Tag: ಜಾನ್ಸನ್ ಆ್ಯಂಡ್ ಜಾನ್ಸನ್

  • 2023ಕ್ಕೆ ಜಾನ್ಸನ್ ಆ್ಯಂಡ್ ಜಾನ್ಸನ್ ಬೇಬಿ ಪೌಡರ್ ಮಾರಾಟ ಬಂದ್

    2023ಕ್ಕೆ ಜಾನ್ಸನ್ ಆ್ಯಂಡ್ ಜಾನ್ಸನ್ ಬೇಬಿ ಪೌಡರ್ ಮಾರಾಟ ಬಂದ್

    ವಾಷಿಂಗ್ಟನ್: ಪ್ರಸಿದ್ಧ ಫಾರ್ಮ ಕಂಪನಿ ಜಾನ್ಸನ್ ಆ್ಯಂಡ್ ಜಾನ್ಸನ್ ತನ್ನ ಟಾಲ್ಕಮ್ ಆಧಾರಿತ ಜಾನ್ಸನ್ ಬೇಬಿ ಪೌಡರ್‍ನ ಮಾರಾಟವನ್ನು 2023ಕ್ಕೆ ವಿಶ್ವಾದ್ಯಂತ ನಿಲ್ಲಿಸುವುದಾಗಿ ಘೋಷಿಸಿದೆ.

    ಈ ಮುನ್ನ ಜಾನ್ಸನ್ ಆ್ಯಂಡ್ ಜಾನ್ಸನ್ ತನ್ನ ಬೇಬಿ ಪೌಡರ್ ಅನ್ನು ಅಮೆರಿಕ ಮತ್ತು ಕೆನಡಾದಲ್ಲಿ ಮಾರಾಟ ಮಾಡುವುದನ್ನು ನಿಲ್ಲಿಸಿತ್ತು. ಈ ಬೇಬಿ ಪೌಡರ್ ಬಳಕೆಯಿಂದಾಗಿ ಕ್ಯಾನ್ಸರ್ ಬರುತ್ತದೆ ಎಂದು ಆರೋಪಿಸಿದ ಹಿನ್ನೆಲೆಯಲ್ಲಿ ವಿಶ್ವಾದ್ಯಂತ ಕಂಪನಿಯ ವಿರುದ್ಧ ಸಾವಿರಾರು ಪ್ರಕರಣಗಳು ದಾಖಲಾಗಿದ್ದವು. ಇಷ್ಟೇ ಅಲ್ಲದೇ ಕ್ಯಾನ್ಸರ್ ಆತಂಕದ ವರದಿ ಬೆನ್ನಲ್ಲೇ ಮಾರುಕಟ್ಟೆಯಲ್ಲಿ ಈ ಉತ್ಪನ್ನದ ಮಾರಾಟ ಭಾರೀ ಕುಸಿತ ಕಂಡುಬಂದಿತ್ತು.

    ವಿಶ್ವದಾದ್ಯಂತ ಮೌಲ್ಯಮಾಪನವಾಗಿ, ನಾವು ಎಲ್ಲಾ ಕಾರ್ನ್‍ಸ್ಟಾರ್ಚ್ ಆಧಾರಿತ ಬೇಬಿ ಪೌಡರ್‌ಗಳ ಮಾರಾಟವನ್ನು ನಿಲ್ಲಿಸಲು ನಿರ್ಧರಿಸಿದ್ದೇವೆ ಎಂದು ಜಾನ್ಸನ್ ಮತ್ತು ಜಾನ್ಸನ್ ಗುರುವಾರ ಪ್ರಕಟಿಸಿದೆ. ಇದನ್ನೂ ಓದಿ: ರಾಜ್ಯದಲ್ಲಿ ಶುರುವಾಯ್ತು ಹರ್ ಘರ್ ತಿರಂಗಾ ಹವಾ – ತಿರಂಗಾ ನಡೆಗೆ ಚಾಲನೆ ನೀಡಿದ ಪ್ರಹ್ಲಾದ್ ಜೋಶಿ

    ಪ್ರಸ್ತುತ ಜಾನ್ಸನ್ ಆ್ಯಂಡ್ ಜಾನ್ಸನ್ ವಿರುದ್ಧ 19,400 ಪ್ರಕರಣಗಳು ದಾಖಲಾಗಿದ್ದು, ಇದರ ಟಾಲ್ಕಂ ಪೌಡರ್‍ನಿಂದಾಗಿ ಜನರು ಅಂಡಾಶಯದ ಕ್ಯಾನ್ಸರ್‌ಗೆ ಒಳಗಾಗುತ್ತಿದ್ದಾರೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ. ಇದರಿಂದ ಶ್ವಾಸಕೋಶ ಮತ್ತು ಇತರ ಅಂಗಾಂಗಗಳ ಮೇಲೆ ಮೆಸೊಥೆಲಿಯೋಮಾ ಕ್ಯಾನ್ಸರ್ ಉಂಟಾಗುತ್ತದೆ. ಇದುವರೆಗೂ ಈ ಕುರಿತಂತೆ ನ್ಯಾಯಾಲಯದಲ್ಲಿ ನಡೆದ ವಿಚಾರಣೆಯಲ್ಲಿ 12 ಪ್ರಕರಣಗಳಲ್ಲಿ ಜಾನ್ಸನ್ ಆ್ಯಂಡ್ ಜಾನ್ಸನ್ ಕಂಪನಿ ಜಯ ಸಾಧಿಸಿದ್ದರೆ, 15ರಲ್ಲಿ ಹಿನ್ನಡೆಯಾಗಿದೆ.

    ಪೌಡರ್ ಬಗ್ಗೆ ಸ್ವತಃ ಕಂಪನಿಯೇ ಸಂಶೋಧನೆ ನಡೆಸಿ, ಟಾಲ್ಕಮ್ ಬೇಬಿ ಪೌಡರ್ ಸುರಕ್ಷಿತವಾಗಿದೆ ಮತ್ತು ಇದು ಕ್ಯಾನ್ಸರ್‌ಗೆ ಕಾರಣವಾಗುವುದಿಲ್ಲ ಎಂದು ತಿಳಿಸಿತ್ತು. ಆದರೂ ಈ ಪೌಡರ್ ಕ್ಯಾನ್ಸರ್‌ಗೆ ಕಾರಣವಾಗಿರಲಿ, ಇಲ್ಲದೇ ಇರಲಿ, ಜನ ಈ ಉತ್ಪನ್ನವನ್ನು ಖರೀದಿಸಲು ಹಿಂಜರಿಯುತ್ತಿದ್ದಾರೆ ಎಂದು 2020ರಲ್ಲಿಯೇ ಮಿಚಿಗನ್ ವಿಶ್ವವಿದ್ಯಾಲಯದ ವ್ಯಾಪಾರ ಶಾಲೆಯ ಪ್ರಾಧ್ಯಾಪಕ ಎರಿಕ್ ಗಾರ್ಡನ್ ತಿಳಿಸಿದ್ದರು. ಇದನ್ನೂ ಓದಿ: ಕೋವಿಡ್‌ ಹೆಚ್ಚಳ; ಸ್ವಾತಂತ್ರ್ಯೋತ್ಸವದಲ್ಲಿ ಜನಸಂದಣಿಗೆ ಅವಕಾಶ ನೀಡಬೇಡಿ – ರಾಜ್ಯಗಳಿಗೆ ಕೇಂದ್ರ ಸೂಚನೆ

    Live Tv
    [brid partner=56869869 player=32851 video=960834 autoplay=true]

  • ಭಾರತದಲ್ಲಿ ಜಾನ್ಸನ್ ಆ್ಯಂಡ್ ಜಾನ್ಸನ್ ಕೋವಿಡ್ ಲಸಿಕೆ ತುರ್ತು ಬಳಕೆಗೆ ಅನುಮತಿ

    ಭಾರತದಲ್ಲಿ ಜಾನ್ಸನ್ ಆ್ಯಂಡ್ ಜಾನ್ಸನ್ ಕೋವಿಡ್ ಲಸಿಕೆ ತುರ್ತು ಬಳಕೆಗೆ ಅನುಮತಿ

    ನವದೆಹಲಿ: ಅಮೆರಿಕ ಮೂಲದ ಖ್ಯಾತ ಔಷಧ ತಯಾರಿಕಾ ಸಂಸ್ಥೆ ಜಾನ್ಸನ್ ಆ್ಯಂಡ್ ಜಾನ್ಸನ್ ಅಭಿವೃದ್ಧಿ ಪಡಿಸಿರುವ ಸಿಂಗಲ್ ಡೋಸ್ ಕೋವಿಡ್ ಲಸಿಕೆಯ ತುರ್ತು ಬಳಕೆಗೆ ಭಾರತ ಸರ್ಕಾರ ಅನುಮತಿ ನೀಡಿದೆ.

    ಜಾನ್ಸನ್ ಆ್ಯಂಡ್ ಜಾನ್ಸನ್ ಕಂಪನಿಯು ತನ್ನ ಸಿಂಗಲ್ ಡೋಸ್ ಕೋವಿಡ್-19 ಲಸಿಕೆಯನ್ನು ಭಾರತಕ್ಕೆ ತರಲು ಈಗಾಗಲೇ ಹಲವು ಪ್ರಯತ್ನಗಳನ್ನು ಮಾಡಿತ್ತು. ಬಳಿಕ 2021ರ ಆಗಸ್ಟ್ 5 ರಂದು ಜಾನ್ಸನ್ ಆ್ಯಂಡ್ ಜಾನ್ಸನ್ ಪ್ರೈವೇಟ್ ಲಿಮಿಟೆಡ್ ತನ್ನ ಸಿಂಗಲ್ ಡೋಸ್ ಕೋವಿಡ್-19 ಲಸಿಕೆಯ ತುರ್ತು ಬಳಕೆಗೆ ಅನುಮತಿ ಕೊಡಿಸಲು (ತುರ್ತು ಬಳಕೆ ದೃಢೀಕರಣ )ಇಯುಎಗೆ ಅರ್ಜಿ ಸಲ್ಲಿಸಿತ್ತು. ಇದೀಗ ತುರ್ತು ಬಳಕೆಗೆ ಅವಕಾಶ ಕೊಡಲಾಗಿದೆ ಎಂದು ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ತಿಳಿಸಿದ್ದಾರೆ. ಇದನ್ನೂ ಓದಿ: 50 ಕೋಟಿ ಡೋಸ್ ದಾಟಿದ ಲಸಿಕೆ ಅಭಿಯಾನ

    ಜಾನ್ಸನ್ ಆ್ಯಂಡ್ ಜಾನ್ಸನ್ ಸಂಸ್ಥೆಯ ಸಿಂಗಲ್ ಡೋಸ್ ಕೋವಿಡ್-19 ಲಸಿಕೆಯನ್ನು ಭಾರತದ ಜನರಿಗೆ ಮತ್ತು ಪ್ರಪಂಚದ ಇತರೆ ಭಾಗಗಳಿಗೆ ಬಯೋಲಾಜಿಕಲ್ ಇ ಲಿಮಿಟೆಡ್ ಸಹಯೋಗದೊಂದಿಗೆ ತರಲು ಸಂಸ್ಥೆ ತಯಾರಿ ನಡೆಸಿದೆ. ಜಾನ್ಸನ್ ಆ್ಯಂಡ್ ಜಾನ್ಸನ್ ಸಂಸ್ಥೆಯ ಕೋವಿಡ್ ಲಸಿಕೆಯು ಸೋಂಕಿನ ವಿರುದ್ಧ ಶೇ.85 ರಷ್ಟು ಪರಿಣಾಮಕಾರಿ ಎಂದು ಲಸಿಕಾ ಪ್ರಯೋಗಗಳಿಂದ ವರದಿಯಾಗಿದೆ.