Tag: ಜಾಗೃತಿಯ ಸಂದೇಶ

  • ನೀವೂ ಬದುಕಿ, ಇನ್ನೊಬ್ಬರನ್ನು ಬದುಕಲು ಬಿಡಿ: ನಿನಾಸಂ ಸತೀಶ್

    ನೀವೂ ಬದುಕಿ, ಇನ್ನೊಬ್ಬರನ್ನು ಬದುಕಲು ಬಿಡಿ: ನಿನಾಸಂ ಸತೀಶ್

    ಬೆಂಗಳೂರು: ಕೊರೊನಾ ಪ್ರಕರಣ ಸಂಖ್ಯೆಯಿಂದ ಜನ ಬೇಸತ್ತು ಹೋಗಿದ್ದಾರೆ. ದಿನೇ ದಿನೇ ಕೊರೊನಾ ಹೆಚ್ಚಳ ಆಗ್ತಾನೇ ಇದೆ ಈ ಕುರಿತಾಗಿ ಜಾಗೃತಿಯ ಸಂದೇಶವನ್ನು ಸ್ಯಾಂಡಲ್‍ವುಡ್ ನಟ ನಿನಾಸಂ ಸತೀಶ್ ಇನ್‍ಸ್ಟ್ರಾಗ್ರಾಮ್ ಮೂಲಕವಾಗಿ ಹಂಚಿಕೊಂಡಿದ್ದಾರೆ.

    ನಾನು ವೀಡಿಯೋ ಮಾಡಿರುವ ಉದ್ದೇಶ ನಿಮ್ಮೆಲ್ಲರಿಗೂ ಗೊತ್ತಿರುತ್ತೆ. ಎಲ್ಲರೂ ಎಚ್ಚರಿಕೆಯನ್ನು ನೀಡುತ್ತಿದ್ದಾರೆ. ನಮಗೆ ಈ ಪರಿಸ್ಥಿತಿ ಬಂದಿರುವುದಕ್ಕೆ ನಾವೇ ಕಾರಣ ಅಂದ್ರೂ ತಪ್ಪಾಗಲ್ಲ. ಯಾಕೆಂದ್ರೆ ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಅಂತ ಬಹಳ ಜನ ಹೇಳುತ್ತಾ ಇದ್ದರೂ. ಆದರೆ ನಾವು ಯಾರೂ ಪಾಲಿಸಲೇ ಇಲ್ಲ. ಯಾರೂ ಕೂಡಾ ಮಾಸ್ಕ್ ಹಾಕಿಲ್ಲ. ಈಗಿರುವ ಕೊರೊನಾ ರೂಪಾಂತರಗೊಂಡಿರುವ ವೈರಸ್ ಸೆಕೆಂಡ್ ವೇವ್‍ನಲ್ಲಿ ಬಹಳ ಜನರಲ್ಲಿ ರೋಗದ ಲಕ್ಷಣವೇ ಕಾಣಿಸುತ್ತಿಲ್ಲ ಜಾಗೃತರಾಗಿರಿ ಎಂದು ಮನವಿ ಮಾಡಿದ್ದಾರೆ.

    ಹೊರಗಡೆ ಓಡಾಡುವವರು ಮಾಸ್ಕ್ ಹಾಕಿಕೊಳ್ಳಿ. ನಮ್ಮ ಹತ್ತಿರದವರನ್ನು ನೋಡಲಾದ ಪರಿಸ್ಥಿತಿ ಬಂದಿದೆ. ನನ್ನ ದೊಡ್ಡಮ್ಮ ತೀರಿಕೊಂಡ್ರು ಅವರ ಮೂಖವನ್ನು ನೋಡೋಕೆ ಆಗಿಲ್ಲ ನನಗೆ. ಒಬ್ಬರಲ್ಲ-ಇಬ್ಬರಲ್ಲ ಸಾವಿರಾರು ಜನರ ಗೋಳನ್ನು ನಾವು ನೋಡ್ತಿದ್ದೇವೆ. ಒಂದೊಂದು ಸಲ ಈ ಪರಿಸ್ಥಿತಿಗೆ ನಾವೇ ಹೊಣೆನಾ ಎಂದು ಅನಿಸಿಬಿಡುತ್ತದೆ. ಇದಕ್ಕೆ ಮತ್ಯಾರನ್ನು ದೋಷಿಸೋಕೆ ಆಗಲ್ಲ. ಸದ್ಯದ ಪರಿಸ್ಥಿತಿಯಲ್ಲಿ ಮಾಸ್ಕ್ ಧರಿಸಿಕೊಂಡು, ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಮತ್ತೊಬ್ಬರಿಗೆ ಹರಡದಂತೆ ನೋಡಿಕೊಳ್ಳೋದು ದೊಡ್ಡ ಸಾಹಸವಾಗಿಬಿಡುತ್ತದೆ. ದಯವಿಟ್ಟು ಎಲ್ಲರೂ ಮಾಸ್ಕ್ ಬಳಸಿ ನೀವೂ ಬದುಕಿ, ಇನ್ನೊಬ್ಬರನ್ನು ಬದುಕಲು ಬಿಡಿ ಎಂದು ಹೇಳುವ ಮೂಲಕವಾಗಿ ಕೊರೊನಾ ಜಾಗೃತಿಯನ್ನು ಮೂಡಿಸಿದ್ದಾರೆ.

    ನಿನಾಸಂ ಸತೀಶ್ ಅವರು ಕೊರೊನಾ ಕುರಿತಾಗಿ ಜಾಗೃತಿಯನ್ನು ಮೂಡಿಸುವ ಪ್ರಯತ್ನವನ್ನು ಮಾಡಿದ್ದಾರೆ. ನೀವೂ ಬದುಕಿ, ಇನ್ನೊಬ್ಬರನ್ನು ಬದುಕಲು ಬಿಡಿ ಎನ್ನುವ ಸಂದೇಶದ ಮೂಲಕವಾಗಿ ಕೊರೊನಾ ಜಾಗೃತರಾಗಿರಿ ಎಂದು ಮನವಿ ಮಾಡಿದ್ದಾರೆ.