ್ರೆಯಲ್ಲಿ ರೀಲ್ಸ್ ಮಾಡಿದ 38 ವಿದ್ಯಾರ್ಥಿಗಳು ಅಮಾನತು

    ಜಿಮ್ಸ್ ಆಸ್ಪತ್ರೆಯಲ್ಲಿ ರೀಲ್ಸ್ ಮಾಡಿದ 38 ವಿದ್ಯಾರ್ಥಿಗಳು ಅಮಾನತು

    ಗದಗ: ಇಲ್ಲಿನ (Gadag) ಜಿಮ್ಸ್ ಆಸ್ಪತ್ರೆಯಲ್ಲಿ (GIMS Hospital) ರೀಲ್ಸ್ (Reels) ಮಾಡಿ ಹುಚ್ಚಾಟ ಮೆರೆದಿದ್ದ 38 ಜನ ವೈದ್ಯಕೀಯ ವಿದ್ಯಾರ್ಥಿಗಳನ್ನು ಅಮಾನತು ಮಾಡಲಾಗಿದೆ.

    ವಿದ್ಯಾರ್ಥಿಗಳು ಜಿಲ್ಲಾಸ್ಪತ್ರೆಯ ಜನರಲ್ ವಾರ್ಡ್, ಕಾರಿಡಾರ್, ಮಕ್ಕಳ ವಾರ್ಡ್, ತರಗತಿ ಕೊಠಡಿ ಸೇರಿದಂತೆ ಆಸ್ಪತ್ರೆಯ ಎಲ್ಲಾ ಭಾಗಗಳಲ್ಲಿ ರೀಲ್ಸ್ ಮಾಡುತ್ತಿದ್ದರು. ಬಳಿಕ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕುತ್ತಿದ್ದರು. ಇದರಿಂದ ರೋಗಿಗಳಿಗೆ ಸಾಕಷ್ಟು ತೊಂದರೆ ಆಗುತ್ತಿತ್ತು. ಅಲ್ಲದೇ ಚಿಕಿತ್ಸೆಗೆ ತೆರಳಿದ್ದ ರೋಗಿಗಳಿಗೆ ಕಿರಿಕಿರಿ ಉಂಟಾಗುತ್ತಿತ್ತು. ರೀಲ್ಸ್ ಮಾಡುವ ವಿದ್ಯಾರ್ಥಿಗಳ ವಿರುದ್ಧ ಕ್ರಮಕ್ಕೆ ಸಾರ್ವಜನಿಕರು ಆಗ್ರಹಿಸಿದ್ದರು. ಈ ಬಗ್ಗೆ `ಪಬ್ಲಿಕ್ ಟಿವಿ’ಯಲ್ಲಿ ವರದಿ ಸಹ ಪ್ರಸಾರವಾಗಿತ್ತು. ಇದೀಗ ವರದಿಯಿಂದ ಎಚ್ಚೆತ್ತ ಜಿಮ್ಸ್ ಆಸ್ಪತ್ರೆಯ ಅಧಿಕಾರಿಗಳು, ರೀಲ್ಸ್ ಮಾಡಿದ್ದ 38 ವಿದ್ಯಾರ್ಥಿಗಳನ್ನು ಅಮಾನತು ಮಾಡಿದ್ದಾರೆ. ಇದನ್ನೂ ಓದಿ: ಮೋದಿ ನಿತ್ಯ 3.5 ಗಂಟೆ ನಿದ್ದೆ, ಸಂಜೆ 6 ಗಂಟೆಯ ನಂತರ ಊಟ ಮಾಡಲ್ಲ

    ಈ ಬಗ್ಗೆ ಜೀಮ್ಸ್ ನಿರ್ದೇಶಕ ಡಾ.ಬಸವರಾಜ ಬೊಮ್ಮನಹಳ್ಳಿ ಮಾಹಿತಿ ನೀಡಿದ್ದು, ಜಿಮ್ಸ್‍ನ ಎಲ್ಲಾ ವಿಭಾಗಗಳ ಮುಖ್ಯಸ್ಥರು, ಡಿಸ್ಟ್ರಿಕ್ಟ್ ಸರ್ಜನ್ ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ವಿದ್ಯಾರ್ಥಿಗಳನ್ನು ಅಮಾನತು ಮಾಡುವ ನಿರ್ಧಾರ ತೆಗೆದುಕೊಂಡಿದ್ದೆವೆ ಎಂದು ಸ್ಪಷ್ಟನೆ ನೀಡಿದ್ದಾರೆ.

    ರೀಲ್ಸ್ ಮಾಡಿರುವ ಎಲ್ಲರೂ ಎಂಬಿಬಿಎಸ್ ಇಂಟರ್ನ್‍ಶಿಪ್ ವಿದ್ಯಾರ್ಥಿಗಳು. ಅವರನ್ನು 10 ದಿನಗಳ ಕಾಲ ಅಮಾನತು ಮಾಡಲಾಗಿದೆ. ಆಸ್ಪತ್ರೆಯಲ್ಲಿ ಈ ರೀತಿ ಮಾಡಿರುವುದು ದೊಡ್ಡ ಅಪರಾಧ. ಈ ರೀತಿ ವೀಡಿಯೋ ಮಾಡಲು ನಾವ್ಯಾರು ಅನುಮತಿ ಕೊಟ್ಟಿಲ್ಲ. ರೋಗಿಗಳಿಗೆ ಅನಾನುಕೂಲ ಆಗುವ ರೀತಿ ನಡೆದು ಕೊಂಡಿರುವುದು ತಪ್ಪು. ಯಾರೇ ಇರಲಿ, ಆಸ್ಪತ್ರೆಯಲ್ಲಿ ಈ ರೀತಿ ಮಾಡಿದರೆ ಅಂತವರ ಮೇಲೆ ಸೂಕ್ತ ಕ್ರಮ ಕೈಗೊಳ್ಳುತ್ತೇವೆ. ವಿದ್ಯಾರ್ಥಿಗಳಿಗೆ ಸಿಗಬೇಕಾಗಿದ್ದ ಪೋಸ್ಟಿಂಗ್ 10 ದಿನಗಳ ಕಾಲ ತಡವಾಗಿ ಸಿಗಲಿದೆ ಎಂದು ಅವರು ತಿಳಿಸಿದ್ದಾರೆ. ಇದನ್ನೂ ಓದಿ: ಕೇಂದ್ರ ಸಚಿವರನ್ನು ಭೇಟಿಯಾದ 6 ವರ್ಷದ ʼರೈಲ್‌ ಮಂತ್ರಿʼ!

  • ಉಸಿರಾಟದ ತೊಂದರೆಯಿಂದ ನಡುರಸ್ತೆಯಲ್ಲೇ ನರಳಾಡಿದ ಕೊರೊನಾ ಶಂಕಿತ

    ಉಸಿರಾಟದ ತೊಂದರೆಯಿಂದ ನಡುರಸ್ತೆಯಲ್ಲೇ ನರಳಾಡಿದ ಕೊರೊನಾ ಶಂಕಿತ

    ಗದಗ: ಕೊರೊನಾ ಶಂಕಿತ ವ್ಯಕ್ತಿಯೋರ್ವ ನಡುರಸ್ತೆಯಲ್ಲಿ ಬಿದ್ದು ನರಳಾಡುತ್ತಿರುವ ದೃಶ್ಯ ಗದಗ ನಗರದ ಬೆಟಗೇರಿ ಭಾಗದಲ್ಲಿ ಕಂಡು ಬಂದಿದೆ.

    ನಡುರಸ್ತೆಯಲ್ಲಿ ನರಳಾಡಿದ ವ್ಯಕ್ತಿ ನಗರದ ಕುರಹಟ್ಟಿಪೆಟೆ ನಿವಾಸಿ ಎನ್ನಲಾಗಿದೆ. ಗಂಟಲು ನೋವು, ಹೊಟ್ಟೆ ಉರಿ, ಎದೆ ಉರಿ ಎಂದು ಎದೆ ಬಡಿದುಕೊಂಡು ನರಳಾಡುತ್ತಿದ್ದರೂ ಯಾರು ಮುಟ್ಟಿಲ್ಲ. ಕೂಡಲೇ 108 ವಾಹನಕ್ಕೆ ಫೋನ್ ಮಾಡಿದರೂ ವಾಹನ ಬರಲಿಲ್ಲ. ಒಂದು ಗಂಟೆ ತಡವಾಗಿ ಬಂದಿದ್ದಕ್ಕೆ ಸ್ಥಳೀಯರು ಅಂಬುಲೆನ್ಸ್ ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

    ಕೊರೊನಾ ಇರಬಹುದು ಎಂದು ತಿಳಿದು ಯುವಕನನ ಬಳಿ ಹೋಗಲು ಯಾರೂ ಮುಂದಾಗಿಲ್ಲ. ಅವನ ಸಂಕಷ್ಟದ ಕೂಗು ಕೇಳಲಾಗದೇ ಓರ್ವ ವ್ಯಕ್ತಿ ಸಹಾಯಕ್ಕೆ ಮುಂದಾಗಿದ್ದಾನೆ. ನೀರು ಕುಡಿಸಿ ಸಮಾಧಾನ ಮಾಡಿದ್ದಾನೆ. 108 ಅಂಬುಲೆನ್ಸ್ ತಡವಾಗಿದ್ದಕ್ಕೆ ಅವನೇ ಹೊತ್ತುಕೊಂಡು ಆಸ್ಪತ್ರೆಗೆ ಹೋಗಲು ಮುಂದಾಗಿದ್ದು, ಅಷ್ಟರಲ್ಲಿ ಅಂಬುಲೆನ್ಸ್ ಬಂದ ಹಿನ್ನೆಲೆ ವಾಹನದ ಮೂಲಕ ಗದಗ ಜಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

    ಎಲ್ಲರೂ ನಿಂತು ನೋಡುವ ಸಂದರ್ಭದಲ್ಲಿ ಓರ್ವ ಯುವಕ ಏನನ್ನು ಯೋಚಿಸದೇ ಅವನ ಸಹಾಯಕ್ಕೆ ಬಂದು ಜೀವ ಉಳಿಸಲು ಮುಂದಾಗಿರುವುದು ನಿಜಕ್ಕೂ ಮೆಚ್ಚಲೇಬೇಕಾದ ವಿಚಾರವಾಗಿದೆ. ನಡುರಸ್ತೆಯಲ್ಲಿ ನರಳಾಡುತ್ತಿದ್ದ ವ್ಯಕ್ತಿ ಸದ್ಯ ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಯುವಕನನ್ನು ಕೋವಿಡ್ ಟೆಸ್ಟ್ ಗೆ ಒಳಪಡಿಸಿದ್ದು, ವರದಿಗಾಗಿ ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆ ಕಾಯುತ್ತಿದೆ.

  • ಕೊರೊನಾ ಸೋಂಕಿತ ಗರ್ಭಿಣಿಗೆ ಸಿಸೇರಿನ್ ಮೂಲಕ ಹೆರಿಗೆ- ಹೆಣ್ಣು ಮಗು ಜನನ

    ಕೊರೊನಾ ಸೋಂಕಿತ ಗರ್ಭಿಣಿಗೆ ಸಿಸೇರಿನ್ ಮೂಲಕ ಹೆರಿಗೆ- ಹೆಣ್ಣು ಮಗು ಜನನ

    ಗದಗ: ಕೊರೊನಾ ಸೋಂಕಿತ ಗರ್ಭಿಣಿಗೆ ಶಸ್ತ್ರಚಿಕಿತ್ಸೆ ಮೂಲಕ ಹೆರಿಗೆ ಮಾಡಿಸಿದ ವೈದ್ಯಕೀಯ ಸಿಬ್ಬಂದಿಗಳ ಕಾರ್ಯ ಮೆಚ್ಚುಗೆಗೆ ಪಾತ್ರವಾಗಿರುವ ಘಟನೆ ಗದಗ ಜಿಮ್ಸ್ ಆಸ್ಪತ್ರೆಯಲ್ಲಿ ನಡೆದಿದೆ.

    ಜಿಲ್ಲೆಯ ಗೋಜನೂರು ಗ್ರಾಮದ ಕೊರೊನಾ ಸೋಂಕಿತ ಗರ್ಭಿಣಿಗೆ ಶಸ್ತ್ರಚಿಕಿತ್ಸೆ ಮೂಲಕ ಹೆರಿಗೆ ಮಾಡಲಾಗಿದೆ. ಸೋಂಕಿತರು ಅಂದರೆ ನಿಷ್ಠೂರವಾಗಿ ನೋಡುವುದರ ಜೊತೆಗೆ ಯಾರು ಹತ್ರಾನೂ ಸುಳಿಯಲ್ಲ. ಈ ಸಂದರ್ಭದಲ್ಲಿ ಗದಗ ಜಿಮ್ಸ್ ವೈದ್ಯರು ಸಿಸೇರಿನ್ ಮೂಲಕ ಎರಡು ಜೀವ ಉಳಿಸಿದ್ದಾರೆ. ವೈದ್ಯರಾದ ಡಾ.ಶಿವನಗೌಡ, ಡಾ.ಶೃತಿ ಹಾಗೂ ಡಾ ಅಜಯ್ ಮತ್ತು ಸಿಬ್ಬಂದಿಗಳು ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಮಾಡಿದ್ದರಿಂದ ಸೋಂಕಿತೆಗೆ ಹೆಣ್ಣು ಮಗು ಜನನವಾಗಿದೆ.

    ನವಜಾತ ಶಿಶು 2.7 ಕೆಜಿ ತೂಕ ಹೊಂದಿದೆ. ಶಿಶುವಿಗೆ ಸ್ವಲ್ಪ ಉಸಿರಾಟದ ತೊಂದರೆ ಇರೋದರಿಂದ ಕೋವಿಡ್-19 ವಾರ್ಡ್‍ನಲ್ಲಿ ವಿಶೇಷ ಆರೈಕೆ ಮಾಡಲಾಗುತ್ತಿದೆ. ಮಗು ಚೇತರಿಸಿಕೊಳ್ಳುವ ಲಕ್ಷಣಗಳು ಇದೆ ಎಂದು ವೈದ್ಯರು ಹೇಳಿದ್ದಾರೆ. ಸೋಂಕಿತ ಮಹಿಳೆಗೆ ಮೊದಲನೇಯ ಹೆರಿಗೆ ಕೂಡ ಶಸ್ತ್ರಚಿಕಿತ್ಸೆಯಿಂದ ಆಗಿತ್ತು. ಈಗ 2ನೇ ಹೆರಿಗೆಯನ್ನು ಕೂಡ ಶಸ್ತ್ರಚಿಕಿತ್ಸೆ ಮೂಲಕ ಮಾಡಲಾಗಿದೆ. ಗದಗ ವೈದ್ಯಕೀಯ ಸಿಬ್ಬಂದಿ ತಂಡದ ಉತ್ತಮ ಕಾರ್ಯಕ್ಕೆ ಎಲ್ಲೆಡೆ ಶ್ಲಾಘನೀಯ ವ್ಯಕ್ತವಾಗುತ್ತಿದೆ.

  • ಆಸ್ಪತ್ರೆಗೆ ಬರೀ ಭೇಟಿ ಕೊಟ್ರೆ ಪ್ರಯೋಜನವಿಲ್ಲ, ಕ್ರಮ ತಗೊಳ್ಬೇಕು: ದತ್ತಾತ್ರೇಯ ಪಾಟೀಲ್ ಕಿಡಿ

    ಆಸ್ಪತ್ರೆಗೆ ಬರೀ ಭೇಟಿ ಕೊಟ್ರೆ ಪ್ರಯೋಜನವಿಲ್ಲ, ಕ್ರಮ ತಗೊಳ್ಬೇಕು: ದತ್ತಾತ್ರೇಯ ಪಾಟೀಲ್ ಕಿಡಿ

    ಕಲಬುರಗಿ: ಜಿಮ್ಸ್ ಆಸ್ಪತ್ರೆ ಅವ್ಯವಸ್ಥೆ ಕಂಡು ಸಿಬ್ಬಂದಿ ಮತ್ತು ಪಾಲಿಕೆ ಅಧಿಕಾರಿಗಳನ್ನು ಕಲಬುರಗಿ ದಕ್ಷಿಣ ಶಾಸಕ ದತ್ತಾತ್ರೇಯ ಪಾಟೀಲ್ ತರಾಟೆ ತೆಗೆದುಕೊಂಡಿದ್ದಾರೆ. ಜೊತೆಗೆ ಆಸ್ಪತ್ರೆಗೆ ಬರೀ ಭೇಟಿ ಕೊಟ್ಟರೆ ಪ್ರಯೋಜನವಿಲ್ಲ, ಈ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು ಎಂದು ಸಂಸದ ಡಾ.ಉಮೇಶ್ ಜಾಧವ್ ಅವರಿಗೆ ಪರೋಕ್ಷವಾಗಿ ಟಾಂಗ್ ಕೊಟ್ಟರು.

    ಸ್ವಚ್ಛತಾ ಅಭಿಯಾನ ಕಾಮಗಾರಿಗೆ ತೆರಳಿದಾಗ ಅಲ್ಲಿನ ಅವ್ಯವಸ್ಥೆ ಕಂಡು ಸಂಸದ ಡಾ.ಉಮೇಶ್ ಜಾಧವ್ ಮತ್ತು ಶಾಸಕ ದತ್ತಾತ್ರೇಯ ಪಾಟೀಲ್ ಕೆಂಡಾಮಂಡಲರಾದರು. ಈ ವೇಳೆ ಶಾಸಕರು, ಜಾಧವ್ ಅವರಿಗೆ ಪರೋಕ್ಷವಾಗಿ ಟಾಂಗ್ ಕೊಟ್ಟು ಸಂಸದರ ಎದುರೇ ಅಧಿಕಾರಿಗಳ ವಿರುದ್ಧ ಸಿಡಿಮಿಡಿಗೊಂಡರು.

    ನೀವು ಬರೀ ವಿಸಿಟ್ ಮಾಡಿದ್ರೆ ಪ್ರಯೋಜನವಿಲ್ಲ. ನಿರ್ಲಕ್ಷ್ಯ ತೋರಿದ ಒಂದಿಬ್ಬರು ಅಧಿಕಾರಿ, ಸಿಬ್ಬಂದಿ ಸಂಸ್ಪೆಂಡ್ ಮಾಡಿದರೆ ಮಾತ್ರ ಎಲ್ಲವೂ ಸರಿ ಹೋಗುತ್ತೆ. ಇಲ್ಲ ಅಂದರೆ ನೀವು ಬರೀ ಭೇಟಿ ನೀಡುತ್ತೀರಿ ಎಂದು ಅಧಿಕಾರಿಗಳು ಸಮ್ಮನಾಗುತ್ತಾರೆ ಎಂದು ಸಂಸದರ ಎದುರೇ ಹರಿಹಾಯ್ದಿದ್ದಾರೆ. ಇದನ್ನೂ ಓದಿ:ಕಾರಿಡಾರ್‌ನಲ್ಲೇ ರೋಗಿಗಳಿಗೆ ಚಿಕಿತ್ಸೆ- ಗದಗ ಸರ್ಕಾರಿ ಆಸ್ಪತ್ರೆಯ ಅವ್ಯವಸ್ಥೆ

    ಇದೇ ವೇಳೆ ದತ್ತಾತ್ರೇಯ ಪಾಟೀಲ್‍ಗೆ ದನಿಗೂಡಿಸಿದ ಜಾಧವ್ ಸಹ ಅಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಂಡರು. ಸ್ಥಳಕ್ಕಾಗಮಿಸಿದ ಪಾಲಿಕೆ ಎಂಜಿನಿಯರನ್ನೂ ಸಖತ್ ತರಾಟೆಗೆ ತೆಗೆದುಕೊಂಡರು. ನಾವಿಲ್ಲಿ ಕೆಲಸ ಮಾಡಲು ಬಂದ್ರೆ ಮುಖಕ್ಕೆ ಪೌಡರ್ ಹಚ್ಚಿಕೊಳ್ಳಲು ಹೋಗಿದ್ರಾ ಎಂದು ಸ್ಥಳಕ್ಕೆ ತಡವಾಗಿ ಬಂದ ಅಧಿಕಾರಿಗೆ ಮಂಗಳಾರತಿ ಮಾಡಿದ್ದಾರೆ.

  • ಜಿಮ್ಸ್ ವೈದ್ಯಕೀಯ ವಿದ್ಯಾರ್ಥಿಗಳಿಗೆ ಮಾರಕ ಡಿಫ್ತೀರಿಯಾ ಸೋಂಕು ತಗುಲಿರುವ ಶಂಕೆ

    ಜಿಮ್ಸ್ ವೈದ್ಯಕೀಯ ವಿದ್ಯಾರ್ಥಿಗಳಿಗೆ ಮಾರಕ ಡಿಫ್ತೀರಿಯಾ ಸೋಂಕು ತಗುಲಿರುವ ಶಂಕೆ

    ಕಲಬುರಗಿ: ಜಿಲ್ಲೆಯ ಜಿಮ್ಸ್ (ಗುಲಬರ್ಗಾ ಇನ್‍ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್) ವೈದ್ಯಕೀಯ ಕಾಲೇಜಿನ 21 ವಿದ್ಯಾರ್ಥಿನಿಯರಿಗೆ ಮಾರಕ ಡಿಫ್ತೀರಿಯಾ ಸೋಂಕು ತಗುಲಿರುವ ಶಂಕೆ ವ್ಯಕ್ತವಾಗಿದೆ.

    ಜಿಮ್ಸ್ ವೈದ್ಯಕೀಯ ಕಾಲೇಜಿನ ಮಹಿಳಾ ವಸತಿ ನಿಲಯದಲ್ಲಿ ವಾಸವಿದ್ದ 21 ವಿದ್ಯಾರ್ಥಿನಿಯರಿಗೆ ಡಿಫ್ತಿರೀಯಾ ಸೋಂಕು ತಗುಲಿದೆ ಎಂಬ ಅನುಮಾನ ವ್ಯಕ್ತವಾಗಿದೆ. ಜ್ವರ, ಗಂಟಲು ನೋವಿನಿಂದ ವಿದ್ಯಾರ್ಥಿನಿಯರು ಬಳಲುತ್ತಿದ್ದ ಕಾರಣಕ್ಕೆ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಈ ಬಗ್ಗೆ ತಿಳಿದಿದೆ. ಹೀಗಾಗಿ ಡಿಫ್ತೀರಿಯಾ ಸೋಂಕು ಶಂಕೆ ಹಿನ್ನೆಲೆ ಲೇಡಿಸ್ ಹಾಸ್ಟೆಲಿನಲ್ಲಿದ್ದ 110 ವಿದ್ಯಾರ್ಥಿನಿಯರು ಹಾಗೂ 30 ಸಿಬ್ಬಂದಿಯನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿತ್ತು. ಇದರಲ್ಲಿ ಒಟ್ಟು 21 ವಿದ್ಯಾರ್ಥಿನಿಯರಿಗೆ ಡಿಫ್ತೀರಿಯಾ ಸೋಂಕು ತಗುಲಿರುವ ಲಕ್ಷಣಗಳು ಕಂಡುಬಂದಿದ್ದು, ಅವರನ್ನು ಜಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

    ಡಿಫ್ತೀರಿಯಾ ಸೋಂಕು ಶಂಕೆ ಇರುವ ವಿದ್ಯಾರ್ಥಿಗಳ ವೈದ್ಯಕೀಯ ಪರೀಕ್ಷಾ ವರದಿ ಬೆಂಗಳೂರಿನ ಬಿಎಂಸಿಆರ್‍ಐ ಲ್ಯಾಬೋರೇಟರಿಗೆ ರವಾನೆ ಮಾಡಲಾಗಿದೆ. ಕಲಬುರಗಿಯಲ್ಲಿ ಮಾರಕ ಡಿಫ್ತೀರಿಯಾ ಸೋಂಕು ಶಂಕೆ ಹಿನ್ನೆಲೆ ಜ್ವರ, ಶ್ವಾಸನಾಳ, ಗಂಟಲು ನೋವು ಇದ್ದರೆ ವೈದ್ಯಕೀಯ ಪರೀಕ್ಷೆ ಮಾಡಿಸಿಕೊಳ್ಳಿ, ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರಲ್ಲಿ ಜಿಮ್ಸ್ ನಿರ್ದೇಶಕರು ಮನವಿ ಮಾಡಿಕೊಂಡಿದ್ದಾರೆ.

  • ಗದಗ ಜಿಲ್ಲಾಸ್ಪತ್ರೆಯಲ್ಲಿ ಇರುವೆಗಳ ಕಾಟ

    ಗದಗ ಜಿಲ್ಲಾಸ್ಪತ್ರೆಯಲ್ಲಿ ಇರುವೆಗಳ ಕಾಟ

    ಗದಗ: ನಗರದ ಜಿಲ್ಲಾಸ್ಪತ್ರೆಯಲ್ಲಿ ಕಪ್ಪು ಇರುವೆಗಳ ಹಾವಳಿಯಿಂದ ಬಾಣಂತಿಯರು ಮತ್ತು ಹಸುಗೂಸುಗಳು ರಾತ್ರಿ ನಿದ್ರೆಯಿಲ್ಲದೆ ಹೈರಾಣಾಗುತ್ತಿದ್ದಾರೆ.

    ನಗರದ ಜಿಮ್ಸ್ ಆಸ್ಪತ್ರೆ ಸ್ವಚ್ಛತೆ ಇಲ್ಲದಿರೋದರಿಂದ ಬಹುತೇಕ ವಾರ್ಡ್ ಗಳಲ್ಲಿ ಇರುವೆಗಳ ಲೋಕವೇ ಸೃಷ್ಟಿಯಾಗುತ್ತದೆ. ಇರುವೆಗಳಿಂದ ತಪ್ಪಿಸಿಕೊಳ್ಳಲು ಬಾಣಂತಿಯರು ಕಷ್ಟಪಡುವ ದೃಶ್ಯಗಳು ಜಿಮ್ಸ್ ನಲ್ಲಿ ಕಾಣಸಿಗುತ್ತವೆ. ಇತ್ತ ಬಾಣಂತಿಯರಿಗೆ ನಮಗೆ ಕಚ್ಚಿದ್ರೆ ಸಹಿಸಿಕೊಳ್ಳಬಹುದು, ನವಜಾತ ಶಿಶುಗಳಿಗೆ ಕಚ್ಚಿದರೆ ಮುಂದೇನು ಎಂದು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

    ಈ ಸಂಬಂಧ ರೋಗಿಗಳು ವೈದ್ಯರು ಮತ್ತು ಸಿಬ್ಬಂದಿಗೆ ತಿಳಿಸಿದರೂ ಸ್ವಚ್ಛತಾ ಕಾರ್ಯಕ್ಕೆ ಮುಂದಾಗುತ್ತಿಲ್ಲ ಎಂಬ ಆರೋಪಗಳು ಕೇಳಿ ಬಂದಿವೆ. ಇಂದು ಆಸ್ಪತ್ರೆಯಲ್ಲಿ ಮಾಧ್ಯಮಗಳ ಕ್ಯಾಮೆರಾ ಕಂಡ ಕೂಡಲೇ ಸಿಬ್ಬಂದಿ ಸ್ವಚ್ಛತಾ ಕಾರ್ಯಕ್ಕೆ ಮುಂದಾದರು.