Tag: ಜಿಂಬಾಂಬ್ವೆ

  • ವಿಕೆಟ್ ಪಡೆದ ಸಂಭ್ರಮದಲ್ಲಿ ಕತ್ತು ಉಳುಕಿಸಿಕೊಂಡ ಪಾಕ್ ಬೌಲರ್- ವಿಡಿಯೋ ನೋಡಿ

    ವಿಕೆಟ್ ಪಡೆದ ಸಂಭ್ರಮದಲ್ಲಿ ಕತ್ತು ಉಳುಕಿಸಿಕೊಂಡ ಪಾಕ್ ಬೌಲರ್- ವಿಡಿಯೋ ನೋಡಿ

    ಹರಾರೆ: ಜಿಂಬಾಬ್ವೆ ಪ್ರವಾಸದಲ್ಲಿರುವ ಪಾಕಿಸ್ತಾನ ಕ್ರಿಕೆಟ್ ತಂಡದ ಬೌಲರ್ ವಿಕೆಟ್ ಕಿತ್ತು ಸಂಭ್ರಮಾಚರಣೆ ಪಡುವ ವೇಳೆ ಕತ್ತನ್ನು ಉಳಿಕಿಸಿಕೊಂಡಿದ್ದಾರೆ.

    ಸೋಮವಾರ ಬುಲವಾಯೋ ಕ್ರಿಡಾಂಗಣದಲ್ಲಿ ನಡೆದ ಜಿಂಬಾಬ್ವೆ ವಿರುದ್ಧದ ದ್ವಿತೀಯ ಏಕದಿನ ಪಂದ್ಯದಲ್ಲಿ ಪಾಕಿಸ್ತಾನ ಬೌಲರ್ ಹಸನ್ ಅಲಿ ಜಿಂಬಾಬ್ವೆ ತಂಡದ ರಯಾನ್ ಮುರ್ರೆ ವಿಕೆಟ್ ಕಿತ್ತು ಸಂಭ್ರಮಾಚರಣೆಯ ವೇಳೆ ಕುತ್ತಿಗೆಗೆ ತೀವ್ರವಾಗಿ ಗಾಯಮಾಡಿಕೊಂಡಿದ್ದಾರೆ.

    https://twitter.com/Iamrahul28/status/1018892961281708032

    24 ವರ್ಷದ ಹಸನ್ ಅಲಿ ಪಾಕಿಸ್ತಾನ ಕ್ರಿಕೆಟ್ ತಂಡದ ಪ್ರಮುಖ ಬೌಲಿಂಗ್ ಆಟಗಾರರಾಗಿದ್ದಾರೆ. ಬೌಲಿಂಗ್ ನಲ್ಲಿ ಸಾಕಷ್ಟು ಹೆಸರು ಮಾಡುತ್ತಿರುವ ಹಸನ್ ಅಲಿ, ಕ್ರೀಡಾಂಗಣದಲ್ಲಿ ಕ್ರೀಡಾ ಸ್ಪೂರ್ತಿ ಮರೆತು ವರ್ತಿಸುವುದರಲ್ಲಿ ಹೆಸರುವಾಸಿಯಾಗಿದ್ದಾರೆ. ಕೇವಲ ವಿಕೆಟ್ ಪಡೆದಿದ್ದಕ್ಕೆ ರೋಷಾವೇಷವಾಗಿ ವರ್ತಿಸಿದ್ದರ ಪರಿಣಾಮ ಕತ್ತನ್ನು ಉಳುಕಿಸಿಕೊಂಡಿದ್ದಾರೆ. ಉಳುಕಿಸಿಕೊಳ್ಳುತ್ತಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಹಸನ್ ಅಲಿ ರವರು ಪಾಕಿಸ್ತಾನದ ಪ್ರಮುಖ ಬೌಲರ್ ಆಗಿದ್ದು, ಕಳೆದ ವರ್ಷ ನಡೆದ ಟಿ-20 ವಿಶ್ವಕಪ್ ಪಂದ್ಯಗಳಲ್ಲಿ 13 ವಿಕೆಟ್ ಪಡೆದುಕೊಂಡಿದ್ದಲ್ಲದೇ, ಭಾರತದ ವಿರುದ್ಧ ಫೈನಲ್ ಪಂದ್ಯದಲ್ಲಿ 3 ವಿಕೆಟ್ ಗಳನ್ನು ಕಿತ್ತು ಪಾಕಿಸ್ತಾನ ಗೆಲುವಿಗೆ ಪ್ರಮುಖಪಾತ್ರ ವಹಿಸಿದ್ದರು

  • ಟಿ20 ಕ್ರಿಕೆಟ್‍ನಲ್ಲಿ ತನ್ನದೇ ದಾಖಲೆ ಮುರಿದ ಆರೋನ್ ಫಿಂಚ್

    ಟಿ20 ಕ್ರಿಕೆಟ್‍ನಲ್ಲಿ ತನ್ನದೇ ದಾಖಲೆ ಮುರಿದ ಆರೋನ್ ಫಿಂಚ್

    ಹರಾರೆ: ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ ನಲ್ಲಿ ವೈಯಕ್ತಿಕ ಗರಿಷ್ಠ ರನ್ ಗಳಿಸಿದ ತಮ್ಮ ದಾಖಲೆಯನ್ನು ಆಸೀಸ್ ಆಟಗಾರ ಆರೋನ್ ಫಿಂಚ್ ಉತ್ತಮ ಪಡಿಸಿಕೊಂಡಿದ್ದಾರೆ.

    ಜಿಂಬಾಬ್ವೆ ವಿರುದ್ಧ ನಡೆಯುತ್ತಿರುವ ತ್ರಿಕೋನ ಟೂರ್ನಿಯ ಮೂರನೇ ಪಂದ್ಯದಲ್ಲಿ ಸ್ಫೋಟಕ ಆಟ ಪ್ರರ್ಶಿಸಿದ 31 ವರ್ಷದ ಫಿಂಚ್ ಕೇವಲ 76 ಎಸೆಗಳಲ್ಲಿ 10 ಸಿಕ್ಸರ್, 16 ಬೌಂಡರಿಗಳ ನೆರವಿನಿಂದ 172 ರನ್ ಗಳಿಸುವ ಮೂಲಕ ದಾಖಲೆ ಬರೆದರು. ಆದರೆ ಪಂದ್ಯದ ಕೊನೆಯಲ್ಲಿ ಹಿಟ್ ವಿಕೆಟ್ ಆಗುವ ಮೂಲಕ ಔಟಾದರು.

    ವಿಶೇಷವಾಗಿ ಪಂದ್ಯದಲ್ಲಿ ಫಿಂಚ್ ಹಾಗೂ ಆರಂಭಿಕ ಆಟಗಾರ ಡಾರ್ಸಿ ಶಾರ್ಟ್ ಜೋಡಿ 19.2 ಓವರ್‍ಗಳಲ್ಲಿ 223 ರನ್ ಜೊತೆಯಾಟ ನೀಡುವ ಮೂಲಕ ಟಿ20 ಮಾದರಿಯಲ್ಲಿ ಆಸೀಸ್ ಪರ 200 ಪ್ಲಸ್ ರನ್ ಗಳಿಸಿದ ಜೋಡಿ ಎಂಬ ಇತಿಹಾಸ ಸೃಷ್ಟಿಸಿದರು. ಡಾರ್ಸಿ ಶಾರ್ಟ್ 42 ಎಸೆತಗಳಲ್ಲಿ 46 ಗಳಿಸಿ ಫಿಂಚ್ ಗೆ ಸಾಥ್ ನೀಡಿದರು.

    ಟಿ20 ಮಾದರಿಯಲ್ಲಿ ಗರಿಷ್ಠ ರನ್ ಗಳಿಸಿದ ಆಟಗಾರರಲ್ಲಿ ಫಿಂಚ್ ಮೊದಲ ಸ್ಥಾನದಲ್ಲಿದ್ದರು. 2013 ರಲ್ಲಿ ಇಂಗ್ಲೆಂಡ್ ನಲ್ಲಿ ನಡೆದ ಪಂದ್ಯದಲ್ಲಿ ಫಿಂಚ್ 156 ಗಳಿಸಿ ದಾಖಲೆ ಬರೆದಿದ್ದರು. ಅಂತಿಮವಾಗಿ 20 ಓವರ್ ಗಳ ಅಂತ್ಯಕ್ಕೆ 2 ವಿಕೆಟ್ ಕಳೆದುಕೊಂಡ ಆಸೀಸ್ 229 ಗಳಿಸಿತ್ತು. ಆಸೀಸ್ ಬೃಹತ್ ಮೊತ್ತ ಬೆನ್ನತ್ತಿದ್ದ ಜಿಂಬಾಬ್ವೆ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 129 ರನ್ ಗಳಿಸಿ ಸೋಲುಂಡಿತು.

    ಇನ್ನು ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‍ನಲ್ಲಿ ಗರಿಷ್ಠ ವೈಯಕ್ತಿಕ ಮೊತ್ತಗಳಿಸಿದ ಆಟಗಾರ ಪಟ್ಟಿಯಲ್ಲಿ ಗ್ಲೆನ್ ಮ್ಯಾಕ್ಸ್ ವೆಲ್ (ಅಜೇಯ 145 ರನ್), ಎವಿನ್ ಲೆವಿಸ್ (ಅಜೇಯ 125 ರನ್), ಶೇನ್ ವಾಟ್ಸನ್ (ಅಜೇಯ 124 ರನ್) ಗಳಿಸಿ ಕ್ರಮವಾಗಿ 3, 4, 5ನೇ ಸ್ಥಾನ ಪಡೆದಿದ್ದಾರೆ.