ನವದೆಹಲಿ: ಅದೃಷ್ಟ ಯಾವಾಗ ಬೇಕಾದರೂ ಸಿಗಬಹುದು ಎನ್ನುವುದಕ್ಕೆ ಮತ್ತೊಂದು ಉದಾಹರಣೆ ಸಿಕ್ಕಿದೆ. 30 ವರ್ಷದ ಹಿಂದೆ ಜಿಂದಾಲ್ ಸ್ಟೀಲ್ (JSW) ಕಂಪನಿಯ ಷೇರು (Share) ದಿಢೀರ್ ಪತ್ತೆಯಾಗಿ ಪುತ್ರರೊಬ್ಬರು ಈಗ 80 ಕೋಟಿ ರೂ. ಆಸ್ತಿಯ ಮಾಲೀಕನಾಗಿ ಹೊರಹೊಮ್ಮಿದ್ದಾರೆ.
ತಂದೆಯ ಷೇರು ಪತ್ರದ ದಾಖಲೆಗಳನ್ನು ಪುತ್ರ ರೆಡಿಟ್‌ನಲ್ಲಿ ಹಂಚಿಕೊಂಡಿದ್ದು ಈಗ ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈಗ ಆ ರೆಡಿಟ್ ಬಳಕೆದಾರನಿಗೆ ಜನರು ಅಭಿನಂದನೆ ವ್ಯಕ್ತಪಡಿಸುತ್ತಿದ್ದಾರೆ. ಷೇರುಗಳನ್ನು ಮಾರಾಟ ಮಾಡದೇ ದೀರ್ಘಾವಧಿಯವರೆಗೆ ಇಟ್ಟುಕೊಂಡರೆ ಯಾರೂ ಕೂಡ ಕೊಟ್ಯಾಧಿಪತಿಗಳಾಗಬಹುದು ಎಂದು ಕಮೆಂಟ್ ಮಾಡುತ್ತಿದ್ದಾರೆ.
1983 ರಲ್ಲಿ ಜಿಂದಾಲ್ ಸ್ಟೀಲ್ ಕಂಪನಿ ಆರಂಭಗೊಂಡಿದ್ದು 1990 ರ ವೇಳೆಗೆ 1 ಷೇರಿನ ಮೌಲ್ಯ 20 ರೂ.ಗಿಂತಲೂ ಕಡಿಮೆ ಇತ್ತು. ಈಗ ಒಂದು ಷೇರಿನ ಮೌಲ್ಯ 1,006 ರೂ.ಗೆ ಏರಿಕೆಯಾಗಿದ್ದು 2.37ಲಕ್ಷ ಕೋಟಿ ರೂ. ಕಂಪನಿಯಾಗಿ ಹೊರಹೊಮ್ಮಿದೆ.
ಬಳ್ಳಾರಿ: ಆಕಸ್ಮಿಕ ಬೆಂಕಿ ತಗುಲಿ ಮೂರು ಅಂಗಡಿಗಳು ಸುಟ್ಟು ಕರಕಲಾಗಿರುವ ಘಟನೆ ಬಳ್ಳಾರಿ (Ballari) ಜಿಲ್ಲೆಯ ಸಂಡೂರು (Sandur) ತಾಲೂಕಿನ ತೋರಣಗಲ್‌ನ ಜಿಂದಾಲ್ ಕಾರ್ಖಾನೆ ಬೈಪಾಸ್ ಬಳಿ ನಡೆದಿದೆ.
ಘಟನೆಯಲ್ಲಿ ಆಟೋಮೊಬೈಲ್ ಶಾಪ್, ಎಲೆಕ್ಟ್ರಿಕಲ್ ಹಾಗೂ ಹೋಟೆಲ್ ಬೆಂಕಿಗಾಹುತಿಯಾಗಿದ್ದು, ಬೆಂಕಿಯ ಕೆನ್ನಾಲೆಗೆ ಸಿಕ್ಕು ಅಂಗಡಿಯಲ್ಲಿನ ವಸ್ತುಗಳೆಲ್ಲವೂ ಸುಟ್ಟು ಕರಕಲಾಗಿವೆ. ಎಲೆಕ್ಟ್ರಿಕ್ ಬ್ಯಾಟರಿಗಳು, ಎಲೆಕ್ಟ್ರಿಕ್ ವಸ್ತುಗಳು ಹಾಗೂ ಹೋಟೆಲ್‌ನ ಫ್ರಿಜ್, ಟೇಬಲ್, ಚೇರ್ ಸೇರಿ ಅಂದಾಜು 30 ಲಕ್ಷದ ವಸ್ತುಗಳು ಬೆಂಕಿಗಾಹುತಿಯಾಗಿವೆ. ಇದನ್ನೂ ಓದಿ: Hand Luggage On Flights | ಇನ್ಮುಂದೆ 7 ಕೆಜಿ ಮೀರದ ಕೇವಲ 1 ಬ್ಯಾಗ್‌ಗೆ ಮಾತ್ರ ಅನುಮತಿ
ಬೆಂಗಳೂರು: ಕೆಲವು ದಿನಗಳ ಹಿಂದೆ ಸಿಎಂ ವಿರುದ್ಧ ವಾಗ್ದಾಳಿ ನಡೆಸಿದ್ದ ವಿರೋಧ ಪಕ್ಷದ ಉಪ ನಾಯಕ ಅರವಿಂದ್ ಬೆಲ್ಲದ್ (Arvind Bellad), ಈಗ ಸಿದ್ದರಾಮಯ್ಯರಿಗೆ (CM Siddaramaiah) ಪತ್ರ ಬರೆದು ಕ್ಷಮೆಯಾಚಿಸಿದ್ದಾರೆ.
ಧಾರವಾಡದಲ್ಲಿ ಮಾತನಾಡಿದ್ದ ಅವರು, ‘ಸಿದ್ದರಾಮಯ್ಯನವರದ್ದು ಏನು ಅಪ್ಪನ ಮನೆಯ ಆಸ್ತಿನಾ’ ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆ ವಿಚಾರವಾಗಿ ಸಿಎಂ ಸಿದ್ದರಾಮಯ್ಯನವರಿಗೆ ಅರವಿಂದ್ ಬೆಲ್ಲದ್ ಅವರು ಪತ್ರ ಬರೆದು ಕ್ಷಮೆ ಕೇಳಿದ್ದಾರೆ.
ತಾವು ಬಳಸಿದ ಪದ ನನಗೆ ಶೋಭೆ ತರುವುದಿಲ್ಲ ಎಂದು ಹೇಳಿದ್ದಕ್ಕೆ, ಈ ಹಿನ್ನಲೆಯಲ್ಲಿ ನಾನು ಕ್ಷಮೆ ಕೇಳುತ್ತೇನೆ ಎಂದು ಕ್ಷಮಾಪಣೆ ಪತ್ರದಲ್ಲಿ ಉಲ್ಲೇಖ ಮಾಡಿದ್ದಾರೆ.ಇದನ್ನೂ ಓದಿ: 9.99 ಲಕ್ಷಕ್ಕೆ ಟಾಟಾ ಕರ್ವ್ ಬಿಡುಗಡೆ
ಜಿಂದಾಲ್‌ಗೆ (Jindal) ಭೂಮಿ ಕೊಟ್ಟಿದ್ದಾರೆ. ಮಾರುಕಟ್ಟೆ ಮೌಲ್ಯದ ಒಂದು ಭಾಗಕ್ಕೆ ಬೆಲೆಬಾಳುವ ಸರ್ಕಾರಿ ಭೂಮಿಯನ್ನು ಮಾರಾಟ ಮಾಡಿದ್ದಾರೆ. ಈ ಮೂಲಕ ಇನ್ನೊಂದು ಹಗರಣವನ್ನು ಮಾಡುತ್ತಿದ್ದಾರೆ ಎಂದು ಸಿಎಂ ವಿರುದ್ಧ ಬೆಲ್ಲದ್ ಹರಿಹಾಯ್ದಿದ್ದರು.
ಸರ್ಕಾರವು ಕಡಿಮೆ ಬೆಲೆಗೆ ಮಾರಾಟ ಮಾಡುವ ಮೂಲಕ ಆಂತರಿಕ ಒಪ್ಪಂದವನ್ನು ಮಾಡಿಕೊಂಡು ಭೂಮಿಯನ್ನು ಲೂಟಿ ಮಾಡುತ್ತಿದೆ ಎಂದು ಹೇಳಿಕೆ ನೀಡುವ ಮೂಲಕ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದರು.
ಬೆಂಗಳೂರು: ಈ ಹಿಂದೆ ಜಿಂದಾಲ್‌ಗೆ (Jindal) ಭೂಮಿ ಕೊಡಲು ಕಾಂಗ್ರೆಸ್ಸಿಗರು ವಿರೋಧಿಸಿದ್ದರು. ಈಗ ಕೊಡುತ್ತಿದ್ದಾರೆ ಅಂದ್ರೆ ಕಾಂಗ್ರೆಸ್ಸಿಗರಿಗೂ, ಅವರ ಹೈಕಮಾಂಡಿಗೂ ದೊಡ್ಡ ಪ್ರಮಾಣದ ಮೊತ್ತ ಸಂದಾಯ ಆಗಿರಬಹುದು ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ (C T Ravi) ಸಂಶಯ ವ್ಯಕ್ತಪಡಿಸಿದ್ದಾರೆ.
ನಗರದ ಮಲ್ಲೇಶ್ವರ ಬಿಜೆಪಿ (BJP) ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜಿಂದಾಲ್ ಕಂಪನಿಗೆ ಸುಮಾರು 3,677 ಎಕರೆ ಭೂಮಿ ಕೊಡುವ ನಿರ್ಧಾರವನ್ನು ಪುನರ್ ಪರಿಶೀಲಿಸುವಂತೆ ಆಗ್ರಹಿಸಿದ್ದಾರೆ.ಇದನ್ನೂ ಓದಿ: ಐಸಿಸಿ ಮುಖ್ಯಸ್ಥರಾಗಿ ಜಯ್ ಶಾ ಅವಿರೋಧ ಆಯ್ಕೆ
ಬಿಜೆಪಿ ಆಡಳಿತದಲ್ಲಿ ಇದ್ದಾಗ ಈ ಪ್ರಸ್ತಾವನೆ ಬಂದಿತ್ತು. ನಾವೆಲ್ಲರೂ ಒಳಗಡೆಯೂ ವಿರೋಧ ಮಾಡಿದ್ದೆವು. ಕಾಂಗ್ರೆಸ್‌ನವರು (Congress) ಬಹಿರಂಗವಾಗಿ ಭೂ ಮಾರಾಟವನ್ನು ವಿರೋಧಿಸಿದ್ದರು. ಇದು ದೊಡ್ಡ ಪ್ರಮಾಣದ ಕಿಕ್‌ಬ್ಯಾಕ್ ಎಂದು ನಮ್ಮ ಮೇಲೆ ಕಾಂಗ್ರೆಸ್‌ನವರು ಆರೋಪಿಸಿದ್ದರು. ಒಂದು ಎಕರೆಗೆ 1.22 ಲಕ್ಷ ರೂ. ಕೊಡುವುದು ಎಂದರೇನು? ಎಂಬ ಮಾತನ್ನು ನಮ್ಮ ಮೇಲೆ ಆರೋಪಿಸಿದ್ದರು. ಆಗ ಆರೋಪಿಸಿದವರೇ ಭೂಮಿ ಕೊಟ್ಟಿದ್ದಾರೆ. ಹಾಗಿದ್ದರೆ ನೀವು ಎಷ್ಟು ಕಿಕ್‌ಬ್ಯಾಕ್ ಪಡೆದಿದ್ದೀರಿ ಎಂದು ಪ್ರಶ್ನಿಸಿದ್ದಾರೆ.
ಕೈಗಾರಿಕೆ ಖಾತೆ ಸಚಿವರು ಈ ಕುರಿತು ಬಿಜೆಪಿ (BJP) ಆಡಳಿತದಲ್ಲಿರುವಾಗಲೇ ನಿರ್ಧಾರ ಆಗಿತ್ತು ಎಂದಿದ್ದರು. ಮಾನ್ಯ ಎಂ.ಬಿ.ಪಾಟೀಲರೇ, (M B Patil) ನಮ್ಮ ಅವಧಿಯಲ್ಲಿ ಪ್ರಸ್ತಾಪ ಬಂದಿದ್ದು ನಿಜ. ನಮ್ಮಂಥ ಹಲವರು ವಿರೋಧಿಸಿದ್ದ ಕಾರಣಕ್ಕೆ ಪ್ರಸ್ತಾಪವನ್ನು ಅಲ್ಲಿಗೇ ಕೈಬಿಟ್ಟಿದ್ದೆವು. ನೀವ್ಯಾಕೆ ಅದನ್ನು ಮಾಡುತ್ತೀರಿ? ಬಿಜೆಪಿ ಕಂಡರೆ ಆಗದವರು ಬಿಜೆಪಿ ನಿರ್ಧಾರವನ್ನು ಯಾಕೆ ಮುಂದುವರೆಸಬೇಕು ಎಂದು ಕೆಣಕಿದ್ದಾರೆ.ಇದನ್ನೂ ಓದಿ: ತುಮಕೂರು ಜಿಲ್ಲೆಗೆ ಮೂರು ರೈಲ್ವೆ ಸೇತುವೆ ಮಂಜೂರು
ಹೂಡಿಕೆದಾರರು ಜನರಿಗೆ ಸೇವೆ ಮಾಡಲು ಬರುತ್ತಿಲ್ಲ..
ಹೆಚ್.ಕೆ.ಪಾಟೀಲರೇ (H K Patil) ಅವತ್ತು ಉದ್ದದ ಪತ್ರ ಬರೆದಿದ್ದಿರಿ. ಪತ್ರಿಕಾಗೋಷ್ಠಿ ಮಾಡಿದ್ದೀರಿ. ಈಗ ಕ್ಯಾಬಿನೆಟ್ ನಿರ್ಣಯವನ್ನು ಹೊರಗಡೆ ಬಂದು ಪತ್ರಿಕಾಗೋಷ್ಠಿ ಮಾಡಿ ನಿಮ್ಮ ಬಾಯಿಂದಲೇ ಹೇಳಿದ್ದೀರಿ ಎಂದಿರಿ. 90 ಸಾವಿರ ಕೋಟಿ ರೂ.ಗೂ ಹೆಚ್ಚು ಹೂಡಿಕೆ ಮಾಡಿ, 50 ಸಾವಿರ ಜನರಿಗೆ ಉದ್ಯೋಗ ಕೊಡಲಾಗಿದೆ ಎಂದು ಹೇಳಿದ್ದಾರೆ. ಜಿಂದಾಲ್ ಏನೂ ನಾನ್ ಪ್ರಾಫಿಟ್ ಆರ್ಗನೈಸೇಶನ್ ಅಲ್ಲ. ಅವರು ಕಂಪನಿ ನಡೆಸುತ್ತಿದ್ದಾರೆ. ಲಾಭದ ಲೆಕ್ಕಾಚಾರ ಹಾಕಿ ಹೂಡಿಕೆ ಮಾಡುತ್ತಾರೆ. ಜಿಂದಾಲ್ ಅಥವಾ ಇತರ ಕಂಪನಿಗಳು, ಹೂಡಿಕೆದಾರರು ಕರ್ನಾಟಕದ 7 ಕೋಟಿ ಜನರಿಗೆ ಸೇವೆ ಮಾಡಲು ಬರುತ್ತಿಲ್ಲ. ಅವರು ಲಾಭದ ಉದ್ದೇಶ ಇಟ್ಟುಕೊಂಡೇ ಹೂಡಿಕೆ ಮಾಡುತ್ತಾರೆ ಎಂದು ವಿಶ್ಲೇಷಿಸಿದ್ದಾರೆ.
ಜಿಂದಾಲ್ ಮತ್ತು ಕರ್ನಾಟಕ ಸರ್ಕಾರದ ನಡುವೆ ಯಾವ ಒಪ್ಪಂದ ಪತ್ರ ಆಗಿತ್ತು? ನಾವು ಕಡಿಮೆ ಬೆಲೆಗೆ ಜಮೀನು ಕೊಟ್ಟಿದ್ದೇವೆ. ಅಣೆಕಟ್ಟಿನಿಂದ ನೀರು ಕೊಡುತ್ತೇವೆ. ಪ್ರಾಕೃತಿಕ ಸಂಪನ್ಮೂಲ ತೆಗೆಯಲು ಅವಕಾಶ ನೀಡಿದ್ದೇವೆ. ಅವರು ಎಷ್ಟು ಉದ್ಯೋಗ ಸಿಗಲಿದೆ ಎಂದು ತೋರಿಸಿದ್ದರು? ಯಾವ ಭರವಸೆ ಕೊಟ್ಟಿದ್ದರು? ಈಗ ಎಷ್ಟು ಉದ್ಯೋಗ ಸೃಷ್ಟಿ ಆಗಿದೆ? ಉದ್ಯೋಗಿಗಳಲ್ಲಿ ಕರ್ನಾಟಕದವರು, ಕನ್ನಡಿಗರು ಎಷ್ಟು ಜನ ಎಂಬ ಬಗ್ಗೆ ಜಾಬ್ ಆಡಿಟ್ ಆಗಬೇಕು ಎಂದು ಒತ್ತಾಯಿಸಿದ್ದಾರೆ.
ಕೊಡುವ ಉದ್ದೇಶ ಇದ್ದರೆ ಇವತ್ತಿನ ಮಾರುಕಟ್ಟೆ ದರ ವಿಧಿಸಿ..
ಆವತ್ತು ಕಿಕ್‌ಬ್ಯಾಕ್ ಆರೋಪ ಮಾಡಿ, ಈಗ ನೀವು ಅನುಮತಿ ಕೊಟ್ಟ ಕಾರಣ ನೀವೆಷ್ಟು ಕಿಕ್‌ಬ್ಯಾಕ್ ಪಡೆದಿದ್ದೀರಿ ಎಂಬ ಸಂಶಯ ಬಂದೇ ಬರುತ್ತದೆ. ಇದರ ಜೊತೆಜೊತೆಗೇ ಯಾವತ್ತಿನದೋ ಮಾರುಕಟ್ಟೆ ದರ ಅಳವಡಿಸಿ, ಇವತ್ತು 1.22 ಲಕ್ಷ ರೂ. ನಿಗದಿ ಮಾಡಿದ್ದಾರೆ. ನಮ್ಮ ರಾಜ್ಯದಲ್ಲಿ ಯಾವ ಮೂಲೆಯಲ್ಲೂ ಈ ದರಕ್ಕೆ ಭೂಮಿ ಸಿಗುವುದಿಲ್ಲ. ಪ್ರತಿ ಎಕರೆ ಜಮೀನಿಗೆ ಕಡಿಮೆ ಎಂದರೂ 20-25 ಲಕ್ಷ ರೂ. ಬೆಲೆ ಇದೆ. ಹಾಗಿರುವಾಗ 1.22 ಲಕ್ಷ ರೂ. ನಿಗದಿ ಮಾಡಿದ್ದು ಸಮರ್ಥನೀಯವಲ್ಲ ಎಂದು ಆಕ್ಷೇಪಿಸಿದ್ದಾರೆ.ಇದನ್ನೂ ಓದಿ: ಹೆಚ್‌ಡಿಕೆ ವಿರುದ್ಧ ಪ್ರಾಸಿಕ್ಯೂಷನ್ ಅನುಮತಿಗೆ ಆಗ್ರಹ: ಆ.31 ರಂದು ರಾಜಭವನಕ್ಕೆ ಕಾಂಗ್ರೆಸ್ ಶಾಸಕರ ಪರೇಡ್
ಕೊಡುವ ಉದ್ದೇಶ ಇದ್ದರೆ ಇವತ್ತಿನ ಮಾರುಕಟ್ಟೆ ದರದಲ್ಲಿ ಕೊಡಬೇಕು. ಅಲ್ಲಿರುವ ಅದಿರು ನಿಕ್ಷೇಪಗಳ ಮೇಲೆ ಸರ್ಕಾರದ ಹಕ್ಕು ಎಂದು ಷರತ್ತಿನೊಂದಿಗೆ ಕೊಡಬೇಕು. ಹಾಗಾಗಿ ನಿರ್ಧಾರವನ್ನು ಪುನರ್ ಪರಿಶೀಲನೆ ಮಾಡಬೇಕೆಂದು ತಿಳಿಸಿದ್ದಾರೆ.
ಮೈಸೂರು: ಕೆಂಪಣ್ಣ ವರದಿ ಬಿಡುಗಡೆಯಾದ್ರೆ ಸಿಎಂ(Siddaramaiah) ಪಂಚೆ ಶರ್ಟು ಎಲ್ಲಾ ಮಸಿ ಆಗೋದು ಗ್ಯಾರಂಟಿ ಎಂದು ವಿಧಾನ ಪರಿಷತ್ ಸದಸ್ಯ ಅಡಗೂರು ಹೆಚ್.ವಿಶ್ವನಾಥ್ (H Vishwanath) ಟಾಂಗ್ ಕೊಟ್ಟಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮುಡಾ ಹಗರಣದ (MUDA Scam) ಕುರಿತು ಮಾತನಾಡಿದ ಅವರು, ಸುರೇಶ್ ಮಿನಿಸ್ಟರ್ ಫೈಲ್ ಎಲ್ಲವನ್ನೂ ಹೆಲಿಕಾಪ್ಟರ್‌ನಲ್ಲಿ ಬಂದು ತಗೆದುಕೊಂಡು ಹೋಗಿದ್ದಾರೆ. ಮುಡಾಗೆ ಇಷ್ಟೊಂದು ಸೆಕ್ಯುರಿಟಿ ಯಾಕೆ? ಮುಡಾಗೆ ಪ್ರತಿ ತಿಂಗಳು 5 ಕೋಟಿ ಸಂಬಳ ಖರ್ಚು ವೆಚ್ಚಕ್ಕೆ ಬೇಕು. ಎರಡು ತಿಂಗಳಿಂದ 10 ಕೋಟಿ ಖರ್ಚಾಗಿದೆ. ಕೆಲಸ ಏನೂ ಮುಡಾದಿಂದ ನಡೆಯುತ್ತಿಲ್ಲ. ಮುಡಾ ಹಗರಣಕ್ಕಾಗಿ ಒನ್ ಮ್ಯಾನ್ ಕಮಿಷನ್ ಮಾಡಿದ್ದೀರಿ. ಒನ್ ಮ್ಯಾನ್ ಕಮಿಷನ್ ಕುಮಾರಕೃಪದಿಂದ ಆಪರೇಟ್ ಆಗ್ತಾ ಇದೆ. ಒನ್ ಮ್ಯಾನ್ ಕಮಿಷನ್‌ಗಾಗಿಯೇ ಮೇಜು, ಕುರ್ಚಿ ಅಂತಾ 1.5 ಕೋಟಿ ಖರ್ಚು ಆಗಿದೆ. ರೀಡು ವಿಚಾರದಲ್ಲಿ ಕೆಂಪಣ್ಣ ಆಯೋಗದ ವರದಿ ಬಿಡುಗಡೆ ಮಾಡಿ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: Tamil Nadu | ಪ್ರೀತಿಗೆ ಪೋಷಕರ ವಿರೋಧ – ನೇಣಿಗೆ ಶರಣಾದ ಪ್ರೇಮಿಗಳು
3,667 ಎಕರೆ ಗಣಿ ಭೂಮಿಯನ್ನ ಎಕರೆಗೆ 1.15 ಲಕ್ಷ ಮಾರಾಟ ಮಾಡಿದ್ದಾರೆ. ಆ ಭೂಮಿಯಲ್ಲಿ ಬೆಲೆ ಬಾಳುವ ಐರನ್, ಮಿನರಲ್ಸ್, ಕಂಟೆಂಟ್ ಇದೆ. ಬೆಸ್ಟ್ ಓರಲ್ಸ್ ಸಿಗುವ 62% ಈಲ್ಡ್ ಬರುವ ಭೂಮಿಯನ್ನ ಜಿಂದಾಲ್ (Naveen Jindal) ಅವರಿಗೆ ಏಕಪಕ್ಷೀಯವಾಗಿ ಮಾರಾಟ ಮಾಡಿದ್ದಾರೆ. ಈ ಭೂಮಿಗೆ ಯಾವುದೇ ಬೆಲೆ ಕಟ್ಟೋದಕ್ಕೆ ಆಗುವುದಿಲ್ಲ. 2017ರಲ್ಲಿ ಲಾ ಡಿಪಾರ್ಟ್ಮೆಂಟ್ ಭೂಮಿಯ ಬೆಲೆ, ಒಳಗೆ ಇರುವ ಅದಿರು ಪ್ರಮಾಣ ನೋಡಿ ಮಾರಾಟ ಮಾಡಬೇಕು ಎಂದು ವರದಿ ನೀಡಿತ್ತು. ಅನುಕೂಲಕ್ಕೆ ತಕ್ಕಂತೆ ಸರ್ಕಾರದ ಭೂಮಿಯನ್ನು ಪರಭಾರೆ ಮಾಡಿದ್ದಾರೆ. ಇದೊಂದು ಜನವಿರೋಧಿ ನೀತಿ ಈ ಬಗ್ಗೆ ಸಿಎಂ ಮಾತನಾಡಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: Exclusive Video | ಸೆಂಟ್ರಲ್ ಜೈಲಲ್ಲಿ ಕೊಲೆ ಆರೋಪಿ ದರ್ಶನ್ ಬಿಂದಾಸ್?
ಇದರಿಂದ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ರೂಪಾಯಿ ನಷ್ಟ ಆಗುತ್ತದೆ. ಒಟ್ಟಾರೆ ಭೂಮಿಯ ಬೆಲೆ 52 ಕೋಟಿಗಳಿಗೆ ಮಾರಾಟ ಮಾಡಿದ್ದಾರೆ. ಇವರು ತಮ್ಮ 14 ಸೈಟ್‌ಗೆ 62 ಕೋಟಿ ಕೇಳುತ್ತಾರೆ. ಈ ಭೂಮಿಯನ್ನು ಒಟ್ಟಾರೆ 52 ಕೋಟಿಗೆ ಮಾರಾಟ ಮಾಡಿದ್ದಾರೆ. ಇದ್ಯಾವ ನ್ಯಾಯ ಎಂದು ಪ್ರಶ್ನಿಸಿದರು. ಇದು ಹಲವಾರು ಸಂಶಯಕ್ಕೆ ಎಡೆಮಾಡಿಕೊಟ್ಟಿದೆ. ಇದನ್ನ ಕ್ಯಾಬಿನೆಟ್ ಜಾಯಿಂಟ್ ಸೆಲೆಕ್ಟ್ ಕಮಿಟಿಗೆ ಮುಂದಿಡಲು ನಾನು ಹೇಳಿದ್ದೇನೆ. ಈ ವಿಚಾರದಲ್ಲಿ ತರಾತುರಿ ಬೇಡ. ಸರ್ಕಾರದ, ಜನರ ಆಸ್ತಿ, ಇದನ್ನು ಜಾಯಿಂಟ್ ಸೆಲೆಕ್ಟ್ ಕಮಿಟಿ ಮುಂದಿಟ್ಟು ತೀರ್ಮಾನ ತೆಗೆದುಕೊಳ್ಳಬೇಕು ಎಂದು ಹೇಳಿಕೆ ನೀಡಿದರು. ಇದನ್ನೂ ಓದಿ: ದೋಸ್ತಿಗಳಿಂದ ರಾಜಭವನ ದುರುಪಯೋಗ ಹೈಕಮಾಂಡ್‍ಗೆ ಅರ್ಥವಾಗಿದೆ: ಹೆಚ್.ಸಿ.ಮಹಾದೇವಪ್ಪ
ನವದೆಹಲಿ: ಸ್ಪರ್ಧಾತ್ಮಕ ವಲಯದಲ್ಲಿ ನಾವು ಸ್ಪರ್ಧಿಸಬೇಕಾಗುತ್ತದೆ. ಇಲ್ಲದಿದ್ದರೆ ಕಂಪನಿಗಳು ಬೇರೆ ರಾಜ್ಯಕ್ಕೆ ಹೋಗುತ್ತವೆ ಎಂದು ಗೃಹ ಸಚಿವ ಪರಮೇಶ್ವರ್ (Parameshwar) ಅವರು ಜಿಂದಾಲ್ ಕಂಪನಿಗೆ (Jindal Company) ಭೂಮಿ ನೀಡಿದ್ದನ್ನು ಸಮರ್ಥಿಸಿಕೊಂಡಿದ್ದಾರೆ.
ಜಿಂದಾಲ್‌ಗೆ 3,667 ಎಕರೆ ಭೂಮಿ ನೀಡಲು ಕ್ಯಾಬಿನೆಟ್ ಒಪ್ಪಿಗೆ ನೀಡಿದ್ದಕ್ಕೆ ಕೇಳಲಾದ ಪ್ರಶ್ನೆಗೆ, ಓಲಾ, ಕಿಯಾ ಬೇರೆ ಕಡೆಗೆ ಹೋಗಿವೆ. ಹೀಗಾಗಿ ಕಂಪನಿಗಳನ್ನು ಆಕರ್ಷಿಸಲು ಭೂಮಿ ನೀಡಲಾಗಿದೆ. ಬಿಜೆಪಿ ಅವಧಿಯಲ್ಲಿ ನಮ್ಮನ್ನು ವಿಶ್ವಾಸಕ್ಕೆ ಪಡೆಯಲಿಲ್ಲ. ಹೀಗಾಗಿ ನಾವು ವಿರೋಧ ಮಾಡಿದ್ದೆವು. ಈಗ ರಾಜ್ಯದ ಹಿತದೃಷ್ಟಿಯಿಂದ ನಾವು ನಿರ್ಧಾರ ಕೈಗೊಂಡಿದ್ದೇವೆ ಎಂದು ಹೇಳಿದರು. ಇದನ್ನೂ ಓದಿ: ಪುಣೆಯಲ್ಲಿ ಖಾಸಗಿ ಹೆಲಿಕಾಪ್ಟರ್ ಪತನ – ನಾಲ್ವರ ಪೈಕಿ, ಮೂವರ ಸ್ಥಿತಿ ಗಂಭೀರ
ಶುಕ್ರವಾರ ಹೈಕಮಾಂಡ್ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಕರೆಸಿ ಮಾತನಾಡಿದ್ದಾರೆ. ಆ.29 ರಂದು ಬರುವ ತೀರ್ಪಿನ ಬಳಿಕದ ನಿರ್ಧಾರದ ಬಗ್ಗೆ ಚರ್ಚೆ ಮಾಡುತ್ತೇವೆ. ನಾವು ಕಾನೂನು ಪ್ರಕಾರವಾಗಿಯೇ ಹೋರಾಟ ಮಾಡುತ್ತಿದ್ದೇವೆ ಎಂದರು.
ಗ್ಯಾರಂಟಿಗಳ ಸಕ್ಸಸ್ ಬಗ್ಗೆ ಬಿಜೆಪಿ ಮತ್ತು ಜೆಡಿಎಸ್ ಹೆದರಿದೆ. ಜೊತೆಗೆ ಸರ್ಕಾರ ಅಸ್ಥಿರಗೊಳಿಸುವ ಬಗ್ಗೆ ಪ್ರಯತ್ನ ಆಗುತ್ತಿದೆ. ಕೇಂದ್ರದ ಸಹಕಾರ ಪಡೆದು ಸರಕಾರ ಕೆಡುವ ಪ್ರಯತ್ನ ನಡೆಯುತ್ತಿದ್ದು ರಾಜ್ಯಪಾಲರ ಮೂಲಕ ಒತ್ತಡ ಹಾಕಲಾಗುತ್ತಿದೆ.
ಬೆಂಗಳೂರು: ರಾಜ್ಯಪಾಲರಿಂದ ಬಿಲ್‌ಗಳು ವಾಪಸ್ ಕಳುಹಿಸಿರುವುದನ್ನ ನೋಡಿದರೆ ನಮ್ಮ ಸರ್ಕಾರದ ವಿರುದ್ಧವಾಗಿ ರಾಜ್ಯಪಾಲರು ಇದ್ದಾರೆ ಅನ್ನೋದು ಸ್ಪಷ್ಟ ಎಂದು ಗೃಹ ಸಚಿವ ಜಿ.ಪರಮೇಶ್ವರ್ (G Parameshwar) ಹೇಳಿದ್ದಾರೆ.
ಬೆಂಗಳೂರಿನಲ್ಲಿ (Bengaluru) ಮಾಧ್ಯಮಗಳ ಮುಂದೆ ಮಾತನಾಡಿದ ಅವರು, ಸ್ವಾಭಾವಿಕವಾಗಿ ಸರ್ಕಾರ ಮತ್ತು ರಾಜ್ಯಪಾಲರಿಗೆ (Governor) ಹೊಂದಾಣಿಕೆ ಇಲ್ಲದಿದ್ದರೆ ಇಂತಹ ಬೆಳವಣಿಗೆ ನಡೆಯುತ್ತೆ. ಒಂದೆರಡು ಬಿಲ್ ಸ್ಪಷ್ಟೀಕರಣ ಕೇಳಿದ್ದು ಬಿಟ್ಟರೆ ಹೀಗೆ ಬಲ್ಕ್ ಆಗಿ ವಾಪಸ್ ಕಳಿಸಿರಲಿಲ್ಲ. ಸಾಮಾನ್ಯ ಬಿಲ್ ಕೂಡ ವಾಪಸ್ ಕಳಿಸಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಇದನ್ನೂ ಓದಿ: ಚಾಕುವಿನಿಂದ ಇರಿದು ಪತ್ನಿ ಕೊಲೆ – ಟೆರೇಸ್‌ನಿಂದ ಬಿದ್ದಳು ಎಂದು ಕಥೆ ಕಟ್ಟಿದ ಪತಿ
ಇನ್ನೊಂದೆಡೆ ಜಿಂದಾಲ್‌ಗೆ ಭೂಮಿ ಕೊಡುವ ವಿಚಾರವಾಗಿ ಹಿಂದೆ ನಾವು ವಿರೋಧ ಮಾಡಿದ್ದು ನಿಜ. ಕೆಲವು ಪ್ರಶ್ನೆಗಳನ್ನ ನಾವು ಕೇಳಿದ್ದೆವು. ಆದರೆ ಈಗ ಅದಕ್ಕೆ ಸ್ಪಷ್ಟೀಕರಣ ಕೂಡ ಸಿಕ್ಕಿದೆ ಎಂದು ಸಚಿವರು ಹೇಳಿದರು. ಜಿಂದಾಲ್‌ಗೆ ಭೂಮಿ ನೀಡುವ ವಿಚಾರವಾಗಿ ಕೋರ್ಟ್ ಕೂಡ ಆದೇಶ ಮಾಡಿದೆ. ಬೆಲೆಯಲ್ಲೂ ಕೂಡ ಒಂದಿಷ್ಟು ಸ್ಪಷ್ಟತೆ ಸಿಕ್ಕಿದೆ. ಗ್ಲೋಬಲ್ ಇನ್ವೆಸ್ಟರ್ ಮಾಡುತ್ತೇವೆ. ಪ್ರಪಂಚದಾದ್ಯಂತ ಇದರಲ್ಲಿ ಭಾಗಿಯಾಗುತ್ತಾ ಇದ್ದಾರೆ. ನೀರು, ಜಾಗ, ವಿದ್ಯುತ್ ಹೀಗೆ ಒಂದಿಷ್ಟು ವಿನಾಯಿತಿ ಅವರಿಗೆ ಇರುತ್ತದೆ. ಇರುವವರನ್ನು ಉಳಿಸಿಕೊಂಡು ಹೊಸಬರನ್ನೂ ತರಬೇಕಾಗಿದೆ. ನಾವು ಒಂದಿಷ್ಟು ಪ್ರೊತ್ಸಾಹ ಕೊಡದಿದ್ದರೆ ಹೇಗೆ, ಪ್ರೋತ್ಸಾಹ ಕೊಡದಿದ್ದರೆ ರಾಜ್ಯ ಬಿಟ್ಟು ಹೋಗುತ್ತಾರೆ ಎಂದರು. ಇದನ್ನೂ ಓದಿ: ಅಜ್ಮೀರ್ ಯಾತ್ರೆಗೆ ತೆರಳಿದ್ದ ಒಂದೇ ಕುಟುಂಬದ ನಾಲ್ವರು ನಾಪತ್ತೆ
ಬಳ್ಳಾರಿ: ನಾನು ಕರ್ನಾಟಕದ ಜನರ ಸೇವೆ ಮಾಡುವ, ಜನರ ಹಿತ ಕಾಯುವ ನಿಯತ್ತಿನ ನಾಯಿ ಎಂದು ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಹೇಳುವ ಮೂಲಕ ಮಾಜಿ ಸಿಎಂ ಸಿದ್ದರಾಮಯ್ಯನವರಿಗೆ ತಿರುಗೇಟು ನೀಡಿದ್ದಾರೆ.
ನಿಯತ್ತಿನ ಪಾಠ ಹೇಳಿದ ಸಿಎಂ: ಇವತ್ತು ಪ್ರಾಮಾಣಿಕವಾಗಿ, ನಿಯತ್ತಾಗಿ ಕೆಲಸ ಮಾಡುವ ಅವಶ್ಯಕತೆಯಿದೆ. ಅದಕ್ಕೆ ಅನ್ವಯವಾಗುವಂತೆ ಹಲವು ಪ್ರಾಣಿಗಳನ್ನ ನೋಡಿದ್ದೇವೆ. ಒಂದೊಂದು ಪ್ರಾಣಿಗಳಲ್ಲೂ ಒಂದೊಂದು ಗುಣವನ್ನ ಕಂಡುಕೊಂಡಿದ್ದೇವೆ. ಉದಾಹರಣೆಗೆ ನಾಯಿ (Dog). ನಾಯಿ ಅತ್ಯಂತ ನಿಯತ್ತಿನ ಪ್ರಾಣಿ. ತನ್ನ ಸಾಕುವ ಮಾಲೀಕನಿಗೆ ನಿಯತ್ತಾಗಿರುತ್ತೆ. ಮನೆಯ ಯಜಮಾನನ ಕಡೆಯವರು ಬಂದ್ರೆ ಬಾಲ ಅಲ್ಲಾಡಿಸುತ್ತೆ. ಆದ್ರೆ ಮನೆಗೆ ಕನ್ನ ಹಾಕುವರು, ಕಳ್ಳರು ಬಂದ್ರೆ ಯಾವುದೇ ಕಾರಣಕ್ಕೂ ಬಿಡಲ್ಲ ಎಂದು ನಿಯತ್ತಿನ ಪಾಠ ಹೇಳಿದ್ದಾರೆ.
ನಾನು ನಿಯತ್ತಿನ ನಾಯಿ, ತೋಳ ಅಲ್ಲ: ಇವತ್ತು ನಾನು ಕರ್ನಾಟಕದ ಜನತೆಯ ಸೇವೆ ಮಾಡುವ ನಿಯತ್ತಿನ ನಾಯಿ, ಜನರ ಹಿತ ಕಾಯುವ ನಿಯತ್ತಿನ ನಾಯಿ ಎಂದು ಹೇಳಿಕೊಳ್ಳಲು ಇಚ್ಚಿಸುತ್ತೇನೆ. ಕಳ್ಳತನ ಮಾಡಲು ಬಂದವರನ್ನ ಒಳಗಡೆ ಬಿಡದ ನಾಯಿಯೇ ಹೊರತು ಅಧಿಕಾರ ಸಿಕ್ಕಿದೆ ಅಂತಾ ಜನರನ್ನು ತಿನ್ನುವ ತೋಳ ಅಲ್ಲ. ಕೆಲವು ತೋಳಗಳು ನಮ್ಮ ನಡುವೆಯೇ ಇವೆ. ನಾಯಿ ವೇಷದಲ್ಲಿ ತೋಳಗಳೂ ಇವೆ. ಅವು ಯಾವೆಂದು ಜನರಿಗೆ ಗೊತ್ತಿದೆ ಎಂದು ಪ್ರತಿಪಕ್ಷಗಳ ಟೀಕೆಗೆ ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ಕೆಂಪೇಗೌಡ ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿ ನನ್ನ ಶರ್ಟ್ ತೆಗೆದು ನಿಲ್ಲಿಸಿದ್ದಾರೆ: ಯುವತಿಯ ಆರೋಪ
ಇದೇ ವೇಳೆ ಬಳ್ಳಾರಿ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಮಾತನಾಡಿದ ಸಿಎಂ, ಜಿಲ್ಲೆಯ ಅಭಿವೃದ್ಧಿ ವೇಗವಾಗಿ ಸಾಗುತ್ತಿದೆ. ಇನ್ನೂ ಹೆಚ್ಚಿನ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ. ಜಿಂದಾಲ್ ಸಂಸ್ಥೆ (Jindal Steel Power) ಸಹಯೋಗದಲ್ಲಿ 400 ಹಾಸಿಗೆಗಳ ಆಸ್ಪತ್ರೆ ನಿರ್ಮಾಣ ಆಗುತ್ತಿದೆ. ಅಲ್ಲದೆ, ಬಳ್ಳಾರಿ (Bellary) ಹಾಗೂ ರಾಯಚೂರು (Raichur) ಭಾಗದಲ್ಲಿ ಅಪೌಷ್ಟಿಕತೆ ಸಮಸ್ಯೆ ಕಾಡುತ್ತಿರುವುದು ಗಮನಕ್ಕೆ ಬಂದಿದೆ. ಮಕ್ಕಳ ಅಪೌಷ್ಟಿಕತೆ ನಿವಾರಣೆ ಮಾಡಲು ಸರ್ಕಾರ ಯೋಜನೆ ರೂಪಿಸಿದ್ದು, ಪೌಷ್ಟಿಕ ಆಹಾರವನ್ನು ಸರ್ಕಾರವೇ ಕೊಡುತ್ತಿದೆ ಎಂದು ಅಭಯ ನೀಡಿದ್ದಾರೆ.
ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) `ನಾಯಿ ಮರಿ’ ಪದ ಬಳಸಿ ಟೀಕೆ ಮಾಡಿದ್ದ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಸಿಎಂ, ಅದಕ್ಕೆ ಜನರೇ ತಕ್ಕ ಉತ್ತರ ಕೊಡ್ತಾರೆ. ಆ ಹೇಳಿಕೆ ಸಿದ್ದರಾಮಯ್ಯ ಅವರ ವ್ಯಕ್ತಿತ್ವ ತೋರಿಸುತ್ತದೆ. ನಾಯಿ ನಿಯತ್ತಿನ ಪ್ರಾಣಿ. ನಾನು ಜನರಿಗೆ ನಿಯತ್ತಾಗಿ ಕೆಲಸ ಮಾಡುತ್ತಿರುವೆ. ಜನರ ಪರವಾಗಿಯೇ ನಿಯತ್ತನ್ನ ಉಳಿಸಿಕೊಂಡು ಹೋಗುವೆ. ಅವರಂತೆ ಸಮಾಜ ಒಡೆಯುವ ಕೆಲಸ ಮಾಡಲ್ಲ. ಸೌಭಾಗ್ಯ ಕೊಡುತ್ತೇವೆ ಅಂತಾ ದೌರ್ಭಾಗ್ಯ ಕೊಟ್ಟಿಲ್ಲ. ಸುಳ್ಳು ಹೇಳೋ ಕೆಲಸ ಮಾಡಲ್ಲ. ಬೇಕಿದ್ರೆ ಸಿದ್ದರಾಮಯ್ಯ ಬಹಿರಂಗ ಚರ್ಚೆಗೆ ಬರಲಿ ಎಂದು ಸವಾಲ್ ಹಾಕಿದ್ದಾರೆ.
ಬೆಳಗಾವಿಯಲ್ಲಿ (Belagavi Session) 15 ದಿನ ಸದನ ನಡೆಯಿತು. ಅಲ್ಲಿ ಚರ್ಚೆ ಮಾಡಲ್ಲ. ಅದಕ್ಕಿಂತಾ ಪವಿತ್ರ ವೇದಿಕೆ ಬೇಕಿತ್ತಾ? ಅಲ್ಲಿ ಏನೂ ಮಾತನಾಡದೇ ಹೊರಗೆ ರಾಜಕೀಯವಾಗಿ ಹೇಳಿಕೆ ನೀಡುತ್ತಾರೆ.
Live Tv
[brid partner=56869869 player=32851 video=960834 autoplay=true]
ಬೆಂಗಳೂರು: ಜಿಂದಾಲ್ ಸಂಸ್ಥೆಗೆ 3,667 ಎಕರೆ ಜಮೀನು ಪರಭಾರೆ ವಿಚಾರವಾಗಿ ಹೈಕೋರ್ಟ್ ಚಾಟಿ ಬೀಸಿದೆ. ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಳ್ಳದೇ ಸರ್ಕಾರ ಆದೇಶ ನೀಡಿದ್ಯಾ ಎಂದು ಪ್ರಶ್ನಿಸಿ ಇದು ಎತ್ತಿನ ಮುಂದೆ ಚಕ್ಕಡಿ (ಎತ್ತಿನ ಗಾಡಿ) ಹೂಡಿದ ಹಾಗೆ ಎಂದು ಕರ್ನಾಟಕ ಹೈಕೋರ್ಟ್ ವಿಭಾಗೀಯ ಪೀಠ ಅಭಿಪ್ರಾಯ ಪಟ್ಟಿದೆ.
ಸರ್ಕಾರದ ನಿರ್ಧಾರ ಪ್ರಶ್ನಿಸಿ ಸಲ್ಲಿಸಲಾಗಿದ್ದ ಪಿಐಎಲ್ ವಿಚಾರಣೆ ಹೈಕೋರ್ಟ್ ಮುಖ್ಯ ವಿಭಾಗೀಯ ಪೀಠದಲ್ಲಿ ವಿಚಾರಣೆ ನಡೆಯಿತು. ಜಿಂದಾಲ್ ಕಂಪನಿಗೆ 3,667 ಎಕರೆ ಭೂಮಿ ವರ್ಗಾವಣೆ/ಮಾರಾಟ ವಿಚಾರವಾಗಿ ವಾಸ್ತವಾಂಶವನ್ನು ಬಹಿರಂಗಪಡಿಸುವಂತೆ ರಾಜ್ಯ ಸರ್ಕಾರಕ್ಕೆ ಕೋರ್ಟ್ ನಿರ್ದೇಶನ ನೀಡಿದೆ.
ಸಾಮಾಜಿಕ ಕಾರ್ಯಕರ್ತ ಕೆಎ ಪೌಲ್ ಸಲ್ಲಿಸಿದ್ದ ಪಿಐಎಲ್ ವಿಚಾರಣೆ ನಡೆಸಿದ ಸಿಜೆ ಎ.ಎಸ್ ಓಕಾ ಮತ್ತು ನ್ಯಾ. ಸೂರಜ್ ಗೋವಿಂದರಾಜ್ ನೇತೃತ್ವದ ವಿಭಾಗೀಯ ಪೀಠ, ಸಂಪುಟ ಸಭೆ ಒಪ್ಪಿಗೆ ಪಡೆಯದೇ ಮೇ 6 ರಂದು ಸರ್ಕಾರಿ ಆದೇಶ ಹೊರಡಿಸಲಾಗಿದೆಯೇ? ಈ ಸಂಬಂಧ ಮಾಹಿತಿ ಪಡೆದುಕೊಳ್ಳುವಂತೆ ರಾಜ್ಯ ಸರ್ಕಾರದ ವಕೀಲರಿಗೆ ನಿರ್ದೇಶನ ನೀಡಿದೆ.
ಸಂಪುಟದ ಒಪ್ಪಿಗೆ ಇಲ್ಲದೆ ಸರ್ಕಾರಿ ಆದೇಶ ಹೊರಡಿಸಿದ್ದು ಹೇಗೆ?. ಮೇ 6ರ ಸರ್ಕಾರಿ ಆದೇಶದ ಪ್ರತಿ ಹಾಗೂ ಜೂನ್ 15 ರ ಆದೇಶ ಕಾರ್ಯರೂಪ ಮೆಮೋ, ಸಂಪುಟದ ಒಪ್ಪಿಗೆ ಇಲ್ಲದೇ ಜಾರಿ ಮಾಡಿದ ಆದೇಶದ ಕುರಿತು ನಿರ್ದಿಷ್ಟವಾಗಿ ಸರ್ಕಾರಿ ವಕೀಲರು ಮಾಹಿತಿ ಪಡೆದುಕೊಳ್ಳಬೇಕು. ಸಂಪುಟದ ಒಪ್ಪಿಗೆ ಇಲ್ಲದಿದ್ದರೂ ಸರ್ಕಾರಿ ಆಸ್ತಿಯ ಮಾರಾಟ/ವರ್ಗಾವಣೆ ಆದೇಶ ಹೊರಡಿಸಬಹುದೇ? ಎಂಬುದರ ಬಗ್ಗೆ ಸರ್ಕಾರಿ ವಕೀಲರು ಮಾಹಿತಿ ಪಡೆದುಕೊಳ್ಳಬೇಕು ಎಂದು ಸೂಚಿಸಿದ ಕೋರ್ಟ್ ಜುಲೈ 16ಕ್ಕೆ ಅರ್ಜಿ ವಿಚಾರಣೆಯನ್ನು ಮುಂದೂಡಿದೆ. ಇದನ್ನೂ ಓದಿ: ಜಿಂದಾಲ್‍ಗೆ 3,667 ಎಕರೆ ಪರಭಾರೆ ಆದೇಶ ವಾಪಸ್ – ಕ್ಯಾಬಿನೆಟ್‍ನಲ್ಲಿ ಏನಾಯ್ತು?
ಸಂಪುಟದ ಹಲವು ಸಚಿವರ ವಿರೋಧದ ಹೊರತಾಗಿ ಪರಭಾರೆ ಮಾಡಲಾಗಿದೆ. ಅತ್ಯಂತ ಕಡಿಮೆ ದರಕ್ಕೆ ಭೂಮಿ ಪರಭಾರೆ ಮಾಡುವ ಪ್ರಸ್ತಾವನೆ ಸರ್ಕಾರ ಮಂಡಿಸಿತ್ತು ಎಂದು ಅರ್ಜಿದಾರರ ಪರ ವಕೀಲರು ವಾದಿಸಿದ್ದರು.
ಕಳೆದ ವಿಚಾರಣೆ ವೇಳೆ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜೂನ್.14ರಂದು ಬರೆದಿರುವ ಪತ್ರದ ಜೊತೆಗೆ ಅನುಪಾಲನಾ ಮೆಮೊವನ್ನು ಸಲ್ಲಿಸಿದ್ದರು. ಅದರಲ್ಲಿ ಸರ್ಕಾರ ಏಪ್ರಿಲ್ 26ರ ಸಂಪುಟ ಸಭೆಯಲ್ಲಿ ಜೆಎಸ್‍ಡಬ್ಲ್ಯು ಲಿಮಿಟೆಡ್‍ಗೆ ಕ್ರಮವಾಗಿ 2000.58 ಎಕರೆ ಮತ್ತು 1666.73 ಎಕರೆ ಭೂಮಿ ಪರಭಾರೆ ಮಾಡುವ ನಿರ್ಧಾರ ಕೈಗೊಳ್ಳಲಾಗಿತ್ತು. ಆದರೆ ಬಳಿಕ ನಡೆದ ಸಭೆಗಳಲ್ಲಿ ನಿರ್ಧಾರ ಫೈನಲ್ ಆಗಿರಲಿಲ್ಲ ಎಂದು ಉಲ್ಲೇಖ ಮಾಡಲಾಗಿತ್ತು. ಈ ವೇಳೆ ವಿಧಾನ ಪರಿಷತ್ ಮಾಜಿ ಸದಸ್ಯ ಪ್ರೊ. ಕೆ ಇ ರಾಧಾಕೃಷ್ಣರನ್ನು ಪಿಐಎಲ್‍ನಲ್ಲಿ ಸಹ ಅರ್ಜಿದಾರರನ್ನಾಗಿ ಸೇರಿಸಲು ಒಪ್ಪಿಗೆ ಕೊಟ್ಟಿತ್ತು.
ವಿಜಯಪುರ: ಅರುಣ್ ಸಿಂಗ್ ರಾಜ್ಯಕ್ಕೆ ಬಂದು ಹೋದ ನಂತರ ಬಿಜೆಪಿ ರೆಬೆಲ್ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮೌನಕ್ಕೆ ಶರಣಾಗಿದ್ದಾರೆ. ಇತ್ತೀಚೆಗೆ ಮಾಧ್ಯಮಗಳಿಂದ ಕೂಡ ದೂರ ಉಳಿದಿರೋ ಯತ್ನಾಳ್ ಮೊನ್ನೆ ಮಾಧ್ಯಮಗಳಿಗೆ ವಿಕ್ಟರಿ ಸಿಂಬಲ್ ತೋರಿಸಿ ಪ್ರತಿಕ್ರಿಯೆ ಕೊಡದೆ ತೆರಳಿದ್ದರು.
ಇದೀಗ ಮತ್ತೆ ಯತ್ನಾಳ್ ಸಿಎಂ ವಿರುದ್ಧ ಪರೋಕ್ಷ ಸಮರ ಶುರು ಮಾಡಿದ್ದಾರೆ. 500 ಎಕರೆ ಜಮೀನು ಮಂಜೂರಿ ಮಾಡುವಂತೆ ಸಿಎಂಗೆ ಪತ್ರ ಬರೆದಿದ್ದಾರೆ. ವಿಜಯಪುರದ ಸಿದ್ದೇಶ್ವರ ಸಂಸ್ಥೆಯಿಂದ ಗೋಶಾಲೆ ತೆರೆಯಲು ಜಮೀನು ಅವಶ್ಯಕತೆ ಇದೆ. ಜಿಂದಾಲ್‍ಗೆ ಜಮೀನು ಮಂಜೂರು ಮಾಡಿಕೊಟ್ಟ ಹಾಗೆ ನಮಗೂ ಜಮೀನು ಮಂಜೂರು ಮಾಡಿಕೊಡಿ ಎಂದು ಪತ್ರ ಬರೆದಿದ್ದಾರೆ. ಇದನ್ನೂ ಓದಿ: ಮೂವರನ್ನ ತೆಗೆದ್ರೆ ಬಿಎಸ್‍ವೈ ರಾಜೀನಾಮೆ ಕೊಡಬೇಕಾಗುತ್ತೆ: ಯತ್ನಾಳ್
ಸಿದ್ದೇಶ್ವರ ಸಂಸ್ಥೆಯ ಅಧ್ಯಕ್ಷರಾಗಿರುವ ಯತ್ನಾಳ್, ಜಿಂದಾಲ್ ಕಂಪನಿಗೆ ಒಂದೂವರೆ ಲಕ್ಷಕ್ಕೆ 1 ಎಕರೆ ಜಮೀನು ಮಂಜೂರು ಮಾಡಲಾಗಿದೆ. ಹಾಗೆ ನಾವು ಪ್ರತಿ ಎಕರೆಗೆ 2 ಲಕ್ಷ ರೂಪಾಯಿ ಹಣ ಪಾವತಿಸುತ್ತೇವೆ. ಜಿಂದಾಲ್ ಗೆ ಅನ್ವಯಿಸಿರೋ ಷರತ್ತುಗಳಂತೆ ನಮಗೂ ಭೂಮಿ ಮಂಜೂರು ಮಾಡಿ. ನಾವು ಗೋರಕ್ಷಣೆಗಾಗಿ ಭೂಮಿ ಕೇಳುತ್ತಿದ್ದೇವೆ. ನಮಗೂ ಜಿಂದಾಲ್‍ಗೆ ನೀಡಿರುವ ರೀತಿಯಲ್ಲೇ ಭೂಮಿಯನ್ನು ನೀಡಿ ಎಂದು ಪರೋಕ್ಷವಾಗಿ ಸಿಎಂ ವಿರುದ್ಧ ತೊಡೆತಟ್ಟಿದ್ದಾರೆ.