Tag: ಜಾತಿ ಸಮೀಕ್ಷೆ

  • ಟಾರ್ಗೆಟ್‌ 20 ಲಕ್ಷ, ನಡೆದಿದ್ದು 10 ಸಾವಿರ ಮಂದಿ ಗಣತಿ – ಮೊದಲ ದಿನವೇ ನೀರಸ ಆರಂಭ

    ಟಾರ್ಗೆಟ್‌ 20 ಲಕ್ಷ, ನಡೆದಿದ್ದು 10 ಸಾವಿರ ಮಂದಿ ಗಣತಿ – ಮೊದಲ ದಿನವೇ ನೀರಸ ಆರಂಭ

    ಬೆಂಗಳೂರು: ರಾಜಧಾನಿ ಬೆಂಗಳೂರು (Bengaluru) ಹೊರತುಪಡಿಸಿ ರಾಜ್ಯಾದ್ಯಂತ ಆರಂಭಿಸಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನೀರಸ ಆರಂಭ ಕಂಡಿದ್ದು ಮೊದಲ ದಿನ ಕೇವಲ 10 ಸಾವಿರ ಮಂದಿಯ ಸಮೀಕ್ಷೆ (Caste Survey) ನಡೆಸಲಾಗಿದೆ.

    ಪ್ರತಿ ದಿನ 20 ಲಕ್ಷ ಜನರ ಸಮೀಕ್ಷೆ ಮಾಡಬೇಕೆಂದು ಗುರಿಯನ್ನು ಹಾಕಲಾಗಿದೆ. ಆದರೆ ಮೊದಲ ದಿನವಾದ ಸೋಮವಾರ 2,765 ಕುಟುಂಬಗಳ 10,642 ಮಂದಿಯ ಸಮೀಕ್ಷೆಯನ್ನ ಮಾತ್ರ ಮಾಡಲಾಗಿದೆ. ಇದನ್ನೂ ಓದಿ:  ಕೇಂದ್ರದ ಅಧಿಕಾರವನ್ನು ರಾಜ್ಯ ಬಳಸುತ್ತಿದೆ, ಜಾತಿ ಸಮೀಕ್ಷೆಗೆ ತಡೆ ನೀಡಿ | ಲಿಂಗಾಯತ, ಒಕ್ಕಲಿಗ, ಕೇಂದ್ರ, ರಾಜ್ಯದ ವಾದ ಏನು?

    ಗಣತಿದಾರರಿಗೆ ಆ್ಯಪ್ ಬಗ್ಗೆ ಅಪೂರ್ಣ ಮಾಹಿತಿ, ಇಂಟರ್‌ನೆಟ್‌ ಇಲ್ಲದ ಕಡೆ ಸಮೀಕ್ಷೆಗೆ ಬಳಸುವ ಆ್ಯಪ್ ಕೆಲಸ ಮಾಡದೇ ಇರುವುದು, ಕೆಲವು ಕಡೆ ಕಿಟ್‌ಗಳು ಸಂಜೆ ವೇಳೆ ಸಿಬ್ಬಂದಿಯ ಕೈ ಸೇರಿದ್ದು, ಇನ್ನು ಕೆಲವರಿಗೆ ಕಿಟ್‌ ಸಿಕ್ಕಿದರೂ ಮೊಬೈಲ್ ನೆಟ್ವರ್ಕ್ ಕೈಕೊಟ್ಟಿದ್ದರಿಂದ ಮೊದಲ ದಿನ ಕಡಿಮೆ ಸಂಖ್ಯೆಯ ಜನರನ್ನು ಮಾತ್ರ ಗಣತಿ ಮಾಡಲಾಗಿದೆ.

    ಇಂಟರ್ನೆಟ್ ಇಲ್ಲದೆಡೆ ಆ್ಯಪ್ ಕೆಲಸ ನಿರ್ವಹಿಸದ ಕಾರಣ ಗ್ರಾಮೀಣ ಪ್ರದೇಶಗಳಲ್ಲಿ ಶಾಲೆ ಮತ್ತು ಅಂಗನವಾಡಿಗಳಲ್ಲಿ ವಿಶೇಷ ಶಿಬಿರ ಆಯೋಜಿಸಿ ಗಣತಿ ನಡೆಸಲು ಆಯೋಗ ಸಿದ್ಧತೆ ನಡೆಸಿದೆ.

  • ಅಧಿಕಾರ ಉಳಿಸಿಕೊಳ್ಳಲು ಎಲ್ಲರನ್ನೂ ಸೋನಿಯಾ ಧರ್ಮಕ್ಕೆ ಸೇರಿಸಲು ಸಿದ್ದರಾಮಯ್ಯ ಹೊರಟಿದ್ದಾರೆ: ಅಶೋಕ್‌ ಕಿಡಿ

    ಅಧಿಕಾರ ಉಳಿಸಿಕೊಳ್ಳಲು ಎಲ್ಲರನ್ನೂ ಸೋನಿಯಾ ಧರ್ಮಕ್ಕೆ ಸೇರಿಸಲು ಸಿದ್ದರಾಮಯ್ಯ ಹೊರಟಿದ್ದಾರೆ: ಅಶೋಕ್‌ ಕಿಡಿ

    – ಹಿಂದೂಗಳನ್ನು ಒಡೆಯವುದು ಕಾಂಗ್ರೆಸ್‌ ಅಜೆಂಡಾ
    – ಕಾಂಗ್ರೆಸ್ ಸಚಿವರು, ಶಾಸಕರನ್ನು ಸಮುದಾಯಗಳು ಕ್ಷಮಿಸಲ್ಲ

    ಬೆಂಗಳೂರು: ಸಾಮಾಜಿಕ ಆರ್ಥಿಕ ಸಮೀಕ್ಷೆ ಅಂದ ಮೇಲೆ ಜಾತಿ ಉಪ ಜಾತಿ ಇನ್ನೊಂದು ಜಾತಿ (Caste) ಎಂದು ಯಾಕೆ ಕೇಳಲಾಗುತ್ತಿದೆ? ಸೋನಿಯಾ ಗಾಂಧಿ (Sonia Gandhi) ಮಾರ್ಗದರ್ಶನ ಮೇರೆಗೆ ಈ ಜಾತಿ ಗಣತಿ ನಡೆಸಲಾಗುತ್ತಿದೆ. ತಮ್ಮ ಅಧಿಕಾರ ಉಳಿಸಿಕೊಳ್ಳಲು ಎಲ್ಲರನ್ನೂ ಸೋನಿಯಾ ಗಾಂಧಿ ಧರ್ಮಕ್ಕೆ ಸೇರಿಸಲು ಸಿದ್ದರಾಮಯ್ಯ (Siddaramaiah) ಹೊರಟಿದ್ದಾರೆ ಎಂದು ವಿಪಕ್ಷ ನಾಯಕ ಆರ್‌ ಅಶೋಕ್‌ (R Ashok) ಕಿಡಿಕಾರಿದ್ದಾರೆ.

    ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷನಿಗೆ ಸ್ಪಷ್ಟತೆಯೇ ಇಲ್ಲ. ಜಾತಿ ತೆಗೆದಿದ್ದೇವೆ ಅಂತಾರೆ, ಕೆಲವು ಉಳಿಸಿಕೊಂಡಿದ್ದೇವೆ ಎನ್ನುತ್ತಾರೆ. ತೆಗೆದಿರುವ ಜಾತಿಗಳ ಹೆಸರು ಹೇಳಿದರೂ ಬರೆದುಕೊಳ್ಳುತ್ತೇವೆ ಎಂದಿದ್ದಾರೆ. ಈ ಗೊಂದಲ ಯಾಕೆ ಮೂಡಿಸಬೇಕು. ವಿವಿಧ ಜಾತಿ ಸಮುದಾಯಗಳಿಗೆ ಸಮೀಕ್ಷೆಯಿಂದ ಅಪಮಾನ ಅಗುತ್ತಿದೆ ಎಂದು ದೂರಿದರು.

    ಸಚಿವರಿಗೆ ಗೌರವ ಇದ್ದರೆ ಸಂಪುಟ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಹೊರಬರಬೇಕು. ಸಮುದಾಯಗಳು ಕಾಂಗ್ರೆಸ್ ಸಚಿವರು, ಶಾಸಕರನ್ನು ಕ್ಷಮಿಸುವುದಿಲ್ಲ. ಈ ಸಮೀಕ್ಷೆಯ ಹಿಂದೆ ಕ್ರೈಸ್ತ ಮಿಷನರಿಗಳ (Christian Missionaries) ಕೈವಾಡವಿದೆ ಎಂದು ದೂರಿದರು.

     

    ಸರ್ಕಾರ ಸಮೀಕ್ಷೆ ಹೆಸರಲ್ಲಿ ಹಿಂದೂ ಧರ್ಮ ಒಡೆಯುವ, ಅವಹೇಳನ ಮಾಡುವ ಕೆಲಸ ಮಾಡುತ್ತಿದೆ. ಕಾಂಗ್ರೆಸ್ ಅಜೆಂಡಾದಲ್ಲೇ ಹಿಂದೂ ವಿರೋಧಿ ನೀತಿಯಿದೆ. ಹೊಸದಾಗಿ 52 ಜಾತಿಗಳನ್ನು ಸೇರಿಸಿ ಗೊಂದಲ ಮಾಡಿದ್ದರು. ಎಲ್ಲದರ ಮುಂದೆ ಕ್ರಿಶ್ಚಿಯನ್ ಹೆಸರು ತಂದಿದ್ದಾರೆ. ಹೊಸ ಜಾತಿಯನ್ನು ಸೃಷ್ಟಿಸಿದ್ದು ಹೇಗೆ? ಸಿದ್ದರಾಮಯ್ಯನವರಿಗೆ ಅಧಿಕಾರ ಹೋಗುವ ಆತಂಕ ಇರುವ ಕಾರಣ ಸೋನಿಯಾ ಗಾಂಧಿಯವರನ್ನು ಓಲೈಸಲು ಕ್ರಿಶ್ಚಿಯನ್ ಹೆಸರು ತಳುಕು ಹಾಕಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.

    ಇನ್ನೆರಡು ವರ್ಷ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿ ಇರಲಿದೆ. ನಂತರ ಅವರ ಈ ಸಮೀಕ್ಷೆಯನ್ನು ಕೇಳುವವರು ಯಾರೂ ಇರುವುದಿಲ್ಲ. ಈಗ ಸಿದ್ದರಾಮಯ್ಯ ಏನು ಮಾಡಲು ಹೊರಟಿದ್ದಾರೋ ಇದು ಅಧಿಕೃತ ಅಲ್ಲ. ಈ ಸಮೀಕ್ಷೆ ನ್ಯಾಯಾಲಯದಲ್ಲಿ ನಿಲ್ಲುವುದಿಲ್ಲ. ಇದು ಇದು ಅಸಾಂವಿಧಾನಿಕ ಸಮೀಕ್ಷೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ:  ಹಿಂದೂ ಕ್ರೈಸ್ತಗೆ ಕೊಕ್ – ಮತಾಂತರ ಆದವರಿಗೆ ಮೂಲ ಜಾತಿ ಅನ್ವಯ ಆಗಲ್ಲ

    ಇದು ರಾಜಕಾರಣದ ಓಲೈಕೆಗಾಗಿ ಮಾಡುತ್ತಿರುವ ಸಮೀಕ್ಷೆಯಾಗಿದ್ದು ಈ ಸಮೀಕ್ಷೆಯಿಂದ ಯಾವುದೇ ಜಾತಿಗೂ ನ್ಯಾಯ ಸಿಗುವುದಿಲ್ಲ. ಲಿಂಗಾಯತ ಧರ್ಮ ಒಡೆಯುವ ಸಂಚು ಮಾಡಿದ್ದ ತಂಡವೇ ಈಗ ಹಿಂದೂ ಧರ್ಮ ಒಡೆಯಲು ಹೊರಟಿದೆ. ಇದು ಧರ್ಮ ಒಡೆಯುವ ಸಮೀಕ್ಷೆ ಎಂದರು.

    ಕ್ರಿಶ್ಚಿಯನ್ನರ ಸಂಖ್ಯೆ ಹೆಚ್ಚಿಸಿ ಹಿಂದೂಗಳ ಸಂಖ್ಯೆ ಕಡಿಮೆ ಮಾಡಲು ಸರ್ಕಾರ ಹೊರಟಿದೆ. ಸಿದ್ದರಾಮಯ್ಯ, ಕಾಂಗ್ರೆಸ್ ಹೈಕಮಾಂಡ್ ಧರ್ಮ ಒಡೆಯಲು ರಾಜ್ಯವನ್ನು ಪ್ರಯೋಗ ಶಾಲೆಯಾಗಿ ಮಾಡಿಕೊಂಡಿದ್ದಾರೆ. ಇದಕ್ಕೆ ಸಿದ್ದರಾಮಯ್ಯ ಹೆಡ್ ಮಾಸ್ಟರ್. ಒಂದೊಂದೇ ರಾಜ್ಯದಲ್ಲಿ ಹಿಂದೂ ಧರ್ಮವನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

    ಈಗಾಗಲೇ ಗಣೇಶ ಹಬ್ಬದಲ್ಲಿ ನಿರ್ಬಂಧ ಹಾಕಿದ್ದರು. ಮುಂದಿನ ಸಲ ಗಣೇಶ ಹಬ್ಬವೇ ಇಲ್ಲ ಎನ್ನುತ್ತಾರೆ. ಹಿಂದೂಗಳ ಸಂಖ್ಯೆ ಕಡಿಮೆ ಮಾಡೋದು, ದೇವಸ್ಥಾನಗಳ ಮಲಿನ ಮಾಡೋದು, ಮತಾತಂತರ ಹೆಚ್ಚಿಸುವುದು ಈ ಮೂರು ಕಾಂಗ್ರೆಸ್‌ ಅಜೆಂಡಾ. ಹೆಡ್ ಲೈನ್ನಲ್ಲಿ ರಾಮಾಯಣ, ಒಳಗೆಲ್ಲ ಇಸ್ಲಾಂ ಬಗ್ಗೆ ಮಾಹಿತಿ ಈ ರೀತಿಯ ಸಮೀಕ್ಷೆ ಇದು ಎಂದರು.

    ಕಾಂತರಾಜ್ ಆಯೋಗಕ್ಕೆ 180 ಕೋಟಿ ರೂ. ನೀಡಿ ನುಂಗಿದ್ದೀರಿ. ಆ ಹಣ ಎಲ್ಲಿ ಹೋಯ್ತು? ಈಗ 425 ಕೋಟಿ ರೂ. ಖರ್ಚು ಮಾಡಲು ಹೊರಟಿದ್ದಾರೆ. ಯಾವ ಪುರುಷಾರ್ಥಕ್ಕೆ ಈ ಸಮೀಕ್ಷೆ ಎಂದು ಪ್ರಶ್ನಿಸಿದರು.

  • ಜಾತಿ ಜನಗಣತಿ ವಿರೋಧಿಸಿ ಅರ್ಜಿ –  ಕೇಂದ್ರ , ರಾಜ್ಯ, ಸೆನ್ಸಸ್ ಮಂಡಳಿ, ಹಿಂದುಳಿದ ಆಯೋಗಕ್ಕೆ ನೋಟಿಸ್ ಜಾರಿ

    ಜಾತಿ ಜನಗಣತಿ ವಿರೋಧಿಸಿ ಅರ್ಜಿ – ಕೇಂದ್ರ , ರಾಜ್ಯ, ಸೆನ್ಸಸ್ ಮಂಡಳಿ, ಹಿಂದುಳಿದ ಆಯೋಗಕ್ಕೆ ನೋಟಿಸ್ ಜಾರಿ

    ಬೆಂಗಳೂರು: ಜಾತಿ ಗಣತಿ ವಿರೋಧಿಸಿ ಸಲ್ಲಿಕೆಯಾಗಿದ್ದ ರಿಟ್ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ (High Court) ಕೇಂದ್ರದ ಸೆನ್ಸಸ್ ಕಮಿಷನರ್, ಹಿಂದುಳಿದ ವರ್ಗಗಳ ಆಯೋಗ, ರಾಜ್ಯ ಹಾಗೂ ಕೆಂದ್ರ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.

    ರಾಜ್ಯ ಸರ್ಕಾರದ ಜಾತಿ ಗಣತಿ (Caste Census) ವಿರೋಧಿಸಿ ರಾಜ್ಯ ಒಕ್ಕಲಿಗರ ಸಂಘ, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ, ವೀರಶೈವ ಲಿಂಗಾಯತ ಮಹಾಸಭಾದ ಸದಸ್ಯರು ಹಾಗೂ ಹಲವು ಖಾಸಗಿ ವ್ಯಕ್ತಿಗಳಿಂದಲೂ ಪ್ರತ್ಯೇಕವಾಗಿ ರಿಟ್ ಅರ್ಜಿ ಸಲ್ಲಿಕೆ ಮಾಡಲಾಗಿತ್ತು. ಇದನ್ನೂ ಓದಿ:  ಕ್ಯಾಬಿನೆಟ್‌ನಲ್ಲಿ ಗೆರಿಲ್ಲಾ ಮಾದರಿ ಪೊಲಿಟಿಕಲ್ ಆಟ್ಯಾಕ್ – ಸಿಎಂ ಸೇರಿ ಹಲವರಿಗೆ ಶಾಕ್ ಕೊಟ್ಟ ಸಚಿವರ ಗುಂಪು

     

    ಹಿಂದುಳಿದ ವರ್ಗಗಳ ಆಯೋಗದ ಪರ ಹಿರಿಯ ವಕೀಲ ಪ್ರೊ.ರವಿವರ್ಮಕುಮಾರ್ ಕಾಲಾವಕಾಶ ಕೋರಿದರು. ಬುಧವಾರದವರೆಗೆ ವಿಚಾರಣೆ ಮುಂದೂಡಲು ಸರ್ಕಾರದ ಪರ ಎಎಜಿ ಪ್ರತಿಮಾ ಹೊನ್ನಾಪುರ ಮನವಿ ಮಾಡಿದರು.ಅರ್ಜಿದಾರರ ಪರ ಹಿರಿಯ ವಕೀಲ ಪ್ರಭುಲಿಂಗ ನಾವದಗಿ, ವಿವೇಕ್ ರೆಡ್ಡಿ ವಾದ ಮಾಡಿದರು. ಇದನ್ನೂ ಓದಿ:  ಲಿಂಗಾಯತರನ್ನು ತುಂಡು ತುಂಡು ಮಾಡಲು ಹೇಳಿದ್ಯಾರು- ಪೇಪರ್‌ ಎಸೆದು ಕ್ಯಾಬಿನೆಟ್‌ ಸಭೆಯಲ್ಲಿ ಎಂಬಿಪಿ ರೋಷಾವೇಶ

    ಮೀಟರ್ ರೀಡರ್‌ಗಳಿಂದಲೂ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಸಂಗ್ರಹಿಸುವ ಅಂಕಿ ಅಂಶಕ್ಕೆ ರಕ್ಷಣೆ ಇಲ್ಲವೆಂದು ವಾದ ಮಂಡಿಸಿದರು. ಈಗಾಗಲೇ 2 ಕೋಟಿ ಮನೆಗಳಿಂದ ಪ್ರಕ್ರಿಯೆ ಆರಂಭಿಸಲಾಗಿದೆ. ಮೇಲ್ವರ್ಗದ ರಿಟ್ ಅರ್ಜಿಗಳೇ ಹೆಚ್ಚಾಗಿವೆ. ಹೀಗಾಗಿ ತುರ್ತು ವಿಚಾರಣೆಗೆ ಅರ್ಜಿದಾರರ ಪರ ವಕೀಲರು ಮನವಿ ಮಾಡಿದರು.

    ಎಲ್ಲಾ ಅರ್ಜಿ ಸಂಬಂಧ ಸರ್ಕಾರ, ಕೇಂದ್ರ ಸರ್ಕಾರ, ಸಮೀಕ್ಷಾ ಆಯೋಗಕ್ಕೆ ನೊಟೀಸ್ ನೀಡಿದ ಹೈಕೋರ್ಟ್, ಅಡ್ವೋಕೇಟ್ ಜನರಲ್ ಇಲ್ಲದ ಕಾರಣ ವಿಚಾರಣೆ ಮುಂದೂಡಿದೆ. ಎಲ್ಲಾ ರಿಟ್ ಅರ್ಜಿಗಳ ವಿಚಾರಣೆ ಸೆ.22ಕ್ಕೆ ನಿಗದಿ ಪಡಿಸಿದೆ.

  • ಕ್ಯಾಬಿನೆಟ್‌ ಸಭೆಯಲ್ಲಿ ಜಾತಿ ಜಟಾಪಟಿ – ಏರು ಧ್ವನಿಯಲ್ಲೇ ಸಚಿವರಿಂದ ಆಕ್ಷೇಪ

    ಕ್ಯಾಬಿನೆಟ್‌ ಸಭೆಯಲ್ಲಿ ಜಾತಿ ಜಟಾಪಟಿ – ಏರು ಧ್ವನಿಯಲ್ಲೇ ಸಚಿವರಿಂದ ಆಕ್ಷೇಪ

    ಬೆಂಗಳೂರು: ಸಿದ್ದರಾಮಯ್ಯ (Siddaramaiah) ಸರ್ಕಾರದ ಮಹತ್ವಾಕಾಂಕ್ಷಿ ಜಾತಿಗಣತಿ (Caste Census) ಬಗ್ಗೆ ಸಚಿವ ಸಂಪುಟ ಸಭೆಯಲ್ಲೇ (Cabinet Meeting) ಜಟಾಪಟಿ ನಡೆದಿದೆ. ಇಂದು ನಡೆದ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಮುಂದೆಯೇ ಏರು ಧ್ವನಿಯಲ್ಲಿ ಕೆಲ ಸಚಿವರಿಂದ ಆಕ್ಷೇಪ ವ್ಯಕ್ತಪಡಿಸಿದ ವಿಚಾರ ಪಬ್ಲಿಕ್‌ ಟಿವಿಗೆ ಮೂಲಗಳಿಂದ ತಿಳಿದು ಬಂದಿದೆ.

    331 ಹೊಸದಾಗಿ ಜಾತಿಗಳ ಸೇರ್ಪಡೆಗೆ ಆಕ್ಷೇಪ ವ್ಯಕ್ತಪಡಿಸಿದ ಕೆಲ ಸಚಿವರು, ಜಾತಿಗಣತಿಯಿಂದ ಸರ್ಕಾರಕ್ಕೆ ಯಾವುದೇ ಹಾನಿಯಾಗಬಾರದು. ಹೊಸ ಜಾತಿಗಳ ಸೇರ್ಪಡೆಯಿಂದ ಗೊಂದಲ ಸೃಷ್ಟಿಯಾಗಿದೆ. ಈ ಗೊಂದಲವನ್ನು ಸರಿಪಡಿಸದ ಹೊರತು ಜಾತಿಗಣತಿ ಬೇಡ ಎಂದಿದ್ದಾರೆ.

    ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಅಂತಾ ಜನರಿಗೆ ಮನವರಿಕೆ ಮಾಡಿ ಕೊಡಲು ಸಾಧ್ಯವಿದ್ಯಾ ಎಂದು ಪ್ರಶ್ನಿಸಿದ್ದಾರೆ. ಜಾತಿಗಣತಿ ಮುಂದೂಡುವಂತೆ ಡಿಕೆಶಿ ಸೇರಿದಂತೆ 20ಕ್ಕೂ ಹೆಚ್ಚು ಸಚಿವರು ಹೇಳಿದ್ದಾರೆ. 5ಕ್ಕೂ ಹೆಚ್ಚು ಸಚಿವರು ಗಣತಿ ಪರ ಇದ್ದರೆ ಉಳಿದ ಸಚಿವರು ತಟಸ್ಥರಾಗಿದ್ದರು. ಇದನ್ನೂ ಓದಿ: ಸುಪ್ರೀಂ ಅಂಗಳಕ್ಕೆ ದಸರಾ ಉದ್ಘಾಟನೆ ನಾಳೆ ತುರ್ತು ವಿಚಾರಣೆ

     

    ಎಲ್ಲವನ್ನೂ ಕೇಳಿಸಿಕೊಂಡ ಸಿಎಂ, ಜಾತಿಗಣತಿ ಮಾಡಲಿ, ಮಾಡದೇ ಇರಲಿ ಪರ ವಿರೋಧ ಅಭಿಪ್ರಾಯ ಬರುತ್ತದೆ. ಜಾತಿ ಗಣತಿ ನಡೆದ್ರೆ ಮೇಲ್ವರ್ಗದ ವಿರೋಧಿ ಎನ್ನುತ್ತಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಸಭೆಯ ಕೊನೆಯಲ್ಲಿ ಜಾತಿಗಣತಿಯ ಬಗ್ಗೆ ಸಭೆಯಲ್ಲಿ ಮಾತನಾಡಿದ ಸಚಿವರುಗಳಿಗೆ ನೀವೇ ಒಂದು ವಿಶೇಷ ಸಭೆ ನಡೆಸಿ ಎಂದು ಸೂಚಿಸಿದರು.

    ಸಚಿವರಾದ ಹೆಚ್.ಕೆ.ಪಾಟೀಲ್, ಎಂ.ಬಿ.ಪಾಟೀಲ್, ಹೆಚ್. ಸಿ.ಮಹದೇವಪ್ಪ, ಕೆ.ಎಚ್.ಮುನಿಯಪ್ಪ, ಬೈರತಿ ಸುರೇಶ್, ಸಂತೋಷ್ ಲಾಡ್ ನೇತೃತ್ವದಲ್ಲಿ ಇಂದು ಸಂಜೆ ವಿಶೇಷ ಸಭೆ ನಡೆಯಲಿದೆ. ಈ ಸಚಿವರ ವಿಶೇಷ ಸಭೆ ವರದಿ ಬಳಿಕ ಸಿಎಂ ಸಿದ್ದರಾಮಯ್ಯ ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ.

    ಜಾತಿಗಣತಿ ನಡೆಯಬೇಕು ಎಂಬ ಸಿಎಂ ಮಾತಿಗೆ ಸಂತೋಷ್ ಲಾಡ್, ಮುನಿಯಪ್ಪ ಧ್ವನಿಗೂಡಿಸಿದ್ದಾರೆ.

  • ಕರ್ನಾಟಕದಲ್ಲಿ ಹೊಸ ಜಾತಿಗಣತಿ| ಸೆ. 22ರಿಂದ ಅ. 7 ರವರೆಗೆ ಮೊಬೈಲ್ ಆಪ್ ಮೂಲಕ ಮನೆ ಮನೆ ಸಮೀಕ್ಷೆ

    ಕರ್ನಾಟಕದಲ್ಲಿ ಹೊಸ ಜಾತಿಗಣತಿ| ಸೆ. 22ರಿಂದ ಅ. 7 ರವರೆಗೆ ಮೊಬೈಲ್ ಆಪ್ ಮೂಲಕ ಮನೆ ಮನೆ ಸಮೀಕ್ಷೆ

    ಬೆಂಗಳೂರು: ರಾಜ್ಯದಲ್ಲಿ ಹೊಸ ಜಾತಿಗಣತಿಗೆ (Caste Census) ದಿನಾಂಕ‌ ನಿಗದಿ‌ಯಾಗಿದ್ದು, 16 ದಿನಗಳ ಕಾಲ ಸಮೀಕ್ಷೆ ನಡೆಯಲಿದೆ.‌ ಸೆಪ್ಟೆಂಬರ್ 22 ರಿಂದ ಅಕ್ಟೋಬರ್ 7ರ ತನಕ ಜಾತಿಗಣತಿ ಸಮೀಕ್ಷೆ ನಡೆಯಲಿದ್ದು, ಸಂಪೂರ್ಣ ಮೊಬೈಲ್ ಆಪ್ (Mobile App) ಮೂಲಕವೇ ಮನೆ ಮನೆ ಸಮೀಕ್ಷೆ ನಡೆಯಲಿದೆ.

    ಕಾವೇರಿ ನಿವಾಸದಲ್ಲಿ ಇವತ್ತು ಸಿಎಂ ಸಿದ್ದರಾಮಯ್ಯ (CM Siddaramaiah) ನೇತೃತ್ವದಲ್ಲಿ ಮಹತ್ವದ ಸಭೆ ನಡೆಯಿತು. ಸಭೆಯಲ್ಲಿ ಹಿಂದುಳಿದ ವರ್ಗಗಳ ಆಯೋಗ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಸುವ ಕುರಿತಾಗಿ ಸರ್ಕಾರಕ್ಕೆ ಹೊಸ ಪ್ರಸ್ತಾವನೆ ಸಲ್ಲಿಸಿತು.‌ ರಾಜ್ಯದ 7 ಕೋಟಿ ಜನರ ಸಮೀಕ್ಷೆ ನಡೆಸುವ ಬಗ್ಗೆ ಅಂತಿಮ ತೀರ್ಮಾನ ಮಾಡಲಾಗಿದೆ ಎಂದು ಮುಖ್ಯಮಂತ್ರಿಗಳ ಕಚೇರಿ ಮಾಧ್ಯಮ ಪ್ರಕಟಣೆ ಹೊರಡಿಸಿದೆ.

    ಅಕ್ಟೋಬರ್ ಅಂತ್ಯದ ಒಳಗೆ ಸರ್ಕಾರ ಹೊಸ ಜಾತಿಗಣತಿ ವರದಿ ಸಲ್ಲಿಕೆಗೆ ಸಿಎಂ ಸಿದ್ದರಾಮಯ್ಯ ಡೆಡ್ ಲೈನ್ ನೀಡಿದ್ದಾರೆ. ಕಾಂತರಾಜು ಆಯೋಗ ಸಿದ್ಧಪಡಿಸಿ ಕಳೆದ ಜಾತಿಗಣತಿಯಲ್ಲಿ ಕೇಳಿದ್ದ 54 ಪ್ರಶ್ನಾವಳಿ ಜೊತೆಗೆ ಇನ್ನಷ್ಟು ಅಂಶಗಳನ್ನು ಸೇರಿಸಲು ಸಿಎಂ ಸಿದ್ದರಾಮಯ್ಯ ಸೂಚಿಸಿದ್ದಾರೆ.‌ ಈ ಬಾರಿ ಸಮೀಕ್ಷಾ ಕಾರ್ಯಕ್ಕೆ 1.65 ಲಕ್ಷ ಗಣತಿದಾರರ ಅವಶ್ಯಕತೆ ಇದ್ದು, ಶಿಕ್ಷಕರ ಜೊತೆಗೆ ಇತರೆ ಇಲಾಖೆಗಳ ಸಿಬ್ಬಂದಿ ಬಳಕೆಗೂ ಸಭೆಯಲ್ಲಿ ತೀರ್ಮಾನಿಸಲಾಗಿದೆ.  ಇದನ್ನೂ ಓದಿ: ಬೆಂಗಳೂರು ಏರ್‌ಪೋರ್ಟ್‌ನಲ್ಲಿ 2020 ರಿಂದ ಇಲ್ಲಿಯವರೆಗೆ 343 ಬಾರಿ ಪಕ್ಷಿಗಳು ಡಿಕ್ಕಿ

     

    ಹೊಸ ಜಾತಿಗಣತಿ ಹೇಗೆ?
    ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಜೊತೆಗೆ ಆರ್ಥಿಕ ಪರಿಸ್ಥಿತಿ ಸಮೀಕ್ಷೆ ನಡೆಸಲಾಗುತ್ತದೆ. ಅಕ್ಟೋಬರ್ ಅಂತ್ಯದೊಳಗಾಗಿ ಸರ್ಕಾರಕ್ಕೆ ಸಮೀಕ್ಷಾ ವರದಿ ಸಲ್ಲಿಸಬೇಕಾಗುತ್ತದೆ.

    ಕಾಂತರಾಜು ಆಯೋಗ 54 ಪ್ರಶ್ನೆಗಳೊಂದಿಗೆ ಮ್ಯಾನ್ಯುಯಲ್ ಆಗಿ ಈ ಹಿಂದೆ ಸಮೀಕ್ಷೆ ನಡೆಸಿತ್ತು, ಈಗ ಇನ್ನಷ್ಟು ಅಂಶಗಳನ್ನು ಸೇರಿಸಿ ಮೊಬೈಲ್ ಆಪ್ ಬಳಸಿಕೊಂಡೇ ಮನೆ ಮನೆ ಸಮೀಕ್ಷೆ ನಡೆಸಲಾಗುತ್ತದೆ.

    ತೆಲಂಗಾಣದ ಜಾತಿಗಣತಿ ಅಧ್ಯಯನ ನಡೆಸಲು ಮೇಲುಸ್ತುವಾರಿಗೆ ಉನ್ನತಮಟ್ಟದ ಸಮಿತಿ ರಚನೆ ಮಾಡಲಾಗುತ್ತದೆ. ಸಮೀಕ್ಷೆಯಲ್ಲಿ ಕೇಳಬೇಕಾದ ಪ್ರಶ್ನೆಗಳನ್ನು ಅಂತಿಮಗೊಳಿಸಲು ತಜ್ಞರ ಸಮಿತಿಯ ನೆರವು ಪಡೆಯಬೇಕು. ಸಮೀಕ್ಷೆ ಕಾರ್ಯಕ್ಕೆ 1.65ಲಕ್ಷ ಗಣತಿದಾರರು ಸೇರಿದಂತೆ ಮಾನವ ಸಂಪನ್ಮೂಲ ಅವಶ್ಯಕತೆಯಿದೆ. ಸಮೀಕ್ಷೆ ಕಾರ್ಯಕ್ಕೆ ಶಿಕ್ಷಕರ ಸೇವೆಯೊಂದಿಗೆ ಇತರ ಇಲಾಖೆಗಳ ಸಿಬ್ಬಂದಿಗಳನ್ನು ಸಹ ಬಳಸಿಕೊಳ್ಳಲಾಗುತ್ತದೆ.

  • ಕ್ಲೈಮ್ಯಾಕ್ಸ್ ಹಂತಕ್ಕೆ ಬಂದ ಜಾತಿ ಜಿದ್ದಾಜಿದ್ದಿ – ಸಿಎಂ ಮುಂದಿರುವ ಆಯ್ಕೆ ಏನು?

    ಕ್ಲೈಮ್ಯಾಕ್ಸ್ ಹಂತಕ್ಕೆ ಬಂದ ಜಾತಿ ಜಿದ್ದಾಜಿದ್ದಿ – ಸಿಎಂ ಮುಂದಿರುವ ಆಯ್ಕೆ ಏನು?

    ಬೆಂಗಳೂರು: ಜಾತಿ ಗಣತಿ (Caste Survey) ವರದಿ ರಾಜ್ಯ ರಾಜಕೀಯದಲ್ಲಿ ಭಾರೀ ಸದ್ದು ಗದ್ದಲ ಎಬ್ಬಿಸಿದ್ದು, ಜಾತಿಗಣತಿಯ ಜ್ವಾಲೆ ಕ್ಷಣಕ್ಷಣಕ್ಕೂ ಹೆಚ್ಚಾಗ್ತಿದೆ. ಭಾರೀ ಕೋಲಾಹಲ, ಸಾಕಷ್ಟು ಚರ್ಚೆಗೆ ಎಡೆ ಮಾಡಿಕೊಟ್ಟಿರುವ ಜಾತಿ ಜನಗಣತಿ ಇದೀಗ ಕ್ಲೈಮ್ಯಾಕ್ಸ್‌ ಹಂತಕ್ಕೆ ಬಂದು ನಿಂತಿದೆ. ವಿವಾದದ ಸುಳಿಗೆ ಸಿಲುಕಿ ಪ್ರಬಲ ಸಮುದಾಯಗಳ ಆಕ್ರೋಶದ ಕಿಚ್ಚಿಗೆ ಕಾರಣವಾಗಿರುವ ಜಾತಿ ಗಣತಿ ವರದಿಯ ಭವಿಷ್ಯ ಶುಕ್ರವಾರ ನಿರ್ಧಾರವಾಗಲಿದೆ.

    ಜಾತಿ ಗಣತಿ ವರದಿ ಚರ್ಚೆಗಾಗಿಯೇ ಸಿಎಂ ಸಿದ್ದರಾಮಯ್ಯ(CM Siddaramaiah) ನೇತೃತ್ವದಲ್ಲಿ ನಾಳೆ ಸಂಜೆ ವಿಶೇಷ ಸಚಿವ ಸಂಪುಟ ಸಭೆ (Cabinet Meeting) ಕರೆಯಲಾಗಿದೆ. ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ಸಲ್ಲಿಸಿರುವ ಸಾಮಾಜಿಕ, ಆರ್ಥಿಕ ಸಮೀಕ್ಷಾ ವರದಿಯ ಬಗ್ಗೆ ಚರ್ಚೆ ನಡೆಸಿ ರಾಜ್ಯ ಸರ್ಕಾರ ತನ್ನ ನಿಲುವು ಪ್ರಕಟಿಸಲಿದೆ. ಇದನ್ನೂ ಓದಿ: ನಮ್ಮ ಸರ್ಕಾರ ತೆಗೆಯಲು ಪ್ಲ್ಯಾನ್‌ ನಡೆದಿದೆ ಒಗ್ಗಟ್ಟಾಗಿ ಇರಿ: ಖರ್ಗೆ ಶಾಕಿಂಗ್ ಹೇಳಿಕೆ

     

    ಕಳೆದ ಸಚಿವ ಸಂಪುಟ ಸಭೆಯಲ್ಲಿ ಜಾತಿ ಗಣತಿ ವರದಿ ಮಂಡನೆ ಮಾಡಲಾಗಿತ್ತಾದರೂ ಯಾವುದೇ ನಿರ್ಧಾರಕ್ಕೆ ಬಂದಿರಲಿಲ್ಲ. ಸಂಪುಟದ ಸಚಿವರಿಗೆ ವರದಿಯ ಪ್ರತಿಯನ್ನು ಅಧ್ಯಯನಕ್ಕಾಗಿ ನೀಡಿದ್ದರು. ನಾಳೆ ನಡೆಯುವ ವಿಶೇಷ ಸಂಪುಟ ಸಭೆ ಮೇಲೆ ಎಲ್ಲರ ಚಿತ್ತ ನೆಟ್ಟಿದೆ.  ಇದನ್ನೂ ಓದಿ: ಜಾತಿಗಣತಿ ಸುನಾಮಿಯಲ್ಲಿ ಸಿದ್ದರಾಮಯ್ಯ ಕೊಚ್ಚಿ ಹೋಗ್ತಾರೆ: ಕುಮಾರಸ್ವಾಮಿ ಆಕ್ರೋಶ

    ಸದ್ಯ ಬಹಿರಂಗಗೊಳ್ಳುತ್ತಿರುವ ಜಾತಿ ಗಣತಿ ವರದಿಯ ಅಂಕಿ-ಸಂಖ್ಯೆಗಳು ಪ್ರಭಾವಿ ಸಮುದಾಯಗಳ ವಿರೋಧಕ್ಕೆ ಕಾರಣವಾಗುತ್ತಿದೆ. ಅಷ್ಟೇ ಅಲ್ಲದೆ ಸ್ವಪಕ್ಷದಲ್ಲೂ ಜಾತಿ ಗಣತಿ ವರದಿಗೆ ವಿರೋಧ ವ್ಯಕ್ತವಾಗಿದೆ. ವಿರೋಧವನ್ನೂ ಲೆಕ್ಕಿಸದೆ ಸಿಎಂ ಸಿದ್ದರಾಮಯ್ಯ ನಾಳೆ ಏನ್ ನಿರ್ಧಾರ ಕೈಗೊಳ್ಳಲಿದ್ದಾರೆ ಎನ್ನುವುದು ಕುತೂಹಲ ಕೆರಳಿಸಿದೆ.

    ಸಿಎಂ ಮುಂದಿರುವ ಆಯ್ಕೆ ಏನು?
    – ಜಾತಿಗಣತಿ ವರದಿ ಬಿಡುಗಡೆ ಮಾಡುವುದು
    – ಜಾತಿಗಣತಿ ವರದಿ ಬಿಡುಗಡೆ ಮಾಡದಿರುವುದು
    – ಅಧ್ಯಯನಕ್ಕೆ ತಜ್ಞರ ಸಮಿತಿ ರಚಿಸುವುದು
    – ಸಚಿವ ಸಂಪುಟ ಉಪಸಮಿತಿ ರಚನೆ ಮಾಡುವುದು
    – ವಿಶೇಷ ಅಧಿವೇಶನ ಕರೆಯುವುದು

     

  • ಬ್ರಾಹ್ಮಣರ ಸಂಖ್ಯೆ 15 ಲಕ್ಷ ಅಲ್ಲ, ನಮ್ಮ ಸಂಖ್ಯೆ 45 ಲಕ್ಷ: ಅಶೋಕ್ ಹಾರನಹಳ್ಳಿ

    ಬ್ರಾಹ್ಮಣರ ಸಂಖ್ಯೆ 15 ಲಕ್ಷ ಅಲ್ಲ, ನಮ್ಮ ಸಂಖ್ಯೆ 45 ಲಕ್ಷ: ಅಶೋಕ್ ಹಾರನಹಳ್ಳಿ

    – ನಾವು ಪ್ರತ್ಯೇಕವಾಗಿ ಡಿಜಿಟಲ್‌ ಸಮೀಕ್ಷೆ ಮಾಡುತ್ತೇವೆ
    – ರಾಜ್ಯದಲ್ಲಿ ಬ್ರಾಹ್ಮಣರ ಸಂಖ್ಯೆ 15,64,741

    ಬೆಂಗಳೂರು: ಜಾತಿ ಗಣತಿಯ (Caste Census) ಮೇಲೆ ತೆಗೆದುಕೊಳ್ಳುವ ರಾಜಕೀಯ ನಿರ್ಧಾರಗಳು ತಪ್ಪಾಗಬಹುದು ಬ್ರಾಹ್ಮಣ (Brahmins) ಸಮುದಾಯದ ಸಂಖ್ಯೆ 15 ಲಕ್ಷ ಎನ್ನುತ್ತಿದ್ದಾರೆ. ನಮ್ಮ ಪ್ರಕಾರ ಸಮುದಾಯದ ಜನಸಂಖ್ಯೆ 45 ಲಕ್ಷ ಇದೆ ಎಂದು ಬ್ರಾಹ್ಮಣ ಮಹಾಸಭಾ ಮಾಜಿ ಅಧ್ಯಕ್ಷ ಹಾಗೂ ಮಾಜಿ ಅಡ್ವೋಕೇಟ್ ಜನರಲ್ ಅಶೋಕ್ ಹಾರನಹಳ್ಳಿ (Ashok Haranahalli) ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಪಬ್ಲಿಕ್‌ ಟಿವಿ ಜೊತೆ ಮಾತನಾಡಿದ ಅವರು, ಬ್ರಾಹ್ಮಣ ಸಮುದಾಯದ ಅಂಕಿ ಸಂಖ್ಯೆಗಳನ್ನು ನೋಡಿದ ಸಾಕಷ್ಟು ಜನರು ಮನೆಗೆ ಗಣತಿಗೆ ಬಂದಿಲ್ಲ ಎಂದು ಹೇಳುತ್ತಿದ್ದಾರೆ. ನಾನು ರಾಜ್ಯಾದ್ಯಂತ ಓಡಾಡಿ ಮಾಹಿತಿಯನ್ನು ತೆಗೆದುಕೊಂಡಾಗಲೂ ಬಂದಿಲ್ಲ ಅಂದವರ ಸಂಖ್ಯೆ ಜಾಸ್ತಿ ಇದೆ. ಹೀಗಾಗಿ ಈ ವರದಿ ವೈಜ್ಞಾನಿಕವಾಗಿ ತಯಾರಿಸಿಲ್ಲ ಎನ್ನುವವುದು ನನ್ನ ಭಾವನೆ ಎಂದು ಹೇಳಿದರು. ಇದನ್ನೂ ಓದಿ: ಜಾತಿಗಣತಿ ವಿರುದ್ಧ ಸಿಡಿದ ಒಕ್ಕಲಿಗರು- ವರದಿ ಜಾರಿಯಾದ್ರೆ ಸರ್ಕಾರ ಪತನದ ಎಚ್ಚರಿಕೆ

     

    ಈ ಸಮೀಕ್ಷೆಯ ಆಧಾರದ ಮೇಲೆ ನಿರ್ಧಾರ ತೆಗೆದುಕೊಂಡರೆ ಮುಂದೆ ನಾವು ಕಾನೂನು ಹೋರಾಟ ನಡೆಸಬೇಕಾಗುತ್ತದೆ. ಬ್ರಾಹ್ಮಣ ಸಮುದಾಯದಿಂದಲೇ ನಾವು ಪ್ರತ್ಯೇಕವಾಗಿ ಸಮೀಕ್ಷೆ ಮಾಡಿಸುತ್ತೇವೆ. ನಮ್ಮ ಸಮುದಾಯದ ಡಿಜಿಟಲ್ ಸರ್ವೆ ಮಾಡಿಸುತ್ತೇವೆ ಎಂದು ತಿಳಿಸಿದರು.

    ಬ್ರಾಹ್ಮಣರಲ್ಲಿ 55 ಒಳ ಪಂಗಡಗಳನ್ನು ಗುರುತಿಸಿರುವ ಹಿಂದುಳಿದ ವರ್ಗಗಳ ಆಯೋಗ, ರಾಜ್ಯದಲ್ಲಿ ಒಟ್ಟಾರೆ ಬ್ರಾಹ್ಮಣರ ಜನಸಂಖ್ಯೆ 15,64,741 ಎಂದು ವರದಿಯಲ್ಲಿ ಉಲ್ಲೇಖಿಸಿದೆ.

     ಬ್ರಾಹ್ಮಣ ಸಮುದಾಯದ ಜಾತಿಗಣತಿ
    * ಬ್ರಾಹ್ಮಣರ ಜನಸಂಖ್ಯೆ – 15,64,741
    * ಬ್ರಾಹ್ಮಣ – 11,85,605
    * ಗೌಡ ಸಾರಸ್ವತ – 1,14,119
    * ಹವ್ಯಕ – 85,595
    * ಶ್ರೀವೈಷ್ಣವ – 16,286
    * ಮಾಧ್ವ – 13,302,
    * ಅಯ್ಯಂಗಾರ್ – 12,070
    * ಸ್ಥಾನಿಕ 3,820
    * ಸಂಕೇತಿ – 1,276 ಇದನ್ನೂ ಓದಿ: ಜಾತಿಗಣತಿ | ಮನೆ ಮನೆಗೆ ಹೋಗಿ ಮತ್ತೆ ಸಮೀಕ್ಷೆ ಮಾಡ್ಬೇಕು – ಶಾಸಕ ಬಾಲಕೃಷ್ಣ ಆಗ್ರಹ

     

  • Exclusive |  ಕ್ಯಾಬಿನೆಟ್ ಕ್ಲೈಮ್ಯಾಕ್ಸ್, ಜಾತಿ ಗಣತಿ ಮಂಡನೆಗೆ ಪ್ಲ್ಯಾನ್‌ – ಮಾಸ್ಟರ್‌ಸ್ಟ್ರೋಕ್‌ ಕೊಡ್ತಾರಾ ಸಿಎಂ?

    Exclusive |  ಕ್ಯಾಬಿನೆಟ್ ಕ್ಲೈಮ್ಯಾಕ್ಸ್, ಜಾತಿ ಗಣತಿ ಮಂಡನೆಗೆ ಪ್ಲ್ಯಾನ್‌ – ಮಾಸ್ಟರ್‌ಸ್ಟ್ರೋಕ್‌ ಕೊಡ್ತಾರಾ ಸಿಎಂ?

    ಬೆಂಗಳೂರು: ಪರ, ವಿರೋಧದ ಚರ್ಚೆ ನಡುವೆಯೇ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು 2015ರಲ್ಲಿ ನಡೆಸಿದ್ದ ‘ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ’ (ಜಾತಿವಾರು ಜನಗಣತಿ) ವರದಿ ಶುಕ್ರವಾರ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ (Cabinet Meeting) ಮಂಡನೆಯಾಗುವ ಸಾಧ್ಯತೆಯಿದೆ.

    ತಳ ಸಮುದಾಯಗಳು ಸೇರಿದಂತೆ ಹಿಂದುಳಿದ ವರ್ಗಗಳ ಸಮಾಜದವರು ಜಾತಿ ಗಣತಿ ವರದಿ ಸ್ವೀಕಾರ ಮತ್ತು ಜಾರಿ ಮಾಡುವಂತೆ ಆಗ್ರಹಿಸುತ್ತಿದ್ದರೆ ಮೇಲ್ವರ್ಗದ ಲಿಂಗಾಯತ, ಒಕ್ಕಲಿಗ ಸಮುದಾಯಗಳು ಸಮೀಕ್ಷೆ ಅವೈಜ್ಞಾನಿಕವಾಗಿದ್ದು ವರದಿ ಸ್ವೀಕರಿಸದಂತೆ ಒತ್ತಾಯಿಸುತ್ತಿವೆ. ಹಾಗಾಗಿ ಜಾತಿ ಗಣತಿ ವರದಿ ಬಗ್ಗೆ ಸರ್ಕಾರಗಳು ಯಾವುದೇ ನಿರ್ಧಾರ ತೆಗೆದುಕೊಳ್ಳದೇ ಮುಂದೂಡುತ್ತಲೇ ಬಂದಿದ್ದವು.

    ಸಿದ್ದರಾಮಯ್ಯ (Siddaramaiah) ಸರ್ಕಾರ ರಚನೆಯಾದ ನಂತರ ಹಲವು ಬಾರಿ ಕ್ಯಾಬಿನೆಟ್‌ ಸಭೆಯಲ್ಲಿ ಈ ವರದಿ ಮಂಡನೆಯಾಗಲಿದೆ ಎಂಬ ವಿಚಾರ ಮುನ್ನೆಲೆಗೆ ಬಂದಿತ್ತು. ಆದರೆ ಈಗ ಶುಕ್ರವಾರ ನಡೆಯಲಿರುವ ಸಭೆಯಲ್ಲಿ ಈ ವರದಿ ಮಂಡನೆಯಾಗುವ ಸಾಧ್ಯತೆಯಿದೆ. ಒಂದು ವೇಳೆ ಮಂಡನೆಯಾದರೆ ಕರ್ನಾಟಕ ರಾಜಕಾರಣದಲ್ಲಿ (Karnataka Politics) ಅಲ್ಲೋಲ್ಲ ಕಲ್ಲೋಲ ಸೃಷ್ಟಿಯಾಗುವ ಸಾಧ್ಯತೆಯಿದೆ. ಇದನ್ನೂ ಓದಿ: ಕಾನೂನು ಸ್ವರೂಪ ಪಡೆದ ʻವಕ್ಫ್ ಬಿಲ್ʼ – ಕೇಂದ್ರ ಅಧಿಸೂಚನೆ

     

    ಈಗಾಗಲೇ ಹಿಂದುಳಿದ ವರ್ಗಗಳ ಇಲಾಖೆ ಅಡಿ ಕ್ಯಾಬಿನೆಟ್ ಅಜೆಂಡಾದಲ್ಲಿ ಈ ವಿಚಾರ ಪ್ರಸ್ತಾಪವಾಗಿದೆ. ವರದಿಯನ್ನು ಮಂಡಿಸಿ ಚರ್ಚೆ ನಡೆಸಲು ಈಗಾಗಲೇ ಸಿಎಂ ಸಿದ್ದರಾಮಯ್ಯ ಸಿದ್ಧತೆ ಮಾಡಿದ್ದಾರೆ. ಮಂಡನೆಯಾದ ಬಳಿಕ ಜಾತಿಗಣತಿ ವರದಿ ಅಂಗೀಕಾರವೋ? ಅಥವಾ ಸಂಪುಟ ಉಪಸಮಿತಿ ರಚನೆಯೋ ಎಂಬ ಪ್ರಶ್ನೆಗೆ ಶುಕ್ರವಾರ ಉತ್ತರ ಸಿಗಲಿದ್ದು ಸಿದ್ದರಾಮಯ್ಯನವರ ಕ್ಯಾಬಿನೆಟ್ ನಡೆ ಕುತೂಹಲ ಮೂಡಿಸಿದೆ.

    ಕಳೆದ ವರ್ಷದ ಫೆಬ್ರವರಿ 14ರಂದು ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಜಾತಿ ಗಣತಿ ವರದಿಯನ್ನು ಸರ್ಕಾರಕ್ಕೆ ಸಲ್ಲಿಕೆ ಮಾಡಿದ್ದರು. ಒಂದು ವರ್ಷದಿಂದಲೂ ವರದಿಯನ್ನು ಮುಟ್ಟದೇ ರಾಜ್ಯ ಸರ್ಕಾರ ಸುಮ್ಮನಿತ್ತು. ಕಳೆದ ವರ್ಷ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಕ್ಯಾಬಿನೆಟ್‌ಗೆ ವರದಿ ತರಲು ಹಿಂದೇಟು ಹಾಕಿತ್ತು. ಆದರೆ ಈಗ ಕ್ಯಾಬಿನೆಟ್ ಮುಂದೆ ವರದಿ ಇಡಲು ಸರ್ಕಾರ ಸಿದ್ಧತೆ ನಡೆಸಿದೆ. ಇದನ್ನೂ ಓದಿ: ಡೀಸೆಲ್ ಬೆಲೆ ಏರಿಕೆ – ಖಾಸಗಿ ಬಸ್ ಪ್ರಯಾಣ ದರ ದುಬಾರಿ!

    ಜಾತಿ ಗಣತಿ ಉದ್ದೇಶ ಏನು?
    1931ರ ಜನಗಣತಿಯ ನಂತರ ಯಾವುದೇ ಜನಗಣತಿ ದಾಖಲೆಗಳಿಂದ ಜಾತಿ / ಸಮುದಾಯವಾರು ಜನಸಂಖ್ಯೆಯ ಅಂಕಿ-ಅಂಶಗಳು ಖಚಿತವಾಗಿ ದೊರೆಯುತ್ತಿಲ್ಲ. ಜಾತಿವಾರು ಜನಗಣತಿ ಅಂಕಿ-ಅಂಶಗಳು ಲಭ್ಯವಿಲ್ಲದೇ ಇರುವುದರಿಂದ ಕಾರ್ಯಕ್ರಮಗಳ ಮುಖಾಂತರ ಸೌಲಭ್ಯಗಳನ್ನು ಸಾಮಾಜಿಕ ನ್ಯಾಯ ತತ್ವದ ಆಧಾರದ ಮೇಲೆ ಒದಗಿಸುವುದು ಸರ್ಕಾರಕ್ಕೆ ಕಷ್ಟವಾಗುತ್ತಿತ್ತು.

    ಸಮುದಾಯಗಳ ಈಗಿರುವ ಸ್ಥಿತಿಗಳಿಗೆ ಸಂಬಂಧಿಸಿದಂತೆ ವೈಜ್ಞಾನಿಕವಾದ ವಿಶ್ಲೇಷಣೆ ನಡೆಸುವುದು, ಜನಸಂಖ್ಯೆಯ ಪ್ರಮಾಣವನ್ನು ತಿಳಿಯುವುದು ಅಗತ್ಯವಾಗಿದೆ ಎಂಬ ಉದ್ದೇಶಕ್ಕಾಗಿ ಆಗಿನ ಸಿದ್ದರಾಮಯ್ಯ ಸರ್ಕಾರ ಸಮೀಕ್ಷೆಗೆ ಆದೇಶಿಸಿತ್ತು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ಜಾತಿಗಳು ಹಾಗೂ ಇತರ ಜಾತಿಗಳನ್ನೊಳಗೊಂಡಂತೆ ರಾಜ್ಯದ ಪ್ರತಿಯೊಂದು ಕುಟುಂಬದ ಸಮಗ್ರ ಸಮೀಕ್ಷೆಯನ್ನು ಕೈಗೊಂಡು ವಿವಿಧ ಜಾತಿಗಳ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸ್ಥಿತಿಗತಿಗಳ ಬಗ್ಗೆ ವಿಶ್ಲೇಷಣೆ ಮಾಡಿ, ಹಿಂದುಳಿದ ವರ್ಗಗಳ ಪಟ್ಟಿಯನ್ನು ಪರಿಷ್ಕರಿಸುವ ಕುರಿತು ಸರ್ಕಾರಕ್ಕೆ ಶಿಫಾರಸ್ಸು ಮಾಡುವ ಜವಾಬ್ದಾರಿಯನ್ನು ಆಯೋಗಕ್ಕೆ ‌ನೀಡಲಾಗಿತ್ತು. ರಾಜ್ಯದ ಎಲ್ಲ ವರ್ಗಗಳ / ಜಾತಿಗಳ ಸಾಮಾಜಿಕ, ಶೈಕ್ಷಣಿಕ ಮತ್ತು ಔದ್ಯೋಗಿಕ ಸ್ಥಿತಿಗತಿಗಳ ಕುರಿತು ಸಮೀಕ್ಷೆ ಮುಖಾಂತರ ಸಮಗ್ರ ಅಂಕಿ-ಅಂಶಗಳನ್ನು ಸಂಗ್ರಹಣೆಗೆ ಸೂಚಿಸಲಾಗಿತ್ತು.

    ರಾಜ್ಯದ ಎಲ್ಲ ಕುಟುಂಬಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಯನ್ನು ಅರಿಯಲು 158.47 ಕೋಟಿ ರೂ. ವೆಚ್ಚದಲ್ಲಿ ಹೆಚ್‌. ಕಾಂತರಾಜ (Kantharaju) ನೇತೃತ್ವದ ಹಿಂದುಳಿದ ವರ್ಗಗಳ ಆಯೋಗವು 2015ರಲ್ಲಿ ಸಮೀಕ್ಷೆ (Socio-Economic Survey) ನಡೆಸಿತ್ತು. ಈ ಆಯೋಗದ ಅವಧಿ ಮುಕ್ತಾಯದ ಸಂದರ್ಭದಲ್ಲಿ ವರದಿಯನ್ನು ಅಧಿಕೃತವಾಗಿ ಸರ್ಕಾರಕ್ಕೆ ಸಲ್ಲಿಸಿರಲಿಲ್ಲ. ಕಳೆದ ವರ್ಷ ಕೆ. ಜಯಪ್ರಕಾಶ್‌ ಹೆಗ್ಡೆ (Jayaprakash Hegde) ಅಧ್ಯಕ್ಷತೆಯ ಈಗಿನ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ವಿವಿಧ ವಿಷಯಕ್ಕೆ ಸಂಬಂಧಿಸಿದ ಟಿಪ್ಪಣಿಗಳೊಂದಿಗೆ 2015ರ ಸಮೀಕ್ಷಾ ವರದಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಸಲ್ಲಿಸಿತ್ತು.

  • ನನ್ನ ಬಳಿ ಸಮೀಕ್ಷೆಗೆ ಯಾರೂ ಬಂದಿಲ್ಲ: ಜಾತಿ ಸಮೀಕ್ಷೆಗೆ ಸಿದ್ದಗಂಗಾ ಶ್ರೀ ಹೇಳಿಕೆ

    ನನ್ನ ಬಳಿ ಸಮೀಕ್ಷೆಗೆ ಯಾರೂ ಬಂದಿಲ್ಲ: ಜಾತಿ ಸಮೀಕ್ಷೆಗೆ ಸಿದ್ದಗಂಗಾ ಶ್ರೀ ಹೇಳಿಕೆ

    ತುಮಕೂರು: ಎಲ್ಲರ ಬಳಿಯೂ ಹೋಗಿ ಸಮೀಕ್ಷೆ ಮಾಡಲಾಗಿದೆ ಎಂದು ಹೇಳುತ್ತಿದ್ದಾರೆ. ಆದರೆ ನನ್ನ ಬಳಿ ಸಮೀಕ್ಷೆಗೆ ಯಾರೂ ಬಂದಿಲ್ಲ ಎಂದು ಸಿದ್ದಂಗಾ ಮಠದ ಸಿದ್ದಲಿಂಗ ಶ್ರೀಗಳು (Siddalinga Swamiji) ಹೇಳಿದ್ದಾರೆ.

    ರಾಜ್ಯ ಸರ್ಕಾರ ಗುರುವಾರ ಜಾತಿ ಸಮೀಕ್ಷಾ ವರದಿ ಸ್ವೀಕಾರ ಮಾಡಿದ ವಿಚಾರಕ್ಕೆ ಸಿದ್ಧಗಂಗಾ ಮಠದಲ್ಲಿ (Siddaganga Matha) ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಜಾತಿ ಗಣತಿ (Caste Survey) ವಿಚಾರದಲ್ಲಿ ಸರ್ಕಾರ ಯಾವ ನಿರ್ಧಾರ ತೆಗೆದುಕೊಳ್ಳುತ್ತದೋ ಗೊತ್ತಿಲ್ಲ. ಇದಕ್ಕೆ ಯಾರೂ ವಿರೋಧ ಮಾಡಲು ಸಾಧ್ಯವಿಲ್ಲ. ಯಾಕೆಂದರೆ ಜಾತಿ ಆಧಾರದ ಮೇಲೆ ಸವಲತ್ತುಗಳನ್ನು ಕೊಡಬೇಕಾಗುತ್ತದೆ. ವೈಜ್ಞಾನಿಕವಾಗಿ ಆಗಿಲ್ಲ, ವ್ಯಾಪಕವಾಗಿ ಎಲ್ಲರನ್ನೂ ಸಂದರ್ಶನ ಮಾಡಿಲ್ಲ ಎಂಬ ಕೂಗು ಕೇಳಿಬರುತ್ತಿದೆ ಎಂದು ಹೇಳಿದರು.  ಇದನ್ನೂ ಓದಿ: ಎಲೆಕ್ಷನ್ ಹೊತ್ತಲ್ಲಿ ಜಾತಿಗಣತಿ ಜ್ವಾಲೆಯಲ್ಲಿ ಸರ್ಕಾರ – ವರದಿಯಲ್ಲಿ ಏನಿದೆ? ಮುಂದೇನು?

    ಗಣತಿ ವಿಚಾರದಲ್ಲಿ ಎಲ್ಲರಿಗೂ ಸಂದರ್ಶನ ಆಗಿದೆಯೋ ಗೊತ್ತಿಲ್ಲ. ನನ್ನನ್ನಂತೂ ಯಾರೂ ಬಂದು ಸಂದರ್ಶನ ಮಾಡಿಲ್ಲ. ಎಲ್ಲರನ್ನೂ ಕೇಳಿ, ಪ್ರತಿಯೊಬ್ಬರನ್ನು ವಿಚಾರಿಸಿ ವರದಿ ಮಾಡಿದರೆ ಸೂಕ್ತ. ಎಲ್ಲರಿಗೂ ಸೌಲಭ್ಯ ಲಭ್ಯವಾಗುವ ರೀತಿಯಲ್ಲಿ ಮಾಡಿದರೆ ಉಪಕಾರವಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.  ಇದನ್ನೂ ಓದಿ: ಟಿಬೆಟ್ ವ್ಯಕ್ತಿಯಿಂದ ಹತ್ತಕ್ಕೂ ಹೆಚ್ಚು ಎತ್ತುಗಳಿಗೆ ಮಚ್ಚೇಟು – ಆರೋಪಿ ವಿರುದ್ಧ ರೈತರ ಆಕ್ರೋಶ

    ಪ್ರತಿಯೊಬ್ಬರನ್ನು ಕೇಳುತ್ತಾರಾ? ಅಥವಾ ಸಮಾಜದ ಮುಖಂಡರನ್ನ ಮಾತ್ರ ಕೇಳ್ತಾರಾ? ಏನು ಅಂತಾ ಗೊತ್ತಿಲ್ಲ. ಹಾಗಾಗಿ ನಾನು ಅದರ ಬಗ್ಗೆ ಮಾತನಾಡುವುದಕ್ಕೆ ಹೋಗುವುದಿಲ್ಲ. ಎಲ್ಲರನ್ನೂ ಒಳಗೊಂಡಂತಹ ವರದಿ ಸ್ವೀಕಾರ ಆಗಲಿ. ಆಯಾ ಜಾತಿಯ ಜನಸಂಖ್ಯೆ ಆಧಾರದ ಮೇಲೆ ಸೌಲಭ್ಯಗಳು ವಿತರಣೆ ಆಗಲಿ ಎಂದು ಹೇಳಿದರು.

  • ಕಾಂತರಾಜು ವರದಿ ಸರ್ಕಾರ ಸ್ವೀಕಾರ ಮಾಡುತ್ತದೆ: ಶಿವರಾಜ್ ತಂಗಡಗಿ

    ಕಾಂತರಾಜು ವರದಿ ಸರ್ಕಾರ ಸ್ವೀಕಾರ ಮಾಡುತ್ತದೆ: ಶಿವರಾಜ್ ತಂಗಡಗಿ

    ಬೆಂಗಳೂರು: ಸಿಎಂ ಸಿದ್ದರಾಮಯ್ಯ ಹೇಳಿದಂತೆ ಕಾಂತರಾಜು ವರದಿಯನ್ನು (Kantharaju Report) ಸರ್ಕಾರ ಸ್ವೀಕಾರ ಮಾಡಲಿದೆ ಎಂದು ಹಿಂದುಳಿದ ವರ್ಗಗಳ ಸಚಿವ ಶಿವರಾಜ್ ತಂಗಡಗಿ (Shivaraj Tangadagi) ತಿಳಿಸಿದ್ದಾರೆ.

    ವಿಕಾಸಸೌಧದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ (Siddaramaiah) ಅವರು ಈಗಾಗಲೇ ವರದಿ ಸ್ವೀಕಾರ ಮಾಡುತ್ತೇವೆ ಎಂದು ಹೇಳಿದ್ದಾರೆ. ಅವರು ಹೇಳಿದ ಮೇಲೆ ನಾನು ಹೇಳುವುದು ಏನು ಇಲ್ಲ. ಇಲಾಖೆ ಸಚಿವನಾಗಿ ವರದಿ ಸ್ವೀಕಾರ ಮಾಡುತ್ತೇನೆ ಎಂದರು.

     

    ಕಾಂತರಾಜು ವರದಿಯನ್ನು ಸ್ವೀಕಾರ ಮಾಡದಂತೆ ಡಿಸಿಎಂ ಡಿಕೆ ಶಿವಕುಮಾರ್ (DCM DK Shivakumar) ಪತ್ರ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ‌ ಅವರು, ಇಲ್ಲಿವರೆಗೂ ಯಾವುದೇ ಪತ್ರ ಬಂದಿಲ್ಲ. ಶಿವಕುಮಾರ್ ಅವರು ಬರೆದಿದ್ದರೂ ನನಗೆ ಅ ಪತ್ರ ತಲುಪಿಲ್ಲ. ಪತ್ರ ಬಂದ ಮೇಲೆ ಸಿಎಂ, ಡಿಸಿಎಂ ಜೊತೆ ಮಾತನಾಡಿ ಮುಂದಿನ ತೀರ್ಮಾನ ಮಾಡುತ್ತೇನೆ. ಅಧಿಕೃತವಾಗಿ ಪತ್ರ ನನಗೆ ಬಂದಿಲ್ಲ.ಪತ್ರ ಬಂದ ಮೇಲೆ ಡಿಸಿಎಂ ಜೊತೆಗೂ ಮಾತನಾಡಿ ಅವರ ಬಳಿ ಮಾಹಿತಿ ಪಡೆಯುತ್ತೇನೆ ಎಂದರು.

    ಕಾಂತರಾಜು ವರದಿ ಇನ್ನು‌ ಸ್ವೀಕಾರ ಆಗಿಲ್ಲ. ಅದರಲ್ಲಿ ಏನಿದೆಯೋ ನನಗೂ‌ ಗೊತ್ತಿಲ್ಲ. ಸಿದ್ದರಾಮಯ್ಯ ಸರ್ಕಾರ ಜನಗಣತಿ ಮಾಡಿತ್ತು. ಆರ್ಥಿಕವಾಗಿ,ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಮಾಹಿತಿ ಅರಿಯಲು ಸಮೀಕ್ಷೆ ಮಾಡಲಾಗಿತ್ತು. ಸಿದ್ದರಾಮಯ್ಯ ಅವರು ಈಗಾಗಲೇ ವರದಿ ಸ್ವೀಕಾರ ಮಾಡುತ್ತೇವೆ ಅಂತ ಹೇಳಿದ್ದಾರೆ. ಅದನ್ನು ಸ್ವೀಕಾರ ಮಾಡಿ ಅಧ್ಯಯನ ಮಾಡಿದ ಮೇಲೆ ಅದರ ವಾಸ್ತವ ತಿಳಿಯುತ್ತದೆ. ನಾನು ಇಲಾಖೆ ಮಂತ್ರಿ ಮಾತ್ರ. ಅಂತಿಮವಾಗಿ ಸಿಎಂ, ಡಿಸಿಎಂ ನಿರ್ಧಾರ ಮಾಡುತ್ತಾರೆ ಎಂದು ಹೇಳಿದರು. ಇದನ್ನೂ ಓದಿ: ಅಂದು ಗರ್ಭಿಣಿ, ಇದೀಗ ಮದುವೆ: ಸಾಯಿ ಪಲ್ಲವಿ ಫೋಟೋ ವೈರಲ್ 

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]