Tag: ಜಿಂಕೆ ಮಾಂಸ

  • ಜಿಂಕೆ ಮಾಂಸ ಮಾರಲು ಯತ್ನಿಸಿದ ಆರೋಪಿಗಳು ಅರೆಸ್ಟ್

    ಜಿಂಕೆ ಮಾಂಸ ಮಾರಲು ಯತ್ನಿಸಿದ ಆರೋಪಿಗಳು ಅರೆಸ್ಟ್

    ತುಮಕೂರು: ಜಿಂಕೆ ಮಾಂಸ ಮಾರಲು ಯತ್ನಿಸಿದ ಆರೋಪಿಗಳು ಅರಣ್ಯಾಧಿಕಾರಿಗಳನ್ನು ಕಂಡು ಪರಾರಿಯಾಗುವಾಗ ಬಂಧನಕ್ಕೊಳಗಾದ ಘಟನೆ ಮಧುಗಿರಿ ತಾಲೂಕಿನ ತಿಪ್ಪಾಪುರದಲ್ಲಿ ನಡೆದಿದೆ.

    ಬ್ರಹ್ಮದೇವರಹಳ್ಳಿಯ ಶಿವಕುಮಾರ್, ಚಿನ್ನೇನಹಳ್ಳಿಯ ಆದರ್ಶ ಬಂಧಿತ ಆರೋಪಿಗಳು. ಇಬ್ಬರು ವ್ಯಕ್ತಿಗಳು ಬೈಕ್‍ನಲ್ಲಿ ಜಿಂಕೆ ಮಾಂಸ ತಂದು ಮಾರಾಟ ಮಾಡಲು ಯತ್ನಿಸುತ್ತಿದ್ದರು. ಖದೀಮರು ತಿಪ್ಪಾಪುರ ಗ್ರಾಮದ ಬಳಿ ಗಂಡು ಜಿಂಕೆಯೊಂದನ್ನು ಬೇಟೆಯಾಡಿದ್ದರು. ಈ ವೇಳೆ 5 ಕೆ.ಜಿ. ಜಿಂಕೆ ಮಾಂಸವನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದಾಗ ಬಂಧಿಸಲಾಗಿದೆ. ಇದನ್ನೂ ಓದಿ: ಪತ್ನಿ ಬಿಟ್ಟು ಪ್ರೇಯಸಿಯನ್ನು ಮದುವೆಯಾಗಲು ಹೊರಟಿದ್ದ ಭೂಪ – ಕುಟುಂಬಸ್ಥರಿಂದಲೇ ಬಿತ್ತು ಗೂಸಾ

    ಆರೋಪಿಗಳು ಬೇಟೆಯಾಡಲು ಬಳಸುತ್ತಿದ್ದ ವಸ್ತುಗಳು ಸೇರಿ ದ್ವಿಚಕ್ರ ವಾಹನವನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.