Tag: ಜಾತಕ

  • ದಿನ ಭವಿಷ್ಯ: 07-06-2022

    ದಿನ ಭವಿಷ್ಯ: 07-06-2022

    ಪಂಚಾಂಗ: ಶ್ರೀ ಶುಭಕೃತ ನಾಮ ಸಂವತ್ಸರ,
    ಉತ್ತರಾಯಣ, ಗ್ರೀಷ್ಮ ಋತು,
    ಜೇಷ್ಠ ಮಾಸ, ಶುಕ್ಲ ಪಕ್ಷ,
    ರಾಹುಕಾಲ: 3.35 ರಿಂದ 5.11
    ಗುಳಿಕಕಾಲ: 12.23 ರಿಂದ 1.54
    ಯಮಗಂಡಕಾಲ: 9.11 ರಿಂದ 10.47
    ವಾರ : ಮಂಗಳವಾರ,
    ತಿಥಿ : ಅಷ್ಟಮಿ,
    ನಕ್ಷತ್ರ : ಪುಬ್ಬ,

    ಮೇಷ: ಅನ್ಯರ ಅವಲಂಬನೆ ಸಲ್ಲದು, ಮತ್ತೊಬ್ಬರ ವಿಷಯದಲ್ಲಿ ಪ್ರವೇಶ ಮಾಡದಿರಿ.

    ವೃಷಭ: ಆರೋಗ್ಯದಲ್ಲಿ ಏರುಪೇರು, ಪರರಿಗೆ ಸಹಾನುಭೂತಿ ತೋರುವಿರಿ, ಆದಾಯಕ್ಕಿಂತ ಖರ್ಚು ಜಾಸ್ತಿ.

    ಮಿಥುನ: ಮಿತ್ರರ ಭೇಟಿ, ನಿರುದ್ಯೋಗಿಗಳಿಗೆ ಉದ್ಯೋಗವಕಾಶ, ಹಿತ ಶತ್ರುಭಾದೆ, ಪರಸ್ತ್ರೀಯಿಂದ ತೊಂದರೆ, ಅಪವಾದ.

    ಕಟಕ: ಕಾರ್ಯಕ್ಷೇತ್ರದಲ್ಲಿ ಒತ್ತಡ, ಶ್ರಮಕ್ಕೆ ತಕ್ಕ ಫಲ, ದೂರ ಪ್ರಯಾಣ, ದಾಂಪತ್ಯದಲ್ಲಿ ವಿರಸ, ಅಧಿಕ ಖರ್ಚು.

    ಸಿಂಹ: ಕೆಲಸ ಕಾರ್ಯಗಳಲ್ಲಿ ಜಯ, ಧಾರ್ಮಿಕ ವಿಚಾರದಲ್ಲಿ ಆಸಕ್ತಿ, ಕೃಷಿಕರಿಗೆ ಲಾಭ, ಸುಖ ಭೋಜನ, ಮಾತಾಪಿತರಲ್ಲಿ ವಾತ್ಸಲ್ಯ.

    ಕನ್ಯಾ: ಅತಿಯಾದ ಆತ್ಮವಿಶ್ವಾಸದಿಂದ ನಷ್ಟ, ದುಡುಕು ಸ್ವಭಾವ, ಆಕಸ್ಮಿಕ ಧನಲಾಭ, ಮನಃಶಾಂತಿ.

    ತುಲಾ: ಉದ್ಯೋಗದಲ್ಲಿ ತೊಂದರೆ, ತಾಳ್ಮೆ ಅತ್ಯಗತ್ಯ, ನಯವಂಚಕರ ಮಾತಿಗೆ ಮರುಳಾಗದಿರಿ, ಕೆಲಸ ಕಾರ್ಯಗಳಲ್ಲಿ ಅಡ್ಡಿ ಆತಂಕ.

    ವೃಶ್ಚಿಕ: ಸಹೋದ್ಯೋಗಿಗಳೊಡನೆ ವೈಮನಸ್ಸು, ವಿಪರೀತ ಖರ್ಚು, ದೂರ ಪ್ರಯಾಣ, ನಂಬಿಕೆ ದ್ರೋಹ.

    ಧನಸ್ಸು: ಯತ್ನ ಕಾರ್ಯನುಕೂಲ, ಅಧಿಕ ತಿರುಗಾಟ, ಆರೋಗ್ಯದಲ್ಲಿ ಏರುಪೇರು, ಚಂಚಲ ಮನಸ್ಸು, ಸುಳ್ಳು ಹೇಳುವುದು.

    ಮಕರ: ಅನಿರೀಕ್ಷಿತ ದ್ರವ್ಯಲಾಭ, ಋಣವಿಮೋಚನೆ, ವಾಹನ ಯೋಗ, ಅಕಾಲ ಭೋಜನ, ವೃಥಾ ತಿರುಗಾಟ, ಮಿತ್ರರ ಭೇಟಿ.

    ಕುಂಭ: ಮಾತಿನಲ್ಲಿ ಹಿಡಿತವಿರಲಿ, ಸ್ಥಳ ಬದಲಾವಣೆ, ಪರರ ಮಾತಿಗೆ ಕಿವಿ ಕೊಡಬೇಡಿ, ಕೆಲಸದಲ್ಲಿ ಏಕಾಗ್ರತೆ.

    ಮೀನ: ಜನರಿಂದ ತೊಂದರೆ, ವಿದ್ಯಾರ್ಥಿಗಳಲ್ಲಿ ಗೊಂದಲ, ನಾನು ವಿಚಾರಗಳಲ್ಲಿ ಆಸಕ್ತಿ, ರಕ್ತ ಸಂಬಂಧ ಕಾಯಿಲೆ.

  • ದಿನ ಭವಿಷ್ಯ: 06-06-2022

    ದಿನ ಭವಿಷ್ಯ: 06-06-2022

    ಪಂಚಾಂಗ: ಶ್ರೀ ಶುಭಕೃತ ನಾಮ ಸಂವತ್ಸರ,
    ಉತ್ತರಾಯಣ,ಗ್ರೀಷ್ಮ ಋತು,
    ಜೇಷ್ಠ ಮಾಸ, ಶುಕ್ಲ ಪಕ್ಷ,
    ರಾಹುಕಾಲ : 7.34 ರಿಂದ 9.10
    ಗುಳಿಕಕಾಲ : 1.58 ರಿಂದ 3.34
    ಯಮಗಂಡಕಾಲ : 10.46 ರಿಂದ 12.22
    ವಾರ : ಸೋಮವಾರ,
    ತಿಥಿ : ಸಪ್ತಮಿ,
    ನಕ್ಷತ್ರ : ಮಖ,

    ಮೇಷ: ಸಾಲದಿಂದ ಮುಕ್ತಿ, ಅಲ್ಪ ಕಾರ್ಯಸಿದ್ಧಿ, ದಂಡ ಕಟ್ಟುವಿರಿ, ಅನರ್ಥ, ಗೆಳೆಯರ ಕಷ್ಟದಲ್ಲಿ ಭಾಗಿ, ದಾಂಪತ್ಯದಲ್ಲಿ ಪ್ರೀತಿ.

    ವೃಷಭ: ಷೇರು ವ್ಯವಹಾರಗಳಲ್ಲಿ ಅಲ್ಪ ಲಾಭ, ಆಲಸ್ಯ ಮನೋಭಾವ, ಪರಸ್ಥಳ ವಾಸ, ಅನಾರೋಗ್ಯ, ವಾದ ವಿವಾದಗಳಲ್ಲಿ ಎಚ್ಚರ.

    ಮಿಥುನ: ಸ್ತ್ರೀಯರಿಗೆ ಉತ್ತಮ ಅವಕಾಶ, ಮಕ್ಕಳ ಬಗ್ಗೆ ಕಾಳಜಿವಹಿಸಿ, ನಿಮ್ಮ ಪ್ರಯತ್ನದಿಂದ ಕಾರ್ಯಸಿದ್ಧಿ.

    ಕಟಕ: ನಂಬಿಕೆ ದ್ರೋಹ, ದಾಯಾದಿ ಕಲಹ, ಋಣಬಾಧೆ, ಪಿತ್ರಾರ್ಜಿತ ಆಸ್ತಿ ಗಳಿಕೆ, ಅಧಿಕ ಖರ್ಚು, ಶೀತ ಸಂಬಂಧ ರೋಗ.

    ಸಿಂಹ: ಅತಿಯಾದ ಕೋಪ, ಸಾಮಾನ್ಯ ಸೌಖ್ಯಕ್ಕೆ ದಕ್ಕೆ, ಅನಾವಶ್ಯಕ ದ್ವೇಷ, ಯಾರನ್ನು ಹೆಚ್ಚಾಗಿ ನಂಬಬೇಡಿ.

    ಕನ್ಯಾ: ಮನೆಯಲ್ಲಿ ಸಂತಸ, ಹಣಕಾಸಿನ ಪರಿಸ್ಥಿತಿ ಉತ್ತಮ, ಸ್ತ್ರೀ ಲಾಭ, ತೀರ್ಥಯಾತ್ರಾ ದರ್ಶನ, ಸಕಾಲಕ್ಕೆ ಭೋಜನ ಇಲ್ಲದಿರುವಿಕೆ.

    ತುಲಾ: ನೆಮ್ಮದಿ ಇಲ್ಲದ ಜೀವನ, ಅನಾವಶ್ಯಕ ಖರ್ಚು, ದೂರಾಲೋಚನೆ, ಬೇಡದ ವಿಷಯಗಳಲ್ಲಿ ಆಸಕ್ತಿ.

    ವೃಶ್ಚಿಕ: ಸೌಜನ್ಯದಿಂದ ವರ್ತಿಸಿ, ಶತ್ರು ಭಾದೆ, ನಿದ್ರಾಭಂಗ, ದ್ವಿಚಕ್ರ ವಾಹನದಿಂದ ತೊಂದರೆ, ಆಹಾರ ಸೇವನೆಯಲ್ಲಿ ಜಾಗ್ರತೆ.

    ಧನಸ್ಸು: ಸಮಾಜದಲ್ಲಿ ಗೌರವ, ಗುರುಹಿರಿಯರ ಭೇಟಿ, ದುಡುಕು ಸ್ವಭಾವ, ಇಷ್ಟ ವಸ್ತುಗಳ ಖರೀದಿ, ಧನಲಾಭ.

    ಮಕರ: ಮನಸ್ಸಿನಲ್ಲಿ ಗೊಂದಲ, ಸರ್ಕಾರಿ ಅಧಿಕಾರಿಗಳಿಗೆ ಬಡ್ತಿ, ಮನಃಶಾಂತಿ, ಮಿಶ್ರ ಫಲ, ಎಲ್ಲರ ಮನಸ್ಸನ್ನು ಗೆಲ್ಲುವಿರಿ

    ಕುಂಭ: ಅಮೂಲ್ಯ ವಸ್ತುಗಳನ್ನು ಖರೀದಿಸುವಿರಿ, ಮಿತ್ರರ ಭೇಟಿ, ಕೃಷಿಯಲ್ಲಿ ಲಾಭ, ಪ್ರತಿಭೆಗೆ ತಕ್ಕ ಫಲ.

    ಮೀನ: ದೃಷ್ಟಿ ದೋಷದಿಂದ ತೊಂದರೆ, ವಿರೋಧಿಗಳಿಂದ ಕಿರುಕುಳ, ವಿಪರೀತ ವ್ಯಸನ, ಕೆಲಸ ಕಾರ್ಯಗಳಲ್ಲಿ ವಿಳಂಬ.

  • ಜೈಲಿನಲ್ಲಿ ಭವಿಷ್ಯ ಹೇಳೋ ಕಲೆಯನ್ನು ಕಲಿಯುತ್ತಿದ್ದಾಳೆ ಹಂತಕಿ ಅಪೂರ್ವ ಶುಕ್ಲಾ

    ಜೈಲಿನಲ್ಲಿ ಭವಿಷ್ಯ ಹೇಳೋ ಕಲೆಯನ್ನು ಕಲಿಯುತ್ತಿದ್ದಾಳೆ ಹಂತಕಿ ಅಪೂರ್ವ ಶುಕ್ಲಾ

    ನವದೆಹಲಿ: ಮಾಜಿ ಗವರ್ನರ್ ಎನ್.ಡಿ.ತಿವಾರಿ ಪುತ್ರ ರೋಹಿತ್ ತಿವಾರಿಯನ್ನು ಕೊಲೆಗೈದು ಜೈಲುಪಾಲಾಗಿರುವ ಪತ್ನಿ ಅಪೂರ್ವ ಶುಕ್ಲಾ ಜೈಲಿನಲ್ಲಿ ಕಾರ್ಡ್ ಮೂಲಕ ಭವಿಷ್ಯ ಹೇಳುವ ಕಲೆಯನ್ನು ಕಲಿಯುತ್ತಿದ್ದಾಳೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

    ಆಸ್ತಿಗಾಗಿ ಪತಿಯನ್ನೇ ಕೊಲೆ ಮಾಡಿದ್ದ ಅಪೂರ್ವ ಸದ್ಯ ತಿಹಾರ್ ಜೈಲಿನಲ್ಲಿದ್ದಾಳೆ. ಈ ಸಂದರ್ಭದಲ್ಲಿ ಪತಿಯನ್ನ ಕೊಲೆ ಮಾಡಿದ್ದಕ್ಕೆ ಪಶ್ಚತ್ತಾಪ ಪಡುವಂತೆ ಅಪೂರ್ವ ಕಾಣುತ್ತಿಲ್ಲ. ಜೈಲಿನಲ್ಲಿ ಪ್ರತಿ ಮಂಗಳವಾರ ಹಾಗೂ ಗುರುವಾರ ನಡೆಯುವ ಕಾರ್ಡ್ ಮೂಲಕ ಭವಿಷ್ಯ ಹೇಳುವ ತರಗತಿಗೆ ತಪ್ಪದೇ ಭಾಗವಹಿಸುತ್ತಿದ್ದಾಳೆ. ಅಲ್ಲದೇ ಇದನ್ನು ಕಲಿಯಲು ಸಾಕಷ್ಟು ಆಸಕ್ತಿ ತೋರಿಸುತ್ತಿದ್ದಾಳೆ ಎಂದು ಜೈಲಿನ ಮೂಲಗಳು ಮಾಧ್ಯಮಕ್ಕೆ ಸ್ಪಷ್ಟಪಡಿಸಿವೆ.

    ನ್ಯಾಯಾಲಯದ ವಿಚಾರಣೆ ಕಾರಣದಿಂದ ಕೆಲ ತರಗತಿಗಳಿಗೆ ಹಾಜರಾಗಲು ಸಾಧ್ಯವಾಗಿರಲಿಲ್ಲ. ಆ ಬಳಿಕ ಮೊದಲ ಸಾಲಿನಲ್ಲೇ ಕುಳಿತು ಓದುವುದರಲ್ಲಿ ಆಸಕ್ತಿ ವಹಿಸಿದ್ದಾಳೆ. ಆಕೆ ಇದನ್ನು ಕಲಿಯಲು ಆಸಕ್ತಿ ತೋರಿರುವುದು ತಮಗೆ ಅಚ್ಚರಿಯಾಗಿದೆ ಎಂದು ಅಧಿಕಾರಿ ತಿಳಿಸಿದ್ದಾಗಿ ವರದಿಯಲ್ಲಿ ಉಲ್ಲೇಖಿಸಲಾಗಿದೆ.

    ಏನಿದು ಪ್ರಕರಣ?
    ಏಪ್ರಿಲ್ 16 ರಂದು ಮಾಜಿ ಮುಖ್ಯಮಂತ್ರಿ ಎನ್.ಡಿ.ತಿವಾರಿ ಪುತ್ರ ರೋಹಿತ್ ತಿವಾರಿ ಅವರನ್ನು ಕೊಲೆ ಮಾಡಲಾಗಿತ್ತು. ಕೊಲೆ ಪ್ರಕರಣವನ್ನು ಭೇದಿಸಿದ್ದ ದೆಹಲಿ ಪೊಲೀಸರು ಅವರ ಪತ್ನಿ ಅಪೂರ್ವ ಶುಕ್ಲಾಳನ್ನು ಬಂಧಿಸಿದ್ದರು. ಮೊದಲು ಪ್ರಕರಣದಲ್ಲಿ ರೋಹಿತ್ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ಶಂಕಿಸಲಾಗಿತ್ತು. ಆದರೆ ಮರಣೋತ್ತರ ವರದಿಯಲ್ಲಿ ಅವರ ಕೊಲೆ ನಡೆದಿದೆ ಎಂಬುವುದು ಸ್ಪಷ್ಟವಾಗಿತ್ತು.

    ಆರಂಭದಲ್ಲಿ ಪೊಲೀಸರ ದಿಕ್ಕು ತಪ್ಪಿಸಲು ಅಪೂರ್ವ ಯತ್ನಿಸಿದ್ದಳು. ಪ್ರಕರಣ ಪ್ರಾಥಮಿಕ ವಿಚಾರಣೆ ವೇಳೆ ಅಂದು ಮನೆಗೆ ಬಂದಿರಲಿಲ್ಲ ಎಂಬುದು ಸ್ಪಷ್ಟವಾಗಿತ್ತು. ಅಂದು ರೋಹಿತ್ ಅವರ ತಾಯಿ ತಪಾಸಣೆಗೆ ಆಸ್ಪತ್ರೆಗೆ ದಾಖಲಾಗಿದ್ದರು. ಅಂದು ಸಂಜೆ ರೋಹಿತ್ ಕೊಠಡಿಗೆ ತೆರಳಿದ್ದ ಅಪೂರ್ವ ಉಸಿರುಗಟ್ಟಿಸಿ ಕೊಲೆ ಮಾಡಿದ್ದಳು. ಕೇವಲ ಒಂದೂವರೆ ಗಂಟೆಯಲ್ಲಿ ಅವಧಿಯಲ್ಲಿ ಸಾಕ್ಷಿ ನಾಶಕ್ಕೆ ಯತ್ನಿಸಿದ್ದಳು. ವಿಚಾರಣೆಯಲ್ಲಿ ಅಪೂರ್ವ ತನ್ನ ಕೃತ್ಯವನ್ನು ಒಪ್ಪಿಕೊಂಡಿದ್ದಳು. ವೈವಾಹಿಕ ಜೀವನದಲ್ಲಿ ಇಬ್ಬರ ಜೀವನದಲ್ಲಿ ಉಂಟಾದ ಅಸಮಾಧಾನ ಹಾಗೂ ಆಸ್ತಿ ಮೇಲಿನ ಆಸೆಯಿಂದ ಕೊಲೆ ಮಾಡಿದ್ದೇನೆ ಎಂದು ಹೇಳಿದ್ದಳು.

  • ಪ್ರಧಾನಿ ಮೋದಿ ಜಾತಕದಲ್ಲಿ ಕಂಟಕ- ಫೆಬ್ರವರಿ ನಂತರ ಬುಧಬುಕ್ತಿಗೆ ಮುಕ್ತಿ: ಜ್ಯೋತಿಷಿ ಅಮ್ಮಣ್ಣಾಯ

    ಪ್ರಧಾನಿ ಮೋದಿ ಜಾತಕದಲ್ಲಿ ಕಂಟಕ- ಫೆಬ್ರವರಿ ನಂತರ ಬುಧಬುಕ್ತಿಗೆ ಮುಕ್ತಿ: ಜ್ಯೋತಿಷಿ ಅಮ್ಮಣ್ಣಾಯ

    ಉಡುಪಿ: ಪ್ರಧಾನಿ ನರೇಂದ್ರ ಮೋದಿ ಜಾತಕದಲ್ಲಿ ಕಂಟಕ ಇರುವುದರಿಂದ ಪಂಚರಾಜ್ಯಗಳ ಚುನಾವಣೆಯಲ್ಲಿ ಸೋಲಾಗಿದೆ. ಕಳೆದ ಒಂದೂವರೆ ವರ್ಷದಿಂದ ಕೆಲವು ಆರೋಪಗಳು ಬರುತ್ತಿದೆ ಎಂದು ಖ್ಯಾತ ಜ್ಯೋತಿಷಿ ಪ್ರಕಾಶ್ ಅಮ್ಮಣ್ಣಾಯ ಹೇಳಿದ್ದಾರೆ.

    ಉಡುಪಿಯ ಕಾಪುವಿನಲ್ಲಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಪ್ರಕಾಶ್ ಅಮ್ಮಣ್ಣಾಯ, ಮೋದಿ ಜಾತಕದಲ್ಲಿ ಬುಧಭುಕ್ತಿ ಇದೆ. ಬುಧಭುಕ್ತಿ ವಿಮೋಚನೆಯಾದ ನಂತರ ಮತ್ತೆ ಜಾತಕದಲ್ಲಿ ಒಳ್ಳೇ ದಿನಗಳು ಇದೆ ಎಂದು ಹೇಳಿದರು. ಪ್ರಧಾನಿ ಮೋದಿ ನೇತೃತ್ವದಲ್ಲಿ 2019ರ ಲೋಕಸಭಾ ಚುನಾವಣೆಯಲ್ಲಿ ಎನ್‍ಡಿಎ ಮಿತ್ರಕೂಟಕ್ಕೆ 280 ಸೀಟುಗಳು ಬರಲಿದೆ. ಹೆಚ್ಚು ಮಿತ್ರಪಕ್ಷಗಳು ಜೊತೆಯಾದರೆ ಸೀಟುಗಳ ಸಂಖ್ಯೆ ಹೆಚ್ಚಾಗಬಹುದು ಎಂದು ಹೇಳಿದರು.

    ಜಾತ್ರೆಯ ಬಲೂನು: ಪಂಚ ರಾಜ್ಯಗಳ ಚುನಾವಣಾ ಫಲಿತಾಂಶ ಮೋದಿಯ ಗರ್ವಭಂಗ ಅಂತ ಬೀಗುತ್ತಿರುವವರು ಜಾತ್ರೆಯ ಬಲೂನುಗಳು ಎಂದು ವಿಪಕ್ಷಗಳನ್ನು ಬಣ್ಣಿಸಿದ್ದಾರೆ. ಮೋದಿ ಫುಟ್ಬಾಲ್ ಇದ್ದಂತೆ. ಚೌಕಟ್ಟಿನೊಳಗೆ ಫುಟ್ ಬಾಲ್ ಓಡಾಡುತ್ತದೆ. ಎಲ್ಲೆಲ್ಲೋ ಹಾರಿ ಹೋಗಲ್ಲ. ಬಲೂನು ಊದಿಕೊಂಡು ಆಗಸದಲ್ಲಿ ಹಾರಾಟ ಮಾಡಿ ಕೆಲವೇ ಕ್ಷಣಗಳಲ್ಲಿ ಒಡೆದುಹೋಗುತ್ತದೆ ಎಂದು ಹೇಳಿದ್ದಾರೆ.

    ಪ್ರಧಾನಿ ಮೋದಿ ಜಾತಕದಲ್ಲಿ ಬುಧಭುಕ್ತಿ ಇರುವುದರಿಂದ ಪ್ರಧಾನಿ ನರೇಂದ್ರ ಮೋದಿಗೆ ಕೊಂಚ ಹಿನ್ನಡೆಯಾಗುತ್ತದೆ. ಫೆಬ್ರವರಿ ನಂತರ ಕೇತುಭುಕ್ತಿ ಆಗಮನವಾಗಿ ಪ್ರಧಾನಿ ಮೋದಿಗೆ ಬರುವ ಸಮಸ್ಯೆಗಳೆಲ್ಲಾ ಪರಿಹಾರವಾಗುತ್ತದೆ ಎಂದು ಹೇಳಿದರು. ಪಂಚ ರಾಜ್ಯಗಖ ಚುನಾವಣೆಯಲ್ಲಿ ಮಧ್ಯಪ್ರದೇಶದಲ್ಲಿ ಬಿಜೆಪಿಗೆ ಅವಕಾಶ ಇತ್ತು. ಆದ್ರೆ ರಾಜಕೀಯ ನಾಟಕದಲ್ಲಿ ಕೊನೆ ಕ್ಷಣದ ಬದಲಾವಣೆಯಾಗಿದೆ ಎಂದು ತಿಳಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv