Tag: ಜಾವಾ

  • ಜಾವಾ ಬೈಕಿನ ಬಗ್ಗೆ ಗೊತ್ತಿರದ ಸ್ವಾರಸ್ಯಕರ ಸಂಗತಿಗಳು- ಜಾವಾ 42 ಬೈಕಿನ ಬೆಲೆ 1.55 ಲಕ್ಷ ರೂ. ಯಾಕೆ?

    ಜಾವಾ ಬೈಕಿನ ಬಗ್ಗೆ ಗೊತ್ತಿರದ ಸ್ವಾರಸ್ಯಕರ ಸಂಗತಿಗಳು- ಜಾವಾ 42 ಬೈಕಿನ ಬೆಲೆ 1.55 ಲಕ್ಷ ರೂ. ಯಾಕೆ?

    80-90ರ ದಶಕದಲ್ಲಿ ಭಾರತದ ರಸ್ತೆಗಳಲ್ಲಿ ಅಬ್ಬರಿಸಿದ್ದ ಜಾವಾ ಬೈಕುಗಳು, ಮತ್ತೆ ರಸ್ತೆಗಳಿಗೆ ಇಳಿಯಲು ಸಿದ್ಧವಾಗಿದೆ. ಕಳೆದ ಗುರುವಾರ ಜಾವಾ ಮೋಟಾರ್‌ಸೈಕಲ್ ಕಂಪನಿಯು ತನ್ನ ಮೂರು ನೂತನ ಜಾವಾ ಬೈಕುಗಳನ್ನು ಮಾರುಕಟ್ಟೆಗೆ ಪರಿಚಯಿಸಿತ್ತು. ಈ ಬೈಕುಗಳು ತನ್ನ ಗತಕಾಲದ ವೈಭವವನ್ನೇ ಹೋಲುವ ರೀತಿಯಲ್ಲಿ ತಯಾರಾಗಿದೆ. ನೂತನ ಬೈಕುಗಳಾದ ಜಾವಾ, ಜಾವಾ 42 ಹಾಗೂ ಜಾವಾ ಪೆರಾಕ್ ಆವೃತ್ತಿಗಳು ಜಾವಾ ಪ್ರಿಯರ ನಿದ್ದೆಗೆಡಿಸಿದೆ.

    ತನ್ನ ಹಳೆಯ ವಿನ್ಯಾಸದ ಹೋಲಿಕೆ:
    ನೂತನ ಜಾವಾ, ಜಾವಾ 42 ಹಾಗೂ ಜಾವಾ ಪೆರಾಕ್ ಮಾದರಿಗಳಲ್ಲಿ ತನ್ನ ಹಳೆಯ ವಿನ್ಯಾಸವನ್ನೇ ಜಾವಾ ಕಂಪನಿ ಮುಂದುವರಿಸಿದೆ. ಪೆಟ್ರೋಲ್ ಟ್ಯಾಂಕ್, ಸ್ಪೀಡೋ ಮೀಟರ್, ಡ್ಯೂಮ್ ಕ್ಲಾಸಿಕ್ ಲುಕ್ ಗಳನ್ನು ಹಾಗೆಯೇ ಮುಂದುವರಿಸಿಕೊಂಡು ಬಂದಿದೆ.

    ಹಳೇ ಜಾವಾಕ್ಕಿಂತಲೂ ವೇಗ ಜಾಸ್ತಿ ತೂಕ ಕಡಿಮೆ:
    ಜಾವಾದ ಹಳೆಯ 500 ಸಿಸಿ ಮಾದರಿಯಲ್ಲಿನ ವೇಗಕ್ಕಿಂತಲೂ 293 ಸಿಸಿ ಎಂಜಿನ್ನಿನ ವೇಗ ಹೆಚ್ಚಿದೆ. ನೂತನ ಬೈಕುಗಳಲ್ಲಿ ಲಿಕ್ವಿಡ್ ಕೂಲ್ಡ್ ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದೆ. ಜೊತೆಗೆ 6ಸ್ಪೀಡ್ ಗೇರ್‌ಬಾಕ್ಸ್‌ನ್ನು ಒಳಗೊಂಡಿದೆ. ಒಟ್ಟಾರೆ ಬೈಕಿನ ತೂಕ ಹಳೆಯ ಬೈಕಿಗೆ ಹೋಲಿಸಿದರೆ ಕಡಿಮೆಯಿದೆ.

    ಆನಂದ್ ಮಹೀಂದ್ರರವರ ಹುಟ್ಟುಹಬ್ಬ ಸೂಚಿಸುವ ಬೈಕ್ ದರ:
    ಮಹೀಂದ್ರದ ಮಾಲೀಕರಾಗಿರುವ ಆನಂದ್ ಮಹೀಂದ್ರರ ಹುಟ್ಟು ಹಬ್ಬವನ್ನೇ ಹೋಲಿಕೆಯಾಗುವ ರೀತಿಯಲ್ಲಿ ಜಾವಾ 42 ಬೈಕಿನ ಬೆಲೆಯನ್ನು ನಿಗದಿಪಡಿಸಿದೆ. ಮತ್ತೊಮ್ಮೆ ಭಾರತದಲ್ಲಿ ಜಾವಾ ಬೈಕುಗಳನ್ನು ಪರಿಚಯಿಸಲು ಕಾರಣವಾಗಿರುವ ಆನಂದ್ ಅವರಿಗೆ ಜಾವಾ ಈ ಮೂಲಕ ಗೌರವ ಸೂಚಿಸಿದೆ. ಆನಂದ್ ಮಹೀಂದ್ರಾ 1955ರ ಮೇ 1(01/05/1955) ರಂದು ಜನಿಸಿದ್ದರು. ಹೀಗಾಗಿ ಜಾವಾ 42 ಬೈಕಿನ ಬೆಲೆಯನ್ನು 1.55 ಲಕ್ಷ ರೂಪಾಯಿ ನಿಗದಿಪಡಿಸಿದೆ.

     

    ನೂತನ ಜಾವಾ ಪರ್ಫಾರ್ಮೆನ್ಸ್ ಹೆಚ್ಚು:
    ಜಾವಾ 42 ಬೈಕ್ 170 ಕೆಜಿ ತೂಕದೊಂದಿಗೆ 27 ಬಿಎಚ್‍ಪಿ ಜೊತೆ 29 ಎನ್‍ಎಂ ಟಾರ್ಕ್ ಉತ್ಪಾದಿಸುವ ಮೂಲಕ 158.8 ಬಿಎಚ್‍ಪಿ ಶಕ್ತಿಯನ್ನು ಹೊಂದಿದೆ. ಬಜಾಜ್‍ನ ಆರ್‍ಎಸ್200 160 ಕೆಜಿ ಹೊಂದಿದ್ದು, 24.5 ಬಿಎಚ್‍ಪಿಯೊಂದಿಗೆ 149.3 ಶಕ್ತಿಯನ್ನು ಮಾತ್ರ ಉತ್ಪಾದಿಸುತ್ತದೆ. ಯಾವುದೇ ರಾಯಲ್ ಎನ್‍ಫೀಲ್ಡ್ ಬೈಕುಗಳು ಇಷ್ಟು ವೇಗವನ್ನು ಪಡೆಯುವುದಿಲ್ಲ. ಇದನ್ನೂ ಓದಿ: ಜಾವಾ 42 Vs ರಾಯಲ್ ಎನ್‍ಫೀಲ್ಡ್ ಕ್ಲಾಸಿಕ್ 350: ಯಾವುದು ಉತ್ತಮ? ಬೆಲೆ ಎಷ್ಟು? ಗುಣವೈಶಿಷ್ಟ್ಯ ಏನು?

    ಜಾವಾ ಹೆಸರು ಬದಲಿಸದ ಮಹೀಂದ್ರ:
    ಭಾರತದಲ್ಲಿ ಹೆಸರು ಮಾಡಿದ್ದ ಜಾವಾವನ್ನು ತನ್ನ ತೆಕ್ಕೆಗೆ ಪಡೆದುಕೊಂಡಿರುವ ಮಹೀಂದ್ರ ನೂತನ ಬೈಕುಗಳಲ್ಲಿ ತನ್ನ ಹೆಸರನ್ನೇ ನಮೂದಿಸದೇ, ಹಳೆಯ ಮಾದರಿಯ ಹೆಸರನ್ನೇ ನೂತನ ಬೈಕುಗಳಿಗೆ ಮುಂದುವರಿಸಿಕೊಂಡು ಬಂದಿದೆ. ಬಿಡುಗಡೆಯ ಸಂದರ್ಭದಲ್ಲಿ ಮಹೀಂದ್ರ ಕಂಪನಿಯ ಸಿಇಒ ಆನಂದ್ ಹಾಗೂ ಜಾವಾದ ಅನುಪಮ್ ಥರೇಜಾ ಇದೇ ಹೆಸರನ್ನು ಸೂಚಿಸಿದ್ದಾರೆ.

    ರಾಯಲ್ ಎನ್‍ಫೀಲ್ಡ್ ನ ಮಾಜಿ ನೌಕರರೇ ನೂತನ ಜಾವಾದ ರುವಾರಿಗಳು:
    ಜಾವಾದ ಮುಖ್ಯಸ್ಥರಾಗಿರುವ ಅನುಪಯ್ ಥರೇಜಾ ಸೇರಿದಂತೆ ಆಶಿಶ್ ಜೋಶಿಯವರನ್ನು ಒಳಗೊಂಡ ಅನೇಕರು ರಾಯಲ್ ಎನ್‍ಫೀಲ್ಡ್ ಕಂಪನಿಯ ಮಾಜಿ ನೌಕರರಾಗಿದ್ದಾರೆ. ಅಲ್ಲದೇ ಆಶಿಶ್ ಜೋಶಿಯವರು ಕ್ಲಾಸಿಕ್ ಮಾದರಿಯ ಬೈಕ್ ಬಿಡುಗಡೆಯಲ್ಲಿ ಬಹುಮುಖ್ಯ ಪಾತ್ರವನ್ನು ವಹಿಸಿಕೊಂಡಿದ್ದವರು.

    ವಿಂಟೇಜ್ ಜಾವಾದ ನೂತನ ಮಾದರಿಯೇ ಪೆರಾಕ್:
    ಜಾವಾ ಪೆರಾಕ್ ಅತಿ ಕಡಿಮೆ ಬೆಲೆಯ ಬಾಬಾರ್ ಮಾದರಿ ಬೈಕುಗಳಾಗಿದೆ. ಇದಲ್ಲದೇ ಜಾವಾದ ವಿಂಟೇಜ್ ಮಾದರಿಯನ್ನು ಪೆರಾಕ್ ಹೋಲುತ್ತಿದೆ. ಈ ಮಾದರಿಯನ್ನು ಜಾವಾ ಕೇವಲ ಅನಾವರಣಗೊಳಿಸಿದೆ. ಆದರೆ ಈ ಮಾದರಿಯ ಬೈಕುಗಳು 2019ರ ವೇಳೆಗೆ ಗ್ರಾಹಕರ ಕೈ ಸೇರಲಿವೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: ಮತ್ತೆ ಮಾರುಕಟ್ಟೆಗೆ ಲಗ್ಗೆ ಇಟ್ಟ ಜಾವಾ ಬೈಕ್: ಬೆಲೆ ಎಷ್ಟು? ನೂತನ ವೈಶಿಷ್ಟ್ಯವೇನು?

    ಜಾವಾ ಮತ್ತೆ ಎಂಟ್ರಿ ಕೊಟ್ಟಿದ್ದು ಹೇಗೆ?
    22 ವರ್ಷಗಳ ನಂತರ ಯೆಜ್ಡಿ ಜಾವಾ ಮೋಟಾರ್‍ಸೈಕಲ್ ಕಂಪನಿ, ಕ್ಲಾಸಿಕ್ ಲೆಜೆಂಡ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯ ಮೂಲಕ ಮತ್ತೆ ಭಾರತದ ಮಾರುಕಟ್ಟೆ ಪ್ರವೇಶಿಸಿದೆ. ಮಹೀಂದ್ರ ಕಂಪನಿ ಮಾಲೀಕ ಆನಂದ್ ಮಹೀಂದ್ರ, ಉದ್ಯಮಿ ಅನುಪಮ್ ಥರೇಜಾ ಹಾಗೂ ರಿಯಲ್ ಎಸ್ಟೇಟ್ ಉದ್ಯಮಿ ಬೊಮನ್ ಇರಾನಿಯವರ ಮೂವರು ತಂಡದಿಂದ ಜಾವಾ ಮತ್ತೆ ಭಾರತದಲ್ಲಿ ಅಬ್ಬರಿಸಲು ಮುಂದಾಗಿದೆ. ಅನುಪಮ್ ಥರೇಜಾ 2005 ರಿಂದ 2008ರವರೆಗೆ ರಾಯಲ್ ಎನ್‍ಫೀಲ್ಡ್‍ನಲ್ಲಿ ನಿರ್ದೇಶಕರಾಗಿ ಸೇವೆಸಲ್ಲಿಸಿದ್ದರು. ಇದಾದ ನಂತರ ಅವರು ಜಾವಾದ ಬೈಕುಗಳನ್ನು ಹೊರತರುವಲ್ಲಿ ಯಶಸ್ವಿಯಾಗಿದ್ದಾರೆ.

    ಮಾಹಿತಿಗಳ ಪ್ರಕಾರ ಕ್ಲಾಸಿಕ್ ಲೆಜೆಂಡ್ಸ್ ಕಂಪನಿಯಲ್ಲಿ ಒಟ್ಟಾರೆ ಶೇ.60ರಷ್ಟು ಶೇರನ್ನು ಮಹೀಂದ್ರ ಕಂಪನಿ ಹೊಂದಿದ್ದರೆ, ಉಳಿದ ಷೇರನ್ನು ಅನುಪಮ್ ಹಾಗೂ ಇರಾನಿ ಹೊಂದಿದ್ದಾರೆ. ಜಾವಾ ಬೈಕುಗಳು ಮಹೀಂದ್ರಾ ಘಟಕಗಳಲ್ಲೇ ನಿರ್ಮಾಣವಾಗುತ್ತಿದ್ದು, ಎಲ್ಲಾ ಸಂಶೋಧನೆ ಹಾಗೂ ತಂತ್ರಜ್ಞಾನಗಳು ಮಹೀಂದ್ರದ ಅಡಿಯಲ್ಲೇ ಸಿದ್ಧವಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಜಾವಾ 42 Vs ರಾಯಲ್ ಎನ್‍ಫೀಲ್ಡ್ ಕ್ಲಾಸಿಕ್ 350: ಯಾವುದು ಉತ್ತಮ? ಬೆಲೆ ಎಷ್ಟು? ಗುಣವೈಶಿಷ್ಟ್ಯ ಏನು?

    ಜಾವಾ 42 Vs ರಾಯಲ್ ಎನ್‍ಫೀಲ್ಡ್ ಕ್ಲಾಸಿಕ್ 350: ಯಾವುದು ಉತ್ತಮ? ಬೆಲೆ ಎಷ್ಟು? ಗುಣವೈಶಿಷ್ಟ್ಯ ಏನು?

    80,90ರ ದಶಕದಲ್ಲಿ ಜನರ ಮನಸ್ಸನ್ನು ಗೆದ್ದಿದ್ದ ಜಾವ ಮತ್ತೆ ರಸ್ತೆಗೆ ಇಳಿಯಲಿದೆ. ಗುರುವಾರ ಕಂಪನಿಯು ತನ್ನ ನೂತನ ಜಾವಾ, ಜಾವಾ 42 ಹಾಗೂ ಜಾವಾ ಪೆರಾಕ್ ಮಾದರಿಯ ಮೂರು ಆವೃತ್ತಿಗಳನ್ನು ಭಾರತದ ಮಾರುಕಟ್ಟೆಯಲ್ಲಿ ಅನಾವರಣಗೊಳಿಸಿತ್ತು. ಹೀಗಾಗಿ ಜಾವಾದ ಬೈಕುಗಳು ಮತ್ತೆ ಭಾರತದ ರಸ್ತೆಗಳಲ್ಲಿ ಅಬ್ಬರಿಸಲು ಮುಂದಾಗಿವೆ.

    ಈಗಾಗಲೇ ಯುವ ಮನಸ್ಸನ್ನು ಗೆದ್ದಿರುವ ರಾಯಲ್ ಎನ್‍ಫೀಲ್ಡ್ ಭಾರತದಲ್ಲಿ ಉತ್ತಮ ಮಾರುಕಟ್ಟೆಯನ್ನು ಹೊಂದಿದೆ. ತನ್ನ ನೂತನ ಆವೃತ್ತಿಗಳ ಮೂಲಕ ಬೈಕ್ ಪ್ರಿಯರನ್ನು ಸೆಳೆಯುವಲ್ಲಿ ಎನ್‍ಫೀಲ್ಡ್ ಸಫಲವಾಗಿದೆ. ಈಗ ಮಾರುಕಟ್ಟೆಗೆ ಲಗ್ಗೆ ಇಟ್ಟಿರುವ ಜಾವಾದ ಬೈಕುಗಳು ಎನ್‍ಫೀಲ್ಡ್ ಬೈಕುಗಳಿಗೆ ಪ್ರಬಲ ಪ್ರತಿಸ್ಪರ್ಧಿ ಎಂದೇ ಹೇಳಲಾಗುತ್ತಿದೆ. ಹೀಗಾಗಿ ರಾಯಲ್ ಎನ್‍ಫೀಲ್ಡ್ ಕ್ಲಾಸಿಕ್ 350 ಬೈಕಿನ ಜೊತೆ ನೂತನ ಜಾವಾ 42 ಮಾದರಿಯ ವ್ಯತ್ಯಾಸದ ಮಾಹಿತಿಯನ್ನು ಈ ಕೆಳಗೆ ನೀಡಿದ್ದೇವೆ.

    ಜಾವಾ 42 ಹಾಗೂ ರಾಯಲ್ ಎನ್‍ಫೀಲ್ಡ್ ಕ್ಲಾಸಿಕ್ 350 ಗುಣವೈಶಿಷ್ಟ್ಯಗಳು:
    ಎಂಜಿನ್ ಮತ್ತು ಸಸ್ಪೆನ್ಷನ್:
    ಜಾವಾ 42: 293ಸಿಸಿ ಲಿಕ್ವಿಡ್ ಕೂಲ್ಡ್ ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದ್ದು, 6-ಸ್ಪೀಡ್ ಗೇರ್‌ಬಾಕ್ಸ್ ನೊಂದಿಗೆ 27 ಬಿಎಚ್‍ಪಿ ಜೊತೆ 28 ಎನ್‍ಎಂ ಟಾರ್ಕ್ ಉತ್ಪಾದಿಸುವ ಶಕ್ತಿ ಹೊಂದಿದೆ. ಫ್ರಂಟ್ ಟೆಲಿಸ್ಕೋಪಿಕ್ ಹೈಡ್ರಾಲಿಕ್ ಫೋರ್ಕ್ ಸಸ್ಪೆನ್ಷನ್ ಹೊಂದಿದ್ದು, ಹಿಂದುಗಡೆ ಗ್ಯಾಸ್ ಕ್ಯಾನಿಸ್ಟರ್-ಟ್ವಿನ್ ಶಾಕ್ ಹೈಡ್ರಾಲಿಕ್ ಸಸ್ಪೆನ್ಷನ್ ನೀಡಿದೆ. ಇದನ್ನೂ ಓದಿ: ಮತ್ತೆ ಮಾರುಕಟ್ಟೆಗೆ ಲಗ್ಗೆ ಇಟ್ಟ ಜಾವಾ ಬೈಕ್: ಬೆಲೆ ಎಷ್ಟು? ನೂತನ ವೈಶಿಷ್ಟ್ಯವೇನು?

    ಕ್ಲಾಸಿಕ್ 350: 346 ಸಿಸಿ ಏರ್ ಕೂಲ್ಡ್ ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದ್ದು, 5-ಸ್ಪೀಡ್ ಗೇರ್‌ಬಾಕ್ಸ್ ನೊಂದಿಗೆ 19.8-ಬಿಎಚ್‍ಪಿ 5250 ಆರ್‌ಪಿಎಂ ಜೊತೆಗೆ 28-ಎನ್‍ಎಂ ಟಾರ್ಕ್ ಹಾಗೂ 4000 ಆರ್‌ಪಿಎಂ ಉತ್ಪಾದನಾ ಶಕ್ತಿಯನ್ನು ಹೊಂದಿದೆ. ಫ್ರಂಟ್ ಸಸ್ಪೆನ್ಷನ್ ಟೆಲಿಸ್ಕೋಪಿಕ್ 35 ಎಂಎಂ ಫೋಕ್ರ್ಸ್ 130 ಎಂಎಂ ಸಸ್ಪೆನ್ಷನ್ ಹೊಂದಿದ್ದು, ಹಿಂದುಗಡೆ ಟ್ವಿನ್ ಗ್ಯಾಸ್ 5-ಹಂತದಲ್ಲಿ ಹೊಂದಾಣಿಕೆಯ ಮಾಡುವ 80 ಎಂಎಂ ಸಸ್ಪೆನ್ಷನ್ ಹೊಂದಿದೆ.

    ಬ್ರೇಕ್ ಹಾಗೂ ಟೈರ್ ಗಳು:
    ಜಾವಾ 42: ಮುಂದುಗಡೆ 90/90 ಅಳತೆಯ 18 ಇಂಚಿನ ಟೈರ್ ಹೊಂದಿದ್ದು, 280 ಎಂಎಂ ಡಿಸ್ಕ್ ಜೊತೆ ಸಿಂಗಲ್ ಚಾನೆಲ್ ಎಬಿಎಸ್ ಬ್ರೇಕ್ ಹೊಂದಿದೆ. ಹಿಂದುಗಡೆ 120/80 ಅಳತೆಯ 17 ಇಂಚಿನ ಟೈರ್ ಹೊಂದಿದ್ದು, 153 ಎಂಎಂ ಡ್ರಮ್ ಬ್ರೇಕ್ ಸಿಸ್ಟಮ್ ಹೊಂದಿದೆ.

    ಕ್ಲಾಸಿಕ್ 350: ಮುಂದುಗಡೆ 90/90 ಅಳತೆಯ 19 ಇಂಚಿನ ಟೈರ್ ಹೊಂದಿದ್ದು, 280 ಎಂಎಂ ಡಿಸ್ಕ್ ಬ್ರೇಕ್ ಹೊಂದಿದ್ದು, ಹಿಂದುಗಡೆ 120/80 ಅಳತೆಯ 18 ಇಂಚಿನ ಟೈರ್ ಹೊಂದಿದ್ದು, 240 ಎಂಎಂ ಡಿಸ್ಕ್ ಬ್ರೇಕ್ ನೀಡಿದೆ.

    ಸುತ್ತಳತೆ ಹಾಗೂ ತೂಕ:
    ಜಾವಾ 42: 2122ಎಂಎಂ ಉದ್ದ, 789ಎಂಎಂ ಅಗಲ, 1165ಎಂಎಂ ಎತ್ತರ ಆಗಿದ್ದು, ವೀಲ್‍ಬೇಸ್ 1369ಎಂಎಂ ಇದೆ. ಒಟ್ಟು ಇಂಧನ ಸಾಮರ್ಥ್ಯ 14 ಲೀಟರ್ ಇದೆ. ಒಟ್ಟು ತೂಕ 170 ಕೆಜಿ ಹೊಂದಿದೆ. (ಗ್ರೌಂಡ್ ಕ್ಲಿಯರೆನ್ಸ್ ಮಾಹಿತಿ ನೀಡಿಲ್ಲ)

    ಕ್ಲಾಸಿಕ್ 350: 2160ಎಂಎಂ ಉದ್ದ, 790ಎಂಎಂ ಅಗಲ, 1090ಎಂಎಂ ಎತ್ತರ ಆಗಿದ್ದು, ವೀಲ್‍ಬೇಸ್ 1370ಎಂಎಂ ಇದೆ. ಗ್ರೌಂಡ್ ಕ್ಲಿಯರೆನ್ಸ್ 135 ಎಂಎಂ ಆಗಿದೆ. ಇಂಧನ ಸಾಮರ್ಥ್ಯ 13.5 ಲೀಟರ್ ಆಗಿದ್ದು, ಒಟ್ಟು ತೂಕ 134 ಕೆಜಿಯಿದೆ,

    ಬಣ್ಣ:
    ಜಾವಾ 42: ನೆಬ್ಯುಲಾ ಬ್ಲೂ, ಕಾಮೆಟ್ ರೆಡ್, ಸ್ಟರ್ಲೈಟ್ ಬ್ಲೂ, ಲುಮೋಸ್ ಲೈಮ್, ಹ್ಯಾಲೆಸ್ ಟೀಲ್ ಹಾಗೂ ಗ್ಯಾಲಕ್ಟಿಕ್ ಗ್ರೀನ್ ಬಣ್ಣಗಳಲ್ಲಿ ಸಿಗುತ್ತದೆ.
    ಕ್ಲಾಸಿಕ್ 350: ಲಗೂನ್, ಆಶ್ ಸಿಲ್ವರ್, ಚೆಸ್ಟ್ ನಟ್, ಬ್ಲಾಕ್, ರೆಡ್ಡಿಚ್ ರೆಡ್, ರೆಡ್ಡಿಚ್ ಗ್ರೀನ್, ರೆಡ್ಡಿಚ್ ಬ್ಲೂ ಹಾಗೂ ಗನ್‍ಮೆಟಲ್ ಗ್ರೇ ಬಣ್ಣಗಳಲ್ಲಿ ಲಭ್ಯವಿದೆ.

    ಬೆಲೆ:
    ಜಾವಾ 42: ದೆಹಲಿ ಎಕ್ಸ್-ಶೋರೂಮಿನ ದರ 1.55 ಲಕ್ಷ ರೂಪಾಯಿಗಳು.
    ಕ್ಲಾಸಿಕ್ 350: ದೆಹಲಿ ಎಕ್ಸ್-ಶೋರೂಮಿಗೆ 1.51 ಲಕ್ಷ ರೂಪಾಯಿಗಳು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಮತ್ತೆ ಮಾರುಕಟ್ಟೆಗೆ ಲಗ್ಗೆ ಇಟ್ಟ ಜಾವಾ ಬೈಕ್: ಬೆಲೆ ಎಷ್ಟು? ನೂತನ ವೈಶಿಷ್ಟ್ಯವೇನು?

    ಮತ್ತೆ ಮಾರುಕಟ್ಟೆಗೆ ಲಗ್ಗೆ ಇಟ್ಟ ಜಾವಾ ಬೈಕ್: ಬೆಲೆ ಎಷ್ಟು? ನೂತನ ವೈಶಿಷ್ಟ್ಯವೇನು?

    ನವದೆಹಲಿ: ದಶಕಗಳ ಹಿಂದೆ ಭಾರತದಲ್ಲಿ ಅಬ್ಬರಿಸಿದ್ದ ಜಾವಾ ಬೈಕುಗಳು ಮತ್ತೆ ನವ ವಿನ್ಯಾಸ ಹಾಗೂ ನೂತನ ತಂತ್ರಜ್ಞಾನದೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ.

    ದಶಕಗಳ ಹಿಂದೆ ಬೈಕ್ ಪ್ರಿಯರಲ್ಲಿ ಹುಚ್ಚು ಹಿಡಿಸಿದ್ದ, ಜಾವಾ ಬೈಕುಗಳನ್ನು ಜಾವಾ ಮೋಟಾರ್ ಸೈಕಲ್ ಕಂಪನಿ ಪುನಃ ಮಾರುಕಟ್ಟೆಗೆ ತರುವಲ್ಲಿ ಯಶಸ್ವಿಯಾಗಿದೆ. ಕಂಪನಿ ತನ್ನ ನೂತನ ಜಾವಾ, ಜಾವಾ 42 ಹಾಗೂ ಜಾವಾ ಪೆರಾಕ್ ಮಾದರಿಯ ಮೂರು ಆವೃತ್ತಿಗಳನ್ನು ಗುರುವಾರ ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

    ಜಾವಾ ಕಂಪನಿಯು ಗತಕಾಲದ ವೈಭವವನ್ನು ಕಾಪಾಡಲು ತನ್ನ ನೂತನ ಬೈಕುಗಳ ವಿನ್ಯಾಸದಲ್ಲಿ ಅದೇ ಮಾದರಿಯನ್ನು ಉಳಿಸಿಕೊಂಡು ಬಂದಿದೆ. ಬೈಕಿನ ಸ್ಪೀಡೋ ಮೀಟರ್, ಡ್ಯೂಮ್ ನ ಕ್ಲಾಸಿಕ್ ಲುಕ್ ಅನ್ನು ಹಾಗೇ ಉಳಿಸಿ, ಹೊಸದಾಗಿ ಟೂಲ್ ಬಾಕ್ಸ್ ಅನ್ನು ಸೇರಿಸುವ ಮೂಲಕ ಬೈಕಿನ ಅಂದವನ್ನು ಹೆಚ್ಚುವಂತೆ ಮಾಡಿದೆ. ಅಲ್ಲದೇ ಈ ಮೂರು ಬೈಕುಗಳು ಬಿಎಸ್6 ಮಾದರಿಯನ್ನು ಒಳಗೊಂಡಿದೆ.

    ಜಾವಾ ಹಾಗೂ ಜಾವಾ 42 ಬೈಕ್‍ಗಳು ಮಧ್ಯಪ್ರದೇಶದ ಪಿಥಮ್‍ಪುರ್ ನಲ್ಲಿರುವ ಮಹೀಂದ್ರಾ ಘಟಕದಲ್ಲಿ ತಯಾರಾಗಲಿದ್ದು, 2019ರ ಫೆಬ್ರವರಿಯಲ್ಲಿ ಬೈಕುಗಳು ಟೆಸ್ಟ್ ರೈಡ್‍ಗೆ ಸಿಗಲಿದೆ. ಫೆಬ್ರವರಿಯ ನಂತರ ಗ್ರಾಹಕರ ಕೈ ಸೇರಲಿವೆ. ಅಲ್ಲದೇ ಜಾವಾ ಪೆರಾಕ್ ಬೈಕ್ 2019ರ ಮಧ್ಯದಲ್ಲಿ ಗ್ರಾಹಕರಿಗೆ ತಲುಪಲಿದೆ ಎಂದು ಹೇಳಲಾಗುತ್ತಿದೆ.

    ಜಾವಾ ಬೈಕಿನ ಗುಣವೈಶಿಷ್ಟ್ಯಗಳು:

    293ಸಿಸಿ ಲಿಕ್ವಿಡ್ ಕೂಲ್ಡ್ ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದ್ದು, 6-ಸ್ಪೀಡ್ ಗೇರ್‌ಬಾಕ್ಸ್ ನೊಂದಿಗೆ 27 ಬಿಎಚ್‍ಪಿ ಜೊತೆ 28 ಎನ್‍ಎಂ ಟಾರ್ಕ್ ಉತ್ಪಾದಿಸುವ ಶಕ್ತಿ ಹೊಂದಿದೆ. ಮುಂಭಾಗ 280 ಎಂಎಂ ಡಿಸ್ಕ್ ಜೊತೆ ಎಬಿಎಸ್ ಬ್ರೇಕ್ ಹೊಂದಿದ್ದರೆ, ಹಿಂದುಗಡೆ 153 ಎಂಎಂ ಡ್ರಮ್ ಬ್ರೇಕ್ ಸಿಸ್ಟಮ್ ಹೊಂದಿದೆ. 14 ಲೀಟರ್ ಸಾಮರ್ಥ್ಯದ ಪೆಟ್ರೋಲ್ ಟ್ಯಾಂಕ್ ಹೊಂದಿದೆ. ಒಟ್ಟಾರೆ ಬೈಕಿನ ತೂಕ 170 ಕೆಜಿ ಯಷ್ಟಿದೆ. ಇದು ಬ್ಲಾಕ್, ಮರೂನ್ ಹಾಗೂ ಗ್ರೇ ಬಣ್ಣಗಳಲ್ಲಿ ಲಭ್ಯವಿರಲಿದೆ.

    ಜಾವಾ 42 ಬೈಕಿನ ಗುಣವೈಶಿಷ್ಟ್ಯಗಳು:


    293ಸಿಸಿ ಲಿಕ್ವಿಡ್ ಕೂಲ್ಡ್ ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದ್ದು, 6-ಸ್ಪೀಡ್ ಗೇರ್‌ಬಾಕ್ಸ್ ನೊಂದಿಗೆ 27 ಬಿಎಚ್‍ಪಿ ಜೊತೆ 28 ಎನ್‍ಎಂ ಟಾರ್ಕ್ ಉತ್ಪಾದಿಸುವ ಶಕ್ತಿ ಹೊಂದಿದೆ. ಮುಂಭಾಗ 280 ಎಂಎಂ ಡಿಸ್ಕ್ ಜೊತೆ ಎಬಿಎಸ್ ಬ್ರೇಕ್ ಹೊಂದಿದ್ದರೆ, ಹಿಂದುಗಡೆ 153 ಎಂಎಂ ಡ್ರಮ್ ಬ್ರೇಕ್ ಸಿಸ್ಟಮ್ ಹೊಂದಿದೆ. 14 ಲೀಟರ್ ಸಾಮರ್ಥ್ಯದ ಪೆಟ್ರೋಲ್ ಟ್ಯಾಂಕ್ ಹೊಂದಿದೆ. ಒಟ್ಟಾರೆ ಬೈಕಿನ ತೂಕ 170 ಕೆಜಿ ಯಷ್ಟಿದೆ. ಇದು ನೆಬ್ಯುಲಾ ಬ್ಲೂ, ಕಾಮೆಟ್ ರೆಡ್, ಸ್ಟರ್ಲೈಟ್ ಬ್ಲೂ, ಲುಮೋಸ್ ಲೈಮ್, ಹ್ಯಾಲೆಸ್ ಟೀಲ್, ಗ್ಯಾಲಕ್ಟಿಕ್ ಗ್ರೀನ್

    ಜಾವಾ ಪೆರಾಕ್ ಮಾದರಿ ಗುಣವೈಶಿಷ್ಟ್ಯಗಳು:


    334ಸಿಸಿ ಲಿಕ್ವಿಡ್ ಕೂಲ್ಡ್ ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದ್ದು, 6-ಸ್ಪೀಡ್ ಗೇರ್‌ಬಾಕ್ಸ್ ನೊಂದಿಗೆ 30 ಬಿಎಚ್‍ಪಿ ಯೊಂದಿಗೆ 31 ಎನ್‍ಎಂ ಟಾರ್ಕ್ ಉತ್ಪಾದಿಸುವ ಶಕ್ತಿ ಹೊಂದಿದೆ. ಮುಂಬಾಗ 280 ಎಂಎಂ ಡಿಸ್ಕ್ ಜೊತೆ ಎಬಿಎಸ್ ಬ್ರೇಕ್ ಹೊಂದಿದ್ದರೆ, ಹಿಂದುಗಡೆ 153 ಎಂಎಂ ಡ್ರಮ್ ಬ್ರೇಕ್ ಸಿಸ್ಟಮ್ ಹೊಂದಿದೆ. 14 ಲೀಟರ್ ಸಾಮರ್ಥ್ಯದ ಪೆಟ್ರೋಲ್ ಟ್ಯಾಂಕ್ ಹೊಂದಿದೆ. ಈ ಪೆರಾಕ್ ಮಾದರಿಯಲ್ಲಿ ದೊಡ್ಡ ಬೋರ್ ಗಳನ್ನು ಬಳಸಲಾಗಿದೆ.

    ನೂತನ ಜಾವಾ ಬೈಕುಗಳ ಬೆಲೆ ಎಷ್ಟು?
    ನೂತನ ಬೈಕುಗಳಾದ ಜಾವಾ ಮಾದರಿಗೆ 1.64 ಲಕ್ಷ ರೂಪಾಯಿ, ಜಾವಾ 42 ಗೆ 1.55 ಲಕ್ಷ ರೂ. ಹಾಗೂ ಜಾವಾ ಪೆರಾಕ್ ಮಾದರಿಗೆ 1.89 ಲಕ್ಷ ರೂ. ಅಂದಾಜು ಬೆಲೆ ನಿಗದಿಯಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews