Tag: ಜಿತೇಂದ್ರ ಅವ್ಹಾದ್

  • ರಾಮ ಮಾಂಸಹಾರಿಯಲ್ಲ, ವನವಾಸದಲ್ಲಿ ಹಣ್ಣುಗಳನ್ನು ಸ್ವೀಕರಿಸುತ್ತಿದ್ದ: ಆಚಾರ್ಯ ಸತ್ಯೇಂದ್ರ ದಾಸ್ ತಿರುಗೇಟು

    ರಾಮ ಮಾಂಸಹಾರಿಯಲ್ಲ, ವನವಾಸದಲ್ಲಿ ಹಣ್ಣುಗಳನ್ನು ಸ್ವೀಕರಿಸುತ್ತಿದ್ದ: ಆಚಾರ್ಯ ಸತ್ಯೇಂದ್ರ ದಾಸ್ ತಿರುಗೇಟು

    ಅಯೋಧ್ಯೆ: ವನವಾಸದಲ್ಲಿ ಶ್ರೀರಾಮ ಮಾಂಸಹಾರ ಸೇವಿಸುತ್ತಿದ್ದ ಎಂಬ ವಿಚಾರ ಸಂಪೂರ್ಣ ಸತ್ಯಕ್ಕೆ ದೂರವಾದದ್ದು ಎಂದು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಪ್ರಧಾನ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್ (Acharya Satyendra Das) ಹೇಳಿದ್ದಾರೆ.

    ನ್ಯಾಶನಲಿಸ್ಟ್ ಕಾಂಗ್ರೆಸ್ ಪಾರ್ಟಿ (Nationalist Congress Party) ನಾಯಕ ಜಿತೇಂದ್ರ ಅವ್ಹಾದ್ (Jitendra Awhad) ಅವರು ಭಗವಾನ್ ರಾಮನ ಕುರಿತು ನೀಡಿದ್ದ ಹೇಳಿಕೆ ವಿಚಾರವಾಗಿ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಜಿತೇಂದ್ರ ಅವರ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿರುವ ಆಚಾರ್ಯರು, ಅವರ ಮಾತನಾಡುತ್ತಿರುವುದು ಸಂಪೂರ್ಣ ಸುಳ್ಳು, ಭಗವಾನ್ ರಾಮನು ವನವಾಸದ ಸಮಯದಲ್ಲಿ ಮಾಂಸಾಹಾರಿ ಆಹಾರವನ್ನು ಸೇವಿಸಿದ್ದಾನೆ ಎಂದು ನಮ್ಮ ಧರ್ಮಗ್ರಂಥಗಳಲ್ಲಿ ಎಲ್ಲಿಯೂ ಬರೆದಿಲ್ಲ. ಅವರು ಹಣ್ಣುಗಳನ್ನು ಸ್ವೀಕರಿಸುತ್ತಿದ್ದರು ಎಂದಿದ್ದಾರೆ. ಇದನ್ನೂ ಓದಿ: ಶ್ರೀರಾಮ ಮಾಂಸಾಹಾರಿಯಾಗಿದ್ದ.. ಬೇಟೆಯಾಡಿ ತಿನ್ನುವ ರಾಮ ನಮ್ಮವ: ಎನ್‌ಸಿಪಿ ನಾಯಕ ವಿವಾದಾತ್ಮಕ ಹೇಳಿಕೆ

    ನಮ್ಮ ದೇವರು ಯಾವಾಗಲೂ ಸಸ್ಯಾಹಾರಿ. ಅವರು ನಮ್ಮ ಭಗವಾನ್ ರಾಮನನ್ನು ಅವಮಾನಿಸಲು ಕೀಳುಮಟ್ಟದ ಮಾತನಾಡುತ್ತಿದ್ದಾರೆ ಎಂದು ಆಚಾರ್ಯರು ಹೇಳಿದ್ದಾರೆ.

    ಜಿತೇಂದ್ರ ಅವ್ಹಾದ್ ಅವರು, ರಾಮ ನಮ್ಮವನು. ರಾಮ ಬಹುಜನರಿಗೆ ಸೇರಿದವನು. ಬೇಟೆಯಾಡಿ ತಿನ್ನುವ ರಾಮ ನಮ್ಮವನು, ನಾವು ಬಹುಜನರಿಗೆ ಸೇರಿದವರು. ನೀವು ನಮ್ಮೆಲ್ಲರನ್ನು ಸಸ್ಯಾಹಾರಿಯನ್ನಾಗಿ ಮಾಡಲು ಹೋದಾಗ, ನಾವು ರಾಮನ ಆದರ್ಶಗಳನ್ನು ಅನುಸರಿಸುತ್ತೇವೆ. ಇಂದು ನಾವು ಕುರಿ ಮಾಂಸವನ್ನು ತಿನ್ನುತ್ತೇವೆ. ಇದು ರಾಮನ ಆದರ್ಶ. ರಾಮ ಸಸ್ಯಾಹಾರಿಯಾಗಿರಲಿಲ್ಲ, ಮಾಂಸಾಹಾರಿಯಾಗಿದ್ದ ಎಂದು ಕಾರ್ಯಕ್ರಮ ಒಂದರಲ್ಲಿ ಹೇಳಿದ್ದರು.

    ಜಿತೇಂದ್ರ ಅವದ್ ನೀಡಿರುವ ಹೇಳಿಕೆಗೆ ಭಾರೀ ವಿರೋಧ ವ್ಯಕ್ತವಾಗಿದೆ. ಅವಹೇಳನಕಾರಿ ಮತ್ತು ರಾಮ ಭಕ್ತರ ಭಾವನೆಗೆ ಧಕ್ಕೆ ತಂದಿದೆ. ರಾಮನ ಬಗ್ಗೆ ಕೆಟ್ಟದಾಗಿ ಮಾತನಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಕೇಂದ್ರ ಸರ್ಕಾರ ಹಾಗೂ ಮಹಾರಾಷ್ಟ್ರ ಸರ್ಕಾರಕ್ಕೆ ಅನೇಕರು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ರಾಮಮಂದಿರ ಉದ್ಘಾಟನೆಯಂದು ಪಿಂಕ್‌ ಸಿಟಿ ಜೈಪುರದಲ್ಲಿ ಮಾಂಸ, ಮದ್ಯದಂಗಡಿ ಬಂದ್‌

  • ಶ್ರೀರಾಮ ಮಾಂಸಾಹಾರಿಯಾಗಿದ್ದ.. ಬೇಟೆಯಾಡಿ ತಿನ್ನುವ ರಾಮ ನಮ್ಮವ: ಎನ್‌ಸಿಪಿ ನಾಯಕ ವಿವಾದಾತ್ಮಕ ಹೇಳಿಕೆ

    ಶ್ರೀರಾಮ ಮಾಂಸಾಹಾರಿಯಾಗಿದ್ದ.. ಬೇಟೆಯಾಡಿ ತಿನ್ನುವ ರಾಮ ನಮ್ಮವ: ಎನ್‌ಸಿಪಿ ನಾಯಕ ವಿವಾದಾತ್ಮಕ ಹೇಳಿಕೆ

    ನವದೆಹಲಿ: ಭಗವಾನ್‌ ರಾಮ ‘ಬಹುಜನ’ರಿಗೆ ಸೇರಿದವನು. ರಾಮ ಮಾಂಸಾಹಾರಿಯಾಗಿದ್ದ (Sri Ram) ಎಂದು ನ್ಯಾಶನಲಿಸ್ಟ್ ಕಾಂಗ್ರೆಸ್ ಪಾರ್ಟಿಯ (ಎನ್‌ಸಿಪಿ) ಶರದ್ ಪವಾರ್ ಬಣದ ನಾಯಕ ಜಿತೇಂದ್ರ ಅವ್ಹಾದ್ (Jitendra Awhad) ಅವರು ಭಗವಾನ್ ರಾಮನ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

    ಜನವರಿ 22 ರಂದು ಅಯೋಧ್ಯೆಯ (Ayodhya) ಪವಿತ್ರೀಕರಣ ಸಮಾರಂಭದ ದಿನದಂದು ಒಂದು ದಿನದ ಮದ್ಯ ಮತ್ತು ಮಾಂಸವನ್ನು ನಿಷೇಧಿಸುವಂತೆ ಬಿಜೆಪಿ ಶಾಸಕ ರಾಮ್ ಕದಮ್ ಮಹಾರಾಷ್ಟ್ರ ಸರ್ಕಾರವನ್ನು ಒತ್ತಾಯಿಸಿದ್ದರು. ಇದರ ಬೆನ್ನಲ್ಲೇ ಜಿತೇಂದ್ರ ಈ ಹೇಳಿಕೆ ನೀಡಿದ್ದಾರೆ. ಇದನ್ನೂ ಓದಿ: ರಾಮಮಂದಿರಕ್ಕೆ ಬಾಂಬ್ ಬೆದರಿಕೆ – ಇಬ್ಬರ ಬಂಧನ

    ರಾಮ ನಮ್ಮವನು. ರಾಮ ಬಹುಜನರಿಗೆ ಸೇರಿದವನು. ಬೇಟೆಯಾಡಿ ತಿನ್ನುವ ರಾಮ ನಮ್ಮವನು, ನಾವು ಬಹುಜನರಿಗೆ ಸೇರಿದವರು. ನೀವು ನಮ್ಮೆಲ್ಲರನ್ನು ಸಸ್ಯಾಹಾರಿಯನ್ನಾಗಿ ಮಾಡಲು ಹೋದಾಗ, ನಾವು ರಾಮನ ಆದರ್ಶಗಳನ್ನು ಅನುಸರಿಸುತ್ತೇವೆ. ಇಂದು ನಾವು ಕುರಿ ಮಾಂಸವನ್ನು ತಿನ್ನುತ್ತೇವೆ. ಇದು ರಾಮನ ಆದರ್ಶ. ರಾಮ ಸಸ್ಯಾಹಾರಿಯಾಗಿರಲಿಲ್ಲ, ಮಾಂಸಾಹಾರಿಯಾಗಿದ್ದ ಎಂದು ತಿಳಿಸಿದ್ದಾರೆ.

    ಈ ವಿಷಯದ ಬಗ್ಗೆ ಚರ್ಚೆಗೆ ಚಾಲನೆ ನೀಡಿದ ಅವ್ಹಾದ್, 14 ವರ್ಷಗಳಿಂದ ಕಾಡಿನಲ್ಲಿ ವಾಸಿಸುವ ವ್ಯಕ್ತಿಯು ಸಸ್ಯಾಹಾರವನ್ನು ಎಲ್ಲಿ ಹುಡುಕಲು ಹೋಗುತ್ತಾನೆ? ನನ್ನ ಪ್ರಶ್ನೆ ಸರಿಯೋ ಇಲ್ಲವೋ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ನಾನೂ ಕರಸೇವಕ, ನನ್ನನ್ನೂ ಬಂಧಿಸಿ – ಅಭಿಯಾನ ಆರಂಭಿಸಿದ್ದ ಸುನಿಲ್‌ ಕುಮಾರ್‌ ವಶಕ್ಕೆ

    ಯಾರು ಏನೇ ಹೇಳಲಿ, ಗಾಂಧಿ ಮತ್ತು ನೆಹರೂ ಅವರಿಂದ ಮಾತ್ರ ನಮಗೆ ಸ್ವಾತಂತ್ರ್ಯ ಸಿಕ್ಕಿತು ಎಂಬುದು ಸತ್ಯ. ಗಾಂಧೀಜಿ 1947 ರಲ್ಲಿ ಹತ್ಯೆಯಾಗಲಿಲ್ಲ. ಆದರೆ ಅವರ ಮೇಲೆ ಮೊದಲ ದಾಳಿ ನಡೆದದ್ದು, 1935 ರಲ್ಲಿ. ಎರಡನೆಯದು ದಾಳಿ 1938 ರಲ್ಲಿ ನಡೆಯಿತು. ಮೂರನೇ ದಾಳಿ 1942 ರಲ್ಲಿ ನಡೆಯಿತು ಎಂದು ತಿಳಿಸಿದ್ದಾರೆ.

    ಅಷ್ಟಕ್ಕೂ ಅವರ ಮೇಲೆ ಯಾಕೆ ಇಷ್ಟು ಬಾರಿ ದಾಳಿ ಮಾಡಿದರು? ಗಾಂಧೀಜಿ ವ್ಯಾಪಾರಿ ಮತ್ತು ಒಬಿಸಿ ಆಗಿದ್ದರಿಂದ ಅವರ ಮೇಲೆ ದಾಳಿ ನಡೆಸಲಾಯಿತು. ಅಂತಹ ದೊಡ್ಡ ಸ್ವಾತಂತ್ರ್ಯ ಚಳವಳಿಯ ನಾಯಕ ಒಬಿಸಿ ಆಗಿರುವುದು ಅವರಿಗೆ (ಆರ್‌ಎಸ್‌ಎಸ್) ಸಹಿಸಲಾಗಲಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಟೀ ಕುಡಿದಿದ್ದ ಉಜ್ವಲ ಫಲಾನುಭವಿ ಮಹಿಳೆಯ ಮನೆಗೆ‌ ಗಿಫ್ಟ್‌ ಜೊತೆ ಮೋದಿ ಪತ್ರ

    ಜನರಲ್ಲಿ ಐತಿಹಾಸಿಕ ಘಟನೆಗಳ ಅರಿವಿನ ಕೊರತೆಯಿದೆ. ಗಾಂಧೀಜಿಯವರ ಹತ್ಯೆಯ ಹಿಂದಿನ ನಿಜವಾದ ಕಾರಣ ಜಾತೀಯತೆ. ನೀವು ಈ ಇತಿಹಾಸವನ್ನು ಓದುವುದಿಲ್ಲ. ಅದನ್ನು ನಿಮ್ಮ ಮನಸ್ಸಿನಲ್ಲಿ ಇಟ್ಟುಕೊಳ್ಳಬೇಡಿ ಎಂದು ತಿಳಿಸಿದ್ದಾರೆ.

  • ‘ದಿ ಕೇರಳ ಫೈಲ್ಸ್’ ನಿರ್ಮಾಪಕನನ್ನು ಗಲ್ಲಿಗೇರಿಸಿ : ಸಿಡಿದೆದ್ದ ಎನ್.ಸಿ.ಪಿ ನಾಯಕ

    ‘ದಿ ಕೇರಳ ಫೈಲ್ಸ್’ ನಿರ್ಮಾಪಕನನ್ನು ಗಲ್ಲಿಗೇರಿಸಿ : ಸಿಡಿದೆದ್ದ ಎನ್.ಸಿ.ಪಿ ನಾಯಕ

    ವಿವಾದಿತ ‘ದಿ ಕೇರಳ ಫೈಲ್ಸ್’ (The Kerala Story) ಸಿನಿಮಾದ ನಿರ್ಮಾಪಕನ (Producer) ವಿರುದ್ಧ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (ಎನ್.ಸಿ.ಪಿ) (NCP)  ನಾಯಕ ಜಿತೇಂದ್ರ ಅವ್ಹಾದ್ (Jitendra Awhad) ವಿವಾದಾತ್ಮಕ ಹೇಳಿಕೆ ನೀಡಿದ್ದು, ಸಿನಿಮಾದಲ್ಲಿ ಸುಳ್ಳುಗಳನ್ನೇ ತುಂಬಿಸಿರುವ ಅವರನ್ನು ಸಾರ್ವಜನಿಕವಾಗಿ ಗಲ್ಲಿಗೇರಿಸಿ (Hanging) ಎಂದು ಹೇಳಿಕೆ ನೀಡಿದ್ದಾರೆ. ಮತಿಯ ಭಾವನೆಯನ್ನು ಹರಡುತ್ತಿರುವ ಈ ಸಿನಿಮಾವನ್ನು ಕೂಡಲೇ ಭಾರತದಾದ್ಯಂತ ನಿಷೇಧ ಹೇರಬೇಕು ಎಂದು ಅವರು ಆಗ್ರಹಿಸಿದ್ದಾರೆ.

    ಮೊದ ಮೊದಲು ಈ ಸಿನಿಮಾದಲ್ಲಿ 32 ಸಾವಿರ ಮಹಿಳೆಯರು ಕಾಣೆಯಾಗಿದ್ದಾರೆ ಎಂದು ಹೇಳಿದ್ದರು. ಆನಂತರ ಅದು 3 ಸಾವಿರಕ್ಕೆ ಇಳಿಯಿತು. ಮೂವತ್ತೆರಡು ಸಾವಿರಕ್ಕೂ, ಮೂರು ಸಾವಿರಕ್ಕೂ ವ್ಯತ್ಯಾಸ ಗೊತ್ತಿಲ್ಲವಾ? ಎಂದು ಪ್ರಶ್ನೆ ಮಾಡಿರುವ ಜಿತೇಂದ್ರ, ಕೇರಳದಲ್ಲಿ ಹಿಂದೂಗಳ ಮದುವೆಯನ್ನು ಮುಸ್ಲಿಂ ನೆರವೇರಿಸಿದ್ದನ್ನು ಯಾಕೆ ತೋರಿಸಿಲ್ಲ ಎಂದು ಅವರು ಕೇಳಿದ್ದಾರೆ. ಇದನ್ನೂ ಓದಿ:ವಿಜಯ್ ದೇವರಕೊಂಡ ಹುಟ್ಟು ಹಬ್ಬಕ್ಕೆ ‘ಖುಷಿ’ಯ ಹಾಡು ರಿಲೀಸ್

    ಕೇರಳದಲ್ಲಿ ಥಿಯೇಟರ್ ಮಾಲೀಕರು ಚಿತ್ರ ಪ್ರದರ್ಶನಕ್ಕೆ ಹಿಂದೇಟು ಹಾಕಿದ್ದರೆ, ತಮಿಳು ನಾಡಿನಲ್ಲೂ ಅಘೋಷಿದ ನಿಷೇಧ ಹೇರಲಾಗಿದೆ. ಹಾಗಾಗಿ ಆ ರಾಜ್ಯದಲ್ಲೂ ಚಿತ್ರ ಪ್ರದರ್ಶನವಿಲ್ಲ. ಇನ್ನು ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಚಿತ್ರಕ್ಕೆ ನಿಷೇಧವನ್ನೇ ಹೇರಿದ್ದಾರೆ. ಹೀಗಾಗಿ ನಿರ್ಮಾಪಕರು ಅಕ್ಷರಶಃ ಕಂಗಾಲಾಗಿದ್ದಾರೆ. ಈ ಕುರಿತಂತೆ ಅವರು ಕೋರ್ಟ್ ಮೊರೆ ಹೋಗಿದ್ದಾರೆ.

    ದಿ ಕೇರಳ ಸ್ಟೋರಿ ಚಿತ್ರದ ನಿರ್ಮಾಪಕರು ಪಶ್ಚಿಮ ಬಂಗಾಳದ ನಿರ್ಧಾರವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟಿಗೆ ಅರ್ಜಿ ಸಲ್ಲಿಸಿದ್ದು, ಅದೇ ಅರ್ಜಿಯಲ್ಲೇ ತಮಿಳು ನಾಡು ಸರಕಾರಕ್ಕೆ ಚಿತ್ರಮಂದಿರಗಳಿಗೆ ಭದ್ರತೆ ನೀಡುವಂತೆ ಸೂಚಿಸಿ ಎಂದು ಮನವಿ ಮಾಡಿಕೊಂಡಿದ್ದಾರೆ. ಭದ್ರತೆ ದೃಷ್ಟಿ ಕಾರಣವನ್ನು ನೀಡಿ ತಮಿಳು ನಾಡಿನ ಚಿತ್ರಮಂದಿರಗಳ ಮಾಲೀಕರು ಪ್ರದರ್ಶನಕ್ಕೆ ಹಿಂದೇಟು ಹಾಕಿದ್ದರಿಂದ ಒಂದೇ ಅರ್ಜಿಯಲ್ಲೇ ಎರಡೂ ವಿಷಯಗಳನ್ನು ಪ್ರಸ್ತಾಪ ಮಾಡಿದೆ ಚಿತ್ರತಂಡ.

    ದೇಶದಾದ್ಯಂತ ‘ದಿ ಕೇರಳ ಸ್ಟೋರಿ’ ಸಿನಿಮಾ ರಿಲೀಸ್ ಆಗಿದೆ. ಮಲಯಾಳಂ, ಹಿಂದಿ, ತಮಿಳು ಮತ್ತು ತೆಲುಗು ಭಾಷೆಯಲ್ಲಿ ಸಿನಿಮಾ ಮೂಡಿ ಬಂದಿದ್ದು, ಕೇರಳದಲ್ಲೂ ಚಿತ್ರ ಪ್ರದರ್ಶನಕ್ಕೆ ಥಿಯೇಟರ್ ಮಾಲೀಕರು ಹಿಂದೇಟು ಹಾಕಿದ್ದರು. ಕೇರಳ ಸರಕಾರದ ಸಪೋರ್ಟ್ ಇಲ್ಲದ ಕಾರಣದಿಂದಾಗಿ ಮತ್ತು ಪ್ರತಿಭಟನೆಯ ಕಾವು ಜೋರಾಗಿದ್ದರಿಂದ ಚಿತ್ರಮಂದಿರಗಳ ಮಾಲೀಕರು ಭಯದಲ್ಲಿದ್ದಾರಂತೆ. ಈ ಕಾರಣದಿಂದಾಗಿ ಸಾಕಷ್ಟು ಚಿತ್ರಮಂದಿರಗಳಲ್ಲಿ ಸಿನಿಮಾ ರಿಲೀಸ್ ಆಗಿಲ್ಲ.