Tag: ಜಿಂಬಾಂಬ್ವೆ

  • ಡಲ್ ಹೊಡೆದ ಜಿಂಬಾಬ್ವೆ, ತವರಿನಲ್ಲಿ ಸತತ ಸೋಲು – ಸರಣಿ ಭಾರತದ ಪಾಲು

    ಡಲ್ ಹೊಡೆದ ಜಿಂಬಾಬ್ವೆ, ತವರಿನಲ್ಲಿ ಸತತ ಸೋಲು – ಸರಣಿ ಭಾರತದ ಪಾಲು

    ಹರಾರೆ: ಬಲಿಷ್ಠ ಭಾರತದ ಎದುರು ಜಿಂಬಾಬ್ವೆ ಡಲ್ ಹೊಡೆದಿದೆ. ಎರಡನೇ ಏಕದಿನ ಪಂದ್ಯದಲ್ಲೂ ಹೀನಾಯ ಪ್ರದರ್ಶನ ತೋರಿ ಸೋತಿದೆ. ಭಾರತ 5 ವಿಕೆಟ್‍ಗಳ ಅಂತರದ ಜಯದೊಂದಿಗೆ 2-0 ಅಂತರದಲ್ಲಿ ಸರಣಿ ಕೈವಶಮಾಡಿಕೊಂಡಿದೆ.

    ಜಿಂಬಾಬ್ವೆ,  ಭಾರತಕ್ಕೆ 162 ರನ್‍ಗಳ ಗುರಿ ನೀಡಿತು. ಈ ಗುರಿಯನ್ನು ಬೆನ್ನಟ್ಟಿದ ಭಾರತ 5 ವಿಕೆಟ್ ಕಳೆದುಕೊಂಡು 25.4 ಓವರ್‌ಗಳ ಅಂತ್ಯಕ್ಕೆ 167 ರನ್ ಸಿಡಿಸಿ 5 ವಿಕೆಟ್‍ಗಳ ಅಂತರದಿಂದ ಗೆದ್ದು ಜಿಂಬಾಬ್ವೆಗೆ ತವರಿನಲ್ಲಿ ಬ್ಯಾಕ್ ಟು ಬ್ಯಾಕ್ ಸೋಲುಣಿಸಿತು.

    ಭಾರತದ ಪರ ಆರಂಭಿಕರಾಗಿ ಕಣಕ್ಕಿಳಿದ ನಾಯಕ ಕೆ.ಎಲ್ ರಾಹುಲ್ 1 ರನ್‍ಗೆ ವಿಕೆಟ್ ಒಪ್ಪಿಸಿ ನಿರಾಸೆ ಅನುಭವಿಸಿದರು. ಶಿಖರ್ ಧವನ್ 33 ರನ್ (21 ಎಸೆತ, 4 ಬೌಂಡರಿ) ಮತ್ತು ಶುಭಮನ್ ಗಿಲ್ 33 ರನ್ (34 ಎಸೆತ, 6 ಬೌಂಡರಿ) ಬಾರಿಸಿ ವಿಕೆಟ್ ಒಪ್ಪಿಸಿ ಹೊರನಡೆದರು. ಆ ಬಳಿಕ ಒಂದಾದ ದೀಪಕ್ ಹೂಡಾ ಮತ್ತು ಸಂಜು ಸ್ಯಾಮ್ಸನ್ 5ನೇ ವಿಕೆಟ್‍ಗೆ 56 ರನ್ (58 ಎಸೆತ) ಜೊತೆಯಾಟವಾಡಿ ಗೆಲುವನ್ನು ಸುಲಭವಾಗಿಸಿದರು. ಇನ್ನೇನು ಗೆಲುವಿನ ಹೊಸ್ತಿಲಲ್ಲಿ ದೀಪಕ್ ಹೂಡಾ 25 ರನ್ (36 ಎಸೆತ, 3 ಬೌಂಡರಿ) ಬಾರಿಸಿ ವಿಕೆಟ್ ಕೈಚೆಲ್ಲಿಕೊಂಡರು.

    ಅಂತಿಮವಾಗಿ ಸಂಜು ಸ್ಯಾಮ್ಸನ್ ಸಿಕ್ಸರ್ ಸಿಡಿಸಿ ಅಜೇಯ 43 ರನ್ (39 ಎಸೆತ, 3 ಬೌಂಡರಿ, 4 ಸಿಕ್ಸ್) ರನ್ ಚಚ್ಚಿ ಗೆಲುವು ತಂದುಕೊಟ್ಟರು. ಭಾರತ 25.4 ಓವರ್‌ಗಳ ಅಂತ್ಯಕ್ಕೆ 5 ವಿಕೆಟ್ ಕಳೆದುಕೊಂಡು 167 ಸಿಡಿಸಿ ಇನ್ನೂ 146 ಎಸೆತ ಬಾಕಿ ಇರುವಂತೆ ಗೆಲುವಿನ ನಗೆ ಬೀರಿತು. ಈ ಮೂಲಕ 3 ಪಂದ್ಯಗಳ ಏಕದಿನ ಸರಣಿಯನ್ನು ಭಾರತ ಈಗಾಗಲೇ 2-0 ಅಂತರದಲ್ಲಿ ತನ್ನದಾಗಿಸಿಕೊಂಡಿದೆ.

    ಈ ಮೊದಲು ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಜಿಂಬಾಬ್ವೆ ಮೊದಲ ಏಕದಿನ ಪಂದ್ಯದಂತೆ ಅದೇ ರಾಗ ಅದೇ ಹಾಡು ಎಂಬಂತೆ ಪೆವಿಲಿಯನ್ ಪರೇಡ್ ಆರಂಭಿಸಿತು. ಇದನ್ನೂ ಓದಿ: ಕೊಹ್ಲಿ ಬ್ಯಾಟಿಂಗ್‍ನಲ್ಲಿ ಫಾರ್ಮ್ ಕಳೆದುಕೊಂಡಿರಬಹುದು ನಮ್ಮ ಹೃದಯದಲ್ಲಿ ಅಲ್ಲ: ಫ್ಯಾನ್ಸ್ ಪೋಸ್ಟರ್ ವೈರಲ್

    ಅಗ್ರಕ್ರಮಾಂಕದ ಬ್ಯಾಟ್ಸ್‌ಮ್ಯಾನ್‌ಗಳು ಅಲ್ಪ ಮೊತ್ತಕ್ಕೆ ವಿಕೆಟ್ ಒಪ್ಪಿಸಿ ಹೊರನಡೆಯಲು ಭಾರತದ ಬೌಲರ್‌ಗಳ ಬಿಗಿ ದಾಳಿ ಕಾರಣವಾಯಿತು. ಭಾರತದ ಬೌಲರ್‌ಗಳ ಸಂಘಟಿತ ದಾಳಿಯ ಮುಂದೆ ಜಿಂಬಾಬ್ವೆಯ ಸೀನ್ ವಿಲಿಯಮ್ಸ್ 42 ರನ್ (42 ಎಸೆತ, 3 ಬೌಂಡರಿ, 1 ಸಿಕ್ಸ್) ಮತ್ತು ರಯಾನ್ ಬರ್ಲ್ ಅಜೇಯ 39 ರನ್ (47 ಎಸೆತ, 3 ಬೌಂಡರಿ, 1 ಸಿಕ್ಸ್) ಸಿಡಿಸಿದನ್ನು ಹೊರತು ಪಡಿಸಿ ಉಳಿದ ಬ್ಯಾಟ್ಸ್‌ಮ್ಯಾನ್‌ಗಳು ರನ್ ಪೇರಿಸಲು ಪರದಾಡಿದರು. ಇದನ್ನೂ ಓದಿ: ರಾಷ್ಟ್ರಗೀತೆ ಹಾಡುತ್ತಿದ್ದ ಇಶನ್ ಕಿಶನ್‍ಗೆ ಕಚ್ಚಿದ ಜೇನುನೊಣ

    ಮಿಂಚಿದ ಠಾಕೂರ್:
    ಭಾರತದ ಬೌಲರ್‌ಗಳು ಒಬ್ಬರಾದ ಬಳಿಕ ಇನ್ನೊಬ್ಬರು ವಿಕೆಟ್ ಬೇಟೆಯಾಡುತ್ತ ಮಿಂಚಿದರು. ಅಂತಿಮವಾಗಿ ಜಿಂಬಾಬ್ವೆ 38.1 ಓವರ್‌ಗಳಲ್ಲಿ 161 ರನ್ ಸಿಡಿಸಿ ಸರ್ವಪತನ ಕಂಡಿತು. ಭಾರತದ ಪರ ಶಾರ್ದೂಲ್ ಠಾಕೂರ್ 3 ವಿಕೆಟ್ ಕಿತ್ತು ಸಂಭ್ರಮಿಸಿದರು. ಉಳಿದಂತೆ ಸಿರಾಜ್, ಪ್ರಸಿದ್ಧ್ ಕೃಷ್ಣ, ಅಕ್ಷರ್ ಪಟೇಲ್, ಕುಲ್‍ದೀಪ್ ಯಾದವ್, ದೀಪಕ್ ಹೂಡಾ ತಲಾ ಒಂದೊಂದು ವಿಕೆಟ್ ಹಂಚಿಕೊಂಡರು.

    Live Tv
    [brid partner=56869869 player=32851 video=960834 autoplay=true]

  • ಕೊಹ್ಲಿ ಬ್ಯಾಟಿಂಗ್‍ನಲ್ಲಿ ಫಾರ್ಮ್ ಕಳೆದುಕೊಂಡಿರಬಹುದು ನಮ್ಮ ಹೃದಯದಲ್ಲಿ ಅಲ್ಲ: ಫ್ಯಾನ್ಸ್ ಪೋಸ್ಟರ್ ವೈರಲ್

    ಕೊಹ್ಲಿ ಬ್ಯಾಟಿಂಗ್‍ನಲ್ಲಿ ಫಾರ್ಮ್ ಕಳೆದುಕೊಂಡಿರಬಹುದು ನಮ್ಮ ಹೃದಯದಲ್ಲಿ ಅಲ್ಲ: ಫ್ಯಾನ್ಸ್ ಪೋಸ್ಟರ್ ವೈರಲ್

    ಹರಾರೆ: ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಜಿಂಬಾಬ್ವೆ ಸರಣಿಯಲ್ಲಿ ಆಡದಿದ್ದರೂ ಅವರ ಹೆಸರು ಮಾತ್ರ ಹರಾರೆ ಮೈದಾನದಲ್ಲಿ ರಾರಾಜಿಸುತ್ತಿದ್ದೆ. ಕೊಹ್ಲಿ ಅಭಿಮಾನಿಗಳು ಮಾತ್ರ ಕೊಹ್ಲಿ ಪೋಸ್ಟರ್ ಹಿಡಿದುಕೊಂಡು ಮೈದಾನದಲ್ಲಿ ಕೊಹ್ಲಿಯನ್ನು ಸ್ಮರಿಸಿಕೊಂಡಿದ್ದಾರೆ.

    ಭಾರತ ಹಾಗೂ ಜಿಂಬಾಬ್ವೆ ವಿರುದ್ಧದ 2ನೇ ಏಕದಿನ ಪಂದ್ಯ ಹರಾರೆ ಮೈದಾನದಲ್ಲಿ ನಡೆಯುತ್ತಿದೆ. ಪಂದ್ಯ ವೀಕ್ಷಿಸಲು ಮೈದಾನಕ್ಕೆ ಆಗಮಿಸಿರುವ ಪ್ರೇಕ್ಷಕರ ಪೈಕಿ ಒಬ್ಬಾತ ಕೊಹ್ಲಿ ಬ್ಯಾಟಿಂಗ್‍ನಲ್ಲಿ ಫಾರ್ಮ್ ಕಳೆದುಕೊಂಡಿರಬಹುದು ನನ್ನ ಹೃದಯದಲ್ಲಿ ಅಲ್ಲ. ನಾವು ಕೊಹ್ಲಿಯನ್ನು ಮಿಸ್ ಮಾಡಿಕೊಳ್ಳುತ್ತಿದ್ದೇವೆ ಎಂದು ಬರೆದುಕೊಂಡು ಪೋಸ್ಟರ್ ಹಿಡಿದು ಮೈದಾನದಲ್ಲಿ ಕಾಣಿಸಿಕೊಂಡಿದ್ದಾನೆ. ಇದನ್ನೂ ಓದಿ: ರಾಷ್ಟ್ರಗೀತೆ ಹಾಡುತ್ತಿದ್ದ ಇಶನ್ ಕಿಶನ್‍ಗೆ ಕಚ್ಚಿದ ಜೇನುನೊಣ

    ಕೊಹ್ಲಿ ಬ್ಯಾಟಿಂಗ್‍ನಲ್ಲಿ ರನ್ ಬರ ಅನುಭವಿಸುತ್ತಿದ್ದು, ಈಗಾಗಲೇ ವೆಸ್ಟ್ ಇಂಡೀಸ್, ಜಿಂಬಾಬ್ವೆ ಸರಣಿಯಿಂದ ವಿಶ್ರಾಂತಿ ಪಡೆದು ಹೊರಗುಳಿದಿದ್ದಾರೆ. ಹಾಗಾಗಿ ಜಿಂಬಾಬ್ವೆ ಪ್ರವಾಸದ ವೇಳೆ ಕೊಹ್ಲಿ ಅಭಿಮಾನಿಗಳಿಗೆ ನಿರಾಸೆಯಾಗಿದೆ. ಇದನ್ನೂ ಓದಿ: ಹರಾರೆಯಲ್ಲಿ ನೀರಿಗೆ ಹಾಹಾಕಾರ – ಮಿತವಾಗಿ ಬಳಸಿ ಟೀಂ ಇಂಡಿಯಾ ಆಟಗಾರರಿಗೆ ಬಿಸಿಸಿಐ ಸೂಚನೆ

    ಕೊಹ್ಲಿ ಮುಂದಿನ ಏಷ್ಯಾಕಪ್‍ಗಾಗಿ ಸಿದ್ಧತೆ ನಡೆಸುತ್ತಿದ್ದು, ನಿರೀಕ್ಷೆಯಂತೆ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆದಿದ್ದಾರೆ. ಈ ಮೂಲಕ ಮತ್ತೆ ಕಂಬ್ಯಾಕ್ ಮಾಡುವ ಉತ್ಸಾಹದಲ್ಲಿದ್ದಾರೆ. ಏಷ್ಯಾಕಪ್ ಆಗಸ್ಟ್ 27 ರಿಂದ ಆರಂಭವಾಗುತ್ತಿದ್ದು, ಆಗಸ್ಟ್ 28 ರಂದು ಭಾರತ ಮತ್ತು ಪಾಕಿಸ್ತಾನ ತಂಡಗಳು ಕಾದಾಟ ನಡೆಸಲಿವೆ.

    Live Tv
    [brid partner=56869869 player=32851 video=960834 autoplay=true]

  • ರಾಷ್ಟ್ರಗೀತೆ ಹಾಡುತ್ತಿದ್ದ ಇಶನ್ ಕಿಶನ್‍ಗೆ ಕಚ್ಚಿದ ಜೇನುನೊಣ

    ರಾಷ್ಟ್ರಗೀತೆ ಹಾಡುತ್ತಿದ್ದ ಇಶನ್ ಕಿಶನ್‍ಗೆ ಕಚ್ಚಿದ ಜೇನುನೊಣ

    ಹರಾರೆ: ಭಾರತ ಹಾಗೂ ಜಿಂಬಾಬ್ವೆ ವಿರುದ್ಧದ ಮೊದಲ ಏಕದಿನ ಪಂದ್ಯಕ್ಕೂ ಮೊದಲು ರಾಷ್ಟ್ರಗೀತೆ ಸಂದರ್ಭ ಮೈದಾನದಲ್ಲಿದ್ದ ಟೀಂ ಇಂಡಿಯಾದ ಆಟಗಾರ ಇಶನ್ ಕಿಶನ್‍ಗೆ ಜೇನುನೊಣವೊಂದು ಕಚ್ಚಿದೆ.

    ಹರಾರೆಯಲ್ಲಿ ನಡೆದ ಮೊದಲ ಏಕದಿನ ಪಂದ್ಯಕ್ಕೂ ಮೊದಲು ಎರಡೂ ತಂಡದ ಆಟಗಾರರು ರಾಷ್ಟ್ರಗೀತೆಗಾಗಿ ಮೈದಾನಕ್ಕೆ ಆಗಮಿಸಿದ್ದರು. ಭಾರತದ ರಾಷ್ಟ್ರಗೀತೆ ಮೊಳಗುತ್ತಿದ್ದಂತೆ ಕುಲ್‍ದೀಪ್ ಯಾದವ್ ಜೊತೆ ನಿಂತು ರಾಷ್ಟ್ರಗೀತೆ ಹಾಡುತ್ತಿದ್ದ ಇಶನ್ ಕಿಶನ್‍ಗೆ ಜೇನುನೊಣವೊಂದು ಹಾರಿ ಬಂದು ಕಚ್ಚಿದೆ. ಕೂಡಲೇ ಇಶನ್ ಕಿಶನ್ ಎಚ್ಚೆತ್ತುಕೊಂಡು ಜೇನುನೊಣದಿಂದ ಪಾರಾಗಿದ್ದಾರೆ. ಇದೀಗ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇದನ್ನೂ ಓದಿ: ಬೌಲರ್‌, ಬ್ಯಾಟ್ಸ್‌ಮ್ಯಾನ್‌ಗಳ ಆಟಕ್ಕೆ ಥಂಡಾ ಹೊಡೆದ ಜಿಂಬಾಬ್ವೆ – ಭಾರತಕ್ಕೆ 10 ವಿಕೆಟ್‌ಗಳ ಭರ್ಜರಿ ಜಯ

    ಇಶನ್ ಕಿಶನ್ ಜಿಂಬಾಬ್ವೆ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಆಡುವ ಹನ್ನೊಂದರ ಬಳಗದಲ್ಲಿ ಕಾಣಿಸಿಕೊಂಡರೂ, ಬ್ಯಾಟಿಂಗ್ ಅವಕಾಶ ಸಿಕ್ಕಿರಲಿಲ್ಲ. ಇದನ್ನೂ ಓದಿ: ದಾಂಪತ್ಯ ಜೀವನದಲ್ಲಿ ಬಿರುಕು – ಚಹಲ್‍ರನ್ನು ಕೈಬಿಟ್ರಾ ಧನಶ್ರೀ?

    ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾದ ತ್ರಿವಳಿ ಬೌಲರ್‌ಗಳಾದ ದೀಪಕ್‌ ಚಹರ್‌, ಪ್ರಸಿದ್ಧ್‌ ಕೃಷ್ಣ, ಅಕ್ಷರ್‌ ಪಟೇಲ್ ಘಾತಕ ದಾಳಿ ಮತ್ತು ಶಿಖರ್ ಧವನ್, ಶುಭಮನ್ ಗಿಲ್ ಜೋಡಿಯ ಬೊಂಬಾಟ್ ಬ್ಯಾಟಿಂಗ್‍ನಿಂದಾಗಿ ಭಾರತ ವಿಕೆಟ್ ನಷ್ಟವಿಲ್ಲದೆ 10 ವಿಕೆಟ್‍ಗಳ ಭರ್ಜರಿ ಜಯ ದಾಖಲಿಸಿತ್ತು. ಎರಡನೇ ಏಕದಿನ ಪಂದ್ಯ ಆಗಸ್ಟ್ 20 ರಂದು ನಡೆಯಲಿದೆ.

    Live Tv
    [brid partner=56869869 player=32851 video=960834 autoplay=true]

  • ಬೌಲರ್‌, ಬ್ಯಾಟ್ಸ್‌ಮ್ಯಾನ್‌ಗಳ ಆಟಕ್ಕೆ ಥಂಡಾ ಹೊಡೆದ ಜಿಂಬಾಬ್ವೆ  – ಭಾರತಕ್ಕೆ 10 ವಿಕೆಟ್‌ಗಳ ಭರ್ಜರಿ ಜಯ

    ಬೌಲರ್‌, ಬ್ಯಾಟ್ಸ್‌ಮ್ಯಾನ್‌ಗಳ ಆಟಕ್ಕೆ ಥಂಡಾ ಹೊಡೆದ ಜಿಂಬಾಬ್ವೆ – ಭಾರತಕ್ಕೆ 10 ವಿಕೆಟ್‌ಗಳ ಭರ್ಜರಿ ಜಯ

    ಹರಾರೆ: ಟೀಂ ಇಂಡಿಯಾದ ತ್ರಿವಳಿ ಬೌಲರ್‌ಗಳ ಘಾತಕ ದಾಳಿ ಮತ್ತು ಶಿಖರ್ ಧವನ್, ಶುಭಮನ್ ಗಿಲ್ ಜೋಡಿಯ ಬೊಂಬಾಟ್ ಬ್ಯಾಟಿಂಗ್‌ಗೆ ಜಿಂಬಾಬ್ವೆ ಥಂಡಾ ಹೊಡೆದಿದೆ. ಇತ್ತ ಭಾರತ ವಿಕೆಟ್‌ ನಷ್ಟವಿಲ್ಲದೆ 10 ವಿಕೆಟ್‌ಗಳ ಭರ್ಜರಿ ಜಯದೊಂದಿಗೆ ಸರಣಿಯಲ್ಲಿ ಶುಭಾರಂಭ ಕಂಡಿದೆ.

    ಜಿಂಬಾಬ್ವೆ ನೀಡಿದ 189 ರನ್‍ಗಳ ಟಾರ್ಗೆಟ್ ಬೆನ್ನಟ್ಟಿದ ಭಾರತ ತಂಡಕ್ಕೆ ಆರಂಭಿಕರಾದ ಧವನ್, ಗಿಲ್ ಮೊದಲ ವಿಕೆಟ್‌ಗೆ ಅಜೇಯ 192 ರನ್ ಬಾರಿಸಿ ಇನ್ನೂ 115 ಎಸೆತ ಬಾಕಿ ಇರುವಂತೆಯೇ 10 ವಿಕೆಟ್‍ಗಳ ಭರ್ಜರಿ ಜಯ ತಂದುಕೊಟ್ಟರು. ಈ ಮೂಲಕ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಭಾರತ 1-0 ಮುನ್ನಡೆ ಪಡೆದುಕೊಂಡಿದೆ. ಇದನ್ನೂ ಓದಿ: ದಾಂಪತ್ಯ ಜೀವನದಲ್ಲಿ ಬಿರುಕು – ಚಹಲ್‍ರನ್ನು ಕೈಬಿಟ್ರಾ ಧನಶ್ರೀ?

    ಧವನ್ ಅಜೇಯ 81 ರನ್ (113 ಎಸೆತ, 8 ಬೌಂಡರಿ) ಮತ್ತು ಗಿಲ್ 82 ರನ್‌ (72 ಎಸೆತ, 10 ಬೌಂಡರಿ, 1 ಸಿಕ್ಸ್‌) ಚಚ್ಚಿ ಜಿಂಬಾಬ್ವೆ ಬೌಲರ್‌ಗಳ ಬೆವರಿಳಿಸಿದರು. ಆರಂಭದಿಂದಲೇ ಸಣ್ಣ ಮೊತ್ತವನ್ನು ಚೇಸ್ ಮಾಡುವ ಬರದಲ್ಲಿ ಮುನ್ನಡೆದ ಈ ಜೋಡಿಗೆ ಈ ಗುರಿ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತೆ ಭಾಸವಾಯಿತು. ಅಂತಿಮವಾಗಿ 30.5 ಓವರ್‌ಗಳ ಅಂತ್ಯಕ್ಕೆ ವಿಕೆಟ್‌ ನಷ್ಟವಿಲ್ಲದೆ 192 ಸಿಡಿಸಿ ಭಾರತಕ್ಕೆ ಜಯ ತಂದುಕೊಟ್ಟರು.

    ಈ ಮೊದಲು ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ಕೆ.ಎಲ್ ರಾಹುಲ್ ತವರಿನ ತಂಡಕ್ಕೆ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ನೀಡಿದರು. ಆದರೆ ಈ ಅವಕಾಶವನ್ನು ಬಳಸಿಕೊಳ್ಳಲು ವಿಫಲವಾದ ಜಿಂಬಾಬ್ವೆ ಬ್ಯಾಟ್ಸ್‌ಮ್ಯಾನ್‌ಗಳು ನಾ ಮುಂದು, ತಾ ಮುಂದು ಎಂಬಂತೆ ಪೆವಿಲಿಯನ್ ಪರೇಡ್ ಆರಂಭಿಸಿದರು. ಇದನ್ನೂ ಓದಿ: ಫಿಫಾ ಭಾರತವನ್ನು ಅಮಾನುತು ಮಾಡಿದ್ದು ಯಾಕೆ? – ನಡೆಯುತ್ತಾ ಮಹಿಳಾ ವಿಶ್ವಕಪ್‌?

    ಚಾಹರ್, ಅಕ್ಷರ್, ಕೃಷ್ಣ ವಿಕೆಟ್ ಬೇಟೆ:
    ಆರಂಭದಲ್ಲೇ ಭಾರತದ ಬೌಲರ್‌ಗಳು ಜಿಂಬಾಬ್ವೆ ಬ್ಯಾಟ್ಸ್‌ಮ್ಯಾನ್‌ಗಳ ವಿರುದ್ಧ ಮೇಲುಗೈ ಸಾಧಿಸಿದರು. ಅದರಲ್ಲೂ ವಿಶ್ರಾಂತಿಯ ಬಳಿಕ ಟೀಂ ಇಂಡಿಯಾಗೆ ಕಂಬ್ಯಾಕ್ ಮಾಡಿದ ದೀಪಕ್ ಚಹರ್ ಜಿಂಬಾಬ್ವೆ ಅಗ್ರಕ್ರಮಾಂಕದ ಬ್ಯಾಟ್ಸ್‌ಮ್ಯಾನ್‌ಗಳಿಗೆ ಡಗೌಟ್ ದಾರಿ ತೋರಿಸಿದರು. ಆ ಬಳಿಕ ಪ್ರಸಿದ್ಧ್ ಕೃಷ್ಣ ದಾಳಿ ಆರಂಭಿಸಿ ವಿಕೆಟ್ ಬೇಟೆ ಆರಂಭಿಸಿದರು. ಇತ್ತ ಜಿಂಬಾಬ್ವೆ 20 ಓವರ್‌ಗಳಲ್ಲಿ 83 ರನ್‍ಗಳಿಗೆ ಪ್ರಮುಖ 6 ವಿಕೆಟ್ ಕಳೆದುಕೊಂಡು ಹೀನಾಯ ಸ್ಥಿತಿ ತಲುಪಿತ್ತು. ಬಳಿಕ ಜಿಂಬಾಬ್ವೆ ನಾಯಕ ರೆಗಿಸ್ ಚಕಬ್ವಾ 35 ರನ್ (51 ಎಸೆತ, 4 ಬೌಂಡರಿ), ರಿಚರ್ಡ್ ನಾಗರವ 34 ರನ್ (42 ಎಸೆತ, 3 ಬೌಂಡರಿ, 1 ಸಿಕ್ಸ್) ಮತ್ತು ಬ್ರಾಡ್ ಇವಾನ್ಸ್ ಅಜೇಯ 33 ರನ್ (29 ಎಸೆತ, 3 ಬೌಂಡರಿ, 1 ಸಿಕ್ಸ್) ನೆರವಿನಿಂದ 180ರ ಗಡಿದಾಟಿತು. ವೇಗಿಗಳ ದಾಳಿಯ ಬಳಿಕ ಅಕ್ಷರ್ ಪಟೇಲ್ ಜಿಂಬಾಬ್ವೆ ಬ್ಯಾಟ್ಸ್‌ಮ್ಯಾನ್‌ಗಳಿಗೆ ಕಂಟಕವಾದರು.

    ಅಂತಿಮವಾಗಿ ಜಿಂಬಾಬ್ವೆ 40.3 ಓವರ್‌ಗಳ ಅಂತ್ಯಕ್ಕೆ 189 ರನ್‍ಗಳಿಗೆ ಆಲೌಟ್ ಆಯಿತು. ಭಾರತದ ಪರ ದೀಪಕ್ ಚಹರ್, ಪ್ರಸಿದ್ಧ್ ಕೃಷ್ಣ ಮತ್ತು ಅಕ್ಷರ್ ಪಟೇಲ್ ತಲಾ ಮೂರು ವಿಕೆಟ್ ಕಿತ್ತು ಮಿಂಚಿದರು. ಇನ್ನುಳಿದ ಒಂದು ವಿಕೆಟ್ ಸಿರಾಜ್ ತನ್ನದಾಗಿಸಿಕೊಂಡರು.

    Live Tv
    [brid partner=56869869 player=32851 video=960834 autoplay=true]

  • ಹರಾರೆಯಲ್ಲಿ ನೀರಿಗೆ ಹಾಹಾಕಾರ – ಮಿತವಾಗಿ ಬಳಸಿ ಟೀಂ ಇಂಡಿಯಾ ಆಟಗಾರರಿಗೆ ಬಿಸಿಸಿಐ ಸೂಚನೆ

    ಹರಾರೆಯಲ್ಲಿ ನೀರಿಗೆ ಹಾಹಾಕಾರ – ಮಿತವಾಗಿ ಬಳಸಿ ಟೀಂ ಇಂಡಿಯಾ ಆಟಗಾರರಿಗೆ ಬಿಸಿಸಿಐ ಸೂಚನೆ

    ಹರಾರೆ: ಟೀಂ ಇಂಡಿಯಾ ಮೂರು ಪಂದ್ಯಗಳ ಏಕದಿನ ಸರಣಿಗಾಗಿ ಜಿಂಬಾಬ್ವೆ ಪ್ರವಾಸ ಕೈಗೊಂಡಿದೆ. ಈ ನಡುವೆ ಜಿಂಬಾಬ್ವೆಯ ರಾಜಧಾನಿ ಹರಾರೆಯಲ್ಲಿ ನೀರಿಗೆ ಹಾಹಾಕಾರ ತಲೆದೂರಿದೆ. ಹಾಗಾಗಿ ಬಿಸಿಸಿಐ (ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ) ಟೀಂ ಇಂಡಿಯಾ ಆಟಗಾರರು ನೀರನ್ನು ಮಿತವಾಗಿ ಬಳಸುವಂತೆ ಸೂಚಿಸಿದೆ.

    ಜಿಂಬಾಬ್ವೆಯ ರಾಜಧಾನಿ ಹರಾರೆಯಲ್ಲಿ ಕಳೆದ ಒಂದು ವರ್ಷದಿಂದ ನೀರಿನ ಸಮಸ್ಯೆ ತಲೆದೂರಿದೆ. ಅಲ್ಲಿನ ಜನ ನೀರಿಗಾಗಿ ಪರದಾಡುತ್ತಿದ್ದಾರೆ. ಈ ನಡುವೆ ಟೀಂ ಇಂಡಿಯಾ ಜಿಂಬಾಬ್ವೆ ಪ್ರವಾಸ ಕೈಗೊಂಡಿದ್ದು, ಈಗಾಗಲೇ ಜಿಂಬಾಬ್ವೆಯ ಹರಾರೆಯಲ್ಲಿದೆ. ಮೂರು ಏಕದಿನ ಪಂದ್ಯ ಕೂಡ ಹರಾರೆಯಲ್ಲಿ ನಡೆಯುತ್ತಿದೆ. ಇದೀಗ ಅಟಗರರು ಹರಾರೆಯ ಹೋಟೆಲ್ ಒಂದರಲ್ಲಿ ತಂಗಿದ್ದು, ಅಲ್ಲಿ ನೀರನ್ನು ಮಿತವಾಗಿ ಬಳಸಿ ಹೆಚ್ಚು ನೀರು ವೇಸ್ಟ್ ಮಾಡಬೇಡಿ ಎಂದು ಆಟಗಾರರಿಗೆ ಖಡಕ್ ಸೂಚನೆ ನೀಡಿದೆ. ಇದನ್ನೂ ಓದಿ: ಫಿಫಾ ಭಾರತವನ್ನು ಅಮಾನುತು ಮಾಡಿದ್ದು ಯಾಕೆ? – ನಡೆಯುತ್ತಾ ಮಹಿಳಾ ವಿಶ್ವಕಪ್‌?

    ಮೂರು ಪಂದ್ಯಗಳ ಏಕದಿನ ಸರಣಿ ಆಗಸ್ಟ್ 18, 20, 22 ರಂದು ಹರಾರೆಯಲ್ಲಿ ನಡೆಯಲಿದೆ. ಈಗಾಗಲೇ ಕನ್ನಡಿಗ ಕೆ.ಎಲ್ ರಾಹುಲ್ ಸಾರಥ್ಯದ ಟೀಂ ಇಂಡಿಯಾ ಹರಾರೆಯಲ್ಲಿ ಅಭ್ಯಾಸ ಆರಂಭಿಸಿದೆ. ಇದನ್ನೂ ಓದಿ: ಮೋದಿ, ಶಾ ಜೊತೆ ಗಂಗೂಲಿ ಚರ್ಚೆ – ರಾಜಕೀಯ ಇನ್ನಿಂಗ್ಸ್‌ ಆಡ್ತಾರಾ ದಾದಾ?

    Live Tv
    [brid partner=56869869 player=32851 video=960834 autoplay=true]

  • ಮೊಸಳೆ ವಿರುದ್ಧ ಹೋರಾಡಿ ತನ್ನ 3 ವರ್ಷದ ಮಗುವನ್ನು ರಕ್ಷಿಸಿದ ತಾಯಿ

    ಮೊಸಳೆ ವಿರುದ್ಧ ಹೋರಾಡಿ ತನ್ನ 3 ವರ್ಷದ ಮಗುವನ್ನು ರಕ್ಷಿಸಿದ ತಾಯಿ

    – ಮೊಸಳೆ ಮೂಗಿಗೆ ಬೆರಳಿಟ್ಟು ಮಗುವಿನ ರಕ್ಷಣೆ

    ಹರಾರೆ: ದೈತ್ಯ ಮೊಸಳೆ ವಿರುದ್ಧ ಹೋರಾಡಿ ತಾಯಿಯೊಬ್ಬಳು ತನ್ನ ಮೂರು ವರ್ಷದ ಗಂಡು ಮಗುವನ್ನು ಕಾಪಾಡಿ ದಿಟ್ಟತನ ಮೆರದಿರುವ ಘಟನೆ ಜಿಂಬಾಬ್ವೆಯಲ್ಲಿ ನಡೆದಿದೆ.

    ತಾಯಿ ಎಂದರೆ ಹಾಗೇ ತನ್ನ ಮಕ್ಕಳಿಗಾಗಿ ಯಾವ ರೀತಿಯ ಅಪತ್ತು ಬಂದರೂ ಅದನ್ನು ಎದುರಿಸಿ ನಿಲ್ಲುತ್ತಾಳೆ. ಎಷ್ಟೇ ಕಷ್ಟದ ಪರಿಸ್ಥಿತಿಯಲ್ಲು ತಾಯಿ ತನ್ನ ಮಕ್ಕಳನ್ನು ಬಿಟ್ಟಕೊಡುವುದಿಲ್ಲ. ಇದಕ್ಕೆ ಸಾಕ್ಷಿ ಎಂಬಂತೆ ಮೊಸಳೆ ಬಾಯಿಗೆ ಸಿಕ್ಕಿದ್ದ ತನ್ನ ಮಗುವೊಂದನ್ನು ಮೊಸಳೆಯ ಬೆನ್ನ ಮೇಲೆ ಕುಳಿತು ಅದರ ಮೂಗಿನ ಒಳಗೆ ಬೆರಳುಗಳನ್ನು ಹಾಕಿ ತಾಯಿಯೊಬ್ಬರು ಕಾಪಾಡಿದ್ದಾರೆ.

    ಜಿಂಬಾಬ್ವೆಯ ಚಿರೆಡ್ಜಿ ಪಟ್ಟಣದ 30 ವರ್ಷದ ಮಹಿಳೆ ಮೌರಿನಾ ಮುಸಿಸಿನಿಯಾ ತನ್ನ ಇಬ್ಬರು ಮಕ್ಕಳನ್ನು ಕರೆದುಕೊಂಡು ರುಂಡೆ ನದಿಗೆ ಮೀನು ಹಿಡಿಯಲು ಹೋಗಿದ್ದರು. ಈ ವೇಳೆ ಮಕ್ಕಳನ್ನು ನದಿಯ ದಡದಲ್ಲಿ ಆಟವಾಡಲು ಬಿಟ್ಟ ಮೌರಿನಾ ನದಿಯಲ್ಲಿ ಮೀನು ಹಿಡಿಯುತ್ತಿದ್ದರು. ಈ ವೇಳೆ ನದಿಯಲ್ಲಿ ಇದ್ದ ಮೊಸಳೆ ದಡದಲ್ಲಿ ಇದ್ದ ಮಕ್ಕಳ ಮೇಲೆ ದಾಳಿ ಮಾಡಿದೆ. ಮಕ್ಕಳು ಕಿರುಚಿದಾಗ ಈ ವಿಷಯ ತಾಯಿಗೆ ಗೊತ್ತಾಗಿದೆ.

    ಈ ವಿಚಾರವಾಗಿ ಮಾತನಾಡಿರುವ ಮೌರಿನಾ, ಮಕ್ಕಳು ಇದ್ದಕ್ಕಿಂತೆ ಕಿರುಚಿದಾಗ ನಾನು ಗಾಬರಿಗೊಂಡು ಅಲ್ಲಿಗೆ ಬಂದೆ. ಆಗಲೇ ಮೊಸಳೆ ತನ್ನ ಮೂರು ವರ್ಷದ ಮಗು ಗಿಡಿಯನ್ ಮೇಲೆ ದಾಳಿ ಮಾಡಿತ್ತು. ತಕ್ಷಣ ನಾನು ಅದರ ಬೆನ್ನ ಮೇಲೆ ಹತ್ತಿ ಕುಳಿತು ನನ್ನ ಕೈ ಬೆರಳುಗಳನ್ನು ಅದರ ಮೂಗಿಗೆ ಹಾಕಿದೆ. ನಂತರ ಇನ್ನೊಂದು ಕೈಯಲ್ಲಿ ನನ್ನ ಮಗುವನ್ನು ಬಿಡಿಸಿದೆ. ನಂತರ ಅಲ್ಲಿಂದ ಮಕ್ಕಳನ್ನು ಕರೆದುಕೊಂಡು ಬಂದೆ ಎಂದು ಹೇಳಿದ್ದಾರೆ.

    ನನಗೆ ನಾನು ಚಿಕ್ಕವಳಿದ್ದಾಗಲೇ ನಮ್ಮ ಹಿರಿಯರು ಮೊಸಳೆ ದಾಳಿ ಮಾಡಿದಾಗ ಏನು ಮಾಡಬೇಕು ಎಂದು ಹೇಳಿಕೊಟ್ಟಿದ್ದರು. ಅದರಂತೆ ನಾನು ಮಾಡಿದೆ. ಮೊಸಳೆ ಮೂಗಿನಲ್ಲಿ ಜೋರಾಗಿ ಉಸಿರಾಡುತ್ತೆ. ಅದು ದಾಳಿ ಮಾಡಿದಾಗ ಅದ ಮುಖದ ಮೇಲೆ ಕುಳಿತುಕೊಂಡು ತಕ್ಷಣ ಮೂಗಿಗೆ ಬೇರಳನ್ನು ಹಾಕಬೇಕು. ಬೆರಳನ್ನು ಹಾಕಿ ಮೂಗನ್ನು ಬ್ಲಾಕ್ ಮಾಡಿದರೆ ಅದು ಸುಸ್ತುಗುತ್ತದೆ. ಜೊತೆಗೆ ಬಾಲದಲ್ಲಿ ಹೊಡೆಯುವುದಿಲ್ಲ. ಈ ರೀತಿ ಮಾಡಿಯೇ ನಾನು ನನ್ನ ಮಗುವನ್ನು ಉಳಿಸಿಕೊಂಡೇ ಎಂದು ಮೌರಿನಾ ಹೇಳಿದ್ದಾರೆ.

    ಈ ಘಟನೆಯಲ್ಲಿ ಮಗುವಿಗೆ ಗಾಯವಾಗಿದ್ದು, ತಕ್ಷಣ ಮಗುವನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಜಿಂಬಾಬ್ವೆಯ ರುಂಡೆ ನದಿಯಲ್ಲಿ ನೈಲ್ ಎಂಬ ಜಾತಿಯ ಮೊಸಳೆಗಳಿದ್ದು, ಈ ಮೊಸಳೆಗಳು ಸುಮಾರು 20 ಅಡಿಗಳಷ್ಟು ಉದ್ದ ಬೆಳೆಯುತ್ತವೆ.

  • ಕಣ್ಣಿಗೆ ಕೈ ಹಾಕಿ ಚುಚ್ಚಿ, ಜೀವ ಪಣಕ್ಕಿಟ್ಟು ಮೊಸಳೆ ಬಾಯಿಂದ ಸ್ನೇಹಿತೆಯನ್ನು ಕಾಪಾಡಿದ್ಳು ಬಾಲಕಿ

    ಕಣ್ಣಿಗೆ ಕೈ ಹಾಕಿ ಚುಚ್ಚಿ, ಜೀವ ಪಣಕ್ಕಿಟ್ಟು ಮೊಸಳೆ ಬಾಯಿಂದ ಸ್ನೇಹಿತೆಯನ್ನು ಕಾಪಾಡಿದ್ಳು ಬಾಲಕಿ

    ಹರಾರೆ: ಜಿಂಬಾಬ್ವೆಯ ಬಾಲಕಿಯೊಬ್ಬಳು ತನ್ನ ಜೀವವನ್ನು ಪಣಕ್ಕಿಟ್ಟು ಬೃಹತ್ ಮೊಸಳೆಯೊಂದಿಗೆ ಹೋರಾಡಿ ಸ್ನೇಹಿತೆಯನ್ನು ರಕ್ಷಿಸಿ ಸ್ನೇಹ ಮೆರೆದಿದ್ದಾಳೆ.

    ಜಿಂಬಾಬ್ವೆಯ ಸಿಂಡರೆಲ್ಲಾ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಈ ಗ್ರಾಮದ ರೆಬೆಕಾ ಮುಕಾಂಬ್ವೆ(11) ಆಕೆಯ ಗೆಳತಿ ಲೇಟೋನಾ ಮುವಾನಿ(9) ಜೀವವನ್ನು ಮೊಸಳೆಯಿಂದ ರಕ್ಷಿಸಿದ್ದಾಳೆ. ತನ್ನ ಜೀವದ ಹಂಗು ತೊರೆದು ಮೊಸಳೆಯ ಬೆನ್ನೇರಿ, ಕಣ್ಣಿಗೆ ಚುಚ್ಚಿ ಸ್ನೇಹಿತೆಯ ಜೀವ ಉಳಿಸಿದ್ದಾಳೆ.

    ಸಿಂಡರೆಲ್ಲಾ ಗ್ರಾಮದ ಹೊಳೆಯಲ್ಲಿ ಲೇಟೋನಾ ತನ್ನ ಸ್ನೇಹಿತರೊಂದಿಗೆ ಈಜಾಡುತ್ತಾ ಆಟವಾಡುತ್ತಿದ್ದಳು. ಈ ವೇಳೆ, ಬೃಹತ್ ಗಾತ್ರದ ಮೊಸಳೆಯೊಂದು ಲೇಟೋನಾ ಮೇಲೆ ದಾಳಿ ಮಾಡಿದಾಗ ಆಕೆ ಜೋರಾಗಿ ಕಿರುಚಾಡಿದ್ದಾಳೆ. ಈ ಕೂಗನ್ನು ಕೇಳಿದ ರೆಬೆಕಾ ಏನಾಯ್ತು ಎಂದು ಓಡಿ ಬಂದು ನೋಡಿದಾಗ, ಮೊಸಳೆ ಲೋಟೋನಾ ಮೇಲೆ ದಾಳಿ ನಡೆಸುತಿತ್ತು. ಆಕೆಯನ್ನು ಬಾಯಲ್ಲಿ ಕಚ್ಚಿ ಹಿಡಿದಿತ್ತು.

    ಇದನ್ನು ಕಂಡು ಸ್ನೇಹಿತೆಯನ್ನು ರಕ್ಷಿಸಲು ಪಣತೊಟ್ಟ ರೆಬೆಕಾ ಹಿಂದೆ ಮುಂದೆ ನೋಡದೇ ನೀರಿಗೆ ಹಾರಿ ಮೊಸಳೆಯ ಬೆನ್ನ ಮೇಲೆ ಕುಳಿತಳು. ತನ್ನ ಚುರುಕು ಬುದ್ಧಿ ಉಪಯೋಗಿಸಿ, ನೇರವಾಗಿ ಮೊಸಳೆಯ ಕಣ್ಣಿಗೇ ಕೈ ಹಾಕಿದ್ದಳು. ಬಾಲಕಿ ಕೈಯಿಂದ ಕಣ್ಣಿಗೆ ಚುಚ್ಚುತ್ತಿದ್ದಂತೆಯೇ ಮೊಸಳೆ ನೋವಿನಿಂದ ಒದ್ದಾಡಿತ್ತು. ನೋವಿಗೆ ಬಾಲಕಿಯನ್ನು ಬಿಟ್ಟಿತು. ನಂತರ ರೆಬೆಕಾ ಗಾಯಗೊಂಡಿದ್ದ ತನ್ನ ಸ್ನೇಹಿತೆಯನ್ನು ರಕ್ಷಿಸಿ, ಈಜಿಕೊಂಡು ದಡಕ್ಕೆ ಕರೆತಂದಳು.

    ಈ ಬಗ್ಗೆ ರೆಬೆಕಾ ಮಾತನಾಡಿ, ನನ್ನ ಸ್ನೇಹಿತೆ ನೋವಿನಿಂದ ಕಿರುಚಾಡುವುದನ್ನು ನೋಡಲು ಸಾಧ್ಯವಾಗಲಿಲ್ಲ. ಅದಕ್ಕೆ ನಾನು ಆಕೆ ರಕ್ಷಣೆಗೆ ಹೋದೆ. ಮೊದಲು ಮೊಸಳೆಯ ಬೆನ್ನಿಗೆ ಹಾರಿ ಬರಿಗೈಯಲ್ಲಿ ಅದಕ್ಕೆ ಹೊಡೆದೆ. ಆದರೆ, ಮೊಸಳೆ ಸ್ವಲ್ಪವೂ ಅತ್ತ ಇತ್ತ ಕದಲಲಿಲ್ಲ. ಆ ಮೇಲೆ ಬೇರೆ ಉಪಾಯ ತೋಚದೆ ನಾನು ಮೊಸಳೆಯ ಕಣ್ಣಿಗೆ ಕೈ ಹಾಕಿ ಹಲ್ಲೆ ಮಾಡಿದೆ. ಆಗ ಬಾಯಲ್ಲಿ ಕಚ್ಚಿ ಹಿಡಿದಿದ್ದ ನನ್ನ ಸ್ನೇಹಿತೆಯನ್ನು ಮೊಸಳೆ ಬಿಟ್ಟಿತ್ತು ಎಂದು ತಿಳಿಸಿದ್ದಾಳೆ.

    ಸದ್ಯ ಈ ಸೆಣಸಾಟದಲ್ಲಿ ಅದೃಷ್ಟವಶಾತ್ ರೆಬೆಕಾಗೆ ಯಾವುದೇ ಗಾಯಗಳಾಗಿಲ್ಲ. ಆದರೆ ಲೇಟೋನಾ ಕೊಂಚ ಗಾಯಗೊಂಡಿದ್ದು, ಆಕೆಯನ್ನು ಆಸ್ಪತ್ರೆಗೆ ಸೇರಿಸಿ, ಚಿಕಿತ್ಸೆ ನೀಡಲಾಗುತ್ತಿದೆ. ಹೀಗೆ ತನ್ನ ಜೀವವನ್ನು ಪಣಕ್ಕಿಟ್ಟು ಸ್ನೇಹಿತೆಯ ಜೀವ ಉಳಿಸಿದ ಬಾಲಕಿ ಸ್ನೇಹಕ್ಕೆ ಎಲ್ಲರು ಭೇಷ್ ಎಂದಿದ್ದಾರೆ.

  • ಅಫ್ಘಾನ್ Vs ಜಿಂಬಾಬ್ವೆ ಟಿ20- 7 ಎಸೆತಗಳಲ್ಲಿ 7 ಸಿಕ್ಸರ್ : ವಿಡಿಯೋ ವೈರಲ್

    ಅಫ್ಘಾನ್ Vs ಜಿಂಬಾಬ್ವೆ ಟಿ20- 7 ಎಸೆತಗಳಲ್ಲಿ 7 ಸಿಕ್ಸರ್ : ವಿಡಿಯೋ ವೈರಲ್

    ಢಾಕಾ: ಅಫ್ಘಾನಿಸ್ತಾನದ ಬ್ಯಾಟ್ಸ್‌ಮನ್‌ಗಳು ಏಳು ಎಸೆತಗಳಲ್ಲಿ ಏಳು ಸಿಕ್ಸರ್ ಸಿಡಿಸಿ ಕ್ರಿಕೆಟ್ ಅಭಿಮಾನಿಗಳ ಗಮನ ಸೆಳೆದಿದ್ದಾರೆ.

    ಜಿಂಬಾಬ್ವೆ, ಬಾಂಗ್ಲಾದೇಶ ಹಾಗೂ ಅಫ್ಘಾನಿಸ್ತಾನ ನಡುವಣ ತ್ರಿಕೋನ ಟ್ವೆಂಟಿ-20 ಸರಣಿಯ ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ಮೊಹಮ್ಮದ್ ನಬಿ ಹಾಗೂ ನಜಿಬುಲ್ಲಾ ಜಾದ್ರನ್ ಈ ಸಾಧನೆಯನ್ನು ಮಾಡಿದ್ದಾರೆ. ಅವರ ಸ್ಫೋಟಕ ಬ್ಯಾಟಿಂಗ್ ಸಹಾಯದಿಂದ ಅಫ್ಘಾನಿಸ್ತಾನ ತಂಡವು 28 ರನ್ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದೆ.

    ಅಫ್ಘಾನಿಸ್ತಾನ ಇನ್ನಿಂಗ್ಸ್ ನ 17 ಹಾಗೂ 18ನೇ ಓವರ್‍ನಲ್ಲಿ ಮೊಹಮ್ಮದ್ ನಬಿ ಹಾಗೂ ನಜಿಬುಲ್ಲಾ ಜಾದ್ರನ್ ಒಟ್ಟು ಏಳು ಸಿಕ್ಸರ್ ಸಿಡಿಸಿದ್ದಾರೆ. 16 ಓವರ್ ಗಳಲ್ಲಿ ಅಫ್ಘಾನಿಸ್ತಾನ ನಾಲ್ಕು ವಿಕೆಟ್ ನಷ್ಟಕ್ಕೆ 123 ರನ್ ಗಳಿಸಿತ್ತು. ತೆಂದೈ ಚತಾರಾ ಅವರ 18ನೇ ಓವರ್ ನ ಮೊದಲೆರಡು ಎಸೆತಗಳಲ್ಲಿ ನಬಿ, ಜಾದ್ರನ್ ಜೋಡಿ ಸಿಂಗಲ್ ಕಲೆ ಹಾಕಿತು. ಆ ಬಳಿಕ ಸ್ಫೋಟಕ ಬ್ಯಾಟಿಂಗ್ ಆರಂಭಿಸಿದ ನಬಿ 17ನೇ ಓವರಿನ ಕೊನೆಯ ನಾಲ್ಕು ಎಸೆತಗಳನ್ನು ಸಿಕ್ಸರ್ ಬಾರಿಸಿದರು.

    ಮೊಹಮ್ಮದ್ ನಬಿಗೆ ಕೈಜೋಡಿಸಿದ ಜಾದ್ರನ್ 18ನೇ ಓವರ್‍ನ ಮೊದಲ ಮೂರು ಎಸೆತಗಳನ್ನು ಸಿಕ್ಸರ್ ಸಿಡಿಸಿದರು. ಈ ಪಂದ್ಯದಲ್ಲಿ ಆಲ್ ರೌಂಡರ್ ನಬಿ ಹಾಗೂ ಜಾದ್ರನ್ ಜೋಡಿಯ 69 ರನ್‍ಗಳ ಸಹಾಯದಿಂದ ಅಫ್ಘಾನಿಸ್ತಾನ ತಂಡವು ಐದು ವಿಕೆಟ್ ನಷ್ಟಕ್ಕೆ 197 ರನ್‍ಗಳ ಬೃಹತ್ ಮೊತ್ತ ದಾಖಲಿಸಿತು.

    ಆಲ್ ರೌಂಡರ್ ಮೊಹಮ್ಮದ್ ನಬಿ 18 ಎಸೆತಗಳಲ್ಲಿ 4 ಸಿಕ್ಸರ್ ಸೇರಿ 38 ರನ್ ಗಳಿಸಿದರೆ, ನಜಿಬುಲ್ಲಾ ಜಾದ್ರನ್ 30 ಎಸೆತಗಳನ್ನು ಎದುರಿಸಿ 5 ಬೌಂಡರಿ, 6 ಸಿಕ್ಸರ್ ಸಹಿತ 69 ರನ್‍ಗಳನ್ನು ಕಲೆಹಾಕಿದರು.

    ಬೃಹತ್ ಮೊತ್ತವನ್ನು ಪೇರಿಸಲು ಮುಂದಾದ ಜಿಂಬಾಬ್ವೆ ಬ್ಯಾಟ್ಸ್‍ಮನ್‍ಗಳನ್ನು ಅಫ್ಘಾನಿಸ್ತಾನದ ಬೌಲರ್ ಗಳು ಕಟ್ಟಿಹಾಕಿದರು. ಜಿಂಬಾಬ್ವೆ ಟೀಂ ನಾಯಕ ಬಿಆರ್‍ಎಂ ಟೈಲರ್ 16 ಎಸೆತಗಳಲ್ಲಿ 2 ಸಿಕ್ಸರ್, 3 ಬೌಂಡರಿ ಸೇರಿ 27 ರನ್ ಸಿಡಿಸಿ ವಿಕೆಟ್ ಒಪ್ಪಿಸಿದರು. ನಂತರದಲ್ಲಿ ಬಂದ ಬ್ಯಾಟ್ಸ್‍ಮನ್ ಗಳು ಒಬ್ಬರ ಹಿಂದೆ ಮತ್ತೊಬ್ಬರಂತೆ ಪೆವಿಲಿಯನ್‍ಗೆ ತೆರಳಿದರು. ಈ ಮಧ್ಯೆ ತಂಡಕ್ಕೆ ನೆರವಾದ ಆರ್.ಡಬ್ಲ್ಯೂ. ಚಕಬ್ವಾ 22 ಎಸೆತಗಳಲ್ಲಿ 42 ರನ್ ಸಿಡಿಸಿ ಸೋಲಿನ ಅಂತರವನ್ನು ಕಡಿಮೆ ಮಾಡಿದರು. ಈ ಮೂಲಕ ಜಿಂಬಾಬ್ವೆ ತಂಡವು ನಿಗದಿತ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 169 ರನ್ ದಾಖಲಿಸಿ ಸೋಲು ಒಪ್ಪಿಕೊಂಡಿತು.

    ಅಫ್ಘಾನಿಸ್ತಾನ ಬೌಲರ್ ರಶೀದ್ ಖಾನ್ 4 ಓವರ್ ಬೌಲಿಂಗ್ ಮಾಡಿ ಕೇವಲ 29 ರನ್ ನೀಡಿ 2 ವಿಕೆಟ್ ಪಡೆದು ಮಿಂಚಿದರು. ನಜಿಬುಲ್ಲಾ ಜಾದ್ರನ್ ಪಂದ್ಯ ಶ್ರೇಷ್ಠ ಗೌರವಕ್ಕೆ ಪಾತ್ರರಾದರು.

    https://youtu.be/Mk93mhF9xPo

  • ಧೋನಿಯನ್ನು ಅನುಕರಣೆ ಮಾಡಲು ಹೋಗಿ ಫೇಲ್ ಆದ ಪಾಕ್ ವಿಕೆಟ್ ಕೀಪರ್ – ವಿಡಿಯೋ ನೋಡಿ

    ಧೋನಿಯನ್ನು ಅನುಕರಣೆ ಮಾಡಲು ಹೋಗಿ ಫೇಲ್ ಆದ ಪಾಕ್ ವಿಕೆಟ್ ಕೀಪರ್ – ವಿಡಿಯೋ ನೋಡಿ

    ಬುಲಬಾಯೊ: ಜಿಂಬಾಬ್ವೆ ವಿರುದ್ಧ ನಡೆದ ಏಕದಿನ ಟೂರ್ನಿಯ ಕೊನೆಯ ಪಂದ್ಯದಲ್ಲಿ ಪಾಕ್ ತಂಡದ ನಾಯಕ, ವಿಕೆಟ್ ಕೀಪರ್ ಸರ್ಫರಾಜ್ ಅಹ್ಮದ್ ಟೀಂ ಇಂಡಿಯಾ ಮಾಜಿ ನಾಯಕ ಧೋನಿ ಅವರನ್ನು ಅನುಕರಣೆ ಮಾಡಲು ಹೋಗಿ ಫೇಲ್ ಆಗಿದ್ದಾರೆ.

    ಹೌದು, ಪಾಕಿಸ್ತಾನ ತಂಡ ಜಿಂಬಾಬ್ವೆ ವಿರುದ್ಧ ಐದು ಪಂದ್ಯಗಳ ಏಕದಿನ ಸರಣಿ ಭಾನುವಾರ ಅಂತ್ಯವಾಗಿದ್ದು, ಸರಣಿಯ ಅಂತಿಮ ಪಂದ್ಯದ ವೇಳೆ ಪಾಕಿಸ್ತಾನ ಸರ್ಫರಾಜ್ ಅಹ್ಮದ್ 2 ಓವರ್ ಬೌಲ್ ಮಾಡಿದ್ದರು. ಮೊದಲ ಓವರ್ ನಲ್ಲಿ 6 ರನ್ ನೀಡಿದ್ದ ಸರ್ಫರಾಜ್ ಬಳಿಕ ತಮ್ಮ 2ನೇ ಓವರ್ ಬೌಲ್ ಮಾಡಿ ಎಡವಿದ್ದಾರೆ.

    ಪಂದ್ಯದ ಕೊನೆಯ ಓವರಿನ ಬೌಲಿಂಗ್ ನಲ್ಲಿ ಜಿಂಬಾಬ್ವೆ ಬ್ಯಾಟ್ಸ್ ಮನ್ ಪೀಟರ್ ಮೂರ್ ಸಿಕ್ಸರ್ ಸಿಡಿಸಿ ಮಿಂಚಿದ್ದರು. ಈ ಮೂಲಕ ಧೋನಿಯನ್ನು ಅನುಕರಣೆ ಮಾಡಲು ಯತ್ನಿಸಿದ್ದ ಸರ್ಫರಾಜ್ ಭಾರೀ ಮುಖಭಂಗ ಅನುಭವಿಸಿದ್ದರು.

    ಅಂದಹಾಗೇ, ಧೋನಿ ತಮ್ಮ ಬೌಲಿಂಗ್ ನಲ್ಲಿ ಒಂದು ಅಂತರಾಷ್ಟ್ರೀಯ ವಿಕೆಟ್ ಪಡೆದಿದ್ದು, 2009 ರಲ್ಲಿ ನಡೆದಿದ್ದ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ವೇಳೆ ವೆಸ್ಟ್ ಇಂಡೀಸ್ ವಿರುದ್ಧ ಪಂದ್ಯದಲ್ಲಿ ಬೌಲ್ ಮಾಡಿ ವಿಕೆಟ್ ಪಡೆದು ಮಿಂಚಿದ್ದರು. ಸದ್ಯ ಸರ್ಫರಾಜ್ ತಮ್ಮ ಬೌಲಿಂಗ್ ನಲ್ಲಿ ಜಿಂಬಾಂಬ್ವೆ ಬ್ಯಾಟ್ಸ್ ಮನ್ ಸಿಕ್ಸರ್ ಸಿಡಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಪಾಕಿಸ್ತಾನ ಜಿಂಬಾಂಬ್ವೆ ವಿರುದ್ಧ ಏಕದಿನ ಸರಣಿಯನ್ನು 5-0 ಅಂತರದಲ್ಲಿ ಕ್ಲೀನ್ ಸ್ವೀಪ್ ಮಾಡಿದೆ. ಪಾಕ್ ಪರ ಆರಂಭಿಕ ಆಟಗಾರ ಫಖಾರ್ ಜಮಾನ್ 18 ಇನ್ನಿಂಗ್ಸ್ ಗಳಲ್ಲಿ 1 ಸಾವಿರ ರನ್ ಗಳಿಸಿ ದಾಖಲೆ ಬರೆದು ಪಾಕ್ ಪರ ದ್ವಿಶತಕ ಸಿಡಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಯನ್ನು ಪಡೆದಿದ್ದಾರೆ.

  • ಕೊಹ್ಲಿ ದಾಖಲೆ ಮುರಿದ ಪಾಕ್ ಆಟಗಾರ ಫಖಾರ್ ಜಮಾನ್

    ಕೊಹ್ಲಿ ದಾಖಲೆ ಮುರಿದ ಪಾಕ್ ಆಟಗಾರ ಫಖಾರ್ ಜಮಾನ್

    ಬುಲಬಾಯೊ: ಪಾಕಿಸ್ತಾನದ ಆರಂಭಿಕ ಆಟಗಾರ ಕಳೆದ ಪಂದ್ಯದಲ್ಲಿ ದ್ವಿಶತಕ ಸಿಡಿಸಿ ದಾಖಲೆ ಬರೆದ ಬೆನ್ನಲ್ಲೇ ಮತ್ತೊಂದು ದಾಖಲೆ ನಿರ್ಮಿಸಿದ್ದು, ಏಕದಿನ ಪಂದ್ಯಗಳಲ್ಲಿ 1 ಸಾವಿರ ರನ್ ಪೂರೈಸಿದ್ದಾರೆ. ಈ ಮೂಲಕ ಕಡಿಮೆ ಇನ್ನಿಂಗ್ಸ್ ಗಳಲ್ಲಿ 1 ಸಾವಿರ ರನ್ ಗಳಿಸಿದ್ದ ವಿರಾಟ್ ಕೊಹ್ಲಿ ದಾಖಲೆ ಮುರಿದಿದ್ದಾರೆ.

    28 ವರ್ಷದ ಫಖಾರ್ ಜಮಾನ್ 18 ಇನ್ನಿಂಗ್ಸ್ ಗಳಲ್ಲಿ 1 ಸಾವಿರ ರನ್ ಪೂರೈಸಿದ್ದು, ಈ ಹಿಂದೆ ವಿರಾಟ್ ಕೊಹ್ಲಿ 1 ಸಾವಿರ ರನ್ ಗಳಿಸಲು 24 ಇನ್ನಿಂಗ್ಸ್ ತೆಗೆದುಕೊಂಡಿದ್ದರು. ಉಳಿದಂತೆ ವಿವ್ ರಿಚರ್ಡ್ಸ್, ಕೆವಿನ್ ಪೀಟರ್ ಸನ್, ಜೋನಾಥನ್ ಟ್ರಾಟ್, ಬಾಬರ್ ಅಜಂ, ಕ್ವಿಂಟನ್ ಡಿ ಕಾಕ್ 21 ಇನ್ನಿಂಗ್ಸ್ ಗಳಲ್ಲಿ 1 ಸಾವಿರ ರನ್ ಗಳಿಸಿದ್ದರು.

    ಫಖಾರ್ ಜಮಾನ್ 18 ಏಕದಿನ ಪಂದ್ಯಗಳಲ್ಲಿ 3 ಅರ್ಧ ಶತಕ, 5 ಶತಕ ಗಳಿಸಿದ್ದು, ಕಳೆದ ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದಲ್ಲಿ ಭಾರತದ ವಿರುದ್ಧ 106 ಎಸೆತಗಳಲ್ಲಿ 114 ರನ್ ಸಿಡಿಸಿದ್ದರು. ಸದ್ಯ ಜಿಂಬಾಬೆ ವಿರುದ್ಧ ಏಕದಿನ ಟೂರ್ನಿಯ ಕೊನೆ ಪಂದ್ಯದಲ್ಲಿ ಫಖಾರ್ ಜಮಾನ್ 85 ರನ್ ಗಳಿಸಿ ಔಟಾಗಿದ್ದಾರೆ. ಈ ಮೂಲಕ ಟೂರ್ನಿಯಲ್ಲಿ 505 ರನ್ ಗಳಿಸಿದ್ದಾರೆ.

    ಜಿಂಬಾಂಬ್ವೆ ಕಳೆದ ಪಂದ್ಯದಲ್ಲಿ ಇಮಾಮ್ ಹುಲ್ ಹಕ್ (112 ಎಸೆತ, 112 ರನ್) ರೊಂದಿಗೆ ಉತ್ತಮ ಜೊತೆಯಾಟ ನೀಡಿದ ಫಖಾರ್ ಜಮಾನ್ 304 ರನ್ ಗಳ ದಾಖಲೆಯ ಆರಂಭಿಕ ಜೊತೆಯಾಟ ನೀಡಿದರು. 2006 ರಲ್ಲಿ ಶ್ರೀಲಂಕಾ ಆಟಗಾರ ಉಪುಲ್ ತರಂಗ, ಜಯಸೂರ್ಯ ಜೋಡಿ ಗಳಿಸಿದ್ದ 286 ರನ್ ಗಳ ಆರಂಭಿಕ ಜೊತೆಯಾಟದ ದಾಖಲೆ ಮುರಿದಿದ್ದರು. ಈಗಾಗಲೇ ಜಿಂಬಾಬ್ವೆ ವಿರುದ್ಧದ ನಾಲ್ಕು ಪಂದ್ಯಗಳ ಸರಣಿಯನ್ನು 3-0 ಅಂತರದಲ್ಲಿ ಜಯಿಸಿರುವ ಪಾಕ್, ಈ ಪಂದ್ಯದ ಗೆಲ್ಲುವ ಮೂಲಕ ಸರಣಿ ಕ್ಲೀನ್ ಸ್ವೀಪ್ ಮಾಡುವ ಗುರಿ ಹೊಂದಿದೆ.