ಹಾವೇರಿ: ಜಾತಿ ಜನಗಣತಿಯು (Caste Census) ಯಾವುದೇ ಒಂದು ಸಮಾಜದ ಪರ ಅಥವಾ ವಿರೋಧ ನಿರ್ಣಯ ಮಾಡುವುದಲ್ಲ. ಎಲ್ಲರ ವಿಚಾರಗಳ ಒಳಗೊಂಡು ದೇಶ ನಡೆಸಬೇಕಾಗುತ್ತದೆ ಎಂದು ಸಚಿವ ಶಿವಾನಂದ ಪಾಟೀಲ್ (Shivanand Patil) ಹೇಳಿದರು.
ಹಾವೇರಿಯಲ್ಲಿ (Haveri) ಮಾಧ್ಯಮದವರೊಂದಿಗೆ ಜಾತಿ ಜನಗಣತಿ ವರದಿಯಲ್ಲಿ ಮುಸ್ಲಿಂ ಪ್ರಾಬಲ್ಯ ಹೆಚ್ಚಿಸುವ ಷಡ್ಯಂತ್ರ ನಡೆದಿದೆ ಎಂಬ ಆರೋಪದ ಕುರಿತು ಮಾತನಾಡಿದರು. ಎಲ್ಲರ ವಿಚಾರ ಒಳಗೊಂಡು ದೇಶ ನಡೆಸಬೇಕಾಗುತ್ತದೆ. ಇದರ ಜವಾಬ್ದಾರಿಯು ಸಿಎಂ ಹಾಗೂ ಪ್ರಧಾನಿಯವರ ಮೇಲೂ ಇದೆ ಎಂದು ತಿಳಿಸಿದರು. ಇದನ್ನೂ ಓದಿ: ಮೋದಿ ಇನ್ನೊಂದು ವರ್ಷವಷ್ಟೇ ಪ್ರಧಾನಿಯಾಗಿರುತ್ತಾರೆ: ಸಂತೋಷ್ ಲಾಡ್
ಜಾತಿ ಗಣತಿ ವರದಿ ಬಗ್ಗೆ ಸಂಪುಟ ಸಭೆಯಲ್ಲಿ ಚರ್ಚೆ ಆಗಲಿದೆ. ಅಂಗೀಕಾರ ಮಾಡುವ ಬಗ್ಗೆ ಸಂಪುಟದಲ್ಲಿ ನಿರ್ಣಯ ತೆಗೆದುಕೊಳ್ಳಲಾಗುತ್ತದೆ. ಎಲ್ಲರ ಅಭಿಪ್ರಾಯ ಆಧರಿಸಿಯೇ ನಿರ್ಣಯ ತೆಗೆದುಕೊಳ್ಳಲಾಗುವುದು. ವರದಿ ಬಗ್ಗೆ ಪುನರ್ ವಿಮರ್ಶೆ ಮಾಡಬಹುದು. ಸಾಧಕ ಬಾಧಕಗಳ ಕುರಿತು ಚರ್ಚೆ ಆಗುತ್ತವೆ ಎಂದು ಹೇಳಿದರು.
ಬೆಂಗಳೂರು: ಸಮೀಕ್ಷೆ ಮಾಡಿದಾಗ ಆರು ಕೋಟಿಯಿದ್ದ ರಾಜ್ಯದ ಜನಸಂಖ್ಯೆ ಈಗ ಏಳು ಕೋಟಿ ಆಗಿದೆ. ಉಳಿದ ಒಂದು ಕೋಟಿ ಜನರನ್ನು ಸಮುದ್ರಕ್ಕೆ ಬಿಡಬೇಕಾ ಎಂದು ವಿಪಕ್ಷ ನಾಯಕ ಆರ್.ಅಶೋಕ್ (R Ashok) ಪ್ರಶ್ನಿಸಿ ಆಕ್ರೋಶ ವ್ಯಕ್ತಪಡಿಸಿದರು.
ಇಂದು ಜಾತಿ ಜನಗಣತಿ ವರದಿ (Caste Census) ಸಂಬಂಧ ರಾಜ್ಯ ಬಿಜೆಪಿ (BJP) ಕಚೇರಿಯಲ್ಲಿ ಬಿವೈ ವಿಜಯೇಂದ್ರ, ಆರ್.ಅಶೋಕ್ ನೇತೃತ್ವದಲ್ಲಿ ವರದಿಯ ಕುರಿತು ಅನೌಪಚಾರಿಕ ಚರ್ಚೆ ನಡೆಸಲಾಯಿತು. ಸರ್ಕಾರದ ತೀರ್ಮಾನ ನೋಡಿಕೊಂಡು ಮುಂದುವರೆಯಲು ಬಿಜೆಪಿ ನಿರ್ಧರಿಸಿದೆ.ಇದನ್ನೂ ಓದಿ: ಪೀಣ್ಯಾದ ಚಿತಾಗಾರದಲ್ಲಿ ನೆರವೇರಿದ ಬ್ಯಾಂಕ್ ಜನಾರ್ಧನ್ ಅಂತ್ಯಕ್ರಿಯೆ
ಸಭೆ ಬಳಿಕ ಆರ್.ಅಶೋಕ್ ಮಾತನಾಡಿ, ಸಿದ್ದರಾಮಯ್ಯ ಮುಸ್ಲಿಮರ ಹಿಂದೆ ಟೋಪಿ ಹಾಕಿಕೊಂಡು ಯಾಕೆ ಬಿದ್ದಿದ್ದಾರೆ? ಸಮೀಕ್ಷೆ ಮಾಡಿದಾಗ ಆರು ಕೋಟಿಯಿದ್ದ ರಾಜ್ಯದ ಜನಸಂಖ್ಯೆ ಈಗ ಏಳು ಕೋಟಿ ಆಗಿದೆ. ಉಳಿದ ಒಂದು ಕೋಟಿ ಜನರನ್ನು ಸಮುದ್ರಕ್ಕೆ ಬಿಡಬೇಕಾ? ಈ ಜಾತಿ ಜನಗಣತಿ ವರದಿ ವಿಚಾರದಲ್ಲಿ ಡಿಕೆಶಿ ನೇತೃತ್ವದಲ್ಲಿ ಸಂಪುಟ ಉಪಸಮಿತಿ ಮಾಡುತ್ತಾರೆ ಎಂದು ಲೇವಡಿ ಮಾಡಿದರು.
ಇದೇ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ (BY Vijayendra) ಮಾತನಾಡಿ, ಜಾತಿ ಜನಗಣತಿ ವರದಿ ಬಗ್ಗೆ ಸರ್ಕಾರ ಏನು ತೀರ್ಮಾನ ಮಾಡುತ್ತದೋ ಮಾಡಲಿ. ಸರ್ಕಾರ ತನ್ನ ನಿರ್ಧಾರ ಅಂತಿಮವಾಗಿ ತಿಳಿಸಿದ ನಂತರ ನಮ್ಮ ನಿಲುವು ನಾವು ತೆಗೆದುಕೊಳ್ಳುತ್ತೇವೆ. ಇದು ಹತ್ತು ವರ್ಷ ಹಳೆಯ ವರದಿ. ಇದು ಔಟ್ ಡೇಟೆಡ್ ವರದಿ, ಮತ್ತೊಮ್ಮೆ ಸಮೀಕ್ಷೆ ಮಾಡಲಿ ಎಂದು ಆಗ್ರಹಿಸಿದರು.
ಕಾಂಗ್ರೆಸ್‌ನಲ್ಲಿಯೇ ವರದಿ ಬಗ್ಗೆ ಒಮ್ಮತಾಭಿಪ್ರಾಯ ಇಲ್ಲ. ಮುಸ್ಲಿಮರು ನಂಬರ್ 1 ಎಂದು ವರದಿಯಲ್ಲಿ ಹೇಳಿದ್ದಾರೆ. ಹಾಗಾದರೆ ಮುಸ್ಲಿಮರಿಗೆ ಯಾಕೆ ಬೇಕು ಅಲ್ಪಸಂಖ್ಯಾತರ ಮಾನ್ಯತೆ? ನಾವು ಒಟ್ಟಿಗೆ ಕೂತು ಪಕ್ಷದ ಅಭಿಪ್ರಾಯ ಏನಿರಬೇಕು ಎಂದು ಚರ್ಚೆ ಮಾಡುತ್ತೇವೆ ಎಂದು ತಿಳಿಸಿದರು.ಇದನ್ನೂ ಓದಿ: ಏ. 15ರಿಂದ ದೆಹಲಿ ಏರ್‌ಪೋರ್ಟ್‌ನ ಟರ್ಮಿನಲ್ 2ರಲ್ಲಿ ವಿಮಾನಯಾನ ಸ್ಥಗಿತ
– ವರದಿ ಓದದೇ ಅವೈಜ್ಞಾನಿಕ ಅಂದ್ರೆ ಹೇಗೆ? ಎಂದು ಸಚಿವರ ಪ್ರಶ್ನೆ – ಮುಸ್ಲಿಮರು ಮುಸ್ಲಿಂ ಅಂತ ಬರೆದುಕೊಟ್ಟಿದ್ದಾರೆ
ಗದಗ: ಜಾತಿ ಜನಗಣತಿ ಅವೈಜ್ಞಾನಿಕ ಹೇಗೆ ಆಗುತ್ತದೆ. ಅವೈಜ್ಞಾನಿಕ, ತಪ್ಪು ವರದಿ, ಯಾರೋ ಹೇಳಿ ಬರೆಸಿದ್ದಾರೆ ಎಂಬ ಮಾತುಗಳು ಸಮಾಜವನ್ನು ತಪ್ಪು ದಾರಿಗೆ ಎಳೆಯುವ ಪ್ರಯತ್ನ. ಇವೆಲ್ಲಾ ಸಮಾಜ ದ್ರೋಹಿ ಮಾತುಗಳು ಎಂದು ಕಾನೂನು ಸಚಿವ ಹೆಚ್.ಕೆ.ಪಾಟೀಲ್ (H K Patil) ಹೇಳಿದರು.
ಗದಗದಲ್ಲಿ (Gadag) ಮಾಧ್ಯಮಗಳೊಂದಿಗೆ ಜಾತಿ ಜನಗಣತಿ ವಿಚಾರದಲ್ಲಿ ಬಿಜೆಪಿ, ಜೆಡಿಎಸ್ ನಾಯಕರ ಹೇಳಿಕೆ ಕುರಿತು ಅವರು ಮಾತನಾಡಿದರು. ಜಾತಿಗಣತಿ (Caste Census) ವಿವರಗಳು ಬಹುತೇಕ ಬಹಿರಂಗಗೊಂಡಿವೆ. ನಮಗೂ ಅದರ ಪ್ರತಿಗಳು ದೊರೆತಿವೆ. ಏ.17ರಂದು ವಿಶೇಷ ಕ್ಯಾಬಿನೆಟ್ ಸಭೆ ಕರೆಯಲಾಗಿದೆ. ಇದರಲ್ಲಿ ರಾಜಕಾರಣ ಮಾಡಲು ಹೋಗಬಾರದು. ಸಮೀಕ್ಷೆಗಳು ಏನಿವೆ ಎಂಬುದು ಗೊತ್ತಿಲ್ಲದೆ ತಮ್ಮ ಅಭಿಪ್ರಾಯಗಳನ್ನು ಕೊಡುತ್ತಿದ್ದಾರೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಇದು ಜಾತ್ಯಾತೀತ ರಾಷ್ಟ್ರ, ಜಾತಿಗಣತಿಗೆ ಯಾವುದೇ ಮಹತ್ವ ಇಲ್ಲ: ಡಾ.ಮಂಜುನಾಥ್
ಸರ್ಕಾರ ಇನ್ನೂ ಏನು ನಿರ್ಣಯ ಮಾಡಿಲ್ಲ. ಏನು ಸಮೀಕ್ಷೆ ಆಗಿದೆ ಅದನ್ನು ನಾವು ಮಂಡನೆ ಮಾಡಿದ್ದೇವೆ. ಸಿದ್ದರಾಮಯ್ಯ (Siddaramaiah) ಅವರ ಮನೆಯಲ್ಲಿ ಜಾತಿ ಗಣತಿ ಬರೆದಿದ್ದಾರೆ ಎಂದು ಆರ್. ಅಶೋಕ್ (R Ashok) ಹೇಳಿದ್ದಾರೆ. ಯಾವುದಾದರೂ ವರದಿ ಮುಖ್ಯಮಂತ್ರಿ ಮನೆಯಲ್ಲಿ ಬರೆಯಲು ಸಾಧ್ಯನಾ. ಅದರಲ್ಲಿ ತಕರಾರು ಇದ್ದರೆ, ಹೀಗೆ ಮಾಡಿಲ್ಲ. ಹೀಗೆ ಮಾಡಿ ಎಂಬ ಅಭಿಪ್ರಾಯ ಸೂಚಿಸಿರಿ. ಅದನ್ನು ಸರಿಪಡಿಸುವುದು ಇದ್ದರೆ ಮಾಡುತ್ತೇವೆ ಎಂದರು. ಇದನ್ನೂ ಓದಿ: SRH ತಂಡ ಉಳಿದುಕೊಂಡಿದ್ದ ಹೈದರಾಬಾದ್ ಹೋಟೆಲ್‌ನಲ್ಲಿ ಅಗ್ನಿ ಅವಘಡ
ಸರ್ಕಾರ ಇಷ್ಟೆಲ್ಲಾ ಅವಕಾಶ ಕೊಟ್ಟಾಗಲೂ ರಾಜಕೀಯ ಮಾಡುವುದು ಸರಿಯಾದ ಕ್ರಮವಲ್ಲ. ಅವೈಜ್ಞಾನಿಕ ಯಾವುದು ಇದೆ. ವರದಿ ಓದದೇ ಅವೈಜ್ಞಾನಿಕ ಅಂದ್ರೆ ಹೇಗೆ? ನಿಮ್ಮ ಮನೆಗಳಲ್ಲಿ ಗಣತಿ ಮಾಡಿದ್ದರೆ ನಮ್ಮದು ಈ ಜಾತಿ ಅಂತ ಅದಕ್ಕೆ ನಿಮ್ಮ ಸಹಿ ಇದೆ. ಹೀಗಾಗಿ ಅದು ಹೇಗೆ ಅವೈಜ್ಞಾನಿಕ ಆಗುತ್ತದೆ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಜಾತಿಗಣತಿ ಹೊರಗಡೆ ತರಲು ಕಷ್ಟ, ಆದ್ರೂ ಸಿಎಂ ತಂದಿದ್ದಾರೆ: ಪರಮೇಶ್ವರ್
ಇನ್ನೂ ಜಾತಿಗಣತಿ ಬಗ್ಗೆ ಕೇಂದ್ರ ಸಚಿವ ವಿ.ಸೋಮಣ್ಣ (V Somanna) ಹೇಳಿಕೆ ಕುರಿತು ಪ್ರತಿಕ್ರಿಯಿಸಿ, ಸಿಎಂ ಸಿದ್ದರಾಮಯ್ಯ ಅವರು ಜಾತಿಗಣತಿ ವಿಚಾರದಲ್ಲಿ ಸಾಮಾಜಿಕ ನ್ಯಾಯಕ್ಕಾಗಿ ಏನು ಬದ್ಧತೆ ಇದೆ. ಆ ಬದ್ಧತೆಯನ್ನು ಸಿಎಂ ಅಭಿವ್ಯಕ್ತ ಮಾಡಿದ್ದಾರೆ. ಸಿಎಂ ರಾಜಕೀಯ ಲಾಭ-ನಷ್ಟ ಲೆಕ್ಕ ಹಾಕಿಲ್ಲ ಎಂದರು. ಇದನ್ನೂ ಓದಿ: ಮುಸ್ಲಿಮರು ಜಾಸ್ತಿಯಿದ್ದರೆ ಅಲ್ಪಸಂಖ್ಯಾತರಲ್ಲ ಎಂದು ಘೋಷಿಸಿ: ಛಲವಾದಿ ನಾರಾಯಣಸ್ವಾಮಿ ಸವಾಲ್
ಜಾತಿ-ಉಪಜಾತಿಗಳ ವಿಂಗಡನೆ ಮಾಡಿದ್ದು, ಮುಸ್ಲಿಂ ವಿಂಗಡನೆ ಯಾಕಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಮುಸ್ಲಿಮರು ಮುಸ್ಲಿಂ ಅಂತ ಬರೆದುಕೊಟ್ಟಿದ್ದಾರೆ. ನಿಮ್ಮ ಜಾತಿ ಯಾವುದು ಎಂಬುದನ್ನು ನೀವೇ ಬರೆದು ಕೊಟ್ಟಿದ್ದಿರಲ್ಲ. ನೀವೇ ಜಾತಿ-ಉಪಜಾತಿಗಳನ್ನು ವಿಂಗಡನೆ ಮಾಡಿಕೊಂಡರೇ ಯಾರು ಏನು ಮಾಡಬೇಕು. ನೀವೇ ಹೇಳಿದ್ದನ್ನು ತೆಗೆದುಕೊಂಡರೇ ಅದು ಅವೈಜ್ಞಾನಿಕನಾ ಎಂದು ಬಿಜೆಪಿ ನಾಯಕರ ಹೇಳಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ವಕ್ಫ್ ಹೆಸ್ರಲ್ಲಿ ಬಡವರ ಭೂಮಿ ಕಿತ್ತುಕೊಳ್ಳಲು ಸಾಧ್ಯವಿಲ್ಲ, ಲೂಟಿ ನಿಲ್ಲಲಿದೆ – ನರೇಂದ್ರ ಮೋದಿ
ಪೊಲೀಸರು ಆತ್ಮರಕ್ಷಣೆಗಾಗಿ ಒಳ್ಳೇ ಹೆಜ್ಜೆ ಇಟ್ಟಿದ್ದಾರೆ
ಹುಬ್ಬಳ್ಳಿ (Hubballi) ಬಾಲಕಿ ಸಾವು ಪ್ರಕರಣದ ಕುರಿತು ಮಾತನಾಡಿದ ಅವರು, ಹುಬ್ಬಳ್ಳಿ ಬಾಲಕಿಯದ್ದು ಅತ್ಯಂತ ದುರ್ದೈವದ ಘಟನೆಯಾಗಿದೆ. ಮನುಷ್ಯನಂತೆ ವರ್ತನೆ ಮಾಡದೇ ಇದ್ದ ವ್ಯಕ್ತಿ, ಪೊಲೀಸರ ಮೇಲೆಯೂ ಹಲ್ಲೆ ಮಾಡಲು ಹೋಗಿದ್ದ. ಪೊಲೀಸರು ತಮ್ಮ ಆತ್ಮ ರಕ್ಷಣೆಗಾಗಿ ಒಂದು ಒಳ್ಳೇ ಹೆಜ್ಜೆ ಇಟ್ಟಿದ್ದಾರೆ. ಸಮಾಜದಲ್ಲಿ ಇಂತಹ ಘಟನೆಗಳು ಆಗುವುದು ನಿಲ್ಲಬೇಕು. ಅಂತಹ ಸಮಾಜವನ್ನು ನಾವು ಕಟ್ಟಬೇಕಿದೆ ಎಂದು ಹೇಳಿದರು.
ಬೆಂಗಳೂರು: ಅಂತೂ ಇಂತೂ ಜಾತಿಗಣತಿ ವರದಿ (Caste Census Report) ಕ್ಯಾಬಿನೆಟ್ ನಲ್ಲಿ ಮಂಡನೆ ಆಗಿದೆ. ಆದ್ರೆ ವರದಿ ಏನ್ ಮಾಡಬೇಕು ಎಂಬ ಬಗ್ಗೆ ತೀರ್ಮಾನ ಆಗಲೇ ಇಲ್ಲ. ಮುಂದಿನ ಕ್ಯಾಬಿನೆಟ್ ನಲ್ಲಿ ಮಹತ್ವದ ತೀರ್ಮಾನಕ್ಕೆ ಸರ್ಕಾರ ಮುಂದಾಗಿದ್ದು, ಸಚಿವರಿಗೆಲ್ಲ ವರದಿ ಪ್ರತಿ ಕೊಡಲು ಸಿಎಂ ಸೂಚಿಸಿದ್ದಾರೆ. ಹಾಗಾದ್ರೆ ಜಾತಿ ಗಣತಿ ವರದಿ ಏನ್ ಆಗಬಹುದು? ಅನ್ನೋದರ ಡಿಟೇಲ್ಸ್ ಇಲ್ಲಿದೆ…
ಕರ್ನಾಟಕದಲ್ಲಿ ಸಂಚಲನ ಸೃಷ್ಟಿಸಿರುವ ಜಾತಿಗಣತಿ ವರದಿ ಸಸ್ಪೆನ್ಸ್ ಇನ್ನೂ ಮುಂದುವರಿದಿದೆ. ಕ್ಯಾಬಿನೆಟ್ ನಲ್ಲಿ (Congress Cabinet) ಇವತ್ತು ಹಿಂದುಳಿದ ವರ್ಗಗಳ ಇಲಾಖೆ ಸಚಿವ ಶಿವರಾಜ್ ತಂಗಡಗಿ ಜಾತಿಗಣತಿ ವರದಿ ಬಾಕ್ಸ್ ಸೀಲ್ ಓಪನ್ ಮಾಡಿದ್ರು. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಕಾರ್ಯದರ್ಶಿ ಸಂಜಯ್ ಶೆಟ್ಟಣನವರ್ ವರದಿಯಲ್ಲಿನ ಸಾರಾಂಶವನ್ನ ಕ್ಯಾಬಿನೆಟ್ ಮುಂದೆ ವಿವರಿಸಿದ್ರು. ಇದೇ ವೇಳೆ ಜಾತಿಗಣತಿ ವರದಿ ಅಧ್ಯಯನಕ್ಕೆ ಕ್ಯಾಬಿನೆಟ್ ಸಬ್ ಕಮಿಟಿ ರಚಿಸುವಂತೆಯೂ ಕೆಲ ಸಚಿವರು ಸಲಹೆ ನೀಡಿದ್ರು. ಆದ್ರೆ ಸಿಎಂ ಸಿದ್ದರಾಮಯ್ಯ (Siddaramaiah) ಮಧ್ಯಪ್ರವೇಶ ಮಾಡಿ, ಎಲ್ಲ ಸಚಿವರಿಗೂ ಜಾತಿಗಣತಿ ವರದಿ ಕೊಡುತ್ತೇನೆ. ಮುಂದಿನ ಕ್ಯಾಬಿನೆಟ್‌ಗೆ ಅಧ್ಯಯನ ಮಾಡಿಕೊಂಡು ಬನ್ನಿ. ಏಪ್ರಿಲ್ 17ರ ಗುರುವಾರ ವಿಶೇಷ ಸಂಪುಟ ಸಭೆಯಲ್ಲಿ ವರದಿ ಬಗ್ಗೆ ತೀರ್ಮಾನಿಸೋಣ ಎಂದು ಸೂಚಿಸಿದ್ರು ಎನ್ನಲಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ, ಏಪ್ರಿಲ್ 17ಕ್ಕೆ ತೀರ್ಮಾನ ಮಾಡುವುದಾಗಿ ಸ್ಪಷ್ಟಪಡಿಸಿದರು.
ಇನ್ನೂ ಸಿಎಂ ಸಿದ್ದರಾಮಯ್ಯ ಸಲಹೆಯನ್ನ ಸಚಿವರು ಸಹ ಒಪ್ಪಿದ್ದಾರೆ. ಅಲ್ಲದೇ ಜಾತಿಗಣತಿ ವರದಿ ವೈಜ್ಞಾನಿಕವಾಗಿದೆ. 1.35 ಕೋಟಿ ಕುಟುಂಬಗಳ 5.98 ಕೋಟಿ ಜನರ ಸಮೀಕ್ಷೆ ನಡೆದಿದ್ದು, 54 ಮಾನದಂಡಗಳೊಂದಿಗೆ ಸಮೀಕ್ಷೆ ಮಾಡಿದ್ದಾರೆ. 165 ಕೋಟಿ ರೂ. ವೆಚ್ಚ ಮಾಡಿದ್ದು, ಮುಂದಿನ ಕ್ಯಾಬಿನೆಟ್ ನಲ್ಲಿ ವರದಿ ಅಂಗೀಕರಿಸುತ್ತೇವೆ ಅಂತ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ್ ತಂಗಡಗಿ ಭರವಸೆ ನೀಡಿದ್ದಾರೆ. ಕೆಲ ಸಚಿವರು ಸಹ ಸಹಮತ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ಕಳ್ಳರು ದಲಿತರನ್ನು ತುಳಿದಿದ್ದಾರೆಯೇ ಹೊರತು ಉದ್ಧಾರ ಮಾಡಿಲ್ಲ: ಅಶೋಕ್
ಈ ಹಿಂದೆ ಸೋರಿಕೆಯಾಗಿದ್ದ ಜಾತಿಗಣತಿ..!
> ಪರಿಶಿಷ್ಟ ಜಾತಿ- 1.08 ಕೋಟಿ
> ಪರಿಶಿಷ್ಟ ಪಂಗಡ-42ಲಕ್ಷ
> ಮುಸ್ಲಿಂ – 74
> ಲಿಂಗಾಯತ -73 ಲಕ್ಷ
> ಒಕ್ಕಲಿಗ-70 ಲಕ್ಷ
> ಕುರುಬ-45 ಲಕ್ಷ
> ಮರಾಠ-16 ಲಕ್ಷ
> ಬ್ರಾಹ್ಮಣ-15 ಲಕ್ಷ
> ವಿಶ್ವಕರ್ಮ-15 ಲಕ್ಷ
> ಈಡಿಗ-14 ಲಕ್ಷ
> ಬೆಸ್ತ -14.50 ಲಕ್ಷ
> ಕ್ರೈಸ್ತ-12 ಲಕ್ಷ
> ಗೊಲ್ಲ(ಯಾದವ)-10.50 ಲಕ್ಷ
> ಉಪ್ಪಾರ, ಮಡಿವಾಳ, ಅರೆ ಅಲೆಮಾರಿ- ತಲಾ 7 ಲಕ್ಷ
> ಕುಂಬಾರ, ತಿಗಳರು- ತಲಾ 5 ಲಕ್ಷ
> ಜೈನ-3 ಲಕ್ಷ
– ಜಾತಿಗಣತಿ ವರದಿ ಬಿಡುಗಡೆ ಆದರೆ ಸಿದ್ದರಾಮಯ್ಯ ಖಳನಾಯಕ ಆಗ್ತಾರೆ ಎಂದ ಸಂಸದ
ಚಿಕ್ಕಬಳ್ಳಾಪುರ: ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ಚಿಕ್ಕಬಳ್ಳಾಪುರ ಸಂಸದ ಡಾ.ಕೆ ಸುಧಾಕರ್ ವಾಗ್ದಾಳಿ ನಡೆಸಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಭವನದಲ್ಲಿ ಸಾವರ್ವಜನಿಕರ ಕುಂದುಕೊರತೆಗಳನ್ನ ಆಲಿಸಿ ಮಾತನಾಡಿದ ಸಂಸದ ಸುಧಾಕರ್. ಶಾಸಕ ಪ್ರದೀಪ್ ಈಶ್ವರ್‌ಗೆ ಒಂದು ಡಜನ್ ಬಳೆ ಕೊಡಿಸ್ತಿನಿ ಹಾಕಿಕೊಳ್ಳೊಕೆ ಹೇಳಿ. ಬುಧವಾರ ಶನಿವಾರ ಚಿಕ್ಕಬಳ್ಳಾಪುರದಲ್ಲಿ ಸಂತೆ, ಸೋಮವಾರ ಪೆರೇಸಂದ್ರದಲ್ಲಿ ಸಂತೆ. ಸಂತೆಯಲ್ಲಿ ಒಳ್ಳೆ ಬಳೆ ಕೊಡಿಸ್ತಿನಿ ಹಾಕಿಕೊಳ್ಳೊಕೆ ಹೇಳಿ ಎಂದು ವಾಗ್ದಾಳಿ ನಡೆಸಿದರು.
ಅಂದಹಾಗೆ ಚಿಕ್ಕಬಳ್ಳಾಪುರದಲ್ಲಿ ಆಡಳಿತ ವ್ಯವಸ್ಥೆ ಹಾಳಾಗಿದೆ. ಜನ ಸಾಮಾನ್ಯರು ಕೆಲಸ ಕಾರ್ಯಗಳಿಗೆ ಅಲೆದಾಡುತ್ತಿದ್ದಾರೆ. ಕ್ರಷರ್ ಟಿಪ್ಪರ್ ಗಳಿಗೆ ಕಡಿವಾಣ ಹಾಕಲು ಸಾಧ್ಯ ಆಗ್ತಿಲ್ಲವಂತೆ ಹಾಗಾಗಿ ಕೈಗೆ ಬಳೆ ತೊಟ್ಟುಕೊಳ್ಳಲಿ ಅಂತ ಟಾಂಗ್ ಕೊಟ್ಟಿದ್ದಾರೆ.
ಸಿದ್ದರಾಮಯ್ಯ ಖಳನಾಯಕ ಆಗ್ತಾರೆ:
ಜಾತಿ ಜನಗಣತಿ ಬಿಡುಗಡೆ ಮಾಡಿದ್ರೆ ಸಿಎಂ ಸಿದ್ದರಾಮಯ್ಯ ಇತಿಹಾಸದಲ್ಲಿ ಖಳ ನಾಯಕ ಆಗ್ತಾರೆ. ಯಾರೊ ರಾಜಕೀಯ ನಾಯಕರ ಆಣತಿಯಂತೆ ಜಾತಿ ಲೆಕ್ಕಾಚಾರ ಬರೆಸಲಾಗಿದೆ. ರಾಜ್ಯದಲ್ಲಿ ಯಾರ ಮನೆಗೆ ಹೋಗಿ ಸರ್ವೆ ಮಾಡಲಾಗಿದೆ ಹೇಳಿ? ನನ್ನ ಮನೆಗೆ ಬಂದು ಗಣತಿ ಮಾಡಿಲ್ಲ. ಕೆಳಜಾತಿ ಮೇಲ್ಜಾತಿ ಮಧ್ಯೆ ಘರ್ಷಣೆ ಮಾಡಿಸುವ ಹುನ್ನಾರದಿಂದ ಜಾತಿ ಜನಗಣತಿ ಬಿಡುಗಡೆ ಮಾಡ್ತಿದ್ದಾರೆ. ಕಾಂಗ್ರೆಸ್‌ನ ಮೂವರು ಮಂತ್ರಿಗಳು ಸಹ ಜಾತಿ ಜನಗಣತಿ ಬಿಡುಗಡೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ದೆಹಲಿಯ ಕಾಂಗ್ರೆಸ್‌ನಲ್ಲೂ ಒಮ್ಮತವಿಲ್ಲ. ಮತ್ತೆ ಹೇಗೆ? ಜಾತಿ ಜನಗಣತಿ ವರದಿ ಬಿಡುಗಡೆ ಮಾಡ್ತಾರೆ ಎಂದು ಪ್ರಶ್ನೆ ಮಾಡಿದರು.
ಕೋವಿಡ್ ಹಗರಣ ಪ್ರಕರಣ: ಸರ್ಕಾರದ ವಿರುದ್ಧ ಸುಧಾಕರ್ ವಾಗ್ದಾಳಿ:
ಕೊವಿಡ್ ಹಗರಣದ ವರದಿ ಪರಿಶೀಲನೆಗೆ 7 ಜನ ಸಚಿವರ ತಂಡ ನೇಮಕ ವಿಚಾರಕ್ಕೆ ಚಿಕ್ಕಬಳ್ಳಾಪುರದಲ್ಲಿ ಸಂಸದ ಡಾ.ಕೆ.ಸುಧಾಕರ್ ಪ್ರತಿಕ್ರಿಯಿಸಿದ್ದಾರೆ. 7 ಜನ ಸಚಿವರು ಒಂದೊಂದು ಪೇಜ್ ಅನ್ನು ಅಧ್ಯಯನ ಮಾಡಲಿ. ಇವರು ಮಾಡೋ ಘನಂಧಾರಿ ಕೆಲಸದಿಂದ ಹಿರಿಯ ಅಧಿಕಾರಿಗಳು ಬೇಸರ ಪಟ್ಟುಕೊಂಡಿದ್ದಾರೆ. ಅಂದು ಕೋವಿಡ್ ನಿಯಂತ್ರಣದಲ್ಲಿ ರಾಜ್ಯದ ಎಲ್ಲಾ ಹಿರಿಯ ಅಧಿಕಾರಿಗಳು ಭಾಗಿಯಾಗಿದ್ರು. ಪರೋಕ್ಷವಾಗಿ ಅಧಿಕಾರಿಗಳ ಕೈ ಕಟ್ಟಿ ಹಾಕೊ ಕೆಲಸ ಮಾಡಲಾಗ್ತಿದೆ ಎಂದು ಟೀಕೆ ಮಾಡಿದ್ದಾರೆ.
ಬೆಂಗಳೂರು: ಜಾತಿ ಜನಗಣತಿ ವರದಿ (Caste Census Report) ಜಾರಿ ಮಾಡಲೆಬೇಕು ಎಂದು ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ (B.K.Hariprasad) ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶುಕ್ರವಾರ ಸಿಎಂ ಸಿದ್ದರಾಮಯ್ಯ (Siddaramaiah) ಅವರನ್ನು ಭೇಟಿಯಾಗಿದ್ದೆ. ಅ.7ರಂದು ಹಿಂದುಳಿದ ವರ್ಗಗಳ ಹಾಲಿ ಹಾಗೂ ಮಾಜಿ ಶಾಸಕರು ಭೇಟಿಯಾಗಿ ಜಾತಿಗಣತಿ ವರದಿ ಜಾರಿಗೆ ಒತ್ತಾಯಿಸಿದ್ದೆವು. ಆಗ 18ರಂದು ಕ್ಯಾಬಿನೆಟ್‌ಗೆ ತರುತ್ತೇವೆ ಎಂದು ಸಿಎಂ ಹೇಳಿದ್ದರು. ವರದಿ ಸಂಬಂಧ ಏನು ಕ್ರಮ ಕೈಗೊಂಡಿದ್ದಾರೆ? ಎಂದು ಪ್ರಶ್ನಿಸಿದ್ದಾರೆ.
ಕೆಲ ಸಮುದಾಯದ ಮುಖಂಡರು ವಿರೋಧ ಮಾಡಿದ್ದಾರೆ. ಈ ಸಂಬಂಧ ಭಾನುವಾರ ಎರಡು ಸಮುದಾಯಗಳ ಸಭೆ ಕರೆದಿದ್ದೇನೆ. ಈಗ ಉಪ ಚುನಾವಣೆ ನೀತಿಸಂಹಿತೆ ಜಾರಿಯಲ್ಲಿದೆ. ಈ ಹಂತದಲ್ಲಿ ಏನನ್ನೂ ಹೇಳಲು ಸಾಧ್ಯವಿಲ್ಲ ಎಂದು ಹೇಳಿದ್ದರು. ಭೂ ಸುಧಾರಣಾ ಕಾಯ್ದೆ, ಬ್ಯಾಂಕ್‌ಗಳ ರಾಷ್ಟ್ರೀಕರಣ ಸಂದರ್ಭದಲ್ಲೂ ತೀವ್ರ ವಿರೋಧ ವ್ಯಕ್ತವಾಗಿತ್ತು. ಆದರೂ ಕಾಂಗ್ರೆಸ್ ಪಕ್ಷ ಅದನ್ನು ಜಾರಿಗೆ ತಂದಿತ್ತು. ಪ್ರಜಾಪ್ರಭುತ್ವದಲ್ಲಿ ಒತ್ತಡ ಬರೋದು ಸಹಜ. ಜಾತಿಗಣತಿ ವರದಿಯನ್ನ ಜಾರಿಗೆ ತರಲೇಬೇಕು ಎಂದು ಅವರು ಹೇಳಿದ್ದಾರೆ.
ಮುಡಾ ಕಚೇರಿ ಮೇಲೆ ಇ.ಡಿ ದಾಳಿ ವಿಚಾರವಾಗಿ, ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಇ.ಡಿ ಹಾಗೂ ಸಿಬಿಐ ದುರುಪಯೋಗವಾಗುತ್ತಿದೆ. ಇ.ಡಿ ಒಂದು ರೀತಿ ವಾಷಿಂಗ್ ಮಷಿನ್ ಇದ್ದಂತೆ. ಕರೆದುಕೊಂಡು ಹೋಗಿ ರುಬ್ಬಿ ಬಾಯ್ಬಿಡಿಸಿ ಕಳಿಸುತ್ತಾರೆ. ಈಗ ಅಂತಹವರು ಯಾರೂ ಇಲ್ಲ. ಇ.ಡಿ ದಾಳಿ ಮಾಡಬೇಕಿರೋದು ಪ್ರಹ್ಲಾದ್ ಜೋಶಿಯವರ ಮನೆ ಮೇಲೆ. 2 ಕೋಟಿ ರೂ. ಆರೋಪ ಎದುರಾಗಿದೆ. ಹಿಂದೂ ನಾವೆಲ್ಲಾ ಒಂದು ಅನ್ನೋರು ಸ್ವಂತ ತಮ್ಮನಿಗೂ ನನಗೂ ಸಂಬಂಧವಿಲ್ಲ ಎನ್ನುತ್ತಾರೆ. ನೈತಿಕತೆ ಪಾಠ ಹೇಳುವ ಜೋಶಿ ವಿರುದ್ಧ ಇನ್ನೂ ಕುಮಾರಸ್ವಾಮಿ ಪಾರ್ಥೇನಿಯಂಗೆ ಹೋಲಿಸಿದ್ರು. ನಾನು ಇನ್ನೊಂದು ಹೆಜ್ಜೆ ಮುಂದೆ ಹೋಗಿ ಹೇಳ್ತೀನಿ ಜೋಶಿ ಪ್ಯಾರೆಸೈಟ್, ಅವರು ಹೋದ ಕಡೆ ಪಕ್ಷ ಬೆಳೆಯಲೇ ಇಲ್ಲ ಎಂದು ವ್ಯಂಗ್ಯವಾಡಿದ್ದಾರೆ.
– SSLC ಫಲಿತಾಂಶ ಹೆಚ್ಚಿಸಲು ಟೆಸ್ಟ್ ಸಿರೀಸ್ ಸ್ಕೀಂ ಚಾಲನೆಗೆ ಮುಂದಾದ ಶಾಸಕ
ಚಿಕ್ಕಬಳ್ಳಾಪುರ: ಜಾತಿ ಜನಗಣತಿ ವರದಿ (Caste Census Report) ಜಾರಿಯಾದ್ರೆ ನಮ್ಮ ಸಮುದಾಯಕ್ಕೆ ಒಳಿತಾಗುವ ನಂಬಿಕೆಯಿದೆ ಎಂದು ಶಾಸಕ ಪ್ರದೀಪ್ ಈಶ್ವರ್ (Pradeep Eshwar) ತಿಳಿಸಿದ್ದಾರೆ.
ಈಗಾಗಲೇ ನಾನು ಸಿಎಂ ಸಿದ್ದರಾಮಯ್ಯನವರ ಬಳಿ ನನ್ನ ಸಮುದಾಯಕ್ಕೆ ಉದ್ಯೋಗದ ವಿಚಾರದಲ್ಲಿ 2ಎ ಮೀಸಲಾತಿಗೆ ಬೇಡಿಕೆ ಇಟ್ಟಿದ್ದೇನೆ. ಹೀಗಾಗಿ ಜಾತಿಗಣತಿ ಬಿಡುಗಡೆ ಆದರೆ ನಮ್ಮ ಸಮುದಾಯಕ್ಕೆ ಒಳಿತಾಗಲಿದೆ. ನನ್ನ ಸಮುದಾಯದ ಪರವಾಗಿ ಕೇಳೋದು ನನ್ನ ಧರ್ಮ ಕರ್ತವ್ಯ. ಹಾಗಂತ ವರದಿ ಜಾರಿ ಮಾಡಲೇಬೇಕು ಅಂತ ನಾನು ಆದೇಶ ಮಾಡೋಕಾಗುತ್ತಾ? ಮುಂದಿನ ಬಾರಿ ಎಂಎಲ್‍ಎ ಆಗೋವಷ್ಟರಲ್ಲಿ 2ಎ ಮೀಸಲಾತಿ ಜಾರಿ ಆಗುವಂತೆ ಮಾಡ್ತೀನಿ. ಇದು ನನ್ನ ಸಮುದಾಯಕ್ಕೆ ಇದು ನಾನು ಕೊಡುವ ಭರವಸೆ ಎಂದು ಹೇಳಿದ್ದಾರೆ.
ಟೆಸ್ಟ್ ಸಿರೀಸ್ ಸ್ಕೀಂ ಚಾಲನೆಗೆ ಮುಂದಾದ ಶಾಸಕ:
ಇತ್ತೀಚೆಗಷ್ಟೇ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ವಿದ್ಯಾರ್ಥಿಗಳಿಗೆ ವೈಯುಕ್ತಿಕ ಸ್ಕಾಲರ್ ಶಿಫ್ ಸ್ಕೀಂ ಘೋಷಣೆ ಮಾಡಿರುವ ಶಾಸಕ ಪ್ರದೀಪ್ ಈಶ್ವರ್, ಈ ಬಾರಿ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ SSLC ಫಲಿತಾಂಶ ಹೆಚ್ಚಳ ಮಾಡಲು ಎಂಎಲ್‍ಎ ಪ್ರದೀಪ್ ಈಶ್ವರ್ ಟೆಸ್ಟ್ ಸೀರೀಸ್ ಎಂಬ ಮತ್ತೊಂದು ಹೊಸ ಕಾರ್ಯಕ್ರಮ ಚಾಲನೆಗೆ ಮುಂದಾಗಿದ್ದಾರೆ. ಇದನ್ನೂ ಓದಿ: ಮುಡಾದಲ್ಲಿ ಅಕ್ರಮವಾಗಿಲ್ಲ ಎಂದಾದ್ರೆ ಸೈಟ್ ವಾಪಸ್ ಕೊಟ್ಟಿದ್ದು, ಮರೀಗೌಡ ರಾಜೀನಾಮೆ ಯಾಕೆ? – ಎಸ್ ಮುನಿಸ್ವಾಮಿ
ಕ್ಷೇತ್ರದ 24 ಸರ್ಕಾರಿ ಹಾಗೂ ಸರ್ಕಾರಿ ಅನುದಾನಿತ ಎಲ್ಲಾ ಪ್ರೌಢಶಾಲೆಗಳ 3,000ಕ್ಕೂ ಹೆಚ್ಚು ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ 48 ದಿನವೂ ನಿತ್ಯ ಘಟಕ ಪರೀಕ್ಷೆ ನಡೆಸಲು ತಯಾರಿ ಮಾಡಿಕೊಳ್ಳಲಾಗುತ್ತಿದೆ. ಮುಂದಿನ ತಿಂಗಳ ನವೆಂಬರ್ 04 ರಿಂದ ಡಿಸೆಂಬರ್ 31ರ ವರೆಗೆ ಈ ಘಟಕ ಪರೀಕ್ಷೆಗಳು ನಡೆಯಲಿವೆ. ಪ್ರತಿದಿನವೂ ಆಯಾ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಲಾಗುವುದು. ಆದ್ರೆ ಈ ಪರೀಕ್ಷೆ ನಡೆಸಲು ಬೇಕಾಗುವ ಎಲ್ಲಾ ಪ್ರಶ್ನೆ ಪತ್ರಿಕೆಯ ಜೊತೆಗೆ ಅದರ ಕೆಳಗಡೆಯೇ ಉತ್ತರ ಬರೆಯಲು ಬೇಕಾಗುವಷ್ಟು ಖಾಲಿ ಜಾಗ ಇರುವಂತಹ ಪತ್ರಿಕೆಯನ್ನ ಶಾಸಕ ಪ್ರದೀಪ್ ಈಶ್ವರ್ ತಮ್ಮ ವೈಯುಕ್ತಿಕ ಹಣದಲ್ಲಿ ತಯಾರಿಸಲಿದ್ದಾರೆ.
ಪ್ರತಿದಿನವೂ ಶಾಲೆಗೆ ಪ್ರಶ್ನೆಪತ್ರಿಕೆಗಳನ್ನ ತಲುಪಸಿ ಪರೀಕ್ಷೆ ನಡೆಸಲಾಗುವುದು, ಆಯಾ ದಿನವೇ ಉತ್ತರ ಪತ್ರಿಕೆಗಳನ್ನ ಡಿಡಿಪಿಐ ಕಚೇರಿಗೆ ತಲುಪಿಸಿ ಬೇರೊಂದು ಶಾಲೆಯ ಶಿಕ್ಷಕರು ಅದರ ಮೌಲ್ಯಮಾಪನ ಮಾಡಲಿದ್ದು ವಾರದ ನಂತರ ಫಲಿತಾಂಶ ಪ್ರಕಟಿಸಲಾಗುವುದು. ಇದೇ ರೀತಿ 48 ದಿನ ಇದುವರೆಗೂ ನಡೆದಿರುವ ಪಠ್ಯಕ್ಕೆ ಸಂಬಂಧಿಸಿದ ಪರೀಕ್ಷೆ ನಡೆಸಲಾಗುತ್ತದೆ. ಈ ಹೊಸ ಕಾರ್ಯಕ್ರಮಕ್ಕೆ ಪ್ರಶ್ನೆ ಪತ್ರಿಕೆ ತಯಾರಿಕೆಗೆ 10 ರಿಂದ 15 ಲಕ್ಷಕ್ಕೂ ಹೆಚ್ಚು ಹಣ ಖರ್ಚಾಗಲಿದ್ದು ನನ್ನ ಸ್ವಂತ ಹಣ ಭರಿಸಲಾಗುತ್ತಿದೆ ಅಂತ ಶಾಸಕ ಪ್ರದೀಪ್ ಈಶ್ವರ್ ತಿಳಿಸಿದ್ದಾರೆ.
ಹೀಗಾಗಿ ಈ ಕಾರ್ಯಕ್ರಮ ಚಾಲನೆ ಮಾಡುವ ಸಲುವಾಗಿ ಶನಿವಾರ ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಶಾಸಕ ಪ್ರದೀಪ್ ಈಶ್ವರ್ ಶಾಲೆಯ ಮುಖ್ಯ ಶಿಕ್ಷಕರೊಂದಿಗೆ ಸಂವಾದ ನಡೆಸಿದರು. ಈ ವೇಳೆ ಶಿಕ್ಷಕರು, ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಶಾಲೆಗಳಲ್ಲಿ ಶಿಕ್ಷಕರ ಕೊರತೆ, ಅತಿಥಿ ಶಿಕ್ಷಕರಿಗೆ ಕಡಿಮೆ ಸಂಬಳ ಸೇರಿದಂತೆ ಹಲವು ಸಮಸ್ಯೆಗಳ ಬಗ್ಗೆ ಗಮನಕ್ಕೆ ತಂದರು.
ಹಾಸನ: ಜಾತಿ ಜನಗಣತಿ ವರದಿ ಸಿಎಂ ಹಾಗೂ ಡಿಸಿಎಂ ಕೈಯಲ್ಲಿದೆ. ಅದರ ಜಾರಿಯ ಬಗ್ಗೆ ಇಬ್ಬರು ಒಳ್ಳೆಯ ನಿರ್ಧಾರಕ್ಕೆ ಬರಲಿದ್ದಾರೆ ಎಂದು ಸಂಸದ ಶ್ರೇಯಸ್ ಪಟೇಲ್ ಹೇಳಿದ್ದಾರೆ.
ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಾತಿ ಜನಗಣತಿಯ ವರದಿ ಜಾರಿ ಬಗ್ಗೆ ಸಿಎಂ, ಡಿಸಿಎಂ ಕೈಗೊಳ್ಳುವ ತೀರ್ಮಾನಕ್ಕೆ ನಾವು ಬದ್ಧರಾಗಿರುತ್ತೇವೆ. ಈ ಬಗ್ಗೆ ಅಂತಿಮವಾಗಿ ಕ್ಯಾಬಿನೆಟ್‍ನಲ್ಲಿ ತೀರ್ಮಾನ ಮಾಡಲಾಗುತ್ತದೆ. ಕ್ಯಾಬಿನೆಟ್ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಮಾಡುವ ತೀರ್ಮಾನವೇ ಅಂತಿಮ ಎಂದು ಅವರು ತಿಳಿಸಿದ್ದಾರೆ. ಇದನ್ನೂ ಓದಿ: ಹಾಸನಕ್ಕೆ ರೈಲುಗಳಲ್ಲಿ ಮಾದಕ ವಸ್ತು ಸರಬರಾಜು – ಅಧಿಕಾರಿಗಳಿಗೆ ಶ್ರೇಯಸ್ ಪಟೇಲ್ ಕ್ಲಾಸ್
ಕ್ಯಾಬಿನೆಟ್‍ನಲ್ಲಿ ಒಳ್ಳೆಯ ರೀತಿ ತೀರ್ಮಾನ ಆಗುತ್ತದೆ. ಅದರಲ್ಲಿ ಯಾವುದೇ ಸಂಶಯ ಬೇಡ. ಈ ವಿಚಾರದಲ್ಲಿ ನನ್ನ ವೈಯುಕ್ತಿಕ ತೀರ್ಮಾನ ಒಂದೇ, ರಾಜ್ಯ ಸರ್ಕಾರ, ಸಿಎಂ, ಡಿಸಿಎಂ ತೀರ್ಮಾನವೇ ಅಂತಿಮ. ಅದನ್ನು ಬಿಟ್ಟು ನಾವ್ಯಾರು ಮಾತನಾಡಬಾರದು ಎಂದಿದ್ದಾರೆ.
ಸಚಿವ ಸತೀಶ್ ಜಾರಕಿಹೋಳಿ ಕಾಂಗ್ರೆಸ್ ನಾಯಕರ ಭೇಟಿ ವಿಚಾರಕ್ಕೆ ಸಂಬಂದಿಸಿದಂತೆ, ಈ ಬೆಳವಣಿಗೆಯನ್ನು ನಾನು ಮಾಧ್ಯಮಗಳಲ್ಲಿ ನೋಡಿದ್ದೇನೆ. ಸಿಎಂ ಸೀಟ್ ಎಲ್ಲಿ ಖಾಲಿ ಇದೆ? ಮುಖ್ಯಮಂತ್ರಿಯಾಗಿ ಜನಮೆಚ್ಚಿದ ನಾಯಕ ಸಿದ್ದರಾಮಯ್ಯನವರು ಇದ್ದಾರೆ ಎಂದು ಸಿಎಂ ಪರ ಬ್ಯಾಟ್ ಬೀಸಿದ್ದಾರೆ. ಇದನ್ನೂ ಓದಿ: ಕಾಂತರಾಜು ಸಮಿತಿ ವರದಿಗೆ ಆಗ್ರಹ – ಅ.18ರ ಸಂಪುಟ ಸಭೆಯಲ್ಲಿ ಚರ್ಚಿಸಿ ತೀರ್ಮಾನ: ಸಿಎಂ