Tag: ಜಿಮ್

  • ಜಿಮ್‌ನಲ್ಲಿ ವರ್ಕ್ಔಟ್ ವೇಳೆ ಹೃದಯಾಘಾತ – ಪ್ರತ್ಯೇಕ ಕಡೆ ಇಬ್ಬರು ಸಾವು

    ಜಿಮ್‌ನಲ್ಲಿ ವರ್ಕ್ಔಟ್ ವೇಳೆ ಹೃದಯಾಘಾತ – ಪ್ರತ್ಯೇಕ ಕಡೆ ಇಬ್ಬರು ಸಾವು

    ಮುಂಬೈ/ತಿರುವನಂತಪುರಂ: ಜಿಮ್‌ನಲ್ಲಿ (Gym) ವರ್ಕ್ಔಟ್ ಮಾಡುವಾಗ ಹೃದಯಾಘಾತದಿಂದ (Heart Attack) ಕುಸಿದು ಬಿದ್ದು ಒಂದೇ ದಿನ ಇಬ್ಬರು ಸಾವನ್ನಪ್ಪಿರುವ ಪ್ರತ್ಯೇಕ ಘಟನೆ ಪುಣೆ (Pune) ಹಾಗೂ ಕೊಚ್ಚಿಯಲ್ಲಿ (Kocchi) ನಡೆದಿದೆ.

    ಕೇರಳದ (Kerala) ಕೊಚ್ಚಿ ಮೂಲದ ರಾಜ್ (42) ಹಾಗೂ ಮಹಾರಾಷ್ಟ್ರದ (Maharashtra) ಪುಣೆಯ ಮಿಲಿಂದ್ ಕುಲಕರ್ಣಿ (37) ಮೃತರು.ಇದನ್ನೂ ಓದಿ: ಬಾಲಕನ ಬರ್ಬರ ಹತ್ಯೆ ಕೇಸ್ – ನಿಶ್ಚಿತ್ ಕೊನೇ ಕ್ಷಣದ ವಿಡಿಯೋ ಸಿಸಿಟಿವಿಯಲ್ಲಿ ಸೆರೆ

    ಮೃತ ರಾಜ್ ಕೊಚ್ಚಿಯ ಜಿಮ್‌ವೊಂದರಲ್ಲಿ ವರ್ಕ್ಔಟ್ ಮಾಡುತ್ತಿದ್ದಾಗ ಹೃದಯಾಘಾತದಿಂದ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಮೃತ ಮಿಲಿಂದ್ ಕಳೆದ ಆರು ತಿಂಗಳಿನಿಂದ ಪುಣೆಯ ಪಿಂಪ್ರಿ ಚಿಂಚ್ವಾಡದ ಜಿಮ್‌ಗೆ ತೆರಳುತ್ತಿದ್ದರು. ಅವಘಡ ಸಂಭವಿಸಿದ ದಿನ ಎಂದಿನಂತೆ ಜಿಮ್‌ನಲ್ಲಿ ವರ್ಕ್ಔಟ್ ಮಾಡುತ್ತಿದ್ದರು. ವ್ಯಾಯಾಮ ಮಾಡಿ ನೀರು ಕುಡಿದ ನಂತರ ತಕ್ಷಣ ಕುಸಿದು ಬಿದ್ದಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ರವಾನಿಸಿದರೂ ಮಾರ್ಗ ಮಧ್ಯೆಯೇ ಸಾವನ್ನಪ್ಪಿರುವುದಾಗಿ ವೈದ್ಯರು ತಿಳಿಸಿದರು.

    ಮೂಲಗಳ ಪ್ರಕಾರ, ಇದಕ್ಕೂ ಮುನ್ನ ವೈದ್ಯೆಯಾಗಿದ್ದ ಮಿಲಿಂದ್ ಅವರ ಪತ್ನಿ ಕೂಡ ಹೃದಯಾಘಾತದಿಂದ ಸಾವನ್ನಪ್ಪಿದ್ದರು.ಇದನ್ನೂ ಓದಿ: ರಮ್ಯಾ ವಿರುದ್ಧ ಅಶ್ಲೀಲ ಕಾಮೆಂಟ್‌ – ಬಂಧಿತರು ದರ್ಶನ್‌ ಅಭಿಮಾನಿಗಳೇ‌ ಅಂತ ಪರಿಶೀಲಿಸ್ತಿದ್ದೇವೆ: ಸೀಮಂತ್‌ ಕುಮಾರ್‌ ಸಿಂಗ್‌

  • ಜಿಮ್‌ಗೆ ನುಗ್ಗಿ ಯುವಕರನ್ನು ಅಟ್ಟಾಡಿಸಿದ ಕೋತಿ!

    ಜಿಮ್‌ಗೆ ನುಗ್ಗಿ ಯುವಕರನ್ನು ಅಟ್ಟಾಡಿಸಿದ ಕೋತಿ!

    ಧಾರವಾಡ: ಜಿಮ್ ಒಳಗೆ ನುಗ್ಗಿ ಕೋತಿಯೊಂದು ಜಿಮ್ ಮಾಡುತ್ತಿದ್ದ ಯುವಕರನ್ನು ಓಡಾಡಿಸಿದ ಘಟನೆ ಧಾರವಾಡದ (Dharwad) ಸೈದಾಪುರದಲ್ಲಿ (Saidapur) ನಡೆದಿದೆ.ಇದನ್ನೂ ಓದಿ: ಭಾರತದ ಈ ಮೂರು ರಾಜ್ಯಗಳು ನಮ್ಮವು – ಬಾಂಗ್ಲಾ ಸರ್ಕಾರದ ಸಲಹೆಗಾರನ ಹೊಸ ಕ್ಯಾತೆ

    ಸೈದಾಪುರದ ಕಿಂಗ್‌ಡಮ್ ಜಿಮ್‌ಗೆ ನುಗ್ಗಿದ ಕೋತಿ ಅಲ್ಲಿನ ಸಲಕರಣೆಗಳ ಮೇಲೆ ಚೆಲ್ಲಾಟ ಮಾಡಿದೆ.

    ಈ ವೇಳೆ ಕೋತಿಯನ್ನು ಓಡಿಸಲು ಯುವಕರು ಮುಂದಾಗಿದ್ದಾರೆ. ಆದರೆ, ಆ ಯುವಕರ ಮೇಲೆಯೇ ಕೋತಿ ಎಗರಿ ಹೋಗಿದ್ದರಿಂದ ಯುವಕರು ಜಿಮ್ ಬಿಟ್ಟು ಹೊರಗಡೆ ಓಡಿ ಹೋಗಿದ್ದಾರೆ. ಕೋತಿಯ ಈ ಚೆಲ್ಲಾಟ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.ಇದನ್ನೂ ಓದಿ: 3 ಕೆ.ಜಿ ಚಿನ್ನ ವಂಚನೆ – ವರ್ತೂರ್ ಪ್ರಕಾಶ್ ಆಪ್ತೆ ಸೆರೆ

  • ಹೈಟೆಕ್‌ ಜಿಮ್‌, ಸ್ಪಾ – ಕೇಜ್ರಿವಾಲ್ ಮನೆ ಭ್ರಷ್ಟಾಚಾರದ ಮ್ಯೂಸಿಯಂ; ವೀಡಿಯೋ ಸಹಿತ ಬಿಜೆಪಿ ಆರೋಪ

    ಹೈಟೆಕ್‌ ಜಿಮ್‌, ಸ್ಪಾ – ಕೇಜ್ರಿವಾಲ್ ಮನೆ ಭ್ರಷ್ಟಾಚಾರದ ಮ್ಯೂಸಿಯಂ; ವೀಡಿಯೋ ಸಹಿತ ಬಿಜೆಪಿ ಆರೋಪ

    – ಸಾಮಾನ್ಯರು ಎನ್ನುವವರ ಹೈಫೈ ಜೀವನ ನೋಡಿ ಅಂತ ಟೀಕೆ

    ನವದೆಹಲಿ: ಮುಂದಿನ ಮೇ ತಿಂಗಳಲ್ಲಿ ನಡೆಯಲಿರುವ ದೆಹಲಿ ವಿಧಾನಸಭಾ ಚುನಾವಣೆಗೂ ಮುನ್ನವೇ ಸಿಎಂ ʻಶೇಶ್‌ ಮಹಲ್‌ʼ (Sheesh Mahal) ಬಂಗಲೆ ವಿವಾದ ತೀವ್ರಗೊಂಡಿದೆ.

    ದೆಹಲಿಯ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ​(Arvind Kejriwal) ವಿರುದ್ಧ ಸದಾ ಭ್ರಷ್ಟಾಚಾರ ಆರೋಪ ಮಾಡುವ ಬಿಜೆಪಿಯು, ಈಗ ಶೇಶ್‌ ಮಹಲ್‌ ಇನ್‌ಸೈಡ್‌ ವೀಡಿಯೋವೊಂದನ್ನ ಹಂಚಿಕೊಂಡಿದೆ. ದೆಹಲಿಯ 6 ಫ್ಲಾಗ್‌ಸ್ಟಾಫ್ ರಸ್ತೆಯಲ್ಲಿರುವ ಅಧಿಕೃತ ಬಂಗಲೆಯನ್ನು ಅರವಿಂದ್ ಕೇಜ್ರಿವಾಲ್ ಇನ್ನೂ ಔಪಚಾರಿಕವಾಗಿ ಖಾಲಿ ಮಾಡಿಲ್ಲ ಎಂದು ಬಿಜೆಪಿ (BJP) ಆರೋಪಿಸಿದೆ. ಇದನ್ನೂ ಓದಿ: ಬ್ರೇಕ್ ಫೇಲ್ ಆಗಿ ನಿಯಂತ್ರಣ ತಪ್ಪಿದ ಬಸ್ – 6 ಮಂದಿ ಸಾವು, 49 ಮಂದಿಗೆ ಗಾಯ

    ಬಂಗಲೆ ಒಳಗಿನ ಸಂಪೂರ್ಣ ವೀಡಿಯೋವನ್ನು ದೆಹಲಿ ಬಿಜೆಪಿ ಘಟಕದ ಅಧ್ಯಕ್ಷ ವೀರೇಂದ್ರ ಸಚ್‌ದೇವ್‌ ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ವೀಡಿಯೋದಲ್ಲಿ ಶೇಶ್‌ ಮಹಲ್‌ ಒಳಗಿನ ಹೈಟೆಕ್‌ ಜಿಮ್‌, ಮಿನಿ ಸ್ಪಾ ಕೇಂದ್ರ, ಬಾತ್‌ ಟಬ್‌, ಹೈಟೆಕ್‌ ಚೌಚಾಲಯ ಇವೆಲ್ಲವೂ ಐಷಾರಾಮಿ ಜೀವನವನ್ನು ಅನಾವರಣಗೊಳಿಸಿದೆ.

    ತನ್ನನ್ನು ಸಾಮಾನ್ಯ ವ್ಯಕ್ತಿ ಎಂದು ಕರೆದುಕೊಳ್ಳುವ ಅರವಿಂದ್‌ ಕೇಜ್ರಿವಾಲ್‌ ಅರಮನೆ ಬಗ್ಗೆ ನಾವು ಸತ್ಯವನ್ನು ಹೇಳುತ್ತಿದ್ದೇವೆ. ಇಂದು ಅದರ ದರ್ಶನ ಮಾಡಿಸುತ್ತೇವೆ. ಸಾರ್ವಜನಿಕ ಹಣ ದುರುಪಯೋಗಪಡಿಸಿಕೊಂಡು ತನಗಾಗಿ 7-ಸ್ಟಾರ್‌ ರೆಸಾರ್ಟನ್ನೇ ನಿರ್ಮಾಣ ಮಾಡಿದ್ದಾರೆ ಎಂದು ಅಧ್ಯಕ್ಷ ವೀರೇಂದ್ರ ಸಚ್‌ದೇವ್‌ ತಮ್ಮ ಎಕ್ಸ್‌ ಖಾತೆಯಲ್ಲಿ ಆರೋಪಿಸಿದ್ದಾರೆ.

    ಜಿಮ್‌ ಮತ್ತು ಸೌನಾ ಕೊಠಡಿ ಹಾಗೂ ಜಕುಜಿ (ಬಾತ್‌ ಟಬ್‌) ಕೊಠಡಿಗಳ ವೆಚ್ಚ 3.75 ಕೋಟಿ ರೂ., ಬಂಗಲೆಗೆ ಮಾಡಲಾಡ ಮಾರ್ಬಲ್‌ ಗ್ರಾನೈಟ್‌ ದೀಪಾಲಂಕಾರದ ವೆಚ್ಚ 1.9 ಕೋಟಿ ರೂ.ಗಳಷ್ಟಿದೆ. ಇದಲ್ಲದೇ ಇನ್ನಷ್ಟು ಕೆಲಸಕ್ಕೆ 1.5 ಕೋಟಿ ರೂ. ಬೇಕಾಗುತ್ತದೆ. ಇದರೊಂದಿಗೆ 35 ಲಕ್ಷ ರೂ. ವೆಚ್ಚದ ಜಿಮ್‌ ಹಾಗೂ ಸ್ಪಾ ಫಿಟ್ಟಿಂಗ್‌ ಸೌಲಭ್ಯವಿದೆ ಎಂದು ಎಕ್ಸ್‌ ಖಾತೆಯಲ್ಲಿ ಮಾಹಿತಿ ವಿವರಿಸಿದ್ದಾರೆ. ಅಲ್ಲದೇ ಸಾಮಾನ್ಯ ಮನುಷ್ಯ ಎಂದು ಹೇಳಿಕೊಳ್ಳುವ ಅರವಿಂದ್‌ ಕೇಜ್ರಿವಾಲ್‌ ಅವರಿಗೆ ನಾಚಿಗೇಡುತನ ಎಂದು ಕಿಡಿ ಕಾರಿದ್ದಾರೆ. ಇದನ್ನೂ ಓದಿ: ಹಿಂಸಾಚಾರಕ್ಕೆ ತಿರುಗಿದ ಪಂಚಮಸಾಲಿ ಹೋರಾಟ -ಹೋರಾಟಗಾರರ ಮೇಲೆ ಲಾಠಿಚಾರ್ಜ್‌

    ಮುಂದುವರಿದು, ತಮ್ಮ ಮಕ್ಕಳ ಮೇಲೆ ಪ್ರಮಾಣ ಮಾಡಿ, ಸರ್ಕಾರಿ ಮನೆ, ಕಾರು, ಭದ್ರತೆ ತೆಗೆದುಕೊಳ್ಳುವುದಿಲ್ಲ ಎಂದು ಪೊಳ್ಳು ಭರವಸೆ ನೀಡುವವರು ದೆಹಲಿ ತೆರಿಗೆದಾರರ ಹಣವನ್ನ ಲೂಟಿ ಮಾಡುತ್ತಿದ್ದಾರೆ. ಅಭಿವೃದ್ಧಿ ಕಾರ್ಯಗಳು ಕುಂಠಿತಗೊಂಡಿರುವ ಸಂದರ್ಭದಲ್ಲಿ ಕೋಟಿ ಕೋಟಿ ಖರ್ಚು ಮಾಡುವ ಅಧಿಕಾರ ಕೊಟ್ಟಿದ್ದು ಯಾರು ಎಂದು ಬಿಜೆಪಿ ನಾಯಕ ಪ್ರಶ್ನೆ ಮಾಡಿದ್ದಾರೆ. ಇದನ್ನೂ ಓದಿ: ಸಿಹಿ ತಿನಿಸು, ನಾಟಿ ಶೈಲಿ ಊಟ ಅಂದ್ರೆ ಪ್ರಾಣ – ಟೆನ್ನಿಸ್‌ ಕ್ರೀಡೆ ಫೇವರೆಟ್‌; ಎಸ್‌ಎಂಕೆ ಬಾಲ್ಯದ ಸ್ವಾರಸ್ಯ!

  • ಹುಡುಗರಂತೆ ವರ್ಕೌಟ್ ಮಾಡಿ ಬೈಸಿಪ್ಸ್ ಪ್ರದರ್ಶಿಸಿದ ಚೈತ್ರಾ ವಾಸುದೇವನ್

    ಹುಡುಗರಂತೆ ವರ್ಕೌಟ್ ಮಾಡಿ ಬೈಸಿಪ್ಸ್ ಪ್ರದರ್ಶಿಸಿದ ಚೈತ್ರಾ ವಾಸುದೇವನ್

    ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್  ಚೈತ್ರಾ ವಾಸುದೇವನ್ (Chaitra Vasudevan) ಹೊಸ ಅವತಾರದಲ್ಲಿ ಕಾಣಿಸ್ಕೊಂಡು ಆಶ್ಚರ್ಯ ಹುಟ್ಟಿಸಿದ್ದಾರೆ. ಸಾಮಾನ್ಯವಾಗಿ ಹುಡುಗರು ಸತತ ವರ್ಕೌಟ್ ಮಾಡುವ ಮೂಲಕ ಪಡೆಯುವ ಸ್ಟ್ರಾಂಗ್ ಮಸಲ್ಸ್ ಹಾಗೂ ಬೈಸಿಪ್ಸ್ (Biceps) ಅನ್ನು ಮಹಿಳೆಯಾಗಿ ಚೈತ್ರಾ ವಾಸುದೇವನ್ ಸಾಧಿಸಿದ್ದಾರೆ.

    ಸತತ ವರ್ಕೌಟ್‌ನ ಫಲವನ್ನ ಫೋಟೋ ಮೂಲಕ ತೋರಿಸಲು‌ ಇನ್‌ಸ್ಟಾಗ್ರಾಮ್‌  ಪೋಸ್ಟ್ ಮಾಡಿದ್ದಾರೆ ಚೈತ್ರಾ ವಾಸುದೇವನ್. ಮಿಲಿಯನ್ ಫಾಲೋವರ್ಸ್ ಹೊಂದಿರುವ ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ (Social Media Influencer) ಚೈತ್ರಾ ಜಾಲತಾಣದಲ್ಲಿ ಅವರದ್ದೇ ಆದ ಫ್ಯಾನ್ ಫಾಲೋವರ್ಸ್ ಹೊಂದಿರುವ ಸೆಲೆಬ್ರಿಟಿ. ಕನ್ನಡದ ಬಿಗ್‌ಬಾಸ್ (Bigg Boss) ಸ್ಪರ್ಧಿಯೂ ಆಗಿದ್ದ ಚೈತ್ರಾ ನಿರೂಪಕಿಯಾಗಿ-ಇವೆಂಟ್  ಪ್ಲ್ಯಾನರ್  ಆಗಿಯೂ ಕೆಲಸ ಮಾಡುತ್ತಿದ್ದಾರೆ. ಇದನ್ನೂ ಓದಿ: 600 ಕೋಟಿ ಕಲೆಕ್ಷನ್ ಮಾಡಿದ ‘ಸ್ತ್ರೀ 2’ ಸಿನಿಮಾ- ಶ್ರದ್ಧಾ ಕಪೂರ್ ಚಿತ್ರಕ್ಕೆ ಹೆಚ್ಚಿದ ಬೇಡಿಕೆ

    ಜಿಮ್‌ನಲ್ಲಿ ವರ್ಕೌಟ್ ಮಾಡುವ ಫೋಟೋ ಪೋಸ್ಟ್ ಮಾಡಿರುವ ಚೈತ್ರಾ ಹೆಣ್ಮಕ್ಕಳು ಅಪರೂಪದಲ್ಲಿ ಅಪರೂಪಕ್ಕೆ ಸ್ವೀಕರಿಸುವ ಟಾಸ್ಕ್ ಸ್ವೀಕರಿಸಿ ಯಶಸ್ವಿಯಾಗಿದ್ದಾರೆ. ಸಾಮಾನ್ಯವಾಗಿ ನಯಾ ನಾಜೂಕಿನ ಔಟ್‌ಲುಕ್ ಬಯಸುವ ಹೆಣ್ಮಕ್ಕಳು ಫಿಟ್ ಇರೋದಕ್ಕೆ ಜಿಮ್‌ಗೆ ಹೋಗಿ ವರ್ಕೌಟ್ ಮಾಡಿದರೂ ಬೈಸಿಪ್ಸ್ ಬರಿಸಿಕೊಳ್ಳುವ ರಿಸ್ಕ್ ತೆಗೆದುಕೊಳ್ಳುವುದಿಲ್ಲ. ಹೀಗಾಗಿ ಚೈತ್ರಾ ವಾಸುದೇವನ್ ಪ್ರತ್ಯೇಕ ಸಾಲಿನಲ್ಲಿ ನಿಲ್ತಾರೆ. ಇದನ್ನೂ ಓದಿ: ‘ಲಾಪತಾ ಲೇಡಿಸ್’ ಬೆನ್ನಲ್ಲೇ ಆಸ್ಕರ್‌ಗೆ ಪ್ರವೇಶ ಪಡೆದ ‘ಸ್ವಾತಂತ್ರ‍್ಯ ವೀರ್ ಸಾವರ್ಕರ್’ ಚಿತ್ರ

  • ಪತ್ನಿ ಜೊತೆ  ವರ್ಕೌಟ್ ಮಾಡುತ್ತಿರುವ ನಟ ಸೂರ್ಯ ವಿಡಿಯೋ ವೈರಲ್

    ಪತ್ನಿ ಜೊತೆ ವರ್ಕೌಟ್ ಮಾಡುತ್ತಿರುವ ನಟ ಸೂರ್ಯ ವಿಡಿಯೋ ವೈರಲ್

    ತ್ನಿ ಜ್ಯೋತಿಕಾ (Jyotika) ಜೊತೆ ಜೀಮ್ (Gym) ನಲ್ಲಿ ವರ್ಕೌಟ್ ಮಾಡುತ್ತಿರುವ ಸೂರ್ಯ (Surya) ಅವರ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಸೂರ್ಯ ಮತ್ತು ಜ್ಯೋತಿಕಾ ಈ ವಯಸ್ಸಲ್ಲೂ ಯಾಕಿಷ್ಟೊಂದು ಯಂಗ್ ಆಗಿ ಕಾಣುತ್ತಾರೆ ಎನ್ನುವುದಕ್ಕೆ ಉತ್ತರ ಸಿಕ್ಕಿದೆ ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ. ಜೀಮ್ ನಲ್ಲಿ ಬೆವರು ಹರಿಸುತ್ತಲೇ ಹೊಸ ಹೊಸ ಸಿನಿಮಾಗಳನ್ನೂ ಸೂರ್ಯ ಘೋಷಣೆ ಮಾಡುತ್ತಿದ್ದಾರೆ.

    ಸೂರ್ಯ ಇದೀಗ ಮತ್ತೊಂದು ಹೊಸ ಸಿನಿಮಾವನ್ನು ಘೋಷಣೆ ಮಾಡಿದ್ದಾರೆ. ಇದು ಇವರ 44ನೇ ಚಿತ್ರವಾಗಿದ್ದು, ಹೆಸರಾಂತ ನಟರ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿರುವ ಸ್ಟಾರ್ ಡೈರೆಕ್ಟರ್ ಕಾರ್ತಿಕ್ ಸುಬ್ಬರಾಜು (Karthik Subbaraju) ಈ ಸಿನಿಮಾದ ನಿರ್ದೇಶಕರು. ಸೂರ್ಯ ಅವರ ಕಂಗುವ ಸಿನಿಮಾ ರಿಲೀಸ್ ಮುನ್ನವೇ ಈ ಹೊಸ ಚಿತ್ರವನ್ನು ಸೂರ್ಯ ಸೋಷಿಯಲ್ ಮೀಡಿಯಾ ಮೂಲಕ ಘೋಷಣೆ ಮಾಡಿದ್ದಾರೆ.

    ಕಂಗುವ ಸಿನಿಮಾ ಭಾರತೀಯ ಸಿನಿಮಾ ರಂಗದಲ್ಲಿ ಹೆಚ್ಚು ಸದ್ದು ಮಾಡುತ್ತಿದೆ. ಮೊನ್ನೆಯಷ್ಟೇ ‘ಕಂಗುವ’ (Kanguva) ಸಿನಿಮಾದ ಟೀಸರ್ (Teaser) ಬಿಡುಗಡೆ ಆಗಿದ್ದು ಅದ್ಧೂರಿ ತನದ ಮೇಕಿಂಗ್, ಕಲಾವಿದ ಆರ್ಭಟ. ದೃಶ್ಯ ವೈಭವ ಹಾಗೂ ಹಿನ್ನೆಲೆ ಸಂಗೀತದಿಂದಾಗಿ ಟೀಸರ್ ಮತ್ತೊಮ್ಮೆ ನೋಡಬೇಕು ಅನಿಸುತ್ತಿದೆ. ಹೊಡೆದಾಟ, ರಕ್ತದೋಕುಳಿ, ಹೊಸ ಬಗೆಯ ಆಯುಧ, ರಾಕ್ಷಸರು ಹೀಗೆ ನಾನಾ ರೀತಿಯ ದೃಶ್ಯಗಳನ್ನು ಜೋಡಿಸಿಕೊಂಡು ಈ ಟೀಸರ್ ಕಟ್ಟಲಾಗಿದೆ. ಟೀಸರ್ ಕುರಿತಂತೆ ಅಕ್ಷರಗಳಲ್ಲಿ ಓದುವುದಕ್ಕಿಂತ ನೋಡುವುದೇ ಒಂದು ಅನುಭವ.

     

    ಇತ್ತೀಚೆಗಷ್ಟೇ ಚಿತ್ರದ ಹೊಸ ಪೋಸ್ಟರ್ ರಿಲೀಸ್ ಆಗಿತ್ತು. ಈ ಪೋಸ್ಟರ್ ನಲ್ಲಿ ಸೂರ್ಯ ಸಖತ್ ಮಿಂಚಿದ್ದರು. ಪೋಸ್ಟರ್ ಕಂಡು ಅಭಿಮಾನಿಗಳು ಫಿದಾ ಆಗಿದ್ದರು.  ಜೊತೆಗೆ ಈ ಸಿನಿಮಾವನ್ನು ಬರೋಬ್ಬರಿ 38 ಭಾಷೆಗಳಲ್ಲಿ ರಿಲೀಸ್ ಮಾಡುವುದಾಗಿ ಚಿತ್ರತಂಡ ಘೋಷಣೆ ಮಾಡಿದೆ. ಜೊತೆಗೆ 3 ಡಿ ತಂತ್ರಜ್ಞಾನದಲ್ಲೂ ಈ ಸಿನಿಮಾವನ್ನು ನೋಡಬಹುದಾಗಿದೆ. ಸಿನಮಾ ಬಿಡುಗಡೆಗೂ ಮುನ್ನವೇ ಭರ್ಜರಿ ವ್ಯಾಪಾರ ಕೂಡ ಆರಂಭಿಸಿದೆ.  ಭಾರೀ ಮೊತ್ತಕ್ಕೆ ಓಟಿಟಿಗೆ ಸೇಲ್ ಆಗುವ ಮೂಲಕ ಸಂಭ್ರಮವನ್ನು ಇಮ್ಮಡಿಗೊಳಿಸಿದೆ.

  • ಅಮೆರಿಕದಲ್ಲಿ ಚಾಕು ಇರಿತ; 11 ದಿನ ಸಾವು-ಬದುಕಿನ ನಡುವೆ ಹೋರಾಡಿದ್ದ ಭಾರತೀಯ ವಿದ್ಯಾರ್ಥಿ ಕೊನೆಯುಸಿರು

    ಅಮೆರಿಕದಲ್ಲಿ ಚಾಕು ಇರಿತ; 11 ದಿನ ಸಾವು-ಬದುಕಿನ ನಡುವೆ ಹೋರಾಡಿದ್ದ ಭಾರತೀಯ ವಿದ್ಯಾರ್ಥಿ ಕೊನೆಯುಸಿರು

    ವಾಷಿಂಗ್ಟನ್: ಅಮೆರಿಕದ (America) ಇಂಡಿಯಾನಾದಲ್ಲಿ ಫಿಟ್‌ನೆಸ್ ಸೆಂಟರ್‌ನಲ್ಲಿ (Fitness Center) ಚಾಕು ಇರಿತಕ್ಕೊಳಗಾಗಿ ಗಂಭೀರವಾಗಿ ಗಾಯಗೊಂಡಿದ್ದ ಭಾರತ ಮೂಲದ ವಿದ್ಯಾರ್ಥಿ (Indian Student) ವರುಣ್ ರಾಜ್ ಪುಚಾ (24) ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ ಎಂದು ಆತ ವ್ಯಾಸಂಗ ಮಾಡುತ್ತಿದ್ದ ವಿಶ್ವವಿದ್ಯಾಲಯ ತಿಳಿಸಿದೆ.

    ವಾಲ್ಪಾರೈಸೊ ವಿಶ್ವವಿದ್ಯಾಲಯದ ಕಂಪ್ಯೂಟರ್ ಸೈನ್ಸ್ ವಿದ್ಯಾರ್ಥಿ ವರುಣ್ (Varun Raj Pucha) ಅಕ್ಟೋಬರ್ 29 ರಂದು ಸಾರ್ವಜನಿಕ ಜಿಮ್‌ನಲ್ಲಿದ್ದಾಗ ದುಷ್ಕರ್ಮಿ ಜೋರ್ಡಾನ್ ಆಂಡ್ರೇಡ್ (24) ಎಂಬಾತ ಆತನ ತಲೆಗೆ ಚಾಕುವಿನಿಂದ ಇರಿದಿದ್ದ. ಘಟನೆ ಸಂಬಂಧಿಸಿದಂತೆ ಪೊಲೀಸರು ತನಿಖೆ ನಡೆಸಿ, ಆರೋಪಿಯನ್ನು ಬಂಧಿಸಿದ್ದಾರೆ.

    ವಿದ್ಯಾರ್ಥಿ ಅಗಲಿಕೆ ಬಳಿಕ ಮಾಹಿತಿ ನೀಡಿರುವ ವಾಲ್ಪರೈಸೊ ವಿಶ್ವವಿದ್ಯಾಲಯ, ವರುಣ್ ರಾಜ್ ಪುಚ್ಚಾ ಅಗಲಿಕೆ ಸುದ್ದಿಯನ್ನು ನಾವು ಭಾರವಾದ ಹೃದಯದಿಂದ ಹಂಚಿಕೊಳ್ಳುತ್ತಿದ್ದೇವೆ. ನಮ್ಮ ಕ್ಯಾಂಪಸ್ ಸಮುದಾಯದ ಭಾಗವಾಗಿದ್ದ ವಿದ್ಯಾರ್ಥಿಯನ್ನು ಕಳೆದುಕೊಂಡಿದ್ದೇವೆ. ಈ ನಷ್ಟಕ್ಕೆ ನಾವು ತೀವ್ರವಾಗಿ ವಿಷಾದಿಸುತ್ತೇವೆ. ನಾವು ಅಗಲಿದ ವಿದ್ಯಾರ್ಥಿ ವರುಣ್‌ನ ಕುಟುಂಬ ಮತ್ತು ಸ್ನೇಹಿತರೊಂದಿಗಿದ್ದೇವೆ ಎಂದು ಹೇಳಿದೆ. ಇದನ್ನೂ ಓದಿ: ಜಮ್ಮುವಿನಲ್ಲಿ ಉಗ್ರನ ಬೇಟೆಯಾಡಿದ ಭಾರತೀಯ ಸೇನೆ

    ತೆಲಂಗಾಣದ ಖಮ್ಮಂ ಮೂಲದ ವರುಣ್ 2022ರ ಆಗಸ್ಟ್‌ನಲ್ಲಿ ಅಮೆರಿಕಗೆ ತೆರಳಿ ಕಂಪ್ಯೂಟರ್ ಸೈನ್ಸ್‌ನಲ್ಲಿ ಎಂಎಸ್ ವ್ಯಾಸಂಗ ಮಾಡುತ್ತಿದ್ದ. ಮುಂದಿನ ವರ್ಷ ತಮ್ಮ ಕೋರ್ಸ್ ಮುಗಿದ ಬಳಿಕ ಸ್ವದೇಶಕ್ಕೆ ಮರಳುವ ನಿರೀಕ್ಷೆಯಲ್ಲಿದ್ದ. ಆದರೆ ಅನಿರೀಕ್ಷಿತ ಘಟನೆಯಿಂದ ವಿದ್ಯಾರ್ಥಿಯ ಕುಟುಂಬ ಹಾಗೂ ವಿಶ್ವವಿದ್ಯಾಲಯ ಆಘಾತಕ್ಕೊಳಗಾಗಿದೆ. ಇದನ್ನೂ ಓದಿ: ಜೇಡ ಕಚ್ಚಿ ಖ್ಯಾತ ಗಾಯಕ ಸಾವು

  • ಕುಸಿದು ಬಿದ್ದ ಜಿಮ್ ಛಾವಣಿ- 10 ಮಂದಿ ದುರ್ಮರಣ

    ಕುಸಿದು ಬಿದ್ದ ಜಿಮ್ ಛಾವಣಿ- 10 ಮಂದಿ ದುರ್ಮರಣ

    ಬೀಜಿಂಗ್: ಜಿಮ್ ಛಾವಣಿ (Gym Roof Collapse) ಕುಸಿದು ಬಿದ್ದ ಪರಿಣಾಮ 10 ಮಂದಿ ದಾರುಣವಾಗಿ ಮೃತಪಟ್ಟು, ಓರ್ವ ಅವಶೇಷಗಳಡಿಯಲ್ಲಿ ಸಿಲುಕಿಕೊಂಡ ಘಟನೆ ಚೀನಾದಲ್ಲಿ (China) ನಡೆದಿದೆ.

    ಸೋಮವಾರ ಮುಂಜಾನೆ 5:30ರ ಸುಮಾರಿಗೆ ಈ ಘಟನೆ ನಡೆದಿದು, 14 ಮಂದಿಯನ್ನು ಅವಶೇಷಗಳಡಿಯಿಂದ ಹೊರತೆಗೆಯಲಾಗಿದೆ. ಇದರಲ್ಲಿ ಆರು ಮಂದಿ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ಘಟನೆಯ ಸಂಪೂರ್ಣ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಘಟನೆ ನಡೆದ ತಕ್ಷಣ ಅಗ್ನಿಶಾಮಕದ ದಳದ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ, ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.

    ಸುಮಾರು 160 ಅಗ್ನಿಶಾಮಕ ಸಿಬ್ಬಂದಿ ಮತ್ತು 39 ಅಗ್ನಿಶಾಮಕ ಟ್ರಕ್‍ಗಳು ಸ್ಥಳದಲ್ಲಿದ್ದವು. ಕಳಪೆ ಕಾಮಗಾರಿ ಹಿನ್ನೆಲೆಯಲ್ಲಿ ಭಾರೀ ಮಳೆ ಬಿದ್ದಾಗ ಛಾವಣಿ ಕುಸಿದಿದೆ. ಹೀಗಾಗಿ ಕಟ್ಟಡ ನಿರ್ಮಾಣ ಮಾಡಿದ ಉಸ್ತುವಾರಿಯನ್ನು ಬಂಧಿಸಲಾಗಿದೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ. ಇದನ್ನೂ ಓದಿ: ಕರುನಾಡಲ್ಲಿ ಮುಂಗಾರು ಅಬ್ಬರ- ವರುಣಾರ್ಭಟಕ್ಕೆ ನೂರೆಂಟು ಅವಾಂತರ

    2015 ರಲ್ಲಿ ಟಿಯಾಂಜಿನ್‍ನಲ್ಲಿ ಇಂಥದ್ದೇ ಒಂದು ಘಟನೆ ನಡೆಯಿತು. ಅಲ್ಲಿ ರಾಸಾಯನಿಕ ಗೋದಾಮಿನಲ್ಲಿ ಭಾರೀ ಸ್ಫೋಟವು ಕನಿಷ್ಠ 165 ಮಂದಿ ಮೃತಪಟ್ಟಿದ್ದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮತ್ತೆ ದೇಹದಂಡಿಸಲು ಹೊರಟ ಮೋಹಕ ತಾರೆ ರಮ್ಯಾ

    ಮತ್ತೆ ದೇಹದಂಡಿಸಲು ಹೊರಟ ಮೋಹಕ ತಾರೆ ರಮ್ಯಾ

    ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಮತ್ತೆ ಸಿನಿಮಾ ರಂಗಕ್ಕೆ ನಟಿಯಾಗಿ ವಾಪಸ್ಸಾಗುತ್ತಿರುವುದರಿಂದ ಅದಕ್ಕೆ ಬೇಕಾದ ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ. ತೂಕ ಇಳಿಸಿಕೊಳ್ಳುವಲ್ಲಿ ಅವರು ಬ್ಯುಸಿಯಾಗಿದ್ದು, ದೇಹದಂಡಿಸಿದಾಗ ಉಂಟಾಗುವ ನೋವಿನ ಕುರಿತು ಅವರು ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಆಗ ತಾನೆ ವ್ಯಾಯಾಮ (Exercise) ಮುಗಿಸಿದಂತಿರುವ ರಮ್ಯಾ, ಆ ನೋವಿನ ಕುರಿತಾಗಿ ಇನ್ಸ್ಟ್ ದಲ್ಲಿ ವಿಡಿಯೋ (Video) ಹಾಕಿ ಬರೆದುಕೊಂಡಿದ್ದಾರೆ.

    ಜಿಮ್ (Gym) ಡ್ರೆಸ್ ನಲ್ಲಿ ವಿಡಿಯೋವೊಂದನ್ನು ಮಾಡಿದ್ದು, ಅದರಲ್ಲಿ ಸಖತ್ ಆಗಿ ಸ್ಟೆಪ್ ಹಾಕಿದ್ದಾರೆ. ಆ ವಿಡಿಯೋಗೆ ಎಂಡೋರ್ಫಿನ್ಸ್ (Endorphin) ಎಂದು ಕ್ಯಾಪ್ಶನ್ ಕೂಡ ಕೊಟ್ಟಿದ್ದಾರೆ. ಎಂಡೋರ್ಫಿನ್ಸ್ ಅಂದರೆ ಅದೊಂದು ಹಾರ್ಮೋನ್ (Hormones). ದೇಹ ದಂಡಿಸಿದಾಗ ಬಿಡುಗಡೆ ಆಗುವಂತಹ ಹಾರ್ಮೋನ್ ಅದಾಗಿದೆ. ಸಾಮಾನ್ಯವಾಗಿ ಹೆಚ್ಚು ವ್ಯಾಯಾಮ ಮಾಡಿದರೆ, ಜಿಮ್ ನಲ್ಲೇ ಕಳೆದರು ಆ ಹಾರ್ಮೋನ್ ಉತ್ಪತ್ತಿ ಆಗುತ್ತಿದೆ. ಅಲ್ಲಿಗೆ ರಮ್ಯಾ ಮತ್ತಷ್ಟು ತೂಕ ಇಳಿಸಿಕೊಂಡು ಸ್ಲಿಮ್ ಆಗಿ ಕ್ಯಾಮೆರಾ ಮುಂದೆ ನಿಲ್ಲಲಿದ್ದಾರೆ ಎನ್ನುವುದು ಪಕ್ಕಾ ಆಗಿದೆ.

    ಈ ನಡುವೆ ವಿದೇಶ ಪ್ರವಾಸದಲ್ಲೂ ರಮ್ಯಾ ಬ್ಯುಸಿಯಾಗಿದ್ದಾರೆ. ಅಲ್ಲಿನ ಅಂದಚಂದವನ್ನು ಅವರು ಪದಗಳ ಮೂಲಕ ಅಭಿಮಾನಿಗಳ ಜೊತೆ ಹಂಚಿಕೊಳ್ಳುತ್ತಾರೆ. ಮೊನ್ನೆಯಷ್ಟೇ ಅಂದವಾದ ಹೂವಿನ (Flower) ಜೊತೆ ಚಂದವಾದ ಹೀರೋಯಿನ್‌ನ ನೋಡಿದ ಫ್ಯಾನ್ಸ್ ಫುಲ್ ಖುಷಿಯಾಗಿದ್ದಾರೆ. ಹೂವು ಅರಳಿದೆ ರಮ್ಯಾ ಮೊಗದಲ್ಲಿ ಮಂದಹಾಸ ಮೂಡಿದೆ ಜೊತೆಗೆ ಈ ಚೆಲುವೆ ಪೋಣಿಸಿದ ಸಾಲುಗಳು (Poem) ಸಖತ್ ಸೌಂಡ್ ಮಾಡ್ತಿದೆ.

    ಮೋಹಕತಾರೆಯ ಹೊಸ ಅಪ್‌ಡೇಟ್ ನೋಡಿಕೊಂಡು ರಮ್ಯಾ ಬರೆದಿರುವ ಕವಿತೆಯ ಸಾರವನ್ನ ತಿಳಿದುಕೊಂಡು ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಸುರಲೋಕದ ಸುಂದರಿಯನ್ನ ಯಾರೂ ನೋಡಿಲ್ಲ ಅವರು ಕಾಣಿಸ್ತಾರೋ ಇಲ್ವೋ ಗೊತ್ತಿಲ್ಲ. ಆದ್ರೆ ಸ್ಯಾಂಡಲ್‌ವುಡ್ ಸಿನಿಮಾ ಅಭಿಮಾನಿಗಳಿಗೆ ಮೋಹಕತಾರೆ ರಮ್ಯಾ ದೇವಲೋಕದ ಸುಂದರಿಯಂತೆ ಸೋಷಿಯಲ್ ಮೀಡಿಯಾದಲ್ಲಿ ದರ್ಶನ ಕೊಡ್ತಿರ್ತಾರೆ.

    ಸದ್ಯ ರಮ್ಯಾ ಜಾಲತಾಣದಲ್ಲಿ ಸಖತ್ ಸೌಂಡ್ ಮಾಡ್ತಿದ್ದಾರೆ. ಈ ಕ್ಯೂಟ್ ಫೋಟೋಸ್ ನೋಡಿ ರಮ್ಯಾ ಅಭಿಮಾನಿಗಳು ಲೈಕ್ಸ್, ಕಾಮೆಂಟ್‌ಗಳ ಸುರಿಮಳೆ ಸುರಿಸ್ತಿದ್ದಾರೆ. ಫೋಟೋದಲ್ಲಿ ನಗ್ತಿರುವ ರಮ್ಯಾ ಮಂದಹಾಸವನ್ನ ಮನದಲ್ಲಿ ತುಂಬಿಕೊಳ್ತಿದ್ದಾರೆ ಈಕೆಯ ಅಭಿಮಾನಿಗಳು. ಇದನ್ನೂ ಓದಿ:ಗುಟ್ಟಾಗಿ ಮದುವೆಯಾದ್ರಾ ‘ಕೆಜಿಎಫ್’ ನಟಿ ಶ್ರೀನಿಧಿ ಶೆಟ್ಟಿ?

    ರಮ್ಯಾ ಸದ್ಯ ವಿದೇಶ ಪ್ರವಾಸದಲ್ಲಿದ್ದಾರೆ. ಗುಲಾಬಿ ಹೂವುಗಳ ಮುಂದೆ ನಿಂತು ಮುಗುಳು ನಗೆ ಕೊಟ್ಟಿದ್ದಾರೆ. ಈ ಸುಂದರಿಯ ಸ್ಮೈಲ್ ನೋಡಿ ಹೂವುಗಳು ಕೂಡ ಖುಷಿ ಪಟ್ಟಿದೆ ಅನ್ನೊದು ದೂರದಿಂದ ಬಂದ ಸಮಾಚಾರ. ಅಂದವಾದ ಫೋಟೋಗಳ ಜೊತೆ ಚಂದವಾದ ಸಾಲುಗಳನ್ನ ಕೂಡ ಪೋಣಿಸಿದ್ದಾರೆ ಮೋಹಕತಾರೆ.

     

     

    View this post on Instagram

     

    A post shared by Ramya|Divya Spandana (@divyaspandana)

    ನಿರ್ಮಾಪಕಿಯಾಗಿ ಹೊಸ ಅಧ್ಯಾಯ ಶುರು ಮಾಡಿರುವ ರಮ್ಯಾ ನಟಿಯಾಗಿ ಕೂಡ ಮತ್ತೆ ಬಣ್ಣ ಹಚ್ಚಲು ಸಜ್ಜಾಗಿದ್ದಾರೆ. ಶೂಟಿಂಗ್ ಶುರು ಮಾಡುವ ಮೊದಲು ಒಂದು ವೆಕೇಷನ್‌ಗೆ ಹೋಗಿದ್ದಾರೆ ಅನ್ನೊದು ಮೂಲಗಳ ಮಾಹಿತಿ. ಹೂವು ಅಂದ… ರಮ್ಯಾ ನಗು ಚೆಂದ… ನಮ್ಗು ನಿಮ್ಗು ಇರಲಿ ಜನುಮ ಜನುಮಕ್ಕು ಅನುಬಂಧ ಅಂತಿದ್ದಾರೆ ಅಭಿಮಾನಿಗಳು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಹುಬ್ಬಳ್ಳಿಯ ಪ್ರತಿಷ್ಠಿತ ಜಿಮ್ ಮಾಲೀಕ ಆತ್ಮಹತ್ಯೆ

    ಹುಬ್ಬಳ್ಳಿಯ ಪ್ರತಿಷ್ಠಿತ ಜಿಮ್ ಮಾಲೀಕ ಆತ್ಮಹತ್ಯೆ

    ಹುಬ್ಬಳ್ಳಿ: ನಗರದ ಪ್ರತಿಷ್ಠಿತ ಜಿಮ್ (Gym) ಮಾಲೀಕ ನೇಣು ಬಿಗಿದು ತಡರಾತ್ರಿ ಆತ್ಮಹತ್ಯೆ ಮಾಡಿಕೊಂಡಿರುವ ವಿದ್ಯಾನಗರದ ಶಿರೂರು ಪಾರ್ಕ್ ಬಳಿ ನಡೆದಿದೆ.

    ಪ್ರತಿಷ್ಠಿತ ಆರೆಂಜ್ ಜಿಮ್ ಮಾಲಿಕ ಜಿತೇಂದ್ರ ಶೀಗಿಹಳ್ಳಿ (48) ಆತ್ಮಹತ್ಯೆ ಮಾಡಿಕೊಂಡಿರುವ ವ್ಯಕ್ತಿ. ಜಿತೇಂದ್ರ ತಮ್ಮ ಮನೆಯ ಕೊಠಡಿಯಲ್ಲಿನ ಫ್ಯಾನ್‍ಗೆ ನೇಣು ಹಾಕಿಕೊಂಡಿದ್ದಾರೆ. ಮೇಲ್ಮನೆಯ ಕೊಠಡಿಗೆ ತೆರಳಿದ್ದ ಅವರು ತಡವಾದರೂ ಹೊರಗೆ ಬಂದಿರಲಿಲ್ಲ. ಬಾಗಿಲು ಬಡಿದರೂ ತೆರೆಯಲು ಬಂದಿಲ್ಲ. ಇದರಿಂದ ಅನುಮಾನಗೊಂಡ ಕುಟುಂಬದವರು ಕಿಟಕಿಯಲ್ಲಿ ನೋಡಿದಾಗ, ನೇಣು ಹಾಕಿಕೊಂಡಿರುವುದು ಗೊತ್ತಾಗಿದೆ.

    ಕೂಡಲೇ ಬಾಗಿಲು ಮುರಿದು ಜಿತೇಂದ್ರ ಅವರನ್ನು ಕಿಮ್ಸ್ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಅಷ್ಟೊತ್ತಿಗಾಗಲೇ ಜೀತ್ರೇಂದ್ರ ಪ್ರಾಣಪಕ್ಷಿ ಹಾರಿ ಹೋಗಿತ್ತು. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ವಿದ್ಯಾನಗರ ಪೊಲೀಸರು ಆತ್ಮಹತ್ಯೆಗೆ ಏನು ಕಾರಣದ ಬಗ್ಗೆ ತನಿಖೆ ಮಾಡುತ್ತಿದ್ದಾರೆ. ಇದನ್ನೂ ಓದಿ: ಬಲೂನ್ ಕಟ್ಟಿಕೊಂಡು ಕುಮಾರಧಾರ ನದಿಗೆ ಹಾರಿ ಉದ್ಯಮಿ ಆತ್ಮಹತ್ಯೆ

  • ನಟ ಅಮನ್ ಧಾಲಿವಾಲ್ ಗೆ ಮಚ್ಚಿನಿಂದ ಹಲ್ಲೆ

    ನಟ ಅಮನ್ ಧಾಲಿವಾಲ್ ಗೆ ಮಚ್ಚಿನಿಂದ ಹಲ್ಲೆ

    ಬಾಲಿವುಡ್ (Bollywood) ಹಾಗೂ ಪಂಜಾಬಿ (Punjab) ನಟ ಅಮನ್ ಧಾಲಿವಾಲ್ (Aman Dhaliwal) ಮೇಲೆ ಮಾರಣಾಂತಿಕ ಹಲ್ಲೆ (Attack) ನಡೆದಿದೆ. ಹಲ್ಲೆ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಮನ್ ಜಿಮ್ ನಲ್ಲಿ ವರ್ಕೌಟ್ ಮಾಡುತ್ತಿರುವಾಗ ಕಿಡಿಗೇಡಿಯೊಬ್ಬ ಜಿಮ್ ಗೆ ನುಗ್ಗಿ ಮಾರಕಾಸ್ತ್ರದಿಂದ ಹಲ್ಲೆ ಮಾಡಿದ್ದಾನೆ.

    ತಮ್ಮ ಪಾಡಿಗೆ ತಾವು ಜಿಮ್ ನಲ್ಲಿ ವರ್ಕೌಟ್ ಮಾಡುತ್ತಿರುವಾಗ ಅಪರಿಚಿತ ವ್ಯಕ್ತಿಯೋರ್ವ ಮಾರಕಾಸ್ತ್ರಗಳನ್ನು ಹಿಡಿದುಕೊಂಡು ಜಿಮ್ ಗೆ ನುಗ್ಗುತ್ತಾನೆ. ಅತ್ತಿತ್ತ ನೋಡಿ, ಅಲ್ಲಿಯೇ ಇದ್ದ ಅಮನ್ ಗೆ ನೀರು ಕೊಡುವಂತೆ ದಬಾಯಿಸುತ್ತಾನೆ. ಅಮನ್ ಕೇರ್ ಮಾಡದೇ ಇದ್ದಾಗ ಮಚ್ಚು ತೋರಿಸಿ ಬೆದರಿಸಲು ಪ್ರಯತ್ನಿಸುತ್ತಾನೆ. ಆ ವ್ಯಕ್ತಿಯನ್ನು ಅಮನ್ ಮಣಿಸಲು ಯತ್ನಿಸುತ್ತಾರೆ. ಈ ವೇಳೆ ಮನಸ್ಸಿಗೆ ಬಂದಂತೆ ವ್ಯಕ್ತಿ ಮಚ್ಚು ಬೀಸುತ್ತಾನೆ. ಈ ಸಮಯದಲ್ಲಿ ಅಮನ್ ಮೈತುಂಬಾ ಗಾಯಗಳಾಗುತ್ತವೆ. ಇದನ್ನೂ ಓದಿ:  ‘ಟ್ವಿಂಕಲ್’ ಹಾಡು ಹೇಳುತ್ತಾ ಬಂದ ಶಿವಾಜಿ ಸುರತ್ಕಲ್ 2

    ಜೋದಾ ಅಕ್ಬರ್, ಬಿಗ್ ಬದ್ರರ್, ಅಜ್ ದೇ ರಾಂಜಾ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿರುವ ಅಮನ್ ಧಾಲಿವಾಲ್ ಎಂದಿನಂತೆ ಜಿಮ್ ಗೆ ಬಂದ ವೇಳೆ ಈ ಘಟನೆ ನಡೆದಿದೆ. ಕೂಡಲೇ ಪೊಲೀಸ್ ಸಿಬ್ಬಂದಿಗೆ ಸುದ್ದಿ ಮುಟ್ಟಿಸಲಾಗುತ್ತದೆ. ಸ್ಥಳಕ್ಕೆ ಬಂದ ಪೊಲೀಸರು ಆ ವ್ಯಕ್ತಿಯನ್ನು ವಶಕ್ಕೆ ಪಡೆದಿದ್ದಾರೆ.