Tag: ಜಾಮ್

  • ಮನೆಯಲ್ಲಿ ಸ್ಟ್ರಾಬೆರಿ ಜಾಮ್ ಮಾಡುವುದು ಹೇಗೆ?

    ಮನೆಯಲ್ಲಿ ಸ್ಟ್ರಾಬೆರಿ ಜಾಮ್ ಮಾಡುವುದು ಹೇಗೆ?

    ನಿಮಗೆ ಸ್ಟ್ರಾಬೆರಿ ಅಂದರೆ ಇಷ್ಟವೇ? ನೀವು ಅಂಗಡಿಯಿಂದ ಜಾಮ್ ತಂದು ಬಳಸುತ್ತೀರಾದರೆ ಒಮ್ಮೆ ನೀವೇ ಮನೆಯಲ್ಲಿ ಜಾಮ್ ಮಾಡುವುದನ್ನು ಏಕೆ ಟ್ರೈ ಮಾಡಬಾರದು? ಸ್ಟ್ರಾಬೆರಿ ಹಾಗೂ ಕೇವಲ ಇನ್ನೆರಡು ಸಾಮಗ್ರಿಗಳನ್ನು ಬಳಸಿ ಸಿಂಪಲ್ ಆಗಿ ನೀವೇ ಜಾಮ್ ತಯಾರಿಸಬಹುದು. ಇದರ ರುಚಿ ಯಾವುದೇ ಬ್ರಾಂಡ್‌ನ ಜಾಮ್‌ಗೂ ಕಮ್ಮಿ ಎನಿಸುವುದಿಲ್ಲ. ಜಾಮ್ ಮಾಡೋದು ಇಷ್ಟೊಂದು ಸರಳ ಎಂದು ನೀವು ಆಶ್ಚರ್ಯ ಪಡುತ್ತೀರಿ. ನೀವೂ ಒಮ್ಮೆ ಮನೆಯಲ್ಲಿ ಸ್ಟ್ರಾಬೆರಿ ಜಾಮ್ (Strawberry Jam) ಮಾಡಿ ನೋಡಿ.

    ಬೇಕಾಗುವ ಪದಾರ್ಥಗಳು:
    ಸ್ಟ್ರಾಬೆರಿ ಹಣ್ಣುಗಳು – 30
    ಸಕ್ಕರೆ – 1 ಕಪ್
    ಸಿಟ್ರಿಕ್ ಆಸಿಡ್ – ಕಾಲು ಟೀಸ್ಪೂನ್ (ಸಿಟ್ರಿಕ್ ಆಸಿಡ್ ಬದಲು ಅರ್ಧ ನಿಂಬೆ ಹಣ್ಣನ್ನೂ ಬಳಸಬಹುದು) ಇದನ್ನೂ ಓದಿ: ಚಿಕನ್‌ನಂತೆಯೇ ರುಚಿ – ಸೋಯಾಬೀನ್ ನಗ್ಗೆಟ್ಸ್ ಮಾಡಿ

     

    ಮಾಡುವ ವಿಧಾನ:
    * ಮೊದಲಿಗೆ ನೀವು ಒಂದು ಸ್ಟೇನ್‌ಲೆಸ್ ಸ್ಟೀಲ್ ತಟ್ಟೆ ಅಥವಾ ಒಂದು ಚಮಚವನ್ನು ಫ್ರೀಜರ್‌ನಲ್ಲಿಡಿ. (ಇದು ಬಳಿಕ ಜಾಮ್‌ನ ಸ್ಥಿರತೆ ಪರೀಕ್ಷಿಸಲು ಉಪಯೋಗಕ್ಕೆ ಬರುತ್ತದೆ)
    * ಸ್ಟ್ರಾಬೆರಿ ಹಣ್ಣುಗಳನ್ನು ತೊಳೆದು, ತೇವಾಂಶವನ್ನು ತೆಗೆಯಲು ಒಣಗಿಸಿ.
    * ಸ್ಟ್ರಾಬೆರಿಗಳನ್ನು ತೆಳುವಾಗಿ ಕತ್ತರಿಸಿಕೊಳ್ಳಿ.
    * ಒಂದು ಪ್ಯಾನ್ ಅನ್ನು ಬಿಸಿ ಮಾಡಿ, ಅದರಲ್ಲಿ ಸ್ಟ್ರಾಬೆರಿ ಹಾಗೂ ಸಕ್ಕರೆ ಹಾಕಿ ಮಿಶ್ರಣ ಮಾಡಿ.
    * ಉರಿಯನ್ನು ಮಧ್ಯಮದಲ್ಲಿಡಿ. ಸಕ್ಕರೆ ನಿಧಾನವಾಗಿ ಕರಗಲು ಪ್ರಾರಂಭವಾಗುತ್ತದೆ.
    * ಸಕ್ಕರೆ ಕರಗಿದ ಬಳಿಕ ಸಿಟ್ರಿಕ್ ಆಸಿಡ್ ಅಥವಾ ನಿಂಬೆ ಹಣ್ಣಿನ ರಸವನ್ನು ಸೇರಿಸಿ.
    * 3-4 ನಿಮಿಷಗಳ ಕಾಲ ಸ್ಟ್ರಾಬೆರಿಯನ್ನು ಬೇಯಿಸಿ. ಸ್ಟ್ರಾಬೆರಿ ನಿಧಾನವಾಗಿ ರಸ ಬಿಡಲು ಪ್ರಾರಂಭಿಸುತ್ತದೆ.
    * ಈಗ ನೀವು ಸ್ಟ್ರಾಬೆರಿಯನ್ನು ಮೃದುವಾಗಿಸಲು ಮ್ಯಾಶ್ ಮಾಡಿ. (ಪಾವ್‌ಭಾಜಿ ಮಾಡುವ ಮ್ಯಾಶರ್ ಬಳಸಬಹುದು)

    * ಸ್ಟ್ರಾಬೆರಿ ಚೆನ್ನಾಗಿ ಮ್ಯಾಶ್ ಆದ ಬಳಿಕ 7-8 ನಿಮಿಷಗಳ ಕಾಲ ಕುದಿಸುವುದನ್ನು ಮುಂದುವರಿಸಿ. ಜಾಮ್ ನಿಧಾನವಾಗಿ ದಪ್ಪವಾಗುವುದನ್ನು ನೀವು ಕಾಣಬಹುದು.
    * ಜಾಮ್‌ನ ಸ್ಥಿರತೆಯನ್ನು ನೋಡಿಕೊಂಡು ಉರಿಯನ್ನು ಕಡಿಮೆ ಮಾಡಿಕೊಳ್ಳಿ. ನೀವು ಅದನ್ನು ಹೆಚ್ಚು ಬೇಯಿಸದಂತೆಯೂ ಎಚ್ಚರವಹಿಸಿ.
    * ಈಗ ಸ್ಥಿರತೆ ಪರೀಕ್ಷಿಸಲು ಮೊದಲೇ ಫ್ರಿಜ್‌ನಲ್ಲಿಟ್ಟಿದ್ದ ಚಮಚವನ್ನು ತನ್ನಿ. ಅದನ್ನು ಜಾಮ್‌ಗೆ ಅದ್ದಿ, ಹೊರ ತೆಗೆಯಿರಿ. ಮಿಶ್ರಣ ಕೆಳಗೆ ಬಿದ್ದಿಲ್ಲವೆಂದಾದರೆ ಜಾಮ್ ತಯಾರಾಗಿದೆ ಎಂದರ್ಥ.
    * ನೀವು ತಣ್ಣಗಿನ ತಟ್ಟೆಯ ಮೂಲಕ ಸ್ಥಿರತೆ ಪರೀಕ್ಷಿಸುತ್ತೀರಿ ಎಂದಾದರೆ, ಫ್ರಿಡ್ಜ್‌ನಿಂದ ತಟ್ಟೆಯನ್ನು ತೆಗೆದು, ಅದರ ಮೇಲೆ ಸ್ವಲ್ಪ ಜಾಮ್ ಹಾಕಿ ಬಳಿಕ ತಟ್ಟೆಯನ್ನು ಬಗ್ಗಿಸಿ ನೋಡಿ. ಜಾಮ್ ತೊಟ್ಟಿಕ್ಕದಂತೆ ದಪ್ಪವಾಗಿದ್ದರೆ, ಅದು ತಯಾರಾಗಿದೆ ಎಂದರ್ಥ.
    * ಈಗ ಉರಿಯನ್ನು ಆಫ್ ಮಾಡಿ, ಜಾಮ್ ಅನ್ನು ತಣ್ಣಗಾಗಲು ಬಿಡಿ.
    * ಜಾಮ್ ತಣ್ಣಗಾದ ಬಳಿಕ ಅದನ್ನು ಗಾಳಿಯಾಡದ ಗಾಜಿನ ಡಬ್ಬಿಯಲ್ಲಿ ಹಾಕಿಡಿ.
    * ನೀವು ಬೇಕೆನಿಸಿದಾಗ ಬನ್, ಬ್ರೆಡ್, ಚಪಾತಿಯೊಂದಿಗೆ ಮನೆಯಲ್ಲೇ ತಯಾರಿಸಿದ ಜಾಮ್ ಅನ್ನು ಸವಿಯಬಹುದು. ಇದನ್ನೂ ಓದಿ: ನೀವೊಮ್ಮೆ ಮಾಡಿ ಅಕ್ಕಿ ಹಲ್ವಾ

    Live Tv
    [brid partner=56869869 player=32851 video=960834 autoplay=true]

  • ಚಾರ್ಮಾಡಿ ಘಾಟಿಯಲ್ಲಿ ಮೂರು ಗಂಟೆ ಟ್ರಾಫಿಕ್ ಜಾಮ್- ಸಂಜೆ 7ರ ಬಳಿಕ ಯಾರೂ ಬರಬೇಡಿ

    ಚಾರ್ಮಾಡಿ ಘಾಟಿಯಲ್ಲಿ ಮೂರು ಗಂಟೆ ಟ್ರಾಫಿಕ್ ಜಾಮ್- ಸಂಜೆ 7ರ ಬಳಿಕ ಯಾರೂ ಬರಬೇಡಿ

    ಚಿಕ್ಕಮಗಳೂರು: ಸಂಜೆ ಏಳು ಗಂಟೆಯ ನಂತರ ಚಾರ್ಮಾಡಿ ಘಾಟ್ ಮೂಲಕ ಮಂಗಳೂರು-ಧರ್ಮಸ್ಥಳಕ್ಕೆ ತೆರಳಲು ಯಾರೂ ಬರಬೇಡಿ. ಬಂದರೆ ಇಡೀ ರಾತ್ರಿ ಚಾರ್ಮಾಡಿ ಘಾಟಿಯ ಚಳಿಯಲ್ಲಿ ನಡುಗಬೇಕು. ಜೊತೆಗೆ, ಬೆಳಗ್ಗೆ ಗಾಡಿಗಳು ಹೊರಟಾಗಲೂ ಮೂರ್ನಾಲ್ಕು ಗಂಟೆ ಚಾರ್ಮಾಡಿ ಘಾಟಿಯಲ್ಲಿ ನಿಲ್ಲಬೇಕಾಗುತ್ತದೆ. ಅಷ್ಟೊಂದು ಟ್ರಾಫಿಕ್ ಜಾಮ್ ಚಾರ್ಮಾಡಿ ಘಾಟಿಯಲ್ಲಿ ಸಂಭವಿಸಿದೆ.

    ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಳೆದೊಂದು ವಾರದಿಂದ ಮಳೆ ಅಬ್ಬರ ಜೋರಿದೆ. ಇಂದು-ನಿನ್ನೆ ಮಳೆ ಪ್ರಮಾಣ ತಗ್ಗಿದ್ದರೂ ಚಾರ್ಮಾಡಿಯ ದಟ್ಟ ಕಾನನದಲ್ಲಿ ವರುಣನ ಅಬ್ಬರ ನಿಂತಿಲ್ಲ. ಹೀಗಾಗಿ ಕಳೆದ ಎರಡ್ಮೂರು ವರ್ಷದಿಂದ ಪ್ರತಿ ವರ್ಷ ಚಾರ್ಮಾಡಿಯಲ್ಲಿ ಭೂ ಕುಸಿತ ಸಾಮಾನ್ಯವಾಗಿತ್ತು. ದುರಸ್ಥಿಗೆ ತಿಂಗಳುಗಳೇ ಬೇಕಾಗಿತ್ತು. ಹಾಗಾಗಿ ಜಿಲ್ಲಾಡಳಿತ ಮುಂಜಾಗೃತ ಕ್ರಮವಾಗಿ ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗಬಾರದೆಂದು ಚಾರ್ಮಾಡಿಯಲ್ಲಿ ಸಂಜೆ 7 ಗಂಟೆಯಿಂದ ಬೆಳಗ್ಗೆ 6 ಗಂಟೆವರೆಗೆ ನೈಟ್ ಜರ್ನಿಗೆ ಸಂಪೂರ್ಣ ಬ್ರೇಕ್ ಹಾಕಿತ್ತು. ಆದರೂ ಗೊತ್ತಿದ್ದೋ, ಗೊತ್ತಿಲ್ಲದೆಯೋ ಬರುವ ಪ್ರವಾಸಿಗರು-ಪ್ರಯಾಣಿಕರಿಗೆ ಬಣಕಲ್ ಪೊಲೀಸರು ಯಾರನ್ನೂ ಬಿಡದೆ ಚಳಿಯಲ್ಲಿ ನಡುಗಿಸಿದ್ದರು. ನಿನ್ನೆ ರಾತ್ರಿ ಸಹ ಸುಮಾರು 200 ವಾಹನಗಳು ಚಾರ್ಮಾಡಿ ಘಾಟಿ ಆರಂಭದ ಕೊಟ್ಟಿಗೆಹಾರದಲ್ಲಿ ಪರೇಡ್ ನಡೆಸಿದ್ದವು. ದಮ್ಮಯ್ಯ ಅಂದರೂ ಪೊಲೀಸರು ಬಿಟ್ಟಿರಲಿಲ್ಲ.

    ಇಂದು ಬೆಳಗ್ಗೆ 6 ಗಂಟೆಗೆ ವಾಹನಗಳನ್ನ ಬಿಡುತ್ತಿದ್ದಂತೆ ಮಂಗಳೂರಿನಿಂದ ಚಿಕ್ಕಮಗಳೂರಿಗೆ ಬರುವ ಹಾಗೂ ಚಿಕ್ಕಮಗಳೂರಿನಿಂದ ಮಂಗಳೂರಿಗೆ ಹೋಗುವ ನೂರಾರು ವಾಹನಗಳಿಂದ ಚಾರ್ಮಾಡಿಯಲ್ಲಿ ಸುಮಾರು ಮೂರು ಗಂಟೆ ಟ್ರಾಫಿಕ್ ಜಾಮ್ ಆಗಿತ್ತು. ಪ್ರವಾಸಿಗರು-ಪ್ರಯಾಣಿಕರು ಇಡೀ ರಾತ್ರಿ ಚಾರ್ಮಾಡಿಯ ರಣಚಳಿಯಲ್ಲಿ ನಡುಗಿದ್ದಲ್ಲದೆ. ಬೆಳಗ್ಗೆ ಕೂಡ ಚಳಿಯಲ್ಲಿ ನಡುಗುತ್ತಾ ಮೂರ್ನಾಲ್ಕು ಗಂಟೆ ನಿಂತಲ್ಲೇ ನಿಲ್ಲಬೇಕಾದ ಸ್ಥಿತಿ ನಿರ್ಮಾಣವಾಗಿತ್ತು.

    ಪ್ರಯಾಣಿಕರು-ಪ್ರವಾಸಿಗರು ಬರೋದಾದರೆ ಸಂಜೆ ಏಳು ಗಂಟೆ ಒಳಗೆ ಬಂದು ಮಂಗಳೂರು ಸೇರಿಬೇಡಿ. ಏಳು ಗಂಟೆಯ ನಂತರ ಬಂದು ಕೊಟ್ಟಿಗೆಹಾರದಲ್ಲಿ ಪರಿತಪ್ಪಿಸಬೇಡಿ. ಕೊಟ್ಟಿಗೆಹಾರದಲ್ಲಿ ತಂಗಲು ಸಮರ್ಪಕ ಲಾಡ್ಜ್ ಸೌಲಭ್ಯವೂ ಇಲ್ಲ. ಅತ್ತ ಪೊಲೀಸರು ಬಿಡೋದು ಇಲ್ಲ. ಹೀಗಾಗಿ ಸಂಜೆ ಏಳು ಗಂಟೆಯ ನಂತರ ಬರಬೇಡಿ. ಬಂದು ಉಳಿಯಲು ಜಾಗವಿಲ್ಲದೆ ಮಲೆನಾಡ ಚಳಿಯಲ್ಲಿ ನಡುಗಬೇಡಿ ಎಂದು ಮಳೆಯಲ್ಲಿ ನೆನೆದು, ಚಳಿಯಲ್ಲಿ ನಡುಗುತ್ತಾ ರಸ್ತೆಯಲ್ಲಿ ಕಾಲ ಕಳೆದಿರುವ ಪ್ರಯಾಣಿಕರು-ಪ್ರವಾಸಿಗರು ಹೇಳಿದ್ದಾರೆ.

  • ಫುಡ್ ಫ್ಯಾಕ್ಟರಿಯಲ್ಲಿ ಕೊಳೆತ ಹಣ್ಣುಗಳಿಂದ ತಯಾರಾಗ್ತಿದೆ ಜಾಮ್!

    ಬೆಂಗಳೂರು: ಐಸ್‍ಕ್ರೀಂ ಮೇಲೆ ವಿವಿಧ ಬಗೆಯ ಫ್ರುಟ್‍ಗಳನ್ನು ಹಾಕಿ ತಿನ್ನುವುದೆಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಆದ್ರೆ ಇನ್ಮುಂದೆ ಫ್ರುಟ್ಸ್ ಹಾಕಿದ ಐಸ್‍ಕ್ರೀಂ, ಜಾಮ್ ತಿನ್ನುವ ಮೊದಲು ಸರಿಯಾಗಿ ನೋಡಿ ತಿನ್ನಿ. ಯಾಕಂದ್ರೆ ಫ್ರೂಟ್ಸ್ ಹಾಗೂ ಜಾಮನ್ನು ಕೊಳೆತ ಹಣ್ಣುಗಳಿಂದ ತಯಾರು ಮಾಡುತ್ತಾರೆ.

    ಬೆಂಗಳೂರಿನ ಅಂಚೆಪಾಳ್ಯದಲ್ಲಿರುವ ಸಂತೋಷ್ ಫುಡ್ ಫ್ಯಾಕ್ಟರಿ ಫ್ರೂಟ್ಸ್ ಮತ್ತು ಜಾಮ್ ತಯಾರು ಮಾಡಿ ಕರ್ನಾಟಕದಾದ್ಯಂತ ಸರಬರಾಜು ಮಾಡ್ತಿದೆ. ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಪ್ರಕಾರ ಆಹಾರ ತಯಾರಿಕೆ ಸ್ಥಳ ಮತ್ತು ಸುತ್ತಮುತ್ತ ಸ್ವಚ್ಛತೆ ಕಾಪಾಡಬೇಕು. ಆದ್ರೆ ಅದ್ಯಾವುದೂ ಇಲ್ಲಿ ಕಾಣಿಸ್ತಿಲ್ಲ. ಕೊಳೆತ ಪಪ್ಪಾಯಿ ಹಣ್ಣು, ಜಾಮ್ ತಯಾರು ಮಾಡೋ ಯಂತ್ರಗಳ ಮೇಲೂ ಕಸ, ಕ್ರಿಮಿ, ಕೀಟಗಳು ಕಣ್ಣಿಗೆ ರಾಚುತ್ತೆ. ಈ ಬಗ್ಗೆ ಕರ್ನಾಟಕ ಕಾರ್ಮಿಕ ವೇದಿಕೆ ಸದಸ್ಯರೊಬ್ಬರು ಫ್ಯಾಕ್ಟರಿ ಮಾಲೀಕರನ್ನ ಪ್ರಶ್ನೆ ಮಾಡಿದ್ರೆ, ನನಗೆ ಕಮೀಷನರ್ ಗೊತ್ತು. ಪೊಲೀಸ್ ಅಧಿಕಾರಿ ಗೊತ್ತು ಅಂತಾ ಅವರ ಮೇಲೆ ದಬ್ಬಾಳಿಕೆ ಮಾಡಿದ್ದಾರೆ. ಸ್ಚಚ್ಛತೆ ಬಗ್ಗೆ ಕೇಳಿದ್ರೆ, ಸರಿಯಾಗಿ ಉತ್ತರ ನೀಡದೇ ನೀವು ಯಾರು ಪ್ರಶ್ನೆ ಮಾಡೋದಕ್ಕೆ ಅಂತಾ ಧಮ್ಕಿ ಹಾಕ್ತಾರೆ ಅಂತ ಆರೋಪಿಸಲಾಗಿದೆ.

    ಜಾಮ್ ಮತ್ತು ಚೆರ್ರಿ ತಯಾರು ಮಾಡಬೇಕಾದ್ರೆ 6 ದಿನಗಳ ಕಾಲ ಪಪ್ಪಾಯಿ ಹಣ್ಣನ್ನು ಕೊಳೆಯುವಂತೆ ಮಾಡಿ ತಯಾರು ಮಾಡುವುದು ಸರಿ. ಕೊಳೆತಿರುವುದರಿಂದ ಕೆಟ್ಟ ವಾಸನೆ ಬರುತ್ತೆ ಅದು ಸಹಜ ಅಂತ ಫುಡ್ ಫ್ಯಾಕ್ಟರಿ ಮಾಲೀಕ ಸಂತೋಷ್ ವಾದ ಮಾಡ್ತಾರೆ.

    ಸಂತೋಷ್ ಪುಡ್ ಫ್ಯಾಕ್ಟರಿ ವಿರುದ್ಧ ಆಹಾರ ಸುರಕ್ಷತಾ ಆಯುಕ್ತರಿಗೆ ಕರ್ನಾಟಕ ಕಾರ್ಮಿಕ ವೇದಿಕೆಯವರು ದೂರು ನೀಡಿದ್ದಾರೆ. ಆಹಾರ ಸುರಕ್ಷತಾ ಇಲಾಖೆ ಫ್ಯಾಕ್ಟರಿ ವಿರುದ್ಧ ಯಾವ ರೀತಿ ಕ್ರಮ ಜರುಗುಸುತ್ತೋ ಕಾದು ನೋಡ್ಬೇಕು.