Tag: ಜಾರ್ಖಂಡ್

  • ಮಹರಾಷ್ಟ್ರ, ಜಾರ್ಖಂಡ್ ವಿಧಾನಸಭೆ ಚುನಾವಣೆ – ಸಿಎಂ ಏಕನಾಥ್ ಶಿಂಧೆ ಸೇರಿ ಪ್ರಮುಖ ನಾಯಕರಿಂದ ನಾಮಪತ್ರ ಸಲ್ಲಿಕೆ

    ಮಹರಾಷ್ಟ್ರ, ಜಾರ್ಖಂಡ್ ವಿಧಾನಸಭೆ ಚುನಾವಣೆ – ಸಿಎಂ ಏಕನಾಥ್ ಶಿಂಧೆ ಸೇರಿ ಪ್ರಮುಖ ನಾಯಕರಿಂದ ನಾಮಪತ್ರ ಸಲ್ಲಿಕೆ

    ನವದೆಹಲಿ: ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಹಿನ್ನಲೆ ಮುಖ್ಯಮಂತ್ರಿ ಮತ್ತು ಶಿವಸೇನೆ ಮುಖ್ಯಸ್ಥ ಏಕನಾಥ್ ಶಿಂಧೆ (Eknath Shinde) ಅವರು ಥಾಣೆಯ (Thane) ಕೊಪ್ರಿ-ಪಚ್ಪಖಾಡಿ ಕ್ಷೇತ್ರದಿಂದ ಸ್ಪರ್ಧಿಸಲು ನಾಮಪತ್ರ (Nomination Paper) ಸಲ್ಲಿಸಿದ್ದಾರೆ.

    ಶಿಂಧೆ ಥಾಣೆಯ ಪ್ರಬಲ ನಾಯಕ ದಿವಂಗತ ಆನಂದ್ ದಿಘೆ ಅವರ ಸೋದರಳಿಯ ಶಿವಸೇನಾ (UBT) ಅಭ್ಯರ್ಥಿ ಕೇದಾರ್ ದಿಘೆ ಅವರನ್ನು ಎದುರಿಸಲಿದ್ದಾರೆ. 2009ರಲ್ಲಿ ಕ್ಷೇತ್ರ ರಚನೆಯಾದಾಗಿನಿಂದ ಶಿಂಧೆ ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ನಾಮಪತ್ರ ಸಲ್ಲಿಕೆಗೂ ಮುನ್ನ ಏಕನಾಥ್ ಶಿಂಧೆ ಸಂತ ಏಕನಾಥ ಮಹಾರಾಜರ ವಂಶದ ಯೋಗಿರಾಜ್ ಮಹಾರಾಜ್ ಗೋಸ್ವಾಮಿಯವರಿಂದ ಆಶೀರ್ವಾದ ಪಡೆದರು. ಬಳಿಕ ರೋಡ್ ಶೋ ನಡೆಸಿದರು. ಅಲಂಕೃತ ರಥದಂತಹ ವಾಹನವನ್ನು ಏರಿ ನೂರಾರು ಬೆಂಬಲಿಗರು ಸಮ್ಮುಖದಲ್ಲಿ ಅವರು ನಾಮಪತ್ರ ಸಲ್ಲಿಸಲು ತೆರಳಿದರು. ಇದನ್ನೂ ಓದಿ: ನಾವು ಅಲ್ಲಾನ ವಿರೋಧಿಗಳಲ್ಲಾ- ಅಲ್ಲಾನ ಹೆಸರಿನ ಬದ್ಮಾಶ್‌ಗಿರಿ ಮಾಡೋರ ವಿರೋಧಿ: ಜೋಶಿ ಕಿಡಿ

    ಏಕನಾಥ್ ಶಿಂಧೆ ನಾಮಪತ್ರ ಸಲ್ಲಿಕೆ ವೇಳೆ ಕೇಂದ್ರ ಸಚಿವ ರಾಮದಾಸ್ ಅಠವಳೆ ಸೇರಿದಂತೆ ಶಿವಸೇನೆ ಮತ್ತು ಎನ್‌ಸಿಪಿಯ, ಆರ್‌ಪಿಐ (ಎ) ಯ ಪ್ರಮುಖ ನಾಯಕರು ಭಾಗಿಯಾಗಿದ್ದರು. 2019ರ ಚುನಾವಣೆಯಲ್ಲಿ, ಶಿವಸೇನೆ ವಿಭಜನೆಯ ಮೊದಲು ಏಕನಾಥ್ ಶಿಂಧೆ ಕೊಪ್ರಿ-ಪಚ್ಪಖಾಡಿ ಸ್ಥಾನವನ್ನು 65% ಕ್ಕಿಂತ ಹೆಚ್ಚು ಮತಗಳೊಂದಿಗೆ ಗೆದ್ದರು. ಕಾಂಗ್ರೆಸ್ ಅಭ್ಯರ್ಥಿ ಸಂಜಯ್ ಘಡಿಗಾಂವ್ಕರ್ ಮತ್ತು ಮಹಾರಾಷ್ಟ್ರ ನವನಿರ್ಮಾಣ ಸೇನೆ ಅಭ್ಯರ್ಥಿ ಮಹೇಶ್ ಪರಶುರಾಮ್ ಕದಂ ತಲಾ 13 ಪ್ರತಿಶತದಷ್ಟು ಮತ ಗಳಿಸಿದ್ದರು. ಇದನ್ನೂ ಓದಿ: ದೀಪಾವಳಿ ಹಬ್ಬ – ಬೆಂಗಳೂರಲ್ಲಿ ಪಟಾಕಿ ಸಿಡಿಸಲು ಬಿಬಿಎಂಪಿ ಮಾರ್ಗಸೂಚಿ

    ಉಪಮುಖ್ಯಮಂತ್ರಿ ಮತ್ತು ಎನ್‌ಸಿಪಿ ಮುಖ್ಯಸ್ಥ ಅಜಿತ್ ಪವಾರ್ ಕೂಡ ಬಾರಾಮತಿ ವಿಧಾನಸಭಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದರು. ಎನ್‌ಸಿಪಿ-ಎಸ್‌ಪಿ ಅಭ್ಯರ್ಥಿಯಾಗಿ ಅಜಿತ್ ಪವಾರ್ ಅವರ ಸೋದರಳಿಯ ಮತ್ತು ಶರದ್ ಪವಾರ್ ಅವರ ಮೊಮ್ಮಗ ಯುಗೇಂದ್ರ ಪವಾರ್ ಕ್ಷೇತ್ರದಿಂದ ಪ್ರತಿಸ್ಪರ್ಧಿ ಅಭ್ಯರ್ಥಿಯಾಗಿದ್ದಾರೆ. ಮಾಜಿ ಸಿಎಂ, ಹಿರಿಯ ಕಾಂಗ್ರೆಸ್ ನಾಯಕ ಪೃಥ್ವಿರಾಜ್ ಚವ್ಹಾಣ್ ಅವರು ಕರಡ ದಕ್ಷಿಣ ವಿಧಾನಸಭಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ್ದಾರೆ. ಚಿಖಾಲಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ವೇತಾ ಮಹಾಲೆ ಪಾಟೀಲ್ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ಸಮ್ಮುಖದಲ್ಲಿ ನಾಮಪತ್ರ ಸಲ್ಲಿಸಿದರು. ಕಂಕಾವಲಿಯಿಂದ ಬಿಜೆಪಿ ಅಭ್ಯರ್ಥಿ ನಿತೇಶ್ ರಾಣೆ ರೋಡ್ ಶೋ ನಡೆಸಿ ಇಂದು ನಾಮಪತ್ರ ಸಲ್ಲಿಸಿದರು. ಜಾರ್ಖಂಡ್‌ನಲ್ಲಿ ಜಮ್ತಾರಾ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸೀತಾ ಸೊರೇನ್ ಅವರು ನಾಮಪತ್ರ ಸಲ್ಲಿಸಿದರು. ಜಾರ್ಖಂಡ್ ಬಿಜೆಪಿ ಅಧ್ಯಕ್ಷ ಬಾಬುಲಾಲ್ ಮರಾಂಡಿ ಅವರು ಧನ್ವಾರ್ ವಿಧಾನಸಭಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದರು. ಇದನ್ನೂ ಓದಿ: 14,201 ಎಕರೆಯಲ್ಲಿ 773 ಎಕರೆ ಮಾತ್ರ ವಕ್ಫ್‌ಗೆ ನೋಟಿಫಿಕೇಶನ್ ಆಗಿದೆ: ಕೃಷ್ಣಭೈರೇಗೌಡ

    ವಯನಾಡ್ ಲೋಕಸಭೆ ಉಪ ಚುನಾವಣೆಗೆ ಪ್ರಿಯಾಂಕ್ ಗಾಂಧಿ ಸಲ್ಲಿಸಿದ ನಾಮಪತ್ರ ಸ್ವೀಕೃತಗೊಂಡಿದೆ. ಈ ಬೆನ್ನಲ್ಲೇ ವಯನಾಡ್‌ನ ಮೂರು ಪ್ರದೇಶಗಳಲ್ಲಿ ಪ್ರಿಯಾಂಕ ಗಾಂಧಿ ರೋಡ್ ಶೋ ನಡೆಸಿದರು. ಇಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಕ್ಷೇತ್ರಕ್ಕೆ ಸಮಯ ನೀಡಲ್ಲ ಎನ್ನುವ ಆರೋಪಕ್ಕೆ ಉತ್ತರ ನೀಡಿದರು. ನಾನು ಒಮ್ಮೆ ಆಯ್ಕೆಯಾಗಬೇಕು. ಆ ಬಳಿಕ ಎಷ್ಟು ಸಮಯ ನೀಡುವೆ ನೀವೆ ನೋಡುತ್ತಿರಿ. ಆಯ್ಕೆಯಾಗದೇ ಇದಕ್ಕೆ ಹೇಗೆ ಉತ್ತರಿಸಲಿ ಎಂದರು. ದೇಶದಲ್ಲಿ ನಿರುದ್ಯೋಗ ಸಮಸ್ಯೆಯು ಸಾರ್ವಕಾಲಿಕ ಉತ್ತುಂಗದಲ್ಲಿದೆ. ಪೋಷಕರು ತಮ್ಮ ಮಕ್ಕಳಿಗೆ ಶಿಕ್ಷಣ ನೀಡಲು ಶ್ರಮಿಸುತ್ತಿದ್ದಾರೆ. ನಿಮ್ಮ ಸೌಲಭ್ಯಗಳು ಸಾಕಷ್ಟು ಉತ್ತಮವಾಗಿಲ್ಲ. ಕಠಿಣ ತರಬೇತಿ ನೀಡುವ ಮತ್ತು ಕೆಲಸ ಮಾಡುವ ಎಲ್ಲಾ ಹುಡುಗರಿಗೆ ಹೊಸ ಅವಕಾಶಗಳನ್ನು ಸೃಷ್ಟಿಸಬೇಕಾಗಿದೆ ಎಂದು ಹೇಳಿದರು. ಇದನ್ನೂ ಓದಿ: 1974 ಮುಂಚಿನ ದಾಖಲೆ ಇದ್ದರೆ ರೈತರು ಟಾಸ್ಕ್‌ ಫೋರ್ಸ್‌ಗೆ ತಂದುಕೊಡಿ – ಎಂ.ಬಿ ಪಾಟೀಲ್‌

  • ರಸ್ತೆ ಗುಂಡಿಯಲ್ಲಿ ಕಾರು ಸಿಲುಕಿ ಪರದಾಡಿದ ಶಿವರಾಜ್ ಸಿಂಗ್ ಚೌಹಾಣ್!

    ರಸ್ತೆ ಗುಂಡಿಯಲ್ಲಿ ಕಾರು ಸಿಲುಕಿ ಪರದಾಡಿದ ಶಿವರಾಜ್ ಸಿಂಗ್ ಚೌಹಾಣ್!

    ರಾಂಚಿ: ಜಾರ್ಖಂಡ್‌ನ (Jharkhand) ಬಹರಗೋರಾ ನಗರದಲ್ಲಿ ಚುನಾವಣಾ ರ‍್ಯಾಲಿಗೆ ತೆರಳಿದ್ದ ಕೇಂದ್ರ ಸಚಿವ ಶಿವರಾಜ್ ಸಿಂಗ್ ಚೌಹಾಣ್ (Shivraj Singh Chouhan) ಅವರ ಕಾರು ರಸ್ತೆಯ ಕೆಸರು ಗುಂಡಿಯಲ್ಲಿ ಸಿಲುಕಿ ಪರದಾಡಿದ್ದಾರೆ.

    ವೈರಲ್ ಆಗಿರುವ ವಿಡಿಯೋದಲ್ಲಿ, ಅವರು ಪ್ರಯಾಣಿಸುತ್ತಿದ್ದ ಕಾರು ಜಲಾವೃತವಾದ ರಸ್ತೆಯ ದೊಡ್ಡ ಗುಂಡಿಯಲ್ಲಿ ಓರೆಯಾಗಿ ನಿಂತಿದೆ. ಈ ವೇಳೆ ಭದ್ರತಾ ಸಿಬ್ಬಂದಿ ಧಾವಿಸಿ ಕಾರನ್ನು ತಳ್ಳಲು ಯತ್ನಿಸಿದ್ದಾರೆ. ಆದರೆ ಕಾರು ಗುಂಡಿಯಿಂದ ಮೇಲೆ ಬರಲಿಲ್ಲ. ಬಳಿಕ ಶಿವರಾಜ್ ಚೌಹಾಣ್ ವಾಹನದಿಂದ ಹೊರಬರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಇದನ್ನೂ ಓದಿ: ಮುನಿರತ್ನ ವಿರುದ್ಧದ ಕೇಸ್‌ಗಳು ಅಧಿಕೃತವಾಗಿ ಎಸ್‌ಐಟಿಗೆ ವರ್ಗ

    ಶಿವರಾಜ್ ಸಿಂಗ್ ಚೌಹಾಣ್ ಜಾರ್ಖಂಡ್‌ನ ಬಿಜೆಪಿಯ (BJP) ಚುನಾವಣಾ ಉಸ್ತುವಾರಿ ಮತ್ತು ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಗೆ ಪಕ್ಷದ ಪ್ರಚಾರಕ್ಕಾಗಿ ಅಲ್ಲಿಗೆ ಬಂದಿದ್ದರು.

    ಇನ್ನೂ ರ‍್ಯಾಲಿಯಲ್ಲಿ ಮಾತಾಡಿದ ಅವರು, ರಾಜ್ಯದಲ್ಲಿ ಕಾರ್ಮೋಡ ಕಟ್ಟಿ ಮಳೆಯಾಗುತ್ತಿದೆ. ಇಲ್ಲಿ ಸೂರ್ಯ ಉದಯಿಸುತ್ತಾನೆ. ಆ ಸೂರ್ಯ ಕಮಲವೇ ಎಂದು ಹೇಳಬಲ್ಲೆ. ರಾಜ್ಯದಲ್ಲಿ ಬದಲಾವಣೆ ಬರುತ್ತದೆ ಎಂದು ಹೇಳಿದ್ದಾರೆ.

    ಜಾರ್ಖಂಡ್‌ನಲ್ಲಿ ಹೇಮಂತ್ ಸೊರೆನ್ ನೇತೃತ್ವದ ಸರ್ಕಾರದ ಐದು ವರ್ಷಗಳ ಅಧಿಕಾರಾವಧಿಯು ಜನವರಿ 2025 ರಲ್ಲಿ ಕೊನೆಗೊಳ್ಳಲಿದೆ. ಈ ವರ್ಷದ ಕೊನೆಯಲ್ಲಿ ರಾಜ್ಯ ವಿಧಾನಸಭಾ ಚುನಾವಣೆಯನ್ನು ನಿಗದಿಪಡಿಸಲಾಗಿದೆ. ಇದನ್ನೂ ಓದಿ: ಜಾತ್ಯಾತೀತತೆ ಯುರೋಪಿಯನ್ ಕಾನ್ಸೆಪ್ಟ್: ಭಾರತದಲ್ಲಿ ಸೆಕ್ಯುಲರಿಸಂ ಅಗತ್ಯವಿಲ್ಲ: ತಮಿಳುನಾಡು ರಾಜ್ಯಪಾಲ ರವಿ

  • PMLA ಪ್ರಕರಣಗಳಲ್ಲೂ ಜಾಮೀನು ಒಂದು ನಿಯಮ, ಜೈಲು ಒಂದು ವಿನಾಯಿತಿ – ಸುಪ್ರೀಂಕೋರ್ಟ್

    PMLA ಪ್ರಕರಣಗಳಲ್ಲೂ ಜಾಮೀನು ಒಂದು ನಿಯಮ, ಜೈಲು ಒಂದು ವಿನಾಯಿತಿ – ಸುಪ್ರೀಂಕೋರ್ಟ್

    ನವದೆಹಲಿ: ಮನಿ ಲಾಂಡರಿಂಗ್ (Money Laundering) ಅಥವಾ ಅಕ್ರಮ ಹಣ ವರ್ಗಾವಣೆ ಪ್ರಕರಣಗಳಲ್ಲಿಯೂ ಸಹ ಜಾಮೀನು ಒಂದು ನಿಯಮ ಮತ್ತು ಜೈಲು ಒಂದು ವಿನಾಯಿತಿ ಎಂದು ಸುಪ್ರೀಂಕೋರ್ಟ್ (Supreme Court) ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ.

    ಜಾರಿ ನಿರ್ದೇಶನಾಲಯ (ED) ದಾಖಲಿಸಿರುವ ಅಕ್ರಮ ಗಣಿಗಾರಿಕೆ ಸಂಬಂಧಿತ ಪ್ರಕರಣದಲ್ಲಿ ಜಾರ್ಖಂಡ್ (Jharkhand) ಮುಖ್ಯಮಂತ್ರಿ ಹೇಮಂತ್ ಸೋರೆನ್ (Hemant Soren) ಅವರ ಸಹಾಯಕನಿಗೆ ಜಾಮೀನು ನೀಡುವ ವೇಳೆಯಲ್ಲಿ ಸುಪ್ರೀಂ ಕೋರ್ಟ್ ಈ ಅಭಿಪ್ರಾಯ ವ್ಯಕ್ತಪಡಿಸಿದೆ.ಇದನ್ನೂ ಓದಿ: ಬೈರತಿ ಸುರೇಶ್ ಪುತ್ರನೊಂದಿಗೆ ಎಸ್ ವಿಶ್ವನಾಥ್ ಪುತ್ರಿ ನಿಶ್ಚಿತಾರ್ಥ -ಊಟದಲ್ಲಿ ಜೊತೆಯಾದ ಡಿಕೆಶಿ, ಗೆಹ್ಲೋಟ್

    ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (PMLA) ಅಡಿಯಲ್ಲಿರುವ ಪ್ರಕರಣಗಳಲ್ಲಿಯೂ ಸಹ “ಜಾಮೀನು ಒಂದು ನಿಯಮವಾಗಿದೆ ಮತ್ತು ಜೈಲು ಒಂದು ಅಪವಾದವಾಗಿದೆ” ಎಂದು ನ್ಯಾಯಮೂರ್ತಿಗಳಾದ ಬಿಆರ್ ಗವಾಯಿ (B R Gavai) ಮತ್ತು ಕೆವಿ ವಿಶ್ವನಾಥನ್ (K. V. Viswanathan) ಅವರಿದ್ದ ದ್ವಿಸದಸ್ಯ ಪೀಠ ತಿಳಿಸಿದೆ.

    ದೆಹಲಿಯ (Delhi) ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ (Manish Sisodia) ಅವರನ್ನು ಒಳಗೊಂಡಿರುವ ಅಕ್ರಮ ಹಣ ವರ್ಗಾವಣೆ ಮತ್ತು ಭ್ರಷ್ಟಾಚಾರ ಪ್ರಕರಣಗಳ ತೀರ್ಪನ್ನು ಆ.9ರಂದು ಉಲ್ಲೇಖಿಸಿದ ಸುಪ್ರೀಂಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿದೆ. ವ್ಯಕ್ತಿಯ ಸ್ವಾತಂತ್ರ‍್ಯ ಯಾವಾಗಲೂ ನಿಯಮವಾಗಿದೆ ಮತ್ತು ಕಾನೂನಿನಿಂದ ಸ್ಥಾಪಿಸಲಾದ ಕಾರ್ಯವಿಧಾನದಿಂದ ಅದನ್ನು ಕಳೆದುಕೊಳ್ಳುವುದು ಅಪವಾದವಾಗಿದೆ. ಯಾವುದೇ ವ್ಯಕ್ತಿಯ ಸ್ವಾತಂತ್ರ‍್ಯವನ್ನು ಕಸಿದುಕೊಳ್ಳಬಾರದು ಎಂದು ಪೀಠ ತಿಳಿಸಿದೆ.ಇದನ್ನೂ ಓದಿ: ಸೆ.9ವರೆಗೆ ದರ್ಶನ್‌ಗೆ ನ್ಯಾಯಾಂಗ ಬಂಧನ – ಇಂದೇ ಶಿರಾ ಮಾರ್ಗವಾಗಿ ಬಳ್ಳಾರಿ ಜೈಲಿಗೆ ಶಿಫ್ಟ್‌

    ಅಕ್ರಮ ಗಣಿಗಾರಿಕೆಯಲ್ಲಿ ಭಾಗಿಯಾಗಿರುವ ಆರೋಪ ಹೊತ್ತಿರುವ ಇಡಿ ಸೋರೆನ್ ಅವರ ಆಪ್ತ ಸಹಾಯಕ ಪ್ರೇಮ್ ಪ್ರಕಾಶ್‌ಗೆ ಸುಪ್ರೀಂಕೋರ್ಟ್ ಜಾಮೀನು ಮಂಜೂರು ಮಾಡಿದೆ. ಜಾರ್ಖಂಡ್ ಹೈಕೋರ್ಟ್ ಮಾ.22 ರಂದು ಜಾಮೀನು ನಿರಾಕರಿಸಿದ ಹಿನ್ನೆಲೆ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.

  • ಆ.30 ರಂದು ಬಿಜೆಪಿ ಸೇರಲಿದ್ದಾರೆ ಜಾರ್ಖಂಡ್‌ ಮಾಜಿ ಸಿಎಂ ಚಂಪೈ ಸೊರೆನ್‌

    ಆ.30 ರಂದು ಬಿಜೆಪಿ ಸೇರಲಿದ್ದಾರೆ ಜಾರ್ಖಂಡ್‌ ಮಾಜಿ ಸಿಎಂ ಚಂಪೈ ಸೊರೆನ್‌

    ನವದೆಹಲಿ: ಜಾರ್ಖಂಡ್‌ (Jharkhand) ಮಾಜಿ ಸಿಎಂ, ಜಾರ್ಖಂಡ್ ಮುಕ್ತಿ ಮೋರ್ಚಾ (JMM) ನಾಯಕ ಚಂಪೈ ಸೊರೆನ್‌ (Champai Soren) ಆ.30 ರಂದು ಬಿಜೆಪಿ (BJP) ಸೇರಲಿದ್ದಾರೆ.

    ನವೆಂಬರ್-ಡಿಸೆಂಬರ್‌ನಲ್ಲಿ ನಡೆಯಲಿರುವ ಜಾರ್ಖಂಡ್ ವಿಧಾನಸಭಾ ಚುನಾವಣೆಯ ಸಹ-ಪ್ರಭಾರಿಯೂ ಆಗಿರುವ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ (Himanta Biswa Sarma) ಅವರೊಂದಿಗೆ ಚಂಪೈ ಸೋಮವಾರ ತಡರಾತ್ರಿ ನವದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಅವರನ್ನು ಭೇಟಿಯಾದ ನಂತರ ಈ ನಿರ್ಧಾರ ಪ್ರಕಟವಾಗಿದೆ.

    ಆಗಸ್ಟ್ 30 ರಂದು ಚಂಪೈ ಅಧಿಕೃತವಾಗಿ ಬಿಜೆಪಿ ಸೇರಲಿದ್ದಾರೆ ಎಂದು ಶರ್ಮಾ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿ ತಿಳಿಸಿದ್ದಾರೆ. ಚಂಪೈ ಸೊರೆನ್‌ ಬಿಜೆಪಿ ಸೇರಲಿದ್ದಾರೆ ಎಂಬ ಸುದ್ದಿ ಕಳೆದ ಎರಡು ವಾರಗಳಿಂದ ಹರಿದಾಡುತ್ತಿತ್ತು. ಆದರೆ ಅಧಿಕೃತವಾಗಿ ತಿಳಿದು ಬಂದಿರಲಿಲ್ಲ.  ಚಂಪೈ ಸೊರೆನ್‌ ಮಾತ್ರ ಸೇರ್ಪಡೆಯಾಗುತ್ತಾರಾ ಉಳಿದ ಶಾಸಕರು ಸೇರ್ಪಡೆಯಾಗುತ್ತಾರಾ ಎನ್ನುವುದರ ಬಗ್ಗೆ ಯಾವುದೇ ವರದಿ ಪ್ರಕಟವಾಗಿಲ್ಲ. ಇದನ್ನೂ ಓದಿ: ಪರಪ್ಪನ ಜೈಲಿಂದ ಹಿಂಡಲಗಾ ಜೈಲಿಗೆ ‘ಜಗ್ಗುದಾದ’ ಶಿಫ್ಟ್ ಸಾಧ್ಯತೆ – ಬೆಳಗಾವಿ ಜೈಲಿನ ವಿಶೇಷತೆ ಏನು?

    ಪ್ರಸ್ತುತ ಹೇಮಂತ್ ಸೊರೆನ್ ಕ್ಯಾಬಿನೆಟ್‌ನಲ್ಲಿ ಸಚಿವರಾಗಿ ಸೇವೆ ಸಲ್ಲಿಸುತ್ತಿರುವ ಚಂಪೈ ಅವರು ಇನ್ನೂ ಜೆಎಂಎಂ ಪಕ್ಷ ಮತ್ತು ಸರ್ಕಾರ ಎರಡಕ್ಕೂ ರಾಜೀನಾಮೆ ನೀಡಿಲ್ಲ.

    ರಾಜ್ಯದ ಮುಖ್ಯಮಂತ್ರಿಯಾಗಿದ್ದ ಹೇಮಂತ್ ಸೊರೇನ್ (Hemant Soren) ಭೂ ಹಗರಣ ಪ್ರಕರಣದಲ್ಲಿ ಜೈಲಿಗೆ ಹೋಗಿದ್ದಾಗ ಚಂಪೈ ಸೋರೆನ್ ಅವರನ್ನು ರಾಜ್ಯದ ಮುಖ್ಯಮಂತ್ರಿಯನ್ನಾಗಿ ನೇಮಿಸಲಾಗಿತ್ತು. ಸುಮಾರು ಐದು ತಿಂಗಳ ಕಾಲ ಜೈಲಿನಲ್ಲಿದ್ದ (Jail) ಹೇಮಂತ್ ಸೊರೇನ್ ಜೂನ್ 28ರಂದು ಬಿಡುಗಡೆಯಾಗಿದ್ದರು. ಇದಾದ ನಂತರ ಚಂಪೈ ಸೊರೆನ್ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿ ರಾಜ್ಯದ ಅಧಿಕಾರವನ್ನು ಮರಳಿ ವಹಿಸಿಕೊಂಡರು. ಅಧಿಕಾರದಿಂದ ಕೆಳಗಡೆ ಇಳಿಸಿದ ಬಳಿಕ ಚಂಪೈ ಸೊರೆನ್‌ ಅವರು ಅಸಮಾಧಾನಗೊಂಡಿದ್ದಾರೆ ಎನ್ನಲಾಗುತ್ತಿದೆ.

    ಚಂಪೈ ಸೊರೆನ್ ಅವರು ಫೆಬ್ರವರಿ 2 ರಿಂದ ಜುಲೈ 3 ರವರೆಗೆ ಜಾರ್ಖಂಡ್ ಮುಖ್ಯಮಂತ್ರಿಯಾಗಿದ್ದರು. ಜೆಎಂಎಂನ ಹಿರಿಯ ನಾಯಕರಾಗಿರುವ ಚಂಪೈ ಸೊರೆನ್ ಏಳು ಬಾರಿ ಶಾಸಕರಾಗಿದ್ದಾರೆ.

    2005 ರಿಂದ ಅವರು ನಿರಂತರವಾಗಿ ಸರಯ್ಕೆಲಾ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. 1991 ರಲ್ಲಿ ಅವರು ಸರಯ್ಕೆಲಾ ಕ್ಷೇತ್ರದಿಂದ ಮೊದಲ ಬಾರಿಗೆ ಶಾಸಕರಾದರು. ಹೇಮಂತ್ ಸೊರೆನ್ ಅವರು 2019 ರಲ್ಲಿ ಚಂಪೈ ಸೊರೆನ್ ಅವರನ್ನು ಕ್ಯಾಬಿನೆಟ್ ಸಚಿವರನ್ನಾಗಿ ಮಾಡಿದರು. ಅವರಿಗೆ ಸಾರಿಗೆ, ಪರಿಶಿಷ್ಟ ಪಂಗಡಗಳು ಮತ್ತು ಪರಿಶಿಷ್ಟ ಜಾತಿಗಳು ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಖಾತೆಯನ್ನು ನೀಡಲಾಗಿದೆ.

    ಚಂಪೈ ಸೊರೆನ್‌ನನ್ನು ಕೊಲ್ಹಾನ್‌ನ ಹುಲಿ ಎಂದು ಕರೆಯಲಾಗುತ್ತದೆ. 2019 ರ ವಿಧಾನಸಭಾ ಚುನಾವಣೆಯಲ್ಲಿ ಕೊಲ್ಹಾನ್ ಪ್ರದೇಶದ 14 ಸ್ಥಾನಗಳಲ್ಲಿ ಬಿಜೆಪಿ ಶೂನ್ಯ ಸ್ಥಾನಗಳನ್ನು ಗಳಿಸಿತ್ತು. 2024ರಲ್ಲಿ ಲೋಕಸಭಾ ಚುನಾವಣೆಯಲ್ಲೂ ಕೊಲ್ಹಾನ್ ಭಾಗದಲ್ಲಿ ಬಿಜೆಪಿಗೆ ಭಾರೀ ಹಿನ್ನಡೆಯಾಗಿತ್ತು. ಕೊಲ್ಹಾನ್ ಪ್ರದೇಶದ 14 ವಿಧಾನಸಭಾ ಕ್ಷೇತ್ರಗಳಲ್ಲಿ ಚಂಪೈ ಸೊರೆನ್‌ ಪ್ರಭಾವವಿದೆ. ಇದನ್ನೂ ಓದಿ: ಮದ್ಯ ಪ್ರಿಯರಿಗೆ ಗುಡ್ ನ್ಯೂಸ್ – ಇಂದಿನಿಂದ ಮದ್ಯದ ದರ ಇಳಿಕೆ

    ಈ ವರ್ಷದ ಕೊನೆಗೆ ಜಾರ್ಖಂಡ್‌ನಲ್ಲಿ ವಿಧಾನಸಭೆ ಚುನಾವಣೆ (Vidhan Sabha Election) ನಡೆಯಲಿದೆ. ಚುನಾವಣೆ ಘೋಷಣೆಗೂ ಮುನ್ನವೇ ರಾಜಕೀಯ ಪಕ್ಷಗಳು ರಾಜಕೀಯ ಜೋರಾಗಿದೆ. ರಾಜ್ಯದಲ್ಲಿ ಒಟ್ಟು 82 ವಿಧಾನಸಭಾ ಸ್ಥಾನಗಳಿದ್ದು, ಈ ಪೈಕಿ ಒಂದು ನಾಮನಿರ್ದೇಶನ ಸ್ಥಾನವಾಗಿದೆ.

    ಜೆಎಂಯು ಪ್ರಸ್ತುತ ವಿಧಾನಸಭೆಯಲ್ಲಿ 27 ಶಾಸಕರನ್ನು ಹೊಂದಿರುವ ಅತಿದೊಡ್ಡ ಪಕ್ಷವಾಗಿದ್ದು INDIA ಒಕ್ಕೂಟದ ಭಾಗವಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್, ಸಿಪಿಐ(ಎಂ) ಆರ್‌ಜೆಡಿ ಜತೆ ಮೈತ್ರಿ ಮಾಡಿಕೊಂಡು ಜೆಎಂಎಂ ಅಧಿಕಾರದಲ್ಲಿದೆ. ಕಾಂಗ್ರೆಸ್ 18, ಸಿಪಿಐ(ಎಂ) ಮತ್ತು ಆರ್‌ಜೆಡಿ ತಲಾ 1 ಶಾಸಕರನ್ನು ಹೊಂದಿದೆ.

    ಜಾರ್ಖಂಡ್‌ನಲ್ಲಿ ಬಿಜೆಪಿ ಪ್ರತಿಪಕ್ಷದಲ್ಲಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 24 ಸ್ಥಾನಗಳನ್ನು ಗೆದ್ದಿತ್ತು. ಇತರ ವಿರೋಧ ಪಕ್ಷಗಳಲ್ಲಿ ಆಲ್ ಜಾರ್ಖಂಡ್ ಸ್ಟೂಡೆಂಟ್ಸ್ ಯೂನಿಯನ್ 3, ಸಿಸಿಪಿ 1 ಮತ್ತು ಇಬ್ಬರು ಪಕ್ಷೇತರ ಶಾಸಕರಿದ್ದಾರೆ.

    ಈ ಬಾರಿ ನಡೆದ ಲೋಕಸಭಾ ಚುನಾವಣೆಯ ಒಟ್ಟು 14 ಸ್ಥಾನಗಳ ಪೈಕಿ ಬಿಜೆಪಿ 8, ಜೆಎಂಎಂ 3, ಕಾಂಗ್ರೆಸ್‌ 2, ಎಜೆಸ್‌ಯಪಿ 1 ಸ್ಥಾನವನ್ನು ಗೆದ್ದುಕೊಂಡಿದೆ.

     

  • Jhakhand | ಹೊಸ ರಾಜಕೀಯ ಪಕ್ಷ ಆರಂಭಿಸುವ ಸುಳಿವು ನೀಡಿದ ಚಂಪೈ ಸೊರೆನ್

    Jhakhand | ಹೊಸ ರಾಜಕೀಯ ಪಕ್ಷ ಆರಂಭಿಸುವ ಸುಳಿವು ನೀಡಿದ ಚಂಪೈ ಸೊರೆನ್

    ನವದೆಹಲಿ: ಬಿಜೆಪಿ ಸೇರಬಹುದು ಎನ್ನಲಾಗಿದ್ದ ಜಾರ್ಖಂಡ್‌ನ ಮಾಜಿ ಮುಖ್ಯಮಂತ್ರಿ ಚಂಪೈ ಸೊರೆನ್ (Champai Soren) ತಮ್ಮದೇ ರಾಜಕೀಯ ಪಕ್ಷವನ್ನು (New Political Party) ಅರಂಭಿಸುವ ಸುಳಿವು ನೀಡಿದ್ದು, ಒಂದು ವಾರದೊಳಗೆ ತಮ್ಮ ಮುಂದಿನ ನಡೆ ಬಗ್ಗೆ ಸ್ಪಷ್ಟ ಚಿತ್ರಣ ಹೊರಬೀಳಲಿದೆ ಎಂದು ಹೇಳಿದ್ದಾರೆ.

    ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜಕೀಯದಿಂದ ನಿವೃತ್ತಿ ಹೊಂದುವುದು, ಹೊಸ ಪಕ್ಷವನ್ನು ಆರಂಭಿಸುವುದು ಅಥವಾ ಇನ್ನೊಂದು ಪಕ್ಷವನ್ನು ಸೇರುವುದು ನನ್ನ ಮುಂದಿರುವ ಆಯ್ಕೆಗಳು, ಸದ್ಯಕ್ಕೆ ನಿವೃತ್ತಿಯಾಗುವುದಿಲ್ಲ ಹೀಗಾಗೀ ನನ್ನ ಮುಂದೆ ಇನ್ನೆರಡು ಆಯ್ಕೆಗಳಿದೆ. ನಾನೇಕೆ ನನ್ನ ಸ್ವಂತ ಪಕ್ಷವನ್ನು ರಚಿಸಬಾರದು? ನನ್ನ ಮುಂದಿನ ನಡೆ ಒಂದು ವಾರದಲ್ಲಿ ಸ್ಪಷ್ಟವಾಗುತ್ತದೆ ಎಂದು ಹೇಳಿದರು. ಇದನ್ನೂ ಓದಿ: ರೈಲಿನಲ್ಲಿ ಉಕ್ರೇನಿಗೆ ಮೋದಿ ಭೇಟಿ – ಐಷಾರಾಮಿ ರೈಲಿನ ವಿಶೇಷತೆ ಏನು?

    ಆಗಸ್ಟ್ 18 ರಂದು ಅವರು ಕೆಲವು ಶಾಸಕರೊಂದಿಗೆ ದೆಹಲಿಗೆ ಭೇಟಿ ನೀಡಿದ ಹಿನ್ನಲೆ ಅವರು ಬಿಜೆಪಿ ಸೇರ್ಪಡೆಯಾಗಬಹುದು ಎಂದು ಊಹಿಸಲಾಗಿತ್ತು. ಆಪಾದಿತ ಭೂ ಹಗರಣ ಪ್ರಕರಣದಲ್ಲಿ ಜನವರಿ 31 ರಂದು ಇಡಿ ಹೇಮಂತ್ ಸೊರೆನ್‌ ಅವರನ್ನು ಬಂಧಿಸಿದ ನಂತರ 67 ವರ್ಷದ ಚಂಪೈ ಸೊರೆನ್ ಅವರು ಜಾರ್ಖಂಡ್ ಮುಖ್ಯಮಂತ್ರಿಯಾದರು. ಇದನ್ನೂ ಓದಿ: ಊರ್ವಶಿ ರೌಟೇಲಾ ಬೆರಳಿಗೆ ಗಾಯ- ಕಾಮೆಂಟ್ ಮಾಡಿ ನಗ್ತಿರೋದ್ಯಾಕೆ ನೆಟ್ಟಿಗರು?

    ಹೇಮಂತ್ ಸೊರೆನ್ ಅವರಿಗೆ ಜಾರ್ಖಂಡ್ ಹೈಕೋರ್ಟ್ ಜಾಮೀನು ನೀಡಿದ ನಂತರ ಜುಲೈ 3 ರಂದು ಅವರು ಹುದ್ದೆಯಿಂದ ಕೆಳಗಿಳಿದರು. ರಾಜೀನಾಮೆ ಬಳಿಕ ಮಾತನಾಡಿದ್ದ ಅವರು ನನಗೆ ಮನಸ್ಸು ಒಡೆದು ಹೋಗಿತ್ತು. ಏನು ಮಾಡಬೇಕೆಂದು ಅರ್ಥವಾಗಲಿಲ್ಲ. ಎರಡು ದಿನಗಳ ಕಾಲ ನಾನು ಶಾಂತವಾಗಿ ಕುಳಿತು ಆತ್ಮಾವಲೋಕನ ಮಾಡಿಕೊಂಡೆ, ಇಡೀ ಘಟನೆಯಲ್ಲಿ ನನ್ನ ತಪ್ಪನ್ನು ಹುಡುಕುತ್ತಿದ್ದೆ. ನನಗೆ ಅಧಿಕಾರದ ದುರಾಸೆ ಸ್ವಲ್ಪವೂ ಇರಲಿಲ್ಲ, ನನ್ನ ಆತ್ಮಗೌರವಕ್ಕೆ ದಕ್ಕೆಯಾಗಿದೆ ಎಂದು ಹೇಳಿದ್ದರು. ಇದನ್ನೂ ಓದಿ: ಜಯ್‌ ಶಾ ಮುಂದಿನ ಐಸಿಸಿ ಅಧ್ಯಕ್ಷ? – ಆಸೀಸ್‌, ಇಂಗ್ಲೆಂಡ್‌ ಬೆಂಬಲ

  • ಶೀಘ್ರವೇ ಜಾರ್ಖಂಡ್‌ ಮಾಜಿ ಸಿಎಂ ಚಂಪೈ ಸೊರೆನ್‌ ಬಿಜೆಪಿ ಸೇರ್ಪಡೆ ಸಾಧ್ಯತೆ

    ಶೀಘ್ರವೇ ಜಾರ್ಖಂಡ್‌ ಮಾಜಿ ಸಿಎಂ ಚಂಪೈ ಸೊರೆನ್‌ ಬಿಜೆಪಿ ಸೇರ್ಪಡೆ ಸಾಧ್ಯತೆ

    ರಾಂಚಿ: ಜಾರ್ಖಂಡ್‌ ಮಾಜಿ ಸಿಎಂ, ಜಾರ್ಖಂಡ್ ಮುಕ್ತಿ ಮೋರ್ಚಾ ನಾಯಕ ಚಂಪೈ ಸೊರೆನ್‌ (Champai Soren) ಶೀಘ್ರವೇ ಬಿಜೆಪಿ (BJP) ಸೇರುವ ಸಾಧ್ಯತೆಯಿದೆ.

    ಇನ್ನೆರಡು ದಿನದಲ್ಲಿ ದೆಹಲಿಯಲ್ಲಿ ಬಿಜೆಪಿಯ ಕೆಲವು ದೊಡ್ಡ ನಾಯಕರನ್ನು ಭೇಟಿ ಮಾಡಿದ ನಂತರವೇ ಚಂಪೈ ಸೊರೆನ್ ಕಮಲ ಪಕ್ಷವನ್ನು ಸೇರುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.

    ರಾಜ್ಯದ ಮುಖ್ಯಮಂತ್ರಿಯಾಗಿದ್ದ ಹೇಮಂತ್ ಸೊರೇನ್ (Hemant Soren) ಭೂ ಹಗರಣ ಪ್ರಕರಣದಲ್ಲಿ ಜೈಲಿಗೆ ಹೋಗಿದ್ದಾಗ ಚಂಪೈ ಸೋರೆನ್ ಅವರನ್ನು ರಾಜ್ಯದ ಮುಖ್ಯಮಂತ್ರಿಯನ್ನಾಗಿ ನೇಮಿಸಲಾಗಿತ್ತು. ಸುಮಾರು ಐದು ತಿಂಗಳ ಕಾಲ ಜೈಲಿನಲ್ಲಿದ್ದ (Jail) ಹೇಮಂತ್ ಸೊರೇನ್ ಜೂನ್ 28ರಂದು ಬಿಡುಗಡೆಯಾಗಿದ್ದರು. ಇದಾದ ನಂತರ ಚಂಪೈ ಸೊರೆನ್ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿ ರಾಜ್ಯದ ಅಧಿಕಾರವನ್ನು ಮರಳಿ ವಹಿಸಿಕೊಂಡರು. ಅಧಿಕಾರದಿಂದ ಕೆಳಗಡೆ ಇಳಿಸಿದ ಬಳಿಕ ಚಂಪೈ ಸೊರೆನ್‌ ಅವರು ಅಸಮಾಧಾನಗೊಂಡಿದ್ದಾರೆ ಎನ್ನಲಾಗುತ್ತಿದೆ. ಇದನ್ನೂ ಓದಿ: ಕರ್ನಾಟಕ ಸೇರಿದಂತೆ ಯಾವುದೇ ರಾಜ್ಯದಲ್ಲಿ ಸದ್ಯಕ್ಕೆ ಉಪಚುನಾವಣೆ ಇಲ್ಲ

    ಚಂಪೈ ಸೊರೆನ್ ಅವರು ಫೆಬ್ರವರಿ 2 ರಿಂದ ಜುಲೈ 3 ರವರೆಗೆ ಜಾರ್ಖಂಡ್ ಮುಖ್ಯಮಂತ್ರಿಯಾಗಿದ್ದರು. ಜೆಎಂಎಂನ ಹಿರಿಯ ನಾಯಕರಾಗಿರುವ ಚಂಪೈ ಸೊರೆನ್ ಏಳು ಬಾರಿ ಶಾಸಕರಾಗಿದ್ದಾರೆ.

    2005 ರಿಂದ ಅವರು ನಿರಂತರವಾಗಿ ಸರಯ್ಕೆಲಾ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. 1991 ರಲ್ಲಿ ಅವರು ಸರಯ್ಕೆಲಾ ಕ್ಷೇತ್ರದಿಂದ ಮೊದಲ ಬಾರಿಗೆ ಶಾಸಕರಾದರು. ಹೇಮಂತ್ ಸೊರೆನ್ ಅವರು 2019 ರಲ್ಲಿ ಚಂಪೈ ಸೊರೆನ್ ಅವರನ್ನು ಕ್ಯಾಬಿನೆಟ್ ಸಚಿವರನ್ನಾಗಿ ಮಾಡಿದರು. ಅವರಿಗೆ ಸಾರಿಗೆ, ಪರಿಶಿಷ್ಟ ಪಂಗಡಗಳು ಮತ್ತು ಪರಿಶಿಷ್ಟ ಜಾತಿಗಳು ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಖಾತೆಯನ್ನು ನೀಡಲಾಗಿದೆ.

    ಈ ವರ್ಷದ ಕೊನೆಯಲ್ಲಿ ಜಾರ್ಖಂಡ್‌ನಲ್ಲಿ ವಿಧಾನಸಭೆ ಚುನಾವಣೆ (Vidhan Sabha Election) ನಡೆಯಲಿದೆ. ಚುನಾವಣೆ ಘೋಷಣೆಗೂ ಮುನ್ನವೇ ರಾಜಕೀಯ ಪಕ್ಷಗಳು ರಾಜಕೀಯ ಜೋರಾಗಿದೆ. ರಾಜ್ಯದಲ್ಲಿ ಒಟ್ಟು 82 ವಿಧಾನಸಭಾ ಸ್ಥಾನಗಳಿದ್ದು, ಈ ಪೈಕಿ ಒಂದು ನಾಮನಿರ್ದೇಶನ ಸ್ಥಾನವಾಗಿದೆ. ಇದನ್ನೂ ಓದಿ: ಆ.20 ರಿಂದ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಆರಂಭ

    ಜೆಎಂಯು ಪ್ರಸ್ತುತ ವಿಧಾನಸಭೆಯಲ್ಲಿ 27 ಶಾಸಕರನ್ನು ಹೊಂದಿರುವ ಅತಿದೊಡ್ಡ ಪಕ್ಷವಾಗಿದ್ದು INDIA ಒಕ್ಕೂಟದ ಭಾಗವಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್, ಸಿಪಿಐ(ಎಂ) ಆರ್‌ಜೆಡಿ ಜತೆ ಮೈತ್ರಿ ಮಾಡಿಕೊಂಡು ಜೆಎಂಎಂ ಅಧಿಕಾರದಲ್ಲಿದೆ. ಕಾಂಗ್ರೆಸ್ 18, ಸಿಪಿಐ(ಎಂ) ಮತ್ತು ಆರ್‌ಜೆಡಿ ತಲಾ 1 ಶಾಸಕರನ್ನು ಹೊಂದಿದೆ.

    ಜಾರ್ಖಂಡ್‌ನಲ್ಲಿ ಬಿಜೆಪಿ ಪ್ರತಿಪಕ್ಷದಲ್ಲಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 24 ಸ್ಥಾನಗಳನ್ನು ಗೆದ್ದಿತ್ತು. ಇತರ ವಿರೋಧ ಪಕ್ಷಗಳಲ್ಲಿ ಆಲ್ ಜಾರ್ಖಂಡ್ ಸ್ಟೂಡೆಂಟ್ಸ್ ಯೂನಿಯನ್ 3, ಸಿಸಿಪಿ 1 ಮತ್ತು ಇಬ್ಬರು ಪಕ್ಷೇತರ ಶಾಸಕರಿದ್ದಾರೆ.

    ಈ ಬಾರಿ ನಡೆದ ಲೋಕಸಭಾ ಚುನಾವಣೆಯ ಒಟ್ಟು 14 ಸ್ಥಾನಗಳ ಪೈಕಿ ಬಿಜೆಪಿ 8, ಜೆಎಂಎಂ 3, ಕಾಂಗ್ರೆಸ್‌ 2, ಎಜೆಸ್‌ಯಪಿ 1 ಸ್ಥಾನವನ್ನು ಗೆದ್ದುಕೊಂಡಿದೆ.

     

  • ಜಾರ್ಖಂಡ್‌ನಲ್ಲಿ 2 ಅಂತಸ್ತಿನ ಕಟ್ಟಡ ಕುಸಿತ – ಮೂವರು ಸಾವು, 3 ಮಂದಿಗೆ ಗಾಯ

    ಜಾರ್ಖಂಡ್‌ನಲ್ಲಿ 2 ಅಂತಸ್ತಿನ ಕಟ್ಟಡ ಕುಸಿತ – ಮೂವರು ಸಾವು, 3 ಮಂದಿಗೆ ಗಾಯ

    ರಾಂಚಿ: ಎರಡು ಅಂತಸ್ತಿನ ಕಟ್ಟಡ (Building Collapse) ಕುಸಿದ ಪರಿಣಾಮ ಮೂವರು ಸಾವನ್ನಪ್ಪಿದ್ದು, ಮೂರು ಮಂದಿ ಗಂಭೀರವಾಗಿ ಗಾಯಗೊಂಡ ಘಟನೆ ಜಾರ್ಖಂಡ್‌ನ (Jharkhand) ದಿಯೋಘರ್ (Deoghar) ಜಿಲ್ಲೆಯಲ್ಲಿ ನಡೆದಿದೆ.

    ಬೆಳಗ್ಗೆ 6 ಗಂಟೆಯ ವೇಳೆಗೆ ಘಟನೆ ನಡೆದಿದ್ದು, ಅವಶೇಷಗಳ ಅಡಿಯಲ್ಲಿ ಇನ್ನೂ ಹಲವರು ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಈ ಹಿನ್ನೆಲೆ ರಕ್ಷಣಾ ಕಾರ್ಯಾಚರಣೆ ಮುಂದುವರೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಕಾರ್ಯಕರ್ತರ ಜೊತೆ ಸಭೆ ನಡೆಸಿ ಅಭ್ಯರ್ಥಿ ಆಯ್ಕೆ ಬಗ್ಗೆ ರಹಸ್ಯ ಕಾಯ್ದುಕೊಂಡ ಹೆಚ್‌ಡಿಕೆ

    ಘಟನೆಯಲ್ಲಿ ಅವಶೇಷಗಳ ಅಡಿಯಲ್ಲಿ ಸಿಲುಕಿದ್ದ ಆರು ಮಂದಿಯನ್ನು ಹೊರತೆಗೆದು ಸದರ್ ಆಸ್ಪತ್ರೆಯಲ್ಲಿ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಿಸದೆ ಮೂವರು ಸಾವನ್ನಪ್ಪಿದ್ದಾರೆ. ಒಂದು ಮಗು ಸೇರಿದಂತೆ ಮೂವರಿಗೆ ಚಿಕಿತ್ಸೆ ನಡೆಯುತ್ತಿದೆ. ದಿಯೋಘರ್ ಸಿವಿಲ್ ಸರ್ಜನ್ ರಂಜನ್ ಸಿನ್ಹಾ ತಿಳಿಸಿದ್ದಾರೆ. ರಕ್ಷಣಾ ಕಾರ್ಯಾಚರಣೆಗೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯನ್ನು (ಎನ್‌ಡಿಆರ್‌ಎಫ್) ನಿಯೋಜಿಸಲಾಗಿದೆ. ಇದನ್ನೂ ಓದಿ: BMW ಡಿಕ್ಕಿ ಹೊಡೆದು ಮಹಿಳೆ ಸಾವು – ಸಿಎಂ ಏಕನಾಥ್‌ ಶಿಂಧೆ ಬಣದ ನಾಯಕನ ಪುತ್ರ ಆರೋಪಿ

    ಇನ್ನೂ ಕೆಲವರು ಅವಶೇಷಗಳ ಅಡಿಯಲ್ಲಿ ಸಿಲುಕಿರುವಂತೆ ತೋರುತ್ತಿದೆ. ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ ಎಂದು ದಿಯೋಘರ್ ಉಪವಿಭಾಗೀಯ ಪೊಲೀಸ್ ಅಧಿಕಾರಿ (ಎಸ್‌ಡಿಪಿಒ) ರಿತ್ವಿಕ್ ಶ್ರೀವಾಸ್ತವ ಮಾಹಿತಿ ನೀಡಿದ್ದಾರೆ. ಕಾರ್ಯಾಚರಣೆಯ ನೇತೃತ್ವ ವಹಿಸಿರುವ ಎನ್‌ಡಿಆರ್‌ಎಫ್ ಇನ್ಸ್ಪೆಕ್ಟರ್ ರಣಧೀರ್ ಕುಮಾರ್, ಅವಶೇಷಗಳ ಅಡಿಯಲ್ಲಿ ಸಿಲುಕಿರುವವರನ್ನು ಹೊರತರುವ ಪ್ರಯತ್ನ ನಡೆಯುತ್ತಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ನಾನು ಉಸ್ತುವಾರಿ ಸಚಿವನಿದ್ದಾಗಲೇ ಮುಡಾದಲ್ಲಿ ಅವ್ಯವಹಾರ ನಡೆದಿತ್ತು – ಎಸ್‌ಟಿಎಸ್‌ ಬಾಂಬ್‌

  • ಜೈಲಿನಿಂದ ಹೊರ ಬಂದ ಬಳಿಕ ಸಿಎಂ ಆಗಿ ಹೇಮಂತ್ ಸೊರೇನ್ ಪ್ರಮಾಣ ವಚನ

    ಜೈಲಿನಿಂದ ಹೊರ ಬಂದ ಬಳಿಕ ಸಿಎಂ ಆಗಿ ಹೇಮಂತ್ ಸೊರೇನ್ ಪ್ರಮಾಣ ವಚನ

    ರಾಂಚಿ: ಮೂರನೇ ಬಾರಿಗೆ ಜಾರ್ಖಂಡ್ ಮುಖ್ಯಮಂತ್ರಿಯಾಗಿ ಹೇಮಂತ್ ಸೊರೇನ್ (Hemanth Soren) ಅವರು ಇಂದು ಪ್ರಮಾಣ ವಚನ ಸ್ವೀಕಾರ ಮಾಡಿದರು. ಇವರಿಗೆ ರಾಜ್ಯಪಾಲರು ಪ್ರಮಾಣ ವಚನ ಬೋಧಿಸಿದರು.

    ಈ ಮೂಲಕ‌ ಹೇಮಂತ್ ಸೊರೇನ್ ಅವರು ಜಾರ್ಖಂಡ್‌ನ 13 ನೇ ಮುಖ್ಯಮಂತ್ರಿಯಾದರು. ಈ ಸಂದರ್ಭದಲ್ಲಿ ಹೇಮಂತ್ ಸೊರೇನ್ ಅವರ ತಂದೆ ಶಿಬು ಸೊರೇನ್, ತಾಯಿ ರೂಪಿ ಸೊರೇನ್, ಕಾಂಗ್ರೆಸ್, ಜೆಎಂಎಂ ಮತ್ತು ಆರ್‌ಜೆಡಿ ಪ್ರಮುಖ ನಾಯಕರು ಉಪಸ್ಥಿತರಿದ್ದರು. ಇದನ್ನೂ ಓದಿ: ರಾಜಸ್ಥಾನದ ಸಚಿವ ಸ್ಥಾನಕ್ಕೆ ಕಿರೋಡಿ ಲಾಲ್‌ ಮೀನಾ ರಾಜೀನಾಮೆ

    ಇದಕ್ಕೂ ಮುನ್ನ ಸೊರೇನ್ ಅವರು ಇಂದು ಮಧ್ಯಾಹ್ನ ಉನ್ನತ ನಾಯಕರೊಂದಿಗೆ ರಾಜಭವನಕ್ಕೆ ತಲುಪಿದರು. ಹೇಮಂತ್ ಸೊರೇನ್ ಅವರು ರಾಜ್ಯಪಾಲರ ಮುಂದೆ ಸರ್ಕಾರ ರಚಿಸಲು ಹಕ್ಕು ಮಂಡಿಸಿದ್ದರು. ಅಲ್ಲದೇ ತಮ್ಮ ಶಾಸಕರ ಬೆಂಬಲ ಪತ್ರವನ್ನು ರಾಜ್ಯಪಾಲರಿಗೆ ಸಲ್ಲಿಸಿದ್ದರು.

    ಅಕ್ರಮ ಹಣ ವರ್ಗಾವಣೆ, ಭೂ ಹಗರಣದ ಆರೋಪದ ಮೇಲೆ ಜೈಲು ಪಾಲಾದ ನಂತರ ಚಂಪೈ ಸೊರೇನ್ ಅವರನ್ನು ಮುಖ್ಯಮಂತ್ರಿ ಮಾಡಲಾಯಿತು. ಹೇಮಂತ್ ಸೊರೇನ್ ಅವರನ್ನು ಬಂಧಿಸಿದ ಎರಡು ದಿನಗಳ ನಂತರ ಚಂಪೈ ಪ್ರಮಾಣವಚನ ಸ್ವೀಕರಿಸಿದ್ದರು. ಇದೇ ಜೂನ್ 28ರಂದು ಹೇಮಂತ್‌ ಸೊರೇನ್ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ 5 ತಿಂಗಳ ಬಳಿಕ ಚಂಪೈ ಅವರು ಬುಧವಾರ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

  • ಜೈಲಿನಿಂದ ಹೊರಬಂದ ಹೇಮಂತ್‌ ಸೊರೇನ್‌ಗೆ ಸಿಎಂ ಕುರ್ಚಿ ಬಿಟ್ಟುಕೊಟ್ಟ ಚಂಪೈ

    ಜೈಲಿನಿಂದ ಹೊರಬಂದ ಹೇಮಂತ್‌ ಸೊರೇನ್‌ಗೆ ಸಿಎಂ ಕುರ್ಚಿ ಬಿಟ್ಟುಕೊಟ್ಟ ಚಂಪೈ

    – ಜಾರ್ಖಂಡ್‌ ಸಿಎಂ ಸ್ಥಾನಕ್ಕೆ ಚಂಪೈ ಸೊರೇನ್‌ ರಾಜೀನಾಮೆ

    ರಾಂಚಿ: ಜೈಲಿನಿಂದ ಹೊರಬಂದ ಹೇಮಂತ್‌ ಸೊರೇನ್‌ಗೆ ಜಾರ್ಖಂಡ್‌ ಸಿಎಂ ಚಂಪೈ ಸೊರೇನ್‌ ಮುಖ್ಯಮಂತ್ರಿ ಖುರ್ಚಿ ಬಿಟ್ಟುಕೊಟ್ಟಿದ್ದಾರೆ. ಚಂಪೈ ಸೊರೇನ್‌ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಹೇಮಂತ್‌ ಸೊರೇನ್‌ ಆಡಳಿತಕ್ಕೆ ದಾರಿ ಮಾಡಿಕೊಟ್ಟಿದ್ದಾರೆ.

    ಅಕ್ರಮ ಹಣ ವರ್ಗಾವಣೆ, ಭೂ ಹಗರಣ ಆರೋಪ ಹೊತ್ತಿದ್ದ ಹೇಮಂತ್‌ ಸೊರೇನ್‌ ಜೈಲು ಪಾಲಾಗಿದ್ದರು. ಇದಕ್ಕೂ ಮುನ್ನ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆ ಸಂದರ್ಭದಲ್ಲಿ ಜಾರ್ಖಂಡ್‌ ಸಿಎಂ ಆಗಿ ಚಂಪೈ ಸೊರೇನ್‌ ಅಧಿಕಾರ ವಹಿಸಿಕೊಂಡಿದ್ದರು. ಐದು ತಿಂಗಳ ಬಳಿಕ ಚಂಪೈ ಅವರು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇದನ್ನೂ ಓದಿ: ರಾಜ್ಯಸಭೆಯಲ್ಲಿ ಮಹಿಳೆಯರ ಪರ ದನಿಯೆತ್ತಿದ್ದ ಸುಧಾ ಮೂರ್ತಿಯನ್ನು ಹೊಗಳಿದ ಪ್ರಧಾನಿ

    ಜಾರ್ಖಂಡ್ ಮುಕ್ತಿ ಮೋರ್ಚಾದಲ್ಲಿ ಮೂರನೇ ಸ್ಥಾನದಲ್ಲಿರುವ ಚಂಪೈ ಸೊರೇನ್, ಭೂ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದಿಂದ ಅಂದಿನ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರನ್ನು ಬಂಧಿಸಿದ ಎರಡು ದಿನಗಳ ನಂತರ ಪ್ರಮಾಣವಚನ ಸ್ವೀಕರಿಸಿದ್ದರು. ಇದೇ ಜೂನ್ 28ರಂದು ಹೇಮಂತ್‌ ಸೊರೇನ್ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ.

  • ಜಾರ್ಖಂಡ್‌ ಮಾಜಿ ಸಿಎಂ ಹೇಮಂತ್‌ ಸೊರೇನ್‌ಗೆ ಜಾಮೀನು ಮಂಜೂರು

    ಜಾರ್ಖಂಡ್‌ ಮಾಜಿ ಸಿಎಂ ಹೇಮಂತ್‌ ಸೊರೇನ್‌ಗೆ ಜಾಮೀನು ಮಂಜೂರು

    ರಾಂಚಿ: ಜಾರ್ಖಂಡ್ (Jharkhand) ಮಾಜಿ ಮುಖ್ಯಮಂತ್ರಿ ಹೇಮಂತ್ ಸೊರೇನ್ (Hemant Soren) ಅವರಿಗೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ.

    ಅಕ್ರಮ ಹಣ ವರ್ಗಾವಣೆ ಆರೋಪದ ಮೇಲೆ ಜಾರ್ಖಂಡ್‌ ಮುಕ್ತಿ ಮೋರ್ಚಾ ನಾಯಕನನ್ನು ಜಾರಿ ನಿರ್ದೇಶನಾಲಯ (ಇಡಿ) ಜ.31 ರಂದು ಬಂಧಿಸಿತ್ತು. ನಕಲಿ ದಾಖಲೆ ಸೃಷ್ಟಿಸಿ ರಾಂಚಿಯಲ್ಲಿ ಕೋಟ್ಯಂತರ ಮೌಲ್ಯದ 8.86 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ (Land Scam Case) ಯೋಜನೆ ಹೊಂದಲಾಗಿತ್ತು ಎಂದು ಇಡಿ ಆರೋಪಿಸಿದೆ. ಇದನ್ನೂ ಓದಿ: ಮನೆ ಮೇಲೆ ಮಸಿ ಎರಚಿದ ಕಿಡಿಗೇಡಿಗಳು- ನಾನು ಯಾವುದಕ್ಕೂ ಹೆದರಲ್ಲ ಎಂದ ಓವೈಸಿ

    ಕಳೆದ ತಿಂಗಳು ಎರಡು ಬಾರಿ ಹಿನ್ನಡೆಯ ನಂತರ ಇಂದು ಜಾಮೀನು ಆದೇಶ ಬಂದಿದೆ. ಮೊದಲಿಗೆ, ರಾಂಚಿ ವಿಶೇಷ ನ್ಯಾಯಾಲಯವು ಸೊರೇನ್ ಜಾಮೀನನ್ನು ನಿರಾಕರಿಸಿತ್ತು.

    ಪ್ರಕರಣ ಸಂಬಂಧ ಇಡಿ ವಿಚಾರಣೆ ಎದುರಿಸಿದ್ದ ಹೇಮಂತ್ ಸೊರೇನ್ ಜನವರಿ 31 ರಂದು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದರು. ನಂತರ ಅವರನ್ನು ಬಂಧಿಸಲಾಯಿತು. ಇದನ್ನೂ ಓದಿ: T20 World Cup: ಇಂಗ್ಲೆಂಡ್‌ ವಿರುದ್ಧ ಭರ್ಜರಿ ಜಯ – ಫೈನಲ್‌ಗೆ ಭಾರತ ಗ್ರ್ಯಾಂಡ್‌ ಎಂಟ್ರಿ