Tag: ಜಾನ್ ಸಿನಾ

  • ಮಡಕೆ ಒಡೆಯುವ ಜಾನ್ ಸಿನಾ ಫೋಟೋ ಹಂಚಿಕೊಂಡು ಶ್ರೀಕೃಷ್ಣ ಜನ್ಮಾಷ್ಟಮಿ ಶುಭಕೋರಿದ WWE

    ಮಡಕೆ ಒಡೆಯುವ ಜಾನ್ ಸಿನಾ ಫೋಟೋ ಹಂಚಿಕೊಂಡು ಶ್ರೀಕೃಷ್ಣ ಜನ್ಮಾಷ್ಟಮಿ ಶುಭಕೋರಿದ WWE

    ಮುಂಬೈ: ದೇಶಾದ್ಯಂತ ಇಂದು ಸಂಭ್ರಮದ ಶ್ರೀಕೃಷ್ಣ ಜನ್ಮಾಷ್ಟಮಿ ನಡೆದಿದೆ. ಭಾರತದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ನಿಮಿತ್ತ ವರ್ಲ್ಡ್ ವ್ರೆಸ್ಲಿಂಗ್ ಎಂಟರ್‌ಟೈನ್‌ಮೆಂಟ್‌ (WWE) ಡಬ್ಲ್ಯೂ ಡಬ್ಲ್ಯೂ ಇ ಸೂಪರ್ ಸ್ಟಾರ್ ಜಾನ್ ಸಿನಾ ಮಡಕೆ ಒಡೆಯುತ್ತಿರುವ ಫೋಟೋ ಹಂಚಿಕೊಂಡು ಶುಭ ಕೋರಿದೆ.

    ಭಾರತದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಹ್ಯಾಪಿ ಜನ್ಮಾಷ್ಟಮಿ ಇಂಡಿಯಾ ಎಂದು ಹ್ಯಾಷ್‌ಟ್ಯಾಗ್ ಬಳಕೆ ಮಾಡಿ ಫೋಟೋ ಹಂಚಿಕೊಂಡು WWE ಟ್ವೀಟ್ ಮಾಡಿದೆ. ಫೋಟೋದಲ್ಲಿ ಜಾನ್ ಸಿನಾ ಏಣಿಯ ಮೇಲೆ ಕೂತು ಎರಡು ಕೈ ಮೇಲೆತ್ತಿ ಮಡಕೆಯನ್ನು ಹಿಡಿದಿರುವಂತೆ ಚಿತ್ರಿಸಲಾಗಿದೆ. ಈ ಬಗ್ಗೆ ಕಾಮೆಂಟ್‌ ಮಾಡಿರುವ ನೆಟ್ಟಿಗರು, ಮನಿ ಇನ್‌ ದಿ ಬ್ಯಾಂಕ್‌ಗಿಂತ ಮೊಸರು ಇನ್‌ ದಿ ಬ್ಯಾಂಕ್‌ ಚೆನ್ನಾಗಿರುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಇದನ್ನೂ ಓದಿ: ರಾಷ್ಟ್ರಗೀತೆ ಹಾಡುತ್ತಿದ್ದ ಇಶನ್ ಕಿಶನ್‍ಗೆ ಕಚ್ಚಿದ ಜೇನುನೊಣ

    ಈ ಫೋಟೋ ಕಂಡ WWE ಅಭಿಮಾನಿಗಳು ಸಂಭ್ರಮಿಸಿದ್ದು, ತಮ್ಮ ನೆಚ್ಚಿನ WWE ಸೂಪರ್ ಸ್ಟಾರ್ ಈ ರೀತಿ ಕಾಣಿಸಿಕೊಂಡಿರುವುದಕ್ಕೆ ಸಂತಸ ಪಟ್ಟಿದ್ದಾರೆ. ಭಾರತ ಸೇರಿದಂತೆ ವಿಶ್ವದಾದ್ಯಂತ WWEಗೆ ಸಾಕಷ್ಟು ಅಭಿಮಾನಿಗಳಿದ್ದಾರೆ. ಇದನ್ನೂ ಓದಿ: ದಾಂಪತ್ಯ ಜೀವನದಲ್ಲಿ ಬಿರುಕು – ಚಹಲ್‍ರನ್ನು ಕೈಬಿಟ್ರಾ ಧನಶ್ರೀ?

    Live Tv
    [brid partner=56869869 player=32851 video=960834 autoplay=true]

  • ಮೂರನೇ ಮದುವೆಯಾದ WWE ಸೂಪರ್ ಸ್ಟಾರ್ ಜಾನ್ ಸಿನಾ

    ಮೂರನೇ ಮದುವೆಯಾದ WWE ಸೂಪರ್ ಸ್ಟಾರ್ ಜಾನ್ ಸಿನಾ

    – ಯಾರು ಈ ಶೇ ಶರಿಯತ್‍ಜಾಡೆ

    ಫ್ಲೋರಿಡಾ: ಡಬ್ಯ್ಲುಡಬ್ಯ್ಲುಇ ಸೂಪರ್ ಸ್ಟಾರ್ ಜಾನ್ ಸಿನಾ ಅವರು ಮೂರನೇ ಬಾರಿಗೆ ವಿವಾಹವಾಗಿದ್ದು, ತಮ್ಮ ಗೆಳತಿ ಶೇ ಶರಿಯತ್‍ಜಾಡೆ ಅವರನ್ನು ವರಿಸಿದ್ದಾರೆ.

    ಜಾನ್ ಸಿನಾ ಮದುವೆಯಾಗಿರುವುದನ್ನು ಅಧಿಕೃತವಾಗಿ ಘೋಷಣೆ ಮಾಡಿಲ್ಲ. ಆದರೆ ಫ್ಲೋರಿಡಾದ ಸುದ್ದಿ ಮಾಧ್ಯಮಗಳು ಜಾನ್ ಸಿನಾ ಮತ್ತು ಶೇ ಶರಿಯತ್‍ಜಾಡೆ ಅವರು ಬುಧವಾರ ನಡೆದ ಸರಳ ಮತ್ತು ಶಾಂತ ರೀತಿಯ ಮದುವೆ ಕಾರ್ಯಕ್ರಮದಲ್ಲಿ ವಿವಾಹವಾಗಿದ್ದಾರೆ ಎಂದು ವರದಿ ಮಾಡಿವೆ. ಸಿನಾ ತನಗಿಂತ 12 ವರ್ಷ ಚಿಕ್ಕವರಾದ ಶೇ ಶರಿಯತ್‍ಜಾಡೆ ಅವರನ್ನು ಮೂರನೇ ಬಾರಿಗೆ ವಿವಾಹವಾಗಿದ್ದಾರೆ.

    ಯಾರು ಈ ಶೇ ಶರಿಯತ್‍ಜಾಡೆ
    ಶೇ ಶರಿಯತ್‍ಜಾಡೆ ಇರಾನ್‍ನಲ್ಲಿ ಜನಿಸಿದರೂ ಕೆನಡಾದ ಪ್ರಜೆಯಾಗಿದ್ದಾರೆ. 31 ವರ್ಷದ ಶೇ, ಬ್ರಿಟಿಷ್ ಕೊಲಂಬಿಯಾ ವಿಶ್ವವಿದ್ಯಾಲಯದಿಂದ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ ಎಂಜಿನಿಯರಿಂಗ್ ಅಧ್ಯಯನ ಮಾಡಿದ್ದಾರೆ. ಜೊತೆಗೆ 2013ರಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಶರಿಯತ್‍ಜಾಡೆ ವ್ಯಾಂಕೋವರ್ ನಲ್ಲಿರುವ ಟೆಕ್ ಕಂಪನಿಯೊಂದರಲ್ಲಿ ಉತ್ಪನ್ನ ಮಟ್ಟದ ಕಾರ್ಯನಿರ್ವಾಹಕರಾಗಿ ಕೆಲಸ ಮಾಡುತ್ತಿದ್ದಾರೆ ಎಂದು ವರದಿಯಾಗಿದೆ.

    ಜಾನ್ ಸಿನಾ ಮತ್ತು ಶೇ ಶರಿಯತ್‍ಜಾಡೆ ಮೊದಲ ಬಾರಿಗೆ ಭೇಟಿಯಾಗಿದ್ದು, 2019ರಲ್ಲಿ ನಡೆದ ಡಬ್ಯ್ಲುಡಬ್ಯ್ಲುಇ ತಾರೆಯರ ಚಿತ್ರೀಕರಣದ ಸಮಯದಲ್ಲಿ. ಈ ವೇಳೆ ಪರಿಚಯವಾದ ಸಿನಾ ಮತ್ತು ಶರಿಯತ್‍ಜಾಡೆ ನಂತರ ಪ್ರೇಮಪಾಶದಲ್ಲಿ ಬಂಧಿಯಾಗಿದ್ದರು. ಇದಾದ ನಂತರ ಪ್ಲೇಯಿಂಗ್ ವಿತ್ ಫೈರ್ ಇನ್ ವ್ಯಾಂಕೋವರ್ ಎಂಬ ಕಾರ್ಯಕ್ರಮದಲ್ಲಿ ಮೊದಲ ಬಾರಿಗೆ ರೆಡ್ ಕಾರ್ಪೆಟ್‍ನಲ್ಲಿ ಕಾಣಿಸಿಕೊಂಡಿದ್ದರು.

    ಸಿನಾಗಿದು ಮೂರನೇ ಮದ್ವೆ
    43 ವರ್ಷದ ಜಾನ್ ಸಿನಾ ಈಗಾಗಲೇ ಇಬ್ಬರನ್ನು ಮದುವೆಯಾಗಿ ವಿಚ್ಛೇದನ ಪಡೆದುಕೊಂಡಿದ್ದಾರೆ. 1999ರಲ್ಲಿ ಡಬ್ಯ್ಲುಡಬ್ಯ್ಲುಇಗೆ ಪಾದಾರ್ಪಣೆ ಮಾಡಿದ ಸಿನಾ 2009ರಲ್ಲಿ ಡಬ್ಯ್ಲುಡಬ್ಯ್ಲುಇ ಲೇಡಿ ಸೂಪರ್ ಸ್ಟಾರ್ ಎಲಿಜಬೆತ್ ಹಬಡ್ರ್ಯೂ ಅವರನ್ನು ವಿವಾಹವಾಗಿದ್ದರು. ಆದರೆ 2012ರಲ್ಲಿ ಈ ಜೋಡಿ ವಿಚ್ಛೇದನ ಪಡೆದು ಬೇರೆಯಾಗಿತ್ತು. ಇದಾದ ನಂತರ ಸಿನಾ ಡಬ್ಯ್ಲುಡಬ್ಯ್ಲುಇದ ಲೇಡಿ ಕುಸ್ತಿಪಟು ನಿಕ್ಕಿ ಬೆಲ್ಲಾ ಅವರ ಜೊತೆ ಡೇಟಿಂಗ್‍ನಲ್ಲಿ ಇದ್ದರು.

    ಸುಮಾರು ಐದು ವರ್ಷಗಳ ಕಾಲ ಜೊತೆಗಿದ್ದ ಸಿನಾ ಮತ್ತು ನಿಕ್ಕಿ ಬೆಲ್ಲಾ ಜೋಡಿ 2018ರಲ್ಲಿ ತಾವು ಬೇರೆಯಾಗುತ್ತೇವೆ ಎಂದು ಘೋಷಿಸಿಕೊಂಡಿತ್ತು. ಇದಾದ ನಂತರ 2019ರಲ್ಲಿ ನಿಕ್ಕಿ ಡ್ಯಾನ್ಸರ್ ಆರ್ಟೆಮ್ ಜೊತೆ ಮದುವೆಯಾದರು. ಜೊತೆಗೆ ಅವರಿಗೆ 2020ರ ಜುಲೈನಲ್ಲಿ ಮಗು ಜನಿಸಿದೆ. ಈಗ ಸಿನಾ ಶೇ ಶರಿಯತ್‍ಜಾಡೆ ಅವರನ್ನು ವರಿಸಿದ್ದಾರೆ.

  • ಐಶ್ವರ್ಯಾ ರೈ ಫೋಟೋ ಹಂಚಿಕೊಂಡ WWE ಸೂಪರ್ ಸ್ಟಾರ್ ಜಾನ್ ಸಿನಾ

    ಐಶ್ವರ್ಯಾ ರೈ ಫೋಟೋ ಹಂಚಿಕೊಂಡ WWE ಸೂಪರ್ ಸ್ಟಾರ್ ಜಾನ್ ಸಿನಾ

    ಮುಂಬೈ: ಡಬ್ಲ್ಯೂಡಬ್ಲ್ಯೂಇ ಸೂಪರ್ ಸ್ಟಾರ್ ಜಾನ್ ಸಿನಾ ಅವರು ಇತ್ತೀಚೆಗೆ ಕೊರೊನಾ ಸೋಂಕಿಗೆ ತುತ್ತಾಗಿರುವ ನಟಿ ಐಶ್ವರ್ಯಾ ರೈ ಬಚ್ಚನ್ ಅವರ ಫೋಟೋವನ್ನು ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದಾರೆ.

    ಇತ್ತೀಚೆಗೆ ಅಮಿತಾಬ್ ಬಚ್ಚನ್ ಮತ್ತು ಅಭಿಷೇಕ್ ಅವರಿಗೆ ಮೊದಲು ಕೊರೊನಾ ಸೋಂಕು ಕಾಣಿಸಿಕೊಂಡಿತ್ತು. ನಂತರ ಐಶ್ವರ್ಯಾ ರೈ ಮತ್ತು ಮಗಳ ಆರಾಧ್ಯ ಬಚ್ಚನ್ ಅವರಿಗೆ ಕೊರೊನಾ ಕಾಣಿಸಿಕೊಂಡಿದ್ದು, ಕಳೆದ ಶುಕ್ರವಾರದವರೆಗೂ ಮನೆಯಲ್ಲೇ ಕ್ವಾರಂಟೈನ್ ಆಗಿದ್ದರು, ನಂತರ ಅವರನ್ನು ಕೂಡ ಮುಂಬೈನ ನಾನಾವತಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

    https://www.instagram.com/p/CCyL3cWFeWb/

    ಕೊರೊನಾ ಭೀತಿಯಿಂದ ಆಸ್ಪತ್ರೆ ಸೇರಿರುವ ಐಶ್ವರ್ಯಾ ರೈ ಅವರ ಫೋಟೋವನ್ನು ಜಾನ್ ಸಿನಾ ಅವರು ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದಾರೆ. ಆದರೆ ಯಾವುದೇ ಕ್ಯಾಪ್ಶನ್ ಬರೆದುಕೊಂಡಿಲ್ಲ. ಜುಲೈ 11ರಂದು ಅಮಿತಾಬ್ ಬಚ್ಚನ್ ಅವರಿಗೆ ಮತ್ತು ಅಭಿಷೇಕ್ ಬಚ್ಚನ್ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿತ್ತು. ಈ ಕುರಿತು ಅಂದು ಟ್ವೀಟ್ ಮಾಡಿದ್ದ ಬಿಗ್‍ಬಿ, ನನಗೆ ಕೊರೊನಾ ಸೋಂಕು ದೃಢಪಟ್ಟಿದೆ. ಆಸ್ಪತ್ರೆಗೆ ಸ್ಥಳಾಂತರಗೊಂಡಿದ್ದೇನೆ ಎಂದಿದ್ದರು. ಆಗ ಕೂಡ ಜಾನ್ ಸಿನಾ ಅಮಿತಾಬ್ ಬಚ್ಚನ್ ಮತ್ತು ಅಭಿಷೇಕ್ ಬಚ್ಚನ್ ಅವರ ಫೋಟೋವನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಶೇರ್ ಮಾಡಿಕೊಂಡಿದ್ದರು.

    https://www.instagram.com/p/CCi38tClP1V/

    ಡಬ್ಲ್ಯೂಡಬ್ಲ್ಯೂಇ ಸೂಪರ್ ಸ್ಟಾರ್ ಜಾನ್ ಸಿನಾ ಅವರು ಕುಸ್ತಿಯ ಜೊತೆಗೆ ಸಿನಿಮಾದಲ್ಲಿ ನಟನೆಯನ್ನು ಮಾಡುತ್ತಾರೆ. ಅವರಿಗೆ ಇಡೀ ವಿಶ್ವದಲ್ಲೇ ಅಭಿಮಾನಿಗಳಿದ್ದು, ಭಾರತದಲ್ಲೂ ಅವರ ಅಭಿಮಾನಿಗಳು ಇದ್ದಾರೆ. ಬಾಲಿವುಡ್ ಜೊತೆ ನಿಕಟ ಸಂಬಂಧವೊಂದಿರುವ ಅವರು ಕಳೆದ ಜೂನ್ 14ರಂದು ಆತ್ಮಹತ್ಯೆ ಮಾಡಿಕೊಂಡ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಫೋಟೋವನ್ನು ಕೂಡ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದರು.