Tag: ಜಿಎಸ್ ಬಸವರಾಜು

  • 60 ವರ್ಷದ ಸುದೀರ್ಘ ರಾಜಕಾರಣಕ್ಕೆ ಸಂಸದ ಬಸವರಾಜು ವಿದಾಯ

    60 ವರ್ಷದ ಸುದೀರ್ಘ ರಾಜಕಾರಣಕ್ಕೆ ಸಂಸದ ಬಸವರಾಜು ವಿದಾಯ

    ತುಮಕೂರು: ಜಿಲ್ಲೆಯ ಹಿರಿಯ ರಾಜಕಾರಣಿ, ಸಂಸದ ಜಿ.ಎಸ್.ಬಸವರಾಜು (GS Basavaraju) ಅವರು ತಮ್ಮ ಆರು ದಶಕಗಳ ಸುದೀರ್ಘ ರಾಜಕೀಯ (Politics) ಜೀವನಕ್ಕೆ ವಿದಾಯ ಹೇಳಿದ್ದಾರೆ.

    ರಾಜಕಾರಣದಲ್ಲಿ ಸಾಕಷ್ಟು ದಾಖಲೆ ನಿರ್ಮಿಸಿ, ಹಲವು ಏಳುಬೀಳು ಕಂಡ ಈ ಹಿರಿಯ ರಾಜಕಾರಣಿ ಸಕ್ರಿಯ ರಾಜಕಾರಣದಿಂದ ದೂರ ಉಳಿಯಲು ನಿರ್ಧರಿಸಿದ್ದಾರೆ. 86ನೇ ವಸಂತಕ್ಕೆ ಕಾಲಿಟ್ಟಿರುವ ಬಸವರಾಜು ತಮ್ಮ ಜನ್ಮದಿನದಂದೇ (ಮೇ 4) ಅಧಿಕೃತವಾಗಿ ರಾಜಕೀಯ ನಿವೃತ್ತಿ ಘೋಷಿಸಿದ್ದಾರೆ. ಕಾಂಗ್ರೆಸ್ ಮೂಲಕ ರಾಜಕೀಯ ಜೀವನ ರೂಪಿಸಿಕೊಂಡು ಬಿಜೆಪಿಯಲ್ಲಿ ತಮ್ಮ ರಾಜಕೀಯ ಬದುಕಿಗೆ ವಿದಾಯ ಹೇಳಿದ್ದಾರೆ. ಇದನ್ನೂ ಓದಿ: ಹೆಚ್‌.ಡಿ.ರೇವಣ್ಣ 4 ದಿನ ಎಸ್‌ಐಟಿ ಕಸ್ಟಡಿಗೆ

    ತಾಲೂಕು ಬೋರ್ಡ್ ಸದಸ್ಯರಾಗಿ ತಮ್ಮ ರಾಜಕೀಯ ಜೀವನ ಆರಂಭಿಸಿದ ಬಸವರಾಜು ಅವರು ಒಂದೊಂದೇ ಮೆಟ್ಟಿಲೇರುತ್ತಾ ಸಂಸತ್‌ವರೆಗೂ ಪ್ರವೇಶ ಮಾಡಿದರು. ಆರಂಭದ ದಿನಗಳಲ್ಲಿ ತಾಲೂಕು ಬೋರ್ಡ್ ಅಧ್ಯಕ್ಷರಾಗಿ, ಎಪಿಎಂಸಿ ಅಧ್ಯಕ್ಷರಾಗಿ, ಪಿಎಲ್‌ಡಿ ಬ್ಯಾಂಕ್ ನಿರ್ದೇಶಕರಾಗಿ ರಾಜಕೀಯ ವೃತ್ತಿ ಜೀವನಕ್ಕೆ ತೆರೆದುಕೊಂಡರು. ಇದನ್ನೂ ಓದಿ: ಇದೊಂದು ರಾಜಕೀಯ ಷಡ್ಯಂತ್ರ: ಬಂಧನ ಬಳಿಕ ಹೆಚ್‌.ಡಿ.ರೇವಣ್ಣ ಮೊದಲ ಪ್ರತಿಕ್ರಿಯೆ

    ಸತತ 21 ವರ್ಷ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷರಾಗಿ ದಾಖಲೆ ನಿರ್ಮಿಸಿದ್ದಾರೆ. ಲೋಕಸಭೆಗೆ ಎಂಟು ಬಾರಿ ಸ್ಪರ್ಧಿಸಿ, ಐದು ಬಾರಿ ಸಂಸದರಾಗಿ ಆಯ್ಕೆಯಾಗಿದ್ದಾರೆ. ಮೂರು ಬಾರಿ ಸೋಲು ಕಂಡಿದ್ದಾರೆ. ತುಮಕೂರು ಲೋಕಸಭೆಯಿಂದ ಯಾರೊಬ್ಬರು ಐದು ಬಾರಿ ಸಂಸತ್ ಸದಸ್ಯರಾಗಿಲ್ಲ. ಇದನ್ನೂ ಓದಿ: ವಕೀಲನ ಮೇಲೆ ಮಾರಣಾಂತಿಕ ಹಲ್ಲೆ ಪ್ರಕರಣ – ಮೂವರು ಆರೋಪಿಗಳ ಬಂಧನ

    ಕಾಂಗ್ರೆಸ್ ಪಕ್ಷದಿಂದ 1984ರಲ್ಲಿ ಮೊದಲ ಬಾರಿಗೆ ಸಂಸತ್ ಪ್ರವೇಶಿಸುತ್ತಾರೆ. 1989, 1999ರಲ್ಲಿ ಕಾಂಗ್ರೆಸ್‌ನಿಂದ ಹಾಗೂ 2009, 2019ರಲ್ಲಿ ಬಿಜೆಪಿಯಿಂದ ಲೋಕಸಭೆ ಸದಸ್ಯರಾಗುತ್ತಾರೆ. ಗುಬ್ಬಿ ವಿಧಾನಸಭಾ ಕ್ಷೇತ್ರದಿಂದ ಎರಡು ಬಾರಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದ ಇವರು ಒಮ್ಮೆ ರೆಡ್ಡಿ ಕಾಂಗ್ರೆಸ್ ಹಾಗೂ ಮತ್ತೊಮ್ಮೆ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಸೋಲುತ್ತಾರೆ. ವಿಧಾನಸಭೆ ಮೆಟ್ಟಿಲೇರುವ ಕನಸು ಕೊನೆಗೂ ಸಾಕಾರಗೊಂಡಿಲ್ಲ. ಇದನ್ನೂ ಓದಿ: ಪೆರೋಲ್‌ ಮೇಲೆ ಜೈಲಿನಿಂದ ಹೊರಬಂದು ಜೆಡಿಯು ಅಭ್ಯರ್ಥಿ ಪರ ಮಾಜಿ ಶಾಸಕ ರೋಡ್‌ಶೋ

    ರಾಜಕೀಯ ಜೀವನದ ಬಹುತೇಕ ಸಮಯವನ್ನು ಕಾಂಗ್ರೆಸ್‌ನಲ್ಲೇ ಕಳೆಯುತ್ತಾರೆ. ಬಿಎಸ್ ಯಡಿಯೂರಪ್ಪ ಸಖ್ಯದ ನಂತರ ಬಿಜೆಪಿ ಸೇರುತ್ತಾರೆ. ಅವರು ಕೆಜೆಪಿ ಕಟ್ಟಿದ ಸಮಯದಲ್ಲಿ ಹಿಂಬಾಲಿಸುತ್ತಾರೆ. ಆ ಸಮಯದಲ್ಲಿ ಬಿಜೆಪಿಯಿಂದ ಅಮಾನತು ಮಾಡಲಾಗುತ್ತದೆ. ಯಡಿಯೂರಪ್ಪ ಬಿಜೆಪಿಗೆ ಮರಳಿದ ನಂತರ ಬಸವರಾಜು ಸಹ ವಾಪಸಾಗುತ್ತಾರೆ. ಆದರೆ ಪಕ್ಷದಿಂದ ಮಾಡಿದ ಅಮಾನತು ಆದೇಶವನ್ನು ಹಿಂದಕ್ಕೆ ಪಡೆದಿರುವುದಿಲ್ಲ.  ಇದನ್ನೂ ಓದಿ: ಪ್ರಜ್ವಲ್ ರೇವಣ್ಣ ಅರೆಸ್ಟ್ ಆಗಲೇಬೇಕು: ಜೋಶಿ

  • ಬಿಜೆಪಿ-ಜೆಡಿಎಸ್ ಮೈತ್ರಿ; ದೇವೇಗೌಡರ ಸ್ಪರ್ಧೆಗೆ ಬಿಜೆಪಿ ಸಂಸದ ಬಸವರಾಜು ವಿರೋಧ

    ಬಿಜೆಪಿ-ಜೆಡಿಎಸ್ ಮೈತ್ರಿ; ದೇವೇಗೌಡರ ಸ್ಪರ್ಧೆಗೆ ಬಿಜೆಪಿ ಸಂಸದ ಬಸವರಾಜು ವಿರೋಧ

    ತುಮಕೂರು: ಮುಂಬರುವ ಲೋಕಸಭೆ ಚುನಾವಣೆಯಲ್ಲಿ (Lok Sabha Election) ಬಿಜೆಪಿ-ಜೆಡಿಎಸ್ ಮೈತ್ರಿ (BJP-JDS Alliance) ಅಭ್ಯರ್ಥಿಯಾಗಿ ಹೆಚ್.ಡಿ.ದೇವೇಗೌಡರು (H.D.Deve Gowda) ತುಮಕೂರು (Tumakuru) ಕ್ಷೇತ್ರದಿಂದ ಸ್ಪರ್ಧಿಸಿದರೆ ಜಿಲ್ಲೆಯ ಜನರು ವೋಟು ಹಾಕುವುದಿಲ್ಲ ಎಂದು ಬಿಜೆಪಿ ಸಂಸದ ಜಿ.ಎಸ್.ಬಸವರಾಜು (G.S.Basavaraj) ಹೇಳಿದರು.

    ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯಿಂದ ದೇವೇಗೌಡರ ಸ್ಪರ್ಧೆ ವಿಚಾರವಾಗಿ ವಿರೋಧ ವ್ಯಕ್ತಪಡಿಸಿದರು. ನಮ್ಮ ಪಕ್ಷದವರು ಮೈತ್ರಿ ಮಾಡಿಕೊಂಡು ಜಿಲ್ಲೆಯಿಂದ ದೇವೇಗೌಡರನ್ನು ನಿಲ್ಲಿಸಲು ಹೊರಟಿದ್ದಾರೆ. ಹೇಮಾವತಿ ನೀರಿನ ವಿಚಾರದಲ್ಲಿ ಜಿಲ್ಲೆಗೆ ಗೌಡರು ಕಂಡರಿಯದಷ್ಟು ಮೋಸ ಮಾಡಿದ್ದಾರೆ. ಯಾರಿಗಾದರೂ ವೋಟ್ ಹಾಕಲಿ. ಗೌಡರಿಗೆ ವೋಟ್ ಹಾಕಬಾರದು. ಅವರಿಗೆ ವೋಟ್ ಹಾಕಿದರೆ ಜಿಲ್ಲೆಯ ಜನತೆ ಪಾಪ ಮಾಡಿದಂತಾಗುತ್ತದೆ ಎಂದು ತಿಳಿಸಿದರು. ಇದನ್ನೂ ಓದಿ: BJPಯ 25 ಮಂದಿ ಸಂಸದರು ದಂಡಪಿಂಡಗಳು: ಬಿ.ವಿ.ಶ್ರೀನಿವಾಸ್‌

    ಲೋಕಸಭೆಗೆ ಜೆಡಿಎಸ್‌ನವರು ಐದು ಕ್ಷೇತ್ರ ಕೇಳಿದ್ದು, ತುಮಕೂರನ್ನು ಬಿಟ್ಟುಕೊಡುವಂತೆ ಬೇಡಿಕೆ ಇಟ್ಟಿದ್ದಾರೆ. ರಕ್ತ ಕೊಟ್ಟರೂ ಜಿಲ್ಲೆಗೆ ಹೇಮಾವತಿ ನೀರು ಕೊಡಲ್ಲ ಎಂದು ಹೇಳಿದ್ದ ದೇವೇಗೌಡರನ್ನು ಇಲ್ಲಿನ ಜನರು ಒಮ್ಮೆ ಸೋಲಿಸಿದ್ದಾರೆ. ಅವರ ಸಂಬಂಧಿಗಳೂ ವೋಟ್ ಹಾಕಲ್ಲ. ಒಕ್ಕಲಿಗ ಸಮುದಾಯದ ಒಬ್ಬರೂ ಮತ ಹಾಕಲ್ಲ ಎಂದರು. ಇದನ್ನೂ ಓದಿ: ರಾಜ್ಯದ ಮೊದಲ ಹೆಲ್ತ್ ಎಟಿಎಂ ಕಲಬುರಗಿಯಲ್ಲಿ ಆರಂಭ – ಕ್ಷಣಾರ್ಧದಲ್ಲಿ ಸಿಗುತ್ತೆ ಬಿಪಿ, ಶುಗರ್, ಮಲೇರಿಯಾ ರಿಪೋರ್ಟ್

    ತುಮಕೂರು ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸುವಂತೆ ವಿ.ಸೋಮಣ್ಣ ಅವರನ್ನು ನಾನು ಕರೆದಿಲ್ಲ. ಆದರೆ ಅವರ ಭವಿಷ್ಯಕ್ಕೆ ಅಡ್ಡಿಯಾಗುವುದಿಲ್ಲ. ಎಲ್ಲಿ ನಿಂತರೂ ಬೆಂಬಲಿಸುತ್ತೇನೆ ಎಂದು ಹೇಳಿದ್ದೇನೆ. ಕಳೆದ ಚುನಾವಣೆಯಲ್ಲಿ ನಾನು ಗೆಲ್ಲಲು ಸೋಮಣ್ಣ ಕಾರಣ. ಚುನಾವಣೆ ಖರ್ಚಿಗೆ ಅವರೇ ದುಡ್ಡು ಕೊಟ್ಟಿದ್ದು ಎಂದು ಹೇಳಿದರು. ಇದನ್ನೂ ಓದಿ: ಪ್ರಧಾನಿ ಮೋದಿಯಿಂದ ವಾರಣಾಸಿಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂಗೆ ಶಂಕುಸ್ಥಾಪನೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸೋಮಣ್ಣಗೆ ತುಮಕೂರು ಲೋಕಸಭಾ ಕ್ಷೇತ್ರದ ಟಿಕೆಟ್ ಫಿಕ್ಸ್?- ಸಂಚಲನ ಮೂಡಿಸಿದ ಸಂಸದ ಬಸವರಾಜು ಹೇಳಿಕೆ

    ಸೋಮಣ್ಣಗೆ ತುಮಕೂರು ಲೋಕಸಭಾ ಕ್ಷೇತ್ರದ ಟಿಕೆಟ್ ಫಿಕ್ಸ್?- ಸಂಚಲನ ಮೂಡಿಸಿದ ಸಂಸದ ಬಸವರಾಜು ಹೇಳಿಕೆ

    ತುಮಕೂರು: ಎರಡು ವಿಧನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿ ಸೋಲು ಅನುಭವಿಸಿರುವ ಮಾಜಿ ಸಚಿವ ವಿ ಸೋಮಣ್ಣಗೆ (V Somanna) ತುಮಕೂರು (Tumkur) ಲೋಕಸಭಾ ಕ್ಷೇತ್ರದ ಬಿಜೆಪಿ (BJP) ಟಿಕೆಟ್ ನೀಡಲು ಚಿಂತಿಸಲಾಗಿದೆ ಎಂಬ ಗುಟ್ಟನ್ನು ಹಾಲಿ ಸಂಸದ ಜಿಎಸ್ ಬಸವರಾಜು (GS Basavaraj) ಬಿಚ್ಚಿಟ್ಟಿದ್ದಾರೆ.

    ತುಮಕೂರು ನಗರದಲ್ಲಿ ನಡೆದ ವೀರಶೈವ ಸಮಾಜದ ಕಾರ್ಯಕ್ರಮವೊಂದರಲ್ಲಿ ಸಂಸದ ಬಸವರಾಜು ಈ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ನನಗೆ ವಯಸ್ಸಾದ ಕಾರಣ ನಾನು ಚುನಾವಣಾ ರಾಜಕೀಯದಿಂದ ನಿವೃತ್ತಿ ಹೊಂದುತ್ತೇನೆ. ಮುಂದಿನ ಚುನಾವಣೆಗೆ ನಮ್ಮ ಸಮುದಾಯದವರೇ ಆದ ವಿ ಸೋಮಣ್ಣಗೆ ಟಿಕೆಟ್ ಕೊಡುತ್ತಾರೆ. ದೆಹಲಿಗೆ ಹೋದಾಗ ನಾನು ಇದನ್ನು ಹೇಳಿದ್ದೇನೆ. ಹೀಗಾಗಿ ಸಮುದಾಯದ ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಬೇಕು, ನಮ್ಮ ನಮ್ಮಲ್ಲಿ ಕಿತ್ತಾಟ ಮಾಡಿಕೊಂಡು ಬೇರೆಯವರಿಗೆ ಅನುಕೂಲ ಮಾಡಿಕೊಡಬಾರದು ಎಂದು ಸಮಾಜದ ಜನರಿಗೆ ಕಿವಿ ಮಾತು ಹೇಳಿದ್ದಾರೆ. ಇದನ್ನೂ ಓದಿ: ರೈಲ್ವೆ ಸಚಿವರು ದಣಿವರಿಯದಂತೆ ಕೆಲಸ ಮಾಡುತ್ತಿದ್ದು, ರಾಜೀನಾಮೆಗೆ ಆಗ್ರಹ ಸರಿಯಲ್ಲ: ಹೆಚ್‌ಡಿಡಿ

    ಸಂಸದ ಜಿಎಸ್ ಬಸವರಾಜು ಅವರ ಈ ಮಾತು ಜಿಲ್ಲೆಯಲ್ಲಿ ಸಂಚಲನ ಮೂಡಿಸಿದೆ. ಲೋಕಸಭಾ ಟಿಕೆಟ್ ಬಯಸಿ ಕಾಂಗ್ರೆಸ್ ತೊರೆದು ಬಿಜೆಪಿಗೆ ಬಂದಿದ್ದ ಮಾಜಿ ಸಂಸದ ಮುದ್ದಹನುಮೇಗೌಡ, ಲೋಕಸಭಾ ಕ್ಯಾಂಡಿಡೇಟ್ ಎಂದೇ ಬಿಂಬಿಸಿಕೊಂಡಿದ್ದ ಲೇಔಟ್ ಚಿದಾನಂದರಿಗೆ ಸಂಸದರ ಈ ಹೇಳಿಕೆ ನಿದ್ದೆಗೆಡಿಸಿದೆ. ಅದರ ಜೊತೆಗೆ ಮಾಜಿ ಸಚಿವ ಮಾಧುಸ್ವಾಮಿ ಅವರೂ ಲೋಕಸಭೆಗೆ ಸೂಕ್ತ ಎಂದು ಜಿಲ್ಲಾ ಬಿಜೆಪಿಯಲ್ಲಿ ಚರ್ಚೆ ಮಾಡಿದ್ದಾರೆ. ಈ ನಡುವೆ ಜಿಎಸ್ ಬಸವರಾಜು ಅವರ ಹೊಸ ದಾಳಿ ಗೊಂದಲಕ್ಕೆ ಕಾರಣವಾಗಿದೆ. ಇದನ್ನೂ ಓದಿ: ಯಾರೇ ಮಾತಾಡಿದ್ರು ಜೈಲಿಗೆ ಹಾಕ್ತೀವಿ ಎನ್ನೋಕೆ ಇದು ತಾಲಿಬಾನ್ ಅಲ್ಲ: ಎಂಬಿಪಿ ವಿರುದ್ಧ ಯತ್ನಾಳ್ ಕಿಡಿ

  • ಮಕ್ಕಳಿಗೋಸ್ಕರ ಬೇರೆಯವ್ರ ಕುತ್ತಿಗೆ ಕೊಯ್ತಾರೆ, ಎಷ್ಟೋ ಜನ್ರನ್ನ ಕೊಂದಿದ್ದಾರೆ: ನಾಲಗೆ ಹರಿಬಿಟ್ಟ ಬಿಜೆಪಿ ಅಭ್ಯರ್ಥಿ

    ಮಕ್ಕಳಿಗೋಸ್ಕರ ಬೇರೆಯವ್ರ ಕುತ್ತಿಗೆ ಕೊಯ್ತಾರೆ, ಎಷ್ಟೋ ಜನ್ರನ್ನ ಕೊಂದಿದ್ದಾರೆ: ನಾಲಗೆ ಹರಿಬಿಟ್ಟ ಬಿಜೆಪಿ ಅಭ್ಯರ್ಥಿ

    ತುಮಕೂರು: ಮಕ್ಕಳಿಗೋಸ್ಕರ ಬೇರೆಯವರ ಕುತ್ತಿಗೆ ಕೊಯ್ತಾರೆ. ಇವರು ಎಷ್ಟೋ ಜನರನ್ನು ಕೊಂದಾಕವ್ರೆ ಎಂದು ಮಾಜಿ ಪ್ರಧಾನಿ, ಜೆಡಿಎಸ್ ಅಭ್ಯರ್ಥಿ ದೇವೇಗೌಡರ ಬಗ್ಗೆ ಬಿಜೆಪಿ ಅಭ್ಯರ್ಥಿ ಜಿ. ಎಸ್ ಬಸವರಾಜು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

    ತುಮಕೂರಿನಲ್ಲಿ ದೇವರ ದರ್ಶನದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಇವರು ಎಷ್ಟು ಜನರನ್ನು ಕೊಂದು ಹಾಕಿದ್ದಾರೆ. ಅವರ ಜಾತಿಯವರನ್ನು ಕೊಂದು ಹಾಕಿದ್ದಾರೆ. ಅವರಿಗೆ ಬೇರೆ ಜಾತಿಗೆ ಕೈ ಹಾಕುವುದಕ್ಕೆ ಆಗಲ್ಲ. ದೇವೇಗೌಡರು ತಮ್ಮ ಮಕ್ಕಳಿಗೋಸ್ಕರ ಬೇರೆಯವರ ಕುತ್ತಿಗೆ ಕೊಯ್ತಾರೆ. ಅವರ ಜಿಲ್ಲೆಯಲ್ಲಿ ಮರ್ಡರ್ ಗಳು ಆಗಿದ್ದು ಲೆಕ್ಕ ಹಾಕಿಕೊಂಡು ಬರಲಿ ಎಂದರು.

    ಕುಮ್ಮಕ್ಕು ಇಲ್ಲದೆ ಊರಲ್ಲಿ ಮರ್ಡರ್ ಆಗುತ್ತಾ. ರಾಜಕಾರಣಿ ಹೋಗಿ ಮರ್ಡರ್ ಮಾಡ್ತಾನಾ?. ಅವರ ಜನಾಂಗದ ಮೇಲೆ ಯಾರನ್ನು ಬಿಟ್ಟು ಕೊಟ್ಟಿಲ್ಲ. ದೇವೇಗೌಡರು ಒಂದು ರೀತಿಯಲ್ಲಿ ಹೆಗಲ ಮೇಲೆ ಕೈ ಇಟ್ಟರೆ 7 ವರ್ಷ ಭವಿಷ್ಯ ಇರಲ್ಲ, ಬಹಳ ಕಷ್ಟ. ಹುಷಾರಾಗಿರಬೇಕು ಅಷ್ಟೇ ಎಂದು ದೇವೇಗೌಡರ ವಿರುದ್ಧ ಬಿಜೆಪಿ ಅಭ್ಯರ್ಥಿ ಗುಡುಗಿದ್ದಾರೆ.

    ತುಮಕೂರು ಲೋಕಸಭಾ ಕ್ಷೇತ ಚುನಾವಣೆಯಲ್ಲಿ ಮೈತ್ರಿ ಪಕ್ಷ- ಬಿಜೆಪಿ ನಡುವೆ ಟಾಕ್ ಫೈಟ್ ಹೆಚ್ಚಾಗಿದೆ. ವಿರೋಧ ಪಕ್ಷದವರು ಪರಸ್ಪರ ಏಕವಚನದಲ್ಲಿ ಬೈದಾಡಿಕೊಂಡಿದ್ದಾರೆ.