Tag: ಜಾಫರ್ ಷರೀಫ್

  • ಕ್ರಾಂತಿಕಾರಿ ಬದಲಾವಣೆಯ ಹರಿಕಾರ ಜಾಫರ್ ಷರೀಫ್

    ಕ್ರಾಂತಿಕಾರಿ ಬದಲಾವಣೆಯ ಹರಿಕಾರ ಜಾಫರ್ ಷರೀಫ್

    ಬೆಂಗಳೂರು: ಮಾಜಿ ಕೇಂದ್ರ ಸಚಿವ, ಕಾಂಗ್ರೆಸ್ ನಾಯಕ ಜಾಫರ್ ಷರೀಫ್ ಕೇಂದ್ರ ರೈಲ್ವೇ ಇಲಾಖೆ ಸಚಿವರಾಗಿದ್ದ ವೇಳೆ ಇಲಾಖೆಯಲ್ಲಿ  ಕ್ರಾಂತಿಕಾರಿ ಬದಲಾವಣೆ ಮಾಡಿದ್ದರು. ಅದರಲ್ಲೂ ರಾಜ್ಯದಲ್ಲಿ ರೈಲು ಸಂಪರ್ಕ ವ್ಯವಸ್ಥೆ ಬಗ್ಗೆ ಹೆಚ್ಚಿನ ಒತ್ತು ನೀಡಿದ್ದರು.

    ಸಚಿವರಾಗಿ ಉತ್ತರ ಕರ್ನಾಟಕ ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಅವರು ನೀಡಿದ ಕೊಡುಗೆಯನ್ನು ಹಲವು ನಾಯಕರು ನೆನಪಿಸಿಕೊಂಡಿದ್ದು, ಜಾಫರ್ ಷರೀಫ್ ನಿಧನಕ್ಕೆ ರಾಯಚೂರಿನ ಜನತೆ ಸಂತಾಪ ವ್ಯಕ್ತಪಡಿಸಿದ್ದಾರೆ. ಷರೀಫ್ ಅವರು ಸಚಿವರಾಗಿದ್ದ ವೇಳೆ ರಾಯಚೂರು ರೈಲ್ವೇ ನಿಲ್ದಾಣಕ್ಕೆ ಹೊಸ ರೂಪ ನೀಡಿದ್ದರು. ಅಲ್ಲದೇ ಬ್ರಾಡ್ ಗೇಜ್ ವ್ಯವಸ್ಥೆಯನ್ನು ಜಾರಿಗೆ ಮಾಡಿದ್ರು. ಕೋಲ್ಹಾಪುರ ಬೆಂಗಳೂರು ನಡುವೆ ಓಡಾಡುವ ರೈಲಿಗೆ ಕಿತ್ತೂರು ರಾಣಿ ಚೆನ್ನಮ್ಮ ಎಕ್ಸ್ ಪ್ರೆಸ್ ಎಂದು ನಾಮಕರಣ ಮಾಡಿದ್ದರು.

    ರಾಯಬಾಗ ಬಳಿ ಶೇಡಬಾಳ ರೈಲು ನಿಲ್ದಾಣವನ್ನು ಬ್ರಾಡ್ ಗೇಜ್‍ಗೆ ಬದಲಾಯಿಸಿಲು ಅಡಿಗಲ್ಲು ಹಾಕಿದ್ದರು. ಅವರು ಈ ಭಾಗದ ಜನರೊಂದಿಗೆ ದೀರ್ಘ ಕಾಲದ ನಂಟು ಹೊಂದಿದ್ದರು. ಹೀಗಾಗಿ ಜಾಫರ್ ಷರೀಫ್‍ರನ್ನ ಈ ಭಾಗದ ಜನತೆ ಎಂದಿಗೂ ಮರೆಯುವುದಿಲ್ಲ.

    ಜಾಫರ್ ಷರೀಫ್ ಅವರ ಅಂತಿಮ ದರ್ಶನ ಪಡೆದು ಮಾತನಾಡಿದ ಕಾಂಗ್ರೆಸ್ ಮುಖಂಡ ಎಚ್‍ಕೆ ಪಾಟೀಲ್, ದೇಶಕ್ಕೆ ಜಾಫರ್ ಷರೀಫ್‍ರ ಕೊಡುಗೆ ಅಪಾರ. ಅವರ ಧೀಮಂತ ನಡೆ, ಮಾತುಗಳು ಈಗಲೂ ನೆನಪಿವೆ. ಅಲ್ಪಸಂಖ್ಯಾತರಿಂದ ಹಿಡಿದು ಎಲ್ಲರ ಅಚ್ಚುಮೆಚ್ಚಿನ ನಾಯಕರಾಗಿದ್ದು, ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದರು ಸಂತಾಪ ಸೂಚಿಸಿದರು.

    ಇದೇ ವೇಳೆ ಮಾತನಾಡಿದ ಸಚಿವ ಡಿಕೆ ಶಿವಕುಮಾರ್ ಅವರು, ಜಾಫರ್ ಷರೀಫ್ ಅವರು ಮಕ್ಕಳ ಜೊತೆ ಆಟ ಆಡುತ್ತಿದ್ದರು. ವಿದ್ಯಾರ್ಥಿ ದಿನಗಳಿಂದ ಎಲ್ಲಾ ಸಮಯದಲ್ಲೂ ಹೆಚ್ಚು ಪ್ರೋತ್ಸಾಹ ನೀಡಿದ್ದರು. ಯೂತ್ ಕಾಂಗ್ರೆಸ್ ಅಧ್ಯಕ್ಷನಾದ ದಿನದಿಂದ ಅವರ ಜೊತೆ ಕೆಲಸ ಮಾಡಿಕೊಂಡು ಬಂದಿದ್ದೇನೆ. ಆದರೆ ಅವರ ಸಾವು ಆಘಾತ ಉಂಟುಮಾಡಿದೆ. ಅಂಬರೀಶ್, ಅನಂತ ಕುಮಾರ್ ಜೊತೆ ಜಾಫರ್ ಹೋಗಿರುವುದು ನಾಡಿಗೆ ದೊಡ್ಡ ನಷ್ಟ ಎಂದರು.

    ರಾಜಕೀಯದ ಅವಧಿಯಲ್ಲಿ ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರಿಗೆ ಆಪ್ತರಾಗಿದ್ದ ಜಾಫರ್ ಷರೀಫ್, ಪಿವಿ ನರಸಿಂಹರಾವ್ ಅವರ ಸರ್ಕಾರದಲ್ಲಿ ರೈಲ್ವೆ ಸಚಿವರಾಗಿದ್ದರು. ಬೆಂಗಳೂರು ಉತ್ತರ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ಅವರು ಮೂಲತಃ ಚಿತ್ರದುರ್ಗ ಜಿಲ್ಲೆಯವರಾಗಿದ್ದಾರೆ. ಷರೀಫ್ ಅವರ ಅಂತಿಮ ದರ್ಶನಕ್ಕೆ ಶಿವಾಜಿನಗರದ ಸ್ವಗೃಹದಲ್ಲಿ ಅವಕಾಶ ನೀಡಲಾಗಿದ್ದು, ಇಸ್ಲಾಂ ಧರ್ಮದ ಪ್ರಕಾರ ವಿಧಿವಿಧಾನ ನಡೆಸಿ ಅಂತ್ಯಕ್ರಿಯೆ ಸೋಮವಾರ ನಡೆಯಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮಾಜಿ ಕೇಂದ್ರ ಸಚಿವ, ಕೈ ನಾಯಕ ಜಾಫರ್ ಷರೀಫ್ ಇನ್ನಿಲ್ಲ

    ಮಾಜಿ ಕೇಂದ್ರ ಸಚಿವ, ಕೈ ನಾಯಕ ಜಾಫರ್ ಷರೀಫ್ ಇನ್ನಿಲ್ಲ

    ಬೆಂಗಳೂರು: ಮಾಜಿ ಕೇಂದ್ರ ಸಚಿವ, ಹಿರಿಯ ಕಾಂಗ್ರೆಸ್ ನಾಯಕ ಜಾಫರ್ ಷರೀಫ್(85) ನಿಧನರಾಗಿದ್ದಾರೆ.

    ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಜಾಫರ್ ಷರೀಫ್ ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿರುವ ಪೋರ್ಟಿಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಕಳೆದೆರಡು ದಿನದ ಹಿಂದೆ ಆಸ್ಪತ್ರೆ ಗೆ ದಾಖಲಾಗಿದ್ದ ಜಾಫರ್ ಚಿಕಿತ್ಸೆ ಫಲಕಾರಿಯಾಗದೇ ಭಾನುವಾರ ಬೆಳಗ್ಗೆ ಮೃತಪಟ್ಟಿದ್ದಾರೆ.

    ನವೆಂಬರ್ 3, 1933 ರಂದು ಜನಿಸಿದ್ದ ಷರೀಫ್ 1991-95ರ ಅವಧಿಯಲ್ಲಿ ಕೇಂದ್ರ ರೈಲ್ವೇ ಮಂತ್ರಿಯಾಗಿ ಕಾರ್ಯ ನಿರ್ವಹಿಸಿದ್ದರು. ದಿವಂಗತ ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರಿಗೆ ಆಪ್ತರಾಗಿದ್ದ ಜಾಫರ್ ಪಿ.ವಿ. ನರಸಿಂಹರಾವ್ ಸರ್ಕಾರದಲ್ಲಿ ರೈಲ್ವೆ ಸಚಿವರಾಗಿದ್ದರು.

    ಮೂಲತಃ ಚಿತ್ರದುರ್ಗ ಜಿಲ್ಲೆಯವರಾದ ಜಾಫರ್ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಉತ್ತರಪ್ರದೇಶದ ಜನ ಜಾತಿ ಮತ ಮೀರಿ ಹೋಗಿದ್ದಾರೆ: ಜಾಫರ್ ಷರೀಫ್

    ಉತ್ತರಪ್ರದೇಶದ ಜನ ಜಾತಿ ಮತ ಮೀರಿ ಹೋಗಿದ್ದಾರೆ: ಜಾಫರ್ ಷರೀಫ್

    ಬೆಂಗಳೂರು: ಕಾಂಗ್ರೆಸ್‍ನಲ್ಲಿ ಹಲವರು ಜಡ್ಡುಗಟ್ಟಿದವರು ಇದ್ದಾರೆ. ಶ್ರಮಜೀವಿಗಳು ಕಡಿಮೆ ಸಂಖ್ಯೆಯಲ್ಲಿದ್ದಾರೆ. ಉತ್ತರಪ್ರದೇಶ ಹಾಗು ಉತ್ತರಾಖಂಡ್‍ನಲ್ಲಿ ಬಿಜೆಪಿ ಬಹುಮತದ ಗೆಲವು ಅಚ್ಚರಿಯಲ್ಲ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಜಾಫರ್ ಷರೀಫ್ ಹೇಳಿದ್ದಾರೆ.

    ಈ ಪಂಚರಾಜ್ಯದ ಚುನಾವಣಾ ಫಲಿತಾಂಶ ಕರ್ನಾಟಕಕ್ಕೆ ಎಚ್ಚರಿಕೆ ಗಂಟೆಯಾಗಿದೆ. ಜನರು ಬದಲಾವಣೆಯನ್ನು ಬಯಸುತ್ತಿದ್ದಾರೆ. ಮುಸ್ಲಿಂ ಬಾಹುಳ್ಯವುಳ್ಳ ಕ್ಷೇತ್ರಗಳು ಬಿಜೆಪಿ ತೆಕ್ಕೆಗೆ ಬಂದಿರೋದು ನೋಡಿದ್ರೆ ಉತ್ತರಪ್ರದೇಶದ ಜನ ಜಾತಿ ಮತ ಮೀರಿ ಹೋಗಿದ್ದಾರೆ ಅನ್ನೋದಕ್ಕೆ ಸ್ಪಷ್ಟ ಉದಾಹರಣೆ ಆಗಿದೆ ಎಂದು ತಿಳಿಸಿದರು.

    ಚುನಾವಣೆಗಳು ಏಕಕಾಲಕ್ಕೆ ನಡೆಯಬೇಕು. ಮೋದಿ ಅವರು ಕೂಡ ಇದನ್ನೇ ಹೇಳ್ತಾರೆ. ಇದರಿಂದ ಚುನಾವಣಾ ಖರ್ಚುಗಳು ಕಡಿಮೆ ಆಗುತ್ತವೆ. ರಾಹುಲ್ ಗಾಂಧಿಗೆ ಆದರ್ಶವಿದೆ. ಜನರು ಕೂಡಲೇ ಅದನ್ನು ಒಪ್ಪಿಕೊಳ್ಳುವುದಿಲ್ಲ. ರಾಹುಲ್ ಬೆಳೆಯಲು ಸಮಯ ಬೇಕು. ಇಂದಿರಾಗಾಂಧಿ ಅಂತಹ ನಾಯಕಿಯೂ ಸೋಲನ್ನು ನೋಡಿರುವಾಗ ರಾಹುಲ್ ನಾಯಕತ್ವ ಬಲಿಷ್ಠವಾಗಿಲ್ಲ ಅನ್ನೋದು ತಪ್ಪಾಗುತ್ತದೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.