ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ (Renukaswamy Case) ಮತ್ತೆ ಜೈಲುಪಾಲಾಗಿರುವ ಎ1 ಆರೋಪಿ ಪವಿತ್ರಾ ಗೌಡ (Pavitra Gowda) ಜಾಮೀನು ಅರ್ಜಿಯನ್ನು 57ನೇ ಸೆಷನ್ಸ್ ಕೋರ್ಟ್ ವಜಾಗೊಳಿಸಿದೆ.
ಪವಿತ್ರಾ ಗೌಡ ಪರ ವಕೀಲರು ತಾಂತ್ರಿಕ ಕಾರಣ ನೀಡಿ ಜಾಮೀನು ಅರ್ಜಿ ಸಲ್ಲಿಸಿದ್ದರು. ಈ ಕುರಿತು ಆ.30ರಂದು ಸೆಷನ್ಸ್ ಕೋರ್ಟ್ ವಿಚಾರಣೆ ನಡೆಸಿತ್ತು. ಈ ವೇಳೆ ಪವಿತ್ರಗೌಡ ಪರ ಹಿರಿಯ ವಕೀಲ ಬಾಲನ್ ವಾದ ಮಂಡಿಸಿ, ಪವಿತ್ರಗೌಡ ವಿರುದ್ಧ ಆರೋಪಪಟ್ಟಿಯನ್ನು ಬಿಎನ್‌ಎಸ್ (BNS) ಬದಲು ಸಿಆರ್‌ಪಿಸಿ (CRPC) ಅಡಿಯಲ್ಲಿ ಸಲ್ಲಿಕೆ ಮಾಡಿದ್ದಾರೆ. ಇದು ಕಾನೂನು ಬಾಹಿರವಾಗಿರುವುದರಿಂದ ಕಡ್ಡಾಯ ಜಾಮೀನಿಗೆ ನಮ್ಮ ಕಕ್ಷಿದಾರರು ಅರ್ಹರು, ಹೀಗಾಗಿ ಜಾಮೀನು ಮಂಜೂರು ಮಾಡುವಂತೆ ಕೋರಿದ್ದರು. ವಾದ-ಪ್ರತಿವಾದಗಳನ್ನು ಆಲಿಸಿದ್ದ ನ್ಯಾಯಾಲಯ ಸೆ.2ಕ್ಕೆ ಆದೇಶವನ್ನು ಕಾಯ್ದಿರಿಸಿತ್ತು. ಇದೀಗ ಎ1 ಆರೋಪಿ ಪವಿತ್ರಾ ಗೌಡ ಜಾಮೀನು ಅರ್ಜಿಯನ್ನು ವಜಾಗೊಳಿಸಿ ಆದೇಶ ಹೊರಡಿಸಿದೆ.ಇದನ್ನೂ ಓದಿ: ಗಂಗೆ, ತುಂಗೆಯ ಜೊತೆ ಧರ್ಮಸ್ಥಳ ಯಾತ್ರೆ ಹೊರಟ ಈಶ್ವರಪ್ಪ
ಇನ್ನೂ ನಟ ದರ್ಶನ್ ಬಳ್ಳಾರಿ ಜೈಲಿಗೆ, ಜಗದೀಶ್ ಮತ್ತು ಲಕ್ಷ್ಮಣ್ ಶಿವಮೊಗ್ಗ ಜೈಲಿಗೆ, ನಾಗರಾಜ್ ಕಲಬುರಗಿ ಜೈಲಿಗೆ, ಪ್ರದೂಷ್ ಬೆಳಗಾವಿ ಜೈಲಿಗೆ ಶಿಫ್ಟ್ ಮಾಡುವಂತೆ ಹಾಗೂ ಪವಿತ್ರಾ ಗೌಡ ಮತ್ತು ಅನುಕುಮಾರ್ ಪರಪ್ಪನ ಅಗ್ರಹಾರ ಜೈಲಿನಲ್ಲೇ ಉಳಿಯುವಂತೆ ಸಲ್ಲಿಸಿರುವ ಅರ್ಜಿ ಹಾಗೂ ನಟ ದರ್ಶನ್‌ಗೆ ದಿಂಬು, ಬೆಡ್‌ಶೀಟ್ ಕೋರಿರುವ ಅರ್ಜಿಯ ಆದೇಶ ಇಂದು (ಸೆ.2) ಹೊರಬೀಳಲಿದೆ.
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನು ಕೋರಿ ಎ1 ಆರೋಪಿ ಪವಿತ್ರಾ ಗೌಡ (Pavithra Gowda) ಹಾಗೂ ಎ7 ಆರೋಪಿ ಅನುಕುಮಾರ್ ಸಲ್ಲಿಸಿದ್ದ ಅರ್ಜಿಯನ್ನು 57ನೇ ಸಿಸಿಹೆಚ್ ನ್ಯಾಯಾಲಯ ಶನಿವಾರ ವಜಾಗೊಳಿಸಿದೆ.
ಇದೇ ಆಗಸ್ಟ್ 19ರಂದು ಪವಿತ್ರಾಗೌಡ ಪರ ವಕೀಲರು ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಈ ಸಂಬಂಧ ಆ.28 ರಂದು ವಿಚಾರಣೆ ನಡೆಸಿದ್ದ ಸಿಟಿ ಸಿವಿಲ್ ಮತ್ತು ಸೆಷನ್ಸ್ ಕೋರ್ಟ್ ಅರ್ಜಿ ವಿಚಾರಣೆಯನ್ನು ಆ.31ಕ್ಕೆ ಮುಂದೂಡಿತ್ತು. ಶನಿವಾರ ಮತ್ತೆ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ಜಾಮೀನು ನಿರಾಕರಿಸಿತು. ಇದನ್ನೂ ಓದಿ: ಕೈಕೊಟ್ಟ ಎಂಜಿನ್ – ಬೆಂಗಳೂರಿಗೆ ಹೊರಟಿದ್ದ ಇಂಡಿಗೋ ವಿಮಾನ ಕೋಲ್ಕತ್ತಾದಲ್ಲಿ ತುರ್ತು ಭೂಸ್ಪರ್ಶ
ಎಸ್‌ಪಿಪಿ ವಾದ ಏನಿತ್ತು?
ಪವಿತ್ರಾಗೌಡ ಅರ್ಜಿ ವಿಚಾರಣೆ ವೇಳೆ ಪ್ರಬಲ ವಾದ ಮಂಡನೆ ಮಾಡಿದ ಎಸ್‌ಪಿಪಿ ಪ್ರಸನ್ನಕುಮಾರ್ (SPP Prasannakumar), ಪವಿತ್ರಾ ಗೌಡಗೆ ಜಾಮೀನು ನೀಡದಂತೆ ಆಕ್ಷೇಪಿಸಿದರು. ಮಹಿಳೆಯಾದರೂ ಜಾಮೀನು ಕೊಡಬಾರದು ಅಂತ ಕೇರಳ ಹಾಗೂ ಕೋಲ್ಕತ್ತಾ ಹೈಕೋರ್ಟ್ (Kolkata Highcoutt) ಆದೇಶಗಳನ್ನು ಉಲ್ಲೇಖಿಸಿದರು. ಮಹಿಳೆಯರಿಗೆ ವಿಶೇಷ ಅವಕಾಶ ಯಾಕೆ ಕೊಡಬೇಕು? ಕೇರಳದ ಪ್ರಕರಣದಲ್ಲಿ ದೋಷಾರೋಪ ಪಟ್ಟಿ ಹಾಕಿದ ಬಳಿಕವೂ ಜಾಮೀನು ನೀಡಿಲ್ಲ, ಆದ್ರೆ ಈ ಪ್ರಕರಣದಲ್ಲಿ ಇನ್ನೂ ದೋಷಾರೋಪ ಪಟ್ಟಿ ಸಲ್ಲಿಕೆ ಮಾಡಿಲ್ಲ. ಆದ್ದರಿಂದ ಮಹಿಳೆ ಎಂಬ ಕಾರಣಕ್ಕೆ ಪವಿತ್ರಾಗೌಡಗೆ ಜಾಮೀನು ನೀಡಬಾರದು. ಏಕೆಂದರೆ `ಕೋಲ್ಡ್ ಬ್ಲಡೆಡ್ ಮರ್ಡರ್’ ಕೇಸ್‌ನಲ್ಲಿ ಪವಿತ್ರಾಗೌಡ ಭಾಗಿಯಾಗಿದ್ದಾರೆ ಎಂದು ವಾದಿಸಿದರು.
ಮುಂದುವರಿದು, ಪವಿತ್ರಾಗೌಡ ಕೊಲೆಯಲ್ಲಿ ಭಾಗಿಯಾಗಿದ್ದಾರೆ. ಈ ಬಗ್ಗೆ ಇತರೆ ಆರೋಪಿಗಳು ಹೇಳಿಕೆ ನೀಡಿದ್ದಾರೆ. ಅವರ ಹೇಳಿಕೆಯ ಮಾಹಿತಿಯನ್ನ ಕೋರ್ಟ್ ಕೊಟ್ಟಿದ್ದೇವೆ. ಕೊಲೆ ಮಾಡುವ ಉದ್ದೇಶದಿಂದ ರೇಣುಕಾಸ್ವಾಮಿಯನ್ನ ಅಪಹರಣ ಮಾಡಲಾಗಿದೆ. ನಂತರ ಆರೋಪಿಗಳು ತೀವ್ರ ಹಲ್ಲೆ ಮಾಡಿ ಕೊಲೆಮಾಡಿದ್ದಾರೆ. ಆರೋಪಿ ಕೇಶವಮೂರ್ತಿ ಕೂಡ ಕೇವಲ ಸಾಕ್ಷಿ ನಾಶ ಮಾಡಿಲ್ಲ, ಈ ಪ್ರಕರಣದಲ್ಲಿ ಆತನದ್ದು ಬಹುಮುಖ್ಯವಾದ ಪಾತ್ರ ಇದೆ. ತನಿಖೆ ಸಹ ಇನ್ನು ಮುಕ್ತಾಯ ಆಗಿಲ್ಲ. ಹೀಗಾಗಿ ಯಾವ ಆರೋಪಿಗಳಿಗೂ ಜಾಮೀನು ನೀಡಬಾರದು ಎಂದು ವಾದ ಮಂಡಿಸಿದರು. ಇದನ್ನೂ ಓದಿ: ವಿಪಕ್ಷಗಳ ನಾಯಕರ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡುವಂತೆ ಒತ್ತಾಯ – ‘ಕೈ’ ನಾಯಕರಿಂದ ‘ರಾಜಭವನ ಚಲೋ’
ಎಸ್‌ಪಿಪಿ ವಾದದ ಪ್ರಮುಖ ಅಂಶಗಳು?
* ಪವಿತ್ರಗೌಡ ಶೆಡ್‌ಗೆ ಹೋಗಿಯೇ ಇಲ್ಲ ಅಂತಾರೆ,
* ಆದರೆ, ಪವಿತ್ರಗೌಡರನ್ನು ದರ್ಶನ್ ಕರೆದೊಯ್ಯುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ.
* ಆಕೆಯ ಚಪ್ಪಲಿಯಲ್ಲಿ ರಕ್ತದ ಕಲೆ ಪತ್ತೆಯಾಗಿದೆ, ಎಫ್‌ಎಸ್‌ಎಲ್ ವರದಿಯಲ್ಲೂ ದೃಢಪಟ್ಟಿದೆ.
* ರೇಣುಕಾಸ್ವಾಮಿಗೆ ಎಲೆಕ್ಟ್ರಿಕ್ ಶಾಕ್ ನೀಡಲಾಗಿದೆ, ಇದರಿಂದ 39 ಕಡೆ ಗಾಯ ಆಗಿದೆ.
* ರೇಣುಕಾಸ್ವಾಮಿಯ ಎದೆ ಪಕ್ಕೆಲುಬು ಮುರಿದಿದೆ, ಶ್ವಾಸಕೋಶ ಡ್ಯಾಮೇಜ್ ಆಗಿದೆ.
* ಘಟನಾ ಸ್ಥಳದಲ್ಲಿ ಆರೋಪಿಗಳ ಇರುವಿಕೆ ಬಗ್ಗೆ ಸಾಕ್ಷ್ಯ ಇದೆ.
* ಕೋಲ್ಡ್ ಬ್ಲಡೆಡ್ ಮರ್ಡರ್‌ನಲ್ಲಿ ಪವಿತ್ರಾಗೌಡ ಭಾಗಿಯಾಗಿದ್ದಾರೆ.
* ತನಿಖೆ ಇನ್ನೂ ಮುಕ್ತಾಯ ಆಗಿಲ್ಲ, ಆದ್ದರಿಂದ ಆರೋಪಿಗಳಿಗೆ ಜಾಮೀನು ನೀಡಬಾರದೆಂದು ಆಕ್ಷೇಪ.
ಪವಿತ್ರಾಗೌಡ ಪರ ವಕೀಲರ ವಾದ ಏನು?
* ಪವಿತ್ರಾಗೌಡ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ ಅನ್ನೋದು ಕಪೋಲಕಲ್ಪಿತ
* ದರ್ಶನ್ ಪವಿತ್ರಾಗೌಡ ಮನೆಗೆ ಹೋಗಿ ಕರೆದೊಯ್ದಿದ್ರು ಅಷ್ಟೇ
* ಹೀಗಿರುವಾಗ ಇದರಲ್ಲಿ ಪವಿತ್ರಾಗೌಡ ಅವರ ಸಂಚು ಏನಿದೆ..?
* ಎದೆಗೆ ಪೆಟ್ಟುಬಿದ್ದ ಕಾರಣ ರೇಣುಕಾಸ್ವಾಮಿ ಸಾವನ್ನಪ್ಪಿದ್ದಾನೆ
* ಹೀಗಾಗಿ ಪವಿತ್ರಾಗೌಡ ಹಲ್ಲೆಯಿಂದ ರೇಣುಕಾಸ್ವಾಮಿ ಸಾವನ್ನಪ್ಪಿಲ್ಲ
* ಪವಿತ್ರಾಗೌಡ ವಿರುದ್ಧ ಗಂಭೀರ ಆರೋಪ ಇಲ್ಲ.. ಆದ್ದರಿಂದ ಬೇಲ್ ಕೊಡಬೇಕು ಅಂತ ಮನವಿ ಮಾಡಿದರು.
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದ ಎ1 ಆರೋಪಿ ಪವಿತ್ರಾಗೌಡ (Pavithra Gowda), ಅನುಕುಮಾರ್ ಜಾಮೀನು ಅರ್ಜಿ ವಿಚಾರಣೆಯನ್ನು ಆಗಸ್ಟ್ 31ಕ್ಕೆ ಕೋರ್ಟ್ ಮುಂದೂಡಿದೆ. ಆರೋಪಿಗಳಾದ ವಿನಯ್, ಕೇಶವಮೂರ್ತಿ ಬೇಲ್ ಭವಿಷ್ಯ ಸೆಪ್ಟೆಂಬರ್ 2ಕ್ಕೆ ಗೊತ್ತಾಗಲಿದೆ. ಬುಧವಾರದ ವಿಚಾರಣೆ ವೇಳೆ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಹೊಸ ಹೊಸ ವಿಚಾರಗಳು ಅನಾವರಣಗೊಂಡಿವೆ. ಪವಿತ್ರಾಗೌಡ ಪರ ಹಿರಿಯ ವಕೀಲ ಟಾಮಿ ಸೆಬಾಸ್ಟಿಯನ್ (Tami Sebastian) ವಾದ ಮಂಡಿಸಿದ್ರೆ, ಜಾಮೀನು ಕೊಡಬಾರದೆಂದು ಆಕ್ಷೇಪಿಸಿ ಎಸ್‌ಪಿಪಿ ಪ್ರಸನ್ನ ಕುಮಾರ್ ಪ್ರಬಲ ವಾದ ಮಂಡನೆ ಮಾಡಿದರು.
ಪವಿತ್ರಾಗೌಡ ಅರ್ಜಿ ವಿಚಾರಣೆ ವೇಳೆ ಪ್ರಬಲ ವಾದ ಮಂಡನೆ ಮಾಡಿದ ಎಸ್‌ಪಿಪಿ ಪ್ರಸನ್ನಕುಮಾರ್ (SPP Prasannakumar), ಪವಿತ್ರಾ ಗೌಡಗೆ ಜಾಮೀನು ನೀಡದಂತೆ ಆಕ್ಷೇಪಿಸಿದರು. ಮಹಿಳೆಯಾದರೂ ಜಾಮೀನು ಕೊಡಬಾರದು ಅಂತ ಕೇರಳ ಹಾಗೂ ಕೋಲ್ಕತ್ತಾ ಹೈಕೋರ್ಟ್ (Kolkata Highcoutt) ಆದೇಶಗಳನ್ನು ಉಲ್ಲೇಖಿಸಿದರು. ಮಹಿಳೆಯರಿಗೆ ವಿಶೇಷ ಅವಕಾಶ ಯಾಕೆ ಕೊಡಬೇಕು? ಕೇರಳದ ಪ್ರಕರಣದಲ್ಲಿ ದೋಷಾರೋಪ ಪಟ್ಟಿ ಹಾಕಿದ ಬಳಿಕವೂ ಜಾಮೀನು ನೀಡಿಲ್ಲ, ಆದ್ರೆ ಈ ಪ್ರಕರಣದಲ್ಲಿ ಇನ್ನೂ ದೋಷಾರೋಪ ಪಟ್ಟಿ ಸಲ್ಲಿಕೆ ಮಾಡಿಲ್ಲ. ಆದ್ದರಿಂದ ಮಹಿಳೆ ಎಂಬ ಕಾರಣಕ್ಕೆ ಪವಿತ್ರಾಗೌಡಗೆ ಜಾಮೀನು ನೀಡಬಾರದು. ಏಕೆಂದರೆ `ಕೋಲ್ಡ್ ಬ್ಲಡೆಡ್ ಮರ್ಡರ್’ ಕೇಸ್‌ನಲ್ಲಿ ಪವಿತ್ರಾಗೌಡ ಭಾಗಿಯಾಗಿದ್ದಾರೆ ಎಂದು ವಾದಿಸಿದರು. ಇದನ್ನೂ ಓದಿ: ಹೆಂಡತಿ ಕೊಂದು ದೃಶ್ಯ ಸಿನಿಮಾ ಮಾದರಿಯಲ್ಲಿ ಹೂತಿಟ್ಟ; ಸ್ನೇಹಿತನ ಹೆಂಡತಿ ಕೊಲೆಯಲ್ಲಿ ಭಾಗಿಯಾಗಿ ಹಳೇ ಕೇಸಲ್ಲೂ ತಗ್ಲಾಕೊಂಡ ಖತರ್ನಾಕ್
ಮುಂದುವರಿದು, ಪವಿತ್ರಾಗೌಡ ಕೊಲೆಯಲ್ಲಿ ಭಾಗಿಯಾಗಿದ್ದಾರೆ. ಈ ಬಗ್ಗೆ ಇತರೆ ಆರೋಪಿಗಳು ಹೇಳಿಕೆ ನೀಡಿದ್ದಾರೆ. ಅವರ ಹೇಳಿಕೆಯ ಮಾಹಿತಿಯನ್ನ ಕೋರ್ಟ್ ಕೊಟ್ಟಿದ್ದೇವೆ. ಕೊಲೆ ಮಾಡುವ ಉದ್ದೇಶದಿಂದ ರೇಣುಕಾಸ್ವಾಮಿಯನ್ನ ಅಪಹರಣ ಮಾಡಲಾಗಿದೆ. ನಂತರ ಆರೋಪಿಗಳು ತೀವ್ರ ಹಲ್ಲೆ ಮಾಡಿ ಕೊಲೆಮಾಡಿದ್ದಾರೆ. ಆರೋಪಿ ಕೇಶವಮೂರ್ತಿ ಕೂಡ ಕೇವಲ ಸಾಕ್ಷಿ ನಾಶ ಮಾಡಿಲ್ಲ, ಈ ಪ್ರಕರಣದಲ್ಲಿ ಆತನದ್ದು ಬಹುಮುಖ್ಯವಾದ ಪಾತ್ರ ಇದೆ. ತನಿಖೆ ಸಹ ಇನ್ನು ಮುಕ್ತಾಯ ಆಗಿಲ್ಲ. ಹೀಗಾಗಿ ಯಾವ ಆರೋಪಿಗಳಿಗೂ ಜಾಮೀನು ನೀಡಬಾರದು ಎಂದು ವಾದ ಮಂಡಿಸಿದರು. ಇದನ್ನೂ ಓದಿ: ಸೋಷಿಯಲ್ ಮೀಡಿಯಾದಲ್ಲಿ ದೇಶ ವಿರೋಧಿ ಪೋಸ್ಟ್ ಹಾಕಿದರೆ ಜೀವಾವಧಿ ಶಿಕ್ಷೆ – ಯುಪಿಯಲ್ಲಿ ಹೊಸ ಸಾಮಾಜಿಕ ಜಾಲತಾಣ ನೀತಿ ಜಾರಿ
ಎಸ್‌ಪಿಪಿ ವಾದದ ಪ್ರಮುಖ ಅಂಶಗಳು?
* ಪವಿತ್ರಗೌಡ ಶೆಡ್‌ಗೆ ಹೋಗಿಯೇ ಇಲ್ಲ ಅಂತಾರೆ,
* ಆದರೆ, ಪವಿತ್ರಗೌಡರನ್ನು ದರ್ಶನ್ ಕರೆದೊಯ್ಯುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ.
* ಆಕೆಯ ಚಪ್ಪಲಿಯಲ್ಲಿ ರಕ್ತದ ಕಲೆ ಪತ್ತೆಯಾಗಿದೆ, ಎಫ್‌ಎಸ್‌ಎಲ್ ವರದಿಯಲ್ಲೂ ದೃಢಪಟ್ಟಿದೆ.
* ರೇಣುಕಾಸ್ವಾಮಿಗೆ ಎಲೆಕ್ಟ್ರಿಕ್ ಶಾಕ್ ನೀಡಲಾಗಿದೆ, ಇದರಿಂದ 39 ಕಡೆ ಗಾಯ ಆಗಿದೆ.
* ರೇಣುಕಾಸ್ವಾಮಿಯ ಎದೆ ಪಕ್ಕೆಲುಬು ಮುರಿದಿದೆ, ಶ್ವಾಸಕೋಶ ಡ್ಯಾಮೇಜ್ ಆಗಿದೆ.
* ಘಟನಾ ಸ್ಥಳದಲ್ಲಿ ಆರೋಪಿಗಳ ಇರುವಿಕೆ ಬಗ್ಗೆ ಸಾಕ್ಷ್ಯ ಇದೆ.
* ಕೋಲ್ಡ್ ಬ್ಲಡೆಡ್ ಮರ್ಡರ್‌ನಲ್ಲಿ ಪವಿತ್ರಾಗೌಡ ಭಾಗಿಯಾಗಿದ್ದಾರೆ.
* ತನಿಖೆ ಇನ್ನೂ ಮುಕ್ತಾಯ ಆಗಿಲ್ಲ, ಆದ್ದರಿಂದ ಆರೋಪಿಗಳಿಗೆ ಜಾಮೀನು ನೀಡಬಾರದೆಂದು ಆಕ್ಷೇಪ.
ಪವಿತ್ರಾಗೌಡ ಪರ ವಕೀಲರ ವಾದ ಏನು?
* ಪವಿತ್ರಾಗೌಡ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ ಅನ್ನೋದು ಕಪೋಲಕಲ್ಪಿತ
* ದರ್ಶನ್ ಪವಿತ್ರಾಗೌಡ ಮನೆಗೆ ಹೋಗಿ ಕರೆದೊಯ್ದಿದ್ರು ಅಷ್ಟೇ
* ಹೀಗಿರುವಾಗ ಇದರಲ್ಲಿ ಪವಿತ್ರಾಗೌಡ ಅವರ ಸಂಚು ಏನಿದೆ..?
* ಎದೆಗೆ ಪೆಟ್ಟುಬಿದ್ದ ಕಾರಣ ರೇಣುಕಾಸ್ವಾಮಿ ಸಾವನ್ನಪ್ಪಿದ್ದಾನೆ
* ಹೀಗಾಗಿ ಪವಿತ್ರಾಗೌಡ ಹಲ್ಲೆಯಿಂದ ರೇಣುಕಾಸ್ವಾಮಿ ಸಾವನ್ನಪ್ಪಿಲ್ಲ
* ಪವಿತ್ರಾಗೌಡ ವಿರುದ್ಧ ಗಂಭೀರ ಆರೋಪ ಇಲ್ಲ.. ಆದ್ದರಿಂದ ಬೇಲ್ ಕೊಡಬೇಕು ಅಂತ ಮನವಿ ಮಾಡಿದರು. ಇದನ್ನೂ ಓದಿ: ಪೂರ್ಣಚಂದ್ರ ತೇಜಸ್ವಿ ತಂದೆಯ ನೆರಳಿನಿಂದ ಹೊರಬಂದು ಸ್ವಂತ ಆಲೋಚನೆ ಬೆಳೆಸಿಕೊಂಡರು: ಸಿದ್ದರಾಮಯ್ಯ
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದ ಎ1 ಆರೋಪಿ ಪವಿತ್ರಾ ಗೌಡ (Pavithra Gowda) ಅವರ ಜಾಮೀನು ಅರ್ಜಿ (Bail Application) ವಿಚಾರಣೆಯನ್ನು ಸಿಟಿ ಸಿವಿಲ್ ಮತ್ತು ಸೆಷನ್ಸ್ ಕೋರ್ಟ್ ಆಗಸ್ಟ್ 31ಕ್ಕೆ ಮುಂದೂಡಿದೆ.
ಇದೇ ಆಗಸ್ಟ್ 19ರಂದು ಪವಿತ್ರಾಗೌಡ ಪರ ವಕೀಲರು ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಇಂದು (ಆ.28) ಸಿಟಿ ಸಿವಿಲ್ ಮತ್ತು ಸೆಷನ್ಸ್ ಕೋರ್ಟ್ ಅರ್ಜಿ ವಿಚಾರಣೆ ನಡೆಸಿತು. ಮುಚ್ಚಿದ ಲಕೋಟೆಯಲ್ಲಿ ವರದಿ ನೀಡಿದ ನಂತರ ಎಸ್‌ಪಿಪಿ ವಾದ ಮಂಡಿಸಿದರು. ಪವಿತ್ರಾಗೌಡ ಪರ ಟಾಮಿ ಸೆಬಾಸ್ಟಿಯನ್ ವಾದಿಸಿದರು. ಸುದೀರ್ಘ ವಿಚಾರಣೆ ಬಳಿಕ ಕೋರ್ಟ್ ಆಗಸ್ಟ್ 31ಕ್ಕೆ ಆದೇಶ ಕಾಯ್ದಿರಿಸಿತು. ಇದಕ್ಕೆ ಸಂಬಂಧಿಸಿದ ವೀಡಿಯೋ ಇಲ್ಲಿದೆ….
ಬೆಂಗಳೂರು/ಉಡುಪಿ: ಉಡುಪಿಯಲ್ಲಿ (Udupi) ಒಂದೇ ಕುಟುಂಬದ ನಾಲ್ವರ ಹತ್ಯೆ (Murder Case) ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಅರುಣ್ ಚೌಗಲೆ (Arun Chaugale) ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು (Bail Application) ಹೈಕೋರ್ಟ್ (High Court) ವಜಾ ಮಾಡಿದೆ.
ಹೈಕೋರ್ಟ್‌ನ ಏಕಸದಸ್ಯ ಪೀಠ ಅರ್ಜಿಯನ್ನು ವಜಾಗೊಳಿಸಿದೆ. ಆರೋಪಿ ಅರುಣ್ ಚೌಗಲೆ 2023ರ ನವೆಂಬರ್ 12ರಂದು ಉಡುಪಿಯ ತೃಪ್ತಿ ಲೇಔಟ್‌ನಲ್ಲಿ ಒಂದೇ ಕುಟುಂಬದ ನಾಲ್ವರನ್ನು ಹತ್ಯೆ ಮಾಡಿದ್ದ. ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಂದೆ ಉಡುಪಿ ಜಿಲ್ಲಾ ಸತ್ರ ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ವಜಾ ಆಗಿತ್ತು. ಇದನ್ನೂ ಓದಿ: ಲಂಕಾ ನೌಕಪಡೆಯ ನಾವಿಕ ಸಾವು – ಭಾರತೀಯ ಮೀನುಗಾರರ ಮೇಲೆ ಹತ್ಯೆ ಆರೋಪ
ಪ್ರಕರಣ ಏನು?
2023ರ ನವೆಂಬರ್ 12ರಂದು ಸಂತೆಕಟ್ಟೆ ನೇಜಾರು ಸಮೀಪದ ತೃಪ್ತಿ ಲೇಔಟ್‌ನಲ್ಲಿ ಕೊಲೆ ನಡೆದಿತ್ತು. ವಿದೇಶದಲ್ಲಿದ್ದ ನೂರ್ ಮಹಮ್ಮದ್ ಕುಟುಂಬದ ನಾಲ್ವರ ಕೊಲೆಯಾಗಿತ್ತು. ಏರ್ ಇಂಡಿಯಾ ಉದ್ಯೋಗಿಯಾಗಿದ್ದ ಪ್ರವೀಣ್ ಅರುಣ್ ಚೌಗುಲೆ ಬರ್ಬರವಾಗಿ ನಾಲ್ವರ ಹತ್ಯೆ ಮಾಡಿದ್ದ. ಇದನ್ನೂ ಓದಿ: ರೇಣುಕಾಸ್ವಾಮಿ ಹತ್ಯೆ ಕೇಸ್ – ವಿಕಿಪೀಡಿಯದಲ್ಲಿ ಪೇಜ್ ಓಪನ್
ಮಗಳ ಮೇಲೆ ಮುಗಿಬಿದ್ದಾಗ ತಡೆಯಲು ಬಂದ ತಾಯಿ ಹಸೀನಾ, ಅಕ್ಕ ಅಫ್ನಾನ್ ಮತ್ತು ತಮ್ಮ ಆಸಿಂನನ್ನು ಇರಿದು ಕೊಂದಿದ್ದ. ತಲೆಮರೆಸಿಕೊಂಡು ಓಡಾಡಿದ್ದ ಆರೋಪಿಯನ್ನು ಬೆಳಗಾವಿ ಜಿಲ್ಲೆಯಲ್ಲಿ ಅರೆಸ್ಟ್ ಮಾಡಲಾಗಿತ್ತು. ಪ್ರಕರಣಕ್ಕೆ ಸಂಬಂಧಪಟ್ಟಂತೆ ಎಲ್ಲಾ ಸಾಕ್ಷಾಧಾರಗಳನ್ನು ಪೊಲೀಸರು ಸಂಗ್ರಹ ಮಾಡಿದ್ದರು. ಆರೋಪಿಯನ್ನು ತೀವ್ರ ವಿಚಾರಣೆಗೆ ಒಳಪಡಿಸಿ ಕೃತ್ಯಕ್ಕೆ ಬಳಸಿದ್ದ ಅಸ್ತ್ರಗಳನ್ನು ವಶಪಡಿಸಿಕೊಂಡಿದ್ದರು. ಇದನ್ನೂ ಓದಿ: ಜುಲೈ 8 ರಂದು ರಷ್ಯಾಗೆ ಮೋದಿ – ಪುಟಿನ್ ಜೊತೆ ದ್ವಿಪಕ್ಷೀಯ ಮಾತುಕತೆ
ಚಿತ್ರದುರ್ಗ: ಪೋಕ್ಸೊ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಮುರುಘಾ ಶ್ರೀಗಳಿಗೆ ಸೋಮವಾರದವರಿಗೆ ಜಾಮೀನಿಗೆ ಅರ್ಜಿ ಸಲ್ಲಿಸಬೇಡಿ ಎಂದು ಚಿತ್ರದುರ್ಗ ಜಿಲ್ಲಾ ನ್ಯಾಯಾಲಯ ನೇರವಾಗಿ ಹೇಳಿದೆ.
ಲೈಂಗಿಕ ಕಿರುಕುಳ ಆರೋಪದ ಮೇಲೆ ಮುರುಘಾ ಮಠದ ಶ್ರೀಗಳು ಜೈಲುಪಾಲಾಗಿದ್ದು, ಮುರುಘಾ ಮಠದ ಆಪ್ತ ವಕೀಲ ಉಮೇಶ್ ಅವರು 11 ಗಂಟೆಗೆ ಶ್ರೀಗಳ ಪರವಾಗಿ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಆದರೆ ಪೊಲೀಸ್ ಕಸ್ಟಡಿ ಮುಗಿಯುವವರೆಗೆ ಬೇಲ್ ಅಪ್ಲಿಕೇಷನ್ ಹಾಕಬೇಡಿ ಎಂದು ಚಿತ್ರದುರ್ಗ ಜಿಲ್ಲಾ ನ್ಯಾಯಾಲಯ ನ್ಯಾಯಾಧೀಶರು ಸೂಚಿಸಿದ್ದಾರೆ. ಇದನ್ನೂ ಓದಿ: 2 ದಿನಗಳಿಂದ ದೇವರ ದರ್ಶನ ಇಲ್ಲ – ಮುರುಘಾ ಶ್ರೀಗಳ ಬಗ್ಗೆ ಮಠದ ಮಕ್ಕಳ ಮಾತು
ಕಳೆದ ವಾರ ಮುರುಘಾ ಶರಣರ ವಿರುದ್ಧ ಮೈಸೂರಿನ ನಜರಾಬಾದ್ ಪೊಲೀಸ್ ಠಾಣೆಯಲ್ಲಿ ಮಠದ ಶಾಲೆಯಲ್ಲಿ ಓದುತ್ತಿರುವ ಇಬ್ಬರು ವಿದ್ಯಾರ್ಥಿನಿಯಿರಿಂದ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಾಗಿತ್ತು. ನಂತರ ಪ್ರಕರಣ ತಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂಬ ಕಾರಣ ನೀಡಿ ಮೈಸೂರಿನಿಂದ ಚಿತ್ರದುರ್ಗಕ್ಕೆ ಪ್ರಕರಣದ ವಿಚಾರಣೆಯನ್ನು ಹಸ್ತಾಂತರಿಸಲಾಗಿತ್ತು. ಬಳಿಕ ದೊಡ್ಡ ಮಟ್ಟದ ಪ್ರತಿಭಟನೆಗಳು ನಡೆದ ಹಿನ್ನೆಲೆ ಮುರುಘಾ ಶರಣರನ್ನು ಗುರುವಾರ ತಡರಾತ್ರಿ ಪೊಲೀಸರು ಬಂಧಿಸಿದ್ದರು. ಇದನ್ನೂ ಓದಿ: ಮನವಿ ಸಲ್ಲಿಸಲು ಬಂದ ಮಹಿಳೆಗೆ ಗದರಿದ ಅರವಿಂದ ಲಿಂಬಾವಳಿ
ನಂತರ ಶ್ರೀಗಳನ್ನು 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶೆ ಕೋಮಲಾ ಅವರ ಮುಂದೆ ಹಾಜರುಪಡಿಸಿದರು. ಶರಣರ ಪರ ಜಾಮೀನು ಕೋರಿ ಸ್ಥಳದಲ್ಲೇ ಅರ್ಜಿ ಸಲ್ಲಿಸಲಾಗಿತ್ತು. ಆಗಲೂ ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ತಿರಸ್ಕರಿಸಲಾಗಿತ್ತು.
Live Tv
[brid partner=56869869 player=32851 video=960834 autoplay=true]
ನವದೆಹಲಿ: ಜೆಎನ್‍ಯು ವಿಶ್ವವಿದ್ಯಾಲಯದ ಮಾಜಿ ವಿದ್ಯಾರ್ಥಿ ಉಮರ್ ಖಾಲಿದ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಕರ್ಕರ್ಡೂಮಾ ಹೆಚ್ಚುವರಿ ಸೆಷನ್ಸ್ ನ್ಯಾಯಲಯ ತಿರಸ್ಕರಿಸಿದೆ. ಎಂಟು ತಿಂಗಳ ಸುದೀರ್ಘ ವಿಚಾರಣೆ ಬಳಿಕ ಇಂದು ನ್ಯಾ.ಅಮಿತಾಭ್ ರಾವತ್ ತೀರ್ಪು ಪ್ರಕಟಿಸಿದ್ದಾರೆ.
2020ರ ಫೆಬ್ರವರಿ 20 ರಂದು ದೆಹಲಿಯಲ್ಲಿ ನಡೆದ ಕೋಮು ಗಲಭೆ ಪ್ರಕರಣದಲ್ಲಿ ಉಮರ್ ಖಾಲಿದ್‍ನನ್ನು ಬಂಧಿಸಲಾಗಿದ್ದು ಪ್ರಕರಣದಲ್ಲಿ ಒಳಸಂಚು ಮಾಡಿರುವುದಾಗಿ ಆರೋಪಿಸಿ ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆ (ಯುಎಪಿಎ) ಪ್ರಕರಣ ದಾಖಲಿಸಲಾಗಿತ್ತು. ಬಂಧನ ಬಳಿಕ ಖಾಲಿದ್ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಇದನ್ನೂ ಓದಿ: ರುಬೆಲ್ ಮೂಲಕ ಖರೀದಿಸಿದರಷ್ಟೇ ತೈಲ: ವಿರೋಧಿಗಳಿಗೆ ಶಾಕ್ ಕೊಟ್ಟ ಪುಟಿನ್
ಖಾಲಿದ್ ಪರ ವಾದ ಮಂಡಿಸಿದ್ದ ವಕೀಲ ತ್ರಿದೀಪ್ ಪೈಸ್, ಇದೊಂದು ಉದ್ದೇಶಪೂರ್ವಕವಾಗಿ ದಾಖಲಿಸಿದ ಪ್ರಕರಣವಾಗಿದೆ. ಪೊಲೀಸರು ಕಟ್ಟುಕಥೆಯೊಂದನ್ನು ಕಟ್ಟಿದ್ದಾರೆ. ಖಾಲಿದ್ ವಿರುದ್ಧದ ಸಾಕ್ಷಿ ಹೇಳಿಕೆಗಳು ಅಸಮಂಜಸವಾಗಿದೆ ಮತ್ತು ಆರೋಪಪಟ್ಟಿ ದೂರದರ್ಶನ ಧಾರಾವಾಹಿ ಸ್ಕ್ರಿಪ್ಟ್ ಅನ್ನು ಹೋಲುತ್ತದೆ ಎಂದು ವಾದಿಸಿದರು. ಇದನ್ನೂ ಓದಿ: ರಷ್ಯಾ ಯುದ್ಧವನ್ನು 2ನೇ ಮಹಾಯುದ್ಧಕ್ಕೆ ಹೋಲಿಸಿದ ಝೆಲೆನ್ಸ್ಕಿ
ಇದಕ್ಕೆ ಪ್ರತಿವಾದ ಮಂಡಿಸಿದ್ದ ಪಬ್ಲಿಕ್ ಪ್ರಾಸಿಕ್ಯೂಟರ್ ಅಮಿತ್ ಪ್ರಸಾದ್, ದೆಹಲಿ ಗಲಭೆಯು ಆರೋಪಿಗಳು ರೂಪಿಸಿದ ಪೂರ್ವಯೋಜಿತ ಆಳವಾದ ಸಂಚಿನ ಭಾಗವಾಗಿದೆ. ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಭೇಟಿಯನ್ನು ಪ್ರಸ್ತಾಪಿಸಿದ ಪ್ರಾಸಿಕ್ಯೂಟರ್, ಅಂತರರಾಷ್ಟ್ರೀಯ ಮಾಧ್ಯಮಗಳಿಗೆ ಗುರಿಯಾಗುವ ವಾತಾವರಣವನ್ನು ಸೃಷ್ಟಿಸಲು ಖಾಲಿದ್ ಪ್ರಯತ್ನಿಸಿದರು ಎಂದು ವಾದಿಸಿದರು.
ದೆಹಲಿ ಪೊಲೀಸರು ಈ ಪ್ರಕರಣದಲ್ಲಿ 2020ರ ಸೆಪ್ಟೆಂಬರ್ 13 ರಂದು ಖಾಲಿದ್‍ನನ್ನು ಬಂಧಿಸಿದ್ದರು. ನವೆಂಬರ್ 22 ರಂದು ಯುಎಪಿಎ ಮತ್ತು ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್‍ಗಳ ಅಡಿಯಲ್ಲಿ ಆರೋಪಪಟ್ಟಿ ಸಲ್ಲಿಸಿದ್ದರು. ಖಾಲಿದ್ ಜುಲೈ 2021 ರಲ್ಲಿ ಜಾಮೀನು ಅರ್ಜಿ ಸಲ್ಲಿಸಿದರು ಮತ್ತು ಹಲವಾರು ವಿಚಾರಣೆಗಳ ನಂತರ, ನ್ಯಾಯಾಲಯವು ಈ ತಿಂಗಳ ಆರಂಭದಲ್ಲಿ ತನ್ನ ಆದೇಶವನ್ನು ಕಾಯ್ದಿರಿಸಿತ್ತು.
ಚಾಮರಾಜನಗರ: ದೇಶವನ್ನೇ ಬೆಚ್ಚಿ ಬೀಳಿಸಿದ್ದ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಸುಳ್ವಾಡಿ ಮಾರಮ್ಮನ ದೇಗುಲದಲ್ಲಿ ನಡೆದ ವಿಷ ಪ್ರಸಾದ ದುರಂತ ಪ್ರಕರಣದ ಎರಡನೇ ಆರೋಪಿ ಅಂಬಿಕಾ ಜಾಮೀನು ಅರ್ಜಿ ಸಲ್ಲಿಸಿದ್ದಾಳೆ.
ಈ ಹಿಂದೆ ಮೊದಲನೇ ಆರೋಪಿ ಇಮ್ಮಡಿ ಮಹದೇವಸ್ವಾಮಿ ಜಾಮೀನಿಗಾಗಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರೂ ಜಾಮೀನು ಸಿಕ್ಕಿರಲಿಲ್ಲ. ಈಗ ಕೇಸಿನ ಎರಡನೇ ಆರೋಪಿ ಅಂಬಿಕಾ ಚಾಮರಾಜನಗರ ಜಿಲ್ಲಾ ಸೆಷನ್ಸ್ ನ್ಯಾಯಾಲಯದಲ್ಲಿ ನಿನ್ನೆ ಜಾಮೀನಿಗೆ ಅರ್ಜಿ ಸಲ್ಲಿಸಿ, ವೀಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರಾಗಿದ್ದಾಳೆ. ಇದನ್ನೂ ಓದಿ: ಕೊಪ್ಪಳದಲ್ಲಿ ಮಧುಗಿರಿ ಮೋದಿ ಹುಚ್ಚಾಟ, ಎಫ್‍ಐಆರ್ ದಾಖಲು
ಸರ್ಕಾರದ ಪರ ಜಾಮೀನು ಅರ್ಜಿಗೆ ತಕರಾರು ಸಲ್ಲಿಸಲು ಸಮಯಾವಕಾಶ ಕೋರಿದ ಹಿನ್ನೆಲೆಯಲ್ಲಿ ಮುಂದಿನ ವಿಚಾರಣೆಯನ್ನು ಅ.29ಕ್ಕೆ ನ್ಯಾಯಾಧೀಶರು ಮುಂದೂಡಿದ್ದಾರೆ. 2018 ರ ಡಿ.14 ರಂದು ನಡೆದಿದ್ದ ಈ ದುರಂತದಲ್ಲಿ 17 ಮಂದಿ ಮೃತಪಟ್ಟು, ನೂರಾರು ಮಂದಿ ಅಸ್ವಸ್ಥಗೊಂಡಿದ್ದರು. ವಿಷ ಪ್ರಸಾದ ಸೇವಿಸಿದ ಕೆಲವರು ಈಗಲೂ ಅದರ ಅಡ್ಡ ಪರಿಣಾಮದಿಂದ ನರಳುತ್ತಿರುವುದು ಈ ಕೃತ್ಯದ ಭೀಕರತೆಗೆ ಸಾಕ್ಷಿಯಾಗಿತ್ತು.
ಧಾರವಾಡ: ಧಾರವಾಡ ಜಿಲ್ಲಾ ಪಂಚಾಯತಿ ಸದಸ್ಯ ಯೋಗೀಶ್‍ಗೌಡ ಹತ್ಯೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಮಾಜಿ ಸಚಿವ ವಿನಯ್ ಕುಲಕರ್ಣಿ ಜಾಮೀನು ಅರ್ಜಿ ವಿಚಾರಣೆಯನ್ನು ಧಾರವಾಡ ಹೈಕೋರ್ಟ್ ನಾಳೆಗೆ ಮುಂದೂಡಿದೆ.
ಧಾರವಾಡ ಹೈಕೋರ್ಟ್‍ನಲ್ಲಿ ಇಡೀ ದಿನ ನಡೆದ ಜಾಮೀನು ಅರ್ಜಿ ವಿಚಾರಣೆಯಲ್ಲಿ ಸಿಬಿಐ ಮತ್ತು ಮಾಜಿ ಸಚಿವ ವಿನಯ್ ಕುಲಕರ್ಣಿ ಪರ ವಕೀಲರ ಮಧ್ಯೆ ವಾದ ಪ್ರತಿವಾದ ನಡೆಯಿತು. ಸಿಬಿಐ ವಕೀಲರ ಪ್ರತಿವಾದ ಪೂರ್ಣಗೊಳ್ಳದ ಹಿನ್ನೆಲೆ ವಿಚಾರಣೆಯನ್ನು ಹೈಕೋರ್ಟ್ ನಾಳೆಗೆ ಮುಂದೂಡಿದ್ದು, ನಾಳೆ ಸಿಬಿಐ ಪರ ವಕೀಲರು ಪುನಃ ಪ್ರತಿವಾದ ಮುಂದುವರಿಸಲಿದ್ದಾರೆ.
ದಿನವಿಡಿ ನಡೆದ ವಾದ ಪ್ರತಿವಾದ ಹಿನ್ನೆಲೆ ನಾಳೆಗೆ ಹೆಚ್ಚಿನ ವಿಚಾರಣೆಗಾಗಿ ನ್ಯಾಯಾಲಯ ಅರ್ಜಿ ವಿಚಾರಣೆಯನ್ನು ಮುಂದೂಡಿಕೆ ಮಾಡಿದೆ. ಸಿಬಿಐ ಪರ ವಕೀಲರು ದೆಹಲಿಯಿಂದ ವಿಡಿಯೋ ಕಾನ್ಫರೆನ್ಸ್‍ನಲ್ಲಿಯೇ ಪ್ರತಿವಾದ ಮಂಡಿಸಿದರು. ಸಿಬಿಐ ಪರ ವಕೀಲರು ನಾಳೆ ಇನ್ನು ಹಲವು ದಾಖಲೆಗಳನ್ನು ನ್ಯಾಯಾಲಯಕ್ಕೆ ನೀಡಲಿದ್ದಾರೆ ಎಂದು ತಿಳಿದು ಬಂದಿದೆ.
ಮಾಜಿ ಸಚಿವ ವಿನಯ್ ಕುಲಕರ್ಣಿ ಅವರನ್ನು ಕಳೆದ ನವಂಬರ್ 20 ರಂದು ಸಿಬಿಐ ಬಂಧಿಸಿತ್ತು. ಪ್ರಸ್ತುತ ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ.
ಹುಬ್ಬಳ್ಳಿ: ಜಿಲ್ಲೆಯ ಪ್ರತಿಷ್ಠಿತ ಕೆಎಲ್‍ಇ ಕಾಲೇಜಿನಲ್ಲಿ ಪಾಕ್ ಪರ ಘೋಷಣೆ ಕೂಗಿದ ಹಿನ್ನೆಲೆಯಲ್ಲಿ ಮೂವರು ಕಾಶ್ಮೀರಿ ವಿದ್ಯಾರ್ಥಿಗಳ ಪರ ಜಾಮೀನು ಅರ್ಜಿ ಸಲ್ಲಿಸಲು ಇಂದು ಬೆಂಗಳೂರಿನ ವಕೀಲರ ತಂಡ ಹುಬ್ಬಳ್ಳಿಗೆ ಆಗಮಿಸಿದೆ.
ಜಾಮೀನು ಅರ್ಜಿ ಸಲ್ಲಿಸಲು 7 ಜನ ವಕೀಲರ ತಂಡ ಆಗಮಿಸಿದ್ದು, ಹುಬ್ಬಳ್ಳಿಯ 2ನೇ ಜೆಎಂಎಫ್‍ಸಿ ನ್ಯಾಯಾಲಯದಲ್ಲಿ ಬೆಂಗಳೂರಿನ ವಕೀಲರು ಜಾಮೀನು ಅರ್ಜಿ ಸಲ್ಲಿಸಲಿದ್ದಾರೆ. ಮಾರ್ಚ್ 5ರೊಳಗೆ ಜಾಮೀನು ಅರ್ಜಿ ಸಲ್ಲಿಕೆ ಕುರಿತು ತಕರಾರು ಅರ್ಜಿ ಸಲ್ಲಿಸಲು ಸಹಾಯಕ ಸರ್ಕಾರಿ ಅಭಿಯೋಜಕರಿಗೆ 5ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಸೂಚಿಸಿತ್ತು. ಈ ಹಿನ್ನೆಲೆ ಇಂದು ಜಾಮೀನು ಅರ್ಜಿ ಸಲ್ಲಿಸಲು ನ್ಯಾಯಾವಾದಿಗಳು ಆಗಮಿಸಿದ್ದಾರೆ. ಇಂದು ಜಾಮೀನು ಅರ್ಜಿ ಸಲ್ಲಿಕೆಯಾದರೆ ಇಂದೇ ವಿಚಾರಣೆ ನಡೆಯುವ ಸಾಧ್ಯತೆ ದಟ್ಟವಾಗಿದೆ.
ಬೆಂಗಳೂರಿನಿಂದ ಆಗಮಿಸಿದ ವಕೀಲರು ಬಿಗಿ ಪೊಲೀಸ್ ಬಂದೋಬಸ್ತ್ ಮಧ್ಯೆ ಖಾಸಗಿ ಹೊಟೇಲ್‍ನಲ್ಲಿ ಉಳಿದುಕೊಂಡಿದ್ದು, ಇಂದು ಕೋರ್ಟಿಗೆ ಭೇಟಿ ನೀಡಿ ಜಾಮೀನು ಅರ್ಜಿ ಸಲ್ಲಿಕೆ ಮಾಡಲಿದ್ದಾರೆ. ಆರೋಪಿಗಳ ನ್ಯಾಯಾಂಗ ಬಂಧನ ಮಾರ್ಚ್ 7ರಂದು ಮುಕ್ತಾಯಗೊಳ್ಳಲಿದ್ದು, ಇಂದು ಜಾಮೀನು ಅರ್ಜಿ ಸಲ್ಲಿಕೆ ಮಾಡುತ್ತಿದ್ದಾರೆ.
ಬೆಂಗಳೂರಿನ ವಕೀಲರ ತಂಡ ಇಂದು ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ಸಲ್ಲಿಕೆ ಮಾಡುತ್ತಿರುವುದರಿಂದ ಬುಧವಾರದಿಂದಲೇ ಹುಬ್ಬಳ್ಳಿ ನ್ಯಾಯಾಲಯದ ಸುತ್ತಮುತ್ತ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ. ಹುಬ್ಬಳ್ಳಿ-ಧಾರವಾಡ ಮಹಾನಗರ ಪೊಲೀಸ್ ಕಮೀಷನರೇಟ್‍ನ ಶ್ವಾನದಳದಿಂದ ಬುಧವಾರ ಸಂಜೆಯಿಂದಲೇ ಪರಿಶೀಲನೆ ನಡೆಸಲಾಗುತ್ತಿದೆ.