Tag: ಜಾನಿ

  • ರಮ್ಯಾ ಬದಲು ರಚಿತಾ ರಾಮ್: ಎರಡು ಬಾರಿ ರಮ್ಯಾ ಸ್ಥಾನ ತುಂಬಿದ ರಚ್ಚು

    ರಮ್ಯಾ ಬದಲು ರಚಿತಾ ರಾಮ್: ಎರಡು ಬಾರಿ ರಮ್ಯಾ ಸ್ಥಾನ ತುಂಬಿದ ರಚ್ಚು

    ದು ಕಾಕತಾಳೀಯವಾದರೂ ನಿಜ. ರಮ್ಯಾ (Ramya) ನಟನೆಯ ಮುಂದುವರೆದು ಭಾಗದ ಸಿನಿಮಾಗಳು ರಚಿತಾ ರಾಮ್ (Rachita Ram) ಪಾಲಾಗುತ್ತಿವೆ. ರಮ್ಯಾ ನಟನೆಯ ಸಿನಿಮಾಗಳ ಪಾರ್ಟ್ 2 ಚಿತ್ರದಲ್ಲಿ ರಚಿತಾ ಆಯ್ಕೆಯಾಗುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ರಮ್ಯಾ ನಟನೆಯ ಎರಡು ಸಿನಿಮಾಗಳಿಗೆ ಹೀಗೆ ರಚಿತಾ ಆಯ್ಕೆಯಾಗಿದ್ದಾರೆ.

    ಈ ಹಿಂದೆ ದುನಿಯಾ ವಿಜಯ್ ನಟನೆಯ ‘ಜಾನಿ’ (Johnny) ಸಿನಿಮಾದಲ್ಲಿ ರಮ್ಯಾ ನಾಯಕಿಯಾಗಿ ನಟಿಸಿದ್ದರು. ‘ಊರಿಗೊಬ್ಬಳೇ ಪದ್ಮಾವತಿ’ ಹಾಡಿನ ಮೂಲಕ ಪಡ್ಡೆಗಳ ನಿದ್ದೆ ಕದ್ದಿದ್ದರು. ಈ ಸಿನಿಮಾ ‘ಜಾನಿ ಜಾನಿ ಯೆಸ್ ಪಪ್ಪಾ’ ಹೆಸರಿನಲ್ಲಿ ಪಾರ್ಟ್ 2 ಬಂತು. ಆದರೆ, ಈ ಸಿನಿಮಾದಲ್ಲಿ ನಟಿಸಲು ರಮ್ಯಾ ನಿರಾಕರಿಸಿದ್ದರು. ಹಾಗಾಗಿ ಸಲೀಸಾಗಿ ರಚಿತಾ ರಾಮ್ ಗೆ ಈ ಅವಕಾಶ ಒದಗಿ ಬಂತು. ಇದನ್ನೂ ಓದಿ:ಆಲ್ ಓಕೆ ಅಲೋಕ್ ಜೊತೆ ಕೈ ಜೋಡಿಸಿದ ಕ್ರೇಜಿಸ್ಟಾರ್ ರವಿಚಂದ್ರನ್

    ಇದೀಗ ನಾಗಶೇಖರ್ ಸಂಜು ವೆಡ್ಸ್ ಗೀತಾ ಸಿನಿಮಾದ ಪಾರ್ಟ್ 2 (Sanju Weds Geetha)ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ. ಸಂಜು ವೆಡ್ಸ್ ಗೀತಾ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದವರು ಅದೇ ರಮ್ಯಾ. ಆದರೆ, ಪಾರ್ಟ್ 2ನಲ್ಲಿ ಪಾತ್ರ ಮಾಡಲು ರಮ್ಯಾ ನಿರಾಕರಿಸಿದ್ದಾರೆ. ಹಾಗಾಗಿ ಆ ಸ್ಥಾನವನ್ನು ಮತ್ತದೇ ರಚಿತಾ ರಾಮ್ ತುಂಬುತ್ತಿದ್ದಾರೆ.

    ರಚಿತಾ ರಾಮ್ ಅವರನ್ನು ಭೇಟಿ ಮಾಡಿರುವ ನಿರ್ದೇಶಕ ನಾಗಶೇಖರ್. ಸಿನಿಮಾದ ಸಂಪೂರ್ಣ ಕಥೆಯನ್ನು ಹೇಳಿದ್ದಾರಂತೆ. ರಚಿತಾ ಕೂಡ ಕಥೆ ಮತ್ತು ಪಾತ್ರ ಇಷ್ಟಪಟ್ಟು ಒಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಸಿನಿಮಾ ಇದೇ ಆಗಸ್ಟ್ 15ರಂದು ಮುಹೂರ್ತ ಆಚರಿಸಿಕೊಳ್ಳುತ್ತಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಮಾಹಿತಿ ಚಿತ್ರತಂಡದಿಂದ ಸಿಗಬಹುದು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಡ್ಯಾನ್ಸ್ ಮಾಸ್ಟರ್‌ಗೆ ದುಬಾರಿ ಗಿಫ್ಟ್ ಕೊಟ್ಟ ಕಿಚ್ಚ

    ಡ್ಯಾನ್ಸ್ ಮಾಸ್ಟರ್‌ಗೆ ದುಬಾರಿ ಗಿಫ್ಟ್ ಕೊಟ್ಟ ಕಿಚ್ಚ

    ಚಂದನವನದ ಅಭಿನಯ ಚರ್ಕವರ್ತಿ ಕಿಚ್ಚ ಸುದೀಪ್ ನಟನೆ ಜೊತೆಗೆ ತನ್ನ ಸುತ್ತಮುತ್ತಲಿರುವ ಜನರನ್ನು ಅವರಷ್ಟೇ ಎತ್ತರಕ್ಕೆ ನೋಡಬಯಸುವ ವ್ಯಕ್ತಿ. ನಟನೆಗೆ ಎಷ್ಟು ಪ್ರೀತಿ ತೋರಿಸುತ್ತಾರೂ, ಅಷ್ಟೇ ಫ್ರೆಂಡ್‍ಶಿಪ್‍ಗೂ ಬೆಲೆಕೊಡುವ ವ್ಯಕ್ತಿ ಈ ನಟ. ಹಿಂದೆ ನಿರ್ದೇಶಕ ಅನೂಪ್ ಭಂಡಾರಿ ಅವರಿಗೆ ಎಸ್‍ಯುವಿ ಕಾರ್ ಗಿಫ್ಟ್ ಕೊಟ್ಟು ಸುದ್ದಿಯಾಗಿದ್ದರು. ಈಗ ಮತ್ತೆ ಡ್ಯಾನ್ಸ್ ನಿರ್ದೇಶಕರಿಗೂ ದುಬಾರಿ ಕಾರನ್ನು ಗಿಫ್ಟ್ ಕೊಡುವ ಮೂಲಕ ತಮ್ಮ ಫ್ರೆಂಡ್‍ಶಿಪ್‍ಗೆ ಕೊಡುವ ಮಹತ್ವವನ್ನು ತೋರಿಸಿದ್ದಾರೆ.

    ರಿಲೀಸ್‍ಗೆ ರೆಡಿ ಇರುವ ‘ವಿಕ್ರಾಂತ್ ರೋಣ’ ಸಿನಿಮಾದ ನೃತ್ಯ ನಿರ್ದೇಶಕ ಜಾನಿ ಮಾಸ್ಟರ್‌ಗೆ ಸುದೀಪ್ ಮಹಿಂದ್ರಾ ಥಾರ್ ಕಾರನ್ನು ಗಿಫ್ಟ್ ಕೊಡುವ ಮೂಲಕ ಸುದೀಪ್ ಉದಾರ ಗುಣವನ್ನು ತಿಳಿಯಬಹುದು. ಈ ಕುರಿತು ಜಾನಿ ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ: ಸಿನಿಜರ್ನಿಯನ್ನ ಕೊನೆಗೊಳಿಸುತ್ತಾರಾ ನಾಟ್ಯಸುಂದರಿ ಸಾಯಿ ಪಲ್ಲವಿ?

    ಟ್ವಟ್ಟರ್‌ನಲ್ಲಿ ಜಾನಿ, ಕಿಚ್ಚ ಸುದೀಪ್, ನಿಮ್ಮ ಉಡುಗೊರೆಗಾಗಿ ಧನ್ಯವಾದಗಳು. ನೀವು ನನ್ನನ್ನು ನೋಡಿಕೊಳ್ಳುವ ರೀತಿ ನಿಜಕ್ಕೂ ಸಂತೋಷವಾಗುತ್ತೆ. ನಿಮ್ಮನ್ನು ಯಾವಾಗಲೂ ಪ್ರೀತಿಸುತ್ತೇನೆ. ನನ್ನ ಜೀವನದಲ್ಲಿ ನೀವು ಇರುವುದಕ್ಕೆ ಖುಷಿಯಾಗಿದೆ ಎಂದು ಫೋಟೋ ಶೇರ್ ಮಾಡಿಕೊಂಡಿದ್ದಾರೆ.

    ಈ ಪೋಸ್ಟ್ ನೋಡಿದ ಅಭಿಮಾನಿಗಳು ಸುದೀಪ್ ಅವರನ್ನು ಹಾಡಿ ಹೊಗಳಿದ್ದಾರೆ. ಜಾನಿ ಅವರು ತಮಿಳು, ತೆಲುಗು ಸಿನಿಮಾ ಸೇರಿದಂತೆ ಹಲವು ಸಿನಿಮಾಗಳಲ್ಲಿ ನೃತ್ಯ ನಿರ್ದೇಶನ ಮಾಡಿದ್ದು, ಸಿನಿರಂಗದಲ್ಲಿ ತಮ್ಮದೇ ಛಾಪನ್ನು ಮೂಡಿಸಿದ್ದಾರೆ. ಇವರಿಗೆ ಕನ್ನಡ ಸಿನಿಮಾಗಳಲ್ಲಿಯೂ ಒಳ್ಳೆಯ ನಂಟಿದೆ.

    ಪುನೀತ್ ನಟನೆಯ, ರಾಜಕುಮಾರ, ನಟಸಾರ್ವಭೌಮ, ಯುವರತ್ನ ಸಿನಿಮಾಗಳಲ್ಲಿ ಜಾನಿ ತಮ್ಮ ಅದ್ಭುತ ನೃತ್ಯ ಸಂಯೋಜನೆ ಮಾಡುವ ಮೂಲಕ ಚಂದನವನದ ಸ್ಟಾರ್‌ಗಳ ಕಣ್ಣಿಗೆ ಬಿದ್ದಿದ್ದಾರೆ. ಅಲ್ಲದೇ ಟಾಲಿವುಡ್‍ನ ‘ಬುಟ್ಟ ಬೊಮ್ಮಾ’ ಸೂಪರ್ ಹಿಟ್ ಸಾಂಗ್‍ಗೆ ಇವರು ನೃತ್ಯ ಸಂಯೋಜನೆಯನ್ನು ಮಾಡಿದ್ದರು. ಇದನ್ನೂ ಓದಿ: ಸೆಕ್ಸ್ ಮಾಡುವಂತೆ ಕೇಳುವುದೇ ಮೀಟೂ ಆದರೆ, ನಾನು ಅದನ್ನು ಕೇಳುತ್ತೇನೆ : ಖ್ಯಾತ ಖಳನಟನ ಶಾಕಿಂಗ್ ಮಾತು

  • ಶ್ವಾನ ದಳದ ಜಾನಿ ನಿಧನ- ಗೆಳೆಯನ ಅಗಲಿಕೆಗೆ ಮೂರು ಶ್ವಾನಗಳು ಮರುಕ

    ಶ್ವಾನ ದಳದ ಜಾನಿ ನಿಧನ- ಗೆಳೆಯನ ಅಗಲಿಕೆಗೆ ಮೂರು ಶ್ವಾನಗಳು ಮರುಕ

    – ಅಂತ್ಯಕ್ರಿಯೆ ನಡೆದ ಸ್ಥಳದ ಬಳಿ ಸುತ್ತಾಟ
    – ಸಕಲ ಗೌರವಗಳೊಂದಿಗೆ ಜಾನಿ ಅಂತ್ಯಕ್ರಿಯೆ

    ಹಾವೇರಿ: ಜಿಲ್ಲಾ ಶ್ವಾನದಳದ ಏಳು ವರ್ಷದ ಜಾನಿ ಅನಾರೋಗ್ಯದಿಂದ ಮೃತಪಟ್ಟಿತ್ತು. ಜಾನಿಯ ಅಂತ್ಯಕ್ರಿಯೆಯನ್ನ ಪೊಲೀಸ್ ಇಲಾಖೆ ಶಾಸ್ತ್ರೋಕ್ತವಾಗಿ ನೆರವೇರಿಸಿತ್ತು.

    ಕಳೆದ ಏಳು ವರ್ಷಗಳಿಂದ ಹಾವೇರಿ ಜಿಲ್ಲಾ ಪೊಲೀಸ್ ಇಲಾಖೆಯಲ್ಲಿ 60 ಅಪರಾಧ ಪ್ರಕರಣಗಳನ್ನು ಪತ್ತೆ ಹಚ್ಚುವ ಮೂಲಕ ಜಾನಿ ಸೇವೆ ಸಲ್ಲಿಸಿದೆ. ಹೀಗಾಗಿ ನಾಯಿ ತೀರಿಕೊಂಡ ಬಳಿಕ ಪೊಲೀಸ್ ಇಲಾಖೆ ಸಿಬ್ಬಂದಿ ಗಾಡ್ ಆಪ್ ಹಾನರ್ ಸಲ್ಲಿಸಿ, ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸಿ ಅಂತ್ಯಕ್ರಿಯೆ ನಡೆಸಿದರು. ಆದರೆ ಜಾನಿ ಸಾವನ್ನಪ್ಪಿದ ಬಳಿಕ ಆತನ ಸ್ನೇಹಿತರಾಗಿದ್ದ ಮೂರು ನಾಯಿಗಳು ಇದೀಗ ಬೇಸರ ವ್ಯಕ್ತಪಡಿಸಿವೆ.

    ಜಾನಿ ಅಂತ್ಯಕ್ರಿಯೆ ನಡೆದ ಸ್ಥಳದ ಬಳಿ ಕುಳಿತು ಗೆಳೆಯನ ಅಗಲಿಕೆಗೆ ಮೂರು ಶ್ವಾನಗಳು ಮರುಕ ವ್ಯಕ್ತಪಡಿಸಿವೆ. ಒಂದು ಶ್ವಾನ ಸಮಾಧಿಯ ಮೇಲೆ ಮಲಗಿದರೆ, ಇನ್ನೂ ಎರಡು ಶ್ವಾನಗಳು ಸಮಾಧಿಯ ಮುಂದೆ ಕುಳಿತು ಬೇಸರ ವ್ಯಕ್ತಪಡಿಸಿವೆ. ಹೆಚ್ಚುವರಿ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಸೇರಿ ಪೊಲೀಸ್ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್ ಪಡೆಯ ಆವರಣದಲ್ಲಿ ಅಂತ್ಯಕ್ರಿಯೆ ನೆರವೇರಿಸಿದ್ದಾರೆ.