Tag: ಜಾಗತಿಕ ಮಾರುಕಟ್ಟೆ

  • ಭಾರತೀಯ ಷೇರುಪೇಟೆಯಲ್ಲಿ ಚೇತರಿಕೆ – ಜಾಗತಿಕ ಮಾರುಕಟ್ಟೆಯಲ್ಲೂ ಕಡಿಮೆಯಾದ ಒತ್ತಡ

    ಭಾರತೀಯ ಷೇರುಪೇಟೆಯಲ್ಲಿ ಚೇತರಿಕೆ – ಜಾಗತಿಕ ಮಾರುಕಟ್ಟೆಯಲ್ಲೂ ಕಡಿಮೆಯಾದ ಒತ್ತಡ

    ಮುಂಬೈ: ಅಮೆರಿಕಾದ (America) ಹೊಸ ಟ್ಯಾರಿಫ್ (Tariff) ನೀತಿಯಿಂದ ನಲುಗಿ ಹೋಗಿದ್ದ ಭಾರತೀಯ ಷೇರು ಮಾರುಕಟ್ಟೆಯಲ್ಲಿ (Indian Share Market) ಇಂದು ಚೇತರಿಕೆ ಕಂಡು ಬಂದಿದೆ. ಇಂದಿನ ಆರಂಭಿಕ ವಹಿವಾಟಿನಲ್ಲಿ ಷೇರುಪೇಟೆ ಕಂಬ್ಯಾಕ್ ಮಾಡಿದ್ದು, ಸೆನ್ಸೆಕ್ಸ್ ಮತ್ತು ನಿಫ್ಟಿ ಸೂಚ್ಯಂಕವು ಭರ್ಜರಿಯಾಗಿ ಏರಿಕೆಯಾಗಿದೆ.

    ಬೆಳಗ್ಗೆ ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್‌ (BSE) 1,100 ಪಾಯಿಂಟ್ಸ್ ಏರಿಕೆಗೊಂಡಿದ್ದು, 74,300ರ ಗಡಿಯನ್ನು ದಾಟಿತು. ನಿಫ್ಟಿ ಸೂಚ್ಯಂಕವು 400 ಪಾಯಿಂಟ್ಸ್ ಹೆಚ್ಚಾಗಿದ್ದು, 22,550ರ ಗಡಿಯನ್ನು ಸಮೀಪಿಸಿತು. ಬಳಿಕ ಕೆಲವು ಪಾಯಿಂಟ್ ಕೆಳಕ್ಕೆ ಟ್ರೇಡ್ ಮಾಡಿತು.ಇದನ್ನೂ ಓದಿ: ಷೇರುಪೇಟೆ ಸ್ಥಿತಿಗೆ ಮೋದಿ ಕಾರಣ: ಕಾಂಗ್ರೆಸ್ ಆರೋಪ

    ಇಂದು ಆರಂಭಿಕ ವಹಿವಾಟಿನಲ್ಲಿ ಬಹುತೇಕ ಎಲ್ಲಾ ವಲಯಗಳು ಗ್ರೀನ್ ಮಾರ್ಕ್‌ನಲ್ಲಿ ವಹಿವಾಟು ನಡೆಸಿವೆ. 2,445 ಷೇರುಗಳು ಏರಿಕೆಗೊಂಡಿದ್ದು, 333 ಷೇರುಗಳು ಕುಸಿತ ಸಾಧಿಸಿವೆ ಮತ್ತು 96 ಷೇರುಗಳ ಮೌಲ್ಯದಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ನಿಫ್ಟಿ ಮಿಡ್‌ಕ್ಯಾಪ್‌ 100 ಮತ್ತು ನಿಫ್ಟಿ ಸ್ಮಾಲ್ ಕ್ಯಾಪ್ 100 ಸೂಚ್ಯಂಕವು ತಲಾ 2.3 ಪರ್ಸೆಂಟ್‌ನಷ್ಟು ಜಿಗಿದಿದ್ದು, ನಿಫ್ಟಿ ರಿಯಾಲ್ಟಿ, ಮೆಟಲ್ ಹಾಗೂ ಐಟಿ ಸೂಚ್ಯಂಕವು ತಲಾ 3 ಪರ್ಸೆಂಟ್ ಹೆಚ್ಚಾಗಿದೆ.

    ಇಂದಿನ ವಹಿವಾಟಿನಲ್ಲಿ ಕೆಲವು ಷೇರುಗಳು ಉತ್ತಮ ಪ್ರದರ್ಶನ ತೋರಿವೆ. ಎನ್‌ಟಿಪಿಸಿ, ಟೈಟನ್, ನೆಸ್ಲೆ ಇಂಡಿಯಾ, ಕೊಟಕ್ ಮಹೀಂದ್ರಾ ಬ್ಯಾಂಕ್ ಮತ್ತು ಟಾಟಾ ಕನ್ಸೂಮರ್ ಪ್ರಾಡಕ್ಟ್ಸ್ ನಿಫ್ಟಿ 50ರಲ್ಲಿ ಲಾಭ ಗಳಿಸಿದ ಪ್ರಮುಖ ಷೇರುಗಳಾಗಿವೆ. ಈ ಕಂಪನಿಗಳು ತಮ್ಮ ವಲಯದಲ್ಲಿ ಸ್ಥಿರತೆಯನ್ನು ಕಾಪಾಡಿಕೊಂಡು ಹೂಡಿಕೆದಾರರ ವಿಶ್ವಾಸವನ್ನು ಗಳಿಸಿವೆ. ವಿಶೇಷವಾಗಿ ಗ್ರಾಹಕ ಉತ್ಪನ್ನಗಳು ಮತ್ತು ಬ್ಯಾಂಕಿಂಗ್ ವಲಯದ ಷೇರುಗಳು ಇಂದು ಚೇತರಿಕೆಯ ಹಾದಿಯಲ್ಲಿ ಮುಂದುವರಿದಿವೆ.

    ಇದೇ ವೇಳೆ, ಕೆಲವು ಷೇರುಗಳು ಇಂದು ಕಳಪೆ ಪ್ರದರ್ಶನ ತೋರಿವೆ. ಬಿಪಿಸಿಎಲ್, ಕೋಲ್ ಇಂಡಿಯಾ, ಒಎನ್‌ಜಿಸಿ, ಅದಾನಿ ಪೋರ್ಟ್ಸ್, ಮತ್ತು ಶ್ರೀರಾಮ್ ಫೈನಾನ್ಸ್ ಇವುಗಳು ನಷ್ಟ ಅನುಭವಿಸಿದ ಪ್ರಮುಖ ಷೇರುಗಳಾಗಿವೆ. ಶಕ್ತಿ ವಲಯ ಮತ್ತು ಲಾಜಿಸ್ಟಿಕ್ಸ್ ವಲಯದ ಈ ಷೇರುಗಳು ಜಾಗತಿಕ ಒತ್ತಡಗಳಿಗೆ ಒಳಗಾಗಿ ಇಳಿಮುಖವಾಗಿವೆ. ಅದಾನಿ ಸಮೂಹದ ಷೇರುಗಳ ಮೇಲಿನ ಒತ್ತಡವು ಇನ್ನೂ ತಗ್ಗಿಲ್ಲ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ. ಇದನ್ನೂ ಓದಿ: ಗೋಲ್ಡ್ ಪ್ರಿಯರಿಗೆ ಗುಡ್‌ನ್ಯೂಸ್ – ಚಿನ್ನದ ದರ ಇಳಿಕೆ!

    ಜಾಗತಿಕ ಮಾರುಕಟ್ಟೆಗಳು ತತ್ತರಿಸಿದ ಒಂದು ದಿನದ ನಂತರ ಏಷ್ಯಾದ ಎಲ್ಲಾ ಮಾರುಕಟ್ಟೆಯು ಭರ್ಜರಿಯಾಗಿ ರಿಟರ್ನ್ ಆಗಿದೆ. ಜಪಾನ್ ಷೇರು ಮಾರುಕಟ್ಟೆ ನಿಕ್ಕಿ ಸೂಚ್ಯಂಕ ಸೋಮವಾರ ಶೇ.7.8ರಷ್ಟು ಕುಸಿದಿದ್ದರೆ, ಮಂಗಳವಾರ ಬೆಳಗ್ಗೆ ಅದು ಸುಮಾರು ಶೇ.6 ರಷ್ಟು ಲಾಭದೊಂದಿಗೆ ವಹಿವಾಟು ನಡೆಸಿತು. ನಿಕ್ಕಿ 225 ಸೂಚ್ಯಂಕವು 5.81% ಅಥವಾ 1,809.92 ಪಾಯಿಂಟ್‌ಗಳ ಏರಿಕೆಯಾಗಿ 32,946.50ಕ್ಕೆ ತಲುಪಿದೆ. ಮತ್ತೊಂದೆಡೆ, ದಕ್ಷಿಣ ಕೊರಿಯಾದ ಕೋಸ್ಪಿ ಸೂಚ್ಯಂಕವು ಸುಮಾರು 2 ಪ್ರತಿಶತಕ್ಕಿಂತ ಹೆಚ್ಚಿನ ವಹಿವಾಟು ನಡೆಸಿತು.

  • UK ಸಿಲಿಕಾನ್ ವ್ಯಾಲಿ ಬ್ಯಾಂಕ್ ಘಟಕವನ್ನು 99 ರೂ.ಗೆ ಖರೀದಿದ HSBC

    UK ಸಿಲಿಕಾನ್ ವ್ಯಾಲಿ ಬ್ಯಾಂಕ್ ಘಟಕವನ್ನು 99 ರೂ.ಗೆ ಖರೀದಿದ HSBC

    ಲಂಡನ್: ಸ್ಟಾರ್ಟ್ಅಪ್‌ಗಳಿಗೆ ಸಾಲ ನೀಡಲು ಹೆಸರುವಾಸಿಯಾಗಿದ್ದ ಸಿಲಿಕಾನ್ ವ್ಯಾಲಿ ಬ್ಯಾಂಕ್ ಅಮೆರಿಕದಲ್ಲಿ (USA) ದಿವಾಳಿಯಾಗಿರುವ ಬೆನ್ನಲ್ಲೇ ಸಿಲಿಕಾನ್ ವ್ಯಾಲಿ ಬ್ಯಾಂಕಿನ ಬ್ರಿಟನ್ ಘಟಕವನ್ನು ಹೆಚ್‌ಎಸ್‌ಬಿಸಿ (HSBC) ಕೇವಲ 1 ಪೌಂಡ್‌ಗೆ (99.86 ರೂಪಾಯಿ) ಖರೀದಿಸಿದೆ.

    ಮಾರ್ಚ್ 10ರ ಹೊತ್ತಿಗೆ ಸಿಲಿಕಾನ್ ವ್ಯಾಲಿ ಬ್ಯಾಂಕ್ (Silicon Valley Bank) ಯುಕೆ ಘಟಕವು ಸುಮಾರು 5.5 ಬಿಲಿಯನ್ ಪೌಂಡ್ ಸಾಲಗಳನ್ನು ಮತ್ತು ಸುಮಾರು 6.7 ಬಿಲಿಯನ್ ಪೌಂಡ್ ಠೇವಣಿ ಹೊಂದಿದೆ. ಜೊತೆಗೆ ಒಟ್ಟು 8.8 ಶತಕೋಟಿ ಪೌಂಡ್‌ಗಳಷ್ಟು ಬ್ಯಾಲೆನ್ಸ್ ಶೀಟ್ ಗಾತ್ರವನ್ನು ಹೊಂದಿದೆ. ಇದೀಗ ಹೂಡಿಕೆದಾರರಲ್ಲಿ ಮತ್ತಷ್ಟು ಉತ್ಸಾಹ ತುಂಬಲು ಹೆಚ್‌ಎಸ್‌ಬಿಸಿ ಈ ಕ್ರಮಕ್ಕೆ ಮುಂದಾಗಿದೆ ಎಂದು ಹೇಳಲಾಗಿದೆ. ಇದನ್ನೂ ಓದಿ: ಸಿಲಿಕಾನ್ ವ್ಯಾಲಿ ಬಳಿಕ ಅಮೆರಿಕದ ಮತ್ತೊಂದು ಬ್ಯಾಂಕ್ ದಿವಾಳಿ

    Silicon Valley Bank

    ಬ್ಯಾಂಕ್‌ನ ಬ್ರಿಟನ್ (UK) ವ್ಯವಹಾರಕ್ಕೆ ಇದು ಅತ್ಯುತ್ತಮ ಕಾರ್ಯತಂತ್ರದ ಅರ್ಥ ನೀಡುವ ಜೊತೆಗೆ ವಾಣಿಜ್ಯ ಬ್ಯಾಂಕಿಂಗ್ ಅನ್ನು ಬಲಪಡಿಸುತ್ತದೆ. ಅಷ್ಟೇ ಅಲ್ಲದೆ ಬ್ರಿಟನ್ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ತಂತ್ರಜ್ಞಾನ ಹಾಗೂ ಜೀವ-ವಿಜ್ಞಾನ ಕ್ಷೇತ್ರಗಳನ್ನು ಒಳಗೊಂಡಂತೆ ನವೀನ ಮತ್ತು ವೇಗವಾಗಿ ಬೆಳೆಯುತ್ತಿರುವ ಸಂಸ್ಥೆಗಳಿಗೆ ಸೇವೆ ಸಲ್ಲಿಸುವ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ ಎಂದು ತನ್ನ ಹೇಳಿಕೆಯಲ್ಲಿ ತಿಳಿಸಿದೆ.

    ಬ್ರಿಟನ್‌ನ ಬ್ಲೂ-ಚಿಪ್ FTSC 100 ಷೇರುಗಳ ಸೂಚ್ಯಂಕವು ಆರಂಭಿಕ ವಹಿವಾಟಿನಲ್ಲಿ ಶೇ.1ರಷ್ಟು ಕಡಿಮೆಯಾಗಿದೆ. ಸಿಲಿಕಾನ್ ವ್ಯಾಲಿಬ್ಯಾಂಕ್ ಮೌಲ್ಯ ಕುಸಿತದಿಂದ ಎಚ್‌ಎಸ್‌ಬಿಸಿ ಷೇರುಗಳು ಶೇ.1.7ರಷ್ಟು ಕುಸಿದಿವೆ ಎಂದು ಎನ್ನಲಾಗಿದೆ. ಇದನ್ನೂ ಓದಿ: 

    ಆರ್ಥಿಕ ಹಿಂಜರಿತದ ಭೀತಿಯ ನಡುವೆ ಅಮೆದಿಕದ ದೊಡ್ಡ-ದೊಡ್ಡ ಬ್ಯಾಂಕ್‌ಗಳು ದಿವಾಳಿ ಹಂತ ತಲುಪಿತ್ತಿರುವುದು ಮತ್ತಷ್ಟು ಆತಂಕ ಮೂಡಿಸಿದೆ. ಒಂದು ದಿನದ ಅಂತರದಲ್ಲಿ ಎರಡು ಬ್ಯಾಂಕ್‌ಗಳು ಬಾಗಿಲುಮುಚ್ಚಿವೆ. ಠೇವಣಿದಾರರು ದೊಡ್ಡ ಮಟ್ಟದಲ್ಲಿ ಹೂಡಿಕೆ ಹಿಂಪಡೆದ ಕಾರಣ ಸಿಲಿಕಾನ್ ವ್ಯಾಲಿ ಬ್ಯಾಂಕ್ ದಿವಾಳಿ ಎದ್ದಿದೆ. ಎಸ್‌ವಿಬಿ ವೈಫಲ್ಯದ ಕಾರಣ ಇದರಲ್ಲಿ ಡೆಪಾಸಿಟ್ ಮಾಡಿದ 10,000 ಚಿಕ್ಕ ಚಿಕ್ಕ ವಾಣಿಜ್ಯ ಸಂಸ್ಥೆಗಳು ತಮ್ಮ 2 ಲಕ್ಷ ಉದ್ಯೋಗಿಗಳಿಗೆ ವೇತನ ನೀಡಲಾಗದ ಸ್ಥಿತಿ ನಿರ್ಮಾಣವಾಗಿದೆ.

    Signature Bank

    ಹಣದುಬ್ಬರ ನಿಯಂತ್ರಿಸಲು ಅಮೆರಿಕಾದ ಫೆಡರಲ್ ರಿಸರ್ವ್ ಬ್ಯಾಂಕ್ ಬಡ್ಡಿ ದರವನ್ನು ವಿಪರೀತವಾಗಿ ಹೆಚ್ಚಿಸಿರುವುದೇ ಎಸ್‌ವಿಬಿ ಪತನಕ್ಕೆ ಕಾರಣ ಎನ್ನಲಾಗುತ್ತಿದೆ. ಇದು ಬೇರೆ ದೇಶಗಳಲ್ಲಿನ ಎಸ್‌ವಿಬಿ ಬ್ಯಾಂಕ್‌ಗಳ ಮೇಲೆಯೂ ಪರಿಣಾಮ ಬೀರಿದೆ…

  • ಸಿಹಿ ಸುದ್ದಿ – ಚಿನ್ನದ ದರದಲ್ಲಿ ಭಾರೀ ಇಳಿಕೆ

    ಸಿಹಿ ಸುದ್ದಿ – ಚಿನ್ನದ ದರದಲ್ಲಿ ಭಾರೀ ಇಳಿಕೆ

    ನವದೆಹಲಿ: ಏರಿಕೆಯಾಗುತ್ತಿದ್ದ ಚಿನ್ನದ ಬೆಲೆ ದಿಢೀರ್ ಭಾರೀ ಇಳಿಕೆಯಾಗಿದೆ. ಭಾರೀ ಕುಸಿತ ಕಂಡಿದ್ದು, ಪ್ರತಿ 10 ಗ್ರಾಂ ಚಿನ್ನದ ಬೆಲೆ 2,300 ರೂ. ಇಳಿಕೆಯಾಗಿದೆ.

    ಇತ್ತೀಚೆಗೆ ಸೆಪ್ಟೆಂಬರಿನಲ್ಲಿ ಪ್ರತಿ 10 ಗ್ರಾಂ.ಗೆ 40 ಸಾವಿರ ರೂ. ತಲುಪಿದ್ದ ಚಿನ್ನದ ಬೆಲೆ ಇದೀಗ ಕಡಿಮೆಯಾಗಿದೆ. ಸಿಎಕ್ಸ್(ಮಲ್ಟಿ ಕಮಾಡಿಟಿ ಎಕ್ಸ್‍ಚೇಂಜ್)ನಲ್ಲಿ ಚಿನ್ನದ ಬೆಲೆ ಸೋಮವಾರ ಪ್ರತಿ 10 ಗ್ರಾಂ. ಚಿನ್ನಕ್ಕೆ ಶೇ.0.04ರಷ್ಟು ಕಡಿಮೆಯಾಗಿದ್ದು, ಚಿನ್ನದ ಬೆಲೆ 37,671 ರೂ.ಗೆ ತಲುಪಿದೆ. ಇದನ್ನೂ ಓದಿ: ದೀಪಾವಳಿಗೆ 40 ಸಾವಿರ ರೂ. ಗಡಿ ದಾಟಲಿದೆ ಚಿನ್ನ – ಬೆಲೆ ಏರುತ್ತಿರುವುದು ಯಾಕೆ?

    ಚೀನಾ ಮತ್ತು ಅಮೆರಿಕದ ನಡುವಿನ ವ್ಯಾಪಾರ ಸಮರ ಕಡಿಮೆಯಾಗಲಿದೆ ಎನ್ನುವ ಸುಳಿವು ಸಿಕ್ಕಿದ ಬೆನ್ನಲ್ಲೇ ಹೂಡಿಕೆದಾರರು ಸಂತೋಷಗೊಂಡಿದ್ದು ಷೇರುಗಳ ಮೇಲೆ ಹೂಡಿಕೆ ಮಾಡುತ್ತಿದ್ದಾರೆ. ಜೊತೆ ಭಾರತದ ಷೇರು ಮಾರುಕಟ್ಟೆ ಉತ್ತಮ ಫಲಿತಾಂಶ ಕಾಣುತ್ತಿರುವ ಹಿನ್ನೆಲೆಯಲ್ಲಿ ಚಿನ್ನದ ಮೇಲಿನ ಹೂಡಿಕೆ ಕಡಿಮೆಯಾಗುತ್ತಿರುವುದರಿಂದ ಬೆಲೆ ಕಡಿಮೆಯಾಗುತ್ತಿದೆ.

    ಮದುವೆ ಸೀಸನ್ ಹತ್ತಿರದಲ್ಲಿರುವಾಗಲೇ ಚಿನ್ನದ ಬೆಲೆ ಕಡಿಮೆಯಾಗಿರುವುದು ಜಾಗತಿಕ ಮಾರುಕಟ್ಟೆ ಹಾಗೂ ಚಿಲ್ಲರೆ ಖರೀದಿದಾರರಲ್ಲಿ ಸಂತಸ ತಂದಿದೆ.

    ಇನ್ನೊಂದೆಡೆ ಎಂಸಿಎಕ್ಸ್‍ಲ್ಲಿ ಬೆಳ್ಳಿ ದರ ಪ್ರತಿ ಕೆ.ಜಿ.ಗೆ ಶೇ.0.30ರಷ್ಟು ಹೆಚ್ಚಳವಾಗಿದ್ದು, ಪ್ರತಿ ಕೆ.ಜಿ. ದರ 44,000 ರೂ. ತಲುಪಿದೆ. ಆದರೆ ಸೆಪ್ಟೆಂಬರ್ ತಿಂಗಳಿನಲ್ಲಿದ್ದ ದರಕ್ಕೆ ಹೋಲಿಸದರೆ ಭಾರೀ ಪ್ರಮಾಣದಲ್ಲಿ ಕಡಿಮೆಯಾಗಿದೆ. ದೇಶೀಯ ಚಿನ್ನದ ಬೆಲೆಯಲ್ಲಿ ಕುಸಿತದ ರೀತಿಯಲ್ಲೇ ಜಾಗತಿಕ ಮಾರುಕಟ್ಟೆಗಳಲ್ಲಿ ಕುಸಿತ ಕಂಡಿದ್ದು, ಜಾಗತಿಕ ಮಾರುಕಟ್ಟೆಯಲ್ಲಿ ಸ್ಪಾಟ್ ಗೋಲ್ಡ್ ಪ್ರೈಸಸ್ 1,455.55 ಡಾಲರ್ ಕುಸಿತವನ್ನು ಕಂಡಿದೆ.

    ಯುಎಸ್-ಚೀನಾ ನಡುವಿನ ವ್ಯಾಪಾರ ಸಮರದಿಂದಾಗಿ ಹೂಡಿಕೆದಾರರು ಚಿನ್ನದ ಮೇಲೆ ಹೂಡಿಕೆ ಮಾಡುತ್ತಿದ್ದರು. ಪರಿಣಾಮ ಚಿನ್ನದ ಬೆಲೆ ಭಾರೀ ಏರಿಕೆ ಕಂಡಿತ್ತು. ಪ್ರತಿ ಆನ್ಸ್(1 ಆನ್ಸ್-28.34 ಗ್ರಾಂ.)ಗೆ 1,550 ಡಾಲರ್ ಏರಿಕೆಯಾಗಿತ್ತು.