Tag: ಜಾಗತಿಕ ಲಿಂಗಾಯತ ಮಹಾಸಭಾ

  • 1871ರ ಜನಗಣತಿ ದಾಖಲೆ ನೀಡಿ ಕೇಂದ್ರ ಸರ್ಕಾರ ನಡೆಯನ್ನ ಪ್ರಶ್ನಿಸಿದ ಲಿಂಗಾಯತ ಮಹಾಸಭಾ

    1871ರ ಜನಗಣತಿ ದಾಖಲೆ ನೀಡಿ ಕೇಂದ್ರ ಸರ್ಕಾರ ನಡೆಯನ್ನ ಪ್ರಶ್ನಿಸಿದ ಲಿಂಗಾಯತ ಮಹಾಸಭಾ

    ಬೆಂಗಳೂರು: ಲಿಂಗಾಯತ ಪ್ರತ್ಯೇಕ ಧರ್ಮದ ರಾಜ್ಯ ಸರ್ಕಾರದ ಪ್ರಸ್ತಾವನೆಯನ್ನ ಕೇಂದ್ರ ಸರ್ಕಾರ ತಿರಸ್ಕರಿಸಿದ ಹಿನ್ನೆಲೆಯಲ್ಲಿ ಜಾಗತಿಕ ಲಿಂಗಾಯತ ಮಹಾಸಭಾ ಹೋರಾಟಕ್ಕೆ ಕರೆ ನೀಡಿದೆ.

    ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಜಾಗತಿಕ ಲಿಂಗಾಯತ ಮಹಾಸಭಾ ರಾಷ್ಟ್ರೀಯ ಕಾರ್ಯದರ್ಶಿ ಎಸ್.ಎಂ ಜಾಮದಾರ್, 1871ರಲ್ಲಿ ಮೈಸೂರು ಜನಗಣತಿಯಲ್ಲಿ ಲಿಂಗಾಯತವನ್ನು ಪ್ರತ್ಯೇಕ ಧರ್ಮವೆಂದು ಉಲ್ಲೇಖಿಸಲಾಗಿದೆ. ಅಲ್ಲದೇ ಸಿಖ್, ಜೈನಕ್ಕೂ ಪ್ರತ್ಯೇಕ ಧರ್ಮ ಎಂದು ಘೋಷಣೆ ಮಾಡಲಾಗಿದೆ ಎಂದು ಹೇಳಿ ಕೇಂದ್ರದ ನಡೆಯನ್ನು ಪ್ರಶ್ನಿಸಿದರು.

    ರಾಜ್ಯ ಸರ್ಕಾರ ಸಲ್ಲಿಸಿರುವ ಪ್ರಸ್ತಾವನೆಯನ್ನ ಈ ಹಿಂದೆಯೇ ಕೇಂದ್ರ ಸರ್ಕಾರ ತಿರಸ್ಕರಿಸಿತ್ತು ಎಂದು ಸರ್ಕಾರ ಪುನರ್ ಉಚ್ಚರಿಸಲಾಗಿದೆ. ಆದರೆ ನಾವು ಕೇಂದ್ರಕ್ಕೆ ಪ್ರಸ್ತಾವನೆ ಕಳುಹಿಸಿದ್ದೆ ಮಾರ್ಚ್ ತಿಂಗಳಿನಲ್ಲಿ, ಹೀಗಿರುವಾಗ ಯಾವ ಆಧಾರದ ಮೇಲೆ ಕೇಂದ್ರ ಸರ್ಕಾರ ಈ ಹಿಂದೆಯೇ ತಿರಸ್ಕರಿಸಿತ್ತು ಅಂತ ಹೇಳಿದೆ ಎಂದು ಪ್ರಶ್ನಿಸಿದರು.

    ಅಲ್ಪಸಂಖ್ಯಾತ ಆಯೋಗ ಪರಿಶೀಲನೆ ಮಾಡಿದ ಬಳಿಕವೇ ನಾವು ಪ್ರಸ್ತಾವನೆ ಕಳಿಸಿದ್ದು, ಈಗ ಕೇಂದ್ರಕ್ಕೆ ಮತ್ತೊಮ್ಮೆ ಪುನರ್ ಪರಿಶೀಲನೆ ಮಾಡುವಂತೆ ಮನವಿ ಮಾಡುತ್ತೇವೆ. ಅಲ್ಲಿಯೂ ನ್ಯಾಯ ಸಿಗಲಿಲ್ಲ ಎಂದರೆ ಅಂದ್ರೆ ನಮ್ಮ ಹೋರಾಟ ಮುಂದುವರೆಯುತ್ತದೆ ಎಂದು ಎಚ್ಚರಿಕೆ ನೀಡಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv