Tag: ಜಾತಿ ಪ್ರಮಾಣ ಪತ್ರ

  • ಹಿಂದೂ ವ್ಯಕ್ತಿಯನ್ನು ಮುಸ್ಲಿಂ ಜಾತಿಗೆ ಸೇರಿಸಿದ ಸರ್ಕಾರ; ಅಧಿಕಾರಿಗಳ ಯಡವಟ್ಟಿಗೆ ಕುಟುಂಬ ಕಂಗಾಲು

    ಹಿಂದೂ ವ್ಯಕ್ತಿಯನ್ನು ಮುಸ್ಲಿಂ ಜಾತಿಗೆ ಸೇರಿಸಿದ ಸರ್ಕಾರ; ಅಧಿಕಾರಿಗಳ ಯಡವಟ್ಟಿಗೆ ಕುಟುಂಬ ಕಂಗಾಲು

    – ವೀರಶೈವ ಲಿಂಗಾಯತ ಬದಲಾಗಿ ಮುಸ್ಲಿಂ ಜಾತಿ ಅಂತ ಉಲ್ಲೇಖ

    ಕಲಬುರಗಿ: ಸರ್ಕಾರದ ಯಡವಟ್ಟಿಗೆ ಕುಟುಂಬವೊಂದು ಕಂಗಾಲಾಗಿರುವ ಘಟನೆ ಕಲಬುರಗಿಯಲ್ಲಿ (Kalaburagi) ನಡೆದಿದೆ. ಹಿಂದೂ ವ್ಯಕ್ತಿಯನ್ನು ಮುಸ್ಲಿಂ ಜಾತಿಗೆ ಸೇರಿಸಿ ಅಧಿಕಾರಿಗಳು ಯಡವಟ್ಟು ಮಾಡಿದ್ದಾರೆ.

    ಕಲಬುರಗಿಯ ರಾಮತೀರ್ಥ ನಗರದ ಮಹಾಂತಪ್ಪಾ ಕುಟುಂಬ ಕಂಗಾಲಾಗಿದೆ. ಮಹಾಂತಪ್ಪ ಕೊತ್ಲೆ ಕುಟುಂಬ ವೀರಶೈವ ಲಿಂಗಾಯತ ಸಮುದಾಯದವರು. ಮಹಾಂತಪ್ಪ ತನ್ನ ಮಗನ ಜಾತಿ ಮತ್ತು ಆದಾಯ ಪ್ರಮಾಣ ಪಾತ್ರಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಇದನ್ನೂ ಓದಿ: ಬೆಂಗಳೂರಲ್ಲಿ ಚಿನ್ನದಂಗಡಿ ದರೋಡೆ ಕೇಸ್‌ – ಟಾಯ್‌ ಗನ್ ತೋರಿಸಿ ಚಿನ್ನ ರಾಬರಿ

    ಅರ್ಜಿಯ ಜಾತಿ ಕಾಲಂನಲ್ಲಿ ವೀರಶೈವ ಲಿಂಗಾಯತ ಎಂದು ಭರ್ತಿ ಮಾಡಿ ಸಲ್ಲಿಕೆ ಮಾಡಿದ್ದರು. ಆದರೆ, ತಹಸಿಲ್ದಾರ್ ಕಚೇರಿಯಿಂದ ಜಾತಿ ಪ್ರಮಾಣ ಪತ್ರ ಪಡೆದಾಗ ಮುಸ್ಲಿಂ ಜಾತಿ ಎಂದು ಉಲ್ಲೇಖ ಆಗಿದೆ.

    ಕಲಬುರಗಿ ತಹಸಿಲ್ದಾರ್ ಕಚೇರಿಯಿಂದ ಮುಸ್ಲಿಂ ಜಾತಿ ಅಂತಾ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ವಿತರಣೆ ಮಾಡಲಾಗಿದೆ. ಮುಸ್ಲಿಂ ಜಾತಿ ಆದಾಯ ಪ್ರಮಾಣ ವಿತರಿಸಿದ್ದಕ್ಕೆ ಮಹಾಂತಪ್ಪ ಪುತ್ರನ ಶಿಕ್ಷಣಕ್ಕೆ ತೊಂದರೆಯಾಗಿದೆ. ಇದನ್ನೂ ಓದಿ: ಮೆಜೆಸ್ಟಿಕ್ ರೈಲ್ವೆ ಸ್ಟೇಷನ್‌ನಲ್ಲಿ ಟಿಕೆಟ್ ದಂಧೆ – ಹಣ ಕೊಟ್ರೆ ವೇಟಿಂಗ್ ಲಿಸ್ಟ್ ಇದ್ರೂ ಕನ್ಫರ್ಮ್ ಆಗುತ್ತೆ!

    ಯಡವಟ್ಟನ್ನು ಸರಿಪಡಿಸಿಕೊಳ್ಳುವಂತೆ ಸರ್ಕಾರಿ ಅಧಿಕಾರಿಗಳಿಗೆ ಸೂಚನೆ ನೀಡಿದರೂ ಕೂಡ ಯಾರೂ ತಲೆಕೆಡಿಸಿಕೊಂಡಿಲ್ಲ ಎಂಬ ಆರೋಪ ಕೇಳಿಬಂದಿದೆ.

  • ಸುಳ್ಳು ಜಾತಿ ಪ್ರಮಾಣಪತ್ರ ಪಡೆದು ಗ್ರಾ.ಪಂ. ಅಧಿಕಾರ ಅನುಭವಿಸಿದ ಮಹಿಳೆಗೆ 7 ವರ್ಷ ಜೈಲು

    ಹಾವೇರಿ: ಪರಿಶಿಷ್ಟ ಜಾತಿ ಪ್ರಮಾಣಪತ್ರ (Caste Certificate) ಪಡೆಯಲು ಸುಳ್ಳು ದಾಖಲಾತಿಗಳನ್ನು ಸೃಷ್ಟಿಸಿದ ಶಿಗ್ಗಾಂವಿ (Shiggavi) ತಾಲೂಕು ವನಹಳ್ಳಿ ಗ್ರಾಮದ ಲಕ್ಷ್ಮಿ ಕೋಂ.ಮಾರುತಿ ಕಬ್ಬೇರ ಎಂಬಾಕೆಗೆ 7 ವರ್ಷಗಳ ಕಾರಾಗೃಹ ಶಿಕ್ಷೆ ಹಾಗೂ 19,000 ರೂ. ದಂಡ (Penalty) ವಿಧಿಸಿ ಹಾವೇರಿಯ (Haveri) ಒಂದನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಜಿ.ಎಲ್.ಲಕ್ಷ್ಮೀ ನಾರಾಯಣ ತೀರ್ಪು ನೀಡಿದ್ದಾರೆ.

    ಶಿಗ್ಗಾಂವಿ ತಾಲೂಕು ವನಹಳ್ಳಿ ಗ್ರಾಮದ ಲಕ್ಷ್ಮಿ ಹಿಂದೂ ಗಂಗಾಮತಕ್ಕೆ (ಪ. ವರ್ಗ-01) ಸೇರಿದ್ದರೂ ಸಹ, ಸುಳ್ಳು ವ್ಯಾಸಂಗ ಪ್ರಮಾಣಪತ್ರ ಹಾಗೂ ಸುಳ್ಳು ಅಫಿಡವಿಟ್ ಘೋಷಣಾ ಪತ್ರ ಮತ್ತು ಇತರೆ ದಾಖಲಾತಿಗಳನ್ನು ಸೃಷ್ಟಿಸಿ ಜೂನ್ 04, 2015ರಂದು ಶಿಗ್ಗಾಂವಿ ತಹಶೀಲ್ದಾರ್ ಕಚೇರಿಯಲ್ಲಿ ಸಲ್ಲಿಸಿದ್ದಾರೆ. ಹಿಂದೂ ಗಂಟಿಚೋರ್ಸ್ ಪರಿಶಿಷ್ಠ ಜಾತಿಯ ಪ್ರಮಾಣಪತ್ರ ಪಡೆದು ಹನುಮರಹಳ್ಳಿ ಗ್ರಾಮ ಪಂಚಾಯತಿ ಸದಸ್ಯ ಸ್ಥಾನಕ್ಕೆ ಪರಿಶಿಷ್ಠ ಜಾತಿ ಮಹಿಳೆಗೆ ಮೀಸಲಿದ್ದ ಸ್ಥಾನಕ್ಕೆ ಸ್ಪರ್ಧಿಸಿ ಆಯ್ಕೆಯಾಗಿದ್ದಾರೆ. ನಂತರ ಎಸ್‌ಸಿ ಸ್ಥಾನಕ್ಕೆ ಮೀಸಲಾಗಿದ್ದ ಗ್ರಾ.ಪಂ (Grama Panchayat) ಅಧ್ಯಕ್ಷೆಯಾಗಿಯೂ ಆಯ್ಕೆಯಾಗಿದ್ದರು. ಇದನ್ನೂ ಓದಿ: ಇನ್ಮುಂದೆ ನೂತನ ಇಂದಿರಾ ಕ್ಯಾಂಟೀನ್ ಊಟದ ದರ 60 ರೂ.!

    ಸುಳ್ಳು ಜಾತಿಪ್ರಮಾಣಪತ್ರ ಪಡೆದು ಸರ್ಕಾರಕ್ಕೆ ಮತ್ತು ನೈಜ ಪರಿಶಿಷ್ಠ ಜಾತಿಯ ಅಭ್ಯರ್ಥಿಗೆ ಮೋಸಮಾಡಿದ ಕುರಿತಂತೆ ಶಿಗ್ಗಾಂವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ತನಿಖಾಧಿಕಾರಿ ದಾವಣಗೆರೆ ಡಿಸಿಆರ್‌ಒ ಪೊಲೀಸ್ ಇನ್ಸ್ಪೆಕ್ಟರ್ ಟಿಜಿ ಶ್ರೀಧರ ಶಾಸ್ತ್ರಿ ಅವರು ಪ್ರಕರಣದ ತನಿಖೆ ನಡೆಸಿ ದೋಷಾರೋಪಣಾ ಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಇದನ್ನೂ ಓದಿ: ಸ್ನೇಹಿತನ ಮಗನನ್ನು ಅಪಹರಿಸಿ ಕೊಲೆ- ಅಪರಾಧಿಗೆ ಜೀವಾವಧಿ ಶಿಕ್ಷೆ, 3.25 ಲಕ್ಷ ರೂ. ದಂಡ

    ಲಕ್ಷ್ಮಿ ಮೇಲೆ ಕಲಂ:198, 420, 465, 468, 471 ಭಾ.ದಂ.ಸಂ. ಮತ್ತು 3(1)ಕ್ಯೂ ಎಸ್‌ಸಿ/ಎಸ್‌ಟಿ (ಪಿಎ) ತಿದ್ದುಪಡಿ ಕಾಯ್ದೆ 2015ರ ಅಡಿಯಲ್ಲಿ ಆಪಾದನೆಗಳು ರುಜುವಾತದ ಹಿನ್ನೆಲೆಯಲ್ಲಿ ಶಿಕ್ಷೆ ಹಾಗೂ ದಂಡ ವಿಧಿಸಿ ನ್ಯಾಯಾಧೀಶರು ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಒಂದನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಸರ್ಕಾರಿ ಅಭಿಯೋಜಕರಾದ ಸರೋಜಾ ಜಿ.ಕೂಲಗಿಮಠ ಅವರು ವಾದ ಮಂಡಿಸಿದ್ದಾರೆ. ಇದನ್ನೂ ಓದಿ: ಅಕ್ರಮ ಹಣ ವರ್ಗಾವಣೆ – ತಮಿಳುನಾಡು ಸಚಿವ ಸೆಂಥಿಲ್ ಬಾಲಾಜಿಗೆ ನ್ಯಾಯಾಂಗ ಬಂಧನ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ನಕಲಿ ಜಾತಿ ಪ್ರಮಾಣ ಪತ್ರ ಕೊಟ್ಟು ಉದ್ಯೋಗ – ಶಿಕ್ಷೆ ಪ್ರಮಾಣ ಹೆಚ್ಚಳ ಮಾಡುತ್ತೇವೆ: ಮಹದೇವಪ್ಪ

    ನಕಲಿ ಜಾತಿ ಪ್ರಮಾಣ ಪತ್ರ ಕೊಟ್ಟು ಉದ್ಯೋಗ – ಶಿಕ್ಷೆ ಪ್ರಮಾಣ ಹೆಚ್ಚಳ ಮಾಡುತ್ತೇವೆ: ಮಹದೇವಪ್ಪ

    ಬೆಂಗಳೂರು : ನಕಲಿ ಜಾತಿ ಪ್ರಮಾಣ ಪತ್ರ (Fake Caste Certificate) ಕೊಟ್ಟು ಉದ್ಯೋಗ ಪಡೆಯುವವರಿಗೆ ನೀಡುವ‌ ಶಿಕ್ಷೆ ಪ್ರಮಾಣ ಹೆಚ್ಚಳ ಮಾಡುವ ಚಿಂತನೆ ಇದೆ ಎಂದು ಸಮಾಜ ಕಲ್ಯಾಣ ‌ಇಲಾಖೆ ಸಚಿವ ಎಚ್.ಸಿ. ಮಹದೇವಪ್ಪ (HC Mahadevappa) ತಿಳಿಸಿದ್ದಾರೆ.

    ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಜೆಡಿಎಸ್‌ನ ಗೋವಿಂದ ರಾಜು (Govind Raju) ನಕಲಿ ಜಾತಿ ಪತ್ರ ಕೊಟ್ಟು ಹುದ್ದೆ ಪಡೆದಿರುವ ವಿಷಯ ಪ್ರಸ್ತಾಪ ಮಾಡಿದರು.

    ಇದಕ್ಕೆ ಪ್ರತಿಕ್ರಿಯೆ ನೀಡಿದ ಸಮಾಜ ಕಲ್ಯಾಣ ಇಲಾಖೆ ಸಚಿವ ಮಹದೇವಪ್ಪ, ರಾಜ್ಯದಲ್ಲಿ 836 ಮಂದಿ ನಕಲಿ ಜಾತಿ ಪ್ರಮಾಣ ಪತ್ರ ಕೊಟ್ಟು ಉದ್ಯೋಗ ಪಡೆದಿದ್ದಾರೆ. ಈ ಬಗ್ಗೆ ತನಿಖೆ ನಡೆಯುತ್ತಿದೆ. 836 ಪ್ರಕರಣಗಳಲ್ಲಿ 598 ಪ್ರಕರಣ ದಾಖಲಿಸಲಾಗಿದೆ. 238 ಕೇಸ್ ಜಿಲ್ಲಾ ಜಾತಿ ಪರಿಶೀಲನಾ ಸಮಿತಿಗಳಲ್ಲಿ ಬಾಕಿ ಇದೆ. 598 ಪ್ರಕರಣದಲ್ಲಿ 93 ನೌಕರರನ್ನ ಸೇವೆಯಿಂದ ವಜಾ ಮಾಡಲಾಗಿದೆ ಎಂದು ಮಾಹಿತಿ ನೀಡಿದರು. ಇದನ್ನೂ ಓದಿ: ಆಗಸ್ಟ್‌ನಲ್ಲಿ ಫಲಾನುಭವಿಗಳ ಖಾತೆಗೆ ʻಗೃಹಲಕ್ಷ್ಮಿʼ – ಲಕ್ಷ್ಮಿ ಹೆಬ್ಬಾಳ್ಕರ್

     

    ನಕಲಿ ಜಾತಿ ಪತ್ರ ಕೊಟ್ಟು ಉದ್ಯೋಗ ಪಡೆಯೋದು ಸಂವಿಧಾನ ವಿರೋಧ. ಈಗ ಇರೋ‌ ಶಿಕ್ಷೆ ಪ್ರಮಾಣ ಸಾಕಾಗುವುದಿಲ್ಲ. ಹೀಗಾಗಿ ಇಂತಹ ಪ್ರಕರಣಕ್ಕೆ ಇರುವ ಶಿಕ್ಷೆ ಪ್ರಮಾಣ ಹೆಚ್ಚಳ ಮಾಡುವ ಚಿಂತನೆ ಮಾಡುತ್ತಿದ್ದೇವೆ. ಮುಂದಿನ ವಾರ ಗೃಹ ಇಲಾಖೆ ಜೊತೆ ಸಭೆ ಮಾಡಿ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸಮೀರ್ ಮುಸ್ಲಿಂ ಅಲ್ಲ – ಜಾತಿ ಪರಿಶೀಲನಾ ಸಮಿತಿ ಕ್ಲೀನ್‌ ಚಿಟ್

    ಸಮೀರ್ ಮುಸ್ಲಿಂ ಅಲ್ಲ – ಜಾತಿ ಪರಿಶೀಲನಾ ಸಮಿತಿ ಕ್ಲೀನ್‌ ಚಿಟ್

    ಮುಂಬೈ: ನಕಲಿ ಜಾತಿ ಪ್ರಮಾಣ ಪತ್ರ ಬಳಸಿ ಸರ್ಕಾರಿ ನೌಕರಿ ಪಡೆದಿರುವುದಾಗಿ ಆರೋಪ ಹೊತ್ತಿದ್ದ ಮಾಜಿ ಎನ್‌ಸಿಬಿ ಅಧಿಕಾರಿ ಸಮೀರ್ ವಾಂಖೆಡೆಗೆ ಜಾತಿ ಪರಿಶೀಲನಾ ಸಮಿತಿ ಕ್ಲೀನ್‌ ಚಿಟ್ ನೀಡಿದೆ.

    ಸಮೀರ್ ವಾಂಖೆಡೆ ಹುಟ್ಟಿನಿಂದ ಮುಸ್ಲಿಂ ಅಲ್ಲ. ಅವರು ಮಹಾರ್-37 ಪರಿಶಿಷ್ಟ ಜಾತಿಗೆ ಸೇರಿದವರು. ಸಮೀರ್ ವಾಂಖೆಡೆ ಹಾಗೂ ಅವರ ತಂದೆ ದ್ಯಾನೇಶ್ ವಾಂಖೆಡೆ ಹಿಂದೂ ಧರ್ಮವನ್ನು ತ್ಯಜಿಸಿ ಮುಸ್ಲಿಂ ಧರ್ಮವನ್ನು ಸ್ವೀಕರಿಸಿಲ್ಲ ಎಂದು ಸಮಿತಿ ತೀರ್ಮಾನಿಸಿದೆ. ಇದನ್ನೂ ಓದಿ: ಸ್ವಾವಲಂಬಿ ಭಾರತ ಕಟ್ಟಲು ಕೈಜೋಡಿಸಿ: ರಾಜ್ಯಪಾಲರ ಮನವಿ

    ಮಹಾರಾಷ್ಟ್ರದ ಮಾಜಿ ಕ್ಯಾಬಿನೆಟ್ ಸಚಿವ ಮತ್ತು ಎನ್‌ಸಿಪಿ ನಾಯಕ ನವಾಬ್ ಮಲಿಕ್ ಸಮೀರ್ ಅವರು ನಕಲಿ ಜಾತಿ ಪ್ರಮಾಣ ಪತ್ರ ಬಳಸಿರುವುದಾಗಿ ಆರೋಪಿಸಿದ್ದರು. ಬಳಿಕ ರಾಜಕೀಯ ಮುಖಂಡರಾದ ಮನೋಜ್ ಸಂಸಾರೆ, ಅಶೋಕ್ ಕಾಂಬ್ಳೆ ಹಾಗೂ ಸಂಜಯ್ ಕಾಂಬ್ಳೆ ಅವರು ಸಮೀರ್ ವಾಂಖೆಡೆ ವಿರುದ್ಧ ದೂರು ನೀಡಿದ್ದರು. ಇದೀಗ ಈ ಆರೋಪ ಆಧಾರ ರಹಿತ ಎಂದು ಜಾತಿ ಪರಿಶೀಲನಾ ಸಮಿತಿ ಹೇಳಿದೆ. ಇದನ್ನೂ ಓದಿ: ಲಂಚ-ಮಂಚ ಹೇಳಿಕೆಗೆ ಕೌಂಟರ್ ಕೊಟ್ಟ ಬಿಜೆಪಿಗೆ ಪ್ರಿಯಾಂಕ್ ಖರ್ಗೆ ಫೇಸ್‌ಬುಕ್ ಪೋಸ್ಟ್‌ನಲ್ಲಿ ಸುದೀರ್ಘ ಉತ್ತರ

    ಸಮೀರ್ ವಾಂಖೆಡೆಗೆ ಕ್ಲೀನ್‌ ಚಿಟ್ ಲಭಿಸುತ್ತಿದ್ದಂತೆಯೇ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಸತ್ಯಮೇವ ಜಯತೆ ಎಂದು ಬರೆದುಕೊಂಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ನಕಲಿ ದಾಖಲಿ ಸೃಷ್ಟಿಸಿ ಸೇನೆಗೆ ಸೇರ್ಪಡೆ – 9 ಮಂದಿ ಅರೆಸ್ಟ್

    ನಕಲಿ ದಾಖಲಿ ಸೃಷ್ಟಿಸಿ ಸೇನೆಗೆ ಸೇರ್ಪಡೆ – 9 ಮಂದಿ ಅರೆಸ್ಟ್

    ವಿಜಯನಗರ: ನೂರಕ್ಕೂ ಹೆಚ್ಚು ಮಹಾರಾಷ್ಟ್ರ ನಿವಾಸಿಗಳು ಸೇನೆಗೆ ಸೇರಲು ನಕಲಿ ದಾಖಲೆ ಸೃಷ್ಟಿ ಮಾಡಿದ್ದು, ನಗರದ ಪೊಲೀಸರು ಅಕ್ರಮವನ್ನು ಪತ್ತೆ ಮಾಡಿದ್ದಾರೆ.

    ವೈಭವ್, ನೇತಾಜಿ ರಾಮ್ ಸಾವಂತ್, ಜಂಬಣ್ಣ, ಅಜಿತ್ ಕೊಂಡೆ, ವೆಂಕಟೇಶ್, ಪರಶುರಾಮ್, ಮನೋಜ್ ಇದರ ಜೊತೆಗೆ ಬಳ್ಳಾರಿ ಜಂಬಣ್ಣ ಮನೋಜ್, ಹನುಮಂತ ಸೇರಿದಂತೆ ಹಲವರನ್ನು ಬಂಧಿಸಲಾಗಿದೆ. ಸೇನೆಯಿಂದ ದಾಖಲಾತಿ ಪರಿಶೀಲಿಸುವಂತೆ ಮಾಹಿತಿ ಬಂದ ಹಿನ್ನೆಲೆ ಪ್ರಕರಣ ಬೆಳಕಿಗೆ ಬಂದಿದೆ. ಸೇನೆಯಲ್ಲಿ ಇನ್ನೂ ಹಲವು ಜನ ಇದೇ ರೀತಿ ಕೆಲಸಕ್ಕೆ ಸೇರಿರುವ ಅನುಮಾನವಿದೆ. ಇದನ್ನೂ ಓದಿ: 13ರ ಬಾಲಕಿ ಮೇಲೆ 16 ಮಂದಿಯಿಂದ ಸಾಮೂಹಿಕ ಅತ್ಯಾಚಾರ – ನೋವಿನ ಕಥೆ ಬಿಚ್ಚಿಟ್ಟ ತಂದೆ!

    ಸರ್ಕಾರಿ ಅಧಿಕಾರಿಗಳು ದೇಶಸೇವೆ ಮಾಡುವ ಕೆಲಸಕ್ಕಾಗಿಯೂ ಅಡ್ಡದಾರಿ ಹಿಡಿದ ಯುವಕರ ಹಣಕ್ಕಾಗಿ ದಾಖಲೆ ನೀಡಿದ್ದಾರೆ. ನೂರಕ್ಕೂ ಹೆಚ್ಚು ಮಹಾರಾಷ್ಟ್ರ ನಿವಾಸಿಗಳು ರಾಜ್ಯದ ವಿವಿಧ ಭಾಗದಿಂದ ನಕಲಿ ಸರ್ಟಿಫಿಕೇಟ್ ನೀಡಿ ಆಯ್ಕೆ ಆಗಿದ್ದಾರೆ. ಇದನ್ನೂ ಓದಿ: 7 ರಾಜ್ಯಗಳಲ್ಲಿ 14 ಮಹಿಳೆಯರನ್ನು ಮದುವೆಯಾಗಿದ್ದ ಭೂಪ ಅರೆಸ್ಟ್

    ಈ ಕುರಿತು ವಿಜಯನಗರ ಜಿಲ್ಲೆಯಲ್ಲಿ 9 ಮತ್ತು ಬಳ್ಳಾರಿ ಜಿಲ್ಲೆಯಲ್ಲಿ 11 ಜನರ ವಿರುದ್ಧ ಎಫ್‍ಐಆರ್ ದಾಖಲಾಗಿದೆ. ವಿಜಯನಗರದ ಹೊಳಲು ಠಾಣೆ, ಬಳ್ಳಾರಿ ನಗರದ ಬ್ರೂಸ್ ಪೇಟ್, ಗಾಂಧಿನಗರ, ಕೌಲ ಬಜಾರ್ ಮತ್ತು ಎಪಿಎಂಸಿ ಠಾಣೆಗಳಲ್ಲಿ ದೂರು ದಾಖಲಾಗಿದೆ.

    BRIBE

    ಇನ್ನೂ ಇದರಲ್ಲಿ ಇಬ್ಬರು ಪೊಲೀಸರು ಸಹಕಾರ ನೀಡಿದ ಆರೋಪವಿರುವ ಹಿನ್ನೆಲೆ ಪೊಲೀಸರನ್ನು ಅಮಾನತು ಮಾಡಲಾಗಿದೆ. ಸೇನೆಯಲ್ಲಿ ಕೆಲಸಕ್ಕೆ ಸೇರಲು ದಾಖಲಾತಿಗಳು ತಿದ್ದುಪಡಿ ಮಾಡಿ, ನಕಲಿ ದಾಖಲೆ ಕೊಟ್ಟ ಆರೋಪ ವ್ಯಕ್ತವಾಗಿದೆ.

    ಆಧಾರ್ ಕಾರ್ಡ್, ಜಾತಿ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರ ಸೇರಿದಂತೆ ಹಲವು ನಕಲಿ ದಾಖಲೆಗಳ ಸೃಷ್ಟಿ ಮಾಡಿದ್ದರು. ಮಹಾರಾಷ್ಟ್ರದ ವಿವಿಧ ಊರಿನವರನ್ನು ಸ್ಥಳೀಯರು ಎನ್ನುವಂತೆ ದಾಖಲೆಗಳ ಫೋರ್ಜರಿ ಮಾಡಲಾಗಿದ್ದು, ನಕಲಿ ದಾಖಲೆಗಾಗಿ ಲಕ್ಷಾಂತರ ಹಣದ ವ್ಯವಹಾರ ನಡೆದಿರುವ ಕುರಿತು ಮಾಹಿತಿ ಲಭ್ಯವಾಗಿದೆ.

  • ಪೌರತ್ವ ಪ್ರಮಾಣ ಪತ್ರ ಸಿಕ್ಕರೂ ಜಾತಿ ಪ್ರಮಾಣ ಪತ್ರ ಸಿಗುತ್ತಿಲ್ಲ: ಬಾಂಗ್ಲಾ ವಲಸಿಗರ ಪರದಾಟ

    ಪೌರತ್ವ ಪ್ರಮಾಣ ಪತ್ರ ಸಿಕ್ಕರೂ ಜಾತಿ ಪ್ರಮಾಣ ಪತ್ರ ಸಿಗುತ್ತಿಲ್ಲ: ಬಾಂಗ್ಲಾ ವಲಸಿಗರ ಪರದಾಟ

    ರಾಯಚೂರು: ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಯಾಗಿರುವುದರಿಂದ ಬಾಂಗ್ಲಾದೇಶದ ನಿರಾಶ್ರಿತರಿಗೆ ಇಂದಲ್ಲಾ ನಾಳೆ ದೇಶದ ಪೌರತ್ವ ಸಮಸ್ಯೆ ಬಗೆಹರಿಯಲಿದೆ. ಆದರೆ ರಾಯಚೂರು ಜಿಲ್ಲೆಯಲ್ಲಿ ಸುಮಾರು 50 ವರ್ಷದಿಂದ ವಾಸವಿರುವ ಬಾಂಗ್ಲಾ ವಲಸಿಗರಿಗೆ ಇದುವರೆಗೂ ಜಾತಿ ಪ್ರಮಾಣ ಪತ್ರವೇ ಸಿಕ್ಕಿಲ್ಲ. ಇನ್ನೊಂದೆಡೆ ಜಮೀನುಗಳ ನಕ್ಷೆ ಇಲ್ಲದೆ ಇಲ್ಲಿನ ಜನ ನಿರಂತರ ಹೋರಾಟ ನಡೆಸಿದ್ದಾರೆ.

    ಜಿಲ್ಲೆಯ ಸಿಂಧನೂರು ತಾಲೂಕಿನ ಐದು ನಿರಾಶ್ರಿತರ ಪುನರ್ವಸತಿ ಕ್ಯಾಂಪ್‍ಗಳ ನಿವಾಸಿಗಳು ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಯಿಂದ ತುಂಬಾನೇ ಖುಷಿಯಾಗಿದ್ದಾರೆ. ಇಲ್ಲಿನ ಐದು ಆರ್‌ಎಚ್ ಕ್ಯಾಂಪ್‍ಗಳಲ್ಲಿನ ಸುಮಾರು 7 ಸಾವಿರ ಜನ ಅಕ್ರಮ ವಲಸಿಗರು ಈಗ ಹೊಸದಾಗಿ ಪೌರತ್ವ ಪಡೆಯುತ್ತಿದ್ದಾರೆ. ಆದರೆ ಈ ಹಿಂದೆ ಪೌರತ್ವ ಪಡೆದು 1971ರಿಂದ ಇಲ್ಲೇ ವಾಸಿಸುತ್ತಿರುವ ಸುಮಾರು 25 ಸಾವಿರ ಜನರಿಗೆ ಇದುವರೆಗೂ ಜಾತಿ ಪ್ರಮಾಣ ಪತ್ರ ಸಿಕ್ಕಿಲ್ಲ.

    ಆದಾಯ ಮತ್ತು ಜಾತಿ ಪ್ರಮಾಣ ಪತ್ರದಲ್ಲಿ ಕೇವಲ ಆದಾಯ ತೋರಿಸಿ ಜಾರಿ ಜಾತಿ ಕಾಲಂ ಅನ್ನು ಖಾಲಿ ಬಿಡಲಾಗುತ್ತಿದೆ. ಜಾತಿ ಪ್ರಮಾಣ ಪತ್ರ ಇಲ್ಲದಿರುವುದಕ್ಕೆ ಸಾಕಷ್ಟು ಸೌಲಭ್ಯ, ಅವಕಾಶಗಳಿಂದ ವಂಚಿತರಾಗುತ್ತಿದ್ದಾರೆ. ವಿದ್ಯಾರ್ಥಿಗಳು, ರೈತರು ಜಾತಿ ಪ್ರಮಾಣ ಪತ್ರಕ್ಕಾಗಿ ಹೋರಾಟ ನಡೆಸುತ್ತಲೇ ಬಂದಿದ್ದಾರೆ. ಇಲ್ಲಿ ವಾಸವಿರುವ ಶೇಕಡಾ 60ರಿಂದ 70 ರಷ್ಟು ಜನ ನಮಶೂದ್ರ ಜನಾಂಗಕ್ಕೆ ಸೇರಿದವರಾಗಿದ್ದಾರೆ.

    ಓಡಿಸ್ಸಾ, ಮೇಘಾಲಯ, ಪಶ್ಚಿಮ ಬಂಗಾಳ ಸೇರಿ ಎಂಟು ರಾಜ್ಯಗಳಲ್ಲಿ ನಮಶೂದ್ರ ಜನಾಂಗಕ್ಕೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡಿದ್ದಾರೆ. ನಮಗೂ ಪರಿಶಿಷ್ಟ ಜಾತಿ ಪ್ರಮಾಣಪತ್ರ ನೀಡಬೇಕು ಅಂತ ಹೋರಾಟ ನಡೆಸಿದ್ದಾರೆ. ಇಲ್ಲಿ ವಾಸವಿರುವ ಸುಮಾರು 6 ಸಾವಿರ ಕ್ಷತ್ರಿಯಾ ಜನಾಂಗದವರಿದೆ ಮಾತ್ರ 2ಎ ಪ್ರಮಾಣ ಪತ್ರ ನೀಡಲಾಗಿದೆ.

    ಒಂದೆಡೆ ಜಾತಿ ಪ್ರಮಾಣ ಪತ್ರದ ಸಮಸ್ಯೆಯಾದರೆ, ಇನ್ನೊಂದೆಡೆ ಜಮೀನಿನ ಭಾಗದ ಸಮಸ್ಯೆ ಎದುರಿಸುತ್ತಿದ್ದಾರೆ. ಭಾರತ ಬಾಂಗ್ಲಾ ದೇಶ ವಿಭಜನೆ ಬಳಿಕ ಭಾರತಕ್ಕೆ ಬಂದ ವಲಸಿಗರಿಗೆ ಅಂದಿನ ಸರ್ಕಾರ ಭಾರತ ಪೌರತ್ವವನ್ನು ನೀಡಿ ಸಿಂಧನೂರು ತಾಲೂಕಿನಲ್ಲಿ ಸೌಲಭ್ಯಗಳನ್ನು ಒದಗಿಸಿತು. ತಲಾ 3 ಎಕರೆ ಜಮೀನು, ನಿವೇಶನ ಸಹ ನೀಡಿತ್ತು. ಆದರೆ ಜಮೀನಿನ ನಕ್ಷೆಯಿಲ್ಲದ್ದರಿಂದ ಹೊಲಗಳ ಪೋಡಿಯಾಗುತ್ತಿಲ್ಲ. ತಂದೆಯಿಂದ ಬಂದ ಜಮೀನನ್ನು ಮಕ್ಕಳು ಹಂಚಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಜಮೀನಿನ ಮೇಲೆ ಕೃಷಿ ಸಾಲ ಪಡೆಯಲು ಸಹ ಸಾಧ್ಯವಿಲ್ಲದ ಪರಸ್ಥಿತಿಯಿದೆ.

    ಪೌರತ್ವ ತಿದ್ದುಪಡಿ ಕಾಯಿದೆ ಜಾರಿಯಿಂದ ನಿರಾಶ್ರಿತ ಯೋಜನೆ ಬಳಿಕ ಬಂದ ಬಾಂಗ್ಲಾ ವಲಸಿಗರು ಪಾರಾಗಿದ್ದಾರೆ. ಆದರೆ ಈಗಾಗಲೇ ಪೌರತ್ವ ಪಡೆದು ವಾಸಿಸುತ್ತಿರುವ ವಲಸಿಗ ನಮಶೂದ್ರ ಜನಾಂಗದವರು ಜಾತಿ ಪ್ರಮಾಣ ಪತ್ರವಿಲ್ಲದೆ ಪರಿತಪಿಸುತ್ತಿದ್ದಾರೆ. ನಮಗೇ ಎಸ್‍ಸಿ ಪ್ರಮಾಣ ಪತ್ರ ನೀಡಿ ಅಂತ ಸರ್ಕಾರಕ್ಕೆ ಮನವಿ ಸಲ್ಲಿಸುತ್ತಲೇ ಇದ್ದಾರೆ.

  • ಚಿಕ್ಕೋಡಿಯಲ್ಲಿ ಸಲೀಸಾಗಿ ದೊರೆಯುತ್ತೆ ನಕಲಿ ಪ್ರಮಾಣ ಪತ್ರ..!

    ಚಿಕ್ಕೋಡಿಯಲ್ಲಿ ಸಲೀಸಾಗಿ ದೊರೆಯುತ್ತೆ ನಕಲಿ ಪ್ರಮಾಣ ಪತ್ರ..!

    ಬೆಳಗಾವಿ/ಚಿಕ್ಕೋಡಿ: ಅಸಲಿ ಜಾತಿ ಪ್ರಮಾಣ ಪತ್ರ ಪಡೆಯುವರು ಸಾಕಷ್ಟು ಬಾರಿ ತಹಶೀಲ್ದಾರ್ ಕಚೇರಿ ಅಲೆದಾಡಿದ ಮೇಲೆ ಕೊನೆಗೆ ಪ್ರಮಾಣ ಪತ್ರ ಪಡೆದುಕೊಳ್ಳುತ್ತಾರೆ. ಆದರೆ ಈ ತಾಲೂಕಿನಲ್ಲಿ ಅಸಲಿಗಿಂತ ನಕಲಿ ಪ್ರಮಾಣ ಪತ್ರ ಸಲೀಸಾಗಿ ದೊರೆಯುತ್ತಿದೆ. ಜನರಿಗೆ ಯಾವುದು ಬೇಕೋ ಆ ಜಾತಿಯ ಪ್ರಮಾಣ ಪತ್ರವನ್ನು ಯಾವುದೇ ದಾಖಲೆಗಳಿಲ್ಲದೆ ನೀಡಲಾಗುತ್ತಿದೆ.

    ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಸದಲಗಾ ಪುರಸಭೆಯ ಸದಸ್ಯರು ತಹಶೀಲ್ದಾರ್ ಕಚೇರಿಯಲ್ಲಿ ನ್ಯಾಯ ಬೇಕು ಎಂದು ಪ್ರತಿಭಟನೆ ನಡೆಸುತ್ತಿದ್ದಾರೆ. ನಕಲಿ ಜಾತಿ ಪ್ರಮಾಣ ಪತ್ರ ಪಡೆದು ಸದಲಗಾ ಪುರಸಭೆಯ 11ನೇ ವಾರ್ಡಿನಲ್ಲಿ ಅವಿರೋಧವಾಗಿ ಆಯ್ಕೆಯಾದ ರವಿ ಗೋಸಾವಿ ಹಾಗೂ ನಕಲಿ ಜಾತಿ ಪ್ರಮಾಣ ಪತ್ರ ನೀಡಿದ ತಹಶೀಲ್ದಾರ್ ಅವರ ವಿರುದ್ಧ ಪ್ರತಿಭಟನೆ ನಡೆಸ್ತಿದ್ದಾರೆ.

    ಚಿಕ್ಕೋಡಿ ತಾಲೂಕಿನ ತಹಶೀಲ್ದಾರ್ ಅವರು ಯಾವುದೇ ದಾಖಲೆ ಇಲ್ಲದೇ ಪ್ರವರ್ಗ 2ಎ ಅಲ್ಲಿ ಬರುತ್ತಿದ್ದ ಹಿಂದೂ ಗೋಸಾವಿ ಭಟಕಿ ಜಮಾತ ಜಾತಿಯಿಂದ ಎಸ್‍ಟಿ ಪರಿಶಿಷ್ಟ ಪಂಗಡಕ್ಕೆ ಯಾವುದೇ ದಾಖಲೆಗಳಿಲ್ಲದೇ ಬದಲಾಯಿಸಿಕೊಂಡಿದ್ದಾರೆ. ರವಿ ಗೋಸಾವಿಯಿಂದ ಯಾವುದೇ ಶಾಲಾ ಹಾಗೂ ಕಂದಾಯ ಇಲಾಖೆಯ ದಾಖಲಾತಿಗಳನ್ನು ಪಡೆಯದೇ ಚಿಕ್ಕೋಡಿ ತಹಶೀಲ್ದಾರ್ ಕಚೇರಿಯ ಸಿಬ್ಬಂದಿ ನಕಲಿ ಜಾತಿ ಪ್ರಮಾಣ ಪತ್ರ ನೀಡಿದ್ದಾರೆ ಎಂದು ಆರ್‍ಟಿಐ ಕಾರ್ಯಕರ್ತರೊಬ್ಬರು ಆರೋಪಿಸಿದ್ದಾರೆ. ಅಲ್ಲದೇ ಈ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಒತ್ತಾಯಿಸಿದ್ದಾರೆ.

    ಸದಲಗಾ ಪುರಸಭೆ ವ್ಯಾಪ್ತಿಯಲ್ಲಿ ಪರಿಶಿಷ್ಟ ಪಂಗಡ ವರ್ಗದಲ್ಲಿ ಯಾವುದೇ ಮುಖಂಡರು ಇಲ್ಲದನ್ನು ಗಮನಿಸಿ ರವಿ ಗೋಸಾವಿ ಚಿಕ್ಕೋಡಿ ತಹಶೀಲ್ದಾರ್ ಕಚೇರಿಯ ಲಿಂಕ್ ಹಿಡಿದು ನಕಲಿ ಜಾತಿ ಪ್ರಮಾಣ ಪತ್ರ ಪಡೆದುಕೊಂಡಿದ್ದಾನೆ. ನಂತರ ವಾರ್ಡ್ ನಂ.11 ಎಸ್‍ಟಿ ಮೀಸಲು ವಾರ್ಡ್‍ನಿಂದ ನಾಮಪತ್ರ ಸಲ್ಲಿಸಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

    ಬಿಜೆಪಿಯ ಪುರಸಭೆ ಸದಸ್ಯರಿಗೆ ಈತನ ಅಸಲಿ ಬಂಡವಾಳ ಗೊತ್ತಾಗಿ ಈತನ ಜಾತಿ ಪ್ರಮಾಣ ಪತ್ರದ ಎಲ್ಲ ದಾಖಲೆಗಳನ್ನ ಸಂಗ್ರಹಿಸಿ ಈತನ ಸದಸ್ಯತ್ವ ರದ್ದು ಮಾಡುವಂತೆ ಎಚ್ಚರಿಸಿದ್ದಾರೆ. ಅಲ್ಲದೇ ಕಾಂಗ್ರೆಸ್ ಪಕ್ಷದ ರಾಜಕೀಯ ಮುಖಂಡರ ಮಾತು ಕೇಳಿ ತಹಶೀಲ್ದಾರ್ ಕಚೇರಿಯಲ್ಲಿ ನಕಲಿ ಜಾತಿ ಪ್ರಮಾಣ ಪತ್ರ ನೀಡಲಾಗಿದ್ದು, ತಕ್ಷಣ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಸದಲಗಾ ಬಿಜೆಪಿ ಪುರಸಭೆ ಸದಸ್ಯರು ಆಗ್ರಹಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಅಧಿಕಾರಕ್ಕಾಗಿ ತಂದೆ-ತಾಯಿ ಗೊತ್ತಿಲ್ಲ ಅಂದ್ರು – ನಕಲಿ ಜಾತಿ ಪತ್ರ ನೀಡಿ ಸಿಕ್ಕಿಬಿದ್ರು ಅಗ್ರಹಾರದ ಗಾಯತ್ರಿ

    ಅಧಿಕಾರಕ್ಕಾಗಿ ತಂದೆ-ತಾಯಿ ಗೊತ್ತಿಲ್ಲ ಅಂದ್ರು – ನಕಲಿ ಜಾತಿ ಪತ್ರ ನೀಡಿ ಸಿಕ್ಕಿಬಿದ್ರು ಅಗ್ರಹಾರದ ಗಾಯತ್ರಿ

    ಬೆಂಗಳೂರು: ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಸ್ಪರ್ಧಿಸುವ ವೇಳೆ ಜಾತಿ ಪ್ರಮಾಣ ಪತ್ರ ನೀಡಿಕ್ಕೆ ಸರಿಯಾದ ದಾಖಲೆ ಇಲ್ಲದ ಆರೋಪದಡಿ ಬೆಂಗಳೂರು ನಗರ ಜಿಲ್ಲಾಧಿಕಾರಿಗಳು ಕೆಪಿ ಅಗ್ರಹಾರ ಗಾಯತ್ರಿ ಅವರ ಜಾತಿ ಪ್ರಮಾಣ ಪತ್ರ ರದ್ದುಪಡಿಸಿ ಆದೇಶ ನೀಡಿದ್ದಾರೆ.

    ನಗರದ ಕೆಪಿ ಅಗ್ರಹಾರ ಕಾರ್ಪೊರೇಟರ್ ಎಂ ಗಾಯತ್ರಿ ಗಣೇಶ್ ಅವರ ಜಾತಿ ಪ್ರಮಾಣ ಪತ್ರ ರದ್ದು ಮಾಡಿ ಜಿಲ್ಲಾಧಿಕಾರಿಗಳು ಆದೇಶ ನೀಡಿದ್ದಾರೆ. ಬಿಬಿಎಂಪಿ ಚುನಾವಣೆಯಲ್ಲಿ ಎಸ್‍ಟಿ ಮಹಿಳೆಗೆ ಮೀಸಲಾಗಿದ್ದ ಕೆಪಿ ಅಗ್ರಹಾರ ವಾರ್ಡ್ ನಿಂದ ಎಂ ಗಾಯತ್ರಿ ಅವರು ನಾಯಕ ಜನಾಂಗದ ನಕಲಿ ಜಾತಿ ಪ್ರಮಾಣ ಪತ್ರ ನೀಡಿ ಸ್ಪರ್ಧಿಸಿ ಗೆಲುವು ಪಡೆದಿದ್ದರು. ಈ ವೇಳೆ ದಾಖಲೆ ಪರಿಶೀಲಿಸದೆ ತಹಶೀಲ್ದಾರ್ ರಾಮಲಕ್ಷ್ಮಣ್ ಜಾತಿ ಪ್ರಮಾಣಪತ್ರ ನೀಡಿದ್ದರು.

    ಏನಿದು ಪ್ರಕರಣ:
    ಕಾರ್ಪೊರೇಟರ್ ಎಂ ಗಾಯತ್ರಿ ಗಣೇಶ್‍ಗೆ ತಂದೆ-ತಾಯಿ, ಜಾತಿ ಬಗ್ಗೆ ಮಾಹಿತಿ ಇಲ್ಲ. ಇದೇ ಕಾರಣಕ್ಕೆ ನಾಯಕ ಜಾತಿ ಹೆಸರಿನಲ್ಲಿ ಶಾಲೆಯನ್ನು ಬಳಕೆ ಮಾಡಿ ಜಾತಿ ಪ್ರಮಾಣಪತ್ರ ಮಾಡಲಾಗಿದೆ. ನಗರದ ಕೆಪಿ ಆಗ್ರಹಾರದಲ್ಲಿರುವ ಸಿದ್ದಲಿಂಗೇಶ್ವರ ಶಾಲೆಯಲ್ಲಿ ವ್ಯಾಸಂಗ ನಡೆಸಿರುವ ಕುರಿತು ದಾಖಲೆ ಸೃಷ್ಟಿ ಮಾಡಲಾಗಿದ್ದು, ಆದರೆ ಅವರ ಶೈಕ್ಷಣಿಕ ಆರ್ಹತೆ ಬಗ್ಗೆ ಶಾಲೆಯಲ್ಲಿ ಯಾವುದೇ ಪೂರಕ ಮಾಹಿತಿ ಲಭಿಸದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಈ ಕ್ರಮಕೈಗೊಂಡಿದ್ದಾರೆ.

    ಬಿಬಿಎಂಪಿ ಚುನಾವಣೆ ಸ್ಪರ್ಧೆ ಮಾಡುವ ಉದ್ದೇಶದಿಂದಲೇ 1ನೇ ತರಗತಿಯಿಂದ 5ನೇ ತರಗತಿಯವರೆಗೆ ವ್ಯಾಸಂಗ ಮಾಡಿರುವಂತೆ ದಾಖಲೆ ಸೃಷ್ಟಿಸಲಾಗಿದ್ದು, ನಾಯಕ ಜಾತಿ ಪ್ರಮಾಣ ಪತ್ರ ಪಡೆಯಲು ಸಿದ್ದಲಿಂಗೇಶ್ವರ ಶಾಲೆ ಬಳಕೆ ಮಾಡಿದ್ದಾರೆ. 2015 ಜೂನ್ ನಲ್ಲಿ ಗಾಯಿತ್ರಿ ಅವರು ಜಾತಿ ಪ್ರಮಾಣ ಪತ್ರ ಪಡೆದಿದ್ದು, 2015 ಜುಲೈ ನಲ್ಲಿ ಬಿಬಿಎಂಪಿ ಚುನಾವಣೆ ನಡೆದಿತ್ತು. ಅಂದರೆ ಚುನಾವಣೆಯಲ್ಲಿ ಮೀಸಲಾತಿ ಘೋಷಣೆ ಆದ ಮೇಲೆ ಜಾತಿ ಪ್ರಮಾಣ ಪತ್ರ ಪಡೆಯಲಾಗಿದೆ ಎಂಬುದು ಕಾಣಸಿಗುತ್ತದೆ.

    ಶಾಲೆಯಲ್ಲಿ ವರ್ಗಾವಣೆ ಪ್ರಮಾಣ ಪತ್ರ ಪಡೆಯುವ ವೇಳೆಯೂ 5ನೇ ತರಗತಿ ಪಾಸ್ ಎಂದು ಬರೆಯಲಾಗಿದೆ. ಆದರೆ ದಾಖಲೆಯಲ್ಲಿ ಗಾಯಿತ್ರಿ ಅವರು 5ನೇ ತರಗತಿ ಅನುತ್ತೀರ್ಣ ಎಂದು ನಮೂದಿಸಲಾಗಿದೆ. ಈ ಕುರಿತು ಡಿಡಿಪಿಐ ಹಾಗೂ ಇತರೇ ಅಧಿಕಾರಿಗಳು ವರದಿ ನೀಡಿದ್ದು, ಈ ವರದಿ ಅನ್ವಯ ಜಿಲ್ಲಾಧಿಕಾರಿಗಳು ಆದೇಶ ನೀಡಿದ್ದಾರೆ.

    ಒಂದೊಮ್ಮೆ ಈ ಕುರಿತು ಗಾಯಿತ್ರಿ ಅವರು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ರೂ ಸಹ ವರದಿಯ ಅನ್ವಯ ಅರ್ಜಿ ತಿರಸ್ಕೃತ ಗೊಳ್ಳುವ ಸಾಧ್ಯತೆಯೂ ಇದೇ. ಆರೋಪ ಸಾಬೀತಾದಲ್ಲಿ ಗಾಯಿತ್ರಿ ಅವರು ಈ ಅವಧಿಯಲ್ಲಿ ಪಡೆದಿರುವ ಎಲ್ಲಾ ಸೌಲಭ್ಯಗಳನ್ನ ಹಿಂದಿರುಗಿಸುವ ಅನಿವಾರ್ಯ ಎದುರಾಗಲಿದೆ. ಅಲ್ಲದೇ ಚುನಾವಣೆಯಲ್ಲಿ ಅಕ್ರಮ ನಡೆಸಿರುವ ಆರೋಪದಡಿ 6 ವರ್ಷ ಚುನಾವಣೆಗೆ ಮತ್ತೆ ಸ್ಪರ್ಧೆ ಮಾಡುವಂತಿಲ್ಲ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ಜಾತಿ ಪ್ರಮಾಣ ಪತ್ರಕ್ಕೆ ಅರ್ಜಿ ಸಲ್ಲಿಸಿದ ಸುದೀಪ್!

    ಜಾತಿ ಪ್ರಮಾಣ ಪತ್ರಕ್ಕೆ ಅರ್ಜಿ ಸಲ್ಲಿಸಿದ ಸುದೀಪ್!

    ವಿಜಯಪುರ: ಜಾತಿ ಪ್ರಮಾಣ ಪತ್ರಕ್ಕೆ ಕಿಚ್ಚ ಸುದೀಪ್ ಫೋಟೋ ಹಾಕಿ ವ್ಯಕ್ತಿಯೊಬ್ಬರು ಮುದ್ದೇಬಿಹಾಳ ತಾಲೂಕಿನ ನಾಲತವಾಡ ಉಪ ತಹಶೀಲ್ದಾರ್ ಕಚೇರಿಯಲ್ಲಿ ಅರ್ಜಿ ಸಲ್ಲಿಸಿದ್ದಾರೆ.

    ನಾಲತವಾಡ ಹೋಬಳಿಯ ವಿರೇಶನಗರ ನಿವಾಸಿ ಸಿದ್ದಲಿಂಗಪ್ಪ ಕೋಳೂರ ಹೆಸರಲ್ಲಿ ಅರ್ಜಿ ಸಲ್ಲಿಕೆಯಾಗಿದೆ. ನಂತರ ಪರಿಶೀಲನೆ ನಡೆಸಿದಾಗ ತಮ್ಮ ಫೋಟೋದ ಬದಲಾಗಿ ಸುದೀಪ್ ಫೋಟೋವನ್ನು ಬಳಸಿರುವುದು ತಿಳಿದು ಬಂದಿದೆ. ಮಂಗಳವಾರ ಉಪ ತಹಶೀಲ್ದಾರ್ ಕಚೇರಿಯಲ್ಲಿ ಅರ್ಜಿ ಪರಿಶೀಲನೆ ಮಾಡುವ ವೇಳೆ ಈ ವಿಚಾರ ಬೆಳಕಿಗೆ ಬಂದಿದೆ.

    ಆಗಿದ್ದು ಏನು?: ಸಿದ್ದಲಿಂಗಪ್ಪ ಕಾಂತಪ್ಪ ಕೋಳೂರ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳಿಗೆ ಸೇರಿದ ಜಾತಿ ಪ್ರಮಾಣಪತ್ರಕ್ಕಾಗಿ ಅರ್ಜಿ ಅಲ್ಲಿಸಿದ್ದಾರೆ. ಅರ್ಜಿಯನ್ನ ಸಲ್ಲಿಸಿ ನಂತರ ಕಡ್ಡಾಯವಾಗಿ ಅರ್ಜಿದಾರ ಫೊಟೋವನ್ನು ಹಾಕಬೇಕು. ಆದರೆ ಅರ್ಜಿಗಳನ್ನು ಡೌನ್‍ಲೋಡ್ ಮಾಡಿ ನೋಡಿದಾಗ ಸುದೀಪ್ ಫೋಟೋ ಕಂಡು ಬಂದಿದೆ. ಇದನ್ನು ನೋಡಿ ಉಪ ತಹಶೀಲ್ದಾರ್ ದಂಗಾಗಿದ್ದು, ಸುದೀಪ್ ಫೋಟೋ ಹೇಗೆ ಬಂತು ಎಂದು ಪರಿಶೀಲಿಸಿ ಅಂತಾ ಬಸವರಾಜ ಭದ್ರಣ್ಣವರಿಗೆ ಸೂಚಿಸಿದ್ದಾರೆ.

    ಆಗ ಸಿದ್ದಲಿಂಗಪ್ಪ ಕೋಳೂರ ನಾಗಬೇನಾಳದಲ್ಲಿ ಹೊಸದಾಗಿ ಸಾಮಾನ್ಯ ಸೇವಾಕೇಂದ್ರವನ್ನ ಪ್ರಾರಂಭಿಸಿದ್ದು, ತಾವೇ ಅರ್ಜಿ ಸಿದ್ಧ ಪಡಿಸಿ ಅದಕ್ಕೆ ಬೇಕಾದ ನಮೂನೆಯಲ್ಲಿ ಜಾತಿ ಪ್ರಮಾಣ ಪತ್ರವನ್ನ ಸಿದ್ಧ ಪಡಿಸಿದ್ದಾರೆ. ನಂತರ ತಾವೇ ತಮ್ಮ ಫೋಟೋ ಬದಲು ಪ್ರಾಯೋಗಿಕವಾಗಿ ಸುದೀಪ್ ಫೋಟೋ ಹಾಕಿದ್ದಾರೆ. ಆದರೆ ನಾಡಕಚೇರಿಗೆ ಆನ್‍ಲೈನ್‍ನಲ್ಲಿ ಅರ್ಜಿ ರವಾನಿಸುವಾಗ ತನ್ನ ಚಿತ್ರವನ್ನು ಅಪ್ಲೋಡ್ ಮಾಡದೇ ಸುದೀಪ್ ಚಿತ್ರವನ್ನು ಹಾಕಿ ಎಡವಟ್ಟು ಮಾಡಿಕೊಂಡಿದ್ದಾರೆ. ಇದನ್ನು ಓದಿ: ರಾಜಕೀಯಕ್ಕೆ ಬರ್ತಾರಾ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್?