ಟಾಲಿವುಡ್ ನಟ ರಾಮ್ ಚರಣ್ (Ram Charan) ಮತ್ತು ಜಾನ್ವಿ ಕಪೂರ್ (Janhvi Kapoor) ಹೊಸ ಸಿನಿಮಾದಲ್ಲಿ ಜೊತೆಯಾಗಿ ನಟಿಸುತ್ತಿದ್ದು, ಚಿತ್ರೀಕರಣಕ್ಕಾಗಿ ಮೈಸೂರಿಗೆ ಬರಲಿದ್ದಾರೆ. ಇವರೊಂದಿಗೆ ಕನ್ನಡದ ನಟ ಶಿವಣ್ಣ (Shivarajkumar) ಕೂಡ ಸಾಥ್ ನೀಡಲಿದ್ದಾರೆ ಎನ್ನಲಾದ ಸುದ್ದಿಯೊಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಇದನ್ನೂ ಓದಿ:‘ಗುಗ್ಗು ನನ್ನ ಮಗ’ ಎಂದ ರಜತ್- Bigg Boss ಡೋರ್ ಓಪನ್ ಮಾಡಿ ಎಂದು ಪಟ್ಟು ಹಿಡಿದ ಸುರೇಶ್

‘ಉಪ್ಪೇನಾ’ ನಿರ್ದೇಶಕ ಬುಚ್ಚಿ ಬಾಬು ಅವರು ‘ಆರ್ ಸಿ 16’ ಚಿತ್ರಕ್ಕೆ (RC 16) ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಚಿತ್ರದಲ್ಲಿ ರಾಮ್ ಚರಣ್, ಜಾನ್ವಿ ಜೊತೆ ಶಿವಣ್ಣ ಕೂಡ ಪವರ್‌ಫುಲ್ ರೋಲ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾದ ಫಸ್ಟ್ ಶೆಡ್ಯೂಲ್ ಶೂಟಿಂಗ್ ಅನ್ನು ನ.22ರಂದು ಪ್ರಾರಂಭಿಸಲಿದ್ದಾರೆ ಎನ್ನಲಾಗಿದೆ. ಚಿತ್ರತಂಡಕ್ಕೆ ಶಿವಣ್ಣ ಕೂಡ ಸಾಥ್ ನೀಡಲಿದ್ದಾರೆ ಎನ್ನಲಾಗಿದೆ. ಮೈಸೂರಿನ ಕೆಲವು ಪುರಾತನ ಕಟ್ಟಡಗಳು ಹಾಗೂ ಮೈಸೂರಿನ ಹೊರವಲಯದ ಅರಣ್ಯ ಪ್ರದೇಶಗಳಲ್ಲಿ ಸಿನಿಮಾದ ಚಿತ್ರೀಕರಣ ನಡೆಯಲಿದೆಯಂತೆ.

ಶಿವಣ್ಣ ಅವರು ಮೈಸೂರಿನಲ್ಲಿ ಸಿನಿಮಾದ ಶೂಟಿಂಗ್ ಮುಗಿಸಿ ನಂತರ ಚಿಕಿತ್ಸೆಗಾಗಿ ಅಮೆರಿಕಕ್ಕೆ ತೆರಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಹಾಗಾಗಿ ಚಿತ್ರತಂಡ ಶೂಟಿಂಗ್ ಪ್ಲ್ಯಾನ್ ಮಾಡಿಕೊಂಡಿದೆ.
ಅಂದಹಾಗೆ, ರಾಮ್ ಚರಣ್ ನಟನೆಯ ‘ಗೇಮ್ ಚೇಂಜರ್’ ಸಿನಿಮಾ ಕೆಲಸ ಮುಗಿದಿದೆ. ನಾಯಕಿಯಾಗಿ ಕಿಯಾರಾ ಅಡ್ವಾಣಿ ನಟಿಸಿದ್ದಾರೆ. ಈ ಸಿನಿಮಾ ಬಗ್ಗೆ ಫ್ಯಾನ್ಸ್‌ಗೆ ಭಾರೀ ನಿರೀಕ್ಷೆಯಿದೆ.





ಜಾತಿ, ಧರ್ಮ, ಭಯ ಎಲ್ಲಿಲ್ಲ ಎಂದು ಶುರವಾಗುವ ಡೈಲಾಗ್‌ಗೆ ಧೈರ್ಯ ಬಿಟ್ಟು ಬೇರೇನೂ ಗೊತ್ತಿಲ್ಲದ ಕಣ್ಣುಗಳಲ್ಲಿ ಭಯದ ಪೊರೆ ಆವರಿಸಿಕೊಂಡು ಎಂದು ಹೇಳುವಾಗ ತಾರಕ್‌ಗೆ ನೀಡಿದ ಲುಕ್ ಮಸ್ತ್ ಆಗಿದೆ. ಮನುಷ್ಯನಿಗೆ ಬದುಕುವಷ್ಟು ಧೈರ್ಯವಿದೆ ಕೊಲ್ಲಲು ಆ ಧೈರ್ಯ ಸಾಕಾಗುವುದಿಲ್ಲ ಎಂಬಂತಹ ಡೈಲಾಗ್ ಕೇಳಿ ಫ್ಯಾನ್ಸ್ ಫಿದಾ ಆಗಿದ್ದಾರೆ. ಇದನ್ನೂ ಓದಿ:








‘ದೇವರ’ ಸಿನಿಮಾದ ಎರಡನೇ ಸಾಂಗ್ ರಿಲೀಸ್ ಮಾಡೋದಕ್ಕೆ ಮುಹೂರ್ತ ಫಿಕ್ಸ್ ಆಗಿದೆ. ಇದೇ ಆ.5ರಂದು ಜ್ಯೂ.ಎನ್‌ಟಿಆರ್ ಜೊತೆಗಿನ ಜಾನ್ವಿ ಕಪೂರ್ ರೊಮ್ಯಾಂಟಿಕ್ ಸಾಂಗ್ ರಿಲೀಸ್ ಆಗಲಿದೆ ಎಂದು ಚಿತ್ರತಂಡ ಅನೌನ್ಸ್ ಮಾಡಿದೆ. ಇದನ್ನೂ ಓದಿ:
