Tag: ಜಾತಿ ಸಮೀಕ್ಷೆ

  • ಇಂದಿನಿಂದ ಸರ್ಕಾರಿ ಶಾಲೆಗಳು ಪುನಾರಂಭ

    ಇಂದಿನಿಂದ ಸರ್ಕಾರಿ ಶಾಲೆಗಳು ಪುನಾರಂಭ

    ಬೆಂಗಳೂರು: ದಸರಾ ರಜೆ, ಸಾಮಾಜಿಕ, ಶೈಕ್ಷಣಿಕ ಸರ್ವೆ ರಜೆ ಬಳಿಕ ಇಂದಿನಿಂದ ಸರ್ಕಾರಿ ಶಾಲೆಗಳು (Govt School) ಪುನಾರಂಭಗೊಂಡಿದೆ. ಒಂದು ತಿಂಗಳ ಬಳಿಕ ಮತ್ತೆ ಶಾಲೆಗಳು ಪ್ರಾರಂಭವಾಗಿದೆ.

    ಸರ್ವೆಗಾಗಿ ಸರ್ಕಾರ ವಿದ್ಯಾರ್ಥಿಗಳಿಗೆ ರಜೆ ವಿಸ್ತರಣೆ ಮಾಡಿ ಶಿಕ್ಷಕರನ್ನ (Teachers) ಸರ್ವೆ (Caste Census) ಕಾರ್ಯಕ್ಕೆ ಬಳಸಿಕೊಂಡಿತ್ತು. ಸದ್ಯ ಸರ್ವೆ ಕಾರ್ಯ ಮುಂದುವರಿಯುತ್ತಿದ್ದರೂ ಶಿಕ್ಷಕರನ್ನ ಸರ್ವೆ ಕಾರ್ಯದಿಂದ ಬಿಡುಗಡೆ ಮಾಡಲಾಗಿದೆ. ಶಿಕ್ಷಕರನ್ನ ಹೊರತುಪಡಿಸಿ ಉಳಿದವರಿಂದ ಸರ್ವೆ ಕಾರ್ಯ ಮುಂದುವರಿಯುತ್ತಿದೆ. ಈ ಹಿನ್ನೆಲೆ ಇಂದಿನಿಂದ ತರಗತಿಗಳು ಮರು ಪ್ರಾರಂಭವಾಗಿದೆ. ರಜೆಯಲ್ಲಿ ಮಿಸ್ ಆಗಿರುವ ಸಿಲಬಸ್ ಮುಕ್ತಾಯಕ್ಕೆ ಕೆಲವು ಮಹತ್ವದ ಸೂಚನೆಯನ್ನು ಶಿಕ್ಷಣ ಇಲಾಖೆ ನೀಡಿದೆ. ಇದನ್ನೂ ಓದಿ: ಇಂದು ಹಾಸನಾಂಬೆ ಗರ್ಭಗುಡಿ ಬಾಗಿಲು ಬಂದ್ – ಕಡೆಗಳಿಗೆಯಲ್ಲೂ ದೇವಿ ಕಣ್ತುಂಬಿಕೊಂಡ ಭಕ್ತಗಣ

    ಶಿಕ್ಷಣ ಇಲಾಖೆ ಸೂಚನೆಗಳೇನು?
    *ಡಿಸೆಂಬರ್- ಜನವರಿ ಒಳಗೆ ಸಂಪೂರ್ಣ ಸಿಲಬಸ್ ಮುಕ್ತಾಯ ಆಗಬೇಕು.
    *ಒಂದು ತಿಂಗಳು ಆಗಿರೋ ಸಿಲಬಸ್ ಲಾಸ್ ತುಂಬಲು ವಿಶೇಷ ತರಗತಿಗಳನ್ನ ನಡೆಸಬೇಕು.
    *ಬೆಳಗ್ಗೆ ಶಾಲೆ ಮುಂಚೆ ಅಥವಾ ಸಂಜೆ ಶಾಲೆ ಮುಗಿದ ಮೇಲೆ ವಿಶೇಷ ತರಗತಿ ತೆಗೆದುಕೊಂಡು ಪಠ್ಯ ಪೂರ್ಣ ಮಾಡಬೇಕು.
    *ಶನಿವಾರ ಅರ್ಧ ದಿನದ ಬದಲಾಗಿ ಪೂರ್ಣ ತರಗತಿಗಳನ್ನು ನಡೆಸಿ ಪಠ್ಯ ಪೂರ್ಣ ಮಾಡಬೇಕು.
    *ತೀರಾ ಅಗತ್ಯವಿದ್ದರೆ ರಜಾ ದಿನಗಳಲ್ಲೂ ವಿಶೇಷ ತರಗತಿ ನಡೆಸಿ ಪಠ್ಯ ಬೋಧನೆ ಪೂರ್ಣ ಮಾಡಬೇಕು.

  • ಜಾತಿ ಸಮೀಕ್ಷೆ ಹೆಸರಲ್ಲಿ ಕಾಂಗ್ರೆಸ್ ಸರ್ಕಾರದಿಂದ ಧಮ್ಕಿ, ರೌಡಿಸಂ – ಅಶೋಕ್ ಕಿಡಿ

    ಜಾತಿ ಸಮೀಕ್ಷೆ ಹೆಸರಲ್ಲಿ ಕಾಂಗ್ರೆಸ್ ಸರ್ಕಾರದಿಂದ ಧಮ್ಕಿ, ರೌಡಿಸಂ – ಅಶೋಕ್ ಕಿಡಿ

    – ರಸ್ತೆ ಡಾಂಬರೀಕರಣ ಮಾಡದೇ ಉದ್ಯಮಿಗಳ ಬಗ್ಗೆ ಟೀಕೆ

    ಬೆಂಗಳೂರು/ಹಾಸನ: ಜಾತಿ ಸಮೀಕ್ಷೆಗೆ (Caste Census) ಮಾಹಿತಿ ನೀಡದವರಿಗೆ ಕಾಂಗ್ರೆಸ್ (Congress) ಸರ್ಕಾರ ಧಮ್ಕಿ ಹಾಕುತ್ತಿದೆ. ಇದು ರೌಡಿಸಂ ಮಾಡುವ ಸರ್ಕಾರ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ (R Ashok) ಕಿಡಿಕಾರಿದರು.

    ಹಾಸನದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ನಡೆಸುತ್ತಿರುವ ಜಾತಿಸಮೀಕ್ಷೆಯಲ್ಲಿ ಎಲ್ಲರೂ ಭಾಗವಹಿಸಿಲ್ಲ. ಇನ್ಫೋಸಿಸ್ ಸುಧಾಮೂರ್ತಿ ಜಾತಿ ಸಮೀಕ್ಷೆಗೆ ಮಾಹಿತಿ ನೀಡಿಲ್ಲವೆಂದಾಕ್ಷಣ ಸಿಎಂ ಸಿದ್ದರಾಮಯ್ಯ ಹಾಗೂ ಸಚಿವ ಶಿವರಾಜ್ ತಂಗಡಗಿ ಧಮ್ಕಿ ಹಾಕಿದ್ದಾರೆ. ಸರ್ಕಾರವೇ ಇಲ್ಲಿ ರೌಡಿಸಂ ಮಾಡುತ್ತಿದೆ. ಮಾಹಿತಿ ನೀಡುವುದು ಜನರ ಇಚ್ಛೆ ಎಂದು ಹೈಕೋರ್ಟ್ ಹೇಳಿದ್ದರೂ ಸರ್ಕಾರ ಅದನ್ನು ಉಲ್ಲಂಘಿಸಿ ಗೂಂಡಾಗಿರಿ ತೋರುತ್ತಿದೆ. ಜಾತಿ ಸಮೀಕ್ಷೆ ಮಾಡುವುದೇ ಅಕ್ರಮವಾಗಿದ್ದು, ಈ ರೀತಿ ಬೆದರಿಕೆ ಹಾಕುವುದು ಮತ್ತೊಂದು ಅಕ್ರಮವಾಗಿದೆ ಎಂದರು.ಇದನ್ನೂ ಓದಿ: ದೀಪಾವಳಿ ಗಿಫ್ಟ್‌ – ದುಬಾರಿ ಕಾರುಗಳನ್ನೇ ನೀಡಿ ಹೃದಯ ಶ್ರೀಮಂತಿಕೆ ಮೆರೆದ ಉದ್ಯಮಿ

    ಸುಧಾಮೂರ್ತಿ ಬರೆದುಕೊಟ್ಟಿದ್ದನ್ನು ಬಹಿರಂಗ ಮಾಡಿರುವುದು ತಪ್ಪು. ಯಾರದ್ದೇ ಮಾಹಿತಿಯನ್ನು ಬಹಿರಂಗ ಮಾಡಬಾರದು, ಗೌಪ್ಯತೆ ಕಾಪಾಡಬೇಕು ಎಂದು ಹೈಕೋರ್ಟ್ ಹೇಳಿದೆ. ಇದರ ಜೊತೆಗೆ ಶಿಕ್ಷಕರು, ಅಧಿಕಾರಿಗಳನ್ನೂ ಬೆದರಿಸುತ್ತಿದ್ದಾರೆ ಎಂದರು.

    ಡಿಸಿಎಂ ಡಿ.ಕೆ.ಶಿವಕುಮಾರ್ ಉದ್ಯಮಿಗಳ ಬಗ್ಗೆ ಟೀಕೆ ಮಾಡುತ್ತಿದ್ದಾರೆ. ರಸ್ತೆ ಸರಿ ಇಲ್ಲ ಎಂದರೆ ನೀತಿಪಾಠ ಹೇಳುತ್ತಾರೆ. ಮೋಹನ್ ದಾಸ್ ಪೈ ಹಾಗೂ ಕಿರಣ್ ಮಜುಮ್‌ದಾರ್ ಶಾ ಪ್ರಶ್ನೆ ಮಾಡಿದರೆ ಅದನ್ನು ಟೀಕೆ ಮಾಡಿದ್ದಾರೆ. ಬೆಂಗಳೂರಿಂದ ಎಲ್ಲವನ್ನೂ ಪಡೆದಿದ್ದಾರೆ ಎನ್ನಲು ಈ ನಗರವನ್ನು ಸಿಎಂ ಸಿದ್ದರಾಮಯ್ಯ ಅಥವಾ ಡಿ.ಕೆ.ಶಿವಕುಮಾರ್ ಕಟ್ಟಿ ಬೆಳೆಸಿಲ್ಲ. ತೆರಿಗೆ ಕಟ್ಟುವವರಿಗೆ ಪ್ರಶ್ನೆ ಕೇಳುವ ಅಧಿಕಾರವೂ ಇದೆ. ಬಿಜೆಪಿ ಸರ್ಕಾರವಿದ್ದಾಗಲೂ ಇದೇ ಉದ್ಯಮಿಗಳು ಟ್ವೀಟ್ ಮಾಡಿ ಪ್ರಶ್ನೆ ಕೇಳಿದ್ದರು. ಆಗ ಅಧಿಕಾರಿಗಳ ಜೊತೆ ಚರ್ಚೆ ಮಾಡಿ ಕೂಡಲೇ ಹಣ ಬಿಡುಗಡೆ ಮಾಡಿ ರಸ್ತೆ ದುರಸ್ತಿ ಮಾಡಲಾಗಿತ್ತು. ಸಮಸ್ಯೆ ಬಂದಾಗ ತೆಗಳುವುದು ಬಿಟ್ಟು ಸಮಸ್ಯೆ ಬಗೆಹರಿಸಲಿ. ರಸ್ತೆಗುಂಡಿ ಮುಚ್ಚಲು 2,000 ಕೋಟಿ ರೂ. ಖರ್ಚು ಮಾಡಿದ್ದೇವೆ ಎಂದರೂ ಅದರ ಫಲಿತಾಂಶ ಕಾಣುತ್ತಿಲ್ಲ. ಈ ಹಣ ಎಲ್ಲಿ ಹೋಗಿದೆ ಎಂದು ಸರ್ಕಾರ ನೋಡಬೇಕಿದೆ ಎಂದು ಆಕ್ರೋಶ ಹೊರಹಾಕಿದರು.

    ಗೂಗಲ್ ಕಂಪನಿ ಬೆಂಗಳೂರು ಬಿಟ್ಟು ಆಂಧ್ರಪ್ರದೇಶವನ್ನು ಆಯ್ಕೆ ಮಾಡಿಕೊಂಡಿದೆ. ಉದ್ಯಮಿಗಳನ್ನು ಓಡಿಸಿ ಇವರು ಯಾವ ರೀತಿಯ ಅಭಿವೃದ್ಧಿ ಮಾಡುತ್ತಾರೆ? ನಗರದಲ್ಲಿ ಮಳೆ ನಿಂತಿದೆ. ಆದರೂ ಮಳೆ ಬರುತ್ತಿದೆ ಎಂದು ಬೃಹಸ್ಪತಿ ಸಿದ್ದರಾಮಯ್ಯ ನೆಪ ಹೇಳುತ್ತಿದ್ದಾರೆ. ಮಳೆ ಬರುವ ಮುನ್ನವೇ ರಸ್ತೆ ಡಾಂಬರೀಕರಣ ಮಾಡಬೇಕಿತ್ತು. ಉದ್ಯಮಿಗಳೇ ರಸ್ತೆ ನಿರ್ಮಿಸುತ್ತೇವೆ ಎಂದಿದ್ದು, ಇದು ಸರ್ಕಾರಕ್ಕೆ ದೊರೆತ ಛೀಮಾರಿ ಎಂದು ಹೇಳಿದರು.

    ಪ್ರವಾಹ ಬಂದಾಗ ಸರ್ವಪಕ್ಷ ಸಭೆ ಕರೆಯಬೇಕಿತ್ತು. ಸಭೆ ನಡೆಸದೆ, ಕೇಂದ್ರ ಸರ್ಕಾರದ ಬಳಿ ಹೋಗದೆ ಪರಿಹಾರ ಸಿಗುತ್ತಿಲ್ಲ ಎನ್ನುತ್ತಿದ್ದಾರೆ. ಈಗಾಗಲೇ ಕೇಂದ್ರ ಸರ್ಕಾರ ನಿಯಮದ ಅನುಸಾರ ಪರಿಹಾರ ಬಿಡುಗಡೆ ಮಾಡಿದೆ ಎಂದರು.

    ಬಿಜೆಪಿ ಸರ್ಕಾರ ಆದೇಶ ಮಾಡಿಲ್ಲ:
    ಶಾಲಾ ಆವರಣದಲ್ಲಿ ಹೊರಗಿನ ಸಂಘಟನೆಗಳಿಂದ ಕಾರ್ಯಕ್ರಮ ಮಾಡುವುದನ್ನು ನಿಷೇಧಿಸುವ ಬಗ್ಗೆ ಆಗಿನ ಸಿಎಂ ಜಗದೀಶ್ ಶೆಟ್ಟರ್ ಆದೇಶ ಮಾಡಿರುವುದಕ್ಕೆ ಸಾಕ್ಷಿ ಇಲ್ಲ. ಇದು ಅಂದಿನ ಬಿಜೆಪಿ ಸರ್ಕಾರದ ಸಚಿವ ಸಂಪುಟದಲ್ಲಿ ಚರ್ಚೆಯಾಗಿರಲಿಲ್ಲ. ಚಾಮರಾಜಪೇಟೆಯ ಒಂದು ಶಾಲೆಗೆ ಸಂಬಂಧಿಸಿದಂತೆ ಒಂದು ಆದೇಶವಾಗಿದೆ. ಇದನ್ನು ಎಲ್ಲಕ್ಕೂ ಅನ್ವಯಿಸಿ ಈಗಿನ ಸರ್ಕಾರ ಆದೇಶ ಮಾಡಿದೆ. ಜಗದೀಶ್ ಶೆಟ್ಟರ್ ಅಥವಾ ಅಂದಿನ ಸಚಿವರ ಸಹಿ ಇರುವ ಆದೇಶವಿದ್ದರೆ ಅದನ್ನು ಬಹಿರಂಗ ಮಾಡಲಿ ಎಂದು ಹೇಳಿದರು.

    ಆರ್‌ಎಸ್‌ಎಸ್ ಆರಂಭವಾಗಿ 100 ವರ್ಷದ ಬಳಿಕ ಪಥಸಂಚಲನದ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚೆಯಾಗಿದೆ. ಇಷ್ಟು ವರ್ಷ ಇಲ್ಲದ ಸಮಸ್ಯೆ ಈಗ ಬಂದಿದೆ. ಪ್ರತಿ ಶುಕ್ರವಾರ ಬೆಂಗಳೂರಿನ ಚಾಮರಾಜಪೇಟೆಯಲ್ಲಿ ರಸ್ತೆಯಲ್ಲಿ ನಮಾಜ್ ಮಾಡುತ್ತಾರೆ. ಇದರಿಂದ ಟ್ರಾಫಿಕ್ ಸಮಸ್ಯೆ ಆಗುವುದಿಲ್ಲವೇ? ರಂಜಾನ್, ಈದ್ ಮಿಲಾದ್ ವೇಳೆ ರಸ್ತೆ ಬಂದ್ ಮಾಡುತ್ತಾರೆ. ಆಗ ಯಾರೂ ಅನುಮತಿ ಪಡೆದಿರುವುದಿಲ್ಲ. ಕೆಲವು ಕಡೆ ಮೆರವಣಿಗೆಯಲ್ಲಿ ಕತ್ತಿ ಹಿಡಿದು ಆಚರಣೆ ಮಾಡುತ್ತಾರೆ. ಅದನ್ನು ಶಸ್ತ್ರಾಸ್ತ್ರಗಳು ಎಂದು ಪರಿಗಣಿಸುವುದಿಲ್ಲ. ಆರ್‌ಎಸ್‌ಎಸ್ ಪಥಸಂಚಲನದಲ್ಲಿ ಎಂದೂ ಯಾರಿಗೂ ಹಾನಿಯಾಗಿಲ್ಲ ಎಂದರು.ಇದನ್ನೂ ಓದಿ: ರಾಜ್ಯದ ಹಲವೆಡೆ ವರುಣಾರ್ಭಟ – ಧಾರಾಕಾರ ಮಳೆಗೆ ಜನಜೀವನ ಅಸ್ತವ್ಯಸ್ತ

  • ಜಾತಿ ಸಮೀಕ್ಷೆಯಲ್ಲಿ ಭಾಗವಹಿಸಲ್ಲ ಎಂದ ಸುಧಾ, ನಾರಾಯಣ ಮೂರ್ತಿ ದಂಪತಿ

    ಜಾತಿ ಸಮೀಕ್ಷೆಯಲ್ಲಿ ಭಾಗವಹಿಸಲ್ಲ ಎಂದ ಸುಧಾ, ನಾರಾಯಣ ಮೂರ್ತಿ ದಂಪತಿ

    ಬೆಂಗಳೂರು: ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ (Socio Economic Survey) ಭಾಗವಹಿಸಲು ಇನ್ಫೋಸಿಸ್ ಸಂಸ್ಥಾಪಕ  ನಾರಾಯಣ ಮೂರ್ತಿ (N R Narayana murthy) ಹಾಗೂ ಸುಧಾ ನಾರಾಯಣ ಮೂರ್ತಿ (Sudha Murthy) ನಿರಾಕರಿಸಿದ್ದಾರೆ.

    ನಾವು ಹಿಂದುಳಿದ ವರ್ಗದ ಯಾವ ಜಾತಿಗೂ ಸೇರುವವರಲ್ಲ. ಆದ್ದರಿಂದ ಈ ಸಮೀಕ್ಷೆಯಿಂದ ಸರ್ಕಾರಕ್ಕೆ ಏನೂ ಉಪಯೋಗವಿಲ್ಲ. ಅದ್ದರರಿಂದ ನಾವು ಈ ಸಮೀಕ್ಷೆಯಲ್ಲಿ ಭಾಗವಹಿಸುವುದಿಲ್ಲ ಎಂದು ಸ್ವಯಂ ದೃಢೀಕರಣ ಪತ್ರದಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ:  ನ.1ರಿಂದ ಬಿ ಖಾತಾದಿಂದ ಎ ಖಾತಾಗೆ ಪರಿವರ್ತನೆ – ನಿವೇಶನಗಳಿಗಷ್ಟೇ ಎ ಖಾತೆ; ಕಟ್ಟಡಗಳ ಸಕ್ರಮ ಇಲ್ಲ

     
    ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಗಳ ಆಯೋಗದ ಮೂಲಕ ನಡೆಯುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ನನ್ನ ಕೆಲವು ವೈಯಕ್ತಿಕ ಕಾರಣಗಳಿಂದ ಮಾಹಿತಿ ನೀಡಲು ನಿರಾಕರಿಸುತ್ತೇವೆ. ನಾನು ಮತ್ತು ನನ್ನ ಕುಟುಂಬ ಈ ಸಮೀಕ್ಷೆಯಲ್ಲಿ ಭಾಗವಹಿಸುವುದಿಲ್ಲ ಮತ್ತು ನಮ್ಮ ಮಾಹಿತಿಯನ್ನು ನೀಡಲು ನಿರಾಕರಿಸಿದ್ದೇನೆ ಎಂದು ಈ ಮೂಲಕ ದೃಢೀಕರಿಸುತ್ತೇವೆ ಎಂದು ದಂಪತಿ ತಿಳಿಸಿದ್ದಾರೆ.

  • ಜಾತಿಗಣತಿಗೆ ನಡೆಸದ ಶಿಕ್ಷಕರ ವೇತನಕ್ಕೆ ಕತ್ತರಿ – ಬಗ್ಗದೇ ಇದ್ರೆ ಅಮಾನತು ಶಿಕ್ಷೆ

    ಜಾತಿಗಣತಿಗೆ ನಡೆಸದ ಶಿಕ್ಷಕರ ವೇತನಕ್ಕೆ ಕತ್ತರಿ – ಬಗ್ಗದೇ ಇದ್ರೆ ಅಮಾನತು ಶಿಕ್ಷೆ

    – ಬೆಂಗಳೂರಿನಲ್ಲಿ ಗಣತಿಗೆ ಜನತೆ ನಿರಾಸಕ್ತಿ

    ಬೆಂಗಳೂರು: ಶಿಕ್ಷಕರ ಅಸಹಕಾರದಿಂದಾಗಿ ಸರ್ಕಾರದ ಮಹತ್ವಾಕಾಂಕ್ಷಿಯ ಜಾತಿ ಸಮೀಕ್ಷೆಗೆ (Caste Survey) ಭಾರೀ ಹಿನ್ನಡೆ ಆಗುತ್ತಿದೆ. ಸಮೀಕ್ಷೆಗೆ ಗೈರಾದ ಶಿಕ್ಷಕರ (Teacher) ವೇತನ ಕಡಿತಕ್ಕೆ ಸರ್ಕಾರ ಮುಂದಾಗಿದೆ.

    2,300 ಶಿಕ್ಷಕರು ಗಣತಿಗೆ ಗೈರಾಗಿದ್ದು, ಅವರ ವಿರುದ್ಧ ವೇತನ ಕಡಿತದ ಅಸ್ತ್ರ ಪ್ರಯೋಗ ಮಾಡಿದೆ. ಒಂದು ವೇಳೆ ಇದಕ್ಕೂ ಬಗ್ಗದಿದ್ದಲ್ಲಿ ಶಿಕ್ಷಕರನ್ನು ಅಮಾನತು ಮಾಡಲು  ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಮುಂದಾಗಿದೆ. ಇದನ್ನೂ ಓದಿ:  ಫೋನ್‌ ಟ್ಯಾಪಿಂಗ್‌ ಕೇಸ್;‌ ಅಲೋಕ್‌ ಕುಮಾರ್‌ ವಿರುದ್ಧದ ತನಿಖಾ ಆದೇಶ ರದ್ದು – ಸರ್ಕಾರಕ್ಕೆ ಭಾರೀ ಹಿನ್ನಡೆ

     

    ಗಣತಿಗೆ ಬೆಂಗಳೂರಿನಲ್ಲಿ (Bengaluru) ಅಪಾರ್ಟ್‌ಮೆಂಟ್‌ ನಿವಾಸಿಗಳು ಇನ್ನೂ ಸ್ಪಂದಿಸಿಲ್ಲ. ಇದುವರೆಗೆ ಶೇ.29ರಷ್ಟು ಸರ್ವೆ ಆಗಿದ್ದು, ಇನ್ನೂ 39 ಲಕ್ಷ ಮನೆಗಳ ಸರ್ವೆ ಬಾಕಿ ಉಳಿದಿದೆ. ಹೀಗಾಗಿ ಬೆಂಗಳೂರಿನ ಶಾಸಕರು ಮತ್ತು ಸಂಸದರ ಸಹಕಾರ ಕೊರಲು ಜಿಬಿಎ ಮುಖ್ಯ ಆಯುಕ್ತರಾದ ಮಹೇಶ್ವರ ರಾವ್ ನಿರ್ಧರಿಸಿದ್ದಾರೆ.

    ಈ ನಡುವೆ ಸಮೀಕ್ಷೆಗೆ ಹೋದವರಿಗೆ ನಾಯಿ ಕಾಟ ಜಾಸ್ತಿಯಾಗಿದೆ. ಬೆಂಗಳೂರಿನ ಪದ್ಮನಾಭನಗರದಲ್ಲಿ ಇಬ್ಬರು ಗಣತಿದಾರರಿಗೆ ನಾಯಿ ಕಚ್ಚಿದ್ದು ಚಿಕಿತ್ಸೆ ಪಡೆದುಕೊಂಡಿದ್ದಾರೆ.

    ಕೋಲಾರದಲ್ಲಿ ಸಮೀಕ್ಷೆಗೆ ತೆರಳಿದ್ದ ಬಿ.ಹೊಸಹಳ್ಳಿ ಶಾಲಾ ಶಿಕ್ಷಕಿ ಅಕ್ತರ್ ಬೇಗಂ ನಾಪತ್ತೆಯಾಗಿದ್ದಾರೆ. ಶಿಕ್ಷಕಿಗಾಗಿ ಕುಟುಂಬಸ್ಥರು ಹುಡುಕಾಡುತ್ತಿದ್ದಾರೆ.

  • ಬೆಂಗಳೂರಿನಲ್ಲಿ ಜಾತಿಗಣತಿ ನಡೆಸಲು ತಾಂತ್ರಿಕ ಸಮಸ್ಯೆ

    ಬೆಂಗಳೂರಿನಲ್ಲಿ ಜಾತಿಗಣತಿ ನಡೆಸಲು ತಾಂತ್ರಿಕ ಸಮಸ್ಯೆ

    ಬೆಂಗಳೂರು: ರಾಜಧಾನಿಯಲ್ಲಿ ಜಾತಿಗಣತಿ (Caste Census) ನಡೆಸಲು ತಾಂತ್ರಿಕ ಸಮಸ್ಯೆ (Technical Problem) ಎದುರಾಗಿದೆ.

    ಜಾತಿಗಣತಿಗೂ ಮುನ್ನ ಬೆಸ್ಕಾ (Bescom) ರೀಡರ್‌ಗಳು ಮನೆ ಮನೆಗೆ ತೆರಳಿ ಯುಹೆಚ್‌ಐಡಿ (UHID) ಸಂಖ್ಯೆಯನ್ನು ಅಂಟಿಸಿದ್ದರು. ಈ ಸಂಖ್ಯೆ ಹಾಕಿದರೆ ಸೈಟ್‌ ತೆರೆಯುತ್ತಿಲ್ಲ. ಹೀಗಾಗಿ ಈಗ ಗಣತಿದಾರರೇ ಮನೆ ನಂಬರ್‌ ಸೃಷ್ಟಿಸಿ ಸಮೀಕ್ಷೆಗೆ ಮುಂದಾಗಿದ್ದಾರೆ.

    ಗಣತಿದಾರರಿಗೆ ಮನೆ ರಿಜಿಸ್ಟ್ರೇಷನ್ ಹೇಗೆ ಮಾಡಬೇಕು ಎನ್ನುವುದರ ಬಗ್ಗೆ ಗ್ರೇಟರ್‌ ಬೆಂಗಳೂರು ಅಥಾರಿಟಿ ಅಧಿಕಾರಿಗಳು ಈಗ ತರಬೇತಿ ನೀಡಲು ಮುಂದಾಗಿದ್ದಾರೆ.

    ಮುಖ್ಯವಾಗಿ ಬಿಟಿಎಂ ಲೇಔಟ್‌ ಬಹುತೇಕ ಕಡೆ ತಾಂತ್ರಿಕ ಸಮಸ್ಯೆ ಎದುರಾಗಿದ್ದು ಈಗ ಸಮೀಕ್ಷಾ ಸಿಬ್ಬಂದಿಗೆ ಮತ್ತೆ ತರಬೇತಿ ನೀಡಲಾಗುತ್ತಿದೆ.

     

    ಏನೇನು ತಾಂತ್ರಿಕ ಸಮಸ್ಯೆಯಾಗುತ್ತಿದೆ?
    ಯುಹೆಚ್ ಐಡಿ ನಂಬರ್ ಜನರೇಟರ್ ಆಗುತ್ತಿಲ್ಲ, ಓಟಿಪಿ ಬರುತ್ತಿಲ್ಲ , ಸರ್ವರ್‌ ಡೇಟಾ ತೆಗೆದುಕೊಳ್ಳುತ್ತಿಲ್ಲ , ಸರ್ವೆ ಮಾಡಲು ಆಪ್ ಲಾಗಿನ್ ಆಗುತ್ತಿಲ್ಲ, ಐಪೋನ್ ನಲ್ಲಿ ಆಪ್ ಲಾಗಿನ್ ಆಗುತ್ತಿಲ್ಲ… ಹೀಗೆ ಹಲವು ತಾಂತ್ರಿಕ ಸಮಸ್ಯೆಯ ಬಗ್ಗೆ ಸಮೀಕ್ಷೆ ಮಾಡುತ್ತಿರುವವರ ಅಸಮಾಧಾನ ಹೊರಹಾಕಿದ್ದಾರೆ. ಇದನ್ನೂ ಓದಿ:  ಪಟಾಕಿ ದುರಂತಕ್ಕೆ ಬ್ರೇಕ್ ಹಾಕಲು ಕಟ್ಟುನಿಟ್ಟಿನ ಕ್ರಮ – ನಗರ ಪೊಲೀಸ್ ಆಯುಕ್ತರ ಸೂಚನೆ

    ರಜೆ ಇದ್ದರೂ ಸಮೀಕ್ಷೆ
    ಇಂದು ವಾಲ್ಮಿಕಿ ಜಯಂತಿ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ರಜೆ ಇದ್ದರೂ ಸಿಬ್ಬಂದಿ ಸಮೀಕ್ಷೆ ಮಾಡುತ್ತಿದ್ದಾರೆ. ಮೂರು ದಿನದಿಂದ ಬೆಂಗಳೂರಿನಲ್ಲಿ ಶುರುವಾಗಿರುವ ಸಾಮಾಜಿಕ ಆರ್ಥಿಕ ಶೈಕ್ಷಣಿಕ ಇಂದು ಮುಂದುವರಿದಿದೆ.

     

  • ಹದಗೆಟ್ಟ ರಸ್ತೆ| ಗಣತಿ ಕಾರ್ಯಕ್ಕೆ ತೆರಳಿದ್ದ ಶಿಕ್ಷಕಿ ಬೈಕಿನಿಂದ ಬಿದ್ದು ಸಾವು

    ಹದಗೆಟ್ಟ ರಸ್ತೆ| ಗಣತಿ ಕಾರ್ಯಕ್ಕೆ ತೆರಳಿದ್ದ ಶಿಕ್ಷಕಿ ಬೈಕಿನಿಂದ ಬಿದ್ದು ಸಾವು

    ಬಾಗಲಕೋಟೆ: ಗಣತಿ ಕಾರ್ಯಕ್ಕೆ ಹೋದ ಶಿಕ್ಷಕಿ (Teacher) ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ ಘಟನೆ ಬಾಗಲಕೋಟೆ (Bagalkote) ತಾಲೂಕಿನ ತಿಮ್ಮಾಪೂರ ಕ್ರಾಸ್ ಬಳಿ ನಡೆದಿದೆ.

    ದಾನಮ್ಮ ವಿಜಯಕುಮಾರ ನಂದರಗಿ (52) ಸಾವನ್ನಪ್ಪಿರುವ ಶಿಕ್ಷಕಿ. ಗಣತಿ ಕಾರ್ಯ (Caste Census) ಮುಗಿಸಿಕೊಂಡು ಪುತ್ರನ ಜೊತೆ ಮನೆ ಕಡೆಗೆ ಬೈಕಿನಲ್ಲಿ ಬರುತ್ತಿದ್ದಾಗ ಈ ಘಟನೆ ನಡೆದಿದೆ.

    ಮೊದಲೇ ಗಣತಿ ಕಾರ್ಯದ ತಾಂತ್ರಿಕ ಸಮಸ್ಯೆಯಿಂದಾಗಿ ಎರಡ್ಮೂರು ದಿನಗಳಿಂದ ಶಿಕ್ಷಕಿ ದಾನಮ್ಮ ಟೆನ್ಶನ್‌ನಲ್ಲಿದ್ದರು. ಹೀಗಾಗಿ ಅವರನ್ನು ಕರೆದುಕೊಂಡು ಹೋಗಲು ಮಗ ವಿಕಾಸ್ ಬೈಕ್ ತೆಗೆದುಕೊಂಡು ಬಂದಿದ್ದ. ಮಗನ ಜೊತೆ ಬರುವಾಗ ಹದಗೆಟ್ಟ ರಸ್ತೆಯಿಂದ ಬ್ಯಾಲೆನ್ಸ್‌ ತಪ್ಪಿ ಜಾರಿ ಕೆಳಗೆ ಬಿದ್ದು ಸಾವನ್ನಪ್ಪಿದ್ದಾರೆ.

    ಮೃತ ಶಿಕ್ಷಕಿ ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ವಂದಾಲ ಗ್ರಾಮದವರು. ಬಾಗಲಕೋಟೆ ತಾಲೂಕಿನ ರಾಂಪೂರ ಸರ್ಕಾರಿ ಆಶ್ರಯ ಕಾಲೋನಿ ಶಾಲೆಯಲ್ಲಿ ಸಹ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಇದನ್ನೂ ಓದಿ: ಕರ್ನಾಟಕದಲ್ಲಿ ಕೇಂದ್ರಕ್ಕೂ ಮೊದಲೇ ರಾಜ್ಯ ಚುನಾವಣಾ ಆಯೋಗದಿಂದ SIR

    ಬಾಗಲಕೋಟೆಯಲ್ಲಿ ವಾಸವಿದ್ದ ಕಾರಣ ಗಣತಿ ಕಾರ್ಯ ಮುಗಿಸಿ ಮನೆಗೆ ಹಿಂತಿರುಗುವಾಗ ಈ ಘಟನೆ ನಡೆದಿದೆ. ಈ ಕುರಿತು ಬಾಗಲಕೋಟೆ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಬಿಜೆಪಿ ನಾಯಕರ ಬಣ್ಣ ಬಯಲಾಗುತ್ತಿದೆ, ಸಾರ್ವಜನಿಕರ ಎದುರು ಬೆತ್ತಲಾಗುತ್ತಿದ್ದಾರೆ: ಸಮೀಕ್ಷೆಯಲ್ಲಿ ಭಾಗಿಯಾಗುವಂತೆ ಸಿಎಂ ಮನವಿ

    ಬಿಜೆಪಿ ನಾಯಕರ ಬಣ್ಣ ಬಯಲಾಗುತ್ತಿದೆ, ಸಾರ್ವಜನಿಕರ ಎದುರು ಬೆತ್ತಲಾಗುತ್ತಿದ್ದಾರೆ: ಸಮೀಕ್ಷೆಯಲ್ಲಿ ಭಾಗಿಯಾಗುವಂತೆ ಸಿಎಂ ಮನವಿ

    ಬೆಂಗಳೂರು: ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಬಹಿಷ್ಕಾರಕ್ಕೆ ಬಿಜೆಪಿ (BJP) ನಾಯಕರು ಕರೆ ನೀಡುತ್ತಿರುವುದಕ್ಕೆ ಸಿಎಂ ಸಿದ್ದರಾಮಯ್ಯ (CM Siddaramaiah) ಕಿಡಿಕಾರಿದ್ದಾರೆ.

    ಮಾಧ್ಯಮ ಪ್ರಕಟಣೆ ಮೂಲಕ ಸಿಎಂ ಸಿದ್ದರಾಮಯ್ಯ ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದು, ಬಿಜೆಪಿ ನಾಯಕರ ನಿಜ ಬಣ್ಣ ಬಯಲಾಗುತ್ತಿದೆ. ಬಿಜೆಪಿ ನಾಯಕರು ಒಬ್ಬೊಬ್ಬರಾಗಿ ಬಂದು ಸಮೀಕ್ಷೆ ಬಹಿಷ್ಕಾರದ ಕರೆ ನೀಡುತ್ತಿದ್ದಾರೆ. ಸಾರ್ವಜನಿಕರ ಎದುರು ಬೆತ್ತಲಾಗುತ್ತಿದ್ದಾರೆ ಎಂದು ಸಿಟ್ಟು ಹೊರ ಹಾಕಿದ್ದಾರೆ.

    ಪೋಸ್ಟ್‌ನಲ್ಲಿ ಏನಿದೆ?
    ಸಮೀಕ್ಷೆ ಯಾವುದೇ ಒಂದು ಜಾತಿ ಧರ್ಮಕ್ಕೆ ಸೀಮಿತ ಅಲ್ಲ. ಯಾರ ವಿರುದ್ಧವೂ ಅಲ್ಲ, ಎಲ್ಲರ ಪರವಾಗಿರುವ ಸಮೀಕ್ಷೆಯಿದು. ವರ್ಣ ಮತ್ತು ವರ್ಗಗಳ ನಡುವಿನ ಅಸಮಾನತೆ ಮುಂದುವರಿಯಬೇಕು ಎನ್ನುವುದು ಮನುವಾದ. ಬಿಜೆಪಿಯ ನಾಯಕರ ಅಂತರಂಗದಲ್ಲಿರುವುದು ಇದೇ ಮನುವಾದಿ ಮನಸ್ಥಿತಿ. ನಮ್ಮ ಸರ್ಕಾರ ನಡೆಸುವ ಸಮೀಕ್ಷೆಯಿಂದ ಕೇವಲ ದಲಿತ, ಹಿಂದುಳಿದ ಜಾತಿ ಮತ್ತು ಅಲ್ಪಸಂಖ್ಯಾತ ಸಮುದಾಯಗಳ ಸ್ಥಿತಿ-ಗತಿ ಮಾತ್ರವಲ್ಲ. ಮುಂದುವರಿದ ಜಾತಿಗಳೊಳಗಿನ ಬಡವರು ಮತ್ತು ಅವಕಾಶ ವಂಚಿತರ ಸ್ಥಿತಿಗತಿಯೂ ಗೊತ್ತಾಗಲಿದೆ. ಈ ವಾಸ್ತವಸ್ಥಿತಿ ಅರಿವಾಗುವುದು ಬಿಜೆಪಿಯವರಿಗೆ ಬೇಡವಾಗಿದೆ. ಬಿಹಾರದಲ್ಲಿ ಇವರದ್ದೇ ಮೈತ್ರಿ ಸರ್ಕಾರ ಜಾತಿ ಆಧಾರಿತ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಸಿದೆ.  ಇದನ್ನೂ ಓದಿ:   ಸರ್ಕಾರದಲ್ಲಿ ಬಾಕಿ ಬಿಲ್ ಪಾವತಿಗೆ ದುಪ್ಪಟ್ಟು ಕಮಿಷನ್ ಆರೋಪ – ಸಿಎಂ, ಡಿಸಿಎಂ ರಾಜೀನಾಮೆಗೆ ಬಿಜೆಪಿ ಆಗ್ರಹ

    ಇದೇ ರೀತಿ ತೆಲಂಗಾಣದಲ್ಲಿಯೂ ನಡೆದಿದೆ. ಅಲ್ಲಿಯೂ ಬಿಜೆಪಿ ನಾಯಕರು ಬಾಯಿ ಮುಚ್ಚಿಕೊಂಡಿದ್ದಾರೆ. ಇವೆಲ್ಲಕ್ಕಿಂತಲೂ ಮಿಗಿಲಾಗಿ ಈಗ ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರವೇ ಜಾತಿ ಗಣತಿ ಮಾಡಲು ಹೊರಟಿದೆ. ಕರ್ನಾಟಕದಲ್ಲಿ ಜಾತಿಗಳನ್ನು ಪರಿಗಣಿಸಿ ನಡೆಸುತ್ತಿರುವ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ವಿರೋಧಿಸುತ್ತಿರುವ ಬಿಜೆಪಿ ನಾಯಕರೇ ನೀವು ಕೇಂದ್ರ ಸರ್ಕಾರದ ಜಾತಿ ಗಣತಿಯನ್ನೂ (Caste Survey) ವಿರೋಧಿಸುತ್ತೀರಾ? ಹಾಗೆ ವಿರೋಧಿಸುವುದಾದರೆ ಅದನ್ನು ಗಟ್ಟಿ ದನಿಯಲ್ಲಿ ಈಗಲೇ ಹೇಳಿಬಿಡಿ. ಪ್ರಧಾನಿಯ ಎದುರು ತಲೆ ಎತ್ತಿ ಮಾತನಾಡುವ ದಮ್ಮು-ತಾಕತ್ತು ಇಲ್ಲದ ನಿಮಗೆ ಇದನ್ನು ವಿರೋಧಿಸುವ ಧೈರ್ಯ ಇದೆಯೇ? ಯಾಕೆ ತಮ್ಮ ಮೂರ್ಖತನದ ಹೇಳಿಕೆಗಳ ಮೂಲಕ ರಾಜ್ಯದ ಪ್ರಜ್ಞಾವಂತ ಜನರ ಎದುರು ನಗೆಪಾಲಿಗೀಡಾಗುತ್ತಿದ್ದೀರಿ? ಬಿಜೆಪಿ ನಾಯಕರ ಈ ಆತ್ಮವಂಚಕ ನಡವಳಿಕೆಯನ್ನು ರಾಜ್ಯದ ಜನತೆ ಅರ್ಥಮಾಡಿಕೊಳ್ಳಬೇಕು. ಅವರ ರಾಜಕೀಯ ಪ್ರೇರಿತ ಠಕ್ಕುತನದ ಹೇಳಿಕೆಗಳನ್ನು ಮನೆಯ ಕಸದ ಬುಟ್ಟಿಗೆ ಎಸೆಯಿರಿ.

    ಎಲ್ಲರೂ ಈಗ ನಡೆಯುತ್ತಿರುವ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಪಾಲ್ಗೊಂಡು ಸಂಪೂರ್ಣ ಸಹಕಾರ ನೀಡಬೇಕು. ಈ ಮೂಲಕ ನಾವೆಲ್ಲರೂ ಸೇರಿ ಸಮ ಸಮಾಜವನ್ನು ನಿರ್ಮಾಣ ಮಾಡೋಣ. ಕರ್ನಾಟಕವನ್ನು ಸರ್ವಜನಾಂಗದ ಶಾಂತಿಯ ತೋಟವನ್ನು ಮಾಡೋಣ. ನಾನು ವಿನಯಪೂರ್ವಕವಾಗಿ ಅರಿಕೆ ಮಾಡಿಕೊಳ್ಳುತ್ತಿದ್ದೇನೆ ಎಂದು ಸಿದ್ದರಾಮಯ್ಯ ಮಾಧ್ಯಮ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.

  • ಜಾತಿ ಗಣತಿಗೆ ನೂರೆಂಟು ವಿಘ್ನ – ಡೆಡ್‌ಲೈನಲ್ಲಿ ಸಮೀಕ್ಷೆ ಮುಗಿಯೋದು ಡೌಟ್

    ಜಾತಿ ಗಣತಿಗೆ ನೂರೆಂಟು ವಿಘ್ನ – ಡೆಡ್‌ಲೈನಲ್ಲಿ ಸಮೀಕ್ಷೆ ಮುಗಿಯೋದು ಡೌಟ್

    ಬೆಂಗಳೂರು: ರಾಜ್ಯದಲ್ಲಿ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯು (Socio-Economic Survey) ಆಮೆಗತಿಯಲ್ಲಿ ಸಾಗುತ್ತಿದ್ದು ಮತ್ತಷ್ಟು ಜಟಿಲಗೊಂಡಿದೆ. ಸೆಪ್ಟೆಂಬರ್ 22 ರಿಂದ ಅಕ್ಟೋಬರ್ 7ರ ಒಳಗೆ ಸರ್ವೆ ಕಾರ್ಯ ಪೂರ್ಣಗೊಳ್ಳಬೇಕೆಂದು ಸರ್ಕಾರ ಏನೋ ಡೆಡ್‌ಲೈನ್ ಕೊಟ್ಟಿದೆ. ಆದರೆ ಸಮೀಕ್ಷೆ ಶುರುವಾಗಿ ಇವತ್ತಿಗೆ 5 ದಿನ ಕಳೆದಿದ್ದು, 4 ದಿನಗಳಲ್ಲಿ ಶೇ.10ರಷ್ಟು ಸಹ ಪೂರ್ಣಗೊಂಡಿಲ್ಲ. ಅದರಲ್ಲೂ ರಾಜಧಾನಿ ಬೆಂಗಳೂರಿನಲ್ಲಿ (Bengaluru) ಇನ್ನೂ ಆರಂಭವೇ ಆಗಿಲ್ಲ.

    ರಾಜ್ಯಾದ್ಯಂತ 4 ದಿನಗಳಲ್ಲಿ ಸರ್ವೇ ವಿಳಂಬ ಆಗಿದೆ ಅಂತ ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯನವರೇ (CM Siddaramaiah) ಒಪ್ಪಿಕೊಂಡಿದ್ದಾರೆ. ಈ ಬಗ್ಗೆ ಬೇಸರವನ್ನೂ ವ್ಯಕ್ತಪಡಿಸಿದ್ದಾರೆ. ಶಿಕ್ಷಕರು ನೂರೆಂಟು ಸಮಸ್ಯೆಗಳನ್ನು ಎದುರಿಸ್ತಿದ್ದಾರೆ.  ಇದನ್ನೂ ಓದಿ:  ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ದಿನಾಂಕ ವಿಸ್ತರಣೆ ಮಾಡಲ್ಲ, ದಿನಕ್ಕೆ 10% ಸಮೀಕ್ಷೆ ಟಾರ್ಗೆಟ್: ಸಿಎಂ

    ಜಾತಿಗಣತಿ ಆಮೆಗತಿ
    * ಸಮೀಕ್ಷೆ ಗುರಿ – 1,43,81,702 ಕುಟುಂಬ
    * 1 ದಿನದ ಸಮೀಕ್ಷೆ ಟಾರ್ಗೆಟ್ – 11.87 ಲಕ್ಷ
    * 4 ದಿನದಲ್ಲಿ 2,62,626 ಮನೆಗಳ ಸಮೀಕ್ಷೆ ಪೂರ್ಣ
    * ಇವತ್ತು 2,27,464 ಮನೆಗಳ ಸಮೀಕ್ಷೆ (ನಿನ್ನೆ 1,82,820 ಮನೆಗಳ ಸಮೀಕ್ಷೆ)
    * 5 ದಿನಕ್ಕೆ ಒಟ್ಟು 4.10 ಲಕ್ಷ ಮನೆಗಳ ಸರ್ವೇ ಆಗಿದೆ.  ಇದನ್ನೂ ಓದಿ:  ಆಮೆಗತಿಯಲ್ಲಿ ಸಾಗಿದ ಸಾಮಾಜಿಕ ಶೈಕ್ಷಣಿಕ ಸಮೀಕ್ಷೆ – ಚುರುಕು ಮುಟ್ಟಿಸಲು ಅಖಾಡಕ್ಕಿಳಿದ ಸಿಎಂ ಸಿದ್ದರಾಮಯ್ಯ

    ಶಿಕ್ಷಕರ ಸಮಸ್ಯೆಗಳೇನು?
    * ಕೆಎಸ್‌ಸಿಬಿಸಿ ಆ್ಯಪ್ ಸರಿಯಾಗಿ ಓಪನ್ ಆಗುತ್ತಿಲ್ಲ
    * ಯುನಿಕ್ ಹೌಸ್‌ಹೋಲ್ಡ್ ಐಡಿ (UHID) ಏಕಾಏಕಿ ಲಾಕ್ ಆಗುತ್ತಿರುವುದು
    * ಯುಹೆಚ್‌ಐಡಿ ನಂಬರ್ ಸರಿಯಾಗಿ ವಿಳಾಸ ತೋರಿಸ್ತಿಲ್ಲ
    * ಹಿರಿಯ ಶಿಕ್ಷಕರಿಗೆ ಆ್ಯಪ್ ಬಳಕೆ ಅರ್ಥವಾಗ್ತಿಲ್ಲ
    * ಸರ್ವರ್, ನೆಟ್‌ವರ್ಕ್, ಒಟಿಪಿ, ಲೋಕೇಷನ್ ಸಮಸ್ಯೆ
    * ಕೆಲವು ಕಡೆ ಡೇಟಾ ಅಪ್‌ಲೋಡ್ ಸಮಸ್ಯೆ
    * 19 ಜಿಲ್ಲೆಗಳ 526 ಬ್ಲಾಕ್‌ಗಳಲ್ಲಿ ಸಿಬ್ಬಂದಿ ನಿಯೋಜನೆ ಆಗಿಲ್ಲ

  • ದತ್ತಾಂಶವನ್ನು ಸಂಪೂರ್ಣವಾಗಿ ರಕ್ಷಿಸಿ – ಜಾತಿ ಸಮೀಕ್ಷೆಗೆ ಷರತ್ತು, ಸರ್ಕಾರಕ್ಕೆ ಬಿಗ್‌ ರಿಲೀಫ್‌

    ದತ್ತಾಂಶವನ್ನು ಸಂಪೂರ್ಣವಾಗಿ ರಕ್ಷಿಸಿ – ಜಾತಿ ಸಮೀಕ್ಷೆಗೆ ಷರತ್ತು, ಸರ್ಕಾರಕ್ಕೆ ಬಿಗ್‌ ರಿಲೀಫ್‌

    – ಸಮೀಕ್ಷೆಗೆ ಮಧ್ಯಂತರ ತಡೆ ನೀಡದ ಕೋರ್ಟ್‌
    – ಸ್ವಯಂಪ್ರೇರಣೆಯಿಂದ ನೀಡಿದರಷ್ಟೇ ಮಾಹಿತಿ ಪಡೆಯಬೇಕು

    ಬೆಂಗಳೂರು: ಜಾತಿಗಳ ಸಾಮಾಜಿಕ ಆರ್ಥಿಕ ಸಮೀಕ್ಷೆಗೆ (Caste Survey) ಮಧ್ಯಂತರ ತಡೆ ನೀಡಲು ಹೈಕೋರ್ಟ್ (Karnataka)  ನಿರಾಕರಿಸಿದ್ದು ರಾಜ್ಯ ಸರ್ಕಾರಕ್ಕೆ ಬಿಗ್‌ ರಿಲೀಫ್‌ ಸಿಕ್ಕಿದೆ.

    ಮುಖ್ಯ ನ್ಯಾ.ವಿಭು ಬಖ್ರು ಮತ್ತು ನ್ಯಾ.ಸಿ.ಎಂ.ಜೋಶಿ ಅವರಿದ್ದ ವಿಭಾಗೀಯ ಪೀಠದಲ್ಲಿ ವೀರಶೈವ ಲಿಂಗಾಯತ ಮಹಾಸಭಾ, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಮತ್ತು ರಾಜ್ಯ ಒಕ್ಕಲಿಗರ ಸಂಘ ಮತ್ತು ಇತರರು  ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಯಿತು. ಕೇಂದ್ರ ಸರ್ಕಾರ ಈ ಸಮೀಕ್ಷೆಗೆ ವಿರೋಧ ವ್ಯಕ್ತಪಡಿಸಿದರೆ ರಾಜ್ಯ ಸರ್ಕಾರ ಬಲವಾಗಿ ಸಮರ್ಥಿಸಿಕೊಂಡಿತ್ತು.

    ದೀರ್ಘಕಾಲ ವಾದ, ಪ್ರತಿವಾದ ಆಲಿಸಿದ ಕೋರ್ಟ್‌, ಪೀಠ – ಮೇಲಿನದನ್ನು ಗಮನದಲ್ಲಿಟ್ಟುಕೊಂಡು ನಡೆಯುತ್ತಿರುವ ಸಮೀಕ್ಷೆಯನ್ನು ನಾವು ನಿಷೇಧಿಸಲು ಸಾಧ್ಯವಿಲ್ಲ. ಆದಾಗ್ಯೂ ಸಂಗ್ರಹಿಸಿದ ದತ್ತಾಂಶವನ್ನು ಯಾವುದೇ ವ್ಯಕ್ತಿ ಬಹಿರಂಗಪಡಿಸಬಾರದು ಎಂದು ಸೂಚಿಸಿದೆ.

    ದತ್ತಾಂಶವನ್ನು ಸಂಪೂರ್ಣವಾಗಿ ರಕ್ಷಿಸಲಾಗಿದೆ ಮತ್ತು ಗೌಪ್ಯವಾಗಿಡಲಾಗಿದೆ ಎಂದು ಆಯೋಗವು ಖಚಿತಪಡಿಸಿಕೊಳ್ಳಬೇಕು. ಈ ಪ್ರಕರಣ ಇತ್ಯರ್ಥವಾಗುವರೆಗೆ ಯಾವುದೇ ಕಾರಣಕ್ಕೂ ಸಂಗ್ರಹಿಸಿದ ಮಾಹಿತಿ ಸೋರಿಕೆ ಆಗುವುದಿಲ್ಲ ಎಂದು ಹಿಂದುಳಿದ ವರ್ಗಗಳ ಆಯೋಗ ಅಫಿಡವಿಟ್‌  ಸಲ್ಲಿಸಬೇಕು.  ಜನರು ಸ್ವಯಂಪ್ರೇರಣೆಯಿಂದ ನೀಡಿದರಷ್ಟೇ ಮಾಹಿತಿ ಪಡೆಯಬೇಕು. ಈ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಬೇಕು. ಮಾಹಿತಿ ನೀಡುವಂತೆ ಯಾವುದೇ ಒತ್ತಡ ಹಾಕಬಾರದು ಎಂದು ಷರತ್ತು ವಿಧಿಸಿ ಡಿಸೆಂಬರ್ ಎರಡನೇ ವಾರಕ್ಕೆ ಅರ್ಜಿ ವಿಚಾರಣೆಯನ್ನು ಮುಂದೂಡಿಕೆ ಮಾಡಿದೆ.

  • ಗಣತಿಗೆ ಆಧಾರ್ ಕಾರ್ಡ್ ಬಳಕೆಗೆ ಆಕ್ಷೇಪ- ತಡೆ ನೀಡಿದ್ರೆ 350 ಕೋಟಿ ಬರುತ್ತಾ: ಹೈಕೋರ್ಟ್ ಪ್ರಶ್ನೆ

    ಗಣತಿಗೆ ಆಧಾರ್ ಕಾರ್ಡ್ ಬಳಕೆಗೆ ಆಕ್ಷೇಪ- ತಡೆ ನೀಡಿದ್ರೆ 350 ಕೋಟಿ ಬರುತ್ತಾ: ಹೈಕೋರ್ಟ್ ಪ್ರಶ್ನೆ

    – ಗುರುವಾರಕ್ಕೆ ವಿಚಾರಣೆ ಮುಂದೂಡಿಕೆ

    ಬೆಂಗಳೂರು: ರಾಜ್ಯದಲ್ಲಿ ಜಾತಿ ಸಮೀಕ್ಷೆ (Caste Survey) ವಿಚಾರವಾಗಿ 2ನೇ ದಿನವೂ ಹೈಕೋರ್ಟ್ (High Court) ವಿಚಾರಣೆ ನಡೆಸಿದ್ದು ಗುರುವಾರಕ್ಕೆ ವಿಚಾರಣೆ ಮುಂದೂಡಿದೆ.

    ಇಂದಿನ ವಿಚಾರಣೆ ವೇಳೆ ಕೋರ್ಟ್ ಕೆಲವೊಂದು ಗಂಭೀರ ಪ್ರಶ್ನೆಗಳನ್ನು ಎತ್ತಿದೆ. ಆಧಾರ್ ನಂಬರ್‌ (Aadahar No) ಪಡೆಯುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದೆ. ಸಾಕಷ್ಟು ಸೈಬರ್ ಅಪರಾಧಗಳು (Cyber Crime) ನಡೆಯುತ್ತಿವೆ. ಇಲ್ಲಿ ಖಾಸಗಿತನದ ವಿಚಾರವಿದೆ. ಗಣತಿಗೆ ತಡೆ ನೀಡಿದರೆ 350 ಕೋಟಿ ರೂ. ಹಣ ಸರ್ಕಾರಕ್ಕೆ ಉಳಿಯುತ್ತಾ ಎಂದು ಪ್ರಶ್ನಿಸಿದೆ.

    ಸರ್ಕಾರದ ಪರವಾಗಿ ಅಭಿಷೇಕ್ ಮನು ಸಿಂಘ್ವಿ ವಾದಿಸಿ, ಸಂವಿಧಾನದ ಪ್ರಕಾರ ರಾಜ್ಯ ಸರ್ಕಾರಗಳಿಗೆ ಸರ್ವೆಗೆ ಅವಕಾಶ ಇದೆ. ಇದು ಗಣತಿಯಲ್ಲ, ಹಿಂದುಳಿದವರ ಪತ್ತೆಗೆ ಮಾಡುತ್ತಿರುವ ಕ್ರಮ. ಮಧ್ಯಂತರ ತಡೆಯಾಜ್ಞೆ ನೀಡಲು ಅವಕಾಶ ಇರುವುದಿಲ್ಲ ಎಂದು ಹೇಳಿದರು. ಇದನ್ನೂ ಓದಿ:  ಯೂಟ್ಯೂಬರ್‌ ಮುಕಳೆಪ್ಪ ಮದುವೆ ಪ್ರಕರಣ – ವಿವಾಹ ನೋಂದಣಾಧಿಕಾರಿ ಕಚೇರಿ ಬಂದ್‌

    ಇದಕ್ಕೆ ಕೇಂದ್ರ ಸರ್ಕಾರದ ಪರ ಎಎಸ್‌ಜಿ ಅರವಿಂದ್ ಕಾಮತ್ ಆಕ್ಷೇಪಿಸಿ, ಗಣತಿ ಕಾಯ್ದೆಯಲ್ಲಿ ಕೇಂದ್ರ ಸರ್ಕಾರಕ್ಕೆ ಗಣತಿ ಮಾಡಲು ಅಧಿಕಾರವಿದೆ. ಅದನ್ನು ಹೊರತುಪಡಿಸಿ ರಾಜ್ಯಕ್ಕೆ ಅಧಿಕಾರ ಇಲ್ಲ. ರಾಜ್ಯ ಸರ್ಕಾರ ಅಧಿಕಾರ ದುರ್ಬಳಕೆ ಮಾಡಿಕೊಳ್ಳಬಾರದು ಎಂದು ವಾದ ಮುಂದಿಟ್ಟರು. ಇದನ್ನೂ ಓದಿ:  ಭೈರಪ್ಪ 3 ತಿಂಗಳಿನ ಹಿಂದೆ ಡಿಸ್ಟಾರ್ಜ್‌ ಆಗಿ 3 ದಿನದ ಹಿಂದೆ ಅಡ್ಮಿಟ್ ಆಗಿದ್ರು: ಡಾ. ಶೈಲಾ

    ಹಿಂದುಳಿದ ವರ್ಗಗಳ ಆಯೋಗದ ಪರ ಪ್ರೊ.ರವಿವರ್ಮ ಕುಮಾರ್ ವಾದ ಮಂಡಿಸಿ, ನಾವು ಯಾವುದೇ ಜಾತಿಯನ್ನು ಸೃಷ್ಟಿಸಿಲ್ಲ. ಈ ಹಿಂದಿನ ಸರ್ವೆಗಳ ಮಾಹಿತಿ ಆಧರಿಸಿ 1,561 ಜಾತಿಯನ್ನು ಗುರುತಿಸಿದೆ. ನಮ್ಮ ಜಾತಿ ಸೇರಿಸಿಲ್ಲ ಅಂತ ಕೆಲವರ ಮನವಿ ಮೇರೆಗೆ ಸೇರಿಸಲಾಗಿದೆ. ಈಗ 2 ಕೋಟಿ ಮನೆಗಳಿಗೆ ಜಿಯೋ ಟ್ಯಾಗ್ ಮಾಡಲಾಗಿದೆ. ಉತ್ತರ ಕೊಡಲೇಬೇಕು ಎಂದು ಕಡ್ಡಾಯ ಇಲ್ಲ. ಕೇವಲ ಗುರುತಿಗಾಗಿ ಹಾಗೂ ಬೇರೆ ರಾಜ್ಯದವರನ್ನು ಪರಿಗಣಿಸದಿರಲು ಮಾತ್ರವೇ ಆಧಾರ್ ನಂಬರ್ ಪಡೆಯಲಾಗುತ್ತಿದೆ. ಸ್ಟಿಕ್ಕರ್ ತೆಗೆಯದಂತೆ ಬಲವಂತವಿಲ್ಲ, ಮನವಿಯಷ್ಟೇ ಎಂದು ಕೋರ್ಟ್‌ ಗಮನಕ್ಕೆ ತಂದರು. ವಾದ-ಪ್ರತಿವಾದ ಅಲಿಸಿದ ಕೋರ್ಟ್ ನಾಳೆಗೆ ವಿಚಾರಣೆ ಮುಂದೂಡಿದೆ.