Tag: ಜಾರ್ಖಂಡ

  • ಬಿಜೆಪಿ ಯುವ ಮುಖಂಡನನ್ನು ಚಾಕುವಿನಿಂದ ಇರಿದು ಕೊಂದ್ರು!

    ಬಿಜೆಪಿ ಯುವ ಮುಖಂಡನನ್ನು ಚಾಕುವಿನಿಂದ ಇರಿದು ಕೊಂದ್ರು!

    ರಾಂಚಿ: ಚಾಕುವಿನಿಂದ ಇರಿದು ಬಿಜೆಪಿ ಯುವ ಮುಖಂಡರೊಬ್ಬರನ್ನು ಕೊಲೆ ಮಾಡಿದ ಘಟನೆ ಜಾರ್ಖಂಡ್‌ನಲ್ಲಿ ನಡೆದಿದೆ.

    ಬಿಜೆಪಿ ಯುವ ಮೋರ್ಚಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸೂರಜ್ ಕುಮಾರ್ ಸಿಂಗ್ (26) ಮೃತ ವ್ಯಕ್ತಿ. ಸೂರಜ್ ಕುಮಾರ್ ಸಿಂಗ್ ಅವರು ಮನೆಗೆ ಹಿಂದಿರುಗುತ್ತಿದ್ದ ವೇಳೆ ಹರಹರಗುತ್ತು ಎಂಬಲ್ಲಿ ಈ ಘಟನೆ ನಡೆದಿದೆ.

    ಸೋನು ಸಿಂಗ್ ಹಾಗೂ ಆತನ ಸಹಚರರು ಸೂರಜ್ ಕುಮಾರ್ ಅವರನ್ನು ಚಾಕುವಿನಿಂದ ಇರಿದಿದ್ದಾನೆ. ಘಟನೆಯಲ್ಲಿ ಸೂರಜ್ ಕುಮಾರ್ ಅವರು ತೀವ್ರ ಗಾಯಗೊಂಡಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಜಾರ್ಖಂಡ್‌ನ ಪೂರ್ವ ಸಿಂಗ್‌ಭೂಮ್ ಜಿಲ್ಲೆಯ ಟಾಟಾ ಮುಖ್ಯ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಬೆಳಗಾವಿ ಅಧಿವೇಶನದಲ್ಲಿ ಉತ್ತರಕರ್ನಾಟಕ ಸಮಸ್ಯೆಗಳ ಬಗ್ಗೆ ಚರ್ಚೆ-ಬೊಮ್ಮಾಯಿ

    ಸೂರಜ್ ಮತ್ತು ಸೋನುಗೆ ಜಮೀನಿನ ವಿವಾದ ನಡೆಯುತ್ತಿತ್ತು. ಈ ಹಿನ್ನೆಲೆಯಲ್ಲಿ ಸೂರಜ್ ಕುಮಾರ್ ಸಿಂಗ್ ಮೇಲೆ ದಾಳಿ ನಡೆದಿದೆ ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಎಂ ತಮಿಳು ವನನ್ ಹೇಳಿದ್ದಾರೆ. ಘಟನೆ ಕುರಿತು ಬಾಗ್ಬೆರಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪ್ರಕರಣ ಸಂಬಂಧ ಸೋನು ಮತ್ತು ಬಾಲಾಪರಾಧಿ ಸೇರಿದಂತೆ ಇಬ್ಬರನ್ನು ಬಂಧಿಸಲಾಗಿದೆ. ಇದನ್ನೂ ಓದಿ:  ಕುಡಿಯುವ ನೀರಿನ ಟ್ಯಾಂಕಿಯಲ್ಲಿ ಕೊಳೆತ ಶವ ಪತ್ತೆ

    ಸಹೋದರಿಯ ವಿವಾಹಕ್ಕೆ ಮೂರು ದಿನಗಳ ಮೊದಲು ಸಿಂಗ್ ಅವರ ಅವರ ಸಾವಿನ ಸುದ್ದಿಯಿಂದ ಕುಟುಂಬ ಕಂಗೆಟ್ಟಿದೆ. ಮೃತರ ಕುಟುಂಬದ ಸದಸ್ಯರಿಗೆ ಸೂಕ್ತ ಪರಿಹಾರ ಹಾಗೂ ಉದ್ಯೋಗ ನೀಡಬೇಕು ಎಂದು ಕುಟಂಬಸ್ಥರು ಒತ್ತಾಯಿಸಿದರು.

  • ಜಮೀನಿನಲ್ಲಿ ಶೌಚ ಮಾಡಿದಕ್ಕೆ ಕೊಲೆಗೈದ್ರು!

    ಜಮೀನಿನಲ್ಲಿ ಶೌಚ ಮಾಡಿದಕ್ಕೆ ಕೊಲೆಗೈದ್ರು!

    ರಾಂಚಿ: ಜಮೀನಿನಲ್ಲಿ ಶೌಚ ಮಾಡಿದ ಅಂತಾ 45 ವರ್ಷದ ವ್ಯಕ್ತಿಯ ಮೇಲೆ ಹಲ್ಲೆ ಮಾಡಿ, ಕೊಲೆಗೈದಿರುವ ಅಮಾನವೀಯ ಘಟನೆ ಜಾರ್ಖಂಡ್‍ನಲ್ಲಿ ನಡೆದಿದೆ.

    ಪಲಮು ಜಿಲ್ಲೆಯ ಸುಕ್ರಾ ಬಜಾರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಗುರುವಾರ ಘಟನೆ ನಡೆದಿದೆ. ಮೃತ ವ್ಯಕ್ತಿಯ ಪುತ್ರ ಶುಕ್ರವಾರ ಸುಕ್ರಾ ಬಜಾರ್ ಠಾಣೆಯಲ್ಲಿ ದೂರ ದಾಖಲಿಸಿದ್ದಾರೆ. ಪ್ರಕರಣ ಕೈಗೆತ್ತಿಕೊಂಡ ಪೊಲೀಸರು ಮಹೇಂದ್ರ ಮತ್ತು ಚೋಟುಕುಮಾರ್ ಎಂಬ ಆರೋಪಿಗಳನ್ನು ಬಂಧಿಸಿದ್ದಾರೆ.

    ಏನಿದು ಪ್ರಕರಣ?:
    ಮೃತ ವ್ಯಕ್ತಿ ಹಾಗೂ ಕೊಲೆಗೈದ ಆರೋಪಿಗಳು ಸಂಬಂಧಿಕರಾಗಿದ್ದು, ಇಬ್ಬರ ನಡುವೆ ಜಮೀನು ವಾಜ್ಯದ ವಿಚಾರವಾಗಿ ಈ ಹಿಂದೆಯೂ ಜಗಳವಾಗಿತ್ತು. ಶೌಚಕ್ಕೆಂದು ವ್ಯಕ್ತಿ ಗುರುವಾರ ಜಮೀನಿಗೆ ಹೋಗಿದ್ದ. ಇದನ್ನು ನೋಡಿ, ಅಲ್ಲಿಗೆ ಬಂದ ಆರೋಪಿಗಳು ಆತನ ಮೇಲೆ ಹಲ್ಲೆ ಮಾಡಿ ಕೊಲೆ ಮಾಡಿದ್ದಾರೆ. ಈ ಕೃತ್ಯಕ್ಕೆ ಸಹಾಯ ಮಾಡಿದ್ದ ಮಹಿಳೆಯೊಬ್ಬಳು ಘಟನೆಯಲ್ಲಿ ಗಾಯಗೊಂಡಿದ್ದು, ಆಕೆಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ವರದಿಯಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಒಂದೇ ಕುಟುಂಬದ 6 ಜನರ ಸಾಮೂಹಿಕ ಆತ್ಮಹತ್ಯೆ

    ಒಂದೇ ಕುಟುಂಬದ 6 ಜನರ ಸಾಮೂಹಿಕ ಆತ್ಮಹತ್ಯೆ

    ರಾಂಚಿ: ಒಂದೇ ಕುಟುಂಬದ 5 ಜನರು ನೇಣು ಹಾಕಿಕೊಂಡು ಮತ್ತೊಬ್ಬರು ಮನೆ ಮೇಲ್ಛಾವಣಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಜಾರ್ಖಂಡ್‍ನ ಹಜಾರಿಬಾಗ್‍ನಲ್ಲಿ ನಡೆದಿದೆ.

    ಮಾರವಾಡಿ ಕುಟುಂಬದ ಮಾಹಾವೀರ್ ಮಹೇಶ್ವರಿ (70), ಪತ್ನಿ ಕಿರಣ್ ಮಹೇಶ್ವರಿ (60), ಪುತ್ರ ನರೇಶ್ ಅಗರರ್ವಾಲ್ (40), ಪ್ರೀತಿ ಅಗರ್ವಾಲ್ (38), ಇವರ ಮಕ್ಕಳಾದ ಅಮನ್ (8) ಹಾಗೂ ಅಂಜಲಿ (6) ಮೃತರು.

    ಮನೆಯ ಮೇಲ್ಛಾವಣಿಯಿಂದ ಬಿದ್ದು ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿದ್ದು ಗೊತ್ತಾಗುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದರು. ಮನೆಯನ್ನು ಪರಿಶೀಲನೆ ಮಾಡುವ ಐವರು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ ವಿಚಾರ ಬೆಳಕಿಗೆ ಬಂದಿದೆ.

    ಮೃತರ ಮನೆಯಲ್ಲಿ ಆತ್ಮಹತ್ಯೆ ಪತ್ರ ಲಭಿಸಿದೆ. ಮೃತರ ಕುಟುಂಬವು ಒಣ ಹಣ್ಣಿನ (ಡ್ರೈ ಫ್ರುಟ್ಸ್) ವ್ಯಾಪಾರ ಮಾಡುತ್ತಿದ್ದರು. ವ್ಯಾಪಾರದಲ್ಲಿ ನಷ್ಟವಾಗಿದ್ದರಿಂದ ಸಾಲ ಮಾಡಿಕೊಂಡಿದ್ದರು. ಅಷ್ಟೇ ಅಲ್ಲದೆ ಕೌಟುಂಬಿಕ ಕಲಹವೂ ಇತ್ತು ಎಂದು ವರದಿಯಾಗಿದೆ.