Tag: ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯ

  • ಮೊಬೈಲಿನಲ್ಲಿ ದೆಹಲಿಯ ಹಿಂಸಾತ್ಮಕ ಪ್ರತಿಭಟನೆ ವಿಡಿಯೋ ಇಟ್ಟುಕೊಂಡಿದ್ದ ವ್ಯಕ್ತಿ ಅರೆಸ್ಟ್

    ಮೊಬೈಲಿನಲ್ಲಿ ದೆಹಲಿಯ ಹಿಂಸಾತ್ಮಕ ಪ್ರತಿಭಟನೆ ವಿಡಿಯೋ ಇಟ್ಟುಕೊಂಡಿದ್ದ ವ್ಯಕ್ತಿ ಅರೆಸ್ಟ್

    ಲಕ್ನೋ: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ದೆಹಲಿಯ ಜಾಮಿಯಾ ಮಿಲಿಯಾ ಇಸ್ಲಾಮಿಯಾ(ಜೆಎಂಐ) ವಿದ್ಯಾರ್ಥಿಗಳ ಪ್ರತಿಭಟನೆ ಹಿಂಸಾಚಾರ ತಿರುಗಿತ್ತು. ಈ ವಿಡಿಯೋವನ್ನು ತನ್ನ ಮೊಬೈಲಿನಲ್ಲಿ ಇಟ್ಟುಕೊಂಡಿದ್ದ ಎಂದು ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.

    ಉತ್ತರ ಪ್ರದೇಶದ ಚಂದೌಸಿ ಜಿಲ್ಲೆಯಲ್ಲಿ ಘಟನೆ ನಡೆದಿದ್ದು, ಖಚಿತ ಮಾಹಿತಿ ಮೇರೆಗೆ ವ್ಯಕ್ತಿಯನ್ನು ಹಾಗೂ ಆತನ ಮೊಬೈಲ್ ಪರಿಶೀಲಿಸಿದ್ದು, ಈ ವೇಳೆ ವಿಡಿಯೋಗಳಿರುವುದು ಬೆಳಕಿಗೆ ಬಂದಿದೆ. ತಕ್ಷಣ ಮೊಬೈಲನ್ನು ಮುಟ್ಟುಗೋಲು ಹಾಕಿಕೊಂಡು, ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಆರೋಪಿ ವಿರುದ್ಧ ಐಪಿಸಿ ಸೆಕ್ಷನ್ 505(ಯಾವುದೇ ವರ್ಗ ಅಥವಾ ಸುಮುದಾಯದ ವಿರುದ್ಧ ಅಪರಾಧ ಹಾಗೂ ಪ್ರಚೋದನೆ ನೀಡುವುದು) ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆ ಸೆಕ್ಷನ್ 66ಎ ಅಡಿ ಪ್ರಕರಣ ದಾಖಲಿಸಲಾಗಿದೆ.

    ಜೆಎಂಐ ವಿದ್ಯಾರ್ಥಿಗಳು ದೆಹಲಿಯಲ್ಲಿ ನಡೆಸಿದ ಪ್ರತಿಭಟನೆಯ ಡಜನ್‍ಗೂ ಅಧಿಕ ವಿಡಿಯೋಗಳನ್ನು ಮೊಬೈಲಿನಲ್ಲಿ ಇಟ್ಟುಕೊಂಡಿದ್ದನೆಂದು ಪೊಲೀಸರು ಆರೋಪಿಸಿದ್ದಾರೆ. ಇಂತಹ ವಿಡಿಯೋಗಳು ಸಮಾಜದಲ್ಲಿ ಶಾಂತಿ ಸುವ್ಯವಸ್ಥೆಯನ್ನು ಹದಗೆಡಿಸುತ್ತವೆ ಹೀಗಾಗಿ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

    ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳ ಪ್ರತಿಭಟನೆಗೆ ಸಂಬಂಧಿಸಿದ ಸುಮಾರು 10-11 ವಿಡಿಯೋಗಳು ಮೊಬೈಲಿನಲ್ಲಿದ್ದವು. ಈ ವಿಡಿಯೋಗಳು ಸಮಾಜದ ಶಾಂತಿ ಸುವ್ಯವಸ್ಥೆಗೆ ಧಕ್ಕೆ ತರುವಂತಿದ್ದವು ಎಂದು ಎಫ್‍ಐಆರ್‍ನಲ್ಲಿ ನಮೂದಿಸಲಾಗಿದೆ. ಪ್ರತಿಭಟನೆ ವೇಳೆ ಹಿಂಸಾಚಾರ ನಡೆಸಿದ್ದಕ್ಕಾಗಿ ದೆಹಲಿ ಪೊಲೀಸರು ಈಗಾಗಲೇ ಸ್ಥಳೀಯ ಕಾಂಗ್ರೆಸ್ ಮುಖಂಡರು ಸೇರಿದಂತೆ 10 ಜನ ಪ್ರತಿಭಟನಾಕಾರರನ್ನು ಬಂಧಿಸಿದ್ದಾರೆ. ಇದರಲ್ಲಿ ಜಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳನ್ನು ಬಂಧಿಸಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.

    ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ತೀವ್ರ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿತ್ತು. ಹೀಗಾಗಿ ಪೊಲೀಸರು ಮೂವರು ವಿದ್ಯಾರ್ಥಿಗಳು ಹಾಗೂ ಕಾಂಗ್ರೆಸ್‍ನ ಮಾಜಿ ಶಾಸಕನ ವಿರುದ್ಧ ಬುಧವಾರ ಎಫ್‍ಐಆರ್ ದಾಖಲಿಸಿದ್ದರು. ಡಿ.17ರಂದು ನಡೆದ ತೀವ್ರ ಪ್ರತಿಭಟನೆ ವೇಳೆ ವಿದ್ಯಾರ್ಥಿಗಳು ಹಾಗೂ ಪ್ರತಿಭಟನಾಕಾರರು ಪೊಲೀಸರ ಮೇಲೆ ಸಹ ಹಲ್ಲೆ ನಡೆಸಿದ್ದರು. ಹೀಗಾಗಿ ಪೊಲೀಸರು ಹಿಂಸಾತ್ಮಕ ಪ್ರತಿಭಟನಾಕಾರರ ವಿರುದ್ಧ ಗಲಭೆ ಹಾಗೂ ಸಾರ್ವಜನಿಕ ಆಸ್ತಿಪಾಸ್ತಿ ಹಾನಿ ತಡೆ ಕಾಯ್ದೆಯಡಿ ಎಫ್‍ಐಆರ್ ದಾಖಲಿಸಿದ್ದರು.

    ಪ್ರತಿಭಟನೆಯ ವೇಳೆ ದೆಹಲಿ ನಗರ ಸಾರಿಗೆ ಬಸ್ಸುಗಳಿಗೆ ಬೆಂಕಿ ಹಚ್ಚಿ, ರಸ್ತೆ ಹಾಗೂ ಸಾರೈ ಜುಲೆನಾ ಪೊಲೀಸ್ ಬೂತ್‍ನಲ್ಲಿದ್ದ ಹಲವು ವಾಹನಗಳನ್ನು ಧ್ವಂಸ ಮಾಡಿದ್ದರು. ಪರಿಸ್ಥಿತಿ ಹತೋಟಿಗೆ ಬಾರದೇ ಇದ್ದಾಗ ಗುಂಪು ಚದುರಿಸಲು ಪೊಲೀಸರು ಗ್ಯಾಸ್ ಫಿರಂಗಿ ಬಳಸಿದ್ದರು. ಆದರೂ ಪ್ರತಿಭಟನಾಕಾರರು ಗೇಟ್ ನಂ.4.7 ಹಾಗೂ 8ರಿಂದ ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದರು. ಆಗ ಪೊಲೀಸ್ ಸಿಬ್ಬಂದಿ ವಿಶ್ವವಿದ್ಯಾಲಯದೊಳಗೆ ಪ್ರವೇಶಿಸಿ ಹಿಂಸಾತ್ಮಕ ಪ್ರತಿಭನಾಕಾರರನ್ನು ಎಳೆತಂದು ಎಫ್‍ಐಆರ್ ದಾಖಲಿಸಿದ್ದರು.

    ಈ ಸಂದರ್ಭದಲ್ಲಿ ಹಲವು ಪೊಲೀಸ್ ಸಿಬ್ಬಂದಿಗೆ ತೀವ್ರ ಗಾಯಗಳಾಗಿದ್ದವು. ಇಷ್ಟಾದರೂ ಪ್ರತಿಭಟನಾಕಾರರು ಟಿಕೋನಾ ಪಾರ್ಕ್, ಝಾಕೀರ್ ನಗರ, ಧಲನ್ ಪೊಲೀಸ್ ಬೂತ್ ಬಳಿಯ ಸುಮಾರು 70 ರಿಂದ 80 ಬೈಕ್‍ಗಳನ್ನು ಧ್ವಂಸ ಮಾಡಿದ್ದರು.

  • ಸಿಎಎ, ಎನ್‌ಆರ್‌ಸಿ ದೇಶದಲ್ಲಿನ ಮುಸ್ಲಿಮರ ಮೇಲೆ ಪರಿಣಾಮ ಬೀರಲ್ಲ- ಜಮಾ ಮಸೀದಿ ಮೌಲ್ವಿ

    ಸಿಎಎ, ಎನ್‌ಆರ್‌ಸಿ ದೇಶದಲ್ಲಿನ ಮುಸ್ಲಿಮರ ಮೇಲೆ ಪರಿಣಾಮ ಬೀರಲ್ಲ- ಜಮಾ ಮಸೀದಿ ಮೌಲ್ವಿ

    ನವದೆಹಲಿ: ಪೌರತ್ವ ತಿದ್ದುಪಡಿ ಮಸೂದೆ ಹಾಗೂ ಎನ್‌ಆರ್‌ಸಿ ಕುರಿತು ದೇಶಾದ್ಯಂತ ಹೋರಾಟ ತೀವ್ರಗೊಂಡಿರುವ ಬೆನ್ನಲ್ಲೇ ದೆಹಲಿಯ ಜಮಾ ಮಸೀದಿಯ ಮೌಲ್ವಿ ಶಾಹಿ ಇಮಾಮ್ ಅಹ್ಮದ್ ಬುಖಾರಿ ಅವರ ಹೇಳಿಕೆ ಮಹತ್ವ ಪಡೆದುಕೊಂಡಿದ್ದು, ಕಾಯ್ದೆಯ ಜಾರಿಯಿಂದ ದೇಶದಲ್ಲಿನ ಮುಸ್ಲಿಮರ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

    ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ಎನ್‌ಆರ್‌ಸಿ ಜಾರಿಯಿಂದ ಭಾರತದಲ್ಲಿರುವ ಮುಸ್ಲಿಮರ ಮೇಲೆ ಯಾವುದೇ ರೀತಿಯ ಪರಿಣಾಮ ಬೀರುವುದಿಲ್ಲ. ಆದರೆ ಪಾಕಿಸ್ತಾನ, ಅಫ್ಘಾನಿಸ್ಥಾನ ಹಾಗೂ ಬಾಂಗ್ಲಾದೇಶದ ಮುಸ್ಲಿಮರನ್ನು ತಿರಸ್ಕರಿಸಲಾಗುತ್ತದೆ ಎಂದರು.

    ಪ್ರತಿಭಟನೆ ಮಾಡುವುದು ಪ್ರಜಾಪ್ರಭುತ್ವದ ಹಕ್ಕು. ಇದನ್ನು ಯಾರೂ ತಡೆಯಲು ಸಾಧ್ಯವಿಲ್ಲ. ಆದರೆ ಇದನ್ನು ಹತೋಟಿಯಲ್ಲಿಡುವುದು ಮುಖ್ಯ. ಹೀಗಾಗಿ ಭಾವನೆಗಳನ್ನು ಹಿಡಿತದಲ್ಲಿಟ್ಟುಕೊಳ್ಳಬೇಕು ಎಂದು ತಿಳಿಸಿದ್ದಾರೆ. ಅಲ್ಲದೆ ಸಿಎಎ ಮೂಲಕ ಪಾಕಿಸ್ತಾನ, ಅಫ್ಘಾನಿಸ್ಥಾನ ಹಾಗೂ ಬಾಂಗ್ಲಾದೇಶದ ಮುಸ್ಲಿಮರು ಭಾರತದ ನಾಗರಿಗತ್ವದಿಂದ ವಂಚಿತರಾಗಿದ್ದಾರೆ ಎಂದು ಶಾಹಿ ಇಮಾಮಿ ಸಯ್ಯದ್ ಅಹ್ಮದ್ ಬುಖಾರಿ ಬೇಸರ ವ್ಯಕ್ತಪಡಿಸಿದರು.

    ಇಮಾಮ್ ಅಹ್ಮದ್ ಬುಖಾರಿ ಅವರು ದೆಹಲಿ ಜಮಾ ಮಸೀದಿಯ ಮೌಲ್ವಿಯಾಗಿದ್ದಾರೆ. ದೇಶದ ಪ್ರತಿಷ್ಠಿತ ಮಸೀದಿಗಳ ಪೈಕಿ ಜಮಾ ಮಸೀದಿಯೂ ಒಂದು. ಜಮಿಯಾ ಮಿಲಿಯಾ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ತೀವ್ರ ಪ್ರತಿಭಟನೆ ನಡೆಸುತ್ತಿದ್ದು, ಹಿಂಸಾಚಾರಕ್ಕೆ ತಿರುಗಿದೆ. ಈ ಹಿನ್ನೆಲೆ ಇಮಾಮ್ ಅಹ್ಮದ್ ಬುಖಾರಿ ಅವರ ಹೇಳಿಕೆ ಮಹತ್ವ ಪಡೆದುಕೊಂಡಿದೆ.

    ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ತೀವ್ರ ಪ್ರತಿಭಟನೆ ನಡೆಸಿದ್ದು, ಹಿಂಸಾಚಾರಕ್ಕೆ ತಿರುಗಿತ್ತು. ಹೀಗಾಗಿ ಪೊಲೀಸರು ಮೂವರು ವಿದ್ಯಾರ್ಥಿಗಳು ಹಾಗೂ ಕಾಂಗ್ರೆಸ್‍ನ ಮಾಜಿ ಶಾಸಕನ ವಿರುದ್ಧ ಎಫ್‍ಐಆರ್ ದಾಖಲಿಸಿದ್ದಾರೆ. ಮಂಗಳವಾರ ನಡೆದ ತೀವ್ರ ಪ್ರತಿಭಟನೆ ವೇಳೆ ವಿದ್ಯಾರ್ಥಿಗಳು ಹಾಗೂ ಪ್ರತಿಭಟನಾಕಾರರು ಪೊಲೀಸರ ಮೇಲೆ ಸಹ ಹಲ್ಲೆ ನಡೆಸಿದ್ದರು. ಹೀಗಾಗಿ ಪೊಲೀಸರು ಹಿಂಸಾತ್ಮಕ ಪ್ರತಿಭಟನಾಕಾರರ ವಿರುದ್ಧ ಗಲಭೆ ಹಾಗೂ ಸಾರ್ವಜನಿಕ ಆಸ್ತಿಪಾಸ್ತಿ ಹಾನಿ ತಡೆ ಕಾಯ್ದೆಯಡಿ ಎಫ್‍ಐಆರ್ ದಾಖಲಿಸಿದ್ದಾರೆ.

    ವಿದ್ಯಾರ್ಥಿಗಳು ದೆಹಲಿ ನಗರ ಸಾರಿಗೆ ಬಸ್ಸುಗಳಿಗೆ ಬೆಂಕಿ ಹಚ್ಚಿದ್ದಾರೆ. ರಸ್ತೆ ಹಾಗೂ ಸಾರೈ ಜುಲೆನಾ ಪೊಲೀಸ್ ಬೂತ್‍ನಲ್ಲಿದ್ದ ಹಲವು ವಾಹನಗಳನ್ನು ಧ್ವಂಸ ಮಾಡಿದ್ದಾರೆ. ಪರಿಸ್ಥಿತಿ ಹತೋಟಿಗೆ ಬಾರದೇ ಇದ್ದಾಗ ಗುಂಪು ಚದುರಿಸಲು ಪೊಲೀಸರು ಗ್ಯಾಸ್ ಫಿರಂಗಿ ಬಳಸಿದ್ದಾರೆ. ಆದರೂ ಪ್ರತಿಭಟನಾಕಾರರು ಗೇಟ್ ನಂ.4.7 ಹಾಗೂ 8ರಿಂದ ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದರು. ಆಗ ಪೊಲೀಸ್ ಸಿಬ್ಬಂದಿ ವಿಶ್ವವಿದ್ಯಾಲಯದೊಳಗೆ ಪ್ರವೇಶಿಸಿ ಹಿಂಸಾತ್ಮಕ ಪ್ರತಿಭನಾಕಾರರನ್ನು ಎಳೆತಂದು ಎಫ್‍ಐಆರ್ ದಾಖಲಿಸಿದ್ದಾರೆ.

    ಈ ಸಂದರ್ಭದಲ್ಲಿ ಹಲವು ಪೊಲೀಸ್ ಸಿಬ್ಬಂದಿಗೆ ತೀವ್ರ ಗಾಯಗಳಾಗಿವೆ. ಇಷ್ಟಾದರೂ ಪ್ರತಿಭಟನಾಕಾರರು ಟಿಕೋನಾ ಪಾರ್ಕ್, ಝಾಕೀರ್ ನಗರ, ಧಲನ್ ಪೊಲೀಸ್ ಬೂತ್ ಬಳಿಯ ಸುಮಾರು 70 ರಿಂದ 80 ಬೈಕ್‍ಗಳನ್ನು ಧ್ವಂಸ ಮಾಡಿದ್ದರು.

  • ಜಾಮಿಯಾ ವಿವಿಯ 3 ವಿದ್ಯಾರ್ಥಿಗಳು, ಮಾಜಿ ಕೈ ಶಾಸಕನ ವಿರುದ್ಧ ಎಫ್‍ಐಆರ್

    ಜಾಮಿಯಾ ವಿವಿಯ 3 ವಿದ್ಯಾರ್ಥಿಗಳು, ಮಾಜಿ ಕೈ ಶಾಸಕನ ವಿರುದ್ಧ ಎಫ್‍ಐಆರ್

    – ಪೊಲೀಸರ ಮೇಲೆ ಕಲ್ಲು ತೂರಾಟ ಹಿನ್ನೆಲೆ ಎಫ್‍ಐಆರ್
    – ಬಸ್, ಕಾರು, ಬೈಕ್‍ಗಳಿಗೆ ಬೆಂಕಿ

    ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ದೇಶದ ಬಹುತೇಕ ರಾಜ್ಯಗಳಲ್ಲಿ ಹೋರಾಟ ತೀವ್ರ ಸ್ವರೂಪ ಪಡೆದಿದ್ದು, ದೆಹಲಿಯಲ್ಲಿಯೂ ಹಿಂಸಾಚಾರಕ್ಕೆ ತಿರುಗಿದೆ. ಈ ಪೈಕಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ತೀವ್ರ ಪ್ರತಿಭಟನೆ ನಡೆಸಿ, ಹಿಂಸಾಚಾರ ನಡೆಸಿದ್ದರು. ಹೀಗಾಗಿ ಪೊಲೀಸರು ಮೂವರು ವಿದ್ಯಾರ್ಥಿಗಳು ಹಾಗೂ ಕಾಂಗ್ರೆಸ್‍ನ ಮಾಜಿ ಶಾಸಕನ ವಿರುದ್ಧ ಎಫ್‍ಐಆರ್ ದಾಖಲಿಸಿದ್ದಾರೆ.

    ಮಂಗಳವಾರ ನಡೆದ ತೀವ್ರ ಪ್ರತಿಭಟನೆ ವೇಳೆ ವಿದ್ಯಾರ್ಥಿಗಳು ಹಾಗೂ ಪ್ರತಿಭಟನಾಕಾರರು ಪೊಲೀಸರ ಮೇಲೆ ಸಹ ಹಲ್ಲೆ ನಡೆಸಿದ್ದರು. ಹೀಗಾಗಿ ಪೊಲೀಸರು ಮೂವರು ವಿದ್ಯಾರ್ಥಿಗಳು ಹಾಗೂ ಕಾಂಗ್ರೆಸ್‍ನ ಮಾಜಿ ಶಾಸಕನ ವಿರುದ್ಧ ಎಫ್‍ಐಆರ್ ದಾಖಲಿಸಿದ್ದಾರೆ. ಗಲಭೆ ಹಾಗೂ ಸಾರ್ವಜನಿಕ ಆಸ್ತಿಪಾಸ್ತಿ ಹಾನಿ ತಡೆ ಕಾಯ್ದೆಯಡಿ ಎಫ್‍ಐಆರ್ ದಾಖಲಿಸಲಾಗಿದೆ.

    ಒಟ್ಟು ಏಳು ಜನರ ವಿರುದ್ಧ ಎಫ್‍ಐಆರ್ ಹಾಕಲಾಗಿದ್ದು, ಕಾಂಗ್ರೆಸ್‍ನ ಮಾಜಿ ಶಾಸಕ ಆಸಿಫ್ ಖಾನ್ ಹಾಗೂ ಸ್ಥಳೀಯ ರಾಜಕಾರಣಿಗಳಾದ ಅಶು ಖಾನ್, ಮುಸ್ತಫಾ, ಹೈದರ್, ಎಐಎಸ್‍ಎ ಸದಸ್ಯ ಚಂದನ್ ಕುಮಾರ್, ಎಸ್‍ಐಓ ಸದಸ್ಯ ಆಸಿಫ್ ತನ್ಹಾ ಹಾಗೂ ಸಿವೈಎಸ್‍ಎಸ್ ಸದಸ್ಯ ಖಾಸಿಂ ಉಸ್ಮಾನಿ ಇವರ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

    ಲೋಕಸಭೆಯಲ್ಲಿ ಚರ್ಚೆ ನಡೆಯುತ್ತಿರುವಾಗಿನಿಂದ ರಾಷ್ಟ್ರಪತಿಗಳು ಮಸೂದೆಗೆ ಸಹಿ ಹಾಕುವವರೆಗೆ ಸಾಕಷ್ಟು ಜನ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಪ್ರತಿಭಟನೆ ನಡೆಸಿದ್ದಾರೆ. ಹೀಗಾಗಿ ವಿಶ್ವವಿದ್ಯಾಲಯದ ಸುತ್ತ ಸಾಕಷ್ಟು ಪೊಲೀಸರನ್ನು ನಿಯೋಜಿಸಿ ಬಿಗಿ ಭದ್ರತೆ ಒದಗಿಸಲಾಗಿತ್ತು. ಈ ವೇಳೆ ಪ್ರತಿಭಟನೆ ನಡೆಸಲು ಪುರುಷರು, ಮಹಿಳೆಯರು ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಸೇರಿದಂತೆ ಬಹುತೇಕರು ವಿಶ್ವವಿದ್ಯಾಲಯದ ಕಡೆಯಿಂದ ಬಂದರು ಎಂದು ಎಫ್‍ಐಆರ್ ನಲ್ಲಿ ಉಲ್ಲೇಖಿಸಲಾಗಿದೆ.

    ಹೊರ ಬರುತ್ತಿದ್ದಂತೆ ಆಸಿಫ್ ಹಾಗೂ ಅಶು ಪ್ರಚೋದನಾತ್ಮ ಹೇಳಿಕೆಗಳನ್ನು ನೀಡಿ ಪ್ರತಿಭಟನಾಕಾರರನ್ನು ಪ್ರಚೋದಿಸಿದರು. ಅಲ್ಲದೆ ಸಿಎಎ ಹಾಗೂ ಎನ್‍ಆರ್‍ಸಿ ವಿರುದ್ಧ ಘೋಷಣೆಗಳನ್ನು ಕೂಗಲು ಪ್ರಾರಂಭಿಸಿದರು. ನಂತರ ಮಥುರಾ ರಸ್ತೆ ಮೂಲಕ ಜಾಥಾ ನಡೆಸಿದರು. ಈ ವೇಳೆ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿ ಪೊಲೀಸರ ಮೇಲೆ ಕಲ್ಲು ತೂರಾಟ ಆರಂಭವಾಯಿತು. ಅಲ್ಲದೆ ದೆಹಲಿ ನಗರ ಸಾರಿಗೆ ಬಸ್‍ಗಳಿಗೆ ಬೆಂಕಿ ಹಚ್ಚಲು ಪ್ರಾರಂಭಿಸಿದರು ಎಂದು ಎಫ್‍ಐಆರ್ ನಲ್ಲಿ ನಮೂದಿಸಲಾಗಿದೆ.

    ರಸ್ತೆ ಹಾಗೂ ಸಾರೈ ಜುಲೆನಾ ಪೊಲೀಸ್ ಬೂತ್‍ನಲ್ಲಿದ್ದ ಹಲವು ವಾಹನಗಳನ್ನು ಧ್ವಂಸ ಮಾಡಿದರು. ನಂತರ ವಿಶ್ವವಿದ್ಯಾಲಯದ ಕಡೆಗೆ ತೆರಳಿದರು. ಶಾಂತಿ ಕಾಪಾಡುವಂತೆ ಪ್ರತಿಭಟನಾಕಾರರಿಗೆ ಮನವಿ ಮಾಡಿದರೂ ಕೇಳಲಿಲ್ಲ. ಕೆಲವು ಅಂಬುಲೆನ್ಸ್ ಗಳಿಗೂ ಬೆಂಕಿ ಹಚ್ಚಿದರು ಎಂದು ಎಫ್‍ಐಆರ್ ನಲ್ಲಿ ತಿಳಿಸಲಾಗಿದೆ.

    ಪರಿಸ್ಥಿತಿ ಹತೋಟಿಗೆ ಬರದಿದ್ದಾಗ ಗುಂಪು ಚದುರಿಸಲು ಗ್ಯಾಸ್ ಫಿರಂಗಿ ಬಳಸಿದೆವು. ಆದರೂ ಪ್ರತಿಭಟನಾಕಾರರು ಗೇಟ್ ನಂ.4,7 ಹಾಗೂ 8ರಿಂದ ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸುತ್ತಿದ್ದರು. ಆಗ ಪೊಲೀಸ್ ಸಿಬ್ಬಂದಿ ವಿಶ್ವವಿದ್ಯಾಲಯದೊಳಗೆ ಪ್ರವೇಶಿಸಿ ಹಿಂಸಾತ್ಮಕ ಪ್ರತಿಭನಾಕಾರರನ್ನು ಎಳೆತಂದರು ಎಂದು ಎಫ್‍ಐಆರ್ ನಲ್ಲಿ ಉಲ್ಲೇಖಿಸಲಾಗಿದೆ.

    ಈ ಸಂದರ್ಭದಲ್ಲಿ ಹಲವು ಪೊಲೀಸ್ ಸಿಬ್ಬಂದಿಗೆ ತೀವ್ರ ಗಾಯಗಳಾಗಿವೆ. ಇಷ್ಟಾದರೂ ಪ್ರತಿಭಟನಾಕಾರರು ಟಿಕೋನಾ ಪಾರ್ಕ್, ಝಾಕೀರ್ ನಗರ, ಧಲನ್ ಪೊಲೀಸ್ ಬೂತ್ ಬಳಿಯ ಸುಮಾರು 70 ರಿಂದ 80 ಬೈಕ್‍ಗಳನ್ನು ಧ್ವಂಸ ಮಾಡಿದ್ದಾರೆ ಎಂದು ಉಲ್ಲೇಖಿಸಲಾಗಿದೆ.

    ಎಫ್‍ಐಆರ್ ದಾಖಲಿಸಿದ ಪೊಲೀಸರ ಕ್ರಮವನ್ನು ಅಖಿಲ ಭಾರತ ವಿದ್ಯಾರ್ಥಿ ಸಂಘ(ಎಐಎಸ್‍ಎ) ಖಂಡಿಸಿದ್ದು, ವಿಶ್ವವಿದ್ಯಾಲಯದ ಮೂವರು ವಿದ್ಯಾರ್ಥಿಗಳ ವಿರುದ್ಧ ಪೊಲೀಸರು ಎಫ್‍ಐಆರ್ ದಾಖಲಿಸಿದ್ದಾರೆ. ನಾವು ಸಂವಿಧಾನದ ಪರವಾಗಿ ಹೋರಾಟ ನಡೆಸುತ್ತಿದ್ದೇವೆ. ಭಾರತದ ಜಾತ್ಯಾತೀತತೆಗಾಗಿ ಹೋರಾಟ ನಡೆಸುತ್ತಿದ್ದೇವೆ ಎಂದು ಹೇಳಿಕೊಂಡಿದೆ.

    ಕಾಂಗ್ರೆಸ್‍ನ ಮಾಜಿ ಶಾಸಕ ಆಸಿಫ್ ಖಾನ್ ಪ್ರತಿಕ್ರಿಯಿಸಿ, ನಾವು ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದೆವು. ಆದರೆ ಜಾಮಿಯಾ ನಗರದ ಎಸ್‍ಎಚ್‍ಒ ಈ ಕುರಿತು ವಿಡಿಯೋ ಬಿಡುಗಡೆ ಮಾಡಿದ್ದಾರೆ. ಶಾಹೀನ್ ಬಾಗ್ ನಲ್ಲಿ ನಾವು ಶಾಂತಿಯುತವಾಗಿ ಪ್ರತಿಭಟನೆ ನಡೆಸಿದ್ದೇವೆ. ಆದರೆ ನ್ಯೂ ಫ್ರೆಂಡ್ಸ್ ಕಾಲೋನಿ ಹಾಗೂ ಜಾಮಿಯಾ ನಗರದಲ್ಲಿ ಏಕೆ ಪ್ರಕರಣ ದಾಖಲಿಸಿದ್ದಾರೆ ಎಂದು ಪ್ರಶ್ನಿಸಿದರು.