Tag: ಜಿಂಬಾಂಬ್ವೆ

  • ಜಿಂಬಾಬ್ವೆ ಕ್ರಿಕೆಟ್ ದಂತಕಥೆ ಹೀತ್ ಸ್ಟ್ರೀಕ್ ನಿಧನ

    ಜಿಂಬಾಬ್ವೆ ಕ್ರಿಕೆಟ್ ದಂತಕಥೆ ಹೀತ್ ಸ್ಟ್ರೀಕ್ ನಿಧನ

    ಹರಾರೆ: ಹಲವು ದಿನಗಳಿಂದ ಕ್ಯಾನ್ಸರ್‌ನಿಂದ (Cancer) ಬಳಲುತ್ತಿದ್ದ ಜಿಂಬಾಬ್ವೆ (Zimbabwe) ಕ್ರಿಕೆಟ್ (Cricket) ದಂತಕಥೆ ಹೀತ್ ಸ್ಟ್ರೀಕ್ (49) ಅವರು ನಿಧನರಾಗಿದ್ದಾರೆ. ಕರುಳು ಹಾಗೂ ಯಕೃತ್ತಿನ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಸ್ಟ್ರೀಕ್ (Heath Streak) ದಕ್ಷಿಣ ಆಫ್ರಿಕಾದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಈಗ ಅವರು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ.

    1993ರಲ್ಲಿ ಪಾಕಿಸ್ತಾನ ವಿರುದ್ಧ ನಡೆದ ಪಂದ್ಯದ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‍ಗೆ ಎಂಟ್ರಿ ಕೊಟ್ಟಿದ್ದ ಹೀತ್ ಸ್ಟ್ರೀಕ್, ರಾವಲ್ಪಿಂಡಿಯಲ್ಲಿ ನಡೆದ 2ನೇ ಟೆಸ್ಟ್‍ನಲ್ಲೇ 8 ವಿಕೆಟ್ ಪಡೆಯುವ ಮೂಲಕ ವಿಶೇಷ ದಾಖಲೆ ನಿರ್ಮಿಸಿದ್ದರು. ಇದನ್ನೂ ಓದಿ: ಏಕದಿನ ವಿಶ್ವಕಪ್‌ ಟೂರ್ನಿಯಿಂದಲೂ ಸಂಜು ಸ್ಯಾಮ್ಸನ್‌ ಔಟ್‌?

    ಜಿಂಬಾಬ್ವೆಯ ಶ್ರೇಷ್ಠ ಕ್ರಿಕೆಟ್ ಆಟಗಾರರಲ್ಲಿ ಒಬ್ಬರಾದ ಸ್ಟ್ರೀಕ್ 2000 ಮತ್ತು 2004ರ ವಿಶ್ವಕಪ್ ಟೂರ್ನಿ ವೇಳೆ ತಂಡವನ್ನ ಮುನ್ನಡೆಸಿದ್ದರು. 65 ಟೆಸ್ಟ್ ಪಂದ್ಯಗಳು ಮತ್ತು 189 ಏಕದಿನ ಪಂದ್ಯಗಳನ್ನಾಡಿರುವ ಸ್ಟ್ರೀಕ್, ಟೆಸ್ಟ್ ಕ್ರಿಕೆಟ್‍ನಲ್ಲಿ 100 ವಿಕೆಟ್ ಪಡೆದ ಏಕೈಕ ಜಿಂಬಾಬ್ವೆ ಆಟಗಾರ ಎನಿಸಿಕೊಂಡಿದ್ದರು. ಜಿಂಬಾಬ್ವೆ ಪರ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಮಾಡುತ್ತಿದ್ದ ಹೀತ್ ಸ್ಟ್ರೀಕ್ ಟೆಸ್ಟ್ ಕ್ರಿಕೆಟ್‍ನಲ್ಲಿ 1,990 ರನ್, ಏಕದಿನ ಕ್ರಿಕೆಟ್‍ನಲ್ಲಿ 2,943 ರನ್ ಗಳಿಸಿದ್ದಾರೆ. ಹರಾರೆಯಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ನಡೆದ ಪಂದ್ಯದಲ್ಲಿ 127 ರನ್ ಗಳಿಸಿದ್ದು ಏಕೈಕ ಟೆಸ್ಟ್ ಶತಕವಾಗಿದೆ.

    2005ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‍ನಿಂದ ನಿವೃತ್ತರಾದ ಹೀತ್ ಸ್ಟ್ರೀಕ್ ಆ ಬಳಿಕ 2 ವರ್ಷಗಳ ಒಪ್ಪಂದದೊಂದಿಗೆ 2006ರಲ್ಲಿ ಇಂಗ್ಲೆಂಡ್‍ನ ಕೌಂಟಿ ತಂಡವಾದ ವಾರ್ವಿಕ್‍ಶೈರ್‍ನ ನಾಯಕರಾಗಿ ಆಯ್ಕೆಯಾದರು. ಆದರೆ ವೈಯಕ್ತಿಕ ಕಾರಣಗಳಿಂದ ಅವರು ಈ ಒಪ್ಪಂದವನ್ನ ಶೀಘ್ರದಲ್ಲೇ ಕೊನೆಗೊಳಿಸಬೇಕಾಯಿತು. ಅಂತಾರಾಷ್ಟ್ರೀಯ ಕ್ರಿಕೆಟ್ ನಿವೃತ್ತಿ ನಂತರ ಜಿಂಬಾಬ್ವೆ, ಸ್ಕಾಟ್ಲೆಂಡ್, ಬಾಂಗ್ಲಾದೇಶ, ಐಪಿಎಲ್‍ನಲ್ಲಿ ಗುಜರಾತ್ ಲಯನ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳಿಗೆ ಕೋಚ್ ಆಗಿ ಕಾರ್ಯನಿರ್ವಹಿಸಿದ್ದರು. ಇದನ್ನೂ ಓದಿ: Asia Cup 2023: ಬ್ಯಾಟಿಂಗ್‌ ಮಾಡದೆಯೇ ಟೀಂ ಇಂಡಿಯಾ ವಿರುದ್ಧ ದಾಖಲೆ ಬರೆದ ಪಾಕಿಸ್ತಾನ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಜಿಂಬಾಬ್ವೆ ಕ್ರಿಕೆಟ್‌ ದಿಗ್ಗಜ ಹೀತ್‌ ಸ್ಟ್ರೀಕ್‌ ಬದುಕಿದ್ದಾರೆ – ಆಪ್ತ ಹೆನ್ರಿ ಒಲೊಂಗಾ ಅಚ್ಚರಿಯ ಟ್ವೀಟ್‌

    ಜಿಂಬಾಬ್ವೆ ಕ್ರಿಕೆಟ್‌ ದಿಗ್ಗಜ ಹೀತ್‌ ಸ್ಟ್ರೀಕ್‌ ಬದುಕಿದ್ದಾರೆ – ಆಪ್ತ ಹೆನ್ರಿ ಒಲೊಂಗಾ ಅಚ್ಚರಿಯ ಟ್ವೀಟ್‌

    ಜೋಹಾನ್ಸ್‌ಬರ್ಗ್‌: ಜಿಂಬಾಬ್ವೆ (Zimbabwe) ಕ್ರಿಕೆಟ್‌ ದಿಗ್ಗಜ ಹೀತ್‌ ಸ್ಟ್ರೀಕ್‌ (49) (Heath Streak) ಕೊನೆಯುಸಿರೆಳೆದಿದ್ದಾರೆ. ಕರುಳು ಹಾಗೂ ಯಕೃತ್‌ ಕ್ಯಾನ್ಸರ್‌ ಕಾಯಿಲೆಯಿಂದ ಬಳುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೇ ಇಹಲೋಕ ತ್ಯಜಿಸಿದ್ದಾರೆ ಎಂದು ಅವರ ಮಾಜಿ ಸಹೋದ್ಯೋಗಿ ಮಾಹಿತಿ ಹಂಚಿಕೊಂಡಿರುವುದಾಗಿ ವರದಿಯಾಗಿತ್ತು. ಆದರೀಗ ಹೀತ್‌ಸ್ಟ್ರೀಕ್‌ ಮೃತಪಟ್ಟಿಲ್ಲ ಬದುಕಿದ್ದಾರೆ ಎಂಬ ಅಚ್ಚರಿಯ ಸುದ್ದಿಯನ್ನ ಅವರ ಮಾಜಿ ಸಹ ಆಟಗಾರ ಹೆನ್ರಿ ಒಲೊಂಗಾ (Henry Olonga) ಹಂಚಿಕೊಂಡಿದ್ದಾರೆ.

    ಮೊದಲಿಗೆ ಹೀತ್‌ ಸ್ಟ್ರೀಕ್‌ ಮೃತಪಟ್ಟಿದ್ದಾರೆ ಎಂದು ತಿಳಿದು ಹೆನ್ರಿ ಒಲೊಂಗಾ ಕೂಡ ಟ್ವೀಟ್‌ ಮೂಲಕ ಭಾವನಾತ್ಮಕ ಸಂದೇಶ ಹಂಚಿಕೊಂಡಿದ್ದರು. ಇದರ ಬೆನ್ನಲ್ಲೇ ಮತ್ತೊಂದು ಟ್ವೀಟ್‌ ಮಾಡಿದ, ಹೀತ್‌ ಸ್ಟ್ರೀಕ್‌ ಜೊತೆಗಿನ ವಾಟ್ಸ್‌ಆಪ್‌ ಸಂಭಾಷಣೆಯ ಸ್ಕ್ರೀನ್‌ ಶಾಟ್‌ ಹಂಚಿಕೊಂಡಿದ್ದಾರೆ. ಅದರಲ್ಲಿ ಹೀತ್‌ ಸ್ಟ್ರೀಕ್‌ ಅವರ ಕಡೆಯಿಂದ ‘ನಾನಿನ್ನೂ ಬದುಕಿದ್ದೇನೆ’ ಎಂದು ಉತ್ತರ ಬರೆದಿರುವುದನ್ನು ಕಾಣಬಹುದಾಗಿದೆ. ಹೀತ್‌ ಸ್ಟ್ರೀಕ್‌ ಸತ್ತಿದ್ದಾರೆ ಎಂಬ ಸುದ್ದಿ ತಪ್ಪಾಗಿ ಹಬ್ಬಿದೆ. ಸೋಷಿಯಲ್‌ ಮೀಡಿಯಾಗಳಲ್ಲಿ ಇದರ ವೈಭವೀಕರಣ ನಡೆದಿದೆ. ಅವರಿಂದಲೇ ಈಗ ಮಾಹಿತಿ ಲಭ್ಯವಾಗಿದ್ದು, 3ನೇ ಅಂಪೈರ್‌ ಅವರನ್ನು ಮರಳಿ ಕರೆತಂದಿದ್ದಾರೆ. ಪ್ರೀತಿಯ ಜನರೆ ಅವರಿನ್ನೂ ಬದುಕಿದ್ದಾರೆ ಎಂದು ಹೆನ್ರಿ ಒಲೊಂಗಾ ಮಾಹಿತಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಬ್ಯಾಕಪ್‌ ಪಟ್ಟಿ ಸೇರಿದ ಟೀಂ ಇಂಡಿಯಾ ಸ್ಟಾರ್‌ – ವಿಶ್ವಕಪ್‌ ಆಡುವ ಸಂಜು ಸ್ಯಾಮ್ಸನ್‌ ಕನಸು ಭಗ್ನ?

    ಜಿಂಬಾಬ್ವೆ ಕ್ರಿಕೆಟ್‌ ಕಂಡ ಸಾರ್ವಕಾಲಿಕ ಶ್ರೇಷ್ಠ ಆಟಗಾರ ಪೈಕಿ ಹೀತ್‌ ಸ್ಟ್ರೀಕ್‌ ಕೂಡ ಒಬ್ಬರು. 12 ವರ್ಷಗಳ ಕಾಲ ಅಂತಾರಾಷ್ಟ್ರೀಯ ಕ್ರಿಕೆಟ್ ಆಡಿದ್ದ ಅವರು, ಆಲ್‌ರೌಂಡ್‌ ಆಟದ ಮೂಲಕ ತಮ್ಮದೇ ಛಾಪು ಮೂಡಿಸಿದ್ದರು. 1993ರಲ್ಲಿ ಪಾಕಿಸ್ತಾನ (Pakistan) ವಿರುದ್ಧ ನಡೆದ ಪಂದ್ಯದ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ (International Cricket) ಎಂಟ್ರಿ ಕೊಟ್ಟಿದ್ದ ಹೀತ್‌ ಸ್ಟ್ರೀಕ್‌, ರಾವಲ್ಪಿಂಡಿಯಲ್ಲಿ ನಡೆದ 2ನೇ ಟೆಸ್ಟ್‌ನಲ್ಲೇ 8 ವಿಕೆಟ್‌ ಪಡೆಯುವ ಮೂಲಕ ವಿಶೇಷ ದಾಖಲೆ ನಿರ್ಮಿಸಿದ್ದರು. ಇದನ್ನೂ ಓದಿ: AsiaCup 2023: ಟೂರ್ನಿಯಲ್ಲಿ ಕಾಣಿಸಿಕೊಳ್ಳುವ ಬ್ಯೂಟಿಫುಲ್‌ ನಿರೂಪಕಿಯರು ಇವರೇ

    ಜಿಂಬಾಬ್ವೆಯ ಶ್ರೇಷ್ಠ ಕ್ರಿಕೆಟ್‌ ಆಟಗಾರರಲ್ಲಿ ಒಬ್ಬರಾದ ಸ್ಟ್ರೀಕ್‌ 2000 ಮತ್ತು 2004ರ ವಿಶ್ವಕಪ್‌ ಟೂರ್ನಿ ವೇಳೆ ತಂಡವನ್ನ ಮುನ್ನಡೆಸಿದ್ದರು. 65 ಟೆಸ್ಟ್ ಪಂದ್ಯಗಳು ಮತ್ತು 189 ಏಕದಿನ ಪಂದ್ಯಗಳನ್ನಾಡಿರುವ ಸ್ಟ್ರೀಕ್‌, ಟೆಸ್ಟ್‌ ಕ್ರಿಕೆಟ್‌ನಲ್ಲಿ 100 ವಿಕೆಟ್‌ ಪಡೆದ ಏಕೈಕ ಜಿಂಬಾಬ್ವೆ ಆಟಗಾರ ಎನಿಸಿಕೊಂಡಿದ್ದರು. ಜಿಂಬಾಬ್ವೆ ಪರ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್‌ ಮಾಡುತ್ತಿದ್ದ ಹೀತ್‌ ಸ್ಟ್ರೀಕ್‌ ಟೆಸ್ಟ್‌ ಕ್ರಿಕೆಟ್‌ನಲ್ಲಿ 1,990 ರನ್‌, ಏಕದಿನ ಕ್ರಿಕೆಟ್‌ನಲ್ಲಿ 2,943 ರನ್‌ ಗಳಿಸಿದ್ದಾರೆ. ಹರಾರೆಯಲ್ಲಿ ವೆಸ್ಟ್‌ ಇಂಡೀಸ್‌ ವಿರುದ್ಧ ನಡೆದ ಪಂದ್ಯದಲ್ಲಿ 127 ರನ್‌ ಗಳಿಸಿದ್ದು ಏಕೈಕ ಟೆಸ್ಟ್‌ ಶತಕವಾಗಿದೆ.

    2005ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾದ ಹೀತ್ ಸ್ಟ್ರೀಕ್ ಆ ಬಳಿಕ 2 ವರ್ಷಗಳ ಒಪ್ಪಂದದೊಂದಿಗೆ 2006 ರಲ್ಲಿ ಇಂಗ್ಲೆಂಡ್‌ನ ಕೌಂಟಿ ತಂಡವಾದ ವಾರ್ವಿಕ್‌ಶೈರ್‌ನ ನಾಯಕರಾಗಿ ಆಯ್ಕೆಯಾದರು. ಆದ್ರೆ ವೈಯಕ್ತಿಕ ಕಾರಣಗಳಿಂದ ಅವರು ಈ ಒಪ್ಪಂದವನ್ನ ಶೀಘ್ರದಲ್ಲೇ ಕೊನೆಗೊಳಿಸಬೇಕಾಯಿತು. ಅಂತಾರಾಷ್ಟ್ರೀಯ ಕ್ರಿಕೆಟ್‌ ನಿವೃತ್ತಿ ನಂತರ ಜಿಂಬಾಬ್ವೆ, ಸ್ಕಾಟ್ಲೆಂಡ್, ಬಾಂಗ್ಲಾದೇಶ, ಐಪಿಎಲ್‌ನಲ್ಲಿ ಗುಜರಾತ್ ಲಯನ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್‌ ತಂಡಗಳಿಗೆ ಕೋಚ್‌ ಆಗಿ ಕಾರ್ಯನಿರ್ವಹಿಸಿದ್ದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಜಿಂಬಾಬ್ವೆ ಕ್ರಿಕೆಟ್‌ ದಂತಕಥೆ ಹೀತ್ ಸ್ಟ್ರೀಕ್ ನಿಧನ

    ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಜಿಂಬಾಬ್ವೆ ಕ್ರಿಕೆಟ್‌ ದಂತಕಥೆ ಹೀತ್ ಸ್ಟ್ರೀಕ್ ನಿಧನ

    ಜೋಹಾನ್ಸ್‌ಬರ್ಗ್: ಹಲವು ದಿನಗಳಿಂದ ಕ್ಯಾನ್ಸರ್‌ ಕಾಯಿಲೆಯಿಂದ ಬಳಲುತ್ತಿದ್ದ ಜಿಂಬಾಬ್ವೆ ಕ್ರಿಕೆಟ್ ದಂತಕಥೆ ಹೀತ್ ಸ್ಟ್ರೀಕ್ (49) (Heath Streak) ಅವರು ನಿಧನರಾಗಿದ್ದಾರೆ. ಕರುಳು ಹಾಗೂ ಯಕೃತ್ತಿನ ಕ್ಯಾನ್ಸರ್‌ನಿಂದ (Cancer) ಬಳಲುತ್ತಿದ್ದ ಸ್ಟ್ರೀಕ್ ದಕ್ಷಿಣ ಆಫ್ರಿಕಾದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಕೊನೆಗೆ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ.

    1993ರಲ್ಲಿ ಪಾಕಿಸ್ತಾನ (Pakistan) ವಿರುದ್ಧ ನಡೆದ ಪಂದ್ಯದ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ (International Cricket) ಎಂಟ್ರಿ ಕೊಟ್ಟಿದ್ದ ಹೀತ್‌ ಸ್ಟ್ರೀಕ್‌, ರಾವಲ್ಪಿಂಡಿಯಲ್ಲಿ ನಡೆದ 2ನೇ ಟೆಸ್ಟ್‌ನಲ್ಲೇ 8 ವಿಕೆಟ್‌ ಪಡೆಯುವ ಮೂಲಕ ವಿಶೇಷ ದಾಖಲೆ ನಿರ್ಮಿಸಿದ್ದರು. ಇದನ್ನೂ ಓದಿ: ಬ್ಯಾಕಪ್‌ ಪಟ್ಟಿ ಸೇರಿದ ಟೀಂ ಇಂಡಿಯಾ ಸ್ಟಾರ್‌ – ವಿಶ್ವಕಪ್‌ ಆಡುವ ಸಂಜು ಸ್ಯಾಮ್ಸನ್‌ ಕನಸು ಭಗ್ನ?

    ಜಿಂಬಾಬ್ವೆಯ ಶ್ರೇಷ್ಠ ಕ್ರಿಕೆಟ್‌ ಆಟಗಾರರಲ್ಲಿ ಒಬ್ಬರಾದ ಸ್ಟ್ರೀಕ್‌ 2000 ಮತ್ತು 2004ರ ವಿಶ್ವಕಪ್‌ ಟೂರ್ನಿ ವೇಳೆ ತಂಡವನ್ನ ಮುನ್ನಡೆಸಿದ್ದರು. 65 ಟೆಸ್ಟ್ ಪಂದ್ಯಗಳು ಮತ್ತು 189 ಏಕದಿನ ಪಂದ್ಯಗಳನ್ನಾಡಿರುವ ಸ್ಟ್ರೀಕ್‌, ಟೆಸ್ಟ್‌ ಕ್ರಿಕೆಟ್‌ನಲ್ಲಿ 100 ವಿಕೆಟ್‌ ಪಡೆದ ಏಕೈಕ ಜಿಂಬಾಬ್ವೆ ಆಟಗಾರ ಎನಿಸಿಕೊಂಡಿದ್ದರು. ಜಿಂಬಾಬ್ವೆ ಪರ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್‌ ಮಾಡುತ್ತಿದ್ದ ಹೀತ್‌ ಸ್ಟ್ರೀಕ್‌ ಟೆಸ್ಟ್‌ ಕ್ರಿಕೆಟ್‌ನಲ್ಲಿ 1,990 ರನ್‌, ಏಕದಿನ ಕ್ರಿಕೆಟ್‌ನಲ್ಲಿ 2,943 ರನ್‌ ಗಳಿಸಿದ್ದಾರೆ. ಹರಾರೆಯಲ್ಲಿ ವೆಸ್ಟ್‌ ಇಂಡೀಸ್‌ ವಿರುದ್ಧ ನಡೆದ ಪಂದ್ಯದಲ್ಲಿ 127 ರನ್‌ ಗಳಿಸಿದ್ದು ಏಕೈಕ ಟೆಸ್ಟ್‌ ಶತಕವಾಗಿದೆ. ಇದನ್ನೂ ಓದಿ: AsiaCup 2023: ಟೂರ್ನಿಯಲ್ಲಿ ಕಾಣಿಸಿಕೊಳ್ಳುವ ಬ್ಯೂಟಿಫುಲ್‌ ನಿರೂಪಕಿಯರು ಇವರೇ

    2005ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾದ ಹೀತ್ ಸ್ಟ್ರೀಕ್ ಆ ಬಳಿಕ 2 ವರ್ಷಗಳ ಒಪ್ಪಂದದೊಂದಿಗೆ 2006 ರಲ್ಲಿ ಇಂಗ್ಲೆಂಡ್‌ನ ಕೌಂಟಿ ತಂಡವಾದ ವಾರ್ವಿಕ್‌ಶೈರ್‌ನ ನಾಯಕರಾಗಿ ಆಯ್ಕೆಯಾದರು. ಆದ್ರೆ ವೈಯಕ್ತಿಕ ಕಾರಣಗಳಿಂದ ಅವರು ಈ ಒಪ್ಪಂದವನ್ನ ಶೀಘ್ರದಲ್ಲೇ ಕೊನೆಗೊಳಿಸಬೇಕಾಯಿತು. ಅಂತಾರಾಷ್ಟ್ರೀಯ ಕ್ರಿಕೆಟ್‌ ನಿವೃತ್ತಿ ನಂತರ ಜಿಂಬಾಬ್ವೆ, ಸ್ಕಾಟ್ಲೆಂಡ್, ಬಾಂಗ್ಲಾದೇಶ, ಐಪಿಎಲ್‌ನಲ್ಲಿ ಗುಜರಾತ್ ಲಯನ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್‌ ತಂಡಗಳಿಗೆ ಕೋಚ್‌ ಆಗಿ ಕಾರ್ಯನಿರ್ವಹಿಸಿದ್ದರು.

    ಜಿಂಬಾಬ್ವೆ ತಂಡದ ಮಾಜಿ ಸ್ಪಿನ್‌ ಮಾಂತ್ರಿಕ ಹೆನ್ರಿ ಒಲೊಂಗಾ ಈ ವಿಷಯವನ್ನ ತಮ್ಮ ಟ್ವಿಟ್ಟರ್‌ (X) ಖಾತೆಯಲ್ಲಿ ಹಂಚಿಕೊಂಡಿದ್ದು, ಕಂಬನಿ ಮಿಡಿದಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ರೋಹಿತ್‍ರನ್ನು ನೋಡಲೆಂದು ಮೈದಾನಕ್ಕಿಳಿದ ಅಭಿಮಾನಿಗೆ 6.5 ಲಕ್ಷ ರೂ. ಫೈನ್

    ರೋಹಿತ್‍ರನ್ನು ನೋಡಲೆಂದು ಮೈದಾನಕ್ಕಿಳಿದ ಅಭಿಮಾನಿಗೆ 6.5 ಲಕ್ಷ ರೂ. ಫೈನ್

    ಮೆಲ್ಬರ್ನ್: ಭಾರತ (India) ಹಾಗೂ ಜಿಂಬಾಬ್ವೆ (Zimbabwe) ನಡುವಿನ ಪಂದ್ಯದ ನಡುವೆ ಹಿಟ್‍ಮ್ಯಾನ್ ರೋಹಿತ್ ಶರ್ಮಾರ (Rohit Sharma) ಅಭಿಮಾನಿಯೋರ್ವ (Fan) ಮೈದಾನಕ್ಕೆ ನುಗ್ಗಿ ಬರೋಬ್ಬರಿ 6.5 ಲಕ್ಷ ರೂ. ದಂಡ (Fine) ಕಟ್ಟುವಂತಾಗಿದೆ.

    ಜಿಂಬಾಬ್ವೆ ಬ್ಯಾಟಿಂಗ್ ವೇಳೆ ರೋಹಿತ್ ಶರ್ಮಾ ಫೀಲ್ಡಿಂಗ್ ಮಾಡುತ್ತಿದ್ದರು. ಒಬ್ಬ ಬಾಲಕ ಏಕಾಏಕಿ ಭಾರತದ ಧ್ವಜ ಹಿಡಿದು ಪ್ರೇಕ್ಷಕರ ಗ್ಯಾಲರಿಯಿಂದ ಹಾರಿ ಮೈದಾನಕ್ಕೆ ಬಂದಿದ್ದಾನೆ. ಬಳಿಕ ರೋಹಿತ್ ಶರ್ಮಾ ಫೀಲ್ಡಿಂಗ್ ಮಾಡುತ್ತಿದ್ದೆಡೆಗೆ ಓಡಿದ್ದಾನೆ. ತಕ್ಷಣ ಭದ್ರತಾ ಸಿಬ್ಬಂದಿ ಬಾಲಕನನ್ನು ಹಿಡಿಯಲು ಮುಂದಾಗಿದ್ದಾರೆ. ಈ ವೇಳೆ ಬಾಲಕ ಕಣ್ಣೀರಿಟ್ಟಿದ್ದಾನೆ. ರೋಹಿತ್ ಶರ್ಮಾ ಬಾಲಕನನ್ನು ಮೈದಾನಬಿಟ್ಟು ತೆರಳುವಂತೆ ಮನವಿ ಮಾಡಿಕೊಂಡಿರುವ ವೀಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಮೈದಾನಕ್ಕೆ ಬಂದ ಬಾಲಕನಿಗೆ ಮೆಲ್ಬರ್ನ್‌ ಕ್ರಿಕೆಟ್‌ ಗ್ರೌಂಡ್‌ (MCG)  6.5 ಲಕ್ಷ ರೂ. ದಂಡ ಪ್ರಯೋಗಿಸಿದೆ ಎಂದು ವರದಿಯಾಗಿದೆ. ಇದನ್ನೂ ಓದಿ: ಸೆಮಿಫೈನಲ್‍ಗೇರಿದ ನಾಲ್ಕು ತಂಡಗಳು – ಯಾರಿಗೆ ಯಾರು ಎದುರಾಳಿ, ಯಾವಾಗ ಪಂದ್ಯ?

    ಇತ್ತ ಭಾರತ ಹಾಗೂ ಜಿಂಬಾಬ್ವೆ ನಡುವಿನ ಕಾದಾಟದಲ್ಲಿ 71 ರನ್‍ಗಳ ಭರ್ಜರಿ ಜಯದೊಂದಿಗೆ ಭಾರತ ಸೆಮಿಫೈನಲ್‍ಗೆ ಲಗ್ಗೆ ಇಟ್ಟಿದೆ. ಭಾರತ ನಿಡಿದ 187 ರನ್‍ಗಳ ಗುರಿ ಬೆನ್ನಟ್ಟಿದ ಜಿಂಬಾಬ್ವೆ 17.2 ಓವರ್‌ಗಳಲ್ಲಿ 115 ರನ್‍ಗಳಿಗೆ ಆಲೌಟ್ ಆಯಿತು. ಇದನ್ನೂ ಓದಿ: ಭಾರತಕ್ಕೆ 71 ರನ್‍ಗಳ ಭರ್ಜರಿ ಜಯ – ಸೆಮಿಯಲ್ಲಿ ಇಂಗ್ಲೆಂಡ್ ಎದುರಾಳಿ

    ಈ ಮೂಲಕ ಗ್ರೂಪ್ 2ರ ಮೊದಲ ಸ್ಥಾನ ಪಡೆದ ಭಾರತ, ಗ್ರೂಪ್ 1ರ ಎರಡನೇ ಸ್ಥಾನ ಪಡೆದ ಇಂಗ್ಲೆಂಡ್ (England) ನಡುವೆ ಆಡಿಲೇಡ್‍ನಲ್ಲಿ ನ.10 ರಂದು ಸೆಮಿಫೈನಲ್‌ (Semi Final) ಪಂದ್ಯ ನಡೆಯಲಿದೆ. ಇದನ್ನೂ ಓದಿ: ಒಂದೇ ವರ್ಷದಲ್ಲಿ ಟಿ20ಯಲ್ಲಿ ಗರಿಷ್ಠ ರನ್‌ – ಭಾರತದ ಪರ ದಾಖಲೆ ಬರೆದ ಸೂರ್ಯ

    Live Tv
    [brid partner=56869869 player=32851 video=960834 autoplay=true]

  • ಒಂದೇ ವರ್ಷದಲ್ಲಿ ಟಿ20ಯಲ್ಲಿ ಗರಿಷ್ಠ ರನ್‌ – ಭಾರತದ ಪರ ದಾಖಲೆ ಬರೆದ ಸೂರ್ಯ

    ಒಂದೇ ವರ್ಷದಲ್ಲಿ ಟಿ20ಯಲ್ಲಿ ಗರಿಷ್ಠ ರನ್‌ – ಭಾರತದ ಪರ ದಾಖಲೆ ಬರೆದ ಸೂರ್ಯ

    ಮೆಲ್ಬರ್ನ್‌: ಟೀಂ ಇಂಡಿಯಾದ(Team India) ಸ್ಟಾರ್‌ ಆಟಗಾರ ಸೂರ್ಯಕುಮಾರ್‌ ಯಾದವ್‌(Suryakumar Yadav) ಟಿ20 ಕ್ರಿಕೆಟ್‌ನಲ್ಲಿ ಭಾರತದ ಪರ ದಾಖಲೆ ಬರೆದಿದ್ದಾರೆ.

    ಒಂದೇ ಕ್ರಿಕೆಟ್‌ ವರ್ಷದಲ್ಲಿ ಸಾವಿರ ರನ್‌ಗಳ ಗಡಿ ದಾಟಿದ ಮೊದಲ ಭಾರತೀಯ ಆಟಗಾರ ವಿಶ್ವದ ಎರಡನೇ ಬ್ಯಾಟರ್‌ ಎಂಬ ಹೆಗ್ಗಳಿಕೆಗೆ ಸೂರ್ಯ ಪಾತ್ರವಾಗಿದ್ದಾರೆ. ಜಿಂಬಾಬ್ವೆ ವಿರುದ್ಧ ಪಂದ್ಯಕ್ಕೂ ಮೊದಲು ಒಟ್ಟು 959 ರನ್‌ಗಳಿಸಿದ್ದ ಸೂರ್ಯಕುಮಾರ್‌ ಇಂದು ಔಟಾಗದೇ 61 ರನ್‌(25 ಎಸೆತ, 6 ಬೌಂಡರಿ, 4 ಸಿಕ್ಸರ್‌) ಹೊಡೆದಿದ್ದು, ಈ ವರ್ಷ 28 ಇನ್ನಿಂಗ್ಸ್‌ಗಳಿಂದ ಒಟ್ಟು 1020 ರನ್‌ ಹೊಡೆದಿದ್ದಾರೆ.

    ಟಿ20 ಕ್ರಿಕೆಟ್‌ನಲ್ಲಿ(T20 Cricket) ಒಂದೇ ವರ್ಷದಲ್ಲಿ ಅತಿ ಹೆಚ್ಚು ರನ್‌ ಹೊಡೆದ ದಾಖಲೆ ಪಾಕಿಸ್ತಾನ ಮೊಹಮ್ಮದ್‌ ರಿಜ್ವಾನ್‌ ಹೆಸರಿನಲ್ಲಿದೆ. 2021 ರಲ್ಲಿ 26 ಇನ್ನಿಂಗ್ಸ್‌ಗಳಿಂದ ರಿಜ್ವಾನ್‌ 1326 ರನ್‌ ಹೊಡೆದಿದ್ದರು.  ಇದನ್ನೂ ಓದಿ: ಭಾರತಕ್ಕೆ 71 ರನ್‍ಗಳ ಭರ್ಜರಿ ಜಯ – ಸೆಮಿಯಲ್ಲಿ ಇಂಗ್ಲೆಂಡ್ ಎದುರಾಳಿ

    ಈ ವರ್ಷ ಅತಿ ಹೆಚ್ಚು ರನ್‌ ಹೊಡೆದ ಆಟಗಾರರ ಪೈಕಿ ರಿಜ್ವಾನ್‌(924 ರನ್‌), ವಿರಾಟ್‌ ಕೊಹ್ಲಿ(731 ರನ್‌) ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದಲ್ಲಿದ್ದಾರೆ.

    ಈ ಟಿ20 ವಿಶ್ವಕಪ್‌ನಲ್ಲಿ  ಸೂರ್ಯಕುಮಾರ್‌ ಯಾದವ್‌ ಮೂರು ಅರ್ಧಶತಕ ಹೊಡೆದಿದ್ದಾರೆ. ಪಾಕಿಸ್ತಾನದ ವಿರುದ್ಧ 15 ರನ್‌, ನೆದರ್‌ಲ್ಯಾಂಡ್‌ ವಿರುದ್ಧ 51 ರನ್‌, ದಕ್ಷಿಣ ಆಫ್ರಿಕಾ ವಿರುದ್ಧ 68 ರನ್‌, ಬಾಂಗ್ಲಾ ದೇಶದ ವಿರುದ್ಧ 30 ರನ್‌ ಚಚ್ಚಿದ್ದಾರೆ.

    ಜಿಂಬಾಬ್ವೆ ವಿರುದ್ಧದ ಅತ್ಯುತ್ತಮ ಆಟಕ್ಕೆ ಸೂರ್ಯಕುಮಾರ್‌ ಯಾದವ್‌ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.

    Live Tv
    [brid partner=56869869 player=32851 video=960834 autoplay=true]

  • ಭಾರತಕ್ಕೆ 71 ರನ್‍ಗಳ ಭರ್ಜರಿ ಜಯ – ಸೆಮಿಯಲ್ಲಿ ಇಂಗ್ಲೆಂಡ್ ಎದುರಾಳಿ

    ಭಾರತಕ್ಕೆ 71 ರನ್‍ಗಳ ಭರ್ಜರಿ ಜಯ – ಸೆಮಿಯಲ್ಲಿ ಇಂಗ್ಲೆಂಡ್ ಎದುರಾಳಿ

    ಮೆಲ್ಬರ್ನ್: ಸೂರ್ಯಕುಮಾರ್ ಯಾದವ್ (Suryakumar Yadav) ಮತ್ತು ಕೆ.ಎಲ್ ರಾಹುಲ್ (KL Rahul)  ಬ್ಯಾಟಿಂಗ್ ವೈಭವ, ಬೌಲರ್‌ಗಳ ಸಂಘಟಿತ ಹೋರಾಟದ ಫಲವಾಗಿ ಜಿಂಬಾಬ್ವೆ (Zimbabwe)  ವಿರುದ್ಧ ಭಾರತ (India) 71 ರನ್‍ಗಳ ಭರ್ಜರಿ ಜಯ ಗಳಿಸಿದೆ. ಈ ಜಯದೊಂದಿಗೆ ಭಾರತ ಗ್ರೂಪ್ 2ರ ಟೇಬಲ್ ಟಾಪರ್ ಆಗಿ ಸೆಮಿಫೈನಲ್ ಪ್ರವೇಶಿಸಿದೆ.

    187 ರನ್‍ಗಳ ಗುರಿ ಬೆನ್ನಟ್ಟಿದ ಜಿಂಬಾಬ್ವೆಗೆ ಭಾರತದ ಬೌಲರ್‌ಗಳ ವಿಕೆಟ್ ಬೇಟೆಯ ಮುಂದೆ ನಿಲ್ಲಲಾಗದೆ 17.2 ಓವರ್‌ಗಳಲ್ಲಿ 115 ರನ್‍ಗಳಿಗೆ ಆಲೌಟ್ ಆಯಿತು. ಈ ಗೆಲುವಿನೊಂದಿಗೆ ಭಾರತ ನ.10 ರಂದು ಇಂಗ್ಲೆಂಡ್ (England) ತಂಡವನ್ನು ಸೆಮಿಫೈನಲ್‍ನಲ್ಲಿ ಎದುರಿಸಲಿದೆ. ಇದನ್ನೂ ಓದಿ: ಚೋಕರ್ಸ್ ಹಣೆಪಟ್ಟಿಯೊಂದಿಗೆ ಆಫ್ರಿಕಾ ಮನೆಗೆ – ಪಾಕ್‌ಗೆ ಖುಲಾಯಿಸಿದ ಅದೃಷ್ಟ

    ಜಿಂಬಾಬ್ವೆಗೆ ಮೊದಲ ಎಸೆತದಲ್ಲೇ ಭುವನೇಶ್ವರ್ ಕುಮಾರ್ ಶಾಕ್ ನೀಡಿದರು. ಆರಂಭಿಕ ಆಟಗಾರ ವೆಸ್ಲಿ ಮಾಧೆವೆರೆ ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿಕೊಂಡರು. ಬಳಿಕ ಯಾವೊಬ್ಬ ಬ್ಯಾಟ್ಸ್‌ಮ್ಯಾನ್‌ಗಳು ರನ್ ಪೇರಿಸುವ ಇರಾದೆಯಲ್ಲಿದ್ದಂತೆ ಕಾಣದೇ ಭಾರತದ ಬೌಲರ್‌ಗಳ ದಾಳಿಗೆ ಪಟಪಟನೆ ಉದುರಿಕೊಂಡರು. ಜಿಂಬಾಬ್ವೆ ಪರ ರಯಾನ್ ಬರ್ಲ್ 35 ರನ್ (22 ಎಸೆತ, 5 ಬೌಂಡರಿ, 1 ಸಿಕ್ಸ್) ಸಿಡಿಸಿ ವಿಕೆಟ್ ಕಳೆದುಕೊಂಡರು. ಬಳಿಕ ಒಂದೆಡೆ ಹೋರಾಟ ನಡೆಸುತ್ತಿದ್ದ ಸಿಕಂದರ್ ರಜಾ 34 ರನ್ (24 ಎಸೆತ, 3 ಬೌಂಡರಿ) ಗಳಿಸಿ ಔಟ್ ಆಗುವುದರೊಂದಿಗೆ ಜಿಂಬಾಬ್ವೆ ಗೆಲುವಿನ ಆಸೆ ಕಮರಿತು. ಅಂತಿಮವಾಗಿ 17.2 ಓವರ್‌ಗಳಲ್ಲಿ 115 ರನ್‍ಗಳಿಗೆ ಅಲೌಟ್ ಆಯಿತು.

    ಭಾರತ ಪರ ಅಶ್ವಿನ್ 3, ಮೊಹಮ್ಮದ್ ಶಮಿ ಮತ್ತು ಹಾರ್ದಿಕ್ ಪಾಂಡ್ಯ ತಲಾ 2 ವಿಕೆಟ್ ಪಡೆದರೆ, ಅರ್ಷದೀಪ್ ಸಿಂಗ್, ಭುವನೇಶ್ವರ್ ಕುಮಾರ್, ಅಕ್ಷರ್ ಪಟೇಲ್ ತಲಾ 1 ವಿಕೆಟ್ ಪಡೆದರು. ಇದನ್ನೂ ಓದಿ: ಅತ್ಯಾಚಾರ ಆರೋಪ – ಲಂಕಾ ಕ್ರಿಕೆಟಿಗ ದನುಷ್ಕಾ ಗುಣತಿಲಕ ಸಿಡ್ನಿಯಲ್ಲಿ ಬಂಧನ

    ಈ ಮೊದಲು ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಭಾರತ, ರೋಹಿತ್ ಶರ್ಮಾರನ್ನು (15 ರನ್ (13 ಎಸೆತ, 2 ಬೌಂಡರಿ) ಕಳೆದುಕೊಂಡಿತು. ಇನ್ನೊಂದೆಡೆ ಕೆ.ಎಲ್ ರಾಹುಲ್ ತಮ್ಮ ಅಬ್ಬರದಾಟ ಮುಂದುವರಿಸಿದರು. ಕೆಲಕಾಲ ರಾಹುಲ್‍ಗೆ ಉತ್ತಮ ಸಾಥ್ ನೀಡಿದ ಕೊಹ್ಲಿ ಆಟ 26 ರನ್ (25 ಎಸೆತ, 2 ಬೌಂಡರಿ) ಅಂತ್ಯವಾಯಿತು. ಆದರೆ ರಾಹುಲ್ ಜೊತೆ 2ನೇ ವಿಕೆಟ್‍ಗೆ 60 ರನ್ (48 ಎಸೆತ) ಜೊತೆಯಾಟ ತಂಡಕ್ಕೆ ವರವಾಯಿತು.

    ಇತ್ತ ರಾಹುಲ್ 51 ರನ್ (35 ಎಸೆತ, 3 ಬೌಂಡರಿ, 3 ಸಿಕ್ಸ್) ಸಿಡಿಸಿ ಅರ್ಧಶತಕದ ಆಟದೊಂದಿಗೆ ದೊಡ್ಡ ಹೊಡೆತಕ್ಕೆ ಕೈ ಹಾಕಿ ವಿಕೆಟ್ ಕೈಚೆಲ್ಲಿಕೊಂಡರು. ಬಳಿಕ ಸೂರ್ಯಕುಮಾರ್ ವೈಲೆಂಟ್ ಆದರು. ಪಾಂಡ್ಯ ಜೊತೆ ಸೇರಿಕೊಂಡು ತಮ್ಮ ಸ್ಫೋಟಕ ಬ್ಯಾಟಿಂಗ್ ಮುಂದುವರಿಸಿದ ಸೂರ್ಯ ಆಕರ್ಷಕ ಹೊಡೆತಗಳ ಮೂಲಕ ಬೌಂಡರಿ, ಸಿಕ್ಸರ್‌ಗಳ ಮಳೆ ಸುರಿಸಿದರು.

    ಕೊನೆಯ 5 ಓವರ್‌ಗಳಲ್ಲಿ 79 ರನ್:
    ಸೂರ್ಯ ಜಿಂಬಾಬ್ವೆ ಬೌಲರ್‌ಗಳಿಗೆ ಮನಬಂದಂತೆ ಚಚ್ಚಲು ಆರಂಭಿಸಿದರೆ, ಇತ್ತ ಪಾಂಡ್ಯ 18 ರನ್ (18 ಎಸೆತ, 2 ಬೌಂಡರಿ) ಸಿಡಿಸಿ ಕೊನೆಯ ಓವರ್‌ನಲ್ಲಿ ಔಟ್ ಆದರು. ಈ ಮೊದಲು ಸೂರ್ಯ ಜೊತೆ 5ನೇ ವಿಕೆಟ್‍ಗೆ 65 ರನ್ (36 ಎಸೆತ) ಜೊತೆಯಾಟವಾಡಿ ತಂಡದ ಮೊತ್ತವನ್ನು ಹಿಗ್ಗಿಸಿದರು. ಸೂರ್ಯ ಸ್ಫೋಟಕ ಆಟ ಕೊನೆಯ ಎಸೆತದ ವರೆಗೆ ಮುಂದುವರಿಯಿತು. ಸೂರ್ಯ ಅಜೇಯ 61 ರನ್ (25 ಎಸೆತ, 6 ಬೌಂಡರಿ, 4 ಸಿಕ್ಸ್) ಸಿಡಿಸಿದ ಪರಿಣಾಮ ತಂಡದ ಮೊತ್ತ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 186ಕ್ಕೆ ಏರಿಕೆ ಕಂಡಿತು. ಕೊನೆಯ 5 ಓವರ್‌ಗಳಲ್ಲಿ 79 ರನ್ ಹರಿದುಬಂತು.

    Live Tv
    [brid partner=56869869 player=32851 video=960834 autoplay=true]

  • ಭಾರತವನ್ನ ಸೋಲಿಸಿದ್ರೆ ಜಿಂಬಾಬ್ವೆ ಹುಡುಗನನ್ನ ಮದ್ವೆ ಆಗ್ತೀನಿ – ಪಾಕ್ ನಟಿ ಬಂಪರ್ ಆಫರ್

    ಭಾರತವನ್ನ ಸೋಲಿಸಿದ್ರೆ ಜಿಂಬಾಬ್ವೆ ಹುಡುಗನನ್ನ ಮದ್ವೆ ಆಗ್ತೀನಿ – ಪಾಕ್ ನಟಿ ಬಂಪರ್ ಆಫರ್

    ಇಸ್ಲಾಮಾಬಾದ್: ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್ (T20 WorldCup) ಟೂರ್ನಿ ಅತ್ಯಂತ ರೋಚಕತೆಯಿಂದ ಕೂಡಿದೆ. `ಬಿ’ ಗುಂಪಿನಲ್ಲಿ ಯಾವ ತಂಡ ಸೆಮಿಗೆ ಹೋಗಲಿದೆ ಎನ್ನುವುದು ಇನ್ನೂ ದೃಢಪಟ್ಟಿಲ್ಲ. ಆದರೆ ಪಾಯಿಂಟ್ಸ್ ಟೇಬಲ್‌ನಲ್ಲಿ 6 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿರುವ ಟೀಂ ಇಂಡಿಯಾ (Team India) ಬಹುತೇಕ ಸೆಮಿ ಫೈನಲ್ ಹಾದಿಯನ್ನು ಖಚಿತಪಡಿಸಿಕೊಂಡಿದೆ.

    ಭಾನುವಾರ ಮೆಲ್ಬರ್ನ್ ಕ್ರೀಡಾಂಗಣದಲ್ಲಿ (MCG) ನಡೆಯುವ ಪಂದ್ಯದಲ್ಲಿ ಜಿಂಬಾಬ್ವೆ ವಿರುದ್ಧ ಗೆದ್ದರೆ ಟೀಂ ಇಂಡಿಯಾ ಅಧಿಕೃತವಾಗಿ ಸೆಮಿ ಫೈನಲ್ ಪ್ರವೇಶಿಸಲಿದೆ. ಈ ನಡುವೆಯೇ ಪಾಕಿಸ್ತಾನದ (Pakistan) ನಟಿ ಸೆಹಾರ್ ಶಿನ್ವಾರಿ (Sehar Shinwari) ಜಿಂಬಾಬ್ವೆಗೆ (Zimbabwe) ಬಂಪರ್ ಆಫರ್ ಕೊಟ್ಟಿದ್ದಾರೆ. ಇದನ್ನೂ ಓದಿ: ಭಾರತಕ್ಕೆ 5 ರನ್‍ಗಳ ರೋಚಕ ಗೆಲುವು – ಹರ್ಷ ತಂದ ಅರ್ಷದೀಪ್

    ಸೆಪ್ಟೆಂಬರ್ 6 ರಂದು ನಡೆಯುವ ಪಂದ್ಯದಲ್ಲಿ ರೋಹಿತ್ ಶರ್ಮಾ (Rohit Sharma) ನಾಯಕತ್ವದ ಟೀಂ ಇಂಡಿಯಾವನ್ನು ಅದ್ಭುತವಾಗಿ ಸೋಲಿಸಿದರೆ ಜಿಂಬಾಬ್ವೆ ಹುಡುಗನನ್ನು ಮದುವೆಯಾಗುತ್ತೇನೆ ಎಂದು ನಟಿ ಸೆಹಾರ್ ಶಿನ್ವಾರ್ ಟ್ವೀಟ್ ಮಾಡಿದ್ದಾರೆ. ಪಾಕ್ ನಟಿಯ ಈ ಟ್ವೀಟ್ ಸಿಕ್ಕಾಪಟ್ಟೆ ವೈರಲ್ ಆಗಿದೆ. ಕೆಲವರು ಇದನ್ನು ಟ್ರೋಲ್ ಮಾಡುತ್ತಿದ್ದು, ನಿಮ್ಮ ಇಡೀ ಜೀವನ ನೀವು ಹೀಗೆ ಏಕಾಂಗಿಯಾಗಿಯೇ ಬದುಕುತ್ತೀರಿ, ಅದಕ್ಕಾಗಿ ವಿಷಾದಿಸುತ್ತೇನೆ ಎಂದು ನೆಟ್ಟಿಗರು ಟಾಂಗ್ ಕೊಟ್ಟಿದ್ದಾರೆ. ಇದನ್ನೂ ಓದಿ: ಆಫ್ರಿಕಾಗೆ ಸೋಲು – ಚಿಗುರಿಕೊಂಡ ಪಾಕಿಸ್ತಾನದ ಸೆಮಿಫೈನಲ್ ಕನಸು

    ಈಗಾಗಲೇ 4 ಪಂದ್ಯಗಳನ್ನಾಡಿರುವ ಪಾಕಿಸ್ತಾನ (Pakistan) 2 ಪಂದ್ಯಗಳಲ್ಲಿ ಸೋತಿದೆ. ಉಳಿದೆರಡು ಪಂದ್ಯಗಳಲ್ಲಿ ಗೆದ್ದು, ಅಂಕಪಟ್ಟಿಯಲ್ಲಿ 3ನೇ ಸ್ಥಾನ ಪಡೆದಿದೆ. 4 ಅಂಕಗಳನ್ನು ಪಡೆದಿರುವ ಬಾಂಗ್ಲಾದೇಶ (Bangladesh) ತನ್ನ ಸೆಮಿಸ್ ಹಾದಿ ಕಠಿಣವಾಗಿಸಿಕೊಂಡಿದೆ. ಅಕ್ಟೋಬರ್ 6ರಂದು ಪಾಕಿಸ್ತಾನ ಹಾಗೂ ಬಾಂಗ್ಲಾದೇಶ ತಂಡಗಳು ಮುಖಾಮುಖಿಯಾಗಲಿದ್ದು, ಗೆದ್ದ ತಂಡಗಳು ಸೆಮಿಸ್ ರೇಸ್‌ನಲ್ಲಿ ಉಳಿಯಲಿವೆ. ಇನ್ನೂ ಈಗಾಗಲೇ ಅಂಕಪಟ್ಟಿಯಲ್ಲಿ ಅಗ್ರಸ್ಥಾನಲ್ಲಿರುವ ಭಾರತ (India), ಜಿಂಬಾಬ್ವೆ (Zimbabwe) ವಿರುದ್ಧ ಸೆಣಸಲಿದ್ದು, ಈ ಪಂದ್ಯದಲ್ಲಿ ಗೆದ್ದರೆ ಪಾಕಿಸ್ತಾನ ಹಾಗೂ ಬಾಂಗ್ಲಾದೇಶ ತಂಡಗಳು ಟೂರ್ನಿಯಿಂದ ಅಧಿಕೃತವಾಗಿ ಹೊರ ಬೀಳಲಿವೆ.

    ಜಿಂಬಾಬ್ವೆ ವಿರುದ್ದದ ಪಂದ್ಯದಲ್ಲಿ ಭಾರತ ತಂಡ ಸೋಲಬೇಕೆಂಬುದು ಪಾಕಿಸ್ತಾನ ಹಾಗೂ ಬಾಂಗ್ಲಾದೇಶ ತಂಡಗಳ ಆಶಯವಾಗಿದೆ. ಈ ನಡುವೆ ಪಾಕ್ ನಟಿ ಜಿಂಬಾಬ್ವೆಗೆ ಆಫರ್ ಕೊಟ್ಟಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಪಾಕ್‍ಗೆ ಮರ್ಮಾಘಾತ – 1 ರನ್‍ಗಳ ರೋಚಕ ಜಯ ಸಾಧಿಸಿದ ಜಿಂಬಾಬ್ವೆ

    ಪಾಕ್‍ಗೆ ಮರ್ಮಾಘಾತ – 1 ರನ್‍ಗಳ ರೋಚಕ ಜಯ ಸಾಧಿಸಿದ ಜಿಂಬಾಬ್ವೆ

    ಪರ್ತ್: ಪಾಕಿಸ್ತಾನ (Pakistan) ಹಾಗೂ ಜಿಂಬಾಬ್ವೆ (Zimbabwe) ನಡುವಿನ ರಣರೋಚಕ ಕಾದಾಟದಲ್ಲಿ ಜಿಂಬಾಬ್ವೆ 1 ರನ್‍ಗಳ ರೋಚಕ ಜಯ ಸಾಧಿಸಿ ಪಾಕಿಸ್ತಾನಕ್ಕೆ ಮರ್ಮಾಘಾತ ನೀಡಿದೆ.

    ಪಾಕಿಸ್ತಾನ ಗೆಲುವಿಗೆ ಕೊನೆಯ 2 ಓವರ್‌ಗಳಲ್ಲಿ 22 ರನ್ ಬೇಕಾಗಿತ್ತು. 19ನೇ ಓವರ್‌ನಲ್ಲಿ 11 ರನ್ ಬಂತು. ಕೊನೆಯ 6 ಎಸೆತಗಳಲ್ಲಿ 11 ರನ್ ಬೇಕಾಗಿತ್ತು. ಜಿಂಬಾಬ್ವೆ ಪರ ಬ್ರಾಡ್ ಇವಾನ್ಸ್ ಕೊನೆಯ ಓವರ್ ಎಸೆಯಲು ಮುಂದಾದರು. ಮೊಹಮ್ಮದ್ ನವಾಝ್ ಮತ್ತು ಮೊಹಮ್ಮದ್ ವಾಸೀಂ ಪಾಕಿಸ್ತಾನ ಪರ ಬ್ಯಾಟಿಂಗ್ ನಡೆಸುತ್ತಿದ್ದರು. ಮೊದಲ ಎಸೆತದಲ್ಲೇ ನವಾಝ್ 3 ರನ್ ಕಸಿದರು. ಮುಂದಿನ ಎಸೆತದಲ್ಲಿ ವಾಸೀಂ ಬೌಂಡರಿ ಬಾರಿಸಿದರು. ಕೊನೆಯ 4 ಎಸೆತಗಳಲ್ಲಿ ಪಾಕಿಸ್ತಾನ ಗೆಲುವಿಗೆ 4 ರನ್ ಬೇಕಾಗಿತ್ತು. ಮೂರನೇ ಎಸೆತದಲ್ಲಿ 1 ರನ್ ಬಂತು. ಕೊನೆಯ 3 ಎಸೆತಗಳಲ್ಲಿ ಗೆಲುವಿಗೆ 3 ರನ್ ಅವಶ್ಯಕತೆ ಇತ್ತು. 4 ಎಸೆತ ಡಾಟ್‍ಬಾಲ್. 5ನೇ ಎಸೆತದಲ್ಲಿ ನವಾಝ್ ಕ್ಯಾಚ್ ನೀಡಿ ಔಟ್ ಆದರು. ಕೊನೆಯ ಎಸೆದಲ್ಲಿ ಪಾಕ್ ಗೆಲುವಿಗೆ 3 ರನ್ ಬೇಕಾಗಿತ್ತು. ಶಾಹೀನ್ ಶಾ ಅಫ್ರಿದಿ ರನೌಟ್ ಆಗುವುದರೊಂದಿಗೆ ಜಿಂಬಾಬ್ವೆ 1 ರನ್‍ಗಳ ರೋಚಕ ಗೆಲುವು ದಾಖಲಿಸಿತು. ಇದನ್ನೂ ಓದಿ: ಅತ್ತ ಕೊಹ್ಲಿ, ಸೂರ್ಯ ಪಾರ್ಟ್‌ನರ್‌ಶಿಪ್ ಆಟ – ಇತ್ತ ಲೈಫ್ ಪಾರ್ಟ್‌ನರ್‌ಗೆ ಪ್ರಪೋಸ್

    ಜಿಂಬಾಬ್ವೆ ನೀಡಿದ 131 ರನ್‍ಗಳ ಟಾರ್ಗೆಟ್ ಬೆನ್ನಟ್ಟಿದ ಪಾಕಿಸ್ತಾನ ತಂಡ ಆರಂಭದಲ್ಲೇ ವಿಕೆಟ್ ಕಳೆದುಕೊಂಡು ಸಾಗಿತು. ಆದರೂ ಶಾನ್ ಮಸೂದ್ 44 ರನ್ (38 ಎಸೆತ, 3 ಬೌಂಡರಿ) ಮತ್ತು ಮೊಹಮ್ಮದ್ ನವಾಜ್ 22 ರನ್ (18 ಎಸೆತ, 1 ಬೌಂಡರಿ, 1 ಸಿಕ್ಸ್) ಚಚ್ಚಿ ಪ್ರಯತ್ನ ಪಟ್ಟರೂ ಕೊನೆಯ ಕ್ಷಣದಲ್ಲಿ ನವಾಝ್ ಔಟ್ ಆಗುವುದರೊಂದಿಗೆ ಗೆಲುವು ಮರಿಚಿಕೆಯಾಯಿತು. ಇದು ಪಾಕಿಸ್ತಾನಕ್ಕೆ ಟಿ20 ವಿಶ್ವಕಪ್‌ (T20 World Cup) ಕೂಟದಲ್ಲಿ ಎದುರಾದ 2ನೇ ಸೋಲು. ಮೊದಲ ಪಂದ್ಯದಲ್ಲಿ ಭಾರತ (India) ವಿರುದ್ಧ ಸೋತಿತ್ತು. ಇದನ್ನೂ ಓದಿ: ಡಚ್ಚರಿಗೆ ಸೋಲಿನ ಡಿಚ್ಚಿ – ಮೊದಲ ಸ್ಥಾನಕ್ಕೆ ಜಿಗಿದ ಭಾರತ

    ಬೌಲಿಂಗ್‍ನಲ್ಲಿ ಸಿಕಂದರ್ ರಾಜಾ 3 ವಿಕೆಟ್ ಕಿತ್ತು ಮಿಂಚಿದರೆ, ಬ್ರಾಡ್ ಇವಾನ್ಸ್ 2 ವಿಕೆಟ್ ಕಿತ್ತು ಗೆಲುವಿನ ಹೀರೋಗಳಾದರು. ಈ ಮೊದಲು ಬ್ಯಾಟಿಂಗ್‍ನಲ್ಲಿ ಜಿಂಬಾಬ್ವೆ ಪರ ವಿಲಿಯಮ್ಸ್ ಸಿಡಿಸಿದ 31 ರನ್ (28 ಎಸೆತ, 3 ಬೌಂಡರಿ) ಜಿಂಬಾಬ್ವೆ ಪರ ಹೆಚ್ಚಿನ ಗಳಿಕೆಯಾಗಿತ್ತು.

    Live Tv
    [brid partner=56869869 player=32851 video=960834 autoplay=true]

  • ಶುಭಮನ್‌ ಗಿಲ್‌ ಚೊಚ್ಚಲ ಶತಕದ ಅಬ್ಬರ – ಕ್ಲೀನ್‌ಸ್ವೀಪ್‌ನಲ್ಲಿ ಸರಣಿಗೆದ್ದ ಭಾರತ

    ಶುಭಮನ್‌ ಗಿಲ್‌ ಚೊಚ್ಚಲ ಶತಕದ ಅಬ್ಬರ – ಕ್ಲೀನ್‌ಸ್ವೀಪ್‌ನಲ್ಲಿ ಸರಣಿಗೆದ್ದ ಭಾರತ

    ಹರಾರೆ: ಶುಭಮನ್ ಗಿಲ್ ಭರ್ಜರಿ ಶತಕ ಹಾಗೂ ಇಶಾನ್ ಕಿಶನ್ ಅರ್ಧಶತಕದ ನೆರವಿನಿಂದ ಟೀಂ ಇಂಡಿಯಾ ಜಿಂಬಾಬ್ವೆ ವಿರುದ್ಧ ಏಕದಿನ ಸರಣಿಯ ಅಂತಿಮ ಪಂದ್ಯದಲ್ಲಿ 13 ರನ್‌ಗಳ ಜಯ ಸಾಧಿಸಿತು. ಜಿಂಬಾಬ್ವೆ ವಿರುದ್ಧ ಕ್ಲೀನ್‌ಸ್ವೀಪ್‌ ಮಾಡಿರುವ ಭಾರತ ತವರಿನಲ್ಲೇ ವೈಟ್‌ವಾಶ್ ಮಾಡಿತು.

    ಇಲ್ಲಿನ ಹರಾರೆ ಸ್ಪೋರ್ಟ್ಸ್ ಕ್ಲಬ್ ಮೈದಾನದಲ್ಲಿ ನಡೆದ ಏಕದಿನ ಸರಣಿಯ ಅಂತಿಮ ಪಂದ್ಯದಲ್ಲಿ ಭಾರತ ತಂಡದ ಯುವ ಬ್ಯಾಟ್ಸ್ಮನ್ ಶುಭಮನ್ ಗಿಲ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಚೊಚ್ಚಲ ಶತಕ ಬಾರಿಸುವ ಮೂಲಕ ಟೀಂ ಇಂಡಿಯಾವನ್ನು ಗೆಲುವಿನ ದಡ ಸೇರಿಸಿದರು.

    ಟಾಸ್‌ಗೆದ್ದು ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ ನಿಗದಿತ 50 ಓವರ್‌ಗಳಲ್ಲಿ 8 ವಿಕೆಟ್‌ಗಳ ನಷ್ಟಕ್ಕೆ 289 ರನ್ ಗಳಿಸಿ ಎದುರಾಳಿ ಜಿಂಬಾಬ್ವೆಗೆ 290 ರನ್‌ಗಳ ಗುರಿ ನೀಡಿತು. ಬೃಹತ್ ಮೊತ್ತದ ಗುರಿ ಬೆನ್ನತ್ತಿದ ಜಿಂಬಾಬ್ವೆ 49.3 ಓವರ್‌ಗಳಿಗೆ ತನ್ನೆಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡು 276 ರನ್ ಗಳಿಸಿ ತವರಿನಲ್ಲೇ ಮುಖಭಂಗ ಅನುಭವಿಸಿತು.

    ಟಾಸ್‌ಗೆದ್ದು ನಂತರ ಬ್ಯಾಟಿಂಗ್ ಮಾಡಿದ ಜಿಂಬಾಬ್ವೆ ನಿಧಾನಗತಿಯಲ್ಲಿ ಬ್ಯಾಟಿಂಗ್ ಆರಂಭಿಸಿತು. ಸೀಮಿತ ಓವರ್‌ಳಿಗೆ ತಕ್ಕಂತೆ ರನ್ ಬರುತ್ತಿದ್ದರೂ ವಿಕೆಟ್‌ಗಳನ್ನು ಕಳೆದುಕೊಳ್ಳುತ್ತಾ ಹೋಯಿತು. ಆರಂಭಿಕರಾಗಿ ಕ್ರೀಸ್‌ಗಿಳಿದ ತಕುದಾಜ್ವನಾಶೆ ಕೈತಾನೋ 12 ರನ್ ಹಾಗೂ ಇನ್ನೋಸೆಂಟ್ ಕೈಯಾ 6 ರನ್‌ಗಳಿಸಿ ಪೆವಿಲಿಯನ್ ಸೇರಿದರು.

    2ನೇ ಕ್ರಮಾಂಕದಲ್ಲಿ ಕ್ರೀಸ್‌ಗಳಿದ ಸೇನ್ ವಿಲಿಯಮ್ಸ್ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು. 64 ಎಸೆತಗಳಲ್ಲಿ 7 ಬೌಂಡರಿಗಳೊಂದಿಗೆ 45 ರನ್ ಬಾರಿಸಿದರು. ಇವರಿಗೆ ಜೊತೆಯಾದ ಟೋನಿ ಮುನಿಯೊಂಗಾ 15 ರನ್‌ಗಳಿಸಿ ಸಾಥ್ ನೀಡಿದರು. ಇದೇ ವೇಳೆಗೆ ಸೇನ್ ವಿಕೆಟ್ ಒಪ್ಪಿಸಬೇಕಾಯಿತು. ಒಟ್ಟಿನಲ್ಲಿ ಪವರ್ ಪ್ಲೇ ಮುಗಿಯುವ ಹೊತ್ತಿಗೆ ಜಿಂಬಾಬ್ವೆ ನಾಲ್ಕು ವಿಕೆಟ್‌ಗಳನ್ನು ಕಳೆದುಕೊಂಡಿತು. ಇದು ಟೀಂ ಇಂಡಿಯಾ ಗೆಲುವಿಗೆಸುಲಭ ತುತ್ತಾಯಿತು.

    ಈ ವೇಳೆ ಮಧ್ಯಮ ಕ್ರಮಾಂಕದಲ್ಲಿ ಕ್ರೀಸ್‌ಗಿಳಿದು ಅಬ್ಬರಿಸಿದ ಸಿಂಕಂದರ್ ರಾಜಾ ಅವರ ಜವಾಬ್ದಾರಿಯುತ ಶತಕ ತಂಡದಲ್ಲಿ ಗೆಲುವಿನ ಭರವಸೆ ಮೂಡಿಸಿತ್ತು. ನಿಧಾನಗತಿಯಲ್ಲೇ ಬ್ಯಾಟಿಂಗ್ ಆರಂಭಿಸಿದ ರಾಜಾ ಕೊನೆಯವರೆಗೂ ಕ್ರೀಸ್‌ನಲ್ಲಿ ಉಳಿದಿದ್ದರು. 95 ಎಸೆತಗಳಲ್ಲಿ 115 ರನ್ (9 ಬೌಂಡರಿ, 3 ಸಿಕ್ಸರ್) ಸಿಡಿಸುವ ಮೂಲಕ ಟೀಂ ಇಂಡಿಯಾ ಬೌಲರ್‌ಗಳ ಬೆವರಿಳಿಸಿದ್ದರು. ಇನ್ನೇನು ಗೆಲವು ಜಿಂಬಾಬ್ವೆಯದ್ದೇ ಅಂದುಕೊಳ್ಳುವ ವೇಳೆಗೆ 49ನೇ ಓವರ್‌ನಲ್ಲಿ ಬೌಂಡರಿ ಚಚ್ಚುವ ಬರದಲ್ಲಿ ಕ್ಯಾಚ್ ನೀಡಿ ಪೆವಿಲಿಯನ್ ಸೇರಿದರು. ಇದರಿಂದ ತಂಡ ಗೆಲ್ಲುವ ಭರವಸೆ ಸಂಪೂರ್ಣ ಕಳೆದುಕೊಂಡಿತು. ರೆಗಿಸ್ ಚಕಬ್ವಾ 16 ರನ್, ರಯಾನ್ ಬರ್ಲ್ 8 ರನ್, ಲ್ಯೂಕ್ ಜೊಂಗ್ವೆ 14 ರನ್‌ಗಳಿಸಿದರು.

    ಮಿಂಚಿದ ಬ್ರಾಡ್ ಇವಾನ್ಸ್: ಜಿಂಬಾವ್ವೆ ಪರ ಆಟಗಾರ ಬ್ರಾಡ್ ಇವಾನ್ 5 ವಿಕೆಟ್‌ಗಳನ್ನು ಉರುಳಿಸುವಲ್ಲಿ ಯಶಸ್ವಿಯಾದರು. 10 ಓವರ್‌ಗಳಲ್ಲಿ 54 ರನ್‌ಗಳನ್ನಷ್ಟೇ ನೀಡಿದ ಬ್ರಾಡ್ ಇವಾನ್ 5 ವಿಕೆಟ್ ಪಡೆದು ಮಿಂಚಿದರು. ವಿಕ್ಟರ್, ಲ್ಯೂಕ್ ಜೊಂಗ್ವೆ ತಲಾ ಒಂದೊಂದು ವಿಕೆಟ್ ಹಂಚಿಕೊಂಡರು.

    ಗಿಲ್ ಶತಕದ ಅಬ್ಬರ: 
    ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಭಾರತ ತಂಡದ ಪರ ಶುಭಮನ್ ಗಿಲ್ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶಿಸಿ ಜಿಂಬಾಬ್ವೆ ಬೌಲರ್‌ಗಳಿಗೆ ಬೆವರಿಳಿಸಿದರು. ಆರಂಭದಿಂದಲೂ ಆಕ್ರಮಣಕಾರಿಯಾಗಿ ಬ್ಯಾಟ್ ಬೀಸಿದ ಗಿಲ್, ಕೇವಲ 82 ಎಸೆತಗಳಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಚೊಚ್ಚಲ ಶತಕ ಸಿಡಿಸಿದರು.

    ಪಂದ್ಯದಲ್ಲಿ ಒಟ್ಟಾರೆಯಾಗಿ 97 ಎಸೆತಗಳನ್ನು ಎದುರಿಸಿದ ಗಿಲ್, ಒಂದು ಸಿಕ್ಸರ್ ಹಾಗೂ 15 ಬೌಂಡರಿಗಳೊಂದಿಗೆ 130 ರನ್ ಸಿಡಿಸಿದರು. ಆ ಮೂಲಕ ಟೀಂ ಇಂಡಿಯಾ ತನ್ನ ಪಾಲಿನ 50 ಓವರ್‌ಗಳಿಗೆ 8 ವಿಕೆಟ್ ನಷ್ಟಕ್ಕೆ 289 ರನ್ ದಾಖಲಿತು. ಇದಕ್ಕೂ ಮುನ್ನ ಆರಂಭಿಕರಾಗಿ ಕಣಕ್ಕಿಳಿದ ಶಿಖರ್ ಧವನ್ 68 ಎಸೆತಗಳಲ್ಲಿ 40 ರನ್ ಹಾಗೂ ಕೆ.ಎಲ್.ರಾಹುಲ್ 46 ಎಸೆತಗಳಲ್ಲಿ 30 ರನ್ ಗಳಿಸಿ ಪೆವಿಲಿಯನ್ ಸೇರಿದರು.

    ಇಶಾನ್ ಶೈನ್: ಇತ್ತ ಶುಭಮನ್‌ಗಿಲ್‌ಗೆ ಜೊತೆಯಾಗಿ ಸಾತ್ ನೀಡಿದ ಇಶಾನ್ ಕಿಶನ್ 61 ಎಸೆತಗಳಲ್ಲಿ 6 ಬೌಂಡರಿಗಳ ನೆರವಿನೊಂದಿಗೆ 50 ರನ್ ಸಿಡಿದರು. ಉತ್ತಮ ಫಾರ್ಮ್ನಲ್ಲಿದ್ದ ಕಿಶನ್ ಅನಗತ್ಯವಾಗಿ ರನ್ ಕದಿಯಲು ಮುಂದಾಗಿ ರನೌಟ್‌ ಆದರು.

    ನಂತರದಲ್ಲಿ ಕ್ರೀಸ್‌ಗಿಳಿದ ಆಟಗಾರರು ಸ್ಥಿರವಾಗಿ ಆಡದ ಕಾರಣ ಟೀಂ ಇಂಡಿಯಾ ನಿಗದಿತ 50 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 289 ರನ್‌ಗಳಿಸಲಷ್ಟೇ ಸಾಧ್ಯವಾಯಿತು. ಸಂಜು ಸ್ಯಾಮ್ಸನ್ 15 ರನ್, ಅಕ್ಷರ್ ಪಟೇಲ್, ದೀಪಕ್ ಹೂಡ ತಲಾ 1 ರನ್, ಶಾರ್ದುಲ್ ಠಾಕೂರ್ 9 ರನ್ ಗಳಿಸಿ ನಿರ್ಗಮಿಸಿದರು. ದೀಪಕ್ ಚಹಾರ್ 1 ರನ್ ಹಾಗೂ ಕುಲದೀಪ್ ಯಾದವ್ 2 ರನ್ ಗಳಿಸಿ ಅಜೇಯರಾಗುಳಿದರು.

    ಟೀಂ ಇಂಡಿಯಾ ಪರ ಅವೇಶ್ ಖಾನ್ ಮೂರು ವಿಕೆಟ್, ದೀಪಕ್ ಚಹಾರ್, ಕುಲದೀಪ್ ಯಾದವ್ ಹಾಗೂ ಅಕ್ಷರ್ ಪಟೇಲ್ ತಲಾ ಎರಡು ವಿಕೆಟ್ ಪಡೆದರು. ಶಾರ್ದೂಲ್ ಠಾಕೂರ್ 1 ವಿಕೆಟ್ ಪಡೆದರು.

    Live Tv
    [brid partner=56869869 player=32851 video=960834 autoplay=true]

  • 10 ವರ್ಷಗಳ ಬಳಿಕ ಮತ್ತೆ ಎದುರುಬದುರಾಗಿ ಆಡಿದ ಕ್ರಿಕೆಟಿಗರು

    10 ವರ್ಷಗಳ ಬಳಿಕ ಮತ್ತೆ ಎದುರುಬದುರಾಗಿ ಆಡಿದ ಕ್ರಿಕೆಟಿಗರು

    ಹರಾರೆ: ಜಿಂಬಾಬ್ವೆ ಪ್ರವಾಸ ಕೈಗೊಂಡಿರುವ ಟೀಂ ಇಂಡಿಯಾ ಇನ್ನೊಂದು ಪಂದ್ಯ ಬಾಕಿ ಇರುವಂತೆ ಏಕದಿನ ಸರಣಿ ಗೆದ್ದಿದೆ. ಈ ನಡುವೆ ಎರಡು ದೇಶಗಳ ಕ್ರಿಕೆಟಿಗರು 10 ವರ್ಷಗಳ ಬಳಿಕ ಎದುರುಬದುರಾಗಿ ತಮ್ಮ ದೇಶಗಳ ಪರವಾಗಿ ಆಡಿದ ಸಂತಸವನ್ನು ಜೊತೆಯಾಗಿ ಹಂಚಿಕೊಂಡಿದ್ದಾರೆ.

    ಟೀಂ ಇಂಡಿಯಾದ ಸ್ಪಿನ್ನರ್ ಕುಲ್‍ದೀಪ್ ಯಾದವ್ ಮತ್ತು ಜಿಂಬಾಬ್ವೆ ತಂಡದ ಆಟಗಾರ ರಯಾನ್ ಬರ್ಲ್ ಪಂದ್ಯದ ಬಳಿಕ ಫೋಟೋ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದ್ದಾರೆ. ಈ ಸಂಭ್ರಮಕ್ಕೆ ಕಾರಣವಿದೆ. ಇವರಿಬ್ಬರೂ ಕೂಡ 10 ವರ್ಷಗಳ ಬಳಿಕ ತಮ್ಮ, ತಮ್ಮ ದೇಶದ ಪರ ಮತ್ತೊಮ್ಮೆ ಎದುರುಬದುರಾಗಿ ಆಡಿದ್ದಾರೆ. ಇದನ್ನೂ ಓದಿ: ಏಷ್ಯಾಕಪ್‍ಗೆ ದಿನಗಣನೆ – ಇಂಡೋ-ಪಾಕ್ ಕದನದಲ್ಲಿ ಇರಲ್ಲ ಇಬ್ಬರು ಬೆಂಕಿ ಬೌಲರ್ಸ್‌

    ಕುಲ್‍ದೀಪ್ ಯಾದವ್ ಮತ್ತು ರಯಾನ್ ಬರ್ಲ್ 10 ವರ್ಷಗಳ ಹಿಂದೆ ಅಂಡರ್-19 ತಂಡದಲ್ಲಿ ಕಾಣಿಕೊಂಡಿದ್ದರು. ಕುಲ್‌ದೀಪ್‌ ಯಾದವ್‌ ಭಾರತ ತಂಡದಲ್ಲಿ ಆಡಿದರೆ, ರಯಾನ್ ಬರ್ಲ್ ಜಿಂಬಾಬ್ವೆ ಪರ ಎದುರುಬದುರಾಗಿ ಆಡಿದ್ದರು. ಆ ಬಳಿಕ ಇದೀಗ ಮತ್ತೊಮ್ಮೆ ಎದುರಾಳಿಗಳಾಗಿ ಆಡಿದ್ದಾರೆ. ಭಾರತ ಹಾಗೂ ಜಿಂಬಾಬ್ವೆ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ರಯಾನ್ ಬರ್ಲ್ ಅಜೇಯ 39 ರನ್ (47 ಎಸೆತ, 3 ಬೌಂಡರಿ, 1 ಸಿಕ್ಸ್) ಸಿಡಿಸಿ ಮಿಂಚಿದ್ದರು. ಇತ್ತ ಕುಲ್‍ದೀಪ್ ಯಾದವ್ ಒಂದು ವಿಕೆಟ್ ಕಿತ್ತು ಸಂಭ್ರಮಿಸಿದ್ದರು. ಇದನ್ನೂ ಓದಿ: ಡಲ್ ಹೊಡೆದ ಜಿಂಬಾಬ್ವೆ, ತವರಿನಲ್ಲಿ ಸತತ ಸೋಲು – ಸರಣಿ ಭಾರತದ ಪಾಲು

    Live Tv
    [brid partner=56869869 player=32851 video=960834 autoplay=true]