Tag: ಜಾನ್ ಅಬ್ರಹಾಂ

  • ನಾನ್ಯಾಕೆ ಸಾಮಾಜಿಕ ಜಾಲತಾಣದಲ್ಲಿಲ್ಲ: ಸ್ಪಷ್ಟನೆ ಕೊಟ್ರು ನಟ ಜಾನ್ ಅಬ್ರಹಾಂ

    ನಾನ್ಯಾಕೆ ಸಾಮಾಜಿಕ ಜಾಲತಾಣದಲ್ಲಿಲ್ಲ: ಸ್ಪಷ್ಟನೆ ಕೊಟ್ರು ನಟ ಜಾನ್ ಅಬ್ರಹಾಂ

    ಬಾಲಿವುಡ್ ನಟ ಜಾನ್ ಅಬ್ರಹಾಂ (John Abraham) ಅವರು ಸಾಮಾಜಿಕ ಜಾಲತಾಣದಿಂದ ದೂರವಿರುವುದ್ಯಾಕೆ ಎಂಬುದರ ಬಗ್ಗೆ ಮಾತನಾಡಿದ್ದಾರೆ. ಸೋಷಿಯಲ್ ಮೀಡಿಯಾ ವಿಷಕಾರಿ ಎಂದು ಸಂದರ್ಶನವೊಂದರಲ್ಲಿ ನೇರವಾಗಿ ಹೇಳಿದ್ದಾರೆ. ಇದನ್ನೂ ಓದಿ:‘ಜನ ನಾಯಗನ್’ ಚಿತ್ರದ ಸ್ಪೆಷಲ್ ಸಾಂಗ್‌ನಲ್ಲಿ ಮೂವರು ಸ್ಟಾರ್ ನಿರ್ದೇಶಕರು

    ಸಂದರ್ಶನವೊಂದರಲ್ಲಿ ಮಾತನಾಡಿದ ಜಾನ್ ಅಬ್ರಹಾಂ, ಸೋಶಿಯಲ್ ಮೀಡಿಯಾದಲ್ಲಿ ನಿಮ್ಮನ್ನು ಟೀಕಿಸಲು ಕಾಯುತ್ತಿರುತ್ತಾರೆ. ನಿಮಗೆ ನೋವುಂಟು ಮಾಡುವ ಅಧಿಕಾರವಿದೆ ಎಂದು ಜನರು ಭಾವಿಸುತ್ತಾರೆ. ಇಂದು ಸಾಮಾಜಿಕ ಜಾಲತಾಣ ವಿಷಕಾರಿಯಾಗಿದೆ. ನೆಗೆಟಿವಿಯಿಂದ ಕೂಡಿದೆ. ಪಬ್ಲಿಕ್ ಪಿಗರ್ ಆಗಿರುವ ಮಾತ್ರಕ್ಕೆ ಟ್ರೋಲ್‌ಗಳಿಂದ ನೋಯಿಸುತ್ತಾರೆ ಎಂದಿದ್ದಾರೆ. ಹಾಗಾಗಿ ತಾವ್ಯಾಕೆ ಸಾಮಾಜಿಕ ಜಾಲತಾಣದಲ್ಲಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

    ಅಂದಹಾಗೆ, ಶಿವಂ ನಾಯರ್ ಅವರ ‘ದಿ ಡಿಪ್ಲೋಮ್ಯಾಟ್’ ಸಿನಿಮಾದ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಜಾನ್ ಅಬ್ರಹಾಂ ನಟನೆಯ ಈ ಚಿತ್ರ ಮಾ.14ರಂದು ರಿಲೀಸ್ ಆಗಲಿದೆ.

  • Vedaa: ವಿಲನ್ ಬಳಿಕ ಹೀರೋ ಆದ ಜಾನ್ ಅಬ್ರಹಾಂ

    Vedaa: ವಿಲನ್ ಬಳಿಕ ಹೀರೋ ಆದ ಜಾನ್ ಅಬ್ರಹಾಂ

    ಬಾಲಿವುಡ್ ನಟ ಜಾನ್ ಅಬ್ರಹಾಂ (John Abraham) ಈಗ ಆ್ಯಕ್ಷನ್ ಅವತಾರ ತಾಳಿದ್ದಾರೆ. ವಿಲನ್ ಬದಲು ಹೀರೋ ಆಗಿ ಜಾನ್ ರಗಡ್ ಆಗಿ ಕಾಣಿಸಿಕೊಂಡಿದ್ದಾರೆ. ಪಠಾಣ್ ವಿಲನ್ ಈಗ ‘ವೇದಾ’ಳ (Vedaa) ಕಥೆ ಹೇಳೋಕೆ ರೆಡಿಯಾಗಿದ್ದಾರೆ. ಇದನ್ನೂ ಓದಿ:ಚುಂಬನ ಎಫೆಕ್ಟ್: ‘ಫೈಟರ್’ ಸಿನಿಮಾ ವಿರುದ್ಧ ಸಿಡಿದೆದ್ದ ವಾಯುಸೇನಾ ಅಧಿಕಾರಿ

    2019ರಲ್ಲಿ ಜಾನ್ ಅಬ್ರಹಾಂ- ನಿಖಿಲ್ ಅಡ್ವಾಣಿ ಕಾಂಬೋದಲ್ಲಿ ‘ಬಾಟ್ಲಾ ಹೌಸ್’ ಸಿನಿಮಾ ಗೆದ್ದಿತ್ತು. ಇದೀಗ ಮತ್ತೆ ‘ವೇದಾ’ ಎಂಬ ಸಿನಿಮಾ ಮೂಲಕ ಜಾನ್ ಅಬ್ರಾಹಂ ಹೀರೋ ಆಗಿ ನಟಿಸಿದ್ದು, ನಿಖಿಲ್ ಅಡ್ವಾಣಿ ಆ್ಯಕ್ಷನ್ ಕಟ್ ಹೇಳಿದ್ದಾರೆ. ಸದ್ಯ ಚಿತ್ರದ ಪೋಸ್ಟರ್ ರಿವೀಲ್ ಆಗಿದ್ದು, ಜಾನ್ ಅಬ್ರಾಹಂ ರಾ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

     

    View this post on Instagram

     

    A post shared by Nikkhil Advani (@nikkhiladvani)

    ಅವಳಿಗೆ ಒಬ್ಬ ರಕ್ಷಕನ ಅಗತ್ಯವಿತ್ತು. ಆಕೆಗೆ ಆಯುಧ ಸಿಕ್ಕಿತು, ಎಂದು ‘ವೇದಾ’ ಚಿತ್ರದ ಪೋಸ್ಟರ್ ಜೊತೆಗೆ ಕ್ಯಾಪ್ಷನ್ ಹಂಚಿಕೊಂಡಿದೆ ಚಿತ್ರತಂಡ. ಚಿತ್ರದಲ್ಲಿ ಅಭಿಷೇಕ್ ಬ್ಯಾನರ್ಜಿ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ‘ಬಾಟ್ಲಾ ಹೌಸ್’ ನೈಜ ಘಟನೆ ಆಧರಿಸಿ ಸಿದ್ಧವಾದ ಸಿನಿಮಾವಾಗಿತ್ತು. ವೇದಾ ಇದು ಕೇವಲ ಸಿನಿಮಾ ಅಲ್ಲ. ನೈಜ ಘಟನೆ ಆಧರಿಸಿದ ನಮ್ಮ ಸಮಾಜದ ಪ್ರತಿಬಿಂಬ. ಅಬ್ರಾಹಂ, ಶಾರ್ವರಿ ಈ ಚಿತ್ರದ ನಾಯಕ, ನಾಯಕಿಯಾಗಿ ನಟಿಸಿದ್ದಾರೆ. ಕಳೆದ ವರ್ಷ ಡಿಸೆಂಬರ್‌ನಲ್ಲಿ ಜಾನ್ ಕಾಶ್ಮೀರದಲ್ಲಿ ‘ವೇದಾ’ ಚಿತ್ರೀಕರಣದ ಸ್ಕೆಡ್ಯೂಲ್ ಮುಗಿಸಿದ್ದರು.

    ಇದೇ ಜುಲೈ 12ಕ್ಕೆ ‘ವೇದಾ’ (Vedaa) ಸಿನಿಮಾ ರಿಲೀಸ್ ಆಗುತ್ತಿದೆ. ವಿಲನ್ ಆಗಿ ನಟಿಸಿ ಗೆದ್ದಿರೋ ಜಾನ್ ಅಬ್ರಹಾಂ ಹೀರೋ ಆಗಿ ಈ ಹಿಂದೆ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ ಅವರಿಗೆ ಹೇಳಿಕೊಳ್ಳುವಂತಹ ಬ್ರೇಕ್ ಸಿಗಲಿಲ್ಲ. ಈಗ ಮತ್ತೆ ‘ವೇದಾ’ ಮೂಲಕ ಹೀರೋ ಆಗಿ ಖಡಕ್ ಎಂಟ್ರಿ ಕೊಟ್ಟಿದ್ದಾರೆ. ಜಾನ್ ಅಬ್ರಹಾಂಗೆ ಬಿಗ್ ಬ್ರೇಕ್ ಸಿಗುತ್ತಾ ಕಾಯಬೇಕಿದೆ.

  • ಜಾನ್ ಅಬ್ರಾಹಾಂ ಹೊಸ ಚಿತ್ರದಲ್ಲಿ ಬಿಟೌನ್ ಕಿಲಾಡಿ

    ಜಾನ್ ಅಬ್ರಾಹಾಂ ಹೊಸ ಚಿತ್ರದಲ್ಲಿ ಬಿಟೌನ್ ಕಿಲಾಡಿ

    ಬಾಲಿವುಡ್‌ನ `ದೇಸಿಬಾಯ್ಸ್’ ಮತ್ತೆ ತೆರೆಯ ಮೇಲೆ ಮಿಂಚೋದಕ್ಕೆ ಸಜ್ಜಾಗ್ತಿದ್ದಾರೆ. ಕಿಲಾಡಿ ಜೋಡಿ ಅಕ್ಷಯ್ ಕುಮಾರ್ ಮತ್ತು ನಟ ಜಾನ್ ಅಬ್ರಾಹಾಂ ಒಂದೇ ಸಿನಿಮಾದಲ್ಲಿ ನಟಿಸೋದಕ್ಕೆ ತೆರೆಮರೆಯಲ್ಲಿ ಭರ್ಜರಿ ಕಸರತ್ತು ನಡೆಯುತ್ತಿದೆ. ಈ ಹೊಸ ಪ್ರಾಜೆಕ್ಟ್ `ಪರ್ಮನು’ ಖ್ಯಾತಿಯ ನಿರ್ದೇಶಕ ಅಭಿಷೇಕ್ ಶರ್ಮಾ ಆಕ್ಷನ್ ಕಟ್ ಹೇಳ್ತಿದ್ದಾರೆ.

    ಅಭಿಷೇಕ್ ಶರ್ಮಾ ನಿರ್ದೇಶನದ ೨೦೧೮ರ `ಪರ್ಮನು’ ಚಿತ್ರದಲ್ಲಿ ಜಾನ್ ಅಬ್ರಾಹಾಂ ಪ್ರಮುಖ ಪಾತ್ರದಲ್ಲಿ ನಟಿಸಿದ್ರು. ಈಗ ಮತ್ತೆ ಅಭಿಷೇಕ್ ಮತ್ತು ಜಾನ್ ಕಾಂಬಿನೇಷನ್‌ನಲ್ಲಿ ಹೊಸ ಚಿತ್ರ ಮೂಡಿ ಬರುತ್ತಿದೆ. ಈ ಚಿತ್ರದಲ್ಲಿ ನಟ ಜಾನ್‌ಗೆ ಸಾಥ್ ಕೊಡೋಕೆ ಬಿಟೌನ್ ಕಿಲಾಡಿ ಅಕ್ಷಯ್ ಕುಮಾರ್ ಕೂಡ ಕಾಣಿಸಿಕೊಳ್ತಿದ್ದಾರೆ. ಇದನ್ನು ಓದಿ:`ಪುಕ್ಸಟ್ಟೆ ಲೈಫು’ ನಿರ್ಮಾಪಕನ ಹೊಸ ಚಿತ್ರದಲ್ಲಿ `ಗಿಲ್ಕಿ’ ನಟಿ ಚೈತ್ರಾ ಆಚಾರ್

    ಈಗಾಗಲೇ ಜಾನ್ ಅಬ್ರಾಹಂ ಮತ್ತು ಅಕ್ಷಯ್ ಕುಮಾರ್ ಕಾಂಬೋದಲ್ಲಿ `ದೇಸಿ ಬಾಯ್ಸ್’, `ಹೌಸ್‌ಫುಲ್ ೨’, `ಗರಂ ಮಸಾಲ’ ಚಿತ್ರಗಳು ಕಮಾಲ್ ಮಾಡಿದೆ. ಈಗ ಅಭಿಷೇಕ್ ನಿರ್ದೇಶನದ ಚಿತ್ರದಲ್ಲಿ ಭಿನ್ನ ಕಥೆ, ಪಾತ್ರಗಳ ಮೂಲಕ ಮೋಡಿ ಮಾಡಲು ದೇಸಿ ಬಾಯ್ಸ್ ಬರುತ್ತಿದ್ದಾರೆ. ಸಾಕಷ್ಟು ಚಿತ್ರಗಳ ಮೂಲಕ ಅಟ್ರಾಕ್ಟ್ ಮಾಡಿರೋ ಜಾನ್ ಮತ್ತು ಅಕ್ಷಯ್ ಕುಮಾರ್ ಜುಗಲ್‌ಬಂದಿ ನೋಡಲು ಫ್ಯಾನ್ಸ್ ಕಾತರದಿಂದ ಕಾಯ್ತಿದ್ದಾರೆ.

  • ವಿಫಲವಾದ ಮದುವೆಗಳು ಒಬ್ಬ ವ್ಯಕ್ತಿಯ ವ್ಯಕ್ತಿತ್ವವನ್ನು ನಿರ್ಧರಿಸಲು ಸಾಧ್ಯವಿಲ್ಲ: ಬಿಪಾಶಾ ಬಸು

    ವಿಫಲವಾದ ಮದುವೆಗಳು ಒಬ್ಬ ವ್ಯಕ್ತಿಯ ವ್ಯಕ್ತಿತ್ವವನ್ನು ನಿರ್ಧರಿಸಲು ಸಾಧ್ಯವಿಲ್ಲ: ಬಿಪಾಶಾ ಬಸು

    ಮುಂಬೈ: ವಿಫಲವಾದ ಮದುವೆಗಳು ಒಬ್ಬ ವ್ಯಕ್ತಿಯ ವ್ಯಕ್ತಿತ್ವವನ್ನು ನಿರ್ಧರಿಸಲು ಸಾಧ್ಯವಿಲ್ಲ ಎಂದು ಬಾಲಿವುಡ್ ಖ್ಯಾತ ನಟಿ ಬಿಪಾಶಾ ಬಸು ಹೇಳಿದರು.

    ನಟರಾದ ಬಿಪಾಶಾ ಬಸು ಮತ್ತು ಕರಣ್ ಸಿಂಗ್ ಗ್ರೋವರ್ ಪರಸ್ಪರ ಪ್ರೀತಿಸುತ್ತಿದ್ದು, 2016 ಏಪ್ರಿಲ್ 30 ರಂದು ಬಂಗಾಳಿ ಸಾಂಪ್ರದಾಯದಂತೆ ವಿವಾಹವಾಗಿದ್ದರು. ಆದರೆ ಇವರಿಬ್ಬರ ವಿವಾಹದ ಹಾದಿ ಅಷ್ಟೊಂದು ಸುಗಮವಾಗಿರಲಿಲ್ಲ. ಕರಣ್‍ರವರ ಎರಡು ಹಿಂದಿನ ವಿವಾಹಗಳು ವಿಫಲವಾಗಿದ್ದ ಕಾರಣ ಬಿಪಾಶಾರವರ ಹೆತ್ತವರು ಈ ವಿವಾಹದ ಕುರಿತು ಮತ್ತು ಅವರ ಆಯ್ಕೆಯ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದರು ಎಂದು ಬಿಪಾಶಾ ಬಹಿರಂಗಪಡಿಸಿದ್ದಾರೆ. ‘ಕುಬೂಲ್ ಹೈ’ ಚಿತ್ರದ ಖ್ಯಾತ ನಟ ಮೊದಲು ಶ್ರದ್ಧಾ ನಿಗಮ್ ಮತ್ತು ಜೆನ್ನಿಫರ್ ವಿಂಗೆಟ್ ಅವರನ್ನು ವಿವಾಹವಾಗಿದ್ದರು. ಇದನ್ನೂ ಓದಿ: ಐಪಿಎಲ್ 2022ರ ಹರಾಜು ಪ್ರಕ್ರಿಯೆ ವೀಕ್ಷಿಸಿ ತುಂಬಾ ದಣಿದಿದ್ದೇನೆ: ಪ್ರೀತಿ ಜಿಂಟಾ

     

    View this post on Instagram

     

    A post shared by bipashabasusinghgrover (@bipashabasu)

    ಖಾಸಗಿ ವಾಹಿನಿಯ ಸಂದರ್ಶನವೊಂದರಲ್ಲಿ ಬಿಪಾಶಾ ತಮ್ಮ ಪ್ರಸ್ತುತ ದಾಂಪತ್ಯ ಜೀವನದ ಹಿಂದಿನ ಕೆಲ ಕರಾಳ ನೆನಪುಗಳ ಬಗ್ಗೆ ಮಾತನಾಡಿ, ವಿಫಲವಾದ ಮದುವೆಗಳು ಒಬ್ಬ ವ್ಯಕ್ತಿಯ ವ್ಯಕ್ತಿತ್ವವನ್ನು ಎಂದಿಗೂ ನಿರ್ಧರಿಸಲು ಸಾಧ್ಯವಿಲ್ಲ. ಆದ್ದರಿಂದ ಅವರನ್ನು ಖಂಡಿಸಬೇಕು ಅಂತ ಅಲ್ಲ. ನಾನು ಇಷ್ಟಪಟ್ಟಂತಹ ವ್ಯಕ್ತಿತ್ವವುಳ್ಳ ಹುಡುಗ ನನಗೆ ಸಿಕ್ಕಿದ್ದಾನೆ. ನನ್ನ ಆಯ್ಕೆಯ ಸಂಬಂಧವು ಯಾವಾಗಲೂ ದೀರ್ಘಾವಧಿಯವರೆಗೆ ಇರಿಸಿಕೊಳ್ಳಲು ನಾನು ಇಷ್ಟಪಡುತ್ತೇನೆ ಎಂದರು.

     

    View this post on Instagram

     

    A post shared by bipashabasusinghgrover (@bipashabasu)

    ನಾನು ರಿಜಿಸ್ಟರ್ ಆಫೀಸಿನ ಕಾಗದದ ತುಂಡಿಗೆ ಸಹಿ ಮಾಡಲಿಲ್ಲ. ಮದುವೆಯ ಮೊದಲಿನ ಯಾವ ಸಂಬಂಧಗಳು ಗಟ್ಟಿ ಇರಲು ಸಾಧ್ಯವಿಲ್ಲ. ಇದು ದುರದೃಷ್ಟಕರ ಆದರೆ ದೀರ್ಘಾವಧಿಯ ಸಂಬಂಧಗಳ ಕೆಲ ನೆನಪುಗಳನ್ನು ನೀವು ಹಿಂದಿರುಗಿ ನೋಡಿದಾಗ ನೀವು ಯಾವಾಗಲೂ ಸಂತೋಷವಾಗಿರುತ್ತೀರಿ. ನಿಮ್ಮ ಜೀವನದಲ್ಲಿ ಯಾವುದೇ ಒಂದು ಕಾರಣಕ್ಕಾಗಿ ಏನಾದರೂ ಒಂದು ಮರೆಯಲಾಗದ ಘಟನೆ ಸಂಭವಿಸಿರುತ್ತದೆ ಎಂದು ಕರಣ್ ಮತ್ತು ಅವರ ಪೋಷಕರೊಂದಿಗಿನ ಪ್ರಸ್ತುತ ಬಾಂಧವ್ಯದ ಬಗ್ಗೆ ತಿಳಿ ಹೇಳಿದರು. ಇದನ್ನೂ ಓದಿ: ಪ್ರಧಾನಿಗೆ ಭದ್ರತೆ ನೀಡಲು ಸಾಧ್ಯವಾಗದ ಚನ್ನಿ ಪಂಜಾಬ್‍ನ್ನು ಹೇಗೆ ಕಾಪಾಡಿಕೊಳ್ಳುವರು: ಅಮಿತ್ ಶಾ

    ಬಿಪಾಶಾ ಕರಣ್‍ರವರನ್ನ ವಿವಾಹವಾಗುವ ಮೊದಲು, ಜಾನ್ ಅಬ್ರಹಾಂ ಜೊತೆ ಸಂಬಂಧದಲ್ಲಿದ್ದರು. ಇಬ್ಬರೂ 9 ವರ್ಷಗಳ ಕಾಲ ಡೇಟಿಂಗ್ ಕೂಡಾ ನಡೆಸಿದ್ದರು. ನಂತರ 2011ರಲ್ಲಿ ಈ ಸಂಬಂಧ ಮುರಿದು ಬಿದ್ದಿದೆ.