Tag: ಜಾನ್ವಿ ಕಪೂರ್

  • ಟೈಗರ್ ಶ್ರಾಫ್ ಜೊತೆ ಜಾನ್ವಿ ಕಪೂರ್ ಡ್ಯುಯೆಟ್

    ಟೈಗರ್ ಶ್ರಾಫ್ ಜೊತೆ ಜಾನ್ವಿ ಕಪೂರ್ ಡ್ಯುಯೆಟ್

    ಬಾಲಿವುಡ್ ಬೆಡಗಿ ಜಾನ್ವಿ ಕಪೂರ್‌ಗೆ (Janhvi Kapoor) ಮತ್ತೊಂದು ಬಂಪರ್ ಅವಕಾಶ ಸಿಕ್ಕಿದೆ. ಟೈಗರ್ ಶ್ರಾಫ್ (Tiger Shroff) ನಟನೆಯ ಹೊಸ ಸಿನಿಮಾದಲ್ಲಿ ಜಾನ್ವಿ ನಾಯಕಿಯಾಗಿ ನಟಿಸುವ ಚಾನ್ಸ್ ಸಿಕ್ಕಿದೆ. ಇದನ್ನೂ ಓದಿ: 

    ಜಾನ್ವಿ ನಟಿಸುವ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಗೆಲ್ಲದೇ ಇದ್ದರೂ ಅವರಿಗೆ ಬೇಡಿಕೆಯೂ ಕಮ್ಮಿಯಾಗಿಲ್ಲ. ಸದ್ಯ ಟೈಗರ್ ಶ್ರಾಫ್ ಜೊತೆ ಜೋಡಿಯಾಗಿ ನಟಿಸುವ ಅವಕಾಶ ಸಿಕ್ಕಿದೆ. ಇದೊಂದು ರಿವೆಂಜ್ ಲವ್ ಸ್ಟೋರಿಯಾಗಿದ್ದು, ಈ ವರ್ಷದ ಅಂತ್ಯದಲ್ಲಿ ಶೂಟಿಂಗ್ ಶುರುವಾಗಲಿದೆ. ಮುಂದಿನ ವರ್ಷ ಚಿತ್ರ ರಿಲೀಸ್ ಆಗಲಿದೆ. ಈ ಸಿನಿಮಾಗೆ ರಾಜ್ ಮೆಹ್ತಾ ನಿರ್ದೇಶನ ಮಾಡಲಿದ್ದಾರೆ. ಇದನ್ನೂ ಓದಿ: 

    ಅಮ್ಮ ಶ್ರೀದೇವಿಯಂತೆ ತಾವು ಕೂಡ ಬಹುಭಾಷೆಗಳಲ್ಲಿ ನಟಿಸಬೇಕು ಎಂದು ದಕ್ಷಿಣದ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಹೊಸ ಬಗೆಯ ಕಥೆ ಮತ್ತು ಪಾತ್ರಕ್ಕೆ ನಟಿ ಹೆಚ್ಚು ಒತ್ತು ನೀಡುತ್ತಿದ್ದಾರೆ.

    ಸಿದ್ಧಾರ್ಥ್ ಮಲ್ಹೋತ್ರಾ ಜೊತೆ ಸಿನಿಮಾ, ದೇವರ 2, ರಾಮ್ ಚರಣ್ ಜೊತೆ ‘ಪೆಡ್ಡಿ’ ಚಿತ್ರ ಸೇರಿದಂತೆ ಹಲವು ಪ್ರಾಜೆಕ್ಟ್‌ಗಳು ನಟಿಯ ಕೈಯಲ್ಲಿವೆ.

  • ಕಾನ್ ಫೆಸ್ಟಿವಲ್| ರೆಡ್ ಕಾರ್ಪೆಟ್‌ನಲ್ಲಿ ಜಾನ್ವಿ ವಾಕ್ – ‘ನನ್ನ ದೇವತೆ’ ಎಂದ ಬಾಯ್‌ಫ್ರೆಂಡ್

    ಕಾನ್ ಫೆಸ್ಟಿವಲ್| ರೆಡ್ ಕಾರ್ಪೆಟ್‌ನಲ್ಲಿ ಜಾನ್ವಿ ವಾಕ್ – ‘ನನ್ನ ದೇವತೆ’ ಎಂದ ಬಾಯ್‌ಫ್ರೆಂಡ್

    ಬಾಲಿವುಡ್ ಬೆಡಗಿ ಜಾನ್ವಿ ಕಪೂರ್ (Janhvi Kapoor) ಕಾನ್ ಫಿಲ್ಮ್ ಫೆಸ್ಟಿವಲ್‌ನಲ್ಲಿ (Cannes Film Festival) ಮಿಂಚಿದ್ದಾರೆ. ಸೌಂದರ್ಯ ಗಣಿಯಂತೆ ಕಂಗೊಳಿಸಿದ ಜಾನ್ವಿ ಕಪೂರ್‌ಗೆ ಬಾಯ್‌ಫ್ರೆಂಡ್ ಶಿಖರ್ ಪಹರಿಯಾ (Shikhar Pahariya) ನನ್ನ ದೇವತೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಕಾಮೆಂಟ್ ಮಾಡಿದ್ದಾರೆ. ಇದನ್ನೂ ಓದಿ:ಬಾಲಿವುಡ್‌ಗೆ ಅಥಿಯಾ ಗುಡ್ ಬೈ – ಅಧಿಕೃತವಾಗಿ ತಿಳಿಸಿದ ತಂದೆ ಸುನೀಲ್ ಶೆಟ್ಟಿ

    78ನೇ ಕಾನ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಜಾನ್ವಿ ಕಪೂರ್ ಅವರು ರೆಡ್ ಕಾರ್ಪೆಟ್‌ನಲ್ಲಿ ಹೆಜ್ಜೆ ಹಾಕಿದ್ದಾರೆ. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ‘ದೇವರ’ ನಟಿ ಮಸ್ತ್ ಆಗಿ ಪೋಸ್ ನೀಡಿದ್ದಾರೆ. ವಿವಿಧ ಭಂಗಿಗಳಲ್ಲಿ ಪೋಸ್ ಕೊಟ್ಟಿರುವ ಫೋಟೋಗಳನ್ನು ಇನ್ಸ್ಟಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ನನ್ನ ದೇವತೆ, ನೀವು ರಾತ್ರಿಯನ್ನು ಬೆಳಗಿಸುತ್ತೀರಿ ಎಂದು ಗೆಳೆಯ ಶಿಖರ್ ಕಾಮೆಂಟ್ ಮಾಡಿದ್ದಾರೆ. ಇದು ಅಭಿಮಾನಿಗಳ ಗಮನ ಸೆಳೆದಿದೆ.

    ಸಾಕಷ್ಟು ಸಮಯದಿಂದ ಶಿಖರ್ ಪಹರಿಯಾ ಜೊತೆ ಜಾನ್ವಿ ಡೇಟಿಂಗ್ ಮಾಡ್ತಿದ್ದಾರೆ ಎನ್ನಲಾದ ಸುದ್ದಿ ಹರಿದಾಡುತ್ತಿದೆ. ಆದರೆ ಇದುವರೆಗೂ ಈ ಬಗ್ಗೆ ನಟಿ ಅಧಿಕೃತವಾಗಿ ತಿಳಿಸಿಲ್ಲ. ಆದರೆ ಇತ್ತೀಚಿನ ಸಮಾರಂಭವೊಂದರಲ್ಲಿ ಜಾನ್ವಿ ‘ಶಿಖು’ ಎಂದು ಹೆಸರಿರುವ ಪೆಂಡೆಂಟ್ ಅನ್ನು ಧರಿಸಿದ್ದರು. ಹೀಗಾಗಿ ಡೇಟಿಂಗ್ ಸುದ್ದಿಗೆ ಮತ್ತಷ್ಟು ಪುಷ್ಠಿ ನೀಡಿತ್ತು. ಇದನ್ನೂ ಓದಿ:100 ಮಿಲಿಯನ್ ಮಿನಿಟ್ ಸ್ಟ್ರೀಮಿಂಗ್ ಕಂಡ ಜಾಜಿಯ ರೋಚಕ ಕಥೆ- Zee5ನಲ್ಲಿ ‘ಅಯ್ಯನ ಮನೆ’ ರೆಕಾರ್ಡ್

    ಕಾನ್ ಫಿಲ್ಮ್ ಫೆಸ್ಟಿವಲ್ ಮೇ 13ರಿಂದ ಆರಂಭಗೊಂಡಿದ್ದು, ಮೇ 24ರ ವರೆಗೆ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಭಾಗಿಯಾಗಲು ಫಿಲ್ಮ್ ಫೆಸ್ಟಿವಲ್ ಟೀಮ್ ಅಳೆದು ತೂಗಿ ಕೆಲವೇ ಕೆಲವು ತಾರೆಯರಿಗೆ ಮಾತ್ರ ಆಮಂತ್ರಣ ನೀಡುತ್ತಾರೆ. ದೇಶ ವಿದೇಶದ ಕಲಾವಿದರಿಗೆ ಆಹ್ವಾನಿಸುತ್ತಾರೆ. ಈ ಕಾರ್ಯಕ್ರಮಕ್ಕೆ ಖ್ಯಾತ ನಟಿ ಜಾನ್ವಿ ಕೂಡ ಭಾಗಿಯಾಗಿದ್ದಾರೆ.

    ಈ ಕಾರ್ಯಕ್ರಮಕ್ಕೆ ಕನ್ನಡತಿ ದಿಶಾ ಮದನ್, ಪ್ರಣಿತಾ ಸುಭಾಷ್, ಐಶ್ವರ್ಯಾ ರೈ, ರುಚಿ ಗುಜ್ಜರ್, ಆದಿತಿ ರಾವ್ ಹೈದರಿ, ಮೌನಿ ರಾಯ್ ಸೇರಿದಂತೆ ಅನೇಕರು ಭಾಗಿಯಾಗಿದ್ದಾರೆ.

  • ಬಿಕಿನಿಯಲ್ಲಿ ಬೀಚ್ ಬಳಿ ನಟಿ ಖುಷಿ ಕಪೂರ್ ಚಿಲ್

    ಬಿಕಿನಿಯಲ್ಲಿ ಬೀಚ್ ಬಳಿ ನಟಿ ಖುಷಿ ಕಪೂರ್ ಚಿಲ್

    ಸಿನಿಮಾ ಫ್ಲಾಪ್ ಆದರೂ ಕ್ಯಾರೆ ಎನ್ನದೆ ಬಾಲಿವುಡ್ ನಟಿ ಖುಷಿ ಕಪೂರ್ (Kushi Kapoor) ವೆಕೇಷನ್‌ನಲ್ಲಿ ಬ್ಯುಸಿಯಾಗಿದ್ದಾರೆ. ಬಿಕಿನಿ (Bikini) ಧರಿಸಿ ಬೀಚ್ ಬಳಿ ನಟಿ ಖುಷಿ ಬೋಲ್ಡ್ ಆಗಿ ಪೋಸ್ ಕೊಟ್ಟಿದ್ದಾರೆ. ಬಿಕಿನಿಯಲ್ಲಿರುವ ನಟಿಯನ್ನು ನೋಡಿ ಫ್ಯಾನ್ಸ್ ಫಿದಾ ಆಗಿದ್ದಾರೆ. ಇದನ್ನೂ ಓದಿ:‘ಲಕ್ಷ್ಮಿ ಬಾರಮ್ಮ’ ನಟನ ಅದ್ಧೂರಿ ಆರತಕ್ಷತೆ- ಸಿನಿ ತಾರೆಯರು ಭಾಗಿ

    ಫ್ರೆಂಡ್ಸ್ ಜೊತೆ ನಟಿ ವೆಕೇಷನ್‌ಗೆ ತೆರಳಿದ್ದಾರೆ. ಬಿಕಿನಿ ಧರಿಸಿ ಸಖತ್ ಹಾಟ್ ಆಗಿ ಖುಷಿ ಕಾಣಿಸಿಕೊಂಡಿದ್ದಾರೆ. ನಟಿ ವಿವಿಧ ಭಂಗಿಗಳ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಅವರ ಫೋಟೋಗೆ ಬಗೆ ಬಗೆಯ ಕಾಮೆಂಟ್‌ಗಳು ಹರಿದು ಬರುತ್ತಿವೆ. ಇದನ್ನೂ ಓದಿ:‘ಸಿಕಂದರ್’ ಸೋಲಿನ ಬಳಿಕ ಆರ್ಮಿ ಆಫೀಸರ್ ಪಾತ್ರದಲ್ಲಿ ಸಲ್ಮಾನ್ ಖಾನ್?

    ಹಿರಿಯ ನಟಿ ಶ್ರೀದೇವಿ (Sridevi) ಪುತ್ರಿ ಖುಷಿಗೂ ನೆಪೋಟಿಸಂ ಕಿಡ್ ಎಂದು ಟೀಕಿಸುತ್ತಿದ್ದಾರೆ. ಇತ್ತೀಚೆಗೆ ತೆರೆಕಂಡ 2 ಸಿನಿಮಾಗಳು ಗಲ್ಲಾಪೆಟ್ಟಿಗೆಯಲ್ಲಿ ಮಕಾಡೆ ಮಲಗಿವೆ. ಲವ್‌ಯಾಪಾ, ನಾದಾನಿಯಾ ಸಿನಿಮಾಗಳು ಸೋತಿವೆ. ಸೆಲೆಬ್ರಿಟಿ ಕಿಡ್‌ನ ಸಿನಿಮಾಗೆ ಹಾಕಿಕೊಂಡರೆ ಹೀಗೆ ಎಂದು ಟೀಕಿಸುತ್ತಿದ್ದಾರೆ. ಪ್ರತಿಭೆ ಇಲ್ಲದ ಹುಡುಗಿಗೆ ಯಾಕೆ ಚಾನ್ಸ್ ಕೊಡ್ತೀರಾ ಎಂದು ಫ್ಯಾನ್ಸ್ ಕಾಮೆಂಟ್ ಮಾಡ್ತಿದ್ದಾರೆ. ಹೀಗಿರುವಾಗ ಸಿನಿಮಾ ಸೋಲಿನ ಬಗ್ಗೆ ತಲೆ ಕೆಡಿಸಿಕೊಳ್ಳದೆ ವೆಕೇಷನ್ ಹೋಗಿರುವ ನಟಿಯನ್ನು ಫ್ಯಾನ್ಸ್ ತರಾಟೆಗೆ ತೆಗೆದುಕೊಂಡಿದ್ದಾರೆ.

    ಸಿನಿಮಾಗಳು ಸೋತಿದ್ರೂ ಖುಷಿಗೆ ಅವಕಾಶಗಳೇನು ಕಡಿಮೆಯಾಗಿಲ್ಲ. ಶ್ರೀದೇವಿ ಮತ್ತು ಬೋನಿ ಕಪೂರ್ ಮಗಳು ಅನ್ನೋ ಕಾರಣಕ್ಕೆ ನಟಿಗೆ ಚಾನ್ಸ್ ಸಿಕ್ತಿದೆ. ಜಾನ್ವಿ ಕಪೂರ್ ಸ್ಟಾರ್ ಕಿಡ್ ಆಗಿದ್ರೂ ಬ್ಯೂಟಿ ಜೊತೆ ಪ್ರತಿಭೆ ಇದೆ ಅನ್ನೋ ಕಾರಣಕ್ಕೆ ಫ್ಯಾನ್ಸ್ ಸುಮ್ಮನಿದ್ದಾರೆ.

  • ಬಾಲಿವುಡ್‌ಗಿಂತ ತೆಲುಗಿನಲ್ಲೇ ಹೆಚ್ಚಾಯ್ತು ಜಾನ್ವಿ ಕಪೂರ್‌ಗೆ ಡಿಮ್ಯಾಂಡ್- ಫ್ಯಾನ್ಸ್‌ಗೆ ಗುಡ್ ನ್ಯೂಸ್

    ಬಾಲಿವುಡ್‌ಗಿಂತ ತೆಲುಗಿನಲ್ಲೇ ಹೆಚ್ಚಾಯ್ತು ಜಾನ್ವಿ ಕಪೂರ್‌ಗೆ ಡಿಮ್ಯಾಂಡ್- ಫ್ಯಾನ್ಸ್‌ಗೆ ಗುಡ್ ನ್ಯೂಸ್

    ಟಿ ಜಾನ್ವಿ ಕಪೂರ್‌ಗೆ (Janhavi Kapoor) ಬಾಲಿವುಡ್‌ಗಿಂತ ಟಾಲಿವುಡ್‌ನಲ್ಲಿ (Tollywood) ಬೇಡಿಕೆ ಹೆಚ್ಚಾಗಿದೆ. ತೆಲುಗಿನಲ್ಲಿ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ‘ದೇವರ’ ಬಳಿಕ ಹಲವು ಅವಕಾಶಗಳು ನಟಿಯನ್ನು ಅರಸಿ ಬಂದಿವೆ. ಇದನ್ನೂ ಓದಿ:‘‌ಡ್ರ್ಯಾಗನ್’ ನಟನಿಗೆ ಹೆಚ್ಚಿದೆ ಬೇಡಿಕೆ- ಸಾಲು ಸಾಲು ಚಿತ್ರಗಳಲ್ಲಿ ನಟ

    ಜ್ಯೂ.ಎನ್‌ಟಿಆರ್‌ಗೆ ನಾಯಕಿಯಾಗಿ ‘ದೇವರ’ ಸಿನಿಮಾ ಮೂಲಕ ಟಾಲಿವುಡ್‌ಗೆ ಪರಿಚಿತರಾದರು. ಮೊದಲ ಸಿನಿಮಾದಲ್ಲೇ ನಟನೆ ಮತ್ತು ಗ್ಲ್ಯಾಮರ್‌ನಿಂದ ಜಾನ್ವಿ ಗಮನ ಸೆಳೆದರು. ಇದರ ನಡುವೆ ‘ದೇವರ’ ಪಾರ್ಟ್ 2ನಲ್ಲೂ (Devara 2) ಜಾನ್ವಿ ಪಾತ್ರ ಕಂಟಿನ್ಯೂ ಆಗಲಿದೆ. ಭಾಗ 2ರಲ್ಲಿ ತಾರಕ್ ಜೊತೆ ನಟಿ ಮಿಂಚಲಿದ್ದಾರೆ. ಇದನ್ನೂ ಓದಿ:‘ಆಂಧ್ರ ಕಿಂಗ್’ ಆದ ಉಪೇಂದ್ರ ಕಟೌಟ್ ಮುಂದೆ ರಾಮ್ ಪೋತಿನೇನಿ ಸಂಭ್ರಮ- ಟೀಸರ್ ಔಟ್

    ಸದ್ಯ ರಾಮ್ ಚರಣ್‌ಗೆ (Ram Charan) ನಾಯಕಿಯಾಗಿ ‘ಪೆಡ್ಡಿ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಹೀಗಿರುವಾಗ ಅವರೊಂದಿಗೆ ಮತ್ತೊಂದು ಸಿನಿಮಾಗೆ ನಾಯಕಿಯಾಗಿ ನಟಿಸುವ ಚಾನ್ಸ್ ಸಿಕ್ಕಿದೆ. ರಾಮ್ ನಟಿಸಲಿರುವ ‘ಜಗದೇಕ ವೀರುಡು ಅತಿಲೋಕ ಸುಂದರಿ’ ಭಾಗ 2ರಲ್ಲಿ ನಟಿಸಲು ಜಾನ್ವಿಗೆ ಆಫರ್ ಸಿಕ್ಕಿದೆ. ಮತ್ತೆ ‘ಪೆಡ್ಡಿ’ ಜೋಡಿ ಈ ಸಿನಿಮಾದಲ್ಲೂ ಒಂದಾಗುತ್ತಿದೆ.

    1990ರಲ್ಲಿ ತೆರೆಕಂಡ ‘ಜಗದೇಕ ವೀರುಡು ಅತಿಲೋಕ ಸುಂದರಿ’ ಮೊದಲ ಭಾಗದಲ್ಲಿ ಮೆಗಾಸ್ಟಾರ್ ಚಿರಂಜೀವಿ ಮತ್ತು ಖ್ಯಾತ ನಟಿ ಶ್ರೀದೇವಿ ನಟಿಸಿದ್ದರು. ಇದರ ಭಾಗ 2ರಲ್ಲಿ ಚಿರಂಜೀವಿ ಪುತ್ರ ರಾಮ್ ಚರಣ್ ಹಾಗೂ ಶ್ರೀದೇವಿ ಪುತ್ರಿ ಜಾನ್ವಿ ನಟಿಸಿದರೆ ಸೂಕ್ತ ಎಂದು ಚಿತ್ರತಂಡ ಯೋಚಿಸಿದೆ. ಸದ್ಯದಲ್ಲೇ ಈ ಎಲ್ಲದರ ಬಗ್ಗೆ ಅಧಿಕೃತ ಮಾಹಿತಿ ಸಿಗಲಿದೆ.

  • ಜಾನ್ವಿ ಕಪೂರ್‌ಗೆ ಗೇಟ್ ಪಾಸ್ – ಶ್ರೀಲೀಲಾಗೆ ಬಿಗ್ ಚಾನ್ಸ್

    ಜಾನ್ವಿ ಕಪೂರ್‌ಗೆ ಗೇಟ್ ಪಾಸ್ – ಶ್ರೀಲೀಲಾಗೆ ಬಿಗ್ ಚಾನ್ಸ್

    ನ್ನಡದ ನಟಿ ಶ್ರೀಲೀಲಾ ಇದೀಗ ಬಾಲಿವುಡ್ ಮತ್ತು ತೆಲುಗು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಅದರಲ್ಲೂ ‘ಪುಷ್ಪ 2’ (Pushpa 2) ಸಿನಿಮಾದಲ್ಲಿ ಕಿಸಿಕ್ ಹಾಡಿಗೆ ಸೊಂಟ ಬಳುಕಿಸಿದ್ಮೇಲೆ ಬಾಲಿವುಡ್ ಮಂದಿ ಕನ್ನಡದ ಈ ನಟಿಗೆ ಮಣೆ ಹಾಕಿದ್ದಾರೆ. ಕರಣ್ ಜೋಹರ್ ಸಿನಿಮಾದಲ್ಲಿ ಜಾನ್ವಿ ಕಪೂರ್ ನಟಿಸಬೇಕಿದ್ದ ಪಾತ್ರಕ್ಕೆ ಶ್ರೀಲೀಲಾ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದಾರೆ. ಇದನ್ನೂ ಓದಿ:ಮೂವತ್ತೇ ಸೆಕೆಂಡುಗಳಲ್ಲಿ ಕಲಾ ಲೋಕ ಸೃಷ್ಟಿಸಿದ ನಟಿ ರಿಮಾ ಕಲ್ಲಿಂಗಲ್, ಪದ್ಮಪ್ರಿಯಾ!

    ಕರಣ್ ಜೋಹರ್ ಒಡೆತನದ ಧರ್ಮ ಪ್ರೊಡಕ್ಷನ್ಸ್ ಇದೀಗ ‘ದೋಸ್ತಾನ 2’ ಸಿನಿಮಾ ಮಾಡಲು ಮುಂದಾಗಿದೆ. ಇದಕ್ಕೆ ವಿಕ್ರಾಂತ್ ಮಾಸ್ಸಿ ನಾಯಕಿನಾಗಿ ನಟಿಸಲಿದ್ದಾರೆ. ಅವರಿಗೆ ಜೋಡಿಯಾಗಿ ನಟಿಸಲು ಜಾನ್ವಿ ಕಪೂರ್ ಅವರನ್ನು ಆಯ್ಕೆ ಮಾಡಿದ್ದರು. ಕಾರಣಾಂತರಗಳಿಂದ ಜಾನ್ವಿ ನಟಿಸಬೇಕಿದ್ದ ಜಾಗಕ್ಕೆ ಶ್ರೀಲೀಲಾ ಆಯ್ಕೆ ಮಾಡಿದ್ದಾರೆ. ಇದನ್ನೂ ಓದಿ:ಕನಸಿನ ಮನೆ ಕಟ್ಟಿದ ಸಂಭ್ರಮದಲ್ಲಿ ನಿಶಾ ರವಿಕೃಷ್ಣನ್

    ವಿಕ್ರಾಂತ್ ಮತ್ತು ಶ್ರೀಲೀಲಾ ಜೋಡಿಯ ಮೂಲಕ ‘ದೋಸ್ತಾನ 2’ (Dostana 2) ಚಿತ್ರದಲ್ಲಿ ವಿಭಿನ್ನ ಪ್ರೇಮಕಥೆಯನ್ನು ಹೇಳೋಕೆ ರೆಡಿಯಾಗಿದ್ದಾರೆ. ಕನ್ನಡದ ನಟಿಯ ಮೇಲಿರುವ ಪಡ್ಡೆಹುಡುಗರ ಕ್ರೇಜ್ ನೋಡಿ ಅವರಿಗೆ ನಟಿಸಲು ಆಫರ್ ನೀಡಲಾಗಿದೆ.

    2008ರಲ್ಲಿ ‘ದೋಸ್ತಾನ’ ಸಿನಿಮಾದಲ್ಲಿ ಜಾನ್ ಅಬ್ರಾಹಂ, ಪ್ರಿಯಾಂಕಾ ಚೋಪ್ರಾ, ಅಭಿಷೇಕ್ ಬಚ್ಚನ್ ನಟಿಸಿದ್ದರು. ಈ ಸಿನಿಮಾವನ್ನು ಕರಣ್ ಜೋಹರ್ ನಿರ್ಮಿಸಿದ್ದರು. ಇದೀಗ ಮತ್ತೆ ಸಿನಿಮಾ ಇದರ ಪಾರ್ಟ್ 2 ಮೂಲಕ ಹೊಸ ಜೋಡಿಯನ್ನು ಪರಿಚಯಿಸಲು ಮುಂದಾಗಿದೆ.

    ಅಂದಹಾಗೆ, ಕಾರ್ತಿಕ್ ಆರ್ಯನ್ ಜೊತೆ ‘ಆಶಿಕಿ-3’, ಸೈಫ್ ಅಲಿ ಖಾನ್ ಪುತ್ರ ಇಬ್ರಾಹಿಂಗೆ ಜೋಡಿಯಾಗಿ ಹೊಸ ಸಿನಿಮಾದಲ್ಲಿ ಶ್ರೀಲೀಲಾ ಕೆಲಸ ಮಾಡುತ್ತಿದ್ದಾರೆ. ಈ ಸಿನಿಮಾಗಳು ರಿಲೀಸ್ ಆಗುವ ಮುನ್ನವೇ ಅವರಿಗೆ ಬಾಲಿವುಡ್‌ನಲ್ಲಿ ಬಂಪರ್ ಆಫರ್‌ಗಳು ಬರುತ್ತಿವೆ.

  • ರಾಮ್ ಚರಣ್ ಸಿನಿಮಾಗೆ ‘ಪೆಡ್ಡಿ’ ಟೈಟಲ್ ಫಿಕ್ಸ್- ಮಾಸ್ ಗೆಟಪ್‌ನಲ್ಲಿ ನಟ

    ರಾಮ್ ಚರಣ್ ಸಿನಿಮಾಗೆ ‘ಪೆಡ್ಡಿ’ ಟೈಟಲ್ ಫಿಕ್ಸ್- ಮಾಸ್ ಗೆಟಪ್‌ನಲ್ಲಿ ನಟ

    ಟಾಲಿವುಡ್ ನಟ ರಾಮ್ ಚರಣ್ (Ram Charan) ನಟನೆಯ ‘ಆರ್ 16’ ಸಿನಿಮಾದ ಟೈಟಲ್ ರಿವೀಲ್ ಆಗಿದೆ. ‘ಪೆಡ್ಡಿ’ (Peddi) ಎಂದು ಚಿತ್ರಕ್ಕೆ ಕ್ಯಾಚಿ ಟೈಟಲ್ ಅನ್ನೇ ಸಿನಿಮಾಗೆ ಇಡಲಾಗಿದೆ. ಇದನ್ನೂ ಓದಿ:ಗೋಲ್ಡ್‌ ಸ್ಮಗ್ಲಿಂಗ್‌ ಕೇಸ್‌ – ರನ್ಯಾ ರಾವ್‌ ಜಾಮೀನು ಅರ್ಜಿ ಆದೇಶ ಇಂದು

    ‘ಆರ್‌ಆರ್‌ಆರ್’ (RRR) ಸಿನಿಮಾದ ಬಳಿಕ ಡೈರೆಕ್ಟರ್ ಬುಚ್ಚಿ ಬಾಬು ಸನಾ ಜೊತೆ ರಾಮ್ ಚರಣ್ ಕೈಜೋಡಿಸಿದ್ದಾರೆ. ಈ ಸಿನಿಮಾಗೆ ‘ಪೆಡ್ಡಿ’ ಎಂದು ಮಸ್ತ್ ಆಗಿರೋ ಟೈಟಲ್ ಅನ್ನೇ ಇಡಲಾಗಿದೆ. ರಾಮ್ ಚರಣ್ ಅವರು ಉದ್ದ ಕೂದಲಿನಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಬಾಯಲ್ಲಿ ಬೀಡಿ ಇದೆ. ಅವರ ಲುಕ್ ಸಖತ್ ರಗಡ್ ಆಗಿದೆ. ನಟನ ಲುಕ್ ನೋಡಿ ಅಭಿಮಾನಿಗಳಲ್ಲಿ ಕ್ರೇಜ್ ಹೆಚ್ಚಾಗಿದೆ.

     

    View this post on Instagram

     

    A post shared by Ram Charan (@alwaysramcharan)

    ಇನ್ನೂ ಈ ಚಿತ್ರದಲ್ಲಿ ರಾಮ್ ಚರಣ್‌ಗೆ (Ram Charan) ನಾಯಕಿಯಾಗಿ ಬಾಲಿವುಡ್ ಬೆಡಗಿ ಜಾನ್ವಿ ಕಪೂರ್ (Janhvi Kapoor) ನಟಿಸಿದ್ದಾರೆ. ಕನ್ನಡದ ನಟ ಶಿವರಾಜ್‌ಕುಮಾರ್ ಕೂಡ ಪವರ್‌ಫುಲ್ ರೋಲ್‌ನಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದ ಶೂಟಿಂಗ್ ಹೈದರಾಬಾದ್, ಮೈಸೂರು ಸೇರಿದಂತೆ ಹಲವೆಡೆ ನಡೆಯುತ್ತಿದೆ. ಸದ್ಯದಲ್ಲೇ ಚಿತ್ರದ ರಿಲೀಸ್ ಬಗ್ಗೆ ಅಪ್‌ಡೇಟ್ ಸಿಗಲಿದೆ.

    ಮೂರು ವರ್ಷಗಳ ಬಳಿಕ ‘ಪೆಡ್ಡಿ’ ಚಿತ್ರದ ಮೂಲಕ ಬರುತ್ತಿರೋ ರಾಮ್ ಚರಣ್‌ರನ್ನು ನೋಡಲು ಫ್ಯಾನ್ಸ್ ಕಾಯ್ತಿದ್ದಾರೆ.

  • ಜಾನ್ವಿ ಕಪೂರ್‌ಗೆ ವಿಶೇಷ ಉಡುಗೊರೆ ನೀಡಿದ ರಾಮ್ ಚರಣ್ ಪತ್ನಿ

    ಜಾನ್ವಿ ಕಪೂರ್‌ಗೆ ವಿಶೇಷ ಉಡುಗೊರೆ ನೀಡಿದ ರಾಮ್ ಚರಣ್ ಪತ್ನಿ

    ಬಾಲಿವುಡ್ ಬೆಡಗಿ ಜಾನ್ವಿ ಕಪೂರ್ (Janhvi Kapoor) ಅವರು ಸದ್ಯ ರಾಮ್ ಚರಣ್‌ಗೆ (Ram Charan) ನಾಯಕಿಯಾಗಿ ಹೊಸ ಪ್ರಾಜೆಕ್ಟ್ನಲ್ಲಿ ನಟಿಸುತ್ತಿದ್ದಾರೆ. ಹೈದರಾಬಾದ್‌ನಲ್ಲಿ ಶೂಟಿಂಗ್ ನಡೆಯುತ್ತಿದೆ. ಈ ಹಿನ್ನೆಲೆ ರಾಮ್ ಚರಣ್ ಪತ್ನಿ ಉಪಾಸನಾ (Upasana) ಭೇಟಿ ನೀಡಿ ಜಾನ್ವಿಗೆ ವಿಶೇಷ ಉಡುಗೊರೆಯೊಂದನ್ನು ನೀಡಿದ್ದಾರೆ.

    ಸೆಟ್‌ಗೆ ಬ್ರೇಕ್ ಇದ್ದ ಸಂದರ್ಭದಲ್ಲಿ ಉಪಾಸನಾ ಭೇಟಿ ನೀಡಿದ್ದಾರೆ. ಈ ವೇಳೆ, ‘ಅತ್ತಮ್ಮಾ ಕಿಚನ್’ ಕಡೆಯಿಂದ ಬಾಕ್ಸ್ ನೀಡಲಾಗಿದೆ. ರಾಮ್ ಚರಣ್ ತಾಯಿ ಸುರೇಖಾ ತಯಾರಿಸಿದ ರೆಸಿಪಿ ಇದಾಗಿದೆ. ಇದನ್ನು ‘ಅತ್ತಮ್ಮಾ ಕಿಚನ್’ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿದೆ.

     

    View this post on Instagram

     

    A post shared by Athamma`s Kitchen (@athammaskitchen)

    ಇನ್ನೂ ‘ಆರ್ ಸಿ 16’ ಸಿನಿಮಾದಲ್ಲಿ ರಾಮ್ ಚರಣ್, ಜಾನ್ವಿ ಕಪೂರ್, ಶಿವರಾಜ್‌ಕುಮಾರ್ ಸೇರಿದಂತೆ ಹಲವರು ನಟಿಸುತ್ತಿದ್ದಾರೆ. ಶೂಟಿಂಗ್ ಭರದಿಂದ ನಡೆಯುತ್ತಿದೆ. ಈ ಚಿತ್ರವನ್ನು ಬುಚಿ ಬಾಬು ಸನಾ ನಿರ್ದೇಶನ ಮಾಡುತ್ತಿದ್ದಾರೆ.

  • ಕೈಯಲ್ಲಿ ಭಾರೀ ಗಾತ್ರದ ಮೀನು, ಬಾಯಿಯಲ್ಲಿ ಚಾಕು ಹಿಡಿದುಕೊಂಡು ಬಂದ ಜಾನ್ವಿ ಕಪೂರ್

    ಕೈಯಲ್ಲಿ ಭಾರೀ ಗಾತ್ರದ ಮೀನು, ಬಾಯಿಯಲ್ಲಿ ಚಾಕು ಹಿಡಿದುಕೊಂಡು ಬಂದ ಜಾನ್ವಿ ಕಪೂರ್

    ಬಾಲಿವುಡ್ ಬೆಡಗಿ ಜಾನ್ವಿ ಕಪೂರ್ (Janhvi Kapoor) ಸದಾ ಬೋಲ್ಡ್ ಅವತಾರದಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಈಗ ಬಾಯಿಯಲ್ಲಿ ಚಾಕು ಹಿಡಿದು ರಗಡ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ‘ದೇವರ 2’ ಸಿನಿಮಾದಲ್ಲಿನ ನಟಿಯ ಪೋಸ್ಟರ್ ರಿಲೀಸ್ ಮಾಡಿ ಚಿತ್ರತಂಡ ಬಿಗ್ ಅಪ್‌ಡೇಟ್ ಹಂಚಿಕೊಂಡಿದೆ.

    ‘ದೇವರ 2’ನಲ್ಲಿ ಹಳ್ಳಿಯ ಹುಡುಗಿಯ ಲುಕ್‌ನಲ್ಲಿ ಮಿಂಚಿದ್ದಾರೆ. ಬಾಯಲ್ಲಿ ಚಾಕು ಹಿಡಿದು ರಗಡ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ನಟಿಯ ಜನುಮ ದಿನದ ಪ್ರಯುಕ್ತ ಫ್ಯಾನ್ಸ್‌ಗೆ ಚಿತ್ರತಂಡ ಸರ್ಪ್ರೈಸ್ ಕೊಟ್ಟಿದೆ. ಜೊತೆಗೆ ಈ ಸಿನಿಮಾದ ಪಾರ್ಟ್ 2 ಬರಲ್ಲ ಎಂದವರಿಗೆ ನಟಿಯ ಪೋಸ್ಟರ್ ರಿಲೀಸ್ ಮಾಡಿ ಬಾಯಿ ಮುಚ್ಚಿಸಿದ್ದಾರೆ.

     

    View this post on Instagram

     

    A post shared by Devara Movie (@devaramovie)

    ಇನ್ನೂ ಜ್ಯೂ.ಎನ್‌ಟಿಆರ್ ನಟನೆಯ ‘ದೇವರ’ ಸಿನಿಮಾ ಕಳೆದ ವರ್ಷ ರಿಲೀಸ್ ಆಗಿ ಸಕ್ಸಸ್ ಕಂಡಿತ್ತು. ತಾರಕ್ ಜೊತೆ ಜಾನ್ವಿ ಮಿಂಚಿದ್ದರು. ಹಳ್ಳಿ ಹುಡುಗಿಯ ಪಾತ್ರಕ್ಕೆ ಜೀವ ತುಂಬಿದ್ದರು. ಇದನ್ನೂ ಓದಿ:ನಿಶ್ಚಿತಾರ್ಥದ ಸಂಭ್ರಮದಲ್ಲಿ ‘ಬಿಗ್‌ ಬಾಸ್‌’ ಖ್ಯಾತಿಯ ರಂಜಿತ್‌

    ಇನ್ನೂ ಪರಮ ಸುಂದರಿ, ರಾಮ್ ಚರಣ್ ಜೊತೆಗಿನ ಸಿನಿಮಾ ಸೇರಿದಂತೆ ಹಲವು ಪ್ರಾಜೆಕ್ಟ್‌ಗಳು ಜಾನ್ವಿ ಕಪೂರ್ ಕೈಯಲ್ಲಿವೆ.

  • ಮದುವೆಯಾಗಿ ತಿರುಮಲದಲ್ಲಿ ಪತಿಯೊಂದಿಗೆ ಸೆಟಲ್ ಆಗ್ತೀನಿ: ಜಾನ್ವಿ ಕಪೂರ್

    ಮದುವೆಯಾಗಿ ತಿರುಮಲದಲ್ಲಿ ಪತಿಯೊಂದಿಗೆ ಸೆಟಲ್ ಆಗ್ತೀನಿ: ಜಾನ್ವಿ ಕಪೂರ್

    ಬಾಲಿವುಡ್ ಬೆಡಗಿ ಜಾನ್ವಿ ಕಪೂರ್ (Janhvi Kapoor) ಅವರು ತಿರುಮಲದಲ್ಲಿ ಮದುವೆಯಾಗುವ (Wedding) ಪ್ಲ್ಯಾನ್ ಬಗ್ಗೆ ಮಾತನಾಡಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ ನಟಿ ಮಾತನಾಡಿ, ಮದುವೆಯ ಬಳಿಕ 3 ಮಕ್ಕಳೊಂದಿಗೆ ತಿರುಮಲದಲ್ಲಿ ಸೆಟಲ್ ಆಗುವ ಆಸೆ ಇದೆ ಎಂದು ಮಾತನಾಡಿದ್ದಾರೆ. ಇದನ್ನೂ ಓದಿ:ಚಲನಚಿತ್ರ ರಾಜ್ಯ ಪ್ರಶಸ್ತಿ ನಿರಾಕರಿಸಿದ ನಟ ಸುದೀಪ್‌

    ಹಿರಿಯ ನಟಿ ಶ್ರೀದೇವಿ ಪುತ್ರಿ ಜಾನ್ವಿ ಕಪೂರ್ ಅವರು ಕೂಡ ತಿರುಮಲ ತಿಮ್ಮಪ್ಪನ ಭಕ್ತೆಯಾಗಿದ್ದಾರೆ. ತಿಮ್ಮಪ್ಪ ದೇವರಲ್ಲಿ ಅಪಾರ ನಂಬಿಕೆ ಹೊಂದಿದ್ದಾರೆ. ಆಗಾಗ ನಟಿ ತಿರುಪತಿಗೆ ಭೇಟಿ ನೀಡುತ್ತಲೇ ಇರುತ್ತಾರೆ. ಇದೀಗ ಜಾನ್ವಿ ಮದುವೆಯಾಗಿ ತಿರುಪತಿಯಲ್ಲೇ ನೆಲೆಸುವ ಆಸೆಯಿದೆ ಎಂದಿದ್ದಾರೆ.

    ಕರಣ್ ಜೋಹರ್ ಶೋನಲ್ಲಿ ಮಾತಾಡಿದ ಜಾನ್ವಿ, ಮದುವೆಯಾಗಿ ತಿರುಮಲದಲ್ಲಿ ಪತಿಯೊಂದಿಗೆ ಸೆಟಲ್ ಆಗ್ತೀನಿ ಎಂದಿದ್ದಾರೆ. ಮದುವೆ ಬಳಿಕ 3 ಮಕ್ಕಳೊಂದಿಗೆ ನೆಮ್ಮದಿಯಿಂದ ಬದುಕುವಾಸೆ ಇದೆ. ತಿರುಪತಿ ತಿರುಮಲದಲ್ಲಿ ಸೆಟಲ್ ಆಗಿ ದಿನವೂ ಬಾಳೆ ಎಲೆ ಊಟ ಮಾಡಬೇಕು ಎಂದು ಮನದಾಳದ ಆಸೆಯನ್ನು ವ್ಯಕ್ತಪಡಿಸಿದ್ದಾರೆ.

    ಗೋವಿಂದಾ ಗೋವಿಂದಾ ಎಂದು ಸ್ಮರಿಸಬೇಕು. ಮಣಿರತ್ನಂ ಅವರ ಸಿನಿಮಾಗಳ ಸಂಗೀತವನ್ನ ಕೇಳುತ್ತಾ ದಿನ ಕಳೆಯುವೆ ಎಂದು ನಟಿ ಹೇಳಿದ್ದಾರೆ. ಶಿಖರ್‌ ಪಹಾರಿಯಾ ಜೊತೆ ಜಾನ್ವಿ ಡೇಟಿಂಗ್‌ ವಿಚಾರ ಸಾಕಷ್ಟು ಭಾರೀ ಕೇಳಿ ಬಂದಿದೆ. ಇಬ್ಬರೂ ಜೊತೆಯಾಗಿ ಹಲವು ಬಾರಿ ಕಾಣಿಸಿಕೊಂಡಿದ್ದಾರೆ. ಎಲ್ಲೂ ಅಧಿಕೃತವಾಗಿ ಹೇಳಿಕೊಂಡಿಲ್ಲ. ಮದುವೆ ಬಳಿಕ ಜಾನ್ವಿ ನಟನೆಗೆ ಗುಡ್ ಬೈ ಹೇಳ್ತಾರಾ? ಎಂಬ ಮಾತುಗಳು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ಗ್ರಾಸವಾಗಿದೆ.

  • ಶಿವಕಾರ್ತಿಕೇಯನ್‌, ಸಾಯಿ ಪಲ್ಲವಿ ಸಿನಿಮಾ ನೋಡಿ ಮ್ಯಾಜಿಕಲ್ ಎಂದ ಜಾನ್ವಿ ಕಪೂರ್

    ಶಿವಕಾರ್ತಿಕೇಯನ್‌, ಸಾಯಿ ಪಲ್ಲವಿ ಸಿನಿಮಾ ನೋಡಿ ಮ್ಯಾಜಿಕಲ್ ಎಂದ ಜಾನ್ವಿ ಕಪೂರ್

    ಬಾಲಿವುಡ್ ಬೆಡಗಿ ಜಾನ್ವಿ ಕಪೂರ್ (Janhvi Kapoor) ಹಿಂದಿ ಮಾತ್ರವಲ್ಲೇ ಸೌತ್ ಸಿನಿಮಾಗಳಲ್ಲೂ ಬ್ಯುಸಿಯಾಗಿದ್ದಾರೆ. ಇದರ ನಡುವೆ ಶಿವಕಾರ್ತಿಕೇಯನ್ ನಟನೆಯ ಅಮರನ್ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ. ಮ್ಯಾಜಿಕಲ್ ಸಿನಿಮಾ ಎಂದು ಕೊಂಡಾಡಿದ್ದಾರೆ. ಇದನ್ನೂ ಓದಿ:BBK 11: ‘ಬಿಗ್ ಬಾಸ್’ ಗ್ರ್ಯಾಂಡ್ ಫಿನಾಲೆ ಯಾವಾಗ?- ಇಲ್ಲಿದೆ ಅಪ್‌ಡೇಟ್

    ಶಿವಕಾರ್ತಿಕೇಯನ್, ಸಾಯಿ ಪಲ್ಲವಿ (Sai Pallavi) ನಟನೆಯ ‘ಅಮರನ್’ (Amaran) ಸಿನಿಮಾ ವೀಕ್ಷಿಸಿದ ಜಾನ್ವಿ ಕಪೂರ್ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಚಿತ್ರದ ಕುರಿತು ಬರೆದುಕೊಂಡಿದ್ದಾರೆ. ಸಿನಿಮಾ ನೋಡೋದು ತಡವಾಗಿದೆ. ಆದರೆ ಇದೊಂದು ಮ್ಯಾಜಿಕಲ್ ಸಿನಿಮಾ ಎಂದಿದ್ದಾರೆ. ಈ ವರ್ಷವನ್ನು ಈ ಸಿನಿಮಾ ನೋಡಿ ಕೊನೆಗೊಳಿಸಿದೆ ಎಂಬರ್ಥದಲ್ಲಿ ನಟಿ ಬರೆದುಕೊಂಡಿದ್ದಾರೆ. ಈ ವರ್ಷ ನೋಡಿದ ಹೃದಯಸ್ಪರ್ಶಿ ಸಿನಿಮಾ ಇದಾಗಿದೆ ಎಂದು ನಟಿ ಬರೆದುಕೊಂಡಿದ್ದಾರೆ.

    ಅಂದಹಾಗೆ, ಅಕ್ಟೋಬರ್ 31ರಂದು ‘ಅಮರನ್’ ಸಿನಿಮಾ ರಿಲೀಸ್ ಆಗಿತ್ತು. ಮೇಜತ್ ಮುಕುಂದ್ ವರದರಾಜನ್ ಪಾತ್ರದಲ್ಲಿ ಶಿವಕಾರ್ತಿಕೇಯನ್ (Sivakarthikeyan) ನಟಿಸಿದ್ದಾರೆ. ಅವರಿಗೆ ಸಾಯಿ ಪಲ್ಲವಿ ಜೋಡಿಯಾಗಿದ್ದಾರೆ.

    ಇನ್ನೂ ಜಾನ್ವಿ ಕಪೂರ್ ಅವರು ತೆಲುಗಿನ ‘ದೇವರ’ ಸಿನಿಮಾ ಬಳಿಕ ರಾಮ್ ಚರಣ್ ಜೊತೆಗಿನ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ವರುಣ್ ಧವನ್ ಹೊಸ ಚಿತ್ರದಲ್ಲಿ ಅವರು ನಟಿಸುತ್ತಿದ್ದಾರೆ. ತಮಿಳಿನ ಹೊಸ ಸಿನಿಮಾಗೂ ನಟಿ ಓಕೆ ಎಂದಿದ್ದಾರೆ. ಅದ್ಯಾವ ಸಿನಿಮಾ ಎಂದು ಕಾಯಬೇಕಿದೆ.