Tag: ಜಾನ್ವಿ ಕಪೂರ್

  • ಅಖಿಲ್ ಅಕ್ಕಿನೇನಿ ಜೊತೆ ಜಾನ್ವಿ ಕಪೂರ್ ರೊಮ್ಯಾನ್ಸ್

    ಅಖಿಲ್ ಅಕ್ಕಿನೇನಿ ಜೊತೆ ಜಾನ್ವಿ ಕಪೂರ್ ರೊಮ್ಯಾನ್ಸ್

    ಹುಭಾಷಾ ನಟಿಯಾಗಿ ಶ್ರೀದೇವಿ ಕಪೂರ್ (Sridevi Kapoor)  ಜನಪ್ರಿಯತೆ ಗಳಿಸಿದ್ದರು. ಅಮ್ಮನ ಹಾದಿಯಲ್ಲೇ ಪುತ್ರಿ ಜಾನ್ವಿ ಕಪೂರ್ (Janhavi Kapoor) ಕೂಡ ಹೆಜ್ಜೆ ಇಡ್ತಿದ್ದಾರೆ. ದಕ್ಷಿಣದ ಸಿನಿಮಾಗಳತ್ತ ಜಾನ್ವಿ ಕಪೂರ್ ಹೆಚ್ಚು ಗಮನ ನೀಡ್ತಿದ್ದಾರೆ.

    ಮಿಲಿ, ಗುಡ್ ಲಕ್ ಜರ‍್ರಿ ಸಿನಿಮಾಗಳ ಮೂಲಕ ಬಾಲಿವುಡ್‌ನಲ್ಲಿ (Bollywood) ಮೋಡಿ ಮಾಡಿರುವ ಹಾಟ್ ಬ್ಯೂಟಿ ಜಾನ್ವಿ ಕಪೂರ್ ಇದೀಗ ತೆಲುಗಿನತ್ತ ಮುಖ ಮಾಡಿದ್ದಾರೆ. ಶ್ರೀದೇವಿ ಅವರು ಹೇಗೆ ಒಂದೊಂದೇ ಯಶಸ್ಸಿನ ಮೆಟ್ಟಿಲನ್ನ ಏರಿದ್ರೋ ಅದೇ ರೀತಿ ಸೌತ್ ಸಿನಿಮಾ ಸ್ಕ್ರಿಪ್ಟ್‌ಗಳಿಗೆ ಜಾನ್ವಿ ಹೆಚ್ಚಿನ ಪ್ರಾಮುಖ್ಯತೆ ನೀಡ್ತಿದ್ದಾರೆ. ಇದನ್ನೂ ಓದಿ:ಚೊಚ್ಚಲ ಸಿನಿಮಾ ನಿರ್ಮಾಣದತ್ತ ಶಿವಣ್ಣನ ಪುತ್ರಿ ನಿವೇದಿತಾ

    ಇದೀಗ ಜ್ಯೂನಿಯರ್ ಎನ್‌ಟಿಆರ್ (Jr.ntr) ಜೊತೆಗಿನ ಸಿನಿಮಾ ರಿಲೀಸ್ ಆಗುವ ಮುನ್ನವೇ ಮತ್ತೊಂದು ಬಂಪರ್ ಆಫರ್‌ನ್ನ ನಟಿ ತಮ್ಮದಾಗಿಸಿಕೊಂಡಿದ್ದಾರೆ. ಜಾನ್ವಿ ಇದೀಗ ಮತ್ತೊಬ್ಬ ತೆಲುಗಿನ ನಟನ ಜೊತೆ ನಟಿಸಲು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಹೊಸ ಬಗೆಯ ಕಥೆಯಲ್ಲಿ ಜಾನ್ವಿ ಕಮಾಲ್‌ ಮಾಡಲಿದ್ದಾರೆ.

    ಹೊಸ ಸಿನಿಮಾಗೆ ನಾಗಾರ್ಜುನ ಪುತ್ರ ಅಖಿಲ್ ಅಕ್ಕಿನೇನಿಗೆ (Akhil Akkineni)  ನಾಯಕಿಯಾಗಿ ಜಾನ್ವಿ ಕಪೂರ್ ಸೆಲೆಕ್ಟ್ ಆಗಿದ್ದಾರೆ. ಯುವ ನಿರ್ದೇಶಕ ಅನಿಲ್ ಕುಮಾರ್ (Anil Kumar) ನಿರ್ದೇಶನದಲ್ಲಿ ಅಖಿಲ್- ಜಾನ್ವಿ ಆಕ್ಟ್ ಮಾಡಲಿದ್ದಾರೆ. ಅನಿಲ್ ಈ ಹಿಂದೆ ಪ್ರಭಾಸ್ ನಟನೆಯ ‘ಸಾಹೋ’ (Saho) ಚಿತ್ರದಲ್ಲಿ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ್ದಾರೆ.

    ಮೊದಲ ಬಾರಿಗೆ ಜಾನ್ವಿ- ಅಖಿಲ್‌ ತೆರೆಯ ಮೇಲೆ ಒಂದಾಗುತ್ತಿದ್ದು, ಈ ಫ್ರೆಶ್‌ ಫೇರ್‌ ಅದೆಷ್ಟರ ಮಟ್ಟಿಗೆ ಮೋಡಿ ಮಾಡಲಿದೆ ಎಂಬುದನ್ನ ಮುಂದಿನ ದಿನಗಳವರೆಗೂ ಕಾದುನೋಡಬೇಕಿದೆ.

  • ತೆಲುಗಿನ ಮತ್ತೊಂದು ಚಿತ್ರ ಒಪ್ಪಿಕೊಂಡ ಬಾಲಿವುಡ್ ನಟಿ ಜಾನ್ವಿ ಕಪೂರ್

    ತೆಲುಗಿನ ಮತ್ತೊಂದು ಚಿತ್ರ ಒಪ್ಪಿಕೊಂಡ ಬಾಲಿವುಡ್ ನಟಿ ಜಾನ್ವಿ ಕಪೂರ್

    ಲವು ದಿನಗಳ ಹಿಂದೆಯಷ್ಟೇ ತೆಲುಗು ಸಿನಿಮಾ ರಂಗಕ್ಕೆ ಅಧಿಕೃತವಾಗಿ ಎಂಟ್ರಿ ಕೊಟ್ಟಿದ್ದರು ಬಾಲಿವುಡ್ (Bollywood) ನಟಿ ಜಾನ್ವಿ ಕಪೂರ್ (Janhvi Kapoor). ಜ್ಯೂನಿಯರ್ ಎನ್.ಟಿ. ಆರ್ (Jr. NTR) ಸಿನಿಮಾದ ಮೂಲಕ ದಕ್ಷಿಣದ ಚಿತ್ರಗಳತ್ತ ಅವರು ಮುಖ ಮಾಡಿದ್ದರು. ಮೊನ್ನೆಯಷ್ಟೇ ಈ ಸಿನಿಮಾದ ಮುಹೂರ್ತವಾಗಿದ್ದು, ಶೂಟಿಂಗ್ ಕೂಡ ಶುರುವಾಗಿದೆ.

    ಜಾನ್ವಿ ಒಪ್ಪಿಕೊಂಡ ತೆಲುಗಿನ ಮೊದಲ ಸಿನಿಮಾ ಇನ್ನೂ ಒಂದು ಹಂತದ ಶೂಟಿಂಗ್ ಕೂಡ ಮುಗಿಸಿಲ್ಲ. ಆಗಲೇ ತೆಲುಗಿನ ಮತ್ತೊಂದು ಚಿತ್ರವನ್ನು ಅವರು ಒಪ್ಪಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ರಾಮ್ ಚರಣ್ (Ram Charan) ನಟನೆಯ ಹೊಸ ಸಿನಿಮಾಗೆ ಜಾನ್ವಿ ನಾಯಕಿಯಾಗಿ ಆಯ್ಕೆಯಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ:ತೆಲುಗು ಸಿನಿಮಾ ರಂಗದಲ್ಲೇ ಇನ್ನೂ ಹತ್ತು ವರ್ಷ ಪ್ರಶಾಂತ್ ನೀಲ್ ಲಾಕ್?

    `ದಢಕ್’ (Dhadak) ಸಿನಿಮಾದ ಮೂಲಕ ಬಾಲಿವುಡ್‌ಗೆ ನಾಯಕಿಯಾಗಿ ಎಂಟ್ರಿ ಕೊಟ್ಟಿರುವ ಜಾನ್ವಿ ಕಪೂರ್ (Janhavi Kapoor) ಹಲವು ಬಗೆಯ ಪಾತ್ರಗಳ ಮೂಲಕ ಕಾಣಿಸಿಕೊಂಡರು. ನಟಿ ಶ್ರೀದೇವಿ ಕೂಡ ಬಹುಭಾಷಾ ನಟಿಯಾಗಿ ಸೈ ಎನಿಸಿಕೊಂಡಿದ್ದರು. ಈಗ ಅಮ್ಮನ ಹಾದಿಯನ್ನೇ ಜಾನ್ವಿ ಕೂಡ ಫಾಲೋವ್ ಮಾಡ್ತಿದ್ದಾರೆ. ಸೌತ್ ರಂಗದತ್ತ ನಟಿ ಮುಖ ಮಾಡ್ತಿದ್ದಾರೆ.

    ಸಾಕಷ್ಟು ಸಂದರ್ಶನಗಳಲ್ಲಿ ಜಾನ್ವಿ ತೆಲುಗಿನಲ್ಲಿ ನಟಿಸುವ ಬಗ್ಗೆ ಮಾತನಾಡಿದ್ದರು. ಜ್ಯೂನಿಯರ್ ಎನ್‌ಟಿಆರ್ ನಟನೆ ಅಂದ್ರೆ ಇಷ್ಟ, ಅವರೊಂದಿಗೆ ನಟಿಸಬೇಕು ಎಂದು ಕೂಡ ಹೇಳಿದ್ದರು. ಈ ಎಲ್ಲಾ ವಿಚಾರಗಳು ಸಖತ್ ಸದ್ದು ಮಾಡಿದ್ದವು. ಕೊನೆಗೂ ಕೊರಟಾಲ ಶಿವ (Kortala Shiva)  ನಿರ್ದೇಶನದ ಸಿನಿಮಾದಲ್ಲಿ ತಾರಕ್‌ಗೆ ಜಾನ್ವಿ ನಾಯಕಿಯಾಗಿ ಆಯ್ಕೆಯಾದರು.

  • ರಿಲಯನ್ಸ್ ಜ್ಯುವೆಲ್ಸ್‌ಗಾಗಿ ಬೆಂಗಳೂರಿಗೆ ಬಂದ ಜಾನ್ವಿ ಕಪೂರ್

    ರಿಲಯನ್ಸ್ ಜ್ಯುವೆಲ್ಸ್‌ಗಾಗಿ ಬೆಂಗಳೂರಿಗೆ ಬಂದ ಜಾನ್ವಿ ಕಪೂರ್

    ರಿಲಯನ್ಸ್ ಜ್ಯುವೆಲ್ಸ್ (Reliance Jewels) ವತಿಯಿಂದ ಮೆಜೆಸ್ಟಿಕ್ ತಂಜಾವೂರ್ ಕಲೆಕ್ಷನ್ ಆಭರಣಗಳ ಅನಾವರಣ ಮಾಡಲಾಯ್ತು. ಅಕ್ಷಯ ತೃತೀಯ ಅಂಗವಾಗಿ ತಮಿಳುನಾಡಿನ ತಂಜಾವೂರಿನ (Thanjavur) ದೇವಾಲಯಗಳು, ಅರಮನೆ, ದರ್ಬಾರ್ ಹಾಲ್‌ಗಳಿಂದ ಸ್ಪೂರ್ತಿಗೊಂಡು ತಯಾರಿಸಿರೋ ಆಭರಣಗಳನ್ನ ಬೆಂಗಳೂರಿನ ರಿಲಾಯನ್ಸ್ ಜುವೆಲ್ಸ್ ಅನಾವರಣಗೊಳಿಸಿತು. ಈ ವೇಳೆ ತಂಜಾವೂರ್ ಕಲೆಕ್ಷನ್ ಆಭರಣಗಳನ್ನ ಧರಿಸಿ ಹೆಜ್ಜೆ ಹಾಕಿದ ಬಾಲಿವುಡ್ ಬ್ಯೂಟಿ ಜಾನ್ವಿ ಕಪೂರ್ (Janhavi Kapoor) ಎಲ್ಲರ ಗಮನ ಸೆಳೆದಿದ್ದಾರೆ.

    ತಂಜಾವೂರು ಕಲೆಕ್ಷನ್ (Thanjavur Collection) ವಿವಿಧ ರೀತಿಯ ಆಭರಣಗಳು ಒಳಗೊಂಡಿದ್ದು, ಇವುಗಳನ್ನು ವಿವಾಹದಿಂದ ಹಬ್ಬದ ಕಾರ್ಯಕ್ರಮಗಳು ಹಾಗೂ ವಿಶೇಷ ಸಂದರ್ಭಗಳು ಸೇರಿದಂತೆ ಎಲ್ಲ ಸಮಯಕ್ಕೂ ಧರಿಸಬಹುದು. ಕಲೆಕ್ಷನ್‌ನಲ್ಲಿ ಅದ್ಭುತ ನೆಕ್ಲೇಸ್ ಸೆಟ್‌ಗಳು, ಚೋಕರ್‌ಗಳು, ಪದರವನ್ನು ಹೊಂದಿರುವ ನೆಕ್ಲೇಸ್‌ಗಳು, ಬ್ರೇಸ್‌ಲೆಟ್‌ಗಳು, ಕಿವಿಯೋಲೆಗಳು, ರಿಂಗ್‌ಗಳು, ವೇಸ್ಟ್‌ಬೆಲ್ಟ್‌ಗಳು, ಮಾಂಗ್ ಟಿಕ್ಕಾಗಳು, ಕಿವಿ ಚೈನ್‌ಗಳು ಮತ್ತು ಇತರೆ ಒಳಗೊಂಡಿವೆ. ಇದನ್ನೂ ಓದಿ: ಯಶ್‌ ಜೊತೆ ದಿಲ್‌ ರಾಜು ಹೊಸ ಸಿನಿಮಾ- ಅಪ್‌ಡೇಟ್‌ ಹಂಚಿಕೊಂಡ ನಿರ್ಮಾಪಕ

    ಈ ಸಂದರ್ಭದಲ್ಲಿ ಮಾತನಾಡಿದ ರಿಲಯನ್ಸ್ ಜ್ಯುವೆಲ್ಸ್ ಸಿಇಒ ಸುನೀಲ್ ನಾಯಕ್ (Sunil Nayak), ಭಾರತದಾದ್ಯಂತ ಈ ಅಕ್ಷಯ ತೃತೀಯದಂದು ನಮ್ಮ ತಂಜಾವುರು ಕಲೆಕ್ಷನ್ ಅನ್ನು ಪ್ರಸ್ತುತ ಪಡಿಸಲು ಹೆಮ್ಮೆಯಾಗುತ್ತಿದೆ. ಇದು ತಮಿಳುನಾಡಿನ ತಂಜಾವೂರು ಪ್ರಾಂತ್ಯದ ಶ್ರೀಮಂತ ಪರಂಪರೆಯನ್ನು ತೆರೆದಿಡುತ್ತದೆ. ನಮ್ಮ ಥೀಮ್ ಆಧರಿತ ಆಭರಣ ಕಲೆಕ್ಷನ್‌ಗಳು ದೇಶದ ವೈವಿಧ್ಯಮಯ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತವೆ ಮತ್ತು ಸೀಸನ್ 7.0 ಆರಂಭಿಸುವ ಮೂಲಕ ಈ ಪರಂಪರೆಯನ್ನು ನಾವು ಮುಂದುವರಿಸುತ್ತಿದ್ದೇವೆ. ನಮ್ಮ ಥೀಮ್ ಆಧರಿತ ಕಲೆಕ್ಷನ್‌ಗಳನ್ನು ನಮ್ಮ ಗ್ರಾಹಕರು ಎಂದಿಗೂ ಮೆಚ್ಚಿದ್ದಾರೆ ಮತ್ತು ಇದನ್ನೂ ಅವರು ಅದೇ ರೀತಿ ಮೆಚ್ಚುತ್ತಾರೆ ಎಂಬ ವಿಶ್ವಾಸವನ್ನು ಹೊಂದಿದ್ದೇವೆ ಎಂದಿದ್ದಾರೆ.

    ನಟಿ ಜಾನ್ವಿ ಕಪೂರ್ ಮಾತನಾಡಿ, ರಿಲಯನ್ಸ್ ಜ್ಯುವೆಲ್ಸ್ ಬಿಡುಗಡೆ ಮಾಡಿದ ತಂಜಾವೂರ್ ಕಲೆಕ್ಷನ್‌ನ ಭಾಗವಾಗಿರುವುದು ನನಗೆ ಹೆಮ್ಮೆಯ ಸಂಗತಿಯಾಗಿದೆ. ಆಭರಣವು ಅದ್ಭುತವಾಗಿದೆ ಮತ್ತು ತಂಜಾವೂರಿನ ವೈಭವಯುತ ಪರಂಪರೆಯ ಸ್ವಾದವನ್ನು ಇದು ಸೆರೆಹಿಡಿಯುತ್ತದೆ. ತಮಿಳುನಾಡು ಮತ್ತು ಅದರ ಶ್ರೀಮಂತ ಸಂಸ್ಕೃತಿಯು ಎಂದಿಗೂ ನನ್ನ ಹೃದಯದಲ್ಲಿ ವಿಶೇಷ ಸ್ಥಾನವನ್ನು ಹೊಂದಿದೆ. ಏಕೆಂದರೆ, ನನ್ನ ಕುಟುಂಬದ ಮೂಲ ಇದಾಗಿದೆ ಮತ್ತು ಈ ಅದ್ಭುತ ನೆಕ್ಲೇಲೆಸ್ ಸೆಟ್ ಅನ್ನು ಧರಿಸಲು ನನಗೆ ತುಂಬಾ ಖುಷಿಯಾಗುತ್ತದೆ. ಇದನ್ನು ಕುಸುರಿ ಕೆಲಸಕ್ಕೆ ಹೆಚ್ಚಿನ ಗಮನ ನೀಡಿ ಮತ್ತು ಅತ್ಯುತ್ತಮ ಕೌಶಲದಿಂದ ವಿನ್ಯಾಸ ಮಾಡಿ ರೂಪಿಸಲಾಗಿದೆ ಎಂದು ನಟಿ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

    ತಂಜಾವೂರು ಕಲೆಕ್ಷನ್ ಈಗ ಭಾರತದ ಎಲ್ಲ ರಿಲಯನ್ಸ್ ಜ್ಯುವೆಲ್ಸ್ ಸ್ಟೋರ್‌ಗಳಲ್ಲಿ ಲಭ್ಯವಿದೆ. ಏ.1 ರಿಂದ 24ರವರೆಗೆ ಕ್ಯಾಂಪೇನ್ ಅವಧಿಯಲ್ಲಿ ಚಿನ್ನದ ಆಭರಣ ತಯಾರಿಕೆ ಮತ್ತು ವಜ್ರದ ಆಭರಣ ಇನ್ವಾಯ್ಸ್‌ಗಳ ಮೇಲೆ ಶೇಕಡ 25ರ ವರೆಗೆ ರಿಯಾಯಿತಿಯನ್ನು ನೀಡಲಾಗುತ್ತಿದೆ.

  • ಬಾಯ್ ಫ್ರೆಂಡ್ ಜೊತೆ ತಿರುಪತಿಗೆ ಬಂದ ನಟಿ ಜಾನ್ವಿ ಕಪೂರ್

    ಬಾಯ್ ಫ್ರೆಂಡ್ ಜೊತೆ ತಿರುಪತಿಗೆ ಬಂದ ನಟಿ ಜಾನ್ವಿ ಕಪೂರ್

    ಬಾಲಿವುಡ್ ಖ್ಯಾತ ನಟಿ ಶ್ರೀದೇವಿ (Sridevi) ಪುತ್ರಿ ಜಾನ್ವಿ ಕಪೂರ್ (Janhvi Kapoor) ಮತ್ತು ಶಿಖರ್ ಪಹಾರಿಯಾ (Shikhar Paharia) ಡೇಟಿಂಗ್ ವಿಚಾರ ಹೊಸದೇನೂ ಅಲ್ಲ. ಹಲವು ವರ್ಷಗಳಿಂದ ಅವರು ಪ್ರೀತಿಸುತ್ತಿದ್ದರು ಎನ್ನುವುದಕ್ಕೆ ಹಲವು ಸಾಕ್ಷಿಗಳು ಸಿಗುತ್ತವೆ. ಆದರೆ, ಈ ಮಧ್ಯ ಇಬ್ಬರೂ ದೂರ ದೂರು ಆಗಿದ್ದರು ಅನ್ನುವ ಮಾತಿತ್ತು. ಇಬ್ಬರ ನಡುವೆ ಹೊಂದಾಣಿಕೆಯ ಕಾರಣದಿಂದಾಗಿ ಬ್ರೇಕ್ ಅಪ್ ಆಗಿದೆ ಎಂದು ಹೇಳಲಾಗಿತ್ತು. ಆದರೆ, ಮತ್ತೆ ಇದೀಗ ಜೋಡಿ ಒಂದಾಗಿದೆ.

    ಜಾನ್ವಿ ಕಪೂರ್ ಮತ್ತು ಶಿಖರ್ ಇತ್ತೀಚಿನ ದಿನಗಳಲ್ಲಿ ಇಬ್ಬರೂ ಒಟ್ಟಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಕೆಲ ತಿಂಗಳ ಹಿಂದೆಯಷ್ಟೇ ಒಟ್ಟಿಗೆ ವಿದೇಶ ಪ್ರಯಾಣವನ್ನೂ ಮಾಡಿದ್ದರು. ಅಲ್ಲದೇ, ಅಂಬಾನಿ ಮನೆಯಲ್ಲಿ ನಡೆದ ಕಾರ್ಯಕ್ರಮದಲ್ಲೂ ಈ ಜೋಡಿ ಕಾಣಿಸಿಕೊಂಡಿತ್ತು. ಇದೀಗ ತಿರುಪತಿಯಲ್ಲಿ ಜಾನ್ವಿ ಜೊತೆ ಶಿಖರ್ ಕಾಣಿಸಿಕೊಂಡಿದ್ದಾರೆ. ಇದನ್ನೂ ಓದಿ: ಅವಳಿ ಮಕ್ಕಳ ಹೆಸರನ್ನು ರಿವೀಲ್ ಮಾಡಿದ ನಟಿ ನಯನತಾರಾ

    ಬಾಯ್ ಫ್ರೆಂಡ್ ಜೊತೆ ಇಂದು ಬೆಳ್ಳಂಬೆಳಗ್ಗೆ ತಿರುಪತಿಗೆ ಬಂದಿದ್ದ ಜಾನ್ವಿ, ತಿಮ್ಮಪ್ಪನ ದರ್ಶನ ಪಡೆದಿದ್ದಾರೆ. ಇಬ್ಬರೂ ತಿರುಪತಿಗೆ ಬಂದಿರುವ ಮತ್ತು ಪೂಜೆ ಸಲ್ಲಿಸಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಇಬ್ಬರೂ ಒಟ್ಟಿಗೆ ದೇವಸ್ಥಾನಕ್ಕೆ ಬಂದಿದ್ದಾರೆ ಎಂದರೆ, ಮುಂದೊಂದು ದಿನ ಸ್ಪೆಷಲ್ ಸುದ್ದಿ ಏನಾದರೂ ಕೊಡಬಹುದಾ ಎಂದು ಅಂದಾಜಿಸಲಾಗುತ್ತಿದೆ.

    ಜಾನ್ವಿ ಸದ್ಯ ತೆಲುಗಿನ ಖ್ಯಾತ ನಟ ಜ್ಯೂನಿಯರ್ ಎನ್.ಟಿ.ಆರ್ ನಟನೆಯ ಹೊಸ ಸಿನಿಮಾಗೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಈ ಸಿನಿಮಾದ ಶೂಟಿಂಗ್ ಗಾಗಿ ಅವರು ಹೈದರಾಬಾದ್ ಗೂ ಬಂದಿಳಿದಿದ್ದರು. ಈ ಸಮಯದಲ್ಲೇ ಬಾಯ್ ಫ್ರೆಂಡ್ ಕರೆಯಿಸಿಕೊಂಡು ದೇವಸ್ಥಾನಕ್ಕೆ ಹೋಗಿದ್ದಾರೆ ಎಂದೂ ಹೇಳಲಾಗುತ್ತಿದೆ.

  • NTR 30: ಜ್ಯೂ.ಎನ್‌ಟಿಆರ್‌ – ಜಾನ್ವಿ ಕಪೂರ್ ಚಿತ್ರಕ್ಕೆ ಅಧಿಕೃತ ಚಾಲನೆ

    NTR 30: ಜ್ಯೂ.ಎನ್‌ಟಿಆರ್‌ – ಜಾನ್ವಿ ಕಪೂರ್ ಚಿತ್ರಕ್ಕೆ ಅಧಿಕೃತ ಚಾಲನೆ

    ಜ್ಯೂ.ಎನ್‌ಟಿಆರ್ ತಮ್ಮ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದಾರೆ. RRR ಚಿತ್ರದ ಸಕ್ಸಸ್ ಅಲೆಯಲ್ಲಿ ತೇಲುತ್ತಿದ್ದ ತಾರಕ್ ಇದೀಗ ತಮ್ಮ ಮುಂದಿನ ಚಿತ್ರದ ಅದ್ದೂರಿಯಾಗಿ ಚಾಲನೆ ನೀಡಿದ್ದಾರೆ. ಜ್ಯೂ.ಎನ್‌ಟಿಆರ್ (Jr.Ntr) ಸಿನಿಮಾ ಕಾರ್ಯಕ್ರಮಕ್ಕೆ ರಾಜಮೌಳಿ (Rajamouli)  ಕೂಡ ಸಾಥ್ ನೀಡಿದ್ದಾರೆ. ಇದನ್ನೂ ಓದಿ: ಹೊಸ ಫೋಟೋಶೂಟ್‌ನಲ್ಲಿ ಮಹಾಲಕ್ಷ್ಮಿಯಂತೆ ಕಂಗೊಳಿಸಿದ ನಟಿ ಅಮೂಲ್ಯ

     

    View this post on Instagram

     

    A post shared by Yuvasudha Arts (@yuvasudhaarts)

    `ಆರ್‌ಆರ್‌ಆರ್’ ಚಿತ್ರದ ಸಕ್ಸಸ್ ಅನ್ನ 1 ವರ್ಷದಿಂದ ಎಂಜಾಯ್ ಮಾಡ್ತಿದ್ದಾರೆ. ಇತ್ತೀಚಿಗೆ ಗೋಲ್ಡನ್ ಗ್ಲೋಬ್, ಆಸ್ಕರ್ ಅವಾರ್ಡ್ ಚಿತ್ರತಂಡ ಗೆದ್ದಿರೋದು ಭಾರತಕ್ಕೆ ಹೆಮ್ಮೆಯ ವಿಷಯವಾಗಿದೆ. ಅಂತೂ ಇಂತೂ ಅಭಿಮಾನಿಗಳು ಕಾಯುತ್ತಿದ್ದ NTR 30 ಸಿನಿಮಾಗೆ ಚಾಲನೆ ಸಿಕ್ಕಿದೆ.

     

    View this post on Instagram

     

    A post shared by Yuvasudha Arts (@yuvasudhaarts)

    ತಾರಕ್ ನಟನೆಯ NTR 30 ಸಿನಿಮಾಗೆ ಗುರುವಾರದಂದು ಚಾಲನೆ ಸಿಕ್ಕಿದೆ. ಹೈದರಾಬಾದ್‌ನಲ್ಲಿ ಸಿನಿಮಾ ಪೂಜೆ ಕಾರ್ಯಕ್ರಮ ಜರುಗಿದೆ. ರಾಜಮೌಳಿ ಅವರು ಸಿನಿಮಾ ಚಾಲನೆ ನೀಡುವ ಮೂಲಕ ಚಿತ್ರತಂಡಕ್ಕೆ ಶುಭಹಾರೈಸಿದ್ದಾರೆ.

     

    View this post on Instagram

     

    A post shared by Yuvasudha Arts (@yuvasudhaarts)

    ಕೊರಟಾಲ ಶಿವ ನಿರ್ದೇಶನದ ಸಿನಿಮಾದಲ್ಲಿ ಜ್ಯೂ.ಎನ್‌ಟಿಆರ್‌ಗೆ ನಾಯಕಿಯಾಗಿ ಜಾನ್ವಿ ಕಪೂರ್ (Janhvi Kapoor) ಕಾಣಿಸಿಕೊಳ್ಳಲಿದ್ದಾರೆ. ಈ ಕಾರ್ಯಕ್ರಮದಲ್ಲಿ ತಾರಕ್ ಜೊತೆ ಜಾನ್ವಿ, ರಾಜಮೌಳಿ, ನಿರ್ದೇಶಕ ಪ್ರಶಾಂತ್ ನೀಲ್ (Prashanth Neel) ಸೇರಿದಂತೆ ಹಲವರು ಭಾಗಿಯಾಗಿದ್ದಾರೆ. ಸದ್ಯದಲ್ಲೇ ಶೂಟಿಂಗ್ ಶುರುವಾಗಲಿದೆ. ಈ ಸಿನಿಮಾದ ನಂತರ ಪ್ರಶಾಂತ್‌ ನೀಲ್‌ ಜೊತೆಗೆ ತಾರಕ್‌ ಹೊಸ ಸಿನಿಮಾ ಶುರುವಾಗಲಿದೆ.

  • ಬ್ಲ್ಯಾಕ್ & ವೈಟ್ ಫೋಟೋಶೂಟ್‌ನಲ್ಲಿ ಜಾನ್ವಿ ಕಪೂರ್ ಮಿಂಚಿಂಗ್

    ಬ್ಲ್ಯಾಕ್ & ವೈಟ್ ಫೋಟೋಶೂಟ್‌ನಲ್ಲಿ ಜಾನ್ವಿ ಕಪೂರ್ ಮಿಂಚಿಂಗ್

    ಸ್ಟಾರ್ ನಟಿ ಶ್ರೀದೇವಿ (Sridevi) ಪುತ್ರಿ ಜಾನ್ವಿ ಕಪೂರ್ (Janhavi Kapoor), ಸಿನಿಮಾಗಿಂತ (Films) ಇತರೆ ವಿಚಾರವಾಗಿಯೇ ಸುದ್ದಿಯಲ್ಲಿರುತ್ತಾರೆ. ಇದೀಗ ಹೊಸ ಫೋಟೋಶೂಟ್‌ನಲ್ಲಿ ಜಾನ್ವಿ ಕಪೂರ್ ಮಿಂಚಿದ್ದಾರೆ. ಬ್ಲ್ಯಾಕ್ & ವೈಟ್ ಶೇಡ್‌ನಲ್ಲಿ ಹೊಸ ಫೋಟೋಶೂಟ್ (Photoshoot) ಮಾಡಿಸಿದ್ದಾರೆ.

    ನಟಿ ಜಾನ್ವಿ ಕಪೂರ್ ಸದ್ಯ ಸೌತ್ ಸಿನಿಮಾಗಳತ್ತ ಮುಖ ಮಾಡಿದ್ದಾರೆ. ಜ್ಯೂ.ಎನ್‌ಟಿಆರ್‌ಗೆ (Jr.Ntr) ನಾಯಕಿಯಾಗುವ ಮೂಲಕ ಜಾನ್ವಿ ಟಾಲಿವುಡ್‌ಗೆ (Tollywood) ಎಂಟ್ರಿ ಕೊಟ್ಟಿದ್ದಾರೆ. ಸದ್ಯ ಹೊಸ ಫೋಟೋಶೂಟ್ ಮೂಲಕ ನಟಿ ನೆಟ್ಟಿಗರ ಗಮನ ಸೆಳೆಯುತ್ತಿದ್ದಾರೆ. ಇದನ್ನೂ ಓದಿ: ವರುಣ್ ಧವನ್ ಮಾಡಿದ ಎಡವಟ್ಟಿಗೆ ಬೇಸರ ಹೊರಹಾಕಿದ ಕೃತಿ ಸನೂನ್

     

    View this post on Instagram

     

    A post shared by Janhvi Kapoor (@janhvikapoor)

    ಚೆಂದದ ಸೀರೆಯುಟ್ಟು, ತುರುಬು ಕಟ್ಟಿ ಕೂದಲಿಗೆ ಹೂ ಮುಡಿದು ಸಿಂಪಲ್ ಆಗಿ ಮುದ್ದಾಗಿ ಜಾನ್ವಿ ಕಾಣಿಸಿಕೊಂಡಿದ್ದಾರೆ. ಕಣ್ಣಿಗೆ ಕಾಡಿಗೆ, ಹಣೆಯ ಮೇಲೆ ಕೊಂಚ ಕೂದಲು ಬಿಟ್ಟು ಕ್ಯೂಟ್ ಆಗಿ ಕಾಣಿಸಿಕೊಂಡಿದ್ದಾರೆ. ನಟಿಯ ಹೊಸ ಲುಕ್‌ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ.

    ಬಾಲಿವುಡ್‌ನಲ್ಲಿ (Bollywood) ಸಕ್ಸಸ್ ಸಿಗದೇ ಇರುವ ಕಾರಣ, ಸೌತ್‌ನತ್ತ ನಟಿ ಮುಖ ಮಾಡಿದ್ದಾರೆ. ತಾಯಿ ಶ್ರೀದೇವಿಯಂತೆಯೇ ಬಹುಭಾಷೆಗಳಲ್ಲಿ ನಟಿ ತೆರೆಯ ಮೇಲೆ ಮಿಂಚಲು ಸಜ್ಜಾಗಿದ್ದಾರೆ.

  • ಜ್ಯೂನಿಯರ್ ಎನ್.ಟಿ.ಆರ್ ಸಿನಿಮಾ ಮೂಲಕ ಜಾಹ್ನವಿ ಕಪೂರ್ ದಕ್ಷಿಣಕ್ಕೆ ಎಂಟ್ರಿ

    ಜ್ಯೂನಿಯರ್ ಎನ್.ಟಿ.ಆರ್ ಸಿನಿಮಾ ಮೂಲಕ ಜಾಹ್ನವಿ ಕಪೂರ್ ದಕ್ಷಿಣಕ್ಕೆ ಎಂಟ್ರಿ

    ‘ಜನತಾ ಗ್ಯಾರೇಜ್​’ ನಂತರ ತೆಲುಗಿನ ಸ್ಟಾರ್​ ನಟ ಜ್ಯೂನಿಯರ್​ ಎನ್​.ಟಿ.ಆರ್ (Junior NTR)​ ಮತ್ತು ನಿರ್ದೇಶಕ ಕೊರಟಾಲ ಶಿವ (Koratala Shiva) ಹೊಸ ಚಿತ್ರವೊಂದಕ್ಕೆ ಕೈ ಜೋಡಿಸಿದ್ದು, ಆ ಚಿತ್ರದ ಮುಹೂರ್ತ ಮಾರ್ಚ್​ ಅಂತ್ಯದ ಹೊತ್ತಿಗೆ ನೆರವೇರಲಿದೆ. ಈ ಚಿತ್ರ ಘೋಷಣೆಯಾದಾಗಿನಿಂದಲೂ, ಹೊಸ ಹೊಸ ಅಪ್​ಡೇಟ್​ ಕೊಡುವಂತೆ ಅಭಿಮಾನಿಗಳು ಬೇಡಿಕೆ ಇಡುತ್ತಲೇ ಇದ್ದಾರೆ. ಸೋಮವಾರ ಚಿತ್ರತಂಡದವರು ಒಂದು ಸಂತೋಷದ ವಿಷಯವನ್ನು ಹಂಚಿಕೊಂಡಿದ್ದು, ಈ ಚಿತ್ರಕ್ಕೆ ನಾಯಕಿಯಾಗಿ ಬಾಲಿವುಡ್​ ನಟಿ ಜಾಹ್ನವಿ ಕಪೂರ್​ (Janhvi Kapoor) ಆಯ್ಕೆಯಾಗಿದ್ದಾರೆ.

    ಸೋಮವಾರ, ಜಾಹ್ನವಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದು, ಈ ಸಂದರ್ಭದಲ್ಲಿ ಆಕೆಗೆ ಶುಭಾಶಯ ಕೋರುವ ಪೋಸ್ಟರ್​ವೊಂದನ್ನು ಚಿತ್ರತಂಡದವರು ಬಿಡುಗಡೆ ಮಾಡಿದ್ದಾರೆ. ಈ ಮೂಲಕ ಆಕೆಯನ್ನು ಚಿತ್ರತಂಡಕ್ಕೆ ಬರಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಭಾವಿ ಪತ್ನಿ ಬರ್ತ್‌ಡೇಗೆ ರೊಮ್ಯಾಂಟಿಕ್ ಆಗಿ ವಿಶ್ ಮಾಡಿದ ಅಭಿಷೇಕ್

    ಜ್ಯೂನಿಯರ್​ ಎನ್​.ಟಿ.ಆರ್​ ಜತೆಗೆ ನಟಿಸಬೇಕು ಎಂಬ ಆಸೆಯನ್ನು ಜಾಹ್ನವಿ ಕೆಲವು ದಿನಗಳ ಹಿಂದೆ ಹೇಳಿಕೊಂಡಿದ್ದರು. ಆ ಆಸೆ ಈಗ ‘ಎನ್.ಟಿ.ಆರ್​ 30’ ಮೂಲಕ ಈಡೇರಲಿದೆ. ಈ ಚಿತ್ರವು ಬರೀ ಆಕ್ಷನ್​ ಚಿತ್ರವಷ್ಟೇ ಅಲ್ಲ, ಒಂದು ಅದ್ಭುತ ಸೆಂಟಿಮೆಂಟ್​ ಚಿತ್ರವಾಗಿರಲಿದೆ ಎಂದು ಚಿತ್ರತಂಡದವರು ಅಭಿಪ್ರಾಯ ಪಟ್ಟಿದ್ದಾರೆ.

    ಯುವಸುಧಾ ಆರ್ಟ್ಸ್​ ಮತ್ತು ಎನ್​.ಟಿ.ಆರ್​ ಆರ್ಟ್ಸ್​ ಸಂಸ್ಥೆಗಳಡಿ ಮಿಕ್ಕಿಲಿನೇನಿ ಸುಧಾಕರ್​ ಮತ್ತು ಹರಿಕೃಷ್ಣ ಕೆ ನಿರ್ಮಿಸುತ್ತಿರುವ ಈ ಚಿತ್ರವನ್ನು ನಂದಮೂರಿ ಕಲ್ಯಾಣ್ ರಾಮ್​ ಅರ್ಪಿಸುತ್ತಿದ್ದಾರೆ. ರತ್ನವೇಲು ಛಾಯಾಗ್ರಹಣ, ‘ರಾಕ್​ಸ್ಟಾರ್​’ ಅನಿರುದ್ಧ್​ ಸಂಗೀತ ಮತ್ತು ಶ್ರೀಕರ್​ ಪ್ರಸಾದ್​ ಅವರ ಸಂಕಲನವಿರುವ ಈ ಚಿತ್ರದ ಬಗ್ಗೆ ಅಭಿಮಾನಿಗಳು ಅಪಾರ ನಿರೀಕ್ಷೆಯನ್ನಿಟ್ಟುಕೊಂಡಿದ್ದು, ಈ ಚಿತ್ರ 2024ರ ಏಪ್ರಿಲ್​ 05ರಂದು ಬಿಡುಗಡೆಯಾಗುತ್ತಿದೆ.

  • ಅವಕಾಶವಿದೆ ಆದರೆ ಪ್ರೇಕ್ಷಕರಿಂದ ಗೌರವ ಸಿಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ ಜಾನ್ವಿ

    ಅವಕಾಶವಿದೆ ಆದರೆ ಪ್ರೇಕ್ಷಕರಿಂದ ಗೌರವ ಸಿಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ ಜಾನ್ವಿ

    ಬಾಲಿವುಡ್ (Bollywood) ನಟಿ ಶ್ರೀದೇವಿ (Sridevi)  ಮತ್ತು ಬೋನಿ ಕಪೂರ್ ಪುತ್ರಿ ಜಾನ್ವಿ ಕಪೂರ್ (Janhvi Kapoor) ಕೂಡ ಕಳೆದ ಕೆಲವು ವರ್ಷಗಳಿಂದ ಚಿತ್ರರಂಗದಲ್ಲಿ ಆಕ್ಟೀವ್ ಆಗಿದ್ದಾರೆ. ಚಿತ್ರರಂಗದಲ್ಲಿ ಹೇಳಿಕೊಳ್ಳುವಂತಹ ಸಕ್ಸಸ್ ಕಾಣದೇ ಇದ್ದರು ಅವಕಾಶಗಳಿಗೆ ಕೊರತೆಯಿಲ್ಲ. ಪ್ರತಿಭೆ ಇದ್ದರೂ ಕೂಡ ಸಿನಿಮಾ ಸಕ್ಸಸ್ ಕಾಣುತ್ತಿಲ್ಲ. ಇದೀಗ ಈ ಬಗ್ಗೆ ನಟಿ ಮಾತನಾಡಿದ್ದಾರೆ. ಪ್ರೇಕ್ಷಕರಿಂದ ತನಗೆ ಗೌರವ ಸಿಗುತ್ತಿಲ್ಲ ಎಂದು ಸಂದರ್ಶನವೊಂದರಲ್ಲಿ ಜಾನ್ವಿ ಮೌನ ಮುರಿದಿದ್ದಾರೆ.

    `ಧಡಕ್’ ಸಿನಿಮಾ ಮೂಲಕ ಬಾಲಿವುಡ್‌ಗೆ ಲಗ್ಗೆಯಿಟ್ಟ ನಟಿ ಜಾನ್ವಿ ಕಪೂರ್, ಸಾಕಷ್ಟು ಚಿತ್ರಗಳಲ್ಲಿ ನಟಿಸಿದ್ದಾರೆ. ಸ್ಟಾರ್ ಕಿಡ್ ಆಗಿರುವ ಜಾನ್ವಿ, ಅವಕಾಶಗಳಿದೆ ಆದರೆ ಪ್ರೇಕ್ಷಕರಿಂದ ಗೌರವ ಮಾತ್ರ ಸಿಗುತ್ತಿಲ್ಲ ಎಂದು ಸಂದರ್ಶನವೊಂದರಲ್ಲಿ ಬೇಸರ ಹೊರಹಾಕಿದ್ದಾರೆ. ಗೌರವ ಗಳಿಸುವ ನಿಟ್ಟಿನಲ್ಲಿ ಜಾನ್ವಿ ಕೆಲಸ ಮಾಡ್ತಿದ್ದಾರೆ. ಇದನ್ನೂ ಓದಿ: ಭಾವಿ ಪತ್ನಿ ಬರ್ತ್‌ಡೇಗೆ ರೊಮ್ಯಾಂಟಿಕ್ ಆಗಿ ವಿಶ್ ಮಾಡಿದ ಅಭಿಷೇಕ್

    ಜಾನ್ವಿ ಈ ವಿಚಾರ ಹೇಳಿಕೊಂಡಿದ್ದಾರೆ. ನೀವು ಸ್ಕ್ರಿಪ್ಟ್ ಆಯ್ಕೆ ಮಾಡುವಾಗ ಗಮನಿಸುವ ಅಂಶಗಳು ಯಾವವು ಎಂದು ಜಾನ್ವಿಗೆ ಪ್ರಶ್ನೆ ಮಾಡಲಾಯಿತು. ಇದಕ್ಕೆ ಜಾನ್ವಿ ಉತ್ತರಿಸಿದ್ದಾರೆ. ನನ್ನ ಸಾಮರ್ಥ್ಯದ ಬಗ್ಗೆ ನನಗೆ ತಿಳಿದಿದೆ. ನನ್ನನ್ನು ಸಾಬೀತುಪಡಿಸಿಕೊಳ್ಳಲು ಹಾಗೂ ಹೊಸ ಚಾಲೆಂಜ್‌ಗಳನ್ನು ತೆಗೆದುಕೊಳ್ಳಲು ನಾನು ಬಯಸುತ್ತೇನೆ. ನನಗೆ ಸಾಕಷ್ಟು ಅವಕಾಶಗಳು ಸಿಕ್ಕಿವೆ. ಆದರೆ, ನಾನು ಇನ್ನೂ ಜನರಿಂದ ಗೌರವವನ್ನು ಗಳಿಸಲು ಸಾಧ್ಯವಾಗಿಲ್ಲ. ನಾನು ಅದಕ್ಕಾಗಿಯೇ ಕೆಲಸ ಮಾಡುತ್ತಿದ್ದೇನೆ ಅನ್ನೋದು ನನ್ನ ಅಭಿಪ್ರಾಯ. ಒಂದು ವ್ಯಕ್ತಿಯ ಮೇಲೆ ಅಭಿಪ್ರಾಯ ಮೂಡುವುದು ಮತ್ತು ಆ ಅಭಿಪ್ರಾಯವನ್ನು ಬದಲಿಸುವುದಕ್ಕೆ ಸಾಕಷ್ಟು ಸಮಯ ಬೇಕಾಗುತ್ತದೆ ಎಂದು ಜಾನ್ವಿ ಮಾತನಾಡಿದ್ದಾರೆ.

    26ನೇ ವರ್ಷದ (ಫೆ.6) ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಜಾನ್ವಿ ಇದೀಗ ತಮ್ಮ ಹೊಸ ಚಿತ್ರವೊಂದನ್ನ ಅನೌನ್ಸ್ ಮಾಡಿದ್ದಾರೆ. ತೆಲುಗಿನ ಸೂಪರ್ ಸ್ಟಾರ್ ಜ್ಯೂ.ಎನ್‌ಟಿಆರ್‌ಗೆ ನಾಯಕಿಯಾಗಿ ಜಾನ್ವಿ ನಟಿಸಲಿದ್ದಾರೆ.

  • ಹುಟ್ಟುಹಬ್ಬದ ದಿನವೇ ಸಿಹಿಸುದ್ದಿ ಹಂಚಿಕೊಂಡ ಜಾನ್ವಿ ಕಪೂರ್

    ಹುಟ್ಟುಹಬ್ಬದ ದಿನವೇ ಸಿಹಿಸುದ್ದಿ ಹಂಚಿಕೊಂಡ ಜಾನ್ವಿ ಕಪೂರ್

    ಬಾಲಿವುಡ್ (Bollywood) ನಟಿ ಜಾನ್ವಿ ಕಪೂರ್ (Janhavi Kapoor) ತಮ್ಮ ಹುಟ್ಟುಹಬ್ಬದ ದಿನವೇ ಅಭಿಮಾನಿಗಳಿಗೆ ಸಿಹಿಸುದ್ದಿ ಕೊಟ್ಟಿದ್ದಾರೆ. ತಾಯಿ ಶ್ರೀದೇವಿ ಅವರ ಹಾದಿಯಲ್ಲೇ ಯುವ ನಟಿ ಜಾನ್ವಿ ಹೆಜ್ಜೆ ಇಡ್ತಿದ್ದಾರೆ. ಟಾಲಿವುಡ್‌ನತ್ತ ಜಾನ್ವಿ ಮುಖ ಮಾಡಿದ್ದಾರೆ.

    `ಧಡಕ್’ ಚಿತ್ರದ ಮೂಲಕ ಬಾಲಿವುಡ್‌ಗೆ ನಾಯಕಿಯಾಗಿ ಪಾದಾರ್ಪಣೆ ಮಾಡಿದ ನಟಿ ಜಾನ್ವಿ ಕಪೂರ್, ಗುಡ್ ಲಕ್ ಜೆರ‍್ರಿ, ಮಿಲಿ, ಸೇರಿದಂತೆ ಒಂದಿಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ ತಾಯಿ ಶ್ರೀದೇವಿ ಅವರು ಯಶಸ್ಸು ಗಳಿಸಿದಂತೆ ಜಾನ್ವಿ ಆ ಸಕ್ಸಸ್ ಸಿಗಲಿಲ್ಲ. ಆದರೂ ಛಲ ಬಿಡದೇ ನಟಿ ಹೆಜ್ಜೆ ಇಡುತ್ತಿದ್ದಾರೆ. ಇದನ್ನೂ ಓದಿ: ಮುರುಗದಾಸ್ ನಿರ್ದೇಶನದ ಹೊಸ ಸಿನಿಮಾದ ಪೋಸ್ಟರ್ ಬಿಡುಗಡೆ

    ಸಾಕಷ್ಟು ಸಮಯದಿಂದ ಜಾನ್ವಿ ಟಾಲಿವುಡ್‌ಗೆ ಬರುತ್ತಾರೆ. ಜ್ಯೂ.ಎನ್‌ಟಿಆರ್‌ಗೆ (Jr.ntr) ನಾಯಕಿಯಾಗುತ್ತಾರೆ ಎಂದು ಸುದ್ದಿಯಾಗಿತ್ತು. ಆದರೆ ಚಿತ್ರತಂಡದಿಂದ ಯಾವುದೇ ಸ್ಪಷ್ಟನೆ ಸಿಕ್ಕಿರಲಿಲ್ಲ. ಇದೀಗ ಜಾನ್ವಿ ತಮ್ಮ ತೆಲುಗಿನ ಮೊದಲ ಸಿನಿಮಾ ಪೋಸ್ಟರ್ ಹಂಚಿಕೊಳ್ಳುವ ಮೂಲಕ ಪ್ಯಾನ್ಸ್‌ಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ.

     

    View this post on Instagram

     

    A post shared by Janhvi Kapoor (@janhvikapoor)

    ತೆಲುಗಿನ ಸೂಪರ್ ಸ್ಟಾರ್ ತಾರಕ್‌ಗೆ ಜಾನ್ವಿ ಕಪೂರ್ ನಾಯಕಿಯಾಗಿ ನಟಿಸಲಿದ್ದಾರೆ. ಕೊರಟಾಲ ಶಿವ ನಿರ್ದೇಶನದ NTR 30 ಸಿನಿಮಾದಲ್ಲಿ ನಾಯಕಿಯಾಗಿ ಜಾನ್ವಿ ಕಾಣಿಸಿಕೊಳ್ತಿದ್ದಾರೆ. ತನ್ನ ಹುಟ್ಟುಹಬ್ಬದ ದಿನವೇ ಸಿನಿಮಾದ ಸ್ಪೆಷಲ್ ಪೋಸ್ಟರ್‌ನ ನಟಿ ಶೇರ್ ಮಾಡಿದ್ದಾರೆ. ಸೀರೆ ಧರಿಸಿ ಬೋಲ್ಡ್ ಆಗಿ ಪೋಸ್ ಕೊಡುತ್ತಿರುವ ಜಾನ್ವಿ ಲುಕ್ ಇದೀಗ ಅಭಿಮಾನಿಗಳ ಸೆಳೆಯುತ್ತಿದೆ. ತಾರಕ್- ಜಾನ್ವಿ ಜೋಡಿಯನ್ನ ತೆರೆಯ ಮೇಲೆ ನೋಡಲು ಫ್ಯಾನ್ಸ್ ಕಾತರದಿಂದ ಕಾಯುತ್ತಿದ್ದಾರೆ. ಇನ್ನೂ 26ನೇ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿರುವ ನಟಿ ಜಾನ್ವಿಗೆ ಸೆಲೆಬ್ರಿಟಿ ಸ್ನೇಹಿತರಿಂದ, ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.

  • ಅಧಿಕೃತವಾಗಿ ದಕ್ಷಿಣದ ಸಿನಿಮಾಗಳಿಗೆ ಎಂಟ್ರಿ ಕೊಟ್ಟ ಶ್ರೀದೇವಿ ಪುತ್ರಿ

    ಅಧಿಕೃತವಾಗಿ ದಕ್ಷಿಣದ ಸಿನಿಮಾಗಳಿಗೆ ಎಂಟ್ರಿ ಕೊಟ್ಟ ಶ್ರೀದೇವಿ ಪುತ್ರಿ

    ಬಾಲಿವುಡ್ (Bollywood) ಖ್ಯಾತ ನಟಿ ಶ್ರೀದೇವಿ (Sridevi) ಪುತ್ರಿ ಜಾನ್ವಿ ಕಪೂರ್ (Janhvi Kapoor) ದಕ್ಷಿಣದ ಸಿನಿಮಾ ರಂಗಕ್ಕೆ ಪ್ರವೇಶ ಮಾಡಲಿದ್ದಾರೆ ಎಂಬ ಸುದ್ದಿಯಿತ್ತು. ಅದರಲ್ಲೂ ತೆಲುಗು ಮತ್ತು ತಮಿಳು ಸಿನಿಮಾ ರಂಗದ ನಟರ ಚಿತ್ರಗಳಿಗೆ ಜಾನ್ವಿ ಆಯ್ಕೆಯಾಗಲಿದ್ದಾರೆ ಎನ್ನುವ ಸುದ್ದಿ ಹಲವು ತಿಂಗಳಿಂದ ಹರಿದಾಡುತ್ತಿತ್ತು. ಅದೀಗ ನಿಜವಾಗಿದೆ. ತೆಲುಗಿನ ಖ್ಯಾತ ನಟ ಜ್ಯೂನಿಯರ್ ಎನ್.ಟಿ.ಆರ್ (Junior N.T.R) ಹೊಸ ಸಿನಿಮಾಗೆ ಜಾನ್ವಿ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.

    ಬಾಲಿವುಡ್ ನಲ್ಲಿ ಜಾನ್ವಿಗೆ ಅಷ್ಟೇನೂ ಬೇಡಿಕೆ ಇರದೇ ಇದ್ದರೂ, ಶ್ರೀದೇವಿ ಪುತ್ರಿ ಎನ್ನುವ ಕಾರಣಕ್ಕಾಗಿ ಹೆಚ್ಚು ಡಿಮ್ಯಾಂಡ್ ನಲ್ಲಿದ್ದಾರೆ. ಅಲ್ಲದೇ, ಸೋಷಿಯಲ್ ಮೀಡಿಯಾ ಮೂಲಕ ಕೋಟ್ಯಾಂತರ ಅಭಿಮಾನಿಗಳನ್ನು ಅವರು ಹೊಂದಿದ್ದಾರೆ. ಅಪ್ಪನ ಜೊತೆಯಲ್ಲಿ ಬ್ಯುಸಿನೆಸ್ ನಲ್ಲೂ ಜಾನ್ವಿ ತೊಡಗಿಕೊಂಡಿದ್ದಾರೆ. ಹೀಗಾಗಿ ಜಾನ್ವಿ ಮೇಲೆ ಸಾಕಷ್ಟು ನಿರೀಕ್ಷೆ ಕೂಡ ಇದೆ. ಇದನ್ನೂ ಓದಿ:ಬೆಸ್ಟ್ ಫ್ರೆಂಡ್ ಪತಿಯನ್ನೇ ಪಟಾಯಿಸಿದಳು ಎಂದವರಿಗೆ ನಟಿ ಹನ್ಸಿಕಾ ಸ್ಪಷ್ಟನೆ

    ಅಂದಹಾಗೆ  ಜ್ಯೂನಿಯರ್ ಎನ್.ಟಿ.ಆರ್ ನಟನೆಯ ಮುಂದಿನ ಸಿನಿಮಾವನ್ನು ಕೊರಟಾಲ ಶಿವ (Koratala Shiva) ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ಇನ್ನೂ ಹೆಸರಿಟ್ಟಿಲ್ಲ. ಜ್ಯೂನಿಯರ್ ನಟನೆಯ 30ನೇ ಸಿನಿಮಾ ಇದಾಗಿದೆ. ಇದೇ ಚಿತ್ರಕ್ಕೆ ನಾಯಕಿಯ ವಿಚಾರದಲ್ಲಿ ಈ ಹಿಂದೆ ರಶ್ಮಿಕಾ ಮಂದಣ್ಣ ಸೇರಿದಂತೆ ಹಲವು ನಟಿಯರ ಹೆಸರು ಕೇಳಿ ಬಂದಿದ್ದವು. ಆದರೆ, ಅಂತಿಮವಾಗಿ ಜಾನ್ವಿ ಆಯ್ಕೆಯಾಗಿದ್ದಾರೆ ಎಂದು ಹೇಳಲಾಗುತ್ತಿದೆ.

    ಅಧಿಕೃತವಾಗಿ ಸಿನಿಮಾ ತಂಡ ಈ ಕುರಿತು ಮಾಹಿತಿ ಕೊಡದೇ ಇದ್ದರೂ, ಚಿತ್ರತಂಡದಿಂದಲೇ ಈ ಸುದ್ದಿ ಸೋರಿಕೆಯಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಇದೊಂದು ಪ್ಯಾನ್ ಇಂಡಿಯಾ ಸಿನಿಮಾವಾಗಿದ್ದರಿಂದ ಈ ಆಯ್ಕೆ ನಡೆದಿದೆ ಎಂದು ಹೇಳಲಾಗುತ್ತಿದೆ. ಕೆಲವೇ ದಿನಗಳಲ್ಲೇ ಚಿತ್ರತಂಡದಿಂದಲೇ ಅಧಿಕೃತ ಮಾಹಿತಿ ಹೊರ ಬೀಳುವ ಸಾಧ್ಯತೆ ಇದೆ ಎಂದು ವರದಿಗಳು ಹೇಳಿವೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k