Tag: ಜಾರಕಿಹೊಳಿ ಬ್ರದರ್ಸ್

  • ಡಿಕೆಶಿ ಬರುತ್ತಿದ್ದಂತೆ ಬಳ್ಳಾರಿ ತೊರೆದ ರಮೇಶ್ ಜಾರಕಿಹೊಳಿ

    ಡಿಕೆಶಿ ಬರುತ್ತಿದ್ದಂತೆ ಬಳ್ಳಾರಿ ತೊರೆದ ರಮೇಶ್ ಜಾರಕಿಹೊಳಿ

    ಬಳ್ಳಾರಿ: ಜಲಸಂಪನ್ಮೂಲ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಿಕೆ ಶಿವಕುಮಾರ್ ಪ್ರಚಾರಕ್ಕೆ ಬರುತ್ತಿದ್ದಂತೆ ಪೌರಾಡಳಿತ ಸಚಿವ ರಮೇಶ್ ಜಾರಕಿಹೊಳಿ ಜಿಲ್ಲೆಯಿಂದ ಹೊರಗೆ ತೆರಳುವ ಮೂಲಕ ತಮ್ಮ ಗುದ್ದಾಟವನ್ನು ಬಳ್ಳಾರಿಯಲ್ಲೂ ಮುಂದುವರಿಸಿದ್ದಾರೆ.

    ಹೌದು, ಡಿಕೆಶಿ ಬಳ್ಳಾರಿಗೆ ಬರುತ್ತಿದ್ದಂತೆ, ಜಿಲ್ಲೆಯಿಂದ ರಮೇಶ್ ಜಾರಕಿಹೋಳಿ ಹೊರ ನಡೆದಿದ್ದಾರೆ. ರಮೇಶ್ ರವರ ಅನುಪಸ್ಥಿತಿಯಲ್ಲೂ ಅವರ ಉಸ್ತುವಾರಿ ಕ್ಷೇತ್ರದಲ್ಲಿ ಡಿಕೆಶಿ ಪ್ರಚಾರ ನಡೆಸುತ್ತಿದ್ದಾರೆ.

    ಬಳ್ಳಾರಿಯ ಉಪ ಚುನಾವಣೆಯಲ್ಲಿ ಸಚಿವ ರಮೇಶ್ ಜಾರಕಿಹೋಳಿಗೆ ಕೂಡ್ಲಿಗಿ ವಿಧಾನಸಭಾ ಕ್ಷೇತ್ರದ ಉಸ್ತುವಾರಿ ನೀಡಲಾಗಿತ್ತು. ಅಲ್ಲದೇ ಅವರು ಎರಡು ದಿನದ ಹಿಂದೆಯೇ ಬಂದು ಕಾಂಗ್ರೆಸ್ ನಾಯಕರ ಸಭೆ ನಡೆಸಿದ್ದರು. ಇಂದು ಸಂಜೆ ಕೂಡ ಕೂಡ್ಲಿಗಿಯ ಸಂತೆ ಮೈದಾನದಲ್ಲಿ ಬಹಿರಂಗ ಸಭೆಯನ್ನು ಹಮ್ಮಿಕೊಂಡಿದ್ದರು. ಯಾವಾಗ ಶಿವಕುಮಾರ್ ಕ್ಷೇತ್ರದಲ್ಲಿ ಪ್ರಚಾರ ಆರಂಭಿಸಿದ್ದರೋ, ರಮೇಶ್ ಬಳ್ಳಾರಿ ತೊರೆದಿದ್ದಾರೆ. ಇಂದು ಬೆಳಗ್ಗೆ ಕೂಡ್ಲಿಗಿ ಮುಖಂಡರಿಗೆ ಕರೆ ಮಾಡಿ, ಇನ್ನೂ ಎರಡು ದಿನ ಬಿಟ್ಟು ಪ್ರಚಾರಕ್ಕೆ ಬರುತ್ತೇನೆ ಎಂದು ಹೇಳಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

    ಇಂದು ಕಾಂಗ್ರೆಸ್ ಅಭ್ಯರ್ಥಿ ಉಗ್ರಪ್ಪ ಕೂಡ್ಲಿಗಿ ಕ್ಷೇತ್ರದಲ್ಲಿ ಏಕಾಂಗಿಯಾಗಿ ಪ್ರಚಾರ ಆರಂಭಿಸಿದ್ದರು. ಅಲ್ಲದೇ ರಮೇಶ್ ಜಾರಕಿಹೊಳಿ ಕರೆದಿದ್ದ ಸಭೆಗೆ ಹಿನ್ನಡೆಯಾಗದಂತೆ ನೋಡಿಕೊಳ್ಳಲು ಡಿಕೆಶಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ರನ್ನು ಆಹ್ವಾನಿಸಿ ಪರೋಕ್ಷವಾಗಿ ರಮೇಶ್ ಗೆ ಟಕ್ಕರ್ ನೀಡಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ.

    ಈ ಕುರಿತು ಮಾಧ್ಯಮಗಳು ಡಿಕೆಶಿಯವರನ್ನು ಪ್ರಶ್ನಿಸಿದಾಗ, ಚುನಾವಣಾ ಜವಾಬ್ದಾರಿಯನ್ನ ಕೆಪಿಸಿಸಿ ಅಧ್ಯಕ್ಷರು ಹಂಚಿಕೆ ಮಾಡಿದ್ದಾರೆ. ಈ ಬಗ್ಗೆ ನೀವು ಅವರನ್ನೇ ಪ್ರಶ್ನೆ ಮಾಡಿ ಎಂದು ಹೇಳಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸಮ್ಮಿಶ್ರ ಸರ್ಕಾರಕ್ಕಿಂದು ನಿರ್ಣಾಯಕ ದಿನ – ದೆಹಲಿಯಲ್ಲಿ ಕೈ ನಾಯಕರ ರಿಯಲ್ ಸರ್ಕಸ್

    ಸಮ್ಮಿಶ್ರ ಸರ್ಕಾರಕ್ಕಿಂದು ನಿರ್ಣಾಯಕ ದಿನ – ದೆಹಲಿಯಲ್ಲಿ ಕೈ ನಾಯಕರ ರಿಯಲ್ ಸರ್ಕಸ್

    ನವದೆಹಲಿ: ರಾಜ್ಯ ಸಮ್ಮಿಶ್ರ ಸರ್ಕಾರಕ್ಕೆ ಇಂದು ನಿರ್ಣಾಯಕ ದಿನವಾಗಿದೆ. ಇಂದು ದೆಹಲಿಯಲ್ಲಿ ಕಾಂಗ್ರೆಸ್ ನಾಯಕರ ರಿಯಲ್ ಸರ್ಕಸ್ ನಡೆಯಲಿದ್ದು, ಜಾರಕಿಹೊಳಿ ಬ್ರದರ್ಸ್ ನ್ನು ಹೈಕಮಾಂಡ್ ಸಮಾಧಾನ ಮಾಡುತ್ತಾ ಎಂಬುದನ್ನು ಕಾದುನೋಡಬೇಕಿದೆ.

    ಸರ್ಕಾರ ಉಳಿಯಲು ಜಾರಕಿಹೊಳಿ ಸಹೋದರರ ಬೇಡಿಕೆ ಈಡೇರಿಸುತ್ತಾರೆಯೇ ಎಂಬ ಕುತೂಹಲವೊಂದು ಮೂಡಿದೆ. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ಜಾರಕಿಹೊಳಿ ಬ್ರದರ್ಸ್ ಬೇಡಿಕೆಗೆ ಗ್ರೀನ್ ಸಿಗ್ನಲ್ ನೀಡುತ್ತಾರೆಯೆ ಎಂಬುದು ಇಂದು ತಿಳಿದುಬರಲಿದೆ.

    ತಮ್ಮ ಸಮುದಾಯಕ್ಕೆ ಇನ್ನೊಂದು ಸಚಿವ ಸ್ಥಾನ ಬೇಕು ಹಾಗೂ ಬೆಂಬಲಿಗರಿಗೆ ನಿಗಮ ಮಂಡಳಿ ಅವಕಾಶ ಬೇಕು ಅಂತ ಜಾರಕಿಹೊಳಿ ಬ್ರದರ್ಸ್ ಬೇಡಿಕೆ ಇಟ್ಟಿದ್ದಾರೆ. ಜಾರಕಿಹೊಳಿ ಬ್ರದರ್ಸ್ ಅವರ ಈ ಮನವಿಗೆ ರಾಹುಲ್ ಗಾಂಧಿ ಅಸ್ತು ಅನ್ನಬಹುದು ಎನ್ನಲಾಗುತ್ತಿದೆ.

    ಇತ್ತ ಡಿಕೆಶಿ ವಿಚಾರದಲ್ಲಿ `ರಾಗಾ’ ಖಚಿತ ಭರವಸೆ ಕೊಡ್ತಾರಾ ಅನ್ನೋದು ಡೌಟು. ಯಾಕಂದ್ರೆ ಟ್ರಬಲ್ ಶೂಟರ್ ಡಿಕೆಶಿ ಅಂದರೆ ರಾಹುಲ್ ಗಾಂಧಿಗೆ ಅಚ್ಚುಮೆಚ್ಚು ಅಂತೆ. ಹೀಗಾಗಿ ಜಾರಕಿಹೊಳಿ ಬ್ರದರ್ಸ್ ಗಾಗಿ ಡಿಕೆಶಿಯನ್ನ ದೂರ ಇಡಲು ರಾಹುಲ್ ಗಾಂಧಿ ಒಪ್ಪಲ್ಲ. ಒಂದು ವೇಳೆ ಒಪ್ಪದಿದ್ರೆ ಜಾರಕಿಹೊಳಿ ಸಹೋದರರ ಮುಂದಿನ ನಡೆ ಏನು ಎಂಬುದು ತೀವ್ರ ಕುತೂಹಲ ಹುಟ್ಟಿಸುತ್ತದೆ. ಒಟ್ಟಿನಲ್ಲಿ ಬಂಡಾಯವೆದ್ದ ಬ್ರದರ್ಸ್ ಮೇಲೆ ಇಂದಿನ ದಿನ ನಿರ್ಣಯಕವಾಗಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಜಾರಕಿಹೊಳಿ ಬ್ರದರ್ಸ್ ಗೆ ಮಾಜಿ ಸಿಎಂ ಕಿವಿಮಾತು

    ಜಾರಕಿಹೊಳಿ ಬ್ರದರ್ಸ್ ಗೆ ಮಾಜಿ ಸಿಎಂ ಕಿವಿಮಾತು

    – ಬಂಡಾಯ ಬ್ರದರ್ಸ್ ಗೆ ಬೇಕಂತೆ ಸಿದ್ದರಾಮಯ್ಯ ಬೆಂಬಲ

    ಬೆಂಗಳೂರು: ನಮಗೆ ಹೈಕಮಾಂಡ್ ಮಟ್ಟದಲ್ಲಿ ನ್ಯಾಯ ಸಿಗಬೇಕು. ಇಲ್ಲದಿದ್ರೆ ಬೇರೆ ಯೋಚನೆ ಮಾಡ್ತೀವಿ ಅಂತ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮುಂದೆ ಜಾರಕಿ ಹೊಳಿ ಬ್ರದರ್ಸ್ ದಾಳ ಉರುಳಿಸಿದ್ದಾರೆ.

    ಈ ವೇಳೆ ಸಿದ್ದರಾಮಯ್ಯ ಅವರು ಯಾವುದೇ ಕಾರಣಕ್ಕೂ ದುಡುಕದಂತೆ ಎಚ್ಚರಿಕೆ ನೀಡಿದ್ದಾರೆ. ರಾಜಕಾರಣ ಮೊದಲಿನಂತಿಲ್ಲ. ದುಡುಕಿ ತೀರ್ಮಾನ ಮಾಡಿದರೆ ಸರ್ವೈವಲ್ ಆಗೋದು ಕಷ್ಟ. ಹೆಚ್ಚು ಕಡಿಮೆ ಆದರೆ ರಾಜಕೀಯ ಭವಿಷ್ಯವೇ ಅಂತ್ಯವಾಗುತ್ತೆ ಅಂತ ಎಚ್ಚರಿಕೆ ನೀಡಿದ್ದಾರೆ. ಸಿದ್ದರಾಮಯ್ಯ ಅವರ ಎಚ್ಚರಿಕೆಗೆ ರಮೇಶ್ ಜಾರಕಿಹೊಳಿ ಮೌನವಾಗಿದ್ದಾರೆ ಅಂತ ಪಕ್ಷದ ಮೂಲಗಳಿಂದ ಪಬ್ಲಿಕ್ ಟಿವಿಗೆ ಮಾಹಿತಿ ಲಭಿಸಿದೆ. ಇದನ್ನೂ ಓದಿ: ನಿಮ್ಮಿಂದ ಸಾಧ್ಯವಾಗದೇ ಇದ್ರೆ ನಮ್ಮ ಪಾಡಿಗೆ ನಮ್ಮನ್ನು ಬಿಟ್ಟುಬಿಡಿ- ಸಿದ್ದು, ಜಾರಕಿಹೊಳಿ ಸಭೆಯ ಇನ್‍ಸೈಡ್ ಸ್ಟೋರಿ

    ಡಿಕೆಶಿ ಮೇಲಿನ ದೂರಿನ ಜೊತೆಗೆ ತಮ್ಮ ಬೇಡಿಕೆ ಈಡೇರಿಕೆಗೂ ನಿಮ್ಮ ಬೆಂಬಲ ಬೇಕು. ಹೈಕಮಾಂಡ್ ಬಳಿ ಮಾತನಾಡುವಾಗ ನೀವು ಜೊತೆಗಿರಿ ಅಂತ ಸಿದ್ದರಾಮಯ್ಯ ಅವರನ್ನು ಜಾರಕಿಹೊಳಿ ಬ್ರದರ್ಸ್ ಬೆಂಬಲಕ್ಕೆ ಆಹ್ವಾನಿಸಿದ್ದಾರೆ. ಈ ವೇಳೆ ಮಾಜಿ ಸಿಎಂ ಅವರು ಗೊಂದಲದಲ್ಲೇ ಓಕೆ ಅಂದಿದ್ದಾರೆ ಎನ್ನಲಾಗಿದೆ. ಒಟ್ಟಿನಲ್ಲಿ ಜಾರಕಿಹೊಳಿ ಬ್ರದರ್ಸ್ ಗೆ ಹೈಕಮಾಂಡ್ ಮಟ್ಟದಲ್ಲಾದ್ರೂ ಪರಿಹಾರ ಸಿಗುತ್ತಾ ಎಂಬುದನ್ನು ಕಾದು ನೋಡಬೇಕಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸಿದ್ದರಾಮಯ್ಯರ ಸಂಧಾನಕ್ಕೆ ಬಾಗ್ತಾರಾ ಜಾರಕಿಹೊಳಿ ಬ್ರದರ್ಸ್?

    ಸಿದ್ದರಾಮಯ್ಯರ ಸಂಧಾನಕ್ಕೆ ಬಾಗ್ತಾರಾ ಜಾರಕಿಹೊಳಿ ಬ್ರದರ್ಸ್?

    ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸಚಿವ ರಮೇಶ್ ಜಾರಕಿಹೊಳಿ ಭೇಟಿ ಮಾಡುವ ಸಾಧ್ಯತೆಗಳಿವೆ. ಭಾನುವಾರವಷ್ಟೇ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದ ಸಿದ್ದರಾಮಯ್ಯ ಅವರ ಇಂದಿನ ಸಂಧಾನ ಸಕ್ಸಸ್ ಆಗುತ್ತಾ ಅನ್ನೋದನ್ನು ಕಾದು ನೋಡಬೇಕಾಗಿದೆ.

    ಕಾಂಗ್ರೆಸ್ ಹೈಕಮಾಂಡ್ ಕೊಟ್ಟಿರುವ ಟಾಸ್ಕ್ ಅನ್ನು ಸಿದ್ದರಾಮಯ್ಯ ಸಮರ್ಥವಾಗಿ ನಿಭಾಯಿಸ್ತಾರಾ ಅನ್ನುವ ಪ್ರಶ್ನೆಯೊಂದು ಮೂಡಿದೆ. ಹೀಗಾಗಿ ಇಂದಿನ ಮೆಗಾ ಪೊಲಿಟಿಕಲ್ ಟರ್ನ್ ಸಿದ್ದರಾಮಯ್ಯ ಮೇಲೆ ನಿಂತಿದೆ. ಕಾಂಗ್ರೆಸ್ ಹೈಕಮಾಂಡ್ ಶಾಸಕರನ್ನು ಸಮಾಧಾನಪಡಿಸುವ ಹೊಣೆ ಸಿದ್ದರಾಮಯ್ಯಗೆ ಕೊಟ್ಟಿದೆ. ಆದ್ರೆ ಎಲ್ಲ ಅಸಮಾಧಾನಿತ ಶಾಸಕರು ಸಿದ್ದರಾಮಯ್ಯ ಮಾತು ಕೇಳ್ತಾರಾ? ಅಥವಾ ಸಿದ್ದು ಮಾತು ಕೇಳದೇ ಕಮಲ ಮನೆಯ ಬಾಗಿಲು ತಟ್ಟುತ್ತಾರಾ ಅನ್ನುವ ಹಲವು ಪ್ರಶ್ನೆಗಳಿಗೆ ಇಂದು ಉತ್ತರ ಸಿಗಲಿದೆ. ಇದನ್ನೂ ಓದಿ: ಕೈ ನಾಯಕರ ಜೊತೆ ವೇಣುಗೋಪಾಲ್ ಸಭೆಯಲ್ಲಿ ಏನಾಯ್ತು: ಇಲ್ಲಿದೆ ಇನ್‍ಸೈಡ್ ಸ್ಟೋರಿ

    ಸಿದ್ದರಾಮಯ್ಯ ಸಂಧಾನ ವಿಫಲವಾದ್ರೆ ರಮೇಶ್ ಜಾರಕಿಹೊಳಿ ಅವರು ರಾಜೀನಾಮೆ ನೀಡುವ ಸಾಧ್ಯತೆಗಳು ಹೆಚ್ಚಾಗಿರುವ ಕುರಿತು ಚರ್ಚೆಗಳು ನಡೆಯುತ್ತಿರುವುದಾಗಿ ಪಕ್ಷದ ಮೂಲಗಳಿಂದ ತಿಳಿದುಬಂದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸ್ವಾಭಿಮಾನಕ್ಕೆ ಧಕ್ಕೆಯಾದ್ರೆ ಸಹಿಸಲ್ಲ: ಲಕ್ಷ್ಮಿ ಹೆಬ್ಬಾಳ್ಕರ್

    ಸ್ವಾಭಿಮಾನಕ್ಕೆ ಧಕ್ಕೆಯಾದ್ರೆ ಸಹಿಸಲ್ಲ: ಲಕ್ಷ್ಮಿ ಹೆಬ್ಬಾಳ್ಕರ್

    -ಪರೋಕ್ಷವಾಗಿ ಜಾರಕಿಹೊಳಿ ಸಹೋದರಿಗೆ ಎಚ್ಚರಿಕೆ ನೀಡಿದ ಶಾಸಕಿ

    ಬಾಗಲಕೋಟೆ: ಅನ್ಯಾಯ ಮಾಡುವುದು ಎಷ್ಟು ಕೆಟ್ಟದ್ದೋ, ಅನ್ಯಾಯ ಸಹಿಸುಕೊಳ್ಳುವುದು ಅಷ್ಟೇ ಕೆಟ್ಟದ್ದು. ಹೀಗಾಗಿ ನಮ್ಮ ಸ್ವಾಭಿಮಾನಕ್ಕೆ ಧಕ್ಕೆಯಾದರೆ ಖಂಡಿತವಾಗಿಯೂ ಸಹಿಸಿಕೊಳ್ಳುವುದಿಲ್ಲವೆಂದು ಪರೋಕ್ಷವಾಗಿ ಜಾರಕಿಹೊಳಿ ಸಹೋದರರಿಗೆ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಎಚ್ಚರಿಕೆ ನೀಡಿದ್ದಾರೆ.

    ಹುನಗುಂದ ತಾಲೂಕಿನ ಕೂಡಲಸಂಗಮದಲ್ಲಿ ನಡೆದ ಬಸವ ಪಂಚಮಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬೆಳಗಾವಿ ವಿಚಾರವನ್ನು ಒಂದು ಕೆಟ್ಟ ಘಟನೆ ಎಂದು ಮರೆತು ಬಿಡಿ. ದೇವರು ನಮಗೆ ಮರೆವು ಎಂಬ ಒಳ್ಳೆಯ ಗುಣವನ್ನು ಕೊಟ್ಟಿದ್ದಾನೆ. ಆದರೆ ಪುನಃ ನಮ್ಮನ್ನು ಕೆಣಕಿದರೆ, ಇಲ್ಲವೇ ನಮ್ಮ ಸ್ವಾಭಿಮಾನಕ್ಕೆ ಧಕ್ಕೆ ಬರುವಂತೆ ಮಾಡಿದರೆ ಖಂಡಿತವಾಗಿಯೂ ಸಹಿಸುವುದಿಲ್ಲ. ಅನ್ಯಾಯ ಮಾಡುವುದು ಎಷ್ಟು ಕೆಟ್ಟದ್ದೋ, ಅನ್ಯಾಯ ಸಹಿಸುವುದು ಕೂಡ ಅಷ್ಟೆ ಕೆಟ್ಟದ್ದು. ಕಲಿಯುಗದಲ್ಲಿ ಚುನಾವಣೆಗಳೆ ಯುದ್ಧಗಳಾಗಿವೆ ಎಂದು ಜಾರಕಿಹೊಳಿ ಬ್ರದರ್ಸ್ ಹಾಗೂ ತಮ್ಮ ನಡುವಿನ ಸಮರದ ಬಗ್ಗೆ ಪರೋಕ್ಷವಾಗಿ ಟಾಂಗ್ ನೀಡಿದರು.

    ಪಂಚಮಸಾಲಿ ಸಮಾಜದ ವತಿಯಿಂದ ನಡೆದ 9ನೇ ಬಸವ ಪಂಚಮಿ ಕಾರ್ಯಕ್ರಮದಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ಜೊತೆಗೆ ಪಂಚಮಸಾಲಿ ಪೀಠದ ಜಗದ್ಗುರು ಬಸವ ಮೃತ್ಯುಂಜಯ ಸ್ವಾಮೀಜಿ, ಬಾಗಲಕೋಟೆ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ವೀಣಾ ಕಾಶಪ್ಪನವರ್ ಮತ್ತು ಸಮಾಜದ ಮುಖಂಡರು ಭಾಗಿಯಾಗಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಬೆಳಗಾವಿ ಬ್ಯಾಂಕ್ ಬ್ಯಾಟಲ್- ಬಿಜೆಪಿ ನಾಯಕರಿಗೆ ಬಿಎಸ್‍ವೈ ಖಡಕ್ ಸೂಚನೆ

    ಬೆಳಗಾವಿ ಬ್ಯಾಂಕ್ ಬ್ಯಾಟಲ್- ಬಿಜೆಪಿ ನಾಯಕರಿಗೆ ಬಿಎಸ್‍ವೈ ಖಡಕ್ ಸೂಚನೆ

    ಬೆಂಗಳೂರು: ಬೆಳಗಾವಿ ಬ್ಯಾಂಕ್ ಬ್ಯಾಟಲ್ ನಲ್ಲಿ ಬಿಜೆಪಿ ಸೈಲೆಂಟ್ ಆಗಿದ್ದು, ನಾಯಕರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಖಡಕ್ ಸೂಚನೆ ನೀಡಿದ್ದಾರೆ.

    ನಮ್ಮ ಪಕ್ಷದ ಯಾರೂ ಜಾರಕಿಹೊಳಿ ಬ್ರದರ್ಸ್, ಲಕ್ಷ್ಮೀ ಹೆಬ್ಬಾಳ್ಕರ್ ಪರ ವಿರೋಧ ನಿಲ್ಲಬಾರದು. ಅದು ಅವರ ಪಕ್ಷದ ಒಳ ಬೇಗುದಿ. ಎಲ್ಲಿಗೆ ಹೋಗಿ ತಲುಪುತ್ತೆ ನೋಡೋಣ. ಅವರ ಮೇಲಾಟ ಮುಗಿದ ಮೇಲೆ ನಮ್ಮ ಆಟ ಏನು ಅನ್ನೋದನ್ನ ನೋಡೋಣ ಅಂತ ಸೂಚಿಸಿದ್ದಾರೆ ಎಂಬುದಾಗಿ ಪಕ್ಷದ ಮೂಲಗಳಿಂದ ಪಬ್ಲಿಕ್ ಟಿವಿಗೆ ಮಾಹಿತಿ ಲಭಿಸಿದೆ.

    ಸದ್ಯಕ್ಕೆ ಪಿಎಲ್ ಡಿ ಬ್ಯಾಂಕ್ ವಿಚಾರದಲ್ಲಿ ಅಂತರ ಕಾಯ್ದುಕೊಳ್ಳಿ ಎಂದು ಬಿಎಸ್ ವೈ ಖಡಕ್ ಸೂಚನೆ ನೀಡಿದ್ದಾರೆ.

    ಇತ್ತ ಶಿವಮೊಗ್ಗದಲ್ಲಿ ಬಿಜೆಪಿ ನಾಯಕ ಕೆಎಸ್ ಈಶ್ವರಪ್ಪ ಮಾತನಾಡಿ, ಕಾಂಗ್ರೆಸ್ ನವರಿಗೆ ಹೇಳೋರು, ಕೇಳೋರು ಯಾರೂ ಇಲ್ಲ ಎಂಬುದಕ್ಕೆ ಬೆಳಗಾವಿನ ಪಿಎಲ್‍ಡಿ ಬ್ಯಾಂಕ್ ಚುನಾವಣೆಯೇ ಸಾಕ್ಷಿ. ಒಂದು ರಾಷ್ಟ್ರೀಯ ಪಕ್ಷ ಕಾಂಗ್ರೆಸ್ ಗೆ ಇಂತಹ ಹೀನಾಯ ಸ್ಥಿತಿ ಬರಬಾರದು. ಆದ್ರೆ ಅವರ ಬಡಿದಾಟ ಅವರಿಗೆ ಮಾತ್ರ ಸಂಬಂಧಪಟ್ಟಿದ್ದಾಗಿದೆ. ಹೀಗಾಗಿ ನಾವು ಇದ್ರಲ್ಲಿ ತಲೆತೂರಿಸುವುದಿಲ್ಲ ಅಂತ ಹೇಳಿದ್ದಾರೆ.

    ಒಬ್ಬ ಮಂತ್ರಿ, ಇನ್ನೊಬ್ಬ ಮಹಿಳೆ ಹಾಗೂ ಚುನಾಯಿತ ಪ್ರತಿನಿಧಿ. ಜಾರಕಿಹೊಳಿ ಈ ಶಾಸಕಿಯನ್ನು ಕಾಲಕಸಕ್ಕಿಂತ ಸಮ. ಇದು ಮಹಿಳಾ ಕುಲಕ್ಕೆ ಚುನಾಯಿತ ಪ್ರತಿನಿಧಿಗೆ ಮಾಡಿದ ಅಪಮಾನ. ಹಾದಿ ರಂಪ, ಬೀದಿ ರಂಪ ಮಾಡಿಕೊಂಡು ಕಾಂಗ್ರೆಸ್ ದಯನೀಯ ಸ್ಥಿತಿಯಲ್ಲಿ ಇದೆ ಅಂತ ಅವರು ತಿಳಿಸಿದ್ರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮಾಧ್ಯಮಗಳ ಮೂಲಕ ಬೆಳಗಾವಿ ಕಿತ್ತಾಟಕ್ಕೆ ಹೇಳಿಕೆ ನೀಡುವುದು ಸರಿಯಲ್ಲ: ದಿನೇಶ್ ಗುಂಡೂರಾವ್

    ಮಾಧ್ಯಮಗಳ ಮೂಲಕ ಬೆಳಗಾವಿ ಕಿತ್ತಾಟಕ್ಕೆ ಹೇಳಿಕೆ ನೀಡುವುದು ಸರಿಯಲ್ಲ: ದಿನೇಶ್ ಗುಂಡೂರಾವ್

    ನವದೆಹಲಿ: ಜಾರಕಿಹೊಳಿ ಸಹೋದರರು ಹಾಗೂ ಲಕ್ಷ್ಮೀ ಹೆಬ್ಬಾಳ್ಕರ್ ನಡುವಿನ ಕಿತ್ತಾಟವನ್ನು ಗಂಭೀರವಾಗಿ ಪರಿಗಣಿಸಿದ್ದು, ಈ ಬಗ್ಗೆ ಮಾಧ್ಯಮಗಳ ಮೂಲಕ ಹೇಳಿಕೆ ನೀಡುತ್ತಿರುವುದು ಸರಿಯಲ್ಲವೆಂದು ಕೆಪಿಸಿಸಿ ರಾಜ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

    ಬೆಳಗಾವಿ ಕೈ ನಾಯಕರ ಕಿತ್ತಾಟದ ವಿಚಾರ ಕುರಿತು ದೆಹಲಿಯಲ್ಲಿ ಪ್ರತಿಕ್ರಿಯಿಸಿದ ಅವರು, ಈಗಾಗಲೇ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಖುದ್ದು ರಾಜ್ಯ ಉಸ್ತುವಾರಿ ವೇಣುಗೋಪಾಲ್ ರವರ ಬಳಿಯು ಚರ್ಚೆ ನಡೆಸಿದ್ದೇನೆ. ಬೆಂಗಳೂರಿಗೆ ತೆರಳಿದ ಬಳಿಕ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಶಾಸಕರೇ ಆಗಲಿ, ಸಚಿವರೇ ಆಗಲಿ ಯಾರೂ ಸಹ ಪಕ್ಷದ ಶಿಸ್ತನ್ನು ಮೀರಬಾರದು, ಹಾಗೆಯೇ ಪಕ್ಷದ ನಾಯಕರ ವಿರುದ್ಧ ಯಾವ ಹೇಳಿಕೆಗಳನ್ನು ನೀಡಬಾರದು. ಪಕ್ಷದ ಚೌಕಟ್ಟನ್ನು ಮೀರಿ ವರ್ತಿಸುವುದು ಸರಿಯಲ್ಲ. ಮಾಧ್ಯಮಗಳ ಮೂಲಕ ಹೇಳಿಕೆ ನೀಡುತ್ತಿರುವುದು ಸರಿಯಲ್ಲವೆಂದು ಪರೋಕ್ಷವಾಗಿ ಜಾರಕಿಹೊಳಿ ಬ್ರದರ್ಸ್ ಹಾಗೂ ಲಕ್ಷ್ಮೀ ಹೆಬ್ಬಾಳ್ಕರ್ ಗೆ  ಎಚ್ಚರಿಕೆ ರವಾನಿಸಿದ್ದಾರೆ. ಇದನ್ನೂ ಓದಿ: ಯಾವುದೇ ಕಾರಣಕ್ಕೂ ಕ್ಷಮಿಸಲ್ಲ-ರಮೇಶ್ ಜಾರಕಿಹೊಳಿ ವಿರುದ್ಧ ಡಿಕೆಶಿ ಕೆಂಡಾಮಂಡಲ!

    ಶೀಘ್ರವೇ ಬೆಳಗಾವಿ ಕೈ ನಾಯಕರ ಗೊಂದಲವನ್ನು ಇತ್ಯರ್ಥ ಮಾಡುತ್ತೇವೆ. ಇದರಿಂದಾಗಿ ಪಿಎಲ್‍ಡಿ ಬ್ಯಾಂಕ್ ಚುನಾವಣಾ ಮೇಲೆ ಯಾವುದೇ ಪರಿಣಾಮ ಬೀರಲ್ಲ. ನ್ಯಾಯಾಲಯದ ನಿರ್ದೇಶನದ ಮೇರೆಗೆ ಚುನಾವಣೆ ನಡೆಯುತ್ತಿದೆ. ಪಿಎಲ್‍ಡಿ ಬ್ಯಾಂಕ್ ಚುನಾವಣೆ ಹಾಗೂ ಸರ್ಕಾರಕ್ಕೂ ಯಾವುದೇ ಸಂಬಂಧ ಇಲ್ಲ. ಅದು ಕೇವಲ ಬೆಳಗಾವಿಗೆ ಮಾತ್ರ ಸೀಮಿತ. ಆದರೂ ನಾಯಕರುಗಳು ಸಾರ್ವಜನಿಕವಾಗಿ ಹೇಳಿಕೆ ನೀಡಿರುವುದು ಸರಿಯಲ್ಲ. ಎಲ್ಲರ ಜೊತೆ ಮಾತನಾಡಿ ಗೊಂದಲ ಬಗೆಹರಿಸಲಾಗುತ್ತದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಲಕ್ಷ್ಮೀ ಹೆಬ್ಬಾಳ್ಕರ್ ನ ಹದ್ದು ಬಸ್ತುನಲ್ಲಿ ಇಡದಿದ್ದರೇ, ಉಗ್ರ ಕ್ರಮ ಕೈಗೊಳ್ತೀವಿ: ರಮೇಶ್ ಜಾರಕಿಹೊಳಿ

    ಕಾಂಗ್ರೆಸ್ಸಿನ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆಯವರನ್ನು ದೆಹಲಿ ನಿವಾಸದಲ್ಲಿ ದಿನೇಶ್ ಗುಂಡೂರಾವ್ ಭೇಟಿ ಮಾಡಿದ್ದಾರೆ. ಭೇಟಿ ವೇಳೆ ಜಾರಕಿಹೊಳಿ ಬ್ರದರ್ಸ್ ಹಾಗೂ ಲಕ್ಷ್ಮೀ ಹೆಬ್ಬಾಳ್ಕರ್ ನಡುವಿನ ಜಟಾಪಟಿ ವಿಚಾರದ ಬಗ್ಗೆ ಸುದೀರ್ಘವಾಗಿ ಮಾತುಕತೆ ನಡೆಸಿದ್ದಾರೆ. ಖರ್ಗೆಯವರು ಶೀಘ್ರವೇ ಸಮಸ್ಯೆಯನ್ನು ಬಗೆಹರಿಸಿ ಹಾಗೂ ಅವರ ಬಹಿರಂಗ ಹೇಳಿಕೆಗಳಿಗೆ ಕಡಿವಾಣ ಹಾಕಿ ಎಂದು ಗುಂಡೂರಾವ್ ಅವರಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಲಕ್ಷ್ಮೀ ಹೆಬ್ಬಾಳ್ಕರ್ ನ ಹದ್ದು ಬಸ್ತುನಲ್ಲಿ ಇಡದಿದ್ದರೇ, ಉಗ್ರ ಕ್ರಮ ಕೈಗೊಳ್ತೀವಿ: ರಮೇಶ್ ಜಾರಕಿಹೊಳಿ

    ಲಕ್ಷ್ಮೀ ಹೆಬ್ಬಾಳ್ಕರ್ ನ ಹದ್ದು ಬಸ್ತುನಲ್ಲಿ ಇಡದಿದ್ದರೇ, ಉಗ್ರ ಕ್ರಮ ಕೈಗೊಳ್ತೀವಿ: ರಮೇಶ್ ಜಾರಕಿಹೊಳಿ

    ಬೆಳಗಾವಿ: ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರನ್ನು ಹದ್ದು ಬಸ್ತಿನಲ್ಲಿ ಇಡದಿದ್ದರೇ, ನಾನು ಹಾಗೂ ಸತೀಶ್ ಜಾರಕಿಹೊಳಿ ಸೇರಿಕೊಂಡು ಉಗ್ರ ಕ್ರಮ ಕೈಗೊಳ್ಳುತ್ತೇವೆ ಎಂದು ಪೌರಾಡಳಿತ ಹಾಗೂ ಬಂದರು ಮತ್ತು ಒಳನಾಡು ಸಾರಿಗೆ ಸಚಿವ ರಮೇಶ್ ಜಾರಕಿಹೊಳಿ ಖಾರವಾಗಿ ಹೇಳಿದ್ದಾರೆ.

    ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, 2004 ರಿಂದ ಲಕ್ಷ್ಮೀ ಹೆಬ್ಬಾಳ್ಕರ್ ರಾಜಕೀಯಕ್ಕೆ ಬಂದಿದ್ದಾರೆ. ಮೊದಲು ಅವರೇನಾಗಿದ್ದರು, ಅವರ ಇತಿಹಾಸ ಏನು ಎಂಬುದನ್ನು ಮೊದಲು ಅರಿತುಕೊಳ್ಳಲಿ. ಹೆಬ್ಬಾಳ್ಕರ್ ರವರನ್ನು ಕಾಂಗ್ರೆಸ್ ಜಿಲ್ಲಾಧ್ಯಕ್ಷರನ್ನಾಗಿ ಮಾಡಿದ್ದು ಸತೀಶ್ ಜಾರಕಿಹೊಳಿ. ನಾವು ಸಹಾಯ ಮಾಡಿದ್ದನ್ನು ಯಾರಿಗೂ ಹೇಳಬಾರದು ಎಂದು ಅಂದುಕೊಂಡಿದ್ದೆವು. ಆದರೆ ಈಗ ಅನಿವಾರ್ಯವಾಗಿ ಹೇಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಹೆಬ್ಬಾಳ್ಕರ್ ತಂದೆಯು ಅನಾರೋಗ್ಯಕ್ಕೆ ತುತ್ತಾದಾಗ ನಾನೇ ಧನ ಸಹಾಯ ಮಾಡಿದ್ದೆ, ಅವರ ಮಗ ಹಾಗೂ ಸಹೋದರನ ವಿಷಯದಲ್ಲೂ ಸಹಾಯ ಮಾಡಿದ್ದೆ. ಆದರೆ ಇಂದು ಅವರು ಕೀಳು ಮಟ್ಟಕ್ಕೆ ಇಳಿದು ಪ್ರಚಾರ ಮಾಡುತ್ತಿದ್ದಾರೆ. ಜಾರಕಿಹೊಳಿ ಕುಟುಂಬದ ಬಗ್ಗೆ ಅವಹೇಳನ ಮಾಡುವುದು ಸರಿಯಲ್ಲ ಪರೋಕ್ಷವಾಗಿ ಎಚ್ಚರಿಕೆ ನೀಡಿದರು.

    ಇನ್ನು ಮುಂದೆ ಹೆಬ್ಬಾಳ್ಕರ್ ಬಗ್ಗೆ ನಾವು ಮಾತನಾಡಲ್ಲ. ಹೆಬ್ಬಾಳ್ಕರ್ ನಮಗೆ ಸಾಲ ಕೊಟ್ಟಿದ್ದಾರೆ ಎಂಬುದು ಕೇವಲ ಊಹಾಪೋಹ. ಅವರಿಗೆ ದೆಹಲಿ ತೋರಿಸಿದ್ದು ನಾನು. ಡಿಕೆಶಿ ನಾವು ಇಬ್ಬರು ಗೆಳೆಯರು, 2004 ರಲ್ಲಿ ನಾವು ಡಿಕೆಶಿ ಪರ ಬ್ಯಾಟಿಂಗ್ ಮಾಡಿದ್ದೆವು. ಅವರೂ ಸಹ ನನಗೆ ಸಚಿವರಾಗಲು ಸಹಾಯ ಮಾಡಿದ್ದರು. ಕೊಲ್ಹಾಪುರದ ಮಹಾಲಕ್ಷ್ಮೀ ದೇವರ ಆಣೆ ಮಾಡಲೂ ಸಹ ನಾನು ಸಿದ್ದ. ಇನ್ನುಮುಂದೆ ಲಕ್ಷ್ಮೀ ಹೆಬ್ಬಾಳ್ಕರನ್ನು ಹದ್ದುಬಸ್ತಿನಲ್ಲಿ ಇಡದಿದ್ದರೇ, ನಾನು ಹಾಗೂ ಸತೀಶ್ ಜಾರಕಿಹೊಳಿ ಉಗ್ರ ನಿರ್ಧಾರ ಕೈಗೊಳ್ಳುತ್ತೇವೆ. ನಾವು ಬಹುಮತ ಮಾಡೋದು ದೊಡ್ಡದಲ್ಲ. ಆದರೆ ಏನಾದರೂ ಮಾಡಿದರೆ ಜಾರಕಿಹೊಳಿ ಕುಟುಂಬಕ್ಕೆ ಕೆಟ್ಟ ಹೆಸರು ಬರುತ್ತದೆ ಎಂದು ಹೇಳಿದರು.

    ಚುನಾವಣಾ ವಿಚಾರದಲ್ಲಿ ಹಣಕಾಸಿನ ವ್ಯವಹಾರ ನಡೆದಿದೆ. ಸತೀಶ್ ಜಾರಕಿಹೊಳಿ ಅಪಮಾನ ಆದರೆ, ನಾನು ಅವರ ಜೊತೆಗೆ ಇರುತ್ತೇನೆ. ಅವರ ನಿರ್ಣಯಕ್ಕೆ ನಾನೂ ಬದ್ಧ. ಅಲ್ಲದೇ ಬೆಳಗಾವಿ ತಾಲೂಕಿನ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಅವ್ಯವಹಾರ ಆರೋಪ ಕುರಿತು ಈಗಾಗಲೇ ಸಭೆ ಕರೆದು ಮಾತನಾಡಿದ್ದೇನೆ ಎಂದು ತಿಳಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv