Tag: ಜಾರ್ಜಿಯಾ ಮೆಲೋನಿ

  • ʼYou Are The Bestʼ – ಜಿ-7 ಶೃಂಗಸಭೆಯಲ್ಲಿ ಮೆಲೋಡಿ ಮೊಮೆಂಟ್

    ʼYou Are The Bestʼ – ಜಿ-7 ಶೃಂಗಸಭೆಯಲ್ಲಿ ಮೆಲೋಡಿ ಮೊಮೆಂಟ್

    ಒಟ್ಟಾವಾ: ಕೆನಡಾದ ಕನನಾಸ್ಕಿಸ್‌ನಲ್ಲಿ ನಡೆಯುತ್ತಿರುವ ಜಿ-7 ಶೃಂಗಸಭೆಯಲ್ಲಿ (G7 Summit ) ಪ್ರಧಾನಿ ನರೇಂದ್ರ ಮೋದಿ (PM Narendra Modi) ಮತ್ತು ಇಟಾಲಿಯನ್ (Italy) ಪ್ರಧಾನಿ ಜಾರ್ಜಿಯಾ ಮೆಲೋನಿ (Giorgia Meloni) ಭೇಟಿಯಾಗಿದ್ದಾರೆ.

    ಮೋದಿ ಅವರನ್ನು ಭೇಟಿ ಆಗುತ್ತಿದ್ದಂತೆ ಮೆಲೋನಿ ಅವರು, ನೀವು ಅತ್ಯುತ್ತಮರು. ನಾನು ನಿಮ್ಮಂತೆ ಇರಲು ಇಷ್ಟಪಡುತ್ತೇನೆ ಎಂದು ಹೇಳಿದ್ದಾರೆ. ಮೆಲೋನಿ ಮೋದಿ ಅವರಿಗೆ ಹೇಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು ನೆಟ್ಟಿಗರು ʼಮೆಲೋಡಿ ಮೊಮೆಂಟ್ʼ ಎಂದು ಕಮೆಂಟ್‌ ಮಾಡುತ್ತಿದ್ದಾರೆ.

    ಕಳೆದ ವರ್ಷ ಇಟಲಿಯಲ್ಲಿ ಜಿ-7 ಶೃಂಗಸಭೆ ಆಯೋಜನೆಗೊಂಡಿತ್ತು. ಭಾರತದ ಚುನಾವಣಾ ಫಲಿತಾಂಶ ಪ್ರಕಟವಾಗುವ ಮೊದಲೇ ಪ್ರಧಾನಿ ಮೋದಿ ಅವರಿಗೆ ಏಪ್ರಿಲ್‌ ತಿಂಗಳಿನಲ್ಲಿ ಜಿ7 ಸಭೆಗೆ ವಿಶೇಷ ಆಹ್ವಾನಿತರಾಗಿ ಆಗಮಿಸುವಂತೆ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ (Giorgia Meloni) ಆಹ್ವಾನ ನೀಡಿದ್ದರು. ಈ ಶೃಂಗಸಭೆ ಮುಗಿದ ಬಳಿಕ ಮೆಲೋನಿ ಅವರು ಮೋದಿ ಜೊತೆ ಸೆಲ್ಫಿ ಕ್ಲಿಕ್ಕಿಸಿ ‘Hello From The Melody Team’ ಎಂದು ಬರೆದು ಪೋಸ್ಟ್‌ ಮಾಡಿದ್ದರು.

    ಭಾರತ ಜಿ7 ದೇಶಗಳ ಒಕ್ಕೂಟದಲ್ಲಿ ಇಲ್ಲ. ಆದರೆ ವಿಶೇಷ ಅತಿಥಿಯಾಗಿ ಈ ಸಭೆಯಲ್ಲಿ ಭಾಗವಹಿಸಲು ಜಿ7 ರಾಷ್ಟ್ರಗಳು ಪ್ರಧಾನಿ ಮೋದಿ ಅವರಿಗೆ ಆಹ್ವಾನ ನೀಡುತ್ತಿವೆ. ಇದನ್ನೂ ಓದಿ: ಭಾರತಕ್ಕೆ ಯಾವುದೇ ದೇಶದ ಮಧ್ಯಸ್ಥಿಕೆ ಅಗತ್ಯವಿಲ್ಲ: ಟ್ರಂಪ್‌ಗೆ ಮೋದಿ ಸ್ಪಷ್ಟನೆ

     

    ಏನಿದು ಮೆಲೋಡಿ?
    ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಮತ್ತು ನರೇಂದ್ರ ಮೋದಿ ಇಬ್ಬರು ಉತ್ತಮ ಸ್ನೇಹಿತರಾಗಿದ್ದಾರೆ. ಜಿ20 ಸಮ್ಮೇಳನಕ್ಕೆ ಮೆಲೋನಿ ಬಂದಾಗ #Melodi ಹ್ಯಾಶ್‌ ಟ್ಯಾಗ್‌ ಫೇಮಸ್‌ ಆಗಿತ್ತು. ಮೆಲೋನಿ ಮತ್ತು ಮೋದಿ ಹೆಸರನ್ನು ಸೇರಿಸಿ ಅಭಿಮಾನಿಗಳು Melodi ಟ್ಯಾಗ್‌ ಬಳಸಿ ಪೋಸ್ಟ್‌ ಮಾಡುತ್ತಿದ್ದಾರೆ.

  • ನಾನು, ಟ್ರಂಪ್, ಮೋದಿ ಒಂದಾದ್ರೆ ಪ್ರಜಾಸತ್ತೆಗೆ ಬೆದರಿಕೆ ಹೇಗಾಗುತ್ತೆ?: ಮೆಲೋನಿ ಪ್ರಶ್ನೆ

    ನಾನು, ಟ್ರಂಪ್, ಮೋದಿ ಒಂದಾದ್ರೆ ಪ್ರಜಾಸತ್ತೆಗೆ ಬೆದರಿಕೆ ಹೇಗಾಗುತ್ತೆ?: ಮೆಲೋನಿ ಪ್ರಶ್ನೆ

    ವಾಷಿಂಗ್ಟನ್: ನಾನು, ಟ್ರಂಪ್ (Donald Trump), ಮೋದಿ (Narendra Modi) ಒಂದಾದ್ರೆ ಪ್ರಜಾಸತ್ತೆಗೆ ಬೆದರಿಕೆ ಹೇಗಾಗುತ್ತೆ? ಎಂದು ಇಟಲಿ ಪ್ರಧಾನಿ  ಜಾರ್ಜಿಯಾ ಮೆಲೋನಿ (Giorgia Meloni) ಅವರು ಎಡಪಂಥೀಯ ನಾಯಕರ ವಿರುದ್ಧ ಚಾಟಿ ಬೀಸಿದ್ದಾರೆ.

    ವಾಷಿಂಗ್ಟನ್‌ನಲ್ಲಿ (Washington) ನಡೆದ ಕನ್ಸರ್ವೇಟಿವ್ ಪೊಲಿಟಿಕಲ್ ಆ್ಯಕ್ಷನ್ ಕಾನ್ಫರೆನ್ಸ್(ಸಿಪಿಎಸಿ)ನಲ್ಲಿ ವಿಡಿಯೋ ಮೂಲಕ ಮಾತನಾಡಿದ ಅವರು, `ನಾನು, ಡೊನಾಲ್ಡ್ ಟ್ರಂಪ್, ಮೋದಿಯಂಥ ಬಲಪಂಥೀಯ ನಾಯಕರು ಬಂದಾದರೆ ಪ್ರಜಾಪ್ರಭುತ್ವಕ್ಕೆ ಬೆದರಿಕೆ ಎಂದು ಕೂಗೆಬ್ಬಿಸುತ್ತಾರೆ. ಆದರೆ ಅದೇ ಎಡಪಂಥೀಯ ನಾಯಕರು ಇದೇ ರೀತಿ ಮೈತ್ರಿ ಮಾಡಿಕೊಂಡಾಗ ಪ್ರಶಂಸೆ ವ್ಯಕ್ತಪಡಿಸುತ್ತಾರೆ. ಎಡಪಂಥೀಯರು ಟ್ರಂಪ್ ಅವರ ಗೆಲುವಿನಿಂದ ಆತಂಕಕ್ಕೊಳಗಾಗಿದ್ದಾರೆ. ಕನ್ನರ್ವೇಟಿವ್‌ಗಳು ಗೆಲ್ಲುತ್ತಿರುವುದು ಮಾತ್ರವಲ್ಲ, ಅಂತಾರಾಷ್ಟ್ರೀಯ ಮಟ್ಟದಲ್ಲೂ ಒಂದಾಗುತ್ತಿರುವುದು ಎಡಪಂಥೀಯರಿಗೆ ವಿಪರೀತ ಹೊಟ್ಟಯುರಿ ಉಂಟು ಮಾಡುತ್ತಿದೆ’ ಎಂದರು. ಇದನ್ನೂ ಓದಿ: ಬಲ್ಡೋಟಾ ಫ್ಯಾಕ್ಟರಿ ಸ್ಥಾಪನೆ ವಿರೋಧಿಸಿ ಕೊಪ್ಪಳ ಬಂದ್ ಕರೆ – ಶಾಲೆಗಳಿಗೆ ರಜೆ

    `ಬಿಲ್‌ಕ್ಲಿಂಟನ್ ಮತ್ತು ಹಿಂದಿನ ಬ್ರಿಟನ್ ಒರಧಾನಿ ಟೋನಿ ಬ್ಲೇರ್ ಅವರು 90ರ ದಶಕದಲ್ಲಿ ಅಂತಾರಾಷ್ಟ್ರೀಯ ಎಡಪಂಥೀಯ ಉದಾರವಾದಿ ನೆಟ್‌ವರ್ಕ್ ರಚಿಸಿದಾಗ ಅವರನ್ನು `ಮುತ್ಸದ್ದಿಗಳು’ ಎಂದು ಕರೆಯಲಾಯಿತು. ಆದರೆ ಇದೀಗ ಟ್ರಂಪ್, ಮೆಲೋನಿ, ಅರ್ಜೆಂಟೀನಾ ಅಧ್ಯಕ್ಷ ಜೇವಿಯರ್ ಅಥವಾ ಪ್ರಧಾನಿ ಮೋದಿ ಅವರು ಪರಸ್ಪರ ಮಾತುಕತೆ ನಡೆಸಿದರೆ `ಪ್ರಜಾಪ್ರಭುತ್ವಕ್ಕೆ ಬೆದರಿಕೆ’ ಎನ್ನುತ್ತಿದ್ದಾರೆ ಎಂದು ಅಸಮಾಧಾನ ಹೊರಹಾಕಿದ್ದಾರೆ. ಇದನ್ನೂ ಓದಿ: ಭಾರತದಲ್ಲಿ ಮತದಾನಕ್ಕೆ ಅಮೆರಿಕ ದೇಣಿಗೆ ನೀಡಿಲ್ಲ, 7 ಯೋಜನೆಗಳಿಗಷ್ಟೇ ಧನಸಹಾಯ – ಹಣಕಾಸು ಸಚಿವಾಲಯ

    ಈ ಎಡಪಂಥೀಯರ ದ್ವಿಮುಖ ನೀತಿ ನಮಗೆ ಅಭ್ಯಾಸವಾಗಿ ಹೋಗಿದೆ. ಅವರು ನಮ್ಮ ಮೇಲೆ ಎಷ್ಟೇ ಕೆಸರೆರಚಿದರೂ ಎಡಪಂಥೀಯರ ಸುಳ್ಳುಗಳನ್ನು ಜನ ನಂಬುತ್ತಿಲ್ಲ. ಜನ ನಮಗೇ ಮತಹಾಕುತ್ತಿದ್ದಾರೆ’ ಎಂದು ಮೆಲೋನಿ ಹೇಳಿದರು. ನಾವು ಸ್ವಾತಂತ್ರ್ಯವನ್ನು ರಕ್ಷಿಸುತ್ತೇವೆ. ಹಸಿರು ಎಡಪಂಥೀಯರ ಹುಚ್ಚುತನದಿಂದ ಜನರನ್ನು ರಕ್ಷಿಸುತ್ತೇವೆ ಎಂದು ನುಡಿದರು. ಇದನ್ನೂ ಓದಿ: ಬ್ಯಾಂಕಲ್ಲಿ 5 ಲಕ್ಷಕ್ಕಿಂತ ಹೆಚ್ಚು ಹಣ ಇಟ್ಟರೆ ಸೇಫ್ ಆಗಿರುತ್ತಾ, ಇಲ್ವಾ? – ಏನಿದು ಠೇವಣಿ ವಿಮೆ?

  • ರೇಪ್‌ ಆರೋಪಿಗಳಿಗೆ ಪುರುಷತ್ವ ಹರಣ – ಇಟಲಿಯಲ್ಲಿ ಶೀಘ್ರವೇ ಬರಲಿದೆ ಹೊಸ ಕಾನೂನು

    ರೇಪ್‌ ಆರೋಪಿಗಳಿಗೆ ಪುರುಷತ್ವ ಹರಣ – ಇಟಲಿಯಲ್ಲಿ ಶೀಘ್ರವೇ ಬರಲಿದೆ ಹೊಸ ಕಾನೂನು

    ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಮಕ್ಕಳು ಹಾಗೂ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳಿಗೆ ಕಡಿವಾಣ ಹಾಕಲು ಪ್ರಧಾನಿ ಜಾರ್ಜಿಯಾ ಮೆಲೋನಿ (Giorgia Meloni) ನೇತೃತ್ವದ ಇಟಲಿ ಸರ್ಕಾರ ಹೊಸ ಕಾನೂನುಗಳನ್ನು (New Law) ಜಾರಿಗೆ ತರಲು ಮುಂದಾಗಿದೆ. ಅತ್ಯಾಚಾರ ಎಸಗುವವರಿಗೆ ಘೋರ ಶಿಕ್ಷೆ ವಿಧಿಸಲಾಗುತ್ತದೆ.

    ಹೌದು. ಅತ್ಯಾಚಾರ ಎಸಗುವ ಆರೋಪಿಗಳಿಗೆ ರಾಸಾಯನಿಕ ವಸ್ತುಗಳನ್ನು ಇಂಜೆಕ್ಟ್ ಮಾಡುವ ಮೂಲಕ ಪುರುಷತ್ವಹರಣ ಮಾಡಲಾಗುತ್ತದೆ. ಇದನ್ನು ಕೆಮಿಕಲ್‌ ಕ್ಯಾಸ್ಟ್ರೇಶನ್‌ (Chemical Castration) ಎಂದೂ ಸಹ ಕರೆಯಲಾಗುತ್ತದೆ. ಇಂಜೆಕ್ಷನ್ ನೀಡುವ ಮೂಲಕ ಟೆಸ್ಟೋಸ್ಟಿರಾನ್ ಉತ್ಪತ್ತಿಯಾಗುವುದನ್ನು ತಡೆಯಲಾಗುತ್ತದೆ. ಈ ಮೂಲಕ ಲೈಂಗಿಕ ಬಯಕೆಯನ್ನು ಕಡಿಮೆ ಮಾಡಿ, ಅತ್ಯಾಚಾರ ಪ್ರಕರಣಗಳಿಗೆ ಕಡಿವಾಣ ಹಾಕುವ ಪ್ರಯತ್ನಕ್ಕೆ ಮುಂದಾಗಿದೆ. ಆದ್ರೆ ಸರ್ಕಾರದ ಈ ಕ್ರಮವನ್ನು ವಿಪಕ್ಷಗಳು ವಿರೋಧಿಸಿದ್ದು, ಇದು ಮಾನವತೆ ಮತ್ತು ನ್ಯಾಯದ ಉಲ್ಲಂಘನೆ ಎಂದು ಹೇಳಿವೆ.

    ಅಷ್ಟಕ್ಕೂ ಕೆಮಿಕಲ್‌ ಕ್ಯಾಸ್ಟ್ರೇಶನ್ ಎಂದರೇನು? ಇದು ಹೇಗೆ ಕೆಲಸ ಮಾಡುತ್ತದೆ? ಬೇರಾವುದೇ ದೇಶದಲ್ಲಿ ಅತ್ಯಾಚಾರಿಗಳಿಗೆ ಇಂತಹ ಶಿಕ್ಷೆ ಇದೆಯೇ? ಇದರಿಂದ ನಿಜವಾಗಿಯೂ ಲೈಂಗಿಕ ಅಪರಾಧಗಳನ್ನು ತಡೆಯಬಹುದೇ? ಎಂಬ ಬಗ್ಗೆ ತಿಳಿಯಬೇಕೆ? ಹಾಗಿದ್ದರೆ ಮುಂದೆ ಓದಿ. ಇದನ್ನೂ ಓದಿ: ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬಳಕೆದಾರರಿಗೆ ದರ ಏರಿಕೆ ಬಿಸಿ – ಇಂದಿನಿಂದಲೇ ಹೊಸ ದರ ಅನ್ವಯ

    ಕೆಮಿಕಲ್‌ ಕ್ಯಾಸ್ಟ್ರೇಷನ್‌ ಏನಿದು ಚಿಕಿತ್ಸೆ?

    ಕೆಮಿಕಲ್‌ ಕ್ಯಾಸ್ಟ್ರೇಷನ್‌ ವೈದ್ಯಕೀಯ ಪ್ರಕ್ರಿಯೆಯಾಗಿದೆ. ದೇಹದಲ್ಲಿ ಟೆಸ್ಟೋಸ್ಟೆರಾನ್‌ನಂತಹ (Testosterone) ಹಾರ್ಮೋನು ಮಟ್ಟವನ್ನು ಕಡಿಮೆಗೊಳಿಸುತ್ತದೆ. ಇದರಿಂದ ಅಪರಾಧಿಗಳಲ್ಲಿ ಲೈಂಗಿಕ ಬಯಕೆಯ ಮಟ್ಟ ಕಡಿಮೆಯಾಗುತ್ತದೆ. ಆದ್ರೆ ಇದು ಶಾಶ್ವತ ಪರಿಹಾರವಲ್ಲ ಎಂದೂ ತಜ್ಞರು ಹೇಳಿದ್ದಾರೆ. ಕೆಮಿಕಲ್‌ ಕ್ಯಾಸ್ಟ್ರೇಷನ್‌ ಪರಿಣಾಮವು ಒಂದು ನಿರ್ದಿಷ್ಟ ಅವಧಿಯವರೆಗೆ ಕೆಲಸ ಮಾಡುತ್ತದೆ. ನಂತರ ಚಿಕಿತ್ಸೆಗೆ ಒಳಗಾದ ಪುರುಷರಲ್ಲಿ ಮತ್ತೆ ಲೈಂಗಿಕ ಬಯಕೆ ಉಂಟಾಗುತ್ತದೆ. ಹಾಗಾಗಿ ಅಪರಾಧಿಗಳಿಗೆ ನಿರ್ದಿಷ್ಟ ಅವಧಿ ಮುಗಿದ ಬಳಿಕ ಮತ್ತೆ ಔಷಧವನ್ನು ಇಂಜೆಕ್ಟ್‌ ಮಾಡಬೇಕಾಗುತ್ತದೆ ಎಂದು ಹೇಳಲಾಗಿದೆ.

    ವಿರೋಧ ಏಕೆ?

    ಏಕೆಂದರೆ ಕೆಮಿಕಲ್‌ ಇಂಜೆಕ್ಟ್‌ ಮಾಡುವುದರಿಂದ ಅಪರಾಧಿಗೆ ತಪ್ಪಿನ ಅರಿವಾಗುವುದಿಲ್ಲ. ಲೈಂಗಿಕ ಬಯಕೆಯನ್ನು ಒಂದು ಕಾಲಮಿತಿಯವರೆಗೆ ತಡೆಯಬಹುದೇ ಹೊರತು ಅವರ ಕೋಪವನ್ನು ಕಡಿಮೆ ಮಾಡಲಾಗುವುದಿಲ್ಲ. ಅಲ್ಲದೇ ಶಿಕ್ಷೆ ಅವಧಿ ಮುಗಿದ ಬಳಿಕ ಅವನು ಮತ್ತೆ ಅಪರಾಧ ಎಸಗಬಹುದು. ಅಲ್ಲದೇ ಲೈಂಗಿಕ ಬಯಕೆ ಕಡಿಮೆಯಾದ್ರೆ ಆಕ್ರಮಣಕಾರಿ ಸ್ವಭಾವದಿಂದ ಮಹಿಳೆಯರು, ಮಕ್ಕಳನ್ನ ಕೊಲ್ಲುವ ಪ್ರವೃತ್ತಿ ಬೆಳೆಸಿಕೊಳ್ಳಬಹುದು. ಹಾಗಾಗಿ ಈ ರೀತಿಯ ಕಾನೂನು ತರುವುದು ಸಮಂಜಸವಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಪ್ರವಾದಿ ಮೊಹಮ್ಮದ್‌ರ ವಿರುದ್ಧ ಅವಹೇಳನಕಾರಿ ಹೇಳಿಕೆ – ಧಾರ್ಮಿಕ ಮುಖಂಡ ಮಹಂತ್ ರಾಮಗಿರಿ ಮಹಾರಾಜ್ ವಿರುದ್ಧ 67 FIR

    ಅಪರಾಧ ಕಡಿಮೆಯಾಗಿದೆಯೇ?

    ಈಗಾಗಲೇ ಕೆಲ ದೇಶಗಳಲ್ಲಿ ಲೈಂಗಿಕ ಅಪರಾಧಿಗಳಿಗೆ ಈ ಶಿಕ್ಷೆ ನೀಡಲಾಗುತ್ತಿದೆ. ಇದರಿಂದ ಅಪರಾಧ ಕಡಿಮೆಯಾಗಿದೆಯೇ ಎನ್ನುವ ಬಗ್ಗೆ ನೇರ ವರದಿಗಳಿಲ್ಲ. 2017ರಲ್ಲಿ ಇಂಡೋನೇಷ್ಯಾದಲ್ಲಿ ಮಕ್ಕಳ ಮೇಲೆ ಅತ್ಯಾಚಾರ ಎಸಗುವವರಿಗೆ ಈ ಶಿಕ್ಷೆ ನೀಡಲಾಗಿತ್ತು. ಇಂಡೋನೇಷಿಯನ್ ವಿಟ್ನೆಸ್ ಮತ್ತು ವಿಕ್ಟಿಮ್ ಪ್ರೊಟೆಕ್ಷನ್ ಏಜೆನ್ಸಿ ಪ್ರಕಾರ, 2017ರಲ್ಲಿ ಇಂಡೋನೇಷ್ಯಾದಲ್ಲಿ 70 ಮಕ್ಕಳ ಲೈಂಗಿಕ ದೌರ್ಜನ್ಯ ಪ್ರಕರಣಗಳು ನಡೆದಿತ್ತು. 2018-2019ರಲ್ಲಿ ಈ ಪ್ರಕರಣಗಳ ಸಂಖ್ಯೆ 149ಕ್ಕೆ ಏರಿಕೆಯಾಗಿತ್ತು. 200-21ಕ್ಕೆ ಇದರ ಶೇಕಡಾವಾರು ಪ್ರಮಾಣ ಶೇ.50ಕ್ಕೆ ಏರಿಕೆಯಾಗಿತ್ತು. ಹಾಗಾಗಿ ಅಲ್ಲಿ ಈ ಚಿಕಿತ್ಸೆ ಕೊಡಲು ಜಾರಿಗೆ ತರಲಾಗಿತ್ತು. ಇದನ್ನೂ ಓದಿ: ರಸ್ತೆ, ರೈಲು ಹಳಿಗಳನ್ನು ಅತಿಕ್ರಮಿಸುವ ಯಾವುದೇ ಧಾರ್ಮಿಕ ಕಟ್ಟಡಗಳನ್ನು ತೆರವುಗೊಳಿಸಬೇಕು: ಸುಪ್ರೀಂ

    ಯಾವ್ಯಾವ ದೇಶಗಳಲ್ಲಿ ಚಿಕಿತ್ಸೆ?

    * ಕೆಮಿಕಲ್ ಕ್ಯಾಸ್ಟ್ರೇಶನ್ ಅನ್ನು ಮೊದಲ ಬಾರಿಗೆ ಅಮೇರಿಕಾದಲ್ಲಿ 1966 ರಲ್ಲಿ ಮಾಡಲಾಯಿತು. ಈಗ ಕ್ಯಾಲಿಫೋರ್ನಿಯಾ, ಫ್ಲೋರಿಡಾ, ಜಾರ್ಜಿಯಾ ಮತ್ತು ಟೆಕ್ಸಾಸ್ ಸೇರಿದಂತೆ 9 ರಾಜ್ಯಗಳು ಶಿಶುಕಾಮಿಗಳಿಗೆ ಈ ಶಿಕ್ಷೆ ನೀಡುತ್ತಿವೆ.
    * 2009ರ ಸೆಪ್ಟೆಂಬರ್‌ನಲ್ಲಿ ಪೋಲೆಂಡ್ ಸಂಸತ್ತು ತನ್ನ ದಂಡ ಸಂಹಿತೆ ಬದಲಾಯಿಸಿದ ನಂತರ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗುವವರಿಗೆ ಈ ಶಿಕ್ಷೆ ನೀಡಲು ನಿರ್ಧರಿಸಿತು.
    * ರಷ್ಯಾದಲ್ಲಿ 14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಲೈಂಗಿಕ ಅಪರಾಧಿಗಳಿಗೆ ಆಂಡ್ರೊಜೆನ್-ತಡೆಗಟ್ಟುವ ಔಷಧಿಗಳನ್ನು ನೀಡಲಾಗುತ್ತಿದೆ.
    * 2012ರಲ್ಲಿ ಯುರೋಪಿಯನ್ ದೇಶವಾದ ಎಸ್ಟೋನಿಯಾದಲ್ಲಿ ಈ ಶಿಕ್ಷೆ ಕೊಡಲು ಪ್ರಾರಂಭವಾಯಿತು. ಈ ಔಷಧಿಯನ್ನು ಕೆಲವು ತಿಂಗಳವರೆಗೆ ನೀಡದೇ ಮೂರು ವರ್ಷಗಳವರೆಗೆ ನಿರಂತರವಾಗಿ ನೀಡಬೇಕು ಎಂದು ನ್ಯಾಯಾಲಯ ಹೇಳಿತ್ತು.
    * ಜೊತೆಗೆ ಉಕ್ರೇನ್, ಕೆನಡಾ, ಡೆನ್ಮಾರ್ಕ್, ಜರ್ಮನಿ, ಇಸ್ರೇಲ್, ನಾರ್ವೆ ಮತ್ತು ಸ್ವೀಡನ್‌ನಂತಹ ಅನೇಕ ದೇಶಗಳಲ್ಲಿಯೂ ಶಿಶುಕಾಮಿಗಳಿಗೆ ರಾಸಾಯನಿಕ ಕ್ಯಾಸ್ಟ್ರೇಶನ್ ಶಿಕ್ಷೆಯನ್ನಾಗಿ ನೀಡಲಾಗುತ್ತಿದೆ.

    ಕೈದಿಗಳೇ ಈ ಶಿಕ್ಷೆಗೆ ಒಪ್ಪಿದ್ದು ಏಕೆ?

    ಅಮೆರಿಕದಂತಹ ದೇಶಗಳಲ್ಲಿ ಕೆಲ ಕೈದಿಗಳು ಕೆಮಿಕಲ್‌ ಕ್ಯಾಸ್ಟ್ರೇಷನ್‌ ಚಿಕಿತ್ಸೆಯನ್ನ ಖುದ್ದು ಆಯ್ಕೆ ಮಾಡಿಕೊಂಡಿದ್ದಾರೆ. ಕೈದಿಗಳು ಸ್ವತಃ ಈ ಚಿಕಿತ್ಸೆ ಒಪ್ಪಿದರೆ ಅವರು ತಮ್ಮ ಶಿಕ್ಷೆಯಿಂದ ಮುಕ್ತರಾಗುತ್ತಾರೆ. ಕೆಲವರಿಗೆ ಸಂತಾನ ಹರಣ ಶಸ್ತ್ರಚಿಕಿತ್ಸೆ ಕೂಡ ಮಾಡಿಸಲಾಗುತ್ತಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

  • ಮೋದಿ ಜೊತೆ ಸೆಲ್ಫಿ ಕ್ಲಿಕ್ಕಿಸಿ Melodi ಎಂದ ಇಟಲಿ ಪ್ರಧಾನಿ

    ಮೋದಿ ಜೊತೆ ಸೆಲ್ಫಿ ಕ್ಲಿಕ್ಕಿಸಿ Melodi ಎಂದ ಇಟಲಿ ಪ್ರಧಾನಿ

    ಬರಿ(ಇಟಲಿ): ಜಿ7 ಸಭೆ ಮುಗಿದ ನಂತರ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ (Italian PM Giorgia Meloni) ಅವರು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರೊಂದಿಗೆ ಸೆಲ್ಫಿ ವಿಡಿಯೋ ಮಾಡಿ #Melodi ಎಂದು ಬರೆದು ಸಾಮಾಜಿಕ ಜಾಲತಾಣದಲ್ಲಿ (Social Media) ಪೋಸ್ಟ್‌ ಮಾಡಿದ್ದು ವೈರಲ್‌ ಆಗಿದೆ.

    ಇಟಲಿಯಲ್ಲಿ ನಡೆದ ಜಿ7 ರಾಷ್ಟ್ರಗಳ ಸಭೆಗೆ ವಿಶೇಷ ಆಹ್ವಾನಿತರಾಗಿ ಮೋದಿ ಹೋಗಿದ್ದರು. ಕಾರ್ಯಕ್ರಮ ಮುಗಿದ ಬಳಿಕ ಮೆಲೋನಿ ಅವರು ಮೋದಿ ಜೊತೆ ಸೆಲ್ಫಿ ಕ್ಲಿಕ್ಕಿಸಿ ‘Hello From The Melody Team’ ಎಂದು ಬರೆದು ಪೋಸ್ಟ್‌ ಮಾಡಿದ್ದಾರೆ.

    ಮೆಲೋನಿ ಅವರು ಮೋದಿ ಅವರ ಜೊತೆ ಸೆಲ್ಫಿ ಕ್ಲಿಕ್ಕಿಸುತ್ತಿರುವುದು ಇದೇ ಮೊದಲೆನಲ್ಲ. ಈ ಹಿಂದೆ ದುಬೈನಲ್ಲಿ ವಿಶ್ವಸಂಸ್ಥೆಯ ಹವಾಮಾನ ಸಮ್ಮೇಳನ ನಡೆದಿತ್ತು. ಈ ವೇಳೆ ಮೋದಿ ಮತ್ತು ಮೆಲೋನಿ ಭಾಗವಹಿಸಿದ್ದರು. ಈ ಸಂದರ್ಭದಲ್ಲೂ ಮೆಲೋನಿ ಅವರು ಸೆಲ್ಫಿ ಕ್ಲಿಕ್ಕಿಸಿದ್ದರು. ಇದನ್ನೂ ಓದಿ: G7 Group Photo | ಮಧ್ಯದಲ್ಲಿ ನಿಂತ ಭಾರತ: ಮೋದಿ ಹೇಳಿದ್ದೇನು?

    ಜಿ7 ಸಭೆ ಮುಗಿದ ಬಳಿಕ ಕೊನೆಯಲ್ಲಿ ಎಲ್ಲಾ ದೇಶದ ನಾಯಕರ ಗ್ರೂಪ್‌ ಫೋಟೋ ತೆಗೆಯಲಾಗಿತ್ತು. ಈ ಫೋಟೋದಲ್ಲಿ ಪ್ರಧಾನಿ ಮೋದಿ ಮಧ್ಯದಲ್ಲಿ ನಿಂತಿದ್ದು ವಿಶೇಷವಾಗಿತ್ತು.

     

    ಭಾರತದ ಚುನಾವಣಾ ಫಲಿತಾಂಶ ಪ್ರಕಟವಾಗುವ ಮೊದಲೇ ಪ್ರಧಾನಿ ಮೋದಿ ಅವರಿಗೆ ಏಪ್ರಿಲ್‌ ತಿಂಗಳಿನಲ್ಲಿ ಜಿ7 ಸಭೆಗೆ ಆಗಮಿಸುವಂತೆ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ (Giorgia Meloni) ಆಹ್ವಾನ ನೀಡಿದ್ದರು. ಭಾರತ ಜಿ7 ದೇಶಗಳ ಒಕ್ಕೂಟದಲ್ಲಿ ಇಲ್ಲ. ಆದರೆ ವಿಶೇಷ ಅತಿಥಿಯಾಗಿ ಈ ಸಭೆಯಲ್ಲಿ ಭಾಗವಹಿಸಲು ಇಟಲಿ ಆಹ್ವಾನ ನೀಡಿತ್ತು.

     

    ಏನಿದು ಮೆಲೋಡಿ?
    ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಮತ್ತು ನರೇಂದ್ರ ಮೋದಿ ಇಬ್ಬರು ಉತ್ತಮ ಸ್ನೇಹಿತರಾಗಿದ್ದಾರೆ. ಜಿ20 ಸಮ್ಮೇಳನಕ್ಕೆ ಮೆಲೋನಿ ಬಂದಾಗ #Melodi ಹ್ಯಾಶ್‌ ಟ್ಯಾಗ್‌ ಫೇಮಸ್‌ ಆಗಿತ್ತು. ಮೆಲೋನಿ ಮತ್ತು ಮೋದಿ ಹೆಸರನ್ನು ಸೇರಿಸಿ ಅಭಿಮಾನಿಗಳು Melodi ಟ್ಯಾಗ್‌ ಬಳಸಿ ಪೋಸ್ಟ್‌ ಮಾಡುತ್ತಿದ್ದರು. ಈಗ ಸ್ವತ: ಜಾರ್ಜಿಯಾ ಮೆಲೋನಿ ಅವರೇ ಈ ಹ್ಯಾಶ್‌ಟ್ಯಾಗ್‌ ಬಳಸಿ ಪೋಸ್ಟ್‌ ಮಾಡಿದ್ದು ಸೆಲ್ಫಿ ಫೋಟೋ ವೈರಲ್‌ಆಗಿದೆ.

  • G7 Group Photo | ಮಧ್ಯದಲ್ಲಿ ನಿಂತ ಭಾರತ: ಮೋದಿ ಹೇಳಿದ್ದೇನು?

    G7 Group Photo | ಮಧ್ಯದಲ್ಲಿ ನಿಂತ ಭಾರತ: ಮೋದಿ ಹೇಳಿದ್ದೇನು?

    ಬರಿ(ಇಟಲಿ): ತಂತ್ರಜ್ಞಾನವು ಸೃಜನಶೀಲವಾಗಿರಬೇಕು, ವಿನಾಶಕಾರಿಯಾಗಬಾರದು ಎಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ಕರೆ ನೀಡಿದ್ದಾರೆ.

    ಇಟಲಿಯ ಬರಿ (Bari) ನಗರದಲ್ಲಿ ನಡೆದ ನಡೆದ ಜಿ7 (G7) ರಾಷ್ಟ್ರಗಳ ಸಭೆಯಲ್ಲಿ ಮೋದಿ ಮಾತನಾಡಿದರು. 21ನೇ ಶತಮಾನವನ್ನು ತಂತ್ರಜ್ಞಾನದ ಯುಗ ಎಂದು ಬಣ್ಣಿಸಿದ ಮೋದಿ, ತಂತ್ರಜ್ಞಾನವು ಮನುಷ್ಯನನ್ನು ಚಂದ್ರನತ್ತ ಕರೆದೊಯ್ಯುವ ಧೈರ್ಯವನ್ನು ನೀಡುತ್ತದೆ. ಆದರೆ ಸೈಬರ್ ಭದ್ರತೆಯಂತಹ ಸವಾಲುಗಳನ್ನು ಸಹ ಸೃಷ್ಟಿಸುತ್ತದೆ ಎಂದು ಹೇಳಿದರು. ಇದನ್ನೂ ಓದಿ: ನಾನು ಶೆಡ್‌ನಿಂದ ಬಂದ ಮೇಲೆ ಇವ್ರೆಲ್ಲಾ ಸೇರಿ ಹಿಂಗೆ ಮಾಡಿ ನನ್‌ ತಲೆಗೆ ತಂದಿದ್ದಾರೆ: ದರ್ಶನ್‌ ಅಳಲು

    ತಂತ್ರಜ್ಞಾನದ ಪ್ರಯೋಜನಗಳು ಸಮಾಜದ ಎಲ್ಲಾ ವರ್ಗಗಳನ್ನು ತಲುಪುವುದನ್ನು ನಾವು ಖಚಿತಪಡಿಸಿಕೊಳ್ಳಬೇಕು. ಸಾಮಾಜಿಕ ಅಸಮಾನತೆಗಳನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ ಮತ್ತು ಅವುಗಳನ್ನು ಸೀಮಿತಗೊಳಿಸುವ ಬದಲು ಮಾನವ ಶಕ್ತಿಯನ್ನು ವಿಸ್ತರಿಸಲು ಸಹಾಯ ಮಾಡುತ್ತದೆ ಎಂದರು.

    ನಾವು ತಂತ್ರಜ್ಞಾನವನ್ನು ವಿನಾಶಕಾರಿಯಾಗಿ ಬಳಸದೇ ಸೃಜನಾತ್ಮಕಗೊಳಿಸಬೇಕು. ಆಗ ಮಾತ್ರ ನಾವು ಎಲ್ಲರನ್ನೂ ಒಳಗೊಳ್ಳುವ ಸಮಾಜವನ್ನು ನಿರ್ಮಿಸಬಹುದು ಎಂದು ಹೇಳಿದರು.

    ಜಾಗತಿಕ ವೇದಿಕೆಯಲ್ಲಿ ಗ್ಲೋಬಲ್‌ ಸೌತ್‌ ದೇಶಗಳ ಕಳವಳಗಳನ್ನು ವ್ಯಕ್ತಪಡಿಸುವುದು ತನ್ನ ಜವಾಬ್ದಾರಿ ಎಂದು ಭಾರತ ಪರಿಗಣಿಸಿದೆ. ಭಾರತದ ಅಧ್ಯಕ್ಷತೆಯಲ್ಲಿ ನಡೆದ ಜಿ20 ಸಮ್ಮೇಳನದಲ್ಲಿ ಆಫ್ರಿಕಾ ಒಕ್ಕೂಟವನ್ನು ಜಿ20 ಖಾಯಂ ಸದಸ್ಯರನ್ನಾಗಿ ಸ್ವೀಕರಿಸಲಾಗಿದೆ. ಇದು ಭಾರತದ ಗಮನಾರ್ಹ ಸಾಧನೆ ಮತ್ತು ಗೌರವವನ್ನು ಸೂಚಿಸುತ್ತದೆ ಎಂದು ಮೋದಿ ತಿಳಿಸಿದರು.

    ಜಿ7 ಸಭೆ ಮುಗಿದ ಬಳಿಕ ಕೊನೆಯಲ್ಲಿ ಎಲ್ಲಾ ದೇಶದ ನಾಯಕರ ಗ್ರೂಪ್‌ ಫೋಟೋ ತೆಗೆಯಲಾಗಿತ್ತು. ಈ ಫೋಟೋದಲ್ಲಿ ಪ್ರಧಾನಿ ಮೋದಿ ಮಧ್ಯದಲ್ಲಿ ನಿಂತಿದ್ದು ವಿಶೇಷವಾಗಿತ್ತು.

    ಭಾರತದ ಚುನಾವಣಾ ಫಲಿತಾಂಶ ಪ್ರಕಟವಾಗುವ ಮೊದಲೇ ಪ್ರಧಾನಿ ಮೋದಿ ಅವರಿಗೆ ಏಪ್ರಿಲ್‌ ತಿಂಗಳಿನಲ್ಲಿ ಜಿ7 ಸಭೆಗೆ ಆಗಮಿಸುವಂತೆ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ (Giorgia Meloni) ಆಹ್ವಾನ ನೀಡಿದ್ದರು. ಭಾರತ ಜಿ7 ದೇಶಗಳ ಒಕ್ಕೂಟದಲ್ಲಿ ಇಲ್ಲ. ಆದರೆ ವಿಶೇಷ ಅತಿಥಿಯಾಗಿ ಈ ಸಭೆಯಲ್ಲಿ ಭಾಗವಹಿಸಲು ಇಟಲಿ ಆಹ್ವಾನ ನೀಡಿತ್ತು.

     

  • ಚೀನಾಗೆ ಬಿಗ್‌ ಶಾಕ್‌ – ಮಹತ್ವಾಕಾಂಕ್ಷೆಯ BRI ಯೋಜನೆಯಿಂದ ಹೊರಬಂದ ಇಟಲಿ

    ಚೀನಾಗೆ ಬಿಗ್‌ ಶಾಕ್‌ – ಮಹತ್ವಾಕಾಂಕ್ಷೆಯ BRI ಯೋಜನೆಯಿಂದ ಹೊರಬಂದ ಇಟಲಿ

    ರೋಮ್‌: ಚೀನಾಗೆ ಇಟಲಿ ಬಿಗ್‌ ಶಾಕ್‌ ನೀಡಿದೆ. ಚೀನಾದ (China) ಮಹತ್ವಾಕಾಂಕ್ಷೆಯ ಬೆಲ್ಟ್‌ ಅಂಡ್‌ ರೋಡ್‌ ಇನಿಷಿಯೇಟಿವ್ (BRI) ಯೋಜನೆಯಿಂದ ಹೊರಬರುವುದಾಗಿ ಇಟಲಿ (Italy) ಅಧಿಕೃತವಾಗಿ ತಿಳಿಸಿದೆ.

    ಈಗ ಇಟಲಿ ಅಧಿಕೃತವಾಗಿ ಈ ಯೋಜನೆಯಿಂದ ಹೊರಬರುವುದಾಗಿ ಚೀನಾಗೆ ತಿಳಿಸಿದೆ ಎಂದು ಸರ್ಕಾರಿ ಮೂಲಗಳನ್ನು ಆಧಾರಿಸಿ ಮಾಧ್ಯಮವೊಂದು ವರದಿ ಮಾಡಿದೆ. 2019ರಲ್ಲಿ ನಡೆದ ಒಪ್ಪಂದವು ಮಾರ್ಚ್ 2024 ರಲ್ಲಿ ಮುಕ್ತಾಯಗೊಳ್ಳುತ್ತದೆ. ರೋಮ್ ಕನಿಷ್ಠ ಮೂರು ತಿಂಗಳ ಮೊದಲೇ ಲಿಖಿತವಾಗಿ ತಿಳಿಸದೇ ಇದ್ದರೆ ಅದು ಸ್ವಯಂಚಾಲಿತವಾಗಿ ನವೀಕರಿಸಲ್ಪಡುತ್ತದೆ. ಈಗ ಈ ಒಪ್ಪಂದವನ್ನು ನವೀಕರಿಸುವುದಿಲ್ಲಎಂದು ಇಟಲಿ ಚೀನಾಗೆ ಇತ್ತೀಚಿಗೆ ಪತ್ರದ ಮೂಲಕ ತಿಳಿಸಿದೆ ಎಂದು ವರದಿಯಾಗಿದೆ.

    ಚೀನಾದ ಈ ಯೋಜನೆಗೆ  2019ರಲ್ಲಿ ಇಟಲಿ ಸಹಿ ಹಾಕಿತ್ತು.  ಬಿಆರ್‌ಐ ಸೇರಿದ ಏಕೈಕ ಪಾಶ್ಚಿಮಾತ್ಯ ದೇಶ ಇಟಲಿಯಾಗಿತ್ತು. ಲಾಭಕ್ಕಿಂತ ನಷ್ಟವೇ ಹೆಚ್ಚಾಗಬಹುದು ಎಂಬ ಕಾರಣಕ್ಕೆ ಇಟಲಿ ಈ ಯೋಜನೆಯಿಂದ ಹಿಂದಕ್ಕೆ ಸರಿಯಲಿದೆ ಎಂಬ ವಿಚಾರ ಕೆಲ ತಿಂಗಳಿಂದ ಸುದ್ದಿಯಾಗುತ್ತಿತ್ತು. ಇದನ್ನೂ ಓದಿ: ಮೋದಿ ಜೊತೆ ಸೆಲ್ಫಿ ಕ್ಲಿಕ್ಕಿಸಿ Melodi ಎಂದ ಇಟಲಿ ಪ್ರಧಾನಿ!

    ನಾವು ಇನ್ನು ಮುಂದೆ ಬಿಆರ್‌ಐ ಭಾಗವಾಗಿರದಿದ್ದರೂ ಸಹ ಚೀನಾದೊಂದಿಗೆ ಅತ್ಯುತ್ತಮ ಸಂಬಂಧವನ್ನು ಕಾಪಾಡಿಕೊಳ್ಳುವ ಎಲ್ಲಾ ಉದ್ದೇಶವನ್ನು ನಾವು ಹೊಂದಿದ್ದೇವೆ. ಇತರ ಜಿ7 ರಾಷ್ಟ್ರಗಳು ಚೀನಾದೊಂದಿಗೆ ನಮಗಿಂತಲೂ ಉತ್ತಮ ಸಂಬಂಧವನ್ನು ಹೊಂದಿದ್ದರೂ ಆ ದೇಶಗಳು ಬಿಆರ್‌ಐ ಯೋಜನೆಯ ಭಾಗವಾಗಿಲ್ಲ ಎಂದು ಇಟಲಿಯ ಸರ್ಕಾರಿ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿದ್ದಾರೆ.

    ಕಳೆದ ವರ್ಷ ಪ್ರಧಾನಿಯಾಗಿ ಜಾರ್ಜಿಯಾ ಮೆಲೋನಿ (Giorgia Meloni) ಅಧಿಕಾರ ವಹಿಸಿಕೊಂಡ ಬಳಿಕ ಚೀನಾವನ್ನು ಪಶ್ಚಿಮಕ್ಕೆ ಸಂಪರ್ಕಿಸುವ ಈ ಯೋಜನೆಯಿಂದ ಇಟಲಿಗೆ ಯಾವುದೇ ಗಮನಾರ್ಹ ಲಾಭ ಇಲ್ಲ.  ಈ ಒಪ್ಪಂದದಿಂದ ಹಿಂದೆ ಸರಿಯಲು ಬಯಸುವುದಾಗಿ ಹೇಳಿದ್ದರು.  ಇದನ್ನೂ ಓದಿ: ಏನಿದು ಬಿಎಆರ್‌ಐ ಯೋಜನೆ? ಚೀನಾಗೆ ಲಾಭ ಹೇಗೆ? ಭಾರತ ಯಾಕೆ ಸೇರ್ಪಡೆಯಾಗಿಲ್ಲ? ಭಾರತದ ವಿರೋಧ ಯಾಕೆ? ಚೀನಾದ ಯೋಜನೆಗೆ ಪ್ರತಿಯಾಗಿ ಭಾರತ ಏನು ಮಾಡುತ್ತಿದೆ?

    ಏನಿದು ಈ ಯೋಜನೆ?
    ಸರಳವಾಗಿ ಹೇಳುವುದಾರೆ ರಸ್ತೆ, ರೈಲು, ಹಡಗಿನ ಮೂಲಕ ವಸ್ತುಗಳನ್ನು ಸಾಗಿಸಲು ಆರಂಭವಾದ ಯೋಜನೆ ಒನ್‌ ಬೆಲ್ಟ್‌, ಒನ್‌ ರೋಡ್‌ ಯೋಜನೆ. ಅಂದರೆ ಒಂದು ದೇಶದಲ್ಲಿ ಮೂಲಸೌಕರ್ಯವನ್ನು (Infrastructure) ಅಭಿವೃದ್ಧಿ ಪಡಿಸುವ ಈ ಯೋಜನೆ 2013ರಲ್ಲಿ ಆರಂಭಗೊಂಡಿತು. ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ (Xi Jinping) ಕನಸಿನ ಯೋಜನೆ ಇದಾಗಿದ್ದು ಇದಕ್ಕೆ 30, 50 ದೇಶಗಳು ಸೇರಿಲ್ಲ. ರಷ್ಯಾ, ಸೌದಿ ಅರೇಬಿಯಾ, ಕತಾರ್‌, ಇರಾನ್‌, ಅರ್ಜೈಂಟಿನಾ, ದಕ್ಷಿಣ ಆಫ್ರಿಕಾ, ದಕ್ಷಿಣ ಕೊರಿಯಾ ಸೇರಿದಂತೆ ಬರೋಬ್ಬರಿ 150 ದೇಶಗಳು ಈ ಮಹತ್ವಾಕಾಂಕ್ಷಿಯೋಜನೆಯ ಸದಸ್ಯ ರಾಷ್ಟ್ರಗಳಾಗಿವೆ. ರಸ್ತೆ, ರೈಲು, ಸೇತುವೆ, ವಿದ್ಯುತ್‌ ಸ್ಥಾವರ, ಬಂದರುಗಳನ್ನು ಈ ಯೋಜನೆಯಲ್ಲಿ ಅಭಿವೃದ್ಧಿ ಪಡಿಸಲಾಗುತ್ತದೆ. ಸದಸ್ಯ ರಾಷ್ಟ್ರಗಳಲ್ಲ ಲ್ಯಾಟಿನ್‌ ಅಮೆರಿಕ, ಯುರೋಪ್‌, ಏಷ್ಯಾ, ಆಫ್ರಿಕಾ ದೇಶಗಳೇ ಅಧಿಕವಾಗಿವೆ.

     

    ಭಾರತ, ಅಮೆರಿಕ ವಿರೋಧ:
    ವಿಶ್ವದ ಹಲವು ರಾಷ್ಟ್ರಗಳು ಸೇರ್ಪಡೆಯಾದರೂ ಭಾರತ (India) ಮತ್ತು ಅಮೆರಿಕ (USA) ಈ ಯೋಜನೆಯನ್ನು ವಿರೋಧಿಸುತ್ತಾ ಬಂದಿದೆ. ಇದು ದೇಶಗಳನ್ನು ಸಾಲದ ಸುಳಿಗೆ ಸಿಲುಕಿಸುವ ಯೋಜನೆ ಎಂದೇ ಭಾರತ ಬಣ್ಣಿಸಿದೆ. ಈ ಯೋಜನೆಯ ಭಾಗವಾಗಿದ್ದ ಪಾಕಿಸ್ತಾನ ಮತ್ತು ಶ್ರೀಲಂಕಾ ಈಗಾಗಲೇ ಸಮಸ್ಯೆ ಎದುರಿಸುತ್ತಿದೆ.

    ಚೀನಾ ಪಾಕಿಸ್ತಾನ ಎಕಾನಮಿಕ್‌ ಕಾರಿಡಾರ್‌ ಹೆಸರಿನಲ್ಲಿ ಸಾಲ ಪಡೆದುಕೊಂಡಿತ್ತು. ಸದ್ಯ ಅಂದಾಜು 30 ಬಿಲಿಯನ್‌ ಡಾಲರ್‌ ಹಣವನ್ನು ಪಾಕಿಸ್ತಾನ ಚೀನಾಗೆ ಪಾವತಿ ಮಾಡಬೇಕಿದೆ. ಚೀನಾ ಹಣವನ್ನು ಪಾವತಿ ಮಾಡಲು ಕನಿಷ್ಟ 40 ವರ್ಷ ಬೇಕಾಗಬಹುದು ಎಂದು ಅಂದಾಜಿಸಲಾಗಿದೆ. ಶ್ರೀಲಂಕಾದ ಹಂಬನ್‌ತೋಟ ಬಂದರನ್ನು ಚೀನಾ ಸಹಕಾರದಿಂದ ಅಭಿವೃದ್ಧಿ ಪಡಿಸಲಾಗಿದೆ. ಅಭಿವೃದ್ಧಿ ಪಡಿಸಿದರೂ ನಿರೀಕ್ಷಿತ ಪ್ರಮಾಣದ ಲಾಭವಾಗಿಲ್ಲ. ಸಾಲ ಮರುಪಾವತಿ ಕಷ್ಟವಾಗುತ್ತಿರುವ ಹಿನ್ನೆಲೆಯಲ್ಲಿ 2017ರಲ್ಲಿ 99 ವರ್ಷಗಳ ಕಾಲ ಚೀನಾದ ಚೀನಾ ಮರ್ಚೆಂಟ್‌ ಪೋರ್ಟ್‌ ಹೋಲ್ಡಿಂಗ್‌ ಲೀಸ್‌ಗೆ ನೀಡಲಾಗಿದೆ.

    ಪಾಕಿಸ್ತಾನ, ಶ್ರೀಲಂಕಾ ಮಾತ್ರವಲ್ಲ ಕೀನ್ಯಾ, ದಕ್ಷಿಣ ಆಫ್ರಿಕಾ, ಉಗಾಂಡ, ಮಲೇಷ್ಯಾ, ಮಾಲ್ಡೀವ್ಸ್‌ ಸೇರಿದಂತೆ ಹಲವು ದೇಶಗಳು ಸಾಲದ ಸುಳಿಯಲ್ಲಿ ಸಿಲುಕಿವೆ. ಈ ಕಾರಣಕ್ಕೆ ಒನ್‌ ರೋಡ್‌, ಒನ್‌ ಬೆಲ್ಟ್‌ ಈಗ Debt-trap Diplomacy ಎಂದೇ ಕುಖ್ಯಾತಿ ಪಡೆದಿದೆ.

     

  • ಮೋದಿ ಜೊತೆ ಸೆಲ್ಫಿ ಕ್ಲಿಕ್ಕಿಸಿ Melodi ಎಂದ ಇಟಲಿ ಪ್ರಧಾನಿ!

    ಮೋದಿ ಜೊತೆ ಸೆಲ್ಫಿ ಕ್ಲಿಕ್ಕಿಸಿ Melodi ಎಂದ ಇಟಲಿ ಪ್ರಧಾನಿ!

    ದುಬೈ: ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ (Italian PM Giorgia Meloni) ಅವರು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರೊಂದಿಗೆ ಸೆಲ್ಫಿ ತೆಗೆದು #Melodi ಎಂದು ಬರೆದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದಾರೆ.

    ವಿಶ್ವಸಂಸ್ಥೆಯ ಹವಾಮಾನ ಸಮ್ಮೇಳನ ದುಬೈನಲ್ಲಿ (Dubai) ನಡೆದಿದ್ದು ವಿಶ್ವದ ನಾಯಕರು ಭಾಗವಹಿಸಿದ್ದರು. ಈ ವೇಳೆ ಮೋದಿ ಮತ್ತು ಮೆಲೋನಿ ಭೇಟಿಯಾಗಿದ್ದಾರೆ. ಭೇಟಿಯ ವೇಳೆ ಮೆಲೋನಿ ಅವರು ಸೆಲ್ಫಿ ಕ್ಲಿಕ್ಕಿಸಿ, COP28 ನಲ್ಲಿ ಉತ್ತಮ ಸ್ನೇಹಿತರು ಎಂದು ಬರೆದಿದ್ದಾರೆ. ಇದನ್ನೂ ಓದಿ: ಮಗನ ಆಟ ಕಣ್ತುಂಬಿಕೊಳ್ಳಲು ಪತ್ನಿಯೊಂದಿಗೆ ಮೈಸೂರಿಗೆ ಆಗಮಿಸಿದ ರಾಹುಲ್ ದ್ರಾವಿಡ್

    ಮೋದಿ ಅವರು, ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರನ್ನು ಭೇಟಿಯಾಗಿ ಸುಸ್ಥಿರ ಮತ್ತು ಸಮೃದ್ಧ ಭವಿಷ್ಯಕ್ಕಾಗಿ ಭಾರತ ಮತ್ತು ಇಟಲಿ ನಡುವಿನ ಸಹಯೋಗದ ಪ್ರಯತ್ನಗಳನ್ನು ಎದುರು ನೋಡುತ್ತಿದ್ದೇನೆ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದಿದ್ದಾರೆ. ಈ ಕಾರ್ಯಕ್ರಮದಲ್ಲಿ 2028ರಲ್ಲಿ ಭಾರತದಲ್ಲಿ ವಿಶ್ವಸಂಸ್ಥೆಯ ಹವಾಮಾನ ಸಮ್ಮೇಳನ ಆಯೋಜನೆಯ ಪ್ರಸ್ತಾಪವನ್ನು ಮೋದಿ ಮಾಡಿದ್ದಾರೆ.

    ಏನಿದು ಮೆಲೋಡಿ?
    ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಮತ್ತು ನರೇಂದ್ರ ಮೋದಿ ಇಬ್ಬರು ಉತ್ತಮ ಸ್ನೇಹಿತರಾಗಿದ್ದಾರೆ. ಜಿ20 ಸಮ್ಮೇಳನಕ್ಕೆ ಮೆಲೋನಿ ಬಂದಾಗ #Melodi ಹ್ಯಾಶ್‌ ಟ್ಯಾಗ್‌ ಫೇಮಸ್‌ ಆಗಿತ್ತು. ಮೆಲೋನಿ ಮತ್ತು ಮೋದಿ ಹೆಸರನ್ನು ಸೇರಿಸಿ ಅಭಿಮಾನಿಗಳು Melodi ಟ್ಯಾಗ್‌ ಬಳಸಿ ಪೋಸ್ಟ್‌ ಮಾಡುತ್ತಿದ್ದರು. ಈಗ ಸ್ವತಹ: ಜಾರ್ಜಿಯಾ ಮೆಲೋನಿ ಅವರೇ ಈ ಹ್ಯಾಶ್‌ಟ್ಯಾಗ್‌ ಬಳಸಿ ಪೋಸ್ಟ್‌ ಮಾಡಿದ್ದು ಸೆಲ್ಫಿ ಫೋಟೋ ವೈರಲ್‌ಆಗಿದೆ.

  • ಮಹಿಳೆಯರ ಬಗ್ಗೆ ಅಸಭ್ಯ ಮಾತು – ಪತಿಯಿಂದ ದೂರಾದ ಇಟಲಿ ಪ್ರಧಾನಿ

    ಮಹಿಳೆಯರ ಬಗ್ಗೆ ಅಸಭ್ಯ ಮಾತು – ಪತಿಯಿಂದ ದೂರಾದ ಇಟಲಿ ಪ್ರಧಾನಿ

    ರೋಮ್‌: ಇಟಲಿಯ ಪ್ರಧಾನಿ ಜಾರ್ಜಿಯಾ ಮೆಲೋನಿ (Giorgia Meloni) ತಮ್ಮ ಪತಿ ಆಂಡ್ರಿಯಾ ಗಿಯಾಂಬ್ರುನೊ ಅವರಿಂದ ಬೇರೆಯಾಗುತ್ತಿರುವುದಾಗಿ ತಿಳಿಸಿದ್ದಾರೆ. ಈ ಮೂಲಕ 10 ವರ್ಷಗಳ ಸಂಬಂಧವನ್ನು ಕೊನೆಗೊಳಿಸುತ್ತಿರುವುದಾಗಿ ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

    ಮೆಲೋನಿ ಪತಿ ಆಂಡ್ರಿಯಾ ಗಿಯಾಂಬ್ರುನೊ (Andrea Giambruno) ಟಿವಿ ಪತ್ರಕರ್ತನಾಗಿದ್ದು, ಇತ್ತೀಚೆಗೆ ಟಿವಿ ಲೈವ್‌ನಲ್ಲೇ ಲೈಂಗಿಕ (ಸೆಕ್ಸಿಯೆಷ್ಟ್) ಕಾಮೆಂಟ್ (TV Comments) ಮಾಡಿ ವ್ಯಾಪಕ ಟೀಕೆಗೆ ಒಳಗಾಗಿದ್ದರು. ಕೆಲ ಸಮಯದಿಂದ ನಮ್ಮಿಬ್ಬರ ಹಾದಿ ಭಿನ್ನವಾಗಿವೆ, ಈಗ ಅದನ್ನು ಒಪ್ಪಿಕೊಳ್ಳುವ ಸಮಯ ಬಂದಿದೆ ಎಂದು ತಿಳಿಸಿದ್ದಾರೆ. ದಂಪತಿಗೆ ಒಂದು ಹೆಣ್ಣು ಮಗುವಿದೆ.

    ಮೀಡಿಯಾ ಸೆಟ್‌ನಲ್ಲಿ ಸುದ್ದಿ ನಿರೂಪಕನಾಗಿ ಆಂಡ್ರಿಯಾ ಗಿಯಾಂಬ್ರುನೊ ಕೆಲಸ ಮಾಡುತ್ತಿದ್ದರು. ಇದು ಇಟಲಿ ಮಾಜಿ ಪ್ರಧಾನ ಮಂತ್ರಿ ಮತ್ತು ಜಾರ್ಜಿಯಾ ಮೆಲೋನಿ ಮಿತ್ರ ದಿವಂಗತ ಸಿಲ್ವಿಯೊ ಬೆರ್ಲುಸ್ಕೋನಿಯ ಉತ್ತರಾಧಿಕಾರಿಯ ಮಾಲೀಕತ್ವದ ಮಾಧ್ಯಮ ಸಂಸ್ಥೆಯಾಗಿದೆ. ಇದೇ ವಾರದ ಆರಂಭದಲ್ಲಿ ಮೀಡಿಯಾಸೆಟ್‌, ಮೆಲೋನಿ ಪತಿ ಜಿಯಾಂಬ್ರುನೋ ಸುದ್ದಿ ಪ್ರಸಾರದ ವೇಳೆ ಅಸಭ್ಯ ಭಾಷೆ ಬಳಸುತ್ತಿರುವ ವೀಡಿಯೋ ಪ್ರಸಾರ ಮಾಡಲಾಗಿತ್ತು. ಪ್ರಸಾರದ ವೇಳೆ ಅವರು ಮಹಿಳಾ ಸಹೋದ್ಯೋಗಿಯ ಜೊತೆ ಫ್ಲರ್ಟ್‌ ಕೂಡ ಮಾಡುತ್ತಿದ್ದರು. ಆಗ ಮಹಿಳಾ ಸಹೋದ್ಯೋಗಿ ನಾನೇಕೆ ನಿನ್ನ ಈ ಮೊದಲೇ ಭೇಟಿ ಮಾಡಲಿಲ್ಲ? ಎಂದು ಕೇಳಿದ್ದಳು.

    ಗುರುವಾರ ಪ್ರಸಾರವಾದ ಮತ್ತೊಂದು ರೆಕಾರ್ಡಿಂಗ್‌ನಲ್ಲಿ, ಜಿಯಾಂಬ್ರುನೋ ಅವರು ತಾನು ಹೊಂದಿರುವ ಅಫೇರ್‌ ಬಗ್ಗೆ ಹೆಮ್ಮೆಯಿಂದ ಹೇಳಿಕೊಂಡಿದ್ದರು. ಮಹಿಳಾ ಸಹೋದ್ಯೋಗಿಗಳು ಗುಂಪು ಲೈಂಗಿಕತೆಯಲ್ಲಿ ಭಾಗವಹಿಸಿದರೆ ಅವರು ತನಗಾಗಿ ಕೆಲಸ ಮಾಡಬಹುದು ಎಂದು ಹೇಲಿದ್ದರು. ಇದಕ್ಕೂ ಮೊದಲು ಆಗಸ್ಟ್‌ನಲ್ಲಿ ಸಾಮೂಹಿಕ ಅತ್ಯಾಚಾರ ಸಂತ್ರಸ್ತೆಯನ್ನು ನಿಂದಿಸುತ್ತಿರುವ ಕಾಮೆಂಟ್‌ಗಳ ಕಾರಣಕ್ಕೂ ಈ ಪತ್ರಕರ್ತ ವ್ಯಾಪಕ ಟೀಕೆಗೆ ಒಳಗಾಗಿದ್ದರು. ಇದನ್ನೂ ಓದಿ: ಡಿಕೆಶಿ ನೂರಕ್ಕೆ ನೂರರಷ್ಟು ತಪ್ಪಿತಸ್ಥ, ಡಿಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡ್ಲಿ- ಈಶ್ವರಪ್ಪ ಆಗ್ರಹ

    ನೀವು ಡಾನ್ಸ್‌ ಮಾಡೋದಕ್ಕೆ ಹೋದ್ರೆ, ಅಲ್ಲಿ ಡ್ರಿಂಗ್ಸ್‌ ಮಾಡೋದಕ್ಕೂ ಅವಕಾಶವಿದೆ. ಆದ್ರೆ ನೀವು ಕುಡಿದು ನಿಮ್ಮ ಇಂದ್ರಿಯಗಳ ಮೇಲೆ ಹಿಡಿತ ಕಳೆದುಕೊಳ್ಳಬಾರದು. ಹಿಡಿತ ಕಳೆದುಕೊಳ್ಳುವುದನ್ನು ತಪ್ಪಿಸಿದರೆ, ನೀವು ಕೆಲವು ಸಮಸ್ಯೆಗಳಿಗೆ ಒಳಗಾಗುವುದನ್ನೂ ತಪ್ಪಿಸಬಹುದು ಎಂದು ಆಂಡ್ರಿಯಾ ಗಿಯಾಂಬ್ರುನೊ ಕಾಮೆಂಟ್ ಮಾಡಿದ್ದರು. ಇದನ್ನೂ ಓದಿ: Cash for Query – ಪಾಸ್‌ವರ್ಡ್‌ ಶೇರ್‌ ಆಗಿತ್ತು: ಸಂಸದೆ ಮೊಯಿತ್ರಾ ಜೊತೆ ನಂಟು ಒಪ್ಪಿಕೊಂಡ ಉದ್ಯಮಿ

    ನನ್ನ ಪತಿ ಮಾಡಿದ ಕಾಮೆಂಟ್‌ಗೆ ಜನ ನನ್ನನ್ನು ಪ್ರಶ್ನೆ ಮಾಡಬಾರದು, ಮುಂದಿನ ದಿನಗಳಲ್ಲಿ ಆತನ ನಡವಳಿಕೆಯ ಬಗ್ಗೆ ನಾನು ಉತ್ತರಿಸುವಂತಾಗಬಾರದು, ಅದಕ್ಕಾಗಿ ಬೇರಾಗುವ ನಿರ್ಧಾರಕ್ಕೆ ಬಂದಿರುವುದಾಗಿ ಮೆಲೋನಿ ತಿಳಿಸಿದ್ದಾರೆ. ಇದನ್ನೂ ಓದಿ: ಬಿಜೆಪಿಯಿಂದ ಕಾಂಗ್ರೆಸ್ ಕಲೆಕ್ಷನ್ ವಂಶಾವಳಿ, ನಿಗಮ ಮಂಡಳಿಗಳ ರೇಟ್ ಕಾರ್ಡ್ ರಿಲೀಸ್

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]