ಬಾಲಿವುಡ್ ಬ್ಯೂಟಿ ಜಾನ್ವಿ ಕಪೂರ್ ಸಿನಿಮಾ ಶೂಟಿಂಗ್‌ಗೆ ಬ್ರೇಕ್ ಹಾಕಿ, ತಿರುಪತಿ ತಿರುಮಲಕ್ಕೆ ಭೇಟಿ ನೀಡಿದ್ದಾರೆ. ಸದಾ ಮಾಡರ್ನ್ ಲುಕ್ ಮಿಂಚಿದ್ದ ನಟಿ ಈಗ ತೆಲುಗು ಹುಡುಗಿಯಂತೆ ತಿರುಪತಿಯಲ್ಲಿ ಕಾಣಿಸಿಕೊಂಡಿದ್ದಾರೆ. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ದಕ್ಷಿಣ ಭಾರತದ ಮೊದಲ ಲೇಡಿ ಸೂಪರ್ ಸ್ಟಾರ್ ಶ್ರೀದೇವಿ ಪುತ್ರಿ ಜಾನ್ವಿ ಕಪೂರ್, ಚಿತ್ರೀಕರಣ ಬ್ರೇಕ್ ನೀಡಿ,ತಿಮ್ಮಪ್ಪನಿಗೆ ವಿಶೇಷ ಪೂಜೆ ಸಲ್ಲಿಸಿ, ದೇವರ ದರ್ಶನ ಪಡೆದಿದ್ದಾರೆ. ಸದಾ ಮಾಡರ್ನ್ ಲುಕ್‌ನಲ್ಲಿ ಕಂಗೊಳಿಸುತ್ತಿದ್ದ ನಟಿ ಜಾನ್ವಿ, ಇದೀಗ ತಿರುಪತಿಯಲ್ಲಿ ತೆಲುಗಿನ ಹುಡುಗಿಯಂತೆ ಕಾಣಿಸಿಕೊಂಡಿದ್ದಾರೆ. ಟ್ರಡಿಷನಲ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಇದನ್ನೂ ಓದಿ:ವಿಮಾನದಲ್ಲೇ ರೊಮ್ಯಾನ್ಸ್ ಮಾಡಿದ್ದರಂತೆ ಟೈಗರ್ ಶ್ರಾಫ್: ಆಕೆ ದಿಶಾ ಪಟಾನಿ ಆಗಿರಲಿಲ್ಲ ಎಂದ ನಟ
ಜಾನ್ವಿ ಕಪೂರ್ ಕೈಯಲ್ಲಿ ಸಾಲು ಸಾಲು ಸಿನಿಮಾಗಳಿವೆ. ಜೊತೆಗೆ ಇದೀಗ ದಕ್ಷಿಣ ಸಿನಿಮಾಗಳಲ್ಲೂ ಮಿಂಚಲು ತೆರೆಮರೆಯಲ್ಲಿ ಭರ್ಜರಿ ತಯಾರಿ ನಡೆಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಸೌತ್ ಸಿನಿರಂಗದಲ್ಲಿ ಅದ್ಯಾವ ಹೀರೋ ತೆರೆಹಂಚಿಕೊಳ್ಳಬಹುದು ಅಂತಾ ಕಾದುನೋಡಬೇಕಿದೆ.
Live Tv
[brid partner=56869869 player=32851 video=960834 autoplay=true]
ಬಾಲಿವುಡ್‌ನ ಸಾಕಷ್ಟು ಸಿನಿಮಾಗಳ ಮೂಲಕ ಸಂಚಲನ ಮೂಡಿಸಿದ ನಟಿ ಜಾನ್ವಿ ಕಪೂರ್ ಸದ್ಯ ತಮ್ಮ ಬೋಲ್ಡ್ ಫೋಟೋಶೂಟ್‌ನಿಂದ ಪಡ್ಡೆಹುಡುಗರ ನಿದ್ದೆಗೆಡಿಸಿದ್ದಾರೆ. ಸೀರೆಯುಟ್ಟು ಕ್ಯಾಮೆರಾ ಕಣ್ಣಿಗೆ ಬೋಲ್ಡ್ ಆಗಿ ಜಾನ್ವಿ ಪೋಸ್ ನೀಡಿದ್ದಾರೆ.
ಸಿನಿಮಾ ಜೊತೆ ಆಗಾಗ ಹಾಟ್ ಫೋಟೋಶೂಟ್‌ನಿಂದ ಸದ್ದು ಮಾಡುವ ನಟಿ ಜಾನ್ವಿ ಕಪೂರ್ ಈಗ ಬಿಳಿ ಬಣ್ಣದ ಡಿಸೈನರ್ ಸೀರೆಯಲ್ಲಿ ಸೆಕ್ಸಿ ಲುಕ್‌ನಲ್ಲಿ ನಟಿ ಮಿಂಚಿದ್ದಾರೆ. ತಮ್ಮ ಮಾದಕ ಲುಕ್ಕಿನಿಂದ ನೋಡುಗರನ್ನ ಮೋಡಿ ಮಾಡಿದ್ದಾರೆ. ಕ್ಯಾಮೆರಾ ಕಣ್ಣಿಗೆ ಹಾಟ್ ಪೋಸ್ ನೀಡಿ, ಸೀರೆಯಲ್ಲಿ ಜಾನ್ವಿ ಶೈನ್ ಮಾಡಿದ್ದಾರೆ.
ಇನ್ನು ಜಾನ್ವಿ ಕಪೂರ್ ಲಿಸ್ಟ್ನಲ್ಲಿ ಕೈತುಂಬಾ ಸಿನಿಮಾಗಳಿವೆ. ಹೊಸ ಬಗೆಯ ಸಿನಿಮಾಗಳ ಮೂಲಕ ಮೋಡಿ ಮಾಡಲು ಜಾನ್ವಿ ಕಪೂರ್ ಸಜ್ಜಾಗಿದ್ದಾರೆ.
Live Tv
[brid partner=56869869 player=32851 video=960834 autoplay=true]
ಬಾಲಿವುಡ್ ಬ್ಯೂಟಿ ಜಾನ್ವಿ ಕಪೂರ್ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಜತೆಗೆ ಟಾಲಿವುಡ್ ಸಿನಿಮಾದತ್ತ ಬರುವ ಸೂಚನೆ ಕೂಡ ಕೊಟ್ಟಿದ್ದಾರೆ.ಸಂದರ್ಶನವೊಂದರಲ್ಲಿ ಜ್ಯೂ.ಎನ್‌ಟಿಆರ್ ಜೊತೆ ನಟಿಸುವ ಆಸೆ ಜಾನ್ವಿ ಕಪೂರ್ ವ್ಯಕ್ತಪಡಿಸಿದ್ದಾರೆ.
ಸದ್ಯ ಶ್ರೀದೇವಿ ಪುತ್ರಿ ಜಾನ್ವಿ ಕಪೂರ್ ಕೈಯಲ್ಲಿ ಸಾಕಷ್ಟು ಸಿನಿಮಾಗಳಿವೆ. ತಮ್ಮ ಸಿನಿಮಾ ಕೆರಿಯರ್ ಕುರಿತು ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ. ಜತೆಗೆ ಜ್ಯೂ.ಎನ್‌ಟಿಆರ್ ಜೊತೆ ನಟಿಸುವ ಆಸೆ ಜಾನ್ವಿ ಕಪೂರ್ ವ್ಯಕ್ತಪಡಿಸಿದ್ದಾರೆ. ತಾಯಿ ಶ್ರೀದೇವಿ ಅವರು ಕೂಡ ಹಿಂದಿ ಮತ್ತು ದಕ್ಷಿಣದ ಸಿನಿಮಾಗಳಲ್ಲಿ ಮಿಂಚಿ ಮೆರೆದ ನಟಿಯಾಗಿದ್ದರು. ಇಂದಿಗೂ ಅವರ ನಟಿಸಿರುವ ಸಿನಿಮಾಗಳನ್ನ ನೋಡಿ ಫ್ಯಾನ್ಸ್ ಕಣ್ತುಂಬಿಕೊಳ್ತಿದ್ದಾರೆ. ಇದೀಗ ಅದೇ ಹಾದಿಯಲ್ಲಿ ಜಾನ್ವಿ ಹೆಜ್ಜೆ ಇಡ್ತಿದ್ದಾರೆ. ಇದನ್ನೂ ಓದಿ:ಸಿಂಪಲ್ ಸುನಿ `ಗತವೈಭವ’ದಲ್ಲಿ ದೇವಕನ್ಯೆಯಾಗಿ ಆಶಿಕಾ ರಂಗನಾಥ್
ತೆಲುಗು ಮತ್ತು ತಮಿಳು ಚಿತ್ರದಲ್ಲಿ ನಟಿಸುವ ಇಚ್ಛೆಯ ಬಗ್ಗೆ ಕಥೆ ಇಷ್ಟವಾದರೇ ಖಂಡಿತವಾಗಿಯೂ ದಕ್ಷಿಣದ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತೇನೆ ಎಂದಿದ್ದಾರೆ. ಈ ವೇಳೆ ಜ್ಯೂ.ಎನ್‌ಟಿಆರ್ ಲೆಜೆಂಡರಿ ಆಕ್ಟರ್ ಅವರ ಜತೆ ಕೆಲಸ ಮಾಡಲು ಕಾಯುತ್ತಿದ್ದೇನೆ ಎಂದಿದ್ದಾರೆ. ಈ ಮೂಲಕ ಕಥೆ ಚೆನ್ನಾಗಿದ್ದರೆ ದಕ್ಷಿಣದ ಸಿನಿಮಾಗಳಲ್ಲಿ ಮಿಂಚಲು ರೆಡಿ ಎಂದ ಸೂಚನೆ ನೀಡಿದ್ದಾರೆ.
Live Tv
[brid partner=56869869 player=32851 video=960834 autoplay=true]
ಬಾಲಿವುಡ್ ಖ್ಯಾತ ನಟಿ ದಿ.ಶ್ರೀದೇವಿ ಪುತ್ರಿ ದುಬಾರಿ ಬೆಲೆಯ ಫ್ಲ್ಯಾಟ್ ಮಾರಿದ್ದಾರೆ. ಅದು ಬರೋಬ್ಬರಿ 44 ಕೋಟಿ ರೂಪಾಯಿಗೆ ಎನ್ನುವುದು ಅಚ್ಚರಿಯ ಸಂಗತಿ. ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್ 2020ರಲ್ಲಿ ಮುಂಬೈನ ಜುಹೂನಲ್ಲಿ ಒಟ್ಟು ಮೂರು ಫ್ಲ್ಯಾಟ್ ಖರೀದಿಸಿದ್ದರಂತೆ. ಆಗ ಇವುಗಳ ಒಟ್ಟು ಬೆಲೆ 39 ಕೋಟಿ ಆಗಿತ್ತಂತೆ. ಇದೀಗ 5 ಕೋಟಿ ರೂಪಾಯಿ ಲಾಭ ಇಟ್ಟುಕೊಂಡು ಮೂರು ಫ್ಲ್ಯಾಟ್ ಗಳನ್ನು ಅವರು ಮಾರಿದ್ದಾರಂತೆ.
ಜಾಹ್ನವಿ ಕಪೂರ್ ಕೂಡ ಹಲವಾರು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಒಂದೊಳ್ಳೆ ಸಂಭಾವನೆಯನ್ನೂ ಪಡೆಯುತ್ತಿದ್ದಾರಂತೆ. ಅಲ್ಲದೇ, ಅಪ್ಪ ಕೂಡ ಸಾಕಷ್ಟು ಶ್ರೀಮಂತ. ಹಾಗಾಗಿ ತಾವು ದುಡಿದ ಹಣದ ಜೊತೆಗೆ ತಂದೆಯೊಂದಿಗೂ ಒಂದಷ್ಟು ಹಣ ತಗೆದುಕೊಂಡಿದ್ದರಂತೆ. ಎಲ್ಲವನ್ನೂ ಒಟ್ಟಾಗಿಸಿ ಜುಹೂನಲ್ಲಿ ಇರುವ ಪ್ರತಿಷ್ಠಿತ ಅಪಾರ್ಟ್ಮೆಂಟ್ ನಲ್ಲಿ 14, 15 ಮತ್ತು 16ನೇ ಮಹಡಿಯಲ್ಲಿ ಮೂರು ಫ್ಲ್ಯಾಟ್ ಗಳನ್ನು ಅವರು ಖರೀದಿಸಿದ್ದರಂತೆ. ಇದನ್ನೂ ಓದಿ:ಕಿಚ್ಚ ಸುದೀಪ್- ರಕ್ಷಿತ್ ಶೆಟ್ಟಿ ನಡುವೆ ಏನಿದು ಕೋಲ್ಡ್ ವಾರ್!
ಇದೀಗ ಜಾನ್ವಿ ಕಪೂರ್ ಫ್ಲ್ಯಾಟ್ ಅನ್ನು ಬಾಲಿವುಡ್ ನಟ ರಾಜ್ ಕುಮಾರ್ ರಾವ್ ಖರೀದಿಸಿದ್ದು, ಜುಲೈ 21ರಂದು ಮೂರು ಫ್ಲ್ಯಾಟ್ ಗಳನ್ನು ತಮ್ಮ ಹೆಸರಿಗೆ ರಿಜಿಸ್ಟ್ರೇಷನ್ ಮಾಡಿಸಿಕೊಂಡಿದ್ದಾರಂತೆ ನಟ. ಬರೋಬ್ಬರಿ 2.19 ಕೋಟಿ ರೂಪಾಯಿ ಅನ್ನು ಅವರು ಸ್ಟಾಂಪ್ ಡ್ಯೂಟಿ ಪಾವತಿಸಿದ್ದಾರಂತೆ. ಜೂಹೂನಲ್ಲಿ ಮನೆ ಹೊಂದಬೇಕು ಎನ್ನುವುದು ರಾಜ್ ಕುಮಾರ್ ರಾವ್ ಅವರ ಕನಸಾಗಿತ್ತಂತೆ. ಅದನ್ನು ಈಗ ನೆರವೇರಿಸಿಕೊಂಡಿದ್ದಾರೆ.
Live Tv
[brid partner=56869869 player=32851 video=960834 autoplay=true]
ಬಾಲಿವುಡ್ ಗ್ಲಾಮರ್ ಗೊಂಬೆ ಜಾನ್ವಿ ಕಪೂರ್ ಮತ್ತೆ ಸುದ್ದಿಯಲ್ಲಿದ್ದಾರೆ. ಸಿನಿಮಾಗಳ ಮೂಲಕ ಸದ್ದು ಮಾಡ್ತಿದ್ದ ನಟಿ ಜಾನ್ವಿ, ಈಗ ಡ್ಯಾನ್ಸ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹೈಪ್ ಕ್ರಿಯೇಟ್ ಮಾಡಿದ್ದಾರೆ. ಈ ಡ್ಯಾನ್ಸ್ ನೋಡಿರೋ ಅಭಿಮಾನಿಗಳು, ಶ್ರೀದೇವಿ ಮತ್ತು ಮಾಧುರಿ ದೀಕ್ಷಿತ್‌ಗೆ ಹೋಲಿಕೆ ಮಾಡಿ ಹೊಗಳಿದ್ದಾರೆ.
`ದಡಕ್’ ಚಿತ್ರದ ಮೂಲಕ ಬಿಟೌನ್‌ಗೆ ಲಗ್ಗೆಯಿಟ್ಟ ನಟಿ ಜಾನ್ವಿ ಕಪೂರ್, ಮೊದಲ ಚಿತ್ರದಲ್ಲೇ ಅಭಿಮಾನಿಗಳ ಗಮನ ಸೆಳೆಯುವಲ್ಲಿ ಯಶಸ್ವಿಯಾದ್ರು. ಇನ್ನು ಖ್ಯಾತ ನಟಿ ಶ್ರೀದೇವಿ ಮಗಳು ಎಂಬ ಕಾರಣಕ್ಕೆ ಅನೇಕರಿಗೆ ಜಾನ್ವಿ ಅಚ್ಚುಮೆಚ್ಚು. ಶ್ರೀದೇವಿ ನಿಧನದ ನಂತರ ಜಾನ್ವಿ ಅವರಲ್ಲಿ ಶ್ರೀದೇವಿ ಅವರನ್ನು ಕಾಣುತ್ತಿದ್ದಾರೆ. ಆದರೆ ಜಾನ್ವಿ ನಟನೆಯಲ್ಲಿ ಇನ್ನೂ ಪಳಗಬೇಕಾಗಿದೆ. ಆದರೆ ಡ್ಯಾನ್ಸ್‌ನಲ್ಲಿ ಪಳಗಿದ್ದಾರೆ ಉತ್ತಮವಾಗಿ ಡ್ಯಾನ್ಸ್ ಮಾಡುತ್ತಾರೆ. ಇದೀಗ ಜಾನ್ವಿ ಹಂಚಿಕೊಂಡಿರೋ ಡ್ಯಾನ್ಸ್ ವಿಡಿಯೋ ಭಾರೀ ವೈರಲ್ ಆಗುತ್ತಿದೆ.
ಬಾಲಿವುಡ್ ನಟಿ ರೇಖಾ ಅವರು ಹೆಜ್ಜೆ ಹಾಕಿದ್ದ `ಆಂಕೋ ಕೋ ಮಸ್ತಿ’ ಅದ್ಭುತವಾಗಿ ಡ್ಯಾನ್ಸ್ ಮಾಡಿದ್ದಾರೆ. ಏ.29 ಅಂತರಾಷ್ಟ್ರೀಯ ನೃತ್ಯ ದಿನಾಚರಣೆ ಅಂಗವಾಗಿ ಶೇರ್ ಮಾಡಬೇಕಿದ್ದ ವಿಡಿಯೋ ಇದೀಗ ಪೋಸ್ಟ್ ಮಾಡಿದ್ದಾರೆ. ಜಾನ್ವಿ ಟ್ಯಾಲೆಂಟ್‌ಗೆ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ. ಜಾನ್ವಿ ಡ್ಯಾನ್ಸ್‌ಗೆ ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ. ಶ್ರೀದೇವಿ ಮತ್ತು ಮಾಧುರಿ ದೀಕ್ಷಿತ್‌ಗೆ ಹೋಲಿಕೆ ಮಾಡಿ ಹೊಗಳಿದ್ದಾರೆ.
ಎರಡು ವರ್ಷಗಳ ಹಿಂದೆ ನಾನು ಮೊದಲ ಬಾರಿಗೆ ಪ್ರಯತ್ನಿಸಿದ್ದ ಬೈರಕೀ ಭಾವ. ಎಲ್ಲರಿಗೂ ಅಂತರಾಷ್ಟ್ರೀಯ ನೃತ್ಯ ದಿನಾಚರಣೆಯ ಶುಭಾಶಯ. ಎರಡು ದಿನ ತಡವಾಗಿ ಹೇಳುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ. `ಆಂಕೋ ಕೋ ಮಸ್ತಿ’ ಹಾಡಿಗೆ ಕುಳಿತೇ ಡ್ಯಾನ್ಸ್ ಮಾಡಿದ್ದಾರೆ. ಜಾನು ಡ್ಯಾನ್ಸ್ ನೋಡಿ ಪಡ್ಡೆ ಹುಡುಗರು ದಿಲ್‌ಖುಷ್ ಆಗಿದ್ದಾರೆ. ಇದನ್ನೂ ಓದಿ: ಅಪ್ಪು ಹುಟ್ಟುವಾಗಲೇ ಸೂಪರ್ ಸ್ಟಾರ್: ನಟ ಶಿವಣ್ಣ ಭಾವನ್ಮಾತಕ ಮಾತು
ಇನ್ನು ಸಿನಿಮಾಗಳ ವಿಚಾರಕ್ಕೆ ಬರೋದಾದರೆ ನಟಿ ಜಾನ್ವಿ ಅಕೌಂಟ್‌ನಲ್ಲಿ `ಗುಡ್ ಲಕ್ ಜೆರ್ರಿ’, `ಮಿಲಿ’, `ಬವಾಲ್’, ಮತ್ತು `ಮಿಸ್ಟರ್ ಆ್ಯಂಡ್ ಮಿಸ್ಟರೆಸ್ ಮಾಹಿ’ ಚಿತ್ರಗಳು ಕೈಯಲ್ಲಿವೆ. ಜಾನ್ವಿ ಮುಂಬರುವ ಸಿನಿಮಾಗಾಗಿ ಅಭಿಮಾನಿಗಳು ಕಾಯ್ತಿದ್ದಾರೆ.
‘ಧಡಕ್’ ಸಿನಿಮಾ ಮೂಲಕ ಬಾಲಿವುಡ್‌ಗೆ ಪದಾರ್ಪಣೆ ಮಾಡಿದ ಭುವನ ಸುಂದರಿ ಶ್ರೀದೇವಿ ಮಗಳು ಜಾನ್ವಿ ಕಪೂರ್ ಒಂದಲ್ಲ ಒಂದು ಗಾಸಿಪ್‌ಗೆ ತುತ್ತಾಗುತ್ತಲೇ ಇರುತ್ತಾರೆ. ತೆರೆ ಮೇಲೆ ಬರುವುದಕ್ಕೂ ಮುನ್ನವೇ ಈ ನಟಿ ಹೆಚ್ಚು ಗಾಸಿಪ್ ಒಳಗಾಗುತ್ತಿರುವುದು ಮತ್ತು ಸಿನಿಮಾ ಲೋಕಕ್ಕೆ ಬಂದ ಮೇಲೆ ದಿನಕ್ಕೊಂದು ವಿಷಯಕ್ಕೆ ಸುದ್ದಿಯುತ್ತಿರುವುದು ಜಾನ್ವಿಯ ವಿಶೇಷತೆ ಆಗಿದೆ. ಈಗ ಮತ್ತೆ ತಮ್ಮ ಡ್ರೆಸ್‌ಗೆ ಸಂಬಂಧಿಸಿದಂತೆ ಜಾನ್ವಿ ಟ್ರೋಲ್ ಆಗುತ್ತಿದ್ದಾರೆ.
ಜಾನ್ವಿ ಎಲ್ಲೇ ಹೋದರೂ ಅವರು ಧರಿಸುವ ಡ್ರೆಸ್ ಮೇಲೆ ಕ್ಯಾಮರಾ ಕಣ್ಣು ಬೀಳತ್ತೆ. ಅವರ ಪ್ರತಿಯೊಂದು ಚಲನೆಯನ್ನು ಪಾಪರಾಜಿಗಳು ಗಮನಿಸುತ್ತಿರುತ್ತವೆ. ಈ ನಟಿಯು ಸಿನಿಮಾಗಿಂತಲೂ ವೈಯಕ್ತಿಕ ವಿಚಾರಕ್ಕೆ ಹೆಚ್ಚು ಸುದ್ದಿ ಆಗುತ್ತಾರೆ. ಸದ್ಯ ಅನನ್ಯಾ ಪಾಂಡೆ ಜೊತೆ ಕ್ಲೋಸ್ ಆಗಿರುವ ಜಾನ್ವಿ, ಮುಂಬೈನಲ್ಲಿ ಇಬ್ಬರೂ ಸುತ್ತಾಡುತ್ತಲೇ ಇರುತ್ತಾರೆ. ಈ ವೇಳೆ ಜಾನ್ವಿ ಬ್ಯಾಕ್‍ಲೆಸ್ ಡ್ರೆಸ್ ಹಾಕಿಕೊಂಡಿದ್ದು, ಎಲ್ಲರ ಗಮನ ಸೆಳೆದಿದೆ.
ಬ್ಯಾಕ್‍ಲೆಸ್ ಡ್ರೆಸ್‌ನಲ್ಲಿ ಜಾನ್ವಿ ಕ್ಯಾಮರಾ ಕಣ್ಣಿಗೆ ಬಿದ್ದಿದ್ದು, ಟ್ರೋಲ್‌ಗೆ ಗುರಿಯಾಗಿದ್ದಾರೆ. ಇವರ ಫೋಟೋ ಮತ್ತು ವೀಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ. ಈ ಫೋಟೋದಲ್ಲಿ ಜಾನ್ವಿ ತಿಳಿ ನೀಲಿ ಬಣ್ಣದ ಡ್ರೆಸ್ ಧರಿಸಿದ್ದು, ಕ್ಯಾಮರಾ ಕಣ್ಣಿಗೆ ಬಿದ್ದಿದ್ದಾರೆ. ಈ ಡ್ರೆಸ್ನಲ್ಲಿ ಜಾನ್ವಿ ಫುಲ್ ಹಾಟ್ ಆಗಿ ಕಾಣಿಸುತ್ತಿದ್ದು ಟ್ರೋಲ್‌ನಲ್ಲಿ ದಿನದಿಂದ ದಿನಕ್ಕೆ ಜಾನ್ವಿ ಕಪೂರ್ ಗ್ಲಾಮರಸ್ ಆಗಿ ಕಾಣಿಸುತ್ತಿದ್ದಾರೆ. ಇದನ್ನೂ ಓದಿ: ‘ಅಂದೊಂದಿತ್ತು ಕಾಲ’ ಚಿತ್ರದಲ್ಲಿ ರವಿಚಂದ್ರನ್ ಪಾತ್ರ ರಿವಿಲ್
ಈ ಟ್ರೋಲ್ ಸಖತ್ ಸುದ್ದಿಯಾಗಿದ್ದು ಕಾಮೆಂಟ್‌ನಲ್ಲಿ ಜಾನ್ವಿ ಅಭಿಮಾನಿಗಳು ಸಂತೋಷ ವ್ಯಕ್ತಪಡಿಸುವ ಎಮೋಜಿ ಹಾಕುತ್ತಿದ್ದಾರೆ. ಈ ಫೋಟೋ ಬಗ್ಗೆ ಪಾಸಿಟಿವ್ ಹೇಳಿಕೆಗಳು ಬರುತ್ತಿವೆ. ಆದರೆ ಈ ಹಿಂದೆ ನಟಿ ವಿರುದ್ಧ ಹಲವು ನೆಗೆಟಿವ್ ಗಾಸಿಪ್ ಕೇಳಿಬರುತ್ತಿತ್ತು. ಏನೇ ಆದರೂ, ಜಾನ್ವಿ ಈ ಯಾವುದೇ ಗಾಸಿಪ್‌ಗಳಿಗೆ ತಲೆ ಕೆಡಿಸಿಕೊಂಡಿಲ್ಲ. ತಮಗೆ ಯಾವುದು ಸರಿ ಅದನ್ನೆ ಈ ನಟಿ ಮಾಡುತ್ತಿರುತ್ತಾರೆ. ಇವರಿಗೆ ಹಲವು ಸಿನಿಮಾಗಳ ಆಫರ್ ಬರುತ್ತಿದ್ದರೂ ಸಹ ಯಶಸ್ಸು ತಂದುಕೊಡುವ ಯಾವುದೇ ಸಿನಿಮಾಗಳು ಇವರಿಗೆ ಇನ್ನೂ ಸಿಕ್ಕಿಲ್ಲ.
ಬಾಲಿವುಡ್ ನಟಿ ಶ್ರೀದೇವಿ ಅವರ ಪುತ್ರಿ ಜಾನ್ವಿ ಕಪೂರ್ ಬಹುಬೇಡಿಕಯ ನಟಿಮಣಿಯರ ಸಾಲಿನಲ್ಲಿ ಒಬ್ಬರು. ಬಲಾವ್ ಸಿನಿಮಾ ಮೂಲಕ ನಟ ವರುಣ್ ಧವನ್ ಜೊತೆಗೆ ಜಾನ್ವಿ ಮೊದಲ ಬಾರಿಗೆ ಕಾಣಿಸಿಕೊಳ್ಳುತ್ತಿದ್ದಾರೆ.
‘ಇಬ್ಬರು ಬಿಗ್ ಸ್ಟಾರ್‌ಗಳನ್ನು ಇಟ್ಟುಕೊಂಡು ನನ್ನ ಮುಂದಿನ ಪ್ರಾಜೆಕ್ಟ್ ಪ್ಲ್ಯಾನ್ ಮಾಡಿದ್ದೇನೆ. ಚಿತ್ರಕ್ಕೆ ಬವಾಲ್ ಎಂದು ಹೆಸರಿಡಲಾಗಿದ್ದು, 2023 ಏಪ್ರಿಲ್ 7ರಂದು ಸಿನಿಮಾ ಬಿಡುಗಡೆಯಾಗಲಿದೆ. ವರುಣ್ ಮತ್ತು ಜಾನ್ವಿ ತಮ್ಮ ಕೆಮಿಸ್ಟ್ರಿ ಮೂಲಕ ಸಿನಿಮಾದಲ್ಲಿ ಮೋಡಿ ಮಾಡಲಿದ್ದಾರೆ’ ಎನ್ನುತ್ತಾರೆ ನಿರ್ದೇಶಕ ನಿತೇಶ್ ತಿವಾರಿ. ಇದನ್ನೂ ಓದಿ: ‘ದಿ ಕಾಶ್ಮೀರ್ ಫೈಲ್ಸ್’ ರಿಯಲ್ ಸ್ಟೋರಿ : ಅಕ್ಕಿ ಡ್ರಮ್ ನಲ್ಲಿ ಕೊಲ್ಲಲ್ಪಟ್ಟ ನಿಜವಾದ ಕಾಶ್ಮೀರಿ ಪಂಡಿತ ಇವರು
ಜಾನ್ವಿ ಕಪೂರ್ ಗುಡ್ಲಕ್ ಜೆರ್ರಿ ಮತ್ತು ಮಿಲಿ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದು ಮಲಯಾಳಂನ ಹೆಲೆನ್ ಚಿತ್ರದ ರಿಮೇಕ್ ಎಂದು ಹೇಳಲಾಗುತ್ತಿದೆ. ಇದೀಗ ಬಲಾವ್ ಸಿನಿಮಾದಲ್ಲಿ ವರೂಣ್ ಧವನ್ ಅವರಿಗೆ ಜೊತೆಯಾಗಿದ್ದಾರೆ.
ಮುಂಬೈ: ಬಾಲಿವುಡ್ ನಟಿ ಸಾರಾ ಅಲಿ ಖಾನ್ ಅವರು ಜಾನ್ವಿ ಕಪೂರ್ ಬಗ್ಗೆ ಮಾತನಾಡಿದ್ದು, ನಾವಿಬ್ಬರು ಬೆಸ್ಟ್ ಫ್ರೆಂಡ್ಸ್ ಅಲ್ಲ ಎಂದು ಮುಕ್ತವಾಗಿ ಹೇಳಿಕೊಂಡಿದ್ದಾರೆ.
ಸಾರಾ ಅಲಿ ಖಾನ್ ಮತ್ತು ಜಾನ್ವಿ ಕಪೂರ್ ಅವರನ್ನು ಸಾಮಾನ್ಯವಾಗಿ ಸೋಶಿಯಲ್ ಮೀಡಿಯಾದಲ್ಲಿ ಬೆಸ್ಟೀಸ್ ಎನ್ನಲಾಗುತ್ತಿದೆ. ಅವರಿಬ್ಬರು ಯಾವಾಗಲೂ ಒಟ್ಟಿಗೆ ಟ್ರಿಪ್ ಹೋಗುವುದು, ಒಂದೇ ಜಿಮ್ ಟ್ರೈನರ್ ತೆಗೆದುಕೊಂಡಿರುವುದನ್ನು ನೋಡಿದ ಅಭಿಮಾನಿಗಳು ಇವರಿಬ್ಬರು ಬೆಸ್ಟ್ ಫ್ರೆಂಡ್ಸ್ ಎಂದು ತಿಳಿದುಕೊಂಡಿದ್ದಾರೆ. ಇದನ್ನೂ ಓದಿ: ಕರಿಷ್ಮಾ ಫಿಟ್ನೆಸ್ ಹೊಗಳಿದ ಮಲೈಕಾ ಅರೋರಾ
ಜಾನ್ವಿ ಕಪೂರ್ ಜೊತೆಗಿನ ಬಾಂಧವ್ಯದ ಕುರಿತು ಮಾತನಾಡಿದ ಸಾರಾ, ಜನರು ಯೋಚಿಸಿದಂತೆ ಜಾನ್ವಿ ಮತ್ತು ನಾನು ಹೆಚ್ಚು ಸಾಮ್ಯತೆ ಹೊಂದಿದ್ದೇವೆ. ನಾವು ಉತ್ತಮ ಸ್ನೇಹಿತರಲ್ಲ. ನಾವಿಬ್ಬರೂ ಹಲವು ವರ್ಷಗಳಿಂದ ಸ್ನೇಹಿತರಾಗಿದ್ದೇವೆ. ನಮ್ಮಿಬ್ಬರಲ್ಲಿಯೂ ಮಹತ್ವಾಕಾಂಕ್ಷೆಗಳಿವೆ. ವೃತ್ತಿ ಜೀವನದಲ್ಲಿ ಇಬ್ಬರು ಒಂದೇ ವೃತ್ತಿಯಲ್ಲಿದ್ದೇವೆ. ನಾವಿಬ್ಬರು ಬಲಿಷ್ಠ ಹುಡುಗಿಯರು ಎಂದರು.
ನಾವು ಈ ಕೋವಿಡ್ ಕಾರಣದಿಂದ ನಮ್ಮ ವೃತ್ತಿಜೀವನದ ಎರಡು ವರ್ಷಗಳನ್ನು ಕಳೆದುಕೊಂಡಿದ್ದೇವೆ. ರಾಧಿಕಾ ಮದನ್ ಆಗಿರಲಿ ಅಥವಾ ಜಾನ್ವಿಯಾಗಿರಲಿ, ನಾನು ಅವರಿಬ್ಬರನ್ನೂ ನಿಜವಾಗಿಯೂ ಇಷ್ಟಪಡುತ್ತೇನೆ. ನಮಗೆ ನಮ್ಮ ಬಗ್ಗೆ ಗೊತ್ತಿದೆ. ಈ ಕಾರಣಕ್ಕೆ ಅನನ್ಯಾ ಪಾಂಡೆ, ರಾಧಿಕಾ, ಜಾನ್ವಿ ಅಥವಾ ನಾನು ಎಲ್ಲರೂ ಇಂದು ಇಲ್ಲಿರಲು ಸಾಧ್ಯವಾಗಿದೆ. ನಮ್ಮೆಲ್ಲರಲ್ಲಿಯೂ ಒಂದೊಂದು ವಿಶೇಷತೆ ಇದೆ. ನಾವು ಅದನ್ನು ನಂಬಬೇಕು ಎಂದು ವಿವರಿಸಿದರು.
ನಾನು ಸೆಟ್‍ನಲ್ಲಿ ನನ್ನ ಜೀವನ ಒಗ್ಗಿಕೊಳ್ಳುವ ಹೊತ್ತಿಗೆ, ಲಾಕ್‍ಡೌನ್ ಬಂತು. ಈ ಕೊರೊನಾದಿಂದ ನನ್ನ ಎಲ್ಲ ಯೋಜನೆಗಳು ನಿಂತು ಹೋಗಿದೆ. ಅದು ನಮ್ಮನ್ನು ಕಟ್ಟಿ ಹಾಕ್ಕಿತ್ತು. ನಾನು ಜಾನ್ವಿಗಿಂತ ಹೆಚ್ಚು ಸೆಟ್ ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದು ಎಂದು ಬೇಸರ ವ್ಯಕ್ತಪಡಿಸಿದರು. ಇದನ್ನೂ ಓದಿ: ನಾನು ಲಾರ್ಡ್ ಶಿವ ಅಲ್ಲ, ನಾನು ನಿಮ್ಮ ಶಿವಣ್ಣ ಮಾತ್ರ: ಹ್ಯಾಟ್ರಿಕ್ ಹೀರೋ ಹೀಗಂದಿದ್ಯಾಕೆ..?
ಜಾನ್ವಿ ಮತ್ತು ಸಾರಾ ಇಬ್ಬರೂ ತಮ್ಮ ವೃತ್ತಿ ಜೀವನದಲ್ಲಿ ಬ್ಯುಸಿಯಾಗಿದ್ದಾರೆ. ಪ್ರಸ್ತುತ ಸಾರಾ, ಲಕ್ಷ್ಮಣ್ ಉಟೇಕರ್ ನಿರ್ದೇಶಿಸುತ್ತಿರುವ ವಿಕ್ಕಿ ಕೌಶಲ್ ಮುಖ್ಯ ಭೂಮಿಕೆಯ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಜಾನ್ವಿ ‘ಗುಡ್ ಲಕ್ ಜೆರ್ರಿ’ ಮತ್ತು ‘ದೋಸ್ತಾನಾ 2’ ಸಿನಿಮಾ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ.
ಮುಂಬೈ: ಬಾಲಿವುಡ್ ನಟಿ ಜಾನ್ವಿ ಕಪೂರ್ ಕೋವಿಡ್‍ನಿಂದ ಚೇತರಿಸಿಕೊಂಡಿದ್ದು, ಹಾಲಿಡೇ ಮೂಡಿನಲ್ಲಿ ಇದ್ದಾರೆ.
ಇತ್ತೀಚೆಗೆ ಸೆಲೆಬ್ರೆಟಿಗಳಿಗೆ ಕೊರೊನಾ ಹೆಚ್ಚು ಕಾಣಿಸಿಕೊಳ್ಳುತ್ತಿದ್ದು, ಜಾನ್ವಿಗೂ ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿತ್ತು. ಇದಕ್ಕೆ ಅವರು ಹೋಮ್ ಕಾರಂಟೈನ್ ನಲ್ಲಿದ್ದು, ಈಗ ಚೇತರಿಸಿಕೊಂಡಿದ್ದಾರೆ. ಈಗ ಫುಲ್ ರಿಲಾಕ್ಸ್ ಮೂಡ್ ನಲ್ಲಿರುವ ಅವರು ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಬೆಳಗ್ಗೆ 3-4 ಗಂಟೆಯವರೆಗೆ ನನ್ನ ಮಕ್ಕಳ ಹೋಮ್ ವರ್ಕ್ ಮಾಡಿಸುತ್ತಿದ್ದೆ: ಪ್ರಿಯಾಂಕಾ ಗಾಂಧಿ
ಪ್ರಸ್ತುತ ಸ್ನೇಹಿತರ ಜೊತೆ ಹಾಲಿಡೇಗೆ ಹೋಗಿರುವ ಜಾನ್ವಿ ಸ್ವಿಮ್ಮಿಂಗ್ ಸೂಟ್ ನಲ್ಲಿ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಫೋಟೋ ಜೊತೆಗೆ ಅವರು ಉಳಿದುಕೊಂಡಿರುವ ರೂಮ್ ವ್ಯೂ ಹಾಕಿ, ‘ಯುಡೈಮೋನಿಯಾ'(ಹ್ಯಾಪಿ ಮೂಡ್ ಗೆ ಗ್ರೀಕ್ ಪದ) ಎಂದು ಬರೆದು ಪೋಸ್ಟ್ ಮಾಡಿದ್ದಾರೆ.
ನಿನ್ನೆಯೂ ಸಹ ಜಾನ್ವಿ ಪೂಲ್ ನಲ್ಲಿ ಇರುವ ಫೋಟೋವನ್ನು ಇನ್‍ಸ್ಟಾದಲ್ಲಿ ಪೋಸ್ಟ್ ಮಾಡಿದ್ದು, ನನ್ನ ದಾರಿಯನ್ನು ಹುಡುಕುತ್ತಿದ್ದೇನೆ ಎಂದು ಬರೆದು ಪೋಸ್ಟ್ ಮಾಡಿದ್ದಾರೆ.
ಕಳೆದ ವರ್ಷ ಡಿಸೆಂಬರ್ ನಲ್ಲಿ ತಂದೆ ಬೋನಿ ಕಪೂರ್ ಅವರ ನಿರ್ಮಾಣದಲ್ಲಿ ಮೊದಲ ಬಾರಿಗೆ ಸಿನಿಮಾ ಮಾಡುತ್ತಿರುವುದಾರ ಬಗ್ಗೆ ಪೋಸ್ಟ್ ಮಾಡಿದ್ದ ಜಾನ್ವಿ, ‘ಮಿಲ್ಲಿ’ ನನ್ನ ತಂದೆಯೊಂದಿಗಿನ ನನ್ನ ಮೊದಲ ಚಿತ್ರ. ನಾನು ನಿಮ್ಮೊಂದಿಗೆ ಕೆಲಸ ಮಾಡುವುದಾಗಿ ಕೇಳಲು ತುಂಬಾ ಖುಷಿಯಾಗಿದೆ. ನೀವು ಕೈಗೆತ್ತಿಕೊಳ್ಳುವ ಪ್ರತಿಯೊಂದು ಚಿತ್ರಕ್ಕೆ ಸಂಪೂರ್ಣವಾಗಿ ನಿಮ್ಮನ್ನು ನೀವು ಅರ್ಪಿಸಿಕೊಳ್ಳುತ್ತಿರಾ ಎಂದು ಕೇಳಿದ್ದೇನೆ. ಈಗ ನಿಮ್ಮ ಜೊತೆಯೇ ಕೆಲಸ ಮಾಡುತ್ತಿರುವುದು ತುಂಬಾ ಸಂತೋಷವಾಗುತ್ತಿದೆ ಎಂದು ಬರೆದು ತಮ್ಮ ಖುಷಿ ವಿಚಾರವನ್ನು ಹಂಚಿಕೊಂಡಿದ್ದರು. ಇದನ್ನೂ ಓದಿ: ಅಕ್ರಮವಾಗಿ ಒತ್ತುವರಿಯಾಗಿದ್ದ ಜಾಗ ಶಾಲೆಗೆ ವಾಪಸ್ – ತಹಶೀಲ್ದಾರ್‌ಗೆ ಗ್ರಾಮಸ್ಥರಿಂದ ಅಭಿನಂದನೆ
2018 ರಲ್ಲಿ ‘ಧಡಕ್’ ಸಿನಿಮಾ ಮೂಲಕ ಬಾಲಿವುಡ್‍ಗೆ ಪಾದಾರ್ಪಣೆ ಮಾಡಿದ ಈ ನಟಿ, ಕೊನೆಯದಾಗಿ ರಾಜ್‍ಕುಮಾರ್ ರಾವ್ ಮತ್ತು ವರುಣ್ ಶರ್ಮಾ ಅವರೊಂದಿಗೆ ‘ರೂಹಿ’ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಇದು ಹಾರರ್ ಮತ್ತು ಹಾಸ್ಯ ಸಿನಿಮಾವಾಗಿತ್ತು.
ಮುಂಬೈ: ಮೊದಲ ಬಾರಿಗೆ ಬೋನಿ ಕಪೂರ್ ನಿರ್ಮಾಣದಲ್ಲಿ ಮಗಳು ಜಾನ್ವಿ ಕಪೂರ್ ನಟಿಸುತ್ತಿದ್ದಾರೆ.
ಬಾಲಿವುಡ್ ನಟಿ ಜಾನ್ವಿ ಕಪೂರ್ ‘ಮಿಲ್ಲಿ’ ಎಂಬ ಹೊಸ ಸಿನಿಮಾ ಮಾಡುತ್ತಿದ್ದು, ಈ ಸಿನಿಮಾ ಹೆಚ್ಚು ವಿಶೇಷವಾಗಿದೆ. ಏಕೆಂದರೆ ಇದೇ ಮೊದಲ ಬಾರಿಗೆ ಜಾನ್ವಿ ತನ್ನ ತಂದೆ ಬೋನಿ ಕಪೂರ್ ನಿರ್ಮಾಣದಲ್ಲಿ ನಟಿಸುತ್ತಿದ್ದಾರೆ.
ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಮಾಡಿದ ಜಾನ್ವಿ, ಮಿಲ್ಲಿ – ನನ್ನ ತಂದೆಯೊಂದಿಗಿನ ನನ್ನ ಮೊದಲ ಚಿತ್ರ. ನಾನು ನಿಮ್ಮೊಂದಿಗೆ ಕೆಲಸ ಮಾಡುವುದಾಗಿ ಕೇಳಲು ತುಂಬಾ ಖುಷಿಯಾಗಿದೆ. ನೀವು ಕೈಗೆತ್ತಿಕೊಳ್ಳುವ ಪ್ರತಿಯೊಂದು ಚಿತ್ರಕ್ಕೂ ಸಂಪೂರ್ಣವಾಗಿ ನಿಮ್ಮನ್ನು ನೀವು ಅರ್ಪಿಸಿಕೊಳ್ಳುತ್ತಿರಾ ಎಂದು ಕೇಳಿದ್ದೇನೆ ಎಂದು ಬರೆದು ತಮ್ಮ ಖುಷಿ ವಿಚಾರವನ್ನು ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಪಂಪಾ ಸರೋವರವನ್ನು ಸಂಪೂರ್ಣ ಕಿತ್ತು ಹಾಕಿದ್ದು ಸರಿಯಲ್ಲ: ಶರಣಬಸಪ್ಪ ಕೋಲ್ಕಾರ್
ಈ ಸಿನಿಮಾ ನನಗೆ ತುಂಬಾ ಸ್ಪೆಷಲ್ ಎಂದು ಹೇಳಿಕೊಂಡ ಜಾನ್ವಿ, ಈ ಚಿತ್ರ ನನಗೆ ತುಂಬಾ ವಿಶೇಷವಾಗಲು ಇದೊಂದೆ ಕಾರಣವಲ್ಲ. ಸಿನಿಮಾದ ಮೇಲಿರುವ ಪ್ರೀತಿ ಮತ್ತು ಸಿನಿಮಾಗಾಗಿ ಸಂಪೂರ್ಣ ಜೀವನ ಸೇವಿಸಿದವರೊಂದಿಗೆ ಕೆಲಸ ಮಾಡಲು ನನಗೆ ಇನ್ನು ಸ್ಪೂರ್ತಿದಾಯಕವಾಗಿರುತ್ತೆ. ಅಂತಹವರಲ್ಲಿ ಮಾತುಕುಟ್ಟಿ ಕ್ಸೇವಿಯರ್ ಸರ್ ಕೂಡ ಒಬ್ಬರು. ನೋಬಲ್ ಥಾಮಸ್ ನಿಮ್ಮ ಮಾರ್ಗದರ್ಶನ ಮತ್ತು ತಾಳ್ಮೆಗೆ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ.
ನೀವು ಪ್ರಾಮಾಣಿಕವಾಗಿ ಮತ್ತು ಸಾಕಷ್ಟು ಕಷ್ಟಪಟ್ಟು ಕೆಲಸ ಮಾಡಿದ್ದೀರಿ. ಪ್ರಯಾಣವು ಎಷ್ಟೇ ಕಠಿಣವಾಗಿದ್ದರೂ ಅದು ಕಷ್ಟ ಎನಿಸುವುದಿಲ್ಲ. ಈ ಕಷ್ಟಗಳೇ ಸಿನಿಮಾ ಇನ್ನೂ ಯಶಸ್ವಿಯಾಗಿ ಮಾಡಲು ಸಾಧ್ಯವಾಗುತ್ತೆ ಎಂದು ಹೇಳಿದ ಜಾನ್ವಿ ಅಭಿಮಾನಿಗಳಿಗೆ, ಈ ಸಿನಿಮಾವನ್ನು ನೀವು ನೋಡಿದಾಗ ಹೆಮ್ಮೆಪಡುತ್ತಿರ ಎಂದು ಬರೆದು ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ: ಜಾರಕಿಹೊಳಿ ಸಹೋದರರಿಗೆ ಪ್ರತಿಷ್ಠೆಯ ಕಣವಾದ ವಿಧಾನ ಪರಿಷತ್ ಚುನಾವಣೆ
2018 ರಲ್ಲಿ ‘ಧಡಕ್’ ಸಿನಿಮಾ ಮೂಲಕ ಬಾಲಿವುಡ್‍ಗೆ ಪಾದಾರ್ಪಣೆ ಮಾಡಿದ ಈ ನಟಿ, ಕೊನೆಯದಾಗಿ ರಾಜ್‍ಕುಮಾರ್ ರಾವ್ ಮತ್ತು ವರುಣ್ ಶರ್ಮಾ ಅವರೊಂದಿಗೆ ‘ರೂಹಿ’ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಇದು ಹಾರರ್ ಮತ್ತು ಹಾಸ್ಯ ಸಿನಿಮಾವಾಗಿತ್ತು.