Tag: ಜಾನುವಾರಗಳು

  • ಗೋಶಾಲೆಗೆ ನುಗ್ಗಿದ ನೀರು- ಪ್ರವಾಹದಲ್ಲಿ ಕೊಚ್ಚಿ ಹೋದ ಹಸುಗಳು

    ಗೋಶಾಲೆಗೆ ನುಗ್ಗಿದ ನೀರು- ಪ್ರವಾಹದಲ್ಲಿ ಕೊಚ್ಚಿ ಹೋದ ಹಸುಗಳು

    ಗಾಂಧಿನಗರ: ಗುಜರಾತ್‍ನಲ್ಲಿ ಸೋಮವಾರ ಧಾರಾಕಾರ ಮಳೆಯಾಗಿದೆ. ಭಾರೀ ಮಳೆಯಿಂದಾಗಿ ತಗ್ಗು ಪ್ರದೇಶಗಳು ಪ್ರವಾಹಕ್ಕೆ ಸಿಲುಕಿದ್ದವು. ಆದರೆ ನಿರಂತರ ಮಳೆಯಿಂದಾಗಿ ಪ್ರವಾಹದಲ್ಲಿ ಜಾನುವಾರುಗಳು ಕೊಚ್ಚಿಕೊಂಡು ಹೋಗಿವೆ.

    ಗುಜರಾತ್‍ನ ಅನೇಕ ಕಡೆ ನಿರಂತರವಾಗಿ ಮಳೆಯಾಗುತ್ತಿದ್ದು, ಇದರಿಂದ ಪ್ರವಾಹ ಉಂಟಾಗಿದೆ. ಈಗಾಗಲೇ ಪ್ರವಾಹದಿಂದ ಅನೇಕ ರಸ್ತೆಗಳು, ಕೃಷಿ ತೋಟಗಳು ಮತ್ತು ಮನೆಗಳು ಜಲಾವೃತವಾಗಿದೆ. ಇದೀಗ ರಾಜ್‍ಕೋಟ್‍ನ ಖಿಜಾಡಿಯಾ ಮೋಟಾ ಗ್ರಾಮದಲ್ಲಿ ನಿರಂತವಾಗಿ ಮಳೆ ಸುರಿಯುತ್ತಿದೆ.

    ನಿರಂತರ ಮಳೆಯಿಂದಾಗಿ ಪಧಾರಿ ವ್ಯಾಪ್ತಿಯ ದೊಡ್ಡ ಖಿಜಾಡಿಯಾ ಗ್ರಾಮದಲ್ಲಿ ಪ್ರವಾಹ ಉಂಟಾಗಿದೆ. ಇದರಿಂದ ಗೋಶಾಲಾ ಪ್ರವಾಹದಲ್ಲಿ ಮುಳುಗಿದೆ. ಈ ಗೋಶಾಲೆಯಲ್ಲಿ ಸುಮಾರು 40 ಹಸುಗಳಿದ್ದವು ಎಂದು ತಿಳಿದು ಬಂದಿದೆ. ಅನೇಕ ಜಾನುವಾರುಗಳು ಪ್ರವಾಹ ನೀರಿನಲ್ಲಿ ಕೊಚ್ಚಿಕೊಂಡು ಹೋಗಿವೆ. ಜಾನುವಾರುಗಳು ಕೊಚ್ಚಿಕೊಂಡು ಹೋಗುತ್ತಿರುವ ವಿಡಿಯೋ ವೈರಲ್ ಆಗಿದೆ. ವಿಡಿಯೋದಲ್ಲಿ ಒಂದೊಂದೆ ಜಾನುವಾರುಗಳು ಪ್ರವಾಹದ ರಭಸಕ್ಕೆ ಕೊಚ್ಚಿಕೊಂಡು ಹೋಗುತ್ತಿರುವುದನ್ನು ಕಾಣಬಹುದಾಗಿದೆ.

    ಕಳೆದ ಎರಡು ದಿನಗಳಿಂದ ಗುಜರಾತ್‍ನ ಅನೇಕ ಭಾಗಗಳಲ್ಲಿ ಭಾರೀ ಮಳೆಯಾಗುತ್ತಿದೆ. ರಾಜ್‍ಕೋಟ್, ದ್ವಾರಿಕಾ, ಪೋರ್ಬಂದರ್ ಮುಂತಾದ ನಗರಗಳು ಈಗಾಗಲೇ ಪ್ರವಾಹಕ್ಕೆ ಮುಳುಗಿವೆ. ಮುಂದಿನ ಮೂರು ದಿನಗಳಲ್ಲಿ ಸೌರಾಷ್ಟ್ರ ಮತ್ತು ಉತ್ತರ ಮತ್ತು ದಕ್ಷಿಣ ಗುಜರಾತ್‍ನ ಕೆಲವು ಭಾಗಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತ ಹವಾಮಾನ ಇಲಾಖೆ ತಿಳಿಸಿದೆ.