Tag: ಜಾವಲಿನ್ ಥ್ರೋ

  • World Athletics Championships- ಚಿನ್ನದ ಪದಕಕ್ಕೆ ಮುತ್ತಿಟ್ಟು ಹೊಸ ದಾಖಲೆ ಬರೆದ ನೀರಜ್ ಚೋಪ್ರಾ

    World Athletics Championships- ಚಿನ್ನದ ಪದಕಕ್ಕೆ ಮುತ್ತಿಟ್ಟು ಹೊಸ ದಾಖಲೆ ಬರೆದ ನೀರಜ್ ಚೋಪ್ರಾ

    ಬುಡಾಪೆಸ್ಟ್: ಹಂಗೇರಿಯ ಬುಡಾಪೆಸ್ಟ್ ನಲ್ಲಿ ಭಾನುವಾರ ನಡೆದ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‍ಶಿಪ್‍ನ (World Athletics Championships) ಜಾವೆಲಿನ್ ಥ್ರೋನಲ್ಲಿ ( Javelin Throw ) ನೀರಜ್ ಚೋಪ್ರಾ ಚಿನ್ನದ ಪದಕಕ್ಕೆ ಮುತ್ತಿಟ್ಟಿದ್ದಾರೆ.

    ಫೈನಲ್ ಪಂದ್ಯದಲ್ಲಿ 88.17 ಮೀಟರ್ ದೂರ ಭರ್ಜಿ ಎಸೆಯುವ ಮೂಲಕ ನೀರಜ್ ಚೋಪ್ರಾ ಈ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಈ ಮೂಲಕ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‍ಶಿಪ್‍ನಲ್ಲಿ ಚಿನ್ನದ ಪದಕ ಗೆದ್ದ ಮೊದಲ ಭಾರತೀಯ ಎಂಬ ದಾಖಲೆ ನಿರ್ಮಿಸಿದ್ದಾರೆ.

    ಮೊದಲ ಸುತ್ತಿನಲ್ಲೇ ಫೌಲ್ ಮಾಡಿದ್ದ ನೀರಜ್ (Neeraj Chopra), 2ನೇ ಸುತ್ತಿನಲ್ಲಿ 88.17 ಮೀಟರ್ ದೂರಕ್ಕೆ ಎಸೆಯುವ ಮೂಲಕ ಚಿನ್ನದ ಪದಕವನ್ನು ತನ್ನದಾಗಿಸಿಕೊಂಡರು. ಪಾಕಿಸ್ತಾನದ ಅರ್ಷದ್ ನದೀಮ್ ಅವರು 87.82 ಮೀಟರ್ ಎಸೆಯುವ ಮೂಲಕ ಎರಡನೇ ಸ್ಥಾನ ಪಡೆದು ಬೆಳ್ಳಿ ಪದಕ ಗೆದ್ದಿದ್ದಾರೆ. ಇದನ್ನೂ ಓದಿ: ʼಶಿವಶಕ್ತಿʼ ನಾಮಕರಣ ಮಾಡಿದ್ದರಲ್ಲಿ ಯಾವುದೇ ತಪ್ಪಿಲ್ಲ, ಹೊರಗಿನ ಹುಡುಕಾಟಕ್ಕೆ ವಿಜ್ಞಾನವಾದರೆ ಅಂತರಂಗಕ್ಕೆ ಆಧ್ಯಾತ್ಮ: ಇಸ್ರೋ ಅಧ್ಯಕ್ಷ

    2022ರ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‍ಶಿಪ್‍ನಲ್ಲಿ ನೀರಜ್ ಚೋಪ್ರಾ ಬೆಳ್ಳಿ ಪದಕ ಗೆದ್ದಿದ್ದರು. ಆದರೆ ಈ ಬಾರಿ ಚಿನ್ನದ ಪದಕ ಗೆಲ್ಲುವ ಮೂಲಕ ಹೊಸ ಇತಿಹಾಸ ಸೃಷ್ಟಿಸಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ವಿಶ್ವ ಅಥ್ಲೆಟಿಕ್ ಚ್ಯಾಂಪಿಯನ್‍ಶಿಪ್: ಹೊಸ ಇತಿಹಾಸ ಬರೆದ ಭಾರತದ ದವಿಂದರ್ ಸಿಂಗ್

    ವಿಶ್ವ ಅಥ್ಲೆಟಿಕ್ ಚ್ಯಾಂಪಿಯನ್‍ಶಿಪ್: ಹೊಸ ಇತಿಹಾಸ ಬರೆದ ಭಾರತದ ದವಿಂದರ್ ಸಿಂಗ್

    ಲಂಡನ್: ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‍ಶಿಪ್‍ನಲ್ಲಿ ಜಾವಲಿನ್ ಥ್ರೋ ವಿಭಾಗದಲ್ಲಿ ಭಾರತೀಯ ಆಟಗಾರ ದವಿಂದರ್ ಸಿಂಗ್ ಕಾಂಗ್ ಅಂತಿಮ ಸುತ್ತಿಗೆ ಆಯ್ಕೆಯಾಗಿದ್ದಾರೆ. ಈ ಮೂಲಕ ವಿಶ್ವ ಚಾಂಪಿಯನ್‍ಶಿಪ್‍ನಲ್ಲಿ ಅಂತಿಮ ಸುತ್ತಿಗೆ ಆಯ್ಕೆಯಾದ ಮೊದಲ ಭಾರತೀಯ ಜಾವಲಿನ್ ಸ್ಪರ್ಧಿ ಎಂಬ ಹೆಗ್ಗಳಿಕಿಗೆ ಪಾತ್ರರಾಗಿದ್ದಾರೆ.

    ಗುರುವಾರದಂದು ಅರ್ಹತಾ ಸುತ್ತಿನಲ್ಲಿ ಸ್ಪರ್ಧಿಸಿದ ಕಾಂಗ್ ಅವರಿಗೆ ಭುಜದ ಗಾಯವಿತ್ತು. ಆದರೂ ಅವರು ಸ್ಪರ್ಧೆಯಲ್ಲಿ ಭಾಗವಹಿಸಿದ್ರು. ಈ ಸುತ್ತಿನಲ್ಲಿ ಆಯ್ಕೆಯಾಗಲು ಕಬ್ಬಿಣದ ಈಟಿಯನ್ನ 83 ಮೀಟರ್ ದೂರ ಎಸೆಯಬೇಕಿತ್ತು. ಕಾಂಗ್ ಅವರು ಮೂರನೇ ಎಸೆತದಲ್ಲಿ 84.22 ಮೀಟರ್ ದೂರಕ್ಕೆ ಈಟಿಯನ್ನ ಎಸೆಯುವ ಮೂಲಕ ಅಂತಿಮ ಸುತ್ತಿಗೆ ಆಯ್ಕೆಯಾಗಿದ್ದಾರೆ. ಮೊದಲ ಎಸೆತದಲ್ಲಿ ಅವರು 82.22 ಮೀ. ದೂರಕ್ಕೆ ಎಸೆದಿದ್ದರು ಹಾಗೂ ಎರಡನೇ ಪ್ರಯತ್ನದಲ್ಲಿ 82.14 ದೂರಕ್ಕೆ ಈಟಿಯನ್ನ ಎಸೆದಿದ್ದರು.

    ಪಂಜಾಬ್ ಮೂಲದವರಾದ 26 ವರ್ಷದ ದವಿಂದರ್ ಸಿಂಗ್ ಕಾಂಗ್, ಕೊನೆಯ ಎಸೆತದಲ್ಲಿ 83 ಮೀ. ದೂರಕ್ಕೆ ಈಟಿಯನ್ನು ಎಸೆಯಲು ಒತ್ತಡದಲ್ಲಿದ್ರು. ಆದ್ರೆ ಅವರು ತಮ್ಮದೇ ಶೈಲಿಯಲ್ಲಿ ಈಟಿಯನ್ನ ಎಸೆದಿದ್ದು ಅರ್ಹತೆಗೆ ಬೇಕಾಗಿದ್ದ ಮಾರ್ಕ್‍ಗಿಂತ ದೂರಕ್ಕೆ ಎಸೆದು ಭಾರತೀಯ ಕ್ಯಾಂಪ್‍ಗೆ ಸಂತಸ ತಂದ್ರು.

    ಈ ಸುತ್ತಿನಲ್ಲಿ ಗ್ರೂಪ್-ಎ ನಿಂದ ಐವರು ಹಾಗೂ ಗ್ರೂಪ್-ಬಿ ನಿಂದ ಏಳು ಮಂದಿ ಆಯ್ಕೆಯಾಗಿದ್ದು, ಎಲ್ಲರೂ ಆಗಸ್ಟ್ 12ರಂದು ನಡೆಯಲಿರುವ ಅಂತಿಮ ಸುತ್ತಿನಲ್ಲಿ ಸ್ಪರ್ಧಿಸಲಿದ್ದಾರೆ.

    ಅಂತಿಮ ಸುತ್ತಿಗೆ ಆಯ್ಕೆಯಾದವರಲ್ಲಿ 84.22 ಮೀ ದೂರದ ಎಸೆತದಿಂದ ದವಿಂದರ್ ಸಿಂಗ್ 7ನೇ ಸ್ಥಾನದಲ್ಲಿದ್ದಾರೆ. ಈವರೆಗೆ ಯಾವುದೇ ವಿಶ್ವ ಚಾಂಪಿಯನ್‍ಶಿಪ್‍ನಲ್ಲಿ ಪುರುಷರ ವಿಭಾಗದ ಜಾವ್ಲಿನ್ ಥ್ರೋನಲ್ಲಿ ಭಾರತೀಯ ಆಟಗಾರರು ಆಯ್ಕೆಯಾಗಿರಲಿಲ್ಲ.

    ಮತ್ತೊಬ್ಬ ಭಾರತೀಯ ಆಟಗಾರ ನೀರಜ್ ಚೋಪ್ರಾ ಅಂತಿಮ ಸುತ್ತಿಗೆ ಆಯ್ಕೆಯಾಗುವಲ್ಲಿ ವಿಫಲರಾಗಿದ್ದಾರೆ. ನೀರಜ್ ಅಂತಿಮ ಸುತ್ತಿಗೆ ಆಯ್ಕೆಯಾಗಿಲ್ಲ ಎಂದು ತಿಳಿದ ನಂತರ ನಾನು ಅಂತಿಮ ಸುತ್ತಿಗೆ ಹೋಗಲೇಬೇಕು ಎಂದುಕೊಂಡೆ. ದೇಶಕ್ಕಾಗಿ ನಾನು ಏನಾದರೂ ಮಾಡ್ಬೇಕು ಅನ್ನಿಸ್ತು. ಈವರೆಗೆ ಯಾವುದೇ ಭಾರತೀಯ ಮಾಡಿರದ ಕೆಲಸವನ್ನ ನಾನು ನನ್ನ ದೇಶಕ್ಕಾಗಿ ಮಾಡಬಯಸಿದೆ. ದೇವರ ದಯದಿಂದ ನಾನದನ್ನು ಮಾಡಿದ್ದೇನೆ ಅಂತ ಕಾಂಗ್ ಹೇಳಿದ್ದಾರೆ.