Tag: ಜಾರ್ಜ್‌ ಸೊರೊಸ್‌

  • ಭಾರತದ ಎನ್‌ಜಿಒಗಳಿಗೆ ಜಾರ್ಜ್ ಸೊರೊಸ್ ನಿಧಿಯಿಂದ ಹಣ ವರ್ಗಾವಣೆ – ಪತ್ತೆ ಹಚ್ಚಿದ ಇಡಿ

    ಭಾರತದ ಎನ್‌ಜಿಒಗಳಿಗೆ ಜಾರ್ಜ್ ಸೊರೊಸ್ ನಿಧಿಯಿಂದ ಹಣ ವರ್ಗಾವಣೆ – ಪತ್ತೆ ಹಚ್ಚಿದ ಇಡಿ

    ನವದೆಹಲಿ: ಭಾರತದಲ್ಲಿನ ಕೆಲ ಎನ್‌ಜಿಒ ಸಂಸ್ಥೆಗಳಿಗೆ ಅಮೆರಿಕದ ಶತಕೋಟ್ಯಧಿಪತಿ ಜಾರ್ಜ್ ಸೊರೊಸ್‌ (George Soros) ನೇತೃತ್ವದ ಆರ್ಥಿಕ ಅಭಿವೃದ್ಧಿ ನಿಧಿಯಿಂದ ಹಣಕಾಸಿನ ನೆರವು ನೀಡಿರುವುದು ಜಾರಿ ನಿರ್ದೇಶನಾಲಯದ (ED) ತನಿಖೆಯಲ್ಲಿ ಬಹಿರಂಗವಾಗಿದೆ.

    ಹೌದು. ಸೊರೊಸ್ ಆರ್ಥಿಕ ಅಭಿವೃದ್ಧಿ ನಿಧಿ (SEDF) ಭಾರತದಲ್ಲಿ ಎನ್‌ಜಿಒ ವಲಯಕ್ಕೆ ಹಣಕಾಸಿನ ನೆರವು ನೀಡಿದೆ ಎಂಬುದು ತನಿಖೆಯಲ್ಲಿ ಬಯಲಾಗಿದೆ. ಇದನ್ನೂ ಓದಿ: ಜಾರ್ಜ್ ಸೊರೊಸ್‌ಗೆ ಇಡಿ ಶಾಕ್‌ – ಓಪನ್ ಸೊಸೈಟಿ ಫೌಂಡೇಶನ್‌ ಕಚೇರಿ ಮೇಲೆ ದಾಳಿ

    ಇಡಿ ತನಿಖೆಯ ಪ್ರಕಾರ, ಸೊರೊಸ್‌ ಆರ್ಥಿಕ ಅಭಿ‌ವೃದ್ಧಿ ನಿಧಿಯು ರೂಟ್‌ಬ್ರಿಡ್ಜ್ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್ (RSPL), ರೂಟ್‌ಬ್ರಿಡ್ಜ್ ಅಕಾಡೆಮಿ ಪ್ರೈವೇಟ್ ಲಿಮಿಟೆಡ್ (RAPL) ಮತ್ತು ಅಸರ್ ಸೋಶಿಯಲ್ ಇಂಪ್ಯಾಕ್ಟ್ ಅಡ್ವೈಸರ್ಸ್ ಪ್ರೈವೇಟ್ ಲಿಮಿಟೆಡ್ (ASAR) ಎಂಬ ಮೂರು ಭಾರತೀಯ ಕಂಪನಿಗಳಿಗೆ ವಿದೇಶಿ ನೇರ ಹೂಡಿಕೆ (FDI) ಮತ್ತು ಸಲಹಾ/ಸೇವಾ ಶುಲ್ಕದ ಹೆಸರಿನಲ್ಲಿ ಹಣದ ನೆರವು ನೀಡಿದೆ. ಈ ಕಂಪನಿಗಳು 2020-21 ರಿಂದ 2023-24ರ ನಡುವೆ ಸುಮಾರು 25 ಕೋಟಿ ರೂ.ಗಳ ನೆರವನ್ನು ಪಡೆದಿವೆ. ಆದ್ರೆ ಸೊರೊಸ್‌ನ ಓಪನ್ ಸೊಸೈಟಿ ಇನ್‌ಸ್ಟಿಟ್ಯೂಟ್ (OSI) ಅನ್ನು ಮೇ 2016 ರಿಂದ ಅನಪೇಕ್ಷಿತ ಚಟುವಟಿಕೆಗಳಿಗಾಗಿ ಗೃಹ ಸಚಿವಾಲಯವು ಕಣ್ಗಾವಲಿನಲ್ಲಿ ಇರಿಸಿದೆ ಎಂದು ತಿಳಿದುಬಂದಿದೆ.

    ಇಡಿ ಪ್ರಕಾರ, ಎಸ್‌ಇಡಿಎಫ್‌ನಿಂದ ಆರ್‌ಎಸ್‌ಪಿಎಲ್ 18.64 ಕೋಟಿ ರೂ.ಗಳನ್ನು ಪರಿವರ್ತಿಸಬಹುದಾದ ಆದ್ಯತೆಯ ಷೇರುಗಳ (CCPS) ರೂಪದಲ್ಲಿ ಪಡೆದುಕೊಂಡಿದೆ. ಇದರ ಮೌಲ್ಯವು ಪ್ರತಿ ಷೇರಿಗೆ 2.5 ರಿಂದ 2.6 ಲಕ್ಷ ರೂ.ಗಳಷ್ಟಿದೆ. ಎಫ್‌ಸಿಆರ್‌ಎ ನಿಬಂಧನೆಗಳನ್ನು ತಪ್ಪಿಸಲು ಇದು ಅಡ್ಡಮಾರ್ಗ ಎಂದು ಅಧಿಕಾರಿಗಳು ಶಂಕಿಸಿದ್ದಾರೆ. ಏಕೆಂದರೆ ಸರ್ಕಾರದ ಪೂರ್ವಾನುಮತಿಯಿಲ್ಲದೇ ಭಾರತೀಯ ಎನ್‌ಜಿಒಗಳಿಗೆ ನೇರವಾಗಿ ದೇಣಿಗೆ ನೀಡಲು SEDFಗೆ ಯಾವುದೇ ಅನುಮತಿ ಇಲ್ಲ ಎಂದು ಹೇಳಲಾಗಿದೆ. ಇನ್ನೂ ರೂಟ್‌ಬ್ರಿಡ್ಜ್ ಅಕಾಡೆಮಿ ಪ್ರೈವೇಟ್ ಲಿಮಿಟೆಡ್‌ಗೆ (RAPL) 2.70 ಕೋಟಿ ರೂ.ಗಳ ನೆರವನ್ನು ಪಡೆದುಕೊಂಡಿದೆ.  ಇದನ್ನೂ ಓದಿ: ಭಾರತ ವಿರೋಧಿ ಸೊರೊಸ್‌ ಸಂಸ್ಥೆಯ ಜೊತೆ ಸೋನಿಯಾಗೆ ನಂಟು – ಚರ್ಚೆಗೆ ಸರ್ಕಾರ ಸಿದ್ಧವಿದೆ ಎಂದ ಕಿರಣ್‌ ರಿಜಿಜು

    ಮಾರಿಷಸ್ ಸಂಪರ್ಕ
    ಮಾರಿಷಸ್ ಮೂಲದ ಆಸ್ಪಾದ ಇನ್ವೆಸ್ಟ್‌ಮೆಂಟ್ ಕಂಪನಿ (ಎಐಸಿ) ಮೂಲಕ ಒಎಸ್‌ಐಗೆ ಸಂಬಂಧಿಸಿದ ಹಣವನ್ನು ಭಾರತಕ್ಕೆ ಕಳುಹಿಸಲಾಗಿದೆ ಎಂದು ಇಡಿ ತನಿಖೆಯಿಂದ ತಿಳಿದುಬಂದಿದೆ. 2013 ರಲ್ಲಿ ಬೆಂಗಳೂರಿನಲ್ಲಿ ನೋಂದಾಯಿಸಲಾದ Aspada Investment Advisors Pvt Ltd (AIAPL), SEDFನ ಭಾರತೀಯ ಹೂಡಿಕೆಗಳನ್ನು ನಿರ್ವಹಿಸಿತು ಮತ್ತು ಸಲಹೆ ನೀಡಿತು ಎಂಬುದನ್ನು ಇಡಿ ತನಿಖೆ ಬಹಿರಂಗಪಡಿಸಿದೆ. ಇದನ್ನೂ ಓದಿ: ಭಾರತೀಯ ವಿದ್ಯಾರ್ಥಿಗಳಿಗೆ ಅಮೆರಿಕ ವೀಸಾ ಬಂದ್‌! ಪರಿಣಾಮವೇನು?

    ಯಾರು ಈ ಸೊರಸ್?
    94 ವರ್ಷದ ಸೊರಸ್ ವಿಶ್ವದ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದಾರೆ. ಯಹೂದಿ ಕುಟುಂಬದಲ್ಲಿ ಜನಿಸಿದ್ದ ಇವರು 17 ವರ್ಷದವರಿದ್ದಾಗ ನಾಝಿಗಳ ದಾಳಿಯಿಂದ ತಪ್ಪಿಸಿಕೊಳ್ಳಲು ಹಂಗೇರಿಯನ್ನು ತೊರೆದು 1947ರಲ್ಲಿ ಲಂಡನ್ ಸೇರಿದ್ದರು. ನಂತರ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ನಲ್ಲಿ ತತ್ವಶಾಸ್ತ್ರ ಅಧ್ಯಯನ ಮಾಡಿದ್ದರು.

    ವಿದ್ಯಾಭ್ಯಾಸದ ನಂತರ ಲಂಡನ್ ಮರ್ಚೆಂಟ್ ಬ್ಯಾಂಕ್ ಸಿಂಗರ್ ಮತ್ತು ಫ್ರೈಡ್‍ಲ್ಯಾಂಡರ್‍ಗೆ ಸೇರಿದರು. 1956ರಲ್ಲಿ ನ್ಯೂಯಾರ್ಕ್‍ಗೆ ತೆರಳಿದ ಅವರು ಯುರೋಪಿಯನ್ ಸೆಕ್ಯುರಿಟಿ ವಿಶ್ಲೇಷಕರಾಗಿ ಸೇರಿಕೊಂಡರು. 1973ರಲ್ಲಿ ಹೂಡಿಕೆ ಸಂಸ್ಥೆಯನ್ನು ಸ್ಥಾಪಿಸಿ ವಿದೇಶದ ಕಂಪನಿಗಳಲ್ಲಿ ಹಣ ಹೂಡಿ ಅದರಲ್ಲಿ ಯಶಸ್ಸು ಕಂಡರು.  ಇದನ್ನೂ ಓದಿ: ಅದಾನಿ ಕಂಪನಿಗಳನ್ನು ಕಾಡಿದ್ದ ಹಿಂಡನ್‌ಬರ್ಗ್‌ಗೆ ಬೀಗ – ಬಂದ್‌ ಆಗಿದ್ದು ಯಾಕೆ?

    ಸದ್ಯ ಸೊರಸ್ 720 ಶತಕೋಟಿ ಡಾಲರ್ ಒಡೆಯರಾಗಿದ್ದಾರೆ. ಪ್ರಜಾಪ್ರಭುತ್ವ ಹಾಗೂ ವಾಕ್ ಸ್ವಾತಂತ್ರ್ಯವನ್ನು ಉತ್ತೇಜಿಸುವ ಸಂಘಟನೆಗಳು ಹಾಗೂ ವ್ಯಕ್ತಿಗಳಿಗೆ ಅನುದಾನ ನೀಡುವ ಓಪನ್ ಸೊಸೈಟಿ ಫೌಂಡೇಶನ್‍ಗಳನ್ನು ಅವರು ಸ್ಥಾಪಿಸಿದ್ದಾರೆ. ಭಾರತದ ಹಲವು ಮಾಧ್ಯಮ ಸಂಸ್ಥೆಗಳಿಗೆ ಓಪನ್ ಸೊಸೈಟಿ ಅನುದಾನ ನೀಡುತ್ತಿದೆ.

  • ಜಾರ್ಜ್ ಸೊರೊಸ್‌ಗೆ ಇಡಿ ಶಾಕ್‌ – ಓಪನ್ ಸೊಸೈಟಿ ಫೌಂಡೇಶನ್‌ ಕಚೇರಿ ಮೇಲೆ ದಾಳಿ

    ಜಾರ್ಜ್ ಸೊರೊಸ್‌ಗೆ ಇಡಿ ಶಾಕ್‌ – ಓಪನ್ ಸೊಸೈಟಿ ಫೌಂಡೇಶನ್‌ ಕಚೇರಿ ಮೇಲೆ ದಾಳಿ

    ಬೆಂಗಳೂರು: ಜಾರಿ ನಿರ್ದೇಶನಾಲಯ (ED) ಅಮೆರಿಕದ ಶತಕೋಟ್ಯಧಿಪತಿ ಜಾರ್ಜ್ ಸೊರೊಸ್ (George Soros) ಸ್ಥಾಪಿಸಿದ ಓಪನ್ ಸೊಸೈಟಿ ಫೌಂಡೇಶನ್‌ (Open Society Foundation) ಫಲಾನುಭವಿಗಳ ವಿರುದ್ಧ ತನಿಖೆಯನ್ನು ಪ್ರಾರಂಭಿಸಿದ್ದು ಬೆಂಗಳೂರು ಕಚೇರಿ ಮೇಲೆ ದಾಳಿ ನಡೆಸಿದೆ.

    ಒಟ್ಟು ಮೂರು ಕಂಪನಿಗಳಲ್ಲಿ ಶೋಧ ಕಾರ್ಯ ನಡೆಯುತ್ತಿದೆ ಎಂದು ತಿಳಿದುಬಂದಿದೆ. ವಿದೇಶಿ ವಿನಿಮಯ ನಿರ್ವಹಣಾ ಕಾಯಿದೆ (FEMA) ಉಲ್ಲಂಘನೆ ಆರೋಪಕ್ಕೆ ಸಂಬಂಧಿಸಿದಂತೆ ಇಡಿ ಪರಿಶೀಲನೆ ನಡೆಸುತ್ತಿದೆ.

    ಭಾರತದಲ್ಲಿ ಓಎಸ್‌ಎಫ್‌ 1999 ರಿಂದ ಕಾರ್ಯನಿರ್ವಹಿಸುತ್ತಿದೆ. ಆರಂಭದಲ್ಲಿ ಓಎಸ್‌ಎಫ್‌ ವಿದ್ಯಾರ್ಥಿವೇತನಗಳನ್ನು ನೀಡುತ್ತಿತ್ತು. ನಂತರ ಅನುದಾನ ನೀಡಿಕೆ ಕಾರ್ಯಕ್ರಮಗಳಿಗೆ ವಿಸ್ತರಿಸಿತ್ತು.

    ಓಪನ್ ಸೊಸೈಟಿ ಫೌಂಡೇಶನ್‌ ವಿಶ್ವಾದ್ಯಂತ ನ್ಯಾಯ, ಶಿಕ್ಷಣ, ಸಾರ್ವಜನಿಕ ಆರೋಗ್ಯ ಹಾಗೂ ಸ್ವತಂತ್ರ ಮಾಧ್ಯಮಗಳನ್ನು ಮುನ್ನಡೆಸುವ ಗುಂಪುಗಳಿಗೆ ಸಹಾಯ ಮಾಡುತ್ತಿದೆ. ಅಧಿಕೃತ ಅಂಕಿಅಂಶಗಳ ಪ್ರಕಾರ 2021 ರಲ್ಲಿ ಭಾರತದಲ್ಲಿ 4,06,000 ಡಾಲರ್‌ ಖರ್ಚು ಮಾಡಿದೆ ಎಂದು ಓಎಸ್‌ಎಫ್‌ ಹೇಳಿತ್ತು. ಇದನ್ನೂ ಓದಿ: ಭೂಮಿಗೆ ಬರುತ್ತಿದ್ದಾರೆ ಸುನಿತಾ ವಿಲಿಯಮ್ಸ್‌ – ಎಲ್ಲಿ ಇಳಿಯುತ್ತಾರೆ? ಇಳಿಯುವ ಪ್ರಕ್ರಿಯೆ ಹೇಗೆ? ಇಳಿದ ನಂತರ ಮುಂದೇನು?

    ಈ ಹಿಂದೆ ಅದಾನಿ ಕಂಪನಿ ಮತ್ತು ಸೆಬಿ ಮಾಜಿ ಮುಖ್ಯಸ್ಥೆ ಮಾಧವಿ ಪುರ್‌ ಬುಚ್‌ ವಿರುದ್ಧ ಹಿಂಡೆನ್‌ಬರ್ಗ್‌ ವರದಿ ಪ್ರಕಟಿಸಿದಾಗ ಬಿಜೆಪಿ ಜಾರ್ಜ್‌ ಸೊರೊಸ್‌ ಹೆಸರನ್ನು ಎಳೆದು ತಂದಿತ್ತು. ಹಿಂಡನ್‌ ಬರ್ಗ್‌ನಲ್ಲಿ ಮುಖ್ಯ ಹೂಡಿಕೆದಾರ ಜಾರ್ಜ್‌ ಸೊರೊಸ್‌. ಈ ವ್ಯಕ್ತಿ ಹಲವು ದೇಶಗಳ ಆರ್ಥ ವ್ಯವಸ್ಥೆಯನ್ನು ಹಾಳು ಮಾಡಿದ್ದಾರೆ. ಭಾರತದ ಮಾರುಕಟ್ಟೆಯನ್ನು ಅಸ್ಥಿರಗೊಳಿಸುವ ಸಂಚು ಎಂದು ಆರೋಪಿಸಿತ್ತು.

    ಮಾಜಿ ಕೇಂದ್ರ ಸಚಿವ ರವಿಶಂಕರ್‌ ಪ್ರಸಾದ್‌ ಮಾತನಾಡಿ, ಹಿಂಡನ್‌ಬರ್ಗ್‌ನಲ್ಲಿ ಯಾರ ಹೂಡಿಕೆ ಇದೆ? ಭಾರತದ ವಿರುದ್ಧ ನಿಯಮಿತವಾಗಿ ಪ್ರಚಾರ ಮಾಡುವ ಈ ಸಂಭಾವಿತ ಜಾರ್ಜ್ ಸೊರೊಸ್ ಬಗ್ಗೆ ನಿಮಗೆ ತಿಳಿದಿದೆಯೇ? ಅವರು ಹಿಂಡನ್‌ಬರ್ಗ್‌ನಲ್ಲಿ ಮುಖ್ಯ ಹೂಡಿಕೆದಾರರಾಗಿದ್ದಾರೆ. ಲೋಕಸಭಾ ಚುನಾವಣೆಗೆ (Lok Sabha Election) ಮುನ್ನ ಸೊರೊಸ್‌ ಭಾರತದ ಪ್ರಜಾಪ್ರಭುತ್ವ ಅಪಾಯದಲ್ಲಿದೆ. ಮೋದಿ (NarendraModi) ಸರ್ಕಾರವನ್ನು ಕಿತ್ತೊಗೆಯಬೇಕು ಎಂದು ಹೇಳಿದ್ದರು. ಒಂದು ದೇಶದ ಆಡಳಿತವನ್ನು ಬದಲಾಯಿಸುವಲ್ಲಿ ಸೊರೊಸ್‌ ಕುಖ್ಯಾತಿಗಳಿಸಿದ್ದಾರೆ ಎಂದು ಕಿಡಿಕಾರಿದ್ದರು.

     

  • ಭಾರತ ವಿರೋಧಿ ಸೊರೊಸ್‌ ಸಂಸ್ಥೆಯ ಜೊತೆ ಸೋನಿಯಾಗೆ ನಂಟು – ಚರ್ಚೆಗೆ ಸರ್ಕಾರ ಸಿದ್ಧವಿದೆ ಎಂದ ಕಿರಣ್‌ ರಿಜಿಜು

    ಭಾರತ ವಿರೋಧಿ ಸೊರೊಸ್‌ ಸಂಸ್ಥೆಯ ಜೊತೆ ಸೋನಿಯಾಗೆ ನಂಟು – ಚರ್ಚೆಗೆ ಸರ್ಕಾರ ಸಿದ್ಧವಿದೆ ಎಂದ ಕಿರಣ್‌ ರಿಜಿಜು

    ನವದೆಹಲಿ: ಹಂಗೇರಿ-ಅಮೆರಿಕನ್ ಉದ್ಯಮಿ ಜಾರ್ಜ್ ಸೊರೊಸ್ (George Soros) ಅವರ ಸಂಸ್ಥೆಯ ಜೊತೆ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ (Sonia Gandhi) ಅವರ ನಂಟು ಬಹಳ ಗಂಭೀರ ವಿಚಾರ ಎಂದು ಕೇಂದ್ರ ಸಚಿವ ಕಿರಣ್‌ ರಿಜಿಜು (Kiren Rijiju) ಹೇಳಿದ್ದಾರೆ.

    ಈ ವಿಚಾರದ ಬಗ್ಗೆ ಚರ್ಚೆ ನಡೆಸಲು ನಾವು ಸಿದ್ಧ. ಭಾರತ ವಿರೋಧಿಗಳ ವಿರುದ್ಧ ದೇಶದ ನಾಗರಿಕರು ಒಗ್ಗಟ್ಟಿನಿಂದ ಇರಬೇಕೆಂದು ಅವರು ಮನವಿ ಮಾಡಿದರು. ಜಾರ್ಜ್‌ ಸೊರೊಸ್‌ ವಿಚಾರವನ್ನು ಈಗಾಗಲೇ ನಾವು ಸಂಸತ್ತಿನಲ್ಲಿ ಪ್ರಸ್ತಾಪ ಮಾಡಿದ್ದೇವೆ. ಸೊರೊಸ್ ಭಾರತದ ವಿರುದ್ಧ ಕೆಲಸ ಮಾಡುವ ವ್ಯಕ್ತಿ ಎಂದು ದೂರಿದರು.

     

    ಪ್ರಸ್ತುತ ದೇಶದ ಮುಂದಿರುವ ಸಮಸ್ಯೆ ಬಹಳ ಗಂಭೀರವಾಗಿದೆ. ಕೆಲವು ಸಮಸ್ಯೆಗಳನ್ನು ರಾಜಕೀಯ ದೃಷ್ಟಿಕೋನದಿಂದ ನೋಡಬಾರದು. ಜಾರ್ಜ್ ಸೊರೊಸ್ ಅವರ ಒಳಗೊಳ್ಳುವಿಕೆ ಮತ್ತು ಅವರ ಲಿಂಕ್‌ಗಳು ಅದು ರಾಹುಲ್ ಗಾಂಧಿ ಅಥವಾ ಸೋನಿಯಾ ಗಾಂಧಿ ಅಗಲಿ ನಾವು ಇದನ್ನು ಕಾಂಗ್ರೆಸ್ ಪಕ್ಷಕ್ಕೆ ಸಂಬಂಧಿಸಿದ ವಿಷಯವಾಗಿ ನೋಡುವುದಿಲ್ಲ. ಯಾವುದೇ ಭಾರತೀಯರು ಭಾರತದ ವಿರುದ್ಧ ವಿದೇಶಿ ಶಕ್ತಿಗಳೊಂದಿಗೆ ಶಾಮೀಲಾಗಿದ್ದರೆ ಅವುಗಳನ್ನು ಪರಿಹರಿಸಬೇಕು ಎಂದರು. ಇದನ್ನೂ ಓದಿ: ಸೊರೊಸ್‌ ಜೊತೆ ಕೈಜೋಡಿಸಿರುವ ರಾಹುಲ್‌ ದೇಶದ್ರೋಹಿ: ಸಂಬಿತ್‌ ಪಾತ್ರ ಕಿಡಿ

    ಸೊರೊಸ್‌ ಸಂಸ್ಥೆಯ ಜೊತೆ ಸೋನಿಯಾ ಗಾಂಧಿ ಅವರಿಗೆ ನಂಟು ಇದೆ ಎಂದು ಬಿಜೆಪಿ ಆರೋಪಿಸಿದ್ದಕ್ಕೆ ಸೋಮವಾರದ ಕಲಾಪದಲ್ಲಿ ಕಾಂಗ್ರೆಸ್‌ ಸದಸ್ಯರು ಭಾರೀ ಪ್ರತಿಭಟನೆ ನಡೆಸಿದರು. ಎರಡು ಕಡೆಯಿಂದ ಘೋಷಣೆ ಕೂಗಿದ ಬೆನ್ನಲ್ಲೇ ಸದನವನ್ನು ಮಧ್ಯಾಹ್ನಕ್ಕೆ ಮುಂದೂಡಲಾಯಿತು.

    ಸೋನಿಯಾ ಗಾಂಧಿ ಮತ್ತು ಸೊರೊಸ್‌ ಸಂಸ್ಥೆಯ ಜೊತೆ ನಂಟು ಇದೆ ಎನ್ನುವುದಕ್ಕೆ ಬಿಜೆಪಿ ಎಕ್ಸ್‌ನಲ್ಲಿ ಸರಣಿ ಪೋಸ್ಟ್‌ ಮಾಡಿ ಕಾಂಗ್ರೆಸ್‌ ವಿರುದ್ಧ ಕಿಡಿಕಾರಿದೆ.

     

    ಏನಿದು ಸೋನಿಯಾಗೆ ನಂಟು?
    ಮಾಜಿ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಜಾರ್ಜ್‌ ಸೊರೋಸ್‌ ಫೌಂಡೇಶನ್‌ನಿಂದ ಹಣಕಾಸು ನೆರವು ಪಡೆಯುವ ಹಾಗೂ ಕಾಶ್ಮೀರ ಪ್ರತ್ಯೇಕ ರಾಷ್ಟ್ರವಾಗುವುದನ್ನು ಬೆಂಬಲಿಸಿದ ಸಂಸ್ಥೆಯೊಂದಿಗೆ ನಂಟು ಹೊಂದಿದ್ದಾರೆ.

    ಸೊರೋಸ್‌ರಿಂದ ನೆರವು ಪಡೆಯುವ ‘ಫೋರಂ ಆಫ್‌ ಡಿ ಡೆಮಾಕ್ರಟಿಕ್‌ ಲೀಡರ್ಸ್‌ ಇನ್‌ ಏಷ್ಯಾ ಪೆಸಿಫಿಕ್‌’ (FDL-AP) ಸಂಸ್ಥೆ ಕಾಶ್ಮೀರವನ್ನು ಪ್ರತ್ಯೇಕ ರಾಷ್ಟ್ರವಾಗಿ ಪರಿಗಣಿಸುತ್ತದೆ. ಸೋನಿಯಾ ಗಾಂಧಿ ಇದರ ಸಹ ಅಧ್ಯಕ್ಷೆಯಾಗಿದ್ದಾರೆ. ಇದು ಭಾರತದ ಆಂತರಿಕ ವಿಷಯಗಳಲ್ಲಿ ವಿದೇಶಿ ಕಂಪನಿಗಳ ಪ್ರಭಾವವನ್ನು ತೋರಿಸುತ್ತದೆ. ಇದನ್ನೂ ಓದಿ: ಹಿಂಡನ್‌ಬರ್ಗ್‌ನಲ್ಲಿ ಸೊರೊಸ್ ಮುಖ್ಯ ಹೂಡಿಕೆದಾರ, ವಿದೇಶದಿಂದ ಭಾರತದ ವಿರುದ್ಧ ಪಿತೂರಿ: ರವಿಶಂಕರ್‌ ಪ್ರಸಾದ್

    ಕಾಂಗ್ರೆಸ್‌ ಸಂಸದ ಶಶಿ ತರೂರ್‌ ಅವರು ಸೊರೋಸ್‌ರನ್ನು ಹಳೆಯ ಮಿತ್ರ ಎಂದು ಕರೆದಿದ್ದ ಪೋಸ್ಟ್‌ ಅನ್ನು ಹಾಕಿದೆ. ಅದಾನಿ ಕುರಿತು ರಾಹುಲ್ ಗಾಂಧಿಯವರ ಪತ್ರಿಕಾಗೋಷ್ಠಿಯನ್ನು ಜಾರ್ಜ್ ಸೊರೊಸ್ ಅವರ ಒಸಿಸಿಆರ್‌ಪಿ (OCCRP) ನೇರ ಪ್ರಸಾರ ಮಾಡಿದೆ. ಇದು ಅವರ ಅಪಾಯಕಾರಿ ಸಂಬಂಧವನ್ನು ತಿಳಿಸುತ್ತದೆ. ಭಾರತೀಯ ಆರ್ಥಿಕತೆಯನ್ನು ಹಳಿತಪ್ಪಿಸುವ ಅವರ ಪ್ರಯತ್ನಗಳನ್ನು ಇದು ಎತ್ತಿ ತೋರಿಸುತ್ತದೆ.

     

  • ಸೊರೊಸ್‌ ಜೊತೆ ಕೈಜೋಡಿಸಿರುವ ರಾಹುಲ್‌ ದೇಶದ್ರೋಹಿ: ಸಂಬಿತ್‌ ಪಾತ್ರ ಕಿಡಿ

    ಸೊರೊಸ್‌ ಜೊತೆ ಕೈಜೋಡಿಸಿರುವ ರಾಹುಲ್‌ ದೇಶದ್ರೋಹಿ: ಸಂಬಿತ್‌ ಪಾತ್ರ ಕಿಡಿ

    ನವದೆಹಲಿ: ಭಾರತದ ಆರ್ಥಿಕತೆಯನ್ನು (Indian Economy) ಅಸ್ಥಿರಗೊಳಿಸಲು ಅಮೆರಿಕ ಮೂಲದ ಉದ್ಯಮಿ ಜಾರ್ಜ್‌ ಸೊರೊಸ್‌ (George Soros) ಮುಂದಾಗಿದ್ದು, ಅವರ ಜೊತೆ ವಿಪಕ್ಷ ನಾಯಕ ರಾಹುಲ್‌ ಗಾಂಧಿ (Rahul Gandhi) ಕೈಜೋಡಿಸಿದ್ದಾರೆ. ಭಾರತದ ವಿರುದ್ಧ ಪಿತೂರಿ ನಡೆಸುತ್ತಿರುವ ವ್ಯಕ್ತಿಗಳಿಗೆ ಬೆಂಬಲ ನೀಡುತ್ತಿರುವ ರಾಹುಲ್‌ ಗಾಂಧಿ ದೇಶದ್ರೋಹಿ (Traitor) ಎಂದು ಬಿಜೆಪಿ ಸಂಸದ ಸಂಬಿತ್‌ ಪಾತ್ರ (Sambit Patra) ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಫ್ರೆಂಚ್ ಪತ್ರಿಕೆ ಮೀಡಿಯಾಪಾರ್ಟ್ ಡಿಸೆಂಬರ್ 2 ರಂದು ತನಿಖಾ ಪತ್ರಿಕೋದ್ಯಮ ನಡೆಸುತ್ತಿರುವ OCCRP (Organized Crime and Corruption Reporting Project) ಮತ್ತು ಅಮೆರಿಕ ಸರ್ಕಾರದ ನಡುವಿನ ಸಂಬಂಧದ ಬಗ್ಗೆ ವರದಿ ಪ್ರಕಟಿಸಿದ ನಂತರ ಸಂಬಿತ್‌ ಪಾತ್ರ ಸುದ್ದಿಗೋಷ್ಠಿ ನಡೆಸಿ ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿದರು.

    OCCRP ಸಂಸ್ಥೆಗೆ ಜಾರ್ಜ್‌ ಸೊರೊಸ್‌ ಹಣವನ್ನು ನೀಡುತ್ತಾರೆ. ಈ OCCRP ಭಾರತದ ಆರ್ಥಿಕತೆಗೆ ಸಂಬಂಧಿಸಿದಂತೆ ಸುಳ್ಳು ವರದಿಗಳನ್ನು ಪ್ರಕಟಿಸುತ್ತದೆ. OCCRP ವರದಿ ಪ್ರಕಟಿಸಿದ ನಂತರ ಇಲ್ಲಿ ರಾಹುಲ್‌ ಗಾಂಧಿ ಅಳಲು ಆರಂಭಿಸುತ್ತಾರೆ. ಜಾರ್ಜ್‌ ಸೊರೊಸ್‌ ಮತ್ತು ರಾಹುಲ್‌ ಗಾಂಧಿ ದೇಹಗಳು ಬೇರೆ ಬೇರೆಯಾದರೂ ಆತ್ಮ ಮಾತ್ರ ಒಂದೇ. ಸೊರೊಸ್‌ ಅವರ ಕಾರ್ಯಸೂಚಿಯನ್ನು ಪೂರೈಸಲು ರಾಹುಲ್‌ ಗಾಂಧಿ ಬಯಸುತ್ತಾರೆ. ಇವರಿಬ್ಬರು ದೇಶದ ಹಿತಾಸಕ್ತಿಗೆ ಧಕ್ಕೆ ತರಲು ಬಯಸುತ್ತಾರೆ ಎಂದು ದೂರಿದರು. ಇದನ್ನೂ ಓದಿ: ಹಿಂಡನ್‌ಬರ್ಗ್‌ನಲ್ಲಿ ಸೊರೊಸ್ ಮುಖ್ಯ ಹೂಡಿಕೆದಾರ, ವಿದೇಶದಿಂದ ಭಾರತದ ವಿರುದ್ಧ ಪಿತೂರಿ: ರವಿಶಂಕರ್‌ ಪ್ರಸಾದ್

    OCCRP ಜಾಗತಿಕ ಮಾಧ್ಯಮ ಸಂಸ್ಥೆಯಾಗಿದ್ದು ಆ ಸಂಸ್ಥೆ ಪ್ರಕಟಿಸುವುದನ್ನು ಕೋಟ್ಯಂತರ ಮಂದಿ ಓದುತ್ತಾರೆ. ಸರ್ಕಾರೇತರ ಸಂಸ್ಥೆಯಾದ ಓಪನ್‌ ಸೊಸೈಟಿ ಫೌಂಡೇಶನ್‌ OCCRP ಸಂಸ್ಥೆಗೆ ಭಾರೀ ಪ್ರಮಾಣದಲ್ಲಿ ಧನಸಹಾಯ ನೀಡುತ್ತದೆ. ಓಪನ್‌ ಸೊಸೈಟಿ ಸೊರೊಸ್‌ ಅವರು ಸ್ಥಾಪನೆ ಮಾಡಿದ ಸಂಸ್ಥೆಯಾಗಿದ್ದು ರಾಹುಲ್‌ ಗಾಂಧಿ ದೇಣಿಗೆ ನೀಡುತ್ತಾರೆ. ಹಣ ನೀಡುವ ಜನರ ಹಿತಾಸಕ್ತಿಗೆ ಅನುಗುಣವಾಗಿ ಈ ಸಂಸ್ಥೆಗಳು ಕೆಲಸ ಮಾಡುತ್ತವೆ ಎಂದು ದೂರಿದರು.

    ಲೋಕಸಭೆಯ ವಿರೋಧ ಪಕ್ಷದ ನಾಯಕನನ್ನು ದೇಶದ್ರೋಹಿ ಎಂದು ಕರೆಯಲು ನನಗೆ ಯಾವುದೇ ಹಿಂಜರಿಕೆ ಇಲ್ಲ. ರಾಷ್ಟ್ರೀಯ ಹಿತಾಸಕ್ತಿಗಳಿಗೆ ಧಕ್ಕೆ ತರುವ ವಿಷಯಗಳನ್ನು ರಾಹುಲ್‌ ಗಾಂಧಿ ಆಗಾಗ ಪ್ರಸ್ತಾಪಿಸುತ್ತಾರೆ. ಭಾರತ ವಿರೋಧಿ ಭಾವನೆಗಳನ್ನು ಹೊಂದಿರುವ ವ್ಯಕ್ತಿಗಳು ಮತ್ತು ಗುಂಪುಗಳಿಂದ ರಾಹುಲ್‌ ಗಾಂಧಿ ಮೆಚ್ಚುಗೆಯನ್ನು ಗಳಿಸುತ್ತಾರೆ.

    ಈ OCCRP ಬಗ್ಗೆ ಹಲವು ಪ್ರಶ್ನೆಗಳು ಏಳುತ್ತದೆ. ಏಕೆಂದರೆ ಇದರ 70% ನಿಧಿ ಒಂದೇ ಮೂಲದಿಂದ ಬರುತ್ತದೆ. OCCRP ಜಾರ್ಜ್ ಸೊರೊಸ್ ಮತ್ತು ಅಮೆರಿಕಾದ ಹಿತಾಸಕ್ತಿಗೆ ಅನುಗುಗಣವಾಗಿ ಕೆಲಸ ಮಾಡುತ್ತದೆ ಎಂದು ಕಿಡಿಕಾರಿದರು.

     

  • ಹಿಂಡನ್‌ಬರ್ಗ್‌ನಲ್ಲಿ ಸೊರೊಸ್ ಮುಖ್ಯ ಹೂಡಿಕೆದಾರ, ವಿದೇಶದಿಂದ ಭಾರತದ ವಿರುದ್ಧ ಪಿತೂರಿ: ರವಿಶಂಕರ್‌ ಪ್ರಸಾದ್

    ಹಿಂಡನ್‌ಬರ್ಗ್‌ನಲ್ಲಿ ಸೊರೊಸ್ ಮುಖ್ಯ ಹೂಡಿಕೆದಾರ, ವಿದೇಶದಿಂದ ಭಾರತದ ವಿರುದ್ಧ ಪಿತೂರಿ: ರವಿಶಂಕರ್‌ ಪ್ರಸಾದ್

    ನವದೆಹಲಿ: ಹಿಂಡನ್‌ಬರ್ಗ್‌ನಲ್ಲಿ ಜಾರ್ಜ್‌ ಸೊರೊಸ್ (George Soros) ಮುಖ್ಯ ಹೂಡಿಕೆದಾರ. ಭಾರತದ ಆರ್ಥಿಕ ಬೆಳವಣಿಗೆಯನ್ನು ಹಳಿತಪ್ಪಿಸಲು ವಿದೇಶದಿಂದ ಪಿತೂರಿ ನಡೆಯುತ್ತಿದೆ ಎಂದು ಮಾಜಿ ಕೇಂದ್ರ ಸಚಿವ, ಬಿಜೆಪಿ ವಕ್ತಾರ ರವಿಶಂಕರ್‌ ಪ್ರಸಾದ್‌ (Ravi Shankar Prasad) ದೂರಿದ್ದಾರೆ.

    ಹಿಂಡನ್‌ಬರ್ಗ್‌ ರಿಸರ್ಚ್‌ ಸೆಬಿ (SEBI) ಮುಖ್ಯಸ್ಥೆ ಮಾಧವಿ ಪುರಿ ಬುಚ್ (Madhabi Puru Buch) ವಿರುದ್ಧ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಹಿಂಡನ್‌ಬರ್ಗ್‌ನಲ್ಲಿ ಯಾರ ಹೂಡಿಕೆ ಇದೆ? ಭಾರತದ ವಿರುದ್ಧ ನಿಯಮಿತವಾಗಿ ಪ್ರಚಾರ ಮಾಡುವ ಈ ಸಂಭಾವಿತ ಜಾರ್ಜ್ ಸೊರೊಸ್ ಬಗ್ಗೆ ನಿಮಗೆ ತಿಳಿದಿದೆಯೇ? ಅವರು ಹಿಂಡನ್‌ಬರ್ಗ್‌ನಲ್ಲಿ ಮುಖ್ಯ ಹೂಡಿಕೆದಾರರಾಗಿದ್ದಾರೆ ಎಂದು ಆರೋಪಿಸಿದರು.

    ಲೋಕಸಭಾ ಚುನಾವಣೆಗೆ (Lok Sabha Election) ಮುನ್ನ ಸೊರೊಸ್‌ ಭಾರತದ ಪ್ರಜಾಪ್ರಭುತ್ವ ಅಪಾಯದಲ್ಲಿದೆ. ಮೋದಿ (NarendraModi) ಸರ್ಕಾರವನ್ನು ಕಿತ್ತೊಗೆಯಬೇಕು ಎಂದು ಹೇಳಿದ್ದರು. ಒಂದು ದೇಶದ ಆಡಳಿತವನ್ನು ಬದಲಾಯಿಸುವಲ್ಲಿ ಸೊರೊಸ್‌ ಕುಖ್ಯಾತಿಗಳಿಸಿದ್ದಾರೆ ಎಂದು ಕಿಡಿಕಾರಿದರು.

    ನರೇಂದ್ರ ಮೋದಿ ವಿರುದ್ಧ ದ್ವೇಷ ಸಾಧಿಸುತ್ತಿದ್ದ ಕಾಂಗ್ರೆಸ್‌ ಇಂದು ಭಾರತದ ವಿರುದ್ಧವೇ ದ್ವೇಷವನ್ನು ಬೆಳೆಸಿಕೊಂಡಿದೆ. ಭಾರತದ ಷೇರು ಮಾರುಕಟ್ಟೆಗೆ ತೊಂದರೆಯಾದರೆ ಸಣ್ಣ ಹೂಡಿಕೆದಾರರು ತೊಂದರೆಗೊಳಗಾಗುತ್ತಿದ್ದಾರೆ. ಈಗ ಇವರು ಈ ವಿಷಯದಲ್ಲಿ ಜೆಪಿಸಿ ತನಿಖೆಗೆ ಒತ್ತಾಯಿಸುತ್ತಿದ್ದಾರೆ. ಕಾಂಗ್ರೆಸ್‌ ಭಾರತದ ಷೇರು ಮಾರುಕಟ್ಟೆ ಕುಸಿಯಲು ಬಯಸುತ್ತಿದೆ.  ಸಣ್ಣ ಹೂಡಿಕೆದಾರರು ಅಭಿವೃದ್ಧಿ ಹೊಂದಲು ಅವರು ಬಯಸುವುದಿಲ್ಲ ಎಂದು ವಾಗ್ದಾಳಿ ನಡೆಸಿದರು.