Tag: ಜಿಪಿಆರ್‌

  • 6 ಗಂಟೆ ಕಾರ್ಯಾಚರಣೆ – 22 ಅಡಿ ಉದ್ದ, 8 ಅಡಿ ಅಗಲ, 18 ಅಡಿ ಆಳದ ಗುಂಡಿ ತೋಡಿದರೂ ಸಿಗದ ಮೂಳೆ

    6 ಗಂಟೆ ಕಾರ್ಯಾಚರಣೆ – 22 ಅಡಿ ಉದ್ದ, 8 ಅಡಿ ಅಗಲ, 18 ಅಡಿ ಆಳದ ಗುಂಡಿ ತೋಡಿದರೂ ಸಿಗದ ಮೂಳೆ

    – ಧರ್ಮಸ್ಥಳದ 13ನೇ ಪಾಯಿಂಟ್‌ನಲ್ಲಿ ಅಸ್ಥಿಗೆ ಶೋಧ

    ಮಂಗಳೂರು: ಧರ್ಮಸ್ಥಳ ಬುರುಡೆ ರಹಸ್ಯಕ್ಕೆ (Dharmasthala Mass Burial Case) ಸಂಬಂಧಿಸಿದಂತೆ ಪಾಯಿಂಟ್ 13 ಕುತೂಹಲಕ್ಕೆ ತೆರೆಬಿದ್ದಿದೆ. 6 ತಾಸು ಹುಡುಕಿದರೂ ಏನೂ ಸಿಕ್ಕಿಲ್ಲ.

    ಸೋಮವಾರ ನೇತ್ರಾವತಿ ತಟದ ಪಾಯಿಂಟ್ 13ರಲ್ಲಿ ಗ್ರೌಂಡ್ ಪೆನೆಟ್ರೇಟಿಂಗ್ ರೇಡಾರ್ (GPR) ಮೂಲಕ ಡೆಮೋ ನಡೆಸಿ ತೆರಳಿದ್ದ ವಿಶೇಷ ತನಿಖಾ ತಂಡ(SIT) ಇಂದು ನೇರವಾಗಿ ಅಖಾಡಕ್ಕೆ ಇಳಿಯಿತು. ಕಗ್ಗಂಟಾಗಿದ್ದ ಪಾಯಿಂಟ್ ನಂಬರ್ 13ರಲ್ಲಿ ಅನಾಮಿಕನ ಸಮ್ಮುಖದಲ್ಲಿ ಅಸ್ಥಿ ಶೋಧ ನಡೆಸಿದರು.

    ಪಾಯಿಂಟ್ 13ರಲ್ಲಿ ಮೂರು ಪಟ್ಟು ಜಾಗವನ್ನು ಗುರುತು ಮಾಡಲಾಗಿತ್ತು. ಕೆಎಸ್‌ಆರ್‌ಪಿ (KSRP) ಸಹಿತ ಶಸ್ತ್ರಸಜ್ಜಿತ ಪೊಲೀಸರನ್ನು ಸ್ಥಳದಲ್ಲಿ ನಿಯೋಜಿಸಲಾಗಿತ್ತು. ಸ್ಥಳಕ್ಕೆ ಖುದ್ದು ಎಸ್‌ಐಟಿ ಮುಖ್ಯಸ್ಥ ಪ್ರಣಬ್ ಮೊಹಾಂತಿ ಆಗಮಿಸಿ ಮಾಹಿತಿ ಪಡೆದರು. ಇದನ್ನೂ ಓದಿ: ಆ.17ಕ್ಕೆ ಬಿಜೆಪಿಯಿಂದ ಧರ್ಮಸ್ಥಳ ಚಲೋ

     

    ಮಧ್ಯಾಹ್ನದ ಹೊತ್ತಿಗೆ ಡ್ರೋನ್ ಮೌಂಟೆಡ್ ಜಿಪಿಆರ್‌ನಿಂದ ಸಂಗ್ರಹಿಸಿದ ಫುಟೇಜ್ ಆಧರಿಸಿ 2 ಹಿಟಾಚಿಗಳ ಮೂಲಕ ಕಾರ್ಯಾಚರಣೆ ನಡೆಸಲಾಯಿತು. ಈ ಹಿಂದೆ‌  ನೆರೆಯಿಂದ ಮಣ್ಣು ಸ್ವಲ್ಪ ಕೊಚ್ಚಿ ಹೋಗಿತ್ತು. ಜೊತೆಗೆ ರಸ್ತೆ ನಿರ್ಮಾಣ ಸಂಬಂಧ ಪಂಚಾಯತ್‌ 100  ಲೋಡ್ ಮಣ್ಣನ್ನು  ಹಾಕಿತ್ತು. ಹೀಗಾಗಿ ಈ ಮಣ್ಣುಗಳನ್ನು ತೆಗೆದು ಕಾರ್ಯಾಚರಣೆ ನಡೆಸಲಾಗುತ್ತಿದೆ.

    ಅನಾಮಿಕ ದೂರುದಾರ 20 ಅಡಿ ಆಳದವರೆಗೆ ಗುಂಡಿ ತೋಡಲು  ಕೋರಿದ್ದಾನೆ. ಮಳೆಯಿಂದಾಗಿ ಮಣ್ಣು ತೆಗೆಯುವಾಗ ನೀರು ಬರುತ್ತಿದೆ. ಹೀಗಾಗಿ ಪೈಪ್‌ಗಳ ಮೂಲಕ  ಹೊರ ಹಾಕಲಾಯಿತು. ಹಿಟಾಚಿ ಮೂಲಕ 22 ಅಡಿ ಉದ್ದ, 8 ಅಡಿ ಅಗಲ, 18 ಅಡಿ ಆಳಕ್ಕೆ ಗುಂಡಿ ಅಗೆದು, ಒಂದೇ ಕಡೆ ಸುಮಾರು 6 ತಾಸು ಶೋಧ ನಡೆಸಿ ಇಂದಿನ ಕಾರ್ಯಾಚರಣೆ ಅಂತ್ಯಗೊಳಿಸಲಾಯಿತು. ಆದರೆ ಯಾವುದೇ ಅಸ್ಥಿಯ ಕುರುಹು ಸಿಗಲಿಲ್ಲ.

    ಬುಧವಾರವೂ ಮಣ್ಣು ತೆಗೆಯುವ ಕಾರ್ಯಾಚರಣೆ ಮುಂದುವರಿಯುವ ಸಾಧ್ಯತೆಯಿದೆ. ಇಂದಿನ ಕಾರ್ಯಾಚರಣೆ ಸಮಯದಲ್ಲಿ ಎರಡು ವಿದ್ಯುತ್‌ ಕಂಬಗಳಿದ್ದವು. ವಿದ್ಯುತ್‌ ಸಂಪರ್ಕ ಕಡಿತಗೊಳಿಸಿ ಕಾರ್ಯಾಚರಣೆ ನಡೆಸಲಾಗಿತ್ತು.

    ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಕೂಡ ಭೇಟಿ ನೀಡಿ ಕಳೇಬರ ಶೋಧ ಕಾರ್ಯಕ್ಕೆ ಸಾಕ್ಷಿಯಾಯ್ತು. ಬೆಳ್ತಂಗಡಿ ಎಸ್‌ಐಟಿ ಕಚೇರಿಯಲ್ಲಿ ಎಸ್‌ಐಟಿ ಮುಖ್ಯಸ್ಥ ಪ್ರಣವ್ ಮೊಹಾಂತಿ ಸಭೆ ನಡೆಸಿ ತನಿಖೆಯ ಮಾಹಿತಿಯನ್ನು ಪಡೆದುಕೊಂಡರು. ತನಿಖಾ ತಂಡದ ಎಸ್ಪಿ ಸೈಮನ್ ವಿವರಣೆ ನೀಡಿದರು.

  • ಬುರುಡೆ ರಹಸ್ಯ| 13ನೇ ಜಾಗದ ಶೋಧಕ್ಕೆ GPR ಬಳಕೆ ಸಾಧ್ಯತೆ

    ಬುರುಡೆ ರಹಸ್ಯ| 13ನೇ ಜಾಗದ ಶೋಧಕ್ಕೆ GPR ಬಳಕೆ ಸಾಧ್ಯತೆ

    ಮಂಗಳೂರು: ಧರ್ಮಸ್ಥಳ ಬುರುಡೆ ರಹಸ್ಯ (Dharmasthala Mass Burial) ಪ್ರಕರಣಕ್ಕೆ ಸಂಬಂಧಿಸಿದಂತೆ ದೂರುದಾರ ತೋರಿಸಿದ 13ನೇ ಜಾಗವನ್ನು ಗ್ರೌಂಡ್ ಪೆನೆಟ್ರೇಟಿಂಗ್ ರೇಡಾರ್ (GPR) ಮೂಲಕ ಪರಿಶೋಧನೆ ನಡೆಸುವ ಸಾಧ್ಯತೆಯಿದೆ.

    ದೂರುದಾರ ಒಟ್ಟು 13 ಜಾಗದಲ್ಲಿ ಶವಗಳನ್ನು ಹೂತಿದಿದ್ದೇನೆ. ಅದರಲ್ಲೂ ಪಾಯಿಂಟ್‌ ನಂಬರ್‌ 9 ರಿಂದ ಪಾಯಿಂಟ್‌ 13ರವೆಗಿನ ಜಾಗದಲ್ಲಿ ಭಾರೀ ಸಂಖ್ಯೆಯಲ್ಲಿ ಹೆಣವನ್ನು ಹೂಳಿದ್ದೇನೆ ಎಂದು ವಿಶೇಷ ತನಿಖಾ ತಂಡಕ್ಕೆ ಹೇಳಿದ್ದಾರೆ. ಇದನ್ನೂ ಓದಿ: ಗಿರೀಶ್‌ ಮಟ್ಟಣನವರ್‌, ಮಹೇಶ್‌ ಶೆಟ್ಟಿ ತಿಮರೋಡಿ, ಸಮೀರ್‌ ವಿರುದ್ಧ ಎಫ್‌ಐಆರ್‌ ದಾಖಲು

    ಈತನ ಮಾಹಿತಿಯಂತೆ ಇಲ್ಲಿಯವರೆಗೆ 12 ಸ್ಥಳಗಳಲ್ಲಿ ಶೋಧ ನಡೆಸಿದ್ದು 6ನೇ ಜಾಗದಲ್ಲಿ ಅಸ್ಥಿ ಸಿಕ್ಕಿದ್ದು ಬಿಟ್ಟರೆ ಬೇರೆ ಯಾವುದೇ ಜಾಗದಲ್ಲಿ ಅಸ್ಥಿ ಪತ್ತೆಯಾಗಿಲ್ಲ. ಹೀಗಾಗಿ ಈಗ ಬಾಕಿ ಇರುವ ಒಂದು ಜಾಗದಲ್ಲಿ ಜಿಪಿಆರ್‌ ಯಂತ್ರದ ಮೂಲಕ ಶೋಧ ನಡೆಸಲು ವಿಶೇಷ ತನಿಖಾ ತಂಡ ಚಿಂತನೆ ನಡೆಸಿದೆ ಎನ್ನಲಾಗುತ್ತಿದೆ.

    ಈ ಸಂಬಂಧ GPR ಬಗ್ಗೆ ಎಸ್‌ಐಟಿ ಅಧಿಕಾರಿಗಳು ತಜ್ಞರ ಸಲಹೆ ಪಡೆಯುತ್ತಿದ್ದಾರೆ. ಸದ್ಯ ಈಗ ಕಾರ್ಮಿಕರ ಸಹಾಯದಿಂದ ಭೂಮಿಯನ್ನು ಅಗೆಯಲಾಗಯತ್ತಿದೆ. ಆದರೆ ಜಿಪಿಆರ್‌ ಬಳಸಿದರೆ ಮಣ್ಣು ಅಗೆಯದೇ ಭೂಮಿ ಒಳಗಡೆ ಇರುವ ವಸ್ತುಗಳನ್ನು ಪತ್ತೆ ಹಚ್ಚಬಹುದು. ಈ ಕಾರಣಕ್ಕೆ ಜಿಪಿಆರ್‌ ಬಳಸುವಂತೆ ದೂರುದಾರ ಪರ ವಕೀಲರು ಎಸ್‌ಐಟಿಗೆ ಮನವಿ ಮಾಡಿದ್ದಾರೆ. ಇದನ್ನೂ ಓದಿಧರ್ಮಸ್ಥಳ ಬುರುಡೆ ರಹಸ್ಯಕಗ್ಗಂಟಾಗಿದೆ 13ನೇ ಪಾಯಿಂಟ್  ಸವಾಲುಗಳ ಮಧ್ಯೆ ಉತ್ಖನನಕ್ಕೆ ರೆಡಿಯಾದ ಎಸ್‌ಐಟಿ

    ಪಾಯಿಂಟ್ ನಂಬರ್ 13 ರಲ್ಲಿ ವಿದ್ಯುತ್ ಕಂಬಗಳು , ಹಲವಾರು ವಿದ್ಯುತ್ ಸಂಪರ್ಕಗಳಿವೆ. ಅಷ್ಟೇ ಅಲ್ಲದೇ ನೇತ್ರಾವದಿ ನದಿಗೆ ಸಣ್ಣ ಅಣೆಕಟ್ಟು ಸಹ ಕಟ್ಟಲಾಗಿದೆ. ಈ ಅಡೆ ತಡೆಗಳ ನಡುವೆ ಉತ್ಕನನ ಮಾಡುವುದು ಎಸ್‌ಐಟಿ ಸವಾಲಿನ ಕೆಲಸ. ಜಿಪಿಆರ್‌ ಬಳಕೆ ಬಗ್ಗೆ ಎಸ್‌ಐಟಿ ಅಧಿಕಾರಿಗಳ ಮಧ್ಯೆ ಸಭೆ ಕರೆಯಲಾಗಿದೆ. ಈ ಸಭೆಯಲ್ಲಿ ತೀರ್ಮಾನವಾದರೆ ಜಿಪಿಆರ್‌ ಬಳಕೆಯಾಗಲಿದೆ. ಒಂದು ವೇಳೆ ಜಿಪಿಆರ್‌ ಸಿಗದೇ ಇದ್ದರೆ ಕಾರ್ಮಿಕರಿಂದ ಶೋಧ ನಡೆಯುವ ಸಾಧ್ಯತೆಯಿದೆ.