Tag: ಜಾಹಿರಾತು

  • ದೆಹಲಿ ಪ್ರತಿಭಟನೆ ಬಗ್ಗೆ ಕಾಂಗ್ರೆಸ್ ಜಾಹೀರಾತು – ರಾಜ್ಯ ಸರ್ಕಾರದ ವಿರುದ್ಧ ರಾಜಭವನಕ್ಕೆ ಬಿಜೆಪಿ ದೂರು

    ದೆಹಲಿ ಪ್ರತಿಭಟನೆ ಬಗ್ಗೆ ಕಾಂಗ್ರೆಸ್ ಜಾಹೀರಾತು – ರಾಜ್ಯ ಸರ್ಕಾರದ ವಿರುದ್ಧ ರಾಜಭವನಕ್ಕೆ ಬಿಜೆಪಿ ದೂರು

    ಬೆಂಗಳೂರು: ಬಿಜೆಪಿ (BJP) ನಿಯೋಗವು ಇಂದು (ಫೆ.06) ರಾಜಭವನಕ್ಕೆ (Raj Bhavan) ಭೇಟಿ ನೀಡಿ ರಾಜ್ಯ ಸರ್ಕಾರದ ವಿರುದ್ಧ ದೂರು (Complaint) ಸಲ್ಲಿಸಿತು. ದಿನಪತ್ರಿಕೆಗಳಲ್ಲಿ ಜಾಹೀರಾತು (Advertisement) ನೀಡಲು ರಾಜ್ಯದ ಜನರ ತೆರಿಗೆ ಹಣವನ್ನು ಬಳಸಿದ ಕುರಿತು ಆಕ್ಷೇಪಿಸುವ ಮನವಿಯನ್ನು ಅಧಿಕಾರಿಗಳ ಮೂಲಕ ರಾಜ್ಯಪಾಲರಿಗೆ (Governer) ಸಲ್ಲಿಸಲಾಯಿತು.

    ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್, ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ, ಮಾಜಿ ಸಚಿವ ಹರತಾಳು ಹಾಲಪ್ಪ, ಮುಖಂಡ ಭಾಸ್ಕರ ರಾವ್, ವಕೀಲರ ಸಂಘದ ಅಧ್ಯಕ್ಷ ವಿವೇಕ ರೆಡ್ಡಿ ಅವರ ನಿಯೋಗವು ಈ ಮನವಿ ಸಲ್ಲಿಸಿತು. ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರುವ ರೀತಿಯ ಮತ್ತು ಈ ಮೂಲಕ ಸಂವಿಧಾನಕ್ಕೆ ಅಗೌರವ ತರುವ ಕೆಲಸವನ್ನು ಈ ಜಾಹೀರಾತಿನ ಮೂಲಕ ರಾಜ್ಯದ ಕಾಂಗ್ರೆಸ್ ಸರ್ಕಾರ ಮಾಡಿದೆ ಎಂದು ಮನವಿ ಗಮನ ಸೆಳೆದಿದೆ. ‘ನನ್ನ ತೆರಿಗೆ ನನ್ನ ಹಕ್ಕು’ ಎಂಬ ಶೀರ್ಷಿಕೆಯ ಈ ಜಾಹೀರಾತಿನ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ದೆಹಲಿ ಚಲೋ ನಡೆಸಲು ಕರೆ ನೀಡಿದ್ದು ಆಘಾತಕರ ಎಂದು ತಿಳಿಸಲಾಗಿದೆ. ಇದನ್ನೂ ಓದಿ: ಕೇಂದ್ರವನ್ನು ರಾಜ್ಯ ಸರ್ಕಾರದವರು ದೂರುವುದು ಸರಿಯಲ್ಲ, ಅಗತ್ಯವಿದ್ದಾಗಲೆಲ್ಲ ನೆರವು ನೀಡಿದೆ: ಪ್ರಜ್ವಲ್ ರೇವಣ್ಣ

    ರಾಜ್ಯದ ಜನರನ್ನು ತಪ್ಪು ದಾರಿಗೆಳೆಯುವ ಅಂಕಿ ಅಂಶಗಳನ್ನು ಈ ಜಾಹೀರಾತು ಒಳಗೊಂಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ರಾಜಕಾರಣ ಮಾಡಲು ಈ ಜಾಹೀರಾತು ಕೊಟ್ಟಿದ್ದಾರೆ. ಇದರ ವಿರುದ್ಧ ಬಿಜೆಪಿ ಆಕ್ಷೇಪ ವ್ಯಕ್ತಪಡಿಸುವುದಾಗಿ ಮನವಿಯಲ್ಲಿ ಹೇಳಿದೆ. ಇದನ್ನೂ ಓದಿ: ನಮ್ಮ ಹಕ್ಕು ಕೇಳಲು ದೆಹಲಿಯಲ್ಲಿ ಪ್ರತಿಭಟನೆ: ಸತೀಶ್ ಜಾರಕಿಹೊಳಿ

    ಕೇಂದ್ರ ಸರ್ಕಾರದ ವಿರುದ್ಧ ರ‍್ಯಾಲಿ ಅಥವಾ ಪ್ರತಿಭಟನೆ ನಡೆಸುವ ಕುರಿತು ತಿಳಿಸಲು ಈ ಜಾಹೀರಾತು ನೀಡಿದ್ದು, ಇದು ಖಜಾನೆಯ ಹಣದ ದುರ್ಬಳಕೆ ಮತ್ತು ಮೋಸಗಾರಿಕೆ ಎಂದು ಆಕ್ಷೇಪ ವ್ಯಕ್ತಪಡಿಸಲಾಗಿದೆ. ರಾಜ್ಯ ಕಾಂಗ್ರೆಸ್ ಸರ್ಕಾರದ ಈ ಜಾಹೀರಾತಿನ ಮೂಲಕ ಸಾಂವಿಧಾನಿಕ ಬಿಕ್ಕಟ್ಟು ಉದ್ಭವಿಸಿದ್ದು, ರಾಜ್ಯಪಾಲರು ಸೂಕ್ತ ಕ್ರಮ ಕೈಗೊಳ್ಳಲು ಮನವಿ ಮಾಡಲಾಗಿದೆ. ರಾಜ್ಯದ ವಾರ್ತಾ ಮತ್ತು ಪ್ರಚಾರ ಇಲಾಖೆ ಕಮಿಷನರ್ ಅವರಿಗೆ ಇಂಥ ಜಾಹೀರಾತು ನೀಡುವುದನ್ನು ನಿಲ್ಲಿಸುವಂತೆ ನಿರ್ದೇಶನ ನೀಡಬೇಕೆಂದು ಕೂಡ ಮನವಿ ಕೋರಿದೆ. ಇದನ್ನೂ ಓದಿ: ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಿಂದ ಆಭ್ಯರ್ಥಿಯಾಗಿ ಸ್ಪರ್ಧಿಸಲು ವಿಶ್ವನಾಥ್ ಸಿದ್ಧತೆ

  • ನಮ್ಮ ಜಾಹೀರಾತಿನಲ್ಲಿ ಮತ ಯಾಚನೆ ಮಾಡಿಲ್ಲ, ಇದು ನೀತಿ ಸಂಹಿತೆ ಉಲ್ಲಂಘನೆ ಅಲ್ಲ: ಡಿಕೆಶಿ

    ನಮ್ಮ ಜಾಹೀರಾತಿನಲ್ಲಿ ಮತ ಯಾಚನೆ ಮಾಡಿಲ್ಲ, ಇದು ನೀತಿ ಸಂಹಿತೆ ಉಲ್ಲಂಘನೆ ಅಲ್ಲ: ಡಿಕೆಶಿ

    ಬೆಂಗಳೂರು: ತೆಲಂಗಾಣದಲ್ಲಿ (Telangana) ನಮ್ಮ ಸರ್ಕಾರದ ಜಾಹೀರಾತಿನಲ್ಲಿ ನಮ್ಮ ಸಾಧನೆಗಳನ್ನು ಹೇಳಿಕೊಂಡಿದ್ದೇವೆಯೇ ಹೊರತು ಮತಯಾಚನೆ ಮಾಡಿಲ್ಲ. ಹೀಗಾಗಿ ಇದು ನೀತಿ ಸಂಹಿತೆ (Code Of Conduct) ಉಲ್ಲಂಘನೆ ಆಗುವುದಿಲ್ಲ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ಹೇಳಿದ್ದಾರೆ.

    ತೆಲಂಗಾಣದ ಪತ್ರಿಕೆಗಳಲ್ಲಿ ಕರ್ನಾಟಕ ಸರ್ಕಾರದ ಗ್ಯಾರಂಟಿ ಯೋಜನೆಗಳ (Guarantee Scheme) ಜಾಹೀರಾತಿನ (Advertising) ವಿಚಾರವಾಗಿ ಚುನಾವಣಾ ಆಯೋಗ ನೋಟಿಸ್ ಜಾರಿ ಬಗ್ಗೆ ಸದಾಶಿವನಗರ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು. ಜಾಹೀರಾತಿನಲ್ಲಿ ಸರ್ಕಾರದ ಕೆಲಸದ ಬಗ್ಗೆ ಮಾಹಿತಿ ಇದೆ. ಕಾಂಗ್ರೆಸ್ (Congress) ಪಕ್ಷಕ್ಕೆ ಅಥವಾ ಇಂತಹ ಅಭ್ಯರ್ಥಿಗಳಿಗೆ ಮತ ಹಾಕಿ ಎಂದು ಜಾಹೀರಾತಿನಲ್ಲಿ ತಿಳಿಸಿಲ್ಲ. ಇದು ಉಲ್ಲಂಘನೆ ಹೇಗೆ ಆಗುತ್ತದೆ? ನಮ್ಮ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿಲ್ಲ ಎಂದು ಅವರು ಅಲ್ಲಿ ಪ್ರಚಾರ ಮಾಡುತ್ತಿದ್ದಾರೆ ಎಂದರು. ಇದನ್ನೂ ಓದಿ:  3ನೇ ಕಂತಿಗಾಗಿ ಮತ್ತೆ ಬಂದ ಸುರ್ಜೇವಾಲಾ: ಸಿ.ಟಿ ರವಿ

    ನಾವು ಪತ್ರಿಕೆ ಹಾಗೂ ಮ್ಯಾಗಜಿನ್‌ಗಳಲ್ಲಿ ನೀಡುವ ಜಾಹೀರಾತು ಕೆಲವೊಮ್ಮೆ ತೆಲಂಗಾಣ, ತಮಿಳುನಾಡು ಸೇರಿದಂತೆ ಬೇರೆ ರಾಜ್ಯಗಳಿಗೂ ಹೋಗುತ್ತದೆ. ನಾವು ಮತ ಯಾಚನೆ ಮಾಡಿದ್ದರೆ ಆಗ ನಿಯಮ ಉಲ್ಲಂಘನೆ ಆಗುತ್ತಿತ್ತು. ಚುನಾವಣಾ ಆಯೋಗದ ನೋಟಿಸ್‌ಗೆ ಉತ್ತರ ನೀಡುತ್ತೇವೆ ಎಂದು ಸ್ಪಷ್ಟನೆ ನೀಡಿದರು. ಇದನ್ನೂ ಓದಿ: ಸ್ವಚ್ಚತೆ, ನೈರ್ಮಲ್ಯ ಸಂರಕ್ಷಣೆಗೆ ಸ್ಥಳೀಯ ಸಂಸ್ಥೆಗಳಿಗೆ 2 ಸಾವಿರ ಕೋಟಿ ಅನುದಾನ: ಡಿಕೆಶಿ

    ನಿಗಮ ಮಂಡಳಿ ನೇಮಕ ಸಭೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಈ ವಿಚಾರವಾಗಿ ಈಗಾಗಲೇ ಎರಡು ಮೂರು ಸುತ್ತಿನ ಸಭೆಗಳು ನಡೆದಿವೆ. ಇಂದು ಕೂಡ ಸಭೆ ಮಾಡಿ ಪಟ್ಟಿಯನ್ನು ದೆಹಲಿಗೆ ರವಾನಿಸುತ್ತೇವೆ ಎಂದು ಹೇಳಿದರು. ಇದನ್ನೂ ಓದಿ: ಸಿಎಂರ ಜನಸ್ಪಂದನವನ್ನು ಅಭಿನಂದಿಸುತ್ತೇನೆ, ಎಲ್ಲವನ್ನು ಟೀಕಿಸಲ್ಲ: ಹೆಚ್‌ಡಿಕೆ

  • ಇಲ್ಲಿ ಇಲಿ ಕೊಲ್ಲುವವರಿಗೆ ತಿಂಗಳಿಗೆ 1.31 ಕೋಟಿ ರೂ. ಸಂಬಳ

    ಇಲ್ಲಿ ಇಲಿ ಕೊಲ್ಲುವವರಿಗೆ ತಿಂಗಳಿಗೆ 1.31 ಕೋಟಿ ರೂ. ಸಂಬಳ

    ನ್ಯೂಯಾರ್ಕ್: ಇಲಿ (Rat) ಕಾಟವನ್ನು ತಾಳಲಾರದೇ ನ್ಯೂಯಾರ್ಕ್ ಸಿಟಿ ಮೇಯರ್‌ರೊಬ್ಬರು ಇಲಿ ಕೊಲ್ಲಲು ಜನರನ್ನು ನೇಮಿಸುವುದಾಗಿ ಆಹ್ವಾನಿಸಿರುವ ಜಾಹಿರಾತನ್ನು ಹಾಕಿರುವ ವಿಚಿತ್ರ ಘಟನೆ ನಡೆದಿದೆ.

    ನ್ಯೂಯಾರ್ಕ್ (New York) ನಗರದಲ್ಲಿ ಸುಮಾರು 1.8 ಕೋಟಿ ಇಲಿಗಳು ಇವೆ ಎಂದು ವರದಿಯಾಗಿತ್ತು. ಇದಾದ ಬಳಿಕ, ನ್ಯೂಯಾರ್ಕ್ ಸಿಟಿ ಮೇಯರ್ ಎರಿಕ್ ಆಡಮ್ಸ್ ಇಲಿಯನ್ನು ಕೊಲ್ಲಲು ಜನರನ್ನು ನೇಮಿಸುವುದಾಗಿ ಜಾಹೀರಾತು ನೀಡಿದ್ದಾರೆ. ಅಷ್ಟೇ ಅಲ್ಲದೆ ಇವರಿಗೆ ಸಂಬಳವನ್ನು ನಿಗದಿ ಪಡಿಸಿದ್ದಾರೆ.

    ಜಾಹಿರಾತಿನಲ್ಲಿ ಏನಿದೆ?: ಇಲಿಯನ್ನು ಸಾಯಿಸಲು ಚಾಣಾಕ್ಷ್ಯತನವನ್ನು ಹೊಂದಿರಬೇಕು. ಆಯ್ಕೆಯಾದ ಸಿಬ್ಬಂದಿಯೂ ವಾರದ 7 ದಿನವೂ ಕೆಲಸ ಮಾಡಬೇಕು. ಜೊತೆಗೆ ದಿನದ 24 ಗಂಟೆಗಳ ಕೆಲಸ ಮಾಡಬೇಕು. ನಗರದ ಜನರೊಂದಿಗೆ ಉತ್ತಮ ಸಂಪರ್ಕ ಸಾಧಿಸಿ ಉತ್ಸಾಹದಿಂದ ಸಮಾಜದ ಕಡೆಗೆ ಸಕಾರಾತ್ಮಕ ದೃಷ್ಟಿಕೋನದಿಂದ ಕೆಲಸ ಮಾಡಬೇಕು. ಇದರಿಂದ 80 ಲಕ್ಷ ನಿವಾಸಿಗಳು ಇಲಿಗಳ ಸಮಸ್ಯೆಯಿಂದ ಪಾರಾಗಬಹುದು. ಒಂದು ವೇಳೆ ಇಲಿಯನ್ನು ಸಾಯಿಸಲು ಯಶಸ್ವಿಯಾದರೆ 1,70,000 ಡಾಲರ್‌ನ್ನು ಪಾವತಿಸಲಾಗುವುದು ಎಂದು ತಿಳಿಸಿದ್ದಾರೆ. ಅಂದರೆ ಬರೋಬ್ಬರಿ 1,38,41,663 ರೂ. ಹಣವಾಗಿದೆ. ಇದನ್ನೂ ಓದಿ: ಅಪಘಾತವಾದ್ರೂ ಆಸ್ಪತ್ರೆಗೆ ಸೇರಿಸಲು ಹಿಂದೇಟು – ನಿನ್ಯಾವ ಸೀಮೆ MLC ಎಂದು ರವಿಕುಮಾರ್‌ಗೆ ಕ್ಲಾಸ್

    ಎರಡು ವರ್ಷಗಳ ಹಿಂದಿನದಕ್ಕೆ ಹೋಲಿಸಿದರೆ ಈ ವರ್ಷ ನ್ಯೂಯಾರ್ಕ್‍ನಲ್ಲಿ ಇಲಿಗಳ ಕಾಟದ ಕುರಿತಾದ ದೂರುಗಳ ಸಂಖ್ಯೆ ಶೇ. 70ರಷ್ಟು ಹೆಚ್ಚಿದೆ. ಈ ಹಿನ್ನೆಲೆಯಲ್ಲಿ ಹೊಸ ಕಾನೂನನ್ನು ಪರಿಚಯಿಸಿದ್ದು, ನ್ಯೂಯಾರ್ಕ್ ನಿವಾಸಿಗಳು ರಾತ್ರಿ 8 ಗಂಟೆಯ ನಂತರ ಕಸವನ್ನು ತೆಗೆಯುವುದನ್ನು ನಿಷೇಧಿಸಲಾಗಿದೆ. ಸಂಜೆ 4 ಗಂಟೆಯ ನಂತರ ಯಾವುದೇ ಸಮಯದಲ್ಲಿ ಮನೆಗಳ ಹೊರಗೆ ಕಸ ಸುರಿಯಬಹುದು. ಇದನ್ನೂ ಓದಿ: ಪೊಲೀಸ್‌ ಕಾನ್‌ಸ್ಟೇಬಲ್‌ಗೆ ಕಪಾಳಮೋಕ್ಷ – ಬಿಜೆಪಿ ಮಾಜಿ ಸಂಸದೆ ವಿರುದ್ಧ ಎಫ್‌ಐಆರ್‌

    Live Tv
    [brid partner=56869869 player=32851 video=960834 autoplay=true]

  • ಮಗನ ಬಂಧನದ ಬಳಿಕ ಜೊತೆಯಾಗಿ ಕಾಣಿಸಿಕೊಂಡ ಶಾರೂಖ್ ದಂಪತಿ

    ಮಗನ ಬಂಧನದ ಬಳಿಕ ಜೊತೆಯಾಗಿ ಕಾಣಿಸಿಕೊಂಡ ಶಾರೂಖ್ ದಂಪತಿ

    ಮುಂಬೈ: ಕಳೆದ ವರ್ಷ ಅಕ್ಟೋಬರ್‌ನಲ್ಲಿ ಡ್ರಗ್ಸ್ ಪ್ರಕರಣದಲ್ಲಿ ಶಾರೂಖ್ ಖಾನ್ ಪುತ್ರ ಆರ್ಯನ್ ಖಾನ್ ಬಂಧನಕ್ಕೊಳಗಾಗಿದ್ದರು. ಇದಾದ ಬಳಿಕ ಶಾರೂಖ್ ಖಾನ್ ಸಾಮಾಜಿಕ ಮಾಧ್ಯಮಗಳಿಂದ ದೂರ ಉಳಿದಿದ್ದರು. ಇದೀಗ ಬಾಲಿವುಡ್ ಬಾದ್‌ಶಾ ಮತ್ತೆ ಸಾಮಾಜಿಕ ಮಾಧ್ಯಮಗಳಿಗೆ ಮರಳಿದ್ದಾರೆ.

    ಶಾರೂಖ್ ಖಾನ್ ಬುಧವಾರ ಮಧ್ಯಾಹ್ನ ದೀರ್ಘ ವಿರಾಮದ ಬಳಿಕ ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ದೂರದರ್ಶನ ಬ್ರ್ಯಾಂಡ್ ಒಂದರ ಜಾಹೀರಾತು ವೀಡಿಯೋವನ್ನು ಶಾರೂಖ್ ಇನ್ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಮಂಗಳಸೂತ್ರ ಧರಿಸಿದಾಗ ಆದ ಅನುಭವ ಹಂಚಿಕೊಂಡ ಪ್ರಿಯಾಂಕಾ

    ಟಿವಿ ಜಾಹೀರಾತಿನಲ್ಲಿ ಶಾರೂಖ್ ರೊಂದಿಗೆ ಅವರ ಪತ್ನಿ ಗೌರಿ ಕೂಡಾ ಕಾಣಿಸಿಕೊಂಡಿದ್ದಾರೆ. ನಟ ಸಾಮಾಜಿಕ ಮಾಧ್ಯಮಕ್ಕೆ ಮತ್ತೆ ಮರಳಿ ಬಂದಿರುವುದರಿಂದ ಅವರ ಅಭಿಮಾನಿಗಳು ಶಾರೂಖ್‌ಗೆ ಪ್ರೀತಿಯಿಂದ ಸ್ವಾಗತಿಸಿದ್ದಾರೆ. ಕಾಮೆಂಟ್ ವಿಭಾಗದಲ್ಲಿ ಅವರ ಅಭಿಮಾನಿಗಳು ಹೃದಯ ಎಮೋಜಿಗಳ ಸುರಿಮಳೆ ಹರಿಸಿದ್ದಾರೆ. ಇದನ್ನೂ ಓದಿ: ಕೊರೊನಾದಿಂದ ಚೇತರಿಸಿಕೊಂಡು ಹಾಲಿಡೇ ಮೂಡಿನಲ್ಲಿ ಜಾನ್ವಿ

  • 299 ರೂ. ಚೂಡಿದಾರ್ ಕೊಳ್ಳಲು ಹೋಗಿ 1ಲಕ್ಷ ಕಳೆದುಕೊಂಡ ಮಹಿಳೆ

    299 ರೂ. ಚೂಡಿದಾರ್ ಕೊಳ್ಳಲು ಹೋಗಿ 1ಲಕ್ಷ ಕಳೆದುಕೊಂಡ ಮಹಿಳೆ

    ತಿರುವನಂತಪುರಂ: ಮಹಿಳೆಯೊಬ್ಬಳು ಆನ್‍ಲೈನ್‍ನಲ್ಲಿ ಕೇವಲ 299 ರೂಪಾಯಿ ಬೆಲೆಯ ಚೂಡಿದಾರ್ ಕೊಳ್ಳಲು ಹೋಗಿ ಒಂದು ಲಕ್ಷ ರೂಪಾಯಿ ಹಣವನ್ನು ಕಳೆದುಕೊಳ್ಳುವ ಮೂಲಕವಾಗಿ ಸುದ್ದಿಯಾಗಿದ್ದಾಳೆ.

    BRIBE

    ಮಹಿಳೆಯೊಬ್ಬಳು ಫೇಸ್‍ಬುಕ್  ನಲ್ಲಿ ಚೂಡಿದಾರ್ ಬಗ್ಗೆ ಜಾಹೀರಾತು ನೋಡಿದ್ದಾರೆ. ಡ್ರೆಸ್ ಇಷ್ಟವಾಗಿ ಆ ಲಿಂಕ್ ಓಪೆನ್ ಮಾಡಿದ್ದರು, ಬೆಲೆ ಕೇವಲ 299 ರೂಪಾಯಿ ಇದ್ದಿದ್ದರಿಂದ ಅದನ್ನು ಖರೀದಿ ಮಾಡಲು ಮುಂದಾಗಿದ್ದಳು. ಆರ್ಡರ್ ಮಾಡಿ ಗೂಗಲ್ ಪೇ ಮೂಲಕ ಪೇಮೆಂಟ್ ಕೂಡ ಮಾಡಿದ್ದಾರೆ.

    POLICE JEEP

    ತನಗಿಷ್ಟವಾದ ಬಣ್ಣದ ಚೂಡಿದಾರ್ ಬುಕ್ ಮಾಡಿ ಯಾವಾಗ ಆರ್ಡರ್ ಡೆಲಿವರಿ ಆಗುತ್ತದೆ ಎಂದು ಕಾದು ಕೂತಿದ್ದಳು. ಎರಡು ದಿನ ಕಳೆದ ಬಳಿಕವೂ ಆ ಡೆಲಿವರಿ ಬಗ್ಗೆ ಯಾವುದೇ ಮಾಹಿತಿ ಬಂದಿರಲಿಲ್ಲ. ಬಟ್ಟೆ ಬುಕ್ ಮಾಡಿದ್ದ ಖುಷಿಯಲ್ಲಿ  ಮಹಿಳೆ ತನ್ನ ಮೊಬೈಲ್‍ಗೆ ಬಂದ ಸಂದೇಶವನ್ನು ನೋಡಲು ಮರೆತಿದ್ದಾರೆ. ಮೂರು ದಿನದಲ್ಲಿ ಚೂಡಿದಾರ್ ಡೆಲಿವರಿ ಆಗುತ್ತೆ ಅಂತ ಅಲ್ಲಿ ತೋರಿಸಲಾಗಿತ್ತು. ಮೂರು ದಿನಗಳ ಬಳಿಕ ಜಾಹೀರಾತಿನಲ್ಲಿದ್ದ ನಂಬರ್‍ಗೆ ಮಹಿಳೆ ಮೆಸೇಜ್ ಮಾಡಿದ್ದಾರೆ. ಇದನ್ನೂ ಓದಿ  ದೇಶ ವಿಭಜನೆಗೆ ಅಂದಿನ ಕಾಂಗ್ರೆಸ್ ನಾಯಕರೇ ಕಾರಣ: ಓವೈಸಿ

    ಯಾರು ಫೋನ್ ತಗಯದ ಕಾರಣ ಸುಮ್ಮನಾಗಿದ್ದಾರೆ. ಬಳಿಕ ಈಕೆಯ ಫೋನ್‍ಗೆ 5 ಮೆಸೇಜ್ ಬಂದಿದೆ. ಅದನ್ನು ಓಪನ್ ಮಾಡಿ ನೋಡಿದಾಗ ಒಟ್ಟು ಒಂದು ಲಕ್ಷ ಹಣ ಬ್ಯಾಂಕ್ ಅಕೌಂಟ್‍ನಿಂದ ಕಾಣೆಯಾಗಿತ್ತು. ಕೂಡಲೇ ಮತ್ತೆ ಜಾಹೀರಾತಿನಲ್ಲಿದ್ದ ನಂಬರ್‍ಗೆ ಕರೆ ಮಾಡಿದರೆ, ಸ್ವಿಚ್ಡ್ ಆಫ್ ಆಗಿರುವುದು ತಿಳಿದಿದೆ. ಅದೇ ನಂಬರ್‍ಗೆ ಈಕೆಯ ಬ್ಯಾಂಕ್ ಅಕೌಂಟ್‍ನಿಂದ ಒಂದು ಲಕ್ಷ ಹಣ ವರ್ಗಾವಣೆಯಾಗಿತ್ತು. ಮಹಿಳೆ ಕೂಡಲೇ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ.

  • ಒಳ ಉಡುಪು ಜಾಹೀರಾತಿನಲ್ಲಿ ಅಭಿನಯ – ಟ್ರೋಲ್ ಕೆಂಗಣ್ಣಿಗೆ ಗುರಿಯಾದ ರಶ್ಮಿಕಾ ಮಂದಣ್ಣ

    ಒಳ ಉಡುಪು ಜಾಹೀರಾತಿನಲ್ಲಿ ಅಭಿನಯ – ಟ್ರೋಲ್ ಕೆಂಗಣ್ಣಿಗೆ ಗುರಿಯಾದ ರಶ್ಮಿಕಾ ಮಂದಣ್ಣ

    ಮುಂಬೈ: ದಕ್ಷಿಣ ಭಾರತದ ಖ್ಯಾತ ನಟಿ ರಶ್ಮಿಕಾ ಮಂದಣ್ಣ ಮತ್ತೆ ಟ್ರೋಲ್ ನ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

    ಇತ್ತೀಚೆಗೆ ರಶ್ಮಿಕಾ ಮತ್ತು ಬಾಲಿವುಡ್ ನಟ ವಿಕ್ಕಿ ಕೌಶಲ್ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದರು. ಈ ಜಾಹೀರಾತು ಪುರುಷರ ಒಳ ಉಡುಪಿನ ಬಗ್ಗೆಯಾಗಿದ್ದು, ಅದರಲ್ಲಿ ರಶ್ಮಿಕಾ ಯೋಗ ಇನ್‍ಸ್ಟ್ರಾಕ್ಟರ್ ಆಗಿ ಕಾಣಿಸಿಕೊಂಡಿದ್ದಾರೆ. ಈ ವೇಳೆ ವಿಕ್ಕಿ ಅವರು ಯೋಗ ಕಲಿಯುವ ವಿದ್ಯಾರ್ಥಿಯಾಗಿದ್ದು, ಅವರ ಒಳ ಉಡುಪನ್ನೆ ರಶ್ಮಿಕಾ ನೋಡುವ ಅದರತ್ತ ಆಕರ್ಷಕರಾಗುವ ರೀತಿ ವೀಡಿಯೋವನ್ನು ಚಿತ್ರೀಕರಿಸಲಾಗಿತ್ತು. ಇದನ್ನೂ ಓದಿ: 2022ರ ಪ್ರೇಮಿಗಳ ದಿನ ಬರಲಿದೆ ‘ಲಾಲ್ ಸಿಂಗ್ ಚಡ್ಡಾ’

    ಈ ಜಾಹೀರಾತಿಗೆ ರಶ್ಮಿಕಾ ಅಭಿಮಾನಿಗಳಲ್ಲೂ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಟ್ರೋಲ್ ಪೇಜ್ ಗಳು ಈ ಜಾಹೀರಾತಿನಲ್ಲಿ ರಶ್ಮಿಕಾ ಅಭಿನಯದ ಬಗ್ಗೆ ಫುಲ್ ಟ್ರೋಲ್ ಮಾಡುತ್ತಿದ್ದಾರೆ.

    ಸಖತ್ ಬ್ಯುಸಿಯಾಗಿರುವ ರಶ್ಮಿಕಾ ದಕ್ಷಿಣ ಭಾರತದ ಬಹುಬೇಡಿಕೆಯ ನಟಿಯಾಗಿದ್ದಾರೆ. ಅದು ಅಲ್ಲದೇ ಇತ್ತೀಚೆಗೆ ಬಾಲಿವುಡ್ ಗೂ ಹಾರಿರುವ ಇವರು ‘ಮಿಷನ್ ಮಜ್ನು’ ಸಿನಿಮಾ ಮುಗಿಸಿ, ಬಾಲಿವುಡ್ ನ ಮತ್ತೊಂದು ಚಿತ್ರದಲ್ಲಿ ಅಮಿತಾಭ್ ಬಚ್ಚನ್ ಜೊತೆಗೂ ನಟಿಸುತ್ತಿದ್ದಾರೆ. ಇದನ್ನೂ ಓದಿ: ನಾಗಚೈತನ್ಯ ‘ಲವ್ ಸ್ಟೋರಿ’ ಲೀಕ್ ಆಯ್ತು

    ರಶ್ಮಿಕಾ ಅಭಿಮಾನಿಗಳು ಮಾತ್ರ ಇವರ ನಟನೆಯ ‘ಪುಷ್ಪ’ ನೋಡಲು ಕಾಯುತ್ತಿದ್ದು, ಕೊರೊನಾ ಮತ್ತು ಚಿತ್ರಮಂದಿರಗಳ ಸಮಸ್ಯೆಯಿಂದ ಚಿತ್ರದ ರಿಲೀಸ್ ಡೇಟ್ ಮುಂದೆ ಹೋಗುತ್ತಿದೆ.

  • 10 ಕೋಟಿ ಆಫರ್ ತಿರಸ್ಕರಿಸಿದ ಶಿಲ್ಪಾ ಶೆಟ್ಟಿ

    10 ಕೋಟಿ ಆಫರ್ ತಿರಸ್ಕರಿಸಿದ ಶಿಲ್ಪಾ ಶೆಟ್ಟಿ

    ಮುಂಬೈ: ನಟಿ ಶಿಲ್ಪಾ ಶೆಟ್ಟಿ ಅವರು ಸದಾ ತಮ್ಮ ಫಿಟ್ನೆಸ್ ಕಾಪಾಡಿಕೊಳ್ಳುವುದರಲ್ಲಿ ಬ್ಯುಸಿಯಾಗಿರುತ್ತಾರೆ. ಇದೀಗ 13 ವರ್ಷಗಳ ನಂತರ ಬೆಳ್ಳಿತೆರೆಗೆ ಕಮ್‍ಬ್ಯಾಕ್ ಮಾಡುತ್ತಿದ್ದಾರೆ. ಆದರೆ ಈ ನಡುವೆ ಅವರು ಬರೋಬ್ಬರಿ 10 ಕೋಟಿ ರೂ. ಆಫರ್‌ವೊಂದನ್ನು ತಿರಸ್ಕರಿಸಿದ್ದಾರೆ ಎಂದು ತಿಳಿದು ಬಂದಿದೆ.

    ನಟಿ ಶಿಲ್ಪಾ ಶೆಟ್ಟಿಗೆ ಅವರನ್ನು ಆಯುರ್ವೇದಿಕ್ ಕಂಪನಿಯೊಂದು ಸ್ಲಿಮ್ಮಿಂಗ್ ಮಾತ್ರೆ (ಸ್ಲಿಮ್ ಆಗಲು ಮಾತ್ರೆ) ಬಗ್ಗೆ ಜಾಹೀರಾತು ಮಾಡುವಂತೆ ಸಂಪರ್ಕಿಸಿತ್ತು. ಜೊತೆಗೆ ಇದಕ್ಕಾಗಿ ಅವರಿಗೆ 10 ಕೋಟಿ ಆಫರ್ ನೀಡಿತ್ತು. ಆದರೆ ಈ ಅವಕಾಶವನ್ನ ಶಿಲ್ಪಾ ಶೆಟ್ಟಿ ತಿರಸ್ಕರಿಸಿದ್ದಾರೆ. ಈ ಬಗ್ಗೆ ಸ್ವತಃ ಶಿಲ್ಪಾ ಶೆಟ್ಟಿ ಅವರೇ ಸಂದರ್ಶನವೊಂದಲ್ಲಿ ಮಾತನಾಡಿದ್ದಾರೆ.

    “ಸ್ಲಿಮ್ ಮಾತ್ರೆ ಬಗ್ಗೆ ಜಾಹೀರಾತು ನೀಡುವಂತೆ ಕಂಪನಿಯೊಂದು ನನ್ನನ್ನು ಸಂಪರ್ಕಿಸಿತ್ತು. ನಾನು ನೈಸರ್ಗಿಕ ಸೌಂದರ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತೇನೆ. ಹೀಗಾಗಿ ವೈಜ್ಞಾನಿಕವಾಗಿ ಕೆಲವನ್ನ ಪ್ರೋತ್ಸಾಹಿಸುವುದಿಲ್ಲ. ಆರೋಗ್ಯಕರ ಆಹಾರ ಮತ್ತು ವ್ಯಾಯಮದಿಂದ ಸೌಂದರ್ಯ ಸಾಧ್ಯ. ಆದರೆ ನನಗೆ ನಂಬಿಕೆ, ಭರವಸೆ ಇಲ್ಲದ ವಿಚಾರದ ಬಗ್ಗೆ ನಾನು ಪ್ರಚಾರ ಮಾಡುವುದು ಸರಿಯಿರಲ್ಲ” ಎಂದು ಶಿಲ್ಪಾ ಶೆಟ್ಟಿ ಅವರು ರಿಜೆಕ್ಟ್ ಮಾಡಿದ್ದಾರೆ.

    ಈ ಹಿಂದೆ ನಟಿ ಸಾಯಿ ಪಲ್ಲವಿ ಅವರು ಕೂಡ 2 ಕೋಟಿಯ ಫೇಸ್ ಕ್ರೀಮ್ ಜಾಹೀರಾತನ್ನು ರಿಜೆಕ್ಟ್ ಮಾಡಿದ್ದರು. ಶಿಲ್ಪಾ ಶೆಟ್ಟಿ ಅವರು 2007ರ ನಂತರ ಚಿತ್ರರಂಗದಿಂದ ದೂರ ಉಳಿದಿದ್ದರು. ಇದೀಗ ‘ನಿಕಮ್ಮಾ’ ಸಿನಿಮಾದ ಮೂಲಕ ಮತ್ತೆ ತಮ್ಮ ಸಿನಿ ಪಯಣವನ್ನು ಮುಂದುವರಿಸುತ್ತಿದ್ದಾರೆ.

  • ಸುಮಲತಾ ಅಂಬರೀಶ್ ವಿರುದ್ಧ ಜೆಡಿಎಸ್‍ನಿಂದ ದೂರು

    ಸುಮಲತಾ ಅಂಬರೀಶ್ ವಿರುದ್ಧ ಜೆಡಿಎಸ್‍ನಿಂದ ದೂರು

    ಮಂಡ್ಯ: ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದಾರೆ ಎಂದು ಆರೋಪಿಸಿ ಜೆಡಿಎಸ್‍ ಮುಖ್ಯ ಚುನಾವಣಾಧಿಕಾರಿಗೆ ದೂರು ನೀಡಿದೆ.

    ಜೆಡಿಎಸ್ ಕಾನೂನು ವಿಭಾಗದ ಪ್ರಧಾನ ಕಾರ್ಯದರ್ಶಿ ಪ್ರದೀಪ್ ಕುಮಾರ್ ಎಂಬವರು ಸುಮಲತಾ ವಿರುದ್ಧ ದೂರು ನೀಡಿದ್ದಾರೆ. ಸುಮಲತಾ ನಟಿಸಿರುವ ಜಾಹೀರಾತು ಟಿ.ವಿಗಳಲ್ಲಿ ಪ್ರಸಾರವಾಗುತ್ತಿದೆ. ಇದು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾಗಿದೆ. ಹೀಗಾಗಿ ಅವರ ವಿರುದ್ಧ ತಕ್ಷಣವೇ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮುಖ್ಯ ಚುನಾವಣಾಧಿಕಾರಿಗಳ ಬಳಿಕ ಮನವಿ ಮಾಡಿಕೊಂಡಿದ್ದಾರೆ.

    ದೂರಿನಲ್ಲಿ ಏನಿದೆ?
    ಲೋಕಸಭಾ ಚುನಾವಣೆಯು ಕರ್ನಾಟಕ ರಾಜ್ಯದಲ್ಲಿ ಏಪ್ರಿಲ್ 18 ಹಾಗೂ 23 ರಂದು ಎರಡು ಹಂತದಲ್ಲಿ ಜರುಗಲಿದ್ದು, ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಎ.ಸುಮಲತಾ ಅವರು ನಟಿಸಿರುವ ಜಾಹಿರಾತು ಹಲವು ಖಾಸಗಿ ಟಿ.ವಿ ವಾಹಿನಿಗಳಲ್ಲಿ ಪ್ರಸಾರವಾಗುತ್ತಿದೆ. ಇದು ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆಯಾಗಿದೆ.

    ಇದರ ಮೂಲಕ ಮತದಾರರನ್ನು ಸೆಳೆಯುವ ಪ್ರಯತ್ನಿಸುತ್ತಿರುವುದರಿಂದ ಇದು ಪರೋಕ್ಷವಾಗಿ ಪ್ರತಿ ಸ್ಪರ್ಧಿಗಳ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಆದ್ದರಿಂದ ಇದರ ವಿರುದ್ಧ ತಕ್ಷಣವೇ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಜನತಾದಳ ಪಕ್ಷದ ಪರವಾಗಿ ಕೋರುತ್ತಿದ್ದೇನೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

  • ಸಾವಿರಾರು ಜನ ಓಡಾಡೋ ರಸ್ತೆಯ ಎಲೆಕ್ಟ್ರಾನಿಕ್ ಫಲಕದಲ್ಲಿ ಪ್ರಸಾರವಾಯ್ತು ಪೋರ್ನ್ ವಿಡಿಯೋ!

    ಸಾವಿರಾರು ಜನ ಓಡಾಡೋ ರಸ್ತೆಯ ಎಲೆಕ್ಟ್ರಾನಿಕ್ ಫಲಕದಲ್ಲಿ ಪ್ರಸಾರವಾಯ್ತು ಪೋರ್ನ್ ವಿಡಿಯೋ!

    ಮನಿಲಾ: ರಸ್ತೆಯಲ್ಲಿರುವ ದೊಡ್ಡ ಎಲೆಕ್ಟ್ರಾನಿಕ್ ಫಲಕದಲ್ಲಿ ಜಾಹಿರಾತು ಪ್ರಸಾರವಾಗೋ ಬದಲು ಪೋರ್ನ್ ವಿಡಿಯೋ ಪ್ರಸಾರವಾದ ಘಟನೆ ಫಿಲಿಪೈನ್ಸ್ ನ ರಾಜಧಾನಿ ಮನಿಲಾದ ಮಕಾಟಿ ಸಿಟಿಯಲ್ಲಿ ನಡೆದಿದೆ.

    30 ಸೆಕೆಂಡ್‍ಗಳಿರುವ ಈ ಪೋರ್ನ್ ವಿಡಿಯೋ ಅಕಸ್ಮಾತಾಗಿ ರಸ್ತೆ ಮಧ್ಯೆ ಜನಸಂದಣಿಯಲ್ಲಿರುವ ಎಲೆಕ್ಟ್ರಾನಿಕ್ಸ್ ಫಲಕದಲ್ಲಿ ಪ್ರಸಾರವಾಗಿದೆ. ಈ ವಿಡಿಯೋ ನೋಡಿದ ಸಾರ್ವಜನಿಕರು ಒಂದು ಕ್ಷಣ ದಂಗಾಗಿ ಹೋದರು. ವಿಡಿಯೋದಲ್ಲಿದ್ದ ಜೋಡಿ ನಗ್ನವಾಗಿದ್ದು, ಆ ರಸ್ತೆಯಲ್ಲಿದ್ದ ಲಕ್ಷಾಂತರ ಮಂದಿ ಅಂದ್ರೆ ಮಕ್ಕಳಿಂದ ವಯೋವೃದ್ಧರವರೆಗೂ ಈ ವಿಡಿಯೋ ನೋಡುವಂತಾಯಿತು.

    ಈ ವಿಡಿಯೋ ಪ್ರಸಾರವಾಗುತ್ತಿದ್ದಂತೆ ಮಕಾಟಿಯ ಮೇಯರ್ ಅಭಿಗೇಲ್ ಬಿನಯ್ ಅದನ್ನು ನಿಲ್ಲಿಸಲ್ಲು ಹೇಳಿದ್ದಾರೆ. ಆದರೆ ಅಷ್ಟರಲ್ಲಿ ಅಲ್ಲಿದ್ದ ಜನರು ತಮ್ಮ ಮೊಬೈಲಿನಲ್ಲಿ ಫೋಟೋ ಹಾಗೂ ವಿಡಿಯೋಗಳನ್ನು ತೆಗೆದಿದ್ದರು. ಇನ್ನೂ ಕೆಲವರು ಆ ವಿಡಿಯೋ ನೋಡಲಾಗದೇ ಅದನ್ನು ನಿರ್ಲಕ್ಷಿಸಿದರು.

    ಫಿಲಿಪೈನ್ಸ್ ನಲ್ಲಿ ಈ ರಸ್ತೆ ಅತ್ಯಂತ ಬ್ಯೂಸಿ ರಸ್ತೆಯಾಗಿದ್ದು, ಸಾವಿರಾರು ವಾಹನಗಳು ಹಾಗೂ ಸಾಕಷ್ಟು ಜನರು ಈ ರಸ್ತೆಯಲ್ಲಿ ಓಡಾಡುತ್ತಿರುತ್ತಾರೆ. ಇಂತಹ ರಸ್ತೆಯಲ್ಲಿ ಪೋರ್ನ್ ವಿಡಿಯೋ ಪ್ರಸಾರವಾಗಿದ್ದು ಭಾರೀ ಚರ್ಚೆಗೆ ಗ್ರಾಸವಾಗಿದೆ.

  • ನೀರವ್ ಮೋದಿಗೆ ಬೈ ಬೈ ಹೇಳಿದ ಪ್ರಿಯಾಂಕಾ ಚೋಪ್ರಾ

    ನೀರವ್ ಮೋದಿಗೆ ಬೈ ಬೈ ಹೇಳಿದ ಪ್ರಿಯಾಂಕಾ ಚೋಪ್ರಾ

    -ನೀರವ್ ಮೋದಿಯ ಆಭರಣಗಳ ಪ್ರಚಾರ ರಾಯಭಾರಿ ಸ್ಥಾನಕ್ಕೆ ಪ್ರಿಯಾಂಕಾ ಗುಡ್ ಬೈ

    ಮುಂಬೈ: ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ ಸುಮಾರು 11,300 ಕೋಟಿ ರೂಪಾಯಿ ವಂಚಿಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆಭರಣ ಉದ್ಯಮಿ ನೀರವ್ ಮೋದಿ ವಿರುದ್ದ ತನಿಖೆ ತೀವ್ರಗೊಳ್ಳುತ್ತಿದ್ದಂತೆ, ಒಂದು ಕಾಲದಲ್ಲಿ ನೀರವ್ ಮೋದಿ ಜೊತೆ ವೇದಿಕೆ ಹಂಚಿಕೊಳ್ಳುತ್ತಿದ್ದ, ನೀರವ್ ಜೊತೆ ಪಾರ್ಟಿಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ, ಅವರ ಆಭರಣ ಉತ್ಪನ್ನಗಳಿಗೆ ಪ್ರಚಾರ ರಾಯಭಾರಿಯಾಗಿ ಕೋಟಿ ಕೋಟಿ ಸಂಭಾವನೆಗಳನ್ನು, ದುಬಾರಿ ಉಡುಗೊರೆಗಳನ್ನು ಪಡೆಯುತ್ತಿದ್ದ ಬಾಲಿವುಡ್ ನ ತಾರೆಯರು ನಿಧಾನವಾಗಿ ತಮಗೂ ನೀರವ್ ಮೋದಿಗೂ ಸಂಬಂಧವಿಲ್ಲವೆಂಬಂತೆ ಅಂತರವನ್ನು ಕಾಯ್ದುಕೊಳ್ಳಲು ಮುಂದಾಗಿದ್ದಾರೆ.

    2009ರಿಂದಲೂ ಉದ್ಯಮಿ ನೀರವ್ ಮೋದಿಯವರ ಜ್ಯುವೆಲ್ಲರಿ ಉತ್ಪನ್ನಗಳ ಪ್ರಚಾರ ರಾಯಭಾರಿಯಾಗಿ ಕೋಟಿ-ಕೋಟಿ ಸಂಭಾವನೆ ಜೊತೆಗೆ ದುಬಾರಿ ಉಡುಗೊರೆಗಳನ್ನು ಪಡೆದಿದ್ದ, ನೀರವ್ ಆಯೋಜಿಸುತ್ತಿದ್ದ ಪಾರ್ಟಿಗಳಲ್ಲಿ, ಇವೆಂಟ್‍ಗಳಲ್ಲಿ ಕಾಣಿಸಿಕೊಂಡು ಕಾರ್ಯಕ್ರಮಕ್ಕೆ ರಂಗು ನೀಡುತ್ತಿದ್ದ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಇದೀಗ ತಮಗೂ ನೀರವ್ ಮೋದಿಗೂ ಯಾವುದೇ ಸಂಬಂಧವಿಲ್ಲ ಎನ್ನುತ್ತಿದ್ದಾರೆ.

    ನೀರವ್ ಮೇಲಿನ ವಂಚನೆ ಆರೋಪಗಳು ಗಂಭೀರವಾಗುತ್ತಿದ್ದಂತೆ, ಪ್ರಿಯಾಂಕಾ ಚೋಪ್ರಾ ಮತ್ತು ನೀರವ್ ಮೋದಿ ನಡುವೆ ಉತ್ತಮ ಸಂಬಂಧವಿತ್ತು, ಪ್ರಿಯಾಂಕಾ ಕೂಡ ನೀರವ್ ಅವರಿಂದ ಸಾಕಷ್ಟು ಆರ್ಥಿಕ ಲಾಭಗಳನ್ನು ಪಡೆದಿದ್ದಾರೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿದ್ದವು. ಆದರೆ ಈ ಬಗ್ಗೆ ಎಲ್ಲಿಯೂ ತುಟಿಪಿಟಕ್ ಎನ್ನದ ಪ್ರಿಯಾಂಕಾ, ಈ ವಿಷಯದಿಂದ ಸಾಕಷ್ಟು ಅಂತರವನ್ನು ಕಾಯ್ದುಕೊಂಡಿದ್ದರು. ಆದರೆ ಯಾವಾಗ ಈ ಪ್ರಕರಣದಲ್ಲಿ ಒಂದರ ಹಿಂದೊಂದು ಬಾಲಿವುಡ್ ಮಂದಿಯ ಹೆಸರುಗಳು ಹೊರಬರಲು ಆರಂಭಿಸಿದವೋ, ಎಚ್ಚೆತ್ತುಕೊಂಡ ಪ್ರಿಯಾಂಕಾ, ನೀರವ್ ಮೋದಿ ವಿರುದ್ಧ ಇತ್ತೀಚಿನ ಬೆಳವಣಿಗೆಗಳ ಹಿನ್ನೆಲೆಯಲ್ಲಿ ತಮ್ಮ ಗುತ್ತಿಗೆಯನ್ನು ರದ್ದುಪಡಿಸಿದ್ದಾರೆ.

    ಈ ವಿಷಯವನ್ನು ಖಚಿತಪಡಿಸಿರುವ ಪ್ರಿಯಾಂಕ ಚೋಪ್ರಾ ವಕ್ತಾರರು, ಇನ್ನು ಮುಂದೆ ನೀರವ್ ಮೋದಿ ಕಂಪೆನಿಯ ಉತ್ಪನಗಳಲ್ಲಿ ಪ್ರಿಯಾಂಕಾ ಕಾಣಿಸಿಕೊಳ್ಳುವುದಿಲ್ಲ. ನೀರವ್‍ಗೂ ಅವರಿಗೂ ಯಾವುದೇ ಸಂಬಂಧಗಳು ಇರುವುದಿಲ್ಲ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.

    ಕಳೆದ ವರ್ಷವಷ್ಟೇ, ಬಾಲಿವುಡ್ ನಟ ಸಿದ್ಧಾರ್ಥ್ ಮಲ್ಹೋತ್ರಾ ಜೊತೆಗೆ ನೀರವ್ ಮೋದಿಯವರ ಕಂಪೆನಿಯ ಜ್ಯುವೆಲ್ಲರಿ ಜಾಹೀರಾತುಗಳಲ್ಲಿ ಪ್ರಿಯಾಂಕಾ ಚೋಪ್ರಾ ಕಾಣಿಸಿಕೊಂಡಿದ್ದರು. ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ನಟ ಸಿದ್ಧಾರ್ಥ್ ಮಲ್ಹೋತ್ರಾ, ಬ್ರಾಂಡ್ ಜೊತೆಗೆ ತಮ್ಮ ಗುತ್ತಿಗೆ ಮುಗಿದಿರುವುದರಿಂದ ತಾವು ಯಾವುದೇ ಕಾನೂನು ಕ್ರಮ ತೆಗೆದುಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.