Tag: ಜಾವೇದ್ ಹಬೀಬ್

  • ತಲೆಗೆ ನೀರಿನ ಬದಲು ಎಂಜಲು ಉಗಿದ ಕೇಶವಿನ್ಯಾಸಕಾರ!

    ತಲೆಗೆ ನೀರಿನ ಬದಲು ಎಂಜಲು ಉಗಿದ ಕೇಶವಿನ್ಯಾಸಕಾರ!

    ಲಕ್ನೋ: ಕೇಶ ವಿನ್ಯಾಸಕಾರನೋರ್ವ ಮಹಿಳೆಯ ತಲೆಗೆ ನೀರು ಸಿಂಪಡಿಸುವ ಬದಲು ಎಂಜಲು ಉಗಿದ ಘಟನೆ ಉತ್ತರಪ್ರದೇಶದ ಮಜಾಫ್ಪರನಗರದಲ್ಲಿ ನಡೆದಿದೆ.

    ಕೇಶ ವಿನ್ಯಾಸಕಾರ ಜಾವೇದ್ ಹಬೀಬ್, ಪೂಜಾ ಎನ್ನುವವರ ತಲೆಗೆ ಎಂಜಲು ಉಗಿದಿದ್ದಾರೆ. ಈ ಘಟನೆ ವಿವಾವದ ಸ್ವರೂಪ ಪಡೆದುಕೊಂಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ಕೇಶ ವಿನ್ಯಾಸಕಾರನ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ರಾಷ್ಟ್ರೀಯ ಮಹಿಳಾ ಆಯೋಗ, ಹಬೀಬ್ ಕೃತ್ಯವನ್ನು ಖಂಡಿಸಿವೆ. ಈ ವಿಚಾರವಾಗಿ ಕಠಿಣ ಕ್ರಮವನ್ನು ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದೆ. ಇದನ್ನೂ ಓದಿ: ಹೂಸು ಮಾರಿ ವಾರಕ್ಕೆ 38 ಲಕ್ಷ ಸಂಪಾದನೆ ಮಾಡ್ತಿದ್ದಾಕೆ ಆಸ್ಪತ್ರೆಗೆ ದಾಖಲು

    ನಡೆದಿದ್ದೇನು?: ದೇಶದ್ಯಂತ 850 ಸಲೂನ್ ಹೊಂದಿದ್ದ ಜಾವೇದ್ ಹಬೀಬ್, ಇತ್ತೀಚೆಗೆ ಮುಜಾಫ್ಪರನಗರದಲ್ಲಿ ಕೇಶವಿನ್ಯಾಸದ ಕಾರ್ಯಗಾರ ನಡೆಸಿದ್ದ. ಈ ವೇಳೆ ಪೂಜಾ ಅವರಿಗೆ ಕೇಶವಿನ್ಯಾಸ ಮಾಡುವಾಗ ನೀರು ಇಲ್ಲದಿದ್ದರೆ, ಎಂಜಲು ಬಳಸಿ ಎಂದು ಹೇಳಿ ಉಗಿಯಲಾಗಿದೆ. ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಇದನ್ನೂ ಓದಿ: ನನ್ನ ಹೆಸರು Kovid, ಆದ್ರೆ ನಾನು ವೈರಸ್ ಅಲ್ಲ: ಬೆಂಗಳೂರು ಉದ್ಯಮಿ

     

     

  • ಜಾವೇದ್ ಹಬೀಬ್ ಬಿಜೆಪಿ ಸೇರಿದ್ಮೇಲೆ ಬದಲಾಯ್ತು ನಾಯಕರ ಹೇರ್ ಸ್ಟೈಲ್!

    ಜಾವೇದ್ ಹಬೀಬ್ ಬಿಜೆಪಿ ಸೇರಿದ್ಮೇಲೆ ಬದಲಾಯ್ತು ನಾಯಕರ ಹೇರ್ ಸ್ಟೈಲ್!

    – ಸಾಮಾಜಿಕ ಜಾಲತಾಣದಲ್ಲಿ ನಾಯಕರ ಟ್ರೋಲ್

    ನವದೆಹಲಿ: ಖ್ಯಾತ ಹೇರ್ ಸ್ಟೈಲಿಸ್ಟ್ ಜಾವೇದ್ ಹಬೀಬ್ ಅವರು ಸೋಮವಾರದಂದು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಆದ್ದರಿಂದ ನೆಟ್ಟಿಗರು ಹೇರ್ ಸ್ಟೈಲಿಸ್ಟ್ ಪಕ್ಷ ಸೇರಿದ ಮೇಲೆ ನಾಯಕರ ಹೇರ್ ಸ್ಟೈಲ್ ಬದಲಾಗಿದೆ ಎಂದು ಬಿಜೆಪಿ ನಾಯಕರ ಫೋಟೋಗಳನ್ನು ವಿವಿಧ ರೀತಿ ಎಡಿಟ್ ಮಾಡಿ ಬೇಜಾನ್ ಕಾಲೆಳೆಯುತ್ತಿದ್ದಾರೆ.

    ಸಾಮಾಜಿಕ ಜಾಲತಾಣಗಳಲ್ಲಿ ಬಿಜೆಪಿ ನಾಯಕರು ವಿವಿಧ ಹೇರ್ ಸ್ಟೈಲ್ ಮಾಡಿಕೊಂಡಿರುವ ಹಾಗೆ ಫೋಟೋಗಳನ್ನು ಎಡಿಟ್ ಮಾಡಿ ಟ್ರೋಲ್ ಮಾಡಲಾಗುತ್ತಿದೆ. ಅದರಲ್ಲೂ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಕೂಲ್ ಹೇರ್ ಸ್ಟೈಲ್ ಎಡಿಟ್ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.

    ಮೋದಿ, ಅಮಿತ್ ಶಾ, ಯುಪಿ ಸಿಎಂ ಯೋಗಿ ಆಧಿತ್ಯನಾಥ್ ಸೇರಿದಂತೆ ಹಲವು ಬಿಜೆಪಿ ನಾಯಕರ ಫೊಟೋಗಳಿಗೆ ವಿವಿಧ ಹೇರ್ ಸ್ಟೈಲ್ ಮಾಡಿಕೊಂಡಿರುವ ರೀತಿ ಎಡಿಟ್ ಮಾಡಿ ಕಮಲ ನಾಯಕರಿಗೆ ನೆಟ್ಟಿಗರು ಸ್ಮಾರ್ಟ್ ಲುಕ್ ನೀಡಿದ್ದಾರೆ.

    ಜಾವೇದ್ ಹಬೀಬ್ ಅವರು ಭಾರತದಲ್ಲೇ ಖ್ಯಾತ ಹೇರ್ ಸ್ಟೈಲಿಸ್ಟ್ ಆಗಿದ್ದು, ದೇಶದಲ್ಲಿ 100 ನಗರಗಳಲ್ಲಿ 800ಕ್ಕೂ ಅಧಿಕ ಬ್ಯೂಟಿ ಹಾಗೂ ಹೇರ್ ಸಲೂನ್‍ಗಳನ್ನು ನಡೆಸುತ್ತಿದ್ದಾರೆ. ಅಲ್ಲದೇ ಸೋಮವಾರದಂದು ಬಿಜೆಪಿಗೆ ಸೇರಿ, ಮೋದಿ ಅವರು ಆರಂಭಿಸಿದ್ದ `ಮೈ ಭಿ ಚೌಕಿದಾರ್’ ಅಭಿಯಾನಕ್ಕೆ ಕೈಜೋಡಿಸಿದ್ದಾರೆ.