Tag: ಜಾತಿಗಣತಿ ವರದಿ

  • ಕಾಂಗ್ರೆಸ್‌ನಲ್ಲಿ ಕೆಲವರು ಪಂಚಾಂಗ ನೋಡ್ತಾರೆ, ಇನ್ನುಳಿದವರು ಗಿಳಿಶಾಸ್ತ್ರ ಕೇಳ್ತಾರೆ: ಬಿ.ಕೆ.ಹರಿಪ್ರಸಾದ್

    ಕಾಂಗ್ರೆಸ್‌ನಲ್ಲಿ ಕೆಲವರು ಪಂಚಾಂಗ ನೋಡ್ತಾರೆ, ಇನ್ನುಳಿದವರು ಗಿಳಿಶಾಸ್ತ್ರ ಕೇಳ್ತಾರೆ: ಬಿ.ಕೆ.ಹರಿಪ್ರಸಾದ್

    ಬೆಂಗಳೂರು: ಏನು ಮಾಡೋದು ಕಾಂಗ್ರೆಸ್ ಪಕ್ಷದಲ್ಲಿ ಕೆಲವರು ಪಂಚಾಂಗ ನೋಡ್ತಾರೆ. ಕೆಲವರು ಗಿಳಿಶಾಸ್ತ್ರ ಕೇಳ್ತಾರೆ. ನಾವು ಸಂವಿಧಾನ ನೋಡುತ್ತೇವೆ. ಸಂವಿಧಾನದಲ್ಲಿ ಎಲ್ಲದಕ್ಕೂ ಅವಕಾಶ ಇದೆ ಎಂದು ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಹೇಳಿದರು.

    ಜಾತಿಗಣತಿ ಜಾರಿಗೆ ವಿಳಂಬ ವಿಚಾರವಾಗಿ ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೂಗಿಗೆ ತುಪ್ಪ ಸವರುವುದಕ್ಕೆ ನಾವು ಗಂಜಲ ರಾಜ್ಯದವರು ಅಲ್ಲ. ನಾವು ನಂದಿನ ಹಾಲಿನ ರಾಜ್ಯದವರು. ಏಪ್ರಿಲ್ 17ಕ್ಕೆ ಜಾತಿಗಣತಿ ಬಗ್ಗೆ ತೀರ್ಮಾನ ಆಗುತ್ತದೆ ಎಂದು ಸ್ಪಷ್ಟನೆ ನೀಡಿದರು. ಇದನ್ನೂ ಓದಿ: ಸಂಬಂಧಗಳು ಇಂದು ಗಟ್ಟಿಯಾಗಿ ಉಳಿದಿದೆ ಅಂದ್ರೆ ಅಪ್ಪಾಜಿ ಸಿನಿಮಾಗಳೇ ಕಾರಣ: ಶಿವಣ್ಣ

    ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಪ್ರಮಾಣ ಏರಿಕೆ ಆಗಬೇಕು. ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲೇ ಇದೆ. ದತ್ತಾಂಶ ಇಲ್ಲ ಎಂದು ಹೇಳಿ ಆಗ ಸುಪ್ರೀಂ ಕೋರ್ಟ್ ಸೂಚನೆ ಕೊಟ್ಟಿತ್ತು. ಜಡ್ಜ್ಮೆಂಟ್ ಕೊಟ್ಟಿಲ್ಲ. 50% ಮೀಸಲಾತಿ ದಾಟುವಂತಿಲ್ಲ ಅನ್ನೋದು ಡೈರೆಕ್ಷನ್ ಅಷ್ಟೇ ಎಂದು ಹೇಳಿದರು. ಇದನ್ನೂ ಓದಿ: ಅಯೋಧ್ಯೆಯ ಗೆಸ್ಟ್‌ ಹೌಸ್‌ನಲ್ಲಿ ಮಹಿಳೆ ಸ್ನಾನ ಮಾಡುವ ವೀಡಿಯೋ ಸೆರೆ ಹಿಡಿದವ ಅರೆಸ್ಟ್‌

    ಈಗ ನಮ್ಮ ಬಳಿ ಜಾತಿಗಣತಿ ಡೇಟಾ ಇದೆ. ಅದರ ಪ್ರಕಾರ ಮೀಸಲಾತಿ ಹೆಚ್ಚಿಸಬಹುದು. ರಾಹುಲ್ ಗಾಂಧಿ ಅವರು 75% ಮೀಸಲಾತಿ ಕೊಡುತ್ತೇವೆ ಎಂದು ಹೇಳಿದ್ದಾರೆ. ತೆಲಂಗಾಣದಲ್ಲಿ ಆಗಿದೆ. ಎರಡನೇ ಹೆಜ್ಜೆ ಕರ್ನಾಟಕದ್ದು, ನಂತರ ಜಾರ್ಖಂಡ್, ಬಳಿಕ ದೇಶದೆಲ್ಲೆಡೆ ಜಾರಿಗೆ ತರುತ್ತೇವೆ ಎಂದರು. ಇದನ್ನೂ ಓದಿ: ಜಾತಿಗಣತಿ ಶಿಫಾರಸು: ಓಬಿಸಿ, ಮುಸ್ಲಿಂ ಮೀಸಲಾತಿ ಪ್ರಮಾಣ ಹೆಚ್ಚಳ ಮಾಡುತ್ತಾ ಸರ್ಕಾರ?

    ಇದೇ ವೇಳೆ ಜಾತಿ ಜನಗಣತಿ ವರದಿ ಅನುಷ್ಠಾನಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವ ಶಾಮನೂರು ಶಿವಶಂಕರಪ್ಪ ವಿರುದ್ಧ ಬಿ.ಕೆ.ಹರಿಪ್ರಸಾದ್ ಆಕ್ರೋಶ ಹೊರಹಾಕಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ಯಾರೂ ಧಮ್ಮಿ ಹಾಕಲು ಸಾಧ್ಯವಿಲ್ಲ. ಪ್ರಜಾಪ್ರಭುತ್ವದಲ್ಲಿ ಯಾರು ಬೇಕಾದರೂ ತಮ್ಮ ಅಭಿಪ್ರಾಯ ವ್ಯಕ್ತಪಡಿಸಬಹುದು. ಆದರೆ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ತಂದಾಗ ಏಕೆ ವಿರೋಧಿಸಲಿಲ್ಲ ಎಂದು ಖಾರವಾಗಿ ಪ್ರಶ್ನಿಸಿದರು.

  • ಜಾತಿಗಣತಿ ವರದಿ ಬಂದ ಬಳಿಕ‌ವೇ ಅನುಷ್ಠಾನಕ್ಕೆ ತೀರ್ಮಾನ – ಶಿವರಾಜ್ ತಂಗಡಗಿ

    ಜಾತಿಗಣತಿ ವರದಿ ಬಂದ ಬಳಿಕ‌ವೇ ಅನುಷ್ಠಾನಕ್ಕೆ ತೀರ್ಮಾನ – ಶಿವರಾಜ್ ತಂಗಡಗಿ

    ಬೆಂಗಳೂರು: ಜಾತಿಗಣತಿ ವರದಿ ಬಂದ ಬಳಿಕ ಜಾರಿ ಮಾಡಬೇಕಾ? ಬೇಡವಾ ಅಂತ ಸಿಎಂ ಸಿದ್ದರಾಮಯ್ಯ (Siddaramaiah) ತೀರ್ಮಾನ ಮಾಡ್ತಾರೆ ಅಂತ ಹಿಂದುಳಿದ ವರ್ಗಗಳ ಇಲಾಖೆ ಸಚಿವ ಶಿವರಾಜ್ ತಂಗಡಗಿ (Shivaraj Tangadagi) ಸ್ಪಷ್ಟಪಡಿಸಿದ್ದಾರೆ.

    ಜಾತಿಗಣತಿ ವರದಿ ಜಾರಿ ವಿಚಾರ‌ವಾಗಿ ಬೆಂಗಳೂರಿನಲ್ಲಿ (Bengaluru) ಮಾತನಾಡಿದ ಅವರು, ಈಗಾಗಲೇ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಅವರ ಅಧಿಕಾರ ಜನವರಿವರೆಗೆ ವಿಸ್ತರಣೆ ಮಾಡಲಾಗಿದೆ. ಅವರು ಮೊದಲು ಜಾತಿಗಣತಿ ವರದಿ (Caste Census Report) ಕೊಡಲಿ ಆಮೇಲೆ ಬಿಡುಗಡೆ ಮಾಡಬೇಕಾ, ಬೇಡ್ವಾ? ಅನ್ನೋದನ್ನ ಚರ್ಚೆ ಮಾಡ್ತೀವಿ. ನಾನು, ‌ಸಿಎಂ ಯಾರು ಕೂಡಾ ವರದಿ ನೋಡಿಲ್ಲ. ವರದಿ ಇಲ್ಲದೇ ಚರ್ಚೆ ಮಾಡೋದು ಸರಿಯಲ್ಲ ಅಂತ ಹೇಳಿದ್ದಾರೆ. ಇದನ್ನೂ ಓದಿ: Telangana Election 2023: ಸಾಮಾನ್ಯರಂತೆ ಸರತಿ ಸಾಲಿನಲ್ಲಿ ನಿಂತು ವೋಟ್‌ ಮಾಡಿದ ಸ್ಟಾರ್ಸ್‌

    ವರದಿ ಸ್ವೀಕಾರ ಮಾಡಬಾರದು ಅಂತ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಸಹಿ ಹಾಕಿರೋ ವಿಚಾರಕ್ಕೆ ಪ್ರತಿಕ್ರಿಯಿಸಿ, ವರದಿ ನೋಡದೇ ಸ್ವೀಕಾರ ಮಾಡಬೇಕು-ಬೇಡ ಅನ್ನೋದು ಸರಿಯಲ್ಲ. ಗಣತಿ ಕುರಿತು ಸಾಕಷ್ಟು ವರದಿಗಳು ಬಂದಿವೆ. ಅಂತಿಮ ವರದಿ ಸರ್ಕಾರಕ್ಕೆ ಸಲ್ಲಿಕೆಯಾದ ಬಳಿಕ ಜಾರಿ ಮಾಡಬೇಕಾ ಅನ್ನೋದು ನಿರ್ಧಾರವಾಗುತ್ತದೆ. ನೂರಾರು ಕೋಟಿ ಹಣ ಖರ್ಚು ಮಾಡಿ ವರದಿ ಸ್ವಿಕಾರ ಮಾಡದೇ ಹೋದ್ರೆ ತಪ್ಪಾಗುತ್ತದೆ. ಅದಾದ ಬಳಿಕ ಸಾಧಕ-ಬಾಧಕ ನೋಡ್ತೀವಿ. ನನ್ನ ಬಳಿಯೂ ಒಕ್ಕಲಿಗ ಸಂಘದವರು ಬಂದಿದ್ದರು. ನೀವು ವರದಿ ನೋಡಿದ್ರಾ ಅಂತ ಕೇಳಿದೆ. ಅವರು ಇಲ್ಲ ಅಂತ ಹೇಳಿದ್ರು. ಆದ್ದರಿಂದ ವರದಿ ಬಿಡುಗಡೆಯಾದ ಬಳಿಕ ಮಾತನಾಡಿ ಅಂತ ನಾನೇ ಅವರಿಗೆ ಸಲಹೆ ನೀಡಿದ್ದೇನೆ ಎಂದು ತಿಳಿಸಿದ್ದಾರೆ.

    ಇದೇ ವೇಳೆ ವರದಿ ವಿರೋಧಿಸಿ ಶಾಮನೂರು ಶಿವಶಂಕರಪ್ಪ ಸಹಿ ಸಂಗ್ರಹ ವಿಚಾರ ಕುರಿತು ಮಾತನಾಡಿ, ಶಾಮನೂರು ಅವರು ಸಹಿ ಸಂಗ್ರಹ ಮಾಡಲಿ. ಅವರು ಹಿರಿಯರು ಸಿಎಂ, ಹೈಕಮಾಂಡ್ ಅವರ ಬಳಿ ಮಾತಾಡ್ತಾರೆ. ಮೊದಲು ವರದಿ ಬರಲಿ. ಕ್ಯಾಬಿನೆಟ್ ನಲ್ಲಿ ಇಡ್ತೀವಿ. ಬಳಿಕ ಎಲ್ಲಿ ಮಂಡನೆ ಮಾಡ್ತೀವಿ ಅಂತ ಸಿಎಂ ನಿರ್ಧಾರ ಮಾಡ್ತಾರೆ ಸ್ಪಷ್ಟಪಡಿಸಿದರು. ಇದನ್ನೂ ಓದಿ: ಎಲ್ಲರೂ ಆರೋಗ್ಯವಾಗಿದ್ದಾರೆ, ಬೇಗ ಮನೆಗೆ ಕಳಿಸಿಕೊಡ್ತೀವಿ: ಕಾರ್ಮಿಕರ ಬಗ್ಗೆ ವೈದ್ಯರ ಮಾತು

  • ನಮ್ಮ ವರದಿ ನೈಜವಾಗಿ, ವೈಜ್ಞಾನಿಕವಾಗಿದೆ: ಕಾಂತರಾಜು

    ನಮ್ಮ ವರದಿ ನೈಜವಾಗಿ, ವೈಜ್ಞಾನಿಕವಾಗಿದೆ: ಕಾಂತರಾಜು

    ಬೆಂಗಳೂರು: ನಾನು ಕೊಟ್ಟಿರೋ ವರದಿ ನೈಜವಾಗಿದೆ ಮತ್ತು ವೈಜ್ಞಾನಿಕವಾಗಿದೆ ಎಂದು ಜಾತಿಗಣತಿ ಸಿದ್ಧ ಮಾಡಿದ್ದ ಆಯೋಗದ ಅಧ್ಯಕ್ಷ ಕಾಂತರಾಜು ಸ್ಪಷ್ಟಪಡಿಸಿದ್ದಾರೆ.

    ಬೆಂಗಳೂರಿನಲ್ಲಿ ಮಾತನಾಡಿದ ಅವರು, ನಾನು ಕೊಟ್ಟ ವರದಿ ನೈಜವಾಗಿ ಇದೆ. ವೈಜ್ಞಾನಿಕವಾಗಿ ಇದೆ. ವರದಿ ನೋಡದೇ ವರದಿ ಅವೈಜ್ಞಾನಿಕ ಅನ್ನೋದು ಸರಿಯಲ್ಲ ಎಂದು ವಿರೋಧಿಗಳಿಗೆ ತಿರುಗೇಟು ಕೊಟ್ಟಿದ್ದಾರೆ.

    40 ದಿನ ಮನೆ ಮನೆಗೆ ಹೋಗಿ ಸಮೀಕ್ಷೆ ಮಾಡಲಾಗಿದೆ. ಪ್ರತಿಯೊಬ್ಬರಿಗೂ ಜಾತಿ, ಲಿಂಗ, ಧರ್ಮ, ಅಸ್ತಿ-ಪಾಸ್ತಿ ಎಲ್ಲವೂ ಸೇರಿ ‌ಗಣತಿ ವೇಳೆ 55 ಪ್ರಶ್ನೆ ಕೇಳಿದ್ದೇವೆ. 40 ದಿನ ಸಮೀಕ್ಷೆ ಆದ ಮೇಲೆ ಕೂಲಂಕಷವಾಗಿ ಅಂಕಿಅಂಶಗಳ ಸಮೇತ ವರದಿ ಸಿದ್ಧ ಮಾಡಲಾಗಿದೆ. ವರದಿ ಈಗ ಸರ್ಕಾರದ ಆಸ್ತಿ. ಸರ್ಕಾರ ವರದಿ ನೋಡಿದ ಬಳಿಕ ಮುಂದಿನ ತೀರ್ಮಾನ ಮಾಡಲಿ ಎಂದಿದ್ದಾರೆ.

    ವರದಿಗೆ ಒಕ್ಕಲಿಗರು, ಲಿಂಗಾಯತರು ವಿರೋಧ ವಿಚಾರಕ್ಕೆ ಮಾತನಾಡಿದ ಅವರು, ಎರಡು ಸಮುದಾಯಗಳು ವಿರೋಧ ಮಾಡಬಹುದು‌. ಆದರೆ ವರದಿ ಮೊದಲು ನೋಡಲಿ. ಆಮೇಲೆ ಅದು ಸರಿಯಿಲ್ಲ ಎಂದರೆ ವಿರೋಧ ಮಾಡಲಿ. ವರದಿ ನೋಡಿ ಅದರಲ್ಲಿ ಏನಾದರು ತಪ್ಪು ಇದ್ದರೆ ನಾನು ಒಪ್ಪಿಕೊಳ್ತೀನಿ. ಆಯೋಗದಲ್ಲಿ ಕಷ್ಟ ಪಟ್ಟು ವರದಿ ಮಾಡೋ ಕೆಲಸ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.

    ವರದಿಗೆ ಕಾರ್ಯದರ್ಶಿ ಸಹಿ ಇಲ್ಲ ಅನ್ನೋ ಆರೋಪಕ್ಕೆ ‌ಪ್ರತಿಕ್ರಿಯೆ ನೀಡಿದ ಅವರು, ವರದಿಗೆ ಕಾರ್ಯದರ್ಶಿ ಸಹಿ ಇಲ್ಲ ಅನ್ನೋದು ಸರಿಯಲ್ಲ. ವರದಿಯಲ್ಲಿ ತುಂಬಾ ವಾಲ್ಯೂಮ್‌ಗಳು ಇವೆ. ಆದರೆ ಒಂದು ವಾಲ್ಯೂಮ್‌ಗೆ ಕಾರ್ಯದರ್ಶಿ ಸಹಿ ಹಾಕಿಲ್ಲ ಅಷ್ಟೆ ಎಂದು ಸ್ಪಷ್ಟನೆ ನೀಡಿದ್ದಾರೆ.

    ಮೂಲ ಪ್ರತಿ ಕಾಣೆ ಆಗಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಮೂಲ ಪ್ರತಿ ಕಾಣೆಯಾಗಿದೆ ಅನ್ನೋದು ನನಗೆ ಗೊತ್ತಿಲ್ಲ. ನಾನು ವರದಿ ಕೊಟ್ಟಿದ್ದು 2019ರಲ್ಲಿ. ನಾನು ಇದ್ದಾಗ ಮೂಲ ಪ್ರತಿ ಇತ್ತು. ಈಗ ಇಲ್ಲ ಅನ್ನೋದು ನನಗೆ ಗೊತ್ತಿಲ್ಲ. ಈಗ ನಾನು ಹೊರಗೆ ಇದ್ದು ಮಾತಾಡೋದು‌ ಸರಿಯಲ್ಲ ಎಂದಿದ್ದಾರೆ.

    ಇದು ಜಾತಿಗಣತಿ ಅಲ್ಲ. ಇದು ಸಾಮಾಜಿಕ ಮತ್ತು ಶೈಕ್ಷಣಿಕ ವರದಿ ಅಂತ ಸ್ಪಷ್ಟಪಡಿಸಿದರು. ಹಲವು ಸಚಿವರು ವರದಿ ರಿಜೆಕ್ಟ್ ಮಾಡಬೇಕು ಎಂಬ ಪತ್ರ ಸಹಿ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ನಾನು ವರದಿ ಕೊಟ್ಟಿದ್ದೇನೆ. ಯಾರು ಬೇಕಾದ್ರು ಅಭಿಪ್ರಾಯ ಹೇಳಬಹುದು. ರಿಜೆಕ್ಟ್ ಮಾಡಿ ಅಂತ ಹೇಳಬಹುದು. ಆದರೆ ಮೊದಲು ವರದಿ ನೋಡಲಿ, ಆಮೇಲೆ ಯಾರು ಏನು ಬೇಕಾದ್ರು ಹೇಳಲಿ. ವರದಿ ನೋಡದೇ ಸರಿಯಿಲ್ಲ ಅನ್ನೋದು‌ ಸರಿಯಲ್ಲ ಎಂದು ತಿರುಗೇಟು ನೀಡಿದ್ದಾರೆ.

    ಕುಮಾರಸ್ವಾಮಿ ಅವಧಿಯಲ್ಲಿ ವರದಿ ಸ್ವೀಕಾರ ಮಾಡಲಿಲ್ಲವಾ ಎಂಬ ವಿಚಾರಕ್ಕೆ, ಕುಮಾರಸ್ವಾಮಿಗೆ ಅಪಾಯಿಂಟ್‌ಮೆಂಟ್ ಕೇಳಿದ್ವಿ. ಆದರೆ ಅವರು ಸಮಯ ಕೊಡಲಿಲ್ಲ ಅಂತ ತಿಳಿಸಿದರು. ಹಿಂದುಳಿದ ವರ್ಗಗಳ ಗಮನದಲ್ಲಿಟ್ಟುಕೊಂಡು ಈ ಸಮೀಕ್ಷೆ ನಡೆಸಲಾಗಿದೆ. ಇದು ಕಾಂತರಾಜು ವರದಿನಾ? ಜಯಪ್ರಕಾಶ್ ಹೆಗ್ಡೆ ವರದಿನಾ ಎಂಬ ಪ್ರಶ್ನೆಗೆ ವರದಿ ಕೊಟ್ಟಿದ್ದು, ಸಮೀಕ್ಷೆ ಮಾಡಿದ್ದು ನಾವು. ಈಗ ಸರ್ಕಾರ ಏನಾದ್ರು ತೀರ್ಮಾನ ಮಾಡಬಹುದು. ಆದರೆ ನಾವು ಮಾಡಿದ ಕೆಲಸಕ್ಕೆ ಅವರ ವರದಿ ಅಂತ‌ ಹೇಳೋಕೆ ಹೇಗೆ ಸಾಧ್ಯ. ಜನರು ಕೇಳೋ ಅನುಮಾನಗಳಿಗೆ ಈಗಿನ ಅಧ್ಯಕ್ಷರು ಹೇಗೆ ಉತ್ತರ ಕೊಡೋಕೆ ಸಾಧ್ಯ. ಈಗ ವರದಿ ಅವರು ರೆಡಿ ಮಾಡಿದ್ರೆ ನಾವು ಹೇಗೆ ಉತ್ತರ ಕೊಡೋಕೆ ಸಾಧ್ಯ. ಪರೋಕ್ಷವಾಗಿ ಕಾಂತರಾಜು ವರದಿ ಹೆಸರಿನಲ್ಲಿ ಇರಬೇಕು ಅಂತ ತಿಳಿಸಿದ್ದಾರೆ.