Tag: ಜಾನಕಿ ಸಂಸಾರ

  • ತುಂಬು ಪ್ರೀತಿಯ ಸ್ವಾದವನ್ನು ಹೊತ್ತು ತಂದ ಹೊಸ ಕಥೆ ‘ಜಾನಕಿ ಸಂಸಾರ’

    ತುಂಬು ಪ್ರೀತಿಯ ಸ್ವಾದವನ್ನು ಹೊತ್ತು ತಂದ ಹೊಸ ಕಥೆ ‘ಜಾನಕಿ ಸಂಸಾರ’

    ನ್ನಡ ಕಿರುತೆರೆಯ ಕಡಲಲ್ಲಿ ಸ್ಟಾರ್ ಸುವರ್ಣ ವಾಹಿನಿಯು ಹೊಸ ಯೋಜನೆಗಳ ಜೊತೆ ವಿನೂತನ ಪರಿಕಲ್ಪನೆಗಳೊಂದಿಗೆ ಮನರಂಜನೆಯ ಕ್ರಾಂತಿಯನ್ನೇ ಹುಟ್ಟು ಹಾಕಿದೆ. ಈ ಸಾಲಿಗೆ ಸೇರ್ಪಡೆಯಾಗುತ್ತಿರುವ ಹೊಸ ಧಾರಾವಾಹಿ ‘ಜಾನಕಿ ಸಂಸಾರ’.

    ಇದೊಂದು ತುಂಬು ಕುಟುಂಬದ ಕಥೆ. ಈ ಮನೆಯ ಹಿರಿ ಸೊಸೆ ಜಾನಕಿ, ಇಡೀ ಸಂಸಾರದ ಹೊಣೆ ಹೊತ್ತವಳು. ಎಷ್ಟೇ ಕಷ್ಟ ಬಂದರೂ ಎದುರಿಸುವ ಛಲಗಾರ್ತಿ. ವಿದ್ಯಾವಂತೆಯಾಗಿರುವ ಜಾನಕಿ ತನ್ನ ಸಂಸಾರದ ಜೊತೆ ಉದ್ಯೋಗವನ್ನು ಸರಿ ಸಮಾನಾಗಿ ನಿಭಾಯಿಸುತ್ತಿರುತ್ತಾಳೆ. ಸದಾಕಾಲ ಮನೆ ಮಂದಿಯನ್ನು ಒಗ್ಗಟ್ಟಾಗಿಡಲು ಬಯಸುವ ಜಾನಕಿಯ ಸಂಸಾರಕ್ಕೆ ಮನೆಯೊಡೆಯುವ ವ್ಯಕ್ತಿಯ ಆಗಮನವಾದರೆ, ಮುಂದೆ ಜಾನಕಿ ತನ್ನ ಸಂಸಾರವನ್ನು ಹೇಗೆ ಕಾಪಾಡ್ತಾಳೆ? ಎಂಬುದು ಈ ಧಾರಾವಾಹಿಯ ಮುಖ್ಯ ಕಥಾ ಹಂದರ.

    ‘ಜಾನಕಿ ಸಂಸಾರ’ (Janaki Samsara) ಧಾರಾವಾಹಿಯು ಸುಂದರ ತಾರಾಗಣವನ್ನು ಹೊಂದಿದ್ದು, ಕನ್ನಡಿಗರ ಮನಸು ಕದ್ದ ಕಣ್ಮಣಿ, ‘ಕೃಷ್ಣರುಕ್ಮಿಣಿ’ ಧಾರಾವಾಹಿ ಖ್ಯಾತಿಯ ರುಕ್ಮಿಣಿ ಅಲಿಯಾಸ್ ಅಂಜನಾ ಶ್ರೀನಿವಾಸ್ ರವರು (Anjana Srinivas) 13 ವರ್ಷಗಳ ಬಳಿಕ ಮತ್ತೊಮ್ಮೆ ನಿಮ್ಮನ್ನೆಲ್ಲ ರಂಜಿಸಲು ‘ಜಾನಕಿ’ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

    ಸೂರಜ್ ಹೊಳಲು, ಕಾವ್ಯ ಶಾಸ್ತ್ರಿ(Kavya Shastry), ಬಾಲ ನಟಿ ಶ್ರೀ ದಿಶಾ, ಮರೀನ ತಾರಾ, ರವಿ ಭಟ್, ಚಂದನ್ ಸೇರಿದಂತೆ ಇನ್ನು ಅನೇಕ ಅನುಭವಿ ಕಲಾವಿದರು ಅಭಿನಯಿಸುತ್ತಿದ್ದಾರೆ.

    ಶುರುವಾಗುತ್ತಿದೆ ನೋವು-ನಲಿವನು ತೂಗೋ ಹೊಸ ಧಾರಾವಾಹಿ ‘ಜಾನಕಿ ಸಂಸಾರ’ ಇದೇ ಸೋಮವಾರದಿಂದ ರಾತ್ರಿ 8 ಗಂಟೆಗೆ ತಪ್ಪದೇ ವೀಕ್ಷಿಸಿ.

  • ವಿಲನ್ ಆಗಿ ಮತ್ತೆ ಕಿರುತೆರೆಗೆ ಕಾವ್ಯಾ ಶಾಸ್ತ್ರಿ ಎಂಟ್ರಿ

    ವಿಲನ್ ಆಗಿ ಮತ್ತೆ ಕಿರುತೆರೆಗೆ ಕಾವ್ಯಾ ಶಾಸ್ತ್ರಿ ಎಂಟ್ರಿ

    ‘ಬಿಗ್ ಬಾಸ್’ ಖ್ಯಾತಿಯ ಕಾವ್ಯಾ ಶಾಸ್ತ್ರಿ (Kavya Shastry) ಮತ್ತೆ ಕಿರುತೆರೆಗೆ ರೀ ಎಂಟ್ರಿ ಕೊಟ್ಟಿದ್ದಾರೆ. ರಾಧಿಕಾ ಸೀರಿಯಲ್‌ಗೆ ಗುಡ್ ಬೈ ಹೇಳಿದ ಬಳಿಕ ಈಗ ಮತ್ತೆ ‘ಜಾನಕಿ ಸಂಸಾರ’ (Janaki Samsara) ಎಂಬ ಸೀರಿಯಲ್ ಮೂಲಕ ಬರಲಿದ್ದಾರೆ. ಹೀರೋಯಿನ್ ಆಗಿ ಮಿಂಚಿದ್ದ ನಟಿ ಈಗ ವಿಲನ್ ಆಗಿ ಅಬ್ಬರಿಸಲಿದ್ದಾರೆ.

    ‘ಕೃಷ್ಣ ರುಕ್ಮಿಣಿ’ ಖ್ಯಾತಿಯ ನಟಿ ಅಂಜನಾ ಶ್ರೀನಿವಾಸ್ ನಟನೆಯ ‘ಜಾನಕಿ ಸಂಸಾರ’ಕ್ಕೆ ಕಾವ್ಯಾ ಕಾಲಿಟ್ಟಿದ್ದಾರೆ. ಸಾಕಷ್ಟು ಸೀರಿಯಲ್‌ನಲ್ಲಿ ನಾಯಕಿಯಾಗಿ ನಟಿಸಿದ್ದ ಕಾವ್ಯಾ ಈಗ ವಿಲನ್ ಆಗಿ ಹೊಸ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ಇದನ್ನೂ ಓದಿ:ಬಂಪರ್ ಆಫರ್ ಬಾಚಿಕೊಂಡ ‘ಬಿಗ್ ಬಾಸ್’ ಖ್ಯಾತಿಯ ವಿನಯ್ ಗೌಡ

    ಕಾವ್ಯಾ ಶಾಸ್ತ್ರಿ ಅದ್ಭುತ ನಟಿ ಎಂಬುದರಲ್ಲಿ ಮಾತಿಲ್ಲ. ಹಲವು ವರ್ಷಗಳಿಂದ ಚಿತ್ರರಂಗಲ್ಲಿ ನಿರೂಪಕಿ, ನಟಿಯಾಗಿ ಪಳಗಿದ್ದಾರೆ. ವಿಲನ್ ಆಗಿ ಬರುತ್ತಿರುವ ಕಾವ್ಯಾರನ್ನು ನೋಡಲು ಅಭಿಮಾನಿಗಳು ಎದುರು ನೋಡ್ತಿದ್ದಾರೆ. ಅಂದಹಾಗೆ, ಮೇ 6ರಂದು 8 ಗಂಟೆಗೆ ಜಾನಕಿ ಸಂಸಾರ ಪ್ರಸಾರವಾಗಲಿದೆ.

    ಈ ಹಿಂದೆ ಶುಭವಿವಾಹ, ಬಿಗ್ ಬಾಸ್ ಸೀಸನ್- 4 (Bigg Boss Kannada 4) ಸೇರಿದಂತೆ ಹಲವು ಸೀರಿಯಲ್, ಸಿನಿಮಾಗಳ ಮೂಲಕ ಗಮನ ಸೆಳೆದ ನಟಿ ಕಾವ್ಯಾ ಶಾಸ್ತ್ರಿ ಕಳೆದ ವರ್ಷ ರಾಧಿಕಾ ಸೀರಿಯಲ್‌ಗೆ ಕಾರಣಾಂತರಗಳಿಂದ ಅರ್ಧಕ್ಕೆ ಕೈಬಿಟ್ಟಿದ್ದಾರೆ.