Tag: ಜಾನ್ ಅಬ್ರಾಹಾಂ

  • ಜಾನ್ ಒಂದು ಹೇಳಿಕೆಯಿಂದ ಬಿತ್ತು ಭಾರೀ ಪೆಟ್ಟು – ಮಕಾಡೆ ಮಲಗಿದ `ಅಟ್ಯಾಕ್’

    ಜಾನ್ ಒಂದು ಹೇಳಿಕೆಯಿಂದ ಬಿತ್ತು ಭಾರೀ ಪೆಟ್ಟು – ಮಕಾಡೆ ಮಲಗಿದ `ಅಟ್ಯಾಕ್’

    ಒಂದು ಕಾಲದಲ್ಲಿ ಬಾಲಿವುಡ್‌ನಲ್ಲಿ ದಕ್ಷಿಣ ಭಾರತದ ಸಿನಿಮಾಗಳಿಗೆ ಮಣೆ ಹಾಕ್ತಿರಲಿಲ್ಲ. ಸೌತ್ ಚಿತ್ರಗಳನ್ನ ಅಲ್ಲಿನ ಕಲಾವಿದರನ್ನ ಬಾಲಿವುಡ್ ಮಂದಿ ಅಸಡ್ಡೆಯಿಂದ ನೋಡ್ತಿದ್ರು. ಈಗ ಭಾರತೀಯ ಚಿತ್ರರಂಗದ ಸ್ವರೂಪವೇ ಬದಲಾಗಿದೆ.

    ದಕ್ಷಿಣದ ಸಿನಿಮಾಗಳನ್ನ ಬಿಟೌನ್‌ನಲ್ಲಿ ಅಪ್ಪಿ ಒಪ್ಪಿಕೊಳ್ತಿದ್ದಾರೆ. ಅದಕ್ಕೆ ತಾಜಾ ಉದಾಹರಣೆ `ಪುಷ್ಪ’ ಸಿನಿಮಾ, ಈಗೀಗ ದಕ್ಷಿಣ ಭಾರತದ ಸಿನಿಮಾಗಳಿಗೆ ಬಾಲಿವುಡ್ ಮನ್ನಣೆ ದೊರೆಯುತ್ತಿದೆ. ಸೌತ್ ಚಿತ್ರಗಳನ್ನ ಹಿಂದಿ ಸಿನಿಮಾ ರಸಿಕರು ಮುಗಿಬಿದ್ದು ನೋಡ್ತಿದ್ದಾರೆ. ಆದರೆ ಇತ್ತೀಚಿನ ಬಿಟೌನ್ ನಟ ಜಾನ್ ಅಬ್ರಹಾಂ ಕೊಟ್ಟಿರೋ ಹೇಳಿಕೆ ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಮೂಡಿಸಿದೆ.

    ಜಾನ್ ಅಬ್ರಾಹಾಂ ನಟನೆಯ ಅಟ್ಯಾಕ್ ಚಿತ್ರ ಏ.೧ರಂದು ತೆರೆಕಂಡಿತ್ತು. ಈ ಚಿತ್ರದ ಪ್ರಚಾರದ ವೇಳೆ ನಟ ಜಾನ್, ನಾನು ಎಂದೂ ತೆಲುಗು ಸಿನಿಮಾ ಮಾಡುವುದಿಲ್ಲ. ನಾನು ಬಾಲಿವುಡ್ ಹೀರೋ, ಬಿಸಿನೆಸ್ ಮಾಡುವ ಸಲುವಾಗಿ ತೆಲುಗು ಅಥವಾ ಪರಭಾಷಾ ಚಿತ್ರಗಳಲ್ಲಿ ನಟಿಸೋದಿಲ್ಲ ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆಯಿಂದ ಜಾನ್ ನಟನೆಯ `ಅಟ್ಯಾಕ್’ ಸಿನಿಮಾ ಕಲೆಕ್ಷನ್‌ಗೆ ಪೆಟ್ಟು ಬಿದ್ದಿದೆ.

    ಜಾನ್ ಅಬ್ರಾಹಾಂ ನಟನೆಯ `ಅಟ್ಯಾಕ್’ ಚಿತ್ರದ ಮೇಲೆ ಸಿಕ್ಕಾಪಟ್ಟೆ ನಿರೀಕ್ಷೆಯಿತ್ತು. ಆದರೆ ಆ ನಿರೀಕ್ಷೆ ಸುಳ್ಳಾಗಿದೆ. ಚಿತ್ರದ ಮೊದಲ ದಿನದ ಕಲೆಕ್ಷನ್ ೩.೫ ಕೋಟಿ ಗಳಿಸಿ ಚಿತ್ರ ಸೋಲುವ ಲಕ್ಷಣ ಕಾಣುತ್ತಿದೆ. `ಅಟ್ಯಾಕ್’ ಚಿತ್ರಕ್ಕೆ ಪೈಪೋಟಿ ನೀಡುತ್ತಿರುವ ಚಿತ್ರ `ಆರ್‌ಆರ್‌ಆರ್’ ಈ ಚಿತ್ರವನ್ನ ಅಭಿಮಾನಿಗಳು ಮುಗಿಬಿದ್ದು ನೋಡ್ತಿದ್ದಾರೆ. ಇದನ್ನು ಓದಿ:ಜಾನ್ ಅಬ್ರಾಹಾಂ ಹೊಸ ಚಿತ್ರದಲ್ಲಿ ಬಿಟೌನ್ ಕಿಲಾಡಿ

    `ಆರ್‌ಆರ್‌ಆರ್’ ಚಿತ್ರದ ಎದುರು ಹೀನಾಯವಾಗಿ ಅಟ್ಯಾಕ್ ಸೋಲ್ತಿರೋದಕ್ಕೆ ನೆಟ್ಟಿಗರು ನಟ ಜಾನ್‌ರನ್ನ ಹಿಗ್ಗಾಮುಗ್ಗಾ ಟ್ರೋಲ್ ಮಾಡ್ತಿದ್ದಾರೆ. ತೆಲುಗಿನಲ್ಲಿ ಬಿಗ್ ಬಜೆಟ್ ಚಿತ್ರ, ತಮಿಳಿನಲ್ಲಿ ಹೈ ಒಲ್ಟೇಜ್ ಆಕ್ಷನ್, ಮಲೆಯಾಳಂನಲ್ಲಿ ಸೂಪರ್ ಕಂಟೆAಟ್, ಕನ್ನಡದಲ್ಲಿ ಭಿನ್ನ ಕಾನ್ಸೆಪ್ಟ್ ಇರುತ್ತದೆ. ಇಂತಹ ಚಿತ್ರಗಳಲ್ಲಿ ನಟಿಸಬೇಕು ಅಂದ್ರು ನಿಮಗೆ ಯಾರು ಅವಕಾಶ ಕೊಡಲ್ಲ ಅಂತಾ ಜಾನ್‌ಗೆ ನೆಟ್ಟಿಗರು ಲೆಫ್ಟು ರೈಟು ಕ್ಲಾಸ್ ತೆಗೆದುಕೊಳ್ಳುತ್ತಿದ್ದಾರೆ.

  • ಯಾವುದೇ ಸ್ವರ್ಗಕ್ಕಿಂತ ಕಮ್ಮಿಯಿಲ್ವಂತೆ ಜಾನ್ ಅಬ್ರಹಾಂ ಮನೆ: ಫೋಟೋಗಳಲ್ಲಿ ನೋಡಿ

    ಯಾವುದೇ ಸ್ವರ್ಗಕ್ಕಿಂತ ಕಮ್ಮಿಯಿಲ್ವಂತೆ ಜಾನ್ ಅಬ್ರಹಾಂ ಮನೆ: ಫೋಟೋಗಳಲ್ಲಿ ನೋಡಿ

    ಮುಂಬೈ: ಬಾಲಿವುಡ್ ನಟ ಜಾನ್ ಅಬ್ರಹಾಂ ಯಾವುದೇ ಸೂಪರ್ ಸ್ಟಾರ್ ಗೆ ಕಡಿಮೆಯಿಲ್ಲ. ಅವರ ಆಕ್ಟಿಂಗ್ ಹಾಗೂ ಸಿಕ್ಸ್ ಪ್ಯಾಕ್ ಗೆ ಯುವತಿಯರು ಮನಸೋತಿರುವುದು ಹಳೆಯ ಸುದ್ದಿ. ಈಗ ಅವರ ಮನೆಗೆ ಸಂಬಂಧಿಸಿದಂತೆ ಹೊಸ ಸುದ್ದಿ ಬಂದಿದೆ.

    ಜಾನ್ ತಮ್ಮ ಗೆಳತಿ ಪ್ರಿಯಾ ರೂಚಾಲ್ ಜೊತೆ ಸಂತೋಷದಿಂದಿದ್ದು, ಮುಂಬೈನ ಬಾಂದ್ರಾದಲ್ಲಿರುವ ಅವರ ಮನೆಯನ್ನು ನೋಡಿದ್ದರೆ ನೀವು ಆಶ್ಚರ್ಯ ಪಡುತ್ತೀರಿ. ತಮ್ಮ ನಿವಾಸವನ್ನು ಜಾನ್ ತಮ್ಮ ಮನೆಯನ್ನು ತಮ್ಮ ಸಹೋದರ ಎಲಾನ್ ಜೊತೆ ಸೇರಿಕೊಂಡು ಡಿಸೈನ್ ಮಾಡಿದ್ದು, ‘ವಿಲ್ಲಾ ಇನ್ ದಿ ಸ್ಕೈ’ ಎಂದು ಹೆಸರಿಟ್ಟಿದ್ದಾರೆ.

    5000 ಚದರ ಅಡಿ ವಿಸ್ತೀರ್ಣದಲ್ಲಿ ಹೈಕ್ಲಾಸ್ ವಸ್ತುಗಳನ್ನು ಬಳಸಿ 14 ತಿಂಗಳಿನಲ್ಲಿ ವಿಲ್ಲಾ ನಿರ್ಮಾಣಗೊಂಡಿದೆ. ಬೆಡ್ ರೂಮ್‍ನಿಂದ ಪೇಂಟಿಂಗ್ ರೂಮ್‍ ವರೆಗೂ ಎಲ್ಲವೂ ಸುಂದರವಾಗಿ ನಿರ್ಮಾಣವಾಗಿದ್ದು, ಮುಂದುಗಡೆ ಸಮುದ್ರವನ್ನು ನೋಡಬಹುದಾಗಿದೆ.

    ಈ ಹಿಂದೆ ನಟ ಅಭಿಷೇಕ್ ಬಚ್ಚನ್ ತಮ್ಮ ಸುಂದರ ಪತ್ನಿ ಐಶ್ವರ್ಯ ರೈಗೆ 21 ಕೋಟಿ ರೂ. ಬೆಲೆ ಬಾಳುವ ಹೊಸ ಅಪಾರ್ಟ್ ಮೆಂಟ್ ಗಿಫ್ಟ್ ನೀಡಿದ್ದರು. ಆ ಹೊಸ ಅಪಾರ್ಟ್ ಮೆಂಟ್ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು.

    ಅಭಿಷೇಕ್ ಮತ್ತು ಐಶ್ವರ್ಯ ರೈ, ಬಚ್ಚನ್ ಕುಟುಂಬದೊಂದಿಗೆ ಮುಂಬೈನ `ಜಲ್ಸಾ’ ನಿವಾಸದಲ್ಲಿ ವಾಸವಾಗಿದ್ದರು. ಬಾಂದ್ರಾ-ಕುರ್ಲಾ ಕಾಂಪ್ಲೆಕ್ಸ್ ಹತ್ತಿರದ `ಹೈ ಎಂಡ್ ರೆಸಿಡೆನ್ಸಿಯಲ್ ಕಾಂಪ್ಲೆಕ್ಸ್, ಸಿಂಗಾನಿಯಾ ಐಸೆಲ್‍ನಲ್ಲಿ ಹೊಸ ಅಪಾರ್ಟ್ ಮೆಂಟ್ ಖರೀದಿಸಿದ್ದರು.